Sunday, August 30, 2026
Home Blog Page 191

ಮಧೂರು ಶ್ರೀ ಗಣಪತಿ ರಾವ್ ಸಂಸ್ಮರಣೆ – ವಿದುರಾತಿಥ್ಯ, ಧುರವೀಳ್ಯ ಯಕ್ಷಗಾನ ತಾಳಮದ್ದಳೆ 

ಕರ್ನಾಟಕ, ಕೇರಳ ಉಭಯ ರಾಜ್ಯಗಳ ಪುರಸ್ಕೃತ, ಖ್ಯಾತ ಯಕ್ಷಗಾನ ಕಲಾವಿದ ಮಧೂರು ಶ್ರೀ ಗಣಪತಿ ರಾವ್ ಅವರ 10ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ದಿನಾಂಕ 17.09.2022ರ ಶನಿವಾರ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸಲಾಗುವುದು.

ಆ ಪ್ರಯುಕ್ತ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ‘ವಿದುರಾತಿಥ್ಯ, ಧುರವೀಳ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು. 

ಈ ಕಾರ್ಯಕ್ರಮಕ್ಕೆ ಶ್ರೀ ಮಧೂರು ಗಣಪತಿ ರಾವ್ ಅವರ ಮಕ್ಕಳು ಮತ್ತು ಬಂಧುಮಿತ್ರರು ಯಕ್ಷಕಲಾಭಾಮಾನಿಗಳೆಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

ಕಾರ್ಯಕ್ರಮದ ವಿವರಗಳಿಗೆ ಕರಪತ್ರವನ್ನು ನೋಡಿ. 

ನಾಳ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಹಿರಿಯ ಕಲಾವಿದರ ಸಂಸ್ಮರಣೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಮತ್ತು ಯಕ್ಷಾಭಿಮಾನಿಗಳು ಗೇರುಕಟ್ಟೆ-ನಾಳ ಇವರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಸ್ಥಳೀಯ ಕೀರ್ತಿಶೇಷ ಕಲಾವಿದರ ಸಂಸ್ಮರಣೆಯು ದಿನಾಂಕ 18.09.2022 ರಿಂದ ದಿನಾಂಕ 24.09.2022 ರ ವರೆಗೆ ಅಪರಾಹ್ನ 3 ಗಂಟೆಯಿಂದ ಪ್ರತಿದಿನ ಜರಗಲಿದೆ.

ನಾಳ ಶ್ರೀ ಕೃಷ್ಣಯ್ಯ ಮಾಸ್ಟರ್ ವೇದಿಕೆಯಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಹಕಾರದಿಂದ ಕೀರ್ತಿಶೇಷ  ಕಲಾವಿದರಾದ ಆರ್.ಎನ್ ಸಂಪಿಗೆತ್ತಾಯ, ಕೆ. ಮೋನಪ್ಪ ಆಚಾರ್ಯ ಗೇರುಕಟ್ಟೆ, ನಾರಾಯಣ ಭಟ್ ಕುಂಟಿನಿ, ಕೊರಗಪ್ಪ ಪೂಜಾರಿ ಮೆದಿನ, ಕಿಟ್ಟಣ್ಣ ಶೆಟ್ಟಿ ರಾಯಿಮಾರು, ರುಕ್ಮಯ್ಯ ಆಚಾರ್ಯ ನಾಳ ಇವರ ಸಂಸ್ಮರಣೆಯೊಂದಿಗೆ ಪ್ರತಿದಿನದ ತಾಳಮದ್ದಳೆ ಆರಂಭವಾಗಲಿದೆ.

ಪಟ್ಟಾಭಿಷೇಕ, ಅತಿಕಾಯ ಮೋಕ್ಷ,‌ ಭೀಷ್ಮ ಪ್ರತಿಜ್ಞೆ, ಕರ್ಣಾರ್ಜುನ,‌ ವಾಮನ ಚರಿತ್ರೆ, ರುಕ್ಮಾಂಗದ ಚರಿತ್ರೆ ಮತ್ತು ಸುಧನ್ವ ಕಾಳಗ ಪ್ರಸಂಗದಲ್ಲಿ ಭಾಗವತರಾಗಿ ಪ್ರಶಾಂತ ರೈ ಪಂಜ, ಮಹೇಶ್ ಕನ್ಯಾಡಿ, ಕೆ.ಜೆ ಗಣೇಶ್ ಮತ್ತು ಬಳಗ, ಭವ್ಯಶ್ರೀ ಕುಲ್ಕುಂದ, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಶ್ರೀನಿವಾಸ ಗೌಡ ಬಳ್ಳಮಂಜ, ರಮೇಶ್ ಭಟ್ ಪುತ್ತೂರುಭಾಗವಹಿಸಲಿದ್ದಾರೆ.

ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವೆಂಕಟೇಶ್ ಮೂರ್ಜೆ, ಯೋಗಿಶ್ ಕೊಂದಲಕೋಡಿ, ಸತೀಶ್ ವೇಣೂರು ಭಾಗವಹಿಸಲಿದ್ದಾರೆ. 

ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಪೂಕಳ ಲಕ್ಷ್ಮೀನಾರಾಯಣ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ, ರಾಧಾಕೃಷ್ಣ ಕಲ್ಚಾರ್, ತಾರಾನಾಥ ವರ್ಕಾಡಿ, ಸುಬ್ರಾಯ ಹೊಳ್ಳ ಕಾಸರಗೋಡು, ಭಾಸ್ಕರ ರೈ ಕುಕ್ಕುವಳ್ಳಿ, ಉಮೇಶ್  ಗೇರುಕಟ್ಟೆ, ಡಾ.ವಿನಾಯಕ ಭಟ್ ಗಾಳಿಮನೆ, ರಾಘವೇಂದ್ರ ಆಸ್ರಣ್ಣ ನಾಳ, ಡಾ.ವೈಕುಂಠ ಹೇರ್ಳೆ ಪಾರಂಪಳ್ಳಿ, ಗಣರಾಜ ಕುಂಬ್ಳೆ, ರವಿರಾಜ ಪನೆಯಾಲ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಮಧೂರು ಮೋಹನ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ, ನಾ.ಕಾರಂತ ಪೆರಾಜೆ, ರಾಘವ.ಎಚ್ ಭಾಗವಹಿಸಲಿದ್ದಾರೆ.

ಸಪ್ತಾಹವನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಆಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಲಿದ್ದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ ಮಜಲು, ಬೆಳ್ತಂಗಡಿ ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿಗಳಾದ ಉದಯಶಂಕರ.ಎಂ, ವಿಶ್ವೇಶ್ವರ ಶೆಟ್ಟಿ ಮತ್ತು ಗುಂಡೂರಾವ್ ನಾಳ ಉಪಸ್ಥಿತರಿರುತ್ತಾರೆ. 

ಸಮಾರೋಪದಲ್ಲಿ ಡಾ.ಸುರೇಶ್ ಕುಮಾರ್ ಶೆಟ್ಟಿ ತುಂಬೆಜಾಲ್, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ ಗೌಡ, ಎಲ್.ಐ.ಸಿ ಬಂಟ್ವಾಳ ಅಭಿವೃದ್ಧಿ ಅಧಿಕಾರಿಗಳಾದ ಮಧ್ವರಾಜ್, ದಿನೇಶ್.ಎಂ, ನಾಳ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಾದವ ಗೌಡ ಮುದ್ದುಂಜ, ಅಶೋಕ್ ಆಚಾರ್ಯ ನಾಳ, ದೇವಳದ ಪ್ರಬಂಧಕರಾದ ಗಿರೀಶ್ ಶೆಟ್ಟಿ ನಾಳ ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಸಂಯೋಜಕರಾದ ಕರುಣಾಕರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

 ಅಪ್ರಾಪ್ತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆ – ಆರು ಮಂದಿಯ ಬಂಧನ

0

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಪ್ರಾಪ್ತ ದಲಿತ ಸಹೋದರಿಯರ ಅತ್ಯಾಚಾರ, ಹತ್ಯೆಗೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ. ಆರು ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯಿದೆ (ಪೋಕ್ಸೊ), 2012 ರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆರೋಪಿಗಳಲ್ಲಿ ಒಬ್ಬನನ್ನು ಎನ್‌ಕೌಂಟರ್ ನಂತರ ಹಿಡಿಯಲಾಯಿತು.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಒಂದು ದಿನದ ನಂತರ, ನೇಣು ಬಿಗಿಯುವ ಮಾಡುವ ಮೊದಲು ಅವರನ್ನು ಅತ್ಯಾಚಾರ ಮಾಡಿ ಮತ್ತು ಕತ್ತು ಹಿಸುಕಲಾಗಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.

2012 ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಸೆಕ್ಷನ್‌ಗಳ ಅಡಿಯಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಆರೋಪಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಎನ್‌ಕೌಂಟರ್ ನಂತರ ಹಿಡಿಯಲಾಗಿದೆ ಎಂದು ಅವರು ಹೇಳಿದರು.ಆರು ಆರೋಪಿಗಳನ್ನು ಚೋಟು, ಜುನೈದ್, ಸುಹೇಲ್, ಹಫೀಜುಲ್ ರೆಹಮಾನ್, ಕರಿಮುದ್ದೀನ್ ಮತ್ತು ಆರಿಫ್ ಎಂದು ಪೊಲೀಸರು ಗುರುತಿಸಿದ್ದಾರೆ. “ಎಲ್ಲಾ ಆರೋಪಿಗಳು ಮತ್ತು ಹುಡುಗಿಯರು ಒಂದೇ ಗ್ರಾಮದವರು.

ಚೇತ್ರಂ ಪುತ್ರ ಚೋಟು ಈ ಹಿಂದೆ ಬಾಲಕಿಯರಿಗೆ ಪರಿಚಿತನಾಗಿದ್ದು, ಈತನೇ ಮೂವರು ಆರೋಪಿಗಳಿಗೆ ಬಾಲಕಿಯರನ್ನು ಪರಿಚಯಿಸಿದ್ದ. ಇಬ್ಬರು ಆರೋಪಿಗಳು ತಮ್ಮನ್ನು ಮದುವೆ ಆಗುವಂತೆ ಹುಡುಗಿಯರಿಗೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು ಕತ್ತು ಹಿಸುಕಿ ಮತ್ತು ನೇಣು ಹಾಕಿದ್ದಾರೆ ಎಂದು ಲಖಿಂಪುರ ಖೇರಿ ಎಸ್ಪಿ ಸಂಜಯ್ ಕುಮಾರ್ ಹೇಳಿದ್ದಾರೆ. ಕೊಲೆಗೂ ಮುನ್ನ ಇಬ್ಬರೂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಚೋಟು ಅಲಿಯಾಸ್ ಗೌತಮ್ ಹೊರತುಪಡಿಸಿ, ಹುಡುಗಿಯರಿಗೆ ಪರಿಚಯವಿದ್ದ ಇತರ ಮೂವರು ಆರೋಪಿಗಳನ್ನು ಇಸ್ಲಾಮುದ್ದೀನ್ ಅವರ ಮಗ ಸುಹೇಲ್, ಹಫೀಜುಲ್ ರೆಹಮಾನ್ ಅಲಿಯಾಸ್ ಮಜಲ್ಕಾ ಮತ್ತು ಜುನೈದ್ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಹೇಳಿದರು. “ಗುರುವಾರ ಬೆಳಗ್ಗೆ ಎನ್‌ಕೌಂಟರ್ ನಂತರ ಜುನೈದ್‌ನನ್ನು ಬಂಧಿಸಲಾಯಿತು ಮತ್ತು ಅವನ ಒಂದು ಕಾಲಿಗೆ ಗುಂಡೇಟಿನ ಗಾಯವಾಗಿದೆ” ಎಂದು ಅವರು ಹೇಳಿದರು, ಕರಿಮುದ್ದೀನ್ ಅಲಿಯಾಸ್ ಡಿಡಿ ಮತ್ತು ಅಹ್ಮದ್ ಅವರ ಮಗ ಆರಿಫ್. ಹುಸೇನ್ – ಹುಡುಗಿಯರನ್ನು ಮರದಿಂದ ನೇತುಹಾಕುವಲ್ಲಿ ಅವರಿಗೆ ಸಹಾಯ ಮಾಡಲು. ಈ ಮೂವರು ಅದೇ ಗ್ರಾಮದ ತಮ್ಮ ಇಬ್ಬರು ಸ್ನೇಹಿತರನ್ನು ಕರೆದರು.

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ನಾನ ಮಾಡುತ್ತಿದ್ದಾಗ ತಮ್ಮ ಪ್ರದೇಶಕ್ಕೆ ಆಗಾಗ ಬರುವ ಚೋಟು ಎಂಬಾತ ತನ್ನ ಹೆಣ್ಣು ಮಕ್ಕಳನ್ನು ಕರೆಯುತ್ತಿರುವುದು ಕೇಳಿಸಿತು ಎಂದು ಸಂತ್ರಸ್ತರ ತಾಯಿ ಹೇಳಿದ್ದಾರೆ. ಶೀಘ್ರದಲ್ಲೇ, ಮೂವರು ಹುಡುಗರು ಬಂದು ತನ್ನ ಹೆಣ್ಣುಮಕ್ಕಳನ್ನು ಎಳೆದುಕೊಂಡು ಹೋಗಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.

“ನಾನು ಅವರನ್ನು ತಡೆಯಲು ಪ್ರಯತ್ನಿಸಿದೆ ಮತ್ತು ಅವರ ಹಿಂದೆ ಓಡಿದೆ, ಆದರೆ ಅವರು ನನ್ನನ್ನು ಹೊಡೆದು ಬಿಟ್ಟುಹೋದರು. ನಾನು ಕೂಗುತ್ತಾ ಗ್ರಾಮಸ್ಥರಿಂದ ಸಹಾಯ ಪಡೆಯಲು ಓಡಿಹೋದೆ, ”ಎಂದು ತಾಯಿ ಹೇಳಿದರು.

ಭವಿಷ್ಯದಲ್ಲಿ ಇಂತಹ ಅಪರಾಧಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಬಾಲಕಿಯರ ಕುಟುಂಬಸ್ಥರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರಿದ್ದಾರೆ. “ನಮಗೆ ಬೇಕಾಗಿರುವುದು ಆರೋಪಿಗೆ ಫನ್ಸಿ (ಮರಣ ದಂಡನೆ), ಅಷ್ಟೇ” ಎಂದು ಸಂತ್ರಸ್ತರ ಸಹೋದರ ಹೇಳಿದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 452 (ಮನೆ ಅತಿಕ್ರಮಣ) ಮತ್ತು 378 (ಕಳ್ಳತನ) ಅಡಿಯಲ್ಲಿ ಬುಧವಾರ ತಡರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ, ಜೊತೆಗೆ ಸೆಕ್ಷನ್ 3 ಮತ್ತು 4 (ಲೈಂಗಿಕ ದೌರ್ಜನ್ಯ) ಲೈಂಗಿಕ ಅಪರಾಧಗಳಿಂದ ಮಕ್ಕಳು (ಪೋಕ್ಸೊ) ಕಾಯಿದೆ.

ಬುಧವಾರ ಸಂಜೆ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರವೇ ದಿಗ್ಬಂಧನವನ್ನು ಹಿಂಪಡೆಯಲಾಯಿತು.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಭರವಸೆ ನೀಡಿದ್ದಾರೆ. ಅವರ ಮುಂದಿನ ಪೀಳಿಗೆಯ ಆತ್ಮಗಳು ಸಹ ನಡುಗುವಂಥ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ನ್ಯಾಯ ದೊರಕಿಸಿಕೊಡಲಾಗುವುದು ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಆರೋಪ, ಮುಸ್ಲಿಂ ಹುಡುಗನ ಜೊತೆ ಹೊರಟ ಹುಡುಗಿ, ತಾಯಿಯ ಕಣ್ಣೀರಿಗೂ ಕ್ಯಾರೇ ಅನ್ನಲಿಲ್ಲ: ಲವ್ ಜಿಹಾದ್ ಸಂಚು ಮತ್ತೆ ವ್ಯಾಪಕ –  ಮುಸ್ಲಿಂ ಹುಡುಗರಿಗೆ ಮರುಳಾಗುತ್ತಿರುವ ಹಿಂದೂ ಹುಡುಗಿಯರು – ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಯಾರು ಗತಿ? 

0

ಚಿಕ್ಕಮಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಗುಂಪೊಂದು ಬುಧವಾರ ಚಿಕ್ಕಮಗಳೂರಿನಲ್ಲಿ ಹಿಂದೂ ಹುಡುಗಿಯು ಮುಸ್ಲಿಂ ಹುಡುಗನ ಜೊತೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆಯಾಗಲು ಹೊರಟದ್ದನ್ನು ಪ್ರಶ್ನಿಸಿ ಅದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಹುಡುಗಿಯ ತಾಯಿ ಶೋಭಾ ಅವರು ಕಣ್ಣೀರು ಸುರಿಸಿ ಅತ್ತಿದ್ದಾರೆ. ಪೊಲೀಸ್ ಜೀಪು ಹತ್ತುತ್ತಿರುವ ಮಗಳನ್ನು ಕಂಡು ಮಗಳ ಜೊತೆ ಮಾತನಾಡಲು ಬಿಡಿ ಎಂದು ಗೋಗರೆಯುವ ದೃಶ್ಯ ಕಾಣಿಸುತ್ತಿತ್ತು.

ಮುಸ್ಲಿಂ ಹುಡುಗ ನೀಡಿದ ದೂರಿನ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಲಕ್ಷ್ಮೀಪುರಂ ನಿವಾಸಿಗಳಾದ ಹುಡುಗ-ಹುಡುಗಿ ಇಬ್ಬರೂ ಪ್ರೀತಿಸುತ್ತಿದ್ದು, ಚಿಕ್ಕಮಗಳೂರಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.

ಮದುವೆಯ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರ ಗುಂಪು ಮಧ್ಯ ಪ್ರವೇಶಿಸಿ ಮದುವೆ ನಿಲ್ಲಿಸಿದೆ. ಅವರು ಹುಡುಗ ಮತ್ತು ಹುಡುಗಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಹುಡುಗ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿ ಮದುವೆಯನ್ನು ನಿಲ್ಲಿಸಿದರು ಎಂದು ಹುಡುಗ ಆರೋಪಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾವು ಅವರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು. ಬಾಲಕಿ ಮತ್ತು ಹುಡುಗ ಇಬ್ಬರೂ ಮೇಜರ್ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ವೀಡಿಯೊ – ಮೀನು ಹಿಡಿಯುವಾಗ ಬಲೆಯಲ್ಲಿ ಸಿಕ್ಕಿಬಿದ್ದ ಬೃಹತ್ ಗಾತ್ರದ ಆಮೆ – ಆಕಸ್ಮಿಕವಾಗಿ ಬಲೆಯೊಳಕ್ಕೆ ಬಂದ ಕೂರ್ಮ 

0

ಮೀನು ಹಿಡಿಯಲು ಹೋಗಿದ್ದ ಮೀನುಗಾರರಿಗೆ ಮೀನಿನ ರಾಶಿಯ ನಡುವೆ ಅಚ್ಚರಿಯೊಂದು ಕಾಣಸಿಕ್ಕಿದೆ.

ಮೀನಿನ ರಾಶಿಯನ್ನು ಬಲೆಯಿಂದ ತೆಗೆಯುತ್ತಿರುವಾಗ ಮೀನುಗಳ ನಡುವೆ ದೊಡ್ಡ ಗಾತ್ರದ ಆಮೆಯೊಂದು ಕಾಣಸಿಕ್ಕಿದೆ. ಅಕಸ್ಮಾತ್ ಈ ಆಮೆಯು ಮೀನಿನ ಜೊತೆಗೆ ಮೀನು ಹಿಡಿಯುವವರ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದೆ.

ಈ ಘಟನೆ ನಡೆದದ್ದು ಕುಂದಾಪುರದ ಗಂಗೊಳ್ಳಿಯ ಸಮೀಪದ ಕಡಲ ತೀರದಲ್ಲಿ. ಈ ವಿಡಿಯೋ ಈಗ ವೈರಲ್ ಆಗಿದೆ.

ದುರ್ಗಾಪ್ರಸಾದ್ ಎನ್ನುವವರು ಈ ವೀಡಿಯೊವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಪುತ್ತೂರು ತಿಂಗಳಾಡಿಯ ಅಂಗಡಿಯಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಂ ಯುವಕನ ಬಂಧನ 

0

ಪುತ್ತೂರು ಸಮೀಪದ ಕುಂಬ್ರದ ತಿಂಗಳಾಡಿಯ ಅಂಗಡಿಯೊಂದರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ. ಅಂಗಡಿಗೆ ಆಹಾರ ವಸ್ತುಗಳನ್ನು ಖರೀದಿಗೆಂದು ಆ ಯುವತಿ ಬಂದಿದ್ದರು.

ಅಷ್ಟರಲ್ಲಿ ಅಲ್ಲಿದ್ದ ಯುವಕ ಬದ್ರುದ್ದೀನ್ ಎಂಬಾತ ಯುವತಿಯ ದೇಹವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ. 

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿರುವ ಸೂಪರ್ ಬಜಾರ್ ಅಂಗಡಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಹಿಂದೂ ಯುವತಿ ಬಂದಿದ್ದರು. ಅವರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾಗ ಅಲ್ಲಿದ್ದ ಸೊರಕೆ ಸಮೀಪದ ನಿವಾಸಿ ಬದ್ರುದ್ದೀನ್ ಎಂಬಾತ ಆಕೆಯ ದೇಹವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

ಗಾಬರಿಗೊಂಡ ಯುವತಿ ಬೊಬ್ಬೆ ಹೊಡೆಯುತ್ತಿದ್ದಂತೆ ಬದ್ರುದ್ದೀನ್ ಅಲ್ಲಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದ ಹಿಂದೂ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅಂಗಡಿಯ ಮುಂದೆ ಜಮಾಯಿಸಿದ್ದರು.

ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದು ಬಂಧಿಸದಿದ್ದರೆ ಇಂದು ಬಂದ್ ಮಾಡುವ ನಿರ್ಣಯವನ್ನು ಕೈಗೊಂಡಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದುದನ್ನು ಕಂಡು ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಜನರನ್ನು ಸಮಾಧಾನಪಡಿಸಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದರು.

ಅದರಂತೆ ಧಾತನೆ ನಡೆದ ಕೆಲವು ಘಂಟೆಯೊಳಗೆ ಆರೋಪಿ ಬದ್ರುದ್ದೀನ್ ಬಂಧನವಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಬಂಧನವಾಗುತ್ತಿದ್ದಂತೆ ನಿನ್ನೆ ನೀಡಿದ್ದ ಬಂದ್ ಕರೆಯನ್ನು ಹಿಂತೆಗೆಯಲಾಗಿದೆ. ಆದರೆ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಉಪ್ಪಿನಂಗಡಿ ರೋಟರಿ ಕ್ಲಬ್ಬಿನಿಂದ  ಫ್ಯಾನುಗಳ ಕೊಡುಗೆ

0

ಉಪ್ಪಿನಂಗಡಿ ಮಹತೋಭಾರ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಸಭಾಭವನದ ಆವರಣದಲ್ಲಿ ಭಕ್ತಾದಿಗಳಿಗೆ ಉಪಯುಕ್ತ ಆಗುವಂತೆ 30 ಫ್ಯಾನುಗಳನ್ನು ಉಪ್ಪಿನಂಗಡಿ ರೋಟರಿ ಕ್ಲಬ್ಬಿನ ವತಿಯಿಂದ ಅಳವಡಿಸಿಲಾಗಿದ್ದು ರೋಟರಿ ಜಿಲ್ಲೆ 3181ರ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರ್ಯ ಮತ್ತು ಸಹಸ್ರಲಿಂಗೇಶ್ವರ ದೇವಾಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕರುಣಾಕರ ಸುವರ್ಣ ಚಾಲನೆ ನೀಡಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಜಗದೀಶ ನಾಯಕ್ ಮಾತನಾಡಿ ರೂಪಾಯಿ 50 ಸಾವಿರ ವೆಚ್ಚದಲ್ಲಿ ಫ್ಯಾನುಗಳನ್ನು ಅಳವಡಿಸಲು ಸಹಕರಿಸಿದ ರೋಟರಿ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ರೋಟರಿ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷರಾದ ನೀರಜ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜಯಂತ ಪುರೋಳಿ, ಹರಿರಾಮಚಂದ್ರ, ಶ್ರೀಮತಿ ಹರಿಣಿ, ರೋಟರಿ ಕ್ಲಬ್ ಪೂರ್ವ ಅಧ್ಯಕ್ಷರುಗಳಾದ ವಿಜಯಕುಮಾರ್ ಕಲ್ಲಲಿಕೆ, ದಿವಾಕರ ಆಚಾರ್ಯ ಗೇರುಕಟ್ಟೆ, ಅಬ್ದುಲ್ ರಹಿಮಾನ್ ಯೂನಿಕ್, ಡಿ.ಸಿ ಚಂದಪ್ಪ ಮೂಲ್ಯ ಮತ್ತು ಇತರ ಪದಾಧಿಕಾರಿಗಳು, ದೇವಳದ ಕಚೇರಿಯ ವೆಂಕಟೇಶ್ ಭಟ್, ದಿವಾಕರ ಗೌಡ ,ಪದ್ಮನಾಭ ಕುಲಾಲ್ ಉಪಸ್ಥಿತರಿದ್ದರು.

ಈ  ಯೋಜನೆಯ ನಿರ್ದೇಶಕರಾದ ರೋ. ಸ್ವರ್ಣೇಶ ಗಾಣಿಗ, ಗುಣಕರ  ಅಗ್ನಾಡಿ ಮತ್ತು ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರನ್ನು ಗೌರವಿಸಲಾಯಿತು.

ರೊಟೇರಿಯನ್ ರವೀಂದ್ರ. ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್  ಶಾಸ್ತ್ರಿಯವರಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನ

0

ಪುತ್ತೂರು, ಸೆ 13: ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹರೀಶ್ ಶಾಸ್ತ್ರಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಶಾಲು ಹೊದಿಸಿ ಬ್ಯಾಗ್ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‌ ರಾವ್, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣೈ, ಸದಸ್ಯರಾದ ಕೆ.ಎನ್ ಸುಬ್ರಹ್ಮಣ್ಯ, ವತ್ಸಲಾರಾಜ್ಞಿ, ಡಾ.ಮುರಳೀಕೃಷ್ಣ ರೈ, ಡಾ.ಕೃಷ್ಣ ಪ್ರಸನ್ನ ಕೆ, ಇಂದಿರಾ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.


ಹರೀಶ್ ಶಾಸ್ತ್ರಿ ಯವರು 1997ರಿಂದ ಸುಮಾರು 25 ವರ್ಷಗಳ ಕಾಲ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವಾ ಅನುಭವವನ್ನು ಹೊಂದಿದ್ದಾರೆ. ಇವರು ಪುತ್ತೂರಿನ ಬಪ್ಪಳಿಗೆಯ ದಿ. ರಾಮಕೃಷ್ಣ ಶಾಸ್ತ್ರಿ ಬಿ ಮತ್ತು ದಿ.ದೇವಕಿ ದಂಪತಿ ಪುತ್ರ.

ತಮ್ಮಪ್ರಾಥಮಿಕ ಶಿಕ್ಷಣವನ್ನು ಬಪ್ಪಳಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಕೊಂಬೆಟ್ಟಿನ ಸರಕಾರಿ ಪ್ರೌಢಶಾಲೆ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ನೆಹರೂ ನಗರದ ವಿವೇಕಾನಂದ ಸಂಸ್ಥೆಯಲ್ಲಿ ಪಡೆದು ಸ್ನಾತಕೋತ್ತರ ಪದವಿಯನ್ನು  ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದರು.

ಇವರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶತಮಾನೋತ್ಸವದ ಅಂಗವಾಗಿ ನಡೆದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.  ಅಲ್ಲದೆ ಲಾಕ್‌ಡೌನ್ ಸಮಯದಲ್ಲಿ ಮೊದಲ ಬಾರಿಗೆ ಆನ್ ಲೈನ್ ತರಗತಿಗಳನ್ನು ನಡೆಸಿದ ಹೆಗ್ಗಳಿಕೆ ಇವರದಾಗಿತ್ತು.

ವಿದ್ಯಾರ್ಥಿಗಳಿಗೆ ಕ್ವಿಝ್ ಕಾರ್ಯಕ್ರಮಗಳನ್ನು ಹಲವಾರು ವಿದ್ಯಾ ಸಂಸ್ಥೆಗಳಲ್ಲಿ ನಡೆಸಿದ ಪ್ರಾವಿಣ್ಯತೆಯನ್ನು ಪಡೆದಿರುವಇವರು ಭೌತಶಾಸ್ತ್ರ ವಿಷಯದಲ್ಲಿ ಕೋಚಿಂಗ್‌ ತರಗತಿಯನ್ನು ನೀಡುತ್ತಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ರಾ ರಾ ರುಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫೆರ್ನಾಂಡೀಸ್ ವಿಚಾರಣೆ ಜಾರಿಯಲ್ಲಿ – ಬೆಳಿಗ್ಗೆ 11.30 ರಿಂದ ಎಡೆಬಿಡದೆ ಪ್ರಶ್ನಿಸುತ್ತಿರುವ ED (ಜಾರಿ ನಿರ್ದೇಶನಾಲಯ)

0

ಸುಕೇಶ್ ಚಂದ್ರಶೇಖರ್ ಅವರಿಂದ ಬೆಲೆಬಾಳುವ ಉಡುಗೊರೆಗಳನ್ನು ಪಡೆದಿರುವ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ರಾ ರಾ ರುಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫೆರ್ನಾಂಡೀಸ್ ವಿಚಾರಣೆ ಜಾರಿಯಲ್ಲಿದೆ. 

ಬೆಳಿಗ್ಗೆ 11.30 ರಿಂದ ಎಡೆಬಿಡದೆ ಪ್ರಶ್ನಿಸುತ್ತಿರುವ EDಯ  ಪ್ರಶ್ನೆಗಳಿಗೆ ಜಾಕ್ವೆಲಿನ್ ತಾಳ್ಮೆಯಿಂದ ಉತ್ತರಿಸುತ್ತಿದ್ದರೂ ಕೆಲವೊಂದು ಪ್ರಶ್ನೆಗಳಿಗೆ ಹೈರಾಣಾಗಿದ್ದಾರೆ.

ಜಾರಿ ನಿರ್ದೇಶನಾಲಯದ ವಿಚಾರಣೆ ರಾತ್ರಿ 8.30ರ ವರೆಗೂ ನಡೆಯಲಿರುವುದು ಎಂದು ಮೂಲಗಳು ಹೇಳಿವೆ. 

200 ಕೋಟಿ ರೂಪಾಯಿಗಳ ಮೌಲ್ಯದ ಮಾದಕ ವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಹಡಗು ಗುಜರಾತ್ ನಲ್ಲಿ ವಶ

0

ಗುಜರಾತ್ ಕರಾವಳಿಯಲ್ಲಿ 200 ಕೋಟಿ ಮೌಲ್ಯದ ಮಾದಕ ವಸ್ತುಗಳೊಂದಿಗೆ ಪಾಕಿಸ್ತಾನದ ಮೀನುಗಾರಿಕಾ ದೋಣಿ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ, ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಎಟಿಎಸ್‌ನ ಜಂಟಿ ತಂಡವು ಡ್ರಗ್ಸ್ ಸಾಗಿಸುತ್ತಿದ್ದ ಮೀನುಗಾರಿಕಾ ದೋಣಿಯನ್ನು ಸಮುದ್ರದ ಮಧ್ಯದಲ್ಲಿ ತಡೆದಿದೆ.

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಯಿಂದ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಭಾರತೀಯ ಸಮುದ್ರದೊಳಗೆ ಆರು ಮೈಲುಗಳಷ್ಟು ದೂರದಲ್ಲಿದ್ದ ಬೋಟ್‌ನಲ್ಲಿದ್ದ ಆರು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಏಜೆನ್ಸಿಗಳು ಬಂಧಿಸಿವೆ.

ಅಧಿಕಾರಿಗಳ ಪ್ರಕಾರ, ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕೋಸ್ಟ್ ಗಾರ್ಡ್ ಮತ್ತು ಎಟಿಎಸ್‌ನ ಜಂಟಿ ತಂಡವು ಡ್ರಗ್ಸ್ ಸಾಗಿಸುತ್ತಿದ್ದ ಮೀನುಗಾರಿಕಾ ದೋಣಿಯನ್ನು ಸಮುದ್ರದ ಮಧ್ಯದಲ್ಲಿ ತಡೆದಿದೆ. ವಶಪಡಿಸಿಕೊಂಡ ದೋಣಿಯೊಂದಿಗೆ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಅಧಿಕಾರಿಗಳು ದಿನದ ನಂತರ ಜಖೌ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ.

ನಿಷಿದ್ಧ ವಸ್ತುಗಳನ್ನು ಗುಜರಾತ್ ಕರಾವಳಿಯಲ್ಲಿ ವಿತರಿಸಿದ ನಂತರ ಪಂಜಾಬ್‌ಗೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ಕರಾವಳಿಯು ಮಾದಕ ದ್ರವ್ಯ ಸಾಗಣೆಗೆ ಆದ್ಯತೆಯ ಮಾರ್ಗವಾಗಿ ಹೊರಹೊಮ್ಮಿರುವುದರಿಂದ, ರಾಜ್ಯ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ಮತ್ತು ಇತರ ಏಜೆನ್ಸಿಗಳು ಈ ಹಿಂದೆಯೂ ಇಂತಹ ಮಾದಕವಸ್ತು ಕಳ್ಳಸಾಗಣೆಯ ಪ್ರಯತ್ನಗಳನ್ನು ವಿಫಲಗೊಳಿಸಿದ್ದವು ಮತ್ತು ಅವರು ಯೋಜಿಸಿದ ಬೃಹತ್ ಪ್ರಮಾಣದ ಮಾದಕವಸ್ತುಗಳೊಂದಿಗೆ ವಿದೇಶಿ ಪ್ರಜೆಗಳನ್ನು ಹಿಡಿದಿದ್ದರು.

ಇದಕ್ಕೂ ಮೊದಲು, ಎಟಿಎಸ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಜಂಟಿಯಾಗಿ ಕೋಲ್ಕತ್ತಾ ಬಂದರಿನಿಂದ ಸ್ಕ್ರ್ಯಾಪ್‌ಗಳನ್ನು ತುಂಬಿದ ಕಂಟೈನರ್‌ನಿಂದ 200 ಕೋಟಿ ಮೌಲ್ಯದ ಸುಮಾರು 40 ಕೆಜಿ ಹೆರಾಯಿನ್ ವಶಪಡಿಸಿಕೊಂಡಿತ್ತು.

2022 ರಲ್ಲಿ ಗುಜರಾತ್, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ 6,800 ಕೋಟಿ ಮೌಲ್ಯದ ಒಟ್ಟು 1300 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.