ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಭಾಗವತರಾಗಿ, ಅನುಭವಿ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟು ಯಕ್ಷಗಾನದ ಗುರುಕುಲವೆಂದು ಮನ್ನಣೆ ಪಡೆದ ಕುರಿಯ ಮನೆತನದವರಾದ ಗಣಪತಿ ಶಾಸ್ತ್ರಿಗಳು, ತಮ್ಮ ದೊಡ್ಡತಂದೆಯವರಾದ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ ಪ್ರಸಿದ್ಧ ವೇಷಧಾರಿಯಾಗಿದ್ದವರು. ಅಗರಿ ಶ್ರೀನಿವಾಸ ಭಾಗವತರ ಪ್ರೇರಣೆಯೊಂದಿಗೆ ಭಾಗವತಿಕೆ ಕ್ಷೇತ್ರವನ್ನು ಪ್ರವೇಶಿಸಿದರು.
ಕಟೀಲು ಮೇಳದಲ್ಲಿ ಪ್ರದಾನ ಭಾಗವತರಾಗಿ ಮೂರು ದಶಕಗಳ ವ್ಯವಸಾಯದ ಅವಧಿಯಲ್ಲಿ ನೆಡ್ಲೆ ನರಸಿಂಹ ಭಟ್, ಮರವಂತೆ ನರಸಿಂಹದಾಸ, ಪಡ್ರೆ ಚಂದ್ರು, ಕೇದಗಡಿ ಗುಡ್ಡಪ್ಪ ಗೌಡ, ಮುದುಕುಂಜ ವಾಸುದೇವ ಪ್ರಭು, ಕುಡಾಣ ಗೋಪಾಲ ಭಟ್, ಕೋಡಿ ಕುಷ್ಠ ಗಾಣಿಗ, ಪುಂಡರಿಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮುಂತಾದ ಹಿರಿಯ ಕಲಾವಿದರೊಂದಿಗೆ ಒಡನಾಟದ ಅನುಭವವನ್ನು ಹೊಂದಿದ್ದಾರೆ.
ಮೇ 11, 2022 ಬುಧವಾರ ಪೂರ್ವಾಹ್ನ 11.00 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000 ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಆಶ್ರಯದಲ್ಲಿ 18 ದಿನಗಳಿಂದ ಜರಗಿದ ಯಕ್ಷಗಾನ ಶಿಬಿರದ ಸಮಾರೋಪ ಮೇ 1ರಂದು ಶ್ರೀ ಜನಾರ್ದನ ಮಂಟಪದಲ್ಲಿ ಎಲ್.ಐ.ಸಿ.ಅಧಿಕಾರಿಗಳಾದ ಎಸ್.ಕೆ.ಆನಂದ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಅಭ್ಯಾಗತರಾಗಿ ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ,ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್,ಉದ್ಯಮಿ ವಿಶ್ವನಾಥ ಶೆಣೈ,ನಾರಾಯಣ ಎಮ್.ಹೆಗಡೆ ಭಾಗವಹಿದರು.
ಮಂಡಳಿಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿದರು.ನಟರಾಜ ಉಪಾಧ್ಯಾಯ ನಿರ್ವಹಿದ ಕಾರ್ಯಕ್ರಮದಲ್ಲಿ ಮುರಲಿ ಕಡೆಕಾರ್ ಪ್ರಸ್ತಾವನೆಗೈದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಸಭಾಭವನದಲ್ಲಿ ಜರಗಿದ ಶ್ರೀ ಅನುಗ್ರಹ ಪಾರೆಂಕಿ ಪ್ರಾಯೋಜಕತ್ವದ ಕಲಾವಿದರ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ವಹಿಸಿದರು.
ಕುಂಬ್ಳೆ ಶ್ರೀಧರ ರಾವ್, ಪಾತಾಳ ಅಂಬಾಪ್ರಸಾದ್, ಜಿನೇಂದ್ರ ಜೈನ್, ಮಹಾಲಿಂಗೇಶ್ವರ ಭಟ್, ಹರೀಶ್ ಆಚಾರ್ಯ, ಶ್ರೀಪತಿ ಭಟ್ ಮತ್ತು ಗಂಗಾಧರ ಟೈಲರ್ ಇವರನ್ನು ಸನ್ಮಾನಿಸಲಾಯಿತು.
ಬಿ.ಸುಬ್ರಮಣ್ಯ ರಾವ್, ಪ್ರಭಾಕರ ಆಳ್ವ, ಪದ್ಮನಾಭ ಕುಲಾಲ್, ಗುರುಮೂರ್ತಿ ಅಮ್ಮಣ್ಣಾಯ ತಿಲಕಾಕ್ಷ, ವಿಜಯಕುಮಾರ್ ಕೊಯ್ಯೂರು, ಶಿವರಾಂ, ಕಿಶೋರ್, ದೇವಿಪ್ರಸಾದ್, ಕಾರ್ತಿಕ್ ಬಳ್ಳಮಂಜ ಇವರನ್ನು ಕಲಾ ಸೇವೆಗಾಗಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕುಂಬ್ಳೆ ಶ್ರೀಧರ ರಾವ್ ಉದ್ಘಾಟಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಉಮೇಶ ಶೆಣೈ ಎನ್, ಗೋಪಾಲ್ ಶೆಟ್ಟಿ ಕಳೆಂಜ, ಗುಡ್ಡಪ್ಪ ಬಲ್ಯ ಉಪಸ್ಥಿತರಿದ್ದರು.
ಶ್ರೀ ಅನುಗ್ರಹ ಸಂಜೀವ ಸ್ವಾಗತಿಸಿ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ “ಶ್ರೀ ಕದಂಬ ಕೌಶಿಕೆ” ತಾಳಮದ್ದಲೆ ಜರಗಿತು.