Sunday, March 15, 2026
Home Blog Page 101

40ನೇ ವರ್ಷದ ಬಯಲಾಟ ಮತ್ತು ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿಗೆ ಸನ್ಮಾನ

ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ 40ನೇ ವರ್ಷದ ಬಯಲಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತಾ ದಶಾವತಾರ ಯಕ್ಷಗಾನ  ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಬಯಲಾಟವು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ  ಜರಗಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪ್ರದೀಪ್ ನಾವೂರು ಯಕ್ಷಗಾನ ಒಂದು ಅಪೂರ್ವ ಕಲಾ ಪ್ರಕಾರವಾಗಿ ಬೆಳೆಯುವಲ್ಲಿ ಕೊಡುಗೆಗಳನ್ನು ನೀಡಿದ ಹಿರಿಯ ಕಲಾವಿದರ ಮತ್ತು ಸಂಘಟಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿದ್ದ ದಿವಾಕರ್ ಆಚಾರ್ಯ ಗೇರುಕಟ್ಟೆ ಮಾತನಾಡಿ ಮನೋರಂಜನೆಯೊಂದಿಗೆ ಜೀವನಕ್ಕೆ ಮಾರ್ಗದರ್ಶಕವಾಗುವ ಧಾರ್ಮಿಕ ಸಂದೇಶವನ್ನು ಯಕ್ಷಗಾನವು ನಿತ್ಯವೂ ನೀಡುತ್ತಾ ಇದೆ ಎಂದರು. 

ಕಟೀಲು ಆರನೇ ಮೇಳದ ಪ್ರಬಂಧಕ ಮತ್ತು ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು ಹೆಚ್. ಪದ್ಮ ಕುಮಾರ್ ಅಭಿನಂದನಾ ನುಡಿಗಳ ನ್ನಾಡಿದರು.

ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಡಾ.ಕೆ.ಜಿ ಪಣಿಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಸ್ವಾಗತಿಸಿ ಸಂಚಾಲಕರಾದ ಗಣೇಶ ಐತಾಳ್ ವಂದಿಸಿದರು. ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

ಬೆಂಗಳೂರಿನಲ್ಲಿ ಮಧ್ಯರಾತ್ರಿ ನಾಲ್ಕನೇ ಮಹಡಿಯಿಂದ ಬಿದ್ದು ವಿಮಾನಯಾನ ಸಂಸ್ಥೆಯ ಗಗನಸಖಿ ಸಾವು – ಬಾಯ್ ಫ್ರೆಂಡ್ ಮೇಲೆ ಶಂಕೆ

ಸ್ನೇಹಿತನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದ  ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಗಗನಸಖಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಮಧ್ಯರಾತ್ರಿ ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋರಮಂಗಲದ ಎಂಟನೇ ಬ್ಲಾಕ್‌ನಲ್ಲಿ ನಡೆದಿದೆ.

ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿಯಿಂದ ಬಿದ್ದು ಬಾಲಕಿ ಸಾವು, ಇದು ಆತ್ಮಹತ್ಯೆಯೇ? ಪೊಲೀಸರು ಕೊಲೆಯ ತನಿಖೆ ನಡೆಸುತ್ತಿದ್ದಾರೆ. 28 ವರ್ಷದ ಅರ್ಚನಾ ಧಿಮಾನ್ ಮೃತಪಟ್ಟ ಯುವತಿ. ದುಬೈನಲ್ಲಿ ಖಾಸಗಿ ಏರ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಅರ್ಚನಾ ಕೋರಮಂಗಲದಲ್ಲಿರುವ ಸ್ನೇಹಿತನನ್ನು ಭೇಟಿ ಮಾಡಲು ಬಂದಿದ್ದರು.

ಅರ್ಚನಾ ಅವರ ಸ್ನೇಹಿತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದ ರೇಣುಕಾ ರೆಸಿಡೆನ್ಸಿಯಲ್ಲಿ ವಾಸವಾಗಿದ್ದರು. ಮೃತ ಅರ್ಚನಾ ಧೀಮನ್ ಮೂಲತಃ ಹಿಮಾಚಲ ಪ್ರದೇಶದವರು ಎಂದು ತಿಳಿದು ಬಂದಿದೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರ್ಚನಾ ಧಿಮಾನ್ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.

