Monday, January 20, 2025
Home Blog Page 19

ತನಗೆ ಪ್ರಧಾನ ಮಂತ್ರಿ ಹುದ್ದೆ ನೀಡುವ ಬಗ್ಗೆ ಪ್ರಸ್ತಾಪ – ಬಹಿರಂಗಪಡಿಸಿದ ನಿತಿನ್ ಗಡ್ಕರಿ

0


ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಒಮ್ಮೆ ತಮ್ಮನ್ನು ಪ್ರಧಾನಿಯಾಗಲು ಬೆಂಬಲಿಸುವ ರಾಜಕೀಯ ನಾಯಕರ ಪ್ರಸ್ತಾಪವನ್ನು ನಿರಾಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು, ಮತ್ತು ಪ್ರಧಾನಿಯಾಗುವುದು ನನ್ನ ಮಹತ್ವಾಕಾಂಕ್ಷೆಯಲ್ಲ ಎಂದು ಒತ್ತಿ ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ, ರಾಜಕೀಯ ನಾಯಕರೊಬ್ಬರು ತಾನು ಪ್ರಧಾನಿ ಹುದ್ದೆಯ ರೇಸ್‌ಗೆ ಪ್ರವೇಶಿಸಿದರೆ ನನ್ನನ್ನು ಬೆಂಬಲಿಸಲು ಪ್ರಸ್ತಾಪಿಸಿದರು, ಆದರೆ ನಾನು ಆ ಪ್ರಸ್ತಾಪವನ್ನು ನಿರಾಕರಿಸಿದೆ ಮತ್ತು ನಾನು ಅಂತಹ ಮಹತ್ವಾಕಾಂಕ್ಷೆಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

“ನನಗೆ ಒಂದು ಘಟನೆ ನೆನಪಿದೆ… ನಾನು ಯಾರನ್ನೂ ಹೆಸರಿಸುವುದಿಲ್ಲ. ಆ ವ್ಯಕ್ತಿ, ‘ನೀವು ಪ್ರಧಾನಿಯಾಗಲು ಹೋದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದರು,” ಎಂದು ಗಡ್ಕರಿ ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸಂಭಾಷಣೆ ಯಾವಾಗ ನಡೆಯಿತು ಎಂದು ನಿರ್ದಿಷ್ಟಪಡಿಸದೆ ಹೇಳಿದರು..

ಆದರೆ, ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಪ್ರಧಾನಿಯಾಗುವುದು ಅವರ ಜೀವನದ ಗುರಿಯಲ್ಲ ಎಂದು ಒತ್ತಿ ಹೇಳಿದರು.

ಆದರೆ ನೀವು ನನ್ನನ್ನು ಏಕೆ ಬೆಂಬಲಿಸಬೇಕು ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ಸ್ವೀಕರಿಸಬೇಕು ಎಂದು ನಾನು ಕೇಳಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ನಂಬಿಕೆಗಳಿಗೆ ಮತ್ತು ನನ್ನ ಸಂಸ್ಥೆಗೆ ನಿಷ್ಠನಾಗಿದ್ದೇನೆ ಮತ್ತು ನಾನು ಯಾವುದೇ ಹುದ್ದೆಗೆ ರಾಜಿ ಮಾಡಿಕೊಳ್ಳಲು ಹೋಗುವುದಿಲ್ಲ ಏಕೆಂದರೆ ನನ್ನ ನಂಬಿಕೆಗಳು ನನಗೆ ಅತ್ಯಂತ ಮುಖ್ಯವಾಗಿವೆ, ”ಎಂದು ಅವರು ಹೇಳಿದರು.


2024 ಮತ್ತು 2019 ರ ಲೋಕಸಭಾ ಚುನಾವಣೆಗಳೆರಡರಲ್ಲೂ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿ ಅವರ ಹೆಸರು ಚರ್ಚೆಯಲ್ಲಿ ಹೊರಹೊಮ್ಮಿತು.

2019 ರಲ್ಲಿ ಈ ಚರ್ಚೆಗಳು ಕಾಣಿಸಿಕೊಂಡಾಗ, ಗಡ್ಕರಿ ಅವರು “ಭಾರತವು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಕೈಯಲ್ಲಿದೆ” ಎಂದು ಹೇಳಿದ್ದರು.

“ನಾವೆಲ್ಲರೂ ಅವರ ಹಿಂದೆ ಇದ್ದೇವೆ (ಪ್ರಧಾನಿ ಮೋದಿ). ಅವರ ದೂರದೃಷ್ಟಿಯ ಈಡೇರಿಕೆಯಲ್ಲಿ ನಾನು ಇನ್ನೊಬ್ಬ ಕಾರ್ಯಕರ್ತ. ನಾನು ಪ್ರಧಾನಿಯಾಗುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ನಾನು ಪ್ರಧಾನಿಯಾಗುವ ಸ್ಪರ್ಧೆಯಲ್ಲಿ ಇಲ್ಲ. ನನಗೆ ಈ ಕನಸು ಕಾಣುತ್ತಿಲ್ಲ. ,” ಎಂದು ಗಡ್ಕರಿ ಮಾರ್ಚ್ 2019 ರಲ್ಲಿ ಹೇಳಿದ್ದರು.

ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ ತಾಳಮದ್ದಳೆ, ಸಂಸ್ಮರಣೆ ಮತ್ತು ಸನ್ಮಾನ

0

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ ಕಾರ್ಯಕ್ರಮವಾಗಿ ಪೆರಿಯಡ್ಕ ಮದುವನದಲ್ಲಿ ಮಧುರ ಮನಸು ಸ್ನೇಹಕೂಟವೆಂಬ ವಿಶೇಷ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಪ್ರಾಯೋಜಕರಾದ ಕೆ. ಮಹಾಲಿಂಗೇಶ್ವರ ಭಟ್ ತೀರ್ಥರೂಪರಾದ ದಿ.ಶ್ರೀ ತಿರುಮಲೇಶ್ವರ ಭಟ್ ಕಟ್ಟದಮೂಲೆ ಸಂಸ್ಮರಣೆಯನ್ನು ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು.

ಈ ಪ್ರಯುಕ್ತ ಪ್ರೊಫೆಸರ್ ಬಿ. ವಿ ಆರ್ತಿಕಜೆ ಪುತ್ತೂರು, ನೀ.ಸು.ಮಧ್ಯಸ್ಥ, ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು, ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ.ಆಚಾರ್ಯ ಅಲಂಕಾರು ಇವರಿಗೆ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಮಹಾಲಿಂಗೇಶ್ವರ ಭಟ್ ಇವರನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು.

ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ವಸಂತಕುಮಾರ ತಾಳ್ತಜೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ ಶೆಣೈ ರಾಮನಗರ, ಶ್ರೀಧರ ಭಟ್ ಕೆ, ಸಾವಿತ್ರಿಬಾಯಿ, ಶೋಭಾ ಬಿ ಆನಂದ್, ಹರಿಕಿರಣ್ ಕೊಯ್ಲ, ಬಿ. ಸುಬ್ರಮಣ್ಯ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಶ್ರೀಮತಿ ವೈಶಾಲಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ದುರ್ಗಾಮಣಿ ವಂದಿಸಿದರು.

ಬಳಿಕ ಶ್ರೀ ಮಹಾಭಾರತ ಸರಣಿಯ 47ನೇ ಕಾರ್ಯಕ್ರಮವಾಗಿ ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ ತಾಳಮದ್ದಳೆಯು ಪೆರಿಯಡ್ಕ ಸಾಂಸ್ಕೃತಿಕ ಕಲಾವೇದಿಕೆಯ ಸಹಯೋಗದಲ್ಲಿ ಜರಗಿತು.

ಅರ್ಥಧಾರಿಗಳಾಗಿ ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ-(ಶ್ರೀಕೃಷ್ಣ 1)
ಶ್ರೀಧರ ಎಸ್.ಪಿಸುರತ್ಕಲ್ -(ಶ್ರೀಕೃಷ್ಣ2)
ಸಂಜೀವ ಪಾರೆಂಕಿ- (ಅರ್ಜುನ)
ಗುಡ್ಡಪ್ಪ ಬಲ್ಯ:(ಕೌರವ1)
ಮಹಾಲಿಂಗೇಶ್ವರ ಭಟ್-(ಕೌರವ2)
ಶ್ರೀಮತಿ ಗೀತಾಕುದ್ದಣ್ಣಾಯ(-ಬಲರಾಮ )
ಗಣರಾಜ ಕುಂಬ್ಳೆ-(ಸುಧನ್ವ1)ದಿವಾಕರ ಆಚಾರ್ಯ ಹಳೆನೇರೆಂಕಿ-(ಸುಧನ್ವ2)


ಅಂಬಾ ಪ್ರಸಾದ ಪಾತಾಳ-(ಪ್ರಭಾವತಿ)
-ಜಯರಾಮ ನಾಲ್ಗುತ್ತು-(ಶ್ರೀಕೃಷ್ಣ)
ಹರೀಶ್ ಬಾರ್ಯ-(ಅರ್ಜುನ)
ನಾರಾಯಣಭಟ್,ಆಲಂಕಾರು-(ಹಂಸಧ್ವಜ)ಬಾಲಕೃಷ್ಣ ಕೇಪುಳು-(ಶಂಖ-ಲಿಖಿತ )
ಶ್ರೀಮತಿ ಶ್ರುತಿ ವಿಸ್ಮಿತ್-ವೃಷ ಕೇತು ಹಾಗೂ

ಭಾಗವತರಾಗಿ
ಗೋವಿಂದ ನಾಯಕ್ ಪಾಲೆಚ್ಚಾರು, ಪದ್ಮನಾಭ ಕುಲಾಲ್,
ನಿತೀಶ್ ಕುಮಾರ್. ವೈ ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ
ಮುರಳೀಧರ ಕಲ್ಲೂರಾಯ, ಮೋಹನ ಕುಮಾರ್ ಶರವೂರು,
ಶ್ರೀಪತಿ ಭಟ್ ಇಳಂತಿಲ, ಪ್ರಚೇತ್ ಆಳ್ವ ಶ್ರೀಹರಿ ನಗ್ರಿ ಭಾಗವಹಿಸಿದ್ದರು. ಕಲಾವಿದರನ್ನು ಮಹಾಲಿಂಗೇಶ್ವರ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು.

ಅಪರೂಪದ ಕಾಯಿಲೆ ಹೊಂದಿರುವ 9 ವರ್ಷದ ಬಾಲಕಿಯ ಹೊಟ್ಟೆಯಲ್ಲಿ 127 ಸೆಂ.ಮೀ ಉದ್ದದ ‘ಹೇರ್‌ಬಾಲ್’

0



ಅಂಬಲಪುಳ: ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಒಂಭತ್ತು ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ ಮೂಲಕ ಆಲಪ್ಪುಳ ವೈದ್ಯಕೀಯ ಕಾಲೇಜು ಹೊಸ ಬದುಕು ನೀಡಿದೆ.   ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗವು ಅತ್ಯಂತ ಸಾಮಾನ್ಯವಾದ ಟ್ರೈಕೊಬೆಜೋರ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿತು.  

ಕಳೆದ ದಿನ ನಿರಂತರ ಹೊಟ್ಟೆ ನೋವು, ವಾಂತಿ ಮತ್ತು ಹೊಟ್ಟೆ ಉಬ್ಬರದ ಲಕ್ಷಣಗಳಿದ್ದ ಅವರನ್ನು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. 

ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಮತ್ತು ಎಂಡೋಸ್ಕೋಪಿ ಚಿಕಿತ್ಸೆಯ ನಂತರ ಮಗುವಿಗೆ ಟ್ರೈಕೊಬೆಜೋರ್ ಎಂಬ ಅಪರೂಪದ ಕಾಯಿಲೆ ಇದೆ ಎಂದು ತಿಳಿದುಬಂದಿದೆ.  ಟ್ರೈಕೊಬೆಜೋರ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಕೂದಲು ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ ಮತ್ತು ಗಡ್ಡೆಯಾಗುತ್ತದೆ. ಈ ಸ್ಥಿತಿಯನ್ನು ಹೇರ್ ಬಾಲ್ ಎಂದೂ ಕರೆಯುತ್ತಾರೆ.

ಇದು ಕೂದಲು, ದಾರ ಮತ್ತು ಬಳಪಗಳನ್ನು ಸೇವಿಸುವುದರಿಂದ ಉಂಟಾಗುವ ಕಾಯಿಲೆಯಾಗಿದೆ.

ಆದರೆ ಮಗುವಿನ ಅನಾರೋಗ್ಯವು ಅಸಾಮಾನ್ಯವಾಗಿತ್ತು ಮತ್ತು ಕೂದಲಿನ ಚೆಂಡು ಸಣ್ಣ ಕರುಳಿನವರೆಗೆ ಹರಡಿತು. ಮಗುವಿನಲ್ಲಿ, ಹೇರ್ಬಾಲ್ 127 ಸೆಂ.ಮೀ ಉದ್ದವಿತ್ತು. ಇದು ಟ್ರೈಕೋಬೆಜೋರ್‌ನ ಅತ್ಯಂತ ಅಪರೂಪದ ರೂಪವಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ

ಜ್ಯೂಸ್‌ಗೆ ಮೂತ್ರ ಬೆರೆಸಿ ಕೊಡುತ್ತಿದ್ದ ಅಂಗಡಿಯವನನ್ನು ಥಳಿಸಿದ ಜನರು, ಅಂಗಡಿಯಾತನ ಬಂಧನ

0



ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಗ್ರಾಹಕರಿಗೆ ಹಣ್ಣಿನ ರಸದಲ್ಲಿ ಮೂತ್ರ ಬೆರೆಸಿ ವಿತರಿಸುತ್ತಿದ್ದ ಅಂಗಡಿಯವನ ಮೇಲೆ ಕೋಪಗೊಂಡ ಸ್ಥಳೀಯರು ಅಂಗಡಿಯವನೊಬ್ಬನನ್ನು ಥಳಿಸಿದ್ದಾರೆ.

ನಂತರ ಪೊಲೀಸರು ಖುಷಿ ಜ್ಯೂಸ್ ಕಾರ್ನರ್ ಮಾಲೀಕ ಅಮೀರ್ ಖಾನ್ ನನ್ನು ಬಂಧಿಸಿ ಆತನ ಅಪ್ರಾಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ.

ಅಂಗಡಿಯವರು ಹಣ್ಣಿನ ರಸಕ್ಕೆ ಹಳದಿ ಮಿಶ್ರಿತ ದ್ರವವನ್ನು ಬೆರೆಸುವುದನ್ನು ಕೆಲವರು ಗಮನಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಅಷ್ಟರಲ್ಲಾಗಲೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂಗಡಿ ಮಾಲೀಕರನ್ನು ಥಳಿಸಿದ್ದಾರೆ.

ಪೊಲೀಸರಿಗೆ ಮಾಹಿತಿ ಬಂದ ನಂತರ ಜ್ಯೂಸ್ ಸ್ಟಾಲ್ ನಲ್ಲಿ ತಪಾಸಣೆ ನಡೆಸಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬ ಪತ್ತೆಯಾಗಿದೆ
ಈ ಕೃತ್ಯದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ವರ್ಮಾ ಹೇಳಿದ್ದಾರೆ.

ಅಂಗಡಿಯಲ್ಲಿ ಮೂತ್ರ ಇದ್ದ ಬಗ್ಗೆ ಅಂಗಡಿಯವ ಯಾವುದೇ ತೃಪ್ತಿಕರ ಉತ್ತರವನ್ನು ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ.

“ಸೆಪ್ಟೆಂಬರ್ 13 ರಂದು ಮಾಹಿತಿ ಬಂದ ನಂತರ, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು ಮತ್ತು ಅಂಗಡಿಯಲ್ಲಿನ ಡಬ್ಬದಲ್ಲಿ ಸುಮಾರು 1 ಲೀಟರ್ ಅನುಮಾನಾಸ್ಪದ ಮೂತ್ರ ಪತ್ತೆಯಾಗಿದೆ. ಪೊಲೀಸರು ಅಮೀರ್ ಖಾನ್ ನನ್ನು ಬಂಧಿಸಿದ್ದಾರೆ.

ಎಫ್ಐಆರ್ ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಡೆಯುತ್ತಿದೆ” ಎಂದು ವರ್ಮಾ ಹೇಳಿದರು.

‘ಉತ್ತರನ ಪೌರುಷ’ ಯಕ್ಷಗಾನ ತಾಳಮದ್ದಳೆ – ಜೋಷಿ, ಉಜಿರೆ, ವಳಕ್ಕುಂಜ

0

ನಾಳೆ ದಿನಾಂಕ 15-09-2024, ಆದಿತ್ಯವಾರ ಅಪರಾಹ್ನ ಘಂಟೆ 2.15ರಿಂದ ಕಾರ್ಕಳ ಶ್ರೀನಿವಾಸ ಕಲಾಮಂದಿರದಲ್ಲಿ ‘ಉತ್ತರನ ಪೌರುಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಪ್ರಸಿದ್ಧ ಕಲಾವಿದರಾದ ಶ್ರೀ ಪ್ರಭಾಕರ ಜೋಷಿ, ಶ್ರೀ ಉಜಿರೆ ಅಶೋಕ ಭಟ್, ಶ್ರೀ ರವಿಶಂಕರ್ ವಳಕ್ಕುಂಜ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರವನ್ನು ನೋಡಿ.

ಕರ್ಣಾರ್ಜುನ – ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ

0

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 15.09.2024ನೇ ಆದಿತ್ಯವಾರ ಸಂಜೆ 4 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣಾರ್ಜುನ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ವಿವರಗಳಿಗೆ ಕೆಳಗಿನ ಚಿತ್ರ ನೋಡಿ

ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆ.ಎಂ .ಸಿ .ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 14- 09- 2024 ನೇ ಶನಿವಾರದಂದು ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಸಿರಿಬಾಗಿಲು ಪ್ರತಿಷ್ಠಾನದಿಂದ ಕೆ.ಎಂ.ಸಿ .ಆಸ್ಪತ್ರೆ ಅತ್ತಾವರ ಇವರ ಎರಡನೇ ವೈದ್ಯಕೀಯ ಶಿಬಿರವಾಗಿರುತ್ತದೆ. ಈ ಶಿಬಿರವನ್ನು ಕಾಸರಗೋಡಿನ ಹಿರಿಯ ವೈದ್ಯರಾದಂತಹ ಡಾಕ್ಟರ್ ಬಿ. ಎಸ್. ರಾವ್ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು .

ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆದು ಬಡಬಗ್ಗರಿಗೆ ಇದರಿಂದ ಉಪಯೋಗವಾಗಬೇಕು. ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು, ಸಿರಿಬಾಗಿಲು ಪ್ರತಿಷ್ಠಾನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಇಂತಹ ಚಟುವಟಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಕೆ.ಎಂ.ಸಿ.ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದಂತಹ ಡಾಕ್ಟರ್ ಅರವಿಂದ ಎನ್. ಅವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿಗಾಗಿ ಮಾಹಿತಿಯನ್ನು ನೀಡಿದರು. ಮಧ್ಯಪಾನ ,ಗುಟ್ಕ ಸೇವನೆ, ಸಿಗರೇಟ್ ಸೇವನೆ ಇತ್ಯಾದಿ ದುಶ್ಚಟಗಳಿಂದ ಸಮಾಜದ ಎಲ್ಲರೂ ಮುಕ್ತರಾಗಬೇಕು ಎಂದರು. ಕ್ಯಾನ್ಸರ್ ಇಂದ ಯಾರು ಭಯಭೀತರಾಗಬೇಕಾಗಿಲ್ಲ. ಕ್ಯಾನ್ಸರ್ ಬಂದರೆ ಹೇಗೆ ಗುಣಪಡಿಸಬಹುದು? ಯಾವ ರೀತಿ ಜಾಗೃತಿ ವಹಿಸಬೇಕು ?ಇತ್ಯಾದಿ ವಿಚಾರಗಳನ್ನು ತೆರೆದಿಟ್ಟರು.

ಕಲಾ ವಲಯದ ಶ್ರೇಷ್ಠ ಸಂಸ್ಥೆ ಸಿರಿಬಾಗಿಲು ಪ್ರತಿಷ್ಠಾನ ಇಂತಹ ಚಟುವಟಿಕೆ ನಡೆಸುತ್ತಿರುವುದು ತಂಬಾ ಸಂತಸ ತಂದಿದೆ ಅಂದರು. ಶ್ರೀ ವಾಸುದೇವ ಕಾರಂತ ಉಜಿರೆಕೆರೆ, ಇ. ಕೆ. ನಾಯಿನಾರ್ ಹಾಸ್ಪಿಟಲ್ ನ ಎಲುಬು ತಜ್ಞರಾದ ಡಾ. ಹರಿ ಕಿರಣ ಬಂಗೇರ ಉಪಸ್ಥಿತರಿದ್ದರು.

ಶ್ರೀ ಜಗದೀಶ ಕೆ. ಕೂಡ್ಲು ನಿರೂಪಿಸಿದರೆ, ಚಂದ್ರಕಲಾ ನೀರಾಳ ವಂದಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಆ ಬಳಿಕ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ವೈದ್ಯಕೀಯ ಶಿಬಿರದ ಸಂಘಟಕ ಶ್ರೀ ಉದಯ ಭಟ್ ನೇತೃತ್ವದಲ್ಲಿ ಶಿಬಿರ ನಡೆಯಿತು.

150ಕ್ಕೂ ಹೆಚ್ಚು ಜನರಿಗೆ ಇದರಿಂದ ಪ್ರಯೋಜನ ಪಡೆಯುವಂತಾಯಿತು. ಪ್ರತಿಷ್ಠಾನದ ಟ್ರಸ್ಟಿ ಸುಮಿತ್ರಾ ಮಯ್ಯ, ಶ್ರೀ ಮುಖ ಮಯ್ಯ, ಶ್ರೀರಾಜ್ ಮಯ್ಯ, ಶಿವ ನಾರಾಯಣ ವಾಟ್ಸಾಪ್ ಬಳಗದ ಸದಸ್ಯರು ಸಹಕರಿಸಿದರು.ಊರಿನ ಪ್ರಮುಖರು ಭಾಗವಹಿಸಿದರು.

‘ಯಕ್ಷದೀಪ’ ಆನ್ ಲೈನ್ ಸುದ್ದಿ ಜಾಲತಾಣ ಐದನೇ ವರ್ಷಕ್ಕೆ ಪದಾರ್ಪಣೆ – ಓದುಗರಿಗೆ ಕೃತಜ್ಞತೆಗಳು

0

‘ಯಕ್ಷದೀಪ’ ಆನ್ ಲೈನ್ ಸುದ್ದಿ ಜಾಲತಾಣವು ಯಶಸ್ವಿ ಐದನೇ ವರ್ಷಕ್ಕೆ ಪದಾರ್ಪಣೆಗೊಂಡಿದೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಈ ಸಂದರ್ಭದಲ್ಲಿ ನಮ್ಮೆಲ್ಲಾ ಓದುಗರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

ಕೊರೊನಾ ಸಂದರ್ಭದಲ್ಲಿ ಬಂದ ಆರ್ಥಿಕ ಸಂಕಷ್ಟ ನಮ್ಮನ್ನು ಅನಿವಾರ್ಯವಾಗಿ ಪ್ರಿಂಟಿಂಗ್ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮಕ್ಕೆ ದೂಡಿತು.

ಈ ಸಂದರ್ಭದಲ್ಲಿ ನಮ್ಮೆಲ್ಲಾ ಓದುಗರು ನಮ್ಮನ್ನು ಕೈಹಿಡಿದು ಪ್ರೋತ್ಸಾಹಿಸಿದರು. ಅವರಿಗೆ ಎಲ್ಲರಿಗೂ ಯಾವಾಗಲೂ ಕೃತಜ್ಞತೆಯ ಭಾವವನ್ನು ಹೊಂದಿರುತ್ತೇವೆ.

ಆದರೂ ಕೆಲವು ಮಂದಿ ಆ ಕಷ್ಟದ ಸನ್ನಿವೇಶದಲ್ಲಿ ಬೆನ್ನ ಹಿಂದೆ ಕುಹಕವಾಡಿದರು. ಆ ನೋವು ಹಾಗೆಯೇ ಉಳಿದಿದೆ. ಇನ್ನು ಕೆಲವರು ಈಗ ತಾವೂ ಡಿಜಿಟಲ್ ಮಾಧ್ಯಮಕ್ಕೆ ಮೊರೆಹೋಗಿದ್ದಾರೆ.

ಏನೇ ಇದ್ದರೂ ಓದುಗರ ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತಾ ಮುಂದುವರಿಯಲು ಸಹೃದಯಿ ಓದುಗರ ಪ್ರೋತ್ಸಾಹವನ್ನು ಸದಾ ಆಶಿಸುತ್ತೇವೆ.

2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ – ಪಾರ್ತಿಸುಬ್ಬ ಪ್ರಶಸ್ತಿಗೆ ಸಂಜೀವ ಸುವರ್ಣ

0

2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ

2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯ ವಿವರಗಳನ್ನು ಪ್ರಕಟಿಸಲಾಗಿದೆ.

ಶ್ರೀ ಬನ್ನಂಜೆ ಸಂಜೀವ ಸುವರ್ಣರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಳಿದ ಪ್ರಶಸ್ತಿ ವಿಜೇತರ ವಿವರಗಳನ್ನು ತಿಳಿಯಲು ಕೆಳಗಿನ ಪ್ರಕಟಣೆಯನ್ನು ಗಮನಿಸಿ.

ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅಂಬಿಕಾ ವಿದ್ಯಾಲಯದ ದೃಶಾನ ಪ್ರಥಮ

0

ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅಂಬಿಕಾ ವಿದ್ಯಾಲಯದ ದೃಶಾನ ಪ್ರಥಮ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಎಂಟನೇ ತರಗತಿ ವಿದ್ಯಾರ್ಥಿನಿ ದೃಶಾನ ಸುರೇಶ ಸರಳಿಕಾನ

ಇವರು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಸೋಮವಾರ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್‌ನ 14 ವಯೋಮಿತಿ ಒಳಗಿನ (ಬಾಲವರ್ಗ) ಸ್ಪರ್ಧೆಯಲ್ಲಿ ಭಾಗವಹಿಸಿ

100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಇವರು ಬೆಟ್ಟಂಪಾಡಿಯ ಸುರೇಶ ಗೌಡ ಸರಳಿಕಾನ ಮತ್ತು ವಿದ್ಯಾಶ್ರೀ ದಂಪತಿಯವರ ಪುತ್ರಿ.