Thursday, March 12, 2026
Home Blog Page 330

ಯಕ್ಷಗಾನ ತರಗತಿಗಳು ಆರಂಭ – ಆಸಕ್ತರು ಸಂಪರ್ಕಿಸಿ

ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ (ರಿ.), ಅಂಬಲಪಾಡಿ
ಮಾರ್ಚ್ 28, 2021 ಭಾನುವಾರದಿಂದ ಮಂಡಳಿಯ ನೂತನ ಕಟ್ಟಡದಲ್ಲಿ ಯಕ್ಷಗಾನ ತರಗತಿಗಳು ಆರಂಭಗೊಳ್ಳಲಿವೆ. ಆಸಕ್ತರು ಮಂಡಳಿಯ ಈ ಕೆಳಗಿನ ಸದಸ್ಯರಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.


ಕೆ.ಅಜಿತ್‍ಕುಮಾರ್ – 9845309836
ಪ್ರಕಾಶ್ ಹೆಬ್ಬಾರ್ – 9448300929
ಸುನಿಲ್ ಕುಮಾರ್ – 9901150844

ಕಲಾಸಕ್ತರಿಗೆ ಮುಕ್ತ ಅವಕಾಶ.
ಆಸಕ್ತರು ವಿವರಗಳಿಗಾಗಿ ಮೇಲಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ಮಂಡಳಿಯ ಪ್ರಕಟಣೆ ತಿಳಿಸಿದೆ.

12ನೇ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – ಬಿ.ಜಯಶ್ರೀ ಮತ್ತು ಸುಬ್ರಾಯ ಭಾಗವತ ಕಪ್ಪೆಕೆರೆಯವರಿಗೆ ಪ್ರಶಸ್ತಿ 

ಈ ಬಾರಿಯ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – 2021 ಇದೇ ಬರುವ ಏಪ್ರಿಲ್ 2 ಮತ್ತು 3ರಂದು ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ನಾಟ್ಯೋತ್ಸವ  ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಸಂಘಟನೆಯಲ್ಲಿ ನಡೆಯುವ ಈ ಕಾರ್ಯಕ್ರಮ ಕಳೆದ ಹಲವಾರು ವರ್ಷಗಳಿಂದಲೂ  ಯಕ್ಷಗಾನ ಮಾತ್ರವಲ್ಲದೆ ಇತರ ಕಲಾ ಪ್ರಾಕಾರಗಳಿಗೂ ವೇದಿಕೆ ಹಾಗೂ ಆಶ್ರಯ ನೀಡುತ್ತಾ ಇದೆ. 
 

ಈ ಸಾಲಿನ  “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12”  02.04.2021 ಮತ್ತು 03.04.2021 ರಂದು ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ. ನಾಟ್ಯೋತ್ಸವದಲ್ಲಿ  ಸಂಗೀತ, ನೃತ್ಯ, ಜಾನಪದ ಮುಂತಾದ ವಿವಿಧ ಪ್ರಕಾರಗಳ ವಿಶಿಷ್ಟ ಕಲಾತಂಡಗಳು, ಭಾಗವಹಿಸುವುದು ಮಾತ್ರವಲ್ಲದೆ  ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ, ನೃತ್ಯ, ಪ್ರಾತ್ಯಕ್ಷಿಕೆ ಮುಂತಾದವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿಯ  ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ’ ಹಾಗೂ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗಿದೆ.  “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ”ಗೆ  ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹಾಗೂ  “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ”ಗೆ  ಯಕ್ಷಗಾನದ ಹಿರಿಯ ಭಾಗವತರಾದ ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ನಾಟ್ಯೋತ್ಸವ ಸಮಿತಿಯ ಕಾರ್ಯಧ್ಯಕರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ ಹಾಗೂ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಮುಖ್ಯಮಂತ್ರಿಯ ವಿರುದ್ಧ ಸ್ವಪ್ನಾ ಹೇಳಿಕೆ – ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ ಪಿಣರಾಯಿ ಸರ್ಕಾರ!

ಪ್ರಮುಖ ಬೆಳವಣಿಗೆಯೊಂದರಲ್ಲಿ, ಚಿನ್ನದ ಕಳ್ಳಸಾಗಣೆ ಹಗರಣದ ಆರೋಪಿ ಸ್ವಪ್ನಾ ಸುರೇಶ್ ಅವರಿಂದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ದಾಖಲಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರದೊಂದಿಗೆ ಕೇರಳ ರಾಜ್ಯ ಸರಕಾರದ ಪ್ರಮುಖ ಮುಖಾಮುಖಿಯಾಗಿದೆ.

ಅಪರಾಧ ವಿಭಾಗವು 120-ಬಿ (ಕ್ರಿಮಿನಲ್ ಪಿತೂರಿ), 167 (ಸಾರ್ವಜನಿಕ ಸೇವೆಯಲ್ಲಿರುವವರಿಗೆ ಘಾಸಿಯುಂಟುಮಾಡುವ ಉದ್ದೇಶದಿಂದ ತಪ್ಪಾದ ದಾಖಲೆಯನ್ನು ರೂಪಿಸುವುದು), 192 (ಸುಳ್ಳು ಸಾಕ್ಷ್ಯಗಳನ್ನು ತಯಾರಿಸುವುದು), 195-ಎ (ಯಾವುದೇ ವ್ಯಕ್ತಿಗೆ ಸುಳ್ಳು ಸಾಕ್ಷ್ಯಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದಾನೆ) ಅಡಿಯಲ್ಲಿ ಕೇರಳ ಪೋಲಿಸರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಮೇಳಗಳ ಇಂದಿನ ( 20.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 20.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸೊನಲೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ ==  ಶ್ರೀ ದುರ್ಗಾಪರಮೇಶ್ವರಿ ಸೇವಾ ವೃಂದ ಮೂಡುಬಿದ್ರೆ 

ಕಟೀಲು ಎರಡನೇ ಮೇಳ ==  ಮುಡಿಪು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲಾ ವಠಾರ  

