Wednesday, March 11, 2026
Home Blog Page 47

ಸೇರಾಜೆ ಸೀತಾರಾಮ ಭಟ್ಟ ಮತ್ತು ಜಬ್ಬಾರ ಸಮೊ ಅವರಿಗೆ ಯಕ್ಷಗಾನ ಪ್ರಶಸ್ತಿ.

ಸೇರಾಜೆ ಸೀತಾರಾಮ ಮತ್ತು ಜಬ್ಬಾರ ಸಮೊ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ.

ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ

ಅನುಕ್ರಮವಾಗಿ ಅರ್ಥಧಾರಿ, ಹವ್ಯಾಸಿ ವೇಷಧಾರಿ ಜಬ್ಬಾರ ಸಮೊ ಹಾಗೂ ಅರ್ಥಧಾರಿ, ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೇರಾಜೆ ಸೀತಾರಾಮ ಭಟ್ಟ ಆಯ್ಕೆಯಾಗಿದ್ದಾರೆ.

ಇದೇ ಜೂನ್ 23, ಭಾನುವಾರದಂದು ಅಪರಾಹ್ನ 3.00 ಗಂಟೆಗೆ ಸಂಸ್ಥೆಯ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಜರಗಲಿದೆ ಎಂಬುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.

ಯಕ್ಷಗಾನ ಕಲಾರಂಗದ ವಾರ್ಷಿಕ ಸಮಾವೇಶ, ಸಂವಾದ, ಕಲಾವಿದರ ವೈದ್ಯಕೀಯ ತಪಾಸಣೆ, ಸಹಾಯಧನ, ಯಕ್ಷಗಾನ ಪ್ರದರ್ಶನ

ಯಕ್ಷಗಾನ ಸರ್ವಾಂಗ ಸುಂದರ ಕಲೆ – ಪುತ್ತಿಗೆ ಶ್ರೀ

ಯಕ್ಷಗಾನ ಕಲೆಯ ಎಲ್ಲಾ ಅಂಗಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರ. ಅದನ್ನು ಪ್ರಸ್ತುತ ಪಡಿಸುವ ಕಲಾವಿದರು ಸಮಾಜಕ್ಕೆ ಪುರಾಣದ ಸಂದೇಶವನ್ನು ತಿಳಿಸುವ ಶ್ರೇಷ್ಠ ವಿದ್ವಾಂಸರು, ಯಕ್ಷಗಾನ ಕಲಾರಂಗ ಮಾಡುತ್ತಿರುವ ಸಮಾಜಮುಖಿ ಕೆಲಸ ಅನನ್ಯ ಮತ್ತು ಅಗಾಧ ಎಂಬುದಾಗಿ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೇ 31ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ 25ನೇ ವರ್ಷದ ಕಲಾವಿದರ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಾ ನುಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರೂ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಸ್ವಾಮೀಜಿಯವರು ಸ್ಮರಣಿಕೆ, ಶಾಲು, ಅಭಿನಂದನಾ ಪತ್ರ ನೀಡಿ ಹರಸಿದರು.

ಸುಬ್ರಹ್ಮಣ್ಯ ಬೈಪಡಿತ್ತಾಯರು ಬರೆದ ಆಗಸದ ಬೆಳಕು ಪುಸ್ತಕವನ್ನು ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಇತ್ತೀಚೆಗೆ ನಿಧನರಾದ ಪುತ್ತೂರು ಗಂಗಾಧರ ಜೋಗಿಯವರ ಧರ್ಮಪತ್ನಿಗೆ ಸಾಂತ್ವನ ನಿಧಿಯನ್ನು ನೀಡಲಾಯಿತು.

21 ಜನ ಕಲಾವಿದರಿಗೆ ತಲಾ ಹತ್ತು ಸಾವಿರದಂತೆ ಗೃಹ ನಿರ್ಮಾಣದ ಉಡುಗೊರೆ ಹಾಗೂ 7 ಮಂದಿ ಕಲಾವಿದರಿಗೆ ವೈದ್ಯಕೀಯ ನೆರವು ವಿತರಿಸಲಾಯಿ. ಇದೇ ಸಂದರ್ಭದಲ್ಲಿ ವೃತ್ತಿಮೇಳದ ಕಲಾವಿದರಿಗೆ ತಮ್ಮ ಹೋಟೆಲ್‌ನಲ್ಲಿ ಉಚಿತವಾಗಿ ಉಪಹಾರ ನೀಡಿ ಪ್ರೋತ್ಸಾಹಿಸುತ್ತಾ ಬಂದ ಆಗುಂಬೆಯ ಗುರುರಾಜ ಅಡಿಗ ಮತ್ತು ಕೊಕ್ಕರ್ಣೆಯ ಕೆ. ಎಸ್. ಶ್ರೀನಿವಾಸ ನಾಯಕ್ ಇವರನ್ನು ಶ್ರೀಪಾದರು ಗೌರವಿಸಿದರು.

ವೇದಿಕೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಂ. ಪ್ರಭಾಕರ ಜೋಶಿ, ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ , ಸುರೇಶ್ ನಾಯಕ್ ಕುಯಿಲಾಡಿ, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಪೂರ್ವಾಹ್ನ 10.00 ಗಂಟೆಗೆ ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ ಅಚಾರ್ಯ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. 9.00ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು. 10.30ರಿಂದ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿ ತಿಪಟೂರು ಇವರಿಂದ ಮೂಡಲಪಾಯ ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.

ಮಧ್ಯಾಹ್ನ 12.00ರಿಂದ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಪೂರಕವೇ? ಮಾರಕವೇ? ಎಂಬ ವಿಷಯದ ಕುರಿತು 12 ಜನ ಕಲಾವಿದರು ತಮ್ಮ ಅನುಭವವನ್ನು ಹಂಚಿಕೊAಡರು. ಡಾ. ಪ್ರದೀಪ್ ವಿ. ಸಾಮಗ ಈ ಗೋಷ್ಠಿಯ ಸಮನ್ವಯಕಾರರಾಗಿದ್ದರು.

ಸಮಾವೇಶದಲ್ಲಿ ಭಾಗವಹಿಸಿದ ವೃತ್ತಿ ಮೇಳದ ಸುಮಾರು 700 ಕಲಾವಿರಿಗೆ ಉಡುಗೊರೆ, ಸಂಸ್ಥೆಯ ಸುವರ್ಣ ವರ್ಷ ಹಾಗೂ ಯಕ್ಷನಿಧಿಯ ರಜತ ವರ್ಷದ ಸವಿ ನೆನಪಿಗೆ ವಿಶೇಷವಾಗಿ ತಯಾರಿಸಿದ ಸಿಹಿ ಪೊಟ್ಟಣ ವಿತರಿಸಲಾಯಿತು.

ವೃತ್ತಿನಿರತ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ.

ಉಡುಪಿ : ವೃತ್ತಿನಿರತ ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ 25 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ಯಕ್ಷನಿಧಿಯ ವಾರ್ಷಿಕ ಮಹಾಸಭೆ ಮೇ 31, 2024 ಶುಕ್ರವಾರದಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ಪೂರ್ವಾಹ್ನ 10.00 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಸಮಾವೇಶವನ್ನು ಉದ್ಘಾಟಿಸಲಿದ್ದು, ಅಭ್ಯಾಗತರಾಗಿ ಭಾಗವತ ಶ್ರೀ ಕಲ್ಮನೆ ನಂಜಪ್ಪ ಅವರು ಭಾಗವಹಿಸಲಿದ್ದಾರೆ.

ಅಪರಾಹ್ನ 2.30 ಗಂಟೆಗೆ ಪರ್ಯಾಯ ಮಠಾಧೀಶರುಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರುಗಳ ದಿವ್ಯೋಪಸ್ಥಿತಿಯಲ್ಲಿ, ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಭಾಕಲಾಪ ನಡೆಯಲಿದೆ.

ಮುಖ್ಯ ಅಭ್ಯಾಗತರಾಗಿ ಶಾಸಕರುಗಳಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಸಾಮಾಜಿಕ ಧುರೀಣರಾದ ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಬೆಳ್ವೆ ಗಣೇಶ್ ಕಿಣಿ , ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಹಾಗೂ ಆನಂದ ಪಿ. ಸುವರ್ಣ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗೃಹನಿರ್ಮಾಣ ಉಡುಗೊರೆ, ವೈದ್ಯಕೀಯ ನೆರವು, ಸಾಂತ್ವನ ನಿಧಿ ಹಾಗೂ ಉಡುಗೊರೆಯನ್ನು ಕಲಾವಿದರಿಗೆ ವಿತರಿಸಲಾಗುವುದು. ಪೂವಾಹ್ನ 9.00 ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞವೈದ್ಯರಿಂದ ಕಲಾವಿದರ ಆರೋಗ್ಯ ತಪಾಸಣೆ ನಡೆಯಲಿದೆ.

ಪೂರ್ವಾಹ್ನ 10.30ಕ್ಕೆ ತುಮಕೂರು ಜಿಲ್ಲೆಯ ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಮೂಡಲಪಾಯ ಯಕ್ಷಗಾನ ‘ಶ್ರೀದೇವಿ ಮಹಾತ್ಮೈ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

ಅಪರಾಹ್ನ 12.00 ಗಂಟೆಗೆ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಒಳಿತು – ಕೆಡುಕುಗಳ ಬಗ್ಗೆ ಕಲಾವಿದರಿಂದ ಸಂವಾದ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ

ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ ಶೆಣೈ ಮತ್ತು ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಗುರುಗಳಾದ ಬಿ. ಸುಬ್ರಹ್ಮಣ್ಯರಾವ್ ಇವರು ಪಾತಾಳ ಅಂಬಾಪ್ರಸಾದ್ ಮತ್ತು ಶ್ರೀಮತಿ ಜಯಂತಿ ಪ್ರಸಾದ್ ಪಾತಾಳ ಇವರನ್ನು ಸನ್ಮಾನಿಸಿದರು.

ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯರನ್ನು ಪಾತಾಳ ಅಂಬಾ ಪ್ರಸಾದರು ಗೌರವಿಸಿ ಶ್ರೀಕಾಳಿಕಾಂಬ ಯಕ್ಷಗಾನ ಸಂಘಕ್ಕೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

ಆರಂಭದಲ್ಲಿ ಜರಗಿದ ಶಾಂಭವಿ ವಿಲಾಸ ತಾಳಮದ್ದಳೆಯನ್ನು ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಭಾಗವಹಿಸಿದ ಕಲಾವಿದರನ್ನು ಪಾತಾಳ ಅಂಬಾ ಪ್ರಸಾದ್ ಸ್ಮರಣಿಕೆಯೊಂದಿಗೆ ಗೌರವಿಸಿದರು.

ಭಾಗವತರಾಗಿ ವಿಘ್ನೇಶ್ವರ ಭಟ್ ನೂಜಿ , ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಅಚ್ಯುತ ಪಾಂಗಣ್ಣಾಯ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ ಚಕ್ರತಾಳದಲ್ಲಿ ರಮೇಶ್ ಭಟ್ ಕಜೆ ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಕೌಶಿಕೆ) ಸತೀಶ್ ಆಚಾರ್ಯ ಮಾಣಿ(ರಕ್ತ ಬೀಜ)ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ಚಂಡ), ಗುಡ್ಡಪ್ಪ ಬಲ್ಯ (ಶುಂಭ) ,ಜಯರಾಮ ನಾಲ್ಗುತ್ತು(ಮುಂಡ),ಸಂಜೀವ ಪಾರೆಂಕಿ(ಸುಗ್ರೀವ ಮತ್ತು ದೇವೇಂದ್ರ )ಶ್ರೀಮತಿ ಶ್ರುತಿ ವಿಸ್ಮಿತ್ (ಧೂಮ್ರಾಕ್ಷ) ಭಾಗವಹಿಸಿದ್ದರು.

ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ಸ್ವಾಗತಿಸಿ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಯರಾದ ಕೆ ಶ್ರೀಧರ್ ಭಟ್ ವಂದಿಸಿದರು.

ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ

ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ

ಉಡಪಿಯ ಯಕ್ಷಗಾನ ಕಲಾರಂಗ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.

ಮಾರ್ಪಳ್ಳಿಯವರು ಯಕ್ಷಗಾನವಲ್ಲದೆ ನಾಟಕ, ಸಿನೇಮಾ, ಸಂಗೀತಾ, ಶಿಲ್ಪ, ಸಾಹಿತ್ಯ ಹೀಗೆ ಕಲೆಯ ಬಹು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಹುಮುಖೀ ಕಲಾಸಾಧಕರಾಗಿದ್ದಾರೆ.

ಪ್ರಶಸ್ತಿಯು ಪ್ರಶಸ್ತಿ ಪರಿಕರ ಸಹಿತ ರೂ. 40000/- ನಗದು ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಮೇ 19 ಭಾನುವಾರ ಸಂಜೆ 5 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಸ್ಥಾಪಕ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷ ಜರಗಲಿದೆಯೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆಯ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ‘ದ್ಯೂತ ಪ್ರಕರಣ’ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ. ಸುರೇಶ್ ರಾವ್ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ

ಅರ್ಥಧಾರಿಗಳಾಗಿ ಜಯರಾಮ ಬಲ್ಯ ( ಕೌರವ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ( ಕರ್ಣ )ಸತೀಶ್ ಆಚಾರ್ಯ ಮಾಣಿ (ಶಕುನಿ) ಶ್ರೀಮತಿ ಶ್ರುತಿ ವಿಸ್ಮಿತ(ವಿದುರ )ಶ್ರೀಧರ ಎಸ್.ಪಿ ಮಂಗಳೂರು (ಧರ್ಮರಾಯ)ದಿವಾಕರ ಆಚಾರ್ಯ ಗೇರುಕಟ್ಟೆ (ಧೃತರಾಷ್ಟ್ರ ಮತ್ತು ಭೀಮ) ಭಾಗವಹಿಸಿದ್ದರು.

ಗಣೇಶ್ ಆಚಾರ್ಯ. ಕೆ ಬೆಂಗಳೂರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು

ನುಡಿನಮನ: ಇತ್ತೀಚೆಗೆ ನಿಧನರಾದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ವೇಷಧಾರಿ ಗಂಗಾಧರ ಪುತ್ತೂರು ಇವರಿಗೆ ಸತೀಶ್ ಆಚಾರ್ಯ ಮಾಣಿ ಮತ್ತು ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ನುಡಿ ನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ,ಜಯರಾಮ ಬಲ್ಯ, ದಿವಾಕರ ಆಚಾರ್ಯ ನೇರೆಂಕಿ ಮತ್ತು ಸಂಘದ ಕಲಾವಿದರು ಉಪಸ್ಥಿತರಿದ್ದರು.

ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ

ಉಡುಪಿ ತಾಲೂಕು ಕೋಟ ಪ್ರೌಢಶಾಲೆ ಹತ್ತಿರದಲ್ಲಿ ಹಂದಟ್ಟು ಕೋಟತಟ್ಟು ಗ್ರಾಮದಲ್ಲಿ ವಿರಾಜಮಾನವಾಗಿರುವ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನವು 600ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇಲ್ಲಿನ ಶಿಲಾ ಶಾಸನ ಹಾಗೂ ಇತರ ಉಲ್ಲೇಖಗಳಿಂದ ಈ ದೇವಸ್ಥಾನಕ್ಕೆ 600ಕ್ಕೂ ಹೆಚ್ಚು ವರ್ಷಗಳಷ್ಟು ಇತಿಹಾಸ ಇರುವುದು ಕಂಡುಬರುತ್ತದೆ. ಕೋಟ ಮಹಾ ಜಗತ್ತಿನ ಪ್ರಮುಖ ಮನೆತನದವರಾದ ಹಂದೆ ಅವರ ಕುಟುಂಬದ ಪಾರಂಪರಿಕ ಪರಮಾರಾಧ್ಯ ದೇವರಾದ್ದರಿಂದಲೂ ಆಡಳಿತವನ್ನು ಅವರೇ ನಿರ್ವಹಿಸುತ್ತಾ ಬಂದ ಕಾರಣದಿಂದ ಹಂದೆ ದೇವಸ್ಥಾನ ಎಂಬ ಹೆಸರು ವಾಡಿಕೆಯಲ್ಲಿದೆ.

ಪ್ರಸ್ತುತ 10-05-2024ರ ಅಕ್ಷಯ ತೃತೀಯಾದಂದು ರಥೋತ್ಸವ ನಡೆಯಲಿದ್ದು, ದಿನಾಂಕ 05-05-2024ರಿಂದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಸಭಾಕಾರ್ಯಕ್ರಮ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಗಳು ದಿನಾಂಕ 09-05-2024ರಂದು ದೇವಸ್ಥಾನದ ಶ್ರೀ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆಯಲಿದೆ.

ದಿನಾಂಕ 09-05-2024ರಂದು ಸಂಜೆ 5.00ರಿಂದ ಸಭಾಕಾರ್ಯಕ್ರಮ ಮತ್ತು ಸ್ಥಳೀಯ ವಿಶೇಷ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮ ಹಾಗೂ ಗಂಟೆ 7.30ರಿಂದ ಯಕ್ಷದೇಗುಲ ಬೆಂಗಳೂರು ತಂಡ ಮತ್ತು ಅತಿಥಿಕಲಾವಿದರ ಕೂಡುವಿಕೆಯಲ್ಲಿ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಸಂದರ್ಭದಲ್ಲಿ ಯಕ್ಷಗಾನದ ಆರು ಜನ ಹಾಸ್ಯ ಕಲಾವಿದರಿಗೆ ನಿವೃತ್ತ ಶಿಕ್ಷಕರಾದ ಹೆಚ್. ಸೂರ್ಯನಾರಾಯಣ ಹಂದೆ ವಿಶೇಷ ಪುರಸ್ಕಾರ ನೀಡಲಿದ್ದಾರೆ. ದಿನಾಂಕ 10-05-2024ರಂದು ಸಂಜೆ 7.00ರಿಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಅವರಿಂದ ಯಕ್ಷಗಾನ “ಗದಾಯುದ್ಧ ಮತ್ತು ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

11-05-2024ರಂದು ಸಂಜೆ 6.00ರಿಂದ ಸ್ಥಳೀಯ ಪ್ರತಿಭೆಗಳಿಂದ ‘ನೃತ್ಯಾಂಜಲಿ’, ನಂತರ 7.00ರಿಂದ ಅರೆಹೊಳೆ ಪತ್ರಿಷ್ಠಾನ ‘ನಂದಗೋಕುಲ’ ಸಾಂಸ್ಕೃತಿಕ ತಂಡದವರಿಂದ ‘ನೃತ್ಯ ವೈಭವ’. ರಾತ್ರಿ 9.30ರಿಂದ ತ್ರೀನೇತ್ರ ಕಲಾತಂಡ ಉಪ್ಲಾಡಿ ಇವರಿಂದ ‘ಗಗ್ಗರ ದೈವದನಿ’ ನಗೆನಾಟಕ ಪ್ರದರ್ಶನ ನಡೆಯಲಿದೆ.

ಇದಲ್ಲದೆ 09-05-2024 ಗುರುವಾರ ಸಂಜೆ 4.00ರಿಂದ ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕಾರ್ಕಡ, 10-05-2024ರ ಶುಕ್ರವಾರ ಬೆಳಿಗ್ಗೆ 10ರಿಂದ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಸದಸ್ಯರಿಂದ, ಸಂಜೆ 4.00ರಿಂದ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು, 11-05-2024 ಶನಿವಾರ ಸಂಜೆ 4.00ರಿಂದ ಶ್ರೀ ರಾಮ ಭಜನಾ ಮಂಡಳಿ, ಸಾಲಿಗ್ರಾಮ ಈ ಎಲ್ಲಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅಲ್ಲದೇ 10-05-2024 ಭಾನುವಾರ ಬೆಳಿಗ್ಗೆ 10.30ರಿಂದ ಶ್ರೀ ಮಹಾಗಣಪತಿ ಮಹಿಳಾ ವೇದಿಕೆ, ಹಂದೆ ದೇವಸ್ಥಾನ ಕೋಟ ಇವರಿಂದ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. ಅಲ್ಲದೇ 11-05-2024ರಂದು ವಿಶೇಷವಾಗಿ ರಾತ್ರಿ ತೆಪ್ಪೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಅಮರ್ ಹಂದೆಯವರು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಟ ಸುದರ್ಶನ ಉರಾಳ
ಮೊ: 9448547237

ಪತಿಯನ್ನು ಕಟ್ಟಿಹಾಕಿ, ಸಿಗರೇಟ್‌ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ

30 ವರ್ಷದ ಮೆಹರ್ ಜಹಾನ್ ಎಂಬ ಮಹಿಳೆಯನ್ನು ಉತ್ತರ ಪ್ರದೇಶ ಪೊಲೀಸರು ಬಿಜ್ನೋರ್‌ನಲ್ಲಿ ತನ್ನ ಪತಿಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಪತ್ನಿಯಿಂದ ಚಿತ್ರಹಿಂಸೆಗೊಳಗಾದ ವ್ಯಕ್ತಿ ಪುರಾವೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿದ ವಿಡಿಯೋ ಆಕೆಯ ಬಂಧನಕ್ಕೆ ಕಾರಣವಾಯಿತು
ಪತಿ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದ್ದು, ಅವರ ಪತ್ನಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಕೈಕಾಲು ಕಟ್ಟಿ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವುದು ಕಂಡುಬಂದಿದೆ.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮಹಿಳೆಯೊಬ್ಬರು ತನ್ನ ಪತಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಮತ್ತು ಆತನನ್ನು ಕಟ್ಟಿಹಾಕಿದ ನಂತರ ಆತನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟುಹಾಕಿದ್ದಕ್ಕಾಗಿ ಬಂಧಿಸಲಾಗಿದೆ.

ಮೆಹರ್ ಜಹಾನ್ ಎಂಬ ಮಹಿಳೆಯನ್ನು ಆಕೆಯ ಪತಿ ನೀಡಿದ ದೂರಿನ ಮೇರೆಗೆ ಮೇ 5 ರಂದು ಸಿಯೋಹರಾ ಜಿಲ್ಲಾ ಪೊಲೀಸರು ಬಂಧಿಸಿದ್ದರು.

ಪತಿ ಮನನ್ ಝೈದಿ, ತನ್ನ ಪತ್ನಿ ಮೆಹರ್ ತನಗೆ ಮಾದಕ ದ್ರವ್ಯ ಕುಡಿಸಿದ್ದಾಳೆ ಮತ್ತು ತನ್ನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವ ಮೊದಲು ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಪತಿ ಮನೆಯೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒದಗಿಸಿದ್ದು, ಮೆಹರ್ ಜಹಾನ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು, ಅವನ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕುವುದು ಮತ್ತು ಎದೆಯ ಮೇಲೆ ಕುಳಿತು ಕತ್ತು ಹಿಸುಕಲು ಪ್ರಯತ್ನಿಸುವುದನ್ನು ತೋರಿಸುತ್ತದೆ.

ನಂತರ ವೀಡಿಯೊದಲ್ಲಿ, ಅವಳು ತನ್ನ ಗಂಡನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವುದನ್ನು ಕಾಣಬಹುದು.

ಮನನ್ ಝೈದಿ ಅವರು ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದರು, ಅವರ ಪತ್ನಿ ಅಮಲು ಪದಾರ್ಥಗಳನ್ನು ನೀಡಿ, ಕೈಕಾಲು ಕಟ್ಟಿ, ನಿಂದನೆಗೆ ಒಳಪಡಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸರು ಮೆಹರ್ ಜಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನ, ಹಲ್ಲೆ ಮತ್ತು ಚಿತ್ರಹಿಂಸೆ ಸೇರಿದಂತೆ ಪ್ರಕರಣ ದಾಖಲಿಸಿ, ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ

ಕಾಸರಗೋಡಿನಲ್ಲಿ ಆಂಬ್ಯುಲೆನ್ಸ್ ಕಾರು ಡಿಕ್ಕಿಯಾಗಿ ವ್ಯಕ್ತಿ ಹಾಗೂ ಆತನ ಇಬ್ಬರು ಪುತ್ರರ ದುರ್ಮರಣ

ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಹಾಗೂ ಆತನ ಇಬ್ಬರು ಪುತ್ರರು ಸಾವನ್ನಪ್ಪಿರುವ ಘಟನೆ ಮಂಜೇಶ್ವರದ ಕುಂಜತ್ತೂರಿನಲ್ಲಿ ನಡೆದಿದೆ.

ಮೃತರನ್ನು ತ್ರಿಶೂರ್‌ನ ಇರಿಂಜಲಕುಡದ ಶಿವಕುಮಾರ್ (54) ಮತ್ತು ಅವರ ಮಕ್ಕಳಾದ ಶರತ್ (23) ಮತ್ತು ಸೌರವ್ (15) ಎಂದು ಗುರುತಿಸಲಾಗಿದೆ.

ಅವರು ಕಾರಿನಲ್ಲಿದ್ದ ಪ್ರಯಾಣಿಕರಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಕಾಸರಗೋಡಿಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನ ಬಾಗಿಲು ಒಡೆದು ಶವಗಳನ್ನು ಹೊರತೆಗೆಯಲಾಯಿತು. ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯಾದ ಉಷಾ, ಆಕೆಯ ಜೊತೆಗಿದ್ದ ಶಿವದಾಸ್ ಮತ್ತು ಆಂಬ್ಯುಲೆನ್ಸ್ ಚಾಲಕನಿಗೆ ಗಾಯಗಳಾಗಿವೆ.

ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಗಂಡನೊಡನೆ ಜಗಳವಾಡಿದ ನಂತರ ಮೊಸಳೆ ತುಂಬಿದ ಕಾಲುವೆಯಲ್ಲಿ ಮಗುವನ್ನು ಎಸೆದ ತಾಯಿ – ಉತ್ತರ ಕನ್ನಡದ ಮಗು ಸಾವು

ಕರ್ನಾಟಕದ ಉತ್ತರ ಕನ್ನಡದಲ್ಲಿ 32 ವರ್ಷದ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನನ್ನು ಮೊಸಳೆಗಳಿರುವ ಕಾಲುವೆಗೆ ಎಸೆದಿದ್ದಾಳೆ. ನಂತರ ಕೊಲೆ ಆರೋಪದ ಆಕೆಯನ್ನು ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಲಮಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸಾವಿತ್ರಿ ಎಂದು ಗುರುತಿಸಲಾದ ಮಹಿಳೆ ಮತ್ತು ಆಕೆಯ ಪತಿ ರವಿಕುಮಾರ್ (36) ತಮ್ಮ ಮಗ ವಿನೋದ್‌ನ ಶ್ರವಣ ಮತ್ತು ವಾಕ್ ದೋಷದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು.

ತೀವ್ರ ವಾಗ್ವಾದದ ನಂತರ, ರಾತ್ರಿ 9 ಗಂಟೆ ಸುಮಾರಿಗೆ ಸಾವಿತ್ರಿ ವಿನೋದ್‌ನನ್ನು ಕಾಲುವೆಗೆ ಎಸೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ಕಾಲುವೆಯು ಮೊಸಳೆಯಿಂದ ತುಂಬಿರುವ ಕಾಳಿ ನದಿಗೆ ಸಂಪರ್ಕ ಕಲ್ಪಿಸುತ್ತದೆ.

ಭಾನುವಾರ ಬೆಳಿಗ್ಗೆ, ಹುಡುಕಾಟ ತಂಡವು ಮೊಸಳೆಯ ದವಡೆಯಿಂದ ಮಗುವಿನ ದೇಹವನ್ನು ವಶಪಡಿಸಿಕೊಂಡಿತು, ಅದು ಅವನ ಬಲಗೈಯನ್ನು ಭಾಗಶಃ ಕಬಳಿಸಿದೆ. ದೇಹವು ತೀವ್ರ ಗಾಯಗಳು ಮತ್ತು ಕಚ್ಚಿದ ಗುರುತುಗಳನ್ನು ತೋರಿಸಿದೆ ಎಂದು ವರದಿಯಾಗಿದೆ.

ಮನೆಗೆಲಸ ಮತ್ತು ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿರುವ. ಸಾವಿತ್ರಿ ಮತ್ತು ರವಿಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.