Sunday, March 15, 2026
Home Blog Page 289

ಕಟೀಲು ಮೇಳಗಳ ಇಂದಿನ ಪ್ರಸಂಗಗಳು (21-12-2021)

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ರಂಗನಾಯಕ 

ಕಟೀಲು ಎರಡನೇ ಮೇಳ == ಕೊಂಡೇಲದೋಟ ಮನೆ, ಕೊಂಡೆಲ್ತಾಯ ದೈವಸ್ಥಾನದ ಬಳಿ, ಮೆನ್ನಬೆಟ್ಟು ಕಟೀಲು – ಕೃಷ್ಣ ಕೃಷ್ಣ ಶ್ರೀಕೃಷ್ಣ 

ಕಟೀಲು ಮೂರನೇ ಮೇಳ== ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ, ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಸಿದ್ದಕಟ್ಟೆ ಕೇಂದ್ರ ಮೈದಾನ – ಚಕ್ರೇಶ್ವರ ಪರೀಕ್ಷಿತ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಾಂಚಜನ್ಯ, ಭಕ್ತ ಸುಧಾಮ, ಶಂಬರಾಸುರ ವಧೆ 

ಕಟೀಲು ಆರನೇ ಮೇಳ == ದೇರೆಬೈಲು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಯಕ್ಷಾಂಗಣದಿಂದ 2ನೇ ವರ್ಷದ ನುಡಿಹಬ್ಬ – ತಾಳಮದ್ದಳೆ ಪರ್ವ

 ‘ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ. ಪಂಡಿತ ಪಾಮರರನ್ನು ಆಟ-ಕೂಟಗಳ ಮೂಲಕ ರಂಜಿಸುವ ಯಕ್ಷಗಾನ ಜನಮೆಚ್ಚಿದ ಕಲೆ’ ಎಂದು ಅಮ್ಮದ್ ನಗರದ ಉದ್ಯಮಿ ಹಾಗೂ ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿರ್ಮಾತೃ ಕೆ.ಕೆ.ಶೆಟ್ಟಿ ಹೇಳಿದ್ದಾರೆ.       

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದೊಂದಿಗೆ ನಗರದ ವಿ.ವಿ.ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ ಒಂಭತ್ತನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ – 2021’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಗರದ ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿ ‘ವೇದ, ಉಪನಿಷತ್ತು, ಭಗವದ್ಗೀತೆ ಹಾಗೂ ಭಾರತೀಯ ಮಹಾಕಾವ್ಯಗಳ ಸಂದೇಶವನ್ನು ಕಲಾವಿದರು ಸುಲಲಿತವಾಗಿ ತಮ್ಮ ಪ್ರೌಢ ಮಾತುಗಾರಿಕೆಯಿಂದ ಅನಾವರಣ ಗೊಳಿಸುವ ತಾಳಮದ್ದಳೆ ಒಂದು ನೈಜ ತತ್ವಾರ್ಥ ಗೋಷ್ಠಿ. ಅಂತಹ ಸರಣಿ ಯಕ್ಷಗಾನ ತಾಳಮದ್ದಳೆ ಕೂಟಗಳನ್ನು ವರ್ಷಂಪ್ರತಿ ನಡೆಸುವ ಯಕ್ಷಾಂಗಣದ ಕಾರ್ಯ ಶ್ಲಾಘನೀಯ’ ಎಂದರು.

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ :        ಸಮಾರಂಭದಲ್ಲಿ ಮೂಡಬಿದಿರೆಯ ಉದ್ಯಮಿ ಕಲಾಪೋಷಕ ಶ್ರೀಪತಿ ಭಟ್ಟರಿಗೆ  ಹಿರಿಯ ನಾಟಕಕಾರ ಸಂಜೀವ ದಂಡಕೇರಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡಿದರು. ಸುಧಾಕರ ರಾವ್ ಪೇಜಾವರ ಅಭಿನಂದಿಸಿದರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಉದಯ ಚೌಟ, ವಿ.ವಿ.ಕಾಲೇಜು ಪ್ರಾಚಾರ್ಯೆ ಡಾ.ಅನುಸೂಯ ರೈ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಮತ್ತು ದಿ.ಶಿವಾನಂದ ಕರ್ಕೇರರ ಧರ್ಮಪತ್ನಿ ಪ್ರಫುಲ್ಲ ಎಸ್.ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು.

ಸಾಧಕರ ಸ್ಮರಣೆ :         ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ 2013ರಲ್ಲಿ ಪ್ರಾರಂಭವಾದ ಸಂಸ್ಥೆ ಕಳೆದ 8 ವರ್ಷಗಳಿಂದ ತಾಳಮದ್ದಳೆ ಸಪ್ತಾಹ ವನ್ನು ನಡೆಸುವುದರೊಂದಿಗೆ ಅಗಲಿದ ಸಾಧಕರ ಸಂಸ್ಮರಣೆಯನ್ನೂ ಮಾಡುತ್ತಿದೆ. ಅದರಂತೆ ಯಕ್ಷಾಂಗಣದ ಉಪಾಧ್ಯಕ್ಷರಾಗಿದ್ದು ಕಳೆದ ವರ್ಷ ಆಕಸ್ಮಿಕವಾಗಿ ನಿಧನಹೊಂದಿದ ಕವಿ, ನಾಟಕಕಾರ ಅತ್ತಾವರ ಶಿವಾನಂದ ಕರ್ಕೇರ ಅವರ ನೆನಪಿಗಾಗಿ ಈ ಬಾರಿ ಶಿವಾನಂದ ಸ್ಮೃತಿ ಹಾಗೂ ಇತ್ತೀಚೆಗೆ ಅಗಲಿದ ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಮತ್ತು ಭಾಗವತ ಪದ್ಯಾಣ ಗಣಪತಿ ಭಟ್ ಅವರ ನೆನಪಿಗಾಗಿ ಪುರುಷೋತ್ತಮ ಸರಣಿ ಮತ್ತು ಪದ್ಯಾಣ ಪ್ರಣತಿ ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ’ ಎಂದರು.         

ಯುವ ಪ್ರಸಂಗಕರ್ತ ಮತ್ತು ಉಪನ್ಯಾಸಕ ಡಾ.ದಿನಕರ ಎಸ್. ಪಚ್ಚನಾಡಿ ಸ್ಮೃತಿ ವಚನ ನೆರವೇರಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಸಾಂಸ್ಕೃತಿಕ ಸಂಘಟಕ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಅವರಿಗೆ ‘ಶಿವಾನಂದ ಸ್ಮೃತಿ ಗೌರವ’ ನೀಡಲಾಯಿತು. ಇದೇ ಸಂದರ್ಭದಲ್ಲಿ ಕೀರ್ತಿಶೇಷ ಯಕ್ಷಗಾನ ಅರ್ಥಧಾರಿಗಳಾದ ಎ.ಕೆ. ನಾರಾಯಣಶೆಟ್ಟಿ ಮತ್ತು ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯನ್ನೂ ನಡೆಸಲಾಯಿತು.

ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ ನುಡಿನಮನ ಸಲ್ಲಿಸಿದರು.   ‌‌‌    ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ‘ಯಕ್ಷಾಂಗಣ ಶೀರ್ಷಿಕೆ ಗೀತೆ’ ಹಾಡಿದರು. ಕಾರ್ಯಾಧ್ಯಕ್ಷ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿಗಳಾದ ನಿವೇದಿತ ಎನ್.ಶೆಟ್ಟಿ ಬೆಳ್ಳಿಪ್ಪಾಡಿ ಮತ್ತು ಸುಮ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯ ಕೆ.ರವೀಂದ್ರ ರೈ ಹರೇಕಳ ನಿರೂಪಿಸಿ, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ , ಉಮೇಶ ಆಚಾರ್ಯ ಗೇರುಕಟ್ಟೆ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಿದ್ದಾರ್ಥ ಅಜ್ರಿ ಉಪಸ್ಥಿತರಿದ್ದರು. 

ತಾಳಮದ್ದಳೆ :        ಕಾರ್ಯಕ್ರಮದ ಅಂಗವಾಗಿ ಶಿವಾನಂದ ಕರ್ಕೇರ ಅವರ ನಾಟಕ ಆಧಾರಿತ ‘ಕಾರ್ನಿಕೊದ ವೈದ್ಯನಾಥೆ’  ತುಳು ತಾಳಮದ್ದಳೆ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ‘ ಪಾಂಚಜನ್ಯ ‘ಯಕ್ಷಗಾನ ಕೂಟ ಜರಗಿತು. ಪ್ರಶಾಂತ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರು ಹಿಮ್ಮೇಳ – ಮುಮ್ಮೇಳಗಳಲ್ಲಿ ಭಾಗವಹಿಸಿದರು.

ಇಂದು ಆಟ ಎಲ್ಲೆಲ್ಲಿ? (21-12-2021)

ಮೇಳಗಳ ಇಂದಿನ (21.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಆಲೂರು ಸಸಿಹಿತ್ಲು ಭಾಂದವ್ಯ ಬಳಗದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ, ಸರಸ್ವತಿ ಸದನ – ರಂಗನಾಯಕ 

ಕಟೀಲು ಎರಡನೇ ಮೇಳ == ಕೊಂಡೇಲದೋಟ ಮನೆ, ಕೊಂಡೆಲ್ತಾಯ ದೈವಸ್ಥಾನದ ಬಳಿ, ಮೆನ್ನಬೆಟ್ಟು ಕಟೀಲು – ಕೃಷ್ಣ ಕೃಷ್ಣ ಶ್ರೀಕೃಷ್ಣ 

ಕಟೀಲು ಮೂರನೇ ಮೇಳ== ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ, ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಸಿದ್ದಕಟ್ಟೆ ಕೇಂದ್ರ ಮೈದಾನ – ಚಕ್ರೇಶ್ವರ ಪರೀಕ್ಷಿತ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಪಾಂಚಜನ್ಯ, ಭಕ್ತ ಸುಧಾಮ, ಶಂಬರಾಸುರ ವಧೆ 

ಕಟೀಲು ಆರನೇ ಮೇಳ == ದೇರೆಬೈಲು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಮಂಜುನಾಥ ನಿಲಯ ಗರಡಿಬೆಟ್ಟು ಕೆಳಕರ್ಜೆ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಮಂಜುನಾಥ ನಿಲಯ ಗರಡಿಬೆಟ್ಟು ಕೆಳಕರ್ಜೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶಿವಾನುಗ್ರಹ ಹಳ್ಳಾಡಿ ಹರ್ಕಾಡಿ 

ಮಂದಾರ್ತಿ ನಾಲ್ಕನೇ ಮೇಳ   == ನನಸು ನಿಲಯ ಕಂಬಿಕಲ್ಲು ಕರ್ಕುಂಜೆ – ಕೂಡಾಟ 

ಮಂದಾರ್ತಿ ಐದನೇ ಮೇಳ  == ನನಸು ನಿಲಯ ಕಂಬಿಕಲ್ಲು ಕರ್ಕುಂಜೆ – ಕೂಡಾಟ 

ಹನುಮಗಿರಿ ಮೇಳ == ಉಡುಪಿ ರಾಜಾಂಗಣ – ಶುಕ್ರನಂದನೆ

ಶ್ರೀ ಸಾಲಿಗ್ರಾಮ ಮೇಳ == ಆಮದಳ್ಳಿ (ಉ.ಕ) – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಗುಂದ – ಕಾಶಿಮಾಣಿ, ಮಾಯಾ ಮೃಗಾವತಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ತೆಂಕಬೈಲು ದೊಡ್ಮನೆ ನಾಡ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹಾಡಿಮನೆ ನಂದನವನ ನಾಯ್ಕನಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ತೆಂಕಬೈಲು ದೊಡ್ಮನೆ ನಾಡ 

ಶ್ರೀ ಪಾವಂಜೆ ಮೇಳ  == ಬೆಳ್ಳಾಯರು ಕೆರೆಕಾಡು, ಪೂಪಾಡಿಕಟ್ಟೆ – ಶ್ರೀ ದೇವಿ ಮಹಾತ್ಮೆ  

ಕಮಲಶಿಲೆ ಮೇಳ  == ಆಗುಂಬೆ 

ಶ್ರೀ ಅಮೃತೇಶ್ವರೀ ಮೇಳ ==  ಉಳ್ಳೂರು – 74   

ಶ್ರೀ ಸೌಕೂರು ಮೇಳ == ‘ಶಂಕರಪ್ಪನಕೊಡ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಅಗ್ನಿನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಮುದರಂಗಡಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಅಂಬಾಗಿಲು ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ/ಪಂಚದೂಮಾವತಿ ದೈವಸ್ಥಾನದ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಪೆರ್ಡೂರು ಕಲ್ಪಂಡೆ ಫ್ರೆಂಡ್ಸ್ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ ==  ಶ್ರೀ ವನದುರ್ಗಾಪರಮೇಶ್ವರಿ ಮತ್ತು ಭೈರವೇಶ್ವರ ಹಾಗೂ ಸಪರಿವಾರ ದೇವಸ್ಥಾನ ಕೊಳಾಳಿ ಯಡಮೊಗೆ 

ಶ್ರೀ ಸಿಗಂದೂರು ಮೇಳ == ರಟ್ಟಾಡಿ ಈಶ್ವರ ದೇವಸ್ಥಾನದ ವಠಾರ 

ಶ್ರೀ ನೀಲಾವರ ಮೇಳ  == ಶಂಕರನಾರಾಯಣ ದೇವಸ್ಥಾನದ ವಠಾರ – ಭಗವಾನ್ ಬುದ್ಧ 

ಶ್ರೀ ಹಟ್ಟಿಯಂಗಡಿ ಮೇಳ == ಹೆಮ್ಮಾಡಿ – ದೀಪ ದರ್ಪಣ  

ಶ್ರೀ ಹಾಲಾಡಿ ಮೇಳ == ಆಜ್ರಿ ಹರ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ==  ಕಾಲ್ತೋಡು – ಯಮಲೋಕ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಂಜೇಶ್ವರ ಹೊಸಂಗಡಿ ಕನಿಲ ಶ್ರೀ ಭಗವತಿ ಭಂಡಾರ ಮಂದಿರದ ಬಳಿ – ರಂಗಸ್ಥಳ 

ಪ್ರೇಕ್ಷಕನಿಗೆ ಏನನ್ನು ಕೊಡಬೇಕು ಎಂಬುದು ಕಲಾವಿದನಿಗೆ ಗೊತ್ತಿರಬೇಕು – ಕೊಂಡದಕುಳಿ

ಯಕ್ಷಗಾನದ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಅರವತ್ತರ ಅಭಿನಂದನಾ ಕಾರ್ಯಕ್ರಮ ಸದ್ಗುರು ಗೆಳೆಯರ ಬಳಗ, ಹೊನ್ನಾವರ ಇವರ ಆಯೋಜನೆಯಲ್ಲಿ ಕೊಂಡದಕುಳಿ ಸಮೀಪದ ಕೊಡಾಣಿಯಲ್ಲಿ ಸಂಪನ್ನಗೊಂಡಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಾರಂಭವನ್ನು ಉದ್ಘಾಟಿಸಿದರು. ಶಾಸಕ ಸುನಿಲ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಸೆಲ್ಕೋ ಸಿ.ಇ.ಒ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ವಿದ್ವಾಂಸ ಡಾ. ಜಿ. ಎಲ್. ಹೆಗಡೆ ಹಾಗೂ ಊರ ಗಣ್ಯರು ಅಭ್ಯಾಗತರಾಗಿ ಭಾಗವಹಿಸಿದ್ದರು. ತೋಟಿಮನೆ ಗಣಪತಿ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ಅತ್ಯಂತ ಆತ್ಮೀಯವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕೊಂಡದಕುಳಿಯವರಿಗೆ ‘ಯಕ್ಷವಿಭೂಷಣ’ ಬಿರುದು ನೀಡಿ ಗೌರವಿಸಲಾಯಿತು.


ಔದಾರ್ಯ ಮೆರೆದ ಕೊಂಡದಕುಳಿ: ಸಮ್ಮಾನಕ್ಕೆ ಉತ್ತರವಾಗಿ ಅವರು, “ಕಲಾವಿದ ಒಬ್ಬ ತಪಸ್ವಿ, ಪ್ರೇಕ್ಷಕರಿಗೆ ಏನನ್ನು ಕೊಡಬೇಕೆಂಬುದು ಅವನಿಗೆ ಗೊತ್ತಿರಬೇಕು” ಎಂದು ಮಾರ್ಮಿಕವಾಗಿ ಹೇಳಿದರು.

ಊರ ಅಭಿಮಾನಿಗಳು ಅರವತ್ತರ ನೆನಪಿನಲ್ಲಿ ತನಗೆ ನಿಧಿ ಸಮರ್ಪಿಸಲು ಬಂದಾಗ ಇದು ನನಗಲ್ಲ ಯಕ್ಷಗಾನಕ್ಕೆ, ಕಲಾವಿದರಿಗೆ, ಕೆಲಸ ಮಾಡುವ ಸಂಘಟನೆಗೆ ಹಾಗೂ ಅನಾಥರಾಗಿ ವಿದ್ಯೆಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಕೊಡಬೇಕೆಂಬ ಸೂಚನೆಯೊಂದಿಗೆ ಅರವತ್ತರ ಆಚರಣೆ ಉಳಿದವರಿಗೆ ಮಾದರಿಯಾಗುವಂತೆ ಮಾಡಿ ತೋರಿಸಿದರು.

ಈ ಸಂದರ್ಭದಲ್ಲಿ ಇಬ್ಬರು ಅನಾಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಅರವತ್ತು ಸಾವಿರ ರೂಪಾಯಿ ಮತ್ತು ಯಕ್ಷಗಾನ ಕಲೆ-ಕಲಾವಿದರಿಗೆ ಕೆಲಸ ಮಾಡುತ್ತಿರುವ ಯಕ್ಷಗಾನ ಕಲಾರಂಗ ಉಡುಪಿ ಮತ್ತು ಹಂಗಾರಕಟ್ಟೆ ಯಕ್ಷಗಾನ ಕೇಂದ್ರಕ್ಕೆ ತಲಾ ರೂಪಾಯಿ ಐವತ್ತು ಸಾವಿರ ಹಮ್ಮಿಣಿ ಸಮರ್ಪಿಸಿ ‘ಅರವತ್ತರ ಅರಳು’ ಸಮಾರಂಭವನ್ನು ಅರ್ಥಪೂರ್ಣಗೊಳಿಸಿದರು.

ಯಕ್ಷಗಾನ ಕಲಾರಂಗ ಕಲಾವಿದರ ಕ್ಷೇಮ ಚಿಂತನೆಯ ಕುರಿತು ಮಾಡುವ ಕೆಲಸವನ್ನು, ಹಂಗಾರ ಕಟ್ಟೆ ಯಕ್ಷಗಾನ ಕೇಂದ್ರ ಯಕ್ಷಗಾನ ಕಲಿಕೆಗೆ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಕೊಂಡದಕುಳಿಯವರು ತಮ್ಮ ಐವತ್ತರ ಸಂಭ್ರಮದಲ್ಲಿ ಯಕ್ಷಗಾನ ಕಲಾರಂಗಕ್ಕೆ ರೂಪಾಯಿ ಐವತ್ತು ಸಾವಿರ ನೀಡಿದ್ದನ್ನು ಮುರಲಿ ಕಡೆಕಾರ್ ಸ್ಮರಿಸಿಕೊಂಡರು.

ಈ ವರೆಗೆ ರೂಪಾಯಿ ಇಪ್ಪತ್ತೈದು ಸಾವಿರ ನಗದು ಪುರಸ್ಕಾರದೊಂದಿಗೆ ತಮ್ಮ ಅಜ್ಜ ಕೊಂಡದಕುಳಿ ರಾಮ ಹೆಗಡೆ ನೆನಪಿನಲ್ಲಿ ಮೂವತ್ತೊಂದು ಕಲಾವಿದರಿಗೆ ಪ್ರಶಸ್ತಿ ನೀಡಿರುವುದು ಉಲ್ಲೇಖನೀಯ. ಕಾರ್ಯಕ್ರಮದ ಸಂಘಟಕ ಮಂಜುನಾಥ ಭಟ್ ವಂದನಾರ್ಪಣೆ ಸಲ್ಲಿಸಿದರು. ಕೊನೆಯಲ್ಲಿ ನಡೆದ ಯಕ್ಷಗಾನ ಪ್ರಸಂಗ ಚಂದ್ರಹಾಸ ಚರಿತ್ರೆಯಲ್ಲಿ ದುಷ್ಟಬುದ್ಧಿಯ ಪಾತ್ರ ನಿರ್ವಹಿಸಿ ಅಪಾರ ಸಂಖ್ಯೆಯಲ್ಲಿ ಸೇರಿದ ಕಲಾಭಿಮಾನಿಗಳಿಗೆ ಸಂತಸ ನೀಡಿದರು.

ಕಟೀಲು ಮೇಳದ ಇಂದಿನ ಪ್ರಸಂಗಗಳು (20-12-2021)

ಕಟೀಲು ಒಂದನೇ ಮೇಳ == ದೇವಿಕೃಪಾ ಹೌಸ್, ಹಿರಿಯಂಗಡಿ ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ, ಸರಸ್ವತಿ ಸದನ – ತ್ರಿಜನ್ಮ ಮೋಕ್ಷ 

ಕಟೀಲು ಮೂರನೇ ಮೇಳ== ಬೊಳಂತೂರುಗುತ್ತು, ಅರಸುಕುರಿಯಾಡಿತ್ತಾಯ ಮಾಡದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ತೋಕೂರು ಶೇಡಿಗುರಿ, ಜೋಗಟ್ಟೆ ಕೋಡಿಕೆರೆ ವಯಾ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಕುಕ್ಕಿಲಮನೆ ಜಾರ್ಕಳ ಬೈಲೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಮಾರಿಯಮ್ಮಗೋಳಿ ಕೊಣಾಜೆ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (20-12-2021)

ಮೇಳಗಳ ಇಂದಿನ (20.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹಾಲಾಡಿ ಚೋರಾಡಿ ಹೊಸಮನೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ದೇವಿಕೃಪಾ ಹೌಸ್, ಹಿರಿಯಂಗಡಿ ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ, ಸರಸ್ವತಿ ಸದನ – ತ್ರಿಜನ್ಮ ಮೋಕ್ಷ 

ಕಟೀಲು ಮೂರನೇ ಮೇಳ== ಬೊಳಂತೂರುಗುತ್ತು, ಅರಸುಕುರಿಯಾಡಿತ್ತಾಯ ಮಾಡದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ತೋಕೂರು ಶೇಡಿಗುರಿ, ಜೋಗಟ್ಟೆ ಕೋಡಿಕೆರೆ ವಯಾ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಕುಕ್ಕಿಲಮನೆ ಜಾರ್ಕಳ ಬೈಲೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಮಾರಿಯಮ್ಮಗೋಳಿ ಕೊಣಾಜೆ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಗಣೇಶಕೃಪಾ ಹೊನ್ನನಕೇರಿ ಕುಂದಾಪುರ 

ಮಂದಾರ್ತಿ ಎರಡನೇ ಮೇಳ   == ಪುರಾಣಿಬೈಲು ವಕ್ವಾಡಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  ==  ಪುರಾಣಿಬೈಲು ವಕ್ವಾಡಿ – ಕೂಡಾಟ    

ಮಂದಾರ್ತಿ ನಾಲ್ಕನೇ ಮೇಳ   == ಶ್ರೀದುರ್ಗಾ ನಿಲಯ ಹರ್ತಟ್ಟು ಗಿಳಿಯಾರು ಕೋಟ 

ಮಂದಾರ್ತಿ ಐದನೇ ಮೇಳ  == ಅಂಗಡಿಮಕ್ಕಿಮನೆ ಮರವಂತೆ 

ಹನುಮಗಿರಿ ಮೇಳ == ಕಟೀಲು ಕ್ಷೇತ್ರ ‘ಮಹಾಲಕ್ಷ್ಮಿ ಸದನ’ – ಕನಕಾಂಗಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಬಂಕಿಕೊಡ್ಲು – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಹಿತ್ಲಳ್ಳಿ – ಲಂಕಾದಹನ, ರಾಜಾ ರುದ್ರಕೋಪ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶಿರೂರು ಆರ್ಮಕ್ಕಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೊಸೂರು ಗುರುವನಕೋಟೆ ಏಳಜಿತ್ 

ಶ್ರೀ ಪಾವಂಜೆ ಮೇಳ  == ಶ್ರೀರಾಮ ಭಜನಾ ಮಂದಿರ ಉರ್ವ ಬೋಳೂರು – ಶ್ರೀ ದೇವಿ ಮಹಾತ್ಮೆ  

ಕಮಲಶಿಲೆ ಮೇಳ  == ಕಲ್ಯಾಣಿ ದುರ್ಗಾಪರಮೇಶ್ವರಿ ದೇವಸ್ಥಾನ ಕಾರಿಬೈಲು 

ಶ್ರೀ ಅಮೃತೇಶ್ವರೀ ಮೇಳ ==  ಜನ್ಸಾಲೆ – ಸಿಗಂದೂರು ಮೇಳದೊಂದಿಗೆ ಕೂಡಾಟ    

ಶ್ರೀ ಸೌಕೂರು ಮೇಳ == ‘ಶಿರೂರು ಆರ್ಮಕ್ಕಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹತ್ತಿರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸಚ್ಚರಿಪೇಟೆ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಬೈಲೂರು ಕೊರಂಗ್ರಪಾಡಿ ಶ್ರೀ ಮಹಿಷಮರ್ದಿನಿ ದೇವಾಲಯ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಪೇತ್ರಿ ಯುವಕ ಮಂಡಲ ವಠಾರ 

ಶ್ರೀ ಶನೀಶ್ವರ ಮೇಳ ==  ಭಟ್ರಪಾಡಿ ರಸ್ತೆ ನೇರಳಕಟ್ಟೆ 

ಶ್ರೀ ಸಿಗಂದೂರು ಮೇಳ == ಜನ್ಸಾಲೆ – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ 

ಶ್ರೀ ನೀಲಾವರ ಮೇಳ  == ಸಾಸ್ತಾನ ಪೇಟೆ – ಮಧುರ ಮೇಘನ 

ಶ್ರೀ ಹಟ್ಟಿಯಂಗಡಿ ಮೇಳ == ಮೈಯಾಡಿ ಮಾಸ್ತಿಯಮ್ಮ ದೇವಸ್ಥಾನ ಬೈಂದೂರು – ದೀಪ ದರ್ಪಣ  

ಶ್ರೀ ಹಾಲಾಡಿ ಮೇಳ == ನಾಡ ಗುಡ್ಡೆಯಂಗಡಿ ಪೇಟೆ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ==  ಬಂಡಸಾಲೆ ಬೈಂದೂರು – ಮುತ್ತಿನ ಹಾರ 

ಶ್ರೀ ಬಪ್ಪನಾಡು ಮೇಳ == ‘ಮೂಡಬಿದ್ರಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣ – ಬನತ ಬಂಗಾರ್ 

ಕಟೀಲು ಮೇಳದ ಇಂದಿನ ಪ್ರಸಂಗಗಳು (19-12-2021)

ಕಟೀಲು ಒಂದನೇ ಮೇಳ == ಕುರಾಯ ಶ್ರೀ ಸದಾಶಿವ ದೇವಸ್ಥಾನದ ಬಳಿ, ಬಂದಾರು, ಬೆಳ್ತಂಗಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಮೇಗಿನಕುದ್ರಾಡಿ ಗುತ್ತು, ಕೊಟ್ಟಾರಚೌಕಿ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಪ್ರಭಾನಿಧಿ ಬಿ.ಸಿ.ರೋಡ್ – ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ, ಸರಸ್ವತಿ ಸದನ – ದ್ವಾದಶಾಕ್ಷರೀ ಮಹಾತ್ಮೆ (ಧ್ರುವ ಚರಿತ್ರೆ, ಜಾಂಬವತಿ ಕಲ್ಯಾಣ, ಭೌಮಾಸುರ ವಧೆ)

ಕಟೀಲು ಐದನೇ ಮೇಳ == ಜ್ಯೋತಿನಿವಾಸ, ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ನಂದಾವರ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಡಾ. ರಾಜೇಂದ್ರ ಕೆದ್ಲಾಯ ಅಂಬಲಪಾಡಿ ಯಕ್ಷಗಾನ ಮಂಡಳಿಗೆ ಭೇಟಿ

ಅಂಬಲಪಾಡಿ ಯಕ್ಷಗಾನ ಮಂಡಳಿಯಲ್ಲಿ ಎರಡು ದಶಕಗಳ ಕಾಲ ವೇಷಧಾರಿಯಾಗಿ ಸೇವೆಗೈದು ಪ್ರಕೃತ ಅಮೇರಿಕದಲ್ಲಿ ನೆಲೆಸಿರುವ ಡಾ. ಎಚ್. ರಾಜೇಂದ್ರ ಕೆದ್ಲಾಯ ಇಂದು ಮಂಡಳಿಯ ನೂತನ ಕಟ್ಟಡಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನರಸಿಂಹ ತುಂಗರ ನಿರ್ದೇಶನದಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕೆದಿಲಾಯರು ಯಕ್ಷಗಾನ ಪರಿಪೂರ್ಣ ಕಲೆಯಾಗಿ ಜಾಗತಿಕ ಮನ್ನಣೆ ಗಳಿಸಿದ್ದು,ಹೇಗೆ ತನಗೆ ಯಕ್ಷಗಾನದಿಂದಾಗಿ ಅಮೇರಿಕದಲ್ಲಿ ಗೌರವ ದೊರೆಯುತ್ತಿದೆ ಎಂಬುದನ್ನು ವಿವರಿಸಿ,ಶಿಬಿರಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್,ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ತಾರಾ ದೇವಿ, ಅಂಬಲಪಾಡಿ ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್, ಕೋಶಾಧಿಕಾರಿ ಎ.ನಟರಾಜ ಉಪಾಧ್ಯ ಉಪಸ್ಥಿತರಿದ್ದರು.

ಇಂದು ಆಟ ಎಲ್ಲೆಲ್ಲಿ? (19-12-2021)

ಮೇಳಗಳ ಇಂದಿನ (19.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತಲ್ಲೂರು ಪಾರ್ತಿಕಟ್ಟೆ ಅನುಗ್ರಹ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕುರಾಯ ಶ್ರೀ ಸದಾಶಿವ ದೇವಸ್ಥಾನದ ಬಳಿ, ಬಂದಾರು, ಬೆಳ್ತಂಗಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಮೇಗಿನಕುದ್ರಾಡಿ ಗುತ್ತು, ಕೊಟ್ಟಾರಚೌಕಿ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಪ್ರಭಾನಿಧಿ ಬಿ.ಸಿ.ರೋಡ್ – ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ, ಸರಸ್ವತಿ ಸದನ – ದ್ವಾದಶಾಕ್ಷರೀ ಮಹಾತ್ಮೆ (ಧ್ರುವ ಚರಿತ್ರೆ, ಜಾಂಬವತಿ ಕಲ್ಯಾಣ, ಭೌಮಾಸುರ ವಧೆ)

ಕಟೀಲು ಐದನೇ ಮೇಳ == ಜ್ಯೋತಿನಿವಾಸ, ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ನಂದಾವರ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ದುರ್ಗಾ ಕ್ಯಾಶ್ಯೂ ವಕ್ವಾಡಿ ರೋಡ್ ಕುಂಭಾಶಿ 

ಮಂದಾರ್ತಿ ಎರಡನೇ ಮೇಳ   == ಹಿಮಗಿರಿ ಹೌಸ್ ರಂಗನಕೆರೆ ಬಾರ್ಕೂರು – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಹಿಮಗಿರಿ ಹೌಸ್ ರಂಗನಕೆರೆ ಬಾರ್ಕೂರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಕುದ್ರಾಳಗುಂಡಿ ಮನೆಯವರು ಶಿರಿಯಾರ 

ಮಂದಾರ್ತಿ ಐದನೇ ಮೇಳ  == ಜ್ಯೋತಿ ನಿಲಯ ಕೊಡೇರಿ ಬೈಂದೂರು 

ಹನುಮಗಿರಿ ಮೇಳ == ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಆರಾಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಮಹಾಮಂತ್ರಿ ದುಷ್ಟಬುದ್ಧಿ 

ಶ್ರೀ ಪೆರ್ಡೂರು ಮೇಳ == ಕಡೆಕೇರಿ ಕಾನಳ್ಳಿ – ಚಂದ್ರಹಾಸ, ರತಿ ಕಲ್ಯಾಣ  

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ

ಶ್ರೀ ಮಾರಣಕಟ್ಟೆ ಮೇಳ ‘ಬಿ == ರತ್ನಶ್ರೀ, ಉಳ್ಳೂರು – 11

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ

ಶ್ರೀ ಪಾವಂಜೆ ಮೇಳ  == ಮುದ್ದಣ್ಣ ನಗರ ಸಾಣೂರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಕಮಲಶಿಲೆ ಮೇಳ  == ಸಿದ್ಧಾಪುರ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ರಾಮನಾಥ ದೇವಸ್ಥಾನ ಕೋಟ 

ಶ್ರೀ ಸೌಕೂರು ಮೇಳ == ‘ಅಂಪಾರು ಪೇಟೆ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮಳಲಿ ಮಟ್ಟಿಕಟ್ಟೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಉದ್ಯಾವರ ಸಂಪಿಗೆನಗರ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಬೀಚ್ ಶ್ರೀ ಶಿವಪಂಚಾಕ್ಷರಿ ಭಜನಾ ಮಂದಿರದ ವಠಾರ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಹುಣಸೆಮಕ್ಕಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಭದ್ರಮಹಾಕಾಳಿ ದೇವಸ್ಥಾನ, ಕಟ್ ಬೆಳ್ತೂರು 

ಶ್ರೀ ಸಿಗಂದೂರು ಮೇಳ == ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ  

ಶ್ರೀ ನೀಲಾವರ ಮೇಳ  == ಬಿದ್ಕಲ್ ಕಟ್ಟೆ ಪೇಟೆ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಬೈಂದೂರು – ದೀಪ ದರ್ಪಣ  

ಶ್ರೀ ಬಪ್ಪನಾಡು ಮೇಳ == ‘ಮೂಡುಕೊಣಾಜೆ ಕುಕ್ಕುದಕಟ್ಟೆ ಬಸ್ ನಿಲ್ದಾಣದ ಬಳಿ – ಅಜ್ಜ ಅಜ್ಜ ಕೊರಗಜ್ಜ

ಶ್ರೀ ಸಸಿಹಿತ್ಲು ಭಗವತೀ ಮೇಳ == ಹಳೆಯಂಗಡಿ ಮಾತಾ ರೆಸಿಡೆನ್ಸಿ ಮುಂಭಾಗ – ಮುಗುರು ಮಲ್ಲಿಗೆ 

ನಾಳ ಮೇಳ == ಕಾಟಿಪಳ್ಳ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