ಕಟೀಲು ಮೂರನೇ ಮೇಳ= ಬೆಳ್ಳಿಬೆಟ್ಟು ಗುತ್ತು ಗುರುಪುರ 

ಕಟೀಲು ನಾಲ್ಕನೇ ಮೇಳ  == ಬ್ರಾಣಬೆಟ್ಟು ಪೆರಾರ 

ಕಟೀಲು ಐದನೇ ಮೇಳ ==  ಜಪ್ಪಿನಮೊಗರು, ಬಂಟರ ಭವನದ ಬಳಿ 

ಕಟೀಲು ಆರನೇ ಮೇಳ == ‘ ಮೂಡುಶೆಡ್ಡೆ ವಯಾ ವಾಮಂಜೂರು 

ಮಂದಾರ್ತಿ ಒಂದನೇ ಮೇಳ  == ಹಟ್ಟಿಮನೆ ದೇವಳಿ ತ್ರಾಸಿ 

ಮಂದಾರ್ತಿ ಎರಡನೇ ಮೇಳ   ==  ಹೆಗ್ಗರಸು ಸೊನಾಲೆ 

ಮಂದಾರ್ತಿ ಮೂರನೇ ಮೇಳ  ==   52ನೇ ಹೇರೂರು ಬ್ರಹ್ಮಾವರ 

ಮಂದಾರ್ತಿ ನಾಲ್ಕನೇ ಮೇಳ   ==  ಅಂಕೋಳಿಬೈಲು ಬೇಗಾರು ಶೃಂಗೇರಿ  

ಮಂದಾರ್ತಿ    ಐದನೇ ಮೇಳ  ==  ಸೂಲದಮಕ್ಕಿ ದೇಮ್ಲಾಪುರ 

ಶ್ರೀ ಹನುಮಗಿರಿ ಮೇಳ  ==  ಮಂಗಳೂರು ಶರವು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ – ಹಿರಣ್ಯಾಕ್ಷ, ಹಿರಣ್ಯಕಶಿಪು, ಸ್ವಯಂಪ್ರಭೆ (ರಾತ್ರಿ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬಡಾಬೇಪ್ಡೆ ಶಾಲಾ ವಠಾರ (ಮಡಾಮಕ್ಕಿ) – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ದೊಂಡೆರಂಗಡಿ ಕಕ್ಕುಜೆ ಅಡಿಮಾರು ಮನೆಯ ವಠಾರ – ರಾಣಿ ಶಶಿಪ್ರಭಾ, ಶ್ರೀನಿವಾಸ ಕಲ್ಯಾಣ 

ಶ್ರೀ ತಳಕಲ ಮೇಳ == ಗುರುಪುರ ಕೈಕಂಬ – ಕದಂಬ ಕೌಶಿಕೆ, ದಕ್ಷಾಧ್ವರ 

ಶ್ರೀ ಸುಂಕದಕಟ್ಟೆ ಮೇಳ  ==   ಬೊಂಡಂತಿಲ ತಾರಿಗುಡ್ಡೆ ಬಾಕಿಮಾರು ಗದ್ದೆ – ಬ್ರಹ್ಮ ಬಲಾಂಡಿ 

ಶ್ರೀ ದೇಂತಡ್ಕ ಮೇಳ == ಶಕ್ತಿನಗರ ಪಾಲ್ತಡಿ  – ಕಾರ್ಣಿಕದ ಸ್ವಾಮಿ ಕೊರಗಜ್ಜ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಜೋಯಿಸರಬೆಟ್ಟು ವಕ್ಕೇರಿ ಬಡಾಕೇರಿ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಪಳುಮಕ್ಕಿ  ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಗಗನಕುಂಬ್ರಿ ತಾರಿಬೇರು ಆಲೂರು  

ಶ್ರೀ ಪಾವಂಜೆ ಮೇಳ  ==  ಸೌಂದರ್ಯ ರೆಸಾರ್ಟ್ ಶುಂಠಿಲಪದವು ಮಚ್ಚಾರ್ – ಶ್ರೀ ದೇವಿ ಮಹಾತ್ಮೆ (ಸಂಜೆ 6ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಕ್ಷೇತ್ರ ಸೆಟ್ಟಿಸರ ಶನೀಶ್ವರ ದೇವಸ್ಥಾನ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಶ್ರೀ ಅಯ್ಯಪ್ಪ ಭಕ್ತವೃಂದ ಕೊಪ್ಪ 

ಕಮಲಶಿಲೆ ಮೇಳ ‘ಬಿ‘ == ಶ್ರೀ ವೀರಕಲ್ಲುಕುಟ್ಟಿಗ ದೈವಸ್ಥಾನ ಕುಂಡ್ಲಬೈಲು 

ಶ್ರೀ ಬಪ್ಪನಾಡು ಮೇಳ == ಪದವಿನಂಗಡಿ – ಬಂಗಾರ್ ಬಾಲೆ(ತುಳು, ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಂಟ್ವಾಳ, ನರಿಕೊಂಬು ಕೆದ್ದೆಲ್ – ರಂಗಸ್ಥಳ 

ಶ್ರೀ ಅಮೃತೇಶ್ವರೀ ಮೇಳ == ಕೋಟ ಕೆಇಬಿ ಹತ್ತಿರ  

ಶ್ರೀ ಸೌಕೂರು ಮೇಳ ==  ಗುಲ್ವಾಡಿ ಆಂಜನೇಯ ದೇವಸ್ಥಾನ – ವೀರಮಣಿ, ಸುಧನ್ವಾರ್ಜುನ  

ಶ್ರೀ ಹಾಲಾಡಿ ಮೇಳ == ಬಿ.ಸಿ.ರೋಡ್ ಒಡೆಯರ ಹೋಬಳಿ -ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಕಾಟಿಪಳ್ಳ 3ನೇ ಬ್ಲಾಕ್ – ಬೂಡುದ ಗುಳಿಗೆ 

ಶ್ರೀ ಮಡಾಮಕ್ಕಿ ಮೇಳ == ಕೊಡವೂರು ಮೂಡುಬೆಟ್ಟು ರಕ್ತೇಶ್ವರಿ ನಾಗಸನ್ನಿಧಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಡಿಕನ್ಯಾನ ಶ್ರೀ ಮಹಾಸತಿ ದೇವಸ್ಥಾನ ವಠಾರ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಶ್ರೀ ಕ್ಷೇತ್ರದಲ್ಲಿ – ಚಂದ್ರಾವಳಿ 

