Tuesday, March 17, 2026
Home Blog Page 141

ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಅಂಗಳದಲ್ಲಿ ವಿದ್ಯಾರ್ಥಿ ಉದ್ಯಮಿಗಳು – ಇನ್ನೂರಿಪ್ಪತ್ತು ಮಕ್ಕಳ ಇಪ್ಪತ್ತನಾಲ್ಕು ಸ್ಟಾಲ್‌ಗಳಿಗೆ ಸಾವಿರಾರು ಮಂದಿ ಖರೀದಿದಾರರು!

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಬುಧವಾರ ಅಪರಾಹ್ನದವರೆಗೆ ತರಗತಿಗೆ ಬಂದಿರಲಿಲ್ಲ. ಎಲ್ಲ ವಿದ್ಯಾರ್ಥಿಗಳು ಶಾಲೆಯ ಎದುರಿನ ಸಭಾಂಗಣದಲ್ಲಿ ಜಮಾಯಿಸಿದ್ದರು. ಗೌಜು, ಗದ್ದಲ ಸುತ್ತಮುತ್ತಲಿನವರ ಕಿವಿಗೆ ಅಪ್ಪಳಿಸುತ್ತಿತ್ತು.


ಇದೇನು ಮಕ್ಕಳೆಲ್ಲ ಸೇರಿ ತರಗತಿ ಬಹಿಷ್ಕಾರ ಮಾಡಿದರೇ ಅಂತ ಯೋಚಿಸಬೇಡಿ. ಮಕ್ಕಳೆಲ್ಲ ಈ ದಿನ ಉದ್ಯಮಿಗಳಾಗಿದ್ದರು! ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನ ವ್ಯಾಪಾರ ವಹಿವಾಟು ನಡೆಸುವಂತೆ ಕರೆ ನೀಡಿತ್ತು. ಪರಿಣಾಮವಾಗಿ ಶಾಲೆಯ ಎದುರಿನ ವಿಶಾಲವಾದ ಶ್ರೀ ಶಂಕರ ಸಭಾಭವನದಲ್ಲಿ ಭರ್ತಿ ಇಪ್ಪತ್ತನಾಲ್ಕು ಭಿನ್ನ ಭಿನ್ನ ವ್ಯಾಪಾರ ಕೇಂದ್ರಗಳು ತಲೆ ಎತ್ತಿ ನಿಂತಿದ್ದವು.


ಸ್ಯಾ0ಡ್‌ವಿಚ್, ದೋಸೆ, ಬಿಸಿ ಬಿಸಿ ಬಜ್ಜಿ, ಕೇಕ್, ಸಮೋಸಾ, ಪಾನಿಪುರಿ, ಚರುಂಬುರಿ, ಬರ್ಫಿ, ಬರ್ಗರ್‌ನಂತಹ ತಿಂಡಿ ತಿನಿಸುಗಳ ಸ್ಟಾಲ್‌ಗಳು ನೆರೆದವರನ್ನು ಕೈಬೀಸಿ ಕರೆಯುತ್ತಿದ್ದವು. ಇನ್ನು ಎಳನೀರು, ಮಜ್ಜಿಗೆ, ವಿವಿಧ ಬಗೆಯ ಜ್ಯೂಸ್, ರೆಡಿಮೇಡ್ ತಂಪು ಪಾನೀಯಗಳೇ ಮೊದಲಾದ ಪಾನೀಯಗಳು ಆಗಮಿಸಿದವರ ಬಾಯಾರಿಕೆಯನ್ನು ತಣಿಸುತ್ತಿದ್ದವು.

ಇನ್ನು ಮಹಿಳೆಯರ ಕಿವಿ, ಮೂಗಿನ ಆಭರಣಗಳು, ಎಲೆಕ್ಟ್ರಿಕ್ ಸಾಧನಗಳು, ಪುಸ್ತಕಗಳು, ಕೀ ಪಂಚ್‌ಗಳು ಕ್ಷಣಮಾತ್ರದಲ್ಲಿ ಬಿಕರಿಯಾದವು. ಅಲಂಕಾರಿಕ ಗಿಡಗಳು, ಅಲಂಕಾರಿಕ ಕೈ ಕುಸುರಿಗಳು, ಟೇಬಲ್ ಡೆಕರೇಟಿವ್ ವಸ್ತುಗಳೇ ಮೊದಲಾದವುಗಳು ಜನಮನ ಸೆಳೆದವು. ರಿಂಗ್ ಎಸೆತ, ಚೆಂಡೆಸೆತ, ಬಾಣ ಎಸೆತದಂತಹ ಆಟಗಳು ಹಾಗೂ ಗೆದ್ದವರಿಗೆ ಬಹುಮಾನಗಳು ಯುವಸಮೂಹವನ್ನು ಹುಚ್ಚೆದ್ದು ಆಡುವಂತೆ ಮಾಡಿದವು.

ಆಗಮಿಸಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದುದರಿಂದ ಇಂತಹ ಆಟದ ಸ್ಟಾಲ್ ಗಳು ಭರ್ಜರಿ ವಹಿವಾಟು ನಡೆಸಿದವು.
ಈ ಮಧ್ಯೆ ಮನರಂಜನೆಯ ಕೊಠಡಿಯಂತೂ ಹೌಸ್ ಫುಲ್! ಹೌದು, ಕೊಠಡಿಯೊಂದರಲ್ಲಿ ನಸುಗತ್ತಲೆಯ ವಾತಾವರಣ ಸಿದ್ಧಪಡಿಸಿ ಆರು ಮಂದಿ ವಿದ್ಯಾರ್ಥಿಗಳು ಜೋಕರ್‌ಸಹಿತ ವಿವಿಧ ವೇಷ ಧರಿಸಿ ಆಗಮಿಸಿದವರನ್ನು ನಗಿಸುವುದೇ ಈ ಕೊಠಡಿಯ ವಿಶೇಷತೆ.

ಇದರ ಪ್ರವೇಶ ದರ 10ರೂಪಾಯಿ. ಒಳಗೆ ಬಂದವರಿಗೆ ಕಡ್ಲೆಕಾಯಿ ಉಚಿತ! ಅಚ್ಚರಿಯ ಸಂಗತಿಯೆ0ದರೆ ಕೆಲವು ವ್ಯಾಪಾರ ಕೇಂದ್ರಗಳ ಆದಾಯ ಐದಾರು ಸಾವಿರವನ್ನೂ ಮೀರಿಸಿತ್ತು! ಅಂದಹಾಗೆ ಲಾಭ ನಷ್ಟ ಏನೇ ಇದ್ದರೂ ಅದು ಸ್ಟಾಲ್ ಇಟ್ಟ ವಿದ್ಯಾರ್ಥಿ ಉದ್ಯಮಿಗಳಿಗೇ! ಸ್ಟಾಲ್‌ನಲ್ಲಿ ಉಳಿಕೆಯಾದ ವಸ್ತುಗಳ ಹೊಣೆಯೂ ಅವರದ್ದೇ.


‘ಮಕ್ಕಳಲ್ಲಿ ಉದ್ಯಮ ಶೀಲತೆಯ ಕಲ್ಪನೆ ಬೆಳೆಯಬೇಕು. ಸ್ವಂತ ವ್ಯವಹಾರ. ಸ್ಟಾಟ್ ಅಪ್ ಮಾಡುವ ಮನಸ್ಥಿತಿ ಎಳೆಯ ಹಂತದಿ0ದಲೇ ಬೆಳೆಯಬೇಕು. ವಿದೇಶದ ಯಾವುದೋ ಕಂಪೆನಿಗೆ ಹೋಗಿ ಶರಣಾಗುವ ಬದಲು ತಾನೇ ಸ್ವಯಂ ಉದ್ಯಮ ನಿರ್ಮಿಸಿ ಹತ್ತಾರು ಜನರಿಗೆ ಉದ್ಯೋಗದಾತ ಎನಿಸುವ ಕಲ್ಪನೆ ಮಕ್ಕಳಲ್ಲಿ ಬಂದರೆ ಮುಂದೆ ಅದು ನೂತನ ಉದ್ಯಮಗಳಿಗೆ ತಳಹದಿಯಾಗಬಹುದು. ಆದ್ದರಿಂದಲೇ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.


ತೆರೆಮರೆಯ ಸಿದ್ಧತೆ:
ಈ ಕಾರ್ಯಕ್ರಮ ಆಯೋಜನೆಯಲ್ಲಿ ಆಡಳಿತ ಮಂಡಳಿಯ ಜತೆಗೆ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಹೆತ್ತವರ ಉತ್ಸಾಹವೂ ಪ್ರಮುಖ ಪಾತ್ರ ವಹಿಸಿತ್ತು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಾಲ್ ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರತಿ ತರಗತಿಯಿಂದ ನಾಲ್ಕು ಸ್ಟಾಲ್ ರೂಪಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದರನ್ವಯ ವಿದ್ಯಾರ್ಥಿಗಳೇ ತಮ್ಮ ತಮ್ಮ ತಂಡವನ್ನು ರೂಪಿಸಿಕೊಂಡು, ತಮ್ಮದೇ ಯೋಜನೆಯ ಸ್ಟಾಲ್ ನಡೆಸುವುದಕ್ಕೆ ಸಿದ್ಧರಾಗಿ ನಿಂತಿದ್ದರು.

ಕೆಲವರು ತಾವೇ ಮನೆಯಲ್ಲಿ ಸಿದ್ಧಪಡಿಸಿದ ವಸ್ತುಗಳ ಸ್ಟಾಲ್ ಅನ್ನು ಸಿದ್ಧಗೊಳಿಸಿದರೆ ಮತ್ತೆ ಕೆಲವರು ವಸ್ತುಗಳನ್ನು ಬೇರೆಡೆಯಿಂದ ತಂದು ವ್ಯಾಪಾರಕ್ಕೆ ಅಣಿಯಾಗಿದ್ದರು. ಹೀಗೆ ಒಟ್ಟು 220 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು 24 ಸ್ಟಾಲ್ ಅನ್ನು ರೂಪಿಸಿ ವ್ಯಾಪಾರಕ್ಕೆ ಅಣಿಯಾಗಿದ್ದರು. ಈ ಸ್ಟಾಲ್ ವೀಕ್ಷಣೆ ಹಾಗೂ ಖರೀದಿಗಾಗಿ ಅಂಬಿಕಾ ವಿದ್ಯಾಲಯ ಅಲ್ಲದೆ ಅಂಬಿಕಾ ಪದವಿಪೂರ್ವ, ಪದವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವೃಂದ, ಹೆತ್ತವರು ಮಾತ್ರವಲ್ಲದೆ ಸಮಾಜದ ಮಂದಿ ಭಾಗಿಯಾದದ್ದು ವಿಶೇಷವೆನಿಸಿತು.


‘ಈ ‘ಮಾರ್ಕೆಟ್ ಫೆಸ್ಟ್’ ಮಾಡುವಲ್ಲಿ ಹೆತ್ತವರ ಸಹಕಾರ ದೊಡ್ಡದು. ಮಕ್ಕಳಿಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದಾರೆ. ಹಾಗಾಗಿಯೇ ಕಾರ್ಯಕ್ರಮ ಅತ್ಯಂತ ತೃಪ್ತಿದಾಯಕವಾಗಿ ನಡೆದಿದೆ. ಅಂತೆಯೇ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಬಳಗದ ಸಹಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ.

ವ್ಯಾಪಾರ ಹೇಗಿರುತ್ತದೆ, ಲಾಭ ನಷ್ಟ ಹೇಗಾಗುತ್ತದೆ, ವಿವಿಧ ಬಗೆಯ ಮಾಲಿಕತ್ವಗಳ ಕಲ್ಪನೆ ಈ ಕಾರ್ಯಕ್ರಮದಿಂದ ಮಕ್ಕಳಿಗೆ ಅರಿವಾಗಿದೆ’ ಎನ್ನುವುದು ಪ್ರಾಂಶುಪಾಲೆ ಮಾಲತಿ ಡಿ ಅವರ ಮಾತುಗಳು.

ಮಂಗಳೂರು ವಿಭಾಗ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟವು ನವಂಬರ್ 5 ಮತ್ತು 6 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.


ನವಂಬರ್ 5 ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಕರ್ನಾಟಕ ಅರಣ್ಯ ಇಲಾಖೆಯ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.

ಯು.ಆರ್ ಪ್ರಾಪರ್ಟೀಸ್ ಪುತ್ತೂರು ಇದರ ಮಾಲಕ ಹಾಗೂ ಇಂಜಿನಿಯರಿ0ಗ್ ಕಾಲೇಜಿನ ಪೂರ್ವ ವಿದ್ಯಾರ್ಥಿ ಉಜ್ವಲ್ ಕುಮಾರ್, ಥಿಂಕ್ ಎಂಡ್ ಲರ್ನ್ ಇದರ ಮುಖ್ಯಸ್ಥ ಹಾಗೂ ಇಂಜಿನಿಯರಿ0ಗ್ ಕಾಲೇಜಿನ ಪೂರ್ವ ವಿದ್ಯಾರ್ಥಿ ವಿಶಾಂತ್ ರೈ ಮತ್ತು ಭಾಗ್ಮನೆ ಡೆವೆಲಪರ್ಸ್ ಬೆಂಗಳೂರು ಇದರ ಅಧಿಕಾರಿ ಹಾಗೂ ಇಂಜಿನಿಯರಿ0ಗ್ ಕಾಲೇಜಿನ ಪೂರ್ವ ವಿದ್ಯಾರ್ಥಿ ಅಭಿಷೇಕ್.ಕೆ ಗೌರವ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ಪಂದ್ಯಾಟದ ಸಂಘಟನಾ ಅಧ್ಯಕ್ಷ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.


ಮ್ಯಾಟ್ ಅಂಕಣದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿ0ಗ್ ಕಾಲೇಜುಗಳ 15 ತಂಡಗಳು ಭಾಗವಹಿಸುತ್ತವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ, “ದೀರ್ಘಕಾಲಿಕ ಇತಿಹಾಸವಿರುವ ಶಾಸ್ತ್ರೀಯ ಭಾಷೆ ಕನ್ನಡ” : ಜಯಂತಿ ಪಿ.

ಪುತ್ತೂರು: ಸುಮಾರು 2,000ದಷ್ಟು ವರ್ಷಗಳ ಇತಿಹಾಸವಿರುವ  ಶಾಸ್ತ್ರೀಯ ಭಾಷೆ ಕನ್ನಡ. ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವ ವಿಚಾರವಾಗಿದೆ. ಕನ್ನಡ ನಾಡು ಅದೆಷ್ಟೋ ಮಂದಿ ಸುಭಟರು, ಕವಿಹೃದಯಿಗಳು ಹಾಗೂ ಒಳ್ಳೆಯ ರಾಜ ಮಹಾರಾಜರುಗಳಿಗೆ ಜನ್ಮ ನೀಡಿದೆ.

ಅಂತೆಯೇ ಹಿಂದೂ ಪುನರುತ್ಥಾನ ಮಾಡಿದ ವಿದ್ಯಾರಣ್ಯರು ಕೂಡ ಈ ಮಣ್ಣಿನಲ್ಲಿ ಜನಿಸಿದ್ದಾರೆ.  ಪಂಪ, ರನ್ನ, ಪೊನ್ನ ಅತ್ಯಂತ ಶ್ರೇಷ್ಠ ಕವಿ ಪುಂಗವರು ಹುಟ್ಟಿದ ನಾಡು ನಮ್ಮದು ಎಂದು ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ ಹೇಳಿದರು.
ಅವರು ನಗರದ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇಯಲ್ಲಿ  ನವೆಂಬರ್ 1ರಂದು ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ವಿಭಜನೆಯಾಗಿದ್ದ ಕನ್ನಡನಾಡಿನ ಒಗ್ಗೂಡುವಿಕೆಯ  ಕನಸು ಕಂಡ ರಾ.ಹ ದೇಶಪಾಂಡೆಯವರು ವಿದ್ಯಾವರ್ಧಕ ಸಂಘ ಸ್ಥಾಪಿಸಿ 19ನೇ ಶತಮಾನದಲ್ಲಿ ಭಾಷಾವಾರು ಪ್ರಾಂತ್ಯವನ್ನು ವಿಭಾಗಿಸಿ ಕನ್ನಡ ನಾಡು ಒಗ್ಗೂಡಿಸುವಲ್ಲಿ ಕೈಜೋಡಿಸಿದರು. ಹಾಗೆಯೇ ಆಲೂರು ವೆಂಕಟರಾಯರು ಬೆಳಗಾವಿ ಸಭೆಯಲ್ಲಿ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡು ಹಾಡಿ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಏಕೀಕರಣ ಚಳುವಳಿಗೆ ಕೈಜೋಡಿಸಿದರು.

ಇದರ ಪರಿಣಾಮವಾಗಿ 1956 ನವೆಂಬರ್ 1 ರಂದು ಮೈಸೂರು ಎಂಬ ಹೊಸ ನಾಡು ಉದಯವಾಯಿತು. ಇದು 1973 ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣಗೊಂಡಿತು. ಹೀಗೆ ಏಕೀಕರಣದ ಹೋರಾಟ 75 ವರ್ಷಕ್ಕಿಂತ ಮಿಗಿಲಾದದು ಎಂದು ಕರ್ನಾಟಕ ಏಕೀಕರಣದ ಕುರಿತು ಮಾಹಿತಿಯನ್ನು ನೀಡಿದರು.


ಕನ್ನಡವು ಒಂದು ವೈಜ್ಞಾನಿಕವಾದ ಭಾಷೆಯಾಗಿದೆ. ಈ ಸುಂದರವಾದ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬನೂ ಕೂಡ ಮನೆಯಲ್ಲಾದರೂ ಕನ್ನಡ ಬಳಕೆ ಮಾಡುವುದರ ಜೊತೆ ಜೊತೆಗೆ ಕನ್ನಡದ ಪುಸ್ತಕಗಳನ್ನು ಓದುವ ಸಂಕಲ್ಪ ಮಾಡಬೇಕು. ಅಷ್ಟೇ ಅಲ್ಲದೆ ಯುವ ಬರಹಗಾರರಿಗೆ ಪ್ರೋತ್ಸಾಹ ಮತ್ತು ಅವಕಾಶ ನೀಡಬೇಕು. ಅಲ್ಪ ಮಾನವನಾಗದೆ ನಾವು ವಿಶ್ವಮಾನವನಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟೋಜ ಮಾತನಾಡಿ ಕ್ಷಣ ಕ್ಷಣಕ್ಕೂ ಟಿವಿ ವಾಹಿನಿಗಳಲ್ಲಿ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ. ಇಂದು ರೇಡಿಯೋ, ಟಿ.ವಿ ವಾಹಿನಿಗಳಲ್ಲಿ ಇಂಗ್ಲಿಷ್ ಮಿಶ್ರಿತ ಕನ್ನಡವೇ ಸಾಮಾನ್ಯವಾಗಿಬಿಟ್ಟಿದೆ.

ಆದ್ದರಿಂದ ಸ್ಪಷ್ಟ ಕನ್ನಡ ಮಾತನಾಡುತ್ತೇವೆ ಎಂಬ ದೃಢ ಸಂಕಲ್ಪ ನಮ್ಮದಾಗಬೇಕು. ಈ ರೀತಿಯಾಗಿ   ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯ  ನಮ್ಮಿಂದಾಗಬೇಕು. ಹಾಗಾದರೆ ಮಾತ್ರ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಒಳ್ಳೆ ಸಂದೇಶ ಮೂಡಿಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


      ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟೋಜ, ಪ್ರಾಂಶುಪಾಲೆ ಮಾಲತಿ ಡಿ. ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್  ಉಪಸ್ಥಿತರಿದ್ದರು.

ಹತ್ತನೇ ತರಗತಿ ವಿದ್ಯಾರ್ಥಿಗಳಾದ ತನ್ವಿಶ್ ಸ್ವಾಗತಿಸಿ, ರಿಶ್ವಿತ್ ವಂದಿಸಿದರು. ವಿದ್ಯಾರ್ಥಿ ಈಶಾನ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕೇತರ ವೃಂದ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಿತು.

ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಮಾರೋಪ – ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ : ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 2, 2022 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊ0ಡಿತು.

ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕೆ. ಗೋವಿಂದ ಭಟ್ಟರಿಗೂ, ಟಿ.ವಿ ರಾವ್ ಪ್ರಶಸ್ತಿಯನ್ನು ಹವ್ಯಾಸಿ ಕಲಾವಿದೆ ಶ್ರೀಮತಿ ಸತ್ಯವತಿ ಟಿ. ಹೆಬ್ಬಾರರಿಗೂ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು.

ಹೈಟೆಕ್ ಮಡಿಕೇರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಟಿ. ಎಸ್. ರಾವ್, ಯಕ್ಷಗಾನ ಕಲಾರಂಗದ ಆಧ್ಯಕ್ಷ ಎಂ. ಗಂಗಾಧರ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಚಿಟ್ಟಾಣಿ ಅಭಿಮಾನಿ ಬಳಗದ ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್, ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಉಪಸ್ಥಿತರಿದ್ದರು. ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು.

ಪ್ರೊ. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರದ ಬಳಿಕ ಜ್ವಾಲಾಪ್ರತಾಪ ಯಕ್ಷಗಾನ ಪ್ರದರ್ಶನ ಸಂಪನ್ನಗೊ0ಡಿತು.

ತಾಯಿಯಿಂದ ಬೇರ್ಪಟ್ಟ ಮಗುವಿಗೆ ಮೊಲೆಹಾಲು ಕುಡಿಸಿದ ಕೇರಳ ಮಹಿಳಾ ಪೋಲೀಸ್ ಅಧಿಕಾರಿ – ರಮ್ಯಾ ಕಾರ್ಯಕ್ಕೆ ಪ್ರಶಂಸೆ

ಚೆವಾಯೂರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿವಿಲ್ ಪೊಲೀಸ್ ಅಧಿಕಾರಿ (ಸಿಪಿಒ) ರಮ್ಯಾ ಅವರು ಇತ್ತೀಚೆಗೆ 12 ದಿನದ ಮಗುವಿಗೆ ಮೊಲೆ ಹಾಲುಣಿಸುವ ಮೂಲಕ ಗಮನ ಸೆಳೆದರು, ಪೋಷಕರ ನಡುವಿನ ಜಗಳದಿಂದಾಗಿ ತಾಯಿಯಿಂದ ಬೇರ್ಪಟ್ಟರು.

ಕೋಝಿಕ್ಕೋಡ್, ಕೇರಳ: ಎರಡು ಮಕ್ಕಳ ತಾಯಿ ತನ್ನ ಶಾಲಾ ಕಾಲೇಜು ದಿನಗಳಲ್ಲಿ ಶಿಕ್ಷಕಿಯಾಗಬೇಕೆಂಬ ಹಂಬಲ ಹೊಂದಿದ್ದ ಎಂ ಆರ್ ರಮ್ಯಾ ತನ್ನನ್ನು ತಾನು ಆಕಸ್ಮಿಕ ಪೊಲೀಸ್ ಅಧಿಕಾರಿ ಎಂದು ಕರೆದುಕೊಳ್ಳಲು ಇಷ್ಟಪಡುತ್ತಾಳೆ. ಆಕೆಯ ಅನಿರೀಕ್ಷಿತ ಪ್ರವೇಶದಂತೆಯೇ, 20 ರ ಹರೆಯದ ಈ ಸಿವಿಲ್ ಪೋಲೀಸ್ ಅಧಿಕಾರಿಗೂ ಅವಳು ರಾಜ್ಯ ಪೊಲೀಸರ ಸೌಮ್ಯ ಮತ್ತು ಮಾನವೀಯ ಮುಖವಾಗುತ್ತಾಳೆ ಮತ್ತು ಸಮಾಜದಲ್ಲಿ ತನ್ನ ಉದಾತ್ತ ಕಾರ್ಯಕ್ಕಾಗಿ ಇಷ್ಟೊಂದು ಜನರು ತನ್ನನ್ನು ಹೊಗಳುತ್ತಾರೆ ಎಂದು ಸ್ವಲ್ಪವೂ ಯೋಚಿಸಿರಲಿಲ್ಲ.

ಚೆವಾಯೂರ್ ಪೊಲೀಸ್ ಠಾಣೆಗೆ ಲಗತ್ತಿಸಲಾದ ಸಿವಿಲ್ ಪೊಲೀಸ್ ಅಧಿಕಾರಿ (ಸಿಪಿಒ) ರಮ್ಯಾ ಅವರು ಇತ್ತೀಚೆಗೆ 12 ದಿನದ ಮಗುವಿಗೆ ಹಾಲುಣಿಸುವ ಮೂಲಕ ಗಮನ ಸೆಳೆದರು, ಪೋಷಕರ ನಡುವಿನ ಜಗಳದಿಂದ ತಾಯಿಯಿಂದ ಬೇರ್ಪಟ್ಟ ಮಗುವಿನ ಜೀವವನ್ನು ಉಳಿಸಿದರು.

ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ರಾಜ್ಯ ಡಿಜಿಪಿ ಅನಿಲ್ ಕಾಂತ್ ಸೇರಿದಂತೆ ಹಲವಾರು ಪ್ರಮುಖರು ಮಹಿಳಾ ಅಧಿಕಾರಿಯ ಪುಣ್ಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಅವರಿಗೆ ಕಳುಹಿಸಿದ ಪ್ರಮಾಣಪತ್ರದಲ್ಲಿ, ನ್ಯಾಯಮೂರ್ತಿ ರಾಮಚಂದ್ರನ್ ಅವರು, “ಇಂದು, ನೀವು ಅತ್ಯುತ್ತಮವಾದ ಪೋಲೀಸಿಂಗ್ ಮುಖ, ಉತ್ತಮ ಅಧಿಕಾರಿ ಮತ್ತು ನಿಜವಾದ ತಾಯಿ – ನೀವು ಇಬ್ಬರೂ! ಜೀವನದ ಅಮೃತವು ದೈವಿಕ ಕೊಡುಗೆಯಾಗಿದೆ, ಅದು ಕೇವಲ ತಾಯಿ ನೀಡಬಹುದು ಮತ್ತು ಕರ್ತವ್ಯದಲ್ಲಿರುವಾಗ ನೀವು ಅದನ್ನು ನೀಡಬಹುದು. ನೀವು ನಮ್ಮೆಲ್ಲರಲ್ಲಿ ಭವಿಷ್ಯಕ್ಕಾಗಿ ಮಾನವತಾವಾದದ ಭರವಸೆಯನ್ನು ಜೀವಂತವಾಗಿರಿಸಿದ್ದೀರಿ.

ಆದರೆ ಅಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಗಿಂತ ಮಹಿಳೆ ಮತ್ತು ತಾಯಿಯಾಗಿರುವುದರಿಂದ ತಾನು ಅಸಾಮಾನ್ಯವಾದುದನ್ನು ಮಾಡಿದ್ದೇನೆ ಎಂದು ಎಂದಿಗೂ ಭಾವಿಸಿಲ್ಲ ಎಂದು ಶ್ರೀಮತಿ ರಮ್ಯಾ ಹೇಳಿದರು. ಅಕ್ಟೋಬರ್ 29 ರಂದು ಈ ಘಟನೆ ಸಂಭವಿಸಿದ್ದು, ಮಗುವಿನ ತಾಯಿ ತನ್ನ ಮಗು ಕಾಣೆಯಾಗಿದೆ ಎಂದು ಕೋಝಿಕ್ಕೋಡ್‌ನ ಚೇವಾಯೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಮತ್ತು ತನ್ನ ಗಂಡನೊಂದಿಗಿನ ಜಗಳದಿಂದಾಗಿ ಅವನು ಶಿಶುವನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಗುವಿನೊಂದಿಗೆ ತಂದೆ ಕೆಲಸ ಮಾಡುವ ಬೆಂಗಳೂರಿಗೆ ಹೋಗಿರಬಹುದು ಎಂಬ ತೀರ್ಮಾನದ ಮೇರೆಗೆ ವಯನಾಡು ಗಡಿಭಾಗದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ರಾಜ್ಯ ಗಡಿಯಲ್ಲಿ ವಾಹನ ತಪಾಸಣೆ ನಡೆಸಿದಾಗ ಸುಲ್ತಾನ್ ಬತ್ತೇರಿ ಪೊಲೀಸರು ಮಗು ಮತ್ತು ತಂದೆಯನ್ನು ಪತ್ತೆ ಮಾಡಿದರು.

ತಾಯಿಯ ಹಾಲಿನ ಕೊರತೆಯಿಂದ ಶಿಶು ಸುಸ್ತಾಗಿ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅಲ್ಲಿ ಮಗುವಿನ ಸಕ್ಕರೆಯ ಮಟ್ಟ ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಇದನ್ನು ಕೇಳಿದ ಚೆವಾಯೂರ್‌ನಿಂದ ವಯನಾಡ್‌ಗೆ ತೆರಳಿದ ಪೊಲೀಸ್ ತಂಡದಲ್ಲಿದ್ದ ಶ್ರೀಮತಿ ರಮ್ಯಾ ಅವರು ಹಾಲುಣಿಸುವ ತಾಯಿ ಎಂದು ವೈದ್ಯರಿಗೆ ತಿಳಿಸಿ ನಂತರ ಮಗುವಿಗೆ ಹಾಲುಣಿಸುವ ಮೂಲಕ ಮಗುವಿನ ಜೀವವನ್ನು ಉಳಿಸಿದರು.

ಮಗು ಸುಸ್ತಾಗಿ ಕಾಣಿಸಿಕೊಂಡಿದ್ದು, ಸಕ್ಕರೆ ಪ್ರಮಾಣ ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದಾಗ ಸ್ವಲ್ಪವೂ ಹಿಂಜರಿಯದೆ ಮಗುವಿಗೆ ಎದೆಹಾಲು ಕುಡಿಸಿ ಪ್ರಾಣ ಉಳಿಸಿದೆ ಎಂದು ರಮ್ಯಾ ಹೇಳಿದ್ದಾರೆ. ಈ ಉತ್ತರ ಕೇರಳ ಜಿಲ್ಲೆಯ ಚಿಂಗಪುರಂ ಗ್ರಾಮದವರಾದ ರಮ್ಯಾ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ಅವಳ ಅನೇಕ ಸ್ನೇಹಿತರಂತೆ, ಅವಳು ಬಿಎಡ್ ಕೋರ್ಸ್ ಮುಗಿಸಿದ ನಂತರ ತನ್ನ ವೃತ್ತಿಯಾಗಿ ಅಧ್ಯಾಪನವನ್ನು ಆರಿಸಿಕೊಳ್ಳಲು ಬಯಸುತ್ತಾಳೆ. “ಆ ಸಮಯದಲ್ಲಿ ಹಲವಾರು ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಹಾಗಾಗಿ ನಾನು ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದೆ.

ನನಗೆ ಆಶ್ಚರ್ಯವಾಗುವಂತೆ ನಾನು ಕೊನೆಯ ದರ್ಜೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೇನೆ ಮತ್ತು ಕೇವಲ ಒಂದು ತಿಂಗಳ ಕಾಲ ತಯಾರಿ ನಡೆಸಿ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ. ,” ಅವಳು ಹೇಳಿದಳು. ಅವರು 24 ನೇ ವಯಸ್ಸಿನಲ್ಲಿ ಪೊಲೀಸ್ ಅಧಿಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ನನ್ನ ಹೆರಿಗೆ ರಜೆಯ ನಂತರ ನಾನು ಇತ್ತೀಚೆಗೆ ಕರ್ತವ್ಯಕ್ಕೆ ಸೇರಿಕೊಂಡೆ, ”ಎಂದು ಅವರು ಹೇಳಿದರು. ಎಸ್‌ಪಿಸಿ ಅನಿಲ್ ಕಾಂತ್ ಅವರು ಇತ್ತೀಚೆಗೆ ಸಿಪಿಒ ಅವರನ್ನು ಮತ್ತು ಅವರ ಕುಟುಂಬವನ್ನು ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಗೆ ಆಹ್ವಾನಿಸಿದ ನಂತರ ಪ್ರಶಂಸಾ ಪತ್ರವನ್ನು ನೀಡಿದರು.

ಶುಕ್ರವಾರ ಪುತ್ತೂರಿನಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ‘ಗಾನ ನಾಟ್ಯ ವೈಭವ’ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ 

ಶುಕ್ರವಾರ ಪುತ್ತೂರಿನಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ದಿನಾಂಕ 04.11.2022ರ ಶುಕ್ರವಾರ 4 ಘಂಟೆಗೆ ಪುತ್ತೂರು ಪುರಭವನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಕಲಾವಿದರಿಂದ ಗಾನ ನಾಟ್ಯ ವೈಭವ ಮತ್ತು ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ಜರಗಲಿದೆ.

ಕಾರ್ಯಕ್ರಮವು ಸಂಜೆ 4 ಘಂಟೆಗೆ ಸರಿಯಾಗಿ ಆರಂಭವಾಗಲಿದೆ.

ಕಾರ್ಯಕ್ರಮದ ವಿವರ ಮತ್ತು ಕಲಾವಿದರ ವಿವರ ಹಾಗೂ ಪಾತ್ರಪರಿಚಯಕ್ಕಾಗಿ ಮೇಲಿನ ಚಿತ್ರವನ್ನು ನೋಡಿ. 

ದೆಹಲಿಯ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಪಾಪ್‌ಕಾರ್ನ್ ಮಾರಿದ ಜಾನ್ವಿ ಕಪೂರ್ – ಸಿನಿಮಾ ಪ್ರಚಾರಕ್ಕೆ ಬಂದಿದ್ದ ಖ್ಯಾತ ನಟಿ ಶ್ರೀದೇವಿಯ ಮಗಳು – ವೀಡಿಯೊ

ಬಾಲಿವುಡ್ ಖ್ಯಾತ ನಟಿ ಜಾನ್ವಿ ಕಪೂರ್ ದೆಹಲಿಯ ಥಿಯೇಟರ್‌ನಲ್ಲಿ ಅಭಿಮಾನಿಗಳಿಗೆ ಪಾಪ್‌ಕಾರ್ನ್ ನೀಡಲು ತಾನೇ ಮುಂದಾಗಿ ನಿಂತು ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು.

ಇದೇ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜಾನ್ವಿ ಕಪೂರ್ ಅವರು ಹಿಂದಿ ಮನರಂಜನಾ ಉದ್ಯಮದಲ್ಲಿ ಇದೀಗ ನಾವು ಹೊಂದಿರುವ ಮುದ್ದಾದ ಮತ್ತು ಹೆಚ್ಚು ಮೆಚ್ಚುಗೆ ಪಡೆದ ನಟಿ ಮತ್ತು ಮುದ್ದಾದ ಪ್ರದರ್ಶನ ಕಲಾವಿದರಲ್ಲಿ ಒಬ್ಬರು.

ಜಾನ್ವಿ ಕಪೂರ್ ತನ್ನ ಮುಂಬರುವ ಚಿತ್ರ ಮಿಲಿ ಪ್ರಚಾರಕ್ಕಾಗಿ ಎಲ್ಲಾ ಕಡೆ ಹೋಗುತ್ತಿದ್ದಾರೆ. ಅವರು ದೆಹಲಿಯ ಥಿಯೇಟರ್‌ನಲ್ಲಿ ಅಭಿಮಾನಿಗಳಿಗೆ ವೈಯಕ್ತಿಕವಾಗಿ ಪಾಪ್‌ಕಾರ್ನ್‌ಗಳನ್ನು ನೀಡಲು ನಿರ್ಧರಿಸಿದ್ದರಿಂದ ಸ್ವಲ್ಪ ಟ್ರೋಲ್ ಒಳಗಾದರು.

ನಟಿ ಕೌಂಟರ್‌ನ ಹಿಂದೆ ಹೋಗಿ ಜನರಿಗೆ ಪಾಪ್‌ಕಾರ್ನ್‌ಗಳನ್ನು ನೀಡಿ ಅವರನ್ನು ಆಶ್ಚರ್ಯಗೊಳಿಸಿದರು. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಜಾಹ್ನವಿ ಕಪೂರ್ ಕಸೂತಿಯೊಂದಿಗೆ ಸುಂದರವಾದ ಹಸಿರು ಸೀರೆಯನ್ನು ಧರಿಸಿದ್ದಾರೆ.

ಅವಳು ತನ್ನ ಟ್ರೆಸ್‌ಗಳನ್ನು ಸಡಿಲವಾಗಿ ಬಿಟ್ಟು ಬೆರಗುಗೊಳಿಸುವ ಜೋಡಿ ಕಿವಿಯೋಲೆಗಳನ್ನು ಅಲಂಕರಿಸಿದಳು. ಅಭಿಮಾನಿಗಳಿಗೆ ಪಾಪ್ ಕಾರ್ನ್ ಬಡಿಸಲು ಥಿಯೇಟರ್ ನ ಫುಡ್ ಕೌಂಟರ್ ಹಿಂದೆ ಹೋದಳು. ಅದಕ್ಕೂ ಮುನ್ನ ಜಾನ್ವಿ ಗ್ಲೌಸ್ ಧರಿಸಿ ಕಾಣಿಸಿಕೊಂಡಿದ್ದಾರೆ.

ಅವಳು ಹೇಳುತ್ತಾಳೆ, “ಏಕ್ ಹೈ ಫ್ಲೇವರ್ ಹೈ ಪತಾ ನಹೀ ಕ್ಯೂ ಪೂಚ್ ರಿ ಹು.” ನಟಿ ನಂತರ ಪಾಪ್‌ಕಾರ್ನ್ ಅನ್ನು ಬಕೆಟ್‌ನಲ್ಲಿ ತುಂಬುತ್ತಾರೆ ಮತ್ತು ತನಗೆ ಧನ್ಯವಾದ ಹೇಳುವ ಅಭಿಮಾನಿಗಳಿಗೆ ಅದನ್ನು ನೀಡುತ್ತಾರೆ.

ಸೂರ್ಯನ ಬೆಳಕಿನಲ್ಲಿ ಅಡಗಿದ ‘ಪ್ಲಾನೆಟ್ ಕಿಲ್ಲರ್’ ಕ್ಷುದ್ರಗ್ರಹಗಳು – ಭೂಮಿಗೆ ಅಪ್ಪಳಿಸುವ ಸಾಧ್ಯತೆ, ವಿಜ್ಞಾನಿಗಳ ಆತಂಕ,  1.5 ಕಿಲೋಮೀಟರ್ ಅಗಲದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ

ನಾಸಾ ಆಳವಾದ ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹವನ್ನು ಯಶಸ್ವಿಯಾಗಿ ತಿರುಗಿಸಿದ ಒಂದು ತಿಂಗಳ ನಂತರ, ಖಗೋಳಶಾಸ್ತ್ರಜ್ಞರು ಮೂರು ಹೊಸ ಭೂಮಿಯ ಸಮೀಪ ಕ್ಷುದ್ರಗ್ರಹಗಳನ್ನು (NEAs) ಕಂಡುಹಿಡಿದಿದ್ದಾರೆ ಮತ್ತು ಅವು ಸೌರವ್ಯೂಹದ ಒಳಭಾಗದಲ್ಲಿ ಅಡಗಿಕೊಂಡಿವೆ,

ಅವುಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ. ಮೂರರಲ್ಲಿ 1.5 ಕಿಲೋಮೀಟರ್-ಅಗಲದ ಕ್ಷುದ್ರಗ್ರಹವೊಂದು ಕಕ್ಷೆಯನ್ನು ಹೊಂದಿದ್ದು ಅದು ಒಂದು ದಿನ ಭೂಮಿಗೆ ಅಪ್ಪಳಿಸಬಹುದೆಂದು ಹೇಳಲಾಗುತ್ತಿದೆ.

ಈ ಕ್ಷುದ್ರಗ್ರಹಗಳನ್ನು ಗುರುತಿಸಲು ಚಿಲಿಯ ಸೆರೊ ಟೊಲೊಲೊ ಇಂಟರ್-ಅಮೆರಿಕನ್ ಅಬ್ಸರ್ವೇಟರಿಯಲ್ಲಿ VÃctor M. Blanco 4-ಮೀಟರ್ ದೂರದರ್ಶಕದಲ್ಲಿ ಅಳವಡಿಸಲಾಗಿರುವ ಡಾರ್ಕ್ ಎನರ್ಜಿ ಕ್ಯಾಮೆರಾ (DECam) ಅನ್ನು ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಬಳಸಿದೆ.

ಅವುಗಳು ಅಂದರೆ ಆ ಕ್ಷುದ್ರಗ್ರಹಗಳು ಭೂಮಿಯ ಮತ್ತು ಶುಕ್ರದ ಕಕ್ಷೆಗಳಿಗೆ ಪ್ರದೇಶದ ಒಳಭಾಗದಲ್ಲಿವೆ, ಇದು ಸೂರ್ಯನ ಪ್ರಜ್ವಲಿಸುವಿಕೆಯಿಂದ ವೀಕ್ಷಣೆಗೆ ಸವಾಲಿನ ಪ್ರದೇಶವಾಗಿದೆ.

“ನಮ್ಮ ಟ್ವಿಲೈಟ್ ಸಮೀಕ್ಷೆಯು ಕ್ಷುದ್ರಗ್ರಹಗಳಿಗಾಗಿ ಭೂಮಿ ಮತ್ತು ಶುಕ್ರನ ಕಕ್ಷೆಯೊಳಗಿನ ಪ್ರದೇಶವನ್ನು ಶೋಧಿಸುತ್ತಿದೆ. ಇಲ್ಲಿಯವರೆಗೆ ನಾವು ಭೂಮಿಯ ಸಮೀಪವಿರುವ ಎರಡು ದೊಡ್ಡ ಕ್ಷುದ್ರಗ್ರಹಗಳನ್ನು ಕಂಡುಹಿಡಿದಿದ್ದೇವೆ, ಅವುಗಳು ಸುಮಾರು 1 ಕಿಲೋಮೀಟರ್ ಅಡ್ಡಲಾಗಿ, ನಾವು ಅದನ್ನು ಗ್ರಹದ ಕೊಲೆಗಾರರು (‘Planet killer’ asteroid) ಎಂದು ಕರೆಯುತ್ತೇವೆ,

”ಸ್ಕಾಟ್ ಎಸ್. ಶೆಪರ್ಡ್, ಕಾರ್ನೆಗೀ ಇನ್ಸ್ಟಿಟ್ಯೂಷನ್ ಫಾರ್ ಸೈನ್ಸ್‌ನ ಭೂಮಿ ಮತ್ತು ಗ್ರಹಗಳ ಪ್ರಯೋಗಾಲಯದ ಖಗೋಳಶಾಸ್ತ್ರಜ್ಞ ಮತ್ತು ಪ್ರಮುಖ ಪತ್ರಿಕೆಯ ಲೇಖಕ ಹೇಳಿದರು. ತಂಡವು ಭೂಮಿಯ ಸಮೀಪವಿರುವ ವಸ್ತುಗಳ ಮೂವರನ್ನು ಕಂಡುಹಿಡಿದಿದೆ ಮತ್ತು 1.5-ಕಿಲೋಮೀಟರ್ ಅಗಲದ ಕ್ಷುದ್ರಗ್ರಹವನ್ನು 2022 AP7 ಎಂದು ಹೆಸರಿಸಲಾಗಿದೆ,

ಇದು ಒಂದು ದಿನ ಭೂಮಿಯ ಹಾದಿಯಲ್ಲಿ ಇರಿಸಬಹುದಾದ ಕಕ್ಷೆಯನ್ನು ಹೊಂದಿದೆ. ಇತರ ಕ್ಷುದ್ರಗ್ರಹಗಳು 2021 LJ4 ಮತ್ತು 2021 PH27, ಅವು ಭೂಮಿಯ ಮಾರ್ಗದಿಂದ ಸುರಕ್ಷಿತವಾಗಿ ದೂರದಲ್ಲಿವೆ.

ಖಗೋಳಶಾಸ್ತ್ರಜ್ಞರು ಕ್ಷುದ್ರಗ್ರಹದ ಹಾದಿಯನ್ನು ಮತ್ತು ಅದು ಭೂಮಿಯ ಸಮೀಪಕ್ಕೆ ಬರುವ ಅವಧಿಯನ್ನು ಇನ್ನೂ ಪಟ್ಟಿ ಮಾಡದಿದ್ದರೂ, ನಾಸಾ ಈಗಾಗಲೇ ಯಶಸ್ವಿ ಡಾರ್ಟ್ ಮಿಷನ್ ಮೂಲಕ ಅದನ್ನು ತಿರುಗಿಸಲು ಬಳಸಬಹುದಾದ ಸಾಧನವನ್ನು ಪ್ರದರ್ಶಿಸಿದೆ,

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಬೆಥನಿ ಪ್ರೌಢಶಾಲೆ ಪಾoಗ್ಲಾಯಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 31 ಅಕ್ಟೋಬರ್ 2022ರಂದು ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗುಂಪು ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್ ಯನ್ (ಶ್ರೀ ಶ್ರೀಪತಿ ಎನ್ ಮತ್ತು ವಿದ್ಯಾಲಕ್ಷ್ಮಿ ದಂಪತಿ ಪುತ್ರ) ಹಾಗೂ ಸಮರ್ಥ ರಾಮ ರೈ (ಶ್ರೀ ಸತೀಶ್ ಕುಮಾರ್ ರೈ ಮತ್ತು ಪ್ರಗತಿ ರೈ ದಂಪತಿ ಪುತ್ರ)

ಇವರ ತಂಡ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರೇಮ ವೈಫಲ್ಯದಿಂದ ಪ್ರೇಮಿಯನ್ನು ಗಾಯಗೊಳಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ 15 ವರ್ಷದ ಬಾಲಕಿ

15 ವರ್ಷದ ಬಾಲಕಿ ಪ್ರೇಮ ವೈಫಲ್ಯದಿಂದ ಪ್ರೇಮಿಯನ್ನು ಗಾಯಗೊಳಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ತಾಮರಸ್ಸೆರಿ: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕಿಯೊಬ್ಬಳು ಪ್ರಿಯಕರನ ಮಣಿಕಟ್ಟು ಸೀಳಿಕೊಂಡು ಆಮೇಲೆ ತನಗೆ ತಾನೇ ಗಾಯ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕೊಡಂಚೇರಿ ಮೂಲದ ಸಜಿತ್ (25) ಗಾಯಗೊಂಡಿದ್ದಾರೆ. ಆತ ಬಸ್ ಉದ್ಯೋಗಿ. ಬಾಲಕಿ ಹಾಗೂ ಯುವಕನನ್ನು ತಾಮರಸ್ಸೆರಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕನ ಹೇಳಿಕೆಯ ಪ್ರಕಾರ, ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ಬಸ್‌ಗೆ ಯುವತಿ ಹತ್ತಿದಳು ಮತ್ತು ಬಸ್‌ನ ಹಿಂಭಾಗಕ್ಕೆ ಬರುವಂತೆ ಹೇಳಿದಳು, ಅವನು ಹತ್ತಿರ ಬಂದ ತಕ್ಷಣ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಕೈಗೆ ಪೆಟ್ಟಾಗಿದ್ದರಿಂದ ಚೀರುತ್ತಾ ಬಸ್‌ನಿಂದ ಹೊರಗೆ ಓಡಿ ಬಂದಿದ್ದಾನೆ.

ಜನರು ಬರುವಷ್ಟರಲ್ಲಿ ಬಾಲಕಿ ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದು, ಸ್ಥಳೀಯರು ಹಾಗೂ ಬಸ್‌ ಸಿಬ್ಬಂದಿ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಯ ಗಂಭೀರವಾಗಿಲ್ಲ.

ಬಾಲಕಿ ಮಾನಸಿಕ ಅಸ್ವಸ್ಥಳಾಗಿ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಕುಟುಂಬದವರು ಹೇಳುತ್ತಾರೆ. ಹಾಗಾಗಿ ಸಂಬಂಧವನ್ನು ಕೊನೆಗಾಣಿಸುವಂತೆ ಯುವಕರನ್ನು ಕೇಳಿಕೊಂಡಿದ್ದರು.

ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಿಸಿಕೊಂಡಿಲ್ಲ, ದೂರು ಬಂದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಾಮರಸ್ಸೆರಿ ಡಿವೈಎಸ್ಪಿ ಅಶ್ರಫ್ ತಿಳಿಸಿದ್ದಾರೆ.