Tuesday, March 17, 2026
Home Blog Page 133

ಕೋಳ್ಯೂರರಿಗೆ 91ರ ಅಭಿನಂದನೆ

0

ಪ್ರಸಿದ್ಧ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ಕಳೆದ ವರ್ಷ 90ರ ವೈಭವವನ್ನು ಅವರ ಕುಟುಂಬಿಕರ ಸಹಕಾರದಿಂದ ಯಕ್ಷಗಾನ ಕಲಾರಂಗ ವಿಶಿಷ್ಟವಾಗಿ ಆಚರಿಸಿತ್ತು.

ಈ ವರ್ಷ ಅವರ ಮಕ್ಕಳು ಸಂಸ್ಥೆಯ ಸದಸ್ಯರನ್ನೆಲ್ಲ ಆಮಂತ್ರಿಸಿ 91ರ ಹುಟ್ಟುಹಬ್ಬವನ್ನು ಅವರ ಮನೆಯಂಗಳದಲ್ಲಿ ನೆರೆಕರೆಯವರು ಮತ್ತು ಬಂಧುಗಳೊಂದಿಗೆ ಆತ್ಮೀಯವಾಗಿ ಆಚರಿಸಿದರು. ಕೋಳ್ಯೂರರ ಪ್ರಸಿದ್ಧ ಪಾತ್ರಗಳಲ್ಲಿ ಒಂದಾದ ದಾಕ್ಷಾಯಿಣಿಯ ವಿಶಿಷ್ಟ ಅರ್ಥವನ್ನು ಕೇಳುವ ಅವಕಾಶ ಒದಗಿಬಂತು.

ಯುಗಳ ಸಂವಾದ ತಾಳಮದ್ದಲೆಯಲ್ಲಿ ಪ್ರೊ.ಎಂ.ಎಲ್. ಸಾಮಗರು ಈಶ್ವರನ ಪಾತ್ರ ನಿರ್ವಹಿಸಿದರು. ಅನಂತರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಶಾಲು, ಸ್ಮರಣಿಕೆ, ಅಭಿನಂದನ ಪತ್ರದೊಂದಿಗೆ ಕೋಳ್ಯೂರು ದಂಪತಿಗಳನ್ನು ಅಭಿನಂದಿಸಿದರು.

ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕೋಳ್ಯೂರರ ಕಲಾಪ್ರತಿಭೆ, ಸಂಸ್ಥೆಯ ಕಾರ್ಯ ಚಟುವಟಿಕೆಯ ಕುರಿತು ಅವರಿಗಿರುವ ಪ್ರೀತಿ, ವೃದ್ಧಾಪ್ಯದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಪರಿಯನ್ನು ಸ್ಮರಿಸಿಕೊಂಡರು.

ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಪ್ರೊ.ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೋಳ್ಯೂರರ ಸುಪುತ್ರಿ ಮೀರಾ ಅವರ ಮಗ ನಟರಾಜ್‌ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮೆಚ್ಚಿ ಸೇವಾ ರೂಪದಲ್ಲಿ ಮುಂಬಯಿಯ ವಿಕ್ಷಲಾ ವೆಂಚರ್ ಪ್ರೈ. ಲಿ. ಮೂಲಕ ಯಕ್ಷಗಾನ ಕಲಾರಂಗದ ವೆಬ್‌ಸೈಟನ್ನು ವಿನ್ಯಾಸಗೊಳಿಸಿ ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಕೋಳ್ಯೂರರ ಪುತ್ರ ಶ್ರೀಧರ ರಾವ್‌ ತಮ್ಮ ಸಹೋದರ, ಸಹೋದರಿಯರೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದರು. ಭೋಜನಾ ನಂತರ ಕೋಳ್ಯೂರರ ಮನೆಯ ಅಂಗಳದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನವೆಂಬರ್ 13ರಂದು ಜರಗಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಸಿದ್ಧತೆಯ ಕುರಿತು ಸಮಾಲೋಚಿಸಲಾಯಿತು.

Big Breaking Video: ಹಾಡುಹಗಲೇ ಉದ್ಯಮಿಯೊಬ್ಬರನ್ನು ದೊಣ್ಣೆಗಳಿಂದ ಬಡಿದು ಹತ್ಯೆ – ಭೀಕರ ಕೃತ್ಯ ವೀಡಿಯೋದಲ್ಲಿ ಸೆರೆ 

0

ಸಾರ್ವಜನಿಕವಾಗಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಭೀಕರ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜೈಪುರ: ಆಸ್ತಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಸಾರ್ವಜನಿಕವಾಗಿ ಥಳಿಸಿ ಕೊಂದಿರುವ ಘಟನೆ ಜೈಪುರದ ಕರ್ಣಿ ವಿಹಾರ್ ಪ್ರದೇಶದಲ್ಲಿ ನಡೆದಿದೆ. ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಮೃತ ಆಸ್ತಿ ವ್ಯಾಪಾರಿಯನ್ನು ವಿಜೇಂದ್ರ ಸಿಂಗ್ ಗುಲಾಬ್ ಅಲಿಯಾಸ್ ವಿಜ್ಜು ಬನ್ನಾ ಎಂದು ಗುರುತಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ದುಷ್ಕರ್ಮಿಗಳು ರಾಡ್, ಚಾಕು, ಕತ್ತಿ, ಸುತ್ತಿಗೆಗಳಿಂದ ಉದ್ಯಮಿಯನ್ನು ಅಮಾನುಷವಾಗಿ ಥಳಿಸುತ್ತಿರುವುದು ಕಂಡು ಬಂದಿದ್ದು, ಸುತ್ತಮುತ್ತ ಮೂಕಪ್ರೇಕ್ಷಕರಾಗಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

ಜೈಪುರದ ಕರ್ನಿ ವಿಹಾರ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಆಸ್ತಿ ಉದ್ಯಮಿಯೊಬ್ಬರ ಮೇಲೆ ಏಕಾಏಕಿ ಹಲ್ಲೆ ನಡೆಸಿ ದೊಣ್ಣೆಗಳಿಂದ ಥಳಿಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಬೆಳಿಗ್ಗೆ ಉದ್ಯಮಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಉದ್ಯಮಿಯ ಸಾವಿನ ನಂತರ, ಶವವನ್ನು ಎಸ್‌ಎಂಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸದ್ಯ ಮೂವರು ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಅನ್ನಿಕಾ.ಎಂ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯ ವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಅನ್ನಿಕಾ.ಎಂ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ -ಪ್ರಥಮ  ಸ್ಥಾನ ಪಡೆದುಕೊಂಡಿದ್ದು, 

ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಗುವಿಗೆ ಎದೆಹಾಲು ನೀಡಲು ತೆರಳುತ್ತಿದ್ದಾಗ ಶಿಕ್ಷಕಿ ಲಾರಿ ಢಿಕ್ಕಿ ಹೊಡೆದು ಸಾವು 

0

ಮಗುವಿಗೆ ಎದೆಹಾಲು ನೀಡಲು ತೆರಳುತ್ತಿದ್ದಾಗ ಶಿಕ್ಷಕಿಯೊಬ್ಬರು ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ. 

ಕಣ್ಣೂರು: ಮಗುವಿಗೆ ತನ್ನ ಎದೆ ಹಾಲುಣಿಸಲು ಮನೆಗೆ ಹೋಗುತ್ತಿದ್ದ ವೇಳೆ ಸ್ಕೂಟರ್‌ಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕೇರಳದ ಕಣ್ಣೂರು ಜಿಲ್ಲೆಯ ಮುರಿಂಗೋಡಿಯ ಸಜೀರ್ ಎಂಬುವರ ಪತ್ನಿ ರಶೀದಾ (30) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಅವಳು ಊಟ ಮಾಡಲು ಮತ್ತು ತನ್ನ ಒಂದೂವರೆ ತಿಂಗಳ ಮಗುವಿಗೆ ಹಾಲುಣಿಸಲು ತನ್ನ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಳು. ಪೆರವೂರ್‌ನ ಇರಿಟ್ಟಿ ರಸ್ತೆಯಲ್ಲಿ ಆಕೆಯ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದಿದೆ.

ಆಕೆಯ ಪತಿ ಸಜೀರ್ ತೊಂಡಿಯಿಲ್‌ನಲ್ಲಿ ಅಂಗಡಿ ನಡೆಸುತ್ತಿದ್ದರು. ಅವರಿಗೆ ಶಹದಾ ಫಾತಿಮಾ ಮತ್ತು ಹಿದ್ವಾ ಫಾತಿಮಾ ಎಂಬಇಬ್ಬರು ಮಕ್ಕಳು ಇದ್ದಾರೆ.

ತನ್ನ ಮಾಸಿಕ ಋತುಚಕ್ರದ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿ ರಾಜಕಾರಣಿಗೆ ಫೋನ್ ಕರೆ ಮಾಡಿದ ಯುವತಿ – ವೀಡಿಯೊ ವೈರಲ್

0

ಮಹಿಳೆಯೊಬ್ಬರು ತಮ್ಮ ಋತುಚಕ್ರದ ಬಗ್ಗೆ ಚರ್ಚಿಸಲು ಅಮೆರಿಕಾದ ರಾಜಕಾರಣಿಗೆ ಕರೆ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈ ಕ್ಲಿಪ್ ಅನ್ನು ದಾರಾ ಫಾಯೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಅಪರೂಪದ ನಡೆಯಲ್ಲಿ, ಮಹಿಳೆಯೊಬ್ಬಳು ತನ್ನ ಸ್ಥಳೀಯ ಕಾಂಗ್ರೆಸ್ಸಿಗನನ್ನು ತನ್ನ ಋತುಚಕ್ರದ ಬಗ್ಗೆ ಚರ್ಚಿಸಲು ಕರೆದಳು. ಹೌದು, ನೀವು ಸರಿಯಾಗಿ ಓದಿದ್ದೀರಿ. ಅದೇ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ದಾರಾ ಫಾಯೆ ಎಂಬ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಡೆಯಿಂದ ಪ್ರಶಂಸೆ ಗಳಿಸುತ್ತಿದ್ದಾರೆ.

ಇಂಡಿಪೆಂಡೆಂಟ್‌ನಲ್ಲಿನ ವರದಿಯ ಪ್ರಕಾರ, 2022 ರ ಮಧ್ಯಂತರ ಚುನಾವಣೆಗೆ ಮುಂಚಿತವಾಗಿ ಅವರು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಕಡೆಗೆ ಗಮನ ಸೆಳೆಯಲು ಬಯಸಿದ್ದರು. ದಾರಾ ಮೂಲತಃ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡರು ಮತ್ತು ನಂತರ ಅದು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ದಾರಿ ಮಾಡಿಕೊಟ್ಟಿತು.

ಕ್ಲಿಪ್‌ನಲ್ಲಿ, ಅವರು ಕ್ಯಾಲಿಫೋರ್ನಿಯಾದ 25 ನೇ ಜಿಲ್ಲೆಯ ರಿಪಬ್ಲಿಕನ್ ಕಾಂಗ್ರೆಸ್‌ನ ಮೈಕ್ ಗಾರ್ಸಿಯಾ ಅವರ ಕಚೇರಿಗೆ ಕರೆ ಮಾಡುವುದನ್ನು ಕಾಣಬಹುದು.

“ಹಾಯ್, ನನ್ನ ಹೆಸರು ದಾರಾ. “ನಾನು ನನ್ನ ಅವಧಿಯಲ್ಲಿ ಅಕ್ರಮಗಳನ್ನು ವರದಿ ಮಾಡಲು ಬಯಸಿದ್ದರಿಂದ ನಾನು ಕರೆ ಮಾಡುತ್ತಿದ್ದೆ. ಅಂಡೋತ್ಪತ್ತಿ ಸಮಯದಲ್ಲಿ ನಾನು ಸೆಳೆತವನ್ನು ಹೊಂದಿದ್ದೇನೆ” ಎಂದು ಅವರು ಹೇಳಿದರು.

“ಶ್ರೀ ಗಾರ್ಸಿಯಾ (ರಾಜಕಾರಣಿ), ನೀವು ಲೈಫ್ ಅಟ್ ಕಾನ್ಸೆಪ್ಶನ್ ಆಕ್ಟ್ ಅನ್ನು ಬೆಂಬಲಿಸುವ ಕಾರಣ ನನ್ನ ತಿಂಗಳ ಮುಟ್ಟಿನ ಸಮಸ್ಯೆಯ ಬಗ್ಗೆ ಆಸಕ್ತಿ ವಹಿಸುತ್ತೀರಿ ಎಂದು ನಾನು ಊಹಿಸಿದ್ದೇನೆ. ನೀವು ಬೋರ್ಡ್ ಪ್ರಮಾಣೀಕೃತ ಸ್ತ್ರೀರೋಗತಜ್ಞರಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ನೀವು ನನ್ನ ಈ ಕರೆಯನ್ನು ಬೆಂಬಲಿಸಿದರೆ, ನಿಮಗೆ ಸಾಕಷ್ಟು ಜ್ಞಾನವಿದೆ ಎಂದು ನಾನು ಭಾವಿಸುತ್ತೇನೆ” ಎಂದು ದಾರಾ ಕರೆಯಲ್ಲಿ ಹೇಳಿದ್ದಾಳೆ.

“ಆದ್ದರಿಂದ, ಯಾರಾದರೂ ನನ್ನ ಬಳಿಗೆ ಬರಬಹುದು ಎಂದು ನಾನು ಭಾವಿಸುತ್ತೇನೆ, ನಿರ್ದಿಷ್ಟವಾಗಿ ಮೈಕ್ ಗಾರ್ಸಿಯಾ, ಆದ್ದರಿಂದ ನಾವು ನನ್ನ ಮುಟ್ಟಿನ ಚಕ್ರ ಮತ್ತು ನನ್ನ ಅಂಡೋತ್ಪತ್ತಿ ಸೆಳೆತಗಳನ್ನು ಚರ್ಚಿಸಬಹುದು. ಧನ್ಯವಾದಗಳು, ಅವಳು ಕರೆಯನ್ನು ಕೊನೆಗೊಳಿಸುವಾಗ ಹೇಳಿದಳು.

“ಸಾಮಾಜಿಕ ಜಾಲತಾಣಗಳು ಕಲೆಗೆ ಶಕ್ತಿಯನ್ನು ತುಂಬಿದೆ” – ಶಾಸಕ ಹರೀಶ್ ಪೂಂಜ

ಯಕ್ಷಗಾನವು ಅನಾದಿಕಾಲದಿಂದಲೂ ಮನೋರಂಜನೆ ಮತ್ತು ಶಿಕ್ಷಣವನ್ನು ನೀಡುವ ಕಲಾಪ್ರಕಾರವಾಗಿ ಬೆಳೆದು ಬಂದಿದೆ. ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಗಾನ ಪ್ರದರ್ಶನಗಳ ವೀಕ್ಷಣೆಯ ಸಂಖ್ಯೆಯು ಹೆಚ್ಚಾಗಿದೆ. ಆದರೆ ಕಲಾಪ್ರದರ್ಶನಗಳ ಮೌಲ್ಯವು ಹೆಚ್ಚಾಗಿ  ಪರಿಣಾಮಕಾರಿಯಾಗ ಬೇಕಾದರೆ ಕಲಾವಿದರ ಮತ್ತು ಪ್ರೇಕ್ಷಕರ ನೇರ ಸಂವಹನ ಅಗತ್ಯವಿದೆ. ಈ ನಿಟ್ಟಿನಲ್ಲಿ ಐದು ದಿನಗಳ ತಾಳಮದ್ದಳೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಯಕ್ಷಗಾನ ಸಂಘವು ಉತ್ತಮವಾದ ಕಾರ್ಯ ನಡೆಸುತ್ತಿದ್ದು ಸರ್ವರೂ ಸಹಕಾರ ನೀಡಬೇಕೆಂದು ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ತಿಳಿಸಿದರು.     

 ಶ್ರೀಪಂಚ  ದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಆಶ್ರಯದಲ್ಲಿ ಶ್ರೀ ಪಂಚದುರ್ಗಾ ಭಜನ ಮಂಡಳಿ ಸಹಯೋಗದಲ್ಲಿ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾಸಂಘ ನೇತೃತ್ವದಲ್ಲಿ  ಜರಗುತ್ತಿರುವ ತಾಳಮದ್ದಳೆ ಪಂಚಾಹ 2022 ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೋಕ್ತೆಸರರಾದ ಕೆ.ಬಿ. ಹರಿಶ್ಚಂದ್ರ ಬಳ್ಳಾಲ್ ವಹಿಸಿದ್ದರು.

ಸಂಸ್ಮರಣೆ:  ದೇವಳದ ಪ್ರಧಾನ ಅರ್ಚಕರಾಗಿ ಮತ್ತು ಯಕ್ಷಗಾನ ಕಲಾವಿದರಾಗಿ ಜನಪ್ರಿಯ ರಾಗಿದ್ದ ಕೀರ್ತಿಶೇಷ ಕುಂಠಿನಿ ಕೃಷ್ಣ ಭಾಂಗಿಣ್ಣಾಯ ಅಗ್ರಸಾಲೆ ಇವರ ಸಂಸ್ಮರಣೆಯನ್ನು ಶಿಕ್ಷಕರಾದ ರಾಮಕೃಷ್ಣ ಭಟ್ ನಿನ್ನಿಕಲ್ಲು ಮಾಡಿದರು. ಸಂಸ್ಮರಣೆಯ ಅಂಗವಾಗಿ  ಕೃಷ್ಣ ಭಾಂಗಿಣ್ಣಾಯರ ಸುಪುತ್ರ ಅಶೋಕ ಕುಮಾರ್ ಭಾಂಗಿಣ್ಣಾಯರನ್ನು ಶಾಸಕ ಹರೀಶ್ ಪೂಂಜ ಮತ್ತು ಹರಿಶ್ಚಂದ್ರ ಬಲ್ಲಾಳ್ ಗೌರವಿಸಿದರು.

ತಾಳಮದ್ದಳೆ ಸಂಘಟಕರ ಪರವಾಗಿ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ ಕೋಡಿಯೆಲ್, ಬಾಸಮೆ ನಾರಾಯಣ ಭಟ್ ಮಾನ್ಯ ಶಾಸಕರನ್ನು ಗೌರವಿಸಿದರು.

ವೇದಿಕೆಯಲ್ಲಿ  ಯಕ್ಷ ಭಾರತಿ ಬೆಳ್ತಂಗಡಿ (ರಿ) ಸಂಸ್ಥೆಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಕೊಯ್ಯುರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣ ಭಟ್, ಕೊಯ್ಯೂರು ಪೆಡರಲ್ ಬ್ಯಾಂಕಿನ  ಸುಮಂತ್, ಸುಧಾಂಶು ಗೇರುಕಟ್ಟೆ ಉಪಸ್ಥಿತರಿದ್ದರು.

ದೇವಳದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಂಗಿಣ್ಣಾಯ ಸ್ವಾಗತಿಸಿ ಶಿಕ್ಷಕ ವಿಜಯಕುಮಾರ್.ಎಂ ಕೊಯ್ಯೂರು ಧನ್ಯವಾದ ಅರ್ಪಿಸಿದರು. ಉಪನ್ಯಾಸಕಿ ಕೆ.ಆರ್ ಸುವರ್ಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಉತ್ತರನ ಪೌರುಷ ತಾಳಮದ್ದಳೆ ಜರುಗಿತು. ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ ಹಿಮ್ಮೇಳದಲ್ಲಿ ಜನಾರ್ದನ ತೋಳ್ಪಾಡಿತ್ತಾಯ,  ರಾಮಪ್ರಕಾಶ್ ಕಲ್ಲೂರಾಯ, ಶ್ರೇಯಸ್ ಪಾಳಂದೆ ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಮಧೂರು ಮೋಹನ ಕಲ್ಲೂರಾಯ, ರಾಮಜೋಯಿಸ್ ಬೆಳ್ಳಾರೆ, ರಾಮಕೃಷ್ಣ ಭಟ್ ನಿನ್ನಿಕಲ್ಲು ಭಾಗವಹಿಸಿದ್ದರು.

ಯಕ್ಷಾಂಗಣ ದಶಮಾನೋತ್ಸವ – ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಐಕಳ ಹರೀಶ್ ಶೆಟ್ಟಿ ಆಯ್ಕೆ

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ದಶಮಾನ ಸಡಗರ ಇದೇ ನವೆಂಬರ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ’ ಪುರಸ್ಕಾರಕ್ಕೆ ಮುಂಬೈ ಉದ್ಯಮಿ ಮತ್ತು ಕಲಾಪೋಷಕ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. 

ಐಕಳ ಹರೀಶ್ ಶೆಟ್ಟಿ : ನಿರಂತರ ಸೇವಾರಾಧಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಐಕಳ ಹರೀಶ್ ಶೆಟ್ಟಿ ಮುಂಬೈ ನಗರದ ಪ್ರತಿಷ್ಠಿತ ಉದ್ಯಮಿ ಹಾಗೂ ಸಮಾಜಸೇವಕರು. ತಮ್ಮ ಶಾಲಾ ದಿನಗಳಿಂದಲೇ ಹುಟ್ಟೂರಿನಲ್ಲಿ ಉತ್ತಮ ಕ್ರೀಡಾಪಟುವಾಗಿ ದೇಹದಾರ್ಢ್ಯತೆ ಸ್ಪರ್ಧೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿ.ದಕ್ಷಿಣ ಕನ್ನಡ, ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಪ್ರಶಸ್ತಿಗಳನ್ನು ಪಡೆದವರು.

       ಮುಂಬೈ ಆಹಾರ್ ಉಪಾಧ್ಯಕ್ಷರಾಗಿ, ಸಾಯಿ ಸಂಧ್ಯಾ ಆರ್ಟ್ಸ್ ಗೌರವಾಧ್ಯಕ್ಷರಾಗಿ, ಮಾತೃಭೂಮಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಎಸ್ಎಂಎಸ್ ಕಾಲೇಜು ಕಟ್ಟಡ ಸಮಿತಿ ಕಾರ್ಯಾಧ್ಯಕ್ಷರಾಗಿ ದುಡಿದವರು. ಬಂಟರ ಸಂಘದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷರಾಗಿ ಅಖಿಲ ಭಾರತ ಮಟ್ಟದ ಕ್ರೀಡೋತ್ಸವ ನಡೆಸಿದ್ದಾರೆ. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷರಾಗಿ 1500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಒಂದು ಕೋಟಿಗೂ ಮಿಕ್ಕಿದ ಶಾಶ್ವತ ನಿಧಿ ಸ್ಥಾಪನೆ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆರ್ಥಿಕ ಸಹಾಯ, ಬಟ್ಟೆ ಬರೆ ವಿತರಣೆ ಇತ್ಯಾದಿ ಅವರ ಸಮಾಜ ಸೇವೆಯಲ್ಲಿ ಕೆಲವು.

             ಅಪ್ಪಟ ದೈವಭಕ್ತರಾದ ಐಕಳರು ಶ್ರೀ ಕ್ಷೇತ್ರ ಬಪ್ಪನಾಡು ಮತ್ತು ಕಟೀಲು ದೇವಳದ ಮಹಾದ್ವಾರ ನಿರ್ಮಾಣ, ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ಕಾರ್ಯಭಾರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮ ಕಳಶೋತ್ಸವದಲ್ಲಿ ಮುಂಬೈ ಸಮಿತಿ ಅಧ್ಯಕ್ಷರಾಗಿ ಶ್ರೀದೇವಿಗೆ ಚಿನ್ನದ ಕಳಶ ಸಮರ್ಪಣೆ, ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ, ಜಾತಿ ಮತ ಭೇದವಿಲ್ಲದೆ ಸಂತ್ರಸ್ತರಿಗೆ ಸಹಾಯ ಹಸ್ತ ಇತ್ಯಾದಿಗಳಿಂದ ಅವರು ಪಡೆದ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಸಾರ್ಥಕವೆನಿಸಿದೆ.

           ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಎರಡು ವರ್ಷಗಳಿಂದ ವಿವಿಧ ಸಮಾಜದ ಬಡವರಿಗೆ, ರೋಗಿಗಳಿಗೆ, ವಸತಿ ರಹಿತರಿಗೆ ಮತ್ತು ಶಿಕ್ಷಣಾರ್ಥಿಗಳಿಗೆ ಸುಮಾರು 11 ಕೋಟಿ ರೂಪಾಯಿಯ ಸಮಾಜ ಸೇವಾ ಕಾರ್ಯಗಳ ಮೂಲಕ ಐಕಳ ಹರೀಶ್ ಶೆಟ್ಟಿ ಅವರು ಎಲ್ಲರಿಗೂ ಮಾದರಿಯೆನಿಸಿ ಗಮನ ಸೆಳೆದಿದ್ದಾರೆ. ವಿವಿಧ ರಂಗದ ಕಲಾವಿದರನ್ನು ಪ್ರೋತ್ಸಾಹಿಸುವುದರೊಂದಿಗೆ ಕಲೆ ಹಾಗೂ ಕಲಾ ಸಂಸ್ಥೆಗಳನ್ನು ನಿರಂತರ ಪೋಷಿಸುತ್ತಿರುವ ಐಕಳ ಹರೀಶ್ ಶೆಟ್ಟರಿಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸಮ್ಮಾನಗಳು ಲಭಿಸಿವೆ. ಅವರ ಸಾಧನೆಯ ಕುರಿತಾಗಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಸಾರ್ವಭೌಮ’ ಗೌರವ ಗ್ರಂಥ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.

ಪ್ರಶಸ್ತಿ ಪ್ರದಾನ: ಇದೇ ನವಂಬರ 21ರಂದು ಸಾಯಂಕಾಲ ಜರಗುವ ಯಕ್ಷಾಂಗಣದ ದಶಮಾನ ಸಡಗರ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ ಅವರು ಐಕಳ ಹರೀಶ್ ಶೆಟ್ಟರಿಗೆ ದಶಮಾನೋತ್ಸವ ಸಂಭ್ರಮದ ವಿಶೇಷ ‘ಯಕ್ಷಾಂಗಣ  ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು.

ಸಂಸ್ಥೆಯ ಗೌರವಾಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್, ಎ. ಸದಾನಂದ ಶೆಟ್ಟಿ, ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಶಶಿಧರ ಶೆಟ್ಟಿ ಬರೋಡ, ವಿ. ಕರುಣಾಕರ, ಕೆ.ಕೆ.ಶೆಟ್ಟಿ ಅಹಮದ್ ನಗರ ಮೊದಲಾದ ಗಣ್ಯರು ಅತಿಥಿಗಳಾಗಿರುವರು.

ಬಳಿಕ ಹತ್ತನೇ ವರ್ಷದ ನುಡಿ ಹಬ್ಬವಾಗಿ ನವೆಂಬರ 27ರವರೆಗೆ ‘ಸಪ್ತ ವಿಜಯ’ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸರಣಿ ತಾಳಮದ್ದಳೆ, ಸನ್ಮಾನ ಮತ್ತು ಸಂಸ್ಮರಣ ಕಾರ್ಯಕ್ರಮಗಳು ಜರಗಲಿವೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಶಂಬರ 11, ಭಾನುವಾರದಂದು ಉಪ್ಪಿನಂಗಡಿ ಸಮೀಪದ ‘ಸುಧಾಮ’ದಲ್ಲಿ ಹೇಮಂತ ಹಬ್ಬ – ತಾಳಮದ್ದಳೆ, ಯಕ್ಷಗಾನ ಬಯಲಾಟ

ನಾಡಿದ್ದು ದಶಂಬರ 11,ಭಾನುವಾರದಂದು  ಉಪ್ಪಿನಂಗಡಿ ಸಮೀಪದ ಡಾ.ತಾಳ್ತಜೆ ವಸಂತಕುಮಾರ ಅವರ ಮನೆ ಸುಧಾಮದಲ್ಲಿ ವಸುಧಾ ಪ್ರತಿಷ್ಟಾನದ ವತಿಯಿಂದ ನಡೆಸಲ್ಪಡುವ ಹೇಮಂತ ಹಬ್ಬ ನಡೆಯಲಿದೆ.

ಡಾ.ವಿವೇಕ ರೈಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ,ಮಹಿಳಾ ತಾಳಮದ್ದಳೆ, ಯಕ್ಷಗಾನ ಬಯಲಾಟ ಹೀಗೆ ಆ ದಿನ ಅಪರಾಹ್ನದಿಂದ ರಾತ್ರಿ 9 ಗಂಟೆ ತನಕ ವಿವಿಧ ಕಾರ್ಯಕ್ರಮಗಳು ಉಪಾಹಾರ, ಭೋಜನದ ಜೊತೆಜೊತೆಯಲ್ಲಿ ಸಂಪನ್ನಗೊಳ್ಳಲಿವೆ.

ಆ ದಿನವನ್ನು ಹೇಮಂತ ಹಬ್ಬಕ್ಕಾಗಿ ಮೀಸಲಿಡಿ. ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ವಸುಧಾ ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ ಕಜೆಯವರು ಕೋರಿದ್ದಾರೆ.

ಅಂಬಿಕಾ ವಿದ್ಯಾರ್ಥಿಗಳಿಗೆ ಬೆಳ್ಳಿ ಹಾಗೂ ಕಂಚಿನ ಪದಕ

ಅಂಬಿಕಾ ವಿದ್ಯಾರ್ಥಿಗಳಿಗೆ ಬೆಳ್ಳಿ ಹಾಗೂ ಕಂಚಿನ ಪದಕ

ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಿ.ಬಿ.ಎಸ್.ಇ ಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ INSEF-2022 ವಿಜ್ಞಾನ ಮೇಳದಲ್ಲಿ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿಗಳಾದ ಅಭಿನವ, ಮನಸ್ವಿತ್ ಬೆಳ್ಳಿ ಪದಕವನ್ನು,

ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಅರುಂಧತಿ ಎಲ್ ಆಚಾರ್ಯ, ಖುಷಿ ಇವರು ಕಂಚಿನ ಪದಕವನ್ನು ಪಡೆದಿರುತ್ತಾರೆ.

ರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಯುಕ್ತ ಶ್ರೀರಾಮ ಸಭಾಭವನದಲ್ಲಿ ಕೂದಲು ದಾನ ಸಮಾರಂಭ

ಪುತ್ತೂರು: ಹದತಪ್ಪಿದ ಆಹಾರಪದ್ದತಿ, ಪ್ಲಾಸ್ಟಿಕ್ ಸಹಿತ ರಾಸಾಯನಿಕಗಳ ಅತಿಯಾದ ಬಳಕೆ, ಮಾದಕ ದ್ರವ್ಯಗಳ ವ್ಯಸನ ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಎಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ಕಾರ್ತಿಕ್.ಕೆ.ಎಸ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯೂತ್ ರೆಡ್ ಕ್ರಾಸ್, ಪೇರೆಂಟ್ ರಿಲೇಶನ್ ಸೆಲ್, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಹಾಗೂ ಸೀಡ್ಸ್ ಆಫ್ ಹೋಪ್ ಮುಳಿಯ ಫೌಂಡೇಶನ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಯುಕ್ತ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಕೂದಲು ದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಕ್ಯಾನ್ಸರ್ ಎಂದಾಕ್ಷಣ ಧೃತಿಗೆಡುವ ಅಗತ್ಯವಿಲ್ಲ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣ ಗುಣಪಡಿಸಬಹುದು ಎಂದರು. ಅದಕ್ಕಾಗಿ ನಿಯಮಿತವಾದ ಆರೋಗ್ಯ ತಪಾಸಣೆ ಅಗತ್ಯ ಎಂದರು. ಯಾವುದೇ ರೋಗವಾದರೂ ಸ್ವಯಂ ವೈದ್ಯ ಪದ್ದತಿಯನ್ನು ಅಳವಡಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ನುಡಿದರು.


ಸೀಡ್ಸ್ ಆಫ್ ಹೋಪ್ ಸಂಸ್ಥೆಯ ಇಶಾ ಸುಲೋಚನ ಮುಳಿಯ ಹಾಗೂ ಕಾವ್ಯ ಶೆಟ್ಟಿ ಕೂದಲು ದಾನದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕ್ಯಾನ್ಸರ್ ರೋಗಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸದಲ್ಲಿ ಸಂಸ್ಥೆಯು ನಿರತವಾಗಿದೆ ಎಂದು ನುಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಕೂದಲು ದಾನ ಮಾಡುವ ವಿದ್ಯಾರ್ಥಿಗಳ ನಿರ್ಧಾರವನ್ನು ಶ್ಲಾಘಿಸಿದರು. ಮಾನವೀಯ ಮೌಲ್ಯಗಳೇ ಮರೆತುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜಕ್ಕೆ ಸಹಕಾರಿಯಾಗುವ ಕೆಲಸದಲ್ಲಿ ನಿರತರಾಗಬೇಕು ಎಂದರು.


ಪ್ರಾ0ಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.


ಇಂಜಿನಿಯರಿ0ಗ್ ಕಾಲೇಜಿನ 3 ಉಪನ್ಯಾಸಕರು ಮತ್ತು 10 ವಿದ್ಯಾರ್ಥಿನಿಯರು ಹಾಗೂ ವಿವೇಕಾನಂದ ಪದವಿ ಕಾಲೇಜಿನ 3 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದರು.


ಐಎಸ್‌ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಾಸ್ತಾವನೆಗೈದರು. ವಿದ್ಯಾರ್ಥಿಗಳಾದ ಶ್ರೀನಿಧಿ ಸ್ವಾಗತಿಸಿ,
ಸ್ನೇಹಾ ವಂದಿಸಿದರು. ಸುಪ್ರೀತ್.ಜಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.