Monday, September 21, 2026
Home Blog Page 332

ಮೇಳಗಳ ಇಂದಿನ ( 28.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 28.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ನೂಜಾಡಿ ಹೊಟ್ಲುಬೈಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಮೂಡುಪೆರಾರ ಚರ್ಚ್ ಬಳಿ ವಯಾ ಗಂಜಿಮಠ  

ಕಟೀಲು ಎರಡನೇ ಮೇಳ ==   ಮೂಡುಕಟ್ಟೆ ಶಾಲೆ, ಪದವು ಶ್ರೀ ಶನೀಶ್ವರ ಕಟ್ಟೆ ಬಳಿ  

ಕಟೀಲು ಮೂರನೇ ಮೇಳ= ಕುಡುಂಬೂರು ಬೈಕಂಪಾಡಿ 

ಕಟೀಲು ನಾಲ್ಕನೇ ಮೇಳ  ==  ಕಾರಿಯಾನಮನೆ ಅಟ್ಲಾಜೆ ಶಾಲಾ ಬಳಿ, ಪಡಂಗಡಿ ವಯಾ ವೇಣೂರು 

ಕಟೀಲು ಐದನೇ ಮೇಳ ==  ಪರಣೆ ಮನೆ ಸವಣೂರು, ತುಲಸಿಪುರಂ ಪರಣೆ  

ಕಟೀಲು ಆರನೇ ಮೇಳ == ಪಾದೆಲಚ್ಚಿಲ್ ಸಂಕಲಕರಿಯ ವಯಾ ಮೂರುಕಾವೇರಿ ಕಿನ್ನಿಗೋಳಿ 

ಮಂದಾರ್ತಿ ಒಂದನೇ ಮೇಳ  == ಮಳೂರು ದೇವಂಗಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ನಂದಾದೀಪ ನಿಲಯ, ಹೆಸ್ಕುತ್ತೂರು   

ಮಂದಾರ್ತಿ ಮೂರನೇ ಮೇಳ  ==  ಬೀರನಹಳ್ಳಿ ಶಿವಮೊಗ್ಗ 

ಮಂದಾರ್ತಿ ನಾಲ್ಕನೇ ಮೇಳ   ==  ಹರ್ಕಾಡಿ ದೊಡ್ಮನೆ ಕಕ್ಕುಂಜೆ 

ಮಂದಾರ್ತಿ    ಐದನೇ ಮೇಳ  ==  ನೆಲ್ಲಿಕಟ್ಟೆ , ಜೆಡ್ಡಿನಸಾಲು ಸೂರಾಲು 

ಶ್ರೀ ಹನುಮಗಿರಿ ಮೇಳ  ==  ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ – ಶ್ರೀ ದೇವಿ ಮಹಾತ್ಮೆ (ಸಂಜೆ 6 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕನ್ನಾರು ಚೇರ್ಕಾಡಿ – ಕುಶಲವ (ಕಾಲಮಿತಿ)

ಶ್ರೀ ಪೆರ್ಡೂರು ಮೇಳ == ಉಜಿರೆ ಜನಾರ್ದನ ದೇವಸ್ಥಾನದ ರಥಬೀದಿ – ಶೂದ್ರ ತಪಸ್ವಿನಿ (ಸಂಜೆ 6.30ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಲೋಕನಾಥೇಶ್ವರ ದೇವಸ್ಥಾನ ಹಟ್ಟಿಯಂಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಶಾರಾಳ ಕರ್ಕುಂಜೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಭದ್ರಮಹಾಕಾಳಿ ದೇವಸ್ಥಾನ ವಠಾರ ಕಟ್ ಬೇಲ್ತೂರು 

ಶ್ರೀ ಪಾವಂಜೆ ಮೇಳ  ==  ಕುಂಭಾಶಿ ಆನೆಗುಡ್ಡೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ, ನಿನ್ನೆ ನಡೆಯಬೇಕಾಗಿದ್ದ ಆಟ ಇಂದು)

ಕಮಲಶಿಲೆ ಮೇಳ ‘ಎ‘ = ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊಳೆಕೋಣು ಹೋಳಿ ಹುಣ್ಣಿಮೆಯ ಪ್ರಯುಕ್ತ 

ಕಮಲಶಿಲೆ ಮೇಳ ‘ಬಿ‘ ==  ಮಾತೃಶ್ರೀ ಸ್ವಸಹಾಯ ಸಂಘ, ಹುಣಸೆಕಟ್ಟೆ, ಕೈಲ್ ಕೆರೆ 

ಶ್ರೀ ಬಪ್ಪನಾಡು ಮೇಳ == ಅಜ್ಜಿನಡ್ಕ ಗಡಿಕಲ್ಲ್ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಇಂದಿರಾನಗರ – ಕಂಚೀಲ್ದ ಪರಕೆ (ತುಳು)

ಶ್ರೀ ಅಮೃತೇಶ್ವರೀ ಮೇಳ ==  ಮೇಲ್ಮನೆ ಚಾರುಕೊಟ್ಟಿಗೆ ಕೊರ್ಗಿ 

ಶ್ರೀ ಬೋಳಂಬಳ್ಳಿ ಮೇಳ==  ಕಿರುಹೊಳೆ ಮಹಾಸತಿ ದೇವಸ್ಥಾನ ಗೊರಟೆ (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಗುಲ್ವಾಡಿ ಆಂಜನೇಯ ದೇವಸ್ಥಾನ ಬಳಿ -ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ನೂಲೇರಿನಗರ – ನೂತನ ಪ್ರಸಂಗ  

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಾರಕೂರು ಹೊಸಾಳ ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ (ಕನ್ನಡ)

