Monday, August 31, 2026
Home Blog Page 219

ಮೊದಲು ಕೈಮುಗಿದು ಲಕ್ಷ್ಮೀದೇವಿಯಲ್ಲಿ ಕ್ಷಮೆ ಯಾಚಿಸಿದ ಕಳ್ಳ, ಆಮೇಲೆ ಹುಂಡಿಗೆ ಕನ್ನವಿಕ್ಕಿದ! – ವೀಡಿಯೊ ನೋಡಿ 

ಮಾಡುವುದು ಕಳ್ಳತನ, ಅದಕ್ಕೆ ಅನಿವಾರ್ಯತೆಯ ಮತ್ತು ಭಕ್ತಿಯ ಲೇಪ ಬೇರೆ. ಈಚೆಗೆ ಕಳ್ಳರೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ಬಯಸಿದ ಹಾಗೆ ಕಾಣುತ್ತದೆ.

ಮಧ್ಯಪ್ರದೇಶದ ಜಬಲ್ಪುರ್ ನಲ್ಲಿ ಕಳ್ಳನೊಬ್ಬ ದೇವರ ಹುಂಡಿಯನ್ನು ಕಳ್ಳತನ ಮಾಡುವ ಮೊದಲು ಕೈಮುಗಿದು ದೇವರಲ್ಲಿ ಬೇಡಿಕೊಳ್ಳುವುದು ಕಂಡುಬಂದಿದೆ. ಇಂತಹಾ ಘಟನೆ ಇದೇನೂ ಮೊದಲಲ್ಲ. ಆದರೆ ಈ ಬಾರಿ ವೀಡಿಯೊ ವೈರಲ್ ಆಗಿದೆ. ದೇವಿಯ ದೇವಸ್ಥಾನದಲ್ಲಿ ಕಳ್ಳನು  ದೇವರ ವಿಗ್ರಹದ ಮುಂದೆ ತನ್ನ ಕೈಗಳನ್ನು ಮುಗಿದು ಕ್ಷಮೆಯಾಚಿಸಿ ಅಥವಾ ಆಶೀರ್ವಾದವನ್ನು ತೆಗೆದುಕೊಂಡು ನಂತರ ಅಲ್ಲಿದ್ದ ಹುಂಡಿಯ ಹಣದೊಂದಿಗೆ ಪರಾರಿಯಾದನು.

ಕಳ್ಳರು ಮನೆಗೆ ನುಗ್ಗಿ ವಸ್ತುಗಳನ್ನು ಕದಿಯುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಅನೇಕ ಬಾರಿ, ಕಳ್ಳರು ಧಾರ್ಮಿಕ ಸ್ಥಳಗಳಿಗೆ ಪ್ರವೇಶಿಸಿ ಅಮೂಲ್ಯವಾದ ಆಭರಣಗಳು ಮತ್ತು ಕಾಣಿಕೆ ಪೆಟ್ಟಿಗೆಗಳನ್ನು ಕದಿಯುತ್ತಿರುವುದು ಕಂಡುಬಂದಿದೆ. ಆದರೆ ಕಳ್ಳನೊಬ್ಬ ದೇವರ ಮುಂದೆ ಕೈಮುಗಿದು ಕ್ಷಮೆ ಕೇಳಿದ ನಂತರ ಕಳ್ಳತನ ಮಾಡುವ ದೃಶ್ಯ ಕಾಣಸಿಗುವುದು ಅಪರೂಪ.

ಜಬಲ್ಪುರದಲ್ಲಿ ಇದೇ ರೀತಿಯ ಕಳ್ಳತನದ ಘಟನೆ ಬೆಳಕಿಗೆ ಬಂದಿದ್ದು, ಭಕ್ತರ ಕಳ್ಳನೊಬ್ಬ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಪ್ರವೇಶಿಸಿದ್ದಾನೆ. ದೇವರ ಮೂರ್ತಿಯ ಮುಂದೆ ಕೈಮುಗಿದು ಕ್ಷಮೆ ಕೇಳುತ್ತಾನೆ. ಬಳಿಕ ಅಲ್ಲಿ ಇಟ್ಟಿದ್ದ ಕಾಣಿಕೆ ಡಬ್ಬಿ, ಗಂಟೆ ಹಾಗೂ ಇತರೆ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾನೆ.ಕಳ್ಳತನ ಮತ್ತು ಕಳ್ಳತನದ ಚಿತ್ರಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬಳಿಕ ದೇವಸ್ಥಾನ ಸಮಿತಿ ಅಧ್ಯಕ್ಷರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಬಲ್ಪುರದ ಮಧೋತಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಖ ಗ್ರಾಮದಲ್ಲಿ ಆಗಸ್ಟ್ 5 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಕಳ್ಳತನದ ಘಟನೆ ನಡೆದಿದೆ. ಅಲ್ಲಿ ನಾಲ್ಕು ದಿನಗಳ ಹಿಂದೆ ಲಕ್ಷ್ಮಿ ದೇವಸ್ಥಾನದಲ್ಲಿ ಅಪರಿಚಿತ ಕಳ್ಳನೊಬ್ಬ ಈ ಕೃತ್ಯ ಎಸಗಿದ್ದ. ಕಳ್ಳ ಎಷ್ಟು ಬುದ್ಧಿವಂತನೆಂದರೆ ಯಾರೂ ಗುರುತು ಹಿಡಿಯದಂತೆ ಮುಖ ಮುಚ್ಚಿಕೊಂಡು ದೇವಸ್ಥಾನ ಪ್ರವೇಶಿಸಿದ್ದ.

ದೇವಸ್ಥಾನದ ಬಾಗಿಲು ಮುಚ್ಚಿದಾಗ ಕಳ್ಳ ಏಕಾಏಕಿ ಅಲ್ಲಿಗೆ ಬಂದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ದೇವಸ್ಥಾನದಲ್ಲಿ ಪರದೆಯ ಕೆಳಗಿನಿಂದ ನಿಧಾನವಾಗಿ ಒಳಗೆ ಪ್ರವೇಶಿಸಿದ. ಅಲ್ಲಿ ಇಲ್ಲಿ ನೋಡಿದ ನಂತರ ಕೈಮುಗಿದು ದೇವಿಯ ವಿಗ್ರಹದ ಮುಂದೆ ನಿಂತ. ಅವನು ದೇವಿಯನ್ನು ಪೂಜಿಸುತ್ತಿದ್ದಾನೆಯೇ. ಅಥವಾ ಕದಿಯುವ ಮೊದಲು ಕ್ಷಮೆಯಾಚಿಸುತ್ತಿರಬಹುದು ಅಥವಾ ಅವನ ಅಪರಾಧಕ್ಕಾಗಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾನೆಯೋ ಎಂಬಿತ್ಯಾದಿ ಅನೇಕ ಅರ್ಥಗಳನ್ನು ಅವನ ಈ ಕ್ರಿಯೆಯು ಪಡೆಯಬಹುದು.

ಕೈ ಜೋಡಿಸಿದ ನಂತರ ಕಳ್ಳ ದೇವಸ್ಥಾನದ ಕಾಣಿಕೆ ಡಬ್ಬಿ ಸೇರಿದಂತೆ ಇತರೆ ವಸ್ತುಗಳನ್ನು ಒಟ್ಟುಗೂಡಿಸಿ ತೆಗೆದುಕೊಂಡು ಓಡಿ ಹೋಗಿದ್ದಾನೆ. ಅಪರಿಚಿತ ಕಳ್ಳನ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ. ಮೂಲಗಳ ಪ್ರಕಾರ, ದರೋಡೆ ಮಾಡಿದ ಯುವಕನಿಗೆ ದೇವಾಲಯದ ರಚನೆ ಮತ್ತು ವ್ಯವಸ್ಥೆ ಬಗ್ಗೆ ತಿಳಿದಿದೆ, ಸಿಸಿಟಿವಿ ಕ್ಯಾಮೆರಾ ಬಗ್ಗೆಯೂ ತಿಳಿದಿದೆ. ಅದಕ್ಕಾಗಿಯೇ ಅವನು ತನ್ನ ಮುಖವನ್ನು ತನ್ನ ಅಂಗಿಯಿಂದ ಮುಚ್ಚಿಕೊಂಡಿದ್ದನು.

ಜೊತೆಯಲ್ಲಿ ಕೋಚಿಂಗ್ ಗೆ ಹೋದರು, ಜೊತೆಯಲ್ಲಿ ಪರೀಕ್ಷೆಗೆ ಹಾಜರಾದರು, ಈಗ ಒಟ್ಟಿಗೆ ತಾಯಿ ಮತ್ತು ಮಗ ಪರೀಕ್ಷೆಯಲ್ಲಿ ತೇರ್ಗಡೆ – PSC ಪರೀಕ್ಷೆಯಲ್ಲಿ ವಿಚಿತ್ರ ಹಾಗೂ ಅಪರೂಪದ ಸಾಧನೆ 

ಇದೊಂದು ಅಪರೂಪದ ಘಟನೆ ಹಾಗೂ ಸಾಧನೆ. ಕೇರಳದ ಮಲಪ್ಪುರಂನ 42 ವರ್ಷದ ತಾಯಿ ಮತ್ತು ಅವರ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿದ್ದಾರೆ.

ತಾಯಿ ಬಿಂದು ಮತ್ತು ಮಗ ವಿವೇಕ್ ಕೇರಳ ಲೋಕಸೇವಾ ಆಯೋಗ (PSC) ನಡೆಸಿದ ಪರೀಕ್ಷೆಯಲ್ಲಿ ಜೊತೆಯಲ್ಲಿಯೇ ತೇರ್ಗಡೆಯಾಗಿದ್ದಾರೆ.

“ನಾವು ಒಟ್ಟಿಗೆ ಕೋಚಿಂಗ್ ತರಗತಿಗಳಿಗೆ ಹೋಗಿದ್ದೇವೆ. ನನ್ನ ತಾಯಿ ನನ್ನನ್ನು ಇದಕ್ಕೆ ಕರೆತಂದರು ಮತ್ತು ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿತು.

ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ನಾವು ಇಬ್ಬರಿಗೂ ಈಗ ತುಂಬಾ ಸಂತೋಷವಾಗಿದೆ” ಎಂದು ಬಿಂದುವಿನ ಮಗ ವಿವೇಕ್ ಹೇಳಿದರು.

ಬಸ್ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಚಲಿಸಿ  ವಾಹನಗಳಿಗೆ, ಜನರಿಗೆ  ಢಿಕ್ಕಿ – ವಾಹನಗಳು ಜಖಂ, ನಾಲ್ವರಿಗೆ ಗಾಯ – ವೀಡಿಯೊ ನೋಡಿ 

ಮುಂಬೈಯ ಕುರ್ಲಾ ಪ್ರದೇಶದಲ್ಲಿ ಬ್ಯಾಡ ಢಿಕ್ಕಿಯಾಗಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಸ್ ನಿಯಂತ್ರಣ ಕಳೆದುಕೊಂಡು ಎಲ್ಲೆಂದರಲ್ಲಿ ಯದ್ವಾತದ್ವಾ ಚಲಿಸಿದ್ದರಿಂದ ಈ ಅಫಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಸಂತೋಷ್ ನಗರದಿಂದ ಕುರ್ಲಾ ಕಡೆಗೆ ಹೋಗುತ್ತಿದ್ದ ಬಸ್ಸಿನ ಬ್ರೇಕ್ ವೈಫಲ್ಯದಿಂದ ಈ ಅವಘಡ ಸಂಭವಿಸಿದೆ.

ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿವೇಕಾನಂದ ಆಂಗ್ಲ  ಮಾಧ್ಯಮ  ಶಾಲೆಯ 9ನೇ ತರಗತಿಯ ವಿಶಾಲ್ ಕರಾಟೆ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಮತ್ತು ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಇದರ ಆಶ್ರಯದಲ್ಲಿ ಆಗಸ್ಟ್ 06ರಂದು ನಡೆದ ಪುತ್ತೂರು ಜಿಲ್ಲಾ ಮಟ್ಟದ ಕರಾಟೆ  ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ  ಮಾಧ್ಯಮ  ಶಾಲೆಯ  ವಿದ್ಯಾರ್ಥಿಗಳು ಭಾಗವಹಿಸಿ,  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


17ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿಶಾಲ್‌ ಪಿ(ಶ್ರೀ ವಿಠಲ.ಪಿ ಮತ್ತು ರೇಷ್ಮಾಇವರ ಪುತ್ರ) [30-35 kg] (9ನೇ ತರಗತಿ) ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ, ಲಿಖಿತ್ ಪಿ(ಶ್ರೀ ಚೆನ್ನಪ್ಪಗೌಡ ಮತ್ತು ಯಶಕಲಾ ಇವರ ಪುತ್ರ) [50-55 kg] (10ನೇ ತರಗತಿ)  ದ್ವಿತೀಯ ಸ್ಥಾನ,

ಅದೈತ್ ಶರ್ಮ(ಶ್ರೀ ಸುಧೀರ್.ಬಿ.ಎಸ್ ಮತ್ತು ಲತಾ ಸುಧೀರ್‌ ಇವರ ಪುತ್ರ) [45-50 kg] (ಹತ್ತನೇತರಗತಿ) ತೃತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ತೃಪ್ತಿ ಎ.ಕೆ (ಶ್ರೀ ಆನಂದಗೌಡ.ಕೆ ಮತ್ತು ಪಿ.ದಾಜಮ್ಮಇವರ ಪುತ್ರಿ)  [44-48 kg] (10 ನೇ ತರಗತಿ) ತೃತೀಯ ಸ್ಥಾನ ಗಳಿಸಿರುತ್ತಾರೆ.


ಇದರಲ್ಲಿ ಪ್ರಥಮ ಸ್ಥಾನ ಪಡೆದ 9ನೇ ತರಗತಿ ವಿಶಾಲ್ ಪಿ ಇವರು ಕಟೀಲಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಾಕಿಸ್ತಾನದಲ್ಲಿ ಹಿಂದೂ ಕುಟುಂಬದ ಮೇಲೆ ಹಲ್ಲೆ – ಪಾಕ್ ರಾಜಕಾರಣಿ ಸಂಬಂಧಿಯ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ 

ಪಾಕ್ ರಾಜಕಾರಣಿ ಸಂಬಂಧಿಯ ಕಾರನ್ನು ಹಿಂದಿಕ್ಕಲು ಯತ್ನಿಸಿದ ಹಿಂದೂ ಕುಟುಂಬದ ಮೇಲೆ ರಾಜಕಾರಣಿಯ ಸಂಬಂಧಿಯಿಂದ ಪಾಕಿಸ್ತಾನದಲ್ಲಿ ಹಲ್ಲೆ ನಡೆದಿದೆ.

ಪಾಕಿಸ್ತಾನಿ ರಾಜಕಾರಣಿಯೊಬ್ಬರ ಸಂಬಂಧಿ ಮತ್ತು ಕಾವಲುಗಾರರ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಕುಟುಂಬದವರು ಅವರ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದ ನಂತರ ಪಾಕಿಸ್ತಾನಿ ರಾಜಕಾರಣಿಯ ಸಂಬಂಧಿಕರು ಮತ್ತು ಅವರ ಸಿಬ್ಬಂದಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಿರುಕುಳದ ವೀಡಿಯೊ ವೈರಲ್ ಆಗಿದ್ದರಿಂದ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿದ ನಂತರ ಸಿಂಧ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಭಾನುವಾರದ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

ತನ್ನದೇ ಮದುವೆಗೆ ಹಾಜರಾಗಿ ಅಚ್ಚರಿ ಮೂಡಿಸಿದ ವಧು!: ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಯ ನಡುವೆ ವಧು ಹಾಜರಾಗಲು ಅನುಮತಿ ನೀಡಿದವರು ಕ್ಷಮೆ ಕೇಳಬೇಕೆಂದು ಪಟ್ಟು!

ಕೇರಳದಲ್ಲಿ ವಧುವೊಬ್ಬಳು ತನ್ನದೇ ಮದುವೆಯಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ಮುಸ್ಲಿಂ ವಧುವೊಬ್ಬರು ಕೇರಳದಲ್ಲಿ ಸ್ವಂತ ಮದುವೆಗೆ ಹಾಜರಾಗಿದ್ದಾರೆ, ಇಸ್ಲಾಂ ನಿಕಾಹ್ ಸಮಯದಲ್ಲಿ ವಧುವಿನ ಉಪಸ್ಥಿತಿಯು  ಇಸ್ಲಾಮಿಕ್ ನಿಯಮದ ಪ್ರಕಾರ ಮಾನ್ಯವಲ್ಲ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಮಹಲ್ ಸಮಿತಿಯನ್ನು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

 ನಿಕಾಹ್‌ನಲ್ಲಿ ವಧುವಿನ ಉಪಸ್ಥಿತಿಯನ್ನು ಶ್ಲಾಘಿಸುವವರು ಮತ್ತು ವಿರೋಧಿಸುವವರ   ಕಾಮೆಂಟ್‌ಗಳಿಂದ ಜಾಲತಾಣವು ತುಂಬಿಕೊಂಡುವು. ವಧುವಿನ ಉಪಸ್ಥಿತಿಗೆ ಅನುಮತಿ ನೀಡಿದ ಮಹಲ್ ಸಮಿತಿಯ ಸದಸ್ಯರು ಕ್ಷಮೆಯಾಚನೆಯನ್ನು ನೀಡುವಂತೆ ಒತ್ತಾಯ ಮಾಡಲಾಯಿತು. ಕೋಝಿಕ್ಕೋಡ್‌ನ ಪರಕ್ಕಡವು ಪಾಲೇರಿಯಲ್ಲಿ ಜುಲೈ 30 ರಂದು, ಇಸ್ಲಾಮಿಕ್ ವಿವಾಹದ ನಿರ್ಣಾಯಕ ಹಂತವಾದ ನಿಕಾಹ್  ಸಮಯದಲ್ಲಿ ವಧುವಿನ ಉಪಸ್ಥಿತಿ ಇತ್ತು.  ಇದು ಇಸ್ಲಾಮಿಕ್ ವಿವಾಹಗಳಲ್ಲಿ ಮಾನ್ಯವಲ್ಲ.

ಆದರೆ ಈ ಮದುವೆಯಲ್ಲಿ ವಧು ಹಾಜರಿದ್ದುದು ವಿವಾದಕ್ಕೆ ಕಾರಣವಾಯಿತು. ಕೆಲವೇ ದಿನಗಳಲ್ಲಿ ಕುಟುಂಬವೊಂದು ಸಂಭ್ರಮದಿಂದ ನಡೆಸಿಕೊಟ್ಟ ಮದುವೆಯೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿತು.

“ವಧು ಸ್ಥಳದಲ್ಲಿ ಕುಳಿತುಕೊಳ್ಳಬಹುದೇ ಎಂದು ನಾವು [ಮದುವೆ ನಡೆಸಿದ ಮಹಲ್‌ನಿಂದ] ಅನುಮತಿ ಕೇಳಿದ್ದೇವೆ. ಮಹಲ್ ಕಮಿಟಿಯ ಕಾರ್ಯದರ್ಶಿ ನಮಗೆ ಅನುಮತಿ ನೀಡಿದರು. ಮಹಲ್‌ನ ನೇತೃತ್ವ ವಹಿಸುವ ಮತ್ತು ಮದುವೆಗಳನ್ನು ನಡೆಸುವ ಖಾಲಿಯವರ ಅನುಮತಿಯನ್ನು ಅವರು ಕೇಳಿದರು, ಆಗಲೂ ಸಂತೋಷದಿಂದ ಅನುಮತಿ ನೀಡಲಾಯಿತು. ನಿಕಾಹ್ ಸಂಭವಿಸಿದೆ ಮತ್ತು ಅದರಲ್ಲಿ 400 ಜನರು ಭಾಗವಹಿಸಿದ್ದರು. ಎಲ್ಲರಿಗೂ ಸಂತೋಷವಾಯಿತು. ಆ ಸಮಯದಲ್ಲಿ ಯಾವುದೇ ವಿವಾದ ಅಥವಾ ಪ್ರಶ್ನೆ ಇರಲಿಲ್ಲ. ನಂತರ, ಕೆಲವರು ಫೇಸ್‌ಬುಕ್‌ನಲ್ಲಿ ಮದುವೆಯ ಬಗ್ಗೆ ಮೆಚ್ಚುಗೆಯಿಂದ ಬರೆದರು ಮತ್ತು ಕೆಲವರು ವೀಡಿಯೊಗಳನ್ನು ಸಹ ಮಾಡಿದರು. ಆಗ ಟೀಕೆ ಮತ್ತು ಕಾಮೆಂಟ್‌ಗಳು ಕಾಣಿಸಿಕೊಳ್ಳಲಾರಂಭಿಸಿದವು’ ಎನ್ನುತ್ತಾರೆ ವಧುವಿನ ಸಹೋದರ ಫಾಸಿಲ್ ಷಹಜಹಾನ್. 

ಮಲಯಾಳಂ ವರದಿಗಳ ಪ್ರಕಾರ, ವಧು ಬಹಿಜಾ ಅವರು ತಮ್ಮ ತಂದೆ ಮತ್ತು ವರನೊಂದಿಗೆ ನಿಕಾಹ್‌ನಲ್ಲಿ ಭಾಗವಹಿಸಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಅಂತಹ ನಿರ್ಣಾಯಕ ಕ್ಷಣದಲ್ಲಿ ನನ್ನ ಉಪಸ್ಥಿತಿಯನ್ನು ನಿಷೇಧಿಸುವುದು ನ್ಯಾಯವಲ್ಲ ಎಂದು ಅವಳು ಹೇಳಿದಳು. 

“ಕೆಲವು ವಿಮರ್ಶಾತ್ಮಕ ಕಾಮೆಂಟ್‌ಗಳು, ಈ ಮದುವೆಗೆ ಅನುಮತಿ ನೀಡಿದ ಮಹಲ್ ಸಮಿತಿಯನ್ನು ಪ್ರಶ್ನಿಸಿದರೆ, ಕೆಲವರು ಈ ಕ್ರಮ ಇಸ್ಲಾಮಿಕ್ ಆಗಿದೆಯೇ ಎಂದು ಕೇಳಿದರು. “ಎಲ್ಲರೂ ಮಹಲ್ ಸಮಿತಿಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರಿದರು. ಖಲಿ ಮತ್ತು ಪ್ರಧಾನ ಕಾರ್ಯದರ್ಶಿ ಕ್ಷಮೆಯಾಚಿಸಲು ಕೇಳಲಾಯಿತು,

ಅವರು ತಕ್ಷಣ ಒಪ್ಪಿಕೊಂಡರು. ಅವರು ಯಾವುದೇ ತೊಂದರೆ ತೆಗೆದುಕೊಳ್ಳಲು ಬಯಸಲಿಲ್ಲ. ಕ್ಷಮೆ ಕೇಳಲಾಯಿತು ಮತ್ತು ಅದನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಕೆಟ್ಟದಾಗಿ ಕಾಣುತ್ತದೆ, ಆದರೆ ಅವರು ಒತ್ತಡದಿಂದ ಕ್ಷಮೆ ಕೇಳುವಂತೆ ಮಾಡಲಾಗಿದೆ” ಎಂದು ಫಾಸಿಲ್ ಹೇಳುತ್ತಾರೆ.

ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ನೋಟೀಸ್ ಪ್ರಕಾರ ಎಲ್ಲರನ್ನು ಸಂಪರ್ಕಿಸದೆ ಕಾರ್ಯದರ್ಶಿ ಅನುಮತಿ ನೀಡಿರುವುದು ತಪ್ಪು ಎಂದು ಹೇಳುತ್ತದೆ ಮತ್ತು ಮದುವೆಯಲ್ಲಿ ಮಹಿಳೆಯರು ಛಾಯಾಚಿತ್ರ ತೆಗೆಯುವುದನ್ನು ಟೀಕಿಸಿದ್ದಾರೆ. “ನಾನು ಸಮಿತಿಯನ್ನು ಭೇಟಿ ಮಾಡಿದ್ದೇನೆ. ಇದು ಮಹಿಳೆಯರನ್ನು ಒಳಗೆ ಅನುಮತಿಸುವ ಮಸೀದಿಯಾಗಿದೆ (ಕೆಲವು ಮಸೀದಿಗಳಲ್ಲಿ ಇಲ್ಲ).ವಧು ಇದ್ದಾಗ ಫೋಟೋ ತೆಗೆದದ್ದು ಸಮಸ್ಯೆಯಾದರೆ ಅವರೇ ಹೇಳಬೇಕು. ಇದು ಕತಾರ್, ಸೌದಿ ಮತ್ತು ಇತರ [ಮುಸ್ಲಿಂ] ದೇಶಗಳಲ್ಲಿ ನಡೆಯುತ್ತದೆ. ಹಾಗಾದರೆ ಅವರನ್ನು ಮಾತ್ರ ಕ್ಷಮೆ ಕೇಳಲು ಒತ್ತಾಯಿಸಲು ಕಾರಣವೇನು? ಎಂದು ಎಂದು ಫಾಸಿಲ್ ಹೇಳಿದರು. 

 “ಶಾಹೀನ್ ಬಾಗ್‌ನಲ್ಲಿ ಮಹಿಳೆಯರು ಹಿಜಾಬ್‌ನೊಂದಿಗೆ ಅಥವಾ ಹಿಜಾಬ್ ಇಲ್ಲದೆ ಪ್ರತಿಭಟಿಸಿದಾಗ ಅದು ಮೆಚ್ಚುಗೆಗೆ ಪಾತ್ರವಾಯಿತು. ಇದು ಜಮಾತ್-ಎ-ಇಸ್ಲಾಮಿ ಮಸೀದಿಯಾಗಿದ್ದು, ಇದು ಪ್ರಗತಿಪರ ವಿಚಾರಗಳನ್ನು ಪ್ರಚಾರ ಮಾಡುತ್ತದೆ. ಇದು ಮೊದಲ ಬಾರಿಗೆ ಮಹಲ್ ಸಮಿತಿಗಳಲ್ಲಿ ಮಹಿಳಾ ಸದಸ್ಯರಿಗೆ ಅವಕಾಶ ನೀಡಿದ ಸಂಸ್ಥೆಯಾಗಿದೆ. ಹಾಗಾದರೆ ನಿಕಾಹ್‌ನಲ್ಲಿ ಮಹಿಳೆಯರ ಸೆಲ್ಫಿ ಹೇಗೆ ಸಮಸ್ಯೆಯಾಗುತ್ತದೆ? ಎಂದು ಫಾಸಿಲ್ ಕೇಳುತ್ತಾರೆ.

ವಿಟ್ಲ ನೆಕ್ಕರೆಕಾಡು ಮಾನವ ಅಸ್ಥಿಪಂಜರ ಪತ್ತೆ – ತನ್ನ ತಂದೆ ಎಂದು ಗುರುತುಹಿಡಿದ ಮಗ 

ನಿನ್ನೆ ಪತ್ತೆಯಾದ ಮಾನವ ಅಸ್ಥಿಪಂಜರದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸ್ಥಳದಲ್ಲಿದ್ದ ಅಸ್ಥಿಪಂಜರವನ್ನು ತನ್ನ ತಂದೆಯದೇ ಎಂದು ಅಸ್ಥಿಪಂಜರವೆಂದು ಹೇಳಲ್ಪಟ್ಟಿರುವವರ ಮಗ ಗುರುತುಹಿಡಿದಿದ್ದಾರೆ.

ನಿನ್ನೆ ಪತ್ತೆಯಾಗಿದ್ದ ಅಸ್ಥಿಪಂಜರದ ಸಮೀಪ ಹರಿದ ಬಟ್ಟೆಬರೆಗಳೂ ಗೋಚರಿಸಿತ್ತು. ಈ ಬಟ್ಟೆಗಳ ಆಧಾರದ ಮೇಲೆ ಗುರುತುಹಿಡಿಯಲಾಗಿದೆ ಎಂದು ತಿಳಿದುಬಂದಿದೆ. 

ಉಕ್ಕುಡ ಬಳಿಯ ಕಾನತಡ್ಕ ನಾಗೇಶ ಗೌಡ ಅವರ ಅಸ್ಥಿಪಂಜರವೆಂದು ಅವರ ಮಗ ಗುರುತು ಹಿಡಿದಿದ್ದಾರೆ.

ಜನವರಿ 31ರಂದು ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ನಾಗೇಶ ಗೌಡ ಅವರು ಮನೆಯವರೊಂದಿಗೆ ಜಗಳವಾಡಿ ಕೋಪಿಸಿಕೊಂಡು ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಸಲುವಾಗಿ ವಿಟ್ಲ ಪೊಲೀಸ್ ಠಾಣೆ ಲುಕ್ ಔಟ್ ನೋಟೀಸ್ ಜಾರಿಗೊಳಿಸಿತ್ತು.   

ಸಮೀಪದಲ್ಲಿ ಸಿಕ್ಕಿದ ಬಟ್ಟೆಗಳ ಆಧಾರದ ಮೇಲೆ ಗುರುತುಹಿಡಿದ್ದರೂ  ವ್ಯಕ್ತಿ ಯಾರೆಂದು ದೃಢೀಕರಿಸಲು  ಪೊಲೀಸರಿಗೆ ಈ ಒಂದೇ ಆಧಾರ ಸಾಕಾಗುವುದಿಲ್ಲ. ಶೀಘ್ರವೇ ಎಲುಬುಗಳನ್ನು ವಿಧಿವಿಜ್ಞಾನ ಇಲಾಖೆಗೆ ಪೊಲೀಸರು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾನವನ ಅಸ್ಥಿಪಂಜರ ಎಂದು ವಿಧಿವಿಜ್ಞಾನ ಇಲಾಖೆ  ದೃಢೀಕರಿಸಿದ ಮೇಲೆ ಡಿಎನ್ಎ ಪರೀಕ್ಷೆ ನಡೆಯಬೇಕಾಗುತ್ತದೆ. ನಾಗೇಶ ಗೌಡರ ಮಗನ ಡಿಎನ್ಎ ಮತ್ತು ಮತ್ತು  ವ್ಯಕ್ತಿಯ ಡಿಎನ್ಎ ಹೋಲಿಕೆಯಾದಲ್ಲಿ ಆ ಅಸ್ಥಿಪಂಜರ ನಾಗೇಶ ಗೌಡರದ್ದೇ ಎಂದು ನಿರ್ಧರಿಸಲಾಗುತ್ತದೆ. ಅದಕ್ಕೆ ಸ್ವಲ್ಪ ದಿನಗಳ ಕಾಲಾವಕಾಶ ಬೇಕಾಗುತ್ತದೆ. 

ರಾಜ್ಯ ಮಟ್ಟದ ಅಂತರ್‌ ಕಾಲೇಜು ಸ್ಪರ್ಧೆ: ವಿವೇಕಾನಂದ ಪ.ಪೂ ಕಾಲೇಜಿನ ತಂಡಕ್ಕೆ ಸಮಗ್ರ ಪ್ರಶಸ್ತಿ

ಪುತ್ತೂರು ಅ 9: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಆರೋಹಣ – 2022 ರಾಜ್ಯ ಮಟ್ಟದ ಅಂತರ್‌ ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವ್ಯಾಪಾರ ರಸಪ್ರಶ್ನೆ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವೈಭವ್ ಪ್ರಭು ಮತ್ತು ನಿಹಾರ್‌ ರೈ ತಂಡ ಪ್ರಥಮ ಸ್ಥಾನವನ್ನು ಪಡೆದಿದೆ.

ಹೊಸ ಉತ್ಪನ್ನ ತಯಾರಿ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಗಣಪತಿ ಭಟ್‌ ಮತ್ತು ಇಶಾ ಸುಲೋಚನಾ ತಂಡವು ಪ್ರಥಮ ಸ್ಥಾನವನ್ನು ಪಡೆದಿದೆ.

ಹಾಗೆಯೇ ಕೊಲಾಜ್‌ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಚಿತ್ತಾರ ಪಟೇಲ್ ಮತ್ತು ದ್ವಿತೀಯ ಪಿಯುಸಿ ಕಲಾ ವಿಭಾಗದ ಸುಷ್ಮಿತಾ ಬಿ. ಆರ್.ತಂಡವು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್  ಎಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತೆ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್  ಎಂಜಿನಿಯರಿಂಗ್   ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು  (National Board of Accreditation) ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆಯನ್ನು ನವೀಕರಿಸಿದೆ.

ಈ ಹಿಂದೆ 2009 ರಿಂದ 2022ರ ವರೆಗೆ ರಾಷ್ಟ್ರೀಯ ಮಾನ್ಯತೆ ದೊರಕಿತ್ತು, ಈಗ ಅದನ್ನು ಮೂರು ವರ್ಷಗಳ ಕಾಲಕ್ಕೆ ನವೀಕರಿಸಲಾಗಿದೆ.


ರಾಷ್ಟ್ರೀಯ ಮಾನ್ಯತಾ ಮಂಡಳಿಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ  (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.


ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು  (AICTE) ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ. 


ಮೂರು ಮಂದಿ ತಜ್ಞರನ್ನೊಳಗೊಂಡ ರಾಷ್ಟ್ರೀಯ ಮಾನ್ಯತಾ ಮಂಡಳಿಯ ತಂಡವು ಜೂನ್ 4 ರಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮೂರು ವರ್ಷಗಳ ಅವಧಿಗೆ ಅಂದರೆ 30.6.2025 ರವರೆಗೆ ಮಾನ್ಯತೆಯನ್ನು ನವೀಕರಿಸಿ ಆದೇಶವನ್ನು ನೀಡಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗಗಳ ಮಾನ್ಯತೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ತಜ್ಞರ ತಂಡವು ಪರಿಶೀಲನೆಗಾಗಿ ಕಾಲೇಜಿಗೆ ಭೇಟಿ ನೀಡಲಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

ಸೀರೆಯಲ್ಲಿ ಉಯ್ಯಾಲೆಯಾಡುತ್ತಿರುವಾಗ ಕೊರಳಿಗೆ ಸೀರೆ ಸುತ್ತಿ  ಬಾಲಕಿಯ  ಸಾವು – ಅನಂತಾಡಿ ಗ್ರಾಮದಲ್ಲೊಂದು ಹೃದಯವಿದ್ರಾವಕ ಘಟನೆ 

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಂಜದಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾನು ಆಡುತ್ತಿದ್ದ ಉಯ್ಯಾಲೆಗೆ ಸೀರೆಯು ಆಕಸ್ಮಾತಾಗಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾಳೆ.

ಮೃತ ಬಾಲಕಿ ಬಂಟ್ರಂಜ ನಿವಾಸಿ ಶೇಖರ್ ಎಂಬವರ ಪುತ್ರಿ ಲಿಖಿತಾ ಎಂದು ತಿಳಿದುಬಂದಿದೆ. ಆಕೆಯು ಬಾಬನಕಟ್ಟೆ ಶಾಲೆಯಲ್ಲಿ ಆರನೇ ತರಗತಿ ಕಲಿಯುತ್ತಿದ್ದ ಹುಡುಗಿ.

ಆಕೆಯ ಹಾಗೂ ಮನೆಯವರ ಪಾಲಿಗೆ ಕೆಟ್ಟ ದಿನವಾಗಿದ್ದ ನಿನ್ನೆ ಲಿಖಿತಾ ಮನೆಯಲ್ಲಿಯೇ ಇದ್ದಳು. ಆಕೆಯ ತಂದೆ ಶೇಖರ್ ತನ್ನ ಪತ್ನಿ ಚಂದ್ರಾವತಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಅವಳು ಉಯ್ಯಾಲೆಯಲ್ಲಿ ಆಡುತ್ತಿದ್ದಳು.

ಆಕೆಯ ತಾಯಿ ಚಂದ್ರಾವತಿ ಹಿಂತಿರುಗಿ ಬಂದಾಗ ಮಗಳು ಸೀರೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಜೋರಾಗಿ ಕಿರುಚಿದಳು. ಆಕೆಯ ಕೂಗಿನಿಂದ ಗಾಬರಿಗೊಂಡ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯ ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಸೀರೆಯನ್ನು ಬಿಡಿಸಿದರು.

ಆದರೆ, ಲಿಖಿತಾ ಅದಾಗಲೇ ಮೃತಪಟ್ಟಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.