Monday, March 16, 2026
Home Blog Page 271

ಇಂದು ಆಟ ಎಲ್ಲೆಲ್ಲಿ? (08-04-2022)

ಮೇಳಗಳ ಇಂದಿನ (08.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶಿರಿಯಾರ ಸಕ್ಕಟ್ಟು ರಶ್ಮಿತಾ ನಿಲಯದ ವಠಾರ = ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಮಿಷನ್ ಕಂಪೌಂಡ್ ಮಂಕಿ ಸ್ಟಾಂಡ್ ಅತ್ತಾವರ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಸತ್ಯನಾರಾಯಣ ಮಂದಿರ, ಬಗಂಬಿಲ ನಿತ್ಯಾನಂದ ನಗರ ಕೋಟೆಕ್ಕಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ==  ಸತ್ಯದೇವತೆ ಚಾರಿಟೇಬಲ್ ಟ್ರಸ್ಟ್ ನರಿಕೊಂಬು ಪಾಣೆಮಂಗಳೂರು – ಶನೈಶ್ಚರ ಮಹಾತ್ಮ್ಯೆ, ರತಿ ಕಲ್ಯಾಣ 

ಕಟೀಲು ನಾಲ್ಕನೇ ಮೇಳ  == ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಸಗ್ರಿ ಕುಂಜಿಬೆಟ್ಟು ಉಡುಪಿ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ ==  ಶ್ರೀ ದೇವಿ ಸೇವಾ ಸಮಿತಿ ವಗ್ಗ ಬಂಟ್ವಾಳ – ದ್ರೌಪದಿ ಪ್ರತಾಪ, ಪಾರ್ವತೀ ಕಲ್ಯಾಣ 

ಕಟೀಲು ಆರನೇ ಮೇಳ == ಮೇಲ್ ಅಜ್ಜೋಳಿ ಮನೆ ನಾಡ್ಪಾಲು ವಯಾ ಸೀತಾನದಿ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  == ಕೃಷ್ಣಿ ಮನೆ ನಾಯ್ಕನಕಟ್ಟೆ ಕೆರ್ಗಾಲ್ 

ಮಂದಾರ್ತಿ ಎರಡನೇ ಮೇಳ   == ಹೆಬ್ಬಾಗಿಲುಮನೆ ಅಲ್ತಾರು ಯಡ್ತಾಡಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಸ್ಕಂದ ನಿಲಯ ಪಾಂದಿಗರಡಿ ರೋಡ್ ನಡಸಾಲು ಪಡುಬಿದ್ರಿ 

ಮಂದಾರ್ತಿ ಐದನೇ ಮೇಳ  == ಹೊನ್ನೆಕುಮ್ರಿ ಹೆಗ್ಗುಂಜೆ ಮಂದಾರ್ತಿ 

ಹನುಮಗಿರಿ ಮೇಳ == ನಡೂರು ಕೋಡಿಮಕ್ಕಿ ಶ್ರೀ ಚಿಕ್ಕಮ್ಮ  ದೈವಸ್ಥಾನದ ವಠಾರ – ಸತ್ಯಾಂತರಂಗ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ – ಪೌರಾಣಿಕ ಪ್ರಸಂಗ 

ಶ್ರೀ ಪೆರ್ಡೂರು ಮೇಳ == ಕೆರಾಡಿ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಚಾರ್ಕೋಡ್ಲು ರಸ್ತೆ ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸಂತೆಗದ್ದೆ ಎಲ್ಲೂರು ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸುಂಕದಕೋಟೆ ಮರವಂತೆ 

ಶ್ರೀ ಪಾವಂಜೆ ಮೇಳ == ಪಾರಂಪಳ್ಳಿ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಕೋಟೆಕೊಪ್ಪ, ರಾಬೆ ಪೋಸ್ಟ್ ಹೊಸನಗರ ತಾಲೂಕು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟತಟ್ಟು ಬಾರಿಕೆರೆ 

ಶ್ರೀ ಸೌಕೂರು ಮೇಳ == ಬೈಲೂರು ಕ೦ರ್ಬು ಜಡ್ಡು ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಅಕ್ಷಯ ನಿವಾಸ ಐಕಳ ದುಜಲಗಿರಿ – ಮಹಿಮೆದ ಮಂತ್ರದೇವತೆ 

ಶ್ರೀ ಮಡಾಮಕ್ಕಿ ಮೇಳ == ಕೂಡ್ಲು ಬಗಾರ್ ಕೊಪ್ಪ ಶ್ರೀ ಬಸವೇಶ್ವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ, ಮೀನಾಕ್ಷಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೀರ್ಥಹಳ್ಳಿ ಮೇಳಿಗೆ ಕೊದೂರು ಶ್ರೀ ಸತ್ಯ ಮಲ್ಲಿಕಾರ್ಜುನ ದೇವಸ್ಥಾನದ ವಠಾರ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಕುತ್ಲೂರು ನೇಲ್ಯಪಲ್ಕೆ – ಮಾಯೊದಪ್ಪೆ ಮಂತ್ರದೇವತೆ 

ಶ್ರೀ ಶನೀಶ್ವರ ಮೇಳ == ಕೊಡಮಕ್ಕಿ ಮನೆ ಯಳಂತೂರು ಬೆಳ್ವೆ 

ಶ್ರೀ ಸಿಗಂದೂರು ಮೇಳ == ತೀರ್ಥಹಳ್ಳಿ ಅರಗ ಬ್ರಹ್ಮದೇವರಗದ್ದೆ 

ಶ್ರೀ ನೀಲಾವರ ಮೇಳ  == ಶಾಂತಾಪುರ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬಸವಾನಿ ಕೊಳವಾರ 

ಶ್ರೀ ಮೇಗರವಳ್ಳಿ ಮೇಳ == ಕುಡುಮಲ್ಲಿಗೆ ಕಲ್ಲಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ  – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಪದ್ಮಾವತಿ ದೇವಸ್ಥಾನ ಬೋಳಂಬಳ್ಳಿ – ಕುಶಲವ, ಭಸ್ಮಾಸುರ ಮೋಹಿನಿ ( ಹಟ್ಟಿಯಂಗಡಿ X ಬೋಳಂಬಳ್ಳಿ ಜೋಡಾಟ)

ಶ್ರೀ ಹಾಲಾಡಿ ಮೇಳ == ಜಡ್ಡಿನಗದ್ದೆ – ಸಂಪೂರ್ಣ ದೇವಿ ಮಹಾತ್ಮೆ 

ಶ್ರೀ ಬೋಳಂಬಳ್ಳಿ ಮೇಳ== ಶ್ರೀ ಪದ್ಮಾವತಿ ದೇವಸ್ಥಾನ ಬೋಳಂಬಳ್ಳಿ – ಕುಶಲವ, ಭಸ್ಮಾಸುರ ಮೋಹಿನಿ ( ಹಟ್ಟಿಯಂಗಡಿ X ಬೋಳಂಬಳ್ಳಿ ಜೋಡಾಟ)

ಶ್ರೀ ಬಪ್ಪನಾಡು ಮೇಳ == ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮುಲ್ತಾಡಿ ಕೋಡು ಪಂಜಿಮಾರು ಶಿರ್ವ – ಬನತ ಬಂಗಾರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬೆಳುವಾಯಿ ನಡಿಗುಡ್ಡೆ – ಧರ್ಮ ತುಡರ್ 

ಶ್ರೀ ಮಂಗಳಾದೇವಿ ಮೇಳ == ಕಿನ್ನಿಗೋಳಿ ಎಸ್ಕೋಡು ಪುನರೂರು ಪಲ್ಕೆ ಸ್ವರ್ಣ ನಿಲಯದ ಮುಂಭಾಗ – ನಾಗರಪಂಚಮಿ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 07.04.2022

ಕಟೀಲು ಒಂದನೇ ಮೇಳ == ಲಿಂಗದೋಡಿ ಹೌಸ್ ಗರ್ಡಾಡಿ ಬೆಳ್ತಂಗಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಬೊಟ್ಟಿಕೆರೆ ಸೂರಿಂಜೆ ವಯಾ ಕಾಟಿಪಳ್ಳ – ಪಂಚಕಲ್ಯಾಣ 

ಕಟೀಲು ಮೂರನೇ ಮೇಳ== ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಬೈಲುಬೀಡಿನ ಬಳಿ ಕೊಳಂಬೆ ಬಜಪೆ – ಭಕ್ತ ಅಂಬರೀಷ, ಅಂಧಕ ಮೋಕ್ಷ, ಗಿರಿಜಾ ಕಲ್ಯಾಣ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ತ್ರಿಪುರ ಮಥನ, ಯೋಗಿನಿ ಕಲ್ಯಾಣ 

ಕಟೀಲು ಐದನೇ ಮೇಳ == ರಾಯಿಕೊಯಿಲ ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಸಾಯಿನಿವಾಸ ನಡಿಬೆಟ್ಟು ಹೌಸ್ ಯರ್ಲಪಾಡಿ ವಯಾ ಬೈಲೂರು – ಶ್ರೀ ದೇವಿ ಮಹಾತ್ಮೆ 

ಹಿರಿಯ ಅರ್ಥಧಾರಿ ಎಸ್. ಎಂ. ಹೆಗಡೆ ನಿಧನ

ತಮ್ಮ ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾರಸಿಕರ ಮನ ಗೆದ್ದಿದ್ದ ಹೊನ್ನಾವರದ ಎಸ್. ಎಂ. ಹೆಗಡೆ ಮುಡಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (06-04-2022) ನಿಧನ ಹೊಂದಿದರು.

ಅವರಿಗೆ 74 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಹವ್ಯಾಸಿ ವೇಷಧಾರಿ ಮತ್ತು ನಾಟಕದ ಕಲಾವಿದರಾಗಿ ಕಲಾಕ್ಷೇತ್ರಕ್ಕೆ ಸೇವೆಸಲ್ಲಿಸಿದ್ದರು.

ಸಂಪ್ರದಾಯ ಬದ್ಧ ಭಜನೆ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಹೊಸಾಕುಳಿಯ ಉಮಾಮಹೇಶ್ವರ ಕಲಾರ್ಧಕ ಸಂಗದ ಕಾರ್ಯದರ್ಶಿಯಾಗಿ 42 ವರ್ಷಗಳಿಂದ ಅದನ್ನು ಮುನ್ನಡೆಸಿಕೊಂಡು ಬಂದಿದ್ದರು.

ತಾಳಮದ್ದಲೆಯನ್ನು ಉಳಿಸಿ ಬೆಳೆಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದರು. ತಾಳಮದ್ದಲೆ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಅನುಲಕ್ಷಿಸಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಈ ಬಾರಿಯ ಮಟ್ಟಿ ಮುರಲಿಧರ ರಾವ್ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಇಂದು ಆಟ ಎಲ್ಲೆಲ್ಲಿ? (07-04-2022)

ಮೇಳಗಳ ಇಂದಿನ (07.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಗುಂಡ್ಮಿ ಆತನಕೆರೆ –  ಸಾಮ್ರಾಟ್ ನಹುಷೇ೦ದ್ರ 

ಕಟೀಲು ಒಂದನೇ ಮೇಳ == ಲಿಂಗದೋಡಿ ಹೌಸ್ ಗರ್ಡಾಡಿ ಬೆಳ್ತಂಗಡಿ 

ಕಟೀಲು ಎರಡನೇ ಮೇಳ == ಬೊಟ್ಟಿಕೆರೆ ಸೂರಿಂಜೆ ವಯಾ ಕಾಟಿಪಳ್ಳ 

ಕಟೀಲು ಮೂರನೇ ಮೇಳ== ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಬೈಲುಬೀಡಿನ ಬಳಿ ಕೊಳಂಬೆ ಬಜಪೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ == ರಾಯಿಕೊಯಿಲ ಬದನಾಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಶ್ರೀ ಸಾಯಿನಿವಾಸ ನಡಿಬೆಟ್ಟು ಹೌಸ್ ಯರ್ಲಪಾಡಿ ವಯಾ ಬೈಲೂರು 

ಮಂದಾರ್ತಿ ಒಂದನೇ ಮೇಳ  == ಹಳ್ಳಾಡಿ ಹರ್ಕಾಡಿ 

ಮಂದಾರ್ತಿ ಎರಡನೇ ಮೇಳ   == ಮೈರ್ಕೊಮೆ ಹೆಗ್ಗುಂಜೆ ಮಂದಾರ್ತಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ದುರ್ಗಾಪರಮೇಶ್ವರಿ ನಿಲಯ ಶಾಲಾ ಬಾಗಿಲು ಮಯ್ಯರ ಕೇರಿ ಉಪ್ಪುಂದ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ದುರ್ಗಾ ಚೇರ್ಕಾಡಿ 

ಮಂದಾರ್ತಿ ಐದನೇ ಮೇಳ  == ಕೋಡಿಮನೆ ಆಲುಂಜೆ ಆರೂರು 

ಹನುಮಗಿರಿ ಮೇಳ == ‘ಶ್ರೀ ಮೂಕಾಂಬಿಕಾ’ ಆನೆಗುಡ್ಡೆ ಕೃಷ್ಣಪ್ರಸಾದ್ ಅಡ್ಯಂತಾಯ ನಿವಾಸ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಉಡುಪಿ ಕನ್ನರ್ಪಾಡಿ ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಕನ್ನರ್ಪಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಶ್ರೀ ದುರ್ಗಾದೇವಿ ದೇವಸ್ಥಾನ ದೇವಿಕಾನ ಮಂಕಿ – ಶನೀಶ್ವರ ಮಹಾತ್ಮೆ ಧರ್ಮಾಂಗದ ದಿಗ್ವಿಜಯ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಗಿರಿಜಾ ನಿಲಯ ಜಾಂಬ್ಳಿ ಜನ್ಸಾಲೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬೆಳ್ಳಾಡಿ ನಡಗಿನಮನೆ ಸೇನಾಪುರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಬೆಳ್ಳಾಡಿ ನಡಗಿನಮನೆ ಸೇನಾಪುರ 

ಶ್ರೀ ಪಾವಂಜೆ ಮೇಳ == ಮೂಡುಬಿರ್ತಿ ಕಲ್ಕುಡ ದೇವಸ್ಥಾನದ ಹತ್ತಿರ ಉಷಾನಿಲಯದ ವಠಾರ –  ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಡಾಬೆಟ್ಟು ಕೆದೂರು ಕೆಳಮನೆ 

ಶ್ರೀ ಸೌಕೂರು ಮೇಳ == ಕೊಳಕೆಬೈಲ್ ಕೆಳಮನೆ – ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೆಜ್ಜ ದೂಮಾವತಿ ಬಂಟ ದೈವಕ್ಷೇತ್ರ – ಕಾಂತಬಾರೆ ಬೂದಬಾರೆ 

ಶ್ರೀ ಮಡಾಮಕ್ಕಿ ಮೇಳ == ಮೂಡುಬೆಳ್ಳೆ ನಾಲ್ಕುಬೀದಿ – ಚಿತ್ರಾಕ್ಷಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಧುವನ ಶಾಂತಿನಗರ ಸಮ್ಮಿಲನ ಯುವಕ ಮಂಡಳಿ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಹೊಸಂಗಡಿ ಫ್ರೆಂಡ್ಸ್ ಕ್ಲಬ್ ವಠಾರ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ == ಯಡ್ತರೆ ಬೈಪಾಸ್ 

ಶ್ರೀ ಸಿಗಂದೂರು ಮೇಳ == ಶ್ರೀ ಮಲ್ಲಮ್ಮ ದೇವಸ್ಥಾನ ನಿಟ್ಟಗೋಡು (ಉ.ಕ)

ಶ್ರೀ ನೀಲಾವರ ಮೇಳ  == ಮಾರುತಿಪುರ ಶಾಲಾ ಮೈದಾನ – ಪಾಪಣ್ಣ ವಿಜಯ ಗುಣಸುಂದರಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕೊಗ್ರೆ ಕಲ್ಲುಗುಡ್ಡೆ 

ಶ್ರೀ ಮೇಗರವಳ್ಳಿ ಮೇಳ == ಹುರುಳಿ ಗಾಡ್ರಗದ್ದೆ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಚಿತ್ತೇರಿ ಬೆಣಗಲ್ ಶ್ರೀ ನಾಗಲಿಂಗೇಶ್ವರ ದೇವಸ್ಥಾನ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹೆರಟೆ ಶಾಲಾ ಆವರಣ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಶ್ರೀ ನಾಗಬ್ರಹ್ಮ ಮತ್ತು ರಕ್ತೇಶ್ವರಿ ದೇವಸ್ಥಾನ ಆಶ್ರಯ ಕಾಲನಿ ಕಾಟಿಪಳ್ಳ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮಾಲೆಮಾರ್ (ಕೊಟ್ಟಾರ ಚೌಕಿ) ನೆಕ್ಕಿಲ ಶ್ರೀ ಮಹಾಕಾಳಿ ನವದುರ್ಗಾಂಬಿಕ ದೇವಸ್ಥಾನದ ವಠಾರ – ರಂಗಸ್ಥಳ 

ಶ್ರೀ ದೇಂತಡ್ಕ ಮೇಳ == ಗಾಡಿಗುಡ್ಡೆ ಶ್ರೀ ವಿಷ್ಣುಮೂರ್ತಿ ಯುವಜನ ಸಂಘ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಇಂದು ಆಟ ಎಲ್ಲೆಲ್ಲಿ? (05-04-2022)

ಮೇಳಗಳ ಇಂದಿನ (05.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನಾವುಂದ ಕುದ್ರುಕೋಡು ಕಳಿಗದ್ದೆ ಮನೆ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಬಾರಾಡಿ ಮುರಪದವು ಕಾಂತಾವರ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕಡಂಬಾರು ವಯಾ ಮಂಜೇಶ್ವರ 

ಕಟೀಲು ನಾಲ್ಕನೇ ಮೇಳ  == ದೆಪ್ಪುಣಿಗುತ್ತು ಮನೆ ಕುಂಜತ್ತಬೈಲು ಮಂಗಳೂರು 

ಕಟೀಲು ಐದನೇ ಮೇಳ == ಪುತ್ತೂರು ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬಳಿ ಮುಕ್ವೆ 

ಕಟೀಲು ಆರನೇ ಮೇಳ == ನಂದಿಕೂರು ಪಾವಂಜೆ ದೇವಸ್ಥಾನದ ಬಳಿ 

ಮಂದಾರ್ತಿ ಒಂದನೇ ಮೇಳ  == ಅಕ್ಕುಂಜೆ ಜನಸಾಲೆ  ಸಿದ್ಧಾಪುರ 

ಮಂದಾರ್ತಿ ಎರಡನೇ ಮೇಳ   == ತೆಂಕಬೆಟ್ಟು ನಡುಮನೆ ಹುಯ್ಯಾರು ಹೈಕಾಡಿ 

ಮಂದಾರ್ತಿ ಮೂರನೇ ಮೇಳ  == ಶ್ರೀದುರ್ಗಾ ನಿಲಯ ಕೊರೋಡಿ ಕುಂಭಾಶಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಭಟ್ರಹಾಡಿ ಹಿಲಿಯಾಣ 

ಹನುಮಗಿರಿ ಮೇಳ == ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ – ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಸಸಿಗೊಳ್ಳಿ – ಓಂಕಾರ ರೂಪಿಣಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುಕ್ಕಡ ಇಡೂರು ಕುಂಜ್ಞಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ಅರ್ಧನಾರೀಶ್ವರ ದೇವಸ್ಥಾನ ಸಂಪಿಗೆದಡಿ ಪಾವೂರು ಹರೇಕಳ ಅಂಬ್ಲಮೊಗರು – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಶ್ರೀ ದುರ್ಗಾ ದೇವಸ್ಥಾನ ಶೃಂಗೇರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಡಾಬೆಪ್ಪ ಹೊಸಮನೆ ವೀರಭದ್ರ ನಿಲಯ ಮಡಾಮಕ್ಕಿ ಹೆಬ್ರಿ – ಶ್ರೀ ದೇವಿ ಮಹಾತ್ಮೆ (ಅಮೃತೇಶ್ವರಿ x ಮಡಾಮಕ್ಕಿ ಕೂಡಾಟ)

ಶ್ರೀ ಸೌಕೂರು ಮೇಳ == ಉಪ್ಪಿನಕುದ್ರು ಗಣಪತಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಬಡಾಬೆಪ್ಪ ಹೊಸಮನೆ ವೀರಭದ್ರ ನಿಲಯ ಮಡಾಮಕ್ಕಿ ಹೆಬ್ರಿ – ಶ್ರೀ ದೇವಿ ಮಹಾತ್ಮೆ (ಅಮೃತೇಶ್ವರಿ x ಮಡಾಮಕ್ಕಿ ಕೂಡಾಟ)

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನ – ಚಂದ್ರಾವಳಿ, ನಾಗಶ್ರೀ 

ಶ್ರೀ ಹಿರಿಯಡಕ ಮೇಳ == ಚಿತ್ರಪಾಡಿ ಸಾಲಿಗ್ರಾಮ ಹೊಳೆಕೆರೆ ಮನೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಶ್ರೀ ಆನೆಗಣಪತಿ ದೇವಸ್ಥಾನ ಅಂಬಾಗಿಲು 

ಶ್ರೀ ಸಿಗಂದೂರು ಮೇಳ == ಬೆಳ್ಳಾಲ ನೂಜಿ ಭಂದ್ರಾಡಿ ಶ್ರೀ ಜಯಮ್ಮ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ನಗರದೇವಿ ದೇವಸ್ಥಾನ ಉಪ್ಪಿನಗೂಳಿ ಗೇರುಸೊಪ್ಪ – ಮಧುರ ಮೇಘನ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ವಿನಾಯಕಪುರ ಶಾನುವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಶೃಂಗೇರಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ನೀಲಾವರ ಸೂನಗಾರಬೆಟ್ಟು ಶ್ರೀ ಬೊಬ್ಬರ್ಯ ದೈವಸ್ಥಾನ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಕುಂಬತ್ತಿ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಕಟ್ಟೆಸ್ಥಾನ ಪಡುಪೆರಾರ – ಬಾಲೆಮಾನಿ ಮಾಯಂದಾಲ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಜಿಪಮೂಡ ನಗ್ರಿ ಶ್ರೀ ಶಾರದಾ ಭಜನಾ ಮಂದಿರ ವಠಾರ – ಶ್ರೀ ಭಗವತಿ ಮಹಾತ್ಮೆ 

“ಭಕ್ತ ಮಯೂರಧ್ವಜ” ಯಕ್ಷಗಾನ ತಾಳಮದ್ದಳೆ

ಯಕ್ಷಭಾರತಿ (ರಿ) ಕನ್ಯಾಡಿ ತಂಡದಿಂದ ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ “ಭಕ್ತ ಮಯೂರಧ್ವಜ” ತಾಳಮದ್ದಳೆ ಜರುಗಿತು.

ಭಾಗವತರಾಗಿ ಶ್ರೀ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶ್ರೀ ಶಿತಿಕಂಠ ಭಟ್ ಉಜಿರೆ ಹಾಗೂ ಶ್ರೀ  ವಾಸುದೇವ ಆಚಾರ್ಯ ಉಜಿರೆ, ಚಕ್ರತಾಳದಲ್ಲಿ ಶ್ರೀರಾಮಕೃಷ್ಣ ಹೊಳ್ಳ.

ಅರ್ಥದಾರಿಗಳಾಗಿಶ್ರೀ ಸುರೇಶ ಕುದ್ರೆಂತ್ತಾಯ ಉಜಿರೆ (ಮಯೂರಧ್ವಜ), ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು (ತಾಮ್ರಧ್ವಜ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ), ಶ್ರೀ ನಾರಾಯಣ ಭಟ್ ಬಾಸಮೆ (ಅರ್ಜುನ), ಶ್ರೀ ಶಶಿಧರ ಕನ್ಯಾಡಿ (ನಕುಲಧ್ವಜ) ಭಾಗವಹಿಸಿದ್ದರು.

ಯಕ್ಷ ಭಾರತಿಯ ಸಹ ಕಾರ್ಯದರ್ಶಿ ಶ್ರೀಮತಿ ಭವ್ಯ ಹೊಳ್ಳ ಉಜಿರೆ ಮತ್ತು ಶ್ರೀ ರಾಧಾಕೃಷ್ಣ ಹೊಳ್ಳ ಇವರ ಪುತ್ರ ಚಿ: ಸಮರ್ಥ್ ಬ್ರಹ್ಮೋಪದೇಶದ ನಿಮಿತ್ತ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ಕಲಾವಿದರನ್ನು ಗೌರವಿಸಿದರು. ಯಕ್ಷ ಭಾರತಿ ಅಧ್ಯಕ್ಷ ಶ್ರೀ ರಾಘವೇಂದ್ರ ಬೈಪಡಿತ್ತಾಯ, ಟ್ರಸ್ಟಿ ಹರೀಶ್ ರಾವ್ ಮುಂಡ್ರುಪ್ಪಾಡಿ, ಹರೀಶ್ ಕೊಳ್ತಿಗೆ ಉಪಸ್ಥಿತರಿದ್ದರು.

ಯಕ್ಷ ಭಾರತಿ ಕ್ಲಬ್ ಹೌಸ್  108ನೇ ಕಾರ್ಯಕ್ರಮವಾಗಿ ನೇರಪ್ರಸಾರ ಮಾಡಲು ಯಶೋಧರ ಇಂದ್ರ ಮತ್ತು ಕೌಶಿಕ್ ರಾವ್ ಕನ್ಯಾಡಿ ಸಹಕರಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ್ ಅಚಾರ್ಯ ಗೇರುಕಟ್ಟೆ ಸ್ವಾಗತಿಸಿ ಶ್ರೀ ರಾಧಾಕೃಷ್ಣ ಹೊಳ್ಳ ವಂದಿಸಿದರು.

ಯಕ್ಷಗಾನ ಪ್ರಾತ್ಯಕ್ಷಿಕೆ ಸರಣಿ

ಯಕ್ಷಗಾನ ದೈಹಿಕ ಮತ್ತು ಮಾನಸಿಕ ದೃಢತೆಯೊಂದಿಗೆ ಭಾಷಾ ಶುದ್ಧಿಯಾಗಿ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಕರಾವಳಿ ಭಾಗಕ್ಕೆ ಸೀಮಿತವಾದ ಯಕ್ಷಗಾನದ ವ್ಯಾಪ್ತಿಯನ್ನು ನಾಡಿನಾದ್ಯಂತ ವಿಸ್ತರಿಸುವಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸುತ್ತಿರುವ ಯಕ್ಷದೇಗುಲ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿಕೊ0ಡು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ. ಕೊರೋನೋತ್ತರ ಕಾಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿ ಮುರುಳಿ ಕಡೆಕಾರ್ ಹೇಳಿದರು.

ಅವರು ದಿನಾಂಕ 28-03-2022ರಂದು ಅನುದಾನಿತ ಪ್ರೌಢಶಾಲೆ ನಿಟ್ಟೂರು ಇಲ್ಲಿ ಯಕ್ಷದೇಗುಲ ಬೆಂಗಳೂರು ಇವರ ಯಕ್ಷಗಾನ ಪ್ರಾತ್ಯಕ್ಷಿಕೆ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

ಹಿಂದೆ ಕರಾವಳಿ ಭಾಗದ ಯಕ್ಷಗಾನ ತಂಡಗಳು ಬೆಂಗಳೂರು ಮುಂತಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಿದ್ದೇವು. ಆದರೆ ಇಂದು ಬೆಂಗಳೂರಿನ ಸಂಸ್ಥೆ ಕರಾವಳಿಯ ಶಾಲೆಗಳಲ್ಲಿ ಪರಂಪರೆ ಯಕ್ಷಗಾನ ಪ್ರದರ್ಶನ ಸಾಧ್ಯತೆಗಳನ್ನು ತೋರಿಸಿಕೊಡುತ್ತಿರುವುದು ಸಂತೋಷದ ವಿಚಾರ ಎಂದು ನಿವೃತ್ತ ಮುಖ್ಯೋಪಾಧ್ಯಾಯರು ಎಸ್. ವಿ.ಭಟ್. ಹೇಳಿದರು.


ಯಕ್ಷಗಾನ ಕರ್ನಾಟಕ ಪ್ರದಾನ ಕಲೆಯಾಗಿ ಗುರುತಿಸಿಕೊಂಡಾಗ ಮಾತ್ರ ಕಲೆಯ ಉಳಿವಿಗಾಗಿ ಅವಿರತ ಶ್ರಮಿಸಿದ ಕಲಾವಿದರ ಶ್ರಮಕ್ಕೆ ಸಾರ್ಥಕತೆ ಒದಗಿ ಬರುತ್ತದೆ ಎಂದು ಹಂಸಲೇಖ ದೇಸಿ ಪ್ರದರ್ಶನ ಕಲೆ ವಿದ್ಯಾಲಯದ ಶ್ರೀನಿಧಿ ರಾಜು ಹೇಳಿದರು.


ಯಕ್ಷಗಾನ ವಿದ್ವಾಂಸ ಹೆಚ್. ಸುಜಯೀಂದ್ರ ಹಂದೆ ಮುಖ್ಯೋಪಾಧ್ಯಾಯರಾಗಿರುವ ಅನುಸೂಯ, ಪ್ರಭಾರ ಮುಖ್ಯೋಪಾಧ್ಯಾಯರಾಗಿರುವ ಶೃಂಗೇಶ್ವರ ಚಲನಚಿತ್ರ ಸಹಾಯಕ ನಿರ್ದೇಶಕ ಗಣೇಶ್, ಯಕ್ಷದೇಗುಲದ ಸುದರ್ಶನ ಉರಾಳರು ಸಭೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು, ನವೀನ್ ಕೋಟ ಸ್ವಾಗತಿಸಿ, ಲಂಬೋದರ ಹೆಗಡೆ ವಂದಿಸಿದರು.


ನಂತರ ಕೆ. ಮೋಹನ್ ನಿರ್ದೇಶನದ ಸುದರ್ಶನ ಉರಾಳ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಕೃಷ್ಣಮೂರ್ತಿ ಉರಾಳ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ರಾಜು ಪೂಜಾರಿ ಮುಂತಾದ ಕಲಾವಿದರನ್ನೊಳಗೊಂಡ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತು.


ಪದಾಭಿನಯ, ಹಸ್ತಾಭಿನಯ, ಮುದ್ರೆಗಳ ಬಳಕೆ, ಬಣ್ಣದ ವೇಷ ರಚನಾ ಕ್ರಮ, ಅಟ್ಟೆ ಕೇದಗೆ ಮುಂದಲೆ ಕಟ್ಟುವ ಕ್ರಮ, ಪರಂಪರೆಯ ಕುಣಿತಗಳು, ಯುದ್ಧ ಕುಣಿತ, ಪ್ರಯಾಣ ಕುಣಿತ, ರಸಾಭಿನಯ, ಪ್ರಸಂಗ ಸನ್ನಿವೇಷ ಪ್ರದರ್ಶನ ಆಯುಧಗಳ ಬಳಕೆ ಮುಂತಾದ ವಿವರಗಳನ್ನೊಳಗೊಂಡ ಪ್ರಾತ್ಯಕ್ಷಿಕೆ ಪ್ರೇಕ್ಷಕರ ಗಮನ ಸೆಳೆಯಿತು.

ಕೋಟ ಸುದರ್ಶನ ಉರಾಳ, ಮೊ: 9448547237

ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ

ಉಡುಪಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯವತಿಯಿ0ದ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಏಪ್ರಿಲ್ 12 ರಿಂದ 21, 2022ರ ತನಕ ಪ್ರತಿದಿನ ಪೂರ್ವಾಹ್ನ 9.00 ರಿಂದ 11.30ರ ತನಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಡಗುತಿಟ್ಟು ಯಕ್ಷಗಾನ ತರಬೇತಿ ನೀಡಲಾಗುವುದು.

ಆಸಕ್ತರು ಅಧ್ಯಕ್ಷ ಕೆ. ಅಜಿತ್ ಕುಮಾರ್ (9845309836) ಅಥವಾ ಕಾರ್ಯದರ್ಶಿ ಸುನಿಲ್ ಕುಮಾರ್ (9901150844) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ದ್ವಿತೀಯ ಮಹಾಯುದ್ಧ’ : ಒಂದು ವಿಶಿಷ್ಟ ಯಕ್ಷಗಾನ ಪ್ರಸಂಗ

ವೀರರಸ ಪ್ರಧಾನ ಯಕ್ಷಗಾನ ಕಲೆಗೆ ನಮ್ಮ ಸುತ್ತಮುತ್ತ ನಡೆದ ಘಟನೆಯೊಂದು ವಸ್ತುವಾಗುವುದು ಹೊಸದೇನಲ್ಲ; ಆದರೂ ನಮ್ಮ ಪುರಾಣಗಳಿಂದ ಆಯ್ದ ಪ್ರಸಂಗಗಳ ನಡುವೆ ಸುಮಾರು ಏಳು ದಶಕಗಳ ಹಿಂದೆ ಮೂಡಿಬಂದ ಜಾಗತಿಕ ಮತ್ತು ದೇಶೀಯ ಘಟನೆಯ ತುಲನೆಯಿರುವ ‘ದ್ವಿತೀಯ ಮಹಾಯುದ್ಧ’ ಎಂಬ ಈ ಪ್ರಸಂಗ ವಿಶೇಷವಾದುದು.


‘ದ್ವಿತೀಯ ಮಹಾಯುದ್ಧ’ ಎಂಬ ಸ್ವಾಭಾವಿಕ ಸುಲಲಿತ ಕವಿತಾ ಬಂಧದಿ0ದ ಕೂಡಿರುವ ಈ ಐತಿಹಾಸಿಕ ಪ್ರಸಂಗವನ್ನು ರಚಿಸಿದವರು ಎ. ಆರ್.ಶಗ್ರಿತ್ತಾಯ ಅವರು. ಅದರಲ್ಲೂ 1949ರಲ್ಲಿ ಪ್ರಕಟಗೊಂಡಿದೆ ಅನ್ನುವುದು ಇದರ ವಿಶೇಷತೆ. ಈ ಪ್ರಸಂಗವನ್ನು ಬರೆದ ಇಸವಿಯ ಬಗ್ಗೆ ಶಗ್ರಿತ್ತಾಯರು ಹೇಳದಿದ್ದರೂ ಪ್ರಕಟವಾಗಲು ಎರಡು ವರುಷಗಳಾದರೂ ಸಂದಿವೆ ಅನ್ನುವುದು “ಈ ಪುಸ್ತಕವು ಇದರ ಹಿಂದೆಯೇ ಬರೆದು ಮುಗಿದಿದ್ದರೂ ಕಾಗದದ ಅಭಾವದ ಪರಿಣಾಮದಿಂದಾಗಿ ಇದುವರೆಗೂ ಅಚ್ಚಾಗಲು ಉಳಿದು ಹೋಗಿತ್ತು.” ಎಂಬ ಅವರ ಮಾತಿನಿಂದಲೇ ಖಚಿತವಾಗಿದೆ


ಇದರಲ್ಲಿ ‘ಹಿಟ್ಲರನ ಪತನ’ ಮತ್ತು ‘ಸ್ವಾತಂತ್ರ್ಯ ವಿಜಯ’ ಎಂಬ ಎರಡು ಪ್ರಸಂಗಗಳಿದ್ದು, ಮೂರು ಭಾಗಗಳಿವೆ: ಲಂಡನಿನ ದಂಡಯಾತ್ರೆ ಗದ್ದಲ, ಹಿಟ್ಲರನ ಮತ್ತು ಮುಸಲೋನಿಯ ಪತನ, ಜಪಾನ್ ಶರಣಾಗತಿ ಹಾಗೂ ಭಾರತದ ಸ್ವಾತಂತ್ರ್ಯ.


1914ರಲ್ಲಿ ಆರಂಭವಾದ ಪ್ರಪಂಚದ ಪ್ರಥಮ ಮಹಾಯುದ್ಧವು ಸುಮಾರು ನಾಲ್ಕು ವರ್ಷಗಳ ನಂತರ ಕೊನೆಗೊಂಡರೆ 1939ರಲ್ಲಿ ಆರಂಭವಾದ ದ್ವಿತೀಯ ಮಹಾಯುದ್ಧವು ಆರು ವರ್ಷಗಳ ನಂತರ ಹಿಟ್ಲರನ ಪತನದೊಂದಿಗೆ ಕೊನೆಗೊಂಡಿತು. ಇಲ್ಲಿ ಕೇವಲ ಯುದ್ಧ ವೀರೋಚಿತ ಸನ್ನಿವೇಶಗಳನ್ನು ಚಿತ್ರಿಸುವ ಉದ್ದೇಶ ಪ್ರಸಂಗಕರ್ತರದ್ದಲ್ಲ. ಜನರಿಗೆ ವಿಚಾರಗಳನ್ನು ಮುಟ್ಟಿಸುವ ಉದ್ದೇಶದಿಂದ ಹಾಡುಗಬ್ಬ ರೂಪದ ಯಕ್ಷಗಾನವನ್ನು ತಾವು ಆಯ್ದುಕೊಂಡಿರುವುದಾಗಿ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಅದುವರೆಗೂ ಯುದ್ಧ ಸಂದರ್ಭಗಳಲ್ಲಿ ಕೇಳದ ತಿಳಿಯದ ಪದಗಳನ್ನು ಕೇಳಿದಾಗ ಮೂಡಿದ ಕುತೂಹಲವೇ ಅವರಿಗೆ ಈ ಪ್ರಸಂಗ ರಚನೆಗೆ ಪ್ರೇರಣೆಯಂತೆ.


ಈ ಪ್ರಸಂಗದಲ್ಲಿ ಶಗ್ರಿತ್ತಾಯರು ಒಂದೇ ಕಾಲಘಟ್ಟದ ಸುಮಾರಿಗೆ ನಡೆದ ಎರಡು ವಿಚಾರಗಳನ್ನು ಜೊತೆಯಾಗಿಸುವ ಮೂಲಕ ಒಂದು ತುಲನಾತ್ಮಕ ನೋಟವನ್ನೂ ನೀಡಲು ಪ್ರಯತ್ನಿಸಿದ್ದಾರೆ. ಹಿಟ್ಲರ್, ಮುಸಲೋನಿಯರ ಅತಿ ಆಗ್ರಹದ ಕದನ ಆಟಂ ಬಲದಿಂದ ಪರಾಜಯದೊಂದಿಗೆ ಅ0ತ್ಯವಾದರೆ, ನಮ್ಮ ಪುಣ್ಯ ನೆಲದಲ್ಲಿನ ಆತ್ಮಬಲದ ಸಮರವು ಸ್ವಾತಂತ್ರ್ಯ ವಿಜಯದೊಂದಿಗೆ ಕೊನೆಗೊಂಡಿತು. ಒಂದೆಡೆ ವಿಜ್ಞಾನ ಬಲದ ಕದನಕ್ಕೆ ಸೋಲಾದರೆ, ಇನ್ನೊಂದೆಡೆ ಸುಜ್ಞಾನ ಬಲದ ಕದನಕ್ಕೆ ಗೆಲುವಾಯಿತು; ಹಿಂಸೆಗೆ ಸೋಲಾದರೆ ಅಹಿಂಸೆಗೆ ಗೆಲುವಾಯಿತು. ಇವೆರಡೂ ಸರಿ ಸುಮಾರು ಒಂದೇ ಸಮಯದಲ್ಲಿ ಕೊನೆಗೊಂಡ ಎರಡು ಪ್ರಮುಖ ಘಟನೆಗಳು.


ಯಂತ್ರ-ತ0ತ್ರ ಇವೆರಡೂ ಶತ್ರುಗಳನ್ನು ಎದುರಿಸುವ ಮಟ್ಟಹಾಕುವ ಉಪಾಯಗಳೇ ಆಗಿವೆ. ಕೇವಲ ಯಂತ್ರಶಕ್ತಿಯಿ0ದ ವಿಜ್ಞಾನದ ಬಲದಿಂದ ಮಾತ್ರ ಜಗತ್ತನ್ನು ಸುಟ್ಟು ನಾಶ ಮಾಡುವುದು ಸಾಧ್ಯವಾಗುವುದೇ?ಸಾಧ್ಯವಾಗುವುದಾದರೆ ಜಗತ್ತಿನ ಅದ್ವಿತೀಯ ಪರಾಕ್ರಮಿ ಎಂದೆನಿಸಿದ ಹಿಟ್ಲರನ ಪತನ ಸಾಧ್ಯವಿತ್ತೇ? ಯಂತ್ರಗಳು ಯುದ್ಧತಂತ್ರಗಳಿಗೆ ಬೆಂಬಲ ಮಾತ್ರವೇ?ಮೊದಲಾದ ಪ್ರಶ್ನೆಗಳಿಗೆ ಉತ್ತರವೆಂಬ0ತೆ ನಡೆದ ಘಟನೆ ಭಾರತದ ಸ್ವಾತಂತ್ರ್ಯ ವಿಜಯ. ಹೀಗೆ ಒಂದೇ ಕಾಲಘಟ್ಟದಲ್ಲಿ ನಡೆದ ಎರಡು ಘಟನೆಗಳನ್ನು ಪ್ರಸಂಗವಾಗಿಸುವ ಮೂಲಕ ಅವೆರಡರ ನಡುವಿನ ತೌಲನಿಕ ವಿಶ್ಲೇಷನೆಗೆ ಅನುವು ಮಾಡಿಕೊಟ್ಟವರು ಶಗ್ರಿತ್ತಾಯರೆನ್ನಬಹುದು.


ಜನಪದ ಸಾಹಿತ್ಯರೂಪದ ಈ ವಿನೂತನ ಯಕ್ಷಗಾನ ಪ್ರಸಂಗದಲ್ಲಿ ಮಹಾಯುದ್ಧದ ಘಟನಾವಳಿಗಳನ್ನು ವಿವರಿಸುವಾಗ ವೀರರ, ಶಸ್ತ್ರಾಸ್ತ್ರಗಳ ಹೆಸರುಗಳನ್ನು ನಮ್ಮ ಕರುನಾಡಿನ ಸಂಸ್ಕೃತಿಗೆ ತಕ್ಕ0ತೆ ಕೆಲವೆಡೆ ರೂಪಾಂತರಗೊಳಿಸಿದ್ದಾರೆ. ವಿದೇಶೀ ಅಪರಿಚಿತ ಹೆಸರುಗಳನ್ನು ಕನ್ನಡೀಕರಿಸಿದ್ದಾರೆ. ಕಾದಂಬರಿಯ0ತಹ ವಿಚಾರವನ್ನೂ, ಪುರಾಣ ಕಥೆಗಳಲ್ಲಿನ ಕಲೆಗಳನ್ನು ಹೊಂದಿರುವ ಇದು ಪುರಾಣಗಳಲ್ಲಿ ಬಳಕೆಯಾದ ತಂತ್ರಜ್ಞಾನ ಸಂಬ0ಧೀ ಕಲ್ಪನಾ ವಿಚಾರಗಳು ನಿಜವಾಗುವುದನ್ನು ಚಿತ್ರಿಸುತ್ತದೆ.


ಕಥಾನುಸಾರ, ಪಾತ್ರ ಪರಿಚಯ ಹಾಗೂ ಚಿತ್ರಗಳನ್ನು ಒಳಗೊಂಡಿರುವ ಇದರಲ್ಲಿ ಆರು ವರುಷಗಳ ಕಾಲ ನಡೆದ ಯುದ್ಧದ ಸಮಸ್ತ ವಿಚಾರಗಳನ್ನು ಸರಳಗೊಳಿಸಿ ಪಾತ್ರಗಳೊಂದಿಗೆ ಪ್ರತ್ಯೇಕ ಟಿಪ್ಪಣಿಗಳೊಂದಿಗೆ ನೀಡಿದ್ದಾರೆ. ಆಧುನಿಕ ಕಾಲಕ್ಕೆ ಅನುಗುಣವಾಗಿ ವಿನೋದ ರಸಗಳನ್ನೂ ಅಲ್ಲಲ್ಲಿ ಸೇರಿಸಿದ್ದಾರೆ.


ಯಕ್ಷಗಾನ ಪ್ರಸಂಗ ರಚನೆಯ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ಪಾತ್ರಗಳನ್ನು ಪುರಾಣ ಪಾತ್ರಗಳಿಗೆ ಹೋಲಿಸುವ ಪ್ರಕ್ರಿಯೆ ಅನಿವಾರ್ಯ ಎಂಬ0ತೆ ಹಿಟ್ಲರನನ್ನು ಕೇತು, ಹಿರಣ್ಯಕಶಿಪು, ಕರ್ಣನಿಗೂ, ಮುಸಲೋನಿಯನ್ನು ನರಕಾಸುರ, ರಾಹುವಿಗೂ, ಸ್ಟಾಲಿನ್ ಅನ್ನು ಅರ್ಜುನನಿಗೂ, ಲಂಡನ್‌ ನಗರವನ್ನು ಲಂಕೆ, ಅಳಕಾವತಿಗೂ ಹೋಲಿಸಿರುವುದು ವಿಶೇಷವಾಗಿದೆ.


ಇಲ್ಲಿ ಆರನೇಜಾರ್ಜ್, ಚೇಂಬರ್ಲೇನ್, ಚಿಯಾಂಗ್, ವೇವಲ್, ಜಿನ್ನಾ ಮೊದಲಾದವರ ಫೋಟೋಗಳೂ ಇವೆ. ಕಾಂಗ್ರೆಸ್ ಸರಕಾರ, ಸಾರ್ವಭೌಮತ್ವ, ಹಿಟ್ಲರನ ಜೀವನಚರಿತ್ರೆ, ಬರ್ಲಿನ್‌ ಕೋಟೆಯ ವರ್ಣನೆ, ಶತ್ರು-ಮಿತ್ರರ ತುಲನೆ, ನಾರ್ವಯ ಪತನ, ತ್ರಿಕೂಟ ಸಂಧಿ, ಭಾರತದ ಕ್ಷಾಮ ಸ್ಥಿತಿ, ಆಜಾದ್ ಸೈನ್ಯ ನಿರ್ಮಾಣ, ಬರ್ಮಾ ಆಕ್ರಮಣ, ಸಿಂಗಾಪುರ, ರಂಗೂನ್ ಪತನ, ಮುಸಲೋನಿ ಪದಚ್ಯುತಿ, ಬೋರ್ಡೋಗ್ಲಿ ಸರಕಾರದ ಸ್ಥಾಪನೆ, ಬರ್ಲಿನ್‌ಯುದ್ಧ, ಮುಸ್ಲಿಂ ಲೀಗ್ ವಿವರ, ಯುದ್ಧತಂತ್ರಗಾರಿಕೆ, ಯುದ್ಧ ವರ್ಣನೆ, ಹಿಟ್ಲರನ ಬೇನೆ ಮೊದಲಾದ ಎಲ್ಲ ವಿವರಗಳನ್ನೊಳಗೊಂಡ ಇದೊಂದು ವಿಶಿಷ್ಟ ಯಕ್ಷಗಾನ ಪ್ರಸಂಗವೆನ್ನಬಹುದಾಗಿದೆ.

ಡಾ.ಮೈತ್ರಿ ಭಟ್

ಲೇಖಕಿಯ ವಿಳಾಸ:ಡಾ.ಮೈತ್ರಿ ಭಟ್,
ಉಪನ್ಯಾಸಕಿ, ಕನ್ನಡ ವಿಭಾಗ,
ವಿವೇಕಾನಂದಕಾಲೇಜು,
ನೆಹರೂ ನಗರ, ಪುತ್ತೂರು – 574203
ಮೊಬೈಲು ಸಂಖ್ಯೆ: 9449793584

ಯಕ್ಷಗಾನ ತಾಳಮದ್ದಳೆ

ಯಕ್ಷಗಾನ ತಾಳಮದ್ದಳೆ

ಶ್ರೀ ಷಣ್ಮುಖ ದೇವಸ್ಥಾನ ಕಾಂಚನ ಪೆರ್ಲ ದೇವಳದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದಿನಾಂಕ 26-03-2022ರ ಶನಿವಾರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸೀತಾಪರಿತ್ಯಾಗ ತಾಳಮದ್ದಳೆ ಜರಗಿತು.

ಭಾಗವತರಾಗಿ ಶ್ರೀ ದಿನೇಶ್ ಅಮ್ಮಣ್ಣಾಯ, ಹಿಮ್ಮೇಳದಲ್ಲಿ ಶ್ರೀಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಶ್ರೀಮುರಳೀಧರ ಆಚಾರ್ಯ ನೇರೆಂಕಿ, ಅರ್ಥಧಾರಿಗಳಾಗಿ ಶ್ರೀರಾಧಾಕೃಷ್ಣ ಕಲ್ಚಾರ್ (ಶ್ರೀ ರಾಮ), ಶ್ರೀಹರೀಶ್ ಬಳಂತಿಮೊಗರು (ಸೀತಾ), ಶ್ರೀದಿವಾಕರ ಆಚಾರ್ಯ ಗೇರುಕಟ್ಟೆ (ಲಕ್ಷ್ಮಣ), ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ವಾಲ್ಮೀಕಿ), ಶ್ರೀಹರೀಶ್ ಆಚಾರ್ಯ ಬಾರ್ಯ (ಭದ್ರ ಮತ್ತು ಬ್ರಹ್ಮ) ಭಾಗವಹಿಸಿದ್ದರು.

ಮಹೇಶ್ ಪಿ. ನೇರಂಕಿ ಕಾರ್ಯಕ್ರಮ ಸಂಯೋಜಿಸಿದ್ದರು.