Saturday, August 29, 2026
Home Blog Page 142

ಕನ್ನಡ ಭಾಷೆ ಜಗತ್ತನ್ನೇ ಬೆಳಗುವ ಅದ್ಭುತ ಭಾಷೆ : ಗಣರಾಜ ಕುಂಬ್ಳೆ

ಕನ್ನಡ ರಾಜ್ಯ ಸ್ಥಾಪನೆಯಾಗಿರುವುದಕ್ಕೆ ಕೇವಲ ಆಚರಣೆ ಮಾಡಿ ಸಂಭ್ರಮಿಸುವುದಲ್ಲ, ಕನ್ನಡವು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬೆರೆತು ನಮ್ಮ ಉಸಿರಾಗಬೇಕು. ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದ್ದು ಅತ್ಯಂತ ಫ್ರೌಢವಾದ ಬೆಳವಣಿಗೆಯನ್ನು ಹೊಂದಿರುವ ಭಾಷೆ. ಕನ್ನಡದಲ್ಲಿ ರಚನೆಯಾಗಿರುವ ಮಹಾಕಾವ್ಯಗಳನ್ನು ಅವಲೋಕಿಸಿದಾಗ ನಮಗೆ ನಮ್ಮ ಭಾಷೆಯ ಬಗ್ಗೆ ಗರ್ವವೆನಿಸುತ್ತದೆ ಎಂದು ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.


ಕನ್ನಡ ಸಾಹಿತ್ಯ ಸಾಮ್ರಾಜ್ಯವನ್ನು ಆಳಿದ ಕನ್ನಡದ ಆದಿಕವಿ ಪಂಪ, ರನ್ನ, ಪೊನ್ನ ಕುಮಾರವ್ಯಾಸ, ಲಕ್ಷ್ಮೀಶ ಇವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ವಚನಕಾರ ಅಕ್ಕಮಹಾದೇವಿ, ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಬಸವಣ್ಣ ಅವರು ತಮ್ಮ ವಚನಗಳ ಮೂಲಕ ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದರು. ಹಾಗೆಯೇ ದಾಸರ ಕೀರ್ತನೆಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎಂದರು.


ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಕವಿಶ್ರೇಷ್ಠರು, ವಚನಕಾರರು, ಸಂತ ಶರಣರು ಕನ್ನಡ ಭಾಷೆಯ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿದ್ದಾರೆ. ಇಂತಹ ಅಮೋಘ ಹಿನ್ನಲೆಯಿರುವ ಭಾಷೆಯನ್ನು ನಾವು ಬಳಸಿ, ಬೆಳೆಸಿ, ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಸೌರಭವನ್ನು ಸ್ವಲ್ಪವು ಕಳೆಗುಂದದ0ತೆ ಹಸ್ತಾಂತರಿಸಬೇಕು ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇರುವ ಸೊಬಗು ಇತರ ಯಾವ ಭಾಷೆಗೂ ಇಲ್ಲ. ಕನ್ನಡ ಭಾಷೆಯು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ರಚನೆಯಾಗಿದ್ದು ಸಂಸ್ಕೃತದ ಕ್ಲಿಷ್ಟವಾದ ಶ್ಲೋಕಗಳನ್ನು ಓದುವ ಸಾಮರ್ಥ್ಯ ಕನ್ನಡಿಗನಿಗಿದೆ.

ಬನವಾಸಿ ಕನ್ನಡದ ಪ್ರಥಮ ರಾಜಧಾನಿಯಾಗಿದ್ದು ಬನವಾಸಿಯಲ್ಲಿ ಮೈನವಿರೇಳಿಸುವ ಕನ್ನಡದ ಶಿಲ್ಪಕಲೆಗಳು ನಿರ್ಮಾಣವಾಗಿವೆ. ಇಂದಿನ ಆಧುನಿಕ ವಿದ್ಯಾಮಾನಗಳನ್ನು ಬಿತ್ತರಿಸುವ ಕನ್ನಡ ವಾರ್ತವಾಹಿನಿಗಳು ಕನ್ನಡದ ಕಗ್ಗೋಲೆಯನ್ನು ಮಾಡುತ್ತಿವೆ. ಕನ್ನಡವು ತನ್ನ ಭಾಷಾ ಶುದ್ಧತೆಯನ್ನು ಕಳೆದುಕೊಂಡು ಆಂಗ್ಲ ಭಾಷೆಯ ಮೋಹಕ್ಕೆ ಸಿಲುಕಿ ಕಂಗ್ಲೀಷ್ ಆಗಿ ವಿರಾಜಿಸುತ್ತಿದೆ ಎಂದರು.


ಭಾಷಾ ದುರಭಿಮಾನ ಬೆಳೆದರೆ ಮುಂದಿನ ಜನಾಂಗ ಕನ್ನಡ ಪದಗಳನ್ನು ಬೇರೆ ಭಾಷೆಯಿಂದ ಹುಡುಕಿ ತೆಗೆಯುವ ಅಗತ್ಯತೆ ಬರಬಹುದು ಹಾಗೂ ಕನ್ನಡ ಭಾಷೆಯನ್ನು ಬಳಸುವವರೆ ಇಲ್ಲದೆ ಅದು ಕಣ್ಮರೆಯಾಗಬಹುದು. ಆದ್ದರಿಂದ ಇಂದಿನ ಸಮಾಜಕ್ಕೆ ಸ್ವಾಭಿಮಾನಿ ಕನ್ನಡಿಗನ ಅಗತ್ಯವಿದೆ. ನಾವು ದೈನಂದಿನ ವ್ಯವಹಾರಗಳಲ್ಲಿ ಹೆಚ್ಚು ನಮ್ಮ ಕನ್ನಡ ಭಾಷೆಯನ್ನು ಬಳಸಿ ಅದನ್ನು ಸಮೃದ್ಧಗೊಳಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿತರೂ ಎಲ್ಲೇ ಉದ್ಯೋಗ ಅರಸಿ ಹೋದರೂ ನಾವು ಎಂದೆ0ದಿಗೂ ಕನ್ನಡಿಗರಾಗಿಯೇ ಇರಬೇಕೆಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್. ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರಾವ್ಯ ಪಾರ್ಥಿಸಿದರು. ಕನ್ನಡ ಪ್ರಾಧ್ಯಪಕ ಸತೀಶ್ ಇರ್ದೆ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸುಚೇತ ರತ್ನ ವಂದಿಸಿದರು. ವಿದ್ಯಾರ್ಥಿನಿ ಅಂಶಿತಾ ನಿರೂಪಿಸಿದರು.

ಹೈ ಸೆಕ್ಯುರಿಟಿ ಜೈಲಿನಲ್ಲಿರುವ ಪಿಎಫ್‌ಐ ಮುಖಂಡನಿಗೆ ಫೋನ್ ಸಿಮ್ ಕಾರ್ಡ್ ಕೊಟ್ಟದ್ದು ಹೇಗೆ ಗೊತ್ತೇ? ಖುರಾನಿನಲ್ಲಿ ಅಡಗಿಸಿ ಸಿಮ್ ಕಾರ್ಡ್ ಕೊಟ್ಟದ್ದು ಯಾರು?

ತ್ರಿಶೂರ್: ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ನಾಯಕನಿಗೆ ಸಿಮ್ ಕಾರ್ಡ್ ತಲುಪಿಸಲಾಗಿದೆ. ಇಡುಕ್ಕಿಯ ಪೆರುವಂತನಂನಲ್ಲಿ ಬಂಧನಕ್ಕೊಳಗಾಗಿದ್ದ ಟಿಎಸ್ ಸೈನುದ್ದೀನ್‌ಗೆ ಕುಟುಂಬ ಸದಸ್ಯರು ಸಿಮ್ ಕಾರ್ಡ್ ತಲುಪಿಸಿದ್ದಾರೆ.

ಖುರಾನ್‌ನಲ್ಲಿ ಅಡಗಿಸಿ ವಿಯ್ಯೂರು ಜೈಲಿನಲ್ಲಿರುವ ಪಿಎಫ್‌ಐ ಮುಖಂಡನಿಗೆ ಸಿಮ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಜೈಲು ಅಧೀಕ್ಷಕರು ನೀಡಿದ ದೂರಿನ ಮೇರೆಗೆ ವಿಯ್ಯೂರು ಪೊಲೀಸರು ಜಾಮೀನು ರಹಿತ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ತಿಂಗಳು 31ರಂದು ಘಟನೆ ನಡೆದಿದೆ. ಸೈನುದ್ದೀನ್ ಅವರ ಪತ್ನಿ ನಾದಿರಾ, ಮಗ ಮುಹಮ್ಮದ್ ಯಾಸಿನ್ ಮತ್ತು ಸಹೋದರ ಮಹಮ್ಮದ್ ನಾಸಿರ್ ಖೈದಿ ಸೈನುದ್ದೀನ್ ಅವರನ್ನು ಭೇಟಿ ಮಾಡಲು ಬೆಳಗ್ಗೆ 11 ಗಂಟೆಗೆ ಜೈಲಿಗೆ ಬಂದಿದ್ದರು.

ಈ ಸಮಯದಲ್ಲಿ, ಅವರು ಖುರಾನ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಆರೋಪಿಗಳಿಗೆ ಖುರಾನ್ ಹಸ್ತಾಂತರಿಸುವ ಮೊದಲು, ಅಧಿಕಾರಿಗಳ ವಿವರವಾದ ತಪಾಸಣೆಯಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ.

ನಂತರ ವಿಯ್ಯೂರು ಜೈಲು ಅಧೀಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಮ್ ಕಾರ್ಡ್ ಯಾರ ಹೆಸರಿಗೆ ಸೇರಿದ್ದು ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಬಳಿಕ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ವಿಯ್ಯೂರು ಪೊಲೀಸರು ತಿಳಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ನಿಷೇಧದ ನಂತರ ಕಚೇರಿಗಳ ಮೇಲೆ ದಾಳಿ ನಡೆಸಿದ ಎನ್‌ಐಎ ಪೆರುವಂತನಂನಲ್ಲಿ ಸೈನುದ್ದೀನ್‌ನನ್ನು ಬಂಧಿಸಿದೆ.

ನಂತರ ಅವರನ್ನು ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿಗೆ ಕರೆದೊಯ್ಯಲಾಯಿತು

“ಗ್ರೀಷ್ಮಾ ಗೆಳೆಯನೊಂದಿಗೆ ತಮಿಳುನಾಡಿನಲ್ಲಿ ಅನೇಕ ಸ್ಥಳಗಳಿಗೆ ಹೋಗಿದ್ದಳು” ಎಂದು ಹೇಳಿದ ಪ್ರಾಸಿಕ್ಯೂಷನ್ ಲಾಯರ್ – “ಶರೋನ್ ಅವಳನ್ನು ಕ್ರಿಮಿನಲ್ ಆಗಿ ಪರಿವರ್ತಿಸಿದನು” ಎಂದು ವಾದಿಸಿದ ಪ್ರತಿವಾದಿ ಲಾಯರ್

ನೆಯ್ಯಟ್ಟಿಂಕರ: ಪರಸ್ಸಾಲ ಶರೋನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳನ್ನು ಇಂದು ರಾಮವರ್ಮನ ಚಿರಾಯಿಯಲ್ಲಿರುವ ಆಕೆಯ ಮನೆಗೆ ಸಾಕ್ಷಿಗಾಗಿ ಕರೆತರುವ ಸಾಧ್ಯತೆ ಇದೆ.

ಆರೋಪಿ ಗ್ರೀಷ್ಮಾಳನ್ನು ನಿನ್ನೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಿನ್ನೆ ಮಧ್ಯಾಹ್ನ 3.15ರ ಸುಮಾರಿಗೆ ಅಟ್ಟಕುಳಂಗರ ಜೈಲಿನಿಂದ ಗ್ರೀಷ್ಮಾಳನ್ನು ನೆಯ್ಯಾಟಿಂಕರ ಜನರಲ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನೆಯ್ಯಟಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಗ್ರೀಷ್ಮಾಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಪ್ರಾಸಿಕ್ಯೂಷನ್ ಒತ್ತಾಯಿಸಿದಾಗ, ಪ್ರತಿವಾದಿ ಲಾಯರ್ ಅದನ್ನು ಬಲವಾಗಿ ವಿರೋಧಿಸಿದರು. ಗ್ರೀಷ್ಮಾ ಪ್ರಮುಖ ಆರೋಪಿ ಎಂದು ಪ್ರಾಸಿಕ್ಯೂಷನ್ ವಾದಿಸಿತು.

ಇದು ಪರಸ್ಸಾಲ ಪೊಲೀಸರ ವೈಫಲ್ಯವನ್ನು ಎತ್ತಿ ಹಿಡಿಯುವ ಮೂಲಕ ರಕ್ಷಣಾ ವಾದವಾಗಿತ್ತು. ಗ್ರೀಷ್ಮಾ ಪರ ವಾದ ಮಂಡಿಸಿದ ವಕೀಲರು, ವಿಷ ಬೆರೆಸಿ ಕೊಲೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಎಫ್‌ಐಆರ್ ಕೂಡ ಇಲ್ಲ.

“ಯಾವುದೇ ಪಿತೂರಿ ಇರಲಿಲ್ಲ ಇಲ್ಲಸಲ್ಲದ ಪುರಾವೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಕೋಣೆಯೊಳಗೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ವಿಷ ತಂದವರು ಶರೋನ್ ಇರಬಹುದೇ. ಶರೋನ್ ಅವರ ಅಂತಿಮ ಹೇಳಿಕೆಯಲ್ಲಿ ಗ್ರೀಷ್ಮಾ ಅವರ ಉಲ್ಲೇಖವಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

“ಗ್ರೀಷ್ಮಾಳನ್ನು ಕ್ರಿಮಿನಲ್ ಆಗಿ ಪರಿವರ್ತಿಸಿದವರು ಶರೋನ್. ಶರೋನ್ ಗ್ರೀಷ್ಮಾ ಅವರ ಖಾಸಗಿ ಚಿತ್ರಗಳನ್ನು ಹೊಂದಿದ್ದರು, ಈ ಬಗ್ಗೆ ತನಿಖೆಯಾಗಬೇಕು,” ಎಂದು ವಕೀಲರು ಹೇಳಿದರು.

ಗ್ರೀಷ್ಮಾ ಅವರು ತಮಿಳುನಾಡಿನಲ್ಲಿ ಶರೋನ್ ಜೊತೆ ತೆರಳಿದ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ಯಬೇಕಾಗಿರುವುದರಿಂದ ನ್ಯಾಯಾಲಯವು 7 ದಿನಗಳ ಕಸ್ಟಡಿ ಬೇಡಿಕೆಯನ್ನು ಒಪ್ಪಿಕೊಂಡಿತು. ಗ್ರೀಷ್ಮಾಗೆ ವೈದ್ಯಕೀಯ ನೆರವು ನೀಡುವಂತೆ ಮತ್ತು ಸಾಕ್ಷ್ಯ ಸಂಗ್ರಹವನ್ನು ವಿಡಿಯೋದಲ್ಲಿ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದ ಗ್ರೀಷ್ಮಾ ಅವರನ್ನು ನಿನ್ನೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪೊಲೀಸರು ಗ್ರೀಷ್ಮಾ ಅವರ ತಾಯಿ ಮತ್ತು ಚಿಕ್ಕಪ್ಪನ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಆರೋಪ ಹೊರಿಸಿದ್ದಾರೆ. ಶರೋನ್ ಹತ್ಯೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ’: ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ – ನಗರಪಾಲಿಕೆಯಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಪಕ್ಷದ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿದ ಮೇಯರ್! “ಆ ಪತ್ರವನ್ನು ಮೇಯರ್ ಅಥವಾ ಕಚೇರಿಯಿಂದ ನೀಡಲಾಗಿಲ್ಲ; ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ” – ತಿರುವನಂತಪುರಂ ಕಾರ್ಪೊರೇಷನ್

‘ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ’ ಎಂದು ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ  ವ್ಯಕ್ತವಾಗಿದೆ.  ತಿರುವನಂತಪುರಂ ನಗರಪಾಲಿಕೆಯಲ್ಲಿ ತಾತ್ಕಾಲಿಕ ಖಾಲಿ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ಕೋರಿ ಮೇಯರ್ ಆರ್ಯ ರಾಜೇಂದ್ರನ್ ಪತ್ರ ಬರೆದಿದ್ದಾರೆ.

ತಿರುವನಂತಪುರಂ: ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅವರಿಗೆ ಬರೆದಿರುವ ಪತ್ರ ಹೊರಬಿದ್ದಿದೆ.

ಮೇಯರ್ ಅಧಿಕೃತ ಲೆಟರ್ ಪ್ಯಾಡ್‌ನಲ್ಲಿ ನವೆಂಬರ್ 1 ರಂದು ಕಳುಹಿಸಲಾದ ಪತ್ರವು ಪಕ್ಷದ ಕೆಲವು ಮುಖಂಡರ ವಾಟ್ಸಾಪ್ ಗ್ರೂಪ್ ಮೂಲಕ ಸಾರ್ವಜನಿಕವಾಗಿದೆ. ಪತ್ರದಲ್ಲಿ ಜಿಲ್ಲಾ ಕಾರ್ಯದರ್ಶಿಯನ್ನು ‘ಕಾಮ್ರೇಡ್’ ಎಂದು ಸಂಬೋಧಿಸಿದ್ದಾರೆ.

ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಿಂದ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆಯ ಪಟ್ಟಿಯನ್ನು ನೀಡಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪತ್ರ ಬಂದಿಲ್ಲ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಿವರಿಸಿದರು.

ಮೇಯರ್ ಸಹಿ ಮಾಡಿರುವ ಪತ್ರದಲ್ಲಿ ಗಡುವು ಸೇರಿದಂತೆ ಮಾಹಿತಿ ಇದೆ. ಮೇಯರ್ ಪ್ರಮಾಣವಚನ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಎತ್ತುತ್ತಿವೆ.

ಪಾಲಿಕೆ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 295 ಮಂದಿಗೆ ದಿನಗೂಲಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು.

ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧದ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಕಾರ್ಪೊರೇಷನ್ ವಿವರಣೆಯನ್ನು ನೀಡಿದೆ. ಆ ಪತ್ರವನ್ನು ಮೇಯರ್ ಅಥವಾ ಕಚೇರಿಯಿಂದ ನೀಡಲಾಗಿಲ್ಲ; ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುವನಂತಪುರಂ ಕಾರ್ಪೊರೇಷನ್ ಹೇಳಿದೆ.

ಮೇಯರ್ ಆಗಲಿ ಅಥವಾ ಅವರ ಕಚೇರಿಯಾಗಲಿ ಅಂತಹ ಪತ್ರವನ್ನು ಕಳುಹಿಸಿಲ್ಲ ಎಂದು ಪಾಲಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಮುಂದಾಗಿದೆ ಎಂದೂ ಹೇಳಿದೆ.

ಆದರೆ ಶಾಸಕರೊಬ್ಬರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ‘ನಗರಸಭೆಯಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡುವುದು ತಪ್ಪಲ್ಲ, ನಾಯಕತ್ವದ ಪತ್ರದ ಆಧಾರದ ಮೇಲೆ ನೇಮಕಾತಿ ನಡೆವುದಿಲ್ಲ” ಎಂದು ಶಾಸಕ ವಿ.ಕೆ.ಪ್ರಶಾಂತ್ ಹೇಳಿದರು.

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಇಂದಿನಿಂದ ಆರಂಭ – ಸೇವೆಯಾಟಗಳ ಪ್ರಥಮ ಪ್ರದರ್ಶನವಾಗಿ ಇಂದು ಧರ್ಮಸ್ಥಳದಲ್ಲಿ ‘ಅಶ್ವಮೇಧ’ ಪ್ರಸಂಗ 

ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಇಂದಿನಿಂದ ಆರಂಭ – ಸೇವೆಯಾಟಗಳ ಪ್ರಥಮ ಪ್ರದರ್ಶನವಾಗಿ ಇಂದು ಧರ್ಮಸ್ಥಳದಲ್ಲಿ ‘ಅಶ್ವಮೇಧ’ ಪ್ರಸಂಗ 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು 2022-23ನೇ ಸಾಲಿನ ತಿರುಗಾಟವನ್ನು ಇಂದಿನಿಂದ (05.11.2022) ಆರಂಭಿಸಲಿದೆ. 

ಇಂದು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ತನ್ನ ಸೇವಾಕರ್ತರ ಸೇವೆಯಾಟದೊಂದಿಗೆ ತನ್ನ ಪ್ರದರ್ಶನ ಆರಂಭಿಸಲಿದೆ ಎಂದು ಶ್ರೀ ಕ್ಷೇತ್ರದ ಹಾಗೂ ಮೇಳದ ಪ್ರಕಟಣೆ ತಿಳಿಸಿದೆ.

ಇಂದು ಸಂಜೆ 7 ಘಂಟೆಯಿಂದ ರಾತ್ರಿ 12 ಘಂಟೆಯವರೆಗೆ ‘ಅಶ್ವಮೇಧ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಪಾವಂಜೆ ಮೇಳದ ತಿರುಗಾಟ ಇಂದಿನಿಂದ ಆರಂಭ – ಇನ್ನು ಪ್ರತಿದಿನವೂ ಯಕ್ಷಗಾನ 

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯು 2022-23ನೇ ಸಾಲಿನ ತಿರುಗಾಟವನ್ನು ಇಂದಿನಿಂದ (05.11.2022) ಆರಂಭಿಸಲಿದೆ.

ಇಂದು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ತನ್ನ ದೇವರ ಪ್ರಥಮ ಸೇವೆಯಾಟದೊಂದಿಗೆ ತನ್ನ ಪ್ರದರ್ಶನಕ್ಕೆ ಚಾಲನೆ ಕೊಡಲಿದೆ ಎಂದು ಶ್ರೀ ಕ್ಷೇತ್ರದ ಹಾಗೂ ಮೇಳದ ಪ್ರಕಟಣೆ ತಿಳಿಸಿದೆ.

ಮಳೆಗಾಲದ ವಿರಾಮದ ನಂತರ ಪಾವಂಜೆ ಮೇಳದ ಕಲಾವಿದರು ಇಂದು ಮತ್ತೆ ಗೆಜ್ಜೆ ಕಟ್ಟಲಿದ್ದಾರೆ.

ಇಂದು ಸಂಜೆ 6 ಘಂಟೆಗೆ ಸರಿಯಾಗಿ ಪಾವಂಜೆ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಮೇಳದ ಕಲಾವಿದರು ಆಡಿ ತೋರಿಸಲಿದ್ದಾರೆ 

ನೀರು ಮುಟ್ಟಿ ಆಣೆ, ಪ್ರಮಾಣ ಮಾಡಲು ಹೋಗಿ, ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಹಾಸನ ಸಮೀಪದ ತೇಜೂರು ಕೆರೆಗೆ ಅಂಗೈಯಲ್ಲಿ ನೀರು ಹಾಕಿ (ಗಂಗೆಯನ್ನು ಮುಟ್ಟಿ) ಆಣೆ ಮತ್ತು ಪ್ರಮಾಣ ಮಾಡಲು ಹೋದ ಇಬ್ಬರು ಯುವಕರು ಗುರುವಾರ ರಾತ್ರಿ ಅದೇ ಕೆರೆಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಆನಂದ್ (30) ಮತ್ತು ಟಿ.ಎಂ.ಚಂದ್ರು (39) ಎಂದು ಗುರುತಿಸಲಾಗಿದೆ. ಇಬ್ಬರೂ ತೇಜೂರು ಗ್ರಾಮದ ನಿವಾಸಿಗಳು. ಇಬ್ಬರೂ ಹಾಸನದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಶುಕ್ರವಾರ ದಿನದ ಕೆಲಸದ ನಂತರ, ಅವರು ಇತರ ಕೆಲವು ಸ್ನೇಹಿತರೊಂದಿಗೆ ಮದ್ಯ ಸೇವಿಸಲು ಬಾರ್‌ಗೆ ಹೋಗಿದ್ದರು. ಬಿಲ್‌ಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಚಂದ್ರು ಮತ್ತು ಆನಂದ್ ವಾಗ್ವಾದ ನಡೆಸಿದರು.

ಆದರೆ ಇನ್ನೊಂದು ಮೂಲಗಳ ಪ್ರಕಾರ ವ್ಯಾಪಾರದ ಆರ್ಡರ್ ಒಪ್ಪಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡಲೆಂದು ಬೇರೆಯವರಿಂದ ಹಣ ಪಡೆದಿದ್ದರು. ನಂತರ ಕೆಲಸಕ್ಕೆ ಹೋಗಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಆಗಾಗ ಮಾತುಕತೆ ನಡೆಯುತಿತ್ತು ಎಂದು ಹೇಳಲಾಗಿದೆ. 

ಈ ವಿಚಾರವಾಗಿ  ತೇಜೂರು ಕೆರೆಯಲ್ಲಿ ನೀರು ಮುಟ್ಟಿ (ಗಂಗೆಯ ಸಮಕ್ಷಮ) ಪ್ರಮಾಣ ಮಾಡಲು ನಿರ್ಧರಿಸಿದರು. ನೀರಿಗೆ ಇಳಿಯುವಾಗ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗ್ಗೆ ಶವಗಳನ್ನು ಪಡೆಯಲಾಯಿತು. ಚಂದ್ರು ಅವರ ಪತ್ನಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಸ್ಪತ್ರೆಯೊಂದರಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗ ಪತ್ತೆ – ಇಷ್ಟು ವರ್ಷಗಳ ಕಾಲ ಯಾರ ಅರಿವಿಗೆ ಬರದೆ ಇರದಿದ್ದುದು ಹೇಗೆ?

ಮುಂಬೈನ ಬೈಕುಲ್ಲಾದಲ್ಲಿರುವ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗ ಪತ್ತೆಯಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ 200 ಮೀಟರ್ ಉದ್ದದ ಸುರಂಗವು ವೈದ್ಯಕೀಯ ವಿಭಾಗದ ಕಟ್ಟಡದ ಅಡಿಯಲ್ಲಿ ಕಂಡುಬಂದಿದೆ.

ಸುರಂಗ ಪತ್ತೆಯಾದ ಕಟ್ಟಡವನ್ನು ಒಮ್ಮೆ ಮಹಿಳೆಯರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ವಾರ್ಡ್‌ನಂತೆ ಬಳಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. 200-ಮೀಟರ್ ಉದ್ದದ ರಚನೆಯು ಕಟ್ಟಡದ ಅಡಿಯಲ್ಲಿ ಕಂಡುಬಂದಿದೆ, ಈ ಕಟ್ಟಡ ಮೂಲತಃ ಮಹಿಳೆಯರು ಮತ್ತು ಮಕ್ಕಳಿಗಾಗಿ ಸರ್ ದಿನ್ಶಾ ಮಾನೋಕ್ಜಿ ಪೆಟಿಟ್ ಆಸ್ಪತ್ರೆಯನ್ನು ಹೊಂದಿತ್ತು.

ನಂತರ ಅದನ್ನು ನರ್ಸಿಂಗ್ ಕಾಲೇಜಾಗಿ ಪರಿವರ್ತಿಸಲಾಯಿತು. ನೀರಿನ ಸೋರಿಕೆ ದೂರಿನ ಹಿನ್ನೆಲೆಯಲ್ಲಿ ಕಟ್ಟಡದ ಪರಿಶೀಲನೆ ವೇಳೆ ಸುರಂಗ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡದ ಶಿಲಾನ್ಯಾಸವನ್ನು 1890ರ ಜನವರಿ 27ರಂದು ಆಗಿನ ಬಾಂಬೆಯ ಗವರ್ನರ್ ಲಾರ್ಡ್ ರೇ ಅವರು ಮಾಡಿದ್ದರು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅರುಣ್ ರಾಥೋಡ್ ತಿಳಿಸಿದ್ದಾರೆ.

ಆಸ್ಪತ್ರೆಯ ಡೀನ್ ಡಾ.ಪಲ್ಲವಿ ಸಪ್ಲೆ ಅವರು ಮುಂಬೈ ಕಲೆಕ್ಟರ್ ಮತ್ತು ಮಹಾರಾಷ್ಟ್ರ ಪುರಾತತ್ವ ಇಲಾಖೆಗೆ ಈ ಕಟ್ಟಡವು ಪಾರಂಪರಿಕ ರಚನೆಯಾಗಿರುವುದರಿಂದ ಆವಿಷ್ಕಾರದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. ಒಳಗಿನಿಂದ ರಚನೆಯನ್ನು ಪರಿಶೀಲಿಸಿದ ಡಾ ರಾಥೋಡ್, ಇದು 4.5 ಅಡಿ ಎತ್ತರ ಮತ್ತು ಹಲವಾರು ಇಟ್ಟಿಗೆ ಕಂಬಗಳನ್ನು ಹೊಂದಿದೆ ಎಂದು ತಿಳಿಸಿದರು.

ಪ್ರವೇಶ ದ್ವಾರವನ್ನು ಕಲ್ಲಿನ ಗೋಡೆಯಿಂದ ಮುಚ್ಚಲಾಗಿದೆ ಎಂದು ಅವರು ಹೇಳಿದರು. ಕೆಲವು ಮಾಜಿ ಆಸ್ಪತ್ರೆ ಉದ್ಯೋಗಿಗಳ ಪ್ರಕಾರ, ಈ ಕಟ್ಟಡದ ಹಿಂದೆ ಇರುವ ಮತ್ತೊಂದು ಬ್ರಿಟಿಷ್ ಕಾಲದ ಕಟ್ಟಡದ ಕೆಳಗೆ ಇದೇ ರೀತಿಯ ರಚನೆಯನ್ನು ಹೊಂದಿದೆ, ಆದರೆ ಅದನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಡಾ ರಾಥೋಡ್ ಹೇಳಿದರು.

ಜೆಜೆ ಆಸ್ಪತ್ರೆಯ ಆವರಣವು ಹಲವಾರು ಬ್ರಿಟಿಷರ ಕಾಲದ ಪರಂಪರೆಯ ರಚನೆಗಳನ್ನು ಹೊಂದಿದೆ.

ಭಳಿರೇ  ಶಬಾಷ್, ತಾಳಮದ್ದಳೆಯ ಸುವರ್ಣಯುಗ ಮತ್ತೆ ಮರುಕಳಿಸಬಹುದೇ? ಬಹುಕಾಲ ನೆನಪಿನಲ್ಲುಳಿಯುವ ಕಲ್ಮಡ್ಕದ ‘ವೀರಮಣಿ ಕಾಳಗ ‘

ಮೊನ್ನೆ ಕಲ್ಮಡ್ಕದ ತಾಳಮದ್ದಳೆ ಹರೀಶ್ ಕೊಳ್ತಿಗೆಯವರ ಯೂಟ್ಯೂಬ್ ಚಾನೆಲಿನಲ್ಲಿ ನೋಡಿದೆ. ಬಹಳಷ್ಟು ವಿಮರ್ಶೆಗಳನ್ನು ಪಡೆಯುತ್ತಿರುವ ತಾಳಮದ್ದಳೆ. ಇತ್ತೀಚೆಗಿನ ತಾಳಮದ್ದಳೆ ಕ್ಷೇತ್ರ ಹೀಗೆ ಸುದ್ದಿಮಾಡಿದ್ದು ಅಪರೂಪ. ಹಾಗೆಂದು ಈಗ ನಡೆಯುತ್ತಿರುವ ತಾಳಮದ್ದಳೆಗಳ ಆಕರ್ಷಣೀಯತೆಗೇನೂ ಕೊರತೆಯಾಗಿರಲಿಲ್ಲ.

ಆದರೂ ಮೊನ್ನೆಯ ಕಲ್ಮಡ್ಕದ ‘ವೀರಮಣಿ ಕಾಳಗ’ ಬಹಳಷ್ಟು ಸದ್ದುಮಾಡಿದೆ. ಸುದ್ದಿಯೂ ಮಾಡಿದೆ. ತಾಳಮದ್ದಳೆಯ ಕುರಿತು ಬಹಳಷ್ಟು ಋಣಾತ್ಮಕ ಪ್ರತಿಕ್ರೆಯೆಗಳು ಬಂದುವು. ಕೆಲವರು ಧನಾತ್ಮಕವಾಗಿಯೂ ಯೋಚಿಸಿರಬಹುದು. ಕೇವಲ ಋಣಾತ್ಮಕ ಅಂಶಗಳನ್ನು ಯೋಚನೆ ಮಾಡದೆ ಅಲ್ಲಿರುವ ಧನಾತ್ಮಕ ವಿಚಾರಗಳತ್ತಲೂ ನಮ್ಮ ವಿಚಾರಗಳನ್ನು ಹರಿಯಗೊಡೋಣ.

‘ವೀರಮಣಿ ಕಾಳಗ’ ಎಲ್ಲೆಡೆಯಲ್ಲೂ ನಡೆಯುತ್ತದೆ. ಆದರೆ ಇಷ್ಟು ಸುದ್ದಿಮಾಡಿದ್ದೇ ಇಲ್ಲ. ಕಲ್ಮಡ್ಕದ ವೀರಮಣಿಯ ಕಾಳಗ ರಮಣೀಯವಾಗಿದೆ ಎಂದು ಹೇಳಿದರೆ ಯಾರೂ ಆಶ್ಚರ್ಯಪಡಲಾರರು ಎಂದು ಭಾವಿಸುತ್ತೇನೆ. ತುಂಬಾ ಕಡೆಗಳಲ್ಲಿ ನಡೆದ ವೀರಮಣಿ ಕಾಳಗದ ವಿಷಯ ಮಾತಾಡುವುದನ್ನು ಎಲ್ಲರೂ ಕೇಳಿರಬಹುದು. ವೀರಮಣಿ, ಶತ್ರುಘ್ನ, ಹನುಮಂತನ ಪಾತ್ರಗಳು ಭಾರೀ ಒಳ್ಳೆಯದಾಗಿದೆ ಎಂದು ಮಾತಾಡಿಕೊಳ್ಳುವುದನ್ನು ಕೇಳಿರುತ್ತೇವೆ.

ವೀರಮಣಿ ಕಾಳಗದ ವಿಮರ್ಶೆ ಬಾಯ್ಮಾತಿನಲ್ಲಿ ಇಷ್ಟಕ್ಕೆ ಮುಗಿದುಹೋಗುತ್ತದೆ. ಅದರೆ  ಕಲ್ಮಡ್ಕದ ವೀರಮಣಿ ಕಾಳಗದ ವಿಚಾರ ವಿಮರ್ಶಕರಿಗೆ ಸಡ್ಡುಹೊಡೆದಂತೆ ಸದ್ದುಮಾಡಿತ್ತು. ಈಗ ಎಲ್ಲವೂ ವಾಟ್ಸಾಪಿನಲ್ಲಿ, ವಾಟ್ಸಾಪ್ ಗ್ರೂಪುಗಳಲ್ಲಿ ಮಾತಾಡಿದರೆ ಮುಗಿಯಿತು. ಅದು ಅಷ್ಟಕ್ಕೇ ಸೀಮಿತ. ಮಾತ್ರವಲ್ಲ ಅದು ಸಾಮಾಜಿಕ ಜಾಲತಾಣದ ಪ್ರಭಾವವೂ ಹೌದು.

ಈ ತಾಳಮದ್ದಳೆ ಯಾಕೆ ಸುದ್ದಿಮಾಡಿತು ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಇಲ್ಲಿರುವ ಧನಾತ್ಮಕ ಅಂಶವೊಂದನ್ನು ಪರಿಗಣಿಸೋಣ.  ಶೇಣಿ, ಸಾಮಗ ಯುಗದ ನಂತರ ಹೀಗೊಂದು ತಾಳಮದ್ದಳೆಗಳು ಸುದ್ದಿಯಾದದ್ದು ಕಡಿಮೆ. ಅಥವಾ ತಾಳಮದ್ದಳೆ ಕೂಟಗಳು ಅರ್ಧದಲ್ಲಿ ನಿಂತುಹೋದದ್ದು ಕಡಿಮೆ. ಅಥವಾ ನಿಂತುಹೋದದ್ದು ಇಲ್ಲವೆಂದೇ ಹೇಳಬಹುದು.

ಕಲಾವಿದರು ಸ್ವಪ್ರತಿಷ್ಟೆಗೆ ಒಳಗಾಗದೆ ರಂಗಪ್ರದರ್ಶನದ ಕಡೆಗೆ ಒಲವು ತೋರಿಸಿದ್ದು ಇದಕ್ಕೆ ಕಾರಣವಿರಬಹುದು. ಆದರೆ ಮೊನ್ನೆಯ ತಾಳಮದ್ದಳೆ ಅರ್ಧದಲ್ಲಿ ನಿಂತುಹೋಗದಿದ್ದರೂ ಒಂದೊಮ್ಮೆಗೆ ನಿಂತುಹೋದಂತೆಯೇ ಭಾಸವಾಗುತ್ತಿತ್ತು.

ಇದೇ ತಾಳಮದ್ದಳೆಯ ಸ್ವಾರಸ್ಯ. ಎಲ್ಲವೂ ಹೊಂದಾಣಿಕೆಯಲ್ಲಿ ಹೋದರೆ ಅಲ್ಲೇನು ಸ್ವಾರಸ್ಯವಿರುತ್ತದೆ? ತಾಳಮದ್ದಳೆಯ ಮುಖ್ಯ ಭವನವೇ ವಾದ ಅಥವಾ ವಿವಾದವೆಂಬ ಅಡಿಪಾಯ,ಕಂಬಗಳಲ್ಲಿ ನಿಂತಿದೆ.

ಅಂತಹಾ ವಾದ, ಸ್ವಾರಸ್ಯಗಳನ್ನು ಮಾತಿನ ರೂಪದಲ್ಲಿ ಹೊಸೆದು ರಾತ್ರಿಯನ್ನು ಒಂದೇ ಅರ್ಥದಲ್ಲಿ ಬೆಳಗು ಮಾಡುವವರ ವೈಭವಯುತ ಕಲಾಘಟ್ಟ ಮತ್ತು ಕಾಲಘಟ್ಟ ಮುಗಿದುಹೋಯಿತೆಂದು ಭಾವಿಸುತ್ತಿರುವಾಗಲೇ ಮೊನ್ನೆಯ ಈಶ್ವರನ ಮತ್ತು ಹನುಮಂತನ ಪಾತ್ರಧಾರಿಯ ಮಾತಿನ ಚಕಮಕಿ ಕಾಣಿಸಿಕೊಂಡಿದೆ.

ರಂಗದಲ್ಲಿ ಕೇವಲ ಹೊಂದಾಣಿಕೆಯಿಂದ ಹೋದರೆ ತಾಳಮದ್ದಳೆಯಲ್ಲಿ ಸ್ವಾರಸ್ಯವೆಲ್ಲಿದೆ? ತಾಳಮದ್ದಳೆ ಕೂಟದ ಮುಖ್ಯ ಆಕರ್ಷಣೆಯೇ ಮಾತು,ಚರ್ಚೆ ಮತ್ತು ವಾದವಿವಾದ. ಇದಿಲ್ಲದೆ ಹೋದರೆ ಯಕ್ಷಗಾನ ಪ್ರದರ್ಶನವೇ ಸಾಕಲ್ಲವೇ? ತಾಳಮದ್ದಳೆ ಯಾಕೆ?

ಕಲ್ಮಡ್ಕದ ವೀರಮಣಿ ಕಾಳಗದ ಹಿನ್ನೆಲೆಯಲ್ಲಿ ಇದನ್ನೊಂದು ಧನಾತ್ಮಕ ಅಂಶವೆಂದು ಪರಿಗಣಿಸಿ ಹಿಂದಿನ ತಾಳಮದ್ದಳೆಯ ಯುಗ ಮತ್ತೆ ಮರುಕಳಿಸೀತೆಂಬ ಆಶಾಭಾವನೆಯಲ್ಲಿರೋಣವೇ?!

ಬರಹ – ಯಕ್ಷಕಿಂಕರ 

ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವ ಕಾರ್ಯಕ್ಕೆ ಇಂದು ಶಾಸಕ ಶ್ರೀ ಸೋಮಶೇಖರ ರೆಡ್ಡಿಯವರ ನೇತೃತ್ವದಲ್ಲಿ ಚಾಲನೆ

ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವ ಕಾರ್ಯಕ್ಕೆ ಇಂದು ಶಾಸಕ ಶ್ರೀ ಸೋಮಶೇಖರ ರೆಡ್ಡಿಯವರ ನೇತೃತ್ವದಲ್ಲಿ ಚಾಲನೆ

ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತೀಯರಿಗೆ ಆರೋಗ್ಯ ಸೇವೆಯ ಹಕ್ಕು ನೀಡಲು ಜಾರಿ ಮಾಡಿದ ಆಯುಷ್ಮಾನ್ ಯೋಜನೆ, ಕೋಟ್ಯಂತರ ಬಡ ಕುಟುಂಬಗಳಿಗೆ ಸಂಜೀವಿನಿಯಾಗಿದೆ.

ಬಳ್ಳಾರಿಯ ಸಮಸ್ತ ಜನತೆಗೆ ಈ ಯೋಜನೆಯ ಲಾಭ ತಲುಪಿಸಲು ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವ ಕಾರ್ಯಕ್ಕೆ ಇಂದು ಶಾಸಕ ಶ್ರೀ ಸೋಮಶೇಖರ ರೆಡ್ಡಿಯವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು