Sunday, August 30, 2026
Home Blog Page 166

ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಬೈಲೂರು ವತಿಯಿಂದ ಶಿಕ್ಷಕ ,ಪ್ರಸಂಗ ಕರ್ತ, ಅರ್ಥದಾರಿ, ಸಾಹಿತಿ ಮತ್ತು ಅಭಿನವ        ಪಾರ್ತಿಸುಬ್ಬ ಬಿರುದಾಂಕಿತ  ಸೀತಾನದಿ ಗಣಪಯ್ಯ ಶೆಟ್ಟಿ ಅವರ 35ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಗುರುವಾಯನಕೆರೆ ಬದ್ಯಾರಿನ ಹಂಸಗಿರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ  ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆಗಳನ್ನು ನೀಡಿದ ಸೀತಾನದಿಯವರ ಸಂಸ್ಮರಣೆಯನ್ನು 35 ವರ್ಷಗಳಿಂದ ವಿವಿಧಡೆಗಳಲ್ಲಿ ನಡೆಸುತ್ತಾ ಬಂದಿರುವುದು ಅವರಿಗೆ ನಿಜವಾಗಿ ಸಲ್ಲುವ ಗೌರವ.  ಅವರು ರಚಿಸಿದ ಹಲವು ಕನ್ನಡ  ಮತ್ತು ತುಳು ಪ್ರಸಂಗಗಳು ಈಗಲೂ ಜನಪ್ರಿಯವಾಗಿ ರಂಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

ಸೀತಾನದಿ ಸಂಸ್ಮರಣೆಯ 50ನೇ ವಾರ್ಷಿಕ ಪ್ರಶಸ್ತಿಯನ್ನು ಕಲಾವಿದ ಮತ್ತು ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಪ್ರಧಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ  ಪಿ.  ಕಿಶನ್ ಹೆಗ್ಡೆ ಮಾತನಾಡಿ ಕಿರಿವಯಸ್ಸಿನಲ್ಲಿ 80 ಪ್ರಸಂಗಗಳನ್ನು ಯಕ್ಷಗಾನ ರಂಗಕ್ಕೆ ನೀಡಿದ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಇವರಿಂದ ಇನ್ನಷ್ಟು ಮೌಲ್ಯಯುತವಾದ ಕಥಾನಕಗಳು ಮೂಡಿ ಬರಲಿ ಎಂದರು. ಕಳೆದ 35 ವರ್ಷಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ದುಡಿದ 50 ಮಂದಿ ಗಣ್ಯರನ್ನು ಸನ್ಮಾನಿಸಿರುವುದು ಪ್ರತಿಷ್ಠಾನಕ್ಕೆ ಅಭಿಮಾನದ ಸಂಗತಿಯಾಗಿದೆಯೆಂದರು.

ಪ್ರಶಸ್ತಿ ಸ್ವೀಕರಿಸಿದ ದೇವದಾಸ್ ಈಶ್ವರಮಂಗಲ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥಾನಕಗಳನ್ನು ಆಧರಿಸಿ ಪ್ರಸಂಗಗಳನ್ನು ರಚಿಸಿದ್ದೇನೆ. ಈ ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ನನ್ನ ಜೀವನದಲ್ಲಿ ಒಂದು ಅಪೂರ್ವ ಯೋಗ, ಭಾಗ್ಯವೆಂದು ತಿಳಿಸಿದರು. 

ಮುಖ್ಯ ಅತಿಥಿ ಬರೋಡಾದ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ ಮೌಲಿಕವಾದ ಕಥಾನಕಗಳಿಗೆ ಪ್ರಸಂಗ ಸಾಹಿತ್ಯ ರಚಿಸಿ ಜೀವಂತವಾಗಿರಿಸಿದ ಮತ್ತು ಆ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರ ನೆನಪು ನಮ್ಮಲ್ಲಿ ಉಳಿದಿರುವುದು ಯಕ್ಷಗಾನದ ಜೀವಂತಿಕೆಯಾಗಿದೆ  ಎಂದರು.

ವೇದಿಕೆಯಲ್ಲಿ ಪೋಲ್ಯ ಉಮೇಶ್ ಶೆಟ್ಟಿ ಮುಂಬೈ ಕಾರ್ಯಕ್ರಮದ ಸಂಯೋಜಕರಾದ ಹಂಸಗಿರಿ ಬಾಲಕೃಷ್ಣ. ಸಿ ನಾಯಕ್, ಸೀತಾನದಿಯವರ ಹಿರಿಯ ಪುತ್ರ ಪಡಂಗಡಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿ. ಭುಜಬಲಿ  ಧರ್ಮಸ್ಥಳ, ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ಮತ್ತು ಸೀತಾನದಿ  ಪ್ರತಿಷ್ಠಾನದ ಪದಾಧಿಕಾರಿಗಳು, ಬಂಧುಗಳು, ಕಲಾಭಿಮಾನಿಗಳು ಭಾಗವಹಿಸಿದ್ದರು.

ಸೀತಾನದಿ ಗಣಪಯ್ಯರ ಸಂಸ್ಮರಣೆಯನ್ನು ಭುವನ ಪ್ರಸಾದ ಹೆಗ್ಡೆ ಮತ್ತು ಪ್ರಶಸ್ತಿ ಪುರಸ್ಕೃತರ ಅಭಿನಂದನಾ ನುಡಿಗಳನ್ನು ಮಣಿಪಾಲದ ಎಸ್ .ವಿ ಉದಯಕುಮಾರ್ ಶೆಟ್ಟಿ ನಿರ್ವಹಿಸಿದರು.

ಭಾಸ್ಕರ ಶೆಟ್ಟಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಎಸ್. ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸೀತಾನದಿ ವಿಟ್ಟಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸೀತಾ ನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ವತಿಯಿಂದ 35ನೇ ವರ್ಷದ ಸಂಸ್ಮರಣೆಯಂಗವಾಗಿ ಪ್ರಸಂಗ ಕರ್ತ ದೇವದಾಸ ಈಶ್ವರಮಂಗಲ ಇವರಿಗೆ ಸೀತಾನದಿ  ಪ್ರಶಸ್ತಿಯನ್ನು ಬದ್ಯಾರು ಹಂಸಗಿರಿಯಲ್ಲಿ  ಜರಗಿದ ಕಾರ್ಯಕ್ರಮದಲ್ಲಿ ಡಿ. ಹರ್ಷೇಂದ್ರ ಕುಮಾರ ಧರ್ಮಸ್ಥಳ ,ಪ್ರತಿಷ್ಠಾನದ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಉದ್ಯಮಿ ಶಶಿಧರ ಶೆಟ್ಟಿ, ಪಡಂಗಡಿ ಜಯರಾಮ ಶೆಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿಯು ರೂಪಾಯಿ 20,000 ನಗದು ಪುರಸ್ಕಾರವನ್ನು ಕೂಡ ಒಳಗೊಂಡಿದೆ.

ಸಭಾ ಕಾರ್ಯಕ್ರಮದ ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ  ಮಾಗದವಧೆ  ಯಕ್ಷಗಾನ ಪ್ರದರ್ಶನ ಜರಗಿತು.

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ, 9449076275

ವರದಿ :ದಿವಾಕರ ಆಚಾರ್ಯ ಗೇರುಕಟ್ಟೆ,9449076275

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಹರಿಪಾದ ಸೇರಿದ ಅನಂತಪುರ ದೇವಸ್ಥಾನದ ಮೊಸಳೆ ಬಬಿಯಾ – ಇತಿಹಾಸದ ಪುಟ ಸೇರಿದ ದೇವಕಿಂಕರ

0

ಕೇರಳದ ಕಾಸರಗೋಡು ಕುಂಬಳೆ ಸಮೀಪದ ಅನಂತಪುರ ದೇವಸ್ಥಾನದ ಸರೋವರದ ದೇವರ ಮೊಸಳೆ ಎಂಬ ಖ್ಯಾತಿಯ ಬಬಿಯಾ ನಿನ್ನೆ ಇಹಲೋಕವನ್ನು ತೊರೆದು ದೇವರ ಪಾದವನ್ನು ಸೇರಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ದೇವಾಲಯದ ಸರೋವರದ ದೇವಾಲಯದ ರಕ್ಷಕ ಬಬಿಯಾ. ಸ್ಥಳೀಯ ದಂತಕಥೆಯ ಪ್ರಕಾರ, ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತದೆ.

ಸಸ್ಯಾಹಾರಿ ಪ್ರಸಾದವು ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಒಳಗೊಂಡಿರುತ್ತದೆ ಮತ್ತು ಅರ್ಚಕರು ನಿರ್ಭಯವಾಗಿ ಅವರ ಕೈಗಳಿಂದ ಸ್ನೇಹಪರ ಮೊಸಳೆಗೆ ಆಹಾರವನ್ನು ನೀಡುತ್ತಾರೆ.

ಭಗವಾನ್ ಕೃಷ್ಣ ಮತ್ತು ಅವನ ಭಕ್ತರೊಬ್ಬರಿಗೆ ಸಂಬಂಧಿಸಿದ ಅದ್ಭುತ ಕಥೆಯು ಬಬಿಯಾ ಅವರ ಅಸ್ತಿತ್ವದ ಉದ್ದೇಶದ ಮೇಲೆ ಬೆಳಕು ಚೆಲ್ಲುತ್ತದೆ. ಅದರಂತೆ, ಶ್ರೀ ವಿಲ್ವಮಂಗಲತ್ತು ಸ್ವಾಮಿಗಳು ತಮ್ಮ ಗುರುಗಳಾದ ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಆಳವಾದ ಧ್ಯಾನದಲ್ಲಿ ನಿರತರಾಗಿದ್ದಾಗ, ಶ್ರೀಕೃಷ್ಣನು ಚಿಕ್ಕ ಹುಡುಗನಾಗಿ ಕಾಣಿಸಿಕೊಂಡು ತನ್ನ ಭಕ್ತನನ್ನು ಪರೀಕ್ಷಿಸಲು ಚೇಷ್ಟೆಗಳನ್ನು ಪ್ರಾರಂಭಿಸಿದನು.

ಚಿಕ್ಕವನ ಚೇಷ್ಟೆಯಿಂದ ನಲುಗಿದ ವಿಲ್ವಮಂಗಳತ್ತು ಸ್ವಾಮಿಗಳು ಅವನನ್ನು ಪಕ್ಕಕ್ಕೆ ತಳ್ಳಿದರು. ಆ ಋಷಿಯು ತನ್ನ ತಪ್ಪನ್ನು ಅರಿತುಕೊಳ್ಳುವ ಹೊತ್ತಿಗೆ, ಬಾಲಕ-ಕೃಷ್ಣನು ಹತ್ತಿರದ ಗುಹೆಯಲ್ಲಿ ಕಣ್ಮರೆಯಾಗಿದ್ದನು. ಕೃಷ್ಣನ ಕಣ್ಮರೆಯಾದ ಬಿರುಕು ದೇವಾಲಯದ ಒಳಗೆ ಎಲ್ಲೋ ಇದೆ. ಮತ್ತು, ಮೊಸಳೆ ಬಬಿಯಾ ನಿಗೂಢ ಪ್ರವೇಶದ್ವಾರವನ್ನು ರಕ್ಷಿಸಲು ನೇಮಕಗೊಂಡ ರಕ್ಷಕ.

ಇನ್ನೊಂದು ದಂತಕಥೆಯ ಪ್ರಕಾರ, ಸುಮಾರು 70 ವರ್ಷಗಳ ಹಿಂದೆ, ಅನಂತಪುರದ ಸರೋವರದ ದೇವಾಲಯದಲ್ಲಿ ಕಾವಲು ಕಾಯುತ್ತಿದ್ದ ಮೊಸಳೆಯನ್ನು ಬ್ರಿಟಿಷ್ ಸೈನಿಕನು ಕೊಂದನು. ಆಶ್ಚರ್ಯಕರವಾಗಿ, ಸೈನಿಕನು ಸ್ವಲ್ಪ ಸಮಯದ ನಂತರ ಹಾವು ಕಡಿತದಿಂದ ಸಾವನ್ನಪ್ಪಿದನು,

ಅವನು ಮಾಡಿದ ಘೋರ ಅಪರಾಧವೇ ಶೇಷಶಯನ ಅನಂತನ ಕೋಪಕ್ಕೆ ಕಾರಣ ಎಂದು ಸ್ಥಳೀಯರು ನಂಬುತ್ತಾರೆ. ಸ್ವಲ್ಪ ಸಮಯದ ನಂತರ, ಹಿಂದಿನ ಕಾವಲುಗಾರನನ್ನು ಬದಲಿಸಲು ಮತ್ತೊಂದು ಮೊಸಳೆ ಸರೋವರದಲ್ಲಿ ಕಾಣಿಸಿಕೊಂಡಿತು, ಮತ್ತು ಪ್ರತಿ ಬಾರಿ ಒಂದು ಮೊಸಳೆ ಸಾಯುವಾಗ, ಅದರ ಸ್ಥಳದಲ್ಲಿ ಮತ್ತೊಂದು ಕಾಣಿಸಿಕೊಳ್ಳುತ್ತದೆ!

ಅನಂತಪುರ ಸರೋವರದಲ್ಲಿರುವ ದೇವಾಲಯದ ದಂತಕಥೆ ಮತ್ತು ಅದರ ಅದ್ಭುತವಾದ ಗಸ್ತು ತಿರುಗುವ ಸರೀಸೃಪ ಪರಿಚಾರಕವೇ ಈ ದೇವಕಿಂಕರ ಮೊಸಳೆ. ಈ ಮೊಸಳೆ ಪ್ರತಿ ಬಾರಿ ಮತ್ತು ಎಲ್ಲರಿಗೂ ಕಾಣಸಿಗುವುದಿಲ್ಲ. ಕಾಣಸಿಕ್ಕವರು ಧನ್ಯರು.

ಕೊನೆಗೂ ಅನಂತನ ಕಿಂಕರ ಬಬಿಯಾ ವೈಕುಂಠ ಯಾತ್ರೆ ಕೈಗೊಂಡಿದೆ. ಇತಿಹಾಸದ ಪುಟಗಳಲ್ಲಿ ಶಾಸ್ವತ ಸ್ಥಾನ ಪಡೆದ ಬಬಿಯಾ ಇನ್ನು ನೆನಪು ಮಾತ್ರ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮೂಡಬಿದಿರೆ ಯಕ್ಷೋಪಾಸನಂ ಸಂಸ್ಥೆಯ ದಶಮಾನೋತ್ಸವ : ಸನ್ಮಾನ ಮತ್ತು ತಾಳಮದ್ದಳೆ

ಮೂಡಬಿದ್ರೆಯ ಯಕ್ಷೋಪಾಸನಮ್ ಇದರ ದಶಮಾನೋತ್ಸವ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೂಡಬಿದ್ರೆ ಸಮಾಜ ಮಂದಿರದಲ್ಲಿ ಜರುಗಿತು

ಮೂಡಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಯಕ್ಷಗಾನ ಕಲಾಪ್ರಸಾರದಲ್ಲಿ ಹವ್ಯಾಸಿ ಕಲಾವಿದರು ಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುತ್ತಿದ್ದಾರೆ. ಬೇರೆ ಯಾವ ಪ್ರದೇಶದಲ್ಲಿಯೂ ಕಾಣಿಸದ ಈ ಕಲಾ ಪ್ರಕಾರದಲ್ಲಿ ನೂರಾರು ಕಲಾವಿದರು ಪುರಾಣ ಪಾತ್ರಗಳ ಮೂಲಕ ಜ್ಞಾನ ಭಂಡಾರವನ್ನು ಸಮಾಜಕ್ಕೆ ಸಮರ್ಪಿಸುತ್ತಿರುವುದು ಭಗವಂತನಿಗೆ ಅತ್ಯಂತ ಪ್ರಿಯವಾದ ಕಾರ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ನಮ್ಮ ಹಿರಿಯರಲ್ಲಿ ವಿದ್ಯೆ ಕಡಿಮೆ ಇದ್ದರೂ ವಿದ್ವತ್ ಅಪಾರವಾಗಿತ್ತು. ಆ ಮೂಲಕ ಪುರಾಣದ ಕಥೆಗಳು ಮನೆಮನೆಗಳಲ್ಲಿ ಕೇಳಿ ಬರುತ್ತಿತ್ತು .ಇಂದು ಯಕ್ಷಗಾನ ಅಪಾರ ಜನಪ್ರಿಯವಾಗುವಲ್ಲಿ ಕಲಾವಿದರ ಮತ್ತು ಸಂಘಟಕರ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿ ಮೂಡಬಿದಿರೆಯ ಸಾಂಸ್ಕೃತಿಕ ಲೋಕದಲ್ಲಿ ಯಕ್ಷೋಪಾಸನಂ ಸಂಸ್ಥೆಯು ದೊಡ್ಡ ಸಾಧನೆಯನ್ನು ಮಾಡಲಿ ಎಂದರು.

ದಶಮಾನೋತ್ಸವದ ಪ್ರಯುಕ್ತ ಹಿರಿಯ ಕಲಾವಿದ ದಾಮೋದರ ಸಫಲಿಗ ಇವರನ್ನು ಸನ್ಮಾನಿಸಲಾಯಿತು.

ಯಕ್ಷೋಪಾಸನಂ ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದ ಮೂಡಬಿದ್ರೆ ಮಾರಿಗುಡಿಯ ಆಡಳಿತ ಸಮಿತಿ ಅಧ್ಯಕ್ಷ ರಾಜಮೋಹನ್ ಶೆಟ್ಟಿ, ಮಿತ್ತ ಬೈಲು ರಾಮಮಂದಿರದ ಗಿರಿಧರ ನಾಯಕ್, ಗುಣಪಾಲ ಶೆಟ್ಟಿ, ಅರುಣ್ ಕುಮಾರ್, ದಿವಾಣ ದುರ್ಗಾ ಪ್ರಸಾದ್ ಭಟ್ ಕಟೀಲು ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಪುರಸಭಾ ಸದಸ್ಯ ಸುರೇಶ್ ಪ್ರಭು, ಕೆ .ಪ್ರೇಮನಾಥ ಮಾರ್ಲ, ಉದ್ಯಮಿ ನೀಲೇಶ್ ಶೆಟ್ಟಿ , ಪುನೀತ್ ಕುಮಾರ್ ಕಟ್ಟೆಮಾರು ಶುಭ ಹಾರೈಸಿದರು.

ಶ್ರೀಮತಿ ಅನುರಾಧ ಪೈ ಪ್ರಾರ್ಥಿಸಿ ಯಕ್ಷೋಪಾಸನಮ್ ಅಧ್ಯಕ್ಷ ಶಾಂತರಾಮ ಕುಡ್ವ ಸ್ವಾಗತಿಸಿದರು. ಸ್ವಾತಿ. ಎಸ್ ಪ್ರಭು ವಂದಿಸಿದರು .ರಾಜಾರಾಮ್ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು

ಆರಂಭದಲ್ಲಿ ಯಕ್ಷೋಪಾಸನ ಸದಸ್ಯರಿಂದ ಶ್ರೀರಂಗಾ ತುಲಾಭಾರ ಬಳಿಕ ಪ್ರಸಿದ್ಧ ಕಲಾವಿದರಿಂದ ಕರ್ಣಾರ್ಜುನ ತಾಳಮದ್ದಳೆ ಜರಗಿತು.

ದಿವಾಕರ ಆಚಾರ್ಯ ಗೇರುಕಟ್ಟೆ

ವರದಿ: ದಿವಾಕರ ಆಚಾರ್ಯ ಗೇರುಕಟ್ಟೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ನಾರಾವಿಯ ಯುವತಿ ಕೆರೆಗೆ ಬಿದ್ದು ಸಾವು – ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಬಿದ್ದ 23ರ ಹರೆಯದ ಯುವತಿ

ಅವಿವಾಹಿತ ಯುವತಿಯೊಬ್ಬಳು ತನ್ನ ಮನೆಯ ಸಮೀಪವಿರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಿಧನಹೊಂದಿದ್ದಾಳೆ.

ಕಾರ್ಕಳ ಸಮೀಪದ ನಾರಾವಿ ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಅರಸೀಕಟ್ಟೆ ನಿವಾಸಿ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23) ಮೃತ ಯುವತಿ.ಕಳೆದ ವರ್ಷವಷ್ಟೇ ರಕ್ಷಾ ಜೈನ್ ಡಿಗ್ರಿ ಮುಗಿಸಿ ಮನೆಯಲ್ಲಿದ್ದರು.

  ಸುರಕ್ಷಾ ಜೈನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾಳೆ.ರಕ್ಷಣೆಗೆಂದು ಆಕೆಯ ಸಹೋದರ ತಕ್ಷಣ ಕೆರೆಗೆ ಹಾರಿದರೂ ಆಕೆಯನ್ನು ರಕ್ಷಿಸಲಾಗಲಿಲ್ಲ.

ಮೃತ ಸುರಕ್ಷಾ ಜೈನ್ ಅವರ ತಂದೆ ರಾಜವರ್ಮ ಜೈನ್ ಕೂಡ ಆಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮಾನಸಿಕ ಸಶಕ್ಷತೆ ಬಹಳ ಮುಖ್ಯ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ. ವಿ. ನಾರಾಯಣ

ಮಾನಸಿಕವಾಗಿ ಸಶಕ್ತರಾಗುವ ಮೂಲಕ ಹಿರಿಯರು ತಮ್ಮ ಜ್ಞಾನವನ್ನು ಸ್ವಯಂ ವೃದ್ದಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ.ವಿ ನಾರಾಯಣ ತಿಳಿಸಿದರು.
ಬಿ.ಸಿ.ರೋಡ್ ಕೈ ಕಂಬದ ಶ್ರಮ್ಯಾ ಪ್ರಾಸ ಇಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐವತ್ತು ವಯೋಮಾನದ ಬಳಿಕ ವ್ಯಕ್ತಿಯೋರ್ವನು ಪಕ್ವತೆಯ ಮಟ್ಟ ತಲುಪಿರುತ್ತಾನೆ. ಜೀವನದ ಅನುಭವಗಳು ಪರಸ್ಪರ ಭಿನ್ನವಾಗಿದ್ದರೂ ಅವುಗಳ ಹಂಚಿಕೆಗೆ ವೇದಿಕೆ ಕಲ್ಪಿಸಿದ ಹಿರಿಯರ ಸೇವಾ ಪ್ರತಿಷ್ಠಾನವು ಸೂತ್ರ ರೂಪದಲ್ಲಿ ಕೆಲವು ಚಟುವಟಿಕೆಗಳನ್ನು ಈಗಾಗಲೇ ನಡೆಸಿದ್ದು ಮಾದರಿಯಾಗಿದೆಯೆಂದು ಮುಖ್ಯ ಅತಿಥಿ ಪ್ರೊ. ರಾಜಮಣಿ ರಾಮ ಕುಂಜ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕೈಯಾರು ನಾರಾಯಣ ಭಟ್ ಎಲ್ಲಾ ತಾಲೂಕು ಘಟಕಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿ ಮುಂದಿನ ಯೋಜನೆಗಳ ಮಾಹಿತಿ ನೀಡಿದರು.

ಮಂಗಳೂರು ದಕ್ಷಿಣ ಘಟಕದ ಪದಗ್ರಹಣ,ಹಿರಿಯ ಸಮಾವೇಶ ಸಮಾರಂಭದ ಆಮಂತ್ರಣವ ಪತ್ರಿಕೆಯನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.


ಮಂಗಳೂರು ಘಟಕದ ಪದಾಧಿಕಾರಿಗಳಾದ ಭರತ್. ಕೆ, ಬಾಲಕೃಷ್ಣ ಶೆಟ್ಟಿ, ಗಣೇಶ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ, ಭಾಸ್ಕರ ಬಾರ್ಯ, ಬಾಲಕೃಷ್ಣ .ಜಿ, ರಮಾಶಂಕರ .ಸಿ, ಸೋಮಪ್ಪ ಬಂಗೇರ, ಸುಬ್ರಾಯ ಮಡಿವಾಳ, ಸೀತಾರಾಮ ಭಟ್, ಸಿ.ವಿ ಶಂಕರ್ ,ಅನಂತರಾಮ್ ಹೇರ್ಳೆ , ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಪ್ರತಿಷ್ಠಾನದ ಬಲವರ್ಧನೆಗೆ ಸೂಚನೆಗಳನ್ನು ನೀಡಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು.


ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ದುಗ್ಗಪ್ಪ. ಎನ್ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರಮ್ಯಾ ಪ್ರಾಸದ ಶ್ರೀಮತಿ ಭಾರತಿ ರಾಮಕುಂಜ, ಮೇಧಾ ಮತ್ತು ಧಾತ್ರಿ ಕಾರ್ಯಕ್ರಮದ ಸಂಯೋಜನೆಗೆ ಸಹಕಾರ ನೀಡಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ - 9164828688 ಅಥವಾ ಈ-ಮೈಲ್ ಮಾಡಿ - [email protected]

ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವು

ತೃಶ್ಯೂರ್ : ಶನಿವಾರ ಇಲ್ಲಿನ ಮಾಳದ ಪೂಪ್ಪತ್ತಿ ಎಂಬಲ್ಲಿ ಭತ್ತದ ಗದ್ದೆಯಲ್ಲಿ ನೀರಾವರಿಗಾಗಿ ಮಾಡಿದ ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವನ್ನಪ್ಪಿದ್ದಾರೆ. 

ಮೃತರನ್ನು ತೃಶ್ಯೂರ್ ಸಮೀಪದ  ಮಾಲಾ ಪಲ್ಲಿಪುರಂ ಸ್ಥಳೀಯರಾದ ಜಿಯೋ ಅವರ ಪತ್ನಿ ಮೇರಿ ಅನು ಮತ್ತು ಅವರ ಮಗಳು ಆಗ್ನಾ ಎಂದು ಗುರುತಿಸಲಾಗಿದೆ. 

ನೀರಿನಲ್ಲಿ ಬಿದ್ದಿದ್ದ ತಮ್ಮ ಪಾದರಕ್ಷೆಗಳನ್ನು ಹೆಕ್ಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಇಂದು ‘ಕರ್ಣಾವಸಾನ’ ತಾಳಮದ್ದಳೆ – ಸುಣ್ಣಂಬಳ, ಉಜಿರೆ, ಕಲ್ಚಾರ್, ರಂಗ ಭಟ್ಟರಿಂದ ಖಾಡಾಖಾಡಿ ಮಾತಿನ ಸಮರದ ನಿರೀಕ್ಷೆಯಲ್ಲಿ ತಾಳಮದ್ದಳೆ ರಸಿಕರು

ಇಂದು ಆದಿತ್ಯವಾರ ಮಧ್ಯಾಹ್ನ 1.30 ರಿಂದ ಕಾಸರಗೋಡು, ಬದಿಬಾಗಿಲು ಎಂಬಲ್ಲಿರುವ ಹವ್ಯಕ ಸಭಾಭವನದಲ್ಲಿ ‘ಕರ್ಣಾವಸಾನ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ತಾಳಮದ್ದಳೆ ರಂಗದ ಸ್ಟಾರ್ ಕಲಾವಿದರು ಇದರಲ್ಲಿ ಭಾಗವಹಿಸುತ್ತಿರುವುದರಿಂದ ಅರ್ಥಧಾರಿಗಳಿಂದ ಖಡಕ್ ಮಾತಿನ ಸಮರವನ್ನು ನಿರೀಕ್ಷಿಸಲಾಗಿದೆ ಎಂದು ಕಲಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ವಿವರಗಳಿಗೆ ಕರಪತ್ರ ನೋಡಿ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

5 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸೆಯ ಕತ್ತರಿ – ವೈದ್ಯರು ಮಾಡಿದ ಮಹಾ ಎಡವಟ್ಟು ಈಗ ತಿಳಿದದ್ದು ಹೇಗೆ? ಇಲ್ಲಿದೆ ರಿಯಲ್ ಸ್ಟೋರಿ

5 ವರ್ಷಗಳ ಹಿಂದೆ ಕೇರಳದ ಮಹಿಳೆಯ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆಯ ಉಪಕರಣ ‘ಫೋರ್ಸ್ಪ್ಸ್’ ತೆಗೆಯಲು ವೈದ್ಯರು ‘ಮರೆತಿದ್ದರು, ಆದರೆ ಆ ಬಗ್ಗೆ ಇದೀಗ ತನಿಖೆ ಎದುರಿಸುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ‘ಸೊಳ್ಳೆ ಅಪಧಮನಿ ಫೋರ್ಸ್ಪ್ಸ್’ ಅನ್ನು ತೆಗೆದುಹಾಕಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು, ಸೆಪ್ಟೆಂಬರ್ 17 ರಂದು ಆಕೆಗೆ ಪುನಃ ಶಸ್ತ್ರಚಿಕಿತ್ಸೆ ನಡೆಸಿದರು.

ಐದು ವರ್ಷಗಳಿಂದ, ಹರ್ಷಿನಾ – (ಈಗ 30 ವರ್ಷ) ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕಳೆದ ಆರು ತಿಂಗಳಿನಿಂದ ಅಸಹನೀಯವಾಗಿದ್ದ ಅವಳ ನೋವನ್ನು ನಿಗ್ರಹಿಸಲು ವೈದ್ಯರು ಬಲವಾದ ಪ್ರತಿಜೀವಕಗಳನ್ನು ಹಾಕಿದರು.

ಆಕೆ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ಹೋದಾಗ, ಸ್ಕ್ಯಾನ್‌ನಲ್ಲಿ ಆಕೆಯ ಹೊಟ್ಟೆಯಲ್ಲಿ ಲೋಹದ ವಸ್ತು ಪತ್ತೆಯಾಗಿದೆ – 2017 ರಲ್ಲಿ ಕೊನೆಯ ಸಿಸೇರಿಯನ್ ನಂತರ ವೈದ್ಯರು ತೆಗೆದುಹಾಕಲು ಮರೆತಿದ್ದ ಜೋಡಿ ಫೋರ್ಸ್ಪ್ಸ್ ಆಕೆಯ ಹೊಟ್ಟೆಯಲ್ಲಿ ಕಂಡುಬಂತು.

ಕಳೆದ ಐದು ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ‘ಸೊಳ್ಳೆ ಅಪಧಮನಿ ಫೋರ್ಸ್ಪ್ಸ್’ ಅನ್ನು ತೆಗೆದುಹಾಕಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು, ಸೆಪ್ಟೆಂಬರ್ 17 ರಂದು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದರು. ಫೋರ್ಸ್ಪ್ಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವದ ನಾಳಗಳನ್ನು ಕ್ಲ್ಯಾಂಪ್ ಮಾಡಲು ಶಸ್ತ್ರಚಿಕಿತ್ಸಕರು ಬಳಸುವ ಕತ್ತರಿ ತರಹದ ಸಾಧನವಾಗಿದೆ.

ಮಹಿಳೆಯು 2017 ರಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಮೂರನೇ ಸಿಸೇರಿಯನ್ ಗೆ ಒಳಗಾಗಿದ್ದಳು. ಆಗ ಆ ಕತ್ತರಿ ಹೊಟ್ಟಯಲ್ಲಿ ಉಳಿದಿರಬಹುದು ಎಂದು ಭಾವಿಸಲಾಗಿದೆ. ಮೊದಲ ಇಬ್ಬರು ಮಕ್ಕಳ ಹೆರಿಗೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು ಎಂದು ಅವರು ಹೇಳಿದರು.

ಈ ಬಗ್ಗೆ ವೈದ್ಯರ ವಿರುದ್ಧ ಕೇಸ್ ದಾಖಲಾಗಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಇಂದು ಯಕ್ಷಗಾನ ತಾಳಮದ್ದಳೆ – ಧರ್ಮೋ ರಕ್ಷತಿ ರಕ್ಷಿತಃ

ಇಂದು ಕಿನ್ನಿಕಂಬಳದಲ್ಲಿ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ಕಡಬ ಸಂಸ್ಮರಣಾ ಸಮಿತಿ ಮಂಗಳೂರು ಇವರು ಆಯೋಜಿಸಿದ  3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಶಸ್ತಿ-2022 ಕಿನ್ನಿಕಂಬಳದಲ್ಲಿ ನಡೆಯಲಿದೆ. 

ಕಾರ್ಯಕ್ರಮವು ದಿನಾಂಕ 9-10-2022 ಆದಿತ್ಯವಾರ ಅಪರಾಹ್ನ 2-00 ಗಂಟೆಯಿಂದ ಶ್ರೀ ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಈ ಬಾರಿಯ ಕಡಬದ್ವಯ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಮದ್ದಳೆಗಾರ ಶ್ರೀ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುತ್ತದೆ.

ಎಲ್ಲಾ ಯಕ್ಷಗಾನ ಅಭಿಮಾನಿಗಳನ್ನು ಕಡಬ ಸಂಸ್ಕರಣಾ ಸಮಿತಿಯ ಕಾರ್ಯದರ್ಶಿ ಶ್ರೀ ಗಿರೀಶ್ ಕಾವೂರು ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.

ಕಾರ್ಯಕ್ರಮಗಳ ವಿವರಗಳನ್ನು ಕರಪತ್ರದಲ್ಲಿ ನೋಡಿ.

ಪೆರ್ಲ ಸಮೀಪ ನಲ್ಕದಲ್ಲಿ ಕಾರು ಅಪಘಾತ – ಗಾಯಾಳು ಆಸ್ಪತ್ರೆಗೆ

ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ನಲ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದೆ.

ಪೆರ್ಲಕ್ಕೆ ಹೋಗುತ್ತಿದ್ದ ಮಾರುತಿ ಒಮ್ನಿ ನಲ್ಲ ಬಸ್ ನಿಲ್ದಾಣದ ಬೋರ್ಡ್ ಹಾಕಿದ್ದ ಕಂಬಕ ಗುದ್ದಿದೆ. ಕಾರಿನ‌ ಮುಂಭಾಗಕ್ಕೆ ಹಾನಿಯಾಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ.

ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ನಾಗೇಶ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಸ್ಥಳಕ್ಕೆ ಬದಿಯಡ್ಕ ಪೋಲೀಸರು ತೆರಳಿ ಪರಿಶೀಲನೆ ನಡೆಸಿದರು.