Thursday, March 12, 2026
Home Blog Page 339

ಇಂದು ಪುತ್ತೂರಿನಲ್ಲಿ ಯಕ್ಷಗಾನ – ಹನುಮಗಿರಿ ಮೇಳದವರಿಂದ ‘ಶುಕ್ರನಂದನೆ’

ಇಂದು, ಮಾರ್ಚ್ 1, ಸೋಮವಾರ, ಸಂಜೆ 6.30ಕ್ಕೆ ಪುತ್ತೂರಿನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಹನುಮಗಿರಿ ಮೇಳದವರು ‘ಶುಕ್ರನಂದನೆ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 17 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. 

ಈ ವರ್ಷದ ಕಾರ್ಯಕ್ರಮ ಫೆಬ್ರವರಿ 27ರಿಂದ ಆರಂಭವಾಗಿದ್ದು , ಇಂದು ಮಾರ್ಚ್ 1 ಕೊನೆಯ ದಿನವಾಗಿದೆ. 

ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 63ನೇ ವಾರ್ಷಿಕೋತ್ಸವ – ಪ್ರಶಸ್ತಿ ಸ್ವೀಕರಿಸಲಿರುವ ಸಂಸ್ಥೆ ಮತ್ತು ಕಲಾವಿದರ ಪರಿಚಯ

ಗುರುರಾಜ ಮಾರ್ಪಳ್ಳಿ– ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ
ಯಕ್ಷಗಾನ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ಕೃಷಿ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರ ಕ್ರಿಯಾಶೀಲರಾಗಿರುವ ಶ್ರೀ ಗುರುರಾಜ ಮಾರ್ಪಳ್ಳಿ ನಮ್ಮ ನಡುವೆ ಇರುವ ವಿಶಿಷ್ಟ ಕಲಾ ಸಾಧಕ. 70ರ ಅಂಚಿನಲ್ಲಿರುವ ಗುರುರಾಜರು ಉಡುಪಿ ಸಮೀಪದ ಮಾರ್ಪಳ್ಳಿಯವರು. ಇಂಗ್ಲೀಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಕನ್ನಡ, ಇಂಗ್ಲೀಷ್ ಸಾಹಿತ್ಯಾಭ್ಯಾಸಿ.

ಎಂ.ಜಿ.ಎಂ. ಮತ್ತು ಹಂಗಾರಕಟ್ಟೆ ಯಕ್ಷಗಾನ ಕೇಂದ್ರಗಳಲ್ಲಿ ಯಕ್ಷಗಾನ ನೃತ್ಯ, ಭಾಗವತಿಕೆ, ಮದ್ದಲೆ ಅಭ್ಯಾಸ ಮಾಡಿದರು. ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಧ್ಯಯನ ಮಾಡಿದರು. ಇಡಗುಂಜಿ, ಪೆರ್ಡೂರು, ಅಮೃತೇಶ್ವರೀ ಮೇಳಗಳಲ್ಲಿ ವೃತ್ತಿಕಲಾವಿದರಾಗಿ ತಿರುಗಾಟ ನಡೆಸಿದರು. ಹಾಸ್ಯ, ಮುಖ್ಯವೇಷ, ಸ್ತ್ರೀವೇಷಗಳಲ್ಲಿ ತಮ್ಮ ಕಲಾ ಪ್ರತಿಭೆ ಮೆರೆದವರು. ಡಾ. ಕೆ. ಶಿವರಾಮ ಕಾರಂತರ ಯಕ್ಷರಂಗದ ಬ್ಯಾಲೆಯ ಮೂಲಕ ಅನ್ಯಾನ್ಯ ರಾಜ್ಯಗಳಲ್ಲಿ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಯಕ್ಷಗಾನದ ಹಾಡುಗಳನ್ನು ಬಾನ್ಸುರಿಯಲ್ಲಿ ನುಡಿಸಿದ್ದಾರೆ.

1982ರ ನಂತರ ನೀನಾಸಂ ನಾಟಕ ತರಬೇತಿ ಕೇಂದ್ರದಲ್ಲಿ ನೃತ್ಯಕಲಾವಿದರಾಗಿ ಪೌರಾತ್ಯ, ಪಾಶ್ಚಾತ್ಯ ರಂಗಭೂಮಿ ಪ್ರಯೋಗಗಳ ಅಧ್ಯಯನ ನಡೆಸಿ ಸಂಗೀತ ಮತ್ತು ನೃತ್ಯದಲ್ಲಿ ಹೊಸ ಸಾಧ್ಯತೆಗಳನ್ನು ಗುರುತಿಸಿದರು. ಅಲ್ಲಿ ಕೊರಿಯೋಗ್ರಾಫರ್ ಆಗಿ, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಖ್ಯಾತ ನಿರ್ದೇಶಕ ಸಿ.ಆರ್.ಜಂಬೆಯವರ ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ ಹೆಗ್ಗಳಿಕೆ ಇವರದು.

ಭಾರತೀಯ ರಂಗಭೂಮಿಯ ಮಾಂತ್ರಿಕ ಬಿ. ವಿ.ಕಾರಂತರ ಒಡನಾಟ ಮತ್ತು ಅವರ ‘ಬಿರುಗಾಳಿ’ ನಾಟಕಕ್ಕೆ ಸಂಗೀತ ಒದಗಿಸಿದವರು. ಇದಲ್ಲದೆ ಹಲವು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರೇ ನಿರ್ದೇಶಿಸಿದ ಹಲವು ನಾಟಕಗಳು ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವುದು ಸಾಧನೆಯ ಕಿರೀಟಕ್ಕೆ ಸಂದ ಹೊನ್ನ ತುರಾಯಿಗಳಾಗಿವೆ.

ಬೇಂದ್ರೆ, ಸು.ರಂ. ಎಕ್ಕುಂಡಿ, ಕೆ. ವಿ. ತಿರುಮಲೇಶ್ ಮೊದಲಾದವರ ಕವನಗಳಿಗೆ, ಅಲ್ಲಮ್ಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ ಇವರ ವಚನಗಳಿಗೆ ಹೊಸ ರೀತಿಯ ಸಂಗೀತದ ಸ್ಪರ್ಶನೀಡಿ ಕಲಾರಸಿಕರ ಮನ ಗೆದ್ದಿದ್ದಾರೆ.

ಹಲವು ಪತ್ರಿಕೆಗಳಲ್ಲಿ, ವಿಶೇಷ ಅಂಕಣಗಳಲ್ಲಿ ಕಥೆ-ಕವನಗಳು ಪ್ರಕಟಗೊಂಡಿವೆ. ‘ಏಕಾಂತದ ಆಲಾಪಗಳು ’‘ಕಾಲಪಾತ್ರ’, ‘ಮಾರ್ಪಳ್ಳಿಯ ಖ್ಯಾಲು ಖಯಾಲುಗಳು’ ಕವನ ಸಂಕಲನಗಳು. ‘ಬಂಡೆ ಮತ್ತು ಮನುಷ್ಯ’, ‘ಸಾಂತ್ಯಾಯಣ’ ಕಥಾಸಂಕಲನಗಳು. ‘ಅತಂತ್ರ’, ‘ತಲ್ಲಣ’ ಮತ್ತು ‘ಕಲಾಯಾನ’ ಕಾದಂಬರಿಗಳು. ‘ಪಂಚರಂಗಿ’ ಐದು ನಾಟಕಗಳ ಸಂಕಲನ.

ತೈಲ ವರ್ಣಗಳ ಚಿತ್ರ, ಆಕ್ರಲಿಕ್ ವರ್ಣಚಿತ್ರ, ರೇಖಾಚಿತ್ರ, ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನ ಮಾಡಿದ್ದಾರೆ. ಮರದ ಮತ್ತು ಕಲ್ಲುಗಳ ಶಿಲ್ಪ ರಚನೆಯನ್ನೂ ಬಲ್ಲವರು. ಆಕಾಶವಾಣಿ, ದೂರದರ್ಶನಗಳಲ್ಲಿ ಅವರ ಕಲಾ ಕಾರ್ಯಕ್ರಮ ಬಿತ್ತರಗೊಂಡಿವೆ. ಪತ್ನಿ ರಾಜೇಶ್ವರಿ, ಮಕ್ಕಳು ಪ್ರಜ್ಞಾ, ಪ್ರಕೃತಿ. ಮಾರ್ಪಳ್ಳಿಯ ಸ್ವಂತ ಕೃಷಿ ಭೂಮಿಯಲ್ಲಿ ಸದಾ ಹೊಸ ಹೊಸ ಪ್ರಯೋಗಗಳೊಂದಿಗೆ ಕೃಷಿಯಲ್ಲೂ ನಿರತರು.

ಮಂಜುನಾಥ ಭಂಡಾರಿ ಕರ್ಕಿ– ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ
ಮಂಜುನಾಥ ಭಂಡಾರಿಯವರು ಸುಪ್ರಸಿದ್ಧ ಮದ್ದಲೆಗಾರರಾದ ಕರ್ಕಿ ಪ್ರಭಾಕರ ಭಂಡಾರಿ-ಶಾರದಾ ದಂಪತಿಯ ಸುಪುತ್ರರು. 55ರ ಹರೆಯದ ಇವರು ಕಲಾ ಬದುಕು ಆರಂಭಿಸಿದ್ದು 15ರ ಹರೆಯದಲ್ಲಿ. ಯಕ್ಷಗಾನ ಹಿಮ್ಮೇಳನ ವಾದನ ಕಲೆ ಇವರಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿ.

ಅಜ್ಜ, ತಂದೆ, ದೊಡ್ಡತಂದೆ, ಅಣ್ಣ ಎಲ್ಲರೂ ಪ್ರಸಿದ್ಧ ಹಿಮ್ಮೇಳ ವಾದಕರು. ಇವರಿಗೆ ಹಿಮ್ಮೇಳವಾದನ ಕಲಿಕೆಗೆ ತಂದೆಯೇ ಮೊದಲ ಗುರು. ದೊಡ್ಡತಂದೆ ಸತ್ಯನಾರಾಯಣ ಭಂಡಾರಿಯವರಿಂದ ಪ್ರಭಾವಿತರಾದರು. ಆಮೇಲೆ ಸತತ ಅಭ್ಯಾಸದಿಂದ ಅದನ್ನು ಕರಗತ ಮಾಡಿಕೊಂಡವರು. ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ, ಹಾಲಾಡಿ ಮೊದಲಾದ ಮೇಳಗಳಲ್ಲಿ ಇಪ್ಪತ್ತಕ್ಕೂ ಹೆಚ್ಚುವರ್ಷ ಕಲಾಸೇವೆ ಗೈದಿದ್ದಾರೆ.

ಮದ್ದಲೆವಾದನ ತಯಾರಿಕೆಯಲ್ಲಿಯೂ ಸಿದ್ಧಹಸ್ತರು. ಮೃಣ್ಮಯಗಣಪತಿ ಮೂರ್ತಿ ರಚನೆ ಇವರ ಇನ್ನೊಂದು ಹವ್ಯಾಸ. ಅನಾರೋಗ್ಯದ ಕಾರಣ ವೃತ್ತಿರಂಗದಿಂದ ಸ್ವಲ್ಪ ಬೇಗನೆ ನಿವೃತ್ತರಾದ ಇವರು ಹವ್ಯಾಸಿ ಕಲಾವಿದರಾಗಿ ಅನೇಕ ಸಂಘದ ಆಟಗಳಲ್ಲಿ, ತಾಳಮದ್ದಲೆ ಕೂಟಗಳಲ್ಲಿ, ಮದ್ದಲೆವಾದನದಲ್ಲಿ ಭಾಗಿಯಾಗಿದ್ದಾರೆ. ಸ್ಪಷ್ಟವಾದ ಹೊರಳಿಕೆ, ಸ್ಫುಟವಾದ ಬೆರಳುಗಾರಿಕೆ ನಾದವನ್ನು ಹಸ್ತ ತಾಡನದಲ್ಲಿ ನವಿರಾಗಿ ಹೊರಹೊಮ್ಮಿಸುವ ವಾದನಾಪಟುತ್ವ ಇವರದು. ಸಾಂಪ್ರದಾಯಿಕ, ಸೃಜನಾತ್ಮಕ ಮಟ್ಟು ಪೆಟ್ಟುಗಳನ್ನು ಬಲ್ಲ ಚತುರ ಮದ್ದಲೆ ವಾದಕರು.
ಮಡದಿ ಮಂಗಳ, ಮಕ್ಕಳು ಮಧುರಾ ಮತ್ತು ಮಾನಸರಿಂದ ಕೂಡಿದ ಚಿಕ್ಕ-ಚೊಕ್ಕ ಸಂಸಾರದ ಯಜಮಾನ.


ಟಿ. ಬೋಜಪ್ಪ ಸಾಲಿಯಾನ್, ತೋನ್ಸೆ– ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ
ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಬೋಜಪ್ಪ ಸಾಲ್ಯಾನರು ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲವರು. 82ರ ಹರೆಯದ ಶ್ರೀಯುತರು ಸುಬ್ಬಪ್ಪ ಬೆಲ್ಚಾಡ-ಸೀತಾ ದಂಪತಿ ಸುಪುತ್ರರು. 5ನೇ ತರಗತಿ ವರೆಗೆ ಓದಿದ ಇವರು ಮೂರ್ತೆದಾರಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿ ನಿಷ್ಠೆಯಿಂದ ಮಾಡಿದವರು. ಯಕ್ಷಗಾನದ ಪರಿಸರದಲ್ಲಿ ಬೆಳೆದ ಇವರು ಚಿಕ್ಕಂದಿನಲ್ಲೇ ಈ ಕಲೆಯಿಂದ ಆಕರ್ಷಿತರಾದರು.

ವೆಂಕಟಯ್ಯ ಭಾಗವತರಿಂದ ಯಕ್ಷಗಾನದ ಶಿಕ್ಷಣವನ್ನು ಪಡೆದು ಸ್ವಂತ ಪರಿಶ್ರಮದಿಂದ ಅದನ್ನು ಬೆಳೆಸಿಕೊಂಡು ಬಂದರು.
ತೊಟ್ಟಂನ ಶ್ರೀ ಗಜಾನನ ಯಕ್ಷಗಾನ ಕಲಾ ಮಂಡಳಿಯಲ್ಲಿ ಸದಸ್ಯರಾಗಿ, ಕಲಾವಿದರಾಗಿ, ಗುರುಗಳಾಗಿ ಸಂಘದೊಂದಿಗೆ ಬೆಳೆಯುತ್ತಾ ಸಂಘವನ್ನೂ ಬೆಳೆಸಿದರು. ಸಂಸ್ಥೆಯ ಪದಾಧಿಕಾರಿಗಳಾಗಿ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅದರ ಗೌರವಾಧ್ಯಕ್ಷರಾಗಿದ್ದಾರೆ.

ಯಕ್ಷಗಾನದ ವೇಷಧಾರಿಯಾಗಿ ಅನೇಕ ಪೌರಾಣಿಕ, ಐತಿಹಾಸಿಕ ಪ್ರಸಂಗಗಳಲ್ಲಿ ಹಲವಾರು ಪಾತ್ರಗಳನ್ನು ಸುಂದರವಾಗಿ ನಿರ್ವಹಿಸಿದ್ದಾರೆ. ಕರ್ಣಾರ್ಜುನದ ಅರ್ಜುನ, ವೀರಮಣಿ ಕಾಳಗದ ಶತ್ರುಘ್ನ, ಕೋಟಿ ಚೆನ್ನಯ್ಯ ಪ್ರಸಂಗದ ವಿವಿಧ ಪಾತ್ರಗಳು ಜನಮನ್ನಣೆಗಳಿಸಿವೆ. ತಾಳಮದ್ದಲೆ ಅರ್ಥಧಾರಿಯಾಗಿ ಸಂದರ್ಭೋಚಿತ ಮಾತುಗಾರಿಕೆಯಿಂದಕೂಟ ಕಳೆಗಟ್ಟುವಂತೆ ಮಾಡಿದ್ದಾರೆ.
ತಮ್ಮ ಸಂಘದಲ್ಲಷ್ಟೇ ಅಲ್ಲದೆ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ತರಬೇತಿ ನೀಡಿದ್ದಾರೆ.

ಯಕ್ಷಗಾನಾಸಕ್ತರು ಕಲಿಕೆಗೆ ಅಪೇಕ್ಷಿಸಿದಾಗ ತಮ್ಮ ಮನೆಯಲ್ಲೇ ತರಬೇತಿಯನ್ನು ನೀಡಿದ್ದಾರೆ. ಪತ್ನಿ ವನಜಾಕ್ಷಿ, ಮೂವರು ಗಂಡು, ಮೂವರು ಹೆಣ್ಣುಮಕ್ಕಳಿಂದ ಕೂಡಿದ ಸಂಸಾರದ ಯಜಮಾನರಾಗಿ ಮಕ್ಕಳಿಗೆಲ್ಲಾ ಒಳ್ಳೆಯ ಶಿಕ್ಷಣ ಕೊಡಿಸಿ ಒಳ್ಳೆಯ ಉದ್ಯೋಗ ಪಡೆಯುವುದಕ್ಕೆ ಕಾರಣರು.ಅಲ್ಲದೆ ಚಿಕ್ಕಂದಿನಲ್ಲಿ ಯಕ್ಷಗಾನವನ್ನು ಕಲಿಯಲು ಪ್ರೋತ್ಸಾಹಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಟ್ಲ ಗೋಪಾಲಕೃಷ್ಣ ಜೋಷಿ ಪ್ರತಿಷ್ಠಾನ ಪ್ರಶಸ್ತಿ ನೀಡಿ ಗೌರವಿಸಿವೆ. ಯಕ್ಷಗಾನದ ಹಿರಿಯ ಭಾಗವತ ಗೋರ್ಪಾಡಿ ವಿಠಲ ಪಾಟೀಲ ಸ್ಮಾರಕ ಯಕ್ಷಕಲಾಶ್ರೀ ಪ್ರಶಸ್ತಿ, ಸುಮನಸ ಕೊಡವೂರು ಇವರ ಆಶ್ರಯದಲ್ಲಿ ರಂಗ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ಸಂದಿವೆ.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.), ಪರ್ಕಳ, ಉಡುಪಿ.
ಎಂಟು ದಶಕಗಳಿಂದ ಯಕ್ಷಗಾನ ಮತ್ತು ಜಾನಪದ ನೃತ್ಯ ಪ್ರಕಾರಗಳಲ್ಲಿ ಕಲಾ ಸೇವೆಗೈಯುತ್ತಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿಯ ಕೊಡುಗೆ ಅನನ್ಯ. ಕೊಗ್ಗು ನಾಯಕ್, ಸದಾಶಿವ ಶೆಟ್ಟಿ, ಮುದ್ದು ಯಾನೆ ಕೃಷ್ಣ ಶೆಟ್ಟಿಗಾರ್, ಜೀವಾನ್ ಫೆರ್ನಾಂಡಿಸ್, ಕಬಿಯಾಡಿ ಪುತ್ತು ಸಾಹೇಬ್, ಪರಾರಿ ಅಪ್ಪಿ ಭಾಗವತ ಮೊದಲಾದ ಹಿರಿಯಕಲಾವಿದರನ್ನು ನೀಡಿದ ಹಿರಿಮೆ ಈ ಸಂಸ್ಥೆಗಿದೆ.

ಸಮಾನಾಸಕ್ತರಿಂದ 1937ರಲ್ಲಿ ಸ್ಥಾಪನೆಗೊಂಡ ಈ ಕಲಾ ಮಂಡಳಿ ಉಡುಪಿಯ ಹಿರಿಯ ಕಲಾ ಸಂಸ್ಥೆಗಳಲ್ಲೊಂದಾಗಿದೆ. 1957ರಲ್ಲಿ ಪರ್ಕಳ ಯಕ್ಷಗಾನ ಮಂಡಳಿಯು ಶ್ರೀ ಶಾರದಾ ಕಲಾ ಮಂಡಳಿ ಎಂಬ ಹೆಸರಿನಲ್ಲಿ ಪರ್ಕಳ ಪೇಟೆಯಕಟ್ಟಡದಲ್ಲಿ ಯಕ್ಷಗಾನ ತರಬೇತಿ ನಡೆಸುತ್ತಾ ಮುಂದುವರಿಯಿತು. ಯಕ್ಷಗಾನ, ತಾಳಮದ್ದಲೆ, ಚೌಪದಿ, ಜಾನಪದ ನೃತ್ಯಗಳನ್ನು ಕಲಾರಸಿಕರಿಗೆ ನೀಡುತ್ತಾ ಬಂದಿದೆ. 1982ರಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಎಂದು ಮರು ನಾಮಕರಣಗೊಂಡು ನೊಂದಾಯಿತ ಸಂಸ್ಥೆಯಾಯಿತು.

ಈಗ ಪರ್ಕಳ ಬಡಗುಬೆಟ್ಟು ರಸ್ತೆಯ‘ಕಲಾಭೂಮಿ’ಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ತರಬೇತಿ ಭವನ, ಕಛೇರಿ ಕೊಠಡಿ, ಅಡುಗೆ ಕೊಠಡಿ, ಸ್ವಚ್ಚತಾ ಕೋಣೆ, ಬಯಲು ರಂಗಮಂದಿರದೊಂದಿಗೆ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಹೊಂದಿದೆ. ಮಂಡಳಿಯಲ್ಲಿ ಯುವ ಕಲಾವಿದರ ತಂಡ, ಬಾಲಕಿಯರ ತಂಡ, ಮಹಿಳಾ ಯಕ್ಷಗಾನ ತಂಡ ಹೀಗೆ ಎಲ್ಲಾ ವಿಭಾಗದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಕೇವಲ ಯಕ್ಷಗಾನಕ್ಕೆ ಸೀಮಿತವಾಗದೆ ಇಲ್ಲಿ ಭರತನಾಟ್ಯ, ಹುಲಿವೇಷ, ಬೇಡರ ನೃತ್ಯವೇ ಮೊದಲಾದ ವೈವಿಧ್ಯಪೂರ್ಣ ಜಾನಪದ ನೃತ್ಯಗಳನ್ನು ಕಲಿಸಲಾಗುತ್ತಿದೆ.

ರಾಜಸ್ಥಾನದ ಜೈಪುರ ನೃತ್ಯೋತ್ಸವ, ರಾಜಸ್ಥಾನಿ ದೀಪಾವಳಿ ಉತ್ಸವ, ಮಧ್ಯಪ್ರದೇಶದ ಕಜರಾಹೋ ನೃತ್ಯೋತ್ಸವ, ನಾಗಪುರ ಕಲಾ ಸಮ್ಮೇಳನ, ಭೋಪಾಲ್‍ನ ಲೋಕ ರಂಗ್‍ ಉತ್ಸವ, ಮುಂಬೈನ ಕಲಾರಂಗ್‍ ಉತ್ಸವ, ಕೇರಳದ ಪಾಲಕ್ಕಾಡ್‍ ಉತ್ಸವ, ಝಾನ್ಸಿ ಉತ್ಸವ, ಒಡಿಸ್ಸಿ ನೃತ್ಯೋತ್ಸವ ಹೀಗೆ ಅನ್ಯಾನ್ಯ ರಾಜ್ಯದ ಪ್ರತಿಷ್ಠಿತ ಉತ್ಸವಗಳಲ್ಲಿ ಮಂಡಳಿ ಭಾಗವಹಿಸಿದೆ.

ಯಕ್ಷಗಾನ, ಗುಮ್ಮಟೆ ವಾದನ, ಡೋಲು ನೃತ್ಯ, ಭೂತದ ಕೋಲ, ಹುಲಿವೇಷ ಇತ್ಯಾದಿಗಳನ್ನು ಪ್ರದರ್ಶಿಸಿದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ಉಡುಪಿ ವಿಟ್ಲ ಪಿಂಡಿಯಲ್ಲಿ ಇವರ ಹುಲಿವೇಷದ ತಂಡವು ಪ್ರಥಮ ಬಹುಮಾನ ಗಳಿಸಿದೆ. ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಇಲ್ಲಿಯ ಕಲಾವಿದರು ಇಂಗ್ಲೀಷ್/ಹಿಂದಿ ಭಾಷಾ ಯಕ್ಷಗಾನ ನೀಡಿರುತ್ತಾರೆ. ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಪರಿಣತ ಗುರುಗಳಿಂದ ತರಬೇತಿಗೊಳಪಟ್ಟ ಯಕ್ಷಗಾನವನ್ನು ಪ್ರದರ್ಶಿಸುತ್ತಾ ಕಲಾಭಿಮಾನಿಗಳ ಮೆಚ್ಚುಗೆ ಗಳಿಸುತ್ತಾ ಬಂದಿದೆ.

ಪ್ರಸ್ತುತ ಅಂಬಲಪಾಡಿ ಸಂಘದಲ್ಲೇ ತರಬೇತಿ ಪಡೆದ ಕಡೆಕಾರು ಅನಂತ ಪದ್ಮನಾಭ ಭಟ್‍ ಯಕ್ಷಗಾನ ಗುರುಗಳಾಗಿದ್ದಾರೆ. ಹಲವಾರು ಹಿರಿಯ ಕಲಾವಿದರಿಂದ ಮುನ್ನಡೆಸಿಕೊಂಡು ಬಂದ ಈ ಸಂಸ್ಥೆಯ ಸಂಚಾಲಕರಾಗಿ ಈಗ ಮುರಳೀಧರ ನಕ್ಷತ್ರಿಕಾರ್ಯ ನಿರ್ವಹಿಸುತ್ತಿದ್ದಾರೆ.


ಪ್ರೊ.ನಾರಾಯಣ ಎಂ. ಹೆಗಡೆ

ಅಂಬಲಪಾಡಿ ಯಕ್ಷಗಾನ ಮಂಡಳಿಯಿಂದ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ

ಅಂಬಲಪಾಡಿ ದೇವಳದ ಧರ್ಮದರ್ಶಿಯಾಗಿ ವಿಶೇಷ ಸಾಧನೆಗೈದ ನಿ. ಅಣ್ಣಾಜಿ ಬಲ್ಲಾಳರ ಹೆಸರಿನಲ್ಲಿ ಅವರ ಸುಪುತ್ರ ಡಾ. ನಿ.ಬೀ ವಿಜಯ ಬಲ್ಲಾಳರು ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ಗೆ ಕಳೆದ ಎಂಟು ದಶಕಗಳಿಂದ ಕಲಾ ಸಾಧನೆಗೈಯುತ್ತಿರುವ ಪರ್ಕಳದ ಹಿರಿಯ ಸಂಘಟನೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ (ರಿ.) ಆಯ್ಕೆಯಾಗಿದೆ.

ಮಂಡಳಿಯ ಸ್ಥಾಪಕರ ನೆನಪಿನಲ್ಲಿ ನೀಡುವ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಮತ್ತು ಕುತ್ಪಾಡಿ ಆನಂದ ಗಾಣಿಗ ಪ್ರಸಸ್ತಿಗಳನ್ನು ಅನುಕ್ರಮವಾಗಿ ಪ್ರಸಿದ್ಧ ಮದ್ದಲೆವಾದಕ ಶ್ರೀ ಮಂಜುನಾಥ ಭಂಡಾರಿ ಕರ್ಕಿ, ಹಿರಿಯ ಹವ್ಯಾಸಿ ಭಾಗವತ ಶ್ರೀ ಟಿ. ಭೋಜಪ್ಪ ಸಾಲ್ಯಾನ್ ತೋನ್ಸೆ ಹಾಗೂ ಬಹುಮುಖಿ ಕಲಾವಿದ ಶ್ರೀ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 7, 2021 ಭಾನುವಾರದಂದು ಅಂಬಲಪಾಡಿಯಲ್ಲಿ ಜರಗಲಿದೆ ಎಂದು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಕೆ.ಜೆ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (01.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (01.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗುಜ್ಜಾಡಿ ಶಾಲೆ ಸಮೀಪ – ಸಂಪೂರ್ಣ ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ = ಬಾಕಿಮಾರು ಗದ್ದೆ ಪಲ್ಲಿಪಾಡಿ ವಯಾ ಪೊಳಲಿ  

ಕಟೀಲು ಎರಡನೇ ಮೇಳ ==   ಗಣೇಶನಗರ ಸುಳ್ಯ 

ಕಟೀಲು ಮೂರನೇ ಮೇಳ=  ಸಾಧುಕೃಪಾ, ಬಡಗ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ (2)

ಕಟೀಲು ಐದನೇ ಮೇಳ ==  ಕಟೀಲು ಕ್ಷೇತ್ರ (1)

ಕಟೀಲು ಆರನೇ ಮೇಳ == ಅರೆಮಜಲು ಪಲ್ಕೆ ಬಡಗಮಿಜಾರು 

ಮಂದಾರ್ತಿ ಒಂದನೇ ಮೇಳ  ==  ಧರೆಕೊಪ್ಪ ಶೃಂಗೇರಿ 

ಮಂದಾರ್ತಿ ಎರಡನೇ ಮೇಳ   ==   ಶಿರೂರು ಜಂಬೆಟ್ಟು ಕೆಳಮನೆ ಮುದ್ದುಮನೆ 

ಮಂದಾರ್ತಿ ಮೂರನೇ ಮೇಳ  ==   ಜನನಿನಿಲಯ ಗಿರ್ಕಿಮಠ ಯಡ್ತಾಡಿ  

ಮಂದಾರ್ತಿ ನಾಲ್ಕನೇ ಮೇಳ   ==  ನಮಿತ ಸದನ ನೂಜಿ ಕೊರ್ಗಿ ಹೊಸಮಠ 

ಮಂದಾರ್ತಿ    ಐದನೇ ಮೇಳ  ==  ಕನ್ನೇರಿಮನೆ ಕೊಡ್ಲಾಡಿ ಬಾಂಡ್ಯ 

ಶ್ರೀ ಹನುಮಗಿರಿ ಮೇಳ  ==  ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ವಠಾರ – ಶುಕ್ರನಂದನೆ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಠಾರ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಗೋಕರ್ಣ ಬಸ್ಟ್ಯಾಂಡ್ ಸಮೀಪ – ಶನೀಶ್ವರ ಮಹಾತ್ಮೆ, ಶ್ರೀರಾಮ ದರ್ಶನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಕ್ಕಡ ತೋಟದಮನೆ ಇಡೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಬ್ಬುತೋಟ, ಕುಂದಬಾರಂಬಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬಾನಾಳಿ ಹೊಸಿಮನೆ ಬಾಂಡ್ಯ (ಸೌಕೂರು ಮೇಳದೊಂದಿಗೆ ಕೂಡಾಟ) 

ಶ್ರೀ ಪಾವಂಜೆ ಮೇಳ  ==  ಕಿರಿಮಂಜೇಶ್ವರ ಬೈಂದೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಹೇರಿಕುದ್ರು 

ಕಮಲಶಿಲೆ ಮೇಳ ‘ಎ‘ = ಭಾಗೀಮನೆ ಹೊಸಂಗಡಿ 

ಕಮಲಶಿಲೆ ಮೇಳ ‘ಬಿ‘ == ಕಲ್ಪಂಡೆ ಪೆರ್ಡೂರು 

ಶ್ರೀ ಬಪ್ಪನಾಡು ಮೇಳ == ಶ್ರೀ ಮಹಮ್ಮಾಯಿ ಸೇವಾ ಸಮಿತಿ ಸಚ್ಚರಿಪೇಟೆ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ ಕಸಬಾ ಗ್ರಾಮದ ಕಾಂಜಿರ್ ಕೋಡಿ ಬಯಲು ಗದ್ದೆ – ನಾಗತಂಬಿಲ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೋಳಂಬಳ್ಳಿ ಮೇಳ== ಚಿತ್ತೇರಿ ದೈವಸ್ಥಾನ ವಠಾರ ಹೊರ್ಲಾಳಿ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ ==  ಬಾನಾಳಿ ಹೊಸಿಮನೆ ಬಾಂಡ್ಯ (ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ)    

ಶ್ರೀ ಹಾಲಾಡಿ ಮೇಳ == ಅರಳಸುರುಳಿ ಇಂದಿರಾನಗರ – ಚೆಲುವೆ ಚಿತ್ರಾವತಿ 

ಶ್ರೀ ಬೆಂಕಿನಾಥೇಶ್ವರ ಮೇಳ  == ಸಜಿಪಪಡು ವೀರಾಂಜನೇಯ ಭಜನಾ ಮಂದಿರ ತಲೆಮೊಗರು – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ಚಾರ ನಾಗಬ್ರಹ್ಮ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೊಳಹಳ್ಳಿ ಶ್ರೀ ನಂದಿಕೇಶ್ವರ ಶ್ರೀ ಶಿವರಾಯ ಗರಡಿ ವಠಾರ 

ಶ್ರೀ ಹಿರಿಯಡಕ ಮೇಳ == ಕೇನ್ಯ – ನೂತನ ಪ್ರಸಂಗ (ತೆಂಕುತಿಟ್ಟು ತುಳು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಹೆಮ್ಮಾಡಿಮನೆ ನಾಯ್ಕನಕಟ್ಟೆ ಕೆರ್ಗಾಲ್ ಗ್ರಾಮ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕೊಡ್ಗಿ ರಾಮಲಿಂಗೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಸಹೋದರ ಯುವಕ ಮಂಡಲ ಬಳಿ ಹನುಮಂತನಗರ – ದೈವ ಮಂಟಪ  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕೋಣಂದೂರು ಮಲ್ಲಿಕಟ್ಟೆ 

ಶ್ರೀ ಮೇಗರವಳ್ಳಿ ಮೇಳ == ಆವಿನಳ್ಳಿ ಹೂಣಾಲ್  ಮಡಿಕೆ ಸರ್ಕಲ್ – ಕುಶಲವ, ಚಿತ್ರಾಕ್ಷಿ 

‘ಶ್ರೀರಾಮ – ಹನುಮ’ ತಾಳಮದ್ದಳೆ

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ಧಿ ಪ್ರಯುಕ್ತ ಮಂಗಳೂರು ಸಮಿತಿ ವತಿಯಿಂದ ಸಪ್ತ ಕಾರ್ಯಕ್ರಮಗಳ ಆರಂಭೋತ್ಸವವನ್ನು ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಏರ್ಪಡಿಸಲಾಗಿತ್ತು.

ಈ ಸಂದರ್ಭ ಯಕ್ಷಾಂಗಣ ಮಂಗಳೂರು ಸಂಯೋಜನೆಯಲ್ಲಿ ‘ಶ್ರೀರಾಮ – ಹನುಮ’ ಯಕ್ಷಗಾನ ತಾಳಮದ್ದಳೆ ಜರಗಿತು.

ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ (ಭಾಗವತರು), ಕೃಷ್ಣ ಪ್ರಕಾಶ್ ಉಳಿತ್ತಾಯ (ಮೃದಂಗ), ಮಯೂರ್ ನಾಯಗ (ಚೆಂಡೆ) ಭಾಗವಹಿಸಿದ್ದರು.           

ಅರ್ಥಧಾರಿಗಳಾಗಿ ಡಾ.ಎಂ. ಪ್ರಭಾಕರ ಜೋಶಿ (ಹನುಮಂತ), ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೋ ಸಂಪಾಜೆ (ಸುಗ್ರೀವ), ಕದ್ರಿ ನವನೀತ ಶೆಟ್ಟಿ (ವಿಶ್ವಾಮಿತ್ರ), ಡಾ.ದಿನಕರ ಎಸ್.ಪಚ್ಚನಾಡಿ (ಸೀತೆ), ಉಮೇಶ ಆಚಾರ್ಯ ಗೇರುಕಟ್ಟೆ (ನಾರದ) ಪಾಲ್ಗೊಂಡರು.       

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಲಾವಿದರನ್ನು ಪರಿಚಯಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.

‘ಬಾಲ ಗೌರವ ಪ್ರಶಸ್ತಿ’ ಪುರಸ್ಕೃತ ಯಕ್ಷಗಾನದ ಉದಯೋನ್ಮುಖ ಪ್ರತಿಭೆ ಸ್ವಸ್ತಿಕ್ ಶರ್ಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರು ನೀಡುತ್ತಿರುವ 2021ನೆಯ ಸಾಲಿನ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ”ಗೆ ಯಕ್ಷಗಾನದ ಉದಯೋನ್ಮುಖ ಪ್ರತಿಭೆ, ಬಾಲ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ.

ಗಡಿನಾಡು ವಿಭಾಗದ ಬಹುಮುಖ ಪ್ರತಿಭೆ ಎಂಬ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪಳ್ಳತ್ತಡ್ಕದ ಸ್ವಸ್ತಿಕ್ ಶರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 28ರಂದು ಧಾರವಾಡದ ಡಾ. ಮಲ್ಲಿಕಾರ್ಜುನ ಮುನ್ಸೂರ್ ಕಲಾಭವನದಲ್ಲಿ ನಡೆಯಲಿದೆ. 

ಅತಿ ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಸಾಧನೆ ಮಾಡುವತ್ತ ದಾಪುಗಾಲು ಹಾಕುತ್ತಿರುವ ಸ್ವಸ್ತಿಕ್ ಶರ್ಮಾ ಇದುವರೆಗೆ ಸುಮಾರು 500ಕ್ಕಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 

ಪಳ್ಳತ್ತಡ್ಕ ಕೇಶವ ಶರ್ಮ ಮತ್ತು ದಿವ್ಯ ದಂಪತಿಯ ಪುತ್ರ ಸ್ವಸ್ತಿಕ್ ವಿವಿಧ ಮೇಳಗಳ ಪ್ರದರ್ಶನಗಳಲ್ಲಿಯೂ ಭಾಗವಹಿಸಿ ವೃತ್ತಿಪರ ಕಲಾವಿದರ ಜೊತೆ ಪಾತ್ರನಿರ್ವಹಣೆ ಮಾಡುವ ಅನುಭವವನ್ನೂ ಗಳಿಸಿಕೊಂಡಿದ್ದಾರೆ.  

ಜನಪ್ರಿಯ ‘ಕೃಷ್ಣ ಧಾಬಾ’ ಮಾಲೀಕರ ಮಗ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ದಾಳಿಗೆ ಬಲಿ

0

ಜನಪ್ರಿಯ ಸಸ್ಯಾಹಾರಿ ಆಹಾರ ಹೋಟೆಲ್ ‘ಕೃಷ್ಣ ಧಾಬಾ’ ಮಾಲೀಕರ ಪುತ್ರ ಹನ್ನೊಂದು ದಿನಗಳ ನಂತರ ಶ್ರೀನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 

ಫೆಬ್ರವರಿ 18 ರಂದು, ಆಕಾಶ್ ಕುಮಾರ್ ಅವರನ್ನು ಭಯೋತ್ಪಾದಕರು ಹತ್ತಿರದಿಂದ ಗುಂಡು ಹಾರಿಸಿದರು ಮತ್ತು ಅವರು ತೀವ್ರವಾಗಿ ಗಾಯಗೊಂಡರು. ಪ್ರಸ್ತುತ ದಲ್ಗೇಟ್ ಶ್ರೀನಗರದ ಜಾನಿಪುರ ಜಮ್ಮು ನಿವಾಸಿ ಆಕಾಶ್ (25) ಅವರು ಮುಂಜಾನೆ 3: 20 ರ ಸುಮಾರಿಗೆ ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಕಳೆದ 11 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.  ಫೆಬ್ರವರಿ 19 ರಂದು ಭಯೋತ್ಪಾದಕ ದಾಳಿಯ ಆರೋಪಿಗಳೆಲ್ಲರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದರು.

ಬೈಕ್‌ನಿಂದ ಹಾರಿದ ಇಬ್ಬರು ಉಗ್ರರು ದಾಲ್‌ಗೇಟ್‌ನ ಸೂಕ್ಷ್ಮ ಪ್ರದೇಶಕ್ಕೆ ಬಂದು ಕೃಷ್ಣ ಧಾಬಾದ ಕೌಂಟರ್‌ನಲ್ಲಿ ಗುಂಡು ಹಾರಿಸಿದರು ಎಂದು ಅವರು ಹೇಳಿದರು. ಇಬ್ಬರು ಪಂಪೋರ್ ಮೂಲದವರು, ಮತ್ತು ಇಬ್ಬರೂ ಪಹಲ್ಗಾಂನಲ್ಲಿ ಪತ್ತೆಯಾಗಿದ್ದು ಅವರನ್ನು ಮರಳಿ ತರಲಾಯಿತು.

ಮೂರನೆಯವ ಪುಲ್ವಾಮಾದವ.  ಫೆಬ್ರವರಿ 18 ರಂದು ಕೃಷ್ಣ ಡಾಬಾ ಮಾಲೀಕರ ಪುತ್ರ 22 ವರ್ಷದ ಆಕಾಶ್ ಮೆಹ್ರಾ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ತೀವ್ರವಾಗಿ ಗಾಯಗೊಳಿಸಿದರು. ಮತ್ತು ತಕ್ಷಣ ಅವರನ್ನು ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಸಾಗಿಸಲಾಯಿತು.

ಕೃಷ್ಣ ಧಾಬಾ ಹೋಟೆಲ್ ಲಲಿತ್ ಬಳಿ ಇದೆ, ಸಸ್ಯಾಹಾರಿ ಆಹಾರವನ್ನು ಪೂರೈಸುವಲ್ಲಿ ಪ್ರಸಿದ್ಧವಾಗಿರುವ ಈ ಉಪಾಹಾರ ಗೃಹವು ನಗರದ ದುರ್ಗಾನಾಗ್ ಪ್ರದೇಶದಲ್ಲಿದೆ.  

ಇಂದು ಪುತ್ತೂರಿನಲ್ಲಿ ಯಕ್ಷಗಾನ – ಸಾಲಿಗ್ರಾಮ ಮೇಳದವರಿಂದ ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ 

ಇಂದು, ಫೆಬ್ರವರಿ 28 ಆದಿತ್ಯವಾರ ಸಂಜೆ 6.30ಕ್ಕೆ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪುತ್ತೂರಿನ ಪರ್ಲಡ್ಕದ ಖ್ಯಾತ ವೈದ್ಯ ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ ಸಾಲಿಗ್ರಾಮ ಮೇಳದವರು ‘ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಿದ್ದಾರೆ.

ಡಾ. ಹರಿಕೃಷ್ಣ ಪಾಣಾಜೆಯವರ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಕಳೆದ 16 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.  ಈ ವರ್ಷದ ಕಾರ್ಯಕ್ರಮ ಇಂದಿನಿಂದ ಅಂದರೆ ಫೆಬ್ರವರಿ 27ರಿಂದ ಆರಂಭವಾಗಲಿದ್ದು ಮಾರ್ಚ್ 1ರ ವರೆಗೆ ನಡೆಯಲಿದೆ.

ಕೊನೆಯ ದಿನ ಮಾರ್ಚ್ 1, ಸೋಮವಾರದಂದು ಸಂಜೆ 6.30ಕ್ಕೆ ತೆಂಕುತಿಟ್ಟಿನ ಯಕ್ಷಗಾನ ಕಾರ್ಯಕ್ರಮ ಇರುತ್ತದೆ. ಹನುಮಗಿರಿ ಮೇಳದವರಿಂದ ‘ಶುಕ್ರನಂದನೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.

ಮೇಳಗಳ ಇಂದಿನ (28.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (28.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸಿದ್ಧಾಪುರ, ಬಾಲೋಡಿ ಮನೆ – ಅಮರವಾಹಿನಿ 

ಕಟೀಲು ಒಂದನೇ ಮೇಳ = ಶ್ರೀ ದೇವಿ ಮಿತ್ರಮಂಡಳಿ ಜತ್ತಬೆಟ್ಟು ಜೋಗಟ್ಟೆ    

ಕಟೀಲು ಎರಡನೇ ಮೇಳ ==   ಬೆಟ್ಟಂಪಾಡಿ ಬಿಲ್ವಗಿರಿ ಪುತ್ತೂರು 

ಕಟೀಲು ಮೂರನೇ ಮೇಳ=  ಬಾಳೆಪುಣಿ, ಹೂ ಹಾಕುವ ಕಲ್ಲು ವಯಾ ಮುಡಿಪು 

ಕಟೀಲು ನಾಲ್ಕನೇ ಮೇಳ  == ಕಾವೂರು ಮೈದಾನದಲ್ಲಿ , ಮಂಗಳೂರು 

ಕಟೀಲು ಐದನೇ ಮೇಳ == ಲೀಲಾ ವಿಹಾರ, ಪಡುಪಣಂಬೂರು ವಯಾ ಹಳೆಯಂಗಡಿ  

ಕಟೀಲು ಆರನೇ ಮೇಳ == ಕೂರಿಯಾಳ ಶಾಲಾ ಬಳಿ, ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  ==  ಹೊಸಕೊಪ್ಪ ಮಲ್ಲೇಸರ ನೊಣಬೂರು 

ಮಂದಾರ್ತಿ ಎರಡನೇ ಮೇಳ   ==   ಶೇರ್ಡಿ ಕೆಳಮನೆ ಕಕ್ಕುಂಜೆ  

ಮಂದಾರ್ತಿ ಮೂರನೇ ಮೇಳ  ==   ಬಾಗಳಬೆಟ್ಟು ಹೆಸ್ಕುಂದ ನಂಚಾರು  

ಮಂದಾರ್ತಿ ನಾಲ್ಕನೇ ಮೇಳ   ==  ಹೊಸಿಮನೆ ಇಡೂರು ಕುಂಜ್ನಾಡಿ 

ಮಂದಾರ್ತಿ    ಐದನೇ ಮೇಳ  ==  ಗುಡುಮಕ್ಕಿ ತೊಂಬಟ್ಟು ಮಚ್ಚಟ್ಟು 

ಶ್ರೀ ಹನುಮಗಿರಿ ಮೇಳ  ==  ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನ ತೆಳ್ಳಾರು (ಕಾರ್ಕಳ) – ಶ್ರೀ ದೇವಿ ಮಹಾತ್ಮೆ  (ರಾತ್ರಿ 8ರಿಂದ 

ಶ್ರೀ ಸಾಲಿಗ್ರಾಮ ಮೇಳ == ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ‘ಕಲೋಪಾಸನಾ 21 – ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಶ್ರೀ ಆದಿ ಜನಾರ್ದನ ಭಕ್ತವೃಂದ ಸೀಮಂತೂರು – ಶಪ್ತ ಭಾಮಿನಿ 

ಶ್ರೀ ಸುಂಕದಕಟ್ಟೆ ಮೇಳ  ==  ಪೆರ್ಮಂಕಿ ದರಿಬಾಗಿಲು – ಬ್ರಹ್ಮ ಬಲಾಂಡಿ 

ಶ್ರೀ ದೇಂತಡ್ಕ ಮೇಳ == ಬಾಯಿಲ ಕಲ್ಲಡ್ಕ ಶ್ರೀ ರಾಜೀವ ಯುವಕ ಮಂಡಲ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಆಸ್ಕಿಮನೆ ಅರೆಶಿರೂರು ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಯಿಕೋಡ್ ಏಳಜಿತ್ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಕಟ್ಟಿನಮಕ್ಕಿ ಗುಡಿಮನೆ ಹರ್ಕೂರು 

ಶ್ರೀ ಪಾವಂಜೆ ಮೇಳ  ==  ಕಟ್ಕೆರೆ, ಕುಂದಾಪುರ – ಇಂದ್ರಜಿತು, ಪಾರಿಜಾತ, ನರಕಾಸುರ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ತೆಗ್ಗರ್ಸೆ, ಗುಡ್ಡೆ ಅಂಗಡಿ – ಕೊರಾಳ ಚಿಕ್ಕಮ್ಮ ಮಹಾತ್ಮೆ 

ಕಮಲಶಿಲೆ ಮೇಳ ‘ಎ‘ = ಗೆದ್ದೋಡು ಸಿದ್ದಾಪುರ 

ಕಮಲಶಿಲೆ ಮೇಳ ‘ಬಿ‘ == ಸಾಲಿಗದ್ದೆ ಯಡಮೊಗೆ 

ಶ್ರೀ ಬಪ್ಪನಾಡು ಮೇಳ == ದೇವಿನಗರ (ತೇವುಕಾಡು) ಮೇರೆಮಜಲು  – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಲ್ಪೆಕೊಳ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ == ಧರ್ಮಶ್ರೀ ಕಾಲನಿ, ಶಶಿಗೋಳಿ 

ಶ್ರೀ ಬೋಳಂಬಳ್ಳಿ ಮೇಳ== ಕಜ್ಕೆ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳ == ಸೌಕೂರು ದುರ್ಗಾನಗರ ವಿದ್ಯಾನಿಧಿ ನಿಲಯ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಶ್ರೀ ದುರ್ಗಾ ಮೈದಾನ, ಯಕ್ಷಮಿತ್ರರು ಮಾಣಿಮಂಡ್ರಳ್ಳಿ, ತೊಗರಿಗ್ರಾಮ – ಶ್ವೇತಕುಮಾರ, ಗದಾಯುದ್ಧ 

ಶ್ರೀ ಮಡಾಮಕ್ಕಿ ಮೇಳ == ಕಿನ್ನಿಗೋಳಿ ಯಕ್ಷಮಿತ್ರರು – ಶ್ರೀ ದೇವಿ ಮಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಐರೋಡಿ, ಗೋಳಿಬಿಟ್ಟು – ಶ್ವೇತಕುಮಾರ 

ಶ್ರೀ ಹಿರಿಯಡಕ ಮೇಳ == ನಾರಾವಿ ಜಾತ್ರೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಮೈಕಳ ಮೂಕಾಂಬಿಕಾ ಹೋಟೆಲ್ ಸಮೀಪ 

ಶ್ರೀ ಸಿಗಂದೂರು ಮೇಳ == ಬ್ರಹ್ಮಲಿಂಗೇಶ್ವರ ಸಭಾಭವನ ವಠಾರ – ಕೊಡ್ಲಿಬೈಲು, ಸಿದ್ದಾಪುರ 

ಶ್ರೀ ನೀಲಾವರ ಮೇಳ  == ಸಂಚಿತ ಸಂಕೀರ್ಣ, ನ್ಯೂ ಕುಬೇರ ಬಾರ್ ಬಳಿ, ಗೊದ್ದನಕಟ್ಟೆ, ಪೇತ್ರಿ – ದೈವ ಮಂಟಪ  

ಶ್ರೀ ಬಾಚಕೆರೆ ಮೇಳ == ಶ್ರೀ ಶಾರದಾ ಸೇವಾ ಟ್ರಸ್ಟ್, ದಾಸಗಿರಿ ಕುಳಾಲು – ಕಾರ್ಣಿಕದ ಕಲ್ಕುಡ ಕಲ್ಲುರ್ಟಿ 

ಶ್ರೀ ಮಂಗಳಾದೇವಿ ಮೇಳ == ಕಜೆಕಾರ್ ಕುರುವಳಗೋಳಿ – ಬೂಡುದ ಬಂಡಾರ (ತುಳು) 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==   ಕೊಂಡ್ಲೂರು ಹಾಗೂ ಕೊರಳು ಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಪೇತ್ರಿ ಯಕ್ಷಾಭಿಮಾನಿ ಬಳಗ – ಮಧುರ ಮನಸ್ವಿ 

ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ – ಪಶ್ಚಿಮ ಬಂಗಾಳ ಮತದಾನದಲ್ಲಿ ‘ರಾಜಕೀಯ ಹಿಂಸಾಚಾರ’ ಕುರಿತು ಆರೋಪ

0

ಅಧಿಕಾರಿಗಳು ಹಿರಿಯ ನಾಗರಿಕರ ಮತಪತ್ರಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಂಚೆ ಮತಪತ್ರಗಳಲ್ಲಿ ‘ವ್ಯತ್ಯಾಸಗಳ ಬಗ್ಗೆ ಆರೋಪಿಸಿದೆ.

ಕೋಲ್ಕತ್ತಾದ ಟಿಎಂಸಿ ಗೂಂಡಾಗಳು ತಮ್ಮ ಎಲ್‌ಇಡಿ ವಾಹನಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶನಿವಾರ ಪಶ್ಚಿಮ ಬಂಗಾಳದಲ್ಲಿ ‘ರಾಜಕೀಯ ಹಿಂಸಾಚಾರ’ ಕುರಿತು ಚುನಾವಣಾ ಆಯೋಗದೊಂದಿಗೆ ಚರ್ಚಿಸಿದೆ. 

“ನಾವು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗವನ್ನು ತಲುಪಲು ಪ್ರಯತ್ನಿಸಿದ್ದೇವೆ. ಕೋಲ್ಕತಾ ಪೊಲೀಸ್ ಆಯುಕ್ತರೊಂದಿಗೆ ಈ ವಿಷಯವನ್ನು ಎತ್ತಲು ನಾವು ಬಯಸಿದ್ದೇವೆ ಆದರೆ ಅವರು ಮಾತನಾಡಲು ನಮಗೆ ಯಾವುದೇ ಸಮಯವನ್ನು ನೀಡಿಲ್ಲ. 

ಆದ್ದರಿಂದ ಈಗ ನಾವು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ನಡೆಯುತ್ತಿರುವ ರೀತಿಯ ದೌರ್ಜನ್ಯಗಳನ್ನು ಹಂಚಿಕೊಳ್ಳುತ್ತೇವೆ “ಎಂದು ಬಿಜೆಪಿ ಸಂಸದ ಸ್ವಪನ್ ದಾಸ್‌ಗುಪ್ತಾ ಸಭೆಯ ನಂತರ ಹೇಳಿದರು.