ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾರದಾ ಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 02.10.2022, ರವಿವಾರ ವೇದಮೂರ್ತಿ ಶ್ರೀ ಕಾರ್ತಿಕ್ ಶಾಸ್ತ್ರಿ ಮತ್ತು ಬಳಗದವರು ಶಾರದಾಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಶಾಲಾ ವಾಹನ ಪೂಜೆಯನ್ನು ನೆರವೇರಿಸಲಾಯಿತು.
ನಂತರ 50 ಪುಟಾಣಿಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಮಕ್ಕಳಿಗೆ ತಿಲಕ ಇಟ್ಟು ಆರತಿ ಎತ್ತಿ ಶಾರದ ಮಾತೆಗೆ ಪುಷ್ಪ ನಮನವನ್ನು ಸಲ್ಲಿಸಿದರು. ಶಾಲಾ ಶಿಕ್ಷಕಿಯರು ಶ್ರೀ ಲಲಿತಾಸಹಸ್ರನಾಮ ಪಠಣ ಮಾಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
‘ಒರು ಅಡಾರ್ ಲವ್’ ಚಿತ್ರದಲ್ಲಿನ ತನ್ನ ಪ್ರಾಣಾಂತಿಕ ಕಣ್ಣು ಮಿಟುಕಿಸುವ ಮೂಲಕ ಎಲ್ಲರ ಹೃದಯವನ್ನು ಮಿಡಿಯುವಂತೆ ಮಾಡಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ತನ್ನ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮದಲ್ಲಿ , ನಟಿ ತನ್ನ ಅಭಿಮಾನಿಗಳನ್ನು ತಾನು ಎಲ್ಲಿದ್ದೇನೆ ಎಂಬ ಬಗ್ಗೆ ಆಗಾಗ ಪೋಸ್ಟ್ ಮಾಡುತ್ತಿರುತ್ತಾಳೆ.
ಅವಳು ಆಗಾಗ್ಗೆ ತನ್ನ ಮನಮೋಹಕ ಅಂಗಾಂಗಗಳನ್ನು ತೋರಿಸುವ ಫೋಟೋಶೂಟ್‌ಗಳ ತುಣುಕುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾ ತನ್ನ ಅಭಿಮಾನಿಗಳನ್ನು ಹುರಿದುಂಬಿಸುತ್ತಾಳೆ.
ಥೈಲ್ಯಾಂಡ್ ದೇಶ ಎಂದರೆ ಕೇಳಬೇಕೆ? ಅದು ಪ್ರವಾಸಿಗರ ಸ್ವರ್ಗ. ವಾರಿಯಾ ವಾರಿಯರ್ ಈಗ ಅಲ್ಲಿ ವಿಹರಿಸುತ್ತಿದ್ದಾರೆ. ಸ್ವರ್ಗೀಯ ದೇಶವಾದ ಥೈಲ್ಯಾಂಡ್‌ಗೆ ತನ್ನ ಪ್ರವಾಸವನ್ನು ಆನಂದಿಸುತ್ತಿದ್ದಾಳೆ. ಅವರು ತಮ್ಮ ಪ್ರವಾಸದ ಒಂದೆರಡು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಪ್ರಿಯಾ ವಾರಿಯರ್ ಅಲ್ಲಿ ಹುಲಿಯೊಂದಿಗೆ ಸರಸವಾಡುವ ವೀಡಿಯೊ ವೈರಲ್ ಆಗಿದೆ
22 ವರ್ಷದ ಸುಂದರಿ ಈಜುಕೊಳದಲ್ಲಿ ಆಕರ್ಷಣೀಯ ಭಂಗಿಗಳೊಂದಿಗೆ ನೋಡುವವರ ತಾಪಮಾನವನ್ನು ಹೆಚ್ಚಿಸಿದರು. ಹೊಳೆಯುವ ನೀರಿನಲ್ಲಿ ಅರ್ಧ ಮುಳುಗಿದ ಪ್ರಿಯಾ ತಾಜಾ ಗಾಳಿಯ ಉಸಿರಿನಂತೆ ಕಾಣುತ್ತಿದ್ದಳು, ಸುತ್ತು-ಗುಲಾಬಿ ಬಣ್ಣದ ಬ್ರೇಲೆಟ್ ಧರಿಸಿದ್ದಳು.
ಪ್ರಿಯಾ ಥೈಲ್ಯಾಂಡ್ ದ್ವೀಪಸಮೂಹದಲ್ಲಿ ಯಾರೊಂದಿಗೆ ವಿಹರಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಕಾಣಿಸುತ್ತಿದೆ. ಜೊತೆಗಿರುವವರು ಯಾರು, ಫೋಟೋಶೂಟ್ ಮಾಡುತ್ತಿರುವವರು ಯಾರು ಎಂಬ ಬಗ್ಗೆ ಮಾಹಿತಿಯಿಲ್ಲ.
ಅಲ್ಲಿ ದೋಣಿಯಲ್ಲಿ ಮತ್ತು ದ್ವೀಪದ ನೀರಿನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಬಿಕಿನಿ ಧರಿಸಿದ್ದಾರೆ. ನಟಿ ಸಮುದ್ರದಲ್ಲಿ ಈಜುತ್ತಿದ್ದಳು ಮತ್ತು ತನ್ನ ಎದೆಯ ಮೇಲೆ ಇರುವ ತನ್ನ ಹಚ್ಚೆ ತೋರಿಸಿರುವ ನೀಲಿ ಬಿಕಿನಿ ಟಾಪ್ ಧರಿಸಿ ದೋಣಿಯಿಂದ ಸೂರ್ಯಾಸ್ತವನ್ನು ವೀಕ್ಷಿಸುತ್ತಿರುವ ಫೋಟೋ ಸುಂದರವಾಗಿದೆ.
ಕಟೀಲು ಮೇಳದಲ್ಲಿ ಸಹಾಯಕ ಮದ್ದಲೆಗಾರರಾಗಿದ್ದ ಚಿದಾನಂದ ಗೌಡ (31 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ 05-10-2022ರಂದು ಸುರತ್ಕಲ್‌ನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ 15 ವರ್ಷಗಳಿಂದ ಕಟೀಲು ಮೇಳದಲ್ಲಿ ನಿತ್ಯವೇಷಧಾರಿಯಾಗಿ, ಸಹಾಯಕ ಮದ್ದಲೆಗಾರರಾಗಿ ತಿರುಗಾಟ ನಡೆಸುತ್ತಿದ್ದ ಇವರು ಪಾರಂಪರಿಕ ಚೌಕಟ್ಟಿನೊಳಗೆ ಮದ್ದಲೆ ನುಡಿತಗಳಿಗೆ ಮತ್ತು ಚಂಡೆವಾದಕರಿಗೆ ಪುರಕವಾಗಿ ಒತ್ತು ಮದ್ದಲೆಯನ್ನು ನುಡಿಸುವ ಕೌಶಲ್ಯವನ್ನು ಹೊಂದಿದ್ದರು.
ಅವಿವಾಹಿತರಾಗಿದ್ದ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸರಳ ವಾಸ್ತು ಕಂಪನಿ ಸಂಸ್ಥಾಪಕ ಆರ್ಕಿಟೆಕ್ಟ್ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವಿಶ್ವ ಶಕ್ತಿ ಸಂಪರ್ಕದ ಚಂದ್ರಶೇಖರ ಗುರೂಜಿ ಅವರ ಹತ್ಯೆಗಿಂತಲೂ ಜನರು ಹೆಚ್ಚು ಬೆಚ್ಚಿಬಿದ್ದದ್ದು ಅವರು ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯನ್ನು ನೋಡಿ.ಅವರ ಸ್ವಾಧೀನದಲ್ಲಿದ್ದ ಆಸ್ತಿಯೆಷ್ಟು? ಅವರ ಸ್ವಾಧೀನದಲ್ಲಿದ್ದ ಫ್ಲಾಟ್, ಜಮೀನು, ಸೈಟ್ ಇತ್ಯಾದಿಗಳ ವಿವರ, ಬೇರೆಯವರ ಹೆಸರಿನಲ್ಲಿ ಮಾಡಿದ ಕೋಟಿಗಟ್ಟಲೆ ಆಸ್ತಿಗಳು, ಅವರು ಕೊಡುತ್ತಿದ್ದ ಜಾಹೀರಾತುಗಳು, ಟಿವಿ ಮಾಧ್ಯಮದ ಜಾಹೀರಾತುಗಳಿಗೆ ಅವರು ಖರ್ಚು ಮಾಡುತ್ತಿದ್ದ ಹಣ ಇತ್ಯಾದಿಗಳನ್ನೆಲ್ಲಾ ಪ್ರಜ್ಞಾವಂತರು ಮೊದಲಿಂದಲೂ ಗಮನಿಸುತ್ತಿದ್ದರು.
ಆದರೆ ಗುರೂಜಿಯವರು ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿ ಆಗಿತ್ತು. ಹಂತಕ ಮಹಾಂತೇಶ್ ಹೆಸರಿನಲ್ಲಿದ್ದ 11 ಕೋಟಿ ಬೇನಾಮಿ ಜಮೀನಿನ ಆಸ್ತಿ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ.
“ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 11 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಾಗ ಇದೆ. ಈ ಜಾಗವನ್ನು ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಾಗವನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದರಿಂದ ವಿವಾದ ಆರಂಭವಾಗಿತ್ತು. ಈ ವಿಚಾರವಾಗಿ ಗುರೂಜಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದರು.
ಕೆಳಗಿನ ಕೋರ್ಟಿನಲ್ಲಿ ಮಹಾಂತೇಶ್ ಪರವಾಗಿ ತೀರ್ಪು ಬಂದದ್ದರಿಂದ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ ಗೆ ಹೋಗಿದ್ದರು. ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ನಡೆಸುತ್ತಿದ್ದರು. ಇದೂ ಗುರೂಜಿಯ ಕೋಪಕ್ಕೆ ಕಾರಣವಾಗಿ ಇವರಿಗೆ ಹೆಚ್ಚು ಪ್ರಯೋಜನ ಆಗದಂತೆ ನೋಡಿಕೊಂಡಿದ್ದರು.
ಹಂತಕ ಮಹಾಂತೇಶ್ ಮತ್ತು ಪತ್ನಿ ವನಜಾಕ್ಷಿ
ಇದರಿಂದ ಕೋಪಗೊಂಡ ಮಹಾಂತೇಶ್ ಮತ್ತು ಇನ್ನೊಬ್ಬ ಹಂತಕ ಗುರೂಜಿ ಅಪಾರ್ಟ್ ಮೆಂಟಿನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ದೂರು ಕೊಟ್ಟಿದ್ದ. ಈ ದೊರನ್ನು ಹಿಂದೆ ಪಡೆಯುವಂತೆ ಗುರೂಜಿ ಒತ್ತಡ ಹೇರುತ್ತಲೇ ಇದ್ದರು. ಹೀಗೆ ಒಂದರ ಹಿಂದೆ ಒಂದರಂತೆ ಜಗಳ ಆಗುತ್ತಲೇ ಇತ್ತು. ಇದನ್ನೆಲ್ಲಾ ಸಹಿಸದ ಹಂತಕರು ಬಹಳಷ್ಟು ಆಲೋಚಿಸಿ ನಿರ್ಧಾರಕ್ಕೆ ಬಂದರು.
ವಿಶ್ವ ಶಕ್ತಿಯ ಸಂಪರ್ಕದ ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲು ನಿರ್ಧರಿಸಿದರು. ಮೂರು ತಿಂಗಳು ಮೊದಲಿನಿಂದಲೂ ಹತ್ಯೆ ಮಾಡಲು ಹೊಂಚು ಹಾಕುತ್ತಿದ್ದರು.
ಸಂಧಾನ ಮಾಡಿಕೊಳ್ಳೋಣ ಎಂದು ಗುರೂಜಿಗೆ ಫೋನ್ ಮಾಡಿ ತಿಳಿಸಿದಾಗ ಇವರ ನಾಟಕವನ್ನು ಅರಿಯದ ಗುರೂಜಿ ಕೂಡಲೇ ಒಪ್ಪಿದರು. ಹಂತಕರು ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ಗೆ ಬಂದಿದ್ದರು. ಚಾಕು ತಂದಿದ್ದು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಚಾಕು ಇಟ್ಟುಕೊಂಡು ಬಂದಿದ್ದರು. ಮೊದಲು ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಬಳಿಕ ಚಾಕು ತೆಗೆದು ಹತ್ಯೆ ಮಾಡಿದ್ದರು”. ಈ ಎಲ್ಲಾ ವಿವರಗಳು ಚಾರ್ಜ್ ಶೀಟಿನಲ್ಲಿ ಇವೆ ಎಂದು ತಿಳಿದುಬಂದಿದೆ.
ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬುವವರ ವಿರುದ್ಧ ಪೊಲೀಸರು 800ಕ್ಕೂ ಹೆಚ್ಚು ಪುಟಗಳ ದೂರನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಜೂ.5ರಂದು ಉಣಕಲ್ಲ ಕೆರೆ ಬಳಿಯ ಹೊಟೇಲೊಂದರಲ್ಲಿ ಇಬ್ಬರು ಹಂತಕರು ಗುರೂಜಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಘಟನೆ ನಡೆದ 4 ಗಂಟೆಯೊಳಗೆ ರಾಮದುರ್ಗ ಬಳಿ ಹಂತಕರನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ತಡೆದು ಬಂಧಿಸಿದ್ದಾರೆ. ಇದೀಗ ಬಂಧಿತರ ವಿರುದ್ಧ 800ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ನೊಂದಿಗೆ ಕೊಲೆಗೆ ಸಂಬಂಧಿಸಿದ ಆಸ್ತಿ ಮತ್ತಿತರ ವಿಷಯಗಳ ದಾಖಲೆಗಳು ಹಾಗೂ ಸಂಗ್ರಹಿಸಿದ ಸಾಕ್ಷಿಗಳನ್ನು ಸಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಿಳಿದು ಬಂದಿದೆ. ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಎಸಿಪಿ ವಿನೋದ ಮುಕ್ತೇದಾರ್ ನೇತೃತ್ವದಲ್ಲಿ ಐವರ ತನಿಖಾ ತಂಡ ರಚಿಸಲಾಗಿತ್ತು.
ಪಿಕ್ಸೆಲ್ ವಾಚ್, ಗೂಗಲ್‌ನ ಮೊದಲ ಸ್ಮಾರ್ಟ್‌ವಾಚ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಇತ್ತೀಚಿನ Pixel Watch ಸ್ಮಾರ್ಟ್‌ವಾಚ್ ಆಪಲ್‌ನ ಜನಪ್ರಿಯ ಆಪಲ್ ವಾಚ್ ಸರಣಿಗೆ Google ನ ಉತ್ತರವಾಗಿದ್ದು ಅದು ಐಫೋನ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ತನ್ನ ಹೊಸ ಪಿಕ್ಸೆಲ್ ವಾಚ್ ಡಯಲ್ ಅನ್ನು ಶೇಕಡಾ 80 ರಷ್ಟು ಮರುಬಳಕೆಯ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗಿದೆ ಎಂದು ಗೂಗಲ್ ಹೇಳಿದೆ. ಗೂಗಲ್ ಪಿಕ್ಸೆಲ್ ವಾಚ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಇದು ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ.
ಪಿಕ್ಸೆಲ್ ವಾಚ್, ದುಂಡನೆಯ ಆಕಾರದ ಡಯಲ್‌ನೊಂದಿಗೆ ಗೂಗಲ್‌ನ ಮೊದಲ ಸ್ಮಾರ್ಟ್‌ವಾಚ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಮೇ ತಿಂಗಳಿನಲ್ಲಿ Google IO ಈವೆಂಟ್‌ನಲ್ಲಿ ಮೊದಲು ಅನಾವರಣಗೊಳಿಸಲಾಯಿತು, ಇತ್ತೀಚಿನ Pixel Watch ಸ್ಮಾರ್ಟ್‌ವಾಚ್ ಆಪಲ್‌ನ ಜನಪ್ರಿಯ ಆಪಲ್ ವಾಚ್ ಸರಣಿಗೆ Google ನ ಉತ್ತರವಾಗಿದ್ದು ಅದು ಐಫೋನ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
ಪಿಕ್ಸೆಲ್ ವಾಚ್ ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಕೆಲಸ ಮಾಡಬಹುದು, ಆದರೂ ಇದು ಪಿಕ್ಸೆಲ್ ಬಡ್ಸ್ ಇಯರ್‌ಬಡ್‌ಗಳಂತೆಯೇ ಅದರ ಪಿಕ್ಸೆಲ್ ಫೋನ್‌ಗಳೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.
ಇದರ ಡಯಲ್ ಮೂರು ಬಣ್ಣಗಳಲ್ಲಿ ಬರುತ್ತದೆ – ಕಪ್ಪು, ಬೆಳ್ಳಿ ಮತ್ತು ಚಿನ್ನ. ಬಳಕೆದಾರರು ವಿವಿಧ ಬಣ್ಣದ ಬ್ಯಾಂಡ್‌ಗಳೊಂದಿಗೆ ಸ್ಮಾರ್ಟ್‌ವಾಚ್ ಅನ್ನು ಅಪ್‌ಗ್ರೇಡ್ ಮಾಡಬಹುದು.
ಗೂಗಲ್ ಪಿಕ್ಸೆಲ್ ವಾಚ್ ಬೆಲೆ: ಗೂಗಲ್ ಪಿಕ್ಸೆಲ್ ವಾಚ್‌ನ ಬೆಲೆಯು ಬ್ಲೂಟೂತ್ ರೂಪಾಂತರಕ್ಕಾಗಿ $349 (ಸುಮಾರು ರೂ 28,600) ಮತ್ತು LTE ರೂಪಾಂತರಕ್ಕಾಗಿ $399 (ಸುಮಾರು ರೂ 32,700) ನಿಂದ ಪ್ರಾರಂಭವಾಗುತ್ತದೆ. ಇದರ ಭಾರತ-ನಿರ್ದಿಷ್ಟ ಬೆಲೆ ವಿವರಗಳು ಅಸ್ಪಷ್ಟವಾಗಿಯೇ ಉಳಿದಿವೆ. ಇಂದು ಅಕ್ಟೋಬರ್ 6 ರಿಂದ ಪ್ರಾರಂಭವಾಗುವ ಆಯ್ದ ದೇಶಗಳಿಗೆ ಇದು ಮುಂಗಡ-ಕೋರಿಕೆಗೆ ಲಭ್ಯವಿದೆ.
ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನ ಮೇಳವು ಹುಣಸೂರಿನ ಶಾಸ್ತ್ರಿ ಪಬ್ಲಿಕ್ ಸ್ಕೂಲ್ ನಲ್ಲಿ 30 ಸಪ್ಟೆಂಬರ್ 2022 ಹಾಗೂ 1 ಅಕ್ಟೋಬರ್ 2022ರಂದು ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಗಣಿತ ಮಾದರಿ ತಯಾರಿಯಲ್ಲಿ 7ನೇ ತರಗತಿಯ ಶಮನ್ (ಶ್ರೀ ನಿತ್ಯಾನಂದ.ಕೆ ಮತ್ತು ಶ್ರೀಮತಿ ಸಂಧ್ಯಾ.ಕೆ ಇವರ ಪುತ್ರ) ಪ್ರಥಮ ಸ್ಥಾನ ಹಾಗೂ 7ನೇ ತರಗತಿಯ ಪ್ರೀತಿ.ಪಿ.ಪ್ರಭು(ಶ್ರೀ ಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರಿ) ಗಣಿತ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದು ಹೈದರಾಬಾದಿನಲ್ಲಿ ನಡೆಯುವ ಕ್ಷೇತ್ರಿಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲ ವರ್ಗದ ವೇದಗಣಿತ ರಸಪ್ರಶ್ನೆಯಲ್ಲಿ 7ನೇ ತರಗತಿಯ ನಿರೀಕ್ಷಿತ್ ಹೆಗ್ಡೆ (ಶ್ರೀ ನಿಶ್ಚಯ್ ಕುಮಾರ್ ಹೆಗ್ಡೆ ಮತ್ತು ನಾಗರತ್ನ ಇವರ ಪುತ್ರ), 8ನೇ ತರಗತಿಯ ಶ್ರೇಯಸ್ ವರಂಬಳ್ಳಿತ್ತಾಯ(ಶ್ರೀ ಎಂ.ಶ್ರೀನಿವಾಸ ವರಂಬಳ್ಳಿತ್ತಾಯ ಮತ್ತು ಸಂಧ್ಯಾ ವರಂಬಳ್ಳಿತ್ತಾಯ ಇವರ ಪುತ್ರ) ಮತ್ತು 6ನೇ ತರಗತಿಯ ಶುಶಾಂತ್.ಎ(ಶ್ರೀ ದಾಮೋದರ ಮತ್ತು ಸುನೀತಾ ಇವರ ಪುತ್ರ) ಅವರ ತಂಡ ಪ್ರಾಂತ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ.
ಕಿಶೋರ ವರ್ಗದ ಇನ್ನೋವೇಟಿವ್ ಮಾಡೆಲ್ ಸ್ಪರ್ಧೆಯಲ್ಲಿ 10ನೇ ತರಗತಿಯ ಪೃಥ್ವಿರಾಜ್ ಪ್ರಭು(ಶ್ರೀ ಪುಂಡಲೀಕ ಪ್ರಭು ಮತ್ತು ನಾಗಾಮಣಿ ಪ್ರಭು ಇವರ ಪುತ್ರ) ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಅದರಂತೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಧನುಷ್ ರಾಮ್ (ಶ್ರೀ ದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ.ಡಿ.ಪ್ರಸನ್ನ ಇವರ ಪುತ್ರ), 10ನೇ ತರಗತಿಯ ಅಭಿರಾಮ್(ಶ್ರೀ ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ಇವರ ಪುತ್ರ) ಹಾಗೂ 9ನೇ ತರಗತಿಯ ಅಜಯ ರಾಮ್(ಶ್ರೀ ಕೇಶವ ಮೂರ್ತಿ ಮತ್ತು ಗೀತಾಲಕ್ಷ್ಮೀ ಇವರ ಪುತ್ರ) ತಂಡ,
ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ 10ನೇ ತರಗತಿಯ ಅರ್ಚನಾ ಕಿಣಿ (ಶ್ರೀ ಹರೀಶ್ ಕಿಣಿ ಮತ್ತು ವಿನಯ ಕಿಣಿ ಇವರ ಪುತ್ರಿ), ಅಟಲ್ ಟಿಂಕರಿಂಗ್ ಮಾದರಿ ತಯಾರಿಯಲ್ಲಿ 10ನೇ ತರಗತಿಯ ಯುಕ್ತಶ್ರೀ (ಶ್ರೀ.ಪಿ.ಹೇಮಚಂದ್ರ ಮತ್ತು ಹೈಮಿತಾ ಇವರ ಪುತ್ರಿ) ಹಾಗೂ ನೇಹ.ಜಿ.ಹೆಗ್ಡೆ (ಶ್ರೀ ಗಣೇಶ್.ಎಂ.ಹೆಗ್ಡೆ ಮತ್ತು ಪ್ರತಿಭಾ.ಜಿ.ಹೆಗ್ಡೆ ಇವರ ಪುತ್ರಿ) ತಂಡ,
8ನೇ ತರಗತಿಯ ಚಿನ್ಮಯಿ.ಎಲ್(ಶ್ರೀ .ಎಲ್.ಕೃಷ್ಣ ಪ್ರಸಾದ್ ಮತ್ತು ಅಮೃತಾ.ಕೆ.ಪ್ರಸಾದ್ ಇವರ ಪುತ್ರಿ) ಹಾಗೂ ದಿಹರ್ಷ (ಶ್ರೀ ಎಸ್.ಶಿವಕುಮಾರ್ ಮತ್ತು ಎಸ್.ಪೊನ್ನಿ ಇವರ ಪುತ್ರಿ) ಪ್ರಾಂತೀಯ ಮಟ್ಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರತಿನಿಧಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
A case of a fierce fight between two women in a train for a seat has been reported. The female police officer who came to fight was also hit on the head and bleeding.
Two other women were also injured.
“After a dispute over a seat in Navi Mumbai’s Vashi, some women started hitting each other, injuring a woman police personnel who intervened” Vashi Railway Station Senior Police Inspector S Katare said.
Today 3 women had a fight in a local train running from Thane to Panvel. A fierce fight broke out between women passengers at Turbhe station in Navi Mumbai over a seat in the train.
In the entire case, a lady police official was injured while trying to intervene. After that, both the women filed a complaint each at the police station.
A fierce fight between women passengers at Turbhe station in Navi Mumbai.Fight between two female passengers over the seat on the train https://t.co/KYHDrWi78a the whole case, the female policeman got injured while trying to intervene. Both the women filed a case against each pic.twitter.com/xUbpAvpxg5
ಸೀಟಿಗಾಗಿ ಇಬ್ಬರು ಮಹಿಳೆಯರ ನಡುವೆ ರೈಲಿನಲ್ಲಿ ಭೀಕರ ಹೊಡೆದಾಟ ನಡೆದ ಪ್ರಕರಣ ವರದಿಯಾಗಿದೆ. ತಡೆಯಲು ಬಂದ ಮಹಿಳಾ ಪೊಲೀಸ್ ಗೂ ತಲೆಗೆ ಏಟು ಬಿದ್ದು ರಕ್ತ ಸೋರುತ್ತಿತ್ತು.
ಇನ್ನಿಬ್ಬರು ಮಹಿಳೆಯರಿಗೂ ಗಾಯಗಳಾಗಿವೆ. ನವಿ ಮುಂಬೈಯ ವಾಶಿಯಲ್ಲಿ ಸೀಟಿನ ವಿವಾದದ ನಂತರ ಕೆಲವು ಮಹಿಳೆಯರು ಒಬ್ಬರಿಗೊಬ್ಬರು ಹೊಡೆಯಲು ಪ್ರಾರಂಭಿಸಿದರು.
ಮಧ್ಯಪ್ರವೇಶಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯಗೊಂಡರು ಎಂದು ವಾಶಿ ರೈಲು ನಿಲ್ದಾಣದ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಕಟಾರೆ ತಿಳಿಸಿದ್ದಾರೆ.
ಇಂದು ಥಾಣೆಯಿಂದ ಪನ್ವೇಲ್ ಗೆ ಓಡುವ ಸ್ಥಳೀಯ ರೈಲಿನಲ್ಲಿ 3 ಮಹಿಳೆಯರ ಜಗಳ ತಾರಕಕ್ಕೇರಿತ್ತು. ರೈಲಿನಲ್ಲಿ ಸೀಟಿನ ವಿಚಾರವಾಗಿ ನವಿ ಮುಂಬೈನ ತುರ್ಭೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ನಡುವೆ ಭೀಕರ ಹೊಡೆದಾಟ ನಡೆಯಿತು.
ಇಡೀ ಪ್ರಕರಣದಲ್ಲಿ, ಮಹಿಳಾ ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸುವಾಗ ಗಾಯಗೊಂಡರು. ಆ ನಂತರ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಮಹಿಳೆಯರೂ ತಲಾ ಒಂದು ದೂರು ದಾಖಲಿಸಿದ್ದಾರೆ.
A fierce fight between women passengers at Turbhe station in Navi Mumbai.Fight between two female passengers over the seat on the train https://t.co/KYHDrWi78a the whole case, the female policeman got injured while trying to intervene. Both the women filed a case against each pic.twitter.com/xUbpAvpxg5
ಪುತ್ತೂರು, ಅ 04: ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನ ಯೋಗ ದಸರಾ ಉಪಸಮಿತಿ ಆಯೋಜಿಸಿದ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಫರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಈತನು ಪುತ್ತೂರಿನ ನೆಹರೂ ನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ.
ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.