Sunday, August 30, 2026
Home Blog Page 165

ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ದಿನಾಂಕ 09-10 2022ನೇ ರವಿವಾರ ಮಡಿಕೇರಿಯಲ್ಲಿ ನಡೆದ ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾ ಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಧ್ವಿತ್ ಶರ್ಮ  (ಶ್ರೀ ಸುಧೀರ್.ಬಿ.ಎಸ್ ಮತ್ತು ಲತಾ ದಂಪತಿ ಪುತ್ರ)  ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

5ನೇ ತರಗತಿಯ ಮಹತಿ.ಎಂ (ಶ್ರೀಶಿವರಂಜನ್.ಎಂ ಮತ್ತು ಲಾವಣ್ಯ ಭಟ್  ದಂಪತಿ ಪುತ್ರಿ) ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಇವರು  Institute of Karate and Martial Arts ಶಾಖೆಯ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಜಾರ್ಖಂಡ್ ನಲ್ಲಿ ಮತ್ತೊಂದು ರೇಪ್: ಈ ಬಾರಿ ತಾಯಿಯ ಎದುರೇ  ಐದು ಜನರಿಂದ ಮಗಳ ಮೇಲೆ ಅತ್ಯಾಚಾರ – ರೇಪ್ ರಾಜ್ಯವಾಗುವತ್ತ ಜಾರ್ಖಂಡ್? 

ಜಾರ್ಖಂಡ್‌ನಲ್ಲಿ ಅಪ್ರಾಪ್ತ ಸಾಮೂಹಿಕ ಅತ್ಯಾಚಾರದ ಕರಾಳ ಕೃತ್ಯಗಳು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಅಪರಾಧಿಗಳಿಗೆ ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ.

ದುಮ್ಕಾ ಜಿಲ್ಲೆಯ ನಿವಾಸಿಗಳಾದ ಮೈನರ್ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಪ್ರದೇಶದಲ್ಲಿ ದಾಳಿ ನಡೆಸಲಾಯಿತು ಎಂದು ಎಫ್‌ಐಆರ್ ದಾಖಲಿಸಿದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ ರೌತ್ ಹೇಳಿದ್ದಾರೆ.

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಎದುರೇ ಐವರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಂಗಳವಾರ ವರದಿಯಾಗಿದೆ. ಈ ಸಂಬಂಧ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ದಿಯೋಘರ್ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಮ್ಕಾ ಜಿಲ್ಲೆಯ ನಿವಾಸಿಗಳಾದ ಬಾಲಕಿ ಮತ್ತು ಆಕೆಯ ತಾಯಿ ಭಾನುವಾರ ದಿಯೋಘರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಧುಪುರ್ ಪ್ರದೇಶದಲ್ಲಿ ದಾಳಿಗೆ ಒಳಗಾದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ ರೌತ್ ಅವರು ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಉಲ್ಲೇಖಿಸಿದ್ದಾರೆ.

ಆಕೆಯ ತಾಯಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ಎರಡು ದ್ವಿಚಕ್ರವಾಹನಗಳಲ್ಲಿ ಬಂದ ಐದು ಜನರು ಅವರಿಬ್ಬರನ್ನು ದಾರಿ ತಪ್ಪಿಸಿದರು ಮತ್ತು ನಂತರ ಅವರ ಮಗಳನ್ನು ಬಲವಂತವಾಗಿ ಪಕ್ಕಕ್ಕೆ ಕರೆದೊಯ್ದರು. ತಾಯಿ ತಡೆಯಲು ಮುಂದಾದಾಗ ಆಕೆಯನ್ನು ಥಳಿಸಿ ನಂತರ ಆಕೆಯ ಎದುರೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿಯೋಘರ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸುಭಾಷ್ ಚಂದ್ರ ಜಾಟ್, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿಗಳನ್ನು ನಿರೀಕ್ಷಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಪೂವರಿ ಸಂಪಾದಕ ವಿಕುಭ ಹೆಬ್ಬಾರಬೈಲಿಗೆ ತುಳು ಅಕಾಡೆಮಿ
‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’

ಪುತ್ತೂರು : ಸುಮಾರು 30 ವರ್ಷಗಳಿಂದ ವಿವಿಧ ತುಳು-ಕನ್ನಡ ಪತ್ರಿಕೆಗಳಲ್ಲಿ ದುಡಿದಿದ್ದ, ಪತ್ರಕರ್ತ, ಕವಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ, ತುಳುನಾಡಿನ ಏಕೈಕ ತುಳು ಮಾಸಿಕ ಪತ್ರಿಕೆ ‘ಪೂವರಿ’ ಸಂಪಾದಕ, ಪ್ರಕಾಶಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರು ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’ ನೀಡಿ ಸನ್ಮಾನಿಸಿದೆ.


ಭಾನುವಾರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯಭವನದಲ್ಲಿ ನಡೆದ ತುಳು ಅಕಾಡೆಮಿಯ ‘ತುಳು ಐಸಿರಿ-2022’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಕುಮಾರ್ ಭಂಡಾರಿಯವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.


ಮಂಗಳೂರು ವಿ.ವಿ.ಕುಲಪುತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ರೈ ಎಸ್ಟೇಟ್ ಕೋಡಿಂಬಾಡಿ ಕೆ.ಎನ್. ಅಶೋಕ್‌ಕುಮಾರ್ ರೈ, ಬಿಎಸ್‌ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಡ್ ಡಿ. ಚಂದಪ್ಪ ಮೂಲ್ಯ, ಉದ್ಯಮಿ ಪ್ರಕಾಶ್ ಬಿ., ತುಳು ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ ರೈ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಕಾಡೆಮಿ ಸದಸ್ಯೆರಾದ ಕಡಬ ದಿನೇಶ್ ರೈ, ನಾಗೇಶ್ ಕುಲಾಲ್, ರವಿ ಪಿ.ಎಂ .ಮಡಿಕೇರಿ ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಆಟೋ ಚಾಲಕರ ಪುತ್ರಿ ನಾಪತ್ತೆ ಪ್ರಕರಣ – ವಿಟ್ಲದಲ್ಲಿ ಅಮಾಯಕ ಯುವತಿಯರಿಗೆ ಥಳಿಸಿದ ಯುವಕರ ಗುಂಪು

ಕೊಳ್ನಾಡು ಕಾಡುಮಠ ಎಂಬಲ್ಲಿರುವ ಆಟೋ ಚಾಲಕರ ಪುತ್ರಿಯೊಬ್ಬಳು ಕಾಣೆಯಾದ ವಿಚಾರಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆಟೋ ಚಾಲಕರ ಪುತ್ರಿ ಮುಸ್ಲಿಂ ಯುವತಿ ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು.

ಆದರೆ  ಕಾಸರಗೋಡಿನ ಸ್ನೇಹಿತೆಯೊಂದಿಗೆ ತೆರಳಿದ್ದ ಯುವತಿ ಮನೆಗೆ ಹಿಂದಿರುಗುತ್ತಿದ್ದಾಗ ಮನೆಯಲ್ಲಿ ಬೈಗುಳ ಮತ್ತು ಆಕ್ಷೇಪಗಳಿಗೆ ಹೆದರಿ ಪುನಃ ವಿಟ್ಲ ಪೇಟೆಗೆ ಬಂದಿದ್ದಳು.

ಯುವತಿಯರಿಬ್ಬರು ಒಟ್ಟಿಗೆ ಹೋದ ವಿಚಾರವನ್ನು ತಿಳಿದ ಸಾಲೆತ್ತೂರು ಮತ್ತು ಕಾಡುಮಠದ ಮುಸ್ಲಿಂ ಯುವಕರ ಗುಂಪು ಒಟ್ಟು ಸೇರಿ ವಿಟ್ಲಕ್ಕೆ ಧಾವಿಸಿತು. ಅಲ್ಲಿ ಪೇಟೆಯಲ್ಲಿ ಈ ಯುವಕರ ಗುಂಪು ಈ  ಇಬ್ಬರು ಯುವತಿಯರಿಗಾಗಿ ಹುಡುಕಾಡತೊಡಗಿತು.

ಆದರೆ ಅಲ್ಲಿ ಇಬ್ಬರು ಬುರ್ಖಾ ಧರಿಸಿದ ಯುವತಿಯರು ಈ ಗುಂಪಿನ ಕಣ್ಣಿಗೆ ಬಿದ್ದರು. ಆದರೆ ಈ ಯುವತಿಯರು ಕುದ್ದುಪದವಿನವರಾಗಿದ್ದರು. ಕಾಣೆಯಾದ ಯುವತಿಯರೆಂದು ಭಾವಿಸಿ ಮುಸ್ಲಿಂ ಯುವಕರ ಗುಂಪು ಅವರ ಮೇಲೆ ಹಲ್ಲೆ ಮಾಡಿತು.

“ನಾವು ಆಟೋ ಚಾಲಕರ ಪುತ್ರಿಯಲ್ಲ, ನಾವು ಕುದ್ದುಪದವಿನವರು” ಎಂದು ಪರಿಪರಿಯಾಗಿ ಆ ಯುವತಿಯರು ಹೇಳಿದರೂ ಕೇಳದ ಗುಂಪು ಅವರ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿತ್ತು.

ಕೂಡಲೇ ಅಲ್ಲಿಗೆ ಬಂದ ವಿಟ್ಲ ಪೊಲೀಸರು ಮುಸ್ಲಿಂ ಯುವಕರಲ್ಲಿ ಅವರಲ್ಲಿ ಓರ್ವನನ್ನು ವಶಕ್ಕೆ ಪಡೆದು ಕುದ್ದುಪದವಿನ ಯುವತಿಯರನ್ನು ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುದ್ದುಪದವಿನ ಯುವತಿಯರ ಮನೆಯವರು ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

‘ಹೋಗೋಣ ಜಂಬೂ ಸವಾರಿ’ ಲಲಿತ ಪ್ರಬಂಧಗಳು – ವಿಭಾ ಕೃಷ್ಣಪ್ರಕಾಶ ಉಳಿತ್ತಾಯ 

‘ಹೋಗೋಣ ಜಂಬೂ ಸವಾರಿ’ ಇದು  ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ರಚಿಸಿದ ಕೃತಿ. ಇವರು ಉದಯೋನ್ಮುಖ ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿರುವಾಗಲೇ ಬರೆಯುವ ಹವ್ಯಾಸವಿದ್ದು ಈಗ ಅದನ್ನು ಮುಂದುವರಿಸುತ್ತಿದ್ದಾರೆ. ಲೇಖಕಿಯಾಗಿ ಬರೆಯುವ ಕಾಯಕದಲ್ಲಿ ತೊಡಗಿಸಿಕೊಳ್ಳುವಲ್ಲಿ ಪತಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ಪ್ರೋತ್ಸಾಹವೂ ಇವರಿಗಿದೆ. 

ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ಹಣಕಾಸು ಸಂಸ್ಥೆಯ (ಕರ್ನಾಟಕ ಬ್ಯಾಂಕ್) ಉದ್ಯೋಗಸ್ಥೆಯಾಗಿ, ಲೇಖಕಿಯಾಗಿ ಎಲ್ಲರಿಗೂ ಪರಿಚಿತರು. ಈ ಪುಸ್ತಕದಲ್ಲಿ ಇವರು ಬರೆದ ಮೂವತ್ತು ಲೇಖನಗಳಿವೆ. 2015ರಿಂದ ತೊಡಗಿ ಬರೆದ ಲೇಖನಗಳಿವು. ಇವುಗಳಲ್ಲಿ ಅನೇಕ ಲೇಖನಗಳು ಉದಯವಾಣಿ, ತುಷಾರ, ಹೊಸದಿಗಂತ, ವಿಜಯಕರ್ನಾಟಕ, ಅಭ್ಯುದಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ವಿಚಾರವನ್ನು ಲೇಖಕಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ‘ಮನದ ಮಾತು’ ಎಂಬ ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ಸಹಕರಿಸಿದ ಎಲ್ಲಾ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಕೃತಿಯು 2021ರಲ್ಲಿ ಮುದ್ರಿಸಲ್ಪಟ್ಟು ಓದುಗರ ಕೈಸೇರಿತ್ತು. ಇದು ಸುಮಾರು 122 ಪುಟಗಳ ಹೊತ್ತಗೆ. ಇದರ ಬೆಲೆ ನೂರು ರೂಪಾಯಿಗಳು. ಈ ಕೃತಿಯ ಪ್ರಕಾಶಕರು ಎಬಿಸಿ ಪಬ್ಲಿಕೇಷನ್ ಬೆಂಗಳೂರು.

ಈ ಕೃತಿಗೆ ಮುನ್ನುಡಿಯನ್ನು ಬರೆದವರು ಖ್ಯಾತ ಕವಿ, ಸಾಹಿತಿ ಎಚ್. ಡುಂಡಿರಾಜ್ ಅವರು. “ವಸ್ತು ವೈವಿಧ್ಯ ಮತ್ತು ಸರಳವಾದ, ಲವಲವಿಕೆಯ ಶೈಲಿ ವಿಭಾ ಅವರ ಈ ಕೃತಿಯ ಶಕ್ತಿ ಎನ್ನಬಹುದು. ಪುಸ್ತಕವನ್ನು ಓದಿ ಮುಗಿಸಿದಾಗ ಲೇಖಕಿ ಬಣ್ಣಿಸಿದ ಎಷ್ಟೋ ಅನುಭವಗಳು, ವ್ಯಕ್ತಪಡಿಸಿದ ಅನಿಸಿಕೆಗಳು ನಮ್ಮದೂ ಹೌದು ಅನಿಸುತ್ತದೆ. ಮೊದಲ ಪ್ರಯತ್ನದಲ್ಲೇ ಸಾಕಷ್ಟು ಒಳ್ಳೆಯ ಕೃತಿಯನ್ನು ನೀಡಿದ ಲೇಖಕಿ ಶ್ರೀಮತಿ  ವಿಭಾ ಕೃಷ್ಣಪ್ರಕಾಶ ಉಳಿತ್ತಾಯ  ಅವರನ್ನು ನಾನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇವರು ಇನ್ನಷ್ಟು ಅಚ್ಚುಕಟ್ಟಾದ, ಆಳ ವಿಸ್ತಾರ ಉಳ್ಳ ಲಲಿತ ಪ್ರಬಂಧಗಳನ್ನು ಬರೆಯಲಿ ಎಂದು ಹಾರೈಸುತ್ತೇನೆ”. (ಎಚ್. ಡುಂಡಿರಾಜ್ ಅವರ ಮುನ್ನುಡಿ ಬರಹದಿಂದ)

ಈ ಕೃತಿಗೆ ಬೆನ್ನುಡಿ ಬರೆದವರು ಹಿರಿಯರಾದ ಕವಿ, ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿ ಅವರು.

ಲೇಖಕಿ  ವಿಭಾ ಕೃಷ್ಣಪ್ರಕಾಶ ಉಳಿತ್ತಾಯರ ಈ ಕೃತಿಯೊಳಗೆ ‘ರೈನ್ ರೈನ್ ಗೋ ಅವೇ … ಬಾರೋ ಬಾರೋ ಮಳೆರಾಯ, ಜಾತಕ ಅವಾಂತರ, ಆಟಿ/ ಆಷಾಢ ಅಮಾವಾಸ್ಯೆಯ ಒಂದು ನೆನಪು, ಪ್ರಯಾಸವಾಗದ ಪ್ರವಾಸ, ಶ್ವಾನಪುರಾಣ, ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ, ಒಂದು ರುಬ್ಬುವ ಕಲ್ಲಿನ ಸುತ್ತ, ಅರಿತು ಬಾಳಿದರೆ ಸ್ವರ್ಗಸುಖ, ರುಪಾಯಿಯ ಬೆಲೆ, ಕೃಷ್ಣಾ ನೀ ಬೇಗನೆ ಬಾರೋ, ಹೂವು ಹೊರಳುವುದು ದೇವರ ಕಡೆಗೆ, ಬಸುರಿಯ ಬಯಕೆ, ಶ್ರುತಿ ಸೇರಿದಾಗ, ಪಾಸ್ ಪುಸ್ತಕದ ಒಳಗೆ ಸವಿರುಚಿ, ಬ್ಯಾಲೆನ್ಸ್, ಹೆಲ್ಮೆಟ್ ಅವಾಂತರ, ಬಾರೆ ರಾಜಕುಮಾರಿ ಹೋಗೋಣ ಜಂಬೂಸವಾರಿ, ಫೋನ್ ಇನ್ ಕಾರ್ಯಕ್ರಮ, ನೋಟಾಯಣ, ಅಮ್ಮಾ ನಾನೂ ಓಟು ಹಾಕ್ತೇನೆ, ಟೊಂಯೋ ಟೊಂಯೋ ಎಂದು ಹಾಡುವ ಸೊಳ್ಳೆ, ಲಹರಿ, ದೀಪಾವಳಿಯ ವಿಜಯೋತ್ಸವ, ಕಟೀಲಮ್ಮ ಮನೆಯಲ್ಲಿ, ವಸ್ತ್ರ ಇಸ್ತ್ರಿ ಕಥನ, ದಿಂಬು, ಕೊರೋನಾ.. ಇದು ಸರೀನಾ.. ?, ಸ್ಟೂಡೆಂಟ್ ಅಕೌಂಟ್, ಹ್ಯಾಪಿ ಬರ್ತ್ ಡೇ ಟು ಯು, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ’ ಎಂಬ ಮೂವತ್ತು ಲೇಖನಗಳಿವೆ. 

ಲೇಖಕಿ ಶ್ರೀಮತಿ ವಿಭಾ ಕೃಷ್ಣಪ್ರಕಾಶ ಉಳಿತ್ತಾಯರು ತೆಂಕುತಿಟ್ಟು ಯಕ್ಷಗಾನದ ಹಿರಿಯ, ಖ್ಯಾತ ಮದ್ದಳೆಗಾರರಾದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಪುತ್ರಿ. ಇವರಿಂದ ಸಾಹಿತ್ಯ ಸೇವೆಯು ನಿರಂತರವಾಗಿ ನಡೆಯಲಿ. ಬರೆಯುವಲ್ಲಿ ಸರಸ್ವತೀ ಮಾತೆಯ ಅನುಗ್ರಹವು ಸದಾ ಇರಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ. 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಖೋಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡ ರಾಷ್ಟ್ರ ಮಟ್ಟಕ್ಕೆಆಯ್ಕೆ

ಪುತ್ತೂರು, ಅ 10 :ಬೀದರ್‌ನಲ್ಲಿ ನಡೆದ ವಿದ್ಯಾ ಭಾರತಿ ಪ್ರಾಂತ ಹಾಗೂ ಕ್ಷೇತ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದೆ. ಮುಂದಿನ  ರಾಷ್ಟ್ರ ಮಟ್ಟದ ಪಂದ್ಯ ಮಧ್ಯಪ್ರದೇಶದಲ್ಲಿ ನಡೆಯಲಿದೆ.


ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿತಿನ್‌ಕುಮಾರ್, ವಾಣಿಜ್ಯ ವಿಭಾಗದ ಎಚ್‌ ಅಭಿರಾಮ್, ವಿಜ್ಞಾನ ವಿಭಾಗದ ಮಂಜುನಾಥ್‌ ಎಸ್, ಸಾತ್ವಿಕ್‌ ಆರ್, ನಂದನ್‌ ಗೌಡ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವರುಣ್‌ ಕುಮಾರ್, ಜೀವನ್‌ಎಸ್, ದೇಶಿಕ್ ಕೆ, ರಂಜನ್‌ ಕೆ.ಆರ್, ವಿಜ್ಞಾನ ವಿಭಾಗದ ಎಲ್. ಧನುಷ್. ಅಶ್ವಿತ್ ಭಂಡಾರಿ, ಮನ್ವಿತ್ ಬಿ ಗೌಡ, ಯಶವಂತ್‌ ಡಿ.ಎಸ್, ಶ್ರೇಯಸ್ ಪಿ, ಸುಹಾಸ್ ಕೆ ಭಾಗವಹಿಸಿದ್ದರು.


ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ದಿವ್ಯ ಎಂ, ವಾಣಿಜ್ಯ ವಿಭಾಗದ ಜ್ಯೋತಿಕಾ ಪಿ, ಹಿತಶ್ರೀ, ಸುಪ್ರಿತಾ ಕೆ ವಿಜ್ಞಾನ ವಿಭಾಗದ ಪೂರ್ವಿಕ ಎ. ಎಸ್,  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ದಿಶಾ ವಿ, ಯಶಸ್ವಿನಿ, ನಿಶ್ಮಿತಾ, ಕಲಾ ವಿಭಾಗದ ಶಿವಾನಿ ಪಿ.ಕೆ ಭಾಗವಹಿಸಿದ್ದರು.


ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ ರವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು  ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಕಥಾ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕುಸುಮ ಪ್ರಥಮ ಮತ್ತು ಸುಶ್ಮಿತಾ ದ್ವಿತೀಯ

ಪುತ್ತೂರು, ಅ 10:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ವತಿಯಿಂದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ ಇತ್ತೀಚೆಗೆ ನಡೆದ 21ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪದವಿ ಪೂರ್ವ ವಿಭಾಗದ ಕಥಾ ಸ್ಪರ್ಧೆಯಲ್ಲಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಕುಸುಮ ಸಿ. ಎನ್(ಕುಶಾಲನಗರದ ಹೆಬ್ಬಾಲೆಯ ಮಂಜು ನಾಯಕ್ ಮತ್ತು ಪವಿತ್ರ ದಂಪತಿ ಪುತ್ರಿ) ಪ್ರಥಮ ಸ್ಥಾನವನ್ನೂ

ಹಾಗೂ ಸುಶ್ಮಿತಾ ಬಿ.ಆರ್ (ಶಿವಮೊಗ್ಗದ ಹೊಸನಗರದ ರಾಘವೇಂದ್ರ ಬಿ ಪಿ ಮತ್ತು ಶ್ಯಾಮಲ ಭಟ್‌ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಗಳಿಸಿರುತ್ತಾರೆ.


ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ವಿದ್ಯಾಪೋಷಕ್ ವಿನಮ್ರ ಸಹಾಯ ಕಾರ್ಯಕ್ರಮ ಉದ್ಘಾಟನೆ – ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಣೆ

ಉಡುಪಿ : ಬಂಡೆಯನ್ನು ಶಿಖರದ ಎತ್ತರಕ್ಕೆ ಕೊಂಡೊಯ್ಯಲು ಸಾಕಷ್ಟು ಪ್ರಯತ್ನಪಡಬೇಕು. ಆದರೆ ಅಲ್ಲಿಂದ ಉರುಳಿಸಿದರೆ ಯಾವುದೇ ಪ್ರಯತ್ನವಿಲ್ಲದೆ ಕೆಳಗೆ ಬೀಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆ, ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ನಿರಂತರ ಸಾಧನೆ ಬೇಕು. ವ್ಯಕ್ತಿತ್ವ ಪತನಗೊಳ್ಳಲು ಒಂದೇ ಒಂದು ತಪ್ಪು ಸಾಕಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಚ್ಚಾರಿತ್ರ‍್ಯವನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 09ರಂದು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿದ 18ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು.

ಅಧ್ಯಕ್ಷರಾಗಿ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್, ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಶ್ರೀ ಕುಂದೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣಾನಂದ ಛಾತ್ರ ಇವರ ಗೌರವ ಉಪಸ್ಥಿತಿಯಲ್ಲಿ, ಶ್ರೀ ಕೃಷ್ಣಪ್ರಸಾದ ಅಡ್ಯಂತಾಯ, ಶ್ರೀ ಸಜಿತ್ ಹೆಗ್ಡೆ, ಶ್ರೀ ಜೆ.ಪಿ. ಶೆಟ್ಟಿ, ಶ್ರೀ ವಿ.ಜಿ. ಶೆಟ್ಟಿ, ಶ್ರೀ ಯು. ಶ್ರೀಧರ್, ಕುಮಾರಿ ಹಸ್ತಾ ಶೆಟ್ಟಿ, ಶ್ರೀಮತಿ ವಿಲಾಸಿನಿ ಬಾಬುರಾಯ ಶೆಣೈ, ಶ್ರೀ ಪ್ರವೀಣ್ ಗುಡಿ ಅಭ್ಯಾಗತರಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹನಾ ಕನ್ವೆನ್ಷನ್ ಸೆಂಟರ್‌ನ ಮಾಲಕರಾದ ಶ್ರೀ ಸುರೇಂದ್ರ ಶೆಟ್ಟಿಯವರಿಗೆ ಸ್ವಾಮೀಜಿಯವರು ಅಭಿನಂದನ ಪತ್ರ ನೀಡಿ ಅನುಗ್ರಹಿಸಿದರು.


ಚೆನ್ನೈನ ಅಣ್ಣಾಮಲೈಯವರು ಕೊಡಮಾಡಿದ ರೂ. 25000/- ನೆರವನ್ನು ಬೈಂದೂರು ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ನಾಲ್ಕು ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ಯು. ಉಪೇಂದ್ರ ಅವರ ನೆನಪಿನಲ್ಲಿ ಉತ್ತಮ ಕಡತ ನಿರ್ವಹಣೆಗೆ ನೀಡುವ ಹಾಗೂ ಅಕ್ಷತಾ ದೇವಾಡಿಗ ಇವಳ ಸ್ಮರಣಾರ್ಥ ನೀಡುವ ಉತ್ತಮ ಪತ್ರ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಇದೇ ಸಂದರ್ಭದಲ್ಲಿ ಉದ್ಯೋಗ ದೊರೆತ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಭಹಾರೈಸಿದರು. ಉಪಾಧ್ಯಕ್ಷ ಎಸ್. ವಿ. ಭಟ್ ಸ್ವಾಗತಿಸಿ, ಸಕ್ರಿಯ ಕಾರ್ಯಕರ್ತ ನಟರಾಜ್ ಉಪಾಧ್ಯ ವಂದಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ನಿರೂಪಿಸಿದರು.


ಅಪರಾಹ್ನ ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸಹಾಯಧನ ವಿತರಣಾ ಕಾರ್ಯಕ್ರಮ ಜರಗಿತು. ಶ್ರೀ ಆನಂದ ಸಿ. ಕುಂದರ್, ಶ್ರೀ ಕೆರಾಡಿ ಚಂದ್ರಶೇಖರ್ ಶೆಟ್ಟಿ, ಶ್ರೀ ಹರೀಶ್ ರಾಯಸ್, ಶ್ರೀ ರವಿರಾಜ್ ಬೆಳ್ಮ, ಶ್ರೀ ಎಚ್. ನಾಗರಾಜ ಶೆಟ್ಟಿ, ಶ್ರೀ ಯು. ವಿಶ್ವನಾಥ ಶೆಣೈ, ಶ್ರೀ ಪುರುಷೋತ್ತಮ ಪಟೇಲ್, ಶ್ರೀ ಎಚ್. ಶಶಿಧರ ಶೆಟ್ಟಿ, ಶ್ರೀ ಎ. ಎಸ್. ಎನ್. ಹೆಬ್ಬಾರ್, ಶ್ರೀ ಯಶ್ಪಾಲ್ ಸುವರ್ಣ, ಶ್ರೀ ಶಶಿಧರ್ ಶೆಟ್ಟಿ, ಶ್ರೀ ಸುಧಾಕರ ಶೆಟ್ಟಿ, ಶ್ರೀ ಬಿಲ್ಲಾಡಿ ಸೀತಾರಾಮ್ ಶೆಟ್ಟಿ, ಶ್ರೀ ಸುಜಯ್ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಇಪ್ಪತ್ತು ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಲಾಯಿತು. ಒಟ್ಟು 1135 ವಿದ್ಯಾರ್ಥಿಗಳಿಗೆ 89,85,500/- ರೂಪಾಯಿ ವಿದ್ಯಾರ್ಥಿವೇತನ ವಿತರಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿಯವರ ಪ್ರಾಯೋಜಕತ್ವದ ಲ್ಯಾಪ್‌ಟಾಪನ್ನು ವಿತರಿಸಲಾಯಿತು.

ಸಭಾಂಗಣದ ಪ್ರಬಂಧಕರಾದ ಶ್ರೀ ಅರುಣ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರೂಪಿಸಿದರು. ಕಾರ್ಯಕ್ರಮವನ್ನು ಶ್ರೀ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿ ಸಂಯೋಜಿಸಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಪದ್ಯಾಣ ಜಯರಾಮ ಭಟ್ ಮತ್ತು ಪುತ್ತು ನಾಯ್ಕ ಬಸಕೋಡಿ ಅವರಿಗೆ ಸರ್ಪಂಗಳ ಪ್ರಶಸ್ತಿ ಪ್ರದಾನ – ಅಕ್ಟೋಬರ್ 15, 2022ರಂದು ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ

ಹನ್ನೊಂದನೆಯ ವರ್ಷದ  ಸರ್ಪಂಗಳ  ಯಕ್ಷೋತ್ಸವ ಮತ್ತು  ಸರ್ಪಂಗಳ  ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ.

ಸಂಜೆ 6.00 ರಿಂದ 11.00ರವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

2022ನೆಯ ಸಾಲಿನ‘ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ.ಟಿ. ಜಯರಾಮ ಭಟ್ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು.

ಈ ವರ್ಷದ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ.

ಅಂದು ಜರಗಲಿರುವ ಸಮಾರಂಭದಲ್ಲಿ ಪರ್ಯಾಯ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ‘ಸರ್ಪಂಗಳ  ಯಕ್ಷೋತ್ಸವ’ದ ಆಯೋಜಕರಾದ ಡಾ.ಶೈಲಜಾ ಎಸ್. ಮತ್ತು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಾರದಾ ವಿದ್ಯಾಲಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ಮತ್ತು 8 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, 240 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯೊಂದಿಗೆ ಅಕ್ಟೋಬರ್ 11 ರಿಂದ ಬಳ್ಳಾರಿಯ ಬಾಲ ವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. 

ಶಿಶು ವರ್ಗದಲ್ಲಿ ವಂಶಿತಾ (ನೆಕ್ಕರಾಜೆ ವಸಂತ ಕುಮಾರ್, ಸುಜಾತ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ), 200 ಮೀಟರ್ (ದ್ವಿತೀಯ), 100 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ಆತ್ಮಿ.ಕೆ.ಎಲ್ (ಕಂಬಳದಡ್ಡ ಲಕ್ಷ್ಮಣ ಗೌಡ, ಹೇಮಲತಾ ದಂಪತಿ ಪುತ್ರಿ), 200 ಮೀಟರ್ (ಪ್ರಥಮ ), 100 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ ಆನಂದ್ (ನೆರಿಗೇರಿ ಆನಂದ್, ವಾಣಿಶ್ರೀ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ),

ಅಕ್ಷರಾ.ಪಿ.ಶೆಟ್ಟಿ (ಕೊಡಂಗೆಮಾರ್ ಪ್ರದೀಪ್ ಶೆಟ್ಟಿ, ಮಮತಾ ಶೆಟ್ಟಿ ದಂಪತಿ ಪುತ್ರಿ) ಶಾಟ್ ಪುಟ್ (ಪ್ರಥಮ), ಸ್ನಿಗ್ಧಾ.ಎನ್.ಎಸ್ (ಸಾಲ್ತಾಡಿ ನಾರಾಯಣ.ಕೆ, ಸುಹಾಸಿನಿ ದಂಪತಿ ಪುತ್ರಿ) ಶಾಟ್ ಪುಟ್ (ತೃತೀಯ) , ಪೃಥ್ವಿಕಾ ಆಚಾರ್ಯ (ಪರ್ಲಡ್ಕ ಚಿದಾನಂದ , ವೀಣಾ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), ಬಾಲಕರ ವಿಭಾಗದಲ್ಲಿ ಸಾಕ್ಷಿನ್.ಆರ್.ರೈ (ಎಣ್ಮೂರುಗುತ್ತು ರವೀಂದ್ರನಾಥ್ ರೈ, ಜ್ಯೋತಿಲಕ್ಷ್ಮೀ ದಂಪತಿ ಪುತ್ರ) ಎತ್ತರ ಜಿಗಿತದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.

ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), 80 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಡಿಂಪಲ್ ಶೆಟ್ಟಿ(ಮೆರ್ಲ ನಿವಾಸಿ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) 200 ಮೀಟರ್ (ದ್ವಿತೀಯ), 100 ಮೀಟರ್ (ದ್ವಿತೀಯ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ),

ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ (ದ್ವಿತೀಯ), 400 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ದಿವಿಜ್ಞಾ (ಕುರಿಯ ಶಿವಪ್ರಸಾದ್, ಪವಿತ್ರಾ ದಂಪತಿ ಪುತ್ರಿ) 200 ಮೀಟರ್ (ತೃತೀಯ), 100 ಮೀಟರ್ (ತೃತೀಯ), ಜೀವಿಕಾ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರಿ) ಎತ್ತರ ಜಿಗಿತ (ತೃತೀಯ), ಮಾನ್ಯ ಲಕ್ಷ್ಮೀ (ಲಕ್ಷ್ಮೀಬೆಟ್ಟ ಕೃಷ್ಣಪ್ರಸಾದ್, ಮಂಜುಳಾ ದಂಪತಿ ಪುತ್ರಿ) ಚಕ್ರ ಎಸೆತ (ತೃತೀಯ) ಬಹುಮಾನ ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಅಭಿಶ್ಯಾಮ (ಪರ್ಲಡ್ಕ ಮುರಳೀಧರ್, ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ (ಪ್ರಥಮ), ಮನ್ವಿತ್ ನೆಕ್ಕರೆ (ನೆಕ್ಕರೆ ಉಮೇಶ್.ಎನ್ , ಕವಿತಾ ದಂಪತಿ ಪುತ್ರ) ಉದ್ದ ಜಿಗಿತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಮನ್ವಿತ್.ಎಂ. ರೈ (ದರ್ಬೆ ಮಂಜುನಾಥ್ ರೈ, ಪ್ರವೀಣಾ ರೈ ದಂಪತಿ ಪುತ್ರ) ಚಕ್ರ ಎಸೆತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಲಕ್ಷ್ಮೀ ನಮನ್ (ಲಕ್ಷ್ಮೀ ಬೆಟ್ಟ ಜನಾರ್ದನ, ವೀಣಾ ಜನಾರ್ದನ್ ದಂಪತಿ ಪುತ್ರ) 4×100 ಮೀಟರ್ ರಿಲೇ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ. 

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ) 100 ಮೀಟರ್ (ಪ್ರಥಮ), 200 ಮೀಟರ್ (ಪ್ರಥಮ), 110 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), ಅನ್ನಿಕಾ.ಎಂ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ (ಪ್ರಥಮ), 1500 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ),

ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), 400 ಮೀಟರ್ (ದ್ವಿತೀಯ), ರಿದ್ಧಿ.ಸಿ.ಶೆಟ್ಟಿ ( ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 400 ಮೀಟರ್ (ದ್ವಿತೀಯ), 800 ಮೀಟರ್ (ದ್ವಿತೀಯ) 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ.ಎಸ್.ಪಿ. (ಪಳಂಬೆ ನಿವೃತ್ತ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 100 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ),

ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಶ್ರದ್ಧಾ ಲಕ್ಷ್ಮೀ (ತಾರಿಗುಡ್ಡೆ ರವಿಶಂಕರ್ , ಅನುಪಮಾ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ) , ಧನ್ಯಶ್ರೀ (ಬಲ್ನಾಡು ಪ್ರಸನ್ನ.ಬಿ, ಮನೋರಮಾ.ಪಿ ದಂಪತಿ ಪುತ್ರಿ) ಹ್ಯಾಮರ್ ಎಸೆತ (ದ್ವಿತೀಯ), ಚಕ್ರ ಎಸೆತ (ದ್ವಿತೀಯ), ಪವಿತ್ರಾ (ಮೀನಾವು ಕೇಶವದಾಸ್, ಸುಭಾಷಿಣಿ ದಂಪತಿ ಪುತ್ರಿ) ಈಟಿ ಎಸೆತ (ದ್ವಿತೀಯ), ಹ್ಯಾಮರ್ ಎಸೆತ (ತೃತೀಯ) ಬಹುಮಾನ ಗಳಿಸಿರುತ್ತಾರೆ.

ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ) 3000 ಮೀಟರ್ (ಪ್ರಥಮ), 5 ಕಿಲೋಮೀಟರ್ ನಡಿಗೆ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), ಸಚಿತ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 800 ಮೀಟರ್ (ಪ್ರಥಮ), 400 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ),

ಪ್ರಥಮ್.ಎಂ.ಪಿ (ಪಡ್ನೂರು ಪದ್ಮಪ್ಪ ಪೂಜಾರಿ, ಮಾಲತಿ.ಬಿ. ದಂಪತಿ ಪುತ್ರ) ಹ್ಯಾಮರ್ ಎಸೆತ (ಪ್ರಥಮ), ಚಕ್ರ ಎಸೆತ (ದ್ವಿತೀಯ), ಆಶ್ರಯ್.ಎನ್ ( ಕೆಮ್ಮಿಂಜೆ ಶಶಿಧರ್.ಎನ್, ರಾಜೀವಿ ದಂಪತಿ ಪುತ್ರ) 800 ಮೀಟರ್ (ದ್ವಿತೀಯ), ಸಾತ್ವಿಕ್.ಆರ್ (ರೆಂಜ ಆರ್.ಸಿ. ನಾರಾಯಣ್, ಸುಮಾ ದಂಪತಿ ಪುತ್ರ) ಟ್ರಿಪಲ್ ಜಂಪ್ ( ದ್ವಿತೀಯ), 110 ಮೀಟರ್ ಹರ್ಡಲ್ಸ್ (ತೃತೀಯ), 4×100 ಮೀಟರ್ ರಿಲೇ (ತೃತೀಯ),

ಅಮಿತ್ ಬೋರ್ಕರ್ (ದರ್ಬೆ ಮೋಹನ್ ಚಂದ್ರ ಬೋರ್ಕರ್, ನಳಿನಿ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ), ಧನ್ ರಾಜ್ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), ಪ್ರಖ್ಯಾತ್ (ಕೆಮ್ಮಿಂಜೆ ಹರಿಯ ನಾಯಕ್.ಸಿ.ಎಚ್ , ವಾರಿಜ ದಂಪತಿ ಪುತ್ರ) ಎತ್ತರ ಜಿಗಿತ (ತೃತೀಯ), ಹಾರ್ದಿಕ್.ಪಿ.ಕೆ (ಕೋಡಿಂಬಾಡಿ ಪುರುಷೋತ್ತಮ್, ಶಿಕ್ಷಕಿ ಪುಷ್ಪಲತಾ ದಂಪತಿ ಪುತ್ರ) 3000 ಮೀಟರ್ (ತೃತೀಯ) ಬಹುಮಾನ ಗಳಿಸಿರುತ್ತಾರೆ. 

ವೈಯಕ್ತಿಕ ಚಾಂಪಿಯನ್ ಶಿಶುವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿತಾ, ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ, ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ ಹಾಗೂ ಸಚಿತ್.ಪಿ.ಕೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಶಿಶು ವರ್ಗ, ಬಾಲ ವರ್ಗ ಮತ್ತು ಕಿಶೋರ ವರ್ಗದ ಬಾಲಕಿಯರ ವಿಭಾಗದ ಮೂರೂ ಸಮಗ್ರ ಪ್ರಶಸ್ತಿಗಳನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತನ್ನ ಮುಡಿಗೇರಿಸಿಕೊಂಡಿದೆ. ಮಾತ್ರವಲ್ಲದೇ ಒಟ್ಟಾರೆಯಾಗಿ 240 ಅಂಕಗಳೊಂದಿಗೆ “ಸಮಗ್ರ ತಂಡ ಪ್ರಶಸ್ತಿ”ಯನ್ನೂ ಕೂಡ ಜಯಿಸಿಕೊಂಡು ರಾಜ್ಯಮಟ್ಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆ ಇವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ ಹಾಗೂ ಶ್ರೀಮತಿ ನಮಿತಾ.ಕೆ.ಕೆ, ಶ್ರೀ ದೀಪಕ್, ಶ್ರೀಮತಿ ರಶ್ಮಿ.ಎಚ್.ಕೆ ಮತ್ತು ಶ್ರೀ ಪವನ್ ಕುಮಾರ್ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ. 

ತಂಡದ ಪ್ರಧಾನ ವ್ಯವಸ್ಥಾಪಕರಾಗಿ ಸಹಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ಮತ್ತು ಸಹಾಯಕ ವ್ಯವಸ್ಥಾಪಕರಾಗಿ ಸಹಶಿಕ್ಷಕಿಯರಾದ ಶ್ರೀಮತಿ ಲತಾ ಕುಮಾರಿ ಹಾಗೂ ಶ್ರೀಮತಿ ಅಶ್ವಿನಿ ರಾವ್ ಭಾಗವಹಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]