ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೋಮವಾರ ಕೂಡಾ (11-07-2022)ರಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಹಾಗೂ ಮೂನ್ಸೂಚನೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಮಕ್ಕಳ ಸುರಕ್ಷತೆಯ ಸಲುವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಅನುದಾನ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ಆದರೆ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ಇತರ ಎಲ್ಲಾ ವೃತ್ತಿಪರ ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಕಾಣಿಯೂರು ಗೌರಿ ಹೊಳೆಗೆ ಕಾರು ಬಿದ್ದ ಪ್ರಕರಣ ಈಗ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತಾ ಇದೆ. ಅಪಘಾತ ನಡೆದ ನಂತರವೂ (ರಾತ್ರಿ ೧೨. ೩೦) ಯುವಕರು ಮೊಬೈಲ್ ಮೊಬೈಲ್ ಬಳಸಿದ್ದರೇ ? ಎಂಬ ಸಂಶಯವೊಂದು ಪೊಲೀಸರ ತಲೆ ತಿನ್ನುತ್ತಿರುವ ವಿಚಾರವಾಗಿದೆ.
ಮನೆಯವರಿಗೆ ಕಾಲ್ ಮಾಡಿದ ಯುವಕರು ತಮ್ಮ ಕಾರಿಗೆ ಲಾರಿ ಢಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರಂತೆ. ಆ ಯುವಕರು ಈಗ ಎಲ್ಲಿದ್ದಾರೆ ಅಥವಾ ಏನು ಮಾಡುತ್ತಿದ್ದಾರೆ ಎಂಬುದು ಅವರನ್ನು ಪತ್ತೆಹಚ್ಚಿದ ಮೇಲೆಯೇ ತಿಳಿಯಬಹುದಷ್ಟೆ. ಪೊಲೀಸರು ಈಗ ಅವರ ಮೊಬೈಲ್ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.
ಘಟನೆಯ ವಿವರ ಹೀಗಿದೆ:
ನಿನ್ನೆ ರಾತ್ರಿ ಜುಲೈ 9ರಂದು (ಇಂದು ಜುಲೈ 10 ಮುಂಜಾನೆ 00. 30) ಬೈತಡ್ಕ ಗೌರಿ ಹೊಳೆಗೆ ಬಿದ್ದ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
ಆದರೆ ಕಾರಿನಲ್ಲಿದ್ದ ಇಬ್ಬರ ಯುವಕರು ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಹೊಳೆಗೆ ಬಿದ್ದ ಮಾರುತಿ 800 ಕಾರನ್ನು ಇಂದು ಮಧ್ಯಾಹ್ನ ಸುಮಾರು 12.30 ಘಂಟೆಗೆ ಮೇಲೆಕ್ಕೆತ್ತಲಾಯಿತು. ಆದರೆ ಕಾರಿನೊಳಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
ಕಾರಿನೊಳಗಿದ್ದ ಇಬ್ಬರು ಯುವಕರ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಟ್ಲ ಸಮೀಪದ ಕುಂಡಡ್ಕದಿಂದ ಹೊರಟಿದ್ದ ಕಾರು ಗುತ್ತಿಗಾರಿನತ್ತ ಹೋಗುತ್ತಿತ್ತು. ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಬೈತಡ್ಕ ಸಮೀಪ ಚಾಲಕನ ನಿಯತ್ರ ತಪ್ಪಿ ಹೊಳೆಗೆ ಬಿದ್ದಿದೆ.
ಸಿಸಿಟಿವಿ ದೃಶ್ಯದ ಪ್ರಕಾರ ಕಾರು ಅತಿವೇಗದಿಂದ ಸಾಗುತ್ತಿತ್ತು. ಹಾಗೂ ಆ ಮಧ್ಯರಾತ್ರಿಯ ಮಳೆಯಲ್ಲಿ ಚಾಲಕನು ತಿರುವಿನಲ್ಲಿ ಕಾರನ್ನು ತಿರುಗಿಸಲು ಅಸಾಧ್ಯವಾಗುಷ್ಟು ವೇಗದಲ್ಲಿ ಕಾರನ್ನು ಓಡಿಸಲಾಗುತ್ತಿತ್ತು ಎಂದು ದೃಶ್ಯದಲ್ಲಿ ಕಾಣುತ್ತಿತ್ತು.
ಮೊದಲಿಗೆ ಕಾರನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ಆದರೆ ನೀರಿನ ರಭಸಕ್ಕೆ ಕಾರು ಮತ್ತೊಮ್ಮೆ 100 ಮೀಟರಿನಷ್ಟು ಕೆಳಕ್ಕೆ ಕೊಚ್ಚಿಹೋಯಿತು ಆಮೇಲೆ ಮುಳುಗುತಜ್ಞರು ಕಾರನ್ನು ಪತ್ತೆಹಚ್ಚಿ ಹಗ್ಗದ ಸಹಾಯದಿಂದ ಅದನ್ನು ಮೇಲೆಕ್ಕೆತ್ತಲಾಯಿತು.
ಮುಂಬೈಯಲ್ಲಿ ಒಬ್ಬ ವ್ಯಕ್ತಿ ತನ್ನ ಮಾಲ್ಡೀವ್ಸ್ ಪ್ರವಾಸವನ್ನು ತನ್ನ ಹೆಂಡತಿಯಿಂದ ರಹಸ್ಯವಾಗಿಡಲು ತನ್ನ ಪಾಸ್‌ಪೋರ್ಟ್‌ನಿಂದ ಕೆಲವು ಪುಟಗಳನ್ನು ಹರಿದುಹಾಕಿದನು, ಆದರೆ ವಲಸೆ ಅಧಿಕಾರಿಗಳು ಪಾಸ್ ಪೋರ್ಟಿನಿಂದ ಕಾಣೆಯಾದ ಪುಟಗಳನ್ನು ಗಮನಿಸಿದಾಗ ಬಂಧಿಸಲಾಯಿತು.
ಮುಂಬೈನಲ್ಲಿರುವ ವ್ಯಕ್ತಿಯೊಬ್ಬರು ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡರು, ದ್ವೀಪದ ಸ್ವರ್ಗದಲ್ಲಿ ತನ್ನ ಪ್ರೇಮಿಯೊಂದಿಗೆ ಕುಣಿದು ಕುಪ್ಪಳಿಸಿದರು, ನಂತರ ತನ್ನ ಹೆಂಡತಿಗೆ ಈ ವಿಚಾರ ತಿಳಿಯದಂತೆ ಮಾಡಲು ತನ್ನ ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಕಿತ್ತುಕೊಂಡ. ಅವನ ಕೃತ್ಯವು ಅವನನ್ನು ಬಂಧಿಸುತ್ತದೆ ಎಂದು ಅವನಿಗೆ ತಿಳಿದಿರಲಿಲ್ಲ.
ಬಂಧಿತ ವ್ಯಕ್ತಿ 32 ವರ್ಷದ ಎಂಜಿನಿಯರ್ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅಧಿಕೃತ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳುವುದಾಗಿ ಪತ್ನಿಗೆ ತಿಳಿಸಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ರಜೆಯ ಮೇಲೆ ಮಾಲ್ಡೀವ್ಸ್ ಗೆ ತೆರಳಿದ್ದರು. ಆದರೆ, ಆ ವ್ಯಕ್ತಿ ತನ್ನ ಕರೆಗಳನ್ನು ಸ್ವೀಕರಿಸದಿದ್ದಾಗ, ಅವನ ಹೆಂಡತಿಗೆ ಅನುಮಾನ ಬೆಳೆಯಿತು.
ಅವಳು ಅವನಿಗೆ ಪದೇ ಪದೇ ವಾಟ್ಸಾಪ್‌ನಲ್ಲಿ ಕರೆ ಮಾಡಿದಳು ಮತ್ತು ಅವನು ತನ್ನ ರಜೆಯನ್ನು ಕಡಿಮೆ ಮಾಡಲು ನಿರ್ಧರಿಸಿದನು. ತಾನು ಮಾಲ್ಡೀವ್ಸ್‌ನಲ್ಲಿದ್ದೇನೆ ಮತ್ತು ತನ್ನ ಹೆಂಡತಿಯಿಂದ ಕೆಲಸದ ಪ್ರವಾಸದಲ್ಲಿ ದೂರ ಹೋಗಿದ್ದೇನೆ ಎಂಬ ಅಂಶವನ್ನು ಮರೆಮಾಚಲು, ಅವನು ತನ್ನ ಪಾಸ್‌ಪೋರ್ಟ್‌ನಲ್ಲಿನ ವೀಸಾ ಮುದ್ರೆಯ ಪುಟಗಳನ್ನು ಹರಿದು ಹಾಕಿದನು.
ಇಂಜಿನಿಯರ್ ಗುರುವಾರ ರಾತ್ರಿ ಮುಂಬೈಗೆ ಬಂದಿಳಿದರು, ಅಲ್ಲಿ ವಲಸೆ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ನಲ್ಲಿನ 3-6 ಮತ್ತು 31-34 ಪುಟಗಳು ಕಾಣೆಯಾಗಿರುವುದನ್ನು ಗಮನಿಸಿದರು. ಅದರ ಬಗ್ಗೆ ಕೇಳಿದಾಗ, ಆ ವ್ಯಕ್ತಿ ತಬ್ಬಿಬ್ಬಾದ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
“ಅವನು ಉದ್ದೇಶಪೂರ್ವಕವಾಗಿ ತನ್ನ ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿದು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣಿಸಿದ್ದಾನೆ ಮತ್ತು ಆದ್ದರಿಂದ ಅವನು ಪಾಸ್‌ಪೋರ್ಟ್ ಪ್ರಾಧಿಕಾರ ಮತ್ತು ವಲಸೆ ಇಲಾಖೆಯೊಂದಿಗೆ ವಂಚನೆಯ ಅಪರಾಧವನ್ನು ಎಸಗಿದ್ದಾನೆ” ಎಂದು ವಲಸೆ ಅಧಿಕಾರಿಯೊಬ್ಬರು ಸಹಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ.
ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ಮಾಲ್ಡೀವ್ಸ್‌ನಲ್ಲಿ ತನ್ನ ಪ್ರೇಮಿಯೊಂದಿಗೆ ರಜೆಯ ಯೋಜನೆಯನ್ನು ಬಹಿರಂಗಪಡಿಸಿದನು. ಪತ್ನಿಯಿಂದ ತನ್ನ ಪ್ರವಾಸವನ್ನು ಗೌಪ್ಯವಾಗಿಡಲು ಪಾಸ್‌ಪೋರ್ಟ್‌ನ ಪುಟಗಳನ್ನು ಕಿತ್ತುಕೊಂಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಭಾರತ ಸರ್ಕಾರ ನೀಡಿದ ಪಾಸ್‌ಪೋರ್ಟ್‌ಗೆ ಹಾನಿ ಮಾಡುವುದು ಕ್ರಿಮಿನಲ್ ಕೃತ್ಯ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಜುಲೈ 9ರಂದು (ಇಂದು ಜುಲೈ 10 ಮುಂಜಾನೆ 00. 30) ಬೈತಡ್ಕ ಗೌರಿ ಹೊಳೆಗೆ ಬಿದ್ದ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
ಆದರೆ ಕಾರಿನಲ್ಲಿದ್ದ ಇಬ್ಬರ ಯುವಕರು ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಹೊಳೆಗೆ ಬಿದ್ದ ಮಾರುತಿ 800 ಕಾರನ್ನು ಇಂದು ಮಧ್ಯಾಹ್ನ ಸುಮಾರು 12.30 ಘಂಟೆಗೆ ಮೇಲೆಕ್ಕೆತ್ತಲಾಯಿತು. ಆದರೆ ಕಾರಿನೊಳಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
ಕಾರಿನೊಳಗಿದ್ದ ಇಬ್ಬರು ಯುವಕರ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಟ್ಲ ಸಮೀಪದ ಕುಂಡಡ್ಕದಿಂದ ಹೊರಟಿದ್ದ ಕಾರು ಗುತ್ತಿಗಾರಿನತ್ತ ಹೋಗುತ್ತಿತ್ತು. ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಬೈತಡ್ಕ ಸಮೀಪ ಚಾಲಕನ ನಿಯತ್ರ ತಪ್ಪಿ ಹೊಳೆಗೆ ಬಿದ್ದಿದೆ.
ಸಿಸಿಟಿವಿ ದೃಶ್ಯದ ಪ್ರಕಾರ ಕಾರು ಅತಿವೇಗದಿಂದ ಸಾಗುತ್ತಿತ್ತು. ಹಾಗೂ ಆ ಮಧ್ಯರಾತ್ರಿಯ ಮಳೆಯಲ್ಲಿ ಚಾಲಕನು ತಿರುವಿನಲ್ಲಿ ಕಾರನ್ನು ತಿರುಗಿಸಲು ಅಸಾಧ್ಯವಾಗುಷ್ಟು ವೇಗದಲ್ಲಿ ಕಾರನ್ನು ಓಡಿಸಲಾಗುತ್ತಿತ್ತು ಎಂದು ದೃಶ್ಯದಲ್ಲಿ ಕಾಣುತ್ತಿತ್ತು.
ಮೊದಲಿಗೆ ಕಾರನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ಆದರೆ ನೀರಿನ ರಭಸಕ್ಕೆ ಕಾರು ಮತ್ತೊಮ್ಮೆ 100 ಮೀಟರಿನಷ್ಟು ಕೆಳಕ್ಕೆ ಕೊಚ್ಚಿಹೋಯಿತು ಆಮೇಲೆ ಮುಳುಗುತಜ್ಞರು ಕಾರನ್ನು ಪತ್ತೆಹಚ್ಚಿ ಹಗ್ಗದ ಸಹಾಯದಿಂದ ಅದನ್ನು ಮೇಲೆಕ್ಕೆತ್ತಲಾಯಿತು.
ಕಾರಿನೊಳಗಿದ್ದ ಇಬ್ಬರು ಸಂಬಂಧಿಕ ಯುವಕರಾದ ವಿಟ್ಲ ಸಮೀಪ ಕುಂಡಡ್ಕದ ಧನುಷ್(26) ಮತ್ತು ಮಂಜೇಶ್ವರದ ಧನುಷ್ (21) ಅವರ ಪತ್ತೆಕಾರ್ಯ ಮುಂದುವರಿದಿದೆ.
ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ)ಪುತ್ತೂರು ಅರ್ಪಿಸಿದ ವಿದುಷಿ ಶ್ರೀಮತಿ ರೋಹಿಣಿ ಉದಯ್ ಇವರ ಶಿಷ್ಯೆಯರಾದ ಕುಮಾರಿ ಶ್ರದ್ಧಾ ಮತ್ತು ಕುಮಾರಿ ಯಶ್ವಿತಾ ಇವರಿಂದ” ನೃತ್ಯ ರಂಜಿನಿ”-4 ಸರಣಿ ಭರತನಾಟ್ಯ ಕಾರ್ಯಕ್ರಮ ,SDNK ,ಸಭಾಂಗಣ, ವಿವೇಕ ನಗರ, ಬಿ ಸಿ ರೋಡ್ ನಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸಾಯಿ ಕಿಂಡರ್ ಗಾರ್ಡನ್ ಇದರ ಸಂಚಾಲಕರಾದ ಶ್ರೀ ಐತಪ್ಪ ಪೂಜಾರಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ಶ್ರೀ ಉದಯ ವೆಂಕಟೇಶ್ ಭಟ್ ರವರು ಸ್ವಾಗತಿಸಿದರು . ನೃತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ರೋಹಿಣಿ ಉದಯ್ ವಂದಿಸಿದರು.
ಹಾಸ್ಯಗಾರ ವೇಣೂರು ಸುಂದರ ಆಚಾರ್ಯರ ಸಂಸ್ಮರಣೆ -ಪ್ರಶಸ್ತಿ ಪ್ರದಾನ- ತಾಳಮದ್ದಳೆ
ಇಂದು ದಿನಾಂಕ 10.07.2022 ರಂದು ಭಾನುವಾರ ತೆಂಕುತಿಟ್ಟು ಯಕ್ಷಗಾನದ ಖ್ಯಾತ ಹಾಸ್ಯಗಾರರಾಗಿದ್ದ ದಿವಂಗತ ಸುಂದರ ಆಚಾರ್ಯ ವೇಣೂರು ಇವರ ಸಂಸ್ಮರಣೆ ಹಾಗೂ ಹಾಸ್ಯರತ್ನ ವೇಣೂರು ಸುಂದರಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಭರತೇಶ ಸಭಾಭವನ ವೇಣೂರು ಇಲ್ಲಿ ಜರಗಲಿದೆ.
ಮಧ್ಯಾಹ್ನ 2 ಗಂಟೆಗೆ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ. ಸಂಜೆ 4:00 ಗಂಟೆಗೆ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸನ್ಮಾನ ಕಾರ್ಯಕ್ರಮ. ಇದರಲ್ಲಿ ಹಾಸ್ಯಗಾರ ಸುಂದರ ಆಚಾರ್ಯರ ಜೊತೆಗೆ ಸುರತ್ಕಲ್ ಮೇಳದಲ್ಲಿ ಸುಧೀರ್ಘ ಕಾಲ ವ್ಯವಸಾಯವನ್ನು ಮಾಡಿದ ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಶಿವರಾಮ ಜೋಗಿ ಬಿ.ಸಿ. ರೋಡು ಇವರಿಗೆ ಹಾಸ್ಯರತ್ನ ವೇಣೂರು ಸುಂದರ ಆಚಾರ್ಯ ಪ್ರಶಸ್ತಿ ಯನ್ನು ಬೆಳ್ತಂಗಡಿ ತಾಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಗುವುದು.
ಬಳಿಕ ಸಂಜೆ 5:00 ಗಂಟೆಗೆ ವಾಲಿಮೋಕ್ಷ ಎಂಬ ತಾಳಮದ್ದಳೆ ನಡೆಯಲಿದೆ.
(ಸಭಾ ಕಾರ್ಯಕ್ರಮದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಇದೆ.)
ಕಲಾಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ ಬಯಸುವ…..
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಊರವರು ವೇಣೂರು ಸುಂದರ ಆಚಾರ್ಯ ಸಂಸ್ಮರಣ ಸಮಿತಿ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಪತ್ನಿ ಲತಾ ಶಿಂಧೆ ಅವರೊಂದಿಗೆ ಆಷಾಢಿ ಏಕಾದಶಿಯ ಸಂದರ್ಭದಲ್ಲಿ ಪಂಢರಪುರ ವಿಠ್ಠಲ್ ರುಕ್ಮಿಣಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಂಧೆ ದಂಪತಿಗಳು ಮಹಾ ಆರತಿಯನ್ನು ಕೂಡಾ ಮಾಡಿದರು. ವೀಡಿಯೊ ನೋಡಿ.
#WATCH | Maharashtra Chief Minister Eknath Shinde along with his wife, Lata Shinde offers prayers, performs Maha Aarti at Pandharpur Vitthal Rukmini temple, on the occasion of Ashadhi Ekadashi pic.twitter.com/mqZZCA4ybr
ಭಾರತೀಯ ರಂಗಭೂಮಿಯ ವಿಶಿಷ್ಟ ಕಲಾ ಪ್ರಕಾರವಾದ ನವರಸಗಳ ಸಂಗಮವೆನಿಸಿದ ಯಕ್ಷಗಾನದಲ್ಲಿ ನಗುವಿನ ಹೊಳೆಯನ್ನು ಹರಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಾಸ್ಯಗಾರರ ಪಾತ್ರ ಪ್ರಮುಖವಾದದ್ದು. ವಿಟ್ಲ ಗೋಪಾಲಕೃಷ್ಣ ಜೋಶಿ , ಪೆರುವಡಿ ನಾರಾಯಣ ಭಟ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಕೊಡಕಲ್ಲು ಗೋಪಾಲಕೃಷ್ಣ ಭಟ್, ಮುಖ್ಯಪ್ರಾಣ ಕಿನ್ನಿಗೋಳಿ ಮೊದಲಾದವರು ಹಾಸ್ಯಗಾರರು ಒಂದು ಪರಂಪರೆಯನ್ನು ಮುಂದುವರಿಸಿಕೊ0ಡು ಬಂದವರು. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಪ್ರಸಿದ್ಧ ಹಾಸ್ಯಗಾರರೇ ವೇಣೂರು ಸುಂದರ ಆಚಾರ್ಯರು.
ಬೆಳ್ತಂಗಡಿ ತಾಲೂಕಿನ ವೇಣೂರು ಕಿನ್ನಿ ಆಚಾರ್ಯ ಮತ್ತು ಸರಸಮ್ಮ ದಂಪತಿಯ ನಾಲ್ಕನೇ ಪುತ್ರನಾಗಿ ದಿನಾಂಕ 07-10-1940 ರಲ್ಲಿ ಜನಿಸಿದ ಇವರು ಎರಡನೇ ತರಗತಿಯ ಶಿಕ್ಷಣ ಪಡೆದು ಯಕ್ಷಗಾನದ ಆಸಕ್ತಿಯಿಂದ ದೇಲಂತಪುರಿ ಮೇಳದ ಯಜಮಾನ – ಕಲಾವಿದ ಕೃಷ್ಣ ಭಟ್ ಮತ್ತು ವೇದಮೂರ್ತಿ ವೆಂಕಟರಮಣ ಭಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಅಭ್ಯಾಸ ಮಾಡಿ 14ನೇ ವಯಸ್ಸಿನಲ್ಲಿ ದೇಲಂತಪುರಿ ಮೇಳದಲ್ಲಿ ರಂಗ ಪ್ರವೇಶ ಮಾಡಿದರು.
ಎರಡು ವರ್ಷದ ತಿರುಗಾಟದ ಬಳಿಕ ಬಳ್ಳಂಬೆಟ್ಟು ಮೇಳದಲ್ಲಿ ಪುಂಡು ವೇಷಧಾರಿಯಾಗಿ ತಿರುಗಾಟ ಮಾಡಿ 1957ರಲ್ಲಿ ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳಕ್ಕೆ ಸೇರ್ಪಡೆಗೊಂಡು ನಿರಂತರ 42 ವರ್ಷಗಳ ತಿರುಗಾಟ ನಡೆಸಿದ್ದಾರೆ. ಇದು ಆಚಾರ್ಯರ ಮೇಳ ನಿಷ್ಠೆ ಮತ್ತು ಕಲಾ ಪ್ರೀತಿಗೆ ಸಾಕ್ಷಿ.
ಸುರತ್ಕಲ್ ಮೇಳ ಸ್ಥಗಿತಗೊಂಡ ಬಳಿಕ ಕರ್ನಾಟಕ ಮತ್ತು ಶ್ರೀ ಮಂಗಳಾದೇವಿ ಮೇಳಗಳಲ್ಲಿ ಒಂದೊ0ದು ವರ್ಷದ ತಿರುಗಾಟ ಮಾಡಿ ಒಟ್ಟು 46 ವರ್ಷಗಳ ಕಾಲ ಯಕ್ಷಗಾನ ರಂಗದಲ್ಲಿ ಮೆರೆದು ಬಳಿಕ ಅತಿಥಿ ಕಲಾವಿದರಾಗಿ ಸುಂಕದಕಟ್ಟೆ ಮೇಳದಲ್ಲಿ ಭಾಗವಹಿಸುತ್ತಿದ್ದರು. ಪುಂಡು ವೇಷಧಾರಿಯಾಗಿದ್ದ ಇವರು ಹಾಸ್ಯಗಾರರದದ್ದು ಆಕಸ್ಮಿಕ. ದಿ.ವಿಟ್ಲ ಜೋಶಿಯವರ ಒತ್ತಾಸೆಯಿಂದ ಕೆಲವು ಹಾಸ್ಯ ಪಾತ್ರಗಳನ್ನು ಮಾಡಿದಾಗ ಇವರ ಹಾಸ್ಯಪ್ರಜ್ಞೆಯನ್ನು ಸಹ ಕಲಾವಿದರು ಮತ್ತು ಪ್ರೇಕ್ಷಕರು ಒಪ್ಪಿಕೊಂಡರು. ಬಳಿಕ ಮೇಳದಲ್ಲಿ ಹಾಸ್ಯಗಾರರಾಗಿದ್ದ ಪೆರುವಡಿ ನಾರಾಯಣ ಭಟ್ಟರ ಪ್ರೋತ್ಸಾಹವು ಇವರನ್ನು ಪೂರ್ಣ ಪ್ರಮಾಣದಲ್ಲಿ ಹಾಸ್ಯಗಾರನಾಗುವಂತೆ ಮಾಡಿತು.
ತುಳು ಪ್ರಸಂಗಗಳ ಪ್ರದರ್ಶನಗಳು ಮುನ್ನೆಲೆಗೆ ಬಂದಾಗ ಹಾಸ್ಯ ಪಾತ್ರಗಳನ್ನು ಪರಂಪರೆಯ ಚೌಕಟ್ಟಿನಲ್ಲಿ ನಿರ್ವಹಿಸಿದ ಹೆಚ್ಚುಗಾರಿಕೆ ಇವರದು. ಶ್ರೀ ಕೃಷ್ಣ ಲೀಲೆಯ ವಿಜಯ, ಪಾರಿಜಾತದ ಮಕರಂದ, ಸತಿ ಶೀಲಾವತಿಯ ಚಿತ್ರಾಂಗ, ಚಂದ್ರಾವಳಿಯ ಅತ್ತೆ, ನಳದಮಯಂತಿಯ ಬಾಹುಕ, ಗುಣ ಸುಂದರಿಯ ಪಾಪಣ್ಣ, ಸಾಧ್ವಿ ಸದಾರಮೆಯ ಆದಿಮೂರ್ತಿ, ಶನೀಶ್ವರ ಮಹಾತ್ಮೆಯ ಕುದುರೆ ವ್ಯಾಪಾರಿ, ಶಬರಿಮಲೆ ಅಯ್ಯಪ್ಪದ ಕೇಳು ಪಂಡಿತ, ಕೋಟಿ ಚೆನ್ನಯದ ಪೈಯ್ಯ ಬೈದ್ಯ, ಶೇಣಿಯವರ ಬಪ್ಪಬ್ಯಾರಿಯೊಂದಿಗೆ ಉಸ್ಮಾನ್, ಶಿವರಾಮ ಜೋಗಿ ಅವರೊಂದಿಗೆ ಮಲೆಯಾಳಿ ಬಿಲ್ಲವ, ಶ್ರೀನಿವಾಸ ಕಲ್ಯಾಣದ ಸಖ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಸದಭಿರುಚಿಯ ಹಾಸ್ಯವನ್ನು ಮುಂದುವರಿಸಿದ ಅನನ್ಯ ಕಲಾವಿದ ಸುಂದರ ಆಚಾರ್ಯರು.
ಹೆಚ್ಚಿನ ಪ್ರಸಂಗಗಳ ಬಾಯಿಪಾಠವಿದ್ದುದರಿಂದ ಪ್ರಸಂಗದ ನಡೆ ಮತ್ತು ಕಥಾ ಹಂದರವನ್ನು ಸಹ ಕಲಾವಿದರಿಗೆ ತಿಳಿಸುವ ಕಲೆ ಇವರಿಗೆ ಕರಗತವಾಗಿತ್ತು. ಮೇಳದಲ್ಲಿ ಅಗರಿ ಭಾಗವತರು ಮಲ್ಪೆ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ಟರ್, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣಚಾರ್ಯ, ಎಂ. ಕೆ. ರಮೇಶ ಆಚಾರ್ಯ, ಶಿವರಾಮ ಜೋಗಿ ಮೊದಲಾದವರ ಒಡನಾಟದಲ್ಲಿ ಗಳಿಸಿದ ಅನುಭವವನ್ನು ಕಿರಿಯ ಕಲಾವಿದರಿಗೆ ತಿಳಿಸುವುದರೊಂದಿಗೆ ಹಲವಾರು ಕಲಾವಿದರನ್ನು ಗುರುತಿಸಿ ಮೇಳಕ್ಕೆ ಸೇರ್ಪಡೆಗೊಳಿಸಿದ್ದಾರೆ.
ಕಿರಿಯ ಪುತ್ರ ಭಾಸ್ಕರಾಚಾರ್ಯ ಸೇರಿದಂತೆ ವೇಣೂರು ಸದಾಶಿವ ಕುಲಾಲ್, ವೇಣೂರು ಅಶೋಕ ಆಚಾರ್ಯ, ಸದಾಶಿವ ಆಚಾರ್ಯ ಕೊಡ್ಲೆ ಮೊದಲಾದ ಶಿಷ್ಯಂದಿರನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗ ನಡೆಸಿದ ತೆಂಕುತಿಟ್ಟಿನ ಹಾಸ್ಯ ಪಾತ್ರಗಳ ದಾಖಲೀಕರಣದ ಪ್ರಾತ್ಯಕ್ಷಿಕೆಯಲ್ಲಿ ಇವರು ಭಾಗವಹಿಸಿದ್ದಾರೆ. ಹಲವಾರು ಕನ್ನಡ ಮತ್ತು ತುಳು ಧ್ವನಿ ಸುರುಳಿ ಮತ್ತು ಅಡಕ ತಟ್ಟೆಗಳಲ್ಲಿ ಇವರ ಪಾತ್ರಗಳ ನಿರ್ವಹಣೆಯನ್ನು ಕಾಣಬಹುದು.
ಮಡದಿ ಪ್ರೇಮಾವತಿ ಪುತ್ರರಾದ ರವೀಂದ್ರ, ಪ್ರಭಾಕರ, ಭಾಸ್ಕರ ಮತ್ತು ಮಗಳು ಮಮತಾ ಇವರೊಂದಿಗೆ ಸಂತೃಪ್ತ ಜೀವನ ನಡೆಸಿ ವೇಣೂರಿಗೆ ಹೆಮ್ಮೆಯನ್ನು ತಂದ ಸುಂದರಾಚಾರ್ಯರು 2005ರಲ್ಲಿ ದೈವಾಧೀನರಾದರು.
ಹಾಸ್ಯ ರತ್ನ ಸುಂದರಾಚಾರ್ಯರ ಬಂಧುಗಳು ಮತ್ತು ಅಭಿಮಾನಿ ವರ್ಗದವರು ಅವರ ಸಂಸ್ಮರಣೆಯನ್ನು ಅರ್ಥಪೂರ್ಣವಾಗಿ ನಡೆಸಲು ಖಂಡಿಗ ಶ್ರೀಧರಾಚಾರ್ಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದಾರೆ. ದಿನಾಂಕ 10/07/2022 ರಂದು ವೇಣೂರಿನ ಶ್ರೀ ಭರತೇಶ ಸಭಾಭವನದಲ್ಲಿ ಅರ್ಕುಳ ಸುಬ್ರಾಯಾಚಾರ್ಯ ವೇದಿಕೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಸುರತ್ಕಲ್ ಮೇಳದಲ್ಲಿ ಸುಂದರ ಆಚಾರ್ಯರ ದೀರ್ಘಕಾಲ ಒಡನಾಡಿಯಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಕೆ.ಶಿವರಾಮ ಜೋಗಿ ಅವರಿಗೆ ಪ್ರಥಮ ವರ್ಷದ ಸಂಸ್ಮರಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾಗಿ ಅಸ್ತಂಗತರಾದ ವೇಣೂರು ಭಾಸ್ಕರಾಚಾರ್ಯ ಮತ್ತು ವಾಮನ ಕುಮಾರ್ ವೇಣೂರು ಇವರಿಗೆ ಗೌರವಪೂರ್ವಕ ನುಡಿ ನಮನ ಹಾಗೂ ಹಿರಿಯ ಕಿರಿಯ ಕಲಾವಿದರಿಂದ “ಕರ್ಣಾರ್ಜುನ” ಮತ್ತು “ವಾಲಿ ಮೋಕ್ಷ” ತಾಳಮದ್ದಳೆಯು ನಡೆಯಲಿದೆ.