Monday, January 20, 2025
Home Blog Page 17

ಖ್ಯಾತ ಯಕ್ಷಗಾನ ಕಲಾವಿದ ನಿಧನ

0

ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ (83) 21.09.2024ರಂದು ನಿಧನ ಹೊಂದಿದರು.

ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತು ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ, ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು.

ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು. ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಡ ಇವರ ಯಕ್ಷಪಯಣ, ಮುಂದೆ ಹವ್ಯಾಸಿ ಸಂಘ ಸಂಸ್ಥೆಗಳ ಆಟಗಳಲ್ಲಿ ಅತಿಕಾಯ, ರಕ್ತಬೀಜದಂತಹ ಪ್ರಮುಖ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವಷ್ಟು ಪ್ರೌಢತೆ ಸಾಧಿಸಿತ್ತು.

ಅವರು ಪತ್ನಿ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ವರ್ಷ ಸಂಸ್ಥೆ ಕಟೀಲಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ವಸಂತ ಶೆಟ್ಟಿಯವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ – ಎಂಟು ಜನರ ಮೇಲೆ ಮಾನನಷ್ಟ ದೂರು ದಾಖಲಿಸಿದ ರಿಮಾ ಕಲ್ಲಿಂಗಲ್

0


ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಮೇಜ್ ಹಾಳು ಮಾಡುವ ಉದ್ದೇಶ ಹೊಂದಿರುವ ವ್ಯಕ್ತಿಗಳ ವಿರುದ್ಧ ಎರ್ನಾಕುಲಂ ಡಿಸಿಪಿಗೆ ನಟಿ ರಿಮಾ ಕಲ್ಲಿಂಗಲ್ ಮಾನನಷ್ಟ ದೂರು ನೀಡಿದ್ದಾರೆ.

ಇದೀಗ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎರ್ನಾಕುಲಂ ಸೆಂಟ್ರಲ್ ಎಸಿಪಿಗೆ ಹಸ್ತಾಂತರಿಸಲಾಗಿದೆ. ವರದಿಗಳ ಪ್ರಕಾರ, ದೂರಿನಲ್ಲಿ ಎಂಟು ವ್ಯಕ್ತಿಗಳನ್ನು ಹೆಸರಿಸಲಾಗಿದೆ,

ರಿಮಾ ಅವರು ಮಾದಕ ವ್ಯಸನಿಯಾಗಿದ್ದಾರೆ ಎಂಬ ಆರೋಪವನ್ನು ಒಳಗೊಂಡಂತೆ ಸುಳ್ಳು ಮಾಹಿತಿಯನ್ನು ಈ ವ್ಯಕ್ತಿಗಳು ಹರಡಿದ್ದಾರೆ ಮಾತ್ರವಲ್ಲದೆ, ಆಕೆಯ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಳಿಂಗ ನಾವಡ ಪ್ರಶಸ್ತಿ 2024 – ಯಾರಿಗೆ ಒಲಿಯಿತು ಅದೃಷ್ಟ?

0


ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಶ್ರೀಯುತ ಕಾಳಿಂಗ ನಾವಡರ ನೆನಪಿನಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಾಂಸ್ಕೃತಿಕ ಸಂಸ್ಥೆಯಾದ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ.

ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣ ಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ.

ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ,ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ,ಶಂಕರ ಭಾಗವತ ಯಲ್ಲಾಪುರ, ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ಯಹಾಗೂ ಸುರೇಶ್ ರಾವ್ ಬಾರ್ಕೂರ್ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು ಸುಮಾರು 46 ವರ್ಷಗಳಿಂದ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತರಾದ

ಕೋಟ ಶಿವಾನಂದರವರಿಗೆ ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಸಭಾಂಗಣದ ವೇದಿಕೆಯಲ್ಲಿ 27-10-2024 ರ ಸಂಜೆ 4 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?

0


ಲೆಬನಾನ್‌ನಲ್ಲಿ ವಾಕಿ-ಟಾಕಿ ಸ್ಫೋಟ: ಪೇಜರ್ ಸ್ಫೋಟಗಳು ಇರಾನ್ ಬೆಂಬಲಿತ ಹಿಜ್ಬುಲ್ಲಾವನ್ನು ಅಸ್ತವ್ಯಸ್ತಗೊಳಿಸುವಂತೆ ಮಾಡಿದ ಒಂದು ದಿನದ ನಂತರ, ಸಶಸ್ತ್ರ ಗುಂಪು ಬಳಸುವ ಕೈಯಲ್ಲಿ ಹಿಡಿದ ರೇಡಿಯೋಗಳು ಇಂದು ಸ್ಫೋಟಗೊಂಡವು. ಪೇಜರ್‌ಗಳನ್ನು ಖರೀದಿಸಿದ ಅದೇ ಸಮಯದಲ್ಲಿ ರೇಡಿಯೊಗಳನ್ನು ಹೆಜ್ಬೊಲ್ಲಾಹ್ ಖರೀದಿಸಿದರು.