ಶ್ರೀ ಮಡಾಮಕ್ಕಿ ಮೇಳ == ಅರಸಮ್ಮಕಾನು ದೊಡ್ದಬೆಳಾರು ಶ್ರೀ ಓಂಕಾರ ನಿಲಯ – ಭೀಷ್ಮ ವಿಜಯ, ರತಿಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಗುಬ್ ಗೋಡ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಕನ್ನಾರು ಚೇರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಕಟ್ಟೆ ಗಣಪತಿ ದೇವಸ್ಥಾನ ಬಗ್ವಾಡಿ  

ಶ್ರೀ ಸಿಗಂದೂರು ಮೇಳ == ನಾಗೂರು ಕುಂಜಾಣಗುಡ್ಡೆ 

ಶ್ರೀ ನೀಲಾವರ ಮೇಳ  == ದೊಡ್ಡನಗುಡ್ಡೆ ಅಶ್ವತ್ಥಕಟ್ಟೆ ಬಳಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಆಲ್ಮನೆ 

ಶ್ರೀ ಮೇಗರವಳ್ಳಿ ಮೇಳ == ಕಾಜ್ರಳ್ಳಿ ಶ್ರೀ ವನದುರ್ಗಾ ದೇವಸ್ಥಾನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಭಾಗವತರ ಔಷಧೋಪಚಾರಕ್ಕೆ ಕಲಾಭಿಮಾನಿ ಬಳಗದ ನೆರವು – ಕಲಾವಿದರ ಬದುಕಿಗೆ ಅಭಿಮಾನಿಗಳ ಶ್ರೀರಕ್ಷೆ : ಪುರುಷೊತ್ತಮ ಪೂಂಜ

‘ಬಾಯಿಮಾತಿನ ಅಭಿಮಾನದಿಂದಲೇ ಸಂತೃಪ್ತಿ ಪಡೆಯುವುದು ಕಲಾವಿದರ ಸ್ವಭಾವ. ಆದರೆ ಅಂತಹ ಅಭಿಮಾನ ದೃಢವಾಗುವುದು ಕಲಾವಿದರು ಸಂಕಷ್ಟದಲ್ಲಿದ್ದಾಗ ಮಾತ್ರ. ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಯಕ್ಷಗಾನ ರಂಗದಲ್ಲಿ ಪ್ರಾಮಾಣಿಕವಾಗಿ ದುಡಿದ ತನಗೆ ನಾಡು – ಹೊರನಾಡುಗಳಲ್ಲಿ ಅಸಂಖ್ಯ ಸಂಖ್ಯೆಯ ಅಜ್ಞಾತ ಅಭಿಮಾನಿಗಳಿರುವುದು ಮನದಟ್ಟಾಗುತ್ತಿದೆ. ಅವರ ಸಾಂತ್ವನದ ಮಾತುಗಳು, ಹಣಕಾಸಿನ ನೆರವು ಶ್ರೀರಕ್ಷೆಯಾಗಿ ಬದುಕಿನ ಬಗ್ಗೆ ಭರವಸೆ ಮೂಡಿಸಿದೆ ‘ ಎಂದು ಯಕ್ಷಗಾನದ ಹಿರಿಯ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಹೇಳಿದ್ದಾರೆ.         

ರಕ್ತ ಸಂಬಂಧಿಯಾದ ಗಂಭೀರ ಕಾಯಿಲೆಗೆ ಒಳಗಾಗಿ ನಗರದ ಕದ್ರಿ ಕಂಬಳದ ತಾತ್ಕಾಲಿಕ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಔಷಧೋಪಚಾರಕ್ಕಾಗಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನೀಡಲಾದ ಆರ್ಥಿಕ ನೆರವನ್ನು ಸ್ವೀಕರಿಸಿ ಪುರುಷೋತ್ತಮ ಪೂಂಜ ಮಾತನಾಡಿದರು.       

ಈಗಾಗಲೇ ಮೊದಲ ಹಂತದಲ್ಲಿ ರೂ 1 ಲಕ್ಷದ ಮೊತ್ತವನ್ನು ಚಿಕಿತ್ಸೆಗಾಗಿ ನೀಡಿದ್ದ ಕಲಾಭಿಮಾನಿ ಬಳಗ, ಎರಡನೇ ಸುತ್ತಿನಲ್ಲಿ ಮುಂಬಯಿ ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಿದ ರೂಪಾಯಿ 75 ಸಾವಿರ ನಿಧಿಯನ್ನು ಅವರಿಗೆ ಹಸ್ತಾಂತರಿಸಿತು. ಈ ನಿಧಿಗೆ ಮುಂಬೈ ಹೋಟೆಲ್ ಪಾಪಿಲ್ಲೋನ್ ನ ರಘು ಎಲ್. ಶೆಟ್ಟಿ , ಕೊಟ್ರಪ್ಪಾಡಿ ಲಕ್ಷ್ಮೀಜನಾರ್ಧನ ಬ್ರಹ್ಮಸಿರಿ ಕಲಾ ಬಳಗದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಕೊಟ್ರಪಾಡಿ, ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿಜಯ್ ಶೆಟ್ಟಿ ಅಜೆಕಾರು, ಶ್ರೀ ಶನೇಶ್ಚರ ಸೇವಾ ಸಮಿತಿ ಬಟ್ಟಿಪಾಡ ಭಾಂಡೂಪ್, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಭಟ್ಟಿಪಾಡ, ಅಡ್ವೋಕೇಟ್ ಶೇಖರ್ ಆರ್. ಶೆಟ್ಟಿ ಮುಂಬೈ ಮತ್ತು ಅಡ್ವೋಕೇಟ್ ದಯಾನಂದ್ ಕೆ.ಶೆಟ್ಟಿ ಮುಂಬಯಿ ದೇಣಿಗೆಯಿತ್ತು ಸಹಕರಿಸಿದ್ದರು.

ನೆರವಿನ ಹಸ್ತ ದೊರೆಯಲಿ: ದಾನಿಗಳ ಪರವಾಗಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿಧಿ ಸಮರ್ಪಣೆ ಮಾಡಿದರು. ಬಳಗದ ಸಲಹೆಗಾರ ಮತ್ತು ಯಕ್ಷಗಾನ ಅರ್ಥಧಾರಿ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಯಕ್ಷಗಾನ ರಂಗಕ್ಕೆ ಪೂಂಜರ ಕೊಡುಗೆಯನ್ನು ವಿವರಿಸಿ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ‘ಈ ಅಪರೂಪದ ಕಾಯಿಲೆಗೆ ಹೊರದೇಶದಿಂದ ದುಬಾರಿ ಔಷಧಿಗಳನ್ನು ತರಿಸಿ ಚಿಕಿತ್ಸೆ  ನೀಡಬೇಕಾದ್ದರಿಂದ ಭಾಗವತರನ್ನು ಮೊದಲಿನಂತಾಗಿಸಲು ಇನ್ನಷ್ಟೂ ನೆರವಿನ ಹಸ್ತಗಳು ಒದಗಿ ಬರಬೇಕು’ ಎಂದವರು ನುಡಿದರು. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ ಅಜೆಕಾರು  ಮತ್ತು ಪೂಂಜರ ಧರ್ಮಪತ್ನಿ ಶೋಭಾ ಪೂಂಜ ಉಪಸ್ಥಿತರಿದ್ದರು.

‘ಸಂಸ್ಕೃತಿ’ ಕಾವು ಇಲ್ಲಿ ಇಂದು ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಯಕ್ಷಗಾನ ಬಯಲಾಟ 

‘ಸಂಸ್ಕೃತಿ’ ಕಾವು ಇಲ್ಲಿ ಇಂದು ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಯಕ್ಷಗಾನ ಬಯಲಾಟ ನಡೆಯಲಿದೆ. 

ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು,  ‘ಸಂಸ್ಕೃತಿ’ ಕಾವು, ಪುತ್ತೂರು  ಇವರ ಸಂಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ರಾತ್ರಿ 9.30ಕ್ಕೆ ಸರಿಯಾಗಿ  ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ.   

ಮೇಳಗಳ ಇಂದಿನ ( 27.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 27.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕಾವ್ರಾಡಿ ನೆಲ್ಲಿಕಟ್ಟೆ ಗಿರಿಜಾ ಟೈಲ್ಸ್ ಆವರಣ – ಮಾನಿಷಾದ, ಕುಶ ಲವ 

ಕಟೀಲು ಒಂದನೇ ಮೇಳ ==  ಅಡ್ಯಾರು ಮಂಗಳೂರು 

ಕಟೀಲು ಎರಡನೇ ಮೇಳ ==   ಆಶ್ರಯ, ಪಡುಬೊಂಡಂತಿಲ ವಯಾ ನೀರುಮಾರ್ಗ 

ಕಟೀಲು ಮೂರನೇ ಮೇಳ= ತಾರಿಕಂಬಳ ಬಜಪೆ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕ್ಷೇತ್ರ ಪಾರೆಂಕಿ ಬೆಳ್ತಂಗಡಿ 

ಕಟೀಲು ಐದನೇ ಮೇಳ == ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು,  ‘ಸಂಸ್ಕೃತಿ’ ಕಾವು, ಪುತ್ತೂರು  

ಕಟೀಲು ಆರನೇ ಮೇಳ == ರಾಜ್ ಟೈಲ್ಸ್ ಗುರುಪುರ 

ಮಂದಾರ್ತಿ ಒಂದನೇ ಮೇಳ  == ಕನ್ನಂಗಿ ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   ==  ಕುಂಜೂರುಕಲ್ಮನೆ ಕುದಿ ಬೈದೆಬೆಟ್ಟು  

ಮಂದಾರ್ತಿ ಮೂರನೇ ಮೇಳ  ==  ಹರಿಹರನಿಲಯ ಶೆಡ್ಡಿನಮನೆ ಹುಲ್ ಮಕ್ಕಿಕೊಪ್ಪ  

ಮಂದಾರ್ತಿ ನಾಲ್ಕನೇ ಮೇಳ   ==  ಶಿರೂರು, ಮೇಗರವಳ್ಳಿ    

ಮಂದಾರ್ತಿ    ಐದನೇ ಮೇಳ  ==  ಹುಬ್ಬಾರಿ ನಾರ್ಕಳಿ ಹರ್ಕೂರು   

ಶ್ರೀ ಹನುಮಗಿರಿ ಮೇಳ  ==  ಮೂಡುಬಿದ್ರೆ ಸ್ವರಾಜ್ ಮೈದಾನ – ಕಲ್ಯಾಣತ್ರಯ (ರಾತ್ರಿ 10ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬೀಜಾಡಿ ನಂದಿಕೇಶ್ವರ ಫ್ರೆಂಡ್ಸ್ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಭಗವತಿಕೃಪ, ಕೆಂಜರ್ ಜೆಡ್ಡು – ಬ್ರಹ್ಮ ಕಪಾಲ, ಚಿತ್ರಾಕ್ಷಿ ಕಲ್ಯಾಣ (ಸಂಜೆ 7ರಿಂದ)

ಶ್ರೀ ಸುಂಕದಕಟ್ಟೆ ಮೇಳ  ==   ಕೂಳೂರು ಗೋಪಿ ನಿಲಯ – ಕೋಟಿ ಚೆನ್ನಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೇಲ್ಮನೆ ಕಿರಿಮಂಜೇಶ್ವರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಮುಟ್ಟೋಣ್ಕಿಜೆಡ್ಡು ಚಿತ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗೌರಜ್ಜಿಮನೆ, ಕೊಡೇರಿ ಗಂಗಬೈಲು 

ಶ್ರೀ ಪಾವಂಜೆ ಮೇಳ  ==  ಅಲ್ಸೇಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ  ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ)

ಕಮಲಶಿಲೆ ಮೇಳ ‘ಎ‘ = ಶ್ರೀ ಗಣಪತಿ ದೇವಸ್ಥಾನ, ಕೆ.ಜಿ.ರೋಡ್ ಉಪ್ಪೂರು 

ಕಮಲಶಿಲೆ ಮೇಳ ‘ಬಿ‘ ==  ಶಾಲೆಗುಡ್ಡಿ, ಕಾರೇಬೈಲು 

ಶ್ರೀ ಬಪ್ಪನಾಡು ಮೇಳ == ವಿವೇಕನಗರ ಗಂಜಿಮಠ, ಮೂಡುಪೆರಾರ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮುಳಿಹಿತ್ಲು ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ವಠಾರ (ಮಂಗಳಾದೇವಿ) – ಕೋಟಿ ಚೆನ್ನಯ 

ಶ್ರೀ ಅಮೃತೇಶ್ವರೀ ಮೇಳ ==  ಮಣೂರು ಬಾಳೆಬೆಟ್ಟು 

ಶ್ರೀ ಸೌಕೂರು ಮೇಳ ==  ಕಂಡ್ಲೂರು ರಘುಸನ್ ಟೈಲ್ಸ್ – ಹಳನಾಡು ಕ್ಷೇತ್ರ ಮಹಾತ್ಮೆ  

ಶ್ರೀ ಹಾಲಾಡಿ ಮೇಳ == ನೇರಳಕಟ್ಟೆ ಜಡ್ಡಿನಕೂಡ್ಲು – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ  

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಜಾಲ್ ಪೂಂಜಾರಬೆಟ್ಟು ಕೇಶವ ಭಂಡಾರಿಯವರ ಗದ್ದೆ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿ ಅಡಿಗಳಬೆಟ್ಟು 5 ಸೆಂಟ್ಸ್ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮಾತುವಳ್ಳಿ ಅಂಗನವಾಡಿ ವಠಾರ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಕುಂದಾಪುರ ಬಂಕನಗದ್ದೆ ಚರ್ಚ್ ರಸ್ತೆ ನಾಗಯಕ್ಷಿ ರಕ್ತೇಶ್ವರಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ನಾರ್ಕಳಿ ಪಡುಕಟ್ಟೆಮನೆ  

ಶ್ರೀ ಸಿಗಂದೂರು ಮೇಳ == ಅಲ್ತಾರು ತಾಣ 

ಶ್ರೀ ನೀಲಾವರ ಮೇಳ  == ನೀಲಾವರ ಜೀವನಾಧರ ನಗರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಹೊನ್ನಾಳಿ 

ಶ್ರೀ ಮೇಗರವಳ್ಳಿ ಮೇಳ == ಕೊಳಿಗೆ ಗ್ರಾಮಸ್ಥರು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಯಕ್ಷಗಾನ ಕೃತಿ ಸಂಪುಟ – ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ

ಕರ್ನಾಟಕ ಯಕ್ಷಗಾನ ಅಕಾಡೆಮಿ  ಇತ್ತೀಚೆಗೆ  ಪ್ರಕಟಿಸಿದ ಕೃತಿ ಕೀರ್ತಿಶೇಷ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ ಇದು. ಯಕ್ಷಗಾನದ ಮಟ್ಟುಗಳ ಅದ್ಭತ ಸಿದ್ಧಿಯನ್ನು ಎಳವೆಯಲ್ಲೇ ಸಾಧಿಸಿದ ಮಹಾಕವಿಯೊಬ್ಬರ ಕೃತಿಸಂಪುಟವನ್ನು ಪ್ರಕಟಿಸುವುದರ ಮೂಲಕ ಅಕಾಡೆಮಿ ಸ್ತುತ್ಯಕಾರ್ಯವನ್ನೇ ಮಾಡಿದೆ.

ಉಪಾಧ್ಯಾಯರ ಗುರುದ್ರೋಣ, ಬಾಘಟೋತ್ಕಚ ಪ್ರಕಟವಾಗಿ ದಶಕಗಳೇ ಕಳೆದು ಹೋಗಿ ಈಗ ಉಪಲಬ್ಧವೇ ಇರಲಿಲ್ಲ. ಅವರಿನ್ನೂ ಹದಿನೆಂಟನೆಯ ವರ್ಷದವರಿದ್ದಾಗ ಬರೆದ ಧರಣಿಮೋಹಿನಿ ಕಲ್ಯಾಣ ಛಂದೋವಿದ ಡಾ. ನಾರಾಯಣ ಶೆಟ್ಟರಿಗೆ ಅನೇಕ ಮಟ್ಟುಗಳನ್ನು ಸೂಚಿಸಲು ಸಹಕಾರಿಯಾಗದ್ದವು. ಈ ಸಂಪುಟದಲ್ಲಿ ಧರಣಿ ಮೋಹಿನಿ ಕಲ್ಯಾಣ,(1928) ಬಾಲಘಟೋತ್ಕಚ,(1942) ಗುರುದ್ರೋಣ, (ಇದು ಅವರು ರಚಿಸುವಾಗ ಅಪೂರ್ಣವಾಗಿದ್ದು 1980 ರ ಸಮಯಕ್ಕೆ ಅವರ ಪುತ್ರರುಗಳಿಂದ ಪೂರ್ಣವಾಗಿದೆ) ಅಶೋಕಸುಂದರೀ ಕಲ್ಯಾಣ,(1952)ಮೋಹಿನೀ ಕಲಾವಿಲಾಸ (1930) ಹೀಗೆ ದಿ.ಉಪಾಧ್ಯಾಯರ ಎಲ್ಲಾ ಐದು ಪ್ರಸಂಗಗಳು  ಇವೆ.

ಕೊನೆಯ  ಪ್ರಸಂಗ ತಂಬಾಕು, ನಸ್ಯ, ಮದ್ಯ ಮುಂತಾದ ಅಮಲು ಪದಾರ್ಥಗಳ ಕುರಿತ ಕಾಲ್ಪನಿಕ ಪ್ರಸಂಗ. ಎಲ್ಲವೂ ಪೌರಾಣಿಕ ಪಾತ್ರಗಳೇ ಇರುವ ಈ ಪ್ರಸಂಗದಲ್ಲಿ 442 ಪದ್ಯಗಳಿವೆ!.  ಪ್ರಖ್ಯಾತ ರಂಗ ಕರ್ಮಿ, ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ಕೃತಿಯನ್ನು ಸಂಪಾದಿಸಿ ಯಕ್ಷಲೋಕದ ಮುಂದಿಟ್ಟಿದ್ದಾರೆ.

ಯಕ್ಷಗಾನಕ್ಕೊಂದು ಅಪೂರ್ವ ಕೃತಿ ಸಂಪುಟವನ್ನು ನೀಡಿದ ಅಕಾಡೆಮಿಯ ಅಧ್ಯಕ್ಷರಾದ ಪ್ರೊ|ಎಂ ಎ ಹೆಗಡೆಯವರು ಕೃತಿಯನ್ನು ಕುರಿತು ಬರೆದಿದ್ದಾರೆ. ನಾನು ಕೃತಿಗಳ ಕಿರುಪರಿಚಯದ ಮುನ್ನುಡಿಯ ಸೇವೆ ಮಾಡಿದ್ದೇನೆ. ಕನ್ನಡಕ್ಕೊಂದು ಹೊಸ ಶಬ್ದ “ಇನ್ನುಡಿ” ಯನ್ನು ಸಂಪಾದಕ ಕೆ ಎಸ್ ಉಪಾಧ್ಯಾಯ ನೀಡಿದ್ದಾರೆ. ಪ್ರಖ್ಯಾತ ಅರ್ಥವಾದಿ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಈ ಕವಿಯ ಸುಪುತ್ರರು. ಯಕ್ಷಗಾನಾಸಕ್ತರೆಲ್ಲ ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳಬೇಕಾದ ಕೃತಿ.

ಪ್ರಕಾಶಕರು: ಯಕ್ಷಗಾನ ಅಕಾಡೆಮಿ, ಬೆಂಗಳೂರು. ಬೆಲೆ: 130/  ಪುಟಗಳು 270.

ಶ್ರೀಧರ್ ಡಿ. ಎಸ್.

ಯಕ್ಷಗಾನ ಪ್ರಪಂಚದ ಸವ್ಯಸಾಚಿಯಾಗಿ ಮೆರೆದ ಗಡಿನಾಡ ಕನ್ನಡಿಗ ಮಧೂರು ಗಣಪತಿ ರಾವ್

ಮಧೂರು ಗಣಪತಿ ರಾವ್ ಅವರ ಹೆಸರನ್ನು ಕೇಳದವರು ಅಪರೂಪ. ಹಳೆಯ ಯಕ್ಷಗಾನ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರಾಗಿದ್ದ ಹೆಸರು. ಇತ್ತೀಚೆಗಿನ ಯಕ್ಷಗಾನ ಪ್ರೇಕ್ಷಕರಿಗೆ ಅವರ ಹಾಗೂ ಅವರು ನಿರ್ವಹಿಸಿದ ಪಾತ್ರಗಳ ಪರಿಚಯ ಅಷ್ಟಾಗಿ ಇರದಿದ್ದರೂ ಹಳೆಯ ತಲೆಮಾರಿನ ಹಿರಿಯ ಪ್ರೇಕ್ಷಕರು ಅವರ ಬಗ್ಗೆ ಆಡಿಕೊಳ್ಳುವುದನ್ನು ಕೇಳಿ ಗೊತ್ತಿರಬಹುದು. 

ಯಕ್ಷಗಾನದ ವಿವಿಧ ಅಂಗಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಕಲಾವಿದ ಮಧೂರು ಗಣಪತಿ ರಾವ್. ಸುಬ್ಬರಾವ್ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿ 1924ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಪರಿಸರದಲ್ಲಿಯೇ ಬೆಳೆದವರಾದ ಕಾರಣ ಸಹಜವಾಗಿಯೇ ಯಕ್ಷಗಾನ ಕಲೆಯತ್ತ ಸೆಳೆಯಲ್ಪಟ್ಟಿದ್ದರು. 

ಇವರ ಸಹೋದರರಾಗಿದ್ದ ಮಧೂರು ನಾರಾಯಣ ಹಾಸ್ಯಗಾರರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದರು. ಗಣಪತಿ ರಾವ್ ಅವರಿಗೆ ಸಹೋದರನ ನಿರಂತರ ಪ್ರೋತ್ಸಾಹವಿತ್ತು. ಯಕ್ಷಗಾನ ಕಲಿತ ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿ ಸೇರ್ಪಡೆಗೊಂಡರು. ಆಮೇಲೆ ಹಲವಾರು ಮೇಳಗಳಲ್ಲಿ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು.

