Wednesday, March 11, 2026
Home Blog Page 53

‘ಯಕ್ಷರಂಗೋತ್ಸವ’ – ಯಕ್ಷಗಾನದ ದಂತಕಥೆ ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ಎರಡು ದಿನಗಳ ಯಕ್ಷೋತ್ಸವ

ಯಕ್ಷರಂಗೋತ್ಸವ’ – ಯಕ್ಷಗಾನದ ದಂತಕಥೆ ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 16-03-2023 ಶನಿವಾರ ಮತ್ತು ದಿನಾಂಕ 17-03-2023ರ ಆದಿತ್ಯವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ..

ಈ ಎರಡು ದಿನಗಳ ಎಲ್ಲಾ ಕಾರ್ಯಕ್ರಮದ ವಿವರಗಳಿಗೆ ಕೆಳಗಿನ ಆಮಂತ್ರಣ ಪತ್ರಿಕೆಯ ಚಿತ್ರಗಳನ್ನು ನೋಡಿ.

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-14 : ಮಾರ್ಚ್ 16, 2024 ರಿಂದ ಮಾರ್ಚ್ 20, 2024ರ ವರೆಗೆ

ಮಾರ್ಚ್ 16, 2024 ರಿಂದ ಮಾರ್ಚ್ 20, 2024ರ ವರೆಗೆ ಒಟ್ಟಾರೆ ಐದು ದಿನಗಳ ಕಾಲ ನಡೆಯುವ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – 14” ರ ಮೊದಲ ದಿನ, ಶನಿವಾರ ಸಂಜೆ 4.30 ಕ್ಕೆ ಪ್ರಸ್ತುತ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಶ್ರೀ ಮಂಕಾಳು. ಎಸ್. ವೈದ್ಯ, ಮಾನ್ಯ ಸಚಿವರು ಮೀನುಗಾರಿಕೆ ಹಾಗೂ ಬಂದರು ಇಲಾಖೆ, ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ‍ಕಾರ, ಬೆಂಗಳೂರು ಇವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.

ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದರಾದ ನಮ್ಮ ನಿಮ್ಮೆಲ್ಲರ ಸನ್ಮಾನ್ಯ ಶ್ರೀ ಶತಾವಧಾನಿ ಡಾ. ಆರ್. ಗಣೇಶ, ಬೆಂಗಳೂರು. ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022″ ಪ್ರದಾನ ಮಾಡಲಾಗುತ್ತಿದ್ದು ಸನ್ಮಾನ್ಯ ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ರ‍್ಥದಾರಿ. ಕಲಾಚಿಂತಕರು. ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ, ಮಾನ್ಯ ಸಭಾಧ್ಯಕ್ಷರು ರ‍್ನಾಟಕ ವಿಧಾನ ಪರಿಷತ್ತು, ರ‍್ನಾಟಕ ಸರಕಾರ, ಬೆಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ, ಕರ‍್ಯಾಧ್ಯಕ್ಷರು, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಮ್ಮೋತ್ಸವ ಸಮಿತಿ ಇವರು ಉತ್ಸವಕ್ಕೆ ಸ್ವಾಗತ ಕೋರಲಿದ್ದಾರೆ ಮತ್ತು ಶ್ರೀ ನಾರಾಯಣ ಯಾಜಿ ಸಾಲೇಬೈಲು, ಖ್ಯಾತ ಅಂಕಣಕಾರರು ಹಾಗೂ ಕಲಾಚಿಂತಕರು ಇವರು ಆಶಯ ನುಡಿ ತಿಳಿಸಲಿದ್ದಾರೆ.

ನಾಡೋಜ ಡಾ. ಮಹೇಶ ಜೋಶಿ, ಮಾನ್ಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಡಾ. ಜಯರಾಜನ್, ಅಧ್ಯಕ್ಷರು ಫೋಕ್ ಲ್ಯಾಂಡ್. ಕೇರಳ. ಶ್ರೀ ಉಪೇಂದ್ರ ಪೈ, ಸಿರಸಿ, ಯಕ್ಷಗಾನ ಕಲಾ ಪೋಷಕರು, ಉದ್ಯಮಿಗಳು. ಡಾ. ಸಂಜಯ. ಎಚ್.ಆರ್. ಬರಹಗಾರರು, ಹಿರಿಯ ಸರ್ಜನ್, ರಾಜಶೇಖರ ಆಸ್ಪತ್ರೆ ಮೈಸೂರು. ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ನಮ್ಮ ಜೊತೆಯಿರಲಿದ್ದಾರೆ.

ಉದ್ಘಾಟನಾ ದಿನದಂದು ಸಂಜೆ 6.30 ರಿಂದ ಸಾಂಸ್ಕೃತಿಕ ಕರ‍್ಯಕ್ರಮ ನಡೆಯಲಿದ್ದು ಶ್ರೀಮತಿ ಸುಕನ್ಯಾ ರಾಂ ಗೋಪಾಲ ತಂಡ ಇವರಿಂದ ‘’ಸ್ತ್ರೀ ತಾಳ ಘಟ ತರಂಗ” ನಡೆಯಲಿದೆ.
ಫೋಕ್ ಲ್ಯಾಂಡ್ ಕೇರಳ ಇವರು ಪ್ರಸ್ತುತ ಪಡಿಸಲಿರುವ ಕೇರಳ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯಗಳು ನಾಟ್ಯೋತ್ಸವದ ಕಳೆಗಟ್ಟಲಿದೆ.
ಶ್ರೀ ಲಿಂಗಯ್ಯ ಮತ್ತು ತಂಡ, ಬೆಂಗಳೂರು ಇವರ ಬೀಸು ಕಂಸಾಳೆ ಪ್ರಸ್ತುತಿ ಮೊದಲ ದಿನದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.

ನಾಟ್ಯೋತ್ಸವದ ಎರಡನೇ ದಿನವಾದ 17.03.2024 ರವಿವಾರದಂದು ಸಂಜೆ 4.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಶ್ರೀ ಎಂ. ಎಲ್. ಸಾಮಗ ಮಲ್ಪೆ, ಹಿರಿಯ ಯಕ್ಷಗಾನ ಕಲಾವಿದರು, ಚಿಂತಕರು ಹಾಗೂ ಬರಹಗಾರರು ಇವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ – 2022″ ಪ್ರದಾನ ಮಾಡಲಿದ್ದು ಶ್ರೀ ನಾರಾಯಣ ಹೆಗಡೆ, ಹಿಂಡ್ನನೆ. ಉಪನ್ಯಾಸಕರು, ಉಡುಪಿ ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಡಾ. ಎಂ. ಪ್ರಭಾಕರ ಜೋಶಿ, ಕಲಾವಿದರು, ವಿಮರ್ಶಕರು, ಮಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.

ದ್ವಿತೀಯ ದಿನದಂದು ಡಾ. ಧರಣಿದೇವಿ, ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಶ್ರೀ ಕೃಷ್ಣಮೂರ್ತಿ ಮಂಜರು, ಮಾರಣಕಟ್ಟೆ, ಉದ್ಯಮಿಗಳು, ಕಲಾಪೋಷಕರು, ಹೈದರಾಬಾದ್. ಶ್ರೀ ವೆಂಕಟರಮಣ ಹೆಗಡೆ, ಕವಲಕ್ಕಿ, ಉದ್ಯಮಿಗಳು ಹಾಗೂ ಕಲಾಪೋಷಕರು. ಡಾ. ನಾರಾಯಣ ಹೆಗಡೆ, ಮೈಸೂರು, ಹಿರಿಯ ಸರ್ಜನ್, ಅಪೋಲೋ ಆಸ್ಪತ್ರೆ ಮೈಸೂರು.
ಶ್ರೀ ಗಣಪಯ್ಯ ಗೌಡರು, ಮುಗಳಿ, ಅಧ್ಯಕ್ಷರು ವ್ಯ.ಸೇ.ಸ.ಸಂ. ಕೆಳಗಿನೂರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 06.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಅನುಪಮಾ ಹೊಸಕೆರೆ, ಬೆಂಗಳೂರು ನಿರ್ದೇಶನದ ಗೊಂಬೆಯಾಟ “ಅಷ್ಟಾವಕ್ರ” ಧಾತು ಗೊಂಬೆಯಾಟ ತಂಡ, ಬೆಂಗಳೂರು, ಇವರಿಂದ.

ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನ ಪಾತ್ರದಲ್ಲಿ ನಟಿಸುವ, ಶ್ರೀ ಟಿ.ಎಸ್ ಲೋಹಿತಾಶ್ವರಿಂದ ಕನ್ನಡ ರೂಪಾಂತರಗೊಂಡ, ಡಾ. ಬಿ. ವಿ ರಾಜಾರಾಂ, ಬೆಂಗಳೂರು ಇವರ ನಿರ್ದೇಶನದ ನಾಟಕ – ಮುಖ್ಯಮಂತ್ರಿ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ.

ಉತ್ಸವದ ಮೂರನೇ ದಿನದ ಅಂಗವಾಗಿ 18.03.2024 ಸೋಮವಾರದಂದು ಬೆಳಗ್ಗೆ 11 ರಿಂದ ಮಂತ್ರಮುಗ್ದಗೊಳಿಸಲಿರುವ – ಎಚ್. ಕೆ. ರಾಮಚಂದ್ರ ಅವರಿಂದ ನಾಟಕ ರೂಪವಾದ, ಸಾಲಿಯಾನ್ ಉಮೇಶ ನಾರಾಯಣ್ ನಿರ್ದೇಶಿಸಿದ ಶಾಲಾ ಮಕ್ಕಳಿಗಾಗಿ ಪ್ರಚುರ ಪಡಿಸಲಿರುವ ನಾಟಕ’ ಅನ್ಯಾಳ ಡೈರಿ’ ಕಿನ್ನರ ಮೇಳ ತುಮರಿ ಇವರಿಂದ.

ಡಾ. ನಿರಂಜನ ವಾನಳ್ಳಿ, ಮಾನ್ಯ ಉಪಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಇವರು ಮೂರನೇ ದಿನದ ಉತ್ಸವದ ಅಧ್ಯಕ್ಷತೆ ವಹಿಸಲಿದ್ದು

ಸನ್ಮಾನ್ಯ ಡಾ. ಕೆ.ಎಂ.ರಾಮಚಂದ್ರಪ್ಪ, ಸಹಾಯಕ ನರ‍್ದೇಶಕರು (ಕನ್ನಡ ಮತ್ತು ಸಂಸ್ಕೃತಿ ಶ್ರೀ ಎಚ್.ಎನ್.ಸುರೇಶ, ಮಾನ್ಯ ಅಧ್ಯಕ್ಷರು, ಭಾರತೀಯ ವಿದ್ಯಾಭವನ ಬೆಂಗಳೂರು. ಶ್ರೀ ರಾಜು ಅಡಕಳ್ಳಿ, ಬೆಂಗಳೂರು, ಅಂಕಣಕಾರರು, ಕಲಾ ಚಿಂತಕರು ಇವರುಗಳು ಉತ್ಸವದ ಮೂರನೇ ದಿನದ ಮುಖ್ಯ ಅಭ್ಯಾಗತರುಗಳಾಗಿರಲಿದ್ದಾರೆ.

ಸಾಂಸ್ಕೃತಿಕ ಕರ‍್ಯಕ್ರಮಗಳು ಸಂಜೆ 6.30 ರಿಂದ ನಡೆಯಲಿದ್ದು ಕಲಾಶ್ರೀ ಪಂ. ಮುದ್ದು ಮೋಹನ್, ಐ.ಎ.ಎಸ್(ನಿ.) ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು ಗಾಯನ ಕಿವಿಗಿಂಪುಗಯ್ಯಲಿದ್ದು: ಪ್ರೋ. ಗೋಪಾಲಕೃಷ್ಣ ಹೆಗಡೆ, ಕೆಲಭಾಗ ಮತ್ತು ಶ್ರೀ ಭರತ ಹೆಗಡೆ ಕ್ರಮವಾಗಿ ತಬಲಾದಲ್ಲಿ ಮತ್ತು ಹರ‍್ಮೋನಿಯಂನಲ್ಲಿ ಸಹಕಾರ ನೀಡಲಿದ್ದಾರೆ.
ಗುರು ಡಾ. ಲಲಿತಾ ಶ್ರೀನಿವಾಸನ್, ಬೆಂಗಳೂರು. ನಿರ್ದೇಶನದ ಮೈನವಿರೇಳಿಸುವ ಭರತನಾಟ್ಯ ಪ್ರದರ್ಶನ ನೂಪುರ ಸಂಸ್ಥೆ ಬೆಂಗಳೂರು ಇವರಿಂದ.