ನಿನ್ನೆ ನಡೆದ ಇದೇ ರೀತಿಯ ದಾಳಿಯಲ್ಲಿ ಬುಧವಾರ ಲೆಬನಾನ್‌ನ ಸಶಸ್ತ್ರ ಗುಂಪಿನ ಹಿಜ್ಬುಲ್ಲಾ ಸದಸ್ಯರು ಬಳಸಿದ ವಾಕಿ-ಟಾಕಿಗಳು ಸ್ಫೋಟಗೊಂಡ ನಂತರ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ದೇಶದ ದಕ್ಷಿಣ ಪ್ರದೇಶ ಮತ್ತು ರಾಜಧಾನಿ ಬೈರುತ್‌ನ ಉಪನಗರಗಳಲ್ಲಿ ಸ್ಫೋಟಗಳು ವರದಿಯಾಗಿವೆ.

ಟೆಹ್ರಾನ್ ಟೈಮ್ಸ್ ಪ್ರಕಾರ, ಹಿಂದಿನ ದಿನ ಕೊಲ್ಲಲ್ಪಟ್ಟವರಿಗೆ ಇರಾನ್ ಬೆಂಬಲಿತ ಹೆಜ್ಬುಲ್ಲಾ ಆಯೋಜಿಸಿದ ಅಂತ್ಯಕ್ರಿಯೆಯ ಬಳಿ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ.

ಮಂಗಳವಾರ, ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸದಸ್ಯರು ಬಳಸಿದ ಪೇಜರ್‌ಗಳು ಸ್ಫೋಟಗೊಂಡವು, ಇದರ ಪರಿಣಾಮವಾಗಿ ಕನಿಷ್ಠ 12 ಜನರು ಸಾವನ್ನಪ್ಪಿದರು ಮತ್ತು 2,750 ಜನರು ಗಾಯಗೊಂಡರು.

ಗಮನಾರ್ಹವಾಗಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಜಾ ಯುದ್ಧ ಪ್ರಾರಂಭವಾದ ನಂತರ ಮೊಬೈಲ್ ಫೋನ್‌ಗಳನ್ನು ತಪ್ಪಿಸುವಂತೆ ಮತ್ತು ಇಸ್ರೇಲಿ ಉಲ್ಲಂಘನೆಗಳನ್ನು ತಡೆಯಲು ತನ್ನದೇ ಆದ ದೂರಸಂಪರ್ಕ ವ್ಯವಸ್ಥೆಯನ್ನು ಅವಲಂಬಿಸಿರುವಂತೆ ಹೆಜ್ಬೊಲ್ಲಾ ತನ್ನ ಸದಸ್ಯರಿಗೆ ಸೂಚಿಸಿತ್ತು. ಲೆಬನಾನಿನ ಆಂತರಿಕ ಭದ್ರತಾ ಪಡೆಗಳು ದೇಶದಾದ್ಯಂತ ಹಲವಾರು ವೈರ್‌ಲೆಸ್ ಸಂವಹನ ಸಾಧನಗಳನ್ನು ಸ್ಫೋಟಿಸಲಾಗಿದೆ ಎಂದು ಹೇಳಿದರು,

ಇದು ತನ್ನ ಸಂವಹನದ “ಇಸ್ರೇಲಿ ಉಲ್ಲಂಘನೆ” ಎಂದು ಹಿಜ್ಬುಲ್ಲಾ ನಾಯಕತ್ವ ಹೇಳಿದೆ.

ವಾಕಿ-ಟಾಕಿಗಳನ್ನು ಐದು ತಿಂಗಳ ಹಿಂದೆ ಹೆಜ್ಬೊಲ್ಲಾ ಖರೀದಿಸಿದೆ, ಅದೇ ಸಮಯದಲ್ಲಿ ಪೇಜರ್‌ಗಳನ್ನು ಖರೀದಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ

0


ಉಡುಪಿ : ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 66ನೇ ವಾರ್ಷಿಕ ಮಹಾಸಭೆ ಕೆ. ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 16, 2024ರಂದು ಜರಗಿತು.

ಪ್ರಕಾಶ್ ಹೆಬ್ಬಾರ್ ಗತಸಭೆ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಎ ಗಣೇಶ್ ಹೆಬ್ಬಾರ್‌ರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು.
2024-25ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.


ಅಧ್ಯಕ್ಷ : ಕೆ. ಅಜಿತ್ ಕುಮಾರ್, ಉಪಾಧ್ಯಕ್ಷ : ಕೆ. ಜೆ. ಗಣೇಶ್, ಕಾರ್ಯದರ್ಶಿ : ಪ್ರಕಾಶ ಹೆಬ್ಬಾರ್, ಜತೆಕಾರ್ಯದರ್ಶಿ : ನಚಿಕೇತ, ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ, ಗೌರವ ಸಲಹೆಗಾರ : ಎ. ರಾಘವೇಂದ್ರ ಉಪಾಧ್ಯ.


ಕಾರ್ಯಕಾರಿ ಸಮಿತಿ ಸದಸ್ಯರು : ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಎ. ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಮಂಜುನಾಥ ತೆಂಕಿಲ್ಲಾಯ, ವಸಂತ ಪಾಲನ್, ಸುನಿಲ್ ಕುಮಾರ್, ಕೆ. ಜೆ. ಸುಧೀಂದ್ರ, ರಮೇಶ ಸಾಲಿಯಾನ್, ಜಯ ಕೆ.


ವಿಶೇಷ ಆಹ್ವಾನಿತರು : ಎಸ್. ವಿ. ಭಟ್, ವಿಜಯ್‌ಕುಮಾರ್, ವಿದ್ಯಾಪ್ರಸಾದ್, ಮಾಧವ ಕೆ., ಪ್ರಶಾಂತ್ ಕೆ. ಎಸ್., ಅರವಿಂದ ಆಚಾರ್ಯ, ದೀಪ್ತ ಆಚಾರ್ಯ, ಎ. ಸತ್ಯಜಿತ್ ಉಪಾಧ್ಯ, ರಮ್ಯ ಮಲ್ಪೆ, ವಾರಿಜ ಮಲ್ಪೆ, ವಾಗೀಶ ರಾವ್.


ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ಧನ್ಯವಾದ ಸಮರ್ಪಿಸಿದರು.

ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ

0

ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ತರಂಗಿಣಿ ಮಿತ್ರಮಂಡಳಿ ಪಡುಬಿದ್ರಿಯವರು ಆಯೋಜಿಸಿದ ತರಂಗಿಣಿ ಯಕ್ಷೋತ್ಸವದ ಪ್ರಯುಕ್ತ ದಿನಾಂಕ 22-09-2024ನೇ ಆದಿತ್ಯವಾರ ಮಧ್ಯಾಹ್ನ 1.30 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ

ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರವನ್ನು ಗಮನಿಸಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ

0

ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿರಿಯರಿಂದ ನಾವು ಕೇಳಿದ ಮತ್ತು ಪಡೆದ. ಮಾಹಿತಿ ಈಗಲೂ ಮಾರ್ಗದರ್ಶಕವೆನಿಸುತ್ತದೆ. ಇಂದಿನ ಯುವಜನಾಂಗಕ್ಕೆ ತಾಳ್ಮೆಯ ಕೊರತೆ ಇದ್ದು ಹಿರಿಯರ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿ ಪರಿತಪಿಸುವುದನ್ನು ನಾವು ಕಾಣುತ್ತೇವೆ. ಆದುದರಿಂದ ಹಿರಿಯರೊಬ್ಬರನ್ನು ನಾವು ಕಳೆದುಕೊಂಡರೆ ಒಂದು ಗ್ರಂಥಾಲಯವೇ ನಾಶವಾದಂತೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾ. ತುಕಾರಾಮ ಪೂಜಾರಿ ತಿಳಿಸಿದರು.

ಬಂಟ್ವಾಳದ ಸಂಚಯಗಿರಿಯಲ್ಲಿರುವ ಅಧ್ಯಯನ ಕೇಂದ್ರದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಇದರ ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಘದ ಸ್ಥಾಪನೆ, ತಾಲೂಕು ಸಮಿತಿಗಳ ನವೀಕರಣ, ಕೇಂದ್ರ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಪ್ರತಿನಿಧಿಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿದರು.

ಡಾ. ತುಕಾರಾಮ ಪೂಜಾರಿ ಅವರನ್ನು ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು. ಹಿರಿಯ ಸದಸ್ಯರಾದ ಸೀತಾರಾಮ ಕೆ ಸಾಲೆತ್ತೂರು ಪ್ರತಿಷ್ಠಾನಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಯಿತು.
ತುಳು ಅದ್ಯಯನ ಕೇಂದ್ರದ ವಸ್ತು ಸಂಗ್ರಹಾಲಯದ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರತಿಷ್ಠಾನದ ಸದಸ್ಯರಿಗೆ ತುಕಾರಾಮ ಪೂಜಾರಿಯವರು ನೀಡಿದರು.

ಬಂಟ್ವಾಳ ಘಟಕದ ಅಧ್ಯಕ್ಷರಾದ ಕಾಂತಾಡಿ ಸೀತಾರಾಮ ಶೆಟ್ಟಿ,
ಪ್ರತಿಷ್ಠಾನದ ಡಾ. ಬಿ. ಯನ್ ಮಹಾಲಿಂಗ ಭಟ್, ಜಯರಾಮ ಪೂಜಾರಿ, ಗಣೇಶ್ ಭಟ್ ಕುತ್ರೋಟ್ಟು, ಸೀತಾರಾಮ ಶೆಟ್ಟಿ ಉಜಿರೆ, ಭವಾನಿ ಶಂಕರ ಶೆಟ್ಟಿ, ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ, ಉದಯಶಂಕರ ರೈ ಪುಣಚ ಮೊದಲಾದವರು ಉಪಸ್ಥಿತರಿದ್ದರು.

ಬಾಲಕೃಷ್ಣ ನಾಯಕ ಕೋಕಳ ಪ್ರಾರ್ಥಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪಾಧ್ಯಕ್ಷರಾದ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ಎಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು ಸಹ ಸಂಚಾಲಕ ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ

0

ಯಕ್ಷಚೈತನ್ಯ ಅಶ್ವತ್ಥಪುರ ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ 28.09.2024ನೇ ಶನಿವಾರ ತಾಳಮದ್ದಳೆ, ಯಕ್ಷನಿಧಿ ಸಮರ್ಪಣೆ, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ.

ವಿವರಗಳಿಗೆ ಕೆಳಗಿನ ಚಿತ್ರವನ್ನು ನೋಡಿ.

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

0

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಪುತ್ತೂರು: ದಕ್ಷಿಣ ಕನ್ನಡದ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಗುರುವಾರ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಸಾಯನಶಾಸ್ತ್ರ ವಿಷಯ ಸಂಬಂಧಿ ವಿವಿಧ ಸ್ಪರ್ಧೆಗಳಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಲವು ಬಹುಮಾನ ಗಳಿಸಿದ್ದಾರೆ.

ಪುತ್ತೂರು ಕರ್ಕುಂಜದ ಬಿ ಕೆ ಸುರೇಶ್ ಮತ್ತು ಜಯಂತಿ ಎಸ್ ದಂಪತಿಯ ಪುತ್ರಿ ಕೆ ಎಸ್ ಮನೀಷಾ ‘ಇಂಟರ್ಯಾಕ್ಟಿವ್ ಕೆಮಿಸ್ಟ್ರಿ’ ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಟ್ಲದ ಜಗದೀಶ್ ವಿ ಮತ್ತು ಸಂಗೀತಾ ದಂಪತಿಯ ಪುತ್ರ ಚಿನ್ಮಯ್ ವಿ ಜೆ ‘ಡಾಕ್ಯುಮೆಂಟರಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪುತ್ತೂರು ದರ್ಬೆಯ ಶಿವರಾಮ್ ಆಳ್ವ ಮತ್ತು ಸೀಮಾ ಆಳ್ವ ದಂಪತಿಯ ಪುತ್ರಿ ವರ್ಷಿಣ ಆಳ್ವ ಮತ್ತು ಸುಬ್ರಹ್ಮಣ್ಯದ ಕೆ ಸತೀಶ ಕಲ್ಲೂರಾಯ ಮತ್ತು ರೇಣುಕಾ ದಂಪತಿಯ ಪುತ್ರಿ ಧನ್ಯಶ್ರೀ ಕೆ ‘ಕೆಮ್ ರಂಗೋಲಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಈ ಸ್ಪರ್ಧೆಯಲ್ಲಿ ದ ಕ ಜಿಲ್ಲೆಯ 30 ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾ ಭಾರತಿ ಮಂಗಳೂರಿನ ಮಂಗಳ ಸ್ಟೇಡಿಯಂನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಅಕ್ಷತ್ ಕುಮಾರ್ ಪ್ರಥಮ ಸ್ಥಾನದೊಂದಿಗೆ ವಿಜೇತರಾಗಿದ್ದಾರೆ.

ಇವರು ಉಪ್ಪಿನಂಗಡಿ ಪರಿಯಡ್ಕದ ಜಿ ಈಶ್ವರ ನಾಯ್ಕ ಮತ್ತು ಮಾಲತಿ ಎಂ ದಂಪತಿ ಪುತ್ರ.

ಇನ್ನೋರ್ವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯುಕ್ತ ವರ್ಷಿಣ 800 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರು ಬಂಟ್ವಾಳ ಕಡೇಶಿವಾಲಯದ ವಾಸು ಪೂಜಾರಿ ಮತ್ತು ಸುಧಾ ವಿ ಪಿ ದಂಪತಿ ಪುತ್ರಿ.

ಈ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.