ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಎ. ವಿದ್ಯಾರ್ಥಿನಿ ನಯನಾ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿ ಭರತ್ ಆಯ್ಕೆಯಾಗಿದ್ದಾರೆ.
ನಯನಾ ಅವರು ವಾಲ್ತಾಜೆ ನಿವಾಸಿಯಾ ಸತ್ಯನಾರಾಯಣ ಬಿ. ಹಾಗೂ ವಿನಯ ದಂಪತಿ ಪುತ್ರಿ. ಅಂತೆಯೇ ಭರತ್ ಅವರು ಪೆರ್ನೆ ನಿವಾಸಿ ಗಂಗಾಧರ್ ಹಾಗೂ ಸುಜಾತ ದಂಪತಿಯ ಪುತ್ರ.
ಪ್ರಥಮ ಬಿ.ಎ. ಪ್ರತಿನಿಧಿಯಾಗಿ ಮೈಸೂರಿನ ವಿಜೇಂದ್ರ ಎಸ್., ಕುಮುದಾ ವಿಜೇಂದ್ರ ಅವರ ಪುತ್ರ ವಿಕ್ರಮ್, ದ್ವಿತೀಯ ಬಿ.ಎ. ಪ್ರತಿನಿಧಿಯಾಗಿ ಪೆರ್ನೆಯ ಬಾಲಕೃಷ್ಣ, ವನಿತಾ ದಂಪತಿ ಪುತ್ರ ನವನೀತ್, ದ್ವಿತೀಯ ಬಿ.ಕಾಂ. ಪ್ರತಿನಿಧಿಯಾಗಿ ವೀರಮಂಗಲದ ಮನೋಹರ ವಿ., ನಾಗವೇಣಿ ಕೆ. ದಂಪತಿಯ ಪುತ್ರಿ ಲೇಖಾ,
ತೃತೀಯ ಬಿ.ಎ. ಪ್ರತಿನಿಧಿಯಾಗಿ ಕಿರಿಮಂಜೇಶ್ವರದ ದೇವರಾಜ್ ಆರ್, ರಾಜೇಶ್ವರಿ ದಂಪತಿಯ ಪುತ್ರಿ ಮೇಘಾ ಡಿ. ಮತ್ತು ತೃತೀಯ ಬಿ.ಎಸ್ಸಿ. ಪ್ರತಿನಿಧಿಯಾಗಿ ಪೆರ್ಲ ಸ್ವರ್ಗದ ಬಾಲಚಂದ್ರ ಬಿ.ವಿ., ಪ್ರಿಯಾ ದಂಪತಿ ಪುತ್ರಿ ವರಣ್ಯ ಬಿ. ಆಯ್ಕೆಯಾಗಿದ್ದಾರೆ.
ದಿನಾಂಕ 29-10-2022ನೇ ಶನಿವಾರ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಶೋಧ ವಿಜ್ಞಾನ ಮತ್ತು ಕಲಾ ಸ್ಪರ್ಧೆ “ಎಕ್ಸೆಲ್ ಶೋಧ”ದಲ್ಲಿ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ವಿಜ್ಞಾನ ಮಾದರಿಯಲ್ಲಿ 8ನೇ ತರಗತಿಯ ಸಮನ್ವಿತಾ (ಡಾ.ಗುರುರಾಜ್.ಎಂ ಮತ್ತು ಡಾ.ಶ್ರೀದೇವಿ ದಂಪತಿ ಪುತ್ರಿ) ಮತ್ತು ಲಕ್ಷ್ಯ(ಶ್ರೀ ದಿನೇಶ್ ಕುಮಾರ್ ಮತ್ತು ರೇಖಾ ದಂಪತಿ ಪುತ್ರಿ) – ಪ್ರಥಮ ಸ್ಥಾನ , ವಿಜ್ಞಾನ ರಸಪ್ರಶ್ನೆ- 10ನೇ ತರಗತಿಯ ಅನ್ವಿತ್.ಎನ್(ಶ್ರೀ ಶ್ರೀಪತಿ.ಎನ್ ಮತ್ತು ವಿದ್ಯಾಲಕ್ಷ್ಮೀ ದಂಪತಿ ಪುತ್ರಿ) ಮತ್ತು ಅಭಿರಾಮ್ ಭಟ್(ಶ್ರೀ ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ದಂಪತಿ ಪುತ್ರಿ) – ಪ್ರಥಮ ಸ್ಥಾನ,
ಇಂಗ್ಲೀಷ್ ಭಾಷಣ- 8ನೇ ತರಗತಿಯ ಜಿ.ವೈಷ್ಣವಿ ಪೈ(ಶ್ರೀ ನಾಗೇಶ್ ಪೈ ಮತ್ತು ಸಹನಾ ಪೈ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಪೆನ್ಸಿಲ್ ಸ್ಕೆಚ್ – 10ನೇ ತರಗತಿಯ ಕೀರ್ತನ್.ಕೆ(ಶ್ರೀ ಕಿಶನ್ ಭಟ್.ಎನ್.ಎಸ್ ಮತ್ತು ಉಷಾ.ಕೆ ದಂಪತಿ ಪುತ್ರ) – ದ್ವಿತೀಯ ಸ್ಥಾನ,
ಪೈಂಟಿಂಗ್- 8ನೇ ತರಗತಿಯ ಅನುಶ್ರೀ(ಮನಿಕಂಡನ್ ನಾಯರ್ ಮತ್ತು ಅನಿತಾ.ಎನ್ ದಂಪತಿ ಪುತ್ರಿ) – ದ್ವಿತೀಯ ಸ್ಥಾನ, ಚೆಸ್- 10ನೇ ತರಗತಿಯ ಪ್ರಣೀಲ್ ರೈ(ಶ್ರೀ ಪ್ರಕಾಶ್ ರೈ ಮತ್ತು ಸತ್ಯಲತ ದಂಪತಿ ಪುತ್ರ) – ಪ್ರಥಮ ಸ್ಥಾನ ಪಡೆದಿರುತ್ತಾರೆ.
ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.3000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.2000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ಸಮಗ್ರ ಪ್ರಶಸ್ತಿಯು ರೂ.15000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕ ಒಳಗೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪುತ್ತೂರು: ಕರ್ನಾಟಕ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಕನ್ನಡ ಮಾತನಾಡುವ ಪ್ರವೃತ್ತಿ ಕನ್ನಡಿಗರಲ್ಲಿ ಮೂಡಿದಾಗ ಈ ಉತ್ಸವದ ಉದ್ದೇಶ ಸಾಕಾರಗೊಳ್ಳುತ್ತದೆ. ಕನ್ನಡ ನಿತ್ಯೋತ್ಸವವಾಗುತ್ತದೆ. ಭಾಷೆಯೊಂದರ ಬಳಕೆಯಿಂದ ಆ ಭಾಷೆ ಹೆಚ್ಚು ಜನರನ್ನು ತಲುಪುವ ಜೊತೆಗೆ ದೀರ್ಘಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ನೆರವಾಗುತ್ತದೆ.
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಕನ್ನಡ ಮಾತನಾಡುವ ಹಾಗೂ ಭಾಷೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉಮಾಮಹೇಶ್ವರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಕನ್ನಡಿಗರಿಗೆ ಮಾತೃಭಾಷೆಯಾಗಿದ್ದು, ಮನೆಯಲ್ಲಿ ಯಾವುದೇ ಭಾಷೆ ಮಾತನಾಡುತ್ತಿದ್ದರೂ ಸಮಾಜದಲ್ಲಿ ಕನ್ನಡವೇ ಮುಖ್ಯವಾಗಿದೆ. ಇದು ನಮ್ಮ ಪರಿಸರ ಭಾಷೆಯಾಗಿದ್ದು ವಿಚಾರಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದರು.
ಭಾಷಾವಾರು ಪ್ರಾಂತ್ಯಗಳ ಹಾಗೂ ರಾಜ್ಯಗಳ ರಚನೆಯ ಸಂದರ್ಭದಲ್ಲಿ ಹಲವಾರು ಮಂದಿ ಯೋಗದಾನ ನೀಡಿದ್ದಾರೆ. ಕನ್ನಡದ ಅಗ್ರಗಣ್ಯ ಸಾಹಿತಿಗಳು ಭಾಷೆ ಶ್ರೀಮಂತವಾಗಲು ಶ್ರಮಿಸಿದ್ದಾರೆ. ಭಾಷಾಭಿಮಾನದಿಂದ ಒಬ್ಬ ವ್ಯಕ್ತಿ ಕಲೆ, ಸಂಸ್ಕೃತಿ ಹಾಗೂ ಸಂಸ್ಕಾರ ಸಹಿತನಾಗಿ ಶ್ರೀಮಂತನಾಗಲು ಸಾಧ್ಯ. ಆದರೆ ಕನ್ನಡಿಗರ ಅಭಿಮಾನ ಶೂನ್ಯತೆ ಭಾಷಾ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜನತೆಯಲ್ಲಿ ಭಾಷೆಯನ್ನು ಶುದ್ಧವಾಗಿ ಮಾತನಾಡುವ ಪರಿಪಾಠ ಬೆಳೆಯಬೇಕಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನ ಮೂಡಿದಲ್ಲಿ ಭಾಷೆಯ ವಿಸ್ತಾರತೆ ಹೆಚ್ಚುತ್ತದೆ. ಯಾವುದೇ ಗ್ರಾಹಕ ಸೇವಾ ಬಳಕೆ ಸಂದರ್ಭ ಕನ್ನಡ ಭಾಷೆಯನ್ನೇ ಕನ್ನಡಿಗರು ಬಳಸಿದರೆ ಕನ್ನಡ ಬಳಕೆ ಹೆಚ್ಚುತ್ತದೆ. ಆದರೆ ಕನ್ನಡದ ಬಳಕೆಗೆ ಕನ್ನಡಿಗರೇ ಆಸಕ್ತಿ ತೋರದಿದ್ದಲ್ಲಿ ಅದರ ಲಭ್ಯತೆಯ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದರು.
ರಾಜ್ಯೋತ್ಸವ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಚಂದ್ರಕಾ0ತ ಗೋರೆ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ತತ್ವಶಾಸ್ತ್ರ ಉಪನ್ಯಾಸಕ ತೇಜಶಂಕರ ಸೋಮಯಾಜಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿನಿಯರಾದ ಪಂಚಮಿ ಸ್ವಾಗತಿಸಿ, ಚೈತನ್ಯ ವಂದಿಸಿದರು. ವರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಚೈತನ್ಯ ಮತ್ತು ಶ್ರೀ ಹರ್ಷ ಪ್ರಾರ್ಥಿಸಿದರು.
ಪುತ್ತೂರು,ನ 5: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಈಶ್ವರಮಂಗಲದ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜು ಇದರ ಸಹಯೋಗದೊಂದಿಗೆ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರು ಚಾಂಪಿಯನ್‌ಶಿಪ್ ತಂಡ ಪ್ರಶಸ್ತಿ ಪಡೆದುಕೊಂಡರು.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್ ವೈಯಕ್ತಿಕ ಚಾಂಪಿಯನ್ ಪಡೆದರು. ಅದೇ ರೀತಿ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.
ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರಜತ್ ಆರ್ ಭಟ್, ನಿತಿನ್ ಆರ್ ಎ, ಜಯಶೀಲ್ ರೈ, ಆರ್ಯ ಪಟೇಲ್, ಪವನ್ ಕುಮಾರ್, ಲೋಹಿತ್ ಎಸ್ ಡಿ, ಬೃಜೇಶ್ ಜಿ ರೈ,ಗಗನ್ ಶೆಣೈ, ಚರಣ್ ಪಿ, ಅನೀಷ್, ವಿಘ್ನೇಶ್ ಅಶ್ವಿತ್, ಧನುಷ್ ಕೆ, ಪ್ರಮಥ್, ಎಲ್. ಧನುಷ್, ನಿಹಾಲ್ ರಾಜ್, ಅಜಿತ್ ಭಾಗವಹಿಸಿದ್ದರು.
ಕನ್ನಡ ರಾಜ್ಯ ಸ್ಥಾಪನೆಯಾಗಿರುವುದಕ್ಕೆ ಕೇವಲ ಆಚರಣೆ ಮಾಡಿ ಸಂಭ್ರಮಿಸುವುದಲ್ಲ, ಕನ್ನಡವು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬೆರೆತು ನಮ್ಮ ಉಸಿರಾಗಬೇಕು. ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದ್ದು ಅತ್ಯಂತ ಫ್ರೌಢವಾದ ಬೆಳವಣಿಗೆಯನ್ನು ಹೊಂದಿರುವ ಭಾಷೆ. ಕನ್ನಡದಲ್ಲಿ ರಚನೆಯಾಗಿರುವ ಮಹಾಕಾವ್ಯಗಳನ್ನು ಅವಲೋಕಿಸಿದಾಗ ನಮಗೆ ನಮ್ಮ ಭಾಷೆಯ ಬಗ್ಗೆ ಗರ್ವವೆನಿಸುತ್ತದೆ ಎಂದು ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಕನ್ನಡ ಸಾಹಿತ್ಯ ಸಾಮ್ರಾಜ್ಯವನ್ನು ಆಳಿದ ಕನ್ನಡದ ಆದಿಕವಿ ಪಂಪ, ರನ್ನ, ಪೊನ್ನ ಕುಮಾರವ್ಯಾಸ, ಲಕ್ಷ್ಮೀಶ ಇವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ವಚನಕಾರ ಅಕ್ಕಮಹಾದೇವಿ, ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಬಸವಣ್ಣ ಅವರು ತಮ್ಮ ವಚನಗಳ ಮೂಲಕ ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದರು. ಹಾಗೆಯೇ ದಾಸರ ಕೀರ್ತನೆಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎಂದರು.
ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಕವಿಶ್ರೇಷ್ಠರು, ವಚನಕಾರರು, ಸಂತ ಶರಣರು ಕನ್ನಡ ಭಾಷೆಯ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿದ್ದಾರೆ. ಇಂತಹ ಅಮೋಘ ಹಿನ್ನಲೆಯಿರುವ ಭಾಷೆಯನ್ನು ನಾವು ಬಳಸಿ, ಬೆಳೆಸಿ, ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಸೌರಭವನ್ನು ಸ್ವಲ್ಪವು ಕಳೆಗುಂದದ0ತೆ ಹಸ್ತಾಂತರಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇರುವ ಸೊಬಗು ಇತರ ಯಾವ ಭಾಷೆಗೂ ಇಲ್ಲ. ಕನ್ನಡ ಭಾಷೆಯು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ರಚನೆಯಾಗಿದ್ದು ಸಂಸ್ಕೃತದ ಕ್ಲಿಷ್ಟವಾದ ಶ್ಲೋಕಗಳನ್ನು ಓದುವ ಸಾಮರ್ಥ್ಯ ಕನ್ನಡಿಗನಿಗಿದೆ.
ಬನವಾಸಿ ಕನ್ನಡದ ಪ್ರಥಮ ರಾಜಧಾನಿಯಾಗಿದ್ದು ಬನವಾಸಿಯಲ್ಲಿ ಮೈನವಿರೇಳಿಸುವ ಕನ್ನಡದ ಶಿಲ್ಪಕಲೆಗಳು ನಿರ್ಮಾಣವಾಗಿವೆ. ಇಂದಿನ ಆಧುನಿಕ ವಿದ್ಯಾಮಾನಗಳನ್ನು ಬಿತ್ತರಿಸುವ ಕನ್ನಡ ವಾರ್ತವಾಹಿನಿಗಳು ಕನ್ನಡದ ಕಗ್ಗೋಲೆಯನ್ನು ಮಾಡುತ್ತಿವೆ. ಕನ್ನಡವು ತನ್ನ ಭಾಷಾ ಶುದ್ಧತೆಯನ್ನು ಕಳೆದುಕೊಂಡು ಆಂಗ್ಲ ಭಾಷೆಯ ಮೋಹಕ್ಕೆ ಸಿಲುಕಿ ಕಂಗ್ಲೀಷ್ ಆಗಿ ವಿರಾಜಿಸುತ್ತಿದೆ ಎಂದರು.
ಭಾಷಾ ದುರಭಿಮಾನ ಬೆಳೆದರೆ ಮುಂದಿನ ಜನಾಂಗ ಕನ್ನಡ ಪದಗಳನ್ನು ಬೇರೆ ಭಾಷೆಯಿಂದ ಹುಡುಕಿ ತೆಗೆಯುವ ಅಗತ್ಯತೆ ಬರಬಹುದು ಹಾಗೂ ಕನ್ನಡ ಭಾಷೆಯನ್ನು ಬಳಸುವವರೆ ಇಲ್ಲದೆ ಅದು ಕಣ್ಮರೆಯಾಗಬಹುದು. ಆದ್ದರಿಂದ ಇಂದಿನ ಸಮಾಜಕ್ಕೆ ಸ್ವಾಭಿಮಾನಿ ಕನ್ನಡಿಗನ ಅಗತ್ಯವಿದೆ. ನಾವು ದೈನಂದಿನ ವ್ಯವಹಾರಗಳಲ್ಲಿ ಹೆಚ್ಚು ನಮ್ಮ ಕನ್ನಡ ಭಾಷೆಯನ್ನು ಬಳಸಿ ಅದನ್ನು ಸಮೃದ್ಧಗೊಳಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿತರೂ ಎಲ್ಲೇ ಉದ್ಯೋಗ ಅರಸಿ ಹೋದರೂ ನಾವು ಎಂದೆ0ದಿಗೂ ಕನ್ನಡಿಗರಾಗಿಯೇ ಇರಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್. ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರಾವ್ಯ ಪಾರ್ಥಿಸಿದರು. ಕನ್ನಡ ಪ್ರಾಧ್ಯಪಕ ಸತೀಶ್ ಇರ್ದೆ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸುಚೇತ ರತ್ನ ವಂದಿಸಿದರು. ವಿದ್ಯಾರ್ಥಿನಿ ಅಂಶಿತಾ ನಿರೂಪಿಸಿದರು.
ತ್ರಿಶೂರ್: ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ನಾಯಕನಿಗೆ ಸಿಮ್ ಕಾರ್ಡ್ ತಲುಪಿಸಲಾಗಿದೆ. ಇಡುಕ್ಕಿಯ ಪೆರುವಂತನಂನಲ್ಲಿ ಬಂಧನಕ್ಕೊಳಗಾಗಿದ್ದ ಟಿಎಸ್ ಸೈನುದ್ದೀನ್‌ಗೆ ಕುಟುಂಬ ಸದಸ್ಯರು ಸಿಮ್ ಕಾರ್ಡ್ ತಲುಪಿಸಿದ್ದಾರೆ.
ಖುರಾನ್‌ನಲ್ಲಿ ಅಡಗಿಸಿ ವಿಯ್ಯೂರು ಜೈಲಿನಲ್ಲಿರುವ ಪಿಎಫ್‌ಐ ಮುಖಂಡನಿಗೆ ಸಿಮ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಜೈಲು ಅಧೀಕ್ಷಕರು ನೀಡಿದ ದೂರಿನ ಮೇರೆಗೆ ವಿಯ್ಯೂರು ಪೊಲೀಸರು ಜಾಮೀನು ರಹಿತ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ತಿಂಗಳು 31ರಂದು ಘಟನೆ ನಡೆದಿದೆ. ಸೈನುದ್ದೀನ್ ಅವರ ಪತ್ನಿ ನಾದಿರಾ, ಮಗ ಮುಹಮ್ಮದ್ ಯಾಸಿನ್ ಮತ್ತು ಸಹೋದರ ಮಹಮ್ಮದ್ ನಾಸಿರ್ ಖೈದಿ ಸೈನುದ್ದೀನ್ ಅವರನ್ನು ಭೇಟಿ ಮಾಡಲು ಬೆಳಗ್ಗೆ 11 ಗಂಟೆಗೆ ಜೈಲಿಗೆ ಬಂದಿದ್ದರು.
ಈ ಸಮಯದಲ್ಲಿ, ಅವರು ಖುರಾನ್ ಅನ್ನು ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಆರೋಪಿಗಳಿಗೆ ಖುರಾನ್ ಹಸ್ತಾಂತರಿಸುವ ಮೊದಲು, ಅಧಿಕಾರಿಗಳ ವಿವರವಾದ ತಪಾಸಣೆಯಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ.
ನಂತರ ವಿಯ್ಯೂರು ಜೈಲು ಅಧೀಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಮ್ ಕಾರ್ಡ್ ಯಾರ ಹೆಸರಿಗೆ ಸೇರಿದ್ದು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಬಳಿಕ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ವಿಯ್ಯೂರು ಪೊಲೀಸರು ತಿಳಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ನಿಷೇಧದ ನಂತರ ಕಚೇರಿಗಳ ಮೇಲೆ ದಾಳಿ ನಡೆಸಿದ ಎನ್‌ಐಎ ಪೆರುವಂತನಂನಲ್ಲಿ ಸೈನುದ್ದೀನ್‌ನನ್ನು ಬಂಧಿಸಿದೆ.
ನಂತರ ಅವರನ್ನು ವಿಯ್ಯೂರಿನ ಹೈ ಸೆಕ್ಯುರಿಟಿ ಜೈಲಿಗೆ ಕರೆದೊಯ್ಯಲಾಯಿತು
ನೆಯ್ಯಟ್ಟಿಂಕರ: ಪರಸ್ಸಾಲ ಶರೋನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳನ್ನು ಇಂದು ರಾಮವರ್ಮನ ಚಿರಾಯಿಯಲ್ಲಿರುವ ಆಕೆಯ ಮನೆಗೆ ಸಾಕ್ಷಿಗಾಗಿ ಕರೆತರುವ ಸಾಧ್ಯತೆ ಇದೆ.
ಆರೋಪಿ ಗ್ರೀಷ್ಮಾಳನ್ನು ನಿನ್ನೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಿನ್ನೆ ಮಧ್ಯಾಹ್ನ 3.15ರ ಸುಮಾರಿಗೆ ಅಟ್ಟಕುಳಂಗರ ಜೈಲಿನಿಂದ ಗ್ರೀಷ್ಮಾಳನ್ನು ನೆಯ್ಯಾಟಿಂಕರ ಜನರಲ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನೆಯ್ಯಟಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಗ್ರೀಷ್ಮಾಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಪ್ರಾಸಿಕ್ಯೂಷನ್ ಒತ್ತಾಯಿಸಿದಾಗ, ಪ್ರತಿವಾದಿ ಲಾಯರ್ ಅದನ್ನು ಬಲವಾಗಿ ವಿರೋಧಿಸಿದರು. ಗ್ರೀಷ್ಮಾ ಪ್ರಮುಖ ಆರೋಪಿ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ಇದು ಪರಸ್ಸಾಲ ಪೊಲೀಸರ ವೈಫಲ್ಯವನ್ನು ಎತ್ತಿ ಹಿಡಿಯುವ ಮೂಲಕ ರಕ್ಷಣಾ ವಾದವಾಗಿತ್ತು. ಗ್ರೀಷ್ಮಾ ಪರ ವಾದ ಮಂಡಿಸಿದ ವಕೀಲರು, ವಿಷ ಬೆರೆಸಿ ಕೊಲೆ ಮಾಡಿರುವ ಬಗ್ಗೆ ಪೊಲೀಸರ ಬಳಿ ಎಫ್‌ಐಆರ್ ಕೂಡ ಇಲ್ಲ.
“ಯಾವುದೇ ಪಿತೂರಿ ಇರಲಿಲ್ಲ ಇಲ್ಲಸಲ್ಲದ ಪುರಾವೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡಲಾಗಿದೆ. ಕೋಣೆಯೊಳಗೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ವಿಷ ತಂದವರು ಶರೋನ್ ಇರಬಹುದೇ. ಶರೋನ್ ಅವರ ಅಂತಿಮ ಹೇಳಿಕೆಯಲ್ಲಿ ಗ್ರೀಷ್ಮಾ ಅವರ ಉಲ್ಲೇಖವಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
“ಗ್ರೀಷ್ಮಾಳನ್ನು ಕ್ರಿಮಿನಲ್ ಆಗಿ ಪರಿವರ್ತಿಸಿದವರು ಶರೋನ್. ಶರೋನ್ ಗ್ರೀಷ್ಮಾ ಅವರ ಖಾಸಗಿ ಚಿತ್ರಗಳನ್ನು ಹೊಂದಿದ್ದರು, ಈ ಬಗ್ಗೆ ತನಿಖೆಯಾಗಬೇಕು,” ಎಂದು ವಕೀಲರು ಹೇಳಿದರು.
ಗ್ರೀಷ್ಮಾ ಅವರು ತಮಿಳುನಾಡಿನಲ್ಲಿ ಶರೋನ್ ಜೊತೆ ತೆರಳಿದ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ಕರೆದೊಯ್ಯಬೇಕಾಗಿರುವುದರಿಂದ ನ್ಯಾಯಾಲಯವು 7 ದಿನಗಳ ಕಸ್ಟಡಿ ಬೇಡಿಕೆಯನ್ನು ಒಪ್ಪಿಕೊಂಡಿತು. ಗ್ರೀಷ್ಮಾಗೆ ವೈದ್ಯಕೀಯ ನೆರವು ನೀಡುವಂತೆ ಮತ್ತು ಸಾಕ್ಷ್ಯ ಸಂಗ್ರಹವನ್ನು ವಿಡಿಯೋದಲ್ಲಿ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದ ಗ್ರೀಷ್ಮಾ ಅವರನ್ನು ನಿನ್ನೆ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಪೊಲೀಸರು ಗ್ರೀಷ್ಮಾ ಅವರ ತಾಯಿ ಮತ್ತು ಚಿಕ್ಕಪ್ಪನ ವಿರುದ್ಧ ಸಾಕ್ಷ್ಯ ನಾಶಪಡಿಸಿದ ಆರೋಪ ಹೊರಿಸಿದ್ದಾರೆ. ಶರೋನ್ ಹತ್ಯೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ’ ಎಂದು ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಿರುವನಂತಪುರಂ ನಗರಪಾಲಿಕೆಯಲ್ಲಿ ತಾತ್ಕಾಲಿಕ ಖಾಲಿ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ಕೋರಿ ಮೇಯರ್ ಆರ್ಯ ರಾಜೇಂದ್ರನ್ ಪತ್ರ ಬರೆದಿದ್ದಾರೆ.
ತಿರುವನಂತಪುರಂ: ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅವರಿಗೆ ಬರೆದಿರುವ ಪತ್ರ ಹೊರಬಿದ್ದಿದೆ.
ಮೇಯರ್ ಅಧಿಕೃತ ಲೆಟರ್ ಪ್ಯಾಡ್‌ನಲ್ಲಿ ನವೆಂಬರ್ 1 ರಂದು ಕಳುಹಿಸಲಾದ ಪತ್ರವು ಪಕ್ಷದ ಕೆಲವು ಮುಖಂಡರ ವಾಟ್ಸಾಪ್ ಗ್ರೂಪ್ ಮೂಲಕ ಸಾರ್ವಜನಿಕವಾಗಿದೆ. ಪತ್ರದಲ್ಲಿ ಜಿಲ್ಲಾ ಕಾರ್ಯದರ್ಶಿಯನ್ನು ‘ಕಾಮ್ರೇಡ್’ ಎಂದು ಸಂಬೋಧಿಸಿದ್ದಾರೆ.
ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಿಂದ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆಯ ಪಟ್ಟಿಯನ್ನು ನೀಡಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪತ್ರ ಬಂದಿಲ್ಲ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಿವರಿಸಿದರು.
ಮೇಯರ್ ಸಹಿ ಮಾಡಿರುವ ಪತ್ರದಲ್ಲಿ ಗಡುವು ಸೇರಿದಂತೆ ಮಾಹಿತಿ ಇದೆ. ಮೇಯರ್ ಪ್ರಮಾಣವಚನ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಎತ್ತುತ್ತಿವೆ.
ಪಾಲಿಕೆ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 295 ಮಂದಿಗೆ ದಿನಗೂಲಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು.
ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧದ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಕಾರ್ಪೊರೇಷನ್ ವಿವರಣೆಯನ್ನು ನೀಡಿದೆ. ಆ ಪತ್ರವನ್ನು ಮೇಯರ್ ಅಥವಾ ಕಚೇರಿಯಿಂದ ನೀಡಲಾಗಿಲ್ಲ; ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುವನಂತಪುರಂ ಕಾರ್ಪೊರೇಷನ್ ಹೇಳಿದೆ.
ಮೇಯರ್ ಆಗಲಿ ಅಥವಾ ಅವರ ಕಚೇರಿಯಾಗಲಿ ಅಂತಹ ಪತ್ರವನ್ನು ಕಳುಹಿಸಿಲ್ಲ ಎಂದು ಪಾಲಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಮುಂದಾಗಿದೆ ಎಂದೂ ಹೇಳಿದೆ.
ಆದರೆ ಶಾಸಕರೊಬ್ಬರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ‘ನಗರಸಭೆಯಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡುವುದು ತಪ್ಪಲ್ಲ, ನಾಯಕತ್ವದ ಪತ್ರದ ಆಧಾರದ ಮೇಲೆ ನೇಮಕಾತಿ ನಡೆವುದಿಲ್ಲ” ಎಂದು ಶಾಸಕ ವಿ.ಕೆ.ಪ್ರಶಾಂತ್ ಹೇಳಿದರು.