ಕೂಡ್ಲು ಮೇಳ, ಕುಂಡಾವು ಮೇಳ, ಕುಂಡಾಪು, ಕುದ್ರೋಳಿ, ಮೂಲ್ಕಿ. ಸುರತ್ಕಲ್ ಮೇಳ, ಮಲ್ಲ ಮೇಳ, ಮಧೂರು ಮೇಳ, ಉಪ್ಪಳ ಭಗವತೀ ಮೇಳವೇ ಮೊದಲಾದ ಮೇಳಗಳಲ್ಲಿ ಪ್ರಬುದ್ಧ ಜನಪ್ರಿಯ ವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದರು.  ಮಧೂರು ಗಣಪತಿ ರಾವ್ ಅವರದು ಯಕ್ಷಗಾನ ಕ್ಷೇತ್ರದಲ್ಲಿ ಐದು ದಶಕಗಳಿಗೂ ಮಿಕ್ಕಿದ ಕಲಾಸೇವೆ. ಅಷ್ಟು ದೀರ್ಘಾವದಿಯಲ್ಲಿಯೂ ಕಲಾವಿದನಾಗಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದರು.

ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳೆರಡನ್ನೂ ಬಲ್ಲ ಇವರು ಯಕ್ಷಗಾನಕ್ಕೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಮುಮ್ಮೇಳ ವೇಷಧಾರಿಯಾಗಿ ಪ್ರಸಿದ್ಧಿಯನ್ನು ಪಡೆದುದು ಮಾತ್ರವಲ್ಲದೆ ತಾಳಮದ್ದಳೆಯ ಜನಮೆಚ್ಚಿದ ಅರ್ಥಧಾರಿಯೂ ಆಗಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೊಂದಿಗೆ ಹಿಮ್ಮೇಳಕ್ಕೆ ಸಹಕಲಾವಿದರಾಗಿದ್ದುಕೊಂಡು ಆಮೇಲೆ ವೇಷಧಾರಿಯಾಗಿ ಗುರುತಿಸಲ್ಪಟ್ಟು ಕರ್ಣ, ಅರ್ಜುನ, ಸುದರ್ಶನ, ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಇಂದ್ರಜಿತು, ರಕ್ತಬೀಜ, ತಾಮ್ರಧ್ವಜ, ದೇವೇಂದ್ರ, ಋತುಪರ್ಣ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದವರು. 

ಗಣಪತಿ ರಾಯರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದುದು ಮಾತ್ರವಲ್ಲದೆ ಆ ಸಂಸ್ಥೆಯ ಉನ್ನತಿಗಾಗಿ ದುಡಿದ ಮಾರ್ಗದರ್ಶಕರೂ ಆಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಗೌರವವನ್ನು ಪಡೆದಿರುವ ಮಧೂರು ಗಣಪತಿ ರಾಯರನ್ನು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘ, ಸುರತ್ಕಲ್ ಮೇಳ, ಎಡನೀರು ತರುಣ  ಕಲಾವೃಂದ, ಕೊಲ್ಯದ ಶಿವಾಜಿ ಸಂಘ ಮತ್ತು ಎಡನೀರು ಮಠ, ಮಧೂರಿನ ಮಿತ್ರ ಕಲಾವೃಂದ, ಉಳಿಯತ್ತಡ್ಕದ ಆದರ್ಶ ಕಲಾ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕೂಡ್ಲು ಶ್ರೀ ಗೋಪಾಲಕೃಷ್ಣ ಶಾನುಭೋಗ್ ಪ್ರತಿಷ್ಠಾನ ಮೊದಲಾದೆಡೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಇನ್ನೂ ಹಲವಾರು ಪ್ರಶಸ್ತಿ ಸನ್ಮಾನಗಳು ಅವರಿಗೆ ಬಂದಿವೆ. ಯಕ್ಷಗಾನದ ಸವ್ಯಸಾಚಿ ಎಂದು ಗುರುತಿಸಿಕೊಂಡಿದ್ದ ಮಧೂರು ಗಣಪತಿ ರಾವ್ ಅವರು ಆಟ, ಕೂಟಗಳೆರಡರಲ್ಲಿಯೂ ಸಮಾನ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಮಾತ್ರವಲ್ಲ, ಅವೆರಡರಲ್ಲಿಯೂ ಪ್ರಸಿದ್ಧಿಯನ್ನೂ ಪಡೆದವರು. ಪಾತ್ರದ ಔಚಿತ್ಯ, ಸ್ವಭಾವ ಮತ್ತು ಘನತೆಗಳನ್ನು ಅರಿತು ಪಾತ್ರ ನಿರ್ವಹಿಸಿ ಅಭಿನಯಿಸುವವರು.

ಅವರ ಹುಟ್ಟೂರು ಅಡೂರು ಆಗಿದ್ದರೂ ಕ್ರಮೇಣ ಮಧೂರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ ನಂತರ ಮಧೂರು ಗಣಪತಿ ರಾವ್ ಎಂದೇ ಕರೆಸಿಕೊಂಡರು.  ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಮೂಲಕ ಹಲವಾರು ಕಲಾವಿದರನ್ನು ತರಬೇತಿಗೊಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ  ದೇವಸ್ಥಾನದಲ್ಲಿ ಪ್ರತಿವರ್ಷವೂ ಇವರ ನೇತೃತ್ವದಲ್ಲಿ ಯಕ್ಷಗಾನ ಆಟ, ಕೂಟ ಮತ್ತು ಪ್ರದರ್ಶನಗಳು ನಡೆಯುತ್ತಿದ್ದುವು. 

ಯಕ್ಷಗಾನದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿ, ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟ ಮಧೂರು ಗಣಪತಿ ರಾವ್ ತನ್ನ 89ನೆಯ ವಯಸ್ಸಿನಲ್ಲಿ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರೂ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. 

ಭವಾನಿ ಬಾಬು ಶೆಟ್ಟಿಗಾರ್ ನಿಧನ

ಅಂಬಲಪಾಡಿ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾದ ಕಪ್ಪೆಟ್ಟು ಬಾಬು ಶೆಟ್ಟಿಗಾರರ ಪತ್ನಿ ಭವಾನಿ ಬಿ. ಶೆಟ್ಟಿಗಾರ (86 ವರ್ಷ) 26-03-2021 ರಂದು ನಿಧನರಾದರು.

ನೇಕಾರ ವೃತ್ತಿಯ ಮನೆತನದ ಇವರು ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಕಲಾವಿದ ಅಜಿತ್‍ಕುಮಾರ್ ಸಹಿತ ನಾಲ್ವರು ಪುತ್ರರು ಹಾಗು ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಅಂಬಲಪಾಡಿಯಕ್ಷಗಾನ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‍ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

‘ಕುತ್ಯಾಳ ಸಂಪದ’  ಆಕರ ಗ್ರಂಥದ ಎರಡನೇ ಸಂಪುಟ ಬಿಡುಗಡೆ

‘ಕುತ್ಯಾಳ ಸಂಪದ ಎಂಬ  ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ 1997ರಲ್ಲಿ  ಪ್ರಕಟವಾಗಿತ್ತು. ಇದೀಗ ಅದರ ಎರಡನೆಯ ಭಾಗ ಪ್ರಕಟವಾಗಿದೆ.

ಇತ್ತೀಚಿಗೆ ‘ಕುತ್ಯಾಳ ಸಂಪದ’ ಆಕರ ಗ್ರಂಥದ ಎರಡನೇ ಸಂಪುಟವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಮೊದಲ ಪ್ರತಿಯನ್ನು ಸ್ವಾಮೀಜಿಯವರು ಹಿರಿಯ ಸಂಗೀತ ವಿದ್ವಾನ್ ಬಾಬು ರೈಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಾಧಾಕೃಷ್ಣ ಬೆಳ್ಳೂರು ಅವರು ಕೃತಿಯ ಸ್ಥೂಲ ಪರಿಚಯ ಮಾಡಿಕೊಟ್ಟರು. ಸಾಹಿತಿ ಮಲಾರ್ ಜಯರಾಮ ರೈ, ಕುತ್ಯಾಳ  ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಿ ಶ್ಯಾನುಭೋಗ್ ಮುಖ್ಯ ಅತಿಥಿಗಳಾಗಿದ್ದರು.

ಕುತ್ಯಾಳ ಸಂಪದ ಪ್ರಥಮ ಸಂಪುಟದ ಸಂಪಾದಕ ರಾಧಾಕೃಷ್ಣ ಉಳಿಯತ್ತಡ್ಕ ಪ್ರಸ್ತಾವನಾ ಭಾಷಣ ಮಾಡಿದರು. ಪ್ರಾರಂಭದಲ್ಲಿ ಸ್ವಾಮೀಜಿಯವರನ್ನು ಪ್ರಸನ್ನ ಶಾನುಭೋಗ್ ಮತ್ತು ಶ್ರೀಮತಿ ವೀಣಾ ಪ್ರಸನ್ನ ಹೂ ಹಾರ ಹಾಕಿ ಫಲ ಪುಷ್ಪ ನೀಡಿ ಸ್ವಾಗತಿಸಿದರು. ಹಿರಿಯ ಸಂಗೀತ ವಿದ್ವಾಂಸ, ಮೃದಂಗ ವಿದ್ವಾನ್ ಬಾಬು ರೈ ಅವರನ್ನು ಸ್ವಾಮೀಜಿಗಳು ಆಶೀರ್ವದಿಸಿ ಸನ್ಮಾನಿಸಿದರು.

ಕುತ್ಯಾಳ ಸಂಪದ ಕೃತಿಯ ಸಂಪಾದಕ ವಿಷ್ಣು ಶಾನಭೋಗ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವೀಣಾ ಪ್ರಸನ್ನ ವಂದಿಸಿದರು. 

ಈ ಕೃತಿಯ ಮಾರಾಟದಿಂದ ಸಂಗ್ರಹವಾದ ಮೊತ್ತವನ್ನು ಮನೆಯಿಲ್ಲದ ಬಡವರೊಬ್ಬರಿಗೆ ಮನೆ ನಿರ್ಮಿಸಲು ನೀಡಲಾಗುವುದು ಎಂದು ಪುಸ್ತಕದ ಸಂಪಾದಕ ವಿಷ್ಣು ಶಾನಭೋಗ್ ಈ ಸಂದರ್ಭದಲ್ಲಿ ತಿಳಿಸಿದರು. ಈ ಪುಸ್ತಕದ ಮುಖಬೆಲೆ ರೂ. 500/- 

ಪುಸ್ತಕದ ಸಂಪಾದಕರ ವಿವರ: ವಿಷ್ಣು ಶಾನುಭೋಗ್, ಫೋನ್: 9446772355

ಮೇಳಗಳ ಇಂದಿನ ( 26.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 26.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಪಡುಕೋಣೆ ಕೋಟೆ ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಹೊಸ್ಮಾರು ಮನೆ. ಬಂಟ್ವಾಳ ಬೈಪಾಸ್ ಬಳಿ 

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ ‘ಸರಸ್ವತಿ ಸದನ’     

