Saturday, March 14, 2026
Home Blog Page 97

ಗಂಡ ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಆತ್ಮಹತ್ಯೆ – ಬೆಂಗಳೂರಿನಲ್ಲಿ ನಡೆದ ಘಟನೆ 

ಗಂಡ ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಯ ಗಂಡ ಚಾಕ್ಲೇಟ್ (Chocklate) ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.  

ಚಿಕ್ಕ ಮಕ್ಕಳು ಚಾಕೋಲೆಟ್, ತಿಂಡಿ ತಿನಿಸುಗಳಿಗೆ ಹಠ ಹಿಡಿಯುವುದು, ಅಳುವುದು ಸಾಮಾನ್ಯ ಆದರೆ ಎರಡು ಮಕ್ಕಳ ತಾಯಿಯಾದ ನಂದಿನಿ ಎಂಬಾಕೆ, ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  6 ವರ್ಷದ ಹಿಂದೆ ಮದುವೆಯಾಗಿದ್ದ ಮೃತ ನಂದಿನಿ‌ಗೆ ಇಬ್ಬರು ಮಕ್ಕಳಿದ್ದಾರೆ. ನಂದಿನಿ ಪತಿ ಸಲೂಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ.

ನಿನ್ನೆ ಬೆಳಗ್ಗೆ ಪತಿ ಕೆಲಸಕ್ಕೆ ಹೋಗುವಾಗ ಚಾಕೋಲೆಟ್ ತೆಗೆದುಕೊಂಡು ಬರುವಂತೆ ಕೇಳಿದ್ದಳು. ಮಧ್ಯಾಹ್ನವಾದರೂ ಪತಿ ಚಾಕೋಲೆಟ್ ತಂದು ತೆಗೆದುಕೊಂಡು ಬರಲಿಲ್ಲ. ಅಲ್ಲದೇ ಫೋನ್ ಮಾಡಿದ್ದರೂ ಗಂಡ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಗಂಡ ಮನೆಗೆ ಬಂದು ನೋಡಿದಾಗ ನಂದಿನಿ ನೇಣು ಹಾಕಿಕೊಂಡಿರುವುದು ಅರಿವಾಗಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ನಂದಿನಿ ಮೃತಪಟ್ಟಿದ್ದಳು. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ., ನಂದಿನಿ‌ಗೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.  

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ‘ಬಾಲಸ್ತುತಿ – 2023’ ಉದ್ಘಾಟನೆ

ದೇಶ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದು ಇಲ್ಲಿನ ಸಂಸ್ಕೃತಿ ಸಂಸ್ಕಾರಗಳಿ0ದ. ಆದರೆ ಅಂತಹ ಸಂಸ್ಕೃತಿಯಿ0ದ ನಾವು ನಿಧಾನವಾಗಿ ದೂರ ಸರಿಯುತ್ತಿರುವುದು ಆತಂಕಕಾರಿ ವಿಚಾರ. ಮನೆಯಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಹಿಂದೂ ಧಾರ್ಮಿಕ ಶ್ಲೋಕಗಳನ್ನು ಮಕ್ಕಳು ನಿತ್ಯವೂ ಉಚ್ಚರಿಸುವಂತೆ ಮಾಡಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಸುರಕ್ಷಾ ಪ್ರಮುಖ್ ಬಡೆಕ್ಕಿಲ ಗಣರಾಜ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆ – ಬಾಲಸ್ತುತಿ 2023 ಅನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.