ಉತ್ಸವದ 4ನೇ ದಿನ 19.03.2024ರಂದು
ಶ್ರೀ ಆರ್.ಎಂ. ಹೆಗಡೆ, ಬಾಳೇಸರ. ಮಾನ್ಯ ಅಧ್ಯಕ್ಷರು, ಟಿ.ಎಂ.ಎಸ್.ಸಿದ್ದಾಪುರ. ವಿದ್ವಾನ್ ಗ. ನಾ. ಭಟ್ಟ, ಮೈಸೂರು, ಬರಹಗಾರರು, ವಿಮರ್ಶಕರು. ಶ್ರೀಮತಿ ಚಿತ್ರಾಕ್ಷಿ ಗೌಡ, ನಾಜಗಾರ. ಮಾನ್ಯ ಅಧ್ಯಕ್ಷರು, ಕೆಳಗಿನೂರು ಪಂಚಾಯತ. ಶ್ರೀ ನಾಗರಾಜ ಭಟ್ಟ ಬೇಂದ್ರೆ, ಉದ್ಯಮಿಗಳು. ಕಲಾ ಪೋಷಕರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿರಲಿದ್ದು ಶ್ರೀ ಬಿ.ಎನ್.ವಾಸರೆ, ಮಾನ್ಯ ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು.ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6.30 ರಿಂದ ಜರುಗಲಿದ್ದು ಅಮೃತಾ ಸಿಂಗ್, ಹೈದ್ರಾಬಾದ್ ಇವರಿಂದ ಕುಚಿಪುಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾರ್ತಿಕೆರೆ ರಾಘಣ್ಣ ಇವರ ತಂಡದಿಂದ ಸುಗಮ ಸಂಗೀತ ಮತ್ತು ಸೋನಾಲಿಕಾ ನೃತ್ಯ ತಂಡ, ಬೆಂಗಳೂರು ಇವರಿಂದ ಓಡಿಸ್ಸಿ ನೃತ್ಯ ಮನಗೆಲ್ಲಲಿದೆ.

ನಾಟ್ಯೋತ್ಸವದ ಸಮಾರೋಪ ಸಮಾರಂಭವು ದಿನಾಂಕ 20.03.2024 ಬುಧವಾರದಂದು ಸಂಜೆ 4.30 ರಿಂದ ಜರುಗಲಿದ್ದು ವಿದ್ವಾನ್ ಗ. ನಾ. ಭಟ್ಟ. ಮೈಸೂರು, ಬರಹಗಾರರು, ಸಂಸ್ಕೃತಿ ಚಿಂತಕರು. ಇವರು 14 ನೇ ನಾಟ್ಯೋತ್ಸವದ ಸಮಗ್ರ ಅವಲೋಕನ ಪ್ರಸ್ತುತಪಡಿಸಲಿದ್ದಾರೆ. ಶ್ರೀ ಜಿ. ಎಸ್. ಭಟ್ಟ ಮೈಸೂರು. ಖ್ಯಾತ ಸಾಹಿತಿಗಳು, ಕಲಾಪೋಷಕರು ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಸುನೀಲ್ ನಾಯ್ಕ, ಮಾಜಿ ಶಾಸಕರು ಭಟ್ಕಳ ಕ್ಷೇತ್ರ ಶ್ರೀ ಎನ್. ಎಸ್. ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷರು.ಉತ್ತರ ಕನ್ನಡ ಡಾ. ಶ್ರೀಧರ ಹೆಗಡೆ ಪ್ರಾಧ್ಯಾಪಕರು, ಫೀಲ್ಡ್ ಮರ‍್ಷಲ್ ಕರ‍್ಯಪ್ಪ ಕಾಲೇಜು, ಮಡಿಕೇರಿ ಮುಖ್ಯ ಅಭ್ಯಾಗತರುಗಳಾಗಿ ಭಾಗಿಯಾಗಲಿದ್ದಾರೆ.

ಮುಕ್ತಿಶ್ರೀ ಹೈದ್ರಾಬಾದ್ ಇವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದ್ದು ಗಾಯಕರಾಗಿ ನಾಗೇಶ ಅಡಗಾಂವಕರ್, ಪಡಂತದಲ್ಲಿ ಆಯುಶಿ ದೀಕ್ಷಿತ, ತಬಲಾದಲ್ಲಿ ಆಶಯ ಕುಲಕರ್ಣಿ, ಹರ‍್ಮೋನಿಯಂನಲ್ಲಿ ಅಭಿಷೇಕ ಕುಲಕರ್ಣಿ ಪಕಾವಾಜ್ ನಲ್ಲಿ ಕೃಷ್ಣ ಸಾಲುಂಬೆ ಸಹಕಾರ ನೀಡಲಿದ್ದಾರೆ ಎಂದು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿಯ ಯಕ್ಷಗಾನ ಮಂಡಳಿಯ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ ತಿಳಿಸಿದರು.

14ನೆಯ ರಾಷ್ಟ್ರೀಯ ನಾಟ್ಯೋತ್ಸವನ್ನು ಸಂಭ್ರಮದಿಂದ ಸಂಘಟಿಸುತ್ತಿರುವ ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಊರಿನ ನಾಗರೀಕರು, ಹಿತೈಷಿಗಳು ಸಹಕಾರದೊಂದಿಗೆ ಉಪಸ್ಥಿತರಿರಲು ವಿನಂತಿಸಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಶ್ರೀಧರ ಹೆಗಡೆ ಕೆರೆಮನೆ, ಶ್ರೀಮತಿ ಸುಹಾಸಿನಿ, ಶ್ರೀ ಕೆ. ಈ. ಹೆಗಡೆ ಹಣ್ಣುಹಿತ್ತಲು, ಶ್ರೀ ಎಮ್ . ಎಲ್ ಹೆಗಡೆ ಕೆರೆಮನೆ, ಶ್ರೀಮತಿ ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು.

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.)

ಭಾರತೀಯ ರಂಗ ಪರಂಪರೆಯಲ್ಲಿ ಒಂದು ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ಸುಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 1934ರಲ್ಲಿ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು.

ಈಗ ಐದನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಶೈಲಿ, ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ.ಅಲ್ಲದೆ ಶಿವಾನಂದ ಹೆಗಡೆಯವರ ಪುತ್ರ ಕೆರೆಮನೆ ಶ್ರೀಧರ ಹೆಗಡೆ ಕೂಡಾ ಕಲಾವಿದರಾಗಿ ಸಂಘಟಕರಾಗಿ ಮುಂದುವರಿದಿದ್ದಾರೆ. ಮಂಡಳಿಯ ವಿಸ್ತರಣಾ ಕಾರ್ಯವಾಗಿ ಅಮೃತ ಮಹೋತ್ಸವ ಆಚರಣೆ, ಶಂಭು ಹೆಗಡೆ ಸ್ಮಾರಕ ಬಯಲು ರಂಗಮಂದಿರ, ಕಲಾ ಸಾಧಕರಿಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಯಕ್ಷಗಾನ ಶಿಲ್ಪ ನಿರ‍್ಮಾಣ, ಕೆರೆಮನೆ ಶಂಭು ಹೆಗಡೆ * ರಾಷ್ಟ್ರೀಯ ನಾಟೋತ್ಸವ, ಯಕ್ಷಗಾನ ಭಾಗವತಿಕೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಆಟವೇ ಪಾಠ ಯೋಜನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಮೂಲಕ ‘ಯಕ್ಷಗಾನ ಗುರುಕುಲ ತರಬೇತಿ, ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ.

ಈ ಸಂಸ್ಥೆ ಹಲವು ಪ್ರಥಮಗಳನ್ನು ಯಕ್ಷಗಾನದಲ್ಲಿ ದಾಖಲಿಸಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿದೆ. ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ” ‘ಮಾಸದ ಆಟ’, ಹಿರಿಯ ಕಲಾ ಸಾಧಕರ ನೆನಪಿಸುವ’ ‘ಅಪರ‍್ವಪರ‍್ವಸ್ಮರಣೆ’ ಮುಂತಾದ ಯೋಜನೆ ನಿರಂತರ ನಡೆಸಿಕೊಂಡು ಬರುತ್ತಿದೆ. 2024-25 ನೇ ಸಾಲಿನಲ್ಲಿ ಸಂಸ್ಥೆ 90ನೇ ವರ್ಷಾಚರಣೆಗೆ ಸಿದ್ಧವಾಗಿದೆ.

ವೀಡಿಯೋ – ಕಾಜಲ್ ಅಗರ್ವಾಲ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಾಗ ಅನುಚಿತವಾಗಿ ಸ್ಪರ್ಶಿಸಿದ ಅಭಿಮಾನಿ – ಅಸಮಾಧಾನಗೊಂಡ ನಟಿ

ಕಾಜಲ್ ಅಗರ್ವಾಲ್ ಮಾರ್ಚ್ 6 ರಂದು ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅಲ್ಲಿ ಹಾಜರಿದ್ದವರಲ್ಲಿ ಒಬ್ಬರಿಂದ ಅಹಿತಕರ ವರ್ತನೆಯ ನಂತರ ಅವರು ಅಸಮಾಧಾನಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಅಭಿಮಾನಿಯೊಬ್ಬ ಸೆಲ್ಫಿಗಾಗಿ ನಟಿಯ ಬಳಿ ಬರುತ್ತಿರುವುದನ್ನು ತೋರಿಸುತ್ತದೆ ಮತ್ತು ಫೋಟೋ ಕ್ಲಿಕ್ಕಿಸುವಾಗ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ. ಅತ ನಟಿಯ ಸೊಂಟ ಸ್ಪರ್ಶಿಸಲು ಯತ್ನಿಸಿದ್ದಾನೆ.

ನೌವಾರಿ ಸ್ಟೈಲ್‌ನಲ್ಲಿ ಉಟ್ಟ ಮೆರೂನ್ ಸೀರೆಯಲ್ಲಿ ಕಾಜಲ್ ಎಂದಿನಂತೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ಆಕೆ ತನ್ನ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಒಬ್ಬ ವ್ಯಕ್ತಿ ವೇಗವಾಗಿ ಅವಳನ್ನು ಸಮೀಪಿಸಿ, ಭದ್ರತಾ ರೇಖೆಗಳನ್ನು ದಾಟಿ, ಅವಳೊಂದಿಗೆ ಚಿತ್ರವನ್ನು ಕ್ಲಿಕ್ಕಿಸಲು ಪ್ರಯತ್ನಿಸಿದನು.

ಒಂದು ಸೆಕೆಂಡಿನಲ್ಲಿ, ಅವನು ತನ್ನ ಕೈಗಳನ್ನು ಅವಳ ಸೊಂಟದ ಕಡೆಗೆ ಹಾಕಲು ಯತ್ನಿಸಿದನು. ಕಾಜಲ್ ಅಹಿತಕರವಾದಾಗ ಮತ್ತು ವ್ಯಕ್ತಿಗೆ ಪ್ರತಿಕ್ರಿಯಿಸಿದಾಗ ಭದ್ರತಾ ಸಿಬ್ಬಂದಿ ಅವನನ್ನು ದೂರ ತಳ್ಳಿದರು, ಅವರು ಶೀಘ್ರವಾಗಿ ಮತ್ತೆ ಗುಂಪಿನತ್ತ ತೆರಳಿದರು.


