ತಮ್ಮ ಮನೆಯ ಹೊರಗಡೆ ಮಂಚ ಹಾಕಿ ಮಲಗಿದ್ದ ಮಹಿಳೆಯೊಬ್ಬರು ನಾಗರಹಾವು ಕಡಿತದಿಂದ ಪಾರಾಗಿದ್ದಾರೆ. ಅವಳ ಮೇಲೆ ಹತ್ತಿದ ನಾಗರಹಾವು ಸ್ವಲ್ಪ ಹೊತ್ತು ದೇಹದ ಮೇಲೆ ಹೆಡೆಯೆತ್ತಿ ನಿಂತು ಆಮೇಲೆ ಹೊರಟುಹೋಯಿತು.
ಕರ್ನಾಟಕದ ಕಲಬುರಿಗಿ ಜಿಲ್ಲೆಯ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ವೈರಲ್ ಆಗಿದೆ.
ಮನೆಯ ಹೊರಗಡೆ ಕೃಷಿಭೂಮಿಯಲ್ಲಿ ಹಾಕಿದ್ದ ಹಾಸಿಗೆಯ ಮೇಲೆ ಮಹಿಳೆ ಮಲಗಿದ್ದಾಗ ನಾಗರ ಹಾವು ಆಕೆಯ ಮೇಲೆ ಹತ್ತಿ ಹೆಡೆಯೆತ್ತಿ ನೋಡುತ್ತಿತ್ತು.. ಹಾವಿನ ಚಲನವಲನದಿಂದ ಎಚ್ಚೆತ್ತುಕೊಂಡ ಮಹಿಳೆ ಮಲಗಿದ್ದ ನಾಗನನ್ನು ಕಂಡು ಕದಲದೆ ಸುಮ್ಮನಾದರು.
ತನ್ನನ್ನು ಈ ಅಪಾಯದಿಂದ ಪಾರು ಮಾಡುವಂತೆ ದೇವರಲ್ಲಿ ಬೇಡಿಕೊಂಡಳು. ಮಹಿಳೆ ಬೊಬ್ಬೆ ಹೊಡೆಯುತ್ತಿರುವುದನ್ನು ಕಂಡ ಗಂಡ ಮತ್ತು ಮಕ್ಕಳು ಬೊಬ್ಬೆ ಹೊಡೆದು ಹಾವನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಇದರಿಂದ ವಿಚಲಿತಗೊಂಡ ನಾಗರಹಾವು ಹೆಡೆಯೆತ್ತಿ ಬುಸುಗುಡುತ್ತಿತ್ತು.
ಗಂಡ ಮತ್ತು ಮಕ್ಕಳು ಮನೆಯೊಳಗೆ ಮರೆಯಾದ ಮೇಲೆ ಹಾವು ಅದರ ಪಾಡಿಗೆ ಹೊರತು ಹೋಯಿತು. ಸ್ವಲ್ಪ ಹೊತ್ತಿನವರೆಗೆ ಹಾಸಿಗೆಯ ಮೇಲೆ ಮಲಗಿದ್ದ ಹಾವು ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೊರಟು ಹೋಗಿದೆ.
A king cobra ascending on body of woman in Mallabad, vijayapura, karnataka Snake moved away after half an hour…. pic.twitter.com/rO9PBiGnmx
ಪುತ್ತೂರು,ಅ 29: ಆಲಂಕಾರಿನ ಶ್ರೀಭಾರತಿ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಕಾಂಕ್ಷ್ ಕೆ, ಅಮೃತಾನಂದ ಜೆ ಪೆರಾಜೆ, ವಾಣಿಜ್ಯ ವಿಭಾಗದ ಶ್ರೇಯಸ್, ಗಗನ್, ಕಲಾ ವಿಭಾಗದ ರಿತೇಶ್, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಮಿಥನ್, ವಾಣಿಜ್ಯ ವಿಭಾಗದ ವಿನೀತ್, ಮೋಕ್ಷಿತ್, ಶರತ್, ಕೌಶಿಕ್, ಕೀರ್ತನ್ ಪಿ ಭಾಗವಹಿಸಿದ್ದರು.
ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸ್ಫೂರ್ತಿ ಕೆ. ಆರ್, ಫಾತಿಮತ್ ಅನೀಶ, ವಾಣಿಜ್ಯ ವಿಭಾಗದ ಧನುಷ, ಸಾತ್ವಿ, ಕಲಾ ವಿಭಾಗದ ಕುಸುಮ ಸಿ. ಎಂ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ತೃಪ್ತಿ ಜಿ ಆರ್, ಪುಣ್ಯಶ್ರೀ, ವಾಣಿಜ್ಯ ವಿಭಾಗದ ಶ್ರೇಯ, ವರ್ಷಿಣಿ, ದಿವ್ಯ ಎನ್ ಶೆಟ್ಟಿ, ಮನ್ಯ ಶೆಟ್ಟಿ, ಕಲಾ ವಿಭಾಗದ ಕೀರ್ತಿಲತಾ ಬಿ ಸಿ,ಅನನ್ಯ ಜಿ.ಕೆ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಜಯ ಗಳಿಸಿದೆ.
ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದು ಅಜೇಯ 33 ರನ್ ಗಳಿಸಿ ಅಮೋಘ ಪ್ರದರ್ಶನ ನೀಡುವ ಮೂಲಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸುವಲ್ಲಿ ನೆರವು ನೀಡಿದರು.
ಸ್ಕೋರ್ ಪಟ್ಟಿ
ಪಾಕಿಸ್ತಾನ 147-10 (19.5)
ಮೊಹಮ್ಮದ್ ರಿಜ್ವಾನ್ ಸಿ ಖಾನ್ ಬಿ ಹಾರ್ದಿಕ್ 43
*ಬಾಬರ್ ಆಜಮ್ ಸಿ ಸಿಂಗ್ ಬಿ ಭುವನೇಶ್ವರ್ 10
ಫಖರ್ ಜಮಾನ್ ಸಿ ಕಾರ್ತಿಕ್ ಬಿ ಖಾನ್ 10
ಇಫ್ತಿಕರ್ ಅಹ್ಮದ್ ಸಿ ಕಾರ್ತಿಕ್ ಬಿ ಹಾರ್ದಿಕ್ 28
ಖುಷ್ದಿಲ್ ಶಾ ಸಿ ಜಡೇಜಾ ಬಿ ಹಾರ್ದಿಕ್ 2
ಶಾದಾಬ್ ಖಾನ್ lbw b ಭುವನೇಶ್ವರ್ 10
ಆಸಿಫ್ ಅಲಿ ಸಿ ಯಾದವ್ ಬಿ ಭುವನೇಶ್ವರ್ 9
ಮೊಹಮ್ಮದ್ ನವಾಜ್ ಸಿ ಕಾರ್ತಿಕ್ ಬಿ ಸಿಂಗ್ 1
ಹ್ಯಾರಿಸ್ ರೌಫ್ ಔಟಾಗದೆ 13
ನಸೀಮ್ ಶಾ lbw b ಭುವನೇಶ್ವರ್ 0
ಶಾನವಾಜ್ ದಹಾನಿ ಬಿ ಸಿಂಗ್ 16
ಭಾರತ 148-5 (19.4) *ರೋಹಿತ್ ಶರ್ಮಾ ಸಿ ಅಹ್ಮದ್ ಬಿ ನವಾಜ್ 12
3,700 ಕೆಜಿ ಸ್ಫೋಟಕಗಳನ್ನು ಬಳಸಿದ ನಂತರ ನೋಯ್ಡಾ ಅವಳಿ ಗೋಪುರಗಳುನ್ನು ಧ್ವಂಸಗೊಳಿಸಲಾಗಿದೆ. ಕುತುಬ್ ಮಿನಾರ್‌ಗಿಂತ ಎತ್ತರವಾಗಿದ್ದ ನೋಯ್ಡಾ ಸೂಪರ್‌ಟೆಕ್ ಅವಳಿ ಗೋಪುರಗಳು ಶಿಲಾಖಂಡರಾಶಿಗಳಾಗಿ ಕುಸಿದಿವೆ.
ಕೆಡವುವಿಕೆ ಪ್ರಕ್ರಿಯೆಯ ಪ್ರಾರಂಭವನ್ನು ಸೂಚಿಸಲು ಎಚ್ಚರಿಕೆಯ ಸೈರನ್ ಅನ್ನು ಅಳವಡಿಸಲಾಗಿತ್ತು. ಅವಳಿ ಗೋಪುರ ಧ್ವಂಸ ಪ್ರಕ್ರಿಯೆಯ ನಂತರ ನೋಯ್ಡಾ ಶುಚಿಗೊಳಿಸಲಾಗುತ್ತಿದೆ, ಪ್ರದೇಶದಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗುವುದು ಮತ್ತು ಸಂಜೆ 6.30 ರ ನಂತರ ನೆರೆಹೊರೆಯ ಸೊಸೈಟಿಗಳಿಗೆ ಜನರನ್ನು ಪ್ರವೇಶಿಸಲು ಅನುಮತಿಸಲಾಗುವುದು.
ಡೆಮಾಲಿಷನ್ ಸೈಟ್ ಹತ್ತಿರವಿರುವ ಪ್ರದೇಶದಲ್ಲಿ ಅಳವಡಿಸಲಾಗಿರುವ ಧೂಳನ್ನು ಕೆಳಗೆ ತರಲು ಗಾಳಿಯಲ್ಲಿ ನೀರಿನ ಹನಿಗಳನ್ನು ಸಿಂಪಡಿಸಲು ಆಂಟಿ-ಸ್ಮಾಗ್ ಗನ್ ಉಪಯೋಗಿಸಲಾಗಿದೆ.
“ನಾನು ಕಟ್ಟಡದಿಂದ ಕೇವಲ 70 ಮೀಟರ್ ದೂರದಲ್ಲಿದ್ದೆ. ಆಡಳಿತವು 100% ಯಶಸ್ವಿಯಾಗಿದೆ. ಇಡೀ ಕಟ್ಟಡವನ್ನು ಕೆಡವಲು 9-10 ಸೆಕೆಂಡುಗಳನ್ನು ತೆಗೆದುಕೊಂಡಿತು. ನನ್ನ ತಂಡದಲ್ಲಿ 10 ಜನರು, 7 ವಿದೇಶಿ ತಜ್ಞರು ಮತ್ತು ಎಡಿಫೈಸ್ ಎಂಜಿನಿಯರಿಂಗ್‌ನಿಂದ 20-25 ಜನರು ಇದ್ದರು” ಎಂದು ಚೇತನ್ ದತ್ತಾ, ಎಡಿಫೈಸ್ ಅಧಿಕಾರಿ ಹೇಳಿದರು.
ಎಲ್ಲಾ ತರದ ಪಾತ್ರಗಳನ್ನು ಯಕ್ಷಗಾನದಲ್ಲಿ ನಿರ್ವಹಿಸಬಲ್ಲವರು ಮೇಳಕ್ಕೆ, ತಂಡಕ್ಕೆ ಆಸ್ತಿಯಾಗಬಲ್ಲರು. ವೇಷ ಹಂಚಿಕೆಯಲ್ಲಿ ಭಾಗವತರ ಹೊಣೆಯನ್ನು ಇವರು ಹಗುರಗೊಳಿಸುತ್ತಾರೆ. ಪ್ರಸಂಗವನ್ನು ಮುನ್ನಡೆಸುವುದಕ್ಕೆ ಇವರು ಆಪದ್ಬಾಂಧವರಾಗಿ ಒದಗುತ್ತಾರೆ. ಕೆಲವೊಂದು ಬಾರಿ ಕಲಾವಿದನಿಗೆ ಇದರಿಂದ ತೊಡಕೂ ಉಂಟಾಗಬಹುದು. ತಂಡದಲ್ಲಿ ಸರಿಯಾದ ಸ್ಥಾನವು ನಿರ್ಣಯವಾಗದೆ ತೊಳಲಾಡುವ ಸಂಭವವೂ ಉಂಟಾದೀತು. ಆದರೂ ಇಂತಹಾ ಕಲಾವಿದರು ತಂಡಕ್ಕೆ ಅನಿವಾರ್ಯ. ಕಲಾಭಿಮಾನಿಗಳು ಇವರನ್ನು ಗುರುತಿಸಿಯೇ ಗುರುತಿಸುತ್ತಾರೆ.
ಇಂತಹಾ ಅನೇಕ ಆಲ್ ರೌಂಡರ್ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಹೊಳೆದು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿ ತಂಡಕ್ಕೆ ಬೇಕೇ ಬೇಕು ಎಂದು ಹೇಳಿಕೊಳ್ಳುವ ಅನೇಕ ಕಲಾವಿದರನ್ನು ನಾವು ಗುರುತಿಸಬಹುದು. ಶ್ರೀ ಮೋಹನ ಬೆಳ್ಳಿಪ್ಪಾಡಿ ಅಂತಹ ಸಾಮರ್ಥ್ಯವನ್ನು ಹೊಂದಿದ ಕಲಾವಿದರು.
ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ನೇಪಥ್ಯದಲ್ಲಿ ಇವರಿಗೆ ಮಾತು ಕಡಿಮೆ. ರಂಗದಲ್ಲಿ ಪಾತ್ರೋಚಿತವಾದ ಮಾತು ಮತ್ತು ಕುಣಿತಗಳಿಂದ ಪ್ರದರ್ಶನದ ರಂಜನೆಗೆ ಕಾರಣರಾಗುತ್ತಾರೆ. ನೇಪಥ್ಯದಲ್ಲಿ ಇವರ ಮೌನವೂ ಮಾತೇ ಆಗುತ್ತದೆ. ಅದರಲ್ಲೊಂದು ಸಂದೇಶವೂ ಇದೆ. ನೇಪಥ್ಯದಲ್ಲಿ ಕಲಾವಿದರು ಹೇಗಿರಬೇಕು ಎಂಬುದಕ್ಕೆ ಮೋಹನ ಬೆಳ್ಳಿಪ್ಪಾಡಿಯವರನ್ನು ನೋಡಿದರೆ ಸಾಕು. ಕಿರಿಯ ಅಭ್ಯಾಸಿಗಳಿಗೆ (ಎಲ್ಲಾ ಕಲಾವಿದರು) ತಾವು ಹೇಗಿರಬೇಕೆಂಬುದನ್ನು ತಮ್ಮ ಮೌನ ಎಂಬ ಮಾತಿನಿಂದಲೇ ಇವರು ಸೂಚಿಸುತ್ತಾರೆ. ಹಾಗೆಂದು ಇವರು ಮಾತನಾಡದೆ ಮೂಕರಾಗಿ ಇರುತ್ತಾರೆಂದು ಅರ್ಥವಲ್ಲ. ಇವರು ವಿನೋದ ಪ್ರಿಯರೂ ಹೌದು.
ಶಿಸ್ತಿನ ಅತ್ಯುತ್ತಮ ಕಲಾವಿದರಿವರು. ತಮಗೆ ನೀಡಿದ ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಪಾತ್ರೋಚಿತವಾಗಿ ಹಿತಮಿತವಾದ ಕುಣಿತ, ಮಾತುಗಳಿಂದ ಪ್ರಸಂಗದ ರಂಜನೆಗೆ ಕಾರಣರಾಗುತ್ತಾರೆ. ಯಾವುದೇ ಸಮಸ್ಯೆಗೆ ಸಿಲುಕದೆ, ತಂಡದ ಭಾರವನ್ನು ಹಗುರಗೊಳಿಸುವ ಕಲಾವಿದರಲ್ಲಿ ಇವರೂ ಒಬ್ಬರು.
ಶ್ರೀ ಮೋಹನ ಅವರ ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ನಡುಬೈಲು ಎಂಬಲ್ಲಿ. 1982ನೇ ಇಸವಿ ಫೆಬ್ರವರಿ 10ರಂದು ಶ್ರೀ ಕೃಷ್ಣಪ್ಪ ಪೂಜಾರಿ ಮತ್ತು ಶ್ರೀಮತಿ ಚೆನ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಮನೆಯವರೆಲ್ಲರೂ ಕಲಾಸಕ್ತರು ಮತ್ತು ಕೃಷಿಕರು. ಮೋಹನ ಬೆಳ್ಳಿಪ್ಪಾಡಿ ಅವರ ಅಣ್ಣಂದಿರಾದ ಶ್ರೀ ಬಾಲಕೃಷ್ಣ ಬೆಳ್ಳಿಪ್ಪಾಡಿ ಮತ್ತು ಶ್ರೀ ವೀರಪ್ಪ ಬೆಳ್ಳಿಪ್ಪಾಡಿ ಅವರು ಹವ್ಯಾಸೀ ವೇಷಧಾರಿಗಳು.
ಶ್ರೀ ಮೋಹನ ಅವರು ಓದಿದ್ದು ಪಿಯುಸಿ ವರೆಗೆ. 7ನೇ ತರಗತಿ ವರೆಗೆ ಪಂಜಿಕಲ್ಲು ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಜಾಲ್ಸೂರಿನ ಪಯಸ್ವಿನಿ ಹೈಸ್ಕೂಲಿನಲ್ಲಿ. ಪಿಯುಸಿ ಶಿಕ್ಷಣ ಸುಳ್ಯ ಸರಕಾರೀ ಕಾಲೇಜಿನಲ್ಲಿ. ಇವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ಅಣ್ಣಂದಿರು ಕುಣಿಯುವಾಗ ನೋಡಿಯೇ ಹೆಜ್ಜೆಗಾರಿಕೆಯನ್ನು ಗ್ರಹಿಸುತ್ತಿದ್ದರು. ಬಳಿಕ ಬೆಳ್ಳಿಪ್ಪಾಡಿ ಬರೆಮನೆ ವೆಂಕಪ್ಪ ಗೌಡರಿಂದ ನಾಟ್ಯ ಕಲಿತರು. ಶ್ರೀ ವೆಂಕಪ್ಪ ಗೌಡರು ಮೋಹನ ಅವರ ಅಣ್ಣಂದಿರಿಗೂ ನಾಟ್ಯ ಹೇಳಿಕೊಟ್ಟ ಗುರುಗಳು. ಇವರು ಹವ್ಯಾಸೀ ಉತ್ತಮ ಕಲಾವಿದರು.
ಮೋಹನ ಅವರು ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ್ದು 4ನೇ ತರಗತಿಯಲ್ಲಿ ಓದುತ್ತಿರುವಾಗ. ಶಾಲಾ ವಾರ್ಷಿಕೋತ್ಸವದ ಪ್ರದರ್ಶನ, ಭೀಮಶಂಕರ ಮಹಿಮೆ ಪ್ರಸಂಗದಲ್ಲಿ ದೇವತೆಯಾಗಿ (ದೇವೇಂದ್ರನ ಬಲ) ರಂಗಪ್ರವೇಶ. ಬಳಿಕ ಸತತ ಅಭ್ಯಾಸ ಮಾಡುತ್ತಾ ವೇಷಗಳನ್ನು ಮಾಡುತ್ತಿದ್ದರು. ಮದ್ದಳೆಗಾರ ಶ್ರೀ ಅಡೂರು ಮೋಹನ ಸರಳಾಯರ ಮೂಲಕ ಶ್ರೀ ಚಂದ್ರಶೇಖರ ದಾಮ್ಲೆ ಅವರ ಪರಿಚಯವೂ ಆಗಿತ್ತು. ಶ್ರೀಯುತರ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸುಳ್ಯ ಈ ತಂಡದ ಚಿಣ್ಣರಿಗೆ ಸಬ್ಬಣಕೋಡಿ ಶ್ರೀ ರಾಮ ಭಟ್ಟರು ನಾಟ್ಯ ತರಬೇತಿ ನಡೆಸುತ್ತಿದ್ದರು. ಶ್ರೀ ಮೋಹನ ಅವರೂ ಅಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.
ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು. 8ನೇ ಕ್ಲಾಸಿನಿಂದಲೇ ಯಕ್ಷಗಾನಾಸಕ್ತಿಯು ತೀವ್ರವಾಗಿ ಮೇಳದ ಕಲಾವಿದನಾಗಬೇಕೆಂಬ ಆಸೆಯು ಹೆಚ್ಚತೊಡಗಿತ್ತು. ಇದಕ್ಕೆ ಅವಕಾಶವೂ ಒದಗಿತ್ತು. ತೆಂಕುತಿಟ್ಟಿನ ಖ್ಯಾತ ಕಲಾವಿದ ಕೇದಗಡಿ ಶ್ರೀ ಗುಡ್ಡಪ್ಪ ಗೌಡರ ಮನೆ ಶ್ರೀ ಮೋಹನ ಅವರ ಮನೆಯ ಹತ್ತಿರವೇ ಆಗಿತ್ತು. ಅವರೊಡನೆ ಮಾತನಾಡಿ ಅವರ ಹೇಳಿಕೆಯಂತೆ ಮೋಹನ ಬೆಳ್ಳಿಪ್ಪಾಡಿ ಅವರು ಕಟೀಲು ಮೇಳಕ್ಕೆ ಸೇರಿದ್ದರು.
ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರು ತಿರುಗಾಟ ಆರಂಭಿಸಿದ್ದು 2000ನೇ ಇಸವಿ ನವೆಂಬರ್ ತಿಂಗಳಲ್ಲಿ. ಕಟೀಲು 2ನೇ ಮೇಳದಲ್ಲಿ. ಬಲಿಪ ನಾರಾಯಣ ಭಾಗವತ, ಪೆರುವಾಯಿ ನಾರಾಯಣ ಭಟ್, ಪ್ರಸಾದ್ ಬಲಿಪ, ಪೆರುವಾಯಿ ನಾರಾಯಣ ಶೆಟ್ಟಿ, ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಸುಬ್ರಾಯ, ಅಜೆಕಾರು ರಾಜೀವ ಶೆಟ್ಟಿ, ಪಂಜಾಜೆ ಶ್ರೀಧರ, ಬಾಯಾರು ರಮೇಶ್ ಭಟ್, ಮಹೇಶ ಮಣಿಯಾಣಿ ಅವರ ಸಹಕಾರವೂ ಸಿಕ್ಕಿತ್ತು.
ಮೊದಲ 2 ವರ್ಷ ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ತಮ್ಮ ಪಾಲಿಗೆ ಬಂದ ಸಣ್ಣ ಪಾತ್ರಗಳನ್ನು ಮಾಡಿ ಬೆಳೆಯುತ್ತಾ ಸಾಗಿದರು. 5 ತಿರುಗಾಟ ನಡೆಸಿ 2ನೇ ಪುಂಡುವೇಷಗಳನ್ನು ಮಾಡುವಷ್ಟು ಬೆಳೆದಿದ್ದರು. 2ನೇ ಮೇಳದಲ್ಲಿ ಹನ್ನೆರಡು ವರ್ಷಗಳ ವ್ಯವಸಾಯ ಮಾಡಿದ್ದರು. ಬಳಿಕ 5ನೇ ಮೇಳಕ್ಕೆ. ಅಲ್ಲಿ ಪಟ್ಲ ಸತೀಶ ಶೆಟ್ರ ಭಾಗವತಿಕೆ. ಅವರ ಪ್ರೋತ್ಸಾಹವೂ ದೊರೆತಿತ್ತು. ಅಮ್ಮುಂಜೆ ಮೋಹನ ಅವರೊಂದಿಗೆ ಹಲವು ಜತೆವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕಿರೀಟ ವೇಷಗಳನ್ನೂ ಮಾಡುವಂತಾಗಿತ್ತು. 5ನೇ ಮೇಳದಲ್ಲಿ ಒಟ್ಟು 9 ವರ್ಷ. ಇದರಲ್ಲಿ 2 ವರ್ಷ ಪದ್ಯಾಣ ಗೋವಿಂದ ಭಟ್ ಭಾಗವತಿಕೆಯಡಿಯಲ್ಲಿ.
ಸುಣ್ಣಂಬಳ ವಿಶ್ವೇಶ್ವರ ಭಟ್ಟರೊಂದಿಗೆ ಕಲಾ ಸೇವೆ ಮಾಡುವ ಅವಕಾಶವೂ ಈ ಸಂದರ್ಭದಲ್ಲಿ ಒದಗಿತ್ತು. ಕಳೆದ 2 ವರ್ಷದಿಂದ ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇಲ್ಲಿ ಒಡನಾಡೀ ಕಲಾವಿದರೆಲ್ಲರ ಸಹಕಾರ ಇವರಿಗೆ ಸಿಕ್ಕಿದೆ. ಪುಂಡುವೇಷ ಮತ್ತು ಕಿರೀಟ ವೇಷಕ್ಕೆ ಸಂಬಂಧಿಸಿದ ಹೆಚ್ಚಿನ ಪಾತ್ರಗಳನ್ನೂ ಇವರು ನಿರ್ವಹಿಸಿದ್ದಾರೆ. ಕೆಲವಾರು ಕಡೆ ಸನ್ಮಾನ, ಗೌರವಗಳನ್ನೂ ಸ್ವೀಕರಿಸಿರುತ್ತಾರೆ.
ಮಳೆಗಾಲದಲ್ಲೂ ಮೋಹನ ಬೆಳ್ಳಿಪ್ಪಾಡಿಯವರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಶ್ರೀಮತಿ ವಿದ್ಯಾ ಕೋಳ್ಯೂರು ಅವರ ಯಕ್ಷ ಮಂಜೂಷ ತಂಡದ ಸದಸ್ಯನಾಗಿ ಉತ್ತರ ಭಾರತದ ಹಲವೆಡೆ ಮತ್ತು ಅಮೆರಿಕಾ ಹಾಗೂ ಲಂಡನ್ ನಗರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಪುತ್ತೂರು ಶ್ರೀಧರ ಭಂಡಾರಿ ಅವರ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ 3 ವರ್ಷ ಭಾಗವಹಿಸಿದ್ದಾರೆ. ಪ್ರಸ್ತುತ ಈ ತಂಡವನ್ನು ಮುನ್ನಡೆಸುತ್ತಿರುವ ಚಂದ್ರಶೇಖರ ಧರ್ಮಸ್ಥಳ ಅವರೊಂದಿಗೆ ಈ ವರ್ಷದ ಮಳೆಗಾಲದ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದಾರೆ. ಶ್ರೀ ದೇವಾನಂದ ಭಟ್ ಬೆಳುವಾಯಿ ಅವರ ಯಕ್ಷದೇವ ಬೆಳುವಾಯಿ ತಂಡದ ಸದಸ್ಯನಾಗಿ ಅಮೆರಿಕಾ ಯಾತ್ರೆ ಕೈಗೊಂಡಿದ್ದಾರೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರ ಜತೆ ಎರಡು ಬಾರಿ ಅಮೆರಿಕಾ ಯಾತ್ರೆ ಕೈಗೊಂಡಿದ್ದಾರೆ.
ಶ್ರೀ ಮೋಹನ ಬೆಳ್ಳಿಪ್ಪಾಡಿ ಅವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರು ಗೃಹಣಿ. ಮೋಹನ ಬೆಳ್ಳಿಪ್ಪಾಡಿ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರ ಮನೋಕಾಮನೆಗಳನ್ನು ಅನುಗ್ರಹಿಸಲಿ ಎಂದು ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.
ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ)ದೇವಿ ನಗರ ಇವರಿಂದ, ಸಾರ್ವಜನಿಕ ಶ್ರೀ ಗಣೇಶೋತ್ಸವ (ರಜತ ಮಹೋತ್ಸವ) ದ ಅಂಗವಾಗಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 31.08.2022ರಿಂದ 02.09.2022ರ ವರೆಗೆ ವೈಭವದಲ್ಲಿ ನಡೆಯಲಿದೆ.
ದಿನಾಂಕ 01.09.2022 ನೇ ಗುರುವಾರ ರಾತ್ರಿ ಘಂಟೆ 9.30ರಿಂದ ಸಾಲಿಗ್ರಾಮ ಮೇಳದವರಿಂದ ‘ಚಂದ್ರಮುಖಿ ಸೂರ್ಯಸಖಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸರ್ವರಿಗೂ ಸವಿನಯ ಆಮಂತ್ರಣವನ್ನು ಕೋರಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ)ದೇವಿ ನಗರ ಪದವಿನಂಗಡಿ, ಇವರಿಗೆ ಈ ಬಾರಿ 25ನೇ ವರುಷದ ಸಾರ್ವಜನಿಕ ಗಣೇಶೋತ್ಸವದ ಬೆಳ್ಳಿ ಹಬ್ಬ (ರಜತ ಮಹೋತ್ಸವ)ದ ಸಂಭ್ರಮ.
ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ)ದೇವಿ ನಗರ ಇವರಿಂದ, ಸಾರ್ವಜನಿಕ ಶ್ರೀ ಗಣೇಶೋತ್ಸವ (ರಜತ ಮಹೋತ್ಸವ) ದ ಅಂಗವಾಗಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 31.08.2022ರಿಂದ 02.09.2022ರ ವರೆಗೆ ವೈಭವದಲ್ಲಿ ನಡೆಯಲಿದೆ.
ರಜತ ಮಹೋತ್ಸವ ಸಂಭ್ರಮದ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ 24 ತೆಂಗಿನಕಾಯಿ ಮಹಾಗಣಪತಿ ಯಾಗ, ಶ್ರೀ ಲಕ್ಷ್ಮೀ ಮಹಾಗಣಪತಿ ಯಾಗ, ಶ್ರೀ ವಿದ್ಯಾಗಣಪತಿ ಮಹಾಯಾಗ, ಪೂರ್ಣಾಹುತಿ, ಮಹಾ ರಂಗಪೂಜೆ, ಮೂಡಪ್ಪ ಸೇವೆ, ಅಷ್ಟಾವಧಾನ ಸೇವೆ, ಮಹಾಪೂಜೆ, ಮಹಾಅನ್ನಸಂತರ್ಪಣೆ, ಮಹಾಗಣಪತಿ ವಿಸರ್ಜನೆ, ವಿವಿಧ ಧಾರ್ಮಿಕ ಸಾಂಸ್ಕೃತಿಕ ವಿಧಿ ವಿಧಾನಗಳನ್ನೊಳಗೊಂಡ ಕಾರ್ಯಕ್ರಮಗಳು ಈ ಮೂರುದಿನಗಳಲ್ಲಿ ನಡೆಯಲಿವೆ.
ದಿನಾಂಕ 01.09.2022 ನೇ ಗುರುವಾರ ರಾತ್ರಿ ಘಂಟೆ 9.30ರಿಂದ ಸಾಲಿಗ್ರಾಮ ಮೇಳದವರಿಂದ ‘ಚಂದ್ರಮುಖಿ ಸೂರ್ಯಸಖಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸರ್ವರಿಗೂ ಸವಿನಯ ಆಮಂತ್ರಣವನ್ನು ಕೋರಿದ್ದಾರೆ.
ಮಂಗಳೂರಿನ ಮಾರಿಗುಡಿ ದೇವಸ್ಥಾನದ ಅರ್ಚಕರ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 12 ವರ್ಷಗಳಿಂದ ನಗರದ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿರುವ, ಭಟ್ಕಳ ತಾಲೂಕಿನ ನಿವಾಸಿ ವ್ಯಕ್ತಿಯೋರ್ವರ ಪತ್ನಿ ಪ್ರೇಮಾ (20) ನಾಪತ್ತೆಯಾಗಿರುವ ಮಹಿಳೆ.
ಎಂದಿನಂತೆ ಸಂಜೆಯ ಹೊತ್ತಿಗೆ ದೇವಸ್ಥಾನದ ಪೂಜೆ ಮುಗಿಸಿ ಮನೆಗೆ ಹೋದಾಗ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ಮಂಗಳೂರು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ 5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಮತ್ತು ಕಾಣೆಯಾಗುವ ದಿನ ಬಿಳಿ ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರು ಮತ್ತು ಕನ್ನಡಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಹೊಸದಿಲ್ಲಿಯ ನೋಯ್ಡಾದ ಸೂಪರ್ ಟೆಕ್ ಅವಳಿ ಗೋಪುರಗಳನ್ನು ಕೆಡವಲು ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.30 ಘಂಟೆಗೆ ಗೋಪುರಗಳನ್ನು ಕೆಡವಲಾಗುತ್ತದೆ. ಅಷ್ಟಕ್ಕೂ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಏಕೆ ಕೆಡವಲಾಗುತ್ತಿದೆ ಎಂಬುದು ಗೊತ್ತೇ? ಕಾರಣ ಇಲ್ಲಿದೆ. ಕೆಡವುವ ಪ್ರಕ್ರಿಯೆ, ಸುರಕ್ಷತಾ ಮುನ್ನೆಚ್ಚರಿಕೆಗಳು ಮತ್ತು ಏಕೆ ಕೆಡವಲಾಗುತ್ತಿದೆ ಎಂಬುದರ ಕುರಿತು ಎಲ್ಲವನ್ನೂ ತಿಳಿದುಕೊಳ್ಳೋಣ.
ಹೊಸದಿಲ್ಲಿಯ ನೋಯ್ಡಾದಲ್ಲಿ ಸೂಪರ್‌ಟೆಕ್‌ನ ಅಕ್ರಮ ಅವಳಿ ಗೋಪುರಗಳನ್ನು ಆಗಸ್ಟ್ 28 ರಂದು ನೆಲಸಮಗೊಳಿಸಲಾಗುವುದು ಮತ್ತು ಸುಮಾರು 3,700 ಕೆಜಿ ಸ್ಫೋಟಕಗಳನ್ನು ಉಪಯೋಗಿಸಲಾಗುವುದು. ದೆಹಲಿಯ ಕುತುಬ್ ಮಿನಾರ್‌ಗಿಂತ ಎತ್ತರದ ಗೋಪುರಗಳಾದ ಇವುಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದೇಶದ ಮೇರೆಗೆ ಬಿಲ್ಡರ್‌ಗಳು ತಮ್ಮ ಸ್ವಂತ ಖರ್ಚಿನಲ್ಲಿ 40 ಅಂತಸ್ತಿನ ಅವಳಿ ಗೋಪುರಗಳನ್ನು ಕೆಡವಲಿದ್ದಾರೆ.
ಆದರೆ ಮಹತ್ವಾಕಾಂಕ್ಷೆಯ ಸೂಪರ್‌ಟೆಕ್ ಅವಳಿ ಗೋಪುರಗಳ ಉರುಳಿಸುವಿಕೆಗೆ ಕಾರಣವೇನು?
ಅವಳಿ ಗೋಪುರಗಳು ಸುಪ್ರೀಂ ಕೋರ್ಟ್ ಗಮನಿಸಿದಂತೆ ಹಲವಾರು ಕಟ್ಟಡ ಸಂಹಿತೆಗಳನ್ನು ಉಲ್ಲಂಘಿಸಿವೆ. ವರದಿಗಳ ಪ್ರಕಾರ, ಕಟ್ಟಡದ ಯೋಜನೆಯನ್ನು ಮಂಜೂರು ಮಾಡುವಲ್ಲಿ ನೋಯ್ಡಾ ಪ್ರಾಧಿಕಾರವು ಸಹಕರಿಸಿದೆ. ಆರಂಭದಲ್ಲಿ, 9 ಮಹಡಿಗಳಲ್ಲಿ 14 ಟವರ್‌ಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ನಂತರ, 2012 ರ ಸುಮಾರಿಗೆ, ಹೊಸ ಯೋಜನೆಯು 40 ಮಹಡಿಗಳ ಎತ್ತರವಿರುವ ಅವಳಿ ಗೋಪುರಗಳನ್ನು ರಚಿಸಿತು. ಸಮಾಜದ ನಿವಾಸಿಗಳ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ) ಅಲಹಾಬಾದ್ ಹೈಕೋರ್ಟಿನಲ್ಲಿ ನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳಿಕೊಂಡಾಗ ಸೂಪರ್‌ಟೆಕ್ ಸಮಸ್ಯೆಗೆ ಸಿಲುಕಿತು. 2014 ರಲ್ಲಿ, ಅಲಹಾಬಾದ್ ಹೈಕೋರ್ಟ್ ಅವಳಿ ಗೋಪುರಗಳನ್ನು ಕೆಡವಲು ಮತ್ತು ಖರೀದಿದಾರರ ಪಾವತಿಯನ್ನು ಮರುಪಾವತಿಸುವಂತೆ ಬಿಲ್ಡರ್‌ಗಳಿಗೆ ಆದೇಶಿಸಿತ್ತು. ಈ ಆದೇಶವನ್ನು ನಂತರ 2021 ರಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿಯಿತು.
ಫ್ಲಾಟ್ ಖರೀದಿದಾರರಿಗೆ ಮರುಪಾವತಿ ಮಾಡಲಾಗುತ್ತದೆಯೇ?
ಮನೆ ಖರೀದಿದಾರರು ಬಿಲ್ಡರ್ ಬಳಿ ಠೇವಣಿ ಮಾಡಿದ ಮೊತ್ತದ ಸಂಪೂರ್ಣ ಮರುಪಾವತಿಯನ್ನು ಸ್ವೀಕರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದೆ. ಪಿಟಿಐ ವರದಿಯ ಪ್ರಕಾರ, ದಿವಾಳಿತನದ ಪ್ರಕ್ರಿಯೆಗಳನ್ನು ಎದುರಿಸುತ್ತಿರುವ ಸಂಸ್ಥೆಯ ಮಧ್ಯಂತರ ರೆಸಲ್ಯೂಶನ್ ಪ್ರೊಫೆಷನಲ್ (IRP) ಗೆ ಸುಪ್ರೀಂ ಕೋರ್ಟ್ ಒಂದು ಕೋಟಿ ರೂಪಾಯಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಮಾಡಲು ಕೇಳಿದೆ.
ಸೂಪರ್‌ಟೆಕ್‌ನ ‘ಅಕ್ರಮ’ ಅವಳಿ ಗೋಪುರಗಳಿಂದ ಕಲಿತ ಪಾಠಗಳು:
ಸೂಪರ್‌ಟೆಕ್‌ನ ಅವಳಿ ಗೋಪುರಗಳ ಉರುಳಿಸುವಿಕೆಯು ಬಿಲ್ಡರ್‌ಗಳು ಮತ್ತು ಅಧಿಕಾರಿಗಳಿಗೆ ಅನೇಕ ಪಾಠಗಳನ್ನು ಕಲಿಸಿದೆ. ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಸಂದರ್ಶನದಲ್ಲಿ, ಸರ್ಕಾರ ಮತ್ತು ನ್ಯಾಯಾಲಯಗಳು ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಅಥವಾ ಯೋಜನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ನೋಯ್ಡಾ ಪ್ರಾಧಿಕಾರದ 26 ಅಧಿಕಾರಿಗಳಂತೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
“ಈ ಸರ್ಕಾರ ಮತ್ತು ನೋಯ್ಡಾ ಪ್ರಾಧಿಕಾರವು ಕೆಲಸವನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯೊಂದಿಗೆ ಖಚಿತಪಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೆ ಯಾವುದೇ ಹೊಸ ಕೆಲಸಗಳು ಮತ್ತು ಉಪಕ್ರಮಗಳು ನಡೆಯುತ್ತವೆ, ಅವುಗಳು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು, ಇದರಿಂದ ಪ್ರತಿಯೊಬ್ಬರೂ ಅದರಿಂದ ಪ್ರಯೋಜನ ಪಡೆಯುತ್ತಾರೆ” ಎಂದು ಅವರು ಹೇಳಿದರು.
ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಹೇಗೆ ಕೆಡವಲಾಗುತ್ತದೆ?
ನಿಯಂತ್ರಿತ ಸ್ಫೋಟ ತಂತ್ರದ ಮೂಲಕ ಕಟ್ಟಡದ ಉರುಳಿಸುವಿಕೆಯನ್ನು ಮಾಡಲಾಗುವುದು, ಇದಕ್ಕಾಗಿ 3,700 ಕೆಜಿ ಸ್ಫೋಟಕವನ್ನು ಈ ಸ್ಪೋಟಿಸುವಿಕೆಯಲ್ಲಿ ಬಳಸಲಾಗುವುದು, ಇದು 55,000 ಟನ್‌ಗಳಷ್ಟು ಅವಶೇಷಗಳನ್ನು ಉಂಟುಮಾಡುತ್ತದೆ. ಮುಂಬೈ ಮೂಲದ ಎಡಿಫೈಸ್ ಇಂಜಿನಿಯರಿಂಗ್ ಮತ್ತು ಅವರ ದಕ್ಷಿಣ ಆಫ್ರಿಕಾದ ಪಾಲುದಾರ ಸಂಸ್ಥೆ ಜೆಟ್ ಡೆಮಾಲಿಷನ್ಸ್ ಈ ಕೆಲಸವನ್ನು ನಿರ್ವಹಿಸುತ್ತಿದೆ, ಇದು ವಿಶ್ವದ ಸಿವಿಲ್ ಇಂಜಿನಿಯರಿಂಗ್ ಕೆಲಸಗಳನ್ನು ಮಾಡಲು ಹೆಸರುವಾಸಿಯಾಗಿದೆ.
ಹತ್ತಿರದ ಸಮಾಜಗಳ ನಿವಾಸಿಗಳ ಸುರಕ್ಷತೆ: ಆಗಸ್ಟ್ 28 ರಂದು ಮಧ್ಯಾಹ್ನ 2.30 ಕ್ಕೆ ಕಟ್ಟಡಗಳು ಕುಸಿದಾಗ ಎರಡು ಕಟ್ಟಡಗಳ ಹತ್ತಿರವಿರುವ ಸುಮಾರು 5,000 ನಿವಾಸಿಗಳು ಹೆಚ್ಚು ಪರಿಣಾಮ ಬೀರುತ್ತಾರೆ, ಇದು 55,000 ಟನ್ ಅವಶೇಷಗಳನ್ನು ಬಿಟ್ಟುಬಿಡುತ್ತದೆ. ಅಧಿಕಾರಿಗಳಿಂದ ಸುರಕ್ಷತಾ ಅನುಮತಿಯ ನಂತರ ನಿವಾಸಿಗಳನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗುತ್ತದೆ ಮತ್ತು ಸಂಜೆ 4 ರ ನಂತರ ಮಾತ್ರ ಹಿಂತಿರುಗಲು ಅನುಮತಿಸಲಾಗುತ್ತದೆ.
ಆರೋಗ್ಯ ಮುನ್ನೆಚ್ಚರಿಕೆಗಳು: ಸರ್ಕಾರಿ ಸೌಲಭ್ಯಗಳಲ್ಲದೆ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಮೂರು ಖಾಸಗಿ ಆಸ್ಪತ್ರೆಗಳು ಸಹ ರೋಗಿಗಳಿಗೆ ವಸತಿ ಕಲ್ಪಿಸಲು ಸಿದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಳಿ ಗೋಪುರಗಳಿಗೆ ಎರಡು ಹತ್ತಿರದ ಕಟ್ಟಡಗಳಾದ ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್‌ನ 5,000 ಕ್ಕೂ ಹೆಚ್ಚು ನಿವಾಸಿಗಳನ್ನು ಭಾನುವಾರ ಬೆಳಿಗ್ಗೆ 7 ಗಂಟೆಗೆ ಸ್ಥಳಾಂತರಿಸಲಾಗುವುದು. ಅವರಿಗೆ ಸೇರಿದ ಸುಮಾರು 2,700 ವಾಹನಗಳನ್ನು ಆವರಣದಿಂದ ತೆಗೆದುಹಾಕಲಾಗುತ್ತದೆ ಮತ್ತು ನಿವಾಸಿಗಳು ತಮ್ಮ ಸಾಕುಪ್ರಾಣಿಗಳಲ್ಲಿ ಸುಮಾರು 150-200 ಅನ್ನು ತೆಗೆದುಕೊಂಡು ಹೋಗುತ್ತಾರೆ.
ಸುಮಾರು 100 ಮೀಟರ್ ಎತ್ತರದ ರಚನೆಗಳನ್ನು ಕೆಡವಲು ತೊಡಗಿರುವ ಭಾರತೀಯ ಮತ್ತು ವಿದೇಶಿ ಬ್ಲಾಸ್ಟರ್‌ಗಳ ತಂಡವನ್ನು ಹೊರತುಪಡಿಸಿ, ಅವಳಿ ಗೋಪುರಗಳ ಸುತ್ತಲೂ 500 ಮೀಟರ್ ತ್ರಿಜ್ಯದಲ್ಲಿ ಹೊರಗಿಡುವ ವಲಯವನ್ನು ರಚಿಸಲಾಗುವುದು, ಅಲ್ಲಿ ಯಾವುದೇ ಮಾನವ ಅಥವಾ ಪ್ರಾಣಿಗಳನ್ನು ಅನುಮತಿಸಲಾಗುವುದಿಲ್ಲ.
“ವೈದ್ಯಕೀಯ ತಂಡ ಮತ್ತು ಔಷಧಿಗಳೊಂದಿಗೆ ಸ್ಥಳದಲ್ಲಿ ಆರು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ಜೆಪಿ ಆಸ್ಪತ್ರೆ, ಫೆಲಿಕ್ಸ್ ಆಸ್ಪತ್ರೆ ಮತ್ತು ಯಥಾರ್ಥ್ ಆಸ್ಪತ್ರೆ ಜೊತೆಗೆ ಸೆಕ್ಟರ್ 30, ನೋಯ್ಡಾದಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಸುರಕ್ಷಿತ ಮನೆಗಳನ್ನು ಸ್ಥಾಪಿಸಲಾಗುವುದು” ಎಂದು ಮುಖ್ಯ ವೈದ್ಯಾಧಿಕಾರಿ ಡಾ ಸುನೀಲ್ ಶರ್ಮಾ ತಿಳಿಸಿದ್ದಾರೆ.
“ಸಮೀಪದ ನಿವಾಸಿಗಳಲ್ಲಿ ಏಳರಿಂದ 90 ದಿನಗಳವರೆಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುವ ಕೆಡವುವಿಕೆಯಿಂದ ದೊಡ್ಡ ಧೂಳು ಉಂಟಾಗುವ ಸಾಧ್ಯತೆಯಿದೆ” ಎಂದು ಫೆಲಿಕ್ಸ್ ಆಸ್ಪತ್ರೆಯ ನಿರ್ದೇಶಕ ಡಾ ಡಿ ಕೆ ಗುಪ್ತಾ ಹೇಳಿದ್ದಾರೆ.
UP | NDRF team arrives for deployment in the area of demolition of #SupertechTwinTowers in Sector 93A
560 police personnel, 100 people from reserve forces, 4 Quick Response Teams are also deployed here pic.twitter.com/Zrjct7VByi
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ
ಶ್ರೀ ಸಿದ್ಧಿವಿನಾಯಕ ಕಲಾಮಂದಿರ ಗೋಳಿತೊಟ್ಟು ಇಲ್ಲಿ ಜರಗುತ್ತಿರುವ 1575ನೇ ಮದ್ಯವರ್ಜನ ಶಿಬಿರದಲ್ಲಿ ಶ್ರೀ ದುರ್ಗಾಂಬಾ ಕಲಾಸಂಗಮ ಶರವೂರು ಇವರಿಂದ ಶುಕ್ರ ಸಂಜೀವಿನಿ ತಾಳಮದ್ದಳೆ ಜರಗಿತು.