Tuesday, September 1, 2026
Home Blog Page 270

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 02.05.2022

ಕಟೀಲು ಒಂದನೇ ಮೇಳ == ಶ್ರೀಹರಿ’ ಒಂಟಿಕಟ್ಟೆ ಮೂಡಬಿದ್ರೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ರಾಧಾ ನಿಲಯ ಫಾರೆಸ್ಟ್ ಗೇಟ್ ಎನ್.ಸಿ.ಸಿ ಬೋಟ್ ಫೂಲ್ ಬಳಿ ಏಣಗುಡ್ಡೆ ಕಟಪಾಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ‘ಹರ್ಷಮಾಲ’, ಚರ್ಚ್ ಹಿಂದುಗಡೆ ಪಕ್ಷಿಕೆರೆ ವಯಾ ಹಳೆಯಂಗಡಿ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಗಜೇಂದ್ರ ಮೋಕ್ಷ, ರುಕ್ಮಾಂಗದ ಚರಿತ್ರೆ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಪ್ರತೀಕ್ಷಾ ಪೂರಣ (ಗಜೇಂದ್ರ ಮೋಕ್ಷ, ಗದಾಯುದ್ಧ, ಬಬ್ರುವಾಹನ)

ಕಟೀಲು ಆರನೇ ಮೇಳ == ‘ಶ್ರೀ ಸುಧಾಲಕ್ಷ್ಮಿ’ ಕುರ್ಕಿಲ್ ಬೆಟ್ಟು ಬಾಳಿಕೆ ಇನ್ನಾ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಯಕ್ಷಗಾನ ಶಿಬಿರ ಸಮಾರೋಪ

ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಆಶ್ರಯದಲ್ಲಿ 18 ದಿನಗಳಿಂದ ಜರಗಿದ ಯಕ್ಷಗಾನ ಶಿಬಿರದ ಸಮಾರೋಪ ಮೇ 1ರಂದು ಶ್ರೀ ಜನಾರ್ದನ ಮಂಟಪದಲ್ಲಿ ಎಲ್.ಐ.ಸಿ.ಅಧಿಕಾರಿಗಳಾದ ಎಸ್.ಕೆ.ಆನಂದ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಅಭ್ಯಾಗತರಾಗಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ,ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್,ಉದ್ಯಮಿ ವಿಶ್ವನಾಥ ಶೆಣೈ,ನಾರಾಯಣ ಎಮ್.ಹೆಗಡೆ ಭಾಗವಹಿದರು.

ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿದರು.ನಟರಾಜ ಉಪಾಧ್ಯಾಯ ನಿರ್ವಹಿದ ಕಾರ್ಯಕ್ರಮದಲ್ಲಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.

ಮಂಜುನಾಥ ತೆಂಕಿಲ್ಲಾಯ ಕೃತಜ್ಞತೆ ಸಲ್ಲಿಸಿದರು.ಉಪಾಧ್ಯಕ್ಷ ಕೆ.ಜೆ.ಗಣೇಶ್’,ಕಾರ್ಯದರ್ಶಿ ಸುನಿಲ್ ಕುಮಾರ್,ಪ್ರವೀಣ್ ಉಪಾಧ್ಯಾಯ,ಪ್ರಕಾಶ್ ಹೆಬ್ಬಾರ್ ಉಪಸ್ಥಿತರಿದ್ದರು.

ನರಸಿಂಹ ತುಂಗರ ನಿರ್ದೇಶನದಲ್ಲಿ ಏರ್ಪಟ್ಟ ಶಿಬಿರದಲ್ಲಿ 40 ವಿದ್ಯಾರ್ಥಿಗಳು ಪಾಲುಗೊಂಡಿದ್ದರು.ಸಭೆಯ ಪೂರ್ವ ದಲ್ಲಿ ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿಕೆ ನಡೆಯಿತು.

ಯಕ್ಷಗಾನ ಕಲಾವಿದರಿಗೆ ಗೌರವಾರ್ಪಣೆ ಮತ್ತು ತಾಳಮದ್ದಳೆ


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರಗಿದ ಶ್ರೀ ಅನುಗ್ರಹ ಪಾರೆಂಕಿ ಪ್ರಾಯೋಜಕತ್ವದ ಕಲಾವಿದರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ವಹಿಸಿದರು.


ಕುಂಬ್ಳೆ ಶ್ರೀಧರ ರಾವ್, ಪಾತಾಳ ಅಂಬಾಪ್ರಸಾದ್, ಜಿನೇಂದ್ರ ಜೈನ್, ಮಹಾಲಿಂಗೇಶ್ವರ ಭಟ್, ಹರೀಶ್ ಆಚಾರ್ಯ, ಶ್ರೀಪತಿ ಭಟ್ ಮತ್ತು ಗಂಗಾಧರ ಟೈಲರ್ ಇವರನ್ನು ಸನ್ಮಾನಿಸಲಾಯಿತು.


ಬಿ.ಸುಬ್ರಮಣ್ಯ ರಾವ್, ಪ್ರಭಾಕರ ಆಳ್ವ, ಪದ್ಮನಾಭ ಕುಲಾಲ್, ಗುರುಮೂರ್ತಿ ಅಮ್ಮಣ್ಣಾಯ ತಿಲಕಾಕ್ಷ, ವಿಜಯಕುಮಾರ್ ಕೊಯ್ಯೂರು, ಶಿವರಾಂ, ಕಿಶೋರ್, ದೇವಿಪ್ರಸಾದ್, ಕಾರ್ತಿಕ್ ಬಳ್ಳಮಂಜ ಇವರನ್ನು ಕಲಾ ಸೇವೆಗಾಗಿ ಗೌರವಿಸಲಾಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕುಂಬ್ಳೆ ಶ್ರೀಧರ ರಾವ್ ಉದ್ಘಾಟಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಉಮೇಶ ಶೆಣೈ ಎನ್, ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಉಪಸ್ಥಿತರಿದ್ದರು.

ಶ್ರೀ ಅನುಗ್ರಹ ಸಂಜೀವ ಸ್ವಾಗತಿಸಿ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ “ಶ್ರೀ ಕದಂಬ ಕೌಶಿಕೆ” ತಾಳಮದ್ದಲೆ ಜರಗಿತು.

ಇಂದು ಆಟ ಎಲ್ಲೆಲ್ಲಿ? (02-05-2022)

ಮೇಳಗಳ ಇಂದಿನ (02.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೆಂಜಾರು ಪಡ್ಪು ನಟ್ಟಿಲ್ಲು ಕಲ್ಪವೃಕ್ಷ ನಿಲಯದ ಮುಂಭಾಗ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ;ಶ್ರೀಹರಿ’ ಒಂಟಿಕಟ್ಟೆ ಮೂಡಬಿದ್ರೆ 

ಕಟೀಲು ಎರಡನೇ ಮೇಳ == ರಾಧಾ ನಿಲಯ ಫಾರೆಸ್ಟ್ ಗೇಟ್ ಎನ್.ಸಿ.ಸಿ ಬೋಟ್ ಫೂಲ್ ಬಳಿ ಏಣಗುಡ್ಡೆ ಕಟಪಾಡಿ 

ಕಟೀಲು ಮೂರನೇ ಮೇಳ== ‘ಹರ್ಷಮಾಲ’, ಚರ್ಚ್ ಹಿಂದುಗಡೆ ಪಕ್ಷಿಕೆರೆ ವಯಾ ಹಳೆಯಂಗಡಿ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ‘ಶ್ರೀ ಸುಧಾಲಕ್ಷ್ಮಿ’ ಕುರ್ಕಿಲ್ ಬೆಟ್ಟು ಬಾಳಿಕೆ ಇನ್ನಾ 

ಮಂದಾರ್ತಿ ಒಂದನೇ ಮೇಳ  == ತಂತ್ರಾಡಿ ಕಾಡೂರು 

ಮಂದಾರ್ತಿ ಎರಡನೇ ಮೇಳ   == ಶಿವಗಿರಿ ನಿಲಯ ಜೀರಳಜೆಡ್ಡು ಗೋವೆಕೊಡ್ಲು ಬೇಳಂಜೆ 

ಮಂದಾರ್ತಿ ಮೂರನೇ ಮೇಳ  == ಮಕ್ಕಿಮನೆ ಹೊಸಾಡು ಮುಳ್ಳಿಕಟ್ಟೆ 

ಮಂದಾರ್ತಿ ನಾಲ್ಕನೇ ಮೇಳ   == ಹಿತ್ತಲಮನೆ ಹೆರಂಜಾಲು 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಪರ್ಕಳ ನರಸಿಂಗೆ (ಮಣಿಪಾಲ) – ತ್ರಿಪುರ ಮಥನ 

ಶ್ರೀ ಸಾಲಿಗ್ರಾಮ ಮೇಳ == ಇಡಗುಂಜಿ ಶ್ರೀ ಮಹಾಗಣಪತಿ ಸನ್ನಿಧಿ – ಗದಾಯುದ್ಧ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಗುಲಾಬಿ ಸದನ ಶೆಟ್ಟಿ ಬ್ರದರ್ಸ್ ಪೋರ್ಟ್ ವಠಾರ ವಾಲ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ವಾಸುದೇವ ನಿಲಯ ರಾಮಲಕ್ಷ್ಮಣ ರಸ್ತೆ ತೋಟ್ ಬೈಲು ಕನ್ಯಾನ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗುಲಾಬಿ ಸದನ ಶೆಟ್ಟಿ ಬ್ರದರ್ಸ್ ಪೋರ್ಟ್ ವಠಾರ ವಾಲ್ತೂರು 

ಶ್ರೀ ಪಾವಂಜೆ ಮೇಳ == ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸನ್ನಿಧಿ ನಿಲಯ ಚೆಲ್ಯಡ್ಕ ಬೆಟ್ಟಂಪಾಡಿ – ಶ್ರೀ ದೇವಿ ಮಹಾತ್ಮೆ (ಕಾಲಮಿತಿ)

ಶ್ರೀ ಕಮಲಶಿಲೆ ಮೇಳ == ಗುಡ್ಡೆಮನೆ ನೂಜಾಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೋಟೇಶ್ವರ ದೊಡ್ಮನೆಬೆಟ್ಟು ‘ಶ್ರೀ ಮೂಕಾಂಬಿಕಾ’ – ಸೌಕೂರು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ (ಕಾಲಮಿತಿ) 

ಶ್ರೀ ಮಡಾಮಕ್ಕಿ ಮೇಳ == ಶಿರಂಗೂರು ಸಿದ್ರಾಡಿ ‘ಬೃಂದಾವನ’ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶ್ರೀ ಕ್ಷೇತ್ರ ಪೆರ್ಡೂರು ಅಂಗನವಾಡಿ ಮೈದಾನದಲ್ಲಿ – ದೈವದ ಹೆಜ್ಜೆ 

ಶ್ರೀ ಹಿರಿಯಡಕ ಮೇಳ ==  ವರಂಗ ಕೊಂಕಣಾರಬೆಟ್ಟು ಅಡ್ಕ ‘ಬನಶಂಕರಿ’ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಸಂಗಮ್ ಕುಂದಾಪುರ 

ಶ್ರೀ ಸಿಗಂದೂರು ಮೇಳ == ಶಿರಸಿ ಅಮಿನಳ್ಳಿ ನಾಗ ಚೌಡೇಶ್ವರಿ ದೇವಸ್ಥಾನ ವಠಾರ 

ಶ್ರೀ ನೀಲಾವರ ಮೇಳ  == ಶ್ರೀ ಉದ್ಭವಲಿಂಗೇಶ್ವರ ಭಜನಾ ಮಂದಿರ ಮಣೂರು ಪಡುಕರೆ – ಶ್ರೀ ವೀರ ಕಲ್ಲುಕುಟ್ಟಿಗ 

ಶ್ರೀ ಮೇಗರವಳ್ಳಿ ಮೇಳ ==  ಕಣಿಗಲಗೋಡು ಚಕ್ಕೋಡಬೈಲ್ ಶ್ರೀ ಹರಿಹರೇಶ್ವರ ದೇವಸ್ಥಾನ – ಕುಲದೈವ ಪಂಜುರ್ಲಿ, ಕನಕಾಂಗಿ ಕಲ್ಯಾಣ 

ಶ್ರೀ ಹಟ್ಟಿಯಂಗಡಿ ಮೇಳ == ಬೇಳಂಜೆ ಬಾದ್ಲು – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ವಂಡಾರು ಮಾವಿನಕಟ್ಟೆ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಬಡಗಬೆಟ್ಟು ಗರೋಡಿ ವಠಾರ – ಕೋಟಿ ಚೆನ್ನಯ  

ಶ್ರೀ ಸಸಿಹಿತ್ಲು ಭಗವತೀ ಮೇಳ == ಎಡಮಂಗಲ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನ ಡೆಮ್ಮಾಲ್ಮಯ – ಮುಗುರು ಮಲ್ಲಿಗೆ 

ಕಟೀಲು: ಆರೂ ಮೇಳಗಳಲ್ಲಿ ಇಂದು ಶ್ರೀ ದೇವಿ ಮಹಾತ್ಮೆ – 01.05.2022

ಕಟೀಲು ಒಂದನೇ ಮೇಳ == ಗುಡ್ಡೆ ಹೌಸ್ ‘ಸಮೃದ್ಧಿ’ ತಿರುವೈಲು ವಾಮಂಜೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==ರಾಯರ ಹೊಸಮನೆ ಕುಬೆವೂರು ಕೆಂಚನಕೆರೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ದೊಡ್ಡಮನೆ ಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  ==  ಶ್ರೀದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊಸನಾಡು ಕೊಡ್ಯಡ್ಕ ವಯಾ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಗುಂಡೂರಾವ್ ರೋಡ್ ಮಣ್ಣಗುಡ್ಡೆ ಬರ್ಕೆ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಅತ್ತೂರು ಮೂಡ್ರಗುತ್ತು ಕೆಮ್ರಾಲ್ ಸುರಗಿರಿ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (01-05-2022)

ಮೇಳಗಳ ಇಂದಿನ (01.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೊಕ್ಕರ್ಣೆ ಧರ್ಮಶ್ರೀ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಗುಡ್ಡೆ ಹೌಸ್ ‘ಸಮೃದ್ಧಿ’ ತಿರುವೈಲು ವಾಮಂಜೂರು 

ಕಟೀಲು ಎರಡನೇ ಮೇಳ ==ರಾಯರ ಹೊಸಮನೆ ಕುಬೆವೂರು ಕೆಂಚನಕೆರೆ 

ಕಟೀಲು ಮೂರನೇ ಮೇಳ== ದೊಡ್ಡಮನೆ ಮುಂಡ್ಕೂರು 

ಕಟೀಲು ನಾಲ್ಕನೇ ಮೇಳ  ==  ಶ್ರೀದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ ಹೊಸನಾಡು ಕೊಡ್ಯಡ್ಕ ವಯಾ ಮೂಡಬಿದ್ರಿ 

ಕಟೀಲು ಐದನೇ ಮೇಳ == ಗುಂಡೂರಾವ್ ರೋಡ್ ಮಣ್ಣಗುಡ್ಡೆ ಬರ್ಕೆ ಮಂಗಳೂರು 

ಕಟೀಲು ಆರನೇ ಮೇಳ == ಅತ್ತೂರು ಮೂಡ್ರಗುತ್ತು ಕೆಮ್ರಾಲ್ ಸುರಗಿರಿ ದೇವಸ್ಥಾನದ ಬಳಿ 

ಮಂದಾರ್ತಿ ಒಂದನೇ ಮೇಳ  == ಜೆಡ್ಡಿನ ಮನೆ ಸೂರ್ಗೋಳಿ ಬೆಳ್ವೆ 

ಮಂದಾರ್ತಿ ಎರಡನೇ ಮೇಳ   == ಕಡೆಕಾರುಮನೆ ಹೆಗ್ಗುಂಜೆ ಮಂದಾರ್ತಿ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಇಡೂರು ದೊಡ್ಮನೆ ಇಡೂರು ಕುಂಜ್ಞಾಡಿ 

ಮಂದಾರ್ತಿ ನಾಲ್ಕನೇ ಮೇಳ   == ಕಡೆಕಾರುಮನೆ ಹೆಗ್ಗುಂಜೆ ಮಂದಾರ್ತಿ – ಕೂಡಾಟ 

ಮಂದಾರ್ತಿ ಐದನೇ ಮೇಳ  == ಶ್ರೀ ಸಾಯಿಕೃಪಾ ಸಾಳೂರುಮನೆ ಅಸೋಡು 

ಹನುಮಗಿರಿ ಮೇಳ == ಜಪ್ಪಿನಮೊಗರು ಶಾಲಾ ಮೈದಾನ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಕುಮಟಾ ಕೂಜಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಿ ಶ್ರೀ ಕ್ಷೇತ್ರ ಹೆಗಲೆ – ಶ್ರೀ ದೇವಿ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಶೂದ್ರ ತಪಸ್ವಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಹೊಸಮನೆ ನಾಯ್ಕನಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಇಡೂರು ದೊಡ್ಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹಾಲಾಡಿ ಕಲ್ಲಟ್ಟಿ 

ಶ್ರೀ ಪಾವಂಜೆ ಮೇಳ == ಅಳಿಕೆ ಸತ್ಯಸಾಯಿ ವಿಹಾರ ವಠಾರ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಗುಡ್ಡೆಮನೆ ನೂಜಾಡಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬಾಳೆಬೆಟ್ಟು ಮಣೂರು 

ಶ್ರೀ ಸೌಕೂರು ಮೇಳ == ಬಳ್ಕೂರು ಬಾಳನಮಕ್ಕಿ – ಧರ್ಮದೇವತೆ ನಂದಿಕೇಶ್ವರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸುಳ್ಯಮೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಪಾರಂಪಳ್ಳಿ ಪಡುಕೆರೆ ಬೊಬ್ಬರ್ಯ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶ್ರೀ ಗೋಳಿಗರಡಿ ಕ್ಷೇತ್ರ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕೋಟೇಶ್ವರ ರಥಬೀದಿ – ವಿಷ್ಣುನಾಮಾಮೃತ ಗರುಡವಾಹನ 

ಶ್ರೀ ಶನೀಶ್ವರ ಮೇಳ == ಕನ್ಯಾನ ಗುಡ್ಡೆಯಂಗಡಿ 

ಶ್ರೀ ಸಿಗಂದೂರು ಮೇಳ == ತಗ್ಗರ್ಸೆ ಸೂರುಮನೆ 

ಶ್ರೀ ನೀಲಾವರ ಮೇಳ  == ಆರೂರು ದೇವಸ್ಥಾನಬೆಟ್ಟು ಶಾಲಾ ಬಳಿ – ಚಂದ್ರಾವಳಿ ರಾಜಾರುದ್ರಕೋಪ 

ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ದೇವಸ್ಥಾನ ವಠಾರ – ರುದ್ರಕೋಪ ಕುಶಲವ ಕೂಳೂರು ವಿದ್ಯಾನಗರ ಪಂಜಿಮೊಗರು – ನಾಗರ ಪಂಚಮಿ 

ಶ್ರೀ ಹಟ್ಟಿಯಂಗಡಿ ಮೇಳ == ಮೊಗವೀರಪೇಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಯಡೂರು ಗುತ್ತೆ ರೇಣುಕಾಂಬಾ ದೇವಸ್ಥಾನ ವಠಾರ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಪೆಲಪಾಡಿ ಬಾಕಿಮಾರು ಗದ್ದೆ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೀಲಾರು ಪ್ರಕಾಶ್ ನಗರ (ತೊಕ್ಕೊಟ್ಟು) – ರಂಗಸ್ಥಳ 

ಇಂದು ಆಟ ಎಲ್ಲೆಲ್ಲಿ? (30-04-2022)

ಮೇಳಗಳ ಇಂದಿನ (30.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೋಟ ಗಿಳಿಯಾರು ಮಹಾಗಿರಿ ಮನೆಯ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಗಂಪಮನೆ ಕಟೀಲು ಪೆಟ್ರೋಲ್ ಬಂಕ್ ಬಳಿ 

ಕಟೀಲು ಎರಡನೇ ಮೇಳ == ‘ದೇವಿಪ್ರಸಾದ್’ ಹರಿಯಾಳ ಪೇಟೆ ಮಾಣಿಲ ಕಲ್ಲಮುಂಡ್ಕೂರು 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಶ್ರೀ ಸತ್ಯನಾರಾಯಣ ಲಂಚ್ ಹೋಂ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಬಿ.ಸಿ ರೋಡ್ ಬಂಟ್ವಾಳ 

ಕಟೀಲು ಐದನೇ ಮೇಳ == ಶಿಬರೂರು ಕೈಯೂರು ದೇಲಂತಬೆಟ್ಟು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ 

ಕಟೀಲು ಆರನೇ ಮೇಳ == ಮೂಡುಶೆಡ್ಡೆ ಮಂಗಳೂರು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಮಾತೃಶ್ರೀ ನಿಲಯ ಮಡಿ ಪೇತ್ರಿ 

ಮಂದಾರ್ತಿ ಮೂರನೇ ಮೇಳ  == ಕಾವಡಿ ಕಾಶಿ ವಿಶ್ವೇಶ್ವರ ದೇವಸ್ಥಾನ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಮಂಜುನಾಥ ಕೃಪಾ ಬಡಾಬೆಟ್ಟು ಬೇಳೂರು ದೇವಸ್ಥಾನಬೆಟ್ಟು 

ಮಂದಾರ್ತಿ ಐದನೇ ಮೇಳ  == ಹೊಂಬಾಡಿ ಮಂಡಾಡಿ ಹುಣಸೆಮಕ್ಕಿ 

ಹನುಮಗಿರಿ ಮೇಳ == ಕೆಂಪುಗುಡ್ಡೆ ಬಂಟ್ವಾಳ – ತ್ರಿಪುರ ಮಥನ 

ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಕುಚ್ಚೂರು ಹಾಲಿಕೊಡ್ಲು ಶಾಲಾ ವಠಾರ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಆದಿ ಉಡುಪಿ ಬೈಪಾಸ್ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಿಳಿಯನಮನೆ ಹೇರಿಕುದ್ರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸ್ವಾತಿ ನಿಲಯ ವಿಠಲನಗರ ಹೆಮ್ಮಕ್ಕಿ ಬಾಂಡ್ಯ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಸ್ವಾತಿ ನಿಲಯ ವಿಠಲನಗರ ಹೆಮ್ಮಕ್ಕಿ ಬಾಂಡ್ಯ 

ಶ್ರೀ ಪಾವಂಜೆ ಮೇಳ == ಬೈಲೂರು ಕೌಡೂರು ವರ್ಷಾಲಿ ಹೆಗ್ಡೆ  ಮಹಲ್ ಅಂಗಳದಲ್ಲಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ದೊಂಡರಂಗಡಿ ಉಡುಪಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಎಡಬೆಟ್ಟು ಸಾಸ್ತಾನ 

ಶ್ರೀ ಸೌಕೂರು ಮೇಳ == ಹಟ್ಟಿಕುದ್ರು ಕೋಡಿಯಾರ ಮನೆ ನಾಗಬನ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ವೀರನಗರ ನವಜ್ಯೋತಿ ಮಹಿಳಾ ಮಂಡಳಿ – ಶ್ರೀ ದೇವಿ ಅಗ್ನಿಕಲ್ಲುರ್ಟಿ 

ಶ್ರೀ ಮಡಾಮಕ್ಕಿ ಮೇಳ == ಕಡ್ತಲ ಚೆನ್ನಿಬೆಟ್ಟು ಅಂಗನವಾಡಿ ಬಳಿ – ಶ್ರೀ ದೇವಿ ಮಹಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಗುಂಡ್ಮಿ ಸಾಸ್ತಾನ ಯಕ್ಷಿಮಠ ರಸ್ತೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಮುದ್ದೂರು ನಾಲ್ಕೂರು 

ಶ್ರೀ ಸಿಗಂದೂರು ಮೇಳ == ನಾಡಾ ತೆಂಕಬೈಲು 

ಶ್ರೀ ನೀಲಾವರ ಮೇಳ  == ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ ಗೋಳಿಬೇರು – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಮುಡುಬ ಹೊಡಿಯಾಲ 

ಶ್ರೀ ಮೇಗರವಳ್ಳಿ ಮೇಳ == ಮುತ್ತಾನ ಅಗಳಬೈಲ್ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಬಿಲಗದ್ದೆ ವಿನಾಯಕನಗರ ಕೊಪ್ಪ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಸಬ್ಬಾಗಿಲು – ಮಾರುತಿ ಪ್ರತಾಪ, ರಾಜಾ ರುದ್ರಕೋಪ 

ಶ್ರೀ ಬಪ್ಪನಾಡು ಮೇಳ == ಪೆರ್ಮುದೆ ಪದವು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಅಣ್ಣಳಿಕೆ ಗಣೇಶ ಕಟ್ಟೆ ಬಂಟ್ವಾಳ ತಾಲೂಕು – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಮುಗ್ರೋಡಿ ಬಾಕಿಮಾರು ಗದ್ದೆ – ಸರ್ಪ ಸಂಬಂಧ 

ಶ್ರೀ ದೇಂತಡ್ಕ ಮೇಳ == ಅಂಗಡಿಮೊಗೆರು ದೇಲಂಪಾಡಿ – ಶ್ರೀ ವನದುರ್ಗಾ ಮಹಾತ್ಮೆ 

ಶ್ರೀ ತಲಕಳ ಮೇಳ == ಪಡುಪದವು 9ನೇ ಬ್ಲಾಕ್ ಕಾಟಿಪಳ್ಳ – ಸರ್ಪ ಸಿರಿಮುಡಿ 

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ರುದ್ರಾಕ್ಷ ವ್ಯಾಸ ಮಹಾಯಾಗ ಸಮಿತಿ ವ್ಯಾಸ ಗುರುಕುಲ, ಮಟ್ಟಿ ಕೈಂಬ – ದಕ್ಷಯಜ್ಞ,  ಇಂದ್ರಕೀಲಕ 

ಕಟೀಲು ಮೇಳಗಳ ಪ್ರಸಂಗಗಳು – 29.04.2022

ಕಟೀಲು ಒಂದನೇ ಮೇಳ == ದೇವಕಿ ನಿವಾಸ ಮಟ್ಟಾರ ಪರಾಡಿ ಶಿರ್ವ ಮಂಚಕಲ್ ಸದಾಶಿವ ವನದುರ್ಗಾ ದೇವಸ್ಥಾನದ ಬಳಿ – ಗರುಡೋದ್ಭವ 

ಕಟೀಲು ಎರಡನೇ ಮೇಳ == ತಾಳಿಪಾಡಿಗುತ್ತು ತಾಳಿಪಾಡಿ ಕಿನ್ನಿಗೋಳಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಚಾಮುಂಡೇಶ್ವರಿ ಗುಡಿ ಹೊಯಿಗೆಬೈಲ್ ಅಶೋಕನಗರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕೃಷ್ಣಾಪುರ ಸುರತ್ಕಲ್ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ ==  ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಅಗರಗಂಡಿ ಮಣಿನಾಲ್ಕೂರು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕಡಂದಲೆ ವಯಾ ಸಚ್ಚರಿಪೇಟೆ – ಶ್ರೀ ದೇವಿ ಮಹಾತ್ಮೆ 

ಅಳಿಕೆ ಯಕ್ಷ ಸಹಾಯ ನಿಧಿಗೆ ಕಲಾವಿದ ಜಯಾನಂದ ಸಂಪಾಜೆ ಆಯ್ಕೆ

ಯಕ್ಷಗಾನ ರಂಗದ ಸರ್ವಾಂಗ ಸಾಧಕ,ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇರುನಟ ದಿ.ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2020 – 22ನೇ ಸಾಲಿನಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ.

ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಮಾಜಿ ಅಕಾಡೆಮಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಅವರನ್ನೊಳಗೊಂಡ ಸಲಹಾ ಸಮಿತಿಯ ತೀರ್ಮಾನದಂತೆ ಸಂತ್ರಸ್ತ ಕಲಾವಿದರಿಗೆ ಸಹಾಯ ನಿಧಿ ನೀಡಲಾಗುವುದೆಂದು ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಹೇಳಿದ್ದಾರೆ.

ಯಕ್ಷ ನಿಧಿಯು ರೂ. 20,000/- ನಗದು ಮತ್ತು ಗೌರವ ಫಲಕಗಗಳನ್ನೊಳಗೊಂಡಿದೆ. 

ಮೇ.3ರಂದು ನಿಧಿಪ್ರದಾನ: ಕಟೀಲು,ಕುಂಟಾರು, ಪುತ್ತೂರು, ಹೊಸನಗರ, ಎಡನೀರು, ಹನುಮಗಿರಿ, ಬಪ್ಪನಾಡು ಮುಂತಾದ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳಲ್ಲಿ 32ವರ್ಷ ತಿರುಗಾಟ ನಡೆಸಿದ ಜಯಾನಂದ ಸಂಪಾಜೆ ದೇವೇಂದ್ರ, ರಕ್ತಬೀಜ, ಇಂದ್ರಜಿತು , ಹಿರಣ್ಯಾಕ್ಷ ,ಅರುಣಾಸುರ, ಕರ್ಣ, ಅರ್ಜುನ, ಕೃಷ್ಣ, ವಿಷ್ಣು, ಈಶ್ವರ ಇತ್ಯಾದಿ ಧೀರೋದಾತ್ತ ಪಾತ್ರಗಳಿಗೆ ಹೆಸರಾಗಿದ್ದಾರೆ.

ಇತ್ತೀಚೆಗೆ ಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಪ್ರದರ್ಶನದ ನಡುವೆ ಕುಸಿದು ಕಾಲು ನೋವಿಗೆ ತುತ್ತಾದ ಅವರು ತಿರುಗಾಟ ಮುಂದುವರಿಸಲಾಗದೆ ಚಿಕಿತ್ಸೆ ಪಡೆಯುತ್ತಿದ್ದಾರೆ.             

ಇದೇ ಮೇ 3, 2022 ರಂದು ಮಂಗಳವಾರ ಸುಳ್ಯದ ಕಲ್ಲುಗುಂಡಿಯಲ್ಲಿರುವ ಜಯಾನಂದ ಸಂಪಾಜೆ ಅವರ ನಿವಾಸಕ್ಕೆ ತೆರಳಿ ಗೃಹ ಸನ್ಮಾನದೊಂದಿಗೆ ನಿಧಿ ಸಮರ್ಪಣೆ ಮಾಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆ ಶುಭಾರಂಭ – ಕಲಾವಿದರ ಸನ್ಮಾನ

‘ಹೊರನಾಡಿನಲ್ಲಿ ಯಕ್ಷಗಾನ ಕಲೆಯ ವಿವಿಧ ಆಯಾಮಗಳಲ್ಲಿ ಮೌಲಿಕ ಕೆಲಸ ಮಾಡಿದ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಮಹಾನಗರದಲ್ಲಿ ಮನೆಮಾತಾಗಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ, ಸರಣಿ ತಾಳಮದ್ದಳೆ ಕೂಟಗಳಲ್ಲದೆ ಕಲಾವಿದರ ಸನ್ಮಾನ, ಗ್ರಂಥ ಪ್ರಕಟಣೆ, ಬಡ ಕಲಾವಿದರಿಗೆ ನೆರವು, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಇತ್ಯಾದಿ ಮಾನವೀಯ ಕಾರ್ಯಗಳಿಂದ ಅದು ತುಳುನಾಡಿನ ಸಂಸ್ಕೃತಿಯನ್ನು ಮೆರೆಸಿದೆ.

ಇದೀಗ ಎರಡು ದಶಕಗಳ ಬಳಿಕ ಹುಟ್ಟೂರಿನಲ್ಲಿ ಬಳಗದ ಸ್ಥಳೀಯ ಶಾಖೆ ವಿಧ್ಯುಕ್ತವಾಗಿ ಆರಂಭವಾಗುತ್ತಿರುವುದು ಶ್ಲಾಘನೀಯ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.         

ಅಜೆಕಾರು ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗ ವತಿಯಿಂದ ಜರಗಿದ ಅಜೆಕಾರು ಶಾಖೆಯ ವಿಧ್ಯುಕ್ತ ಉದ್ಘಾಟನೆ ಮತ್ತು ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ದೀಪ ಬೆಳಗಿ ಬಳಗವನ್ನು ಉದ್ಘಾಟಿಸಿದರು.


ಕಲಾವಿದರ ಸನ್ಮಾನ – ಬಯಲಾಟ: ಸಮಾರಂಭದಲ್ಲಿ ಪಾವಂಜೆ ಮೇಳದ ಕಲಾವಿದರಾದ ಮೋಹನ ಬೆಳ್ಳಿಪ್ಪಾಡಿ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಅಮೀನ್ ಅತಿಥಿಗಳಾಗಿ ಶುಭ ಹಾರೈಸಿದರು.

ಯಕ್ಷ ನೃತ್ಯ ಶಿಬಿರ: ಸಭೆಯ ಅಧ್ಯಕ್ಷತೆ ವಹಿಸಿದ ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆಯ ಅಧ್ಯಕ್ಷ ವಿಜಯ ಶೆಟ್ಟಿ ಶುಭವಿ ಮಾತನಾಡಿ ‘ಬಳಗದ ವತಿಯಿಂದ ಮೇ 1ರಿಂದ 5ರ ವರೆಗೆ ಅಜೆಕಾರು ಶ್ರೀರಾಮ ಮಂದಿರದಲ್ಲಿ ಪ್ರಥಮ ಹಂತದ ಮಹಿಳೆಯರಿಗಾಗಿ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಆಸಕ್ತರು ಭಾಗವಹಿಸಬಹುದು’ ಎಂದು ತಿಳಿಸಿದರು                 

ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇದರ ಸಂಸ್ಥಾಪನಾ ಅಧ್ಯಕ್ಷ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕ್ಷೇತ್ರ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.