ವೀಡಿಯೋ ನೋಡಿ – 12 ವರ್ಷದ ಬಾಲಕ ಮೊಬೈಲ್ ಗೇಮ್ ಆಡುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿದ ಚಿರತೆ – ಬಾಗಿಲು ಲಾಕ್ ಮಾಡಿ ಸ್ವಲ್ಪದರಲ್ಲೇ ಪಾರಾದ ಹುಡುಗ


ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 12 ವರ್ಷದ ಬಾಲಕ ಮೊಬೈಲ್ ಗೇಮ್ ಆಡುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿದ ಚಿರತೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಮಾಲೆಗಾಂವ್‌ನಲ್ಲಿ ಅಪ್ರಾಪ್ತ ಬಾಲಕ ಸಂಭಾವ್ಯ ಚಿರತೆ ದಾಳಿಯಿಂದ ಪಾರಾಗಿದ್ದಾರೆ
ಬಾಲಕ ಕುಳಿತಿದ್ದ ಬ್ಯಾಂಕ್ವೆಟ್ ಹಾಲ್‌ಗೆ ಚಿರತೆ ನುಗ್ಗಿದೆ
ಹುಡುಗ ಚಿರತೆಯನ್ನು ಹಾಲ್‌ನಲ್ಲಿ ಬೀಗ ಹಾಕಿ ಹೊರಗೆ ಧಾವಿಸುತ್ತಾನೆ

12 ವರ್ಷದ ಬಾಲಕ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಸಭಾಂಗಣದ ಮುಖ್ಯ ಬಾಗಿಲು ತೆರೆದಿತ್ತು. ಅವನು ಕಿರುಚಲಿಲ್ಲ, ಗಾಬರಿಯಾಗಲಿಲ್ಲ, ಅವನು ಸೋಫಾದಿಂದ ಕೆಳಗಿಳಿದು ಬಾಗಿಲು ಮುಚ್ಚಿ ಕೋಣೆಯಿಂದ ಹೊರನಡೆದನು.

ಚಿರತೆ ಕೋಣೆಗೆ ನುಗ್ಗಿದ್ದನ್ನು ಕಂಡ ತಕ್ಷಣ ಬಾಲಕ ಹೊರಗೆ ಧಾವಿಸಿ ಬಾಗಿಲು ಹಾಕಿಕೊಂಡಿದ್ದಾನೆ.

ಅಪ್ರಾಪ್ತ ವಯಸ್ಕನು ಅಲಾರ್ಮ್ ಮಾಡುತ್ತಿದ್ದಂತೆ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಮೇಲೆ ಚಿರತೆಯನ್ನು ಪಂಜರದಲ್ಲಿ ಬಂಧಿಸಲಾಯಿತು.

ನಾಪತ್ತೆಯಾಗಿದ್ದ ಒಂಭತ್ತು ವರ್ಷದ ಬಾಲಕಿಯ ಶವ ಚರಂಡಿಯಲ್ಲಿ ಪತ್ತೆ; ಅತ್ಯಾಚಾರ ನಡೆದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪೊಲೀಸರು

ಎರಡು ದಿನಗಳ ಹಿಂದೆಯಷ್ಟೇ ನಾಪತ್ತೆಯಾಗಿದ್ದ ಒಂಬತ್ತು ವರ್ಷದ ಬಾಲಕಿ ಬುಧವಾರ ರಸ್ತೆ ಬದಿಯ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿರುವುದು ಕಂಡುಬಂದಿದೆ. ಈ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಶನಿವಾರ ಬಾಲಕಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು, ನಂತರ ಆಕೆಯ ಪೋಷಕರಾದ ನಾರಾಯಣನ್ ಮತ್ತು ಮೈಥಿಲಿ ಆಕೆಯನ್ನು ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಬಳಿಕ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದು, ಬಾಲಕಿಯ ಪತ್ತೆಗೆ ತಂಡಗಳನ್ನು ಪೊಲೀಸರು ರಚಿಸಿದ್ದರು.

ಆದರೆ, ಎರಡು ದಿನಗಳ ಬಳಿಕ ಬಾಲಕಿಯ ಕೊಳೆತ ಶವ ಆಕೆಯ ನಿವಾಸದ ಬಳಿಯ ಚರಂಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

ಕಳೆದ ಎರಡು ದಿನಗಳ ಪೊಲೀಸ್ ತನಿಖೆಯಲ್ಲಿ ನಿರ್ಣಾಯಕ ಸಾಕ್ಷ್ಯಗಳು ದೊರೆತಿದ್ದು, ಗುರುವಾರ ಬಾಲಕಿಯ ಮನೆಯ ಸಮೀಪದ ಚರಂಡಿಯಲ್ಲಿ ಶವ ಬೆಡ್ ಶೀಟ್‌ನಲ್ಲಿ ಸುತ್ತಿ ಪತ್ತೆಯಾಗಿದೆ. ಸಿಸಿಟಿವಿ ಫೂಟೇಜ್ ನಲ್ಲಿ ಏನೂ ಮಾಹಿತಿ ಇಲ್ಲ, ಅದರಲ್ಲಿ ಮಗು ಮಾತ್ರ ರಸ್ತೆಯಲ್ಲಿ ಆಟವಾಡುವುದು ಕಾಣಿಸುತ್ತದೆ.

ಸಂಭವನೀಯ ಲೈಂಗಿಕ ಕಿರುಕುಳದ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಪೊಲೀಸರು ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕಿಯನ್ನು ಹತ್ಯೆ ಮಾಡುವ ಮುನ್ನ ಲೈಂಗಿಕ ಕಿರುಕುಳ ನೀಡಲಾಗಿತ್ತು.

ಮೃತದೇಹವನ್ನು ಹೊರತೆಗೆದ ಕೂಡಲೇ ಸ್ಥಳೀಯರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತಯಾಯಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಅರೆಸೇನಾ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು.