ಅರ್ಚನಾ ಸ್ನೇಹಿತ ಆದೀಶ್ ಮೇಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಅರ್ಚನಾ ತನ್ನ ಸ್ನೇಹಿತ ಆದೀಶ್‌ನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದಳು. ಅರ್ಚನಾ ಮತ್ತು ಆದಿಶ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ತನ್ನ ಸ್ನೇಹಿತನ ಭೇಟಿಗೆ ಬಂದಿದ್ದ ಅರ್ಚನಾ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.

ಆದಿಶ್ ಕೇರಳ ಮೂಲದವ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಇಬ್ಬರ ನಡುವೆ ಏನಾಯಿತು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇಬ್ಬರ ನಡುವೆ ಜಗಳವಾಗಿದ್ದು ಅರ್ಚನಾಳನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದಾರೆ.

ಕಲ್ಲುಗುಂಡಿ ಆಟಕ್ಕೆ ಕ್ಷಣಗಣನೆ – ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭ 

ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಪಾಜೆ ಯಕ್ಷೋತ್ಸವ ಎಂದೇ ಖ್ಯಾತಿ ಪಡೆದಿರುವ ಸಂಪಾಜೆ ಕಲ್ಲುಗುಂಡಿ ಯಕ್ಷಗಾನ ಪ್ರದರ್ಶನವು ಇಂದು (11.03.2023) ಸಂಜೆ 4 ಘಂಟೆಯಿಂದ ಆರಂಭವಾಗಲಿದೆ.

ಪ್ರಸಂಗ ನಾಳೆ ಬೆಳಗ್ಗೆ ಏಳು ಘಂಟೆಯ ವರೆಗೆ ನಡೆಯಲಿದೆ. 

ಬ್ರಹ್ಮೈಕ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಕಾರ್ಯಕ್ರಮದ ಸಂಪೂರ್ಣ ವಿವರ ಮೇಲಿದೆ. 

ಸಾರ್ವಜನಿಕರ ಎದುರೇ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕರು – ಸಹಾಯಕ್ಕೆ ಬಾರದೆ ವೀಡಿಯೊ ಮಾಡುತ್ತಾ ನಿಂತ ಜನರು, ಮಹಿಳೆಯನ್ನು ಬಿಡಿಸಿದ ಪೊಲೀಸರು 

ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಕಲಾ (35) ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಮೇಲ್ಭಾಗದವರು. ಪತಿಯನ್ನು ಕಳೆದುಕೊಂಡು 9 ವರ್ಷದ ಮಗಳೊಂದಿಗೆ ವಾಸವಾಗಿದ್ದಾಳೆ.

ಕಲಾ ಅವರು ಮಾರ್ತಾಂಡಂನಲ್ಲಿ ಮಸಾಜ್ ಕೇಂದ್ರವನ್ನೂ ನಡೆಸುತ್ತಿದ್ದಾರೆ. ಮನೆಯಲ್ಲಿ ಒಬ್ಬಳೇ ಇರುವುದರಿಂದ ಮಗಳು ಸುರಕ್ಷಿತವಾಗಿಲ್ಲ ಎಂದು ಮನನೊಂದ ಕಲಾ ಅವರು ಮಗಳನ್ನು ಅನಾಥಾಶ್ರಮದಲ್ಲಿ ಓದಿಸಲು ಕರೆದುಕೊಂಡು ಹೋಗಿದ್ದಾರೆ. ಹೀಗಿರುವಾಗ ಆ ಭಾಗದ ಕೆಲ ಆಟೊ ಚಾಲಕರು ಕಲಾ ನಡೆಸುವ ಮಸಾಜ್ ಸೆಂಟರ್ ಗೆ ಹೋಗುವಾಗ ಪ್ರತಿನಿತ್ಯ ಕಲಾಗೆ ಲೈಗಿಂಕ ಕಿರುಕುಳ ನೀಡಿ ನಿಂದಿಸುತ್ತಿದ್ದಾರೆ ಎನ್ನಲಾಗಿದೆ.

ಇದರಿಂದ ಹೆದರಿದ ಕಾಲಾ ತನ್ನ ರಕ್ಷಣೆಗಾಗಿ ಕೈಯಲ್ಲಿ ಮೆಣಸಿನ ಪುಡಿ ಹಾಗೂ ಚಾಕು ಇಟ್ಟುಕೊಂಡಿದ್ದರಂತೆ. ಈ ಪರಿಸ್ಥಿತಿಯಲ್ಲಿ ಗುರುವಾರ ಎಂದಿನಂತೆ ಕಲಾ ತನ್ನ ಮಸಾಜ್ ಸೆಂಟರ್‌ಗೆ ಹೋಗಲು ಮೇಲಿನ ಪ್ರದೇಶಕ್ಕೆ ಬಂದಾಗ ಅಲ್ಲಿಯೇ ನಿಂತಿದ್ದ ಕೆಲವು ಆಟೋ ಚಾಲಕರು ಕಲಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ.

ಇದಾದ ನಂತರ ಕಲಾ ತನ್ನ ಕೈಯಲ್ಲಿದ್ದ ಮೆಣಸಿನ ಪುಡಿಯನ್ನು ತೆಗೆದುಕೊಂಡು ಆಟೋ ಚಾಲಕರ ಮೇಲೆ ಎಸೆದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾನೆ. ಅಲ್ಲಿಯೇ ನಿಂತಿದ್ದ ಆಟೋ ಚಾಲಕರಲ್ಲಿ ಕೆಲವರು ಕಲಾಳನ್ನು ಬಲವಂತವಾಗಿ ಹಿಡಿದು ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಕಲಾ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಲಾ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ಈ ಸಂಬಂಧ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರುಮನೈ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದ ಕಲಾಳನ್ನು ರಕ್ಷಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ತನಗೆ ಆದ ಕ್ರೌರ್ಯದ ಬಗ್ಗೆ ಕಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಕಿರುಕುಳ ನೀಡಿದ ಆರೋಪದ ಮೇರೆಗೆ ನಿವಾಸಿಗಳಾದ ಸಶಿ, ವಿನೋದ್, ದಿಬಿನ್, ವಿಜಯಕಾಂತ್, ಅರವಿಂದ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಶಿ, ವಿನೋದ್ ಮತ್ತು ವಿಜಯಕಾಂತ್ ಎಂಬ ಮೂವರನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ತಲೆಮರೆಸಿಕೊಂಡಿರುವ ತಿಬಿನ್ ಮತ್ತು ಅರವಿಂದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

“ಭೀಷ್ಮೋತ್ಪತ್ತಿ” ತಾಳಮದ್ದಲೆ

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೋಟ, ಹಂದಟ್ಟು ಶ್ರೀಮತಿ ಮತ್ತು ಶ್ರೀನಿವಾಸ ಭಟ್ ಹಾಗೂ ಕುಟುಂಬದವರ ಪ್ರಾಯೋಜಕತ್ವದಲ್ಲಿ, ಬೆಂಗಳೂರಿನ ಯಕ್ಷದೇಗುಲದ ಸಂಯೋಜನೆಯಲ್ಲಿ 09-03-2023ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ “ಭೀಷ್ಮೋತ್ಪತ್ತಿ” ತಾಳಮದ್ದಲೆ ನಡೆಯಿತು.


ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ಲಂಬೋದರ ಹೆಗಡೆ, ಶಶಾಂಕ ಆಚಾರ್ಯ, ಸುದೀಪ ಉರಾಳ, ವೈಕುಂಟ ಹೇರ್ಳೆ, ಆದಿತ್ಯ ಹೆಗಡೆ, ಸುಹಾಸ ಕರಬ ಭಾಗವಹಿಸಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಹಂದಟ್ಟು ಶ್ರೀನಿವಾಸ ಭಟ್‌ರು ಭಾಗವಹಿಸಿದ ಕಲಾವಿದರಿಗೆ ಧನ್ಯವಾದ ಹೇಳಿದರು.

ಕೋಟ ಸುದರ್ಶನ ಉರಾಳ ಕಾರ್ಯಕ್ರಮ ನಿರ್ವಹಿಸಿದರು.

ಯುವ ವೈದ್ಯೆ ಫ್ಲಾಟ್‌ನಿಂದ ಬಿದ್ದು ಸಾವು

ಯುವ ವೈದ್ಯೆಯೊಬ್ಬರು ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕೋಝಿಕೋಡ್ ಮೇಯರ್ ಭವನದ ಬಳಿ ನಡೆದಿದೆ. ಕೋಝಿಕೋಡಿನ ಲಿಯೋ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಡಾ.ಸದಾ ರೆಹಮತ್ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ. ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಸದಾ ಇಲ್ಲಿಗೆ ಬಂದಿದ್ದರು. ಇಂದು ಬೆಳಗ್ಗೆ ಶಬ್ಧ ಕೇಳಿದ ಭದ್ರತಾ ಸಿಬ್ಬಂದಿ ಓಡಿ ಬಂದಾಗ ಆಕೆ ಮಲಗಿದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ.

ಕೂಡಲೇ ಫ್ಲಾಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರೂ ಆಕೆಯ ಪ್ರಾಣ ಉಳಿಸಲಾಗಲಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಬೈಪಾಡಿತ್ತಾಯ ದಂಪತಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿ

ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನ ಕಲಾವಿದ ದಂಪತಿಗಳಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ-ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 6, 2023 ಗುರುವಾರ ಪಲಿಮಾರಿನಲ್ಲಿರುವ ಮೂಲ ಮಠದಲ್ಲಿ ಜರಗಲಿದೆ.

ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆಮಾಡುವಲ್ಲಿ ಯಕ್ಷಗಾನ ಕಲಾರಂಗವು ಸಹಕರಿಸಿದೆ.

ಪ್ರಶಸ್ತಿಯು ರೂ. 50,000/- ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂಬುದಾಗಿ ಪಲಿಮಾರು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಭಕ್ತ ವೀರಮಣಿ ತಾಳಮದ್ದಳೆ, ಕಲಾವಿದರ ಸಂಸ್ಮರಣೆ,  ಸನ್ಮಾನ

ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ಕಲಾವಿದರಾಗಿ, ಅರ್ಥಧಾರಿಗಳಾಗಿ ಕಲಾ ಸೇವೆ ಮಾಡಿದ ಸಹೋದರತ್ರಯದರಾದ ದಿವಂಗತ ಗಣಪತಿ ಆಚಾರ್ಯ ನೇರೆಂಕಿ, ವಿಠಲಾಚಾರ್ಯ ನೆಲ್ಯಾಡಿ, ಭಾಸ್ಕರ್ ಆಚಾರ್ಯ ಉಪ್ಪಿನಂಗಡಿ ಇವರ ಎರಡನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.

 ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ ವಹಿಸಿದ್ದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಲಾವಿದರ ಸಂಸ್ಮರಣೆಯನ್ನು ಮಾಡಿ ಕಲಾಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿದರು.

ಸಂಸ್ಮರಣೆ ಅಂಗವಾಗಿ ಯುವ ಭಾಗವತ ಪದ್ಮನಾಭ ಕುಲಾಲ್  ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಮಕುಂಜ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬಳೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸತೀಶ್ ಆಚಾರ್ಯ  ಮಾಣಿ, ಸಂಜೀವ ಪಾರೆಂಕಿ,  ಗೋಪಾಲ್ ಶೆಟ್ಟಿ ಕಳೆಂಜ, ಹರೀಶ್ ಆಚಾರ್ಯ ಸುರತ್ಕಲ್, ಶ್ರೀಪತಿ ಭಟ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು. 

ಗಂಗಾಧರ ಆಚಾರ್ಯ ನೇರೆಂಕಿ ಸ್ವಾಗತಿಸಿ, ಮುರಳಿಧರ ಆಚಾರ್ಯ ಬಂಟ್ವಾಳ ವಂದಿಸಿದರು . ಹರೀಶ್ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಿವಭಕ್ತ ವೀರಮಣಿ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ.ಕೆ ಆಚಾರ್ಯ ನೇರೆಂಕಿ, ಬಿ.ವೆಂಕಟರಮಣ ರಾವ್ ಉಜಿರೆ, ಪದ್ಮನಾಭ ಕುಲಾಲ್ ಇಲಂತಿಲ ಹಿಮ್ಮೇಳದಲ್ಲಿ ಮೋಹನ ಅಲಂಕಾರ್, ಶ್ರೀಪತಿ ಭಟ್ ಉಪಿನಂಗಡಿ, ಮುರಳೀಧರ ಆಚಾರ್ಯ ಅರ್ಥದಾರಿಗಳಾಗಿ ಗಣರಾಜ ಕುಂಬ್ಳೆ(ಈಶ್ವರ) ದಿವಾಕರ್ ಆಚಾರ್ಯ ಗೇರುಕಟ್ಟೆ,(ವೀರಮಣಿ) ಗುಡ್ಡಪ್ಪ ಬಲ್ಯ, ಗೋಪಾಲ ಶೆಟ್ಟಿ ಕಲೆಂಜ(ಹನುಮಂತ) ಹರೀಶ ಬಾರ್ಯ(ಶ್ರೀ ರಾಮ), ದಿವಾಕರ ಆಚಾರ್ಯ ನೇರೆಂಕಿ (ಶತ್ರುಘ್ನ) ಭಾಗವಹಿಸಿದ್ದರು.

‘ಭೃಗು ಶಾಪ’ ತಾಳಮದ್ದಳೆ ಮತ್ತು ‘ಮಾತಿನ ಕಲೆ ತಾಳಮದ್ದಳೆ’ ಪುಸ್ತಕ ಬಿಡುಗಡೆ 

ದಿನಾಂಕ 12.03.2023ರ ಆದಿತ್ಯವಾರ ಪೂರ್ವಾಹ್ನ 10 ಘಂಟೆಗೆ ಸರಿಯಾಗಿ ಲೇಖಕ ಶ್ರೀಧರ ಡಿ.ಎಸ್ ಅವರು ಬರೆದ ‘ಮಾತಿನ ಕಲೆ ತಾಳಮದ್ದಳೆ’ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಆಮೇಲೆ  ‘ಭೃಗು ಶಾಪ’ ಎಂಬ ಪ್ರಸಂಗದ ತಾಳಮದ್ದಳೆ ಕೂಟ ನಡೆಯಲಿದೆ. ಪ್ರಸಿದ್ಧ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

ವಿವರಗಳಿಗೆ ಚಿತ್ರ ನೋಡಿ. 

ಸುಂದೋಪಸುಂದ ಕಾಳಗ, ರತಿ ಕಲ್ಯಾಣ – ಅಮೋಘ ಯಕ್ಷಗಾನ ಪ್ರದರ್ಶನ 

ದಿನಾಂಕ 07.03.2023ರ ಮಂಗಳವಾರ ಮೇಲೆಕ್ಕಾರು ‘ಶ್ರೀ ಭ್ರಾಮರಿ’ ಹೊಸಮನೆಯ ಮುಂಭಾಗದಲ್ಲಿ “ಸುಂದೋಪಸುಂದ ಕಾಳಗ, ರತಿ ಕಲ್ಯಾಣ” ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಪ್ರದರ್ಶಿಸಲ್ಪಡುವ ಈ ಯಕ್ಷಗಾನ ಪ್ರದರ್ಶನ ಸಂಜೆ ಘಂಟೆ 5.45ಕ್ಕೆ ಸರಿಯಾಗಿ ಆರಂಭವಾಗಲಿದೆ. 

ಮೇಲೆಕ್ಕಾರು ‘ಶ್ರೀ ಭ್ರಾಮರಿ’ ಹೊಸಮನೆಯ ಶ್ರೀಮತಿ ಮತ್ತು ಶ್ರೀ ಶ್ಯಾಮ್ ಶೆಟ್ಟಿಯವರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.

ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ.