Saturday, March 14, 2026
Home Blog Page 300

ಯಕ್ಷಭಾರತಿ ಏಳನೇ ವಾರ್ಷಿಕ ಸಂಭ್ರಮ ಸಮಾರೋಪ

ಕರಾವಳಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು  ಮುಖ್ಯ ಕಾರಣ  ಯಕ್ಷಗಾನ . ಯಾವುದೇ ಲಾಭದ ಅಪೇಕ್ಷೆಯಿಲ್ಲದೆ  ಕಲೆಯನ್ನು ಉಳಿಸಿ, ಬೆಳೆಸುವಲ್ಲಿ  ಸಮಾಜ ಮತ್ತು ಸಂಘಟನೆಗಳು  ಆಸಕ್ತಿ ಬೆಳೆಸಬೇಕು.  ಸಾಮಾಜಿಕ ಕಳಕಳಿ ಹೊಂದಿ  ಯಕ್ಷಗಾನ ಪ್ರದರ್ಶನದ ಜತೆಗೆ  ಹಿರಿಯ ಕಲಾವಿದರ ಸನ್ಮಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರೋತ್ಸಾಹ ನೀಡಿ ಯಕ್ಷಭಾರತಿ ಸಮಾಜದಲ್ಲಿ ಗುರುತಿಸಿಕೊಂಡಿದೆ . ಸಂಘಟನೆ ಉಜ್ವಲವಾಗಿ ಬೆಳೆದು  ಯಕ್ಷಗಾನ ಕಲಾಸೇವೆಯಲ್ಲಿ ಯಕ್ಷಭಾರತಿ   ಬಹುಕಾಲ  ಮೆರೆದು  ಸಾರ್ಥಕ್ಯಪಡೆಯಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು  ನುಡಿದರು.                     

ಅವರು  ನ. 2  ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ  ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಕನ್ಯಾಡಿಯ ಯಕ್ಷಭಾರತಿ (ರಿ) ಯ ಏಳನೇ ವಾರ್ಷಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.  ಉಜಿರೆ ಶ್ರೀ ಜನಾರ್ದನ ದೇವಸ್ಥಾನ  ಪರಿಸರದಲ್ಲಿ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ಆಶ್ರಯ , ಸಹಕಾರ ,ಪ್ರೋತ್ಸಾಹದಿಂದ  ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯುತ್ತಿರುವುದು  ಸ್ತುತ್ಯಾರ್ಹ.  ಹಿರಿಯ ಶ್ರೀಗಳೊಂದಿಗೆ   ಈ ಮೊದಲು ಆಗಮಿಸಿ , ಇಲ್ಲಿಯ ಅಭಿವೃದ್ಧಿ ಕಾರ್ಯ ಹಾಗು ಕಲಾಸೇವೆಯನ್ನು ಕಂಡು  ಆನಂದಿಸಿದ್ದೇನೆ .. ಎಂದು  ತಮ್ಮ ನೆನಪನ್ನು ಹಂಚಿಕೊಂಡರು .

ಮುಖ್ಯ ಅತಿಥಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ ಕಾರಂತ  ಆಧುನಿಕ ಒತ್ತಡ ,ಪಾಶ್ಚಾತ್ಯೀಕರಣದ ಒತ್ತಡ ,ಮೌಲ್ಯಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಸಂಗೀತ ,ನಾಟ್ಯ , ಮುಖವರ್ಣಿಕೆ , ಸಾಂಸ್ಕೃತಿಕ ಪ್ರಜ್ಞೆಯನ್ನು ಜನಮಾನಸಕ್ಕೆ ತಿಳಿಸಿ ಕಲಾಭಿಮಾನಿಗಳ ಮನಸ್ಸು ಅರಳಿಸುವ ಕೆಲಸ ಯಕ್ಷಗಾನದಿಂದ ನಡೆಯುತ್ತಿದೆ.  ಭಾಷಾ ಸ್ಪಷ್ಟತೆ ,ಪಾರಂಪರಿಕ ಕಲೆಯಾದ ಯಕ್ಷಗಾನ  ಎಳೆಯರ ಪ್ರತಿಭಾವಿಕಸನದಿಂದ  ಕಲೆ ,ಸಮಾನತೆ ,ಏಕತೆ ಹಾಗು ಸೃಜನಶೀಲತೆಯನ್ನು ಕಲಿಸಿಕೊಡುತ್ತದೆ. .  ಮಾನವೀಯ ಸಂಬಂಧ ಬೆಳೆಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿ  ಎಂದು ಶುಭಾಶಂಸನೆಗೈದರು.

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ  ಹಾಗು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ  ಉಜಿರೆ ಕ್ಷೇತ್ರ ಹಾಗು ಎಡನೀರು ಮಠ  ಯಕ್ಷಗಾನ ಕಲೆಗೆ ನೀಡುತ್ತಿರುವ ಕೊಡುಗೆ ಅನನ್ಯವಾದುದು .  ಶ್ರೀಗಳು ಪೀಠಾರೋಹಣ ಬಳಿಕ ಮೊದಲ ಬಾರಿಗೆ  ಉಜಿರೆ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು   ಸುಯೋಗ .  ಯಕ್ಷಭಾರತಿ ಕಲೆಗೆ ಪ್ರೋತ್ಸಾಹ ನೀಡಿ ಕಲಾವಿದರನ್ನು ಗೌರವಿಸುತ್ತಿರುವುದು  ಅಭಿನಂದನೀಯ ವೆಂದರು .

ಸನ್ಮಾನ,ವಿದ್ಯಾರ್ಥಿವೇತನ ವಿತರಣೆ:  ಇದೆ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಬಳ್ಳಮಂಜ ಸುಬ್ರಹ್ಮಣ್ಯ ಮತ್ತು ಹಿರಿಯ ಯಕ್ಷಗಾನ ಕಲಾವಿದ ಜನಾರ್ದನ ಆಚಾರ್ಯ ಕಲ್ಮಂಜ ಅವರನ್ನು ಶ್ರೀಗಳು  ಸಮ್ಮಾನಿಸಿ ಗೌರವಿಸಿದರು .ಧರ್ಮಸ್ಥಳ ಪ್ರಾ.ಕೃ .ಪ .ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ ಸಮ್ಮಾನಿತರನ್ನು ಅಭಿನಂದಿಸಿದರು. ಭವ್ಯ ಹೊಳ್ಳ ಮತ್ತು ಸಾಯಿಸುಮ ನಾವಡ ಸಂಮಾನಪತ್ರ ವಾಚಿಸಿದರು. . ಸಮ್ಮಾನಿತ  ಸುಬ್ರಹ್ಮಣ್ಯ ಬಳ್ಳಮಂಜ ಕೃತಜ್ಞತೆ ವ್ಯಕ್ತಪಡಿಸಿದರು .   

ವಿದ್ಯಾರ್ಥಿಗಳಾದ ರಮ್ಯಾ ಕಲ್ಮಂಜ ,ಎನ್ .ಎಸ್ .ನಿಶಾಂತ್ ಪಿಲ್ಯ .,ಕಿರಣ್ ನಾಯ್ಕ್ ಗೇರುಕಟ್ಟೆ ಮತ್ತು ಪ್ರೀತಿಕಾ ಬೆಳಾಲು ಅವರಿಗೆ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ವಿತರಿಸಲಾಯಿತು.   ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ  ಯಕ್ಷಭಾರತಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು .                               

ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ ,ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ,ಸಾಯಿಸುಮ ನಾವಡ ವಂದಿಸಿದರು.  ಹಿರಿಯ ಯಕ್ಷಗಾನ ಕಲಾವಿದರಿಂದ ಮಹೇಶ್ ಕನ್ಯಾಡಿ ಹಾಡುಗಾರಿಕೆಯಲ್ಲಿ “ಸಾಮ್ರಾಟ್  ನಹುಷೇನ್ದ್ರ ” ಪ್ರಸಂಗದ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು .        

ಉಜಿರೆ ಶ್ರೀ ಜನಾರ್ದನ ದೇವಸ್ತಾನಕ್ಕೆ  ಎಡನೀರು ಶ್ರೀ ಭೇಟಿ         ಉಜಿರೆ:  ಎಡನೀರು  ಮಠಕ್ಕೆ ಪೀಠಾರೋಹಣಗೊಂಡ  ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು   ಮೊದಲಬಾರಿಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ನ. 2 ರಂದು ರಾತ್ರಿ ಭೇಟಿ ನೀಡಿದಾಗ ಅವರನ್ನು  ಉಜಿರೆ ಶ್ರೀ ಜನಾರ್ದನ ಸ್ವಾಮಿ ಮಹಾದ್ವಾರದ ಬಳಿ  ಸಕಲ ಗೌರವ, ವಾದ್ಯ , ಪೂರ್ಣಕುಂಭ ಸಹಿತ ಭಕ್ತಿಪೂರ್ವಕವಾಗಿ ಸ್ವಾಗತಿಸಿ  ಬರಮಾಡಿಕೊಳ್ಳಲಾಯಿತು.   ದೇವಸ್ಥಾನದ ಪರವಾಗಿ  ಶರತ್ ಕೃಷ್ಣ ಪಡುವೆಟ್ನಾಯ  ಮಾಲಾರ್ಪಣೆಗೈದು ಸ್ವಾಗತಿಸಿದರು.  ತುಳು  ಶಿವಳ್ಳಿ ಸಮಾಜ ಬಾಂಧವರು ಉಪಸ್ಥಿತರಿದ್ದರು.    ಶ್ರೀಗಳವರು ಶ್ರೀ ಜನಾರ್ದನಸ್ವಾಮಿ ಹಾಗು ಪರಿವಾರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ,ಪ್ರಸಾದ ಸ್ವೀಕರಿಸಿದರು.       

                                                                               ದೇವಸ್ಥಾನದ ಪರವಾಗಿ  ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಶ್ರೀಗಳವರನ್ನು   ಮಾಲಿಕೆ, ಫಲ ಸಮರ್ಪಿಸಿ ಗೌರವಿಸಿದರು.   ಶ್ರೀಗಳವರು ಫಲ ಮಂತ್ರಾಕ್ಷತೆ ,ಶಾಲು ಹೊದಿಸಿ  ಆಶೀರ್ವದಿಸಿದರು.  ಶರತ್ ಕೃಷ್ಣ ಪಡುವೆಟ್ನಾಯ, ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ,ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ , ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು,    ಪರಾರಿ ವೆಂಕಟ್ರಮಣ ಹೆಬ್ಬಾರ್ ,  ಮುರಳಿಕೃಷ್ಣ ಆಚಾರ್ ,  ಗಿರೀಶ್ ಕುದ್ರೆತ್ತಾಯ , ಅರ್ಚಕ ಶ್ರೀನಿವಾಸ ಹೊಳ್ಳ ಮೊದಲಾದವರು  ಉಪಸ್ಥಿತರಿದ್ದರು.

ತೆಂಕಿನಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ – ಶ್ರೀ ಜನಾರ್ದನ ಉಪ್ಪುಂದ

ಲೋಕೋ ಭಿನ್ನರುಚಿಃ  ಎಂಬಂತೆ ಒಬ್ಬೊಬ್ಬರ ಅಭಿರುಚಿಯು ಒಂದೊಂದು ತೆರನಾಗಿರುತ್ತದೆ. ಯಕ್ಷಗಾನ ಪ್ರೇಕ್ಷಕರಲ್ಲೂ ಹಾಗೇ, ಕಲಾವಿದರಲ್ಲೂ ಹಾಗೇ. ಬಡಗಿನ ಪ್ರದರ್ಶನಗಳನ್ನೇ ಮೆಚ್ಚಿಕೊಳ್ಳುವ ಪ್ರೇಕ್ಷಕರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಬಡಗಿನ ಅನೇಕ ಪ್ರೇಕ್ಷಕರಿಗೆ ತೆಂಕಿನ ಆಟಗಳೆಂದರೆ ಪಂಚಪ್ರಾಣ. ಅದೇ ರೀತಿ ‘ನಾವು ತೆಂಕುತಿಟ್ಟಿನ ಕಲಾವಿದರಾಗಬೇಕೆಂದು ಬಡಗಿನವರೂ’, ‘ನಾವು ಬಡಗಿನ ಕಲಾವಿದರಾಗಬೇಕೆಂದು ತೆಂಕಿನವರೂ’ ಬಯಸುವುದನ್ನು ನಾವು ಗಮನಿಸಬಹುದು.

ಅದು ಅವರವರ ಅಭಿರುಚಿಗೆ, ಆಯ್ಕೆಗೆ ಬಿಟ್ಟ ವಿಚಾರ. ತೆಂಕು- ಬಡಗು ಎಂಬ ಭೇದ ನಮಗೇಕೆ. ಇವುಗಳೆರಡೂ ಯಕ್ಷಮಾತೆಯ ಉಭಯ ನೇತ್ರಗಳು. ಕಲಾಮಾತೆಗೆ ಕೊರತೆಯಾಗದಂತೆ ಎಚ್ಚರವಿರಬೇಕಾದುದು ಕಲಾವಿದರಿಗೂ ಪ್ರೇಕ್ಷಕರಿಗೂ ಕರ್ತವ್ಯ ಅಷ್ಟೆ. ಯಾವ ತಿಟ್ಟಿನ ಕಲಾವಿದನಾದರೇನು? ತಾನು ಯಕ್ಷಗಾನ ಕಲಾವಿದ, ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನದ ಒಂದು ಅಂಗವಾಗಿರುವೆ ಎಂದು ಸಂತೋಷದಿಂದ ಹೇಳಿಕೊಳ್ಳಬಹುದು.

ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಜನಿಸಿದರೂ ತೆಂಕು ತಿಟ್ಟು ಪ್ರದರ್ಶನಗಳತ್ತ ಆಕರ್ಷಿತರಾದವರು ಶ್ರೀ ಜನಾರ್ದನ ಅವರು. ಈಗ ತೆಂಕುತಿಟ್ಟಿನ ಉತ್ತಮ ಪುಂಡುವೇಷಧಾರಿಯಾಗಿ  ಮಿಂಚುತ್ತಿದ್ದಾರೆ. ಇವರು ಕಿರೀಟ ವೇಷಗಳನ್ನೂ ಮಾಡುತ್ತಾರೆ. ಕಸೆ ಸ್ತ್ರೀ ವೇಷಗಳನ್ನೂ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಯಾವ ವೇಷವನ್ನಾದರೂ ಮಾಡಬಲ್ಲ ಕಲಾವಿದರು. ತಂಡಕ್ಕೆ ಇವರು ಒಬ್ಬ  ಆಪದ್ಬಾಂಧವರು. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ಕಟೀಲು ಮೇಳದ ಪುಂಡುವೇಷಧಾರಿ ಶ್ರೀ ಜನಾರ್ದನ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ. ಶ್ರೀ ನಾರಾಯಣ ಡಿ.ಖಾರ್ವಿ ಮತ್ತಿ ಶ್ರೀಮತಿ ಕಮಲಾವತಿ ಎನ್. ಖಾರ್ವಿ ದಂಪತಿಗಳ ಪುತ್ರನಾಗಿ 1979ನೇ ಇಸವಿ ಅಕ್ಟೋಬರ್ 27ರಂದು ಜನನ. ಶ್ರೀ ನಾರಾಯಣ ಡಿ.ಖಾರ್ವಿ ಅವರ ಆರು ಮಕ್ಕಳಲ್ಲಿ ಇವರು ಕೊನೆಯವರು. (ಐದು ಗಂಡು, ಒಂದು ಹೆಣ್ಣು) ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಓದಿದ್ದರು.

ಎಳವೆಯಲ್ಲಿಯೇ ಯಕ್ಷಗಾನಾಸಕ್ತಿಯು ಇತ್ತು. ತೆಂಕು ತಿಟ್ಟಿನ ಪ್ರದರ್ಶನಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಆಟಗಳನ್ನು ನೋಡುತ್ತಿದ್ದರು. ಜತೆಗೆ ಬಡಗು ತಿಟ್ಟಿನ ಪ್ರದರ್ಶನಗಳನ್ನೂ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಕಲಾವಿದನಾಗುವುದಕ್ಕೆ ಜನಾರ್ದನ ಉಪ್ಪುಂದ ಅವರು ತೆಂಕುತಿಟ್ಟನ್ನು ಆಯ್ಕೆಮಾಡಿಕೊಂಡರು.

ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿಕೊಂಡರು. ಯಕ್ಷಗಾನ ಕ್ಷೇತ್ರದ ಹಿರಿಯ, ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರಿಂದ ನಾಟ್ಯಾಭ್ಯಾಸ. ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಪ್ರದರ್ಶನ ವೀರಮಣಿ ಕಾಳಗ ಪ್ರಸಂಗದ ಹನೂಮಂತನಾಗಿ ರಂಗಪ್ರವೇಶ. ಬಳಿಕ ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಹನೂಮಂತನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ಜನಾರ್ದನ ಉಪ್ಪುಂದ ಅವರು ತಿರುಗಾಟ ಆರಂಭಿಸಿದ್ದು ಕಟೀಲು ನಾಲ್ಕನೆಯ ಮೇಳದಲ್ಲಿ. ಕುಬಣೂರು ಶ್ರೀಧರ ರಾವ್ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿದ್ದರು. ಸದ್ರಿ ಮೇಳದಲ್ಲಿ 4 ವರ್ಷಗಳ ತಿರುಗಾಟ. ಮೊದಲ ಎರಡು ವರ್ಷ ಬಾಲಗೋಪಾಲನಾಗಿ. ಬಳಿಕ ಮುಖ್ಯ ಸ್ತ್ರೀ ವೇಷ, ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ತನಗೆ ಬಂದ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿದರು.

ಬಳಿಕ ಕಟೀಲು 1ನೇ ಮೇಳದಲ್ಲಿ ಕಲಾಸೇವೆ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆಯಡಿ. ಈ ಸಂದರ್ಭದಲ್ಲಿ ಹೆಚ್ಚಿನ ಎಲ್ಲಾ ಪುಂಡುವೇಷಗಳನ್ನೂ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದರು. ಪ್ರಸ್ತುತ ಮೂರು ವರ್ಷಗಳಿಂದ ಕಟೀಲು ನಾಲ್ಕನೆಯ ಮೇಳದಲ್ಲಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ತನ್ನ ಪಾಲಿಗೆ ಬಂದ ಪಾತ್ರಕ್ಕೆ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಬ್ರಹ್ಮ,ವಿಷ್ಣು,ಬಬ್ರುವಾಹನ, ಅಭಿಮನ್ಯು, ಚಂಡಮುಂಡರು, ಶ್ರೀಕೃಷ್ಣ, ಜಯಂತ, ಸುದರ್ಶನ,  ಪರಶುರಾಮ,ಭಂಡಾಸುರ, ದಂಭೋದ್ಭವ, ಹನೂಮಂತ, ಲಕ್ಷ್ಮಣ ಮೊದಲಾದುವು ಇವರಿಗೆ ಪ್ರಿಯವಾದ ಪಾತ್ರಗಳು. ಈ ಎಲ್ಲಾ ಪಾತ್ರಗಳಲ್ಲಿ ಅವರ ನಿರ್ವಹಣೆಯನ್ನು ಕಂಡಿರುವೆ.

ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಲ್ಲೂ ಶ್ರೀ ಜನಾರ್ದನ ಉಪ್ಪುಂದ ಅವರಿಗೆ ಒಳ್ಳೆಯ ಹೆಸರಿದೆ. ಸಹಕಲಾವಿದನಾಗಿ ಅವರ ಜತೆ ಅಭಿನಯಿಸುವ ಅವಕಾಶವೂ ಆಗಿದೆ. ಕಿರೀಟ ವೇಷಗಳನ್ನೂ ಮೇಳದಲ್ಲಿ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನೂ ಮಾಡಿದ್ದಿದೆ. ಒಂದನೇ ಮೇಳದಲ್ಲಿರುವಾಗ ಹೆಚ್ಚಿನ ದಿನವೂ ಎರಡೆರಡು ಪಾತ್ರಗಳನ್ನು ಮಾಡುತ್ತಿದ್ದರು. ಈಗಲೂ ಅನಿವಾರ್ಯವಾದರೆ ಎರಡೆರಡು ಪಾತ್ರಗಳನ್ನು ಮಾಡಿ ಸಹಕಾರಿಯಾಗುತ್ತಾರೆ. 

ಶ್ರೀ ಜನಾರ್ದನ ಉಪ್ಪುಂದ ಅವರು ಬಡಗು ತಿಟ್ಟಿನ ಪ್ರದರ್ಶನಗಳಲ್ಲೂ ವೇಷ ಮಾಡಿ ಅನುಭವ ಉಳ್ಳವರು. ಮಳೆಗಾಲದಲ್ಲಿ ಜೀವನ ನಿರ್ವಹಣೆಗಾಗಿ ಪೆಟ್ರೋಲ್ ಬಂಕ್ ಮತ್ತು ಹೊಟೇಲುಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ  ಮಂಗಳೂರು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಾಯಲದ ವತಿಯಿಂದ ನಡೆಸಲ್ಪಡುವ ಚಿಕ್ಕ ಮೇಳದಲ್ಲೂ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2009ರಲ್ಲಿ ವೀಣಾ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರೀ ಜನಾರ್ದನ ಉಪ್ಪುಂದ, ವೀಣಾ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಪ್ರಥಮ ಪುತ್ರ ಮಾಸ್ಟರ್ ಪ್ರಣವ್. 2ನೆಯ ತರಗತಿ. ದ್ವಿತೀಯ ಪುತ್ರ ಮಾಸ್ಟರ್ ಪವನನಿಗೆ ಐದು ವರ್ಷ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಜನಾರ್ದನ ಉಪ್ಪುಂದ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಆಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

World Cup Cricket Championship Winners List

Sl No.YEARCup WinnerScore of WinnerRunner-upScore of LooserFinal Result
11975West Indies291–8Australia274West Indies won by 17 runs
21979West Indies286–9England194West Indies won by 92 runs
31983India183West Indies140India won by 43 runs
41987Australia253–5England246–8Australia won by 7 runs
51992Pakistan249–6England227Pakistan won by 22 runs
61996Sri Lanka245–3Australia241Sri Lanka won by 7 wickets
71999Australia133–2Pakistan132Australia won by 8 wickets
82003Australia359–2India234Australia won by 125 runs
92007Australia281–4Sri Lanka215–8Australia won by 53 runs
102011India277–4Sri Lanka274–6India won by 6 wickets
112015Australia186–3New Zealand183Australia won by 7 wickets
122019England241New Zealand241–8Match tied both in first play & super over; England declared won on boundary count

ಭರವಸೆಯ ಕಿರೀಟ ವೇಷಧಾರಿ – ಶ್ರೀ ಜನಾರ್ದನ ಕೊಕ್ಕಡ

ಪ್ರತಿಯೊಂದು ಮನೆಯಲ್ಲೂ ಕಲಾವಿದರೂ ಕಲಾಸಕ್ತರೂ ಇದ್ದೇ ಇರುತ್ತಾರೆ. ನಾವೂ ಯಕ್ಷಗಾನ ಕಲೆಯ ಒಂದು ಅಂಗವಾಗಿದ್ದೇವೆ ಎಂದು ಸಂತೋಷಪಟ್ಟುಕೊಳ್ಳುತ್ತಾರೆ. ಕಲಾವಿದನಾಗಬೇಕೆಂಬ ಆಸೆ ಇದ್ದವರಿಗೆಲ್ಲಾ ಅದು ಎಟಕುವುದೂ ಇಲ್ಲ. ಎಳವೆಯಲ್ಲಿ ಕಲಾಸಕ್ತಿ ಇಲ್ಲದವರೂ ಯಕ್ಷಗಾನ ಕಲಾವಿದರಾಗಿ ಬೆಳೆದದ್ದೂ ಇದೆ. ಯಕ್ಷಾಗಸದಲ್ಲಿ ಮಿಂಚುತ್ತಿರುವ ಕಲಾತಾರೆಗಳು ಅನೇಕರು. ಅವರಲ್ಲಿ ಒಬ್ಬರನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಇದು.

ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕಿರೀಟ ವೇಷಧಾರಿಗಳಾಗಿ (ರಾಜಪಾತ್ರಗಳು) ಇಂದು ಹಲವಾರು ಕಲಾವಿದರು ಮಿಂಚುತ್ತಿದ್ದಾರೆ. ಅವರಲ್ಲಿ ಒಬ್ಬರು ಶ್ರೀ ಜನಾರ್ದನ ಕೊಕ್ಕಡ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಹಂತ ಹಂತವಾಗಿ ಮೇಲೇರಿದ ಇವರು ಇಂದು ಉತ್ತಮವಾಗಿ ಕಿರೀಟ ವೇಷಗಳಲ್ಲಿ ಮಿಂಚುತ್ತಿದ್ದಾರೆ. ರಂಗದ ನಡೆ, ಸಹಕಲಾವಿದರೊಂದಿಗೆ ಸಂಭಾಷಣೆ ಎಲ್ಲವೂ ಅತ್ಯುತ್ತಮವಾಗಿದೆ. ಒಳ್ಳೆಯ ನಾಟಕೀಯ ಪ್ರಜ್ಞೆ ಇರುವ ಕಲಾವಿದ. ಯಾವ ವೇಷವನ್ನೂ ಕೊರತೆಯಾಗದಂತೆ ನಿರ್ವಹಿಸಬಲ್ಲವರು. ಪಾತ್ರಕ್ಕೆ ಬೇಕಾದಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ದೇರಾಜೆ ಎಂಬ ಸ್ಥಳವು ಜನಾರ್ದನ ಕೊಕ್ಕಡ ಅವರ ಹುಟ್ಟೂರು. ಶ್ರೀ ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಸೇಸಮ್ಮ ದಂಪತಿಗಳ ಪುತ್ರನಾಗಿ 1982ನೇ ಇಸವಿ ಏಪ್ರಿಲ್ 16ರಂದು ಜನನ. ಶ್ರೀ ತಿಮ್ಮಪ್ಪ ಗೌಡರು ಕೃಷಿಕರು. ಬದುಕಿಗೆ ಅದುವೇ ಆಧಾರ. ಜನಾರ್ದನ ಅವರು ಓದಿದ್ದು ಎಸ್ ಎಸ್ ಎಲ್ ಸಿ ವರೆಗೆ. ಒಂದನೇ ತರಗತಿಯಿಂದ ಏಳರ ವರೆಗೆ ಪಟ್ಟೂರು ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕೊಕ್ಕಡ ಸರಕಾರಿ ಹೈಸ್ಕೂಲಿನಲ್ಲಿ. ಶಾಲಾ ಜೀವನದ ಬಳಿಕ ತಂದೆಗೆ ಕೃಷಿಕಾರ್ಯಗಳಲ್ಲಿ ನೆರವಾಗಿದ್ದರು.

ಜನಾರ್ದನ ಕೊಕ್ಕಡ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಬೇಕಾದಷ್ಟು ಅವಕಾಶಗಳು ಸಿಗುತ್ತಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಖ್ಯಾತ ಕಲಾವಿದ ಕೊಕ್ಕಡ ಶ್ರೀ ಪರಮೇಶ್ವರ ಆಚಾರ್ಯರಿಂದ ನಾಟ್ಯ ಅಭ್ಯಾಸ. ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನ. ದ್ರೋಣ ಪರ್ವ ಪ್ರಸಂಗದಲ್ಲಿ ರಂಗ ಪ್ರವೇಶ ಮಾಡಿದ್ದರು. 

ಜನಾರ್ದನ ಕೊಕ್ಕಡ ಅವರು ಮೇಳದ ತಿರುಗಾಟ ಆರಂಭಿಸಿದ್ದು 1999-2000ದಲ್ಲಿ. ಕಟೀಲು ಮೇಳದ ನಾಲ್ಕನೇ ತಂಡದಲ್ಲಿ ಬಾಲಗೋಪಾಲನಾಗಿ ತಿರುಗಾಟ ಆರಂಭ. ಎರಡು ತಿರುಗಾಟ ಮಾಡಿ ಮತ್ತೆ ಒಂದು ವರ್ಷ ಮನೆಯಲ್ಲಿದ್ದು ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದರು. ಮತ್ತೆ ನಾಲ್ಕನೇ ಮೇಳಕ್ಕೆ ಪುನರಾಗಮನ. ಪೂರ್ವರಂಗದಲ್ಲಿ ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀ ವೇಷ ಅಲ್ಲದೆ ಪ್ರಸಂಗದ ವೇಷಗಳನ್ನೂ ನಿರ್ವಹಿಸಿದ್ದರು. ಹಂತ ಹಂತವಾಗಿ ನಿರ್ವಹಿಸಿದ ಪಾತ್ರಗಳಲ್ಲಿ ಪಕ್ವರಾಗಿಯೇ ಮೇಲೇರಿದರು. ಎರಡನೇ ಪುಂಡುವೇಷಗಳನ್ನು ನಿರ್ವಹಿಸುವಷ್ಟು ಬೆಳೆದರು.

ಕುಶಲವರು, ಅಭಿಮನ್ಯು, ಭಾರ್ಗವ, ಶ್ರೀಕೃಷ್ಣ, ಷಣ್ಮುಖ, ಚಂಡಮುಂಡರು, ಮೊದಲಾದ ವೇಷಗಳನ್ನು ನಿರ್ವಹಿಸುತ್ತಾ ಕಿರೀಟ ವೇಷಧಾರಿಯಾಗಿ ಕಾಣಿಸಿಕೊಂಡರು. ನಾಲ್ಕನೇ ಮೇಳದಲ್ಲಿ ಕುಬಣೂರರ ಸಾರಥ್ಯ. ಉತ್ತಮ ಕಲಾವಿದರ ಒಡನಾಟ ಕಲಿಕೆಗೆ ಕಾರಣವಾಗಿತ್ತು. ಕಟೀಲು ಐದನೇ ಮೇಳ ಆರಂಭವಾದ ವರ್ಷ. ಜನಾರ್ದನ ಕೊಕ್ಕಡ ಅವರು ಮೂರನೇ ಮೇಳಕ್ಕೆ ಕಿರೀಟ ವೇಷಧಾರಿಯಾಗಿ ತೇರ್ಗಡೆಯಾದರು. ಶ್ರೀ ಗೋಪಾಲಕೃಷ್ಣ ಮಯ್ಯರ ಭಾಗವತಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಗಣೇಶ ಚಂದ್ರಮಂಡಲ, ಗಣೇಶ ಕನ್ನಡಿಕಟ್ಟೆ ಮೊದಲಾದ ಕಲಾವಿದರ ಒಡನಾಟವೂ ಸಿಕ್ಕಿತ್ತು.

ನಾಲ್ಕನೇ ಮತ್ತು ಮೂರನೇ ಮೇಳದಲ್ಲಿ ಮದ್ದಳೆಗಾರರಾದ ಶ್ರೀ ಮೋಹನ ಶೆಟ್ಟಿಗಾರರ ಒಡನಾಟವೂ ದೊರಕಿತ್ತು. ಹೆಚ್ಚಿನ ಎಲ್ಲಾ ಕಿರೀಟ ವೇಷಗಳನ್ನು ಮಾಡಿ ಅನುಭವವನ್ನು ಗಳಿಸಿಕೊಂಡರು. ಕಳೆದ ಮೂರು ವರ್ಷಗಳಿಂದ ಕಟೀಲು ನಾಲ್ಕನೇ ಮೇಳದಲ್ಲಿ ಕಿರೀಟ ವೇಷಧಾರಿಯಾಗಿ ಕಲಾಸೇವೆ ಮಾಡುತ್ತಿದ್ದಾರೆ. ಅವರ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ, ಕೌಂಡ್ಲಿಕ, ಕೌಶಿಕ, ರಕ್ತಬೀಜ, ಅರುಣಾಸುರ ಅಲ್ಲದೆ ಅನೇಕ ವೇಷಗಳನ್ನು ನೋಡಿದ್ದೇನೆ. ಅಲ್ಲದೆ ಸಹಕಲಾವಿದನಾಗಿ ನಾನು ರಂಗದಲ್ಲಿ ಕೊಕ್ಕಡ ಜನಾರ್ದನರಿಗೆ ಜತೆಯಾಗಿದ್ದೇನೆ. ಒಳ್ಳೆಯ ವೇಷಧಾರಿ. ಉತ್ತಮ ಪಾತ್ರನಿರ್ವಹಣೆ ಇವರದು. ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ನಾಯಕತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ತಂಡದಲ್ಲಿ ಅನೇಕ ಕಲಾಸೇವೆ ಮಾಡಿದ್ದಾರೆ. 

2018ರಲ್ಲಿ ಹರಿಣಾಕ್ಷಿ ಜತೆ ವಿವಾಹ. ಶ್ರೀ ಜನಾರ್ದನ, ಹರಿಣಾಕ್ಷಿ ದಂಪತಿಗಳಿಗೆ ಇಬ್ಬರು ಪುತ್ರರು. ಅವಳಿ ಮಕ್ಕಳು. ಮಾಸ್ಟರ್ ಮಿಥುನ್ ಮತ್ತು ಮಾಸ್ಟರ್ ಮಿಲನ್. ಇವರಿಗೆ ಮೂರು ವರ್ಷ ಪ್ರಾಯ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಜನಾರ್ದನ ಕೊಕ್ಕಡ ಅವರಿಗೆ ಸಕಲ ಭಾಗ್ಯಗಳೂ ಸಿದ್ಧಿಸಲಿ. ಕಲಾಸೇವೆಯು ನಿರಂತರವಾಗಿ ಅವರಿಂದ ನಡೆಯಲಿ. ಶ್ರೀದೇವರ ಅನುಗ್ರಹವು ಸದಾ ಇರಲಿ ಎಂಬ ಆಶಯಗಳು 

ಲೇಖಕ: ರವಿಶಂಕರ್ ವಳಕ್ಕುಂಜ 

ತಲಪಾಡಿ ಯಕ್ಷೋತ್ಸವ – 6-11-2021ನೇ ಶನಿವಾರ ರಾತ್ರಿ 7 ಗಂಟೆಯಿಂದ

6-11-2021ನೇ ಶನಿವಾರ ರಾತ್ರಿ 7 ಗಂಟೆಯಿಂದ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ 7 ನೇ ವರುಷದ
‘ತಲಪಾಡಿ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸುಮುಖ ಮಂಟಪ. ಗಂಗಾಪುರ ದೇವಿನಗರ ತಲಪಾಡಿ ಎಂಬಲ್ಲಿ ರಾತ್ರಿ 7 ಗಂಟೆಯಿಂದ ನಡೆಯಲಿರುವ  ಯಕ್ಷಗಾನ ಪ್ರದರ್ಶನದಲ್ಲಿ ‘ಕಿರಾತಾರ್ಜುನ’ ಮತ್ತು ‘ಕೃಷ್ಣಾರ್ಜುನ ಕಾಳಗ’ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. 

7 .ಗಂಟೆಯಿಂದ .10 ಗಂಟೆಯವರೆಗೆ

ಕಿರಾತಾರ್ಜುನ

ಹಿಮ್ಮೇಳ :

ಭಾಗವತರು …ರಾಮಕೃಷ್ಣ ಮಯ್ಯ ಸಿರಿಬಾಗಿಲು

ಚೆಂಡೆ.. .ಮುರಾರಿ ಕಡಂಬಳಿತ್ತಾಯ

ಮದ್ದಳೆ  …ಕೃಷ್ಣ ಪ್ರಕಾಶ್ ಉಳಿತ್ತಾಯ

ಚಕ್ರತಾಳ ..ರಾಜೇಂದ್ರ ಕೃಷ್ಣ

ಮುಮ್ಮೇಳ

ಅರ್ಜುನ… ಸುಬ್ರಾಯಹೊಳ್ಳ, ಕಾಸರಗೋಡು

ಬ್ರಾಹ್ಮಣರು.. ಬಂಟ್ವಾಳ ಜಯರಾಮ ಆಚಾರ್ಯ

ಕಪಟ ದೇವೇಂದ್ರ ..ತಾರನಾಥ ರೈ ಕುಂಬ್ರ

ಈಶ್ವರ…ತಾರಾನಾಥ ಬಲ್ಯಾಯ ವರ್ಕಾಡಿ

ಪಾರ್ವತಿ..ಪ್ರಸಾದ್ ಸವಣೂರು

ಶಬರ …ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್

ಶಬರಿ …ಅರುಣ್ ಕೋಟ್ಯಾನ್

ಶಬರ ಪಡೆ.. .ಶಿವರಾಜ್, ಬಜಕೂಡ್ಲು .
ಅಜಿತ್, ಪುತ್ತಿಗೆ.
ಅಕ್ಷಯ್ ಭಟ್, ಮೂಡುಬಿದ್ರೆ

ಮುದಿಯಪ್ಪಣ್ಣ ..ಬಾಲಕೃಷ್ಣ ಮಣಿಯಾಣಿ

ರಾತ್ರಿ 10 ಗಂಟೆಯಿಂದ

ಪ್ರಸಂಗ .ಕೃಷ್ಣಾರ್ಜುನ ಕಾಳಗ

ಹಿಮ್ಮೇಳ:

ಭಾಗವತರು..ಪುತ್ತಿಗೆ ರಘುರಾಮ ಹೊಳ್ಳರು

ಸತೀಶ್ ಶೆಟ್ಟಿ ,ಬೊಂದೇಲ್

ದೇವಿ ಪ್ರಸಾದ್ ಆಳ್ವ ,ತಲಪಾಡಿ

ಚೆಂಡೆ ..ದೇಲಂತಮಜಲು ಸುಬ್ರಹ್ಮಣ್ಯ ಭಟ್

ಮದ್ದಳೆ.. ಪ್ರಶಾಂತ್ ಶೆಟ್ಟಿ, ವಗೆನಾಡು ,

ಲವ ಕುಮಾರ್ ಐಲ

ಚಕ್ರತಾಳ ..ರಾಜೇಂದ್ರ ಕೃಷ್ಣ

ಮುಮ್ಮೇಳ :

ಗಯ ..ಚಂದ್ರಶೇಖರ, ಧರ್ಮಸ್ಥಳ

ಕೃಷ್ಣ. .1.ಜಯಪ್ರಕಾಶ್ ಶೆಟ್ಟಿ ಪೆರ್ಮುದೆ

ಕೃಷ್ಣ …2 ದಿನೇಶ್ ಶೆಟ್ಟಿ ಕಾವಳಕಟ್ಟೆ

ನಾರದ ..ಜಯರಾಮ ಆಚಾರ್ಯ, ಬಂಟ್ವಾಳ

ಅರ್ಜುನ 1. ಕೊಂಡದಕುಳಿ ರಾಮಚಂದ್ರ ಹೆಗ್ಡೆ

ಅರ್ಜುನ 2 . ಸುಣ್ಣಂಬಳ ವಿಶ್ವೇಶ್ವರಭಟ್

ಧರ್ಮರಾಯ …ತಾರನಾಥ ರೈ ಕುಂಬ್ರ

ಭೀಮ ..ಮಣೀಶ್ ಪಾಟಾಳಿ, ಎಡನೀರು

ನಕುಲ …ಪ್ರಕಾಶ್ ನಾಯಕ್, ನೀರ್ಚಾಲು

ಸಹದೇವ ..ಅಜಿತ್ ಪುತ್ತಿಗೆ

ಸುಭದ್ರೆ ..ನೀಲ್ಕೋಡು ಶಂಕರ ಹೆಗ್ಡೆ

ಅಭಿಮನ್ಯು ..ಲೋಕೇಶ್ ಮುಚ್ಚೂರು

ರುಕ್ಮಿಣಿ… ರಕ್ಷಿತ್ ಶೆಟ್ಟಿ ,ಪಡ್ರೆ

ಮಕರಂದ …ಜಯರಾಮ ಆಚಾರ್ಯ ,ಬಂಟ್ವಾಳ

ದಾರುಕ ..ಬಾಲಕೃಷ್ಣ ಮಣಿಯಾಣಿ

ಬಲರಾಮ ..ರಾಧಾಕೃಷ್ಣ ನಾವಡ, ಮಧೂರು

ಈಶ್ವರ ..ಪ್ರಸಾದ್ ,ಸವಣೂರು

ವಿಸೂ .
ಊಟ, ಲಘು ಉಪಹಾರ ಇದೆ.
ಸಭಾಕಾರ್ಯಕ್ರಮ ಇರುವುದಿಲ್ಲ.
ಕ್ಲಪ್ತ ಸಮಯಕ್ಕೆ ಆರಂಭ .
ಮಳೆಗೆ ಅಡ್ಡಿಯಾಗದ ಹಾಗೆ ಚಪ್ಪರದ ವ್ಯವಸ್ಥೆ ಇದೆ.

ಸರಕಾರದ ಕಾನೂನು ಪಾಲಿಸಿ
ಮಾಸ್ಕ್ ಕಡ್ಡಾಯವಾಗಿ ಧರಿಸಿ .

ಶುಭಾಶಯಗಳೊಂದಿಗೆ

ಯಕ್ಷಮಿತ್ರ ಸೇವಾ ಬಳಗ ತಲಪಾಡಿ .ಸರ್ವಸದಸ್ಯರು

ಸಂತೋಷ್ ಅಲಂಕಾರಗುಡ್ಡೆ
8722369514

ಶ್ರೀ ಸಂಜೀವ ಚೌಟ, ಉದ್ಯಾವರ ಮಾಡ – ಅಸುರ ಪಾತ್ರಗಳಲ್ಲಿ ಅಬ್ಬರಿಸಿದ ಅಪ್ರತಿಮ ಕಲಾಕಾರ

ಅನುಭವಗಳನ್ನು ಗಳಿಸಿ ಹಂತ ಹಂತವಾಗಿ ಬೆಳೆದು ಮುಂಭಡ್ತಿಗೊಂಡು ಸ್ಥಾನಗಳನ್ನು ಪಡೆಯುವುದು ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಸಹಜವಾದ ಕ್ರಿಯೆಯು. ಕೆಳಸ್ಥರಗಳಲ್ಲಿ ಪಡೆದ ಅನುಭವಗಳೇ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂಬುದರಿಂದ ಈ ವ್ಯವಸ್ಥೆಯು ಸರಿಯಾದುದೇ ಆಗಿದೆ. ಯಕ್ಷಗಾನದಲ್ಲೂ ಇದೇ ರೀತಿಯ ನಿಯಮಗಳಿತ್ತು ಎಂಬುದನ್ನು ನಾವು ಕೇಳಿರುತ್ತೇವೆ.

ಪೂರ್ವರಂಗ, ಸ್ತ್ರೀವೇಷ, ಪುಂಡುವೇಷ, ಪೀಠಿಕೆವೇಷ ಎದುರು ವೇಷ ಎಂಬ ಹಂತಗಳನ್ನು ದಾಟಿ ಬಂದವರು ಬಣ್ಣದ ವೇಷಧಾರಿಯಾಗುತ್ತಾರೆ. ಬಣ್ಣದ ವೇಷಗಳನ್ನು ನಿರ್ವಹಿಸಿ ಯಶಸ್ವಿಯಾದ ಮೇಲೆ ಅವರಿಗೆ ಹಾಸ್ಯಗಾರ ಸ್ಥಾನವು ದೊರಕುತ್ತಿತ್ತು. ಇದು ಪರಿವರ್ತನಾಶೀಲವಾದ ಪ್ರಪಂಚ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣಬಹುದು. ದೇಶ, ಕಾಲಕ್ಕೆ ತಕ್ಕಂತಹ ಬದಲಾವಣೆಯನ್ನು ನಾವು ಆಕ್ಷೇಪಿಸದೆ ಸ್ವಾಗತಿಸಲೇಬೇಕಾಗುತ್ತದೆ. ಇಂದು ಯಕ್ಷಗಾನದಲ್ಲಿ ಕಲಾವಿದರಿಗೆ ಅವರವರ ಆಸಕ್ತಿಯನ್ನು ಹೊಂದಿ ಆಯ್ಕೆಗೆ ಅವಕಾಶಗಳಿವೆ.

ಏನೇ ಇರಲಿ, ಕಲಾವಿದನು ಸ್ಥಾನವನ್ನು ಹೇಗೆ ಗಿಟ್ಟಿಸಿಕೊಂಡ ಎಂಬುದು ಮುಖ್ಯವಲ್ಲ. ನಾವು ಧರಿಸಿದ ಪಾತ್ರಕ್ಕೆ, ಕಲೆಗೆ ಅಪಚಾರವಾಗದಂತೆ ಅಭಿನಯಿಸುವ ಕಲೆಯನ್ನು ಹೊಂದಿರುವುದು ಮುಖ್ಯ. ಯಕ್ಷಗಾನ ಎಂಬ ಮೇರು ಕಲೆಗೆ ಯಾವತ್ತೂ ಕೊರತೆಯಾಗಬಾರದು ಎಂಬ ಎಚ್ಚರದಿಂದ ಪಾತ್ರಗಳನ್ನು ನಿರ್ವಹಿಸಿದರೆ ಆತ ಕಲಾವಿದನಾಗಿ ಯಶಸ್ವಿಯಾಗುತ್ತಾನೆ. ಹಿಂದಿನ ಕಾಲದಲ್ಲಿ ಅನೇಕರು ಹಂತಹಂತವಾಗಿ ಬೆಳೆದೇ ಬಣ್ಣದ ವೇಷಧಾರಿಗಳಾಗಿ ಕಾಣಿಸಿಕೊಂಡರು. ಪ್ರಸಂಗ ಜ್ಞಾನ, ರಂಗ ನಡೆ ಮೊದಲಾದ ವಿಚಾರಗಳನ್ನು ತಮ್ಮ ದೀರ್ಘ ಅನುಭವದ ಹಿನ್ನೆಲೆಯಿಂದ ತಿಳಿದುಕೊಂಡಿದ್ದರು.

ಅಂತಹ ಬಣ್ಣದ ವೇಷಧಾರಿಗಳಲ್ಲೊಬ್ಬರು ಶ್ರೀ ಉದ್ಯಾವರ ದಿ| ಸಂಜೀವ ಚೌಟರು.  ನಿವೃತ್ತಿಯ ಸಮಯದಲ್ಲಿ ಉದ್ಯಾವರ ಶ್ರೀ ಸಂಜೀವ ಚೌಟರು ಕಟೀಲು ನಾಲ್ಕನೇ ಮೇಳದಲ್ಲಿ ಮುಖ್ಯ ಬಣ್ಣದ ವೇಷಧಾರಿಯಾಗಿದ್ದರು. ಅವರ ಜತೆ ಹಲವು ವರ್ಷಗಳ ತಿರುಗಾಟ ನಡೆಸುವ ಅವಕಾಶವೂ ನನಗೆ ಸಿಕ್ಕಿದೆ. ಅವರ ಖಳ ಪಾತ್ರಗಳಿಗೆ ಹಾಸ್ಯ ಪಾತ್ರಗಳನ್ನು ನಿರ್ವಹಿಸಿರುತ್ತೇನೆ. ಆದುದರಿಂದ ಅವರ ಬಣ್ಣಗಾರಿಕೆ, ವೇಷನಿರ್ವಹಣೆ ಮತ್ತು ವ್ಯಕ್ತಿತ್ವಗಳ ಬಗೆಗೆ ತಿಳಿದುಕೊಳ್ಳಲು ಪ್ರತ್ಯಕ್ಷವಾಗಿ ಅನುಕೂಲವಾಗಿದೆ.

ಆಟ ನೋಡಿದ ನಂತರ ಕೆಲವರು ಚೌಕಿಗೆ ಬಂದು ರಾಕ್ಷಸ ಪಾತ್ರವನ್ನು ಮಾಡಿದವರಾರೆಂದು ಕೇಳುತ್ತಿದ್ದರು. ವೇಷ ಕಳಚಿ ವಿಶ್ರಾಂತಿಯಲ್ಲಿರುತ್ತಿದ್ದ ಸಂಜೀವ ಚೌಟರನ್ನು ನಾವು ಅವರಿಗೆ ತೋರಿಸುತ್ತಿದ್ದೆವು. ಆದರೆ ಅವರು ನಂಬುತ್ತಿರಲಿಲ್ಲ. ಅಸುರ ಪಾತ್ರವನ್ನು ಹಾಕಿದವರು ಇವರಲ್ಲ ಎಂದೇ ಹೇಳುತ್ತಿದ್ದರು. ಅಷ್ಟು ಸಣಕಲು ದೇಹ ಸಂಜೀವ ಚೌಟರದ್ದು. ಆಗ ವಯಸ್ಸು ಎಪ್ಪತ್ತು ದಾಟಿತ್ತು. ತರುಣರಾಗಿದ್ದಾಗ ಹೇಗಿದ್ದರೆಂಬುದು ತಿಳಿದಿಲ್ಲ. ದೇಹ ಹಾಗಿದ್ದರೂ ಎಪ್ಪತ್ತರ ವಯಸ್ಸಿನಲ್ಲೂ ರಂಗದಲ್ಲಿ ಅಷ್ಟು ಚುರುಕಾಗಿದ್ದರು. ರಾಕ್ಷಸರಾಗಿ ಅಬ್ಬರಿಸುತ್ತಿದ್ದರು. ಯುದ್ಧದ ಸಂದರ್ಭಗಳಲ್ಲಿ ಎದುರಾಳಿಯ ವೇಷವೂ ರಂಜಿಸುವಂತೆ ಅವರನ್ನು ಕೆಣಕಿ ಅಭಿನಯಿಸುತ್ತಿದ್ದರು. 


ಬಣ್ಣದ ವೇಷಧಾರಿ ಶ್ರೀ ಸಂಜೀವ ಚೌಟರು ಜನಿಸಿದ್ದು ಮಂಜೇಶ್ವರ ಸಮೀಪದ ಉದ್ಯಾವರ ಎಂಬಲ್ಲಿ. ಉದ್ಯಾವರ ಶ್ರೀ ತಿಮ್ಮಯ್ಯ ಚೌಟ ಮತ್ತು ಶ್ರೀಮತಿ ಮಂಡ್ಯಪ್ಪು ದಂಪತಿಗಳ ಪುತ್ರನಾಗಿ ಜನನ. ತಿಮ್ಮಯ್ಯ ಚೌಟರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹಾಗಾಗಿ ಕಲೆಯ ರಕ್ತಗತವಾಗಿಯೇ ಇತ್ತು. ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳಿಗೆ ತೆರಳುತ್ತಿದ್ದರು. ಬಿಕರ್ನಕಟ್ಟೆ ಐತಪ್ಪ ಎಂಬ ಕಲಾವಿದರು ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದಾಗ ನೋಡುತ್ತಾ ಆಸಕ್ತರಾದರು. ತಾನೂ ತಂಡವನ್ನು ಸೇರಿಕೊಂಡು ನಾಟ್ಯ ಕಲಿತರು. ಹಾಗಾಗಿ ಪರಿಸರದ ಪ್ರೇರಣೆಯಿಂದಲೇ ಸಂಜೀವ ಚೌಟರೊಳಗೆ ಅಡಗಿದ ಕಲಾವಿದನು ಜಾಗೃತನಾದ ಎಂದು ಹೇಳಿದರೆ ತಪ್ಪಾಗಲಾರದು. ಟೈಲರ್ ರಾಮಪ್ಪ ಬೆಳ್ಚಾಡರಿಂದ ಅರ್ಥಗಾರಿಕೆಯನ್ನೂ ಕಲಿತರು. ಹವ್ಯಾಸವಾಗಿ ಆರಂಭಿಸಿದ್ದ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದರು. 


ಮೊತ್ತಮೊದಲು ಸೇರಿದ್ದು ಉದ್ಯಾವರ ಮೇಳಕ್ಕೆ. ಬಾಲಗೋಪಾಲನಾಗಿ. ಬಳಿಕ ಕುದ್ರೋಳಿಯ ಭಗವತೀ ಮೇಳ. ಬಳಿಕ ಸಜಿಪ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮೀ ಮೇಳಗಳಲ್ಲಿ ತಿರುಗಾಟ. ನಂತರ ಶ್ರೀ ಮಾರಣಕಟ್ಟೆ ಮೇಳದಲ್ಲಿ ಸ್ತ್ರೀ ವೇಷ ಮತ್ತು ಕಿರೀಟ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಹಂತ ಹಂತವಾಗಿ ಬೆಳೆದು ಬಣ್ಣದ ವೇಷಗಳನ್ನು ಮಾಡಲು ತೊಡಗಿದ್ದರು. ಬಳಿಕ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಸುದೀರ್ಘ ತಿರುಗಾಟ (ಸುಮಾರು 45ಕ್ಕೂ ಹೆಚ್ಚಿನ ತಿರುಗಾಟ) ಕಟೀಲು ಮೇಳದಲ್ಲಿ ಸಣ್ಣ ತಿಮ್ಮಪ್ಪ, ಕಾವು ಕಣ್ಣ, ಕೇದಗಡಿ ಗುಡ್ಡಪ್ಪ ಗೌಡ, ಬಣ್ಣದ ಕುಟ್ಯಪ್ಪು ಮುಂತಾದ ಪ್ರಸಿದ್ಧ ಕಲಾವಿದರ ಒಡನಾಟವೂ ಸಿಕ್ಕಿತ್ತು. 


ಕೇಶಾವರೀ ಕಿರೀಟದ ಮತ್ತು ಹೆಣ್ಣು ಬಣ್ಣಗಳನ್ನು ನಿರ್ವಹಿಸುವುದರಲ್ಲಿ ಶ್ರೀ ಸಂಜೀವ ಚೌಟರು ಖ್ಯಾತರು. ಶುಂಭಾಸುರ,ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕಾಲಜಂಘ, ಶತ್ರುಪ್ರಸೂಧನ, ತಮಾಸುರ, ಮತ್ಸ್ಯ, ಅಜಮುಖಿ, ಪೂತನಿ, ಲಂಕಿಣಿ, ಶೂರ್ಪನಖಿ, ತಾಟಕಿ. ವೃತ್ತಜ್ವಾಲೆ, ಹಿಡಿಂಬೆ, ಮೈರಾವಣ, ಕಿರಾತ ಮೊದಲಾದ ಪಾತ್ರಗಳಲ್ಲಿ ಸಂಜೀವ ಚೌಟರ ಅಭಿನಯವನ್ನು ಕಾಣುವುದಕ್ಕೆ ಸಾಧ್ಯವಾಗಿದೆ. ಕೊರತೆಯಾಗದಂತೆ, ಅತ್ಯುತ್ತಮವಾಗಿ ಎಲ್ಲಾ ಬಣ್ಣದ ಪಾತ್ರಗಳನ್ನೂ ಚಿತ್ರಿಸುತ್ತಿದ್ದರು. ವಯಸ್ಸು ಮತ್ತು ಅನಾರೋಗ್ಯದ ಸಮಸ್ಯೆಯಿಂದ ಇವರು 2012ರ ಸುಮಾರಿಗೆ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದರು. ವಿಶ್ರಾಂತಿ ಬದುಕನ್ನು ನಡೆಸುತ್ತಿದ್ದ ಉದ್ಯಾವರ ಮಾಡ ಶ್ರೀ ಸಂಜೀವ ಚೌಟರು ನಿವೃತ್ತಿಯ ಎರಡು ವರ್ಷಗಳ ಬಳಿಕ ನಿಧನ ಹೊಂದಿದ್ದರು. ಇವರಿಗೆ ಐದು ಮಂದಿ ಮಕ್ಕಳು (ಒಂದು ಹೆಣ್ಣು ಮತ್ತು ನಾಲ್ಕು ಗಂಡು). 

ಲೇಖಕ: ರವಿಶಂಕರ್ ವಳಕ್ಕುಂಜ

ಕೇದಗಡಿ ಶ್ರೀ ಗುಡ್ಡಪ್ಪ ಗೌಡ – ಪರಂಪರೆಯ ಶಿಸ್ತಿನ ಕಲಾವಿದ

ಶ್ರೀ ಕೇದಗಡಿ ಗುಡ್ಡಪ್ಪ ಗೌಡರು ಪರಂಪರೆಯ ಶಿಸ್ತಿನ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದವರು. ಸಂಪ್ರದಾಯ ಬದ್ಧ ನಾಟ್ಯ, ಪಾತ್ರೋಚಿತವಾದ, ಹಿತಮಿತವಾದ ಸಂಭಾಷಣೆ, ಗತ್ತುಗಾರಿಕೆಗಳಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ಪ್ರತಿಭಾವಂತ ಕಲಾವಿದರಿವರು. ವೀರರಸದ ಪದ್ಯಗಳಿಗೆ ಕುಣಿಯುತ್ತಾ ಎರಡೂ ಕಾಲುಗಳನ್ನು ಎತ್ತಿ ಹಾರುವ ಕ್ರಮವನ್ನು ಕೊನೆಯ ವರೆಗೂ ಉಳಿಸಿಕೊಂಡು ಬಂದಿದ್ದರು.

ಸಂಪ್ರದಾಯವನ್ನು ಯಾವತ್ತೂ ಮುರಿದು ಮೆರೆದವರಲ್ಲ. ಆದುದರಿಂದ ಕಲಿಕಾಸಕ್ತರಿಗೆ ಇವರೊಬ್ಬ ಆದರ್ಶ, ಅನುಸರಣೀಯ ಕಲಾಕಾರರಾಗಿದ್ದರು. ತುಸು ಗಿಡ್ಡ ಆಳಂಗ ಎಂಬುದನ್ನು ಹೊರತುಪಡಿಸಿದರೆ ಕೊರತೆಯಿಲ್ಲದ ಪರಿಪೂರ್ಣ ವೇಷಗಾರಿಕೆ ಇವರದು. ಪಾತ್ರ ನಿರ್ವಹಣೆಯ ಯಾವ ವಿಭಾಗಗಳಲ್ಲೂ ಅತಿರೇಕತೆ ಕಾಣದು. ಜತೆಗೆ ಕಡಿಮೆಯೂ ಆಗದೆ ಕೊರತೆಯಾಗದಂತೆ ಪಾತ್ರವನ್ನು ಚಿತ್ರಿಸುವ ಕಲೆಯೂ ಕರಗತವಾಗಿತ್ತು. 

ಗಡಿನಾಡ ಕಾಸರಗೋಡು ಅನೇಕ ಹೆಸರಾಂತ ಕಲಾವಿದರನ್ನು ಯಕ್ಷಗಾನ ಕಲಾಮಾತೆಯ ಮಡಿಲಿಗಿಕ್ಕಿದ ಮಣ್ಣು. ಅಂತಹಾ ಗಡಿನಾಡ ಶ್ರೇಷ್ಠ ಕಲಾವಿದರಲ್ಲಿ ಕೇದಗಡಿ ಶ್ರೀ ಗುಡ್ಡಪ್ಪ ಗೌಡರೂ ಒಬ್ಬರು. ಪುಂಡುವೇಷಧಾರಿಯಾಗಿ ಕಲಾಬದುಕನ್ನು ಆರಂಭಿಸಿ, ಪೀಠಿಕೆ ವೇಷಧಾರಿಯಾಗಿ ಬೆಳೆದು, ಎದುರು ವೇಷಧಾರಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದರು. ತೆಂಕುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಕೇದಗಡಿ ಶ್ರೀ ಗುಡ್ಡಪ್ಪ ಗೌಡರು ಜನಿಸಿದ್ದು ಕಾಸರಗೋಡು ಪ್ರದೇಶದ ದೇಲಂಪಾಡಿ ಗ್ರಾಮದ ಬನಾರಿ ಸಮೀಪದ ಕೇದಗಡಿ ಮನೆಯಲ್ಲಿ. ಶ್ರೀ ಸುಬ್ರಾಯ ಗೌಡ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು.

ಓದಿದ್ದು ಐದನೇ ತರಗತಿಯ ವರೆಗೆ. ಹೆಚ್ಚಿನ ಕಲಿಕೆಗೆ ಅವಕಾಶವೂ ಇರಲಿಲ್ಲ. ಬಡತನವೂ ಜತೆಗಿತ್ತು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಇದೇ ಸಮಯಕ್ಕೆ ಯಕ್ಷ ಗುರುಕುಲದ ರೂವಾರಿ ಮಾಸ್ತರ್ ವಿಷ್ಣು ಭಟ್ಟರು ಕೀರಿಕ್ಕಾಡಿನಿಂದ ಬಂದು ಬನಾರಿಯಲ್ಲಿ ನೆಲೆಸಿದ್ದರು. ಮಾತ್ರವಲ್ಲ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಂಘವನ್ನೂ ಆರಂಭಿಸಿ ಯಕ್ಷಗಾನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಲಿಕಾಸಕ್ತರಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇದು ಗುಡ್ಡಪ್ಪ ಗೌಡರ ಯಕ್ಷಗಾನಾಸಕ್ತಿ ಎಂಬ ಚಿಗುರಿಗೆ ನೀರು ಸಾರಗಳು ಸಿಕ್ಕಿ ಬೆಳೆಯಲು ಸಹಕಾರಿಯಾಗಿತ್ತು. 

ಹಗಲು ತಂದೆ ತಾಯಿಯರ ಜತೆ ಮನೆಯ ಕೆಲಸಗಳಲ್ಲಿ ತೊಡಗಿ ಸಂಜೆಯಾಗುತ್ತಲೇ ನಾಟಕ ಶಾಲೆಗೆ ತೆರಳುತ್ತಿದ್ದರು. ಕೀರಿಕ್ಕಾಡು ಮಾಸ್ತರರಿಂದ ಯಕ್ಷಗಾನ ಪಾಠ. ಕಲಿಕಾಸಕ್ತರಾಗಿ ಬಂದವರನ್ನು ತನ್ನ ಮನೆಯ ಮಕ್ಕಳಂತೆಯೇ ನೋಡುತ್ತಿದ್ದವರು ಕೀರಿಕ್ಕಾಡು ಮಾಸ್ತರರು. ಬಾಲಕ ಗುಡ್ಡಪ್ಪ ಗೌಡರು ತೀವ್ರ ಅನಾರೋಗ್ಯಪೀಡಿತರಾದಾಗ ಔಷಧೋಪಚಾರಗಳನ್ನು ಮಾಡಿ ಚೇತರಿಸುವಂತೆ ಮಾಡಿದ್ದರು. (ಪ್ರಕೃತಿ ಚಿಕಿತ್ಸೆ ಮತ್ತು ಹಳ್ಳಿಮದ್ದು) ಒಂದರ್ಥದಲ್ಲಿ ಪುನರ್ಜನ್ಮ. ಗುಡ್ಡಪ್ಪ ಗೌಡರು ಮತ್ತೆ ಹುಟ್ಟಿಬಂದರೆಂದೂ ಹೇಳಬಹುದು. ಇದು ಕಲಾಮಾತೆಯ ಅನುಗ್ರಹವೂ ಹೌದು. ಶ್ರೇಷ್ಠ ಕಲಾವಿದನೊಬ್ಬ ಮುಂದೆ ತನ್ನ ಸೇವೆಯನ್ನು ಮಾಡಲಿದ್ದಾನೆ ಎಂಬುದನ್ನು ಆಕೆ ತಿಳಿದಿದ್ದಳು. ಹಾಗಾಗಿ ಗುಡ್ಡಪ್ಪ ಗೌಡರನ್ನು ಬದುಕಿಸಿದ್ದಳು.

ಕೀರಿಕ್ಕಾಡು ಮಾಸ್ತರರ ವ್ಯವಸ್ಥೆಯಲ್ಲಿ ಖ್ಯಾತ ಕಲಾವಿದ ಕಡಾರು ನಾರಾಯಣ ಭಟ್ಟರಿಂದ ನಾಟ್ಯಾಭ್ಯಾಸ. ಇವರು ಅತಿಕಾಯ ಮೊದಲಾದ ವೇಷಗಳಲ್ಲಿ ಖ್ಯಾತರು. ಅತಿಕಾಯ ನಾರಾಯಣ ಭಟ್ಟರೆಂದೇ ಪ್ರಸಿದ್ಧರು. ಶ್ರೀ ಗುಡ್ಡಪ್ಪ ಗೌಡರು ಬನಾರಿ ಯಕ್ಷಗಾನ ಕಲಾ ಸಂಘದ ಪ್ರದರ್ಶನದಲ್ಲಿ ಮೊತ್ತಮೊದಲು ಅಭಿಮನ್ಯುವಾಗಿ ರಂಗ ಪ್ರವೇಶಿಸಿದ್ದರು. ಬಳಿಕ ಬನಾರಿ ಸಂಘದ ಮತ್ತು ಇತರ ಪ್ರದರ್ಶನಗಳಲ್ಲಿ ಗುರುಗಳೊಂದಿಗೆ ಸದಾ ಭಾಗವಹಿಸಿ ಅನುಭವಗಳನ್ನು ಗಳಿಸಿಕೊಂಡರು. ಮೂರು ವರ್ಷಗಳ ಕಾಲ ಯಕ್ಷಗಾನ ಅರ್ಥಗಾರಿಕೆಯನ್ನು ಅಭ್ಯಸಿಸಿದರು. ಆಗಲೇ ಬೆಳೆಯುತ್ತಿರುವ ಪ್ರತಿಭೆಯನ್ನು ಕಲಾಭಿಮಾನಿಗಳೆಲ್ಲರೂ ಗುರುತಿಸಿದ್ದರು. 


ಕೇದಗಡಿ ಶ್ರೀ ಗುಡ್ಡಪ್ಪ ಗೌಡರು ತನ್ನ ಹದಿನೇಳನೆಯ ವಯಸ್ಸಿನಲ್ಲಿ ಕದ್ರಿ ಮೇಳಕ್ಕೆ ಸೇರಿದ್ದರು. ಕೊಡಿಯಾಲಗುತ್ತು ಶ್ರೀ ಶಂಭು ಹೆಗ್ಡೆಯವರ ಸಂಚಾಲಕತ್ವ. ಅಣ್ಣಿ ಭಾಗವತರು, ಅಡೂರು ಶಿವ ಮದ್ದಳೆಗಾರರು, ಮಧೂರು ನಾರಾಯಣ ಹಾಸ್ಯಗಾರ, ಕುಂಬಳೆ ತಿಮ್ಮಪ್ಪ, ಕದ್ರಿ ವಿಷ್ಣು, ಕಾಸರಗೋಡು ದೂಮಣ್ಣ, ಕುಂಞಿಕಣ್ಣ ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟವು ದೊರಕಿತ್ತು. ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಮುಲ್ಕಿ ಮತ್ತು ಕೂಡ್ಲು ಮೇಳಗಳಲ್ಲಿ ತಲಾ ಮೂರು ತಿರುಗಾಟ. ಮುಚ್ಚೂರು ಮೇಳದಲ್ಲಿ ಒಂದು ತಿರುಗಾಟ. ಬಳಿಕ ನಿರಂತರ ನಲುವತ್ತು ವರ್ಷಗಳ ತಿರುಗಾಟ ಕಟೀಲು ಮೇಳದಲ್ಲಿ. ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ವಿಟ್ಲ ರಾಮಯ್ಯ ರೈ, ಪಡ್ರೆ ಚಂದು ಇವರ ವೇಷಗಳಿಂದ ಪ್ರಭಾವಿತರಾಗಿದ್ದ ಇವರು ಹಂತ ಹಂತವಾಗಿ ಬೆಳೆದು ಎದುರು ವೇಷಧಾರಿಯಾಗಿ ಕಾಣಿಸಿಕೊಂಡವರು.

ಸ್ತ್ರೀ ವೇಷಗಳನ್ನು ನಿರ್ವಹಿಸಿದ್ದೂ ಇದೆ. ನಾಟಕೀಯ ವೇಷಗಳಲ್ಲಿ ಕಾಣಿಸಿಕೊಂಡರೂ ಇವರಿಗೆ ಒಲವಿದ್ದುದು ಕಿರೀಟ ವೇಷಗಳಲ್ಲಿ ಮಾತ್ರ. ಸದಾ ಅಧ್ಯಯನಶೀಲರಾಗಿದ್ದ ಇವರು ಪುರಾಣ ಪುಸ್ತಕಗಳನ್ನೂ ದಿನಪತ್ರಿಕೆಗಳನ್ನೂ ದಿನ ಬಿಡದೆ ಓದುತ್ತಿದ್ದವರು. ಸಾಕಷ್ಟು ಸಿದ್ಧತೆಯೊಂದಿಗೆ ರಂಗವೇರಿ ಅಭಿನಯಿಸುತ್ತಿದ್ದರು. ಬದುಕಿನಲ್ಲಿ ಶಿಸ್ತು, ಆಹಾರ ವಿಹಾರಗಳಲ್ಲಿ ಎಚ್ಚರದ ವ್ಯವಹಾರಗಳಿದ್ದರೆ ಮಾತ್ರ ಆರೋಗ್ಯದಿಂದಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಸಂತೋಷದಿಂದ ದೀರ್ಘಕಾಲ ತೊಡಗಿಸಿಕೊಳ್ಳಬಹುದು ಎಂಬ ಸೂಚನೆಯನ್ನು ಕಿರಿಯರಿಗೆ ಮೇಳದಲ್ಲಿ ಸದಾ ನೀಡುತ್ತಿದ್ದರು. ತಾನು ಅಂತೆಯೇ ಬಾಳಿ ಬದುಕಿದ್ದರು. ಕರ್ಣ, ಅತಿಕಾಯ, ರಕ್ತಬೀಜ, ದಕ್ಷ, ತಾಮ್ರಧ್ವಜ, ಕಂಸ, ವೀರಮಣಿ, ಹಿರಣ್ಯಕಶ್ಯಪ, ಅರುಣಾಸುರ, ಕೌರವ, ಋತುಪರ್ಣ ಮೊದಲಾದ ಪಾತ್ರಗಳು ಇವರಿಗೆ ಹೆಸರನ್ನು ತಂದುಕೊಟ್ಟವು. 

ಸರಳ, ನಿಗರ್ವಿ, ನಿರಾಡಂಬರ ವ್ಯಕ್ತಿತ್ವದ ಶ್ರೀ ಗುಡ್ಡಪ್ಪ ಗೌಡರು ಸರ್ವರ ಪ್ರಶಂಸೆಗೆ ಪಾತ್ರರಾದವರು. ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೀತಿಸುವ ಗುಣಗಳಿಂದ ಶ್ರೀಯುತರು ಎಲ್ಲರಿಗೂ ಬೇಕಾದವರಾಗಿಯೇ ಬದುಕನ್ನು ನಡೆಸಿದ್ದರು. ಸುಮಾರು 52 ವರ್ಷಗಳ ಕಲಾಬದುಕು. ಕಟೀಲು ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ವ್ಯವಸಾಯವನ್ನು ಮಾಡಿ 1998ರಲ್ಲಿ ವೃತ್ತಿ ಜೀವನದಿಂದ ನಿವೃತ್ತರಾಗಿದ್ದರು.

ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದ ಶ್ರೀ ಗುಡ್ಡಪ್ಪ ಗೌಡರು ಕಟೀಲು ಮೇಳದ ಬಯಲಾಟಗಳಲ್ಲಿ ಪ್ರಸಿದ್ದರಾಗಿದ್ದರು. ದಿ| ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಶ್ರೀ ಕೇದಗಡಿ  ಗುಡ್ಡಪ್ಪ ಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ. ಇವರಿಗೆ ನಾಲ್ಕು ಮಂದಿ ಮಕ್ಕಳು. (ಮೂರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ)


ಲೇಖ : ರವಿಶಂಕರ್ ವಳಕ್ಕುಂಜ

Prime Ministers Of India – List (1947 – 2021)

Name of Prime MinisterTerm of serviceBorn and Dead
1Jawaharalal Neharu15.08. 1947 to 27.05.19641889 – 1964
2Guljarilal Nanda 27.05.1964 to 09.06.19641898-1998
3Lal Bahadur Shastri09.06.1964 to 11.01.19661904-1966
4Guljarilal Nanda 11.01.1966 to 24.01.19661898-1998
5Indira Ghandhi24.01.1966 to 24.03.19771917 – 1984
6Morarji Desai24.03.1977 to 28.07.19791896 – 1995 
7Charan Singh28.07.1979 to 14.01.19801902 – 1987
8Indira Ghandhi14.01.1980 to 31.10.19841917 – 1984
9Rajiv Ghandhi31.10.1984 to 02.12.19891944 – 1991
10V.P. Singh02.12.1989 to 10.11.19901931 – 2008
11Chandrashekhar10.11.1990 to 21.06.19911927 – 2007
12P. V. Narasimha Rao21.06.1991 to 16.05.19961921 – 2004
13Atal Bihari Vajapayee16.05.1996 to 01.06.19961924 – 2018
14H.D. Deve Gowda01.06.1996 to 21.04.1997Born in 1933
15Indra Kumar Gujral21.04.1997 to 19.03.19981919 – 2012
16Atal Bihari Vajapayee19.03.1998 to 22.05.20041924 – 2018
17Manamohan Singh22.05.2004 to 26.05.2014Born in 1932
18Narendra ModiFrom 26.05.2014 – PresentBorn in 1950

Presidents, First Ladies and Vice Presidents of United States of America (U.S.A)

Presidents, First Ladies and Vice Presidents of United States of America (U.S.A)
PresidentPresidency yearFirst LadyVice President
George Washington1789 -1797Martha WashingtonJohn Adams
John Adams1797 – 1801 Abigali AdamsThomas Jafferson
Thomas Jafferson1801-1805Martha Wayles Skelton Jafferson Aaron Burr
Thomas Jafferson1805-1809Martha Wayles Skelton Jafferson George Clinton
James Madison1809-1817Dolley MadisonGeorge Clinton and Elbridge Gerry
James Monroe1817-1825Elizabeth Kortright MonroeDaniel D. Tompkins
John Quincy Adams1825- 1829Louisa Catherine AdamsJohn C Calhoun
Andrew Jackson1829- 1837Rachel Jackson Martin Van Buren
Martin Van Buren1837- 1841Hannah Hoes Van BurenRichard Mentor Johnson
William Henry Harrison1841-1841Anna Tuthil Symmes HarrisonJohn Tyler
John Tyler1841-1845Letitia Christian Tyler and Julia Gardiner Tyler  – 
James K Polk1845-1849Sarah Childress PolkGeorge M Dallas
Zachary Taylor1849-1850Margaret Mackall Smith TaylorMillard Fillmore
Millard Fillmore1850-1853Abigail Powers Fillmore –
Frankilin Pierce1853-1857Jane M PierceWilliam R King
James Buchanan1857-1861(Never Married)John C Breckinridge
Abraham Lincoln1861-1865Mary Todd Lincoln Hannibal Hamlin and Andrew Johnson
Andew Johnson1865-1869Eliza McCardle Johnson –
Ulysses S Grant1869-1877Julia Dent GrantSchuyler Colfax and Henry Wilson
Rutherford B Hayes1877-1881Lucy Webb HayesWilliam A Wheeler
James A Garfield1881-1881Lucretia Rudolph GarfieldChester A Arthur
Chester A Arthur1881-1885Ellen Lewis Hemdon Arthur – 
Grover Cleveland1885-1889Frances Folsom ClevelandThomas A Hendricks
Benjamin Harrison1889-1893Caroline Lavinia Scott HarisonLevi P Morton
Grover Cleveland1893- 1897Frances Folsom ClevelandAdlai Stevenson I
William McKinley1897-1901Ida Saxton McKinleyGarret Hobart
Theodore Roosevelt1901-1909Edith Kermit Carow RooseveltCharles W Fairbanks
William Howard Taft1909-1913Helon Herron TaftJames S Sherman
Woodrow Wilson1913-1921Ellen Axson Wilson and Edith Bolling Galt WilsonThomas R Marshall
Warren G Harding1921-1923Florence King HardingCalvin Coolidge
Calvin Coolidge1923-1929Grace Goodhue CoolidgeCharles G Dewes
Herbert Hoower1929-1933Lou Henry HoowerCharles Curtis
Franklin D Roosevelt1933-1945Eleanor RooseveltJohn Nance Garner, Henry A Wallace, Harry S Truman
Harry S Truman1945-1953Bess Wallace TrumanAlben W Barkley
Dwight D Eisenhower1953-1961Mamie Doud EisenhowerRichard Nixon
John F Kennedy1961-1963Jacqueline Kennedy Lyndon B Johnson
Lyndon B Johnson1963-1969Lady Bird JohnsonHubert Humphrey
Richard Nixon1969-1974Pat NixonSpiro Agnew & Gerald Ford
Gerald Ford1974-1977Betty FordNelson Rockefeller
Jimmy Carter1977-1981Rosalynn CarterWalter Mondale
Ronald Reagan1981-1989Nancy ReaganGeorge H W Bush
George H W Bush1989-1993Barbara BushDan Quayle
Bill Clinton1993-2001Hillary Rodham ClintonAl Gore
George W Bush2001-2009Laura BushDick Cheney
Barack Obama2009-2017Michelle Obama Joe Biden
Donald Trump2017-2021Melania TrumpMike Pence
Joe Biden2021 – Jill BidenKamala Harris

ಕಾಳಿಂಗ ನಾವಡ ಪ್ರಶಸ್ತಿ

ಯಕ್ಷಗಾನ ಕಲೆಯ ಆಸಕ್ತಿಯ ವೀಕ್ಷಣೆಗೆ, ಹವ್ಯಾಸವಾಗಿರಿಸಿ ಕಲಿತುಕುಣಿಯುವುದಕ್ಕೆ ಅಥವಾ ಅದನ್ನೇ ಬದುಕಿನ ದಾರಿಯಾಗಿಸಿಕೊಳ್ಳುವವರಿಗೆ ಕಲಾಕದಂಬ ಆರ್ಟ್ ಸೆಂಟರ್‌ ಒಂದು ಉತ್ತಮ ತಾಣವೆನಿಸಿದೆ. ಡಾ| ರಾಧಾಕೃಷ್ಣ ಉರಾಳ ಕೆ. ಅವರ ಕಲ್ಪನೆ ಪರಿಶ್ರಮದ ಫಲವಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಕಲಾಸಂಸ್ಥೆ ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪು ಬೀರಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಭೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಧನೆಯ ಹಾದಿಯಲಿ ಮುನ್ನಡೆದಿದೆ.
ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದು ಕೊಟ್ಟ ‘ಕಾಳಿಂಗ  ನಾವಡ’ ಯಕ್ಷಗಾನ ಪ್ರಪಂಚ ಮರೆಯದ ಹೆಸರು. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಮೂವತ್ತೆರಡನೇ ವಯಸ್ಸಿಗೇ ಪ್ರಶಂಸೆಯ ಗಿರಿಯೇರಿ, ಮೆರೆದು ಮರೆಯಾದವರು. ಕುಳಿತು ಕಲಿಸಿ ಶಿಷ್ಯರನ್ನು ಸಿದ್ಧಮಾಡದಿದ್ದರೂ ಇಂದಿಗೂ ತಮ್ಮ ಗಾನ ಮೋಡಿಯಿಂದ ಲಕ್ಷಾಂತರ ಪ್ರೇಕ್ಷಕರನ್ನು, ನೂರಾರು ಮಂದಿ ಗಾನಾಸಕ್ತರನ್ನು ಭಾಗವತಿಕೆಗೆ ಪ್ರೇರೇಪಿಸುತ್ತಿರುವ ಶಕ್ತಿ. ತಂದೆ ರಾಮಚಂದ್ರ  ನಾವಡ, ತಮ್ಮ ವಿಶ್ವನಾಥ ನಾವಡ ಕೂಡಾ ಭಾಗವತಿಕೆಗೆ ಹೆಸರಾಗಿದ್ದು, ಗುಂಡ್ಮಿ ಎಂದರೆ ನಾವಡರ ಮನೆ ಎಂಬ ನೆನಪು ಯಕ್ಷ ಕಲಾಸಕ್ತರ ಮನ ಮನದಲ್ಲಿ ಈಗಲೂ ಮರೆಯಲಾಗದ ನಾದಲಹರಿಯ ತರಂಗವನ್ನಿರಿಸಿದೆ.
ಈ ಯಕ್ಷಲೋಕದ ಗಾನ ದೇವತೆಯ ನೆನಪಿನಲ್ಲಿ ನಮ್ಮ ಕಲಾಕದಂಬ ಆರ್ಟ್ ಸೆಂಟರ್‌ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ. ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್‌ಕುಮಾರ್, ಮಂದಾರ್ತಿರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನುಖ್ಯಾತ ಮದ್ದಳೆವಾದಕರಾಗಿ ಗುರ್ತಿಸಿಕೊಂಡ ಶಂಕರ ಭಾಗವತ ಅವರಿಗೆ, ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಕಲಾಸಂಘದ ಸಭಾ ಭವನದಲ್ಲಿ 31.10.2021 ರ ಸಂಜೆ 4 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಗೀತ ವಿದ್ಯಾನಿಧಿ ಶ್ರೀ ಡಾ.ವಿದ್ಯಾಭೂಷಣರು, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಯಕ್ಷಗಾನ ಸಂಶೋಧಕರು ಹಾಗೂ ಲೇಖಕರಾದ ಶ್ರೀ ಡಾ.ಆನಂದರಾಮ ಉಪಾಧ್ಯರು, ಯಕ್ಷಗಾನ ಪೋಷಕರಾದ ಶ್ರೀ ಎ ಪದ್ಮನಾಭ ಕಾರಂತರು, ಯುವ ವಿಪ್ರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿಅಡಿಗರು, ಕಾಳಿಂಗ ನಾವಡರ ಸಹೋದರಿ ಶ್ರೀಮತಿ ಸುಶೀಲ ಉರಾಳರು, ಕರಬ ಪ್ರತಿಷ್ಠಾನದ ಶ್ರೀ ದೇವರಾಜ ಕರಬರು, ಕಲಾಕದಂಬ ಆರ್ಟ್ ಸೆಂಟರ್ ನ ಅಧ್ಯಕ್ಷರಾದ ಅಂಬರೀಶ್ ಭಟ್ ಹಾಗೂ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.
ಪ್ರಖ್ಯಾತ ತಬಲಾ ವಾದಕರಾದ ಶ್ರೀ ಗುರುಮೂರ್ತಿ ವೈದ್ಯ ಹಾಗೂ ಶಂಕರ ಭಾಗವತರಿಂದ ವಾದನ ವೈವಿಧ್ಯ ಎನ್ನುವ ವಿನೂತನ ಕಾರ್ಯಕ್ರಮ ಅಲ್ಲದೇ ಕಲಾಕದಂಬ ಆರ್ಟ್ ಸೆಂಟರ್ ನ ಕಲಾವಿದರು ಅಭಿನಯಿಸುವ ಕವಿ ಡಾ.ಅಂಬೇಮೂಲೆ ಗೋವಿಂದ ಭಟ್‌ ರಚಿತ ಶ್ರೀ ಕೃಷ್ಣ ತುಲಾಭಾರ ಎಂಬ ಯಕ್ಷಗಾನ ಪ್ರದರ್ಶನ ಕೂಡ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9448510582, 9886066732

ಕಾಳಿಂಗ ನಾವಡ ಪ್ರಶಸ್ತಿ ಭಾಜನ ಮದ್ದಲೆ ಮಾಂತ್ರಿಕ : ಶಂಕರ ಭಾಗವತ
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರ ಹಾಡಿಗೆ ಮೆರುಗು ತುಂಬುವುದು ಚೆಂಡೆ  ಹಾಗೂ ಮದ್ದಲೆ. ಇವೆಲ್ಲದರ ಸಮ್ಮಿಲನದಿಂದ ಒಂದು ಸುಂದರ ಯಕ್ಷ ಲೋಕವೇ ಸೃಷ್ಟಿಯಾಗುತ್ತದೆ. ಮದ್ದಲೆಯ ವಾದಕರಲ್ಲಿ ಕೆಲವೇ ಕೆಲವು ಮಂದಿ ಜನಪ್ರಿಯರಾಗಿದ್ದಾರೆ. ಅವರಲ್ಲಿ ಶಂಕರ ಭಾಗವತ ಯಲ್ಲಾಪುರ ಕೂಡ ಒಬ್ಬರು.
ಹಳೆಯ ತಲೆಮಾರಿನ ಭಾಗವತರೂ ಅಲ್ಲದೇ ಈಗಿನ ಯುವ ಭಾಗವತರಿಗೂ ತಮ್ಮ ಮದ್ದಲೆಯ ನುಡಿಸಿ ಎಲ್ಲಾ ಕಾಲಘಟ್ಟಕ್ಕೂ ಸೈ ಎನಿಸಿಕೊಂಡು ಇಂದಿಗೂ ತಮ್ಮಕಲೆಯನ್ನು ಪ್ರದರ್ಶಿಸುತ್ತಾ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಆನಗೋಡಿನ ಶಿಸ್ತಮುಡಿಯ ಶ್ರೀ ರಾಮಚಂದ್ರ ಭಾಗವತ ಹಾಗೂ ಶ್ರೀಮತಿ ಕಮಲಾ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರುತಮ್ಮ 15 ನೆಯ ವಯಸ್ಸಿನಲ್ಲಿಯೇ ಮದ್ದಲೆಯ ಮೋಡಿಗೆ ಆಕರ್ಷಿತರಾಗಿ ಮದ್ದಲೆ ವಾದಕ ಪ್ರವೀಣ ದುರ್ಗಪ್ಪ ಗುಡಿಗಾರ್ ಹಾಗೂ ಶ್ರೀ ತಿಮ್ಮಪ್ಪ ನಾಯಕರಲ್ಲಿ ಮದ್ದಲೆಯ ಮಟ್ಟುಗಳನ್ನು ಕಲಿತು ಯಕ್ಷರಂಗಕ್ಕೆ ಕಾಲಿಟ್ಟರು. ಕೆರೆಮನೆ, ಅಮೃತೇಶ್ವರಿ, ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ತಮ್ಮ ಮದ್ದಲೆಯ ಮೋಡಿಯನ್ನು ಹರಿಸಿದ್ದಾರೆ. ಕೀರ್ತಿ ಶೇಷರಾದ ಕಡತೋಕ ಮಂಜುನಾಥ ಭಾಗವತ, ನಾರಾಯಣಉಪ್ಪೂರ್, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಹೀಗೆ ಹಲವಾರು ಭಾಗವತರುಗಳಿಗೆ ಮದ್ದಲೆ ವಾದಕರಾಗಿ ಜನಪ್ರಿಯರಾದರು.
ಯಕ್ಷಗಾನ ಗಾನ ಕೋಗಿಲೆ ದಿವಂಗತ ಕಾಳಿಂಗ ನಾವಡರ ಯಕ್ಷಗಾಯನದ ಜೊತೆಯಲ್ಲಿನ ಇವರ ಮದ್ದಲೆಯ ನಾದದ ಮೋಡಿ ಸಾಕಷ್ಟು ಹೆಸರು ಹಾಗೂ ಜನಪ್ರಿಯತೆಯನ್ನು ಇವರಿಗೆ ತಂದು ಕೊಟ್ಟಿತು. ಇಂದಿಗೂ ಹಲವಾರು ಧ್ವನಿ ಸುರುಳಿಗಳಲ್ಲಿ ಇವರಿಬ್ಬರ ನಾದ ವೈಭವವನ್ನು ನಾವು ಕೇಳಬಹುದು. ಶಿವರಾಮ ಹೆಗಡೆ, ದೇವರು ಹೆಗಡೆ, ಪಿ.ವಿ.ಹಾಸ್ಯಗಾರ್, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್‌ ರಾವ್, ಹೀಗೆ ಯಕ್ಷರಂಗದ ಮೇರು ಕಲಾವಿದರುಗಳಿಗೆ ತಮ್ಮ ಮದ್ದಲೆಯ ನುಡಿಸಿ ಅವರ ಹೆಜ್ಜೆಗಳಿಗೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿದ್ದಾರೆ. ಮದ್ದಲೆಯ ವಾದನದಲ್ಲಿ ಸುಮಾರು 40 ವರ್ಷಗಳ ತಿರುಗಾಟದ ಅನುಭವದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಲ್ಲದೇ ಯಕ್ಷಗಾನದ ಚೌಕಟ್ಟಿನಲ್ಲಿ ಮದ್ದಲೆಯ ನುಡಿಸುವ ಹೊಸ ಹೊಸ ಪ್ರಾಕಾರಗಳನ್ನು ರಂಗದ ಮೇಲೆ ಪ್ರದರ್ಶಿಸಿ ಅಪಾರ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಮುಂಬೈ,ಕೇರಳ,ಹೈದ್ರಾಬಾದ್,ಮದ್ರಾಸ್ ಹೀಗೆ ನಾಡಿನಾಚೆಗೂ ತಮ್ಮ ಕಲೆಯ ಕಂಪನ್ನು ಪಸರಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಆಕಾಶವಾಣಿ ಧಾರವಾಡ, ಕುಮಟ, ಮುಂಬೈ, ಬೆಂಗಳೂರು, ಸಿರ್ಸಿ, ಉಡುಪಿ ಹೀಗೆ ನಾಡಿನ ಉದ್ದಗಲದಲ್ಲೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಪ್ರಾಪ್ತರಾಗಿದ್ದಾರೆ.
ಸಿರಸಿಯಲ್ಲಿ ತಮ್ಮದೇ ಆದ ನಾದ ಶಂಕರ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಮದ್ದಲೆಯ ವಾದನದ ತರಭೇತಿಯನ್ನು ನೀಡುತ್ತಿದ್ದಾರೆ. ಇಲ್ಲಿ ಕಲಿತ ಹಲವಾರು ಶಿಷ್ಯರು ಯಕ್ಷಗಾನ ಮೇಳಗಳಲ್ಲಿ ಮದ್ದಲೆ ವಾದನದಲ್ಲಿ ಹೆಸರು ಮಾಡುತ್ತಿರುವುದು ಶಂಕರ ಭಾಗವತರ ಪ್ರತಿಭೆಗೆ ಸಾಕ್ಷಿ. ಸುದೀರ್ಘವಾಗಿ ಒಂದು ಕಲೆಯಲ್ಲಿ ತೊಡಗಿಸಿ ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಶಂಕರ ಭಾಗವತರುಇದಕ್ಕೆ ಅಪವಾದ ಎಂಬಂತೆ ಇನ್ನೂ ಕೂಡ ತಮ್ಮ ಕಲೆಯ ಹೊಳಪನ್ನು ಮಾಸದಂತೆ ಕಾಪಾಡಿಕೊಂಡು ಬಂದಿರುವುದು ಆ ಭಗವಂತನೇ ಅವರಿಗೆ ಕೊಟ್ಟ ದಿವ್ಯವಾದ ಶಕ್ತಿ. ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಯಕ್ಷಗಾನದ ಉಳಿವು ಹಾಗೂ ಬೆಳವಣಿಗೆಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಯಕ್ಷಲೋಕದ ದ್ರುವತಾರೆಯಾಗಿ ಮಿನುಗುತ್ತಿದ್ದಾರೆ.