ಮೃತ 5 ನೇ ತರಗತಿ ವಿದ್ಯಾರ್ಥಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾಲಕನ ಮಗಳು. ಈ ಪ್ರದೇಶದಲ್ಲಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು ಮತ್ತು ಹತ್ಯೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಮಾಜಿ ಶಾಸಕ ವೈಯಾಪುರಿ ಮಣಿಕಂದನ್ ಮುಖ್ಯಮಂತ್ರಿ ಎನ್.ರಂಗಸಾಮಿ ಅವರಿಗೆ ಮನವಿ ಸಲ್ಲಿಸಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಈ ನಡುವೆ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಪೊಲೀಸರು ಐದು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಗು ಸೇರಿದಂತೆ ಮೂವರು ಮಕ್ಕಳ ಸಹಿತ ಕುಟುಂಬದ ಐವರು ಶವವಾಗಿ ಪತ್ತೆ – ಕಾರಣ ನಿಗೂಢ

ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾಯಂನ ಪಾಲಾದ ಪೂವರಾಣಿ ಎಂಬಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

ಮೃತರು ಅಕಲೆಕ್ಕುನ್ನಂ ನಂಜಂದುಪಾರ ಮೂಲದ ಜೈಸನ್ ಥಾಮಸ್, ಅವರ ಪತ್ನಿ ಮರೀನಾ (28) ಮತ್ತು ಮಕ್ಕಳಾದ ಜೆರಾಲ್ಡ್ (4), ಜೆರಿನಾ (2) ಮತ್ತು ಜೆರಿಲ್ (ಏಳು ತಿಂಗಳು).

ಜೈಸನ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದ ನಂತರ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಮತ್ತು ಮಕ್ಕಳು ಪತ್ತೆಯಾಗಿದ್ದಾರೆ.

ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಜೈಸನ್ ಶವ ಪತ್ತೆಯಾಗಿದೆ. ಜೈಸನ್ ರಬ್ಬರ್ ತೋಟದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಒಂದು ವರ್ಷದ ಹಿಂದೆ ಕುಟುಂಬ ಪೂವರಣಿಗೆ ತೆರಳಿತ್ತು. ಹೀಗಾಗಿ ಸ್ಥಳೀಯರಿಗೆ ಈ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇಸ್ರೇಲ್ ನಲ್ಲಿ ಹೆಜ್ಬುಲ್ಲಾ ಕ್ಷಿಪಣಿ ದಾಳಿಗೆ ಓರ್ವ ಭಾರತೀಯ ವ್ಯಕ್ತಿ ಬಲಿ

ಲೆಬನಾನ್‌ನಿಂದ ಉಡಾವಣೆಯಾದ ಟ್ಯಾಂಕ್ ವಿರೋಧಿ ಕ್ಷಿಪಣಿಯು ಇಸ್ರೇಲ್‌ನ ಉತ್ತರ ಗಡಿ ಸಮುದಾಯವಾದ ಮಾರ್ಗಲಿಯೊಟ್ ಬಳಿಯ ಹಣ್ಣಿನ ತೋಟಕ್ಕೆ ಬಡಿದ ಕಾರಣ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದರೆ, ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ಈ ಘಟನೆ ನಡೆದಿದೆ.

ಕೇರಳದ ಕೊಲ್ಲಂ ಮೂಲದ 31 ವರ್ಷದ ಪ್ಯಾಟ್ ನಿಬಿನ್ ಮ್ಯಾಕ್ಸ್‌ವೆಲ್ ಎಂಬಾತ ಸಾವಿಗೀಡಾದ ವ್ಯಕ್ತಿ. ಎರಡು ತಿಂಗಳ ಹಿಂದೆ ಮ್ಯಾಕ್ಸ್‌ವೆಲ್ ಇಸ್ರೇಲ್‌ಗೆ ಆಗಮಿಸಿದ್ದರು ಮತ್ತು ದಾಳಿಯ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.

ಅವರು ಐದು ವರ್ಷದ ಮಗಳು ಮತ್ತು ಅವರ ಪತ್ನಿಯನ್ನು ಅಗಲಿದ್ದಾರೆ, ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಗಾಯಗೊಂಡ ಇಬ್ಬರು ಭಾರತೀಯರನ್ನು ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ಎಂಬ ತೋಟದಲ್ಲಿ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಗಳ ವಕ್ತಾರರಾದ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ದಾಳಿಯನ್ನು ಲೆಬನಾನ್‌ನ ಶಿಯಾ ಹೆಜ್ಬೊಲ್ಲಾ ಬಣ ನಡೆಸಿದೆ ಎಂದು ನಂಬಲಾಗಿದೆ, ಇದು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಹಮಾಸ್‌ಗೆ ಬೆಂಬಲವಾಗಿ ಅಕ್ಟೋಬರ್ 8 ರಿಂದ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆಯ ತಂದೆ ಪಾಥ್ರೋಸ್ ಮ್ಯಾಕ್ಸ್‌ವೆಲ್, ಸಂಜೆ ಸುಮಾರು 4.30 ಗಂಟೆಗೆ ತನ್ನ ಸೊಸೆಯಿಂದ ಕರೆ ಬಂದಿದ್ದು, ತನ್ನ ಮಗ ಅಪಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿಸಿದ್ದಾರೆ. ನಂತರ 12.30ರ ಸುಮಾರಿಗೆ ಮಗನ ಸಾವಿನ ಸುದ್ದಿ ತಿಳಿಯಿತು.

“ಪಟ್ ನಿಬಿನ್‌ಗೆ ಒಬ್ಬ ಮಗಳಿದ್ದಾಳೆ. ಆಕೆಗೆ ಐದು ವರ್ಷ. ಅವರ ಪತ್ನಿ ಏಳು ತಿಂಗಳ ಗರ್ಭಿಣಿ,” ಎಂದು ಅವರು ಹೇಳಿದರು.
ಏತನ್ಮಧ್ಯೆ, ಭಾರತದಲ್ಲಿನ ಇಸ್ರೇಲಿ ರಾಯಭಾರ ಕಚೇರಿ ಭಾರತೀಯ ಪ್ರಜೆಯ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದೆ ಮತ್ತು ಇಸ್ರೇಲಿ ವೈದ್ಯಕೀಯ ಸಂಸ್ಥೆಗಳು ದಾಳಿಯಲ್ಲಿ ಗಾಯಗೊಂಡಸೇವೆಯಲ್ ಹೇಳಿದರು.

