Monday, March 16, 2026
Home Blog Page 269

ಇಂದು ಆಟ ಎಲ್ಲೆಲ್ಲಿ? (16-04-2022)

ಮೇಳಗಳ ಇಂದಿನ (16.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಸಾಲಿಗ್ರಾಮ ಚಿತ್ರಪಾಡಿ – ಶ್ರೀ ದೇವಿ ಮಹಾತ್ಮೆ

ಕಟೀಲು ಒಂದನೇ ಮೇಳ == ನಿಟ್ಟೂರು ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ == ಹರೇಕಳ 

ಕಟೀಲು ಮೂರನೇ ಮೇಳ==  ಬಾಕಿಮಾರುಗುತ್ತು ಸೂರಿಂಜೆ 

ಕಟೀಲು ನಾಲ್ಕನೇ ಮೇಳ  == ಶ್ರೀದೇವಿ ಕೃಪಾ, ಕುಂಜತ್ತಬೈಲು ಕಾವೂರು 

ಕಟೀಲು ಐದನೇ ಮೇಳ ==  ಅರ್ಕುಳ ತುಪ್ಪೆಕಲ್ಲು 

ಕಟೀಲು ಆರನೇ ಮೇಳ == ಹಿಂದೂ ಯುವಸೇನೆ, ಶ್ರೀ ದುರ್ಗಾ ಶಾಖೆ ಕಂಕನಾಡಿ ವಲಯ ಪಂಪ್ ವೆಲ್ 

ಮಂದಾರ್ತಿ ಒಂದನೇ ಮೇಳ  == ಜವಳಿಜೆಡ್ಡು ಹಾರ್ದಳ್ಳಿ ಮಂಡಳ್ಳಿ ಸೌಡ 

ಮಂದಾರ್ತಿ ಎರಡನೇ ಮೇಳ   == ಕೂಡ್ಲಿ ಹಾರಾಡಿ ಬಾರ್ಕೂರು 

ಮಂದಾರ್ತಿ ಮೂರನೇ ಮೇಳ  == ಹುಂಬಾಡಿಮನೆ ಐರ್ ಬೈಲು 74ನೇ ಉಳ್ಳೂರು 

ಮಂದಾರ್ತಿ ನಾಲ್ಕನೇ ಮೇಳ   == ತೊಂಬಟ್ಟು ಮುಡಿಗದ್ದೆಮನೆ ಮಚ್ಚಟ್ಟು 

ಮಂದಾರ್ತಿ ಐದನೇ ಮೇಳ  == ಕಾವೇರಿ ಕಾಂಪ್ಲೆಕ್ಸ್ ಪೊಲೀಸ್ ಸ್ಟೇಷನ್ ಹತ್ತಿರ ಕೋಟ ಗಿಳಿಯಾರು 

ಹನುಮಗಿರಿ ಮೇಳ == ಗುಂಡ್ಮಿ ಮಾಣಿ ಶ್ರೀ ಚೆನ್ನಕೇಶವ ದೇವಸ್ಥಾನ – ತ್ರಿಪುರ ಮಥನ 

ಶ್ರೀ ಸಾಲಿಗ್ರಾಮ ಮೇಳ == ಕುಂದಾಪುರ ನೆಹರೂ ಮೈದಾನ – ಭಜರಂಗಿ 

ಶ್ರೀ ಪೆರ್ಡೂರು ಮೇಳ == ಕುಮಟಾ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಕಲ್ಮಕ್ಕಿಮನೆ ಮೇಲ್ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅಲೆವೂರುಪದವು ರಾಜೀವನಗರ ರಸ್ತೆ ಪ್ರಗತಿನಗರ ಅಲೆವೂರು ಉಡುಪಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ನಾಗಮ್ಮ ನಿಲಯ ಕಟ್ ಬೆಲ್ತೂರು 

ಶ್ರೀ ಪಾವಂಜೆ ಮೇಳ == ಶ್ರೀ ವೀರಾಂಜನೇಯ ಸ್ವಾಮಿ ಮಂದಿರ ಅಡ್ಯಾರು – ಹನುಮದ್ವಿಲಾಸ 

ಕಮಲಶಿಲೆ ಮೇಳ == ಹೆಬ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕದ್ರಿಕಟ್ಟು ಕೋಟ 

ಶ್ರೀ ಸೌಕೂರು ಮೇಳ == ಕೊಡ್ಲಾಡಿ ಕೂಡಿಗೆ ಚಿತ್ತಾರಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಚಿತ್ರಾಕ್ಷಿ, ಮೈಂದದ್ವಿವಿದ, ರುಕ್ಮಾವತಿ ಕಲ್ಯಾಣ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪಡೀಲ್ BDR ನಗರ ದರ್ಬಾರ್- ರೈಲ್ವೆ ಗೇಟ್ ಬಳಿ 

ಶ್ರೀ ಮಡಾಮಕ್ಕಿ ಮೇಳ == ನಂಚಾರು ಖಡ್ಗೇಶ್ವರಿ ಅಮ್ಮನವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಶ್ರೀ ಬಗಳಾಂಬಾ ತಾಯಿ ದೇವಸ್ಥಾನದ ಬಳಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಬಿಜೂರು ಮೂರೊಳಿಹಕ್ಲು ಶ್ರೀ ನಂದಿಕೇಶ್ವರ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಮಂಜುಶ್ರೀ ನಿಲಯ ಬಿದ್ಕಲಕಟ್ಟೆ 

ಶ್ರೀ ಸಿಗಂದೂರು ಮೇಳ == ತ್ರಾಸಿ ಕೊಳಕೇರಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಆರಗ 

ಶ್ರೀ ಮೇಗರವಳ್ಳಿ ಮೇಳ == ಉಳ್ಳೂರು – 74 – ಕಾರಣಿಕದ ಗುಳಿಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮಹಾವಿಷ್ಣು ದೇವಸ್ಥಾನ ತಟ್ಟೂರು ಆತ್ರಾಡಿ ಹಿರೇಬೆಟ್ಟು – ಚಂದ್ರಾವಳಿ, ಕಂಸವಧೆ, ಶ್ರೀನಿವಾಸ 

ಶ್ರೀ ಹಾಲಾಡಿ ಮೇಳ == ಆಜ್ರಿ ಮಾಂಜೂರುಮನೆ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಸಾಲಿಕೇರಿ – ಕುಶಲವ ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಕಾಪು, ಪಡುಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬಳಿ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೊಡ್ಮಾನ್ ಕಾಪಿಕಾಡು ಮೈದಾನ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬೋಂದೆಲ್ ಕೃಷ್ಣನಗರ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಬಲಾಯಿಪಾದೆ ಕುತ್ಪಾಡಿ ಶ್ರೀದುರ್ಗಾ ಮನೆ ವಠಾರ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಂಗಳಾದೇವಿ ಮೇಳ == ಕಂಜಿಲಗುಡ್ಡೆ ಮಲ್ಲೂರು – ಗುತ್ತುದ ಗುಳಿಗೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 15.04.2022

ಕಟೀಲು ಒಂದನೇ ಮೇಳ == ಸತ್ಯಯುಗ ಯೋಗಾಶ್ರಮ ಕುತ್ಪಾಡಿ ಉಡುಪಿ – ಶ್ರೀ ದೇವಿ ಮಹಾತ್ಮೆ

ಕಟೀಲು ಎರಡನೇ ಮೇಳ == ಮೂರುಕಟ್ಟ ಮಿತ್ರನಗರ ಕುಂಪಲ ವಯಾ ತೊಕ್ಕೊಟ್ಟು – ಶ್ರೀ ದೇವಿ ಮಹಾತ್ಮೆ

ಕಟೀಲು ಮೂರನೇ ಮೇಳ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಸಮುದ್ರ ಮಥನ

ಕಟೀಲು ನಾಲ್ಕನೇ ಮೇಳ  == ಕುಡಲಗುತ್ತು ಮನೆ ಮೇರ್ಕಳ ಪೆರ್ಮುದೆ ಇರುವಾಲೆ ಇರಾ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ

ಕಟೀಲು ಐದನೇ ಮೇಳ ==  ನಾರಂಪಾಡಿಗುತ್ತು ನೆಕ್ರಾಜೆ ಕಾಸರಗೋಡು – ಶ್ರೀ ದೇವಿ ಮಹಾತ್ಮೆ

ಕಟೀಲು ಆರನೇ ಮೇಳ == ಮುಕ್ಕಾಲ್ಚಿಮನೆ ಎಕ್ಕಾರು – ಹಿಡಿಂಬಾ ವಿವಾಹ, ಮೂರುವರೆ ರತ್ನಗಳು, ಭಕ್ತ ಮಾರ್ಕಂಡೇಯ

ಇಂದು ಆಟ ಎಲ್ಲೆಲ್ಲಿ? (15-04-2022)

ಮೇಳಗಳ ಇಂದಿನ (15.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಸ್ತಾನ ಅಣಲಾಡಿ ಮಠದ ಆವರಣ – ಶ್ರೀ ಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ == ಸತ್ಯಯುಗ ಯೋಗಾಶ್ರಮ ಕುತ್ಪಾಡಿ ಉಡುಪಿ 

ಕಟೀಲು ಎರಡನೇ ಮೇಳ == ಮೂರುಕಟ್ಟ ಮಿತ್ರನಗರ ಕುಂಪಲ ವಯಾ ತೊಕ್ಕೊಟ್ಟು 

ಕಟೀಲು ಮೂರನೇ ಮೇಳ==  ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ಕುಡಲಗುತ್ತು ಮನೆ ಮೇರ್ಕಳ ಪೆರ್ಮುದೆ ಇರುವಾಲೆ ಇರಾ ಬಂಟ್ವಾಳ 

ಕಟೀಲು ಐದನೇ ಮೇಳ ==  ನಾರಂಪಾಡಿಗುತ್ತು ನೆಕ್ರಾಜೆ ಕಾಸರಗೋಡು 

ಕಟೀಲು ಆರನೇ ಮೇಳ == ಮುಕ್ಕಾಲ್ಚಿಮನೆ ಎಕ್ಕಾರು 

ಮಂದಾರ್ತಿ ಒಂದನೇ ಮೇಳ  == ಬರಿಗದ್ದೆ ಮನೆ ಕೊಂಜಾಡಿ ಆರ್ಡಿ 

ಮಂದಾರ್ತಿ ಎರಡನೇ ಮೇಳ   == ಹೆಬ್ಬಾಗಿಲುಮನೆ ಬಿಜೂರು ಬೈಂದೂರು 

ಮಂದಾರ್ತಿ ಮೂರನೇ ಮೇಳ  == ಕಾವ್ರಾಡಿ 

ಮಂದಾರ್ತಿ ನಾಲ್ಕನೇ ಮೇಳ   == ತೆಂಕಬೈಲು ಹೊರ್ಲಾಳಿ ಕುದಿಕೊಕ್ಕರ್ಣೆ – ಕೂಡಾಟ 

ಮಂದಾರ್ತಿ ಐದನೇ ಮೇಳ  == ತೆಂಕಬೈಲು ಹೊರ್ಲಾಳಿ ಕುದಿಕೊಕ್ಕರ್ಣೆ – ಕೂಡಾಟ 

ಹನುಮಗಿರಿ ಮೇಳ == ಮಲ್ಪೆ ಕೊಳ ಶಿವಪಂಚಾಕ್ಷರಿ ಭಜನಾ ಮಂದಿರ – ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಶ್ರೀ ಸಾಲಿಗ್ರಾಮ ಮೇಳ == ಕೋಟ ವರುಣ ತೀರ್ಥ ಮುಂಭಾಗ – ಚಂದ್ರಮುಖಿ ಸೂರ್ಯಸಖಿ

ಶ್ರೀ ಪೆರ್ಡೂರು ಮೇಳ == ಹೊಸಕುಳಿಯ ಸಂತೆಗುಳಿ ಶಾಲಾ ಮೈದಾನ – ಕೃಷ್ಣ ಕೃಷ್ಣ ಶ್ರೀಕೃಷ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಬ್ರಹ್ಮಶ್ರೀ, ಶಾಲೆ ರಸ್ತೆ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬ್ರಹ್ಮಶ್ರೀ, ನಾರ್ಕಳಿ ಗುಡಿಮನೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನಾಗೂರುಮನೆ, ನಾಗೂರು 

ಶ್ರೀ ಪಾವಂಜೆ ಮೇಳ == ವಿನಯಶ್ರೀ ಕ್ರೀಡಾಂಗಣ ಕುಡ್ತಮುಗೇರು – ಶ್ರೀ ದೇವಿ ಮಹಾತ್ಮೆ 

ಕಮಲಶಿಲೆ ಮೇಳ == ಶ್ರೀ ಆಂಜನೇಯ ದೇವಸ್ಥಾನ ದಾಸರಮಕ್ಕಿ ಅಂಪಾರು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಪಟೇಲರಮನೆ ಮಣೂರು 

ಶ್ರೀ ಸೌಕೂರು ಮೇಳ == ನೆಲ್ಲಿಕಟ್ಟೆ ಬೈಲುರಸ್ತೆ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == MSEZ ಕಾಲನಿ ಕಳವಾರು – ಶ್ರೀದೇವಿ ರಕ್ತೇಶ್ವರಿ ಮಹಾತ್ಮೆ  

ಶ್ರೀ ಮಡಾಮಕ್ಕಿ ಮೇಳ == ದೇವಂಗಿ ಕಲ್ಲುಕೊಡಿಗೆ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮರವಂತೆ ನಡುಬೆಟ್ಟು ಸಾಧನ ಮಾರ್ಗ ಶ್ರೀ ಬೈಲುಸ್ವಾಮಿ ಸೇವಾ ಸಮಿತಿ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಹೆರಂಜೆ ಬಾಳೆಹಿತ್ಲು ಮನೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಅರ್ಪಲ್ ಮನೆ ಕಮಲಶಿಲೆ 

ಶ್ರೀ ಸಿಗಂದೂರು ಮೇಳ == ಜಡ್ಕಲ್ ಕಾನ್ಕಿ ಹರುಮನೆ 

ಶ್ರೀ ನೀಲಾವರ ಮೇಳ  == ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿ ತಗಡೂರು ಶಿಂದೆ – ಜೀವನ ಯಾನ, ಚಂದ್ರಾವಳಿ ವಿಲಾಸ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೊಸಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಆಂದಿನಿ – ಶ್ರೀ ದೇವಿ ಮಹಾತ್ಮೆ 

ಶ್ರೀ ಹಟ್ಟಿಯಂಗಡಿ ಮೇಳ == ಎಣ್ಣೆಹೊಳೆ ಗಣಪತಿ ಮಂದಿರದ ಬಳಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಯಕ್ಷ ದೇವಸ್ಥಾನ ಗುಡ್ಡಿಕೊಪ್ಪ ಆರಗ – ಭೀಷ್ಮ ವಿಜಯ, ಮೀನಾಕ್ಷಿ ಕಲ್ಯಾಣ

ಶ್ರೀ ಬೋಳಂಬಳ್ಳಿ ಮೇಳ== ಟ್ಯಾಕ್ಸಿ ನಿಲ್ದಾಣ ಬಿದ್ಕಲ್ ಕಟ್ಟೆ – ಬಂಡಿದೈವ ಹುಲ್ಚಂಡಿ 

ಶ್ರೀ ಬಪ್ಪನಾಡು ಮೇಳ == ಆಮಣಬೆಟ್ಟು ಕಿಲೆಂಜೂರು – ಬಾಲೆಮಾನಿ ಮಾಯಂದಾಲ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಂದಾಪುರ ಖಾರ್ವಿ ಮೇಲ್ಕೆರಿ ವೆಂಕ್ಲುಹಿತ್ಲು – ಶ್ರೀ ಭಗವತಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕೋಡಿಕಲ್ ಕಟ್ಟೆ ಮೈದಾನ – ಅಜ್ಜೆ ಕೊರಗಜ್ಜೆ 

ಶ್ರೀ ದೇಂತಡ್ಕ ಮೇಳ == ಶ್ರೀ ವನದುರ್ಗಾ ದೇವಸ್ಥಾನ ಈದುಕೇರ – ಶ್ರೀ ವನದುರ್ಗಾ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ಕಂಡೆಲಗುಡ್ಡೆ ಮಲ್ಲೂರು – ಗುತ್ತುದ ಗುಳಿಗೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 14.02.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಶ್ರೀ ತಿರುಪತಿ ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಶಿವದುರ್ಗಾ ಕಂಪೌಂಡ್ ಉಲ್ಲಂಜೆ ಮಜಿಲ – ನಳದಮಯಂತಿ 

ಕಟೀಲು ಮೂರನೇ ಮೇಳ==  ಕಾರಿಂಜಕ್ರಾಸ್ ವಗ್ಗ ಬಂಟ್ವಾಳ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ತಾರಿಯಡ್ಕ ಕೊಡುಂಗಾಯಿ ವಿಟ್ಲ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ ==  ಸಾಯಿನಾಥ ನಿವಾಸ ಕೆಳಗಿನ ಬೇಳಿಂಜೆ ಏತಡ್ಕ ಕುಂಭ್ಡಾಜೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ ==ಶ್ರೀನಿಧಿ ಮುಂಡ್ಕೂರು ದೊಡ್ಡಮನೆ ಮುಂಡ್ಕೂರು – ಶ್ರೀ ಶನೈಶ್ಚರ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (13-04-2022)

ಮೇಳಗಳ ಇಂದಿನ (13.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನೀಲಾವರ ಮಧ್ಯಸ್ಥರಬೆಟ್ಟು – ವೀರಮಣಿ ಕಾಳಗ, ವಿರೋಚನ ಕಾಳಗ 

ಕಟೀಲು ಒಂದನೇ ಮೇಳ == ಮುಂಡ್ಕೂರು ದೇವಸ್ಥಾನದ ವಠಾರ 

ಕಟೀಲು ಎರಡನೇ ಮೇಳ == ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರ 

ಕಟೀಲು ಮೂರನೇ ಮೇಳ==  ಸವಣಾಲು ಶ್ರೀ ದುರ್ಗಾಕಾಳಿಕಾಂಬಾ ದೇವಸ್ಥಾನ ಕಾಳಿಬೆಟ್ಟದಲ್ಲಿ 

ಕಟೀಲು ನಾಲ್ಕನೇ ಮೇಳ  == ಶ್ರೀ ಕದ್ರಿ ಕ್ಷೇತ್ರದ ರಾಜಾಂಗಣದಲ್ಲಿ 

ಕಟೀಲು ಐದನೇ ಮೇಳ ==  ದೇವಧಾಮ, ತಿರುವೈಲು ವಾಮಂಜೂರು 

ಕಟೀಲು ಆರನೇ ಮೇಳ == ಅಂಬರಗುಳಿ ಮನೆ ವಯಾ ಚೇಳಾರು 

ಮಂದಾರ್ತಿ ಒಂದನೇ ಮೇಳ  == ಕನಕನಿಲಯ ಕುಂಬಾರಮಕ್ಕಿ ಕುಳ್ಳುಂಜೆ ಶಂಕರನಾರಾಯಣ 

ಮಂದಾರ್ತಿ ಎರಡನೇ ಮೇಳ   == ಚೋತಾಡಿ ಕಾವಲುಕಟ್ಟೆ ಮನೆ ಹಟ್ಟಿಯಂಗಡಿ 

ಮಂದಾರ್ತಿ ಮೂರನೇ ಮೇಳ  == ಮಾತೃಕೃಪಾ ನಾವುಂದ ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ವಿಘ್ನೇಶ್ವರ ನಿಲಯ ಹೂವಿನಕೆರೆ ಅಸೋಡು 

ಮಂದಾರ್ತಿ ಐದನೇ ಮೇಳ  == ಗಣೇಶ ಪ್ರಸಾದ ಬಂಗ್ರಬೈಲು ಪೆರ್ಡೂರು 

ಹನುಮಗಿರಿ ಮೇಳ == ತೋಡಿಕಾನ (ಸುಳ್ಯ) ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರ – ಕೃಷ್ಣಾರ್ಜುನ, ಶ್ರೀನಿವಾಸ 

ಶ್ರೀ ಸಾಲಿಗ್ರಾಮ ಮೇಳ == ಸೂರ್ಯ ದೇವಸ್ಥಾನ (ಕೊಪ್ಪ) ಶಾಲಾ ಆಟದ ಮೈದಾನದಲ್ಲಿ – ಚಂದ್ರಮುಖಿ ಸೂರ್ಯಸಖಿ

ಶ್ರೀ ಪೆರ್ಡೂರು ಮೇಳ == ಕುಂದಾಪುರ ಗಾಂಧಿ ಮೈದಾನದಲ್ಲಿ – ವಿಜಯ ವಿಸ್ಮಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹೊಸಿಮನೆ ಕಾವ್ರಾಡಿ ನೆಲ್ಲಿಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಶ್ರೀ ರಾಜರಾಜೇಶ್ವರಿ ಕ್ಷೇತ್ರ ಇಚ್ಲಂಪಾಡಿ ದರ್ಬಾರಕಟ್ಟೆ ಮುಂಡಪ್ಪಳ್ಳ ವಯಾ ಕುಂಬಳೆ – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ == ಹಳ್ಳಿಹೊಳೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಹಾಡಿಕೆರೆ ಕೋಟ 

ಶ್ರೀ ಸೌಕೂರು ಮೇಳ == ಮೂಡುಗೋಪಾಡಿ ಕಾಸನಕಟ್ಟೆ ಬೊಬ್ಬರ್ಯ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ದೇವಂಗಿ ಉಂಟೂರು ಶ್ರೀ ಆದಿಶಕ್ತಿ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ, ಮೀನಾಕ್ಷಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಾಬುಕಳ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಪರ್ಕಳ ಬಿ.ಎಂ ಶಾಲಾ ಬಳಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಆಜ್ರಿ ನೇರಳಕಟ್ಟೆ ಹಿಲ್ಕೋಡು 

ಶ್ರೀ ಸಿಗಂದೂರು ಮೇಳ == ಹಾಲ್ಕಲ್ ನಡಬ್ಬಿ 

ಶ್ರೀ ನೀಲಾವರ ಮೇಳ  == ಕೋಡಿ ಹಾಯಿಗುಳಿ ದೈವಸ್ಥಾನದ ವಠಾರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹಿರೇಹಳ್ಳ 

ಶ್ರೀ ಮೇಗರವಳ್ಳಿ ಮೇಳ == ಚಕ್ಕೋಡಬೈಲ್ ಕನಿಲಗೋಡು ಶ್ರೀ ಹರಿಹರೇಶ್ವರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಕೆಳ ಊರು, ಕೆಳ ಶಾಲಾ ಮೈದಾನ – ಶೂರ್ಪನಖಿ, ಕುಶಲವ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬೈಕಂಪಾಡಿ ಶ್ರೀ ರಾಮಾಂಜನೇಯ ಮಂದಿರದ ಬಳಿ – ಶ್ರೀ ಭಗವತೀ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಸಂಗಬೆಟ್ಟು ಕೇಂದ್ರ ಮೈದಾನ – ಅಜ್ಜೆ ಕೊರಗಜ್ಜೆ 

ಶ್ರೀ ಮಂಗಳಾದೇವಿ ಮೇಳ == ಶ್ರೀ ದುರ್ಗಾ ಚಾಮುಂಡೇಶ್ವರಿ ಕ್ಷೇತ್ರ ತೋಡ್ಲಮಜಲು ಕುಂಜತ್ತಬೈಲ್ ಕಾವೂರು – ನಾಗರ ಪಂಚಮಿ 

ಅಂಬಲಪಾಡಿಯಲ್ಲಿ ಯಕ್ಷಗಾನ ಶಿಬಿರ ಉದ್ಘಾಟನೆ

ಏಪ್ರಿಲ್ 12 ರಿಂದ 10 ದಿನಗಳ ಪರ್ಯಂತ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ ಇದು ಹಮ್ಮಿಕೊಂಡ ಯಕ್ಷಗಾನ ತರಬೇತಿ ಶಿಬಿರವನ್ನು ಖ್ಯಾತ ಉದ್ಯಮಿ, ದಾನಿ ಯು. ವಿಶ್ವನಾಥ ಶೆಣೈಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಪ್ರತೀ ದಿನ ಪೂರ್ವಾಹ್ನ 9.00 ರಿಂದ 11.30ರ ತನಕ ಜರಗುವ ಈ ಶಿಬಿರದ ಗುರುಗಳಾಗಿ ಶ್ರೀ ನರಸಿಂಹ ತುಂಗ ಇವರು ಕಾರ್ಯನಿರ್ವಹಿಸಲಿರುವರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಮ್. ಹೆಗಡೆ, ಕೆ. ಜೆ. ಕೃಷ್ಣ, ಪ್ರವೀಣ ಉಪಾಧ್ಯ ಮತ್ತು ಪ್ರಕಾಶ ಹೆಬ್ಬಾರ್ ಉಪಸ್ಥಿತರಿದ್ದರು. ಮಂಡಳಿಯ ಕೋಶಾಧಿಕಾರಿ ಎ. ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಸಾಧು ಸಜ್ಜನಿಕೆಯ ಮೇರು ಪ್ರತಿಭೆ ಬಲಿಪ ಪ್ರಸಾದ ಭಾಗವತರು: ಒಂದು ನುಡಿನಮನ

ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿ ಬಲಿಪ ಪ್ರಸಾದ ಭಟ್ಟರು ವ್ಯಕ್ತಿಯಾಗಿ ಮತ್ತು ಕಲಾವಿದರಾಗಿ ಅಪ್ಪಟ ಅಪರಂಜಿ. ಅವರದು ಸಾಧು – ಸಜ್ಜನಿಕೆಯ ಮೇರು ವ್ಯಕ್ತಿತ್ವ. ನಿನ್ನೆ (ಎ.11) ರಾತ್ರಿ ಹತ್ತರ ಹೊತ್ತು ಬೊಂಡಾಲ ಸಚ್ಚಿದಾನಂದ ಶೆಟ್ಟರೊಂದಿಗೆ ನೂಯಿಯ ಬಲಿಪ ಭವನದಲ್ಲಿ ಅವರ ಅಂತಿಮ ದರ್ಶನ ಮಾಡಿದಾಗ ಕರುಳು ಹಿಂಡಿ ಬಂತು. ಇನ್ನೂ ನಲವತ್ತಾರರ ಕಿರು ಹರೆಯದಲ್ಲಿ ಅನಾರೋಗ್ಯದಿಂದ ಹೈರಾಣಾಗಿದ್ದ ಆ ಪುಟ್ಟ ದೇಹ ಉಸಿರು ನಿಂತು ಮಲಗಿತ್ತು. ಬಂಧುಗಳು, ಅಭಿಮಾನಿಗಳೆಲ್ಲ ಮೌನ ದು:ಖಿಗಳಾಗಿ ಅಲ್ಲಲ್ಲಿ ನಿಂತಿದ್ದರು. ಪ್ರಸಾದ ಭಾಗವತರ ಪಾರ್ಥಿವ ಶರೀರಕ್ಕೆ ನಮಿಸಿ ಭಾರವಾದ ಮನಸ್ಸಿನಿಂದ ಹಿಂದಕ್ಕೆ ಬರಬೇಕಾಯ್ತು.

ಅದೆಷ್ಟು ವರ್ಷದಿಂದ ಈ ಅಪ್ಪ – ಮಗನ ಭಾಗವತಿಕೆಯ ಆಟ – ಕೂಟಗಳಲ್ಲಿ ಸ್ವತ: ಪಾತ್ರವಹಿಸಿ ಸಂಭ್ರಮಿಸಿದ್ದೆವೋ ತಿಳಿಯದು. ಆ ಪರಂಪರೆಯೇ ನಿಲುಗಡೆಗೆ ಬಂತಲ್ಲ ಎಂದು ವೇದನೆಯಾಗುತ್ತದೆ. 

ಸಜ್ಜನಿಕೆಯ ಸಾಕಾರ ಪ್ರಸಾದ ಬಲಿಪರು: ಮೂಡಬಿದಿರೆ ಸಮೀಪ ಮಾರೂರಿನ ನೂಯಿ ಮನೆಯಲ್ಲಿ ಯಕ್ಷರಂಗದ ಹಿರಿಯ ಸಾಧಕ ಬಲಿಪ ನಾರಾಯಣ ಭಾಗವತ ಮತ್ತು ವಿಜಯಲಕ್ಷ್ಮಿ ದಂಪತಿಗೆ 1976 ಏಪ್ರಿಲ್ 14 ರಂದು ಜನಿಸಿದ ಬಲಿಪ ಪ್ರಸಾದ ಭಟ್ ಅವರಿಗೆ ಭಾಗವತಿಕೆಯಲ್ಲಿ ತಂದೆಯೇ ಗುರು. ತಮ್ಮ 17ನೇ ವರ್ಷ ಪ್ರಾಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿದ (1994 ) ಅವರು ಕಳೆದ ಮೂರು ದಶಕಗಳಿಂದ ಭಾಗವತರಾಗಿ ಪ್ರತಿಷ್ಠಿತ ಬಲಿಪ ಪರಂಪರೆಯ ಸಾಂಪ್ರದಾಯಿಕ ಶೈಲಿಗೆ ಸಾಕ್ಷಿಯಾದರು.         

ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಅಪಾರ ಸಿದ್ಧಿ ಪಡೆದ ಪ್ರಸಾದ ಬಲಿಪರು ಕಟೀಲು ಮೇಳವಲ್ಲದೆ ದೇಶ-ವಿದೇಶಗಳ ಹಲವಾರು ಯಕ್ಷಗಾನ ಪ್ರದರ್ಶನಗಳಲ್ಲಿ ತಮ್ಮ ವಿಶಿಷ್ಟ ಸ್ವರ ಗಾಂಭೀರ್ಯದಿಂದ ಜನಮನ ಗೆದ್ದಿದ್ದಾರೆ. ಅಜಾತಶತ್ರುವಾಗಿ ತಮ್ಮ ನಯ-ವಿನಯಗಳಿಂದ ಎಲ್ಲರ ಪ್ರೀತಿಪಾತ್ರರಾದ ಅವರು ಕಲಾಭಿಮಾನಿಗಳಿಂದ ಹಲವು ಮಾನ-ಸಮ್ಮಾನಗಳನ್ನು ಪಡೆದಿದ್ದಾರೆ.

ಕದ್ರಿ ಶ್ರೀ, ಯಕ್ಷ ಕೀರ್ತಿ, ಯಕ್ಷ ಸಿರಿ, ಯಕ್ಷ ತರಂಗಿಣಿ ಸೇರಿದಂತೆ ವಿವಿಧ ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿರುವ ಅವರು ಪತ್ನಿ ದುರ್ಗಾದೇವಿ, ಮಕ್ಕಳಾದ ಅಪರ್ಣ ಹಾಗೂ ಅವನಿ ಅವರನ್ನೊಳಗೊಂಡ ಚೊಕ್ಕ ಸಂಸಾರ ಹೊಂದಿದ್ದರು. ಇನ್ನೂ ವರ್ಷ ತುಂಬದ ಮೂರನೆಯ ಹೆಣ್ಣು ಮಗುವೊಂದು ಹುಟ್ಟಿನಲ್ಲೇ ತಬ್ಬಲಿಯಾದುದು ಎಂತಹ ವಿಪರ್ಯಾಸ. ಎಪ್ರಿಲ್ 11, 2022 ಸೋಮವಾರ ಸಂಜೆ ಕಲಾವಿದರಿಗೆ ರತ್ನ ಪ್ರಾಯರಾಗಿದ್ದ ಪ್ರಸಾದರು ಇಹಲೋಕದ ಯಾತ್ರೆ ಮುಗಿಸಿ ಬಿಟ್ಟರು.


ಕೊನೆಯ ಸಮ್ಮಾನ:   ಫೆಬ್ರವರಿ 18, 2022 ರಂದು ಬೊಂಡಾಲ ಸಚ್ಚಿದಾನಂದ ಶೆಟ್ಟರು ನೀಡಿದ ‘ಬೊಂಡಾಲ ಪ್ರಶಸ್ತಿ’ ಯು ಪ್ರಾಯಶಃ ಪ್ರಸಾದ ಬಲಿಪರಿಗೆ ಸಂದ ಕೊನೆಯ ಸನ್ಮಾನವಿರಬೇಕು. ಕಟೀಲಿನ ಅನಂತ ಆಸ್ರಣ್ಣರು, ಮಾಜಿ ಸಚಿವ ರಮಾನಾಥ ರೈ , ವಿದ್ವಾಂಸ ಪ್ರಭಾಕರ ಜೋಶಿಯವರೊಂದಿಗೆ ನಾನೂ ಇದ್ದು, ಜೀವಂತ ಪ್ರಸಾದರೊಂದಿಗೆ ಮಾತನಾಡಿದ್ದು ಅಂದೇ ಕೊನೆಯದ್ದೆಂದು ಊಹಿಸಿಯೇ ಇರಲಿಲ್ಲ.      

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಲ್ಲಿ ನಾನು ಮತ್ತು ಎಂ.ಎಲ್.ಸಾಮಗರು ಸದಸ್ಯರಾಗಿದ್ದಾಗ ಬಲಿಪರಿಗೆ ಅಕಾಡೆಮಿ ಪ್ರಶಸ್ತಿ ಬಂದಿತ್ತು ,(2003). ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಇದೇ ಪ್ರಸಾದರಿಗೆ ವಹಿಸಿದ್ದೆ.

ಕಾರವಾರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ತಾಳಮದ್ದಳೆಯೂ ಇತ್ತು. ಬಲಿಪದ್ವಯರ ಹಿಮ್ಮೇಳದಲ್ಲಿ ನನ್ನ – ಸಾಮಗರ ಸುಧನ್ವಾರ್ಜುನ ಅರ್ಥಗಾರಿಕೆ. ಆ ಎರಡು ದಿನ ಅವರ ಸೌಜನ್ಯ ಹಾಗೂ ಕಲಾನೈಪುಣ್ಯಕ್ಕೆ ಅಕಾಡೆಮಿ ಸದಸ್ಯರೆಲ್ಲಾ ಸೋತು ಹೋಗಿದ್ದರು. ಹೇಳುತ್ತಾ ಹೋದರೆ ಇಂತಹ ಪ್ರಕರಣಗಳು ಹಲವು.       

ಪ್ರಸಾದರ ನಿಷ್ಕಪಟ ಚೇತನಕ್ಕೆ ಭಗವಂತ ಸಾಯುಜ್ಯ ನೀಡಲಿ ಎಂದು ಯಕ್ಷಾಂಗಣ ಮಂಗಳೂರು, ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ನಮ್ಮ ಪ್ರಾರ್ಥನೆ.       

ಭಾಸ್ಕರ ರೈ ಕುಕ್ಕುವಳ್ಳಿ

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 12.04.2022

ಕಟೀಲು ಒಂದನೇ ಮೇಳ == ಭಂಡಸಾಲೆ ಪೆರಾಡಿ – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಕಾಯಕಲ್ಪ 

ಕಟೀಲು ಮೂರನೇ ಮೇಳ==  ಮಾರಂಗಾಯಿ ಮನೆ, ಚಾರ್ಮಾಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕುಡುಂಬಿ ಮಲ್ಲಿಕಾರ್ಜುನ ಕುಟುಂಬ ದೇವರು ಸಮಿತಿ ಪೆರ್ಮುದೆ ಬಜಪೆ – ಶ್ರೀ ದೇವಿ ಮಹಾತ್ಮೆ

 

ಕಟೀಲು ಐದನೇ ಮೇಳ ==  ಹೊಸಮಣ್ಣುಮನೆ ಕೂರಿಯಾಳ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ನಳ ದಮಯಂತಿ 

ಕೂಡ್ಲು ರಾಮ ಧಾಮದಲ್ಲಿ ಶ್ರೀ ರಾಮನವಮಿ ಉತ್ಸವ – ಯಕ್ಷಗಾನ ತಾಳಮದ್ದಳೆ

 ‘ಭಾರತೀಯ ಪುರಾಣಗಳಲ್ಲಿ ಬರುವ ಉದಾತ್ತ ಪಾತ್ರಗಳು ನಮ್ಮ ಬದುಕಿಗೆ ದಾರಿದೀಪವೆನಿಸಿವೆ. ರಾಮಾಯಣ ಮಹಾಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿ ಚಿತ್ರಿಸಿದ ಶ್ರೀ ರಾಮಚಂದ್ರ ಹಲವು ಆದರ್ಶಗಳನ್ನು ಬಿಟ್ಟು ಹೋಗಿದ್ದಾನೆ. ಅವನು ಎಷ್ಟು ಪ್ರಮಾಣದಲ್ಲಿ ಧರ್ಮಜ್ಞನೋ, ಅಷ್ಟೇ ಕೃತಜ್ಞನೂ ಆಗಿದ್ದಾನೆ’ ಎಂದು ಕೋಟೆಕಾರು ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಹೇಳಿದ್ದಾರೆ.         

ಹರಿದಾಸ ದೇವಕೀ ತನಯ ಕೂಡ್ಲು ಅವರು ಗುಡ್ಡೆ ದೇವಸ್ಥಾನ ಬಳಿಯ ರಾಮ ಧಾಮ ನಿವಾಸದಲ್ಲಿ ಶ್ರೀ ರಾಮನವಮಿ ಉತ್ಸವ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. 

‘ರಾವಣ ವಧೆಯ ಬಳಿಕ ಅಯೋಧ್ಯೆಗೆ ಮರಳಿದ ಶ್ರೀರಾಮ ವಾನರರು ಹಾಗೂ ವಾನರ ಸ್ತ್ರೀಯರನ್ನು ಬಹುವಿಧವಾಗಿ ಸತ್ಕರಿಸಿದುದು ಅವನ ಉಪಕಾರ ಸ್ಮರಣೆಗೆ ಸಾಕ್ಷಿಯಾಗಿದೆ’ ಎಂದವರು ತಿಳಿಸಿದರು.             

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ಮಲಾರು ಜಯರಾಮ ರೈ ಅವರು ತಾವು ರಚಿಸಿದ ‘ರಸದಿಂಜಿ ರಾಮಾಯಣ’ ತುಳು ಕೃತಿಯಲ್ಲಿ ಉಲ್ಲೇಖಿತವಾದ ಶ್ರೀರಾಮನ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು. 

ಸಮ್ಮಾನ: ಈ ಸಂದರ್ಭದಲ್ಲಿ ಹರಿಕಥಾ ಪರಿಷತ್ತಿನ ಅಧ್ಯಕ್ಷರಾಗಿ, ಯಕ್ಷಗಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ದೇವಕೀ ತನಯರನ್ನು ಊರವರ ಪರವಾಗಿ ಸನ್ಮಾನಿಸಲಾಯ್ತು. ಹಿರಿಯ ಮೃದಂಗ ವಿದ್ವಾನ್ ಕೆ.ಬಾಬು ರೈ ಮತ್ತು ಯಕ್ಷಗಾನ ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿದ್ದರು.                

ನ್ಯಾಯವಾದಿ ಹರಿದಾಸ್ ಮಹಾಬಲ ಶೆಟ್ಟಿ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶೇಣಿ ಚ್ಯಾರಿಟೇಬಲ್ ಟ್ರಸ್ಟ್ ನ ಪಿ.ವಿ.ರಾವ್ ಪೇಜಾವರ ವಂದಿಸಿದರು.

ಹರಿಕಥೆ – ತಾಳಮದ್ದಳೆ: ಕಾರ್ಯಕ್ರಮದ ಅಂಗವಾಗಿ ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅವರಿಂದ ‘ಪಾದುಕಾ ಪ್ರದಾನ’ ಹರಿಕಥೆ ಜರಗಿತು. ಬಳಿಕ ಪ್ರಸಿದ್ಧ ಕಲಾವಿದರಿಂದ ‘ಪಂಚವಟಿ –  ಶ್ರೀರಾಮ ಶಾಸನ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ದೇವಕೀ ತನಯ ಕೂಡ್ಲು, ಪಿ.ವಿ.ರಾವ್, ಉಮೇಶ್ ಆಚಾರ್ಯ ಗೇರುಕಟ್ಟೆ ಅರ್ಥದಾರಿಗಳಾಗಿ ಭಾಗವಹಿಸಿದರು. ರಾಜಾರಾಮ ಹೊಳ್ಳ ಕೈರಂಗಳ, ರಾಜೇಶ್ ಕುತ್ಪಾಡಿ ಮತ್ತು ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.

ಇಂದು ಆಟ ಎಲ್ಲೆಲ್ಲಿ? (12-04-2022)

ಮೇಳಗಳ ಇಂದಿನ (12.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಧುವನ ಮಾನಂಬಳ್ಳಿ ಹಾಡಿಮನೆ ವಠಾರ – ಚಕ್ರವ್ಯೂಹ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ == ಭಂಡಸಾಲೆ ಪೆರಾಡಿ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ==  ಮಾರಂಗಾಯಿ ಮನೆ, ಚಾರ್ಮಾಡಿ 

ಕಟೀಲು ನಾಲ್ಕನೇ ಮೇಳ  == ಕುಡುಂಬಿ ಮಲ್ಲಿಕಾರ್ಜುನ ಕುಟುಂಬ ದೇವರು ಸಮಿತಿ ಪೆರ್ಮುದೆ ಬಜಪೆ 

ಕಟೀಲು ಐದನೇ ಮೇಳ ==  ಹೊಸಮಣ್ಣುಮನೆ ಕೂರಿಯಾಳ ಬಂಟ್ವಾಳ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಮಂದಾರ್ತಿ ಒಂದನೇ ಮೇಳ  == ಶ್ರೀ ದುರ್ಗಾಗಣೇಶ ಜನ್ಸಾಲೆ ಸಿದ್ಧಾಪುರ 

ಮಂದಾರ್ತಿ ಎರಡನೇ ಮೇಳ   == ವಾಸನಮನೆ ಶಾಲೆ ಹತ್ತಿರ ಉಪ್ಪಿನಕುದ್ರು – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಮುದ್ದುಮನೆ ದೇವಸ್ಥಾನದಲ್ಲಿ 

ಮಂದಾರ್ತಿ ಐದನೇ ಮೇಳ  == ಕಲ್ಕುಂಜೆಬೈಲು ಕಳ್ತೂರು ಸಂತೆಕಟ್ಟೆ 

ಹನುಮಗಿರಿ ಮೇಳ == ಹಂಚಿಕಟ್ಟೆ ಮಹಮ್ಮಾಯಿ ದೇವಸ್ಥಾನದ ವಠಾರ ( ಎಣ್ಣೆಹೊಳೆ) – ಸತ್ಯಾಂತರಂಗ 

ಶ್ರೀ ಸಾಲಿಗ್ರಾಮ ಮೇಳ == ಮುತ್ತಿನಕೊಪ್ಪ ಬುರ್ಜು ಶ್ರೀ ಬಸವೇಶ್ವರ ಜಾತ್ರೆ – ಚಂದ್ರಮುಖಿ ಸೂರ್ಯಸಖಿ

ಶ್ರೀ ಪೆರ್ಡೂರು ಮೇಳ == ಶ್ರೀ ಸಿದ್ಧಿವಿನಾಯಕ ಶ್ರೀ ಮಹಾಲಿಂಗೇಶ್ವರ ಸನ್ನಿಧಿ ಮಕ್ಕಿ ದೇವಸ್ಥಾನ ವಠಾರ ಉಪ್ಪುಂದ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸಾಲಾಡಿ ಹುಬ್ಬಳಬೆಟ್ಟು ಬಂಟ್ವಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ವಾಸನಮನೆ ಶಾಲೆ ಹತ್ತಿರ ಉಪ್ಪಿನಕುದ್ರು – ಮಂದಾರ್ತಿ ಮೇಳದೊಂದಿಗೆ ಕೂಡಾಟ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಆಕಳಬೈಲು ಹೊಸ್ಮನೆ ಕಿರಿಮಂಜೇಶ್ವರ 

ಶ್ರೀ ಪಾವಂಜೆ ಮೇಳ == ಗರೋಡಿ ಮೈದಾನದಲ್ಲಿ (ತೌಡುಗೋಳಿ) – ಧರ್ಮಸಿಂಹಾಸನ 

ಕಮಲಶಿಲೆ ಮೇಳ == ಜಡ್ಡಿನಮುಲ್ಲಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಬೊಬ್ಬರ್ಯ ದೈವಸ್ಥಾನ ಅಡಾರುಮನೆ ಅಚ್ಲಾಡಿ 

ಶ್ರೀ ಸೌಕೂರು ಮೇಳ == ಪಾಂಡೇಶ್ವರ ಕಾಳಿಂಗರಾವ್ ರಸ್ತೆ – ಧರ್ಮದೈವ ನಂದಿಕೇಶ್ವರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  ==  ಪಿಲಾರು ಶ್ರೀ ಮಹಾಲಕ್ಷ್ಮಿ ಮಂದಿರ ಅಂಬಿಕಾರೋಡು – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ತೀರ್ಥಹಳ್ಳಿ ಹೊದ್ಲ ನಾಗರಕಟ್ಟೆ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುದ್ರುಕೋಡ್ ಶ್ರೀ ಶಾಸ್ತರೇಶ್ವರ ಶ್ರೀ ರಾಮಚಂದ್ರ ದೇವಸ್ಥಾನ – ಲವಕುಶ ರೇಣುಕಾಂಬ

ಶ್ರೀ ಶನೀಶ್ವರ ಮೇಳ == ಸಳ್ಳೆಕೋಡು ಕೊಡ್ಲಾಡಿ 

ಶ್ರೀ ಸಿಗಂದೂರು ಮೇಳ == ಗೋಳಿಹೊಳೆ ಕೋಣೆಮನೆ 

ಶ್ರೀ ನೀಲಾವರ ಮೇಳ  == ಶ್ರೀ ಚತುಷ್ಪಾದ ಹಾಯಿಗುಳಿ ಕ್ಷೇತ್ರ ನಂದಿಬೆಟ್ಟು ಬಿ.ಎಚ್.ಎಂ ರಸ್ತೆ ವಡೇರಹೋಬಳಿ ಕುಂದಾಪುರ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಬೆಜ್ಲವಳ್ಳಿ ಈಚಲ್ ಕೊಪ್ಪ 

ಶ್ರೀ ಮೇಗರವಳ್ಳಿ ಮೇಳ == ಆವಿನಳ್ಳಿ ಚಿಕ್ ಮುತ್ತೂರು ಶ್ರೀ ಮಾರಿಕಾಂಬಾ ದೇವಸ್ಥಾನ – ಅಭಿಮನ್ಯು, ನಾಗಶ್ರೀ 

ಶ್ರೀ ಹಟ್ಟಿಯಂಗಡಿ ಮೇಳ == ಆರ್ಲಪದವು – ಕೃಷ್ಣ ಲೀಲೆ, ಕಂಸವಧೆ 

ಶ್ರೀ ಹಾಲಾಡಿ ಮೇಳ == ಶ್ರೀ ರಾಮಲಕ್ಷ್ಮಣ ಸಭಾಭವನ ಕನ್ಯಾನ ಕಟ್ ಬೆಳ್ತೂರು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಹೆಸ್ಕುಂದ ಪಡುಬೆಟ್ಟು – ಮಾರುತಿ, ಮೀನಾಕ್ಷಿ 

ಶ್ರೀ ಬಪ್ಪನಾಡು ಮೇಳ == ಆಶ್ರಯ ಕಾಲನಿ ಕುಂಪಲ – ಭಕ್ತಿದ ಬಲಿಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಜಪೆ ಕೇಂದ್ರ ಮೈದಾನ – ಮುಗುರು ಮಲ್ಲಿಗೆ 

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಶ್ರೀ ಕ್ಷೇತ್ರ ಉಳ್ಳಾಲ – ಶ್ರೀ ಕೃಷ್ಣ ವಿಜಯ