ಶ್ರೀ ಹಿರಿಯಡಕ ಮೇಳ == ಸರಳಿಕಟ್ಟೆ ಹೊಸಮೊಗರು ಶ್ರೀರಾಮ ಮಂದಿರ ವಠಾರ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ತೊಂಬತ್ತು ಶಾಲಾ ಗುಡ್ಡ ವಠಾರ 

ಶ್ರೀ ಸಿಗಂದೂರು ಮೇಳ == ಬೈಂದೂರು ಕಳುವಾಡಿ ಮೂಕಾಂಬು  

ಶ್ರೀ ನೀಲಾವರ ಮೇಳ  == ಚಾಮುಂಡೇಶ್ವರಿ ದೇವಸ್ಥಾನ ವಠಾರ, ಮೊವಾಡಿ – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹಳಗ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಸಾಗರ ದಿಗಟೆ 

ಶ್ರೀ ಮೇಗರವಳ್ಳಿ ಮೇಳ == ಶೃಂಗೇರಿ ಗಂಡಕಟ್ಟ – ಕುಲದೈವ ಪಂಜುರ್ಲಿ 

 ‘ಮೈಗಂಟಿದ ಬಣ್ಣ’ – ಧಾರಾವಾಹಿ 1 (ಯಕ್ಷಗಾನ ಕಾಲ್ಪನಿಕ ಕಾದಂಬರಿ)

ಯಕ್ಷಗಾನವು ಈಗೀಗ ವಿಭಿನ್ನ ಪ್ರಯೋಗಗಳನ್ನು ಕಾಣುತ್ತದೆ. ಪ್ರಯೋಗಗಳು ತಪ್ಪಲ್ಲ. ಆದರೆ ಹೊಸತೊಂದು ಯೋಚನೆಯನ್ನು ರಂಗದಲ್ಲಿ ಪ್ರಯೋಗಿಸುವ ಮುನ್ನ ಅದು ಯಕ್ಷಗಾನಕ್ಕೆ ಹೊಂದುತ್ತದೆಯೇ ಎಂದು ಯೋಚಿಸಿ ನಿರ್ಧರಿಸುವುದು ಮುಖ್ಯವಾಗುತ್ತದೆ. ಅದಿಲ್ಲದಿದ್ದರೆ ಆ ಪ್ರಯೋಗವೂ ಒಂದೆರಡು ಪ್ರಯತ್ನಗಳಲ್ಲಿ ಮುಗ್ಗರಿಸಿ ಕೇವಲ ಪ್ರಯೋಗವಾಗಿಯೇ ಉಳಿದುಬಿಡುತ್ತದೆ. ಈ ವಿಷಯವನ್ನು ನಾನು ಬಹಳಷ್ಟು ಬಾರಿ ಯೋಚಿಸುತ್ತಿರುತ್ತೇನೆ.

ಭಾಗವತನು ರಂಗನಿರ್ದೇಶನಕಾರನೂ ಆಗಿರುವುದರಿಂದ ಪ್ರದರ್ಶನಗಳಲ್ಲಿ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಅಷ್ಟೇ ಒತ್ತಡವೂ ಇರುತ್ತದೆ. ಇದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವುದು ಈಗೀಗ ಅಭ್ಯಾಸವಾಗಿಬಿಟ್ಟಿದೆ. ಒತ್ತಡಗಳ ಜೊತೆಗೆ ಬದುಕುವುದೂ ಒಂದು ಕಲೆ. ನಮ್ಮಂತಹಾ ಕಲಾವಿದರಿಗೆ ನಿದ್ರೆಗೆಡುವುದರ ಜೊತೆಯಲ್ಲಿ ಕೆಲವೊಮ್ಮೆ ಇದೂ ಒಂದು ಪರೀಕ್ಷೆಯಾಗಿ ಪರಿಣಮಿಸುತ್ತದೆ.

ನಮ್ಮಂತಹ ಕಲಾವಿದರಿಗೆ ಇದು ಬಲು ಕಷ್ಟ. ಪ್ರದರ್ಶನಗಳನ್ನೂ ಗೆಲ್ಲಿಸಬೇಕು. ಬಾಕ್ಸ್ ಆಫಿಸ್ ದೃಷ್ಟಿಯಿಂದ ಜನಪ್ರಿಯತೆ ಹೆಚ್ಚಿ ಆಟಗಳ ಸಂಖ್ಯೆಯೂ ಹೆಚ್ಚಾಗಬೇಕು. ಅದು ಮೇಳದ ಯಜಮಾನರ ನಿರೀಕ್ಷೆ. ಕೆಲವೊಮ್ಮೆ ಸಂಪ್ರದಾಯವನ್ನು ಮುರಿದು ನಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಪದ್ಯ ಹೇಳಬೇಕು. ಅದು ಕಲಾವಿದರ ಅಪೇಕ್ಷೆ.

ಪದ್ಯದ ಭಾವ, ರಾಗ, ತಾಳ ಮತ್ತು ಮಟ್ಟು ಮುಖ್ಯವಲ್ಲ. ಕಲಾವಿದರಿಗೆ, ವೇಷಧಾರಿಗೆ ಕುಣಿತಕ್ಕೆ ಅನುಕೂಲವಾಗುವಂತೆ ಪದ್ಯ ಹೇಳಬೇಕು. ಇಲ್ಲದಿದ್ದರೆ ಆ ಭಾಗವತರಿಗೆ ಏನೂ ಗೊತ್ತಿಲ್ಲ ಎಂಬ ಹೇಳಿಕೆಗಳು ಹರಿದಾಡಿ ಅದು ಮೇಳದ ಯಜಮಾನರ ಕಿವಿಗೂ ತಲುಪಿ ಮುಂದಿನ ತಿರುಗಾಟದಲ್ಲಿ ಭಾಗವತನ ಸ್ಥಾನವನ್ನು ಇನ್ನೊಬ್ಬ ಅಲಂಕರಿಸಿರುತ್ತಾನೆ.  ಹಾಗೆ ಬಂದ ಹೊಸ ಭಾಗವತನಿಗೆ ಎಲ್ಲರಿಗೂ ಬೇಕಾದಂತೆ ಪದ್ಯ ಹೇಳುವ ಕಲೆ ಸಿದ್ಧಿಸಿರುತ್ತದೆ.

ವೇಷಧಾರಿಗೆ ಬೇಕಾದಂತೆ ಪದ್ಯ ಹೇಳದವನು ಈ ಕಾಲದಲ್ಲಿ ಯಶಸ್ವಿ ಭಾಗವತನಾಗಲಾರ. ಆದುದರಿಂದ ಕೆಲವೊಮ್ಮೆ ಮನಸ್ಸಿಗೆ ಕಿರಿಕಿರಿಯಾದರೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಜಾಣ್ಮೆಯನ್ನು ನಾನೂ ಅನುಸರಿಸಿದ್ದು ಹೌದು. ಹೊಟ್ಟೆ ಕೇಳಬೇಕಲ್ಲ. ನನಗೆ ಈ ಭಾಗವತಿಕೆಯನ್ನು ಬಿಟ್ಟು ಬೇರೆ ಏನೂ ಕೆಲಸ ಗೊತ್ತಿಲ್ಲ. ನನ್ನ ಸಂಸಾರದ ಹೊಟ್ಟೆ ಇದರಲ್ಲೇ ತುಂಬಬೇಕು. ಹೊಟ್ಟೆಗೆ ಕಲ್ಲು ಬೀಳುವ ಪ್ರಸಂಗ ಬಾರದಂತೆ ಒಮ್ಮೊಮ್ಮೆ ಜಾಗ್ರತೆ ವಹಿಸಬೇಕಾಗುತ್ತದೆ.  

ನನ್ನ ಆತ್ಮಶಕ್ಷಿಗೆ ವಿರುದ್ಧವಾದ ರೀತಿಯಲ್ಲಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಲ್ಲಿ ಒಮ್ಮೊಮ್ಮೆ ನಾನೂ ಸಿಲುಕಿದ್ದೇನೆ. ಇಲ್ಲವೆಂದು ವೃಥಾ ಸುಳ್ಳು ಹೇಳಲಾರೆ. ಆದರದು ಅನಿವಾರ್ಯವಾಗಿತ್ತು. ನನಗೆ ಮಾತ್ರವಲ್ಲ. ಹಿಮ್ಮೇಳದ ಎಲ್ಲಾ ಕಲಾವಿದರೂ ಕೆಲವೊಮ್ಮೆ ತಮ್ಮತನವನ್ನು ಬಿಡಬೇಕಾಗುತ್ತದೆ.

ಇನ್ನು ಕಲಾವಿದರು, ವೇಷಧಾರಿಗಳು ಕೂಡಾ ಹಾಗೆಯೇ ಪೂರ್ಣ ಸ್ವತಂತ್ರರಲ್ಲ. ಅವರಿಗೂ ಹಾಗೆ ಅಭಿನಯಿಸಬೇಕು, ಈ ರೀತಿಯ ಚಪ್ಪಾಳೆ ಬೀಳುವ ಸಂಭಾಷಣೆಗಳನ್ನು ಹೇಳಬೇಕೆಂಬ ಒತ್ತಡವಿರುತ್ತದೆ. ಎಲ್ಲರೂ ಅಷ್ಟೇ. ನಮ್ಮ ಕಲಾವಿದರ ಜೀವನವೇ ಹಾಗೆ. ಜನ ಮೆಚ್ಚಬೇಕು. ನಮ್ಮ ಮೇಳ ಜನಪ್ರಿಯ ಆಗದಿದ್ದರೆ ಆ ಸ್ಥಾನಕ್ಕೆ ಇನ್ನೊಂದು ಮೇಳ ಬರುತ್ತದೆ.

ಆದುದರಿಂದ ನಾವೆಲ್ಲಾ ಆ ಸೂತ್ರಧಾರ ಆಡಿಸುವ ಬೊಂಬೆಗಳು. ಕಲಾವಿದರಿಗೂ ಜೀವನವಿರುತ್ತದೆ. ಕಲಾವಿದರಿಗೂ ಸಂಸಾರ, ಕಷ್ಟಸುಖಗಳಿರುತ್ತವೆ. ನಮಗೂ ಎಲ್ಲರಂತೆಯೇ ಮೃದು ಮನಸೂ ಇರುತ್ತದೆ. ಎಲ್ಲ ರಂಗಗಳಲ್ಲಿರುವಂತೆ ಇಲ್ಲಿಯೂ ಸ್ಪರ್ಧೆ ಇದೆ. ಮೇಳಗಳ ನಡುವೆ ಸ್ಪರ್ಧೆ, ಭಾಗವತರ ನಡುವೆ ಸ್ಪರ್ಧೆ, ಹಿಮ್ಮೇಳ ವಾದಕರ ನಡುವೆ ಸ್ಪರ್ಧೆ, ವೇಷಧಾರಿಗಳ ನಡುವೆ ಸ್ಪರ್ಧೆ ರಂಗಸ್ಥಳದಲ್ಲಿ ನಡೆಯುತ್ತಲೇ ಇರುತ್ತದೆ. ಅದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಜ . ಅದಕ್ಕೆ ಕಲಾಕ್ಷೇತ್ರವೂ ಹೊರತಲ್ಲ. (ಮುಂದಿನ ಸಂಚಿಕೆಯಲ್ಲಿ ಮುಂದುವರಿಯುವುದು)

(ಈ ಕಥಾವಸ್ತು ಕೇವಲ ಕಾಲ್ಪನಿಕ. ಯಾರಿಗಾದರೂ, ಯಾವುದಕ್ಕಾದರೂ ಹೋಲಿಕೆಗಳು ಕಂಡುಬಂದಲ್ಲಿ ಅದು ಕಾಕತಾಳೀಯ ಮಾತ್ರ) 

ಯಕ್ಷಗಾನದಲ್ಲಿ ಅಪ್ಪ, ಮಗ, ಮೊಮ್ಮಗ – ವಂಶವಾಹಿನಿಯಲ್ಲಿ ಕಲಾಪ್ರಪಂಚ 

ಭಾಗ – 1

ಕಲೆಯ ಸೆಳೆತ ಮತ್ತು ರಂಗಪ್ರದರ್ಶನದ ಉತ್ಸಾಹ ಅದಮ್ಯವಾದದ್ದು. ಅದೇನೋ ಚುಂಬಕಶಕ್ತಿ ಅದರೊಳಗೆ ಅಡಗಿದೆ. ಯಾವುದಾದರೂ ಕಲಾಪ್ರದರ್ಶನವನ್ನೋ ಅಥವಾ ಭಾರತೀಯ ಸಂಗೀತದ ವಿವಿಧ ಪ್ರಾಕಾರಗಳನ್ನೋ ಗಮನಿಸಿದಾಗ ಅಥವಾ ಅದನ್ನು ಕೂಲಂಕುಷವಾಗಿ ಅಭ್ಯಸಿಸಲು ತೊಡಗಿದಾಗ ಹಲವಾರು ಸೋಜಿಗಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ.

ಯಾವುದೇ ಒಂದು ರಂಗಕಲೆಯು ಅದರ ಉಗಮಸ್ಥಾನದಲ್ಲಿ ಪರಿಪೂರ್ಣತೆಯನ್ನು ಪಡೆದಿರುವುದಿಲ್ಲ. ನದಿಯ ಉಗಮಸ್ಥಾನದಲ್ಲಿ ಅದು ಹೇಗೆ ಕೇವಲ ಸಣ್ಣ ನೀರಿನ ಒರತೆಯಾಗಿರುತ್ತದೆಯೋ ಹಾಗೆ. ಆಮೇಲೆ ಒರತೆಗಳು, ಝರಿಗಳು ಕವಲುಗಳು ಬಂದು ಸೇರುತ್ತಾ ಮುಂದಕ್ಕೆ ಪರಿಪೂರ್ಣ ನದಿಯಾಗಿ ಮೈದುಂಬಿ ಹರಿಯುತ್ತದೆ.

ಕಲೆಯೊಂದು ಉಗಮವಾದಾಗ ಅಥವಾ ರೂಪುಗೊಂಡಾಗ ಇದ್ದ ಸ್ಥಿತಿಯಲ್ಲಿಯೇ ಸದಾಕಾಲ ಇರಬೇಕೆಂದು ಬಯಸುವುದು ಮೂರ್ಖತನ. ಮಾನವರು ಕೂಡಾ ಅನಾಗರಿಕ ಪ್ರಪಂಚದಿಂದ ನಾಗರಿಕತನದ ಸುಂದರ ಜಗತ್ತಿನಲ್ಲಿ ಜೀವಿಸುತ್ತಿಲ್ಲವೇ? ಕಲೆಯೊಂದು ಬೆಳವಣಿಗೆಯಾಗುವ ಹಂತದಲ್ಲಿ ಅದರ ಬೆಳವಣಿಗೆಗೆ ಸಹಕಾರಿಯಾಗಿ ಸೇವೆ ಸಲ್ಲಿಸಿದ ಹಲವಾರು ಕೈಗಳಿರುತ್ತವೆ.

ಒಂದೇ ಕುಟುಂಬದ ಹಲವಾರು ಮಂದಿ ಕಲಾವಿದರಾಗಿ ಪ್ರದರ್ಶನಗಳನ್ನು ನೀಡಿ ಪ್ರಸಿದ್ಧರಾದುದನ್ನು ಕಾಣಬಹುದು. ಹಾಗೆಯೇ ಕಲಾಭ್ಯಾಸ ಎಂಬುದು ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಮುಂದುವರಿದ ಸಾಕಷ್ಟು ಉದಾಹರಣೆಗಳಿವೆ. ಕುಟುಂಬದ ಎಲ್ಲ ಸದಸ್ಯರು ಕಲಾವಿದರಾಗಿ ಕಲೆಯಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡ ನಿದರ್ಶನಗಳೂ ಹೇರಳವಾಗಿವೆ. 

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಕಥಕ್, ಮಣಿಪುರಿ, ಪಕ್ಕವಾದ್ಯಗಳಾದ ತಬಲಾ, ಮೃದಂಗ, ವಯೊಲಿನ್, ಘಟಂ, ಹಾಡುಗಾರಿಕೆ ಮೊದಲಾದ  ರಂಗಕ್ರಿಯೆಗಳಲ್ಲಿ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ತಾದಾತ್ಮ್ಯತೆಯಿಂದ ತೊಡಗಿಸಿಕೊಂಡ ನಿದರ್ಶನಗಳು ಹೇರಳವಾಗಿ ಕಾಣಸಿಗತ್ತವೆ. 

ಆದರೆ ಸದ್ಯಕ್ಕೆ ಉಳಿದೆಲ್ಲಾ ಕಲೆಗಳನ್ನು ಬದಿಗಿರಿಸಿ ಯಕ್ಷಗಾನದತ್ತ ಬರೋಣ. ಯಕ್ಷಗಾನ ಎಂದ ಕೂಡಲೇ ತಿಟ್ಟುಗಳ ವಿಭಾಗಿಸುವಿಕೆ ಎಂಬುದು ಸಹಜವಾಗಿ ಕೇಳಿಬರುವ ಧ್ವನಿ. ಉಭಯ ತಿಟ್ಟುಗಳಲ್ಲಿಯೂ ಅಥವಾ ವಿಮರ್ಶಕರು ಗುರುತಿಸುವ ಮತ್ತೆರಡು ತಿಟ್ಟುಗಳನ್ನೂ ಸೇರಿಸಿ ಹೇಳುವುದಿದ್ದರೂ ನಮಗೆ ಯಕ್ಷಗಾನ ಕಲಾವಿದರ ಕೆಲವೊಂದು ವಂಶಗಳು ಕಾಣಸಿಗುತ್ತವೆ. ಅಂತಹಾ ಒಂದಕ್ಕಿಂತ ಹೆಚ್ಚು ಕಲಾವಿದರು ಇರುವ ಮನೆತನವನ್ನು ಗುರುತಿಸುವ ಅಥವಾ ಹೆಸರಿಸುವ ಒಂದು ಸಣ್ಣ ಪ್ರಯತ್ನ ಇದು. ಹೆಚ್ಚಿನ ವಿವರಣೆಗಳಿಲ್ಲದೆ ಕೇವಲ ಉಲ್ಲೇಖ ಮಾತ್ರ ಇಲ್ಲಿರುತ್ತದೆ.

ಎಲ್ಲಿಂದ ಆರಂಭಿಸುವುದು? ಇವರನ್ನು ಹೇಳಿದರೆ ಇವರಿಗಿಂತಲೂ ಮೊದಲು ಅವರು ಇರಲಿಲ್ಲವೇ ಎಂಬ ಪ್ರಶ್ನೆಗಳನ್ನು ಆಚೆಗಿಟ್ಟು ನೋಡಿದಾಗ ಸಹಜವಾಗಿಯೇ ಕೆರೆಮನೆ ಕುಟುಂಬದ ಹೆಸರನ್ನು ಉಲ್ಲೇಖಿಸಲೇ ಬೇಕು. ಕೆರೆಮನೆ ಶಿವರಾಮ ಹೆಗಡೆಯವರು ಸ್ವಾತಂತ್ರ್ಯಪೂರ್ವದಲ್ಲಿಯೇ ಯಕ್ಷಗಾನದಲ್ಲಿ ಸಾಕಷ್ಟು ವ್ಯವಸಾಯವನ್ನು ಮಾಡಿದವರು.

ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಅಕಾಲ ಮೃತ್ಯುವಶರಾಗಿದ್ದ ಕೆರೆಮನೆ ಗಜಾನನ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಶಿವರಾಮ ಹೆಗಡೆ ಕೆರೆಮನೆ ಮತ್ತು ಕೆರೆಮನೆ ಶ್ರೀಧರ ಹೆಗಡೆ ಹೀಗೆ ಕಲಾವಿದರ ಪಟ್ಟಿಯೇ ಕೆರೆಮನೆ ಕುಟುಂಬದಲ್ಲಿದೆ. ಅದೂ ಅಲ್ಲದೆ ಕೆರೆಮನೆ ಕುಟುಂಬಕ್ಕೆ ಸಂಬಂಧಿಸಿ ಗುಣವಂತೆಯ ‘ಶ್ರೀಮಯ ಕಲಾಕೇಂದ್ರ ಕೆರೆಮನೆ’, ಇಡಗುಂಜಿ ಮೇಳ ಎಂದು ಪ್ರಸಿದ್ಧವಾಗಿದ್ದ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ’, ಮೊದಲಾದುವುಗೆಲ್ಲಾ ಕೆರೆಮನೆ ಕುಟುಂಬದ ಕೊಡುಗೆಗಳು.  (ಮುಂದುವರಿಯುವುದು)

ಜಮೈಕಾಕ್ಕೆ ಭಾರತದ COVID-19 ಲಸಿಕೆ ಉಡುಗೊರೆ – ಮೋದಿಗೆ ಕೃತಜ್ಞತೆ ವ್ಯಕ್ತಪಡಿಸಿದ ಕ್ರಿಸ್ ಗೇಲ್

ಜಮೈಕಾಕ್ಕೆ ಭಾರತವು  COVID-19 ಲಸಿಕೆ ಉಡುಗೊರೆ ನೀಡಿದೆ. ಈ ಸಂಬಂಧ ಮೋದಿಗೆ ವೆಸ್ಟ್ ಇಂಡೀಸಿನ ಖ್ಯಾತ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
 

ಇಂಡೀಸ್ ಕ್ರಿಕೆಟಿಗ ಮತ್ತು ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅವರು  ಜಮೈಕಾಗೆ COVID-19 ಲಸಿಕೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಕ್ರವಾರ ಕೃತಜ್ಞತೆ ಸಲ್ಲಿಸಿದರು.  ಮಾರ್ಚ್ 11 ರಂದು ಕೆರಿಬಿಯನ್ ಪ್ರದೇಶಕ್ಕೆ ಭಾರತದಿಂದ 20,000 ಡೋಸ್ ಕರೋನವೈರಸ್ ಲಸಿಕೆಗಳು ತಲುಪಿತು, 

ಜಮೈಕಾದ ಭಾರತ ಹೈಕಮಿಷನ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕ್ರಿಸ್ ಗೇಲ್ ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೆರಿಬಿಯನ್ ಪ್ರದೇಶಕ್ಕೆ ಲಸಿಕೆಗಳ ಮೂಲಕ ಸಹಾಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. 
 

ಈ ಹಿಂದೆ, ಸರ್ ವಿವಿಯನ್ ರಿಚರ್ಡ್ಸ್ ಸೇರಿದಂತೆ ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಲಸಿಕೆಗಳನ್ನು ನೀಡುವ ಮೆಗಾ ಉಪಕ್ರಮದ ಮೂಲಕ ಕೆರಿಬಿಯನ್ ಪ್ರದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸರ್ ರಿಚರ್ಡ್ಸ್ ಆಂಟಿಗುವಾ ಮತ್ತು ಬಾರ್ಬುಡಾದ ಜನರ ಪರವಾಗಿ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳ ಅದ್ಭುತ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಮೇಳಗಳ ಇಂದಿನ (19.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಹೆದ್ದಾರಿಪುರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ =  = ಶೇಡಗುರಿ ಶಂಭೂರು ಬಂಟ್ವಾಳ 

ಕಟೀಲು ಎರಡನೇ ಮೇಳ ==  ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನ 

ಕಟೀಲು ಮೂರನೇ ಮೇಳ= ತಿರುವಾಲೆ ಇರಾ 

ಕಟೀಲು ನಾಲ್ಕನೇ ಮೇಳ  == ಕುತ್ತೆತ್ತೂರು ಜಂತಬೆಟ್ಟು ದೇವಸ್ಥಾನದ ವಠಾರ 

ಕಟೀಲು ಐದನೇ ಮೇಳ ==   ಕಟೀಲು ಕ್ಷೇತ್ರ ಶ್ರೀ ಸರಸ್ವತಿ ಸದನ

ಕಟೀಲು ಆರನೇ ಮೇಳ == ‘ ಕೊಳಕೆಬೈಲು ಕತ್ತಲ್ ಸಾರ್, ಪಡುಪೆರಾರ 

ಮಂದಾರ್ತಿ ಒಂದನೇ ಮೇಳ  == ಸಾಲ್ಮರ ತೆಂಕಬೆಟ್ಟು ಉಪ್ಪೂರು 

ಮಂದಾರ್ತಿ ಎರಡನೇ ಮೇಳ   ==  ಅರನಲ್ಲಿ ಸಿರಿಗೆರೆ 

ಮಂದಾರ್ತಿ ಮೂರನೇ ಮೇಳ  ==   ಹೊನ್ನಾರಿ ಗಿಳಿಯಾರು ಕೋಟ 

ಮಂದಾರ್ತಿ ನಾಲ್ಕನೇ ಮೇಳ   ==  ಹುಂಚಿಕೊಪ್ಪ ಚೆಂಗಾರು ಕೆಂದಾಳಬೈಲು 

ಮಂದಾರ್ತಿ    ಐದನೇ ಮೇಳ  ==  ತ್ರಿಣಿವೆ ಬೆಣಕಿ ನಾಗರಕೊಡಿಗೆ 

ಶ್ರೀ ಹನುಮಗಿರಿ ಮೇಳ  ==  ಹೊಸನಗರ ಜೆ.ಸಿ.ಎಂ ರೋಡ್ ಆವರಣ – ಶ್ರೀರಾಮ ಕಾರುಣ್ಯ  (ರಾತ್ರಿ 7ರಿಂದ)

ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಸೀತಾನದಿ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ದುರ್ಗಾದೇವಿ ದೇವಸ್ಥಾನ ದೇವಿಕಾನ, ತಾಳಮಕ್ಕಿ ಮಂಕಿ – ಕಾರ್ತವೀರ್ಯಾರ್ಜುನ, ಶಿವಪಂಚಾಕ್ಷರಿ 

ಶ್ರೀ ದೇಂತಡ್ಕ ಮೇಳ == ಶಾರದಾ ನಗರ ಸಜಿಪಮುನ್ನೂರು – ಕಾರ್ಣಿಕದ ಸ್ವಾಮಿ ಕೊರಗಜ್ಜ (ಸಂಜೆ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಟಿಹೊಳೆ, ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಕ್ತೋಟ ಗಾಣ್ತಿಬೆಟ್ಟು ಉಳ್ಳೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಹುಂಚದಕಟ್ಟೆ ತೀರ್ಥಹಳ್ಳಿ 

ಶ್ರೀ ಪಾವಂಜೆ ಮೇಳ  ==  ಕೆಮ್ಮಾಯಿ ಪ್ರಭಾಕರ ಪ್ರಭು, ಪುತ್ತೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಸ್ವಾಮಿ ವಿವೇಕಾನಂದ ಶಾಲಾ ಆವರಣ, ಸೊರಬ – ಚಂದ್ರಾವಳಿ, ಕೀಚಕ  

ಕಮಲಶಿಲೆ ಮೇಳ ‘ಎ‘ = ಹೊಸಳ್ಳಿ 

ಕಮಲಶಿಲೆ ಮೇಳ ‘ಬಿ‘ == ಸಂಪೇಕಟ್ಟೆ 

ಶ್ರೀ ಬಪ್ಪನಾಡು ಮೇಳ == ಬೆಳ್ಳಿಬೆಟ್ಟು – ಬಂಗಾರ್ ಬಾಲೆ(ತುಳು, ರಾತ್ರಿ 7ರಿಂದ)

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಾಂಡವರಕಲ್ಲು ಕರ್ಲ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಬಳಿ – ಮುಕುಂದ ಮುರಾರಿ 

ಶ್ರೀ ಅಮೃತೇಶ್ವರೀ ಮೇಳ == ಗಣಪುಮನೆ ಹಂದಟ್ಟು  

ಶ್ರೀ ಸೌಕೂರು ಮೇಳ ==  ಮುಳ್ಳುಗುಡ್ಡೆ – ಮೋಹ ಪಲ್ಲಕ್ಕಿ 

ಶ್ರೀ ಹಾಲಾಡಿ ಮೇಳ == ಕನ್ಕಿಬೈಲೂರು ಮಠದ ಹಳ್ಳಿ – ನಾಗಮಂಡಲ 

ಶ್ರೀ ಬೆಂಕಿನಾಥೇಶ್ವರ ಮೇಳ  ==  ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಕಬ್ಬಿನಾಲೆ ಕೊಂಕಣರಬೆಟ್ಟು ಶ್ರೀ ಬ್ರಹ್ಮನಾಗ ಕಾಡ್ಯ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ನಂತರ ಮತ್ತಿಮನೆ – ಸರ್ಪಶಪಥ 

ಶ್ರೀ ಹಿರಿಯಡಕ ಮೇಳ == ಕಟೀಲು ಮಲ್ಲಿಗೆ ಅಂಗಡಿ ನಂದಿನಿಕಟ್ಟೆ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಸಾಸ್ತಾನ ಗಣೇಶ್ ಪ್ರಸಾದ್ ಹೋಟೆಲ್ ಎದುರು

ಶ್ರೀ ಸಿಗಂದೂರು ಮೇಳ == ಹರಡಸೆ ಶ್ರೀ ಲಕ್ಷ್ಮೀನರಸಿಂಹ ಆಂಜನೇಯ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಜಟ್ಟಿಗೇಶ್ವರ ದೇವಸ್ಥಾನ ಗುಣವಂತೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಶ್ರೀ ಕ್ಷೇತ್ರ ಅಲಸೆ  

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==   ಕ್ಯಾದಗೆರೆ 

ಶ್ರೀ ಮೇಗರವಳ್ಳಿ ಮೇಳ == ನಾಲೂರು ಇಳಿಮನೆ – ನೂತನ ಪ್ರಸಂಗ 

ರಾಮಾಯಣ ಧಾರಾವಾಹಿಯ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ (Arun Govil Joins BJP)

ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಇನ್ನೇನು ಕೆಲವೇ ದಿನಗಳು ಉಳಿದಿವೆ. 1987 ರ ಜನಪ್ರಿಯ ದೂರದರ್ಶನ ಕಾರ್ಯಕ್ರಮ ರಾಮಾಯಣದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದ ನಟ ಅರುಣ್ ಗೋವಿಲ್ ಅವರು ಬಿಜೆಪಿಗೆ ಸೇರಿದ್ದಾರೆ.

ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ, ಆದರೆ ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದಾರೆ. ಮಾರ್ಚ್ 27 ರಿಂದ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಬಲಪಂಥೀಯ ಮತದಾರರನ್ನು ಸೆಳೆಯುವ ಗುರಿಯನ್ನು ಹೊಂದಿದ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ.

ರಾಮಾಯಣದ ಹೊರತಾಗಿ, 63 ವರ್ಷದ ಶ್ರೀ ಗೋವಿಲ್ ಹಲವಾರು ಹಿಂದಿ, ಭೋಜ್‌ಪುರಿ, ಒಡಿಯಾ ಮತ್ತು ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪೋಷಕ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ. ಆದರೂ, ಅವರು ಹೆಚ್ಚಾಗಿ ಪೌರಾಣಿಕ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ವಿಶೇಷವೆಂದರೆ, 1980 ರ ದಶಕದಲ್ಲಿ ಅವರ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಶ್ರೀ ಗೋವಿಲ್ ಅವರು ಕಾಂಗ್ರೆಸ್ ಅನ್ನು ಬೆಂಬಲಿಸಿದರು. ರಾವಣ (ಅರವಿಂದ ತ್ರಿವೇದಿ) ಮತ್ತು ಸೀತಾ (ದೀಪಿಕಾ ಚಿಖಲಿಯಾ) ಪಾತ್ರದಲ್ಲಿ ನಟಿಸಿದ ಅದೇ ಸರಣಿಯ ನಟರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇಬ್ಬರೂ ಸಂಸದರಾಗಿದ್ದರು.

ಪುರುಲಿಯಾದಲ್ಲಿ ಮೋದಿ ಭಾಷಣ – ಭಯೋತ್ಪಾದಕರಿಗೆ ಬೆಂಬಲ ನೀಡಿದ ಮಮತಾ ವಿರುದ್ಧ ವಾಗ್ದಾಳಿ 

ಪುರುಲಿಯಾದಲ್ಲಿ ನಡೆದ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರ ಕಡೆಗೆ ಬೆಂಬಲ ನೀಡಿದ್ದಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಚುನಾವಣಾ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಾತನಾಡಿದರು.

ತಮ್ಮ ರಾಲಿಯಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮಯವು ಮುಗಿಯುತ್ತಿದೆ ಎಂದು ತಿಳಿದಿದೆ ಮತ್ತು ಪ್ರತಿಯೊಬ್ಬರೂ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದ ಪ್ರಧಾನಿ ಮೋದಿ, ಪುಲ್ವಾಮಾ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಟಿಎಂಸಿ ಮುಖ್ಯಸ್ಥರು ಭಯೋತ್ಪಾದಕರ ಪರವಾಗಿ ಮಾತನಾಡಿದ್ದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.  

ಬಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಆರಿಫ್ ಖಾನ್ ಅವರಿಗೆ ನೀಡಲಾದ ಅಪರಾಧ ಮತ್ತು ಮರಣದಂಡನೆ ಶಿಕ್ಷೆಯನ್ನು ಪ್ರಸ್ತಾಪಿಸಿದ ಪಿಎಂ ಮೋದಿ, “ಈ ನಿರ್ಧಾರವು ಹಲವಾರು ಹೊಸ ಪ್ರಶ್ನೆಗಳಿಗೆ ಬೆಳಕನ್ನು ತಂದಿದೆ. ಬಟ್ಲಾ ಹೌಸ್ ಎನ್‌ಕೌಂಟರ್ ಸಮಯದಲ್ಲಿ ಇನ್ಸ್‌ಪೆಕ್ಟರ್ ಮೋಹನ್ ಚಂದ್ರ ಶರ್ಮಾ ಅವರನ್ನು ಗುಂಡು ಹಾರಿಸಿದಾಗ, ಭಯೋತ್ಪಾದಕರೊಂದಿಗೆ  ಎನ್ಕೌಂಟರ್ ಅನ್ನು ಪ್ರಶ್ನಿಸುವವರಲ್ಲಿ ದೀದಿ ಕೂಡಾ ಸೇರಿದ್ದರು” ಎಂದು ಹೇಳಿದರು.


  ಮಮತಾ ಬ್ಯಾನರ್ಜಿ ಅವರ ‘ಖೇಲಾ ಹೋಬ್’ ಘೋಷಣೆಯನ್ನು ಪ್ರಶ್ನಿಸಿದ ಪಿಎಂ ಮೋದಿ ಅವರು ಪಶ್ಚಿಮ ಬಂಗಾಳದ ಮತದಾನದ ರಾಜ್ಯದಲ್ಲಿ ಉದ್ಯೋಗ, ಅಭಿವೃದ್ಧಿ ಮತ್ತು ಶಿಕ್ಷಣದ ಭರವಸೆ ನೀಡಿದರು. “ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ಚಕ್ರಿ (ಉದ್ಯೋಗ) ಹೋಬ್. ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ವಿಕಾಸ್ ಹೋಬ್. ದೀದಿ ಬೋಲೆ ಖೇಲಾ ಹೋಬ್, ಬಿಜೆಪಿ ಬೋಲೆ ಶಿಕ್ಷಾ ಹೋಬ್. ಖೇಲಾ ಶೆಶ್ ಹೋಬ್, ವಿಕಾಸ್ ಆರಾಂಬ್ ಹೋಬ್” ಎಂದು ಅವರು ಹೇಳಿದರು.