ಕಟೀಲು ಮೂರನೇ ಮೇಳ= ಕೊಡೆತ್ತೂರು ಮುಕ್ಕ ರೋಡ್, ಕಿನ್ನಿಗೋಳಿ 

ಕಟೀಲು ನಾಲ್ಕನೇ ಮೇಳ  ==  ಗರುಡ ಮಹಾಕಾಳಿ ದೇವಸ್ಥಾನ ಬಳಿ, ಅರಳ ಬಂಟ್ವಾಳ  

ಕಟೀಲು ಐದನೇ ಮೇಳ ==  ನೆಕ್ಕರೆ ಹೌಸ್, ಕಬಕ ಪುತ್ತೂರು 

ಕಟೀಲು ಆರನೇ ಮೇಳ == ಪಂಜಿಕಲ್ಲು ಮನೆ, ಬುಡೋಳಿ ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  == ನೆಲ್ಲಿಕಟ್ಟೆ ಅರಳಸುರುಳಿ  

ಮಂದಾರ್ತಿ ಎರಡನೇ ಮೇಳ   ==  ಶಿವಗಿರಿ ಐರೋಡಿ – ಕೂಡಾಟ  

ಮಂದಾರ್ತಿ ಮೂರನೇ ಮೇಳ  ==  ಬಿ.ಎಚ್ ಕೈಮರ, ಎನ್. ಆರ್.ಪುರ 

ಮಂದಾರ್ತಿ ನಾಲ್ಕನೇ ಮೇಳ   ==  ಕೋಲ್ ಗಾರ್ ದೇವಂಗಿ ರಸ್ತೆ ಮಕ್ಕಿಮನೆ   

ಮಂದಾರ್ತಿ    ಐದನೇ ಮೇಳ  ==  ಶಿವಗಿರಿ ಐರೋಡಿ – ಕೂಡಾಟ  

ಶ್ರೀ ಹನುಮಗಿರಿ ಮೇಳ  ==  ಮೂಡುಪೆರಾರ ಅಳಿಕೆ ಬಾಕಿಮಾರು ಗದ್ದೆ – ಶಿವಪ್ರಭಾ ಪರಿಣಯ, ಲವಕುಶ (ಸಂಜೆ 6.30ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮಾಸೂರು (ಕುಮಟಾ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಸುಂಕದಕಟ್ಟೆ ಮೇಳ  ==   ಇರ್ವತ್ತೂರು ಅಗಲ್ದೋಡಿ ಮನೆ (ವಾಮದಪದವು) – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸೋಲಿನಮನೆ, ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ನುಗ್ಗಿಬೆಟ್ಟು, ಕಾಕ್ತೋಟ, ಉಲ್ಲೂರು- 11

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  ==  ಶ್ರೀ ಕ್ಷೇತ್ರ ಪಾವಂಜೆ  – ಶಶಿಪ್ರಭಾ ಪರಿಣಯ, ಗದಾಯುದ್ಧ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸಾಲಿಕೇರಿ ದುರ್ಗಾಪರಮೇಶ್ವರಿ ದೇವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ ರಾತ್ರಿ 8.30ರಿಂದ)

ಕಮಲಶಿಲೆ ಮೇಳ ‘ಎ‘ = ವಡುವಿನ ದೈವಸ್ಥಾನ ಮಣೂರು   

ಕಮಲಶಿಲೆ ಮೇಳ ‘ಬಿ‘ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಬಪ್ಪನಾಡು ಮೇಳ == ಪಾಲಡ್ಕ, ಬಳ್ಳಮಂಜ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಂಗೆಬೆಟ್ಟು ಅಶ್ವತ್ಥಕಟ್ಟೆ ಬಳಿ (ಮುಚ್ಚೂರು) – ಶ್ರೀ ಭಗವತಿ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ ==  ಹಕ್ಲಾಡಿ ಭಜನಾ ಮಂದಿರದ ಹತ್ತಿರ 

ಶ್ರೀ ಸೌಕೂರು ಮೇಳ ==  ಅಂಪಾರು ಪೇಟೆ – ರಕ್ತಸಂಬಂಧ 

ಶ್ರೀ ಹಾಲಾಡಿ ಮೇಳ == ನಣಬೂರು ಹೈಸ್ಕೂಲ್ ಮೈದಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಸೂರಿಂಜೆ ಕೋಟೆ ನಾಯರ್ ಕೋಡಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಳೆಯಂಗಡಿ – ಪೌರಾಣಿಕ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಚೌಕಳಮಕ್ಕಿ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ ಕೋಟ್ನಾಕಟ್ಟೆ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಬಳ್ಳೂರು ಬೊಬ್ಬರ್ಯ ದೇವಸ್ಥಾನ 

ಶ್ರೀ ಸಿಗಂದೂರು ಮೇಳ == ಬೈಂದೂರು ಶಿರೂರು, ಕರಾವಳಿ ದೊಂಬೆ ಕೇಳಾಮನೆ  

ಶ್ರೀ ನೀಲಾವರ ಮೇಳ  == ಶ್ರೀ ಮಲಸಾವರಿ ಶ್ರೀ ಮಹಾಕಾಳಿ ದೈವಸ್ಥಾನದ ಹತ್ತಿರ ಕೊರವಡಿ ಕುಂಭಾಶಿ 

ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)

ಶ್ರೀ ಮೇಗರವಳ್ಳಿ ಮೇಳ == ಸಸಿಗೊಳ್ಳಿ – ಕುಲದೈವ ಪಂಜುರ್ಲಿ  

‘ದೇವಿ ಮಹಾತ್ಮೆ’ ಪ್ರಸಂಗದ ಯಕ್ಷಗಾನ ಪ್ರದರ್ಶನದ ವೀಡಿಯೊ

ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಸತೀಶ್ ನೈನಾಡು ಅವರ ಮಹಿಷಾಸುರ ಪಾತ್ರದ ವೀಡಿಯೊ ಇಲ್ಲಿದೆ. ಉಳಿದ ಪಾತ್ರಧಾರಿಗಳೂ ಉತ್ತಮವಾಗಿ ನಿರ್ವಹಿಸಿದ್ದಾರೆ.