ದೇಶವಿಂದು ನಾನು ಎಂಬ ಅಹಂಕಾರದಿ0ದ ವಿಭಜಿಸಲ್ಪಡುತ್ತಿದೆ. ಹಾಗಾಗಿ ನಾವು ಎಂಬ ಮನೋಭಾವ ಬೆಳೆಯಬೇಕು. ಪರಸ್ಪರ ಒಗ್ಗೂಡುವಿಕೆಯಿಂದ ದೇಶವನ್ನು ಉನ್ನತಿಕೆಯೆಡೆಗೆ ಒಯ್ಯುವುದಕ್ಕೆ ಸಾಧ್ಯ. ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದರಿಂದ ಸಾಮಾಜಿಕ ಒಗ್ಗೂಡುವಿಕೆ ಸಾಧ್ಯವಾಗುತ್ತದೆ. ಪಠಿಸುವ ಶ್ಲೋಕಗಳ ಅರ್ಥವನ್ನೂ ಮಕ್ಕಳಿಗೆ ತಿಳಿಸಿಕೊಡುವ ಕೆಲಸಗಳಾಗಬೇಕು. ಆಗ ಶ್ಲೋಕಗಳ ಪಠಣ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಇಂದು ಸಮಾಜದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಬೇಸರಿಸುತ್ತಿದ್ದೇವೆ. ಆದರೆ ಭಾವನೆಗಳನ್ನು, ಸಂಬ0ಧಗಳನ್ನು ತುಂಡರಿಸುವ ಮನೋಭೂಮಿಕೆಯನ್ನು ನಾವು ಎಳವೆಯಲ್ಲೇ ಮಕ್ಕಳಿಗೆ ತುಂಬುತ್ತಿದ್ದೇವೆ. ಜನ್ಮದಿನದಂದು ಕೇಕ್ ಕತ್ತರಿಸುವ, ದೀಪ ಆರಿಸುವ ಮೂಲಕ ಕತ್ತರಿಸುವುದನ್ನು, ಆರಿಸುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಬದಲಾಗಿ, ಜೋಡಿಸುವುದನ್ನು, ಬೆಳಗುವುದನ್ನು ಕಲಿಸಬೇಕಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪೂರ್ವದ ಸಿಂಗಾಪುರದಿ0ದ ಪಶ್ಚಿಮದ ಸೌದಿ ಅರೇಬಿಯಾದವರೆಗೂ ಭಾರತ ವಿಸ್ತರಿಸಿತ್ತು ಎಂಬುದು ಅಧ್ಯಯನದಿಂದ ಹಾಗೂ ಐತಿಹಾಸಿಕ ಕುರುಹುಗಳಿಂದ ಅರಿವಾಗುತ್ತದೆ. ಆದರೆ ನಮ್ಮ ಧರ್ಮದಿಂದ ನಾವು ವಿಮುಖರಾದದ್ದರಿಂದ ನಮ್ಮ ಪ್ರದೇಶಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಮತ್ತೆ ಧರ್ಮಜಾಗೃತಿಯ ಕೆಲಸ ಆಗಬೇಕಿದೆ. ಎಳೆಯ ಮಕ್ಕಳಿಂದಲೇ ಅಂತಹ ಕಾರ್ಯ ನಡೆದಾಗ ಸಮಾಜದೆಲ್ಲೆಡೆ ಅದು ಪಸರಿಸುವುದಕ್ಕೆ ಸಾಧ್ಯ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಐದನೇ ತರಗತಿ ವಿದ್ಯಾರ್ಥಿ ಸನ್ಮಯ್ ಹಾಗೂ ಆರನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಧಾರ್ಮಿಕ ಶ್ಲೋಕ ಪಠಿಸುವ ಮೂಲಕ ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಭಟ್ ಸ್ವಾಗತಿಸಿ, ಶಿಕ್ಷಕಿ ಮಲ್ಲಿಕಾ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾಶ್ರೀ ಕೆ.ಎಸ್ ಹಾಗೂ ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.


ಬಾಲಸ್ತುತಿ ಸ್ಪರ್ಧೆ 3, 4 ಹಾಗೂ 5ನೇ ವಯಸ್ಸಿನ ಮಕ್ಕಳ ವಿಭಾಗಗಳಲ್ಲಿ ನಡೆಯಿತು. ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಸಂಸ್ಕೃತ ವಿಭಾಗದ ಉಪನ್ಯಾಸಕಿ ಶಶಿಕಲಾ ವರ್ಕಾಡಿ ಹಾಗೂ ಅಂಬಿಕಾ ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಸೌಂದರ್ಯಲಕ್ಷ್ಮಿ ತೀರ್ಪುಗಾರರಾಗಿ ಸಹಕರಿಸಿದರು.

ಕುಡಿದ ಅಮಲಿನಲ್ಲಿ ದೇವಸ್ಥಾನದ ಉತ್ಸವದಲ್ಲಿ ಸಮವಸ್ತ್ರದಲ್ಲಿ (Uniform) ನೃತ್ಯ ಮಾಡಿದ್ದಕ್ಕಾಗಿ ASI (ಎಎಸ್‌ಐ) ಅಮಾನತು – ಡಾನ್ಸ್ ಮಾಡಿದ ವೀಡಿಯೊ ನೋಡಿ

ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರನ್ನು ಅಮಾನತು ಮಾಡಲಾಗಿದೆ.

ಸ್ಪೆಷಲ್ ಬ್ರಾಂಚ್ ವರದಿಯ ಮೇರೆಗೆ ಇಡುಕ್ಕಿಯ ಸಂತನಪಾರ ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ಕೆಪಿ ಶಾಜಿ ಅವರನ್ನು ಅಮಾನತುಗೊಳಿಸಲಾಗಿದೆ.

ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ವೈರಲ್ ಆದ ನಂತರ  ಸ್ಪೆಷಲ್ ಬ್ರಾಂಚ್  ತನಿಖೆ ನಡೆಸಿ ವರದಿ ಸಲ್ಲಿಸಿತ್ತು.

ಅವರ ಅಮಾನತಿಗೆ ಪ್ರಮುಖ ಕಾರಣವೆಂದರೆ ಅವರು ಕರ್ತವ್ಯದಲ್ಲಿದ್ದಾಗ ಸಾರ್ವಜನಿಕರ ಮುಂದೆ ಡ್ಯಾನ್ಸ್ ಮಾಡಿದ್ದೇ ಕಾರಣ.

ವೀಡಿಯೊ ಕೃಪೆ : ಕೇರಳ ಕೌಮುದಿ 

‘ದೇವಸೇನಾನಿ’ ಯಕ್ಷಗಾನ ತಾಳಮದ್ದಳೆ

 ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಾಲಯ ಇಚ್ಚುರೂ ಕಾಲಾವಧಿ ಉತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ದೇವಸೇನಾನೀ’ ತಾಳಮದ್ದಳೆ ಜರಗಿತು.

ಭಾಗವತರಾಗಿ ಭರತರಾಜ್ ಶೆಟ್ಟಿ ಸಿದ್ದಕಟ್ಟೆ, ನೀತೇಶ್ ಕುಮಾರ್, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ತೇಜಸ್ ಬಲ್ಲಾಲ್ ಕೌಡಂಬಾಡಿ ಭಾಗವಹಿಸಿದ್ದರು.

ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ದೇವೇಂದ್ರ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ಈಶ್ವರ) , ಗುಡ್ದಪ್ಪ ಬಲ್ಯ (ತಾರಕಾಸುರ)  ಹರೀಶ್ ಆಚಾರ್ಯ ಬಾರ್ಯ(ಮನ್ಮಥ),  ಶ್ರೀಮತಿ ಪೂರ್ಣಿಮಾ ಎಸ್. ಪುತ್ತೂರಾಯ (ಪಾರ್ವತಿ)  ಶ್ರೀಮತಿ ಜ್ಯೋತಿ ಶೈಲೇಶ್ (ಷಣ್ಮುಖ) ಭಾಗವಹಿಸಿದ್ದರು.

ಶ್ರೀ ಸುರೇಶ್ ಪುತ್ತೂರಾಯ ಸ್ವಾಗತಿಸಿ ವಂದಿಸಿದರು.  ಸುರೇಶ್ ಪುತ್ತೂರಾಯ, ಲಕ್ಷ್ಮೀಶ ಅಮ್ಮಣ್ಣಾಯ, ಪಿ. ಸೂರ್ಯನಾರಾಯಣ ಪುತ್ತೂರಾಯ, ಜಯಪ್ರಸಾದ್ ಯೆನ್ಮಾಡಿ  ಕಲಾವಿದರನ್ನು  ಶಾಲು, ಪ್ರಸಾದ ನೀಡಿ ಗೌರವಿಸಿದರು.

ಕೃಷ್ಣ ಸಂಧಾನ,  ವಾಲಿ ವಧೆ, ಮಾಗಧ ವಧೆ – ಇಂದಿನಿಂದ ಮೂರು ದಿನಗಳ ಕಾಲ ತಾಳಮದ್ದಳೆ ಕಾರ್ಯಕ್ರಮ

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಮಂಗಳೂರಿನ ನೆಡ್ಲೆ ನರಸಿಂಹ ಭಟ್ಟ ಪ್ರತಿಷ್ಠಾನದ ಸಹಯೋಗದೊಂದಿಗೆ ಮುಂಬಯಿಯಲ್ಲಿ ಮೂರುದಿನಗಳ ತಾಳಮದ್ದಳೆ ಸರಣಿಯನ್ನು ಆಯೋಜಿಸಿದೆ.

