Monday, March 16, 2026
Home Blog Page 280

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 08.02.2022

ಕಟೀಲು ಒಂದನೇ ಮೇಳ == ಕುತ್ತೆತ್ತೂರು ಕಂಬಳಿಮನೆ ಬಾಜಾವು – ಮಹಾಬ್ರಾಹ್ಮಣ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಹನುಮೋದ್ಭವ, ಪಾಂಚಜನ್ಯ, ಶ್ರೀನಿವಾಸ ಕಲ್ಯಾಣ 

ಕಟೀಲು ಮೂರನೇ ಮೇಳ== ನಡುವಂತಾಡಿ ಹೌಸ್, ಪಾಂಗಲ್ಪಾಡಿ ಅಜ್ಜಿಬೆಟ್ಟು ವಾಮದಪದವು ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಮಹಾಲಕ್ಷ್ಮಿ ನಿವಾಸ, ಅಜೆಕಾರು ಕಾರ್ಕಳ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಕೆಂಜಾರುಗುತ್ತು, ಕೆಂಜಾರು ಮರವೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಗುಂಡುರಾವ್ ಮಾಸ್ತರ್ ಹೌಸ್, ಹೆಜಮಾಡಿ ಉಡುಪಿ – ಶ್ರೀ ದೇವಿ ಮಹಾತ್ಮ್ಯೆ 

ಇಂದು ಆಟ ಎಲ್ಲೆಲ್ಲಿ? (08-02-2022)

ಮೇಳಗಳ ಇಂದಿನ (08.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಜಿಪ ಚೇಳೂರು ಬಾಕಿಮಾರು ಗದ್ದೆಯಲ್ಲಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಕುತ್ತೆತ್ತೂರು ಕಂಬಳಿಮನೆ ಬಾಜಾವು 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ನಡುವಂತಾಡಿ ಹೌಸ್, ಪಾಂಗಲ್ಪಾಡಿ ಅಜ್ಜಿಬೆಟ್ಟು ವಾಮದಪದವು ಬಂಟ್ವಾಳ 

ಕಟೀಲು ನಾಲ್ಕನೇ ಮೇಳ  == ಮಹಾಲಕ್ಷ್ಮಿ ನಿವಾಸ, ಅಜೆಕಾರು ಕಾರ್ಕಳ 

ಕಟೀಲು ಐದನೇ ಮೇಳ == ಕೆಂಜಾರುಗುತ್ತು, ಕೆಂಜಾರು ಮರವೂರು 

ಕಟೀಲು ಆರನೇ ಮೇಳ == ಗುಂಡುರಾವ್ ಮಾಸ್ತರ್ ಹೌಸ್, ಹೆಜಮಾಡಿ ಉಡುಪಿ 

ಮಂದಾರ್ತಿ ಒಂದನೇ ಮೇಳ  == ಐರ್ ಬೈಲುಜಾಂಬ್ಳಿ ಜನಸಾಲೆ ಸಿದ್ಧಾಪುರ ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಸೂರ್ಯ ದೇವಸ್ಥಾನ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ಚಾಪಾಳಿಮನೆ ಕೆಂಜೂರು ಕೊಕ್ಕರ್ಣೆ 

ಮಂದಾರ್ತಿ ನಾಲ್ಕನೇ ಮೇಳ   == ಐರ್ ಬೈಲುಜಾಂಬ್ಳಿ ಜನಸಾಲೆ ಸಿದ್ಧಾಪುರ ಕೂಡಾಟ 

ಮಂದಾರ್ತಿ ಐದನೇ ಮೇಳ  ==  ಶ್ರೀನಿಧಿ ನಿಲಯ ಹನೇಹಳ್ಳಿ ಕೂರಾಡಿ 

ಹನುಮಗಿರಿ ಮೇಳ == ಹೊಸನಗರ ಕೋಟೆಕೆರೆ ಹೊಸಳ್ಳಿ ಸರ್ಕಲ್ ಬಳಿ – ತ್ರಿಜನ್ಮ ಮೋಕ್ಷ 

ಶ್ರೀ ಪೆರ್ಡೂರು ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಅಬ್ಬಿಹಿತ್ಲು, ಭಟ್ಕಳ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಳನಕೋಡು ಉಳ್ಳೂರು – 74

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೂಕಾಂಬಿಕಾ ನಿಲಯ, ಗುಟ್ರುಕೋಡು ಮನೆ, ಜಪ್ತಿ – (ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಕೂಡಾಟ)

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಚಕ್ರಮ್ಮ ದೇವಸ್ಥಾನ, ಕೋಡಿ 

ಶ್ರೀ ಪಾವಂಜೆ ಮೇಳ == ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ನೇರಳಕಟ್ಟೆ 

ಶ್ರೀ ಅಮೃತೇಶ್ವರೀ ಮೇಳ == 11ನೇ ಉಳ್ಳೂರು, ಉಪ್ರಳ್ಳಿ ಕೆಳಮನೆ 

ಶ್ರೀ ಸೌಕೂರು ಮೇಳ == ಗುಟ್ರುಕೋಡು ಮನೆ, ಜಪ್ತಿ – (ಮಾರಣಕಟ್ಟೆ ಮತ್ತು ಸೌಕೂರು ಮೇಳಗಳ ಕೂಡಾಟ)

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮುಳ್ಳುಕುಂಟೆ ಕಟ್ ಬೆಲ್ತೂರು ಶಿವಶಕ್ತಿ ಭಜನಾ ಮಂದಿರ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹಾಲಾಡಿ ಕಾಸಾಡಿ ಶಾಲಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರದಲ್ಲಿ – ಶಿವಪಂಚಾಕ್ಷರಿ ಮಹಾತ್ಮ್ಯೆ 

ಶ್ರೀ ಶನೀಶ್ವರ ಮೇಳ ==  ಹಾಲ್ಕಲ್ ಕೊಲ್ಲೂರು 

ಶ್ರೀ ಸಿಗಂದೂರು ಮೇಳ == ಹಕ್ಲಾಡಿ 

ಶ್ರೀ ನೀಲಾವರ ಮೇಳ  ==  ಹೆನ್ನೇಬೈಲು 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ದತ್ತರಾಜಪುರ ಸಂತೆಹಕ್ಲು ರಾಮನಾಥಪುರ ಶ್ರೀ ರಾಮನಾಥೇಶ್ವರ ಸದ್ಭಕ್ತರ ಸೇವೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ನಂದಿಕೇಶ್ವರ ಪರಿವಾರ ದೈವಸ್ಥಾನ ಬೆದ್ರಾಡಿ, ಕಲ್ಸಂಕ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಶ್ರೀ ಕಾಮಲಿಂಗ ಮಹಾಂಕಾಳಿ ಸಹಪರಿವಾರ ದೈವಸ್ಥಾನ ಆನಗಳ್ಳಿ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಮಹಾಸತಿ ದೇವಸ್ಥಾನ ಹಳಗೇರಿ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಗೋಕುಲನಗರ ನಾಗ ಸನ್ನಿಧಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಕೊಡವೂರು (ಉಡುಪಿ) ಮೂಡುಬೆಟ್ಟು ಶ್ರೀ ರಕ್ತೇಶ್ವರಿ ಮತ್ತು ನಾಗದೇವರ ಸನ್ನಿಧಿ – ಕಂಚೀಲ್ದ ಪರಕೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 07.02.2022

ಕಟೀಲು ಒಂದನೇ ಮೇಳ == ಮಲ್ಲಿಕಾರ್ಜುನ ಸೇವಾ ಸಮಿತಿ ಸ್ವಾಮಿಲಪದವು, ಪೆರ್ಮುದೆ ಬಜಪೆ – ಹಿರಣ್ಯಾಕ್ಷ ವಧೆ, ಪ್ರಹ್ಲಾದ ಚರಿತ್ರೆ, ಕುಂಭಕರ್ಣ, ರಾವಣ ವಧೆ,ದಮಯಂತಿ ಪುನಃಸ್ವಯಂವರ 

ಕಟೀಲು ಎರಡನೇ ಮೇಳ == ಶ್ರೀ ಗೋಪಾಲಕೃಷ್ಣ ನರಸಿಂಹ ದೇವಸ್ಥಾನ, ಪಲ್ಲಿಪಾಡಿ ಬಡಗಬೆಳ್ಳೂರು – ದಶಾವತಾರ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ನಾಲ್ಕನೇ ಮೇಳ  == ಅನ್ನೆದ ಗುತ್ತು ಕುಟುಂಬಿಕರು, ಮುಂಡ್ಕೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಜಾರದಬೆಟ್ಟು ಮೂಡುಶೆಡ್ಡೆ, ಬೋಂದೆಲ್ ಚರ್ಚಿನ ಹಿಂಭಾಗ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಸುರತ್ಕಲ್, ಮೂರುಕಾವೇರಿ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಕಲಾವಿದ ವಾಮನ ಕುಮಾರ್ ಕುಟುಂಬಕ್ಕೆ ನೆರವಿನ ಹಸ್ತಾಂತರ

ಕಳೆದ ತಿಂಗಳು ವಾಹನ ಅಪಘಾತದಲ್ಲಿ ನಿಧನ ಹೊಂದಿದ ಹಿರಿಯಡಕ ಮೇಳದ ಪ್ರಸಿದ್ಧ ಕಲಾವಿದ ವೇಣೂರು ವಾಮನ ಕುಮಾರ್ ಇವರ ಪತ್ನಿ ಆಶಾ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಐವತ್ತು ಸಾವಿರ ರೂಪಾಯಿಯ ಸಾಂತ್ವನ ನಿಧಿಯನ್ನು ದಿನಾಂಕ 04-02-2022ರಂದು ಹಿರಿಯಡಕ ಮೇಳದ ವೇದಿಕೆಯಲ್ಲಿ ನೀಡಲಾಯಿತು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಿರಿಯಡಕದ ನಾಗರಿಕರಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಾಗೂ ಮೇಳದ ಕಲಾವಿದರಿಂದ ಸಂಗ್ರಹಿಸಿದ ಮೂವತ್ತೆರಡು ಸಾವಿರ ರೂಪಾಯಿಯ ನಿಧಿಯನ್ನು ಕಲಾವಿದನ ಕುಟುಂಬಕ್ಕೆ ನೀಡಲಾಯಿತು.

ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆಯವರು ವಾಮನ ಕುಮಾರರ ಈರ್ವರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

ಹಿರಿಯಡಕ ದೇವಳದ ಅರ್ಚಕರಾದ ಶ್ರೀ ರಂಗನಾಥ ಭಟ್, ಶ್ರೀಮತಿ ಪೂರ್ಣಿಮಾ ಸುರೇಶ್ ಹಾಗೂ ಕಲಾವಿದರ ಪ್ರತಿನಿಧಿಯಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದರು.

ಯಕ್ಷಗಾನ ಕಲಾವಿದರಿಗೆ ಸನ್ಮಾನ ಗೌರವ

“ಕೊರೋನ ಮಹಾ ಮಾರಿಯಿಂದ ಸಾಕಷ್ಟು ಸಂಕಟಕ್ಕೆ ಒಳಗಾದವರು ಯಕ್ಷಗಾನ ಕಲಾವಿದರು. ತೆಂಕು, ಬಡಗು, ಬಡಾ ಬಡಗು ತಿಟ್ಟಿನ ಅನೇಕ ಕಲಾವಿದರು ಪ್ರದರ್ಶನಗಳಿಲ್ಲದೆ ನೊಂದಿದ್ದಾರೆ, ಅವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಯಾವುದೇ ಆತಂಕವಿಲ್ಲದೆ ಮುಕ್ತ ವಾತಾವರಣದಲ್ಲಿ ಪ್ರದರ್ಶನ ನಡೆಯುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೆ ಮಾತುಕತೆ ನಡೆದಿದೆ. ಕಲೆ ಕಲಾವಿದರ ಬಲವಾಗಿ ಘನ ಸರಕಾರ ಸದಾ ನಿಮ್ಮೊಂದಿಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾನ್ಯ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.


ಕೋಟ ಪಟೇಲರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆನರಾ ಬ್ಯಾಂಕ್ ಮಣಿಪಾಲ, ಕರ್ಣಾಟಕ ಬ್ಯಾಂಕ್ ನ ಸಹಕಾರದೊಂದಿಗೆ ನಡೆದ ಸಾಲಿಗ್ರಾಮ ಗುರು ಪ್ರಸಾದಿತ ಯಕ್ಷಗಾನ ಮಂಡಲಿಯ ಯಕ್ಷಗಾನ ಪ್ರದರ್ಶನದಲ್ಲಿ ಸರ್ವ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.


ಪಿ. ಕಿಶನ್ ಹೆಗ್ಡೆ ಸಾರಥ್ಯದ ಸಾಲಿಗ್ರಾಮ ಮೇಳದ ಹಿರಿಯ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಹಾಸ್ಯಗಾರರಾದ ರಮೇಶ್ ಭಂಡಾರಿ, ಭಾಗವತ ರಾಮಕೃಷ್ಣ ಹಿಲ್ಲೂರು, ನೀಲ್ಕೋಡು ಶಂಕರ ಹೆಗಡೆ, ಶಶಿಕಾಂತ ಶೆಟ್ಟಿ ಸಹಿತ ಸಾಲಿಗ್ರಾಮ ಮೇಳದ ಎಲ್ಲಾ ಕಲಾವಿದರೂ ಹಾಗೂ ಸಿಬ್ಬಂದಿ ವರ್ಗದವರನ್ನು ಸಾಲಿಗ್ರಾಮ ಮಕ್ಕಳ ಮೇಳದ ಪರವಾಗಿ ಗೌರವಿಸಲಾಯಿತು.


ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಎಚ್., ಮಣಿಪಾಲ ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ರಾಮ ನಾಯ್ಕ್ ಕೆ, ಬೆಂಗಳೂರಿನ ಸಾಫ್ಟ್ವೇರ್ ಇಂಜನಿಯರ್ ಹಾಗೂ ಕಲಾವಿದರೂ ಆದ ಎಂ. ಸುಧೀಂದ್ರ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ ಮಂಗಳೂರು, ಯಕ್ಷದೇಗುಲದ ಸುದರ್ಶನ ಉರಾಳ, ಉಪಸ್ಥಿತರಿದ್ದರು.


ವೆಂಕಟೇಶ ವೈದ್ಯ ಸ್ವಾಗತಿಸಿ, ಲಂಬೋದರ ಹೆಗಡೆ ವಂದಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು.


ಬಳಿಕ ಸುಜಯೀಂದ್ರ ಹಂದೆ ವಿರಚಿತ ರುರು ಪ್ರಮದ್ವರಾ ಹಾಗೂ ನಿತ್ಯಾನಂದ ಅವಧೂತ ವಿರಚಿತ ಕನಕಾಂಗಿ ಕಲ್ಯಾಣ ಪ್ರದರ್ಶನಗೊಂಡಿತು.

ಇಂದು ಆಟ ಎಲ್ಲೆಲ್ಲಿ? (07-02-2022)

ಮೇಳಗಳ ಇಂದಿನ (07.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಟ್ರ ಕಂಪೌಂಡ್ – ಓಂ ನಮಃ ಶಿವಾಯ 

ಕಟೀಲು ಒಂದನೇ ಮೇಳ == ಮಲ್ಲಿಕಾರ್ಜುನ ಸೇವಾ ಸಮಿತಿ ಸ್ವಾಮಿಲಪದವು, ಪೆರ್ಮುದೆ ಬಜಪೆ – ಹಿರಣ್ಯಾಕ್ಷ ವಧೆ, ಪ್ರಹ್ಲಾದ ಚರಿತ್ರೆ, ಕುಂಭಕರ್ಣ, ರಾವಣ ವಧೆ,ದಮಯಂತಿ ಪುನಃಸ್ವಯಂವರ 

ಕಟೀಲು ಎರಡನೇ ಮೇಳ == ಶ್ರೀ ಗೋಪಾಲಕೃಷ್ಣ ನರಸಿಂಹ ದೇವಸ್ಥಾನ, ಪಲ್ಲಿಪಾಡಿ ಬಡಗಬೆಳ್ಳೂರು – ದಶಾವತಾರ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ, ಸರಸ್ವತಿ ಸದನ – ಮಾತಂಗ ಕನ್ಯೆ 

ಕಟೀಲು ನಾಲ್ಕನೇ ಮೇಳ  == ಅನ್ನೆದ ಗುತ್ತು ಕುಟುಂಬಿಕರು, ಮುಂಡ್ಕೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಜಾರದಬೆಟ್ಟು ಮೂಡುಶೆಡ್ಡೆ, ಬೋಂದೆಲ್ ಚರ್ಚಿನ ಹಿಂಭಾಗ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಸುರತ್ಕಲ್, ಮೂರುಕಾವೇರಿ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಮುಂಡಾಡಿ ಕಣಿತ್ರಬೆಟ್ಟು ಆವರ್ಸೆ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಹಾಲಗಾರ್, ಅದ್ದಡ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ಆವರ್ಸೆ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಪಡುಮುಂಡು ಶಿರಿಯಾರ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಹೆಗ್ಗೋಡು – ಸಾಗರ ಗಡಿಕಟ್ಟೆ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಪುತ್ತೂರು ಪರ್ಲಡ್ಕ ಎಸ್.ಡಿ.ಪಿ ರೆಮಿಡೀಸ್ ರಿಸರ್ಚ್ ಸೆಂಟರ್ – ದಕ್ಷಯಜ್ಞ 

ಶ್ರೀ ಪೆರ್ಡೂರು ಮೇಳ == ಶ್ರೀ ವಿನಾಯಕ ಸ್ಟೋನ್ ಕ್ರಷರ್, ಗಾವಳಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಚಂಡಿಕಾಶ್ರೀ ನಿಲಯ, ನರ್ಲೆಗುಳಿಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಡಮಾರ್ ತಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಂಜಕೋಡ ಮೂಡಾಯಿನಮನೆ, ಮೇಲ್ ಹೊಸೂರು 

ಶ್ರೀ ಪಾವಂಜೆ ಮೇಳ == ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕಾಳು ಚಿಕ್ಕು ಹಾಗೂ ಪರಿವಾರ ದೈವಸ್ಥಾನ ಹಲ್ತೂರು 

ಶ್ರೀ ಸೌಕೂರು ಮೇಳ == ಜಪ್ತಿ ಇಂಬಾಳಿ ಜಂಬೂನದಿ ರಸ್ತೆ – ಬೇಲ್ತೂರು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಳಿಹಿತ್ಲು ಗುಜ್ಜಾಡಿ (ಗಂಗೊಳ್ಳಿ) ಶ್ರೀ ಭದ್ರ ಮಹಾಂಕಾಳಿ ಸಪರಿವಾರ ದೈವಸ್ಥಾನ – ಸತ್ಯದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹೇರಿಕುದ್ರು ಮೂಡುಗರಡಿ ಕಾಮಲಿಂಗೇಶ್ವರ ಮಾಂಕಾಳಿ ಪರಿವಾರ ದೈವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಕೈಪಾಡಿ ಟಿ.ಟಿ ರಸ್ತೆ, ಶ್ರೀ ಕೋಟಿ ಚೆನ್ನಯ ಗರಡಿ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರದಲ್ಲಿ – ಅಭಿಮನ್ಯು, ಶಶಿಪ್ರಭಾ 

ಶ್ರೀ ಶನೀಶ್ವರ ಮೇಳ ==  ಕಟ್ಟಿನಬೈಲು ಉಳ್ಳೂರು – 74 

ಶ್ರೀ ಸಿಗಂದೂರು ಮೇಳ == ಅಂಕೋಲ, ವಂದಿಗೆ 

ಶ್ರೀ ನೀಲಾವರ ಮೇಳ  ==  ಶ್ರೀ ಮಹಿಷಮರ್ದಿನಿ ಅಮ್ಮನವರ ದೇವಸ್ಥಾನ, ಅಂಪಾರು – ನೀಲಾವರ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಶ್ರೀ ಕ್ಷೇತ್ರ ಯಡಳ್ಳಿ ಶ್ರೀ ದೇವಿ ಸನ್ನಿಧಾನದಲ್ಲಿ 

ಶ್ರೀ ಹಾಲಾಡಿ ಮೇಳ == ಕಲ್ಲಟ್ಟೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಸಚ್ಚರಿಪೇಟೆ ಮೈದಾನ – ಶ್ರೀ ದೇವಿ ಮಾರಿಯಮ್ಮ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಮೂಡಬಿದ್ರೆ ಕಲ್ಲಬೆಟ್ಟು ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರ – ಶ್ರೀ ಭಗವತಿ ಮಹಾತ್ಮ್ಯೆ 

ಶ್ರೀ ಸುಂಕದಕಟ್ಟೆ ಮೇಳ  == ಶಿವನಗರ ಮಾವಿನಕಟ್ಟೆ ಮೈದಾನದಲ್ಲಿ – ಅಜ್ಜೆ ಕೊರಗಜ್ಜೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 05.02.2022

ಕಟೀಲು ಒಂದನೇ ಮೇಳ == ಬಡಗ ಎಕ್ಕಾರು, ಎಕ್ಕಾರು – ಶಿವಲೀಲಾರ್ಣವ (ಗಿರಿಜಾ ಕಲ್ಯಾಣ, ಭಕ್ತ ಮಾರ್ಕಂಡೇಯ)

ಕಟೀಲು ಎರಡನೇ ಮೇಳ == ಕೈತ್ರೋಡಿ ರಾಯಿ ಬಂಟ್ವಾಳ – ಅಭಿಮನ್ಯು, ಬಬ್ರುವಾಹನ, ಜಾಂಬವತಿ ಕಲ್ಯಾಣ 

ಕಟೀಲು ಮೂರನೇ ಮೇಳ== ಮೇಲ್ ಕೊಪ್ಪಳ ರಸ್ತೆ ಕೂಳೂರು ಮಂಗಳೂರು – ವಿಜಯವಾಹಿನಿ 

ಕಟೀಲು ನಾಲ್ಕನೇ ಮೇಳ  == ಕಿನ್ಯರ್ಬಿ ಹತ್ತು ಸಮಸ್ತರು, ಬಡಗ ಉಳಿಪಾಡಿ, ಮಳಲಿ – ಹನುಮೋದ್ಭವ, ಸುದರ್ಶನ, ಭಾರ್ಗವ ವಿಜಯ 

ಕಟೀಲು ಐದನೇ ಮೇಳ == ‘ಶ್ರೀ ದುರ್ಗಾ ನಿಲಯ’ ಉಜಿರೆ, ಬೆಳ್ತಂಗಡಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಆರನೇ ಮೇಳ == ಕಲ್ಯಾರ್  ಮನೆ, ನರಿಕೊಂಬು, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಇಂದಿನ ಯಕ್ಷಗಾನ ಪ್ರದರ್ಶನಗಳು (05-02-2022)

ಮೇಳಗಳ ಇಂದಿನ (05.02.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಬಡಗ ಎಕ್ಕಾರು, ಎಕ್ಕಾರು – ಶಿವಲೀಲಾರ್ಣವ (ಗಿರಿಜಾ ಕಲ್ಯಾಣ, ಭಕ್ತ ಮಾರ್ಕಂಡೇಯ)

ಕಟೀಲು ಎರಡನೇ ಮೇಳ == ಕೈತ್ರೋಡಿ ರಾಯಿ ಬಂಟ್ವಾಳ – ಅಭಿಮನ್ಯು, ಬಬ್ರುವಾಹನ, ಜಾಂಬವತಿ ಕಲ್ಯಾಣ 

ಕಟೀಲು ಮೂರನೇ ಮೇಳ== ಮೇಲ್ ಕೊಪ್ಪಳ ರಸ್ತೆ ಕೂಳೂರು ಮಂಗಳೂರು – ವಿಜಯವಾಹಿನಿ 

ಕಟೀಲು ನಾಲ್ಕನೇ ಮೇಳ  == ಕಿನ್ಯರ್ಬಿ ಹತ್ತು ಸಮಸ್ತರು, ಬಡಗ ಉಳಿಪಾಡಿ, ಮಳಲಿ – ಹನುಮೋದ್ಭವ, ಸುದರ್ಶನ, ಭಾರ್ಗವ ವಿಜಯ 

ಕಟೀಲು ಐದನೇ ಮೇಳ == ‘ಶ್ರೀ ದುರ್ಗಾ ನಿಲಯ’ ಉಜಿರೆ, ಬೆಳ್ತಂಗಡಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಆರನೇ ಮೇಳ == ಕಲ್ಯಾರ್  ಮನೆ, ನರಿಕೊಂಬು, ಬಂಟ್ವಾಳ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಅಚ್ಲಾಡಿ ಮಧುವನ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಸ್ವರ್ಣ ಪೀಠಿಕಾಪುರ, ಗೌರಿಗದ್ದೆ, ಹರಿಹರಪುರ ಕೊಪ್ಪ 

ಮಂದಾರ್ತಿ ಮೂರನೇ ಮೇಳ  == ಅಚ್ಲಾಡಿ ಮಧುವನ – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಕೀಬೈಲು ಹೆಂಗವಳ್ಳಿ – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಮಂದಾರ್ತಿ ಐದನೇ ಮೇಳ  ==  ಬೆಣಗಲ್ ಚೇರ್ಕಾಡಿ ಪೇತ್ರಿ 

ಹನುಮಗಿರಿ ಮೇಳ == ಯಕ್ಷತರಂಗಿಣಿ ಗುರುಪುರ ಕೈಕಂಬ – ಆತ್ಮಾಂಜಲಿ 

ಶ್ರೀ ಸಾಲಿಗ್ರಾಮ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಹೆಸ್ಕುಂದ ಕಲ್ಮನೆ ‘ಬ್ರಹ್ಮಶ್ರೀ’ ಗೃಹಪ್ರವೇಶದ ಪ್ರಯುಕ್ತ – ಶೂದ್ರತಪಸ್ವಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಂದಿಕೇಶ್ವರ ದೈವದಮನೆ ವಠಾರಹಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಬ್ಬಿ, ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಕಿಬ್ಬೈಲು ಹೆಂಗವಳ್ಳಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ 

ಶ್ರೀ ಪಾವಂಜೆ ಮೇಳ == ವಿದ್ಯಾನಗರ ಅಬ್ಬೆಟ್ಟು ಮೇರಮಜಲು – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ == ಹಣೆಹಳ್ಳಿ ಪಡುಮನೆ ಬಾರ್ಕೂರು 

ಶ್ರೀ ಅಮೃತೇಶ್ವರೀ ಮೇಳ == ಅಪೂರ್ವ ನಿಲಯ, ಹಾಡಿಕೆರೆ ಕೋಟ 

ಶ್ರೀ ಸೌಕೂರು ಮೇಳ == ಸೌಕೂರು ಪಾಟಾಳಿಬೆಟ್ಟು – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಸಿದ್ದಕಟ್ಟೆ ಶ್ರೀ ಗಣೇಶ ಸಭಾಭವನ – ಸಂಪೂರ್ಣ ಶ್ರೀ ನಾಗದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೊಂಚಾಡಿ ರೈಸ್ ಮಿಲ್ ವಠಾರ – ಶ್ರೀ ದೇವಿ ಭದ್ರ ಮಾಂಕಾಳಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ==  ಹಟ್ಟಿಕುದ್ರು ಹೆಗ್ಡೆಹಾರ ಶ್ರೀ ಯಕ್ಷಿ ಶ್ರೀ ಶಿವರಾಯ ಗರಡಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ನೇರಳಕಟ್ಟೆ ಜಾಡ್ಕಟ್ಟು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ನಾಯ್ಕೋಡಿ 

ಶ್ರೀ ಸಿಗಂದೂರು ಮೇಳ == ‘ಶ್ರೀ ಮಂಜುನಾಥ ಅನುಗ್ರಹ’ ಚಿಚ್ತೇರಿ ಹಳವಿನ ತೋಟ, ಹಟ್ಟಿಯಂಗಡಿ 

ಶ್ರೀ ನೀಲಾವರ ಮೇಳ  ==  ಬ್ರಹ್ಮ ಯಕ್ಷ ಸನ್ನಿಧಾನ, ಕೆರಾಡಿ 

ಶ್ರೀ ಹಟ್ಟಿಯಂಗಡಿ ಮೇಳ == ಹಕ್ಲಾಡಿ ಯಕ್ಷೋತ್ಸವ, ಹಾಲು ಡೈರಿ ಬಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಗೋರಾಜೆ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ವಕ್ವಾಡಿ ಯುವಶಕ್ತಿ ವೇದಿಕೆ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕೊಕ್ರಾಡಿ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ ==  ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿ – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ  == ಫರಂಗಿಪೇಟೆ ಸಮೀಪ ಕಬೇಲ – ಅಜ್ಜೆ ಕೊರಗಜ್ಜೆ 

ಯಶೋಧರ ಚರಿತೆ(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನ ರೂಪಕ

ಭಾರತದ ನಾನಾ ಭಾಷೆಗಳಲ್ಲಿ ಬರೆಯಲ್ಪಟ್ಟಿರುವ, ಅದರಲ್ಲೂ ಕವಿ ಜನ್ನನಿಂದ ರಚಿತವಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತವಾದಂತಹ ಕೃತಿ‘ಯಶೋಧರಚರಿತೆ’.ದಕ್ಷಿಣ ಕನ್ನಡದ ಗಂಡುಕಲೆಯೆಂದೇ ಖ್ಯಾತವಾದ ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಾದಿ ಕಥೆಗಳೊಂದಿಗೆ ವೈದಿಕ ಸಾಹಿತ್ಯವು ಯಕ್ಷಗಾನ ರೂಪದಿಂದ ಜನತೆಯ ಅನುಭವಕ್ಕೆ ಬಂದಿರುವುದು ನಮಗೆಲ್ಲ ವೇದ್ಯವಾದ ವಿಚಾರ.

ಆದರೆ ಜೈನ ಸಾಹಿತ್ಯವು ಎಲ್ಲ ಜನಮನಕೆ ತಲುಪಿಲ್ಲದೇ ಇರುವುದರಿಂದ ಆ ದಿಶೆಯ ಪ್ರಯತ್ನವಾಗಿ ಕಂಡು ಬರುವುದು1955ರಲ್ಲಿ ಕವಿಭೂಷಣ ವೆಂಕಪ್ಪ ಶೆಟ್ಟಿ ಅವರಿಂದ ರಚಿತವಾದ ಪಾತ್ರವರ್ಗದ ಮಾತುಗಳಿಂದ ಕೂಡಿದ ‘ಯಶೋಧರಚರಿತೆ’(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನರೂಪಕ.


ಸಂಕಲ್ಪ ಹಿಂಸೆಯ ಪರಿಣಾಮ ಯಶೋಧರ-ಚಂದ್ರಮತಿಯರು ಜನ್ಮಾಂತರಗಳಲ್ಲಿ ಬಳಲಿದ ಕಥೆಯನ್ನು, ಅಹಿಂಸಾ ಧರ್ಮದ ಮಹತ್ವವನ್ನು ಸಾರುವುದೇ ಕೃತಿಯ ಮೂಲ ಉದ್ದೇಶವಾಗಿದೆ.ಧರ್ಮದ ಹೆಸರಿನಲ್ಲಿ ದೇವತಾ ಸನ್ನಿಧಿಯಲ್ಲಿ ಪ್ರಾಣಿಬಲಿಯನ್ನು ಕೊಡುವುದು ಶಾಸ್ತçಕ್ಕೆ ವಿರುದ್ಧವಾಗಿರುವ ತಾಮಸ ಕರ್ಮವಾಗಿದೆ.

ಮನುಷ್ಯನು ತನ್ನ ಒಳಿತಿಗಾಗಿ ಮೂಕಪಶುವನ್ನು ಬಲಿ ಕೊಡುವುದನ್ನುತಡೆಗಟ್ಟುವ ಸಂಪ್ರದಾಯಕ್ಕೆ ನಾಂದಿ ಹಾಡಲು, ಭಾವಹಿಂಸೆಯೇ ಜನ್ಮಾಂತರದ ದುಃಖವನ್ನು ತರುವುದು ಎಂದಾದಲ್ಲಿ, ನಿಜ ಹಿಂಸೆಯು ಇನ್ನಷ್ಟು ಘೋರ ದುಃಖವನ್ನು ತAದೊಡ್ಡುವುದು ಎಂಬ ವಿಚಾರವನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಉದ್ದೇಶ ಈ ಕೃತಿಯದು. ಈ ರೂಪಕದಲ್ಲಿನ ಬೋಧನಾಪರ ವಾಕ್ಯಗಳು ಸಂದರ್ಭಾನುಸಾರ ಗಂಭೀರತೆಯಿಂದ ಮೂಡಿ ಕಥೆಯು ಅತ್ಯಂತ ಸೊಗಸಾಗಿ ಸಾಗಿದೆ.


ಇಲ್ಲಿ ಜನ್ನ ವಿರಚಿತ‘ಯಶೋಧರಚರಿತೆ’ಯು ನಾಲ್ಕು ಅವತಾರಗಳ ಕಂದ ವೃತ್ತಗಳಿಂದ ಕೂಡಿದ ಸೊಗಸಾದ ಯಕ್ಷಗಾನ ರೂಪಕವಾಗಿ ಮಾರ್ಪಾಡಾಗಿದೆ.ಇದರಲ್ಲಿ ಶೃಂಗಾರ, ವೀರ, ಕರುಣ, ಹಾಸ್ಯ, ರೌದ್ರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ ರಸಗಳ ಸಮಾವೇಶವಿದೆ. ಹಿಂಸೆ ಅಹಿಂಸೆಯಾಗಿ, ಕ್ರೌರ್ಯ ದಯೆಯಾಗಿ, ಅಧರ್ಮ ಧರ್ಮವಾಗಿ ಪರಿವರ್ತನೆಯಾಗುವ ಚಿತ್ರಣವು ಇಲ್ಲಿದೆ.


ಶಾರದಾ ಪ್ರಾರ್ಥನೆಯೊಂದಿಗೆ ಆರಂಭವಾಗುವ ಪ್ರಸಂಗವು ಪಾತ್ರಗಳ ವಿವರಗಳೊಂದಿಗೆ, ಮಾತ್ರೆ, ತಾಳ ಪ್ರಸ್ತಾರದ ವಿವರಗಳನ್ನು ಒಳಗೊಂಡಿದೆ. ಇದರ ಕೊನೆಯಲ್ಲಿ ಅಹಿಂಸಾಧರ್ಮದ ಬಗೆಗೆ ಮಹಾಭಾರತದಲ್ಲಿ ಕಂಡುಬರುವ ಉಲ್ಲೇಖಗಳು ಹಾಗೂ ಇದಕ್ಕೆ ವಿರುದ್ಧವಾಗಿ ಅಲ್ಲಿ ಕಂಡುಬರುವ ಸನ್ನಿವೇಶದ ವಿವರಗಳನ್ನೂ ನೀಡಿದ್ದಾರೆ.


ಹೆಚ್ಚಾಗಿ ರಾಮಾಯಣ, ಮಹಾಭಾರತದಿಂದ ಆಯ್ದ ಪ್ರಸಂಗಗಳ ನಡುವೆ ಜೈನಧರ್ಮಕ್ಕೆ ಸಂಬಂಧಿಸಿದ ಕನ್ನಡ ಸಾಹಿತ್ಯ ಮಾತ್ರವಲ್ಲ ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲೂ ಪ್ರಚುರತೆಯನ್ನು ಪಡೆದಿರುವ ಕಥಾನಕವೊಂದು ಯಕ್ಷಗಾನ ರೂಪಕವಾಗಿ ಸುಮಾರು 75 ವರ್ಷಗಳ ಹಿಂದೆಯೇ ರಚಿತವಾಗಿದ್ದುದು ಕಣ್ಣಿಗೆ ಬಿದ್ದಾಗ ವಿಶೇಷವೆನಿಸಿದ್ದಂತೂ ನಿಜ.

ಲೇಖಕಿ: ಡಾ. ಮೈತ್ರಿ ಭಟ್


ಡಾ. ಮೈತ್ರಿ ಭಟ್,
ಉಪನ್ಯಾಸಕಿ, ಕನ್ನಡ ವಿಭಾಗ,
ವಿವೇಕಾನಂದಕಾಲೇಜು,
ನೆಹರೂ ನಗರ, ಪುತ್ತೂರು – 574203
ಮೊಬೈಲು ಸಂಖ್ಯೆ: 9449793584

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 02.02.2022

ಕಟೀಲು ಒಂದನೇ ಮೇಳ == ನಡ್ಡೋಡಿ, ಬಡಗ ಎಡಪದವು – ವೀರ ಮಾರುತಿ (ಹನುಮಾದ್ಭವ, ಚೂಡಾಮಣಿ,ಲಂಕಾದಹನ, ಗರುಡ ಗರ್ವಭಂಗ)

ಕಟೀಲು ಎರಡನೇ ಮೇಳ == ತುಂಬೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ದಂಡೆ, ಬಂಟ್ವಾಳ –  ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಕೊಯಿಕುಡೆ ಬಂಟ್ವಾಳ – ಕಟೀಲು ಕ್ಷೇತ್ರ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಯಡ್ತೂರಪದವು, ಬಂಟ್ವಾಳ –  ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಎಳತ್ತೂರು, ಕಿನ್ನಿಗೋಳಿ –  ಶ್ರೀ ದೇವಿ ಮಹಾತ್ಮ್ಯೆ