Friday, March 13, 2026
Home Blog Page 322

ಮೇಳಗಳ ತಿರುಗಾಟಕ್ಕೆ ತಾತ್ಕಾಲಿಕ ನಿಲುಗಡೆ? ಇಂದಿನ (21.04.2021) ಯಕ್ಷಗಾನ ಪ್ರದರ್ಶನಗಳ ವಿವರ (ಕೊನೆಯ ಕ್ಷಣದ ಪ್ರದರ್ಶನದ ಬದಲಾವಣೆ/ರದ್ದತಿಯನ್ನು ಹೊರತುಪಡಿಸಿ)

ಕೋವಿಡ್ ಸಂಬಂಧಿತ ಸರಕಾರದ ಕಟ್ಟುನಿಟ್ಟಿನ ಕ್ರಮಗಳ ಪರಿಣಾಮದಿಂದ ಕೆಲವು ಯಕ್ಷಗಾನ ಮೇಳಗಳು ತಮ್ಮ ತಿರುಗಾಟವನ್ನು ತಾತ್ಕಾಲಿಕವಾಗಿ ಅಂದರೆ ಮೇ 4ರ ವರೆಗೆ ಸ್ಥಗಿತಗೊಳಿಸಿವೆ. ಇನ್ನುಳಿದ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. 

ವಿ. ಸೂ: ಯಾವುದೇ ಕ್ಷಣದಲ್ಲಿ ಕೆಳಗಿನ ಯಕ್ಷಗಾನ ಪ್ರದರ್ಶನಗಳು ರದ್ದಾಗುವ ಸಾಧ್ಯತೆಯಿರುವುದರಿಂದ ಕಲಾಭಿಮಾನಿಗಳು ವಿಚಾರಣೆಯ ನಂತರವೇ ಪ್ರದರ್ಶನಕ್ಕೆ ತೆರಳುವುದು ಸೂಕ್ತ 

ಶ್ರೀ ಧರ್ಮಸ್ಥಳ ಮೇಳ == 11ನೇ ಉಳ್ಳೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಮೇಳಗಳು ತಮ್ಮ ಪ್ರದರ್ಶನದ ಸಮಯವನ್ನು ಇಂದು ಮಧ್ಯಾಹ್ನ ಘಂಟೆ 2ರಿಂದ ರಾತ್ರಿ ಘಂಟೆ 8ರ ವರೆಗೆ ಬದಲಾಯಿಸಿವೆ. ನಾಳೆಯಿಂದ ತಮ್ಮ ಪ್ರದರ್ಶನಗಳನ್ನು ಮೇ 4ರ ತನಕ  ರದ್ದುಪಡಿಸಿವೆ. 

ಕಟೀಲು ಒಂದನೇ ಮೇಳ == ಕಣಿಯೂರು ಬೆಳ್ತಂಗಡಿ 

ಕಟೀಲು ಎರಡನೇ ಮೇಳ == ಶ್ರೀ ಆದಿ ಜನಾರ್ದನ ದೇವಸ್ಥಾನದ ವಠಾರ ಶಿಮಂತೂರು 

ಕಟೀಲು ಮೂರನೇ ಮೇಳ== ‘ಪಂಚದುರ್ಗಾ’ ಪಡುಕೊಣಾಜೆ ವಯಾ ಮೂಡುಬಿದ್ರಿ 

ಕಟೀಲು ನಾಲ್ಕನೇ ಮೇಳ  == ಫರಂಗಿಪೇಟೆ ಸೇವಾಂಜಲಿಯ ವಠಾರದಲ್ಲಿ 

ಕಟೀಲು ಐದನೇ ಮೇಳ ==   ‘ಶ್ರೀಕಾಳಿಕಾ’ ಕೊಡಿಪಾಡಿ, ಮಾಧವನಗರ ಚೇಳಾಯರು 

ಕಟೀಲು ಆರನೇ ಮೇಳ == ‘ವ್ಯಾಸ ಕೃಷ್ಣ ನಿಲಯ’ ಬನ್ನಡ್ಕ ಬೆಳುವಾಯಿ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ದುರ್ಗಾನುಗ್ರಹ ಹೊಸಮನೆ ವಕ್ವಾಡಿ 

ಮಂದಾರ್ತಿ ಎರಡನೇ ಮೇಳ   == ಜಾಜಿಬೆಟ್ಟು ಹಾರ್ದಳ್ಳಿ ಮಂಡಳ್ಳಿ ಜನ್ಯಾಡಿ 

ಮಂದಾರ್ತಿ ಮೂರನೇ ಮೇಳ  == ಕೋಡಿಮನೆ ಕಾಳಾವರ ಸಳ್ವಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಕನ್ನಾರು ಹಳುವಳ್ಳಿ ಕರ್ಜೆ 

ಮಂದಾರ್ತಿ ಐದನೇ ಮೇಳ  == ಪವಿತ್ರ ನಿಲಯ ಕಾವುಡಿ ಬಾರ್ಕೂರು 

ಶ್ರೀ ಹನುಮಗಿರಿ ಮೇಳ  ==  ಮೇಳವು ತಮ್ಮ ಪ್ರದರ್ಶನಗಳನ್ನು ಮೇ ೪ರ ತನಕ  ರದ್ದುಪಡಿಸಿದೆ. 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ  ರಾಮ ಮಂದಿರ ಪಡುಕೋಣೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೆರ್ಜಾಡಿ ದೊಡ್ಮನೆ ಆರ್ಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ನಾಗರತ್ನ ನಿಲಯ ಕೋಣಾಲ್ ಪಂಚಮಕ್ಕಿ ರಾಗಿಹಕ್ಲು 

ಶ್ರೀ ಪಾವಂಜೆ ಮೇಳ  ==   ಮಾಹಿತಿಯ ಪ್ರಕಾರ ಮೇಳವು ತಮ್ಮ ಪ್ರದರ್ಶನಗಳನ್ನು ಮೇ ೪ರ ತನಕ  ರದ್ದುಪಡಿಸಿದೆ.