ಈ ಮೂರುದಿನಗಳಲ್ಲಿ  ಕೃಷ್ಣ ಸಂಧಾನ,  ವಾಲಿ ವಧೆ, ಮಾಗಧ ವಧೆ ಎಂಬ ಪ್ರಸಂಗಗಳ ತಾಳಮದ್ದಳೆ ಕೂಟ ಮುಂಬಯಿಯ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟೆಯವರಿಗೆ ‘ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಂಘಟಕರು ಮುಂಬಯಿಯ ಕಲಾಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.

ಕಾರ್ಯಕ್ರಮದ ಸಂಪೂರ್ಣ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ನೋಡಿ. 

ಚಿತ್ರಸೇನ ಕಾಳಗ, ದುಶ್ಶಾಸನ ವಧೆ, ರಕ್ತರಾತ್ರಿ ಯಕ್ಷಗಾನ ಬಯಲಾಟ 

ಕಟೀಲು ಶ್ರೀದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಕಲಾಮಂಡಳಿಯವರಿಂದ 28ನೇ ವರ್ಷದ ಸೇವಾ ಬಯಲಾಟವಾಗಿ “ಚಿತ್ರಸೇನ ಕಾಳಗ, ದುಶ್ಶಾಸನ ವಧೆ, ರಕ್ತರಾತ್ರಿ” ಯಕ್ಷಗಾನ ಬಯಲಾಟ ತಾ.15.04.2023ನೇ ಶನಿವಾರ ಸಂಜೆ ಗಂಟೆ 6.00ಕ್ಕೆ  ಕನ್ಯಾನದ ಸರಸ್ವತೀ ವಿದ್ಯಾಲಯದ ವಠಾರದಲ್ಲಿ ನಡೆಯಲಿದೆ. 

ಈ ಸಂದರ್ಭದಲ್ಲಿ ಸಂಜೆ 5.30ಗಂಟೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 

ಶ್ರೀಗಳಾದ –  ಜಿನ್ನಪ್ಪ ನಾಯ್ಕ ಪೆರ್ನೆಮೊಗರು (ಮಾಜಿ ಯೋಧ), ದೇವಸ್ಯ ಕುಂಙ್ಙಣ್ಣಶೆಟ್ಟಿ (ದೈವಪಾತ್ರಿ), ಗಂಗಯ್ಯ ನಲಿಕೆ ಮರ್ತನಾಡಿ (ದೈವನರ್ತಕ), ಎಂ.ಟಿ.ಎಸ್. ಕುಲಾಲ್ (ಯಕ್ಷಗಾನ ಹಾಗೂ ಚಲನಚಿತ್ರ ನಟ) ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಿವರಗಳಿಗೆ ಮೇಲಿನ ವೀಡಿಯೊವನ್ನು ನೋಡಿ  

‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ  ಪ್ರದರ್ಶನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ದಿನಾಂಕ 14-04-2023ನೇ ಶುಕ್ರವಾರ ಸಂಜೆ ಘಂಟೆ 5.45ಕ್ಕೆ ಎಕ್ಕಾರು ಗುಡ್ಡೆಸಾನದ ಬಳಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪುಣ್ಯ ಕಥಾಭಾಗದ  ಯಕ್ಷಗಾನ  ಪ್ರದರ್ಶನ ಏರ್ಪಡಿಸಲಾಗಿದೆ. 

ಆ ಪ್ರಯುಕ್ತ ಕಲಾಭಿಮಾನಿಗಳಾದ ಎಲ್ಲರನ್ನೂ ಶ್ರೀಮತಿ ಶ್ರುತಿ ಮತ್ತು ಶ್ರೀ ಪದ್ಮನಾಭ ಉಡುಪ ಮತ್ತು ಶ್ರೀಮತಿ ರಾಧ ಉಡುಪ, ಶ್ರೀ ಮಧ್ವರಾಜ ಉಡುಪ ಅವರು ಆದರದಿಂದ ಸ್ವಾಗತಿಸಿದ್ದಾರೆ. ವಿವರಗಳಿಗೆ ಮೇಲಿನ ವೀಡಿಯೊ ನೋಡಿ 

ಮುಂಬೈನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಯುವತಿಯರನ್ನು ಅಪ್ಪಿಕೊಂಡು ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ ಪ್ರಕರಣ – ಮೂವರ ವಿರುದ್ಧ ಪ್ರಕರಣ – ಹುಡುಗಿಯರ ಜೊತೆ ಬೈಕ್ ವೀಲಿಂಗ್ ವೀಡಿಯೊ ನೋಡಿ

ವೈರಲ್ ವೀಡಿಯೊವೊಂದರಲ್ಲಿ, ಮುಂಬೈನಲ್ಲಿ ವ್ಯಕ್ತಿಯೊಬ್ಬರು ಇಬ್ಬರು ಮಹಿಳೆಯರೊಂದಿಗೆ ಅಪಾಯಕಾರಿ ಬೈಕ್ ಸ್ಟಂಟ್ ಪ್ರದರ್ಶಿಸುವುದನ್ನು ಕಾಣಬಹುದು. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಮಹಿಳೆಯರೊಂದಿಗೆ ವ್ಯಕ್ತಿಯೊಬ್ಬ ನಡೆಸಿದ ಅಪಾಯಕಾರಿ ಬೈಕ್ ಸ್ಟಂಟ್‌ನ 13 ಸೆಕೆಂಡ್‌ಗಳ ವಿಡಿಯೋ ಮುಂಬೈ ಪೊಲೀಸರನ್ನು ಮೂವರ ವಿರುದ್ಧ ಪ್ರಕರಣ ದಾಖಲಿಸಲು ಪ್ರೇರೇಪಿಸಿತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಒಬ್ಬ ಪುರುಷನು ತನ್ನ ಮುಂದೆ ಒಬ್ಬ ಮಹಿಳೆ ಮತ್ತು ಇನ್ನೊಬ್ಬರು ಪಿಲಿಯನ್ ಮೇಲೆ ಕುಳಿತುಕೊಂಡು ವೀಲಿಂಗ್ ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಪುರುಷನು ಮುಂಭಾಗದ ಚಕ್ರಗಳನ್ನು ರಸ್ತೆಯಿಂದ ಮೇಲಕ್ಕೆತ್ತಿ ಹಲವಾರು ಮೀಟರ್‌ಗಳವರೆಗೆ ಸವಾರಿ ಮಾಡುತ್ತಿದ್ದಾಗ ಇಬ್ಬರು ಮಹಿಳೆಯರು ಅವನನ್ನು ಅಪ್ಪಿಕೊಂಡಿದ್ದಾರೆ.

ಬೈಕರ್‌ನ ಮುಂದೆ ಕುಳಿತಿರುವ ಮಹಿಳೆ ಕೈಬೀಸುತ್ತಿದ್ದಾಳೆ, ನಗುತ್ತಿದ್ದಾಳೆ ಮತ್ತು ಗ್ಯಾಂಗ್ ಚಿಹ್ನೆಗಳನ್ನು ತೋರಿಸುತ್ತಿದ್ದಾಳೆ. ಮೂವರು ಪ್ರಯಾಣಿಕರು ಹೆಲ್ಮೆಟ್ ಧರಿಸಿರಲಿಲ್ಲ. ಈ ಕುರಿತು ಬಿಕೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279 (ಅಪವೇಗದ ಚಾಲನೆ) ಮತ್ತು 336 (ಜೀವಕ್ಕೆ ಅಪಾಯ) ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಪೊಲೀಸರು ಮತ್ತೊಂದು ಟ್ವೀಟ್‌ನಲ್ಲಿ, “ಕೇವಲ ದಂಡ ಮಾತ್ರವಲ್ಲ, ಈ ವೀಡಿಯೊದಲ್ಲಿ ಕಂಡುಬರುವ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಮತ್ತು ಅವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಉಲ್ಲೇಖಿಸಿದ್ದಾರೆ.

ಬೈಕ್‌ನಲ್ಲಿದ್ದ ಇಬ್ಬರು ಮಹಿಳೆಯರ ವಿರುದ್ಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಕುಮ್ಮಕ್ಕು ನೀಡಿದವರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅದೇ ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 114 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೇತನ ವಿತರಣೆ ವಿಳಂಬ ಖಂಡಿಸಿ ಕೆಎಸ್‌ಆರ್‌ಟಿಸಿ ವಿರುದ್ಧ ಬ್ಯಾಡ್ಜ್‌ ಧರಿಸಿದ್ದ ಮಹಿಳಾ ಕಂಡಕ್ಟರ್‌ ವರ್ಗಾವಣೆ

ಕೆಎಸ್‌ಆರ್‌ಟಿಸಿಯಲ್ಲಿ ವೇತನ ವಿತರಣೆ ವಿಳಂಬ ಖಂಡಿಸಿ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್‌ರನ್ನು ವರ್ಗಾವಣೆ ಮಾಡಲಾಗಿದೆ.

ಅಖಿಲಾ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಖಿಲಾ ಅವರು ‘ಸಂಬಳ ರಹಿತ ಸೇವೆ 44ನೇ ದಿನ’ ಎಂಬ ಬ್ಯಾಡ್ಜ್ ಧರಿಸಿದ್ದರು.

ಕೆಎಸ್‌ಆರ್‌ಟಿಸಿ ವೈಕಂ ಡಿಪೋದಲ್ಲಿ ಕಂಡಕ್ಟರ್ ಆಗಿದ್ದ ಅಖಿಲಾ ಸಿ ನಾಯರ್ ಅವರನ್ನು ಪಾಲಾ ಡಿಪೋಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಆದೇಶದಲ್ಲಿ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿಗೆ ಮಾನಹಾನಿ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು, ಈ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

10ನೇ ತರಗತಿ ಪರೀಕ್ಷೆ ಮುಗಿಸಿದ ದಿನವೇ ಶಾಲೆಯಿಂದ ನೇರವಾಗಿ ಊಟಿಗೆ ತೆರಳುತ್ತಿದ್ದ ಐವರು ವಿದ್ಯಾರ್ಥಿಗಳ ತಂಡ – ಮಾರ್ಗಮಧ್ಯದಲ್ಲಿ ಪೊಲೀಸರ ಕೈಗೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಸಿ ಪೋಷಕರಿಗೆ ತಿಳಿಸದೆ ಊಟಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ಕಣ್ಣೂರು ರೈಲ್ವೆ ಪೊಲೀಸರು ಹಿಡಿದಿದ್ದಾರೆ.

ಬಾಲಕಿಯರು ಸೇರಿದಂತೆ ಐದು ಮಂದಿಯ ಗ್ಯಾಂಗ್ ಕಳೆದ ಬುಧವಾರ ತಮ್ಮ ಶಾಲಾ ಸಮವಸ್ತ್ರವನ್ನು ಬದಲಾಯಿಸಿಕೊಂಡು ಕೊಲ್ಲಂ ರೈಲು ನಿಲ್ದಾಣವನ್ನು ತಲುಪಿದ್ದರು.

ಅವರಿಗೆ ಊಟಿಗೆ ಹೋಗಬೇಕೆನಿಸಿತು, ಆದರೆ ಯಾವ ರೈಲು ಹತ್ತಬೇಕು ಎಂಬುದು ಗೊತ್ತಿರಲಿಲ್ಲ. ಕಣ್ಣೂರಿಗೆ ಟಿಕೆಟ್ ಖರೀದಿಸಿ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಹತ್ತಿದರು. ವಿದ್ಯಾರ್ಥಿಗಳ ಗ್ಯಾಂಗ್ ಬಳಿ ಕೇವಲ 2500 ರೂಪಾಯಿ ಇತ್ತು.

ರೈಲು ರಾತ್ರಿ 11.30 ರ ಸುಮಾರಿಗೆ ಕಣ್ಣೂರು ರೈಲು ನಿಲ್ದಾಣವನ್ನು ತಲುಪಿತು. ಆದರೆ ಅವರು ಒಳಗೆಯೇ ಇದ್ದರು. ರೈಲು ಹೊರಡುವ ಮುನ್ನವೇ ಚಾತನೂರು ಸಿಐ ಶಿವಕುಮಾರ್ ದೂರವಾಣಿ ಮೂಲಕ ನೀಡಿದ ಸೂಚನೆ ಮೇರೆಗೆ ರೈಲ್ವೇ ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಅವರನ್ನು ಚತ್ತನೂರು ಪೊಲೀಸರಿಗೆ ಒಪ್ಪಿಸಲಾಗಿದೆ. ಇಬ್ಬರು ಬಾಲಕಿಯರು ಮತ್ತು ಒಬ್ಬ ಹುಡುಗನನ್ನು ಪರವೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಪೋಷಕರೊಂದಿಗೆ ಕಳುಹಿಸಿಕೊಡಲಾಗಿದೆ. ಉಳಿದ ಇಬ್ಬರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಲಾಗಿದೆ.