Sunday, March 15, 2026
Home Blog Page 114

ಇಂದು ಆಟ ಎಲ್ಲೆಲ್ಲಿ? (09-12-2022, ಶುಕ್ರವಾರ)

ಮೇಳಗಳ ಇಂದಿನ (09.12.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಇಡೂರು ಕಾಡಿನಕಲ್ಲು – ಅಮರವಾಹಿನಿ

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಕಾನ ರಸ್ತೆ ಪಣಿಯೂರು ಉಚ್ಚಿಲ ಕಾಪು 

ಕಟೀಲು ಮೂರನೇ ಮೇಳ== MSEZ ಕಾಲನಿ, 62ನೇ ತೋಕೂರು ಜೋಕಟ್ಟೆ 

ಕಟೀಲು ನಾಲ್ಕನೇ ಮೇಳ  == ಶ್ರೀಮಾತಾ, ಮಾಧವ ಪೈ ಪಾಲಿಟೆಕ್ನಿಕ್ ಬಳಿ,  ಈಶ್ವರನಗರ ಮಣಿಪಾಲ 

ಕಟೀಲು ಐದನೇ ಮೇಳ == ತಿರುವಾಲೆ ಇರಾ ಬಂಟ್ವಾಳ 

ಕಟೀಲು ಆರನೇ ಮೇಳ == ಹೋಡಿಮುಂಡೇವು ಮನೆ ಮಾಂಟ್ರಾಡಿ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಮಂಜುನಾಥ ಕೃಪಾ ಆಲೂರು ಹರ್ಕೂರು 

ಮಂದಾರ್ತಿ ಮೂರನೇ ಮೇಳ  == ಹೋರ್ವರಮನೆ ಯಡಾಲಬೆಟ್ಟು ಮೊಳಹಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಅಲೆವೂರು 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಭಾರತ ಜನನಿ

ಶ್ರೀ ಸಾಲಿಗ್ರಾಮ ಮೇಳ == ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜಾತ್ರೆ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜಾತ್ರೆ – ಪಾವನ ತುಳಸಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಶಿವಕೃಪಾ ನಿಲಯ ನೂಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶಿವಕೃಪಾ ನಿಲಯ ನೂಜಾಡಿ 

ಶ್ರೀ ಪಾವಂಜೆ ಮೇಳ == ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಟೀಲು ಎಕ್ಕಾರು ಘಟಕ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ರಿಪ್ಪನ್ ಪೇಟೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಸಾಲಿಗ್ರಾಮ ರಥಬೀದಿ 

ಶ್ರೀ ಸೌಕೂರು ಮೇಳ == ದೇವಲ್ಕುಂದ ಮೇಲ್ಮನೆ – ಪೌರಾಣಿಕ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಹಳೆಯಂಗಡಿ ಹೋಟೆಲ್ ಪೂಜಾ ಪರಿವಾರ್ ಮುಂಭಾಗ – ನಾಗತಂಬಿಲ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕರ್ಜೆ ಪೇಟೆ – ಮಂತ್ರಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಪೆರ್ಡೂರು ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ – ದ್ವಿತೀಯ ಸೇವೆ ಆಟ 

ಶ್ರೀ ಶನೀಶ್ವರ ಮೇಳ == ವೀರ ಹನುಮಾನ್ ಮತ್ತು ಶನೀಶ್ವರ ದೇವಸ್ಥಾನ ವಠಾರ ನಾಗೂರು

ಶ್ರೀ ಸಿಗಂದೂರು ಮೇಳ == ತಾಳಗುಪ್ಪ 

ಶ್ರೀ ನೀಲಾವರ ಮೇಳ  == ತೆಕ್ಕಟ್ಟೆ ಜನಪ್ರಿಯ ಕಾಂಪ್ಲೆಕ್ಸ್ 

ಶ್ರೀ ಹಟ್ಟಿಯಂಗಡಿ ಮೇಳ ==  ಸಂತೆಕಟ್ಟೆ ಕಳ್ತೂರು – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ನಂಚಾರು – ಗಗನ ತಾರೆ 

ಶ್ರೀ ಬೋಳಂಬಳ್ಳಿ ಮೇಳ== ಕೂಡ್ಲಿ ದುರ್ಗಾಂಬಾ ಅಮ್ಮನವರ ದೇವಸ್ಥಾನ ರಂಗನಕೆರೆ – ಶಿವದುರ್ಗಾ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕೃಷ್ಣಾಪುರ ಕಾಟಿಪಳ್ಳ 9ನೇ ಬ್ಲಾಕ್ – ಶ್ರೀ ಭಗವತೀ ಮಹಾತ್ಮೆ 

ಶ್ರೀ ಗೆಜ್ಜೆಗಿರಿ ಮೇಳ == ಶ್ರೀ ಕ್ಷೇತ್ರ ಕಟೀಲು – ವಿಶ್ವವ್ಯಾಪಕ ನಾಮ ಶ್ರೀರಾಮ 

ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು. 

ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು – ಮಲ್ಲ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ

ಯಕ್ಷತೂಣೀರ ಸಂಪ್ರತಿಷ್ಠಾನ, ಕೋಟೂರು ಇವರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ಸೇವೆ

ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಆಶ್ರಯದಲ್ಲಿ  ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೇವಾರೂಪವಾಗಿ ಅಜಪುರದ ಸುಬ್ಬ ವಿರಚಿತ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ ಇವರಿಂದ ಪರಿಷ್ಕರಿಸಲ್ಪಟ್ಟ ಪಾರಿಜಾತ ಪ್ರಸಂಗದ ಭಾಗವಾದ “ನರಕಾಸುರ ಮೋಕ್ಷ” ಕಾಲಮಿತಿಯ ಯಕ್ಷಗಾನ ಬಯಲಾಟವು ಜರಗಿತು. 

ಪ್ರತಿಷ್ಠಾನದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ತಲ್ಪಣಾಜೆ ಸಹೋದರರಾದ ವೆಂಕಟ್ರಮಣ ಭಟ್ ಹಾಗೂ ಶಿವಶಂಕರ ಭಟ್, ಹಿಮ್ಮೇಳದಲ್ಲಿ ಅಡ್ಕ ಕೃಷ್ಣ ಭಟ್, ಅಂಬೆಮೂಲೆ ಶಿವಶಂಕರ ಭಟ್, ಬೇಂಗ್ರೋಡಿ ಲಕ್ಷ್ಮೀಶ, ಗಿರೀಶ್ ಕೋಳಿಯಡ್ಕ ಸಹಕರಿಸಿದರು. 

ಪಾತ್ರವರ್ಗದಲ್ಲಿ ಅಡ್ಕ ಸುಬ್ರಹ್ಮಣ್ಯ ಭಟ್, ಡಾ. ಶಿವಕುಮಾರ್ ಅಡ್ಕ, ಧರ್ಮೇಂದ್ರ ಮಾಸ್ಟರ್ ಕೂಡ್ಲು, ಮಹೇಶ್ ಎಡನೀರು, ಪೃಥ್ವಿ ಪೆರುವೋಡಿ, ನಿರಂಜನ ಬಳ್ಳುಳ್ಳಾಯ ಮುಳಿಯಾರು, ಗುರುಪ್ರಸಾದ್ ಮುಳಿಯಾರು, ಶರತ್ ರಾವ್ ಕಾರಡ್ಕ,ಯತಿರಾಜ್ ಅಮಕ್ಕಾರು, ಮನೀಶ್ ಮುಳಿಯಾರು, ದೀಕ್ಷಾ ಅಂಬುಕುಂಜೆ, ಯಶಸ್ ಮಜಕ್ಕಾರು, ಅದ್ವೈತ್ ಅಗ್ನಿಹೋತ್ರಿ ಹಾಗೂ ಚೈತ್ರ ಅಮಕ್ಕಾರು ಭಾಗವಹಿಸಿದರು. 

ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದಲ್ಲಿ ರಾಕೇಶ್ ಗೋಳಿಯಡ್ಕ ಹಾಗೂ ಬಳಗದವರು ಸಹಕರಿಸಿದರು.

ವೇದಿಕೆ, ಧ್ವನಿ ಹಾಗೂ ಬೆಳಕಿನ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಆಶ್ರಯದಲ್ಲಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿಯವರು ಒದಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಗೋವಿಂದ ಬಳ್ಳಮೂಲೆ ಸ್ವಾಗತಿಸಿ ಮುರಳಿಕೃಷ್ಣ ಸ್ಕಂದ ಧನ್ಯವಾದವಿತ್ತರು.

ಧರ್ಮಸ್ಥಳ, ಕಟೀಲು, ಹನುಮಗಿರಿ ಮೇಳ – ಇಂದು ಆಟ ಎಲ್ಲೆಲ್ಲಿ?

ಶ್ರೀ ಧರ್ಮಸ್ಥಳ ಮೇಳ == ಪಡುಕೋಣೆ ಹಡವು – ಶ್ರೀಕೃಷ್ಣ ಪಾರಿಜಾತ, ನರಕಾಸುರ, ಅಗ್ರಪೂಜೆ 

ಕಟೀಲು ಒಂದನೇ ಮೇಳ == ನಡ್ಯೋಡಿಗುತ್ತು ದಂಡೆಗೋಳಿ ವಾಮದಪದವು – ರುಕ್ಮಿಣಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ 

ಕಟೀಲು ಎರಡನೇ ಮೇಳ == ದುರ್ಗಾಕೃಪಾ ಕೊಲತರು ಮುಚ್ಚೂರು ನಿಡ್ಡೋಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಹೊಸಮನೆ ಕೇಪುಲು ಪಾಲಡ್ಕ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀ ಗಾಯತ್ರಿ ಮಹಾತ್ಮೆ  

ಕಟೀಲು ಐದನೇ ಮೇಳ == ದುರ್ಗಾ ಕಾಂಪ್ಲೆಕ್ಸ್ ಬಳಿ ಪಾವೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಶ್ರೀಕೃಷ್ಣ ಗಾರುಡಿ, ವೀರವರ್ಮ ಕಾಳಗ 

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ನಮೋ ರಘುವಂಶದೀಪ 

ಯಕ್ಷಗಾನ ಕಲೆಯ ಪೋಷಕ, ನಿರ್ದೇಶಕ ಟಿ, ಶ್ಯಾಮ ಭಟ್ – ಜನ್ಮದಿನದ ಶುಭಾಶಯಗಳು 

ಯಕ್ಷಗಾನ ಕಲೆಯ ಪೋಷಕ, ನಿರ್ದೇಶಕ ಟಿ, ಶ್ಯಾಮ ಭಟ್ ಅವರನ್ನು ತಿಳಿಯದವರು ಯಕ್ಷಗಾನ ಲೋಕದಲ್ಲಿ  ಇರಲಾರರು. ಆದುದರಿಂದ ಅವರನ್ನು ಪರಿಚಯ ಮಾಡುವುದು ಇಲ್ಲಿ ಅಪ್ರಸ್ತುತವೆಂದು ಭಾವಿಸುತ್ತೇನೆ. ಯಕ್ಷಗಾನ ಮತ್ತು ಅವರಿಗೆ ಅವಿನಾಭಾವ ಸಂಬಂಧ. ಇಂದು ಅವರ ಜನ್ಮದಿನ.  ಆದ ಕಾರಣ ಅವರ ವಿಶೇಷತೆಗಳಲ್ಲಿ ಕೆಲವನ್ನು ತಿಳಿದುಕೊಳ್ಳೋಣ. 

ಡಾ. ಶ್ಯಾಮ್ ಭಟ್ ಅವರ ವಿಶೇಷತೆಗಳು ಮತ್ತು ವಿಸ್ಮಯಗಳು:

ಕಲೆಯ ಸೆಳೆತ ಎನ್ನುವುದು ಹಾಗೆಯೇ. ಅದೊಂದು ಭಾವದೊಳಗಿನ ತುಡಿತ. ಪಂಡಿತ, ಪಾಮರ ಅಥವಾ ಬಡವ, ಬಲ್ಲಿದನೆಂಬ ಭೇದಭಾವವನ್ನು ತೋರದೆ ಕಲೆಯು ಶ್ರದ್ಧೆಯನ್ನು ತೋರಿದವನಿಗೆ ಒಲಿಯುತ್ತದೆ. ಎಷ್ಟೇ ಕಲಿತು ವಿದ್ಯಾವಂತನಾಗಿ ಉನ್ನತ ಹುದ್ದೆಯಲ್ಲಿದ್ದವರಲ್ಲಿ ಇಂದ ಹಲವಾರು ಮಂದಿ ತಾನೊಂದು ಕಲೆಯ ಜೊತೆಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಸೆಳೆತ ಸಂಗೀತಾದಿ ಕಲೆಗಳಿವೆ.

ಹೆಚ್ಚಿನ ಕಲೆಗಳಿಗೆ ಮೂಲ ಸಂಗೀತವಾದರೂ ಸಂಗೀತವಲ್ಲದ  ಚಿತ್ರಕಲೆ, ಶಿಲ್ಪಕಲೆ ಮುಂತಾದ ಇತರ ಕಲೆಗಳೂ ಇವೆ. ಕಲೆಗಳ ಮೇಲಿನ ವ್ಯಾಮೋಹ ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಕಷ್ಟಕರ. ಅದು ಕೇವಲ ಮನರಂಜನೆಯೂ ಹವ್ಯಾಸವೋ ಜನಪ್ರಿಯತೆಯನ್ನು ಪಡೆಯುವ ಹಂಬಲವೋ ಎಂದು ಹೇಳುವ ಹಾಗಿಲ್ಲ. ಕಲೆಯ ತುಡಿತ ಮಿಡಿತಗಳು ಮನುಷ್ಯನ ರಕ್ತದ ಕಣಕಣದಲ್ಲಿಯೂ ಅಡಗಿರಬಹುದೇನೋ ಎಂಬ ಭಾವನೆಗಳು ಮೂಡಿದರೆ ಅಚ್ಚರಿಯೇನಿಲ್ಲ.  

ಕಲೆ ಎಂಬುದು ಮಾನವನಿಗೆ ಅದರಲ್ಲೂ ಭಾರತೀಯರಿಗೆ ಮಾನಸಿಕ ನೆಮ್ಮದಿಯನ್ನು ಕೊಡುತ್ತದೆ. ದಿನನಿತ್ಯದ ಕರ್ತವ್ಯದ ನಿಬಿಡ ಜಂಜಾಟಗಳಿಂದ ಒಂದರೆಕ್ಷಣ ಬದಲಾವಣೆಯ ಶಾಂತಿಯನ್ನು ಕೊಡುತ್ತದೆ. ಆದ ಕಾರಣ ಎಷ್ಟೋ ಉನ್ನತ ಉದ್ಯೋಗಸ್ಥರು ಕಲಾಸೇವೆಯಲ್ಲಿ ನಿರತರಾಗಿದ್ದುದನ್ನು ನಾವು ಕಾಣುತ್ತೇವೆ. ರಾಜಕಾರಣಿಗಳು, ವಿಜ್ಞಾನಿಗಳು, ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಭಾರತೀಯ ಆಡಳಿತ ಸೇವೆಯ(ಇಂಡಿಯನ್ ಸಿವಿಲ್ ಸರ್ವಿಸ್) ಉನ್ನತ ಉದ್ಯೋಗಸ್ಥರು ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಆದರೆ ಕಲೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದುದು ಮಾತ್ರವಲ್ಲದೆ ಅಂತಹ ಕಲೆಗಳ ಏಳಿಗೆಗಾಗಿ ನಿರಂತರ ಪ್ರೋತ್ಸಾಹವನ್ನು ಕೊಡುತ್ತಾ ಜೊತೆಗೆ ಅದರ ಬಗ್ಗೆ ನಿರ್ದಿಷ್ಟವಾದ ನಿರ್ದೇಶನವನ್ನೂ ಕೊಡಬಲ್ಲ ಮಹಾನುಭಾವರುಗಳಿರುವುದು ಅಪರೂಪ. ಕೇವಲ ಬೆರಳೆಣಿಕೆಯಲ್ಲಿ ಮಾತ್ರವೇ ಅಂತಹವರು ಕಾಣಸಿಗಬಹುದಷ್ಟೆ. ಅವರೊಲ್ಲಬ್ಬರು ಡಾ. ಟಿ. ಶ್ಯಾಮ ಭಟ್.  

ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಕರ್ನಾಟಕ ಲೋಕಸೇವಾ ಆಯುಕ್ತರೇ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಶ್ಯಾಮ್ ಭಟ್ಟರ ಕಲಾಪ್ರೀತಿ ಅನನ್ಯವಾದದ್ದು. ಎಷ್ಟೋ ಕಲಾವಿದರಿಗೆ ಮತ್ತು ಕಲಾಪ್ರದರ್ಶನಗಳಿಗೆ ಸಹಾಯಹಸ್ತ ನೀಡಿದುದು ಇವರ ಹೆಚ್ಚುಗಾರಿಕೆ. ಹಾಗೆಂದು ಅದನ್ನು ಅವರು ಎಂದೂ ಹೇಳಿಕೊಂಡಿಲ್ಲ. ತನ್ನ ಕರ್ತವ್ಯದ ಒಂದು ಭಾಗವೆಂದೇ ಭಾವಿಸಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಮತ್ತು ಸಂಪಾಜೆ ಯಕ್ಷೋತ್ಸವದ ಮುಖಾಂತರ ಅವರು ನಡೆಸಿದ ಕಲಾಸೇವೆ ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಕಲಾವಿದರು ಅನಾವರತವೂ ನೆನಪಿನಲ್ಲಿಡಬೇಕಾದುದು. ಎಲ್ಲರಿಗೂ ತಿಳಿದ ವಿಚಾರವಾದ್ದರಿಂದ ಅದರ ಬಗ್ಗೆ ಮತ್ತೆ ಮತ್ತೆ ನಾನು ಇಲ್ಲಿ ಉಲ್ಲೇಖಿಸಲು ಹೋಗುವುದಿಲ್ಲ.

ಆದರೆ ಎಲ್ಲರಿಗೂ ತಿಳಿದಿರದ ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ತಿಳಿದಿರುವ ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಡಾ. ಶ್ಯಾಮ ಭಟ್ಟರು ಕೇವಲ ಯಕ್ಷಗಾನದ  ಪ್ರೋತ್ಸಾಹಕ ಅಥವಾ ಯಕ್ಷಗಾನದ ಪ್ರೇಕ್ಷಕ, ಆರಾಧಕ ಎಂದು ತಿಳಿದುಕೊಂಡರೆ ಅದು ನಮ್ಮ ಅಜ್ಞಾನ ಎಂದು ಹೇಳಬಹುದು. ಅವರೊಬ್ಬ ಯಕ್ಷಗಾನದ ಶ್ರೇಷ್ಠ ನಿರ್ದೇಶಕ ಎಂದು ತಿಳಿದರೆ ಹಲವರಿಗೆ ಆಶ್ಚರ್ಯವಾಗಬಹುದು. ಪ್ರದರ್ಶನಗಳಲ್ಲಿ ಕೆಲವೊಮ್ಮೆ ಕಲಾವಿದರಿಂದಲೋ ಅಥವಾ ಇತರರಿಂದಲೋ ತಪ್ಪುಗಳು ಘಟಿಸಿ ಹೋದಾಗ ಅವರೊಳಗಿನ ನಿರ್ದೇಶಕ ಜಾಗೃತನಾಗುತ್ತಾನೆ.

ಹೀಗೆಯೇ ಪ್ರದರ್ಶನ ನಡೆಯಬೇಕೆಂದು ಅವರು ನಿರ್ದೇಶಿಸಬಲ್ಲರು. ಆಶ್ಚರ್ಯವೆಂದರೆ ಅವರಿಗೆ ಹೆಚ್ಚಿನ ಎಲ್ಲಾ ಪ್ರಸಂಗಗಳ ನಡೆ ಗೊತ್ತಿದೆ. ಯಾವ ದೃಶ್ಯದ ನಂತರ ಮುಂದಿನ ದೃಶ್ಯ ಎಂದು ಕರಾರುವಾಕ್ಕಾಗಿ ಹೇಳುತ್ತಾರೆ. ಮಾತ್ರವಲ್ಲದೆ ಸಮಯದ ಅಭಾವವಿದ್ದಾಗ ಯಾವ ದೃಶ್ಯವನ್ನು ಬಿಡಬಹುದು ಯಾವುದನ್ನೂ ಪ್ರದರ್ಶಿಸಬೇಕೆಂದು ಭಾಗವತರಿಗೆ ತಿಳಿಹೇಳಬಲ್ಲರು.

ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರಿಗೆ ಹೆಚ್ಚಿನೆಲ್ಲಾ ಯಕ್ಷಗಾನ ಪ್ರಸಂಗಗಳ ನಡೆ ಗೊತ್ತಿದೆ. ಇತ್ತೀಚಿಗೆ ಪ್ರದರ್ಶನಗಳನ್ನು ಕಾಣದೆ ಮೂಲೆಯಲ್ಲಿ ಬಿದ್ದ ಪ್ರಸಂಗಗಳ ನಡೆ ಹೇಗಿರಬೇಕೆಂದು ಅವರು ನಿರ್ದೇಶನ ಮಾಡಿದ್ದೂ ಇದೆಯಂತೆ. ಅಂತಹಾ ಚಾಲ್ತಿಯಲ್ಲಿಲ್ಲದ ಪ್ರಸಂಗಗಳೂ ಅದರ ಪದ್ಯಗಳೂ ಅವರಿಗೆ ಕಂಠಪಾಠ! ಇಂತಹ ಪ್ರಸಂಗಗಲ್ಲಿ ಇಂತದ್ದೇ ಪದ್ಯಗಳನ್ನು ಹೇಳಬೇಕೆಂದೂ ಇಂತಹುದೇ ಪದ್ಯಗಳನ್ನು ಬಿಡಬೇಕೆಂದೂ ಕರಾರುವಕ್ಕಾಗಿ ಅವರು ನಿರ್ದೇಶಿಸುತ್ತಾರೆ ಎಂದು ಹೇಳುವುದನ್ನೂ ಕೇಳಿದ್ದೇನೆ.

ಕಥೆಯಲ್ಲಿ ಲೋಪವಾದರೆ, ಮಾತಿನಲ್ಲಿ ಆಭಾಸಗಳು ಉಂಟಾದರೆ, ದೃಶ್ಯ ಸಂಯೋಜನೆಯಲ್ಲಿ ತಪ್ಪುಗಳು ಸಂಭವಿಸಿದರೆ ಅವರದನ್ನು ತಿದ್ದಿ ತಿಳಿಹೇಳಬಲ್ಲರು. ಆದುದರಿಂದ ಡಾ. ಶ್ಯಾಮ್ ಭಟ್ಟರು ಕೇವಲ ಒಬ್ಬ ಕಲಾಪೋಷಕ, ಕಲಾಪ್ರೇಮಿಯಲ್ಲ. ಬದಲಾಗಿ ಯಕ್ಷಗಾನದ ಶ್ರೇಷ್ಠ ನಿರ್ದೇಶಕರೂ ಹೌದು. ಆದುದರಿಂದ ಶ್ರೇಷ್ಠ ವಿದ್ವಾಂಸರೂ ಕಲಾ ನಿರ್ದೇಶಕರೂ ಆದ ಅವರಿಂದ ಈ ಕಲಾಜಗತ್ತು ಬಹಳಷ್ಟು ಶ್ರೀಮಂತವಾಗಿದೆ. 

ಟಿ. ಶ್ಯಾಮ್ ಭಟ್ಟರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 

ಬರಹ: ಮನಮೋಹನ್ ವಿ. ಎಸ್. 

ಯಾವುದೇ ಆರ್ಥಿಕ ವ್ಯವಹಾರಕ್ಕೆ ಖಾತೆ ತೆರೆಯುವುದು ಅಗತ್ಯ – ಬ್ಯಾಂಕಿಂಗ್ ಬಗೆಗೆ ಉಪನ್ಯಾಸ

ಪುತ್ತೂರು: ಆಧುನಿಕ ದಿನಮಾನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಅತ್ಯಂತ ಸುಲಭಸಾಧ್ಯವೆನಿಸಿದೆ. ಬೆರಳ ತುದಿಯಲ್ಲಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಎಟಿಎಂ ಕೇಂದ್ರಗಳಲ್ಲಿ ಹಣ ಪಡೆಯುವುದು ಮಾತ್ರವಲ್ಲದೆ ಜಮಾ ಮಾಡುವುದಕ್ಕೂ ಸಾಧ್ಯವಾಗಿದೆ. ಆದರೆ ಈ ರೀತಿ ಯಾವುದೇ ವ್ಯವಹಾರ ಮಾಡಬೇಕಿದ್ದರೂ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕಾದದ್ದು ಅಗತ್ಯ ಎಂದು ಪುತ್ತೂರಿನ ಕೆನರಾ ಬ್ಯಾಂಕ್‌ನ ಹಿರಿಯ ಪ್ರಬಂಧಕ ವಸಂತ ಬಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಬ್ಯಾಂಕ್ ಖಾತೆ ಆರಂಭಿಸುವ ಬಗೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.


ವಿವಿಧ ಬಗೆಯ ಉದ್ಯಮಗಳು ಇಂದು ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಕಾರ್ಯನಿರ್ವಹಿಸುತ್ತಿವೆ. ಖಾತೆಯೊಂದನ್ನು ಆರಂಭಿಸಿದ ನಂತರ ಮನೆಯಲ್ಲಿದ್ದೇ ವ್ಯವಹಾರ ನಡೆಸುವುದು ಇಂದು ಸಹಜ ಪ್ರಕ್ರಿಯೆಯಾಗಿ ನಡೆಯುತ್ತಿದೆ. ವಿದ್ಯಾಥಿಗಳು ಉನ್ನತ ಶಿಕ್ಷಣಕ್ಕೆ ಅಡಿಯಿಡುವ ಸಂದರ್ಭದಲ್ಲಿ ಸಾಲ ಪಡೆಯುವುದಕ್ಕೂ ಖಾತೆ ಹೊಂದಿರಲೇಬೇಕು. ಹಾಗಾಗಿ ಆದಷ್ಟು ಬೇಗ ಖಾತೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಸಾಲ ಪಡೆಯುವುದಕ್ಕೂ ಸಹಕಾರಿ ಎನಿಸಲಿದೆ ಎಂದರು.


ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಪ್ರತಿಯೊಬ್ಬನೂ ಬ್ಯಾಂಕ್ ಖಾತೆ ಹೊಂದಿರಬೇಕಾದ್ದು ಇಂದಿನ ಅಗತ್ಯ. ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳಿದ್ದರೆ ನಾನಾ ಬಗೆಯ ವ್ಯವಹಾರಗಳಿಗೆ ಅನುಕೂಲವೆನಿಸುತ್ತದೆ. ನಿರ್ದಿಷ್ಟ ಬ್ಯಾಂಕ್‌ನ ಖಾತೆಯನ್ನು ನಿರ್ದಿಷ್ಟ ವ್ಯವಹಾರಕ್ಕಷ್ಟೇ ಬಳಸಿದಾಗ ವೈಯಕ್ತಿಕ ಬದುಕಿನ ಆರ್ಥಿಕ ಲೆಕ್ಕಾಚಾರಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕೆನರಾ ಬ್ಯಾಂಕ್ ಉದ್ಯೋಗಿ ಅನೂಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಯಕ್ಷಗಾನದಲ್ಲಿ ‘ನಾರದ’ನ ಪಾತ್ರ ಹಾಸ್ಯಗಾರರಿಗೇ ಯಾಕೆ? ಎಲ್ಲದರಲ್ಲೂ ಪ್ರಯೋಗ ಮಾಡುವ ನಾವು ಇಲ್ಲೂ ಒಂದು ಹೊಸ ಪ್ರಯೋಗ ಯಾಕೆ ಮಾಡಬಾರದು?

ನಮ್ಮ ಪುರಾಣಲೋಕದಲ್ಲಿ ನಾರದನ ಪಾತ್ರ ಅತಿ ವಿಶಿಷ್ಟವಾದದ್ದು. ನಾರದ ಬ್ರಹ್ಮ ಮಾನಸಪುತ್ರ. ಅತಿ ಅಲ್ಪ ಸಮಯದಲ್ಲಿಯೇ ಲೋಕಸಂಚಾರವನ್ನು ಮುಗಿಸಬಲ್ಲ ಸಾಮರ್ಥ್ಯವಂತ. ಈತ ದೇವಋಷಿ.

ಆದರೆ ನಾವು ನೋಡುತ್ತಿರುವ ಕೆಲವು ಸಿನಿಮಾಗಳಲ್ಲಿ ಅಥವಾ ನಾಟಕಗಳಲ್ಲಿ ನಾರದನ ಪಾತ್ರವನ್ನು ಕೇವಲ ಹಾಸ್ಯಕ್ಕಾಗಿ ನಿಕೃಷ್ಟ ರೀತಿಯಲ್ಲಿ ಚಿತ್ರಿಸುತ್ತಿರುವುದನ್ನು ