Saturday, January 25, 2025
Home Blog Page 337

ಮೇಳಗಳ ಇಂದಿನ (13.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಮಿಜಾರು ದಡ್ಡಿ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಶ್ರೀ ಸೋಮನಾಥ ಧಾಮ, ಪೆರ್ಮುದೆ, ಬಜಪೆ 
ಕಟೀಲು ಎರಡನೇ ಮೇಳ ಕಟೀಲು ಸಾನಿಧ್ಯ ಹಾಲ್ 
ಕಟೀಲು ಮೂರನೇ ಮೇಳಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ 
ಕಟೀಲು ನಾಲ್ಕನೇ ಮೇಳ ವಿಷ್ಣುನಗರ, ಕೇನ್ಯ, ,ಪಂಜ, ಸುಳ್ಯ 
ಕಟೀಲು ಐದನೇ ಮೇಳ ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ಆರನೇ ಮೇಳಕಟೀಲು ಕ್ಷೇತ್ರದಲ್ಲಿ 
ಮಂದಾರ್ತಿ ಒಂದನೇ ಮೇಳ ಬಿಲ್ಲಾಡಿ, ಜಾನುವಾರುಕಟ್ಟೆ 
ಮಂದಾರ್ತಿ ಎರಡನೇ ಮೇಳ ಶಾನಾಡಿ ಕೆದೂರು 
ಮಂದಾರ್ತಿ ಮೂರನೇ ಮೇಳ ಕಾರೂರುಮನೆ ಹೊಸಂಗಡಿ – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಕೊಂಜಾಡಿಗುಡ್ಡಿಮನೆ, ಆರ್ಡಿ, ಅಲ್ಬಾಡಿ 
ಮಂದಾರ್ತಿ ಐದನೇ ಮೇಳ ಕಾರೂರುಮನೆ ಹೊಸಂಗಡಿ – ಕೂಡಾಟ  
ಶ್ರೀ ಹನುಮಗಿರಿ ಮೇಳ ನಿರುಡೆ – ಶುಕ್ರನಂದನೆ  
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಮೇದಿನಿ ನಿರ್ಮಾಣ 
ಶ್ರೀ ಸುಂಕದಕಟ್ಟೆ ಮೇಳ ಕುಕ್ಕುಜೊಟ್ಟು ಪೆರ್ಮುಡ (ವೇಣೂರು) – ಅಮರಶಿಲ್ಪಿ ವೀರ ಶಂಭು ಕಲ್ಕುಡ
ಶ್ರೀ ಮಾರಣಕಟ್ಟೆ ಮೇಳ ‘ಎ’ಕೊರಾಡಿಮನೆ,ವಂಡ್ಸೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಏಳುಮುಡಿ, ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ನರ್ಲಿಗುಳಿ, ಆಲೂರು 
ಶ್ರೀ ಪಾವಂಜೆ ಮೇಳ ಮರವೂರು – ಶ್ರೀಹರಿ, ಶ್ರೀರಾಮ, ಶ್ರೀಕೃಷ್ಣ 
ಶ್ರೀ ಹಟ್ಟಿಯಂಗಡಿ ಮೇಳಹೊಸೂರು – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಮೂಡುಗಲ್ಲು 
ಕಮಲಶಿಲೆ ಮೇಳ ‘ಬಿ’ಗುಬ್ಬಕೋಡು 
ಶ್ರೀ ಸಸಿಹಿತ್ಲು ಭಗವತೀ ಮೇಳ ಮೂಡುಪೆರಾರ ಮಿತ್ತಕೊಳಪಿಲ ರಾಘವೇಂದ್ರ ಭಜನಾ ಮಂದಿರದ ಬಳಿ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಸಾಸ್ತಾನ ಮೆಲ್ಪೇಟೆ 
ಶ್ರೀ ಬೋಳಂಬಳ್ಳಿ ಮೇಳ ತಾರಿಬೇರು   – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೊಡಪಾಡಿ – ರಕ್ತ ಸಂಬಂಧ 
ಶ್ರೀ ಹಾಲಾಡಿ ಮೇಳಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನ, ಮಧುಕೂಡ್ಲು 
ಶ್ರೀ ಬೆಂಕಿನಾಥೇಶ್ವರ ಮೇಳ  ಮಣಿಪಾಲ ಹುಡ್ಕೋ ಕಾಲನಿ  – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಚಾತ್ರಮಕ್ಕಿ – ಮಹಾಶಕ್ತಿ ಮಂತ್ರದೇವತೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಶ್ರೀ ಕ್ಷೇತ್ರ ಪೆರ್ಡೂರು, ಬುಕ್ಕಿಗುಡ್ಡೆ ಕುಲಾಲ ಸಭಾಭವನದ ವಠಾರ – ಚಂದ್ರಾವಳಿ, ಕನಕಾಂಗಿ 
ಶ್ರೀ ಹಿರಿಯಡಕ ಮೇಳಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಫ್ರೆಂಡ್ಸ್ ಸರ್ಕಲ್ ಜನ್ನಾಡಿ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಹುಲಿದೇವರಬನ ಜಾತ್ರೆ 
ಶ್ರೀ ನೀಲಾವರ ಮೇಳ ಬೇಡರ ಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ ವಠಾರ 

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ  ಭವನ ಸಮಿತಿ ಅವಲೋಕನಾ ಸಭೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಕಾರ್ಯ ಪ್ರಗತಿಯಲ್ಲಿದ್ದು ಆಬಗೆಗೆ ಅವಲೋಕನಾ ಸಭೆ ಇತ್ತೀಚೆಗೆ ಸಿರಿಬಾಗಿಲಿನಲ್ಲಿ ಜರಗಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ  ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ಸಭೆಗೆ ಭವನ ನಿರ್ಮಾಣ ಕಾಮಗಾರಿಯ ಪ್ರಗತಿ ಮಾಹಿತಿ ನೀಡಿದರು. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ಆರ್ಥಿಕವಾಗಿ ನಾಡಿನ ದೇಶವಿದೇಶಗಳ ಯಕ್ಷಗಾನ ಅಭಿಮಾನಿಗಳು ಕಲಾಸೇವಕರು ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.


ಸಭೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳಾಗಿರುವ ಲಕ್ಷ್ಮೀನಾರಾಯಣ ಕಾವು ಮಠ, ಯೋಗೀಶ ರಾವ್ ಚಿಗುರುಪಾದೆ, ರಾಜಾರಾಮ ರಾವ್ ಮೀಯಪದವು, ಸತೀಶ ಅಡಪ ಸಂಕಬೈಲು, ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಜಯರಾಮ ಕಾರಂತ ದೇಶಮಂಗಲ, ತಿಮ್ಮಪ್ಪ ಮಜಲು, ವಿಷ್ಣು ಶ್ಯಾನುಭೋಗ್ ಕೂಡ್ಲು, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಜಯರಾಮ ರೈ ಸಿರಿಬಾಗಿಲು, ಸುಮನ್ ರಾಜ್ ನೀಲಂಗಳ, ರಾಧಾಕೃಷ್ಣ ಭಟ್ ಕೊಂಗೊಟ್ಟು, ಸುಮಿತ್ರಾ ಆರ್ ಮಯ್ಯ, ಯಸ್ ಯನ್ ರಾಮ ಶೆಟ್ಟಿ ನಿವೃತ್ತ ಅಧ್ಯಾಪಕ, ಸದಾಶಿವ ಭಟ್ ಎದ್ರುಕಳ, ವೆಂಕಟರಮಣ ಹೊಳ್ಳ ಸಿರಿಬಾಗಿಲು, ಶ್ರೀಮತಿ ಉಮಾ ಭಟ್ ಕೋಂಗೋಟ್ಟು ಮೊದಲಾದ ಗಣ್ಯರು ಭಾಗವಹಿಸಿದ್ದರು.

ಮೇಳಗಳ ಇಂದಿನ (12.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬಾರ್ಕೂರು ಹೊಸಾಳ    – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ಎರಡನೇ ಮೇಳ ಪದ್ಮನೂರು ವಯಾ ಕಿನ್ನಿಗೋಳಿ 
ಕಟೀಲು ಮೂರನೇ ಮೇಳಕೊಂಕಣಪದಮ, ಪೆರಾಜೆ ಬುಡೋಳಿ ವಯಾ ಮಾಣಿ 
ಕಟೀಲು ನಾಲ್ಕನೇ ಮೇಳ ಗುಂಡಾಳ, ಬಡಗಬೆಳ್ಳೂರು, ಬಂಟ್ವಾಳ 
ಕಟೀಲು ಐದನೇ ಮೇಳ ಗುಂರ್ಪೆ, ಕತ್ತಲ್ ಸಾರ್ , ಪಡುಪೆರಾರ 
ಕಟೀಲು ಆರನೇ ಮೇಳಕಟೀಲು ಸೌಂದರ್ಯ ಪ್ಯಾಲೇಸ್ 
ಮಂದಾರ್ತಿ ಒಂದನೇ ಮೇಳ ಮಂಡಳ್ಳಿ, ಕೆಳಮನೆ, ಬಿದ್ಕಲ್ ಕಟ್ಟೆ 
ಮಂದಾರ್ತಿ ಎರಡನೇ ಮೇಳ ಕೊತ್ತಾಡಿ, ವಡ್ಡರ್ಸೆ 
ಮಂದಾರ್ತಿ ಮೂರನೇ ಮೇಳ ಕೊಡಪಾಡಿ ಗುಜ್ಜಾಡಿ 
ಮಂದಾರ್ತಿ ನಾಲ್ಕನೇ ಮೇಳ ಹೆಬ್ಬಾಗಿಲುಮನೆ ಹೆಸ್ಕುಂದ, ನಂಚಾರು 
ಮಂದಾರ್ತಿ ಐದನೇ ಮೇಳ ಆಬ್ಯಾಡಿ ದೇವಸ್ಥಾನದ ಹತ್ತಿರ, ಕುಳ್ಳುಂಜೆ, ಶಂಕರನಾರಾಯಣ 
ಶ್ರೀ ಹನುಮಗಿರಿ ಮೇಳ ಹನುಮಾನ್ ನಗರ ಮಲ್ಪೆ ವಿಠೋಭ ಭಜನಾ ಮಂದಿರದ ವಠಾರ – ಮೊಗವೀರಪೇಟೆ ಕ್ಷೇತ್ರ ಮಹಾತ್ಮೆ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಗುಡ್ಡೆದ ಗುಳಿಗೆ
ಶ್ರೀ ಮಾರಣಕಟ್ಟೆ ಮೇಳ ‘ಎ’ಕುದ್ರುಮನೆಬೆಟ್ಟು, ಜಡ್ಡಿಮನೆ, ಬನ್ನಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಾಡ್ನಾಡಿಮನೆ, ನಾರ್ಕಳಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶಿವನಗರ, ಬೆಳ್ಳಾಡಿ, ಬಂಟ್ವಾಡಿ 
ಶ್ರೀ ಪಾವಂಜೆ ಮೇಳ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಬೆಳ್ಳಾಡಿ ಮಲೆಯಾಳಿ ಬೊಬ್ಬರ್ಯ ದೇವಸ್ಥಾನ 
ಕಮಲಶಿಲೆ ಮೇಳ ‘ಎ’ನಾಯಕವಾಡಿ 
ಕಮಲಶಿಲೆ ಮೇಳ ‘ಬಿ’ಕೆರಾಡಿ 
ಶ್ರೀ ಬಪ್ಪನಾಡು ಮೇಳವೆಂಕಟರಮಣ ದೇವಸ್ಥಾನದ ವಠಾರ, ಮೂಲ್ಕಿ  – ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಹೆಜಮಾಡಿ ಉಲ್ಲಾಸ್ ನಗರ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹರಾಡಿಮನೆ, ಮೂಡುಗಿಳಿಯಾರು 
ಶ್ರೀ ಬೋಳಂಬಳ್ಳಿ ಮೇಳ ಮೂಡುಬೆಟ್ಟು  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೊಂಡಳ್ಳಿ   – ಹಳನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಹಾಲಾಡಿ ಮೇಳಜಟ್ಟಿಗೇಶ್ವರ ದೇವಸ್ಥಾನ, ಮಲ್ಲರಬೆಟ್ಟು, ಗಂಗೊಳ್ಳಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೆಲ್ಲಪುತ್ತಿಗೆ ಮಾರ್ನಾಡ್ ವೀರಮಾರುತಿ ಕ್ರೀಡಾಂಗಣದಲ್ಲಿ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಕೋಟೇಶ್ವರ ಗಂಧರ್ವ ಬಳಿ – ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕುಂದಾಪುರ ಕೋಡಿ ಶ್ರೀ ನಾಗಜಟ್ಟಿಲಿಂಗೇಶ್ವರ ಸ್ವಾಮಿಯ ಜಾತ್ರೆ – ಚೆಲುವೆ ಚಿತ್ರಾವತಿ 
ಶ್ರೀ ಹಿರಿಯಡಕ ಮೇಳಹಿರಿಯಡಕ ಬಜೆ ಬಬ್ಬುಸ್ವಾಮಿ ದೈವಸ್ಥಾನ ಎದುರು – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಕುದ್ರಬೇರು ಕಟ್ಟೆ, ಆಜ್ರಿ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಕೋಣ್ಕಿ, ಕೂಡ್ಗಿಹಿತ್ಲು, ಬಳ್ಳಿಹಿತ್ಲುಮನೆ 
ಶ್ರೀ ನೀಲಾವರ ಮೇಳ ಮಾಬುಕಳ ಸಿದ್ಧಿವಿನಾಯಕ ದೇವಸ್ಥಾನ ವಠಾರ 

ದಕ್ಷಯಜ್ಞ ಯಕ್ಷಗಾನ

ಕೋವಿಡ್ ನ ಉಪಟಳದಿಂದ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲಾವಿದರ ಬದುಕು ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ವಾತಾವರಣ ರೂಪುಗೊಳ್ಳುತ್ತಿರುವುದರ ಮೂಲಕ ನಿಧಾನವಾಗಿ ಚೇತರಿಕೊಳ್ಳುತ್ತಾ ಸಾಗಿದೆ. ಕಲಾಕದಂಬ ಆರ್ಟ್ ಸೆಂಟರ್ ನಿರಂತರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ. ಕೋವಿಡ್ ನ ಪ್ರಭಾವ ಕಡಿಮೆಯಾಗುತ್ತಿರುವ ಈ ಸಂಧರ್ಭದಲ್ಲಿ ಮತ್ತೆ ಸಾಂಸ್ಕೃತಿಕ ಲೋಕದತ್ತ ಪಯಣ ಬೆಳೆಸುತ್ತಿದೆ.

ಪ್ರಸಿದ್ದ ಯಕ್ಷಗಾನ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಡಾ. ರಾಧಾಕೃಷ್ಣ ಉರಾಳರ ನಿರ್ದೇಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕೊಮ್ಮಘಟ್ಟದ ಓಂ ಯೋಗಧಾಮ ಟ್ರಸ್ಟ್ ನ ಸಹಯೋಗದೊಂದಿಗೆ ಸಮತ್ವಂ ಯೋಗ ಮತ್ತು ಕಲಾಶಾಲೆಯ ಸಭಾಂಗಣದಲ್ಲಿ ದಿನಾಂಕ 17-01-2021 ರ ಸಂಜೆ 5 ಘಂಟೆಗೆ ನಡೆಯಲಿರುವ ಸಂಕ್ರಾಂತಿ ಕಲೋತ್ಸವದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ಕಲಾ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಿದೆ.

ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮೋಹಳ್ಳಿಯ ಶ್ರೀ ಸಿದ್ಧಾ ಆರೂಢ ಮಿಷನ್ ಆಶ್ರಮದ ಡಾ.ಶ್ರೀ ಆರೂಢಭಾರತೀ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ನೀಲಮ್ಮ, ಕರಬ ಪ್ರತಿಷ್ಟಾನದ ದೇವರಾಜ ಕರಬ ಹಾಗೂ ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ಪ್ರದೀಪ್ ಆಗಮಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ, ನಿತ್ಯಾನಂದ ನಾಯಕ್ ಹಾಗೂ ವಿಶ್ವನಾಥ ಉರಾಳ ನಿಭಾಯಿಸಲಿದ್ದಾರೆ. ಸರಕಾರದ ಕೋವಿಡ್ ಕುರಿತಾಗಿನ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಕಾರ್ಯಕ್ರಮಗಳನ್ನು ನಡೆಸಲಿದ್ದು ಸೀಮಿತ ಜನರಿಗೆ ಮಾತ್ರ ಪ್ರವೇಶವಿರುತ್ತದೆ.

ಈ ಒಂದು ಯಕ್ಷಗಾನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9886066732, 9448510582

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆ

ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ 2020 – 21 ನೇ ಸಾಲಿನಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆಯಾಗಿದ್ದಾರೆ. 

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ , ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್. ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ರಾಜೀವ ಶೆಟ್ಟರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬಡಗುತಿಟ್ಟಿನ ಹೆಸರಾಂತ ಕಮಲಶಿಲೆ, ಪೆರ್ಡೂರು, ಅಮೃತೇಶ್ವರಿ, ಸೌಕೂರು, ಬಚ್ಚಗಾರು, ಸಾಲಿಗ್ರಾಮ ಮತ್ತು ಮಂದರ್ತಿ ಮೇಳಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ 60ರ ಹರೆಯದ ರಾಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೊಸಂಗಡಿ ಕೆಳಬಾಗಿ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.

ದಿ. ಎಂ.ಎಂ.ಹೆಗಡೆ, ಭಾಗವತ ನಾರಣಪ್ಪ ಉಪ್ಪೂರು, ಜಿ.ಆರ್. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ , ಎಂ.ಎ.ನಾಯ್ಕ, ಕೋಟ ವೈಕುಂಠ, ವಾಸುದೇವ ಸಾಮಗ, ರಾಮ ನಾಯಿರಿ, ಅರಾಟೆ ಮಂಜುನಾಥ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮುಖ್ಯಪ್ರಾಣ ಕಿನ್ನಿಗೋಳಿ ಮುಂತಾದ ಹಿರಿಯರ ಒಡನಾಟದಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಯಕ್ಷಗಾನ ರಂಗಾನುಭವ ಅವರದು.

ಪ್ರಮೀಳೆ, ಚಿತ್ರಾಂಗದೆ, ಪ್ರಭಾವತಿ, ದ್ರೌಪದಿ, ಸುಭದ್ರೆ, ದಾಕ್ಷಾಯಿಣಿ, ಮೀನಾಕ್ಷಿ, ಸತ್ಯಭಾಮೆ, ಮೇನಕೆ, ಶಶಿಪ್ರಭೆ, ಅಂಬೆ, ಯೋಜನಗಂಧಿ ಇತ್ಯಾದಿ ಪೌರಾಣಿಕ ಪಾತ್ರಗಳಲ್ಲದೆ ಹೊಸ ಪ್ರಸಂಗಗಳ ನಾಗಶ್ರೀ, ಚಿತ್ರಾವತಿ, ರತಿ ರೇಖಾ, ಕಾಮಿನಿ, ಶುಭದ ಮುಂತಾದ ಪ್ರಧಾನ ಸ್ತ್ರೀಪಾತ್ರಗಳಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ರಾಮ, ಕೃಷ್ಣ , ಶಿವ, ಮನ್ಮಥ ಮೊದಲಾದ ಪುರುಷ ಪಾತ್ರಗಳಲ್ಲೂ ಹೆಸರು ಗಳಿಸಿದ್ದಾರೆ.


ಜ. 23 ಪ್ರಶಸ್ತಿ ಪ್ರದಾನ: ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿಯು ರೂ 20,000 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಜನವರಿ 23, 2021 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಜರಗುವ ಜಾಗತಿಕ ಬಂಟ ಫೌಂಡೇಶನ್ ಟ್ರಸ್ಟ್ ನ 24 ನೇ ವಾರ್ಷಿಕ ಸಮಾವೇಶದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ ಬಿಡುಗಡೆ

ಎಲ್ಲಾ ವೃತ್ತಿ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ- 2021ನ್ನು ಇಂದು (11-01-2021)ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಖ್ಯಾತ ಕೂಚುಪುಡಿ ನೃತ್ಯ ಹಾಗೂ ಕಿರುತೆರೆ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಹಾಗೂ ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ ಕಾಶಿ ಮತ್ತು ಈರ್ವರು ಶಿಷ್ಯೆಯರು ಉಪಸ್ಥಿತರಿದ್ದರು. ಸಂಸ್ಥೆಯ ಚಟುವಟಿಕೆಗಳನ್ನು ಅವಲೋಕಿಸಿದ ವೈಜಯಂತಿ ಕಾಶಿಯವರು ಇಂತಹ ಸಂಸ್ಥೆಯನ್ನು ತಾನು ಈ ತನಕ ನೋಡಿದ್ದಿಲ್ಲಾ, ಈ ಸಂಸ್ಥೆ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಮೇಳಗಳ ಇಂದಿನ (11.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (11.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕುಂದಾಪುರ ಕೋಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ   – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಅರಂತಕೋಡಿ ಉಳಾಯಿಬೆಟ್ಟು ಗುರುಪುರ
ಕಟೀಲು ಎರಡನೇ ಮೇಳ ಮುಚ್ಚೂರು ದೇವಸ್ಥಾನದ ವಠಾರ
ಕಟೀಲು ಮೂರನೇ ಮೇಳಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು
ಕಟೀಲು ನಾಲ್ಕನೇ ಮೇಳ ದಡ್ಡಿಮನೆ ಮಂಜನಕಟ್ಟೆ ಬಡಗ ಎಡಪದವು
ಕಟೀಲು ಐದನೇ ಮೇಳ ‘ಅಕ್ಷಯ’ ವಿದ್ಯಾನಗರ ಕುಳಾಯಿ – ಕಟೀಲು ಕ್ಷೇತ್ರದಲ್ಲಿ
ಕಟೀಲು ಆರನೇ ಮೇಳ‘ಹರಿಕೃಪಾ’ ಕಡ್ಲಕೆರೆ ಮೂಡುಬಿದ್ರಿ
ಮಂದಾರ್ತಿ ಒಂದನೇ ಮೇಳ ಕುದ್ರುಮನೆ ಹಾಲಾಡಿ 
ಮಂದಾರ್ತಿ ಎರಡನೇ ಮೇಳ ಉಪ್ಪಿನಕೋಟೆಮನೆ ಹಾಲಾಡಿ 
ಮಂದಾರ್ತಿ ಮೂರನೇ ಮೇಳ ಕೆಳಮನೆ ನಾಡ ಗುಡ್ಡೇಯಂಗಡಿ 
ಮಂದಾರ್ತಿ ನಾಲ್ಕನೇ ಮೇಳ ಶ್ರೀದೇವಿ ನಿಲಯ ಮಣಿಬಚ್ಚಲು, ಮಂಡಾಡಿಜೆಡ್ಡುಚಾರ 
ಮಂದಾರ್ತಿ ಐದನೇ ಮೇಳ ಕಟ್ಟೇಮನೆ ಕಕ್ಕುಂಜೆ 
ಶ್ರೀ ಹನುಮಗಿರಿ ಮೇಳ ಮುಡುಂಬು, ಇನ್ನಂಜೆ ಗ್ರಾಮ – ಶ್ರೀ ದೇವಿ ಮಹಾತ್ಮೆ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ನರಕಾಸುರ ವಧೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಕಲ್ಸಂಕ, ಹಾರ್ಮಣ್, ಚಿತ್ತೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಳಿ, ಹಡ್ಬೈಲುಮನೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕಳಿ, ಹಡ್ಬೈಲುಮನೆ  
ಶ್ರೀ ಪಾವಂಜೆ ಮೇಳ ಪಾಣಾಜೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶಂಕರನಾರಾಯಣ      – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಶ್ರೀ ಪಾಡಿ ನಂದಿಕೇಶ್ವರ ದೇವಸ್ಥಾನದಲ್ಲಿ 
ಕಮಲಶಿಲೆ ಮೇಳ ‘ಬಿ’ಅಂಪಾರು 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರದಲ್ಲಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಮೈನಾಡಿಮನೆ, ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ ಅಂಬಾಗಿಲು  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಶಂಕರನಾರಾಯಣ ವೀರ ಕಲ್ಲುಕುಟ್ಟಿಗ ದೇವಸ್ಥಾನ ವಠಾರ – ಹಳನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಹಾಲಾಡಿ ಮೇಳಯರುಕೋಣೆ ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್ ಬಳಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಯೆಯ್ಯಾಡಿ ದಂಡೆಕೇರಿ ಕೊಪ್ಪಳ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಪ್ಪೂರು ಅಂಮುಂಜೆಗುಡ್ಡೆ – ಶ್ರೀ ದೇವಿ ಮಹಾತ್ಮೆ
ಶ್ರೀ ಹಿರಿಯಡಕ ಮೇಳಉಪ್ಪಿನಕೋಟೆ  – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಅಮಾಸೆಬೈಲು   
ಶ್ರೀ ಸಿಗಂದೂರು ಮೇಳಹೆಮ್ಮಾಡಿ 
ಶ್ರೀ ನೀಲಾವರ ಮೇಳ ಹೊನ್ನಾಳ 

ಮೇಳಗಳ ಇಂದಿನ (10.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಗುಲ್ವಾಡಿ ದೊಡ್ಮನೆ ವಠಾರ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಪಡುಪೆರಾರ, ಪಡೀಲು, ವಯಾ ಬಜಪೆ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಕರ್ಪೆ, ಸಿದ್ದಕಟ್ಟೆ, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ ಬಾಕ್ಯಾರು ಕೋಡಿ, ಬಡಗ ಎಡಪದವು 
ಕಟೀಲು ಐದನೇ ಮೇಳ ಸೆರ್ಕಳ, ಕೊಳ್ನಾಡು ಬಂಟ್ವಾಳ 
ಕಟೀಲು ಆರನೇ ಮೇಳಹೊಸಬೆಟ್ಟು ಕುಳಾಯಿ 
ಮಂದಾರ್ತಿ ಒಂದನೇ ಮೇಳ ಹಾಡಿಮನೆ ಅಲ್ಬಾಡಿ, ಆರ್ಡಿ 
ಮಂದಾರ್ತಿ ಎರಡನೇ ಮೇಳ ಕೊರ್ಗಿ, ಹೊಸ್ಮಠ 
ಮಂದಾರ್ತಿ ಮೂರನೇ ಮೇಳ ಶ್ರೀ ನಂದಿಕೇಶ್ವರ ದೇವಸ್ಥಾನ, ಮೆಕ್ಕೆಕಟ್ಟು 
ಮಂದಾರ್ತಿ ನಾಲ್ಕನೇ ಮೇಳ ಶಿರಂಗೂರು, ಮಡಾಮಕ್ಕಿ 
ಮಂದಾರ್ತಿ ಐದನೇ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಹೆಗ್ಗುಂಜೆ, ಮಂದಾರ್ತಿ 
ಶ್ರೀ ಹನುಮಗಿರಿ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಮಹಾಬ್ರಾಹ್ಮಣ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಕೋರ್ದಬ್ಬು ಬಾರಗ 
ಶ್ರೀ ಮಾರಣಕಟ್ಟೆ ಮೇಳ ‘ಎ’ಹೆಸಿನಬೇರು, ಇಡೂರು, ಕುಂಜ್ನಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಹಳ್ಗೇರಿ, ದೊಡ್ಮನೆ, ಉಪ್ರಳ್ಳಿ, ಉಳ್ಳೂರು -೧೧
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಅಯ್ಯಪ್ಪ ಸೇವಾ ಸಮಿತಿ ಗುಂಡಮಜಲು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶಿರಿಯಾರ     – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಗರೋಡಿ ವಠಾರ, ಉಳ್ಳೂರು -೭೪
ಕಮಲಶಿಲೆ ಮೇಳ ‘ಬಿ’ಅಯ್ಯಪ್ಪ ಸ್ವಾಮಿ ದೇವಸ್ಥಾನ, ಜಾಜಿವನ, ತಟ್ಟಿಗುಳಿ, ಕಮಲಶಿಲೆ 
ಶ್ರೀ ಬಪ್ಪನಾಡು ಮೇಳಪಡು ಕೊಂಬೆಲ್ ಲಚ್ಚಿಲ್ , ಬೊಂಡಂತಿಲ – ಬಂಗಾರ್ ಬಾಲೆ
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಬೆಳ್ಳಾಲ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕಂದಾವರ, ಉಳ್ಳೂರು – ಬೇಲ್ತೂರು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಚಿಕ್ಕ ಹೈಗುಳಿ ದೈವಸ್ಥಾನ, ಸಳ್ಕೋಡು 
ಶ್ರೀ ಬೆಂಕಿನಾಥೇಶ್ವರ ಮೇಳ  ಬೈಲೂರು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಜಪ್ತಿ ಗುಡ್ಡಿಮನೆ – ಮಡಾಮಕ್ಕಿಕ್ಷೇತ್ರ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಪ್ಪಿನಕೋಟೆ ಗುಡೆಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಶ್ರೀ ಕೋಟಿ ಚೆನ್ನಯ  
ಶ್ರೀ ಹಿರಿಯಡಕ ಮೇಳಕೋಟೇಶ್ವರ ಕಾಗೇರಿ ನಂದನ ಫುಡ್ಸ್ ವಠಾರ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಕೆಳಕಲ್ಲುಗುಡ್ಡೆ, ವಾಲ್ತೂರು
ಶ್ರೀ ಸಿಗಂದೂರು ಮೇಳವಂಡ್ಸೆ, ಕೆಳಾಪೇಟೆ  
ಶ್ರೀ ನೀಲಾವರ ಮೇಳ ಮೂಡಹಡು, ಪಾಂಡೇಶ್ವರ – ನೀಲಾವರ ಕ್ಷೇತ್ರ ಮಹಾತ್ಮೆ 

ಯಕ್ಷಗಾನ ಕಲಾವಿದ ಸುಬ್ರಾಯ ಭಟ್‍ ಗುಂಡಿಬೈಲ್ ನಿಧನ


ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಸುಬ್ರಾಯ ಭಟ್‍ ಗುಂಡಿಬೈಲ್ ನಿನ್ನೆ(08-01-2021) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.


ಗುಂಡುಬಾಳ, ಇಡಗುಂಜಿ, ಕೊಳಗಿಬೀಸ್, ಅಮೃತೇಶ್ವರೀ, ಸಾಲಿಗ್ರಾಮ, ಬಚ್ಚಗಾರು ಮತ್ತು ಶಿರಸಿ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆಗೈದಿದ್ದರು. ಬಬ್ರುವಾಹನ, ಅತಿಕಾಯ, ಇಂದ್ರಜಿತು, ಸುಗ್ರೀವ ಹೀಗೆ ಅನೇಕ ಪೌರಾಣಿಕ ಪಾತ್ರಗಳನ್ನು ರಂಗದಲ್ಲಿ ಮೆರೆಸಿದ್ದರು.ಯಕ್ಷಗಾನ ಗುರುಗಳಾಗಿ, ಪ್ರಸಂಗಕರ್ತರಾಗಿ, ಅರ್ಥಧಾರಿಯಾಗಿಯೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗ 2016ರಲ್ಲಿ ಶಿರಿಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಸಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಮ್.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬಹುಮುಖ ಪ್ರತಿಭೆಯ ಅಧ್ಯಾಪಕ, ಲೇಖಕ, ಕಲಾವಿದ ಶ್ರೀ ಪಕಳಕುಂಜ ಶ್ಯಾಮ ಭಟ್

ಅಧ್ಯಾಪಕನಾಗಿ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ, ಕಲಾವಿದನಾಗಿ ಕಲಾಭಿಮಾನಿಗಳ ಮತ್ತು ಸಹಕಲಾವಿದರ ಮೆಚ್ಚುಗೆ, ಪ್ರೀತಿಗೆ ಪಾತ್ರರಾದ ಪಕಳಕುಂಜ ಶ್ಯಾಮ ಭಟ್ಟರು ಬಹುಮುಖ ಪ್ರತಿಭೆ ಉಳ್ಳವರು. ಇವರು ಶ್ರೇಷ್ಠ ಲೇಖಕರೂ ಹೌದು. ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಶ್ರೀ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ 32 ವರ್ಷಗಳ ಕಾಲ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು. ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. 

ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪಕಳಕುಂಜ ಎಂಬಲ್ಲಿ 23-12-1949ರಂದು ಶ್ರೀ ನಾರಾಯಣ ಭಟ್ ಮತ್ತು ಪರಮೇಶ್ವರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ತಂದೆಯವರ ಸಂಚಾಲಕತ್ವದ ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಪೂರೈಸಿದರು. ವಿವೇಕಾನಂದ ಕಾಲೇಜಿನಲ್ಲಿ (ಪುತ್ತೂರು) ವ್ಯಾಸಂಗ ಮಾಡಿ ಬಿ.ಎಸ್ಸಿ. ಪದವಿಯನ್ನು ಪಡೆದ (ಬಯೋಲಜಿ) ಶ್ಯಾಮ ಭಟ್ಟರು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಸರಕಾರೀ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬಿ.ಎಡ್. ಶಿಕ್ಷಣವನ್ನು ಪೂರೈಸಿದರು. ವಿಠಲ ಪದವಿಪೂರ್ವ ಕಾಲೇಜು ವಿಟ್ಲದಲ್ಲಿ 32 ವರ್ಷ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಸಹೋದ್ಯೋಗಿಗಳ ಮೆಚ್ಚುಗೆಗೆ, ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದರು.

ಶ್ಯಾಮ ಭಟ್ಟರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯ ವಾತಾವರಣವೇ ಅದಕ್ಕೆ ಕಾರಣ. ಅಜ್ಜ ಪಕಳಕುಂಜ ಶಂಭಟ್ಟರು ಒಳ್ಳೆಯ ಹಾಡುಗಾರರಾಗಿದ್ದರು. ತಂದೆಯವರು ಹಾಡುಗಾರರು ಮಾತ್ರವಲ್ಲ, ಉತ್ತಮ ಮೃದಂಗ ವಾದಕರೂ ಆಗಿದ್ದರು. ಅವರು ಹಿಮ್ಮೇಳ ತರಗತಿಯನ್ನೂ ನಡೆಸುತ್ತಿದ್ದರಂತೆ. ಕುದುರೆಕೋಡ್ಲು ಹಿರಿಯ ರಾಮ ಭಟ್ಟರು ಇವರ ಸಮೀಪದ ಬಂಧುಗಳಾಗಿದ್ದರು. ಮಳೆಗಾಲದಲ್ಲಿ ಇವರ ಮನೆಯಲ್ಲಿ ಹಾಡುವುದು, ಚೆಂಡೆಮದ್ದಳೆ ನುಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಆಗ ಶ್ಯಾಮ ಭಟ್ಟರು ಹಾರ್ಮೋನಿಯಂ ನುಡಿಸುತ್ತಿದ್ದರಂತೆ. ಈ ಸಂದರ್ಭದಲ್ಲಿ ಶ್ಯಾಮ ಭಟ್ಟರು ಕುದ್ರೆಕೋಡ್ಲು ರಾಮ ಭಟ್ಟರಿಂದ ಮದ್ದಳೆ ಬಾರಿಸುವುದನ್ನು ಕಲಿತರು. ಶ್ಯಾಮ ಭಟ್ಟರ ಚಿಕ್ಕಪ್ಪ ಶ್ರೀ ಸುಬ್ರಾಯ ಭಟ್ಟರೂ ಕಲಾವಿದರಾಗಿದ್ದರು. ಬಿ.ಎಡ್. ಶಿಕ್ಷಣ ಪೂರೈಸಿ ಅಧ್ಯಾಪಕ ವೃತ್ತಿಗೆ ಸೇರಿದ ಮೇಲೆ ಕುಕ್ಕಿಲ ಶಂಕರ ಭಟ್ಟರಿಂದ ಕರ್ನಾಟಕ ಸಂಗೀತ ಮೃದಂಗವಾದನವನ್ನೂ ಶ್ಯಾಮ ಭಟ್ಟರು ಅಭ್ಯಸಿಸಿದರು.

ಶ್ಯಾಮ ಭಟ್ಟರು ತಾಳಮದ್ದಳೆ ಅರ್ಥಧಾರಿಯಾಗಿ ಮೊದಲು ಕಾಣಿಸಿಕೊಂಡದ್ದು ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ. ಇಂದ್ರಜಿತು ಕಾಳಗದ ವಿಭೀಷಣನಾಗಿ. ಅಂದು ಇಂದ್ರಜಿತುವಾಗಿ ಹೊಸಹಿತ್ಲು ಮಹಾಲಿಂಗ ಭಟ್ಟರು ಅರ್ಥ ಹೇಳಿದ್ದರಂತೆ. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ್ದು ಪಕಳಕುಂಜ ಶಾಲೆಯಲ್ಲಿ. ಹಳೆವಿದ್ಯಾರ್ಥಿಗಳಿಂದ ನಡೆದ ಆಟ- ಪಂಚವಟಿ ಪ್ರಸಂಗದ ಲಕ್ಷ್ಮಣನಾಗಿ. ಹೀಗೆ ಯಕ್ಷಗಾನದ ಉಭಯ ಪ್ರಕಾರಗಳಾದ ತಾಳಮದ್ದಳೆ ಮತ್ತು ಆಟಗಳಲ್ಲಿ ಹವ್ಯಾಸವಾಗಿ ಪಾತ್ರಗಳನ್ನು ಮಾಡುತ್ತಾ ಶ್ಯಾಮ ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡರು. ಕುಕ್ಕಿಲ ನಾರಾಯಣ ಭಟ್ಟರ ಸಂಚಾಲಕತ್ವದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾ ಸಂಘದ ಪ್ರದರ್ಶನಗಳಲ್ಲಿ ಶ್ಯಾಮ ಭಟ್ಟರು ಸಕ್ರಿಯರಾಗಿದ್ದರು. ಆಗ ವರುಷಕ್ಕೆ 30ರಿಂದ 40 ಪ್ರದರ್ಶನಗಳು ನಡೆಯುತ್ತಿತ್ತು. ತೆಂಕಬೈಲು ತಿರುಮಲೇಶ್ವರ ಭಟ್, ಪಾರೆಕೋಡಿ ಗಣಪತಿ ಭಟ್, ದಿವಾಣ ಗಣಪತಿ ಭಟ್ಟರು ಹಿಮ್ಮೇಳಕ್ಕೆ. ಕರ್ಗಲ್ಲು ವಿಶ್ವೇಶ್ವರ ಭಟ್, ಗುಂಡ್ಯಡ್ಕ ಈಶ್ವರ ಭಟ್, ಮಲಾರು ತಿರುಮಲೇಶ್ವರ ಭಟ್, ಕಿನಿಲ ಗೋವಿಂದ ಭಟ್, ಚಣಿಲ ತಿರುಮಲೇಶ್ವರ ಭಟ್, ಚಣಿಲ ಸುಬ್ರಹ್ಮಣ್ಯ ಭಟ್ ಮೊದಲಾದ ಕಲಾವಿದರಿದ್ದ ತಂಡ ಅದು. ಶ್ಯಾಮ ಭಟ್ಟರಿಗೆ ಹಿಮ್ಮೇಳದ ಜ್ಞಾನವಿದ್ದ ಕಾರಣ, ವೇಷ  ಮಾಡಲು, ಅರ್ಥ ಹೇಳಲು ಹೋದ ಸಂದರ್ಭ ಅನಿವಾರ್ಯಕ್ಕೆ ಮದ್ದಳೆ ಬಾರಿಸಿದ ಪ್ರಸಂಗಗಳು ಅನೇಕ. ಕಲಾವಿದನಾಗಿ ಶ್ರೀ ಶ್ಯಾಮ ಭಟ್ಟರು ಮರೆಯಲಾಗದ, ಕೆಲವು ವಿಶಿಷ್ಟ ಅನುಭವಗಳನ್ನು ನೆನಪಿಸಿ ಹಂಚಿಕೊಳ್ಳುತ್ತಾರೆ.
                             

ರಾತ್ರೆಯಿಂದ ಬೆಳಗಿನ ವರೇಗೆ ಎರಡು ಪ್ರಸಂಗಗಳ ತಾಳಮದ್ದಳೆ. ವಾಲಿವಧೆ ಮತ್ತು ಕರ್ಣಾರ್ಜುನ. ಶೇಣಿ ಗೋಪಾಲಕೃಷ್ಣ ಭಟ್ಟರು ವಾಲಿವಧೆ ಪ್ರಸಂಗಕ್ಕೆ ಪೂರ್ತಿ ಭಾಗವತರಾಗಿ ಪದ್ಯ ಹೇಳಿದರಂತೆ. ಅಂದು ಜೋಕಟ್ಟೆ ಮಹಮ್ಮದ್ ಅವರ ವಾಲಿ. ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಷಿ ಹಾಸ್ಯಗಾರರ ಸುಗ್ರೀವ. ಶ್ಯಾಮ ಭಟ್ಟರು ತಾರೆಯಾಗಿ ಅರ್ಥ ಹೇಳಿದರಂತೆ. ನಂತರ ಕರ್ಣಾರ್ಜುನ ಪ್ರಸಂಗದಲ್ಲಿ ಶೇಣಿಯವರು ಕರ್ಣನಾಗಿ ಅರ್ಥ ಹೇಳಿದರಂತೆ (ಮೊದಲ ಪ್ರಸಂಗದಲ್ಲಿ ಪದ್ಯ ಹೇಳಿ). ಅಂದು ಶೇಣಿಯವರ ಕರ್ಣ ತೆಕ್ಕಟ್ಟೆಯವರ ಅರ್ಜುನ, ಪೆರ್ಲ ಪಂಡಿತರ ಕೃಷ್ಣ ಎಂದು ಶ್ಯಾಮ ಭಟ್ಟರು ನೆನಪಿಸುತ್ತಾರೆ. ಅಡ್ಯನಡ್ಕದಲ್ಲಿ ನಡೆದ ಇನ್ನೊಂದು ತಾಳಮದ್ದಳೆ. ಶ್ರೀಕೃಷ್ಣ ಪರಂಧಾಮ ಪ್ರಸಂಗ. ಶೇಣಿಯವರ ಕೃಷ್ಣ. ‘ಜರ’ನಾಗಿ ಅವರ ಜತೆ ಅರ್ಥ ಹೇಳಿದ್ದು, ಅತಿಕಾಯ ಮೋಕ್ಷ ಪ್ರಸಂಗದಲ್ಲಿ ಅವರ ಅತಿಕಾಯನಿಗೆ ಲಕ್ಷ್ಮಣನಾಗಿ ಅರ್ಥ ಹೇಳಿದ್ದು ವಿಶಿಷ್ಠ ಅನುಭವ. ಅದು ನನ್ನ ಭಾಗ್ಯ ಎಂಬುದು ಶ್ಯಾಮ ಭಟ್ಟರ ಅನಿಸಿಕೆ. ಶೇಣಿ ಮತ್ತು ದೇರಾಜೆಯವರ ಜತೆ ಧ್ವನಿಸುರುಳಿಗೆ ಅರ್ಥ ಹೇಳಿದ್ದೂ ಒಂದು ವಿಶಿಷ್ಠ ಅನುಭವ ಮತ್ತು ಭಾಗ್ಯ. ಉತ್ತರನ ಪೌರುಷ ಪ್ರಸಂಗದಲ್ಲಿ ದೇರಾಜೆಯವರ ಉತ್ತರನ ಪಾತ್ರ ಕೌರವನ ಪಾತ್ರ ಬೇಡ ಎಂದು ನಿರ್ಣಯವಾಗಿತ್ತು. ಆದರೆ ದೇರಾಜೆಯವರು ಉದಾರತೆಯಿಂದ ನನ್ನಲ್ಲಿ ಕೌರವನ ಅರ್ಥ ಹೇಳಿಸಿದರು. ರಾವಣವಧೆ ಪ್ರಸಂಗದಲ್ಲಿ ಅವರ ರಾಮನ ಪಾತ್ರಕ್ಕೆ ಮಾತಲಿಯಾಗಿ ಅರ್ಥ ಹೇಳಿದ್ದು. ಹೀಗೆ ಕಲಾವಿದನಾಗಿ ತನ್ನ ವಿಶೇಷ ಅನುಭವಗಳನ್ನು ಶ್ರೀ ಪಕಳಕುಂಜ ಶ್ಯಾಮ ಭಟ್ಟರು ಹಂಚಿಕೊಳ್ಳುತ್ತಾರೆ.
                       

ಅಧ್ಯಾಪಕನಾಗಿದ್ದಾಗ ಸಹೋದ್ಯೋಗಿಗಳಾಗಿದ್ದ ಅಂಗ್ರಿ ಶಂಕರ ಭಟ್, ಬಳ್ಳ ಶಂಕರನಾರಾಯಣ ಭಟ್ ಮೊದಲಾದವರು ಒಳ್ಳೆಯ ಕಲಾವಿದರಾಗಿದ್ದರು. ಶ್ಯಾಮ ಭಟ್ಟರ ಯಕ್ಷಗಾನಾಸಕ್ತಿಗೆ ಪೂರಕ ವಾತಾವರಣ ಸಿಕ್ಕಿತು. ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಕರ್ಗಲ್ಲು ಸುಬ್ಬಣ್ಣ ಭಟ್ಟರಿಂದ ತರಬೇತಿ ಕೊಡಿಸುವ ವ್ಯವಸ್ಥೆಯಾಯಿತು. ಮಳಿ ಶ್ಯಾಮ ಭಟ್ಟರು ಹಿಮ್ಮೇಳಕ್ಕೆ. ಹೀಗೆ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಿ ಶ್ಯಾಮ ಭಟ್ಟರು ಕಲಾಸೇವೆಯನ್ನು ಮಾಡಿದರು. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಇವರು ಬರೆದ ಎರಡು ನಾಟಕಗಳು- 1) ಯಾರು ಹಿತವರು ನಿನಗೆ? – ದೇರಾಜೆಯವರಿಂದ ಕೃತಿ ಬಿಡುಗಡೆ 2) ನಾಟಕದೊಳಗೆ  ನಾಟಕ – ಶೇಣಿಯವರ ಹರಿಕಥಾ ಕಾರ್ಯಕ್ರಮ ಇರಿಸಿ ಬಿಡುಗಡೆಯಾಯಿತು.

ಅಲ್ಲದೆ ಇವರು ಬರೆದ ಅಪ್ರಕಟಿತವಾದ ಅನೇಕ ಪುಸ್ತಕಗಳಿವೆ. ಉಳಿಯ ಧನ್ವಂತರೀ ಯಕ್ಷಗಾನ ಕಲಾ ಸಂಘದ ವತಿಯಿಂದ ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ (ರಿ.), ವಿಟ್ಲ ತಂಡಕ್ಕೆ ಪ್ರಥಮ ಪ್ರಶಸ್ತಿ ಬಂದಿತ್ತು. ಆ ತಂಡದ ಸದಸ್ಯನಾಗಿ ಶ್ಯಾಮ ಭಟ್ಟರು ಶ್ರೇಷ್ಠ ಅರ್ಥಧಾರಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನೂ ಹಲವೆಡೆಗಳಲ್ಲಿ ಸಂಘ-ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆದ ಶ್ರೀಯುತರು ಒರಿಸ್ಸಾದಲ್ಲಿ ಕನ್ನಡ ಸಂಘದ ವತಿಯಿಂದ ಸುನಾಬೇಡ ಎಂಬಲ್ಲಿ (1984), ಬೆಂಗಳೂರು, ಮುಂಬಯಿ ಮೊದಲಾದ ಕಡೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
                                   2007ರ ವರೇಗೆ ಪಕಳಕುಂಜದಲ್ಲಿ ವಾಸ್ತವ್ಯ ವಿದ್ದ ಶ್ಯಾಮ ಭಟ್ಟರು ಪ್ರಸ್ತುತ ಅಳಿಕೆಯಲ್ಲಿ ನೆಲೆಸಿದ್ದಾರೆ. ಪತ್ನಿ ರತ್ನಾ ಎಸ್. ಭಟ್ (ಗೃಹಿಣಿ). ಮಕ್ಕಳು- ಅನಿಲ್, ಅಚಲ್, ಅಖಿಲಾ.

ಲೇಖಕ: ರವಿಶಂಕರ್ ವಳಕ್ಕುಂಜ