ಕೆಫೆಯಲ್ಲಿ ‘ಮೌತ್ ಫ್ರೆಶನರ್’ ತಿಂದು ರಕ್ತ ವಾಂತಿ ಮಾಡಿದ 5 ಮಂದಿ ಸ್ನೇಹಿತರು ಗಂಭೀರ ಸ್ಥಿತಿಯಲ್ಲಿ

ಮಾರ್ಚ್ 2 ರಂದು ಗುರುಗ್ರಾಮ್‌ನ ಕೆಫೆಯಲ್ಲಿ ಊಟದ ನಂತರ ಮೌತ್ ಫ್ರೆಶ್ನರ್ ಸೇವಿಸಿದ ನಂತರ ಐದು ಜನರು ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಬಾಯಿಯಲ್ಲಿ ಸುಡುವ ಬೆಂಕಿಯ ಅನುಭವವನ್ನು ಹೊಂದಿದರು.

ಐವರು ಸ್ನೇಹಿತರು ಗುರುಗ್ರಾಮ್‌ನ ಸೆಕ್ಟರ್ 90 ನಲ್ಲಿರುವ ಲಾಫೊರೆಸ್ಟಾ ಕೆಫೆಯಲ್ಲಿದ್ದರು. ರೆಸ್ಟಾರೆಂಟ್‌ನೊಳಗೆ ಒಬ್ಬರ ವೀಡಿಯೊ ರೆಕಾರ್ಡಿಂಗ್‌ನಲ್ಲಿ, ಅವರ ಪತ್ನಿ ಸೇರಿದಂತೆ ಅವರ ಐದು ಸ್ನೇಹಿತರು ನೋವು ಮತ್ತು ಅಸ್ವಸ್ಥತೆಯಿಂದ ಕಿರುಚುವುದು ಮತ್ತು ಅಳುವುದು ಕಂಡುಬರುತ್ತದೆ. ಒಬ್ಬ ಮಹಿಳೆ ನಂತರ ರೆಸ್ಟಾರೆಂಟ್ ನೆಲದ ಮೇಲೆ ವಾಂತಿ ಮಾಡುತ್ತಾಳೆ, ಆದರೆ ಮಹಿಳೆ ತನ್ನ ಬಾಯಿಯಲ್ಲಿ ಐಸ್ ಹಾಕುತ್ತಾಳೆ, “ಇದು ಉರಿಯುತ್ತಿದೆ” ಎಂದು ಪದೇ ಪದೇ ಹೇಳುತ್ತಾಳೆ

.

ನಂತರ ಅವರು ಕೆಫೆಯಲ್ಲಿರುವ ಜನರನ್ನು ಪೊಲೀಸರಿಗೆ ಕರೆ ಮಾಡಲು ಕೇಳುತ್ತಾರೆ.


ಪೊಲೀಸರಿಗೆ ನೀಡಿದ ದೂರಿನಲ್ಲಿ, “ನಾನು ಮೌತ್ ಫ್ರೆಶ್ನರ್ ಪ್ಯಾಕೆಟ್ ಅನ್ನು ವೈದ್ಯರಿಗೆ ತೋರಿಸಿದೆ, ಅದು ಡ್ರೈ ಐಸ್ ಎಂದು ಹೇಳಿದರು. ವೈದ್ಯರ ಪ್ರಕಾರ, ಇದು ಸಾವಿಗೆ ಕಾರಣವಾಗಬಹುದು” ಎಂದು ಹೇಳಿದರು.

ಸಂತ್ರಸ್ತರ ದೂರಿನ ಮೇರೆಗೆ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐದು ಜನರು ಮೊದಲು ತಮ್ಮ ಬಾಯಿಯಲ್ಲಿ ಬೆಂಕಿ ಸುಡುವ ಸಂವೇದನೆಯನ್ನು ಅನುಭವಿಸಿದರು ಮತ್ತು ಎಗರಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಅವರು ರಕ್ತ ವಾಂತಿ ಮಾಡಿದರು. ರೆಸ್ಟೋರೆಂಟ್ ಸಿಬ್ಬಂದಿ ಅವರ ಬಾಯಿಯನ್ನು ನೀರಿನಿಂದ ತೊಳೆಯಲು ಕೂಡ ಸಹಾಯ ಮಾಡಲಿಲ್ಲ ಎಂದು ಅವರು ಹೇಳಿದರು.

ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಪತ್ನಿಯನ್ನು ಕೊಂದು, ಆಕೆಯ ಶವದೊಂದಿಗೆ 4 ದಿನಗಳ ಕಾಲ ವಾಸಿಸಿದ ಗಂಡ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಡಿತದ ಅಮಲಿನಲ್ಲಿ ವ್ಯಕ್ತಿ ಪತ್ನಿಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ತನ್ನ ಪತ್ನಿಯ ಶವದೊಂದಿಗೆ 4 ದಿನಗಳ ಕಾಲ ವಾಸವಾಗಿದ್ದ. ಅವರ ಮಲಗುವ ಕೋಣೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

ಗಾಜಿಯಾಬಾದ್‌ನಲ್ಲಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಆಕೆಯ ಮೃತದೇಹವನ್ನು ನಾಲ್ಕು ದಿನಗಳ ಕಾಲ ತಮ್ಮ ನಿವಾಸದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಭರತ್ ಸಿಂಗ್ ಮದ್ಯದ ಅಮಲಿನಲ್ಲಿ ನೆರೆಹೊರೆಯವರ ಬಳಿ ನಡೆದ ಘಟನೆಯನ್ನು ತಿಳಿಸಿದ್ದ ಎನ್ನಲಾಗಿದೆ.

ಅವರ ಅಪಾರ್ಟ್‌ಮೆಂಟ್‌ನಿಂದ ವಿಪರೀತ ವಾಸನೆ ಬರಲಾರಂಭಿಸಿದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೌಟುಂಬಿಕ ಕಲಹದ ವೇಳೆ 51 ವರ್ಷದ ಪತ್ನಿ ಸುನೀತಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 3 ರಿಂದ 4 ದಿನಗಳ ಹಳೆಯದಾದ ಮಹಿಳೆಯ ಮೃತದೇಹ ಕೊಳೆಯಲು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸುನೀತಾ ಅವರ ಮೊದಲ ಪತಿ ನಿಧನರಾಗಿದ್ದರು ಮತ್ತು ಭರತ್ ಮೊದಲ ಹೆಂಡತಿಯಿಂದ ದೂರವಾಗಿದ್ದರು. ಹಾಗಾಗಿ ಇಬ್ಬರಿಗೂ ಇದು ಎರಡನೇ ಮದುವೆ.

ಭರತ್ ತನ್ನ ಎರಡನೇ ಪತ್ನಿಯನ್ನು ಮದ್ಯದ ಅಮಲಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಭರತ್ ಮದ್ಯದಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ.
ಮಹಿಳೆಯ ಪುತ್ರನ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಭರತ್ ನನ್ನು ಬಂಧಿಸಲಾಗಿದೆ.

ಸ್ವ ಇಚ್ಛೆಯಿಂದ ಬಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ ಕತಾರ್ ನಲ್ಲಿರುವ ಚೈತ್ರಾ – ಸೋಮವಾರ ರಾಯಭಾರಿ ಕಚೇರಿ ಮೂಲಕ ಮಂಗಳೂರು ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡುವ ನಿರೀಕ್ಷೆ

ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾಗಿರುವ ಪ್ರಕರಣ ಹೀಗೆಯೇ ಎಂದು ಯಾರೂ ಊಹಿಸಬಹುದಾದರೂ ಅಧಿಕೃತ ಮಾಹಿತಿಗಾಗಿ ನಾಳೆ ಸೋಮವಾರದ ವರೆಗೆ ಕಾಯಬೇಕಾಗಿದೆ.

ಸದ್ಯ ಅರಬ್ ದೇಶ ಕತಾರ್ ನಲ್ಲಿ ಆಕೆಯ ಸ್ನೇಹಿತ ಶಾರುಖ್‌ನ ಸ್ನೇಹಿತನ ಜೊತೆಯಲ್ಲಿ ಇದ್ದಾಳೆ ಎಂದು ಊಹಿಸಲಾದ ಚೈತ್ರಾ ಅಲ್ಲಿಂದ ಸೋಮವಾರ ಭಾರತೀಯ ರಾಯಭಾರಿ ಕಚೇರಿ ಮೂಲಕ ಸೋಮವಾರ ಮಂಗಳೂರು ಪೊಲೀಸ್ ಕಮಿಷನರ್‌ಗೆ ಆಕೆ ಇರುವ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಶನಿವಾರ ಮತ್ತು ಭಾನುವಾರ ರಾಯಭಾರ ಕಚೇರಿಗೆ ರಜೆ ಇರುವುದರಿಂದ ಸೋಮವಾರ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ತೆರಳಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್‌ಗೆ ಲಿಖಿತ ಹೇಳಿಕೆ ನೀಡುವ ಸಾಧ್ಯತೆ ಇದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ನಾಪತ್ತೆಯಾಗಿದ್ದ ಹಾಗೂ ಬೆಂಗಳೂರಿಗೆ ಹೋಗಿದ್ದ ಚೈತ್ರಾಳ ಸಂಪರ್ಕದಲ್ಲಿದ್ದ ಪುತ್ತೂರಿನ ಶಾರುಖ್ ಬೆಂಗಳೂರಿಗೆ ತೆರಳಿ ಚೈತ್ರಾಳನ್ನು ಗೋವಾಕ್ಕೆ ಕರೆದುಕೊಂಡು ಹೋದ.. ಕಣ್ಣೂರಿನ ಶಾರುಖ್ ಸ್ನೇಹಿತ ಚೈತ್ರಾ ಮತ್ತು ಶಾರುಖ್ ಮಧ್ಯಪ್ರದೇಶದಲ್ಲಿ ಉಳಿಯಲು ವ್ಯವಸ್ಥೆ ಮಾಡಿದ. ಶಾರುಖ್ ಅವರ ಹತ್ತಿರದ ಸಂಬಂಧಿ ಕತಾರ್‌ನಲ್ಲಿ ನೆಲೆಸಿರುವ ಯುವಕ ಚೈತ್ರಾಗೆ ವಿಸಿಟಿಂಗ್ ವೀಸಾ ಮತ್ತು ವಿಮಾನ ಟಿಕೆಟ್ ಕಳುಹಿಸಿದ. ಅಲ್ಲಿಂದ ದೆಹಲಿ ಮೂಲಕ ಚೈತ್ರಾಳನ್ನು ಕತಾರ್ ಗೆ ಕಳುಹಿಸಿದ ಶಾರುಖ್ ವಾಪಸಾದ. ಈಗ ಚೈತ್ರಾ ಪ್ರಸ್ತುತ ಕತಾರ್ ನಲ್ಲಿ ಇದ್ದಾಳೆ ಎಂದು ನಂಬಲಾಗಿದೆ,

ಕತಾರ್ ಪೋಲೀಸರಿಗೆ ಚೈತ್ರಾ ತಾನು ಸ್ವಯಂಪ್ರೇರಿತ ನಿರ್ಗಮನದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಶನಿವಾರ ಮತ್ತು ಭಾನುವಾರ ರಜೆ ಇರುವುದರಿಂದ ಸೋಮವಾರ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಸ್ವಯಂ ಪ್ರೇರಿತವಾಗಿ ತೆರಳಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್‌ಗೆ ಹೇಳುತ್ತಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ

ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾಗಿರುವ ಶಾರುಖ್ ವಿದೇಶಕ್ಕೆ ತೆರಳಲು ಆಗುವುದಿಲ್ಲ. ಈಗಾಗಲೇ ಮಧ್ಯಪ್ರದೇಶದಲ್ಲಿ ಶಾರುಖ್ ಅವರನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಚೈತ್ರಾ ಹೇಳಿಕೆ ನೀಡುವ ಮೊದಲೇ ಶಾರುಖ್ ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂಬುದು ನಿಜವಾಗಿದ್ದರೆ ಅದು ತನಿಖಾ ಲೋಪವಾಗುತ್ತದೆ. ಯಾಕೆಂದರೆ ಇಡೀ ಪ್ರಕರಣದಲ್ಲಿ ಶಾರುಖ್ ನ ಪಾತ್ರ ಇದೆ ಎನ್ನುವುದು ಪೊಲೀಸರಿಗೆ ತಿಳಿಯದ ವಿಚಾರವಲ್ಲ.