ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ ನಡೆಯಲಿದೆ. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದ ಮುಂದಿನ ಲೋಕಾರ್ಪಣೆಯ ವರೆಗೆ ವಿವಿಧ ಕಲಾ ಸಾಂಸ್ಕೃತಿಕ, ಸಾಹಿತ್ಯ ವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ನಾಳೆ ಅಂದರೆ ದಿನಾಂಕ 04.10.2022ನೇ ಮಂಗಳವಾರ ಮಧ್ಯಾಹ್ನ 3 ಘಂಟೆಗೆ ಶಾಸ್ತ್ರೀಯ ಸಂಗೀತ ತರಗತಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಸಂಗೀತ ಶಿಕ್ಷಕರಾಗಿ ಗಾನಭೂಷಣ ಶ್ರೀಮತಿ ಜಯಭಾರತಿ ವಿಷ್ಣುಪ್ರಕಾಶ್, ಕಾವುಮಠ ಇವರು ಸಂಗೀತ ತರಬೇತಿಯನ್ನು ನೀಡಲಿದ್ದಾರೆ. ಆಸಕ್ತರು ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಬಳ್ಕೂರು ಶ್ರೀ ಕೃಷ್ಣಯಾಜಿ ಅವರು ಬಡಗುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತೆಂಟು ವರ್ಷಗಳಿಂದ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ನಾಲ್ಕೂವರೆ ದಶಕದಲ್ಲಿ ಹಲವು ಮಹಾನ್ ಕಲಾವಿದರ, ಯಕ್ಷ ಕರ್ಮಿಗಳ, ಯುವ ಪ್ರತಿಭಾವಂತ ಕಲಾವಿದರ ಜತೆ ಒಡನಾಡಿದ ಸಾಧಕರಿವರು. “ಯಕ್ಷಗಾನವು ನನಗೆ ಅಶನ ವಸನಗಳನ್ನು ನೀಡುವುದರ ಜತೆಗೆ ಕೀರ್ತಿ ಸ್ಥಾನಮಾನಗಳನ್ನು ಒದಗಿಸಿದೆ” ಎಂದು ಹೇಳುವ ಮೂಲಕ ತಾನು ವ್ಯವಸಾಯ ಮಾಡುತ್ತಿರುವ ಕಲಾಪ್ರಕಾರವನ್ನು ಶ್ರೀ ಬಳ್ಕೂರು ಕೃಷ್ಣಯಾಜಿಗಳು ಗೌರವಿಸುತ್ತಾರೆ.
ಪ್ರವೇಶದಿಂದ ತೊಡಗಿ ನಿರ್ಗಮನದ ತನಕವೂ ಇವರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲರು. ರಂಗವನ್ನು ಪ್ರವೇಶಿಸುವಾಗಲೇ ಪ್ರದರ್ಶನವನ್ನು ಬಡಿದೆಬ್ಬಿಸಬಲ್ಲರು. ಪಾತ್ರಧಾರಿಯಾಗಿ ರಂಗದೊಳಗೆ ಇರುವಷ್ಟು ಹೊತ್ತೂ ರಂಗವು ಇವರಿಗೆ ಬಾಗುವ ರೀತಿಯನ್ನು ನಾವು ಗಮನಿಸಬಹುದು. ಎಲ್ಲಿಯೂ ಮೇರೆಯನ್ನು ಮೀರದೆ ಪಾತ್ರೋಚಿತವಾದ ಮಾತು, ಅಭಿನಯ ಕುಣಿತಗಳಿಂದ ಪ್ರದರ್ಶನವನ್ನು ಗೆಲ್ಲಿಸುವ ಕಲೆಯು ಇವರಿಗೆ ಕರಗತ. ಆದುದರಿಂದಲೇ ಇವರು ಬಡಗುತಿಟ್ಟು ಯಕ್ಷಗಾನದ ‘ರಂಗದ ರಾಜ’ ಎಂದು ಕರೆಸಿಕೊಂಡಿದ್ದಾರೆ.
“ಯಾಜಿ ಯಕ್ಷಮಿತ್ರ ಮಂಡಳಿ (ರಿ)” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಇವರು ಶ್ರೇಷ್ಠ ಕಲಾ ಸಂಘಟಕರೂ ಹೌದು. 2017ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಒಲಿದಿತ್ತು. ಬಡಗುತಿಟ್ಟು ಯಕ್ಷಗಾನದ ‘ರಂಗದ ರಾಜ’ ಶ್ರೀ ಬಳ್ಕೂರು ಕೃಷ್ಣಯಾಜಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಬಳ್ಕೂರು (ಇದು ಗೇರುಸೊಪ್ಪ ಸೀಮೆ) 1956 ಡಿಸೆಂಬರ್ 4ರಂದು ಶ್ರೀ ವಿಷ್ಣು ಯಾಜಿ ಮತ್ತು ಶ್ರೀಮತಿ ಮಂಕಾಳಿ ಅಮ್ಮ ದಂಪತಿಗಳ ಪುತ್ರನಾಗಿ ‘ಯಾಜಿ’ ಮನೆತನದಲ್ಲಿ ಜನನ. 108 ಎಕ್ರೆ ಜಮೀನು ಹೊಂದಿದ್ದ ಮನೆ ಇದು. ಭೂಮಸೂದೆ ಕಾಯ್ದೆ ಬಂದಾಗ ಇವರಿಗೆ ಎಂಟು ಎಕ್ರೆ ಜಮೀನು ಮಾತ್ರ ಉಳಿದಿತ್ತು.
ಶ್ರೀ ವಿಷ್ಣು ಯಾಜಿ ಅವರು ಕೃಷಿಕರು. ಯಾಜಿ ಮನೆತನದ ಹಿರಿಯರಾದ ಶ್ರೀ ರಾಮಚಂದ್ರ ಯಾಜಿ ಮತ್ತು ಶ್ರೀ ಬಾಬು ಯಾಜಿ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಓದಿದ್ದು ಹತ್ತನೇ ತರಗತಿ ವರೆಗೆ. ಏಳನೇ ತರಗತಿ ವರೆಗೆ ಕಬಾಡಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಇಡಗುಂಜಿ ಶ್ರೀ ಮಹಾಗಣಪತಿ ಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಅಕ್ಕನ ಮದುವೆ ನಡೆದ ದಿನದಂದು ಕೂಡಾ ಯಕ್ಷಗಾನ ಪ್ರದರ್ಶನವನ್ನು ನೋಡಲು ತೆರಳಿದ್ದರು. ಅಷ್ಟರ ಮಟ್ಟಿಗೆ ಯಕ್ಷಗಾನ ಕಲೆಯು ಆಕರ್ಷಿಸಿತ್ತು.
ಬಾಲ್ಯದಲ್ಲಿ ಕೊಳಗೀಬೀಸ್ ಮೇಳದ ಪ್ರದರ್ಶನಗಳನ್ನು ನೋಡಲು ಅವಕಾಶವಾಗಿತ್ತು. ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ, ಕೊಳಗಿ ಅನಂತ ಹೆಗಡೆ ಮೊದಲಾದ ಹಿರಿಯ ಕಲಾವಿದರ ಪಾತ್ರಗಳನ್ನು ನೋಡುತ್ತಾ ಬೆಳೆದವರು. ಚಿಟ್ಟಾಣಿಯವರಂತೆಯೇ ತಾನೂ ಆಗಬೇಕೆಂಬ ಕನಸನ್ನೂ ಕಂಡಿದ್ದರು. ಅಂತಸ್ಥವಾದ ಪ್ರತಿಭೆಯು ಪರಿಪೂರ್ಣವಾಗಿ ಕಾಣಿಸಿಕೊಳ್ಳಲು ಯಕ್ಷಗಾನದಲ್ಲಿ ಅವಕಾಶವಿದೆ ಎಂಬುದು ಶ್ರೀ ಯಾಜಿಯವರ ಅನಿಸಿಕೆ. ಇವರು ಕಲಾವಿದನಾಗಿ ರಂಗಪ್ರವೇಶ ಮಾಡಿದ್ದು ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಇಡಗುಂಜಿ ಶಾಲಾ ಪ್ರದರ್ಶನ. ಮಾಗದ ವಧೆ ಪ್ರಸಂಗದಲ್ಲಿ ಮಾಗಧನಾಗಿ ರಂಗವೇರಿದ್ದರು.
ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಜನೆಯ ಬಳಿಕ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ನಿರ್ಧಾರ. 1973ರಲ್ಲಿ ಕೆರೆಮನೆ ಶ್ರೀ ಮಹಾಬಲ ಹೆಗಡೆಯವರಿಂದ ನಾಟ್ಯ ಕಲಿಕೆ. ಬೆಳಿಗ್ಗೆ ಆರು ಘಂಟೆಯಿಂದ ತೊಡಗಿ ಹನ್ನೊಂದು ಘಂಟೆಯ ತನಕ ಕೃಷಿ ಕಾರ್ಯಗಳ ನಿರ್ವಹಣೆ (ಗದ್ದೆ ಬೇಸಾಯ) ಊಟ ಮಾಡಿ ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರ ಮನೆಗೆ. ಸಂಜೆ ಘಂಟೆ 4ರಿಂದ 6ರ ವರೆಗೆ ನಾಟ್ಯ ಕಲಿಕೆ. ಬಳಿಕ ಮರಳಿ ಮನೆಗೆ. ಹೀಗೆ ಮೂರು ತಿಂಗಳು ಪ್ರತಿದಿನವೂ ಕೆರೆಮನೆ ಮಹಾಬಲ ಹೆಗಡೆ ಅವರ ಮನೆಗೆ ತೆರಳಿ ನಾಟ್ಯ ಕಲಿತಿದ್ದರು.
ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ತಿರುಗಾಟ ಆರಂಭಿಸಿದ್ದು 1973-74ರಲ್ಲಿ. ಖ್ಯಾತ ಕಲಾವಿದರೂ, ಸಂಘಟಕರೂ ಆದ ಕೆರೆಮನೆ ಶಂಭು ಹೆಗಡೆ ಅವರ ಸಂಚಾಲಕತ್ವದ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ (ಕೆರೆಮನೆ). ಬಾಲಗೋಪಾಲನಾಗಿ ರಂಗಪ್ರವೇಶ. ಮುಂದಿನ ವರ್ಷ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗದಲ್ಲಿ ಸಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. ಎರಡು ವರ್ಷ ಸದ್ರಿ ಮೇಳದಲ್ಲಿ ತಿರುಗಾಟ. ಆಗ ನೆಬ್ಬೂರು ನಾರಾಯಣ ಭಾಗವತರು ಮತ್ತು ಕಪ್ಪೆಕೆರೆ ಸುಬ್ರಾಯ ಭಾಗವತರು ಸದ್ರಿ ಮೇಳದಲ್ಲಿ ಭಾಗವತರಾಗಿದ್ದರು.
1975-76ರಲ್ಲಿ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ. ಅಲ್ಲಿ ಒಡ್ಡೋಲಗ ವೇಷ ಮತ್ತು ಇತರ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಆಗ ಶ್ರೀ ನಾರ್ಣಪ್ಪ ಉಪ್ಪೂರರು ಸದ್ರಿ ಮೇಳದ ಭಾಗವತರಾಗಿದ್ದರು. ಮುಂದಿನ ವರ್ಷ (1976-77) ಶ್ರೀ ಚಂದ್ರ ಅಡಿಗ ಅವರ ಸಂಚಾಲಕತ್ವದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ನಿರ್ದೇಶನದಲ್ಲಿ ಕಮಲಶಿಲೆ ಮೇಳ ಆರಂಭವಾಗಿತ್ತು. ಸದ್ರಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರೊಂದಿಗೆ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು.
ಈ ಸಂದರ್ಭದಲ್ಲಿ ಬಳ್ಕೂರು ಕೃಷ್ಣಯಾಜಿ ಅವರು ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಚಂದ್ರಹಾಸ ಪ್ರಸಂಗದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರು ದುಷ್ಟಬುದ್ಧಿಯಾಗಿ ಅಭಿನಯಿಸಿದಾಗ ಯಾಜಿಯವರು ಚಂದ್ರಹಾಸನಾಗಿ ಕಾಣಿಸಿಕೊಂಡಿದ್ದರು. ಸುಭದ್ರಾ ಕಲ್ಯಾಣ ಪ್ರಸಂಗದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ಬಲರಾಮ ಮತ್ತು ಯಾಜಿಯವರ ಶ್ರೀಕೃಷ್ಣನ ಪಾತ್ರವು ರಂಜಿಸಿತ್ತು. ಮಾರುತಿ ಪ್ರತಾಪ ಪ್ರಸಂಗದಲ್ಲಿ ಕೆರೆಮನೆಯವರು ನಾರದನಾಗಿ ಮತ್ತು ಯಾಜಿಯವರು ಶ್ರೀಕೃಷ್ಣನಾಗಿ ಕಾಣಿಸಿಕೊಂಡಿದ್ದರು. ಆಗ ಥಂಡಿಮನೆ ತಿಮ್ಮಣ್ಣ ಭಟ್ಟರು ಹನುಮಂತನಾಗಿ ಅಭಿನಯಿಸಿದ್ದರು.
1978ರಲ್ಲಿ ಸಾಲಿಗ್ರಾಮ ಮೇಳಕ್ಕೆ ಸೇರಿದ ಶ್ರೀ ಕೃಷ್ಣಯಾಜಿ ಅವರು ಸದ್ರಿ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿದ್ದರು. ಅಲ್ಲಿ ನೆಲ್ಲೂರು ಮರಿಯಪ್ಪಾಚಾರ್, ಸದಾನಂದ ಹೆಬ್ಬಾರ್, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜು ನಾಯ್ಕ, ಅರಾಟೆ ಮಂಜುನಾಥ, ಮುಖ್ಯಪ್ರಾಣ ಕಿನ್ನಿಗೋಳಿ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು. ಸದ್ರಿ ಮೇಳದ ಜ್ವಾಲಾಪ್ರತಾಪ (ಪ್ರವೀರನ ಪಾತ್ರದಲ್ಲಿ) ರಾಜನರ್ತಕಿ ಮೊದಲಾದ ಪ್ರಸಂಗಗಳು ಯಾಜಿಯವರಿಗೆ ಹೆಸರನ್ನು ತಂದುಕೊಟ್ಟಿತ್ತು. ಬಳಿಕ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಎರಡು ವರ್ಷ ವ್ಯವಸಾಯ.
ಮರಳಿ ಕೆರೆಮನೆ ಶ್ರೀ ಶಂಭು ಹೆಗಡೆ ಅವರ ಇಡಗುಂಜಿ ಮೇಳದಲ್ಲಿ ನಾಲ್ಕು ವರ್ಷ ವ್ಯವಸಾಯ. ಮತ್ತೆ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಬಳಿಕ ಶ್ರೀ ವಿದ್ಯಾಧರ ರಾವ್ ಜಲವಳ್ಳಿ ಅವರ ಕಲಾಧರ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ. ಬಳಿಕ ಮರಳಿ ಸಾಲಿಗ್ರಾಮ ಮೇಳದಲ್ಲಿ 3 ವರ್ಷ ವ್ಯವಸಾಯ. ಹೀಗೆ ಸಾಗಿತ್ತು ಶ್ರೀ ಬಳ್ಕೂರು ಕೃಷ್ಣಯಾಜಿಯವರ ಮೇಳದ ವ್ಯವಸಾಯ. ಕಿರೀಟ ವೇಷ ಮಾಡುವುದಕ್ಕೆ ಮೊದಲು ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಶ್ರೀಕೃಷ್ಣ, ಸುಧನ್ವ, ಚಂದ್ರಹಾಸ ಮೊದಲಾದ ಪಾತ್ರಗಳಲ್ಲಿ ರಂಜಿಸಿದ್ದರು. ಶ್ರೀಕೃಷ್ಣನ ಪಾತ್ರವು ಇವರಿಗೆ ಖ್ಯಾತಿಯನ್ನು ಗಳಿಸಿಕೊಟ್ಟಿತ್ತು.
ಆಗ ಪತ್ರಿಕೆಯೊಂದು ‘ಯಕ್ಷಲೋಕದ ನಿತ್ಯ ಶ್ರೀಕೃಷ್ಣ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. ಕರ್ಣಪರ್ವ ಪ್ರಸಂಗದ ಕರ್ಣ, ಕೀಚಕ ವಧೆಯ ಕೀಚಕ, ಪಟ್ಟಾಭಿಷೇಕದ ದಶರಥ, ಚಂದ್ರಹಾಸ ಪ್ರಸಂಗದ ಮದನ, ವರ್ಣವೈಷಮ್ಯ ಪ್ರಸಂಗದ ಕರ್ಣ, ಜಾಂಬವತಿ ಕಲ್ಯಾಣ ಪ್ರಸಂಗದ ಜಾಂಬವ, ಅತಿಕಾಯ ಮೋಕ್ಷ ಪ್ರಸಂಗದ ಅತಿಕಾಯ, ಭೀಷ್ಮ ವಿಜಯ ಮತ್ತು ಭೀಷ್ಮ ಪರ್ವ ಪ್ರಸಂಗಗಳ ಭೀಷ್ಮ, ಲವಕುಶರ ಕಾಳಗದ ಶ್ರೀರಾಮ ಮೊದಲಾದ ಪಾತ್ರಗಳಲ್ಲಿ ಶ್ರೀ ಯಾಜಿಯವರು ಜನ ಮೆಚ್ಚುವಂತೆ ಅಭಿನಯಿಸಿದ್ದರು. ಚೆಲುವೆ ಚಿತ್ರಾವತಿ ಪ್ರಸಂಗದ ಹೇಮಾಂಗದ ಮತ್ತು ನಾಗಶ್ರೀ ಪ್ರಸಂಗದ ಶಿಥಿಲ ಪಾತ್ರಗಳಲ್ಲಿ ಯಾಜಿಯವರ ನಿರ್ವಹಣೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು.
2004ರಲ್ಲಿ ‘ಯಾಜಿ ಯಕ್ಷ ಮಿತ್ರ ಮಂಡಳಿ (ರಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಯಕ್ಷಗಾನ ಕಲಾಕ್ಷೇತ್ರದಲ್ಲಿ ಸಂಘಟಕನಾಗಿಯೂ ಕಾಣಿಸಿಕೊಂಡರು. ಈ ಸಂಸ್ಥೆಯ ಪ್ರಥಮ ಕಾರ್ಯಕ್ರಮವು ಕೆರೆಮನೆ ಶ್ರೀ ಶಂಭು ಹೆಗಡೆಯವರ ಘನ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅಂದು ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ತಮ್ಮ ಗುರುಗಳಾದ ಕೆರೆಮನೆ ಶ್ರೀ ಮಹಾಬಲ ಹೆಗಡೆಯವರನ್ನು ಗೌರವಿಸಿ ಗುರುವಂದನೆಯನ್ನು ಸಲ್ಲಿಸಿದ್ದರು. ಈ ಸಂಸ್ಥೆಯಡಿ ಕರ್ನಾಟಕ ಮತ್ತು ಹೊರರಾಜ್ಯಗಳ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನಡೆಸುತ್ತಾ ಬಂದಿರುತ್ತಾರೆ.
ಸಹಧರ್ಮಿಣಿಯೊಂದಿಗೆ
ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತಿ ವರ್ಷವೂ ಅಶಕ್ತ ಕಲಾವಿದರನ್ನು ಗುರುತಿಸಿ ಅವರಿಗೆ ಧನ ಸಹಾಯವನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯಡಿ ಅನೇಕ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಎರಡು ಬಾರಿ ವಿದೇಶಯಾತ್ರೆಯನ್ನು ಕೈಗೊಂಡಿದ್ದಾರೆ. 1983ರಲ್ಲಿ ಕೆರೆಮನೆ ತಂಡದ ಸದಸ್ಯನಾಗಿ ಬಹರೇನ್ ಮತ್ತು 2017ರಲ್ಲಿ ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.
2017ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ಇವರು ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರಿಂದ ರಾಮ ವಿಠಲ ಪ್ರಶಸ್ತಿ, ಸ್ವರ್ಣವಲ್ಲೀ ಸಂಸ್ಥಾನದಿಂದ ಯಕ್ಷ ಕಲಾತಿಲಕ ಪ್ರಶಸ್ತಿ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರಿಂದ ಹವ್ಯಕ ಭೂಷಣ ಪ್ರಶಸ್ತಿ, ಡಾ। ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ, ಕೆರೆಮನೆ ಈ ಸಂಸ್ಥೆಯಿಂದ ಮಹಾಬಲ ಪ್ರಶಸ್ತಿ, ಮಣಿಪಾಲ ವಿದ್ಯಾಲಯದಿಂದ ವರ್ಷದ ವ್ಯಕ್ತಿ ಪ್ರಶಸ್ತಿ, ಬೆಂಗಳೂರು ಹೋಟೆಲ್ ಉದ್ಯಮದಾರರ ಸಹಕಾರೀ ಸಂಸ್ಥೆಯಿಂದ ಮಹಾಕವಿ ಮುದ್ದಣ ಪ್ರಶಸ್ತಿಯನ್ನೂ ಪಡೆದಿರುತ್ತಾರೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.
ಶ್ರೀ ಬಳ್ಕೂರು ಕೃಷ್ಣಯಾಜಿ ಅವರು 1983ರಿಂದ ತೊಡಗಿ ಕುಮಟಾ ಸಮೀಪದ ವಾಲಗಳ್ಳಿ ಎಂಬಲ್ಲಿ ವಾಸಿಸುತ್ತಿದ್ದಾರೆ. ಶ್ರೀಯುತರ ಪತ್ನಿ ಶ್ರೀಮತಿ ಶಾಂತಿ. ಇವರು ಗೃಹಣಿ. ಕಲಾಸಕ್ತೆಯಾಗಿ ಪತಿ ಶ್ರೀ ಬಳ್ಕೂರು ಕೃಷ್ಣಯಾಜಿ ಅವರ ಕಲಾಚಟುವಟಿಕೆಗಳಿಗೆ ಸದಾ ಸಹಕಾರಿಯಾಗಿ ಪ್ರೋತ್ಸಾಹ ನೀಡುತ್ತಾರೆ. ಶ್ರೀ ಕೃಷ್ಣ ಯಾಜಿ, ಶಾಂತಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ದೀಪಾ. ಇವರ ಪತಿ ಶ್ರೀ ಅನಂತ ಅಡಿ. ಇವರು ಶ್ರೀ ಗೋಕರ್ಣ ಕ್ಷೇತ್ರದಲ್ಲಿ ಪುರೋಹಿತರು. ಇವರಿಗೆ ಇಬ್ಬರು ಪುತ್ರರು. ಮಾ| ಅಭಿಷೇಕ್ ಮತ್ತು ಮಾ| ಅಪೂರ್ವ. ಕಿರಿಯ ಪುತ್ರಿ ಶ್ರೀಮತಿ ರೂಪಾ. ಇವರ ಪತಿ ಶ್ರೀ ದೀಪಕ್ ಹೆಗಡೆ. ಇವರು ಕೃಷಿಕರು. ಇವರ ಪುತ್ರಿ ಕುಮಾರಿ ಧನ್ಯಾ. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರಿಗೆ ಶ್ರೀ ದೇವರ ಅನುಗ್ರಹವು ಸದಾ ಇರಲಿ. ಇನ್ನೂ ಹೆಚ್ಚಿನ ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ದೊರೆಯಲಿ ಎಂಬ ಹಾರೈಕೆಗಳು.
ಶ್ರೀ ಬಳ್ಕೂರು ಕೃಷ್ಣಯಾಜಿ, ವಾಲಗಳ್ಳಿ, ಕುಮಟಾ, ಉ.ಕ – 581332
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ – ಫೋಟೋಗಳು: ಶ್ರೀನಟರಾಜ ಉಪಾಧ್ಯ (ಫೇಸ್ ಬುಕ್)
ಪುತ್ತೂರು, ಅ 2: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ರಾಜ್ಯ ದಸರಾ ಕ್ರೀಡಾಕೂಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನ0ದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ದೀಪ್ತಿ ಲಕ್ಷ್ಮಿ ಕೆದ್ವಿತೀಯ ಸ್ಥಾನ ಗಳಿಸಿದ್ದಾರೆ.
ಈಕೆ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆಯ ಶಂಕರ ಪ್ರಸಾದ್ ಕೆ ಮತ್ತು ಉಷಾ ದಂಪತಿ ಪುತ್ರಿ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಈಕೆ ತರಬೇತಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ‘ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ & ಕಲ್ಚರ್’ ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಪದ್ಮಜಾ ಭರತನಾಟ್ಯ ಕಲಾವಿದೆ ಮತ್ತು ಸಂಶೋಧಕಿಯಾಗಿ ಮತ್ತು ಕಲಾಪೋಷಕರಾಗಿ ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಲ್ಪಟ್ಟವರು.
ಭರತನಾಟ್ಯವನ್ನು ಕೆ. ಕಲ್ಯಾಣ ಸುಂದರಂ ಮತ್ತು ಶ್ರೀ ಚಕ್ಯಾರ್ ರಾಜನ್ ಇವರಿಂದ ಅಭ್ಯಾಸ ಮಾಡಿದ ಇವರು ವಾಣಿಜ್ಯ, ಕಾನೂನು ಪದವೀಧರರು. ಕೋರಿಯೋಗ್ರಫಿಯಲ್ಲಿ ಡಿಪ್ಲೋಮೋ, ತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿ.ವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ .
ನೃತ್ಯ ಪರೀಕ್ಷಕಿ, ನೃತ್ಯ ಪ್ರಕಾರಗಳ ಅಂಕಣಗಾರ್ತಿ, ತಂತ್ರ ಮತ್ತು ನಾಟ್ಯ ಗ್ರಂಥದ ಲೇಖಕಿ ಆಗಿರುವ ಇವರ ರಿತು ಶೃಂಗಾರ, ನವದರ್ಶನಂ, ಏಕಮ್ ಸತ್, ಬಿಂದು, ಹ್ರೀಂ, ಶಿವೋಹಂ ಇತ್ಯಾದಿ ನೃತ್ಯ ಪ್ರದರ್ಶನಗಳು ಇವರ ಉತ್ಕೃಷ್ಟ ಕಲಾಸಾಧನೆಗೆ ಸಾಕ್ಷಿಯಾಗಿದೆ.
ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ 32 ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ ಗರಿಮೆ ಇವರದು. ದೂರದರ್ಶನದಲ್ಲಿ ಇವರ ನಾಟ್ಯ ತಂತ್ರ ಧಾರಾವಾಹಿ ಪ್ರಸಾರಗೊಂಡಿದೆ. ವಿಶ್ವ ಸಂಸ್ಕೃತ ಸಮ್ಮೇಳನ, ಪಾರ್ಲಿಮೆಂಟ್ ಆಫ್ ರಿಲಿಜನ್ಸ್, ಸಂಗೀತ ನಾಟಕ ಅಕಾಡೆಮಿ ನಾಟ್ಯಶಾಸ್ತ್ರ ಸೆಮಿನಾರ್, ಚೆನ್ನೈ ನಾಟ್ಯಕಲಾ ಸಮಾವೇಶ ಮೊದಲಾದವುಗಳಲ್ಲಿ ಇವರ ಪಾಂಡಿತ್ಯವು ಅನಾವರಣಗೊಂಡಿದೆ.
ಆಂಧ್ರಪ್ರದೇಶದ ಸಿಲಿಕಾನ್ ಯುನಿವರ್ಸಿಟಿಯ ಭರತನಾಟ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೂಡ ನಿಯೋಜಿತರಾಗಿರುವ ಇವರು ಅತಿಥಿ ಉಪನ್ಯಾಸಕರಾಗಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರತರು.
ಪಡೆದ ಪುರಸ್ಕಾರಗಳು: ಕರ್ನಾಟಕ ಕಲಾಶ್ರೀ ಸ್ತ್ರೀ ಶಕ್ತಿ ಪ್ರಶಸ್ತಿ , ರೆಕ್ಸ್ ಗ್ಲೋಬಲ್ ಫೆಲೋ, ಸಿಂಗಾರಮಣಿ, ರಾಷ್ಟ್ರೀಯ ಅತ್ಯುತ್ತಮ ಮಹಿಳಾ ಸಾಧಕಿ, ಅಜಂತ ವಿಶ್ವಕಲಾ ರತ್ನ ಪ್ರಶಸ್ತಿ, ಸುಬ್ರಮಯ್ಯ ಟ್ರಸ್ಟ್ ಅವಾರ್ಡ್ ಹಾಗೂ ಇತರ ಗೌರವಗಳಿಗೆ ಪಾತ್ರರಾಗಿದ್ದಾರೆ.
ಅವಕಾಶ ವಂಚಿತರಾದ ಬಾಲ ಪ್ರತಿಭೆಗಳಿಗೆ ಭರತನಾಟ್ಯವನ್ನು ಅಭ್ಯಾಸ ಮಾಡಿದ ಇವರ ಶ್ರಮಕ್ಕೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಡಾ. ಎ.ಪಿ.ಜೆ ಕಲಾಂ ಇವರನ್ನು ಗೌರವಿಸಿದ್ದಾರೆ.
ಇವರ ಆತ್ಮಾಲಯ ಅಕಾಡೆಮಿ ವಿವಿಧ ಕ್ಷೇತ್ರದ ಸಾಧಕರನ್ನು ಜಸ್ಟಿಸ್ ಕೆ.ಜಗನ್ನಾಥ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ರೂಪಾಯಿ 50,000 ನಗದು ಪುರಸ್ಕಾರದೊಂದಿಗೆ ಗೌರವಿಸುತ್ತಾ ಬಂದಿದೆ. ಯಕ್ಷಗಾನ ಹಾಸ್ಯಗಾರ ಪೆರುವೊಡಿ ನಾರಾಯಣ ಭಟ್, ಗಾನ ಕೇಸರಿ ಕುದ್ಮಾರು ವೆಂಕಟರಮಣ, ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್, ಕುಂಬ್ಳೆ ಶ್ರೀಧರ್ ರಾವ್ (2022) ಈ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರು.
ಕುಂಬ್ಳೆ ಶ್ರೀಧರ್ ರಾವ್ ಅವರಿಗೆ ಈ ಬಾರಿಯ ಆತ್ಮಾಲಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ. (ಪ್ರಾತ್ಯಕ್ಷಿಕೆಗಾಗಿ ಸ್ತ್ರೀ ವೇಷದಲ್ಲಿದ್ದಾರೆ)
ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ನೀಡಿದ ಭರತನಾಟ್ಯದ ಪ್ರದರ್ಶನದ ಭಂಗಿಗಳನ್ನು ಇಲ್ಲಿ ನೀಡಲಾಗಿದೆ. ಕಲಾವಿದರಾಗಿ ಕಲಾವಿದರನ್ನು ಗುರುತಿಸುವ ಇವರ ಕಲಾ ಪ್ರೀತಿ ಅನುಪಮವಾದುದು.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ರಾಮನಗರ ಉಪ್ಪಿನಂಗಡಿ, 28ನೇ ವರ್ಷದ ಶ್ರೀ ಶಾರದೋತ್ಸವ ಪ್ರಯುಕ್ತ ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ದಿನಾಂಕ 4.10.2022ನೇ ಮಂಗಳವಾರ ಮಧ್ಯಾಹ್ನ ಗಂಟೆ 1:30 ರಿಂದ 4 ಗಂಟೆ ವರೆಗೆ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಸದಸ್ಯರಿಂದ ‘ತರಣಿಸೇನ ಕಾಳಗ’ ತಾಳಮದ್ದಳೆ ನಡೆಯಲಿದೆ.
ಭಾಗವತರು: ಪದ್ಮನಾಭ ಕುಲಾಲ್, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ
ಕೇರಳದ ಕಣ್ಣೂರಿನ ಚಾಲ ದಲ್ಲಿ ಹಾಲಿನ ಗಾಡಿಯಿಂದ 10 ಅಂಗಡಿಗಳು ಧ್ವಂಸವಾಗಿವೆ. ಮುಂಜಾನೆ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಚಾಲ ಮಾರುಕಟ್ಟೆಯಲ್ಲಿ ಹಾಲಿನ ಲಾರಿಯು ಸುಮಾರು 10 ಅಂಗಡಿಗಳನ್ನು ಧ್ವಂಸಗೊಳಿಸಿದೆ. ನಾಲ್ಕು ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ.
ಕಣ್ಣೂರಿನಲ್ಲಿ ಹಾಲಿನ ವ್ಯಾನ್ ಹತ್ತು ಅಂಗಡಿಗಳನ್ನು ಧ್ವಂಸಗೊಳಿಸಿದೆ, ಚಾಲಕ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣ.
ಕಣ್ಣೂರಿನ ಕೂತುಪರಂಬು ರಸ್ತೆಯಲ್ಲಿರುವ ಚಾಲಾ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗಿನ ಜಾವ 1 ಗಂಟೆಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಕೂಡಲೇ ಅಕ್ಕಪಕ್ಕದ ಸ್ಥಳೀಯರು ಲೈನ್‌ಮ್ಯಾನ್‌ಗೆ ಮಾಹಿತಿ ನೀಡಿದ್ದಾರೆ. ಮುಂಜಾನೆ ಹೊತ್ತಿನಲ್ಲಿ ಈ ಅವಘಡ ಸಂಭವಿಸಿದ್ದರಿಂದ ಮಾರುಕಟ್ಟೆಯಲ್ಲಿ ಜನ ಇನ್ನೂ ಬಾರದೇ ಇದ್ದುದರಿಂದ ಭಾರೀ ಅನಾಹುತ ತಪ್ಪಿತು.
ಚಾಲಕ ನಿದ್ರೆಗೆ ಜಾರಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಯಾವುದೇ ವಿಷಯವಿರಲಿ, ಅತಿಯಾದ ಆತ್ಮವಿಶ್ವಾಸ ಅಪಾಯಕ್ಕೆ ಆಹ್ವಾನ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲೊಬ್ಬ ಹಾವು ಹಿಡಿಯುವಾತ ಅತಿಯಾದ ಆತ್ಮವಿಶ್ವಾಸದಿಂದ ಹಾವನ್ನು ಹಿಡಿದು ಅದಕ್ಕೆ ಚುಂಬಿಸಲು ಯತ್ನಿಸುತ್ತಾನೆ.
“ನಾಗರಹಾವಿನೊಂದಿಗೆ ಸರಸ – ಎಚ್ಚರ ತಪ್ಪಿದರೆ ಮಸಣಕ್ಕೆ ದಾರಿ ” ಎಂಬ ಮಾತು ಇಲ್ಲಿ ನಿಜವಾಯಿತೋ ಗೊತ್ತಿಲ್ಲ.
ನಾಗರ ಹಾವು ಮುತ್ತು ಕೊಟ್ಟ ಕೂಡಲೇ ಹಾವು ಜೋರಾಗಿ ಆತನನ್ನು ಕಚ್ಚುತ್ತದೆ. ಆಮೇಲೆ ಏನಾಯಿತು ಎಂಬ ಬಗ್ಗೆ ಮಾಹಿತಿಯಿಲ್ಲ.
ಆದರೆ ಇದು ಭಾರತದಲ್ಲಿಯೇ ನಡೆದ ಘಟನೆ ಎಂಬುದಂತೂ ನಿಜ. ಈಗ ಈ ವೀಡಿಯೋ ಎಲ್ಲೆಡೆಯೂ ವೈರಲ್ ಆಗುತ್ತಿದೆ.
ಮಹ್ಸಾ ಅಮಿನಿಯ ಸಾವಿನ ಪ್ರತಿಭಟನೆಗಳಲ್ಲಿ ಇದುವರೆಗೂ ಇರಾನಿನಲ್ಲಿ 90ಕ್ಕೂ ಹೆಚ್ಚು ಜನರ ಸಾವು
ಮಹ್ಸಾ ಅಮಿನಿಯ ಸಾವಿನ ಪ್ರತಿಭಟನೆಗಳಲ್ಲಿ ಇದುವರೆಗೂ ಇರಾನಿನಲ್ಲಿ 90ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಇರಾನ್ ನಲ್ಲಿ ಮಾಧ್ಯಮ ಪ್ರಕಟಣೆಯಲ್ಲಿ ಮಹ್ಸಾ ಅಮಿನಿಯ ಸಾವಿನ ವಿರುದ್ಧ ಇರಾನ್ ಪ್ರತಿಭಟನೆಯಲ್ಲಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಎಂಬ ಮಾಹಿತಿಯನ್ನು ನೀಡಲಾಗಿದೆ.
ಇದರಲ್ಲಿ ಹೆಚ್ಚಿನವರು ಪೊಲೀಸ್ ಕ್ರಮಗಳಿಂದ ಬಲಿಯಾಗಿಲ್ಲ ಎಂದು ಸರಕಾರ ಹೇಳುತ್ತಿದೆ. ಪ್ರತಿಭಟನೆಯ ವಿರುದ್ಧ ಇನ್ನೊಂದು ಶಸ್ತ್ರಸಜ್ಜಿತ ತೀವ್ರವಾದಿ ಗುಂಪು ದಾಳಿಮಾಡಿದೆ ಎಂದು ಇರಾನ್ ಸರಕಾರ ಹೇಳುತ್ತಿದೆ.
Over 90 killed in Iran protests over Mahsa Amini's death
ಕಿಡ್ನಿ ವೈಫಲ್ಯದಿಂದ ‘ಮೇರೆ ಸಾಯಿ’ ನಟಿ ಅನಯಾ ಸೋನಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಟಿ ಆನಯಾ ಸೋನಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ದುರಂತ ಸುದ್ದಿಯನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಭಾರತೀಯ ಟಿವಿ ಧಾರಾವಾಹಿ `ಮೇರೆ ಸಾಯಿ’ ಖ್ಯಾತಿಯ ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯದಿಂದ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶೀಘ್ರದಲ್ಲೇ ಕಸಿ ಮಾಡಿಸಿಕೊಳ್ಳಬೇಕಿದೆ ಎಂದು ಶನಿವಾರ ಬಹಿರಂಗಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ನಲ್ಲಿ ಅನಯಾ ಸೋನಿ ಅವರು ಸುದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ ಮತ್ತು “ನನ್ನ ಕಿಡ್ನಿ ವಿಫಲವಾಗಿದೆ ಮತ್ತು ನಾನು ಡಯಾಲಿಸಿಸ್ ಮಾಡಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ … ನನ್ನ ಕ್ರಿಯೇಟಿನೈನ್ 15.76 ಕ್ಕೆ ಬಂದಿದೆ ಮತ್ತು ಹಿಮೋಗ್ಲೋಬಿನ್ 6.7 … ಸ್ಥಿತಿ ಗಂಭೀರವಾಗಿದೆ. ನಾನು ಸೋಮವಾರದಂದು ಅಂಧೇರಿ ಈಸ್ಟ್ ಆಸ್ಪತ್ರೆಯಲ್ಲಿ ಹೋಲಿ ಸ್ಪಿರಿಟ್‌ನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ..
ಹುಡುಗರೇ ನನ್ನ ಜೀವನವು ಸುಲಭವಾದ ಪ್ರಯಾಣವಾಗಿರಲಿಲ್ಲ, ಪ್ರಸ್ತುತ ಕ್ಷಣವನ್ನು ಆನಂದಿಸುವ ಮೂಲಕ ಅದನ್ನು ಸುಲಭವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ … “ಆದರೆ ಆನೇ ವಾಲಾ ಥಾ ಪಟಾ ಥಾ ಮುಝೆ .. ಆದರೆ ಇದು ಕೂಡ ಹಾದುಹೋಗುತ್ತದೆ .. ಶೀಘ್ರದಲ್ಲೇ ನನ್ನ ಮೂತ್ರಪಿಂಡ ಕಸಿಯೊಂದಿಗೆ ಹೋಗಬೇಕಾಗಿದೆ .. ಮೂತ್ರಪಿಂಡದ ನಂತರ ಡಯಾಲಿಸಿಸ್ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ನಟಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ದುರಂತ ಸುದ್ದಿಯನ್ನು ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ.
“ನೀವು ಶೀಘ್ರವಾಗಿ ಗುಣಮುಖರಾಗಲಿ ಎಂದು ನಮ್ಮ ಪ್ರಾರ್ಥನೆಗಳು ನಿಮ್ಮೊಂದಿಗಿವೆ, ಬೇಗ ಗುಣಮುಖರಾಗಲಿ ಗೆಳತಿ” ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಅಭಿಮಾನಿ, “ಆತ್ಮೀಯವಾಗಿ ಗುಣವಾಗಲಿ ಪ್ರಿಯೆ” ಎಂದು ಬರೆದಿದ್ದಾರೆ.
“ನಾನು ಕಂಡ ಅತ್ಯಂತ ಧೈರ್ಯಶಾಲಿ ಹುಡುಗಿ ನೀನು… ಬೇಗ ಗುಣಮುಖಳಾಗು” ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.
ದಸರಾ ನಾಡಹಬ್ಬದ ಪ್ರಯುಕ್ತ ಪುತ್ತೂರಿನ ನಟರಾಜ ವೇದಿಕೆಯಲ್ಲಿ ಹವ್ಯಕ ಭಾಷೆಯ ತಾಳಮದ್ದಳೆ ನಡೆಯಿತು. ‘ಸತಿ ದಹನ’ ಎಂಬ ಸಂಪೂರ್ಣ ಹವ್ಯಕ ಭಾಷೆಯಲ್ಲಿ ಪ್ರಸ್ತುತಿಗೊಂಡ ಈ ತಾಳಮದ್ದಳೆಯನ್ನು ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ನುರಿತ ಹಾಗೂ ಪ್ರಸಿದ್ಧ ಕಲಾವಿದರು ನಡೆಸಿಕೊಟ್ಟರು.
ಹವ್ಯಕ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳು ಗಮನಾರ್ಹ. ದಕ್ಷಯಜ್ಞ ಎಂಬ ಕನ್ನಡ ಪ್ರಸಂಗದ ಹವ್ಯಕ ಅವತರಣಿಕೆಯಾದ ‘ಸತಿ ದಹನ’ ಪ್ರಸಂಗದಲ್ಲಿ ಪದ್ಯಗಳೂ ಹವ್ಯಕ ಭಾಷೆಯಲ್ಲಿಯೇ ರಚಿತವಾಗಿದ್ದುವು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ದಸರಾ ನಾಡಹಬ್ಬ ಸಮಿತಿ, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ಹಾಸ್ಯರತ್ನ ನಯನಕುಮಾರ್ ಅಭಿಮಾನಿ ಬಳಗಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಳಮದ್ದಳೆಯ ನಂತರ ಗುರುಶಿಷ್ಯರಾದ ಕೀರ್ತಿಶೇಷ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಶಿ ಮತ್ತು ಹಾಸ್ಯರತ್ನ ನಯನಕುಮಾರ್ ಸಂಸ್ಮರಣೆ ನಡೆಯಿತು. ಪಶುಪತಿ ಶಾಸ್ತ್ರಿ ಶಿರಂಕಲ್ಲು ಸಂಸ್ಮರಣಾ ಭಾಷಣ ಮಾಡಿದರು.