ಕಮಲಶಿಲೆ ಮೇಳ ‘ಎ‘ == ಬಾಳ್ಕಟ್ಟು – ಕೂಡಾಟ 

ಕಮಲಶಿಲೆ ಮೇಳ ‘ಬಿ‘ == ಬಾಳ್ಕಟ್ಟು – ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ == ಹಳವಳ್ಳಿ ಕೋಟೇಶ್ವರ 

ಶ್ರೀ ಸೌಕೂರು ಮೇಳ ==  ಗೋಪಾಡಿ ಪಡುಚಾವಡಿಬೆಟ್ಟು – ಕರ್ಜೆ ಶ್ರೀ ಮಹಾಲಿಂಗೇಶ್ವರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಸಿದ್ದಕಟ್ಟೆ ಕರ್ಪೆ ರಾಮಾಂಜನೇಯ ಭಜನಾ ಮಂದಿರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಬ್ರಹ್ಮಾವರ ವಾರಂಬಳ್ಳಿ ಇಂದಿರಾನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ==  ಹಟ್ಟಿಕುದ್ರು ಸುಲ್ಕನ್ ಬೆಟ್ಟು – ನೂತನ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ನೆಲ್ಲಿಗುಡ್ಡೆ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಈಶ್ವರ ದೇವಸ್ಥಾನ ಹೊನೆಮಾವು ಹೆಬ್ಬುರುಳಿ ಸಂಪೇಕಟ್ಟೆ 

ಶ್ರೀ ಸಿಗಂದೂರು ಮೇಳ == ನಾಗರಹಳ್ಳಿ ಶಾಲಾ ವಠಾರ 

ಶ್ರೀ ನೀಲಾವರ ಮೇಳ  == ಹಾಲಾಡಿ ತಟ್ಟುವಟ್ಟು – ದೈವ ಮಂಟಪ 

ಶ್ರೀ ಮೇಗರವಳ್ಳಿ ಮೇಳ == ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಹುಯ್ಯಾರು – ನೂತನ ಪ್ರಸಂಗ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಹೊಸಂಗಡಿ ಕಡಂಬಾರ್ ಬೆಜ್ಜ – ರಂಗಸ್ಥಳ 

ಶ್ರೀ ಸುಂಕದಕಟ್ಟೆ ಮೇಳ  == ಪೊಳಲಿ ಪುಂಚಮೆ – ಬೊಳ್ಳಿಗಿಂಡೆ 

ಮೇಳಗಳ ಇಂದಿನ (20.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (20.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕರ್ಕುಂಜೆ ನೇರಳಕಟ್ಟೆ ಬಿಜ್ರಿ ಮನೆ ವಠಾರ – ತ್ರಿಪುರ ಮಥನ

ಮಂದಾರ್ತಿ ಒಂದನೇ ಮೇಳ  == ತೆಂಕಬೈಲು ಶಿರಿಯಾರ 

ಮಂದಾರ್ತಿ ಎರಡನೇ ಮೇಳ   == ಶ್ಯಾನುಭಾಗರ ಬೆಟ್ಟು ಯದಾಡಿ ಮತ್ಯಾಡಿ 

ಮಂದಾರ್ತಿ ಮೂರನೇ ಮೇಳ  == ಆಚಾರ್ ಬೆಟ್ಟು ಕಾಕ್ತೋಟ 11ನೇ ಉಳ್ಳೂರು ಮೂಡುಮಠ 

ಮಂದಾರ್ತಿ ನಾಲ್ಕನೇ ಮೇಳ   == ಮಂಡಾಡಿ ರಟ್ಟಾಡಿ 

ಮಂದಾರ್ತಿ ಐದನೇ ಮೇಳ  == ಗಂಧಾಕ್ಷ ಕೊಮೆ ಮಧುವನ ಅಚ್ಲಾಡಿ 

ಶ್ರೀ ಹನುಮಗಿರಿ ಮೇಳ  == ಜಲ್ಲಿಗುಡ್ಡೆ ಬಜಾಲ್ ಕೈಡೇಲು (ಮಂಗಳೂರು) – ಶುಕ್ರನಂದನೆ (ರಾತ್ರಿ 9 ರಿಂದ)

ಶ್ರೀ ಪೆರ್ಡೂರು ಮೇಳ == ಕಟ್ಟೆತಾನ್ (ಯಡಾಡಿ ಮತ್ಯಾಡಿ) – ಕಾಳಿದಾಸ, ಮಾಯಾ ಮೃಗಾವತಿ (ಕಾಲಮಿತಿ ಸಂಜೆ 6ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊರಾಡಿಮನೆ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಐತ್ತೂರುಮನೆ ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಗುಡಾರಹಕ್ಲು ಗುಲ್ವಾಡಿ 

ಶ್ರೀ ಪಾವಂಜೆ ಮೇಳ  ==   ಶ್ರೀ ಕ್ಷೇತ್ರ ಣೇಶಪುರ ಕಾಟಿಪಳ್ಳ – ಇಂದ್ರಜಿತು, ಸುರಪಾರಿಜಾತ    (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಗೋರಿಜೆಡ್ಡು ಆಜ್ರಿ 

ಕಮಲಶಿಲೆ ಮೇಳ ‘ಬಿ‘ == ಶಾನ್ಕಟ್ಟು 

ಶ್ರೀ ಅಮೃತೇಶ್ವರೀ ಮೇಳ == ಕಾಸನಗುಂದು

ಶ್ರೀ ಸೌಕೂರು ಮೇಳ ==  ಪಡು ಮುಂಡು ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಪುಷ್ಪಚಂದನ 

ಶ್ರೀ ಬೆಂಕಿನಾಥೇಶ್ವರ ಮೇಳ  == ಸಿದ್ದಕಟ್ಟೆ ಹೆಣ್ಣೀರಪದವು ಶ್ರೀ ಭಗವತಿ ಮಂದಿರದ ಬಳಿ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಹೆರಿಕುದ್ರು ಶ್ರೀ ಕಾಮಲಿಂಗೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮೂಡುತಾರಿಬೇರು ಆಲೂರು ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ – ಶ್ರೀ ಮೂಡುತಾರಿಬೇರು ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಮರಕಡ ಕುಂಜತ್ತಬೈಲ್ ದೇವಿನಗರ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಮಂಜುಶ್ರೀ ನಿಲಯ, ಆಜ್ರಿ ರಾಮನಕೋಡ್ಲು 

ಶ್ರೀ ಸಿಗಂದೂರು ಮೇಳ == ಕಟ್ಟೆಹಕ್ಲು ಪಟ್ಲಮನೆ

ಶ್ರೀ ನೀಲಾವರ ಮೇಳ  == ದಾಸಬೆಟ್ಟು ಗುಲ್ವಾಡಿ – ದೈವ ಮಂಟಪ 

ಶ್ರೀ ಮೇಗರವಳ್ಳಿ ಮೇಳ == ಕೊಕ್ಕರ್ಣೆ – ಪೌರಾಣಿಕ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಶ್ರೀ ರಾಮಲಕ್ಶ್ಮಣ ಸಭಾಭವನ ಕನ್ಯಾನ ಕಟ್ ಬೆಳ್ತೂರು – ನೂತನ ಪ್ರಸಂಗ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡುಪೆರಾರ ಅಂಬಿಕಾನಗರ(ಬಜಪೆ) ಶ್ರೀ ಭಗವತಿ ಕೃಪಾ ಮನೆಯ ಮುಂಭಾಗ – ಕಂಚೀಲ್ದ ಪರಕೆ 

ಶ್ರೀ ದೇಂತಡ್ಕ ಮೇಳ == ಕಡೇಶಿವಾಲಯ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಮೇಳಗಳ ಇಂದಿನ (19.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಾಟಿಪಳ್ಳ ಗಣೇಶಪುರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಪುಷ್ಪಕುಟೀರ, ಜಾರಿಗೆ ಕಕ್ಕೆಪದವು ಬಂಟ್ವಾಳ  

ಕಟೀಲು ಎರಡನೇ ಮೇಳ == ‘ರಾಧಾಕೃಷ್ಣ ನಿವಾಸ’ ಕಿಲೆಂಜೂರು ನಡುಗೋಡು 

ಕಟೀಲು ಮೂರನೇ ಮೇಳ== ಕೈಲಾಸ್ ಮನೆ ಮಿತ್ತಮಾಣಿಲ ಕಲ್ಲಮುಂಡ್ಕೂರು 

ಕಟೀಲು ನಾಲ್ಕನೇ ಮೇಳ  == ದೆಪ್ಪುಣಿಗುಡ್ಡೆ, ಕುಂಜತ್ತಬೈಲು 

ಕಟೀಲು ಐದನೇ ಮೇಳ ==  ಗುಡ್ಡೆಬಳ್ಳಿಮನೆ ಕೆಂಜಾರು ಪೇಜಾವರ ಮಂಗಳೂರು 

ಕಟೀಲು ಆರನೇ ಮೇಳ == ಬೈಲುಮೂಡುಕರೆಗುತ್ತು ಕಂದಾವರ ಕಿನ್ನಿಕಂಬಳ ಭಜನಾ ಮಂದಿರದ ವಠಾರ 

ಮಂದಾರ್ತಿ ಒಂದನೇ ಮೇಳ  == ಚಾವಡಿಮನೆ, ಹೆನ್ನಿ ಕೊಕ್ಕರ್ಣೆ 

ಮಂದಾರ್ತಿ ಎರಡನೇ ಮೇಳ   == ಬಾರಾಳಿ ದೇವಸ್ಥಾನ 

ಮಂದಾರ್ತಿ ಮೂರನೇ ಮೇಳ  == ಶ್ರೀ ವನದುರ್ಗಾ, ಕಾಜ್ರಳ್ಳಿ ಸಾಯಿಬರಕಟ್ಟೆ 

ಮಂದಾರ್ತಿ ನಾಲ್ಕನೇ ಮೇಳ   == ಮಕ್ಕಿಮನೆ ಕೊರ್ಗಿ ಹೊಸಮಠ   

ಮಂದಾರ್ತಿ ಐದನೇ ಮೇಳ  == ಮಟ್ಟಿನಜೆಡ್ಡು ತಂತ್ರಾಡಿ ಮಂದಾರ್ತಿ 

ಶ್ರೀ ಹನುಮಗಿರಿ ಮೇಳ  == ಶ್ರೀ ಪಂಜುರ್ಲಿ ಮತ್ತು ಸಪರಿವಾರ ದೈವಸ್ಥಾನ ಪಡುಮನೆ ಸಂತೋಷನಗರ ಬುಗ್ರೀಕಡು (ಹೆಮ್ಮಾಡಿ) – ಶುಕ್ರನಂದನೆ (ರಾತ್ರಿ 9 ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗರಡಿಹಕ್ಲು ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬಾಳೆಕೊಡ್ಲು ಇಡೂರು  

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕುಳ್ಳಂಬಳ್ಳಿ ಅರೆಕಲ್ಲುಮನೆ ಕೆರಾಡಿ 

ಶ್ರೀ ಪಾವಂಜೆ ಮೇಳ  ==   ಬಡಗಬೆಳ್ಳೂರು – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಅಂಡೆಹೊಳೆ ಹಳ್ಳಿಹೊಳೆ 

ಕಮಲಶಿಲೆ ಮೇಳ ‘ಬಿ‘ == ಶ್ರೀ ವನದುರ್ಗಾ ದೇವಸ್ಥಾನ ಭಂಡಹಾರಿ ನೂಜಿ 

ಶ್ರೀ ಅಮೃತೇಶ್ವರೀ ಮೇಳ == ಮಣೂರು 

ಶ್ರೀ ಸೌಕೂರು ಮೇಳ == ಆನಗಳ್ಳಿ ದೂಪದಕಟ್ಟೆಮನೆ – ಚತುರ್ಜನ್ಮ ಮೋಕ್ಷ  

ಶ್ರೀ ಬೆಂಕಿನಾಥೇಶ್ವರ ಮೇಳ  == ವಾಮದಪದವು – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಕಳಿನಜೆಡ್ಡು ಕೋಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕ್ರೋಡಬೈಲೂರು ಭಟ್ರಮಕ್ಕಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕೋಟೆಬಾಗಿಲು – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಜಿಗಾರು ಅಂಪಾರು 

ಶ್ರೀ ಸಿಗಂದೂರು ಮೇಳ == ಕಟಾರಿಕೊಪ್ಪ ಮಾಸ್ತಿಯಮ್ಮ ಶನೀಶ್ವರ ದೇವಸ್ಥಾನ 

ಶ್ರೀ ಮೇಗರವಳ್ಳಿ ಮೇಳ ==ಸೋಮೇಶ್ವರ ಈಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ನಾಗಬ್ರಹ್ಮ ಜಟ್ಟಿಗೇಶ್ವರ ದೇವಸ್ಥಾನ, ನಿರೋಡಿ ಶಿರೂರು 

ಶ್ರೀ ಹಾಲಾಡಿ ಮೇಳ == ಮಣಿಕಲ್ ದೇವಸ್ಥಾನ – ವೀರ ಬರ್ಬರೀಕ (ಕಾಲಮಿತಿ ರಾತ್ರಿ 8ರಿಂದ)

ಶ್ರೀ ಬೋಳಂಬಳ್ಳಿ ಮೇಳ== ಕುಂಭಾಶಿ – ಪದ್ಮಾವತಿ, ಮೀನಾಕ್ಷಿ 

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಇನ್ನಿಲ್ಲ  (Karnataka Yakshagana Academy President M.A Hegade no more)

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶ್ರೀ ಮಹಾಬಲೇಶ್ವರ ಎ. ಹೆಗಡೆ (ಎಂ.ಎ. ಹೆಗಡೆ) ಇಂದು ತೀವ್ರ ಉಸಿರಾಟದ ತೊಂದರೆಯಿಂದ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದರು.

ಅಪ್ರತಿಮ ವಾಗ್ಮಿ, ತಾಳಮದ್ದಳೆ ಅರ್ಥಧಾರಿಯಾಗಿದ್ದ ಅವರು ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಉಪಾನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿ, ತಾಳಮದ್ದಳೆ ಅರ್ಥಧಾರಿ, ಸಂಶೋಧಕರಾಗಿ ಕೆಲಸ ಮಾಡಿದುದಲ್ಲದೆ ಪ್ರಸಂಗಕರ್ತರಾಗಿಯೂ ಪ್ರಸಿದ್ಧರಾಗಿದ್ದರು. ಅವರು ಧರ್ಮ ದುರಂತ, ವಿಜಯೀ ವಿಶ್ರುತ, ಸೀತಾ ವಿಯೋಗ, ರಾಜಾ ಕರಂಧಮ, ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. 

ಅವರು ಮೂಲತಃ ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ಪ್ರಸ್ತುತ ಶಿರಸಿ ತಾಲೂಕಿನ ದಂಟ್ಕಲ್ ನಲ್ಲಿ ನೆಲೆಸಿದ್ದರು. ಕಳೆದ ಅವಧಿಯಲ್ಲೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವರು ಈ ಬಾರಿಯೂ ಅಕಾಡೆಮಿಯ ಅಧ್ಯಕ್ಷರಾಗಿ ಮುಂದುವರಿದಿದ್ದರು. ತನ್ನ ಅವಧಿಯಲ್ಲಿ ಯಕ್ಷಗಾನಕ್ಕೋಸ್ಕರ ಹಲವಾರು ಉತ್ತಮ ಯೋಜನೆ ಕಾರ್ಯಗಳನ್ನು ಕೈಗೊಂಡ ಹೆಗ್ಗಳಿಕೆಗೆ ಹಾಗೂ ಸರ್ವರ ಪ್ರಸಂಶೆಗೆ ಪಾತ್ರರಾಗಿದ್ದ ಶ್ರೀಯುತ  ಎಂ.ಎ. ಹೆಗಡೆಯವರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. 

ಮೇಳಗಳ ಇಂದಿನ (18.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (18.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮುದ್ದೂರು ಶಾಲೆಯ ಬಳಿ – ತ್ರಿಪುರ ಮಥನ 

ಕಟೀಲು ಒಂದನೇ ಮೇಳ ==  ಕಿನಾರ, ಸವಣೂರು ಕೂರ್ನಡ್ಕ, ದರ್ಬೆ,ಪುತ್ತೂರು 

ಕಟೀಲು ಎರಡನೇ ಮೇಳ == ಹೊಸಲಕ್ಕೆ ಮನೆ ಮೂಡುಶೆಡ್ಡೆ 

ಕಟೀಲು ಮೂರನೇ ಮೇಳ== ನಂದನಪುರ, ಆಕಾಶಭವನ ಶ್ರೀ ನಾಗಬ್ರಹ್ಮರಕ್ತೇಶ್ವರಿ ದೇವಸ್ಥಾನದ ಬಳಿ ಕಾವೂರು 

ಕಟೀಲು ನಾಲ್ಕನೇ ಮೇಳ  == ಶ್ರೀ ಕ್ಷೇತ್ರ ಕಟೀಲು ‘ಸರಸ್ವತಿ ಸದನ’

ಕಟೀಲು ಐದನೇ ಮೇಳ ==  ಕಲ್ಲೋರಿ ಹೊಸಮನೆ, ಮಿಜಾರು, ಗರಡಿ ಹತ್ತಿರ 

ಕಟೀಲು ಆರನೇ ಮೇಳ == ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ವಯಾ ಕುಪ್ಪೆಪದವು 

ಮಂದಾರ್ತಿ ಒಂದನೇ ಮೇಳ  == ಪಠೇಲ್ ಹೌಸ್, ರಾಮಮಂದಿರ ಹತ್ತಿರ ಗಂಗೊಳ್ಳಿ 

ಮಂದಾರ್ತಿ ಎರಡನೇ ಮೇಳ   == ತುಂಗಾಕೃಪಾ, ಮೇಲ್ಮನೆ ಬೈಕಾಡಿ ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  == ಗಂಟಿಹೊಳೆ ಬಿಜೂರು ಬೈಂದೂರು – ಕೂಡಾಟ  

ಮಂದಾರ್ತಿ ನಾಲ್ಕನೇ ಮೇಳ   == ವಿನಾಯಕ ನಿಲಯ, ಎಳಹಕ್ಲು ರೋಡ್, ಮಧುವನ ಅಚ್ಲಾಡಿ   

ಮಂದಾರ್ತಿ ಐದನೇ ಮೇಳ  == ಸುವರ್ಣಪಾಲು ಎಡಮೊಗೆ ಹೊಸಂಗಡಿ  

ಶ್ರೀ ಹನುಮಗಿರಿ ಮೇಳ  == ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರ – ಶ್ರೀ ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ (ಸಂಜೆ 6 ರಿಂದ)

ಶ್ರೀ ಪೆರ್ಡೂರು ಮೇಳ == ಶ್ರೀ ನಾಗಬ್ರಹ್ಮಲಿಂಗೇಶ್ವರ ಸಹಪರಿವಾರ ದೇವಸ್ಥಾನ ಚಿತ್ತೇರಿ ಬೆಣಗಲ್ – ಕಾಳಿದಾಸ, ಗದಾಯುದ್ಧ, ಮೀನಾಕ್ಷಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗಂಟಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೂಡ್ಲು ಮೆಕ್ಕೆಮನೆ ಕನ್ಯಾನ   

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸಸಿಹಿತ್ಲು ಆಲೂರು 

ಶ್ರೀ ಪಾವಂಜೆ ಮೇಳ  ==   ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೂಡುಬಿದ್ರೆ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಆರ್ಗೋಡು 

ಕಮಲಶಿಲೆ ಮೇಳ ‘ಬಿ‘ == ಮಕ್ಕಿಮನೆ ಯಡ್ನಾಳಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ == ಹೋಟೆಲ್ ಶ್ರೀ ಗಣೇಶ್ ಆಗುಂಬೆ 

ಶ್ರೀ ಸೌಕೂರು ಮೇಳ == ದೇವಲ್ಕುಂದ ಬಟ್ಟೆ ವಿನಾಯಕ ದೇವಸ್ಥಾನ – ಪಂಚ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪೆರಾಡಿ ಶಾರದಾಂಬಾ ಭಜನಾ ಮಂಡಳಿ – ಸತ್ಯೊದ ಸ್ವಾಮಿ ಕೊರಗಜ್ಜ (ರಾತ್ರಿ 7ರಿಂದ)

ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ ಬಾದ್ಲು – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಕುತ್ಪಾಡಿ ಶ್ರೀ ಸತ್ಯಯುಗ ಯೋಗಾಶ್ರಮದ ವಠಾರ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್ (ಬಜಗೋಳಿ) – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಬೈಂದೂರು ಯಡ್ತರೆ ಕುಂಜಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಕಟ್ಟೆಮಕ್ಕಿ, ಶಂಕರನಾರಾಯಣ 

ಶ್ರೀ ಮೇಗರವಳ್ಳಿ ಮೇಳ ==ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಕುಲದೈವ ಪಂಜುರ್ಲಿ

ಶ್ರೀ ಹಟ್ಟಿಯಂಗಡಿ ಮೇಳ == ಬ್ರಹ್ಮ ದೇವಸ್ಥಾನ ಹಂದಕುಂದ, ಚಾಣಿಬೆಟ್ಟು – ನೂತನ ಪ್ರಸಂಗ (ರಾತ್ರಿ 8ರಿಂದ)

ಶ್ರೀ ಹಾಲಾಡಿ ಮೇಳ == ಶ್ರೀ ಅನಂತಪದ್ಮನಾಭ ಸಭಾಭವನ ಹಂಗಳೂರು ಇದರ ಸಮೀಪ – ನಾಗಮಂಡಲ 

ಶ್ರೀ ಬೋಳಂಬಳ್ಳಿ ಮೇಳ== ಜಡ್ಡು ವೀರಭದ್ರ ದೇವಾಲಯ ಸೂರಾಲು – ಭಾರತೀಪುರ ಬನಶಂಕರಿ (ರಾತ್ರಿ 8.30ರಿಂದ)

ಶ್ರೀ ಬಪ್ಪನಾಡು ಮೇಳ == ಜೈ ಹನುಮಾನ್ ಭಜನಾ ಮಂದಿರ, ಹನುಮಾನ್ ನಗರ ಕೊಡ್ಮಾನ್ ಪೊಡಿಕಲ ಕಂಬ್ಲ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೆರ್ಮುದೆ (ಬಜಪೆ) ಶಾರದಾ ನಗರ – ನಾಗ ತಂಬಿಲ 

ಶ್ರೀ ಸುಂಕದಕಟ್ಟೆ ಮೇಳ  == ತಾಂಗಾಡಿ ಪೇಜಾವರ – ಶ್ರೀ ದೇವಿ ಮಹಾತ್ಮೆ (ರಾತ್ರಿ 7ರಿಂದ)

ಮೇಳಗಳ ಇಂದಿನ (17.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (17.04.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡೂರು ಕಾಮ್ನಾಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  

ಕಟೀಲು ಒಂದನೇ ಮೇಳ == ಅರ್ಕುಳ ತುಪ್ಪೆಕಲ್ಲು 

ಕಟೀಲು ಎರಡನೇ ಮೇಳ == ‘ಶ್ರೀ ಲಲಿತ ನಿವಾಸ’ ಕೋಟೆಗಾರ್ ಲೇಔಟ್, ಕೋಟೆ ಬಾಗಿಲು, ಮಾರ್ಪಾಡಿ ಮೂಡುಬಿದ್ರಿ 

ಕಟೀಲು ಮೂರನೇ ಮೇಳ== ಮೇಲಿನಮೊಗರು ಅತ್ತಾವರ ಮಂಗಳೂರು 

ಕಟೀಲು ನಾಲ್ಕನೇ ಮೇಳ  == ‘ಆಶ್ರಯ’ ಕೊಲೆಕ್ಕಾಡಿ, ಕಿಲ್ಪಾಡಿ, ಭಂಡಸಾಲೆ ಮುಲ್ಕಿ 

ಕಟೀಲು ಐದನೇ ಮೇಳ ==  ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ, ದೈವಂಗಳಗುಡ್ಡೆ, ಆದ್ಯಪಾಡಿ   

ಕಟೀಲು ಆರನೇ ಮೇಳ == ‘ಶ್ರೀ ದೇವಿಕೃಪಾ’ ಕುಂಜತ್ತಬೈಲು ಕಾವೂರು 

ಮಂದಾರ್ತಿ ಒಂದನೇ ಮೇಳ  == ಹೊಳೆಬದಿಮನೆ ಹನೆಹಳ್ಳಿ ಬಾರ್ಕೂರು  

ಮಂದಾರ್ತಿ ಎರಡನೇ ಮೇಳ   == ಕಾವೇರಿ ಕಾಂಪ್ಲೆಕ್ಸ್, ಪೊಲೀಸ್ ಠಾಣೆಯ ಹತ್ತಿರ, ಗಿಳಿಯಾರು ಕೋಟ 

ಮಂದಾರ್ತಿ ಮೂರನೇ ಮೇಳ  == ಶ್ರೀ ದುರ್ಗಾನುಗ್ರಹ ಕಾವ್ರಾಡಿ ನೆಲ್ಲಿಕಟ್ಟೆ  

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ದುರ್ಗಾಪರಮೇಶ್ವರಿ ಸ್ಟೋನ್ ಕ್ರಷರ್, ತಾರಿಕಟ್ಟೆ ಬೆಳ್ವೆ  

ಮಂದಾರ್ತಿ ಐದನೇ ಮೇಳ  == ಕಾಸರಗೋಡು ಮನೆ, ಹಲ್ತೂರು ಉಳ್ತೂರು 

ಶ್ರೀ ಹನುಮಗಿರಿ ಮೇಳ  == ಪಾರಂಪಳ್ಳಿ ಮಧ್ಯಸ್ಥರ ತೋಟದ ವಠಾರ – ಸಮಗ್ರ ಭೀಮ (ರಾತ್ರಿ 9.30 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಮಾಣಿಕೊಳಲು – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಬೈರಂಪಳ್ಳಿ ಹನ್ನೆಡ್ಕ ನಮ್ಮ ಮನೆ ಶಬರಿ ನಿವಾಸದ ಎದುರು – ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==ಅಂಗಡಿಮನೆ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುದ್ರುಕೋಡು ನಡುಮನೆ ನಾವುಂದ  

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಂಡುವಾಣ ಮನೆ ಕಾಲ್ತೋಡು  

ಶ್ರೀ ಪಾವಂಜೆ ಮೇಳ  ==   ಯುವಕಮಂಡಲ ಪಡುಪದವು, ಕೃಷ್ಣಾಪುರ 9th ಬ್ಲಾಕ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ == ಸೂರ್ಗೋಳಿ ಬೆಳ್ವೆ

ಕಮಲಶಿಲೆ ಮೇಳ ‘ಬಿ‘ ==   ರೈತ ಸೇವಾ ಗ್ರಾಮೋದ್ಯೋಗ, ಹೆಬ್ರಿ 

ಶ್ರೀ ಅಮೃತೇಶ್ವರೀ ಮೇಳ == ಕೋಟತಟ್ಟು ಪಡುಕೆರೆ 

ಶ್ರೀ ಸೌಕೂರು ಮೇಳ == ಶ್ರೀ ತುಳಸಿ ನಿಲಯ ಗೋಯಾಡಿ ಮನೆ, ಗೋಪಾಡಿ – ಶ್ರೀ ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಪಡೀಲ್ ಬಿ.ಡಿ.ಆರ್ ನಗರ ದರ್ಬಾರ್ ರೈಲ್ವೆ ಗೇಟ್ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕೊಕ್ಕರ್ಣೆ ಪುತ್ತನ್ ಕಟ್ಟೆ ‘ಸೌರಭ’ ಮನೆ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಮ್ರಗೋಡು ಜಂಬಾಡಿ ಶ್ರೀ ಪಂಜುರ್ಲಿ ಪರಿವಾರ ದೈವಸ್ಥಾನ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಕುಂಟಾಡಿ ಶ್ರೀ ರಕ್ತೇಶ್ವರಿ ದೇವಸ್ಥಾನ – ಮಾಯೊದ ಅಜ್ಜೆ 

ಶ್ರೀ ಸಿಗಂದೂರು ಮೇಳ == ಬಿದ್ಕಲ್ ಕಟ್ಟೆ ಮಣಿಗೇರಿ ಚಿಕ್ಕಮ್ಮ ದೈವಸ್ಥಾನ ವಠಾರ  

ಶ್ರೀ ನೀಲಾವರ ಮೇಳ  == ಹೆಮ್ಮಾಡಿ ರಿಕ್ಷಾ ನಿಲ್ದಾಣ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಾರೇಕೊಪ್ಪ 

ಶ್ರೀ ಮೇಗರವಳ್ಳಿ ಮೇಳ ==ಅಜೆಕಾರ್ ದೆಪ್ಪುತೆ ಅಂಬೇಡ್ಕರ್ ಭವನ ಬಳಿ – ಕುಲದೈವ ಪಂಜುರ್ಲಿ (ಕಾಲಮಿತಿ) 

ಶ್ರೀ ಹಾಲಾಡಿ ಮೇಳ == ಕಲ್ಲಾಟೆ ಹಾಲಾಡಿ – ನೂತನ ಪ್ರಸಂಗ (ರಾತ್ರಿ 9ರಿಂದ)

ಶ್ರೀ ಬಪ್ಪನಾಡು ಮೇಳ == ಬಪ್ಪನಾಡು ಬಡಗಹಿತ್ಲು – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಡ್ಮಾಣ್ ಕಾಫಿಕಾಡು ಮೈದಾನ – ರಂಗಸ್ಥಳ 

ಶ್ರೀ ತಲಕಳ ಮೇಳ == ಬೊಂದೇಲ್ ಕೃಷ್ಣನಗರ – ಮಹಾಶಕ್ತಿ ಮಂತ್ರದೇವತೆ 

ಶ್ರೀ ದೇಂತಡ್ಕ ಮೇಳ == ಶ್ರೀ ನಾಗ ಬೊಬ್ಬರ್ಯ, ಹಾಯಿಗುಳಿ ಪರಿವಾರ ದೈವಸ್ಥಾನ ಕುಂದಾಪುರ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ? ಡಾ. ಸ್ನೇಹಾ ಏನು ಹೇಳುತ್ತಾರೆ? ಈ ವೀಡಿಯೋ ನೋಡಿ 

ಗೀಳು ರೋಗ – ಈ ಮಾನಸಿಕ ಸ್ಥಿತಿಯಿಂದ ಹೊರಬರುವುದು ಹೇಗೆ ಎನ್ನುವುದರ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವೀಡಿಯೋ ನೋಡಿ 

ಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್. ಕಲಾರಂಗ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು, ಕರ್ಣಾಟಕ ಬ್ಯಾಂಕ್‍ ಕಲಾರಂಗದ ಚಟುವಟಿಕೆಗಳಿಗೆ ತನ್ನಿಂದಾದ ನೆರವನ್ನು ನೀಡಲು ಸದಾ ಸಿದ್ಧವಿದೆ ಎಂದರು.

ಶಾಲಾ ಸಂಚಾಲಕರಾದ ಕೆ.ರಘುಪತಿ ಭಟ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ ಎಂ. ಗಂಗಾಧರ ರಾವ್ ವಂದಿಸಿದರು. ಕಲಾರಂಗದ ನಿಕಟ ಪೂರ್ವಅಧ್ಯಕ್ಷ ಕೆ. ಗಣೇಶ್‍ ರಾವ್ , ಪಿ. ಸದಾಶಿವ ರಾವ್, ಕೋಶಾಧಿಕಾರಿ ಕೆ ಮನೋಹರ್, ಕಲಾರಂಗದ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಹೆಚ್. ಎನ್. ಶೃಂಗೇಶ್ವರ, ಬಿ. ನಾರಾಯಣ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಜಿತ್‍ಕುಮಾರ್, ದಿನೇಶ್ ಪೂಜಾರಿ, ಅಶೋಕ್ ಎಂ, ಮತ್ತು ಮುಖ್ಯೋಪಾಧ್ಯಾಯಿನಿ ಶ್ರಿಮತಿ ಅನಸೂಯ ಉಪಸ್ಥಿತರಿದ್ದರು.

ಅದ್ವಿತೀಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ – ಸಂಕ್ಷಿಪ್ತ ಮಾಹಿತಿ (Sri Koppate Mutha Gowda)

ಹೆಸರು: ಶ್ರೀ ಕೊಪ್ಪಾಟೆ ಮುತ್ತ ಗೌಡ  

ಜನನ:  1945

ಜನನ ಸ್ಥಳ:   ಕುಂದಾಪುರ ತಾಲೂಕು ಬೈಂದೂರು ಸಮೀಪದ ಕಾಲ್ತೋಡು

ಬೆಳೆದ ಊರು: ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಾಟೆ     

ತಂದೆ: ಶ್ರೀ ಅಣ್ಣಪ್ಪ ಗೌಡ ತಾಯಿ: ಶ್ರೀಮತಿ ಅಕ್ಕಣಿ ಅಮ್ಮ 

ವಿದ್ಯಾಭ್ಯಾಸ: ಮೂರನೇ ತರಗತಿ 

ಯಕ್ಷಗಾನ ಗುರುಗಳು: ಗುರು ಶ್ರೀ ವೀರಭದ್ರ ನಾಯಕ್ 

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ಬಡಗುತಿಟ್ಟು ರಂಗಸ್ಥಳದಲ್ಲಿ ಒಟ್ಟು 49 ವರ್ಷಗಳ ಕಾಲ ವೇಷಧಾರಿಯಾಗಿ ಮೆರೆದಿದ್ದರು. 21 ವರ್ಷ ಮಾರಣಕಟ್ಟೆ ಮೇಳ, ಇನ್ನುಳಿದಂತೆ ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಕಳವಾಡಿ, ಮಂದಾರ್ತಿ ಮತ್ತು ಸೌಕೂರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವ. 

ತಾಳಮದ್ದಳೆ ಕೂಟಗಳಲ್ಲಿ: ಪ್ರಸಿದ್ಧ ವೇಷಧಾರಿಯಾಗಿದ್ದುದು ಮಾತ್ರವಲ್ಲದೆ ಅಪ್ರತಿಮ ವಾಕ್ಪಟುವಾಗಿದ್ದ ಇವರು ತಾಳಮದ್ದಳೆ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಕುಂದಾಪುರ ಪರಿಸರದಲ್ಲಿ ನಡೆಯುತ್ತಿದ್ದ ಹೆಚ್ಚಿನ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ನಿರ್ವಹಿಸಿದ ಪಾತ್ರಗಳು: ನಾಯಕ ಪ್ರತಿನಾಯಕ ಎರಡೂ ಪಾತ್ರಗಳಲ್ಲೂ ಮಿಂಚಿದರು. ಗದಾಯುದ್ಧದ ಕೌರವ ಮತ್ತು ಭೀಮ, ವಾಲೀ ವಧೆಯ ವಾಲಿ ಮತ್ತು ಸುಗ್ರೀವ, ಅಂಗದ ಸಂಧಾನದ ಅಂಗದ ಮತ್ತು ಪ್ರಹಸ್ತ, ಭೀಷ್ಮ ಮತ್ತು ಪರಶುರಾಮ, ರಾಮ ಮತ್ತು ರಾವಣ ಮೊದಲಾದ ಖಳ ಮತ್ತು ಸಾತ್ವಿಕ ಪಾತ್ರಗಳಲ್ಲೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದರು. ಅಲ್ಲದೆ ಅರ್ಜುನ, ಹನುಮಂತ, ಕೀಚಕ, ಶಲ್ಯ, ಅತಿಕಾಯ, ಇಂದ್ರಜಿತು, ವಿಭೀಷಣ, ಅಗ್ನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. 

ರಚಿಸಿದ ಪ್ರಸಂಗಗಳು: ಪುಷ್ಕಳ ಪುನರ್ಜನ್ಮ, ಮಾರಿಕಾಂಬಾ ಮಹಾತ್ಮೆ, ನಂದಿಕೇಶ್ವರ ಮಹಾತ್ಮೆ, ಮಿತ್ರದ್ರೋಹ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬ ಸನ್ಮಾನ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ, ಎಂ.ಎಂ.ಹೆಗಡೆ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳು. 

ನಿಧನ: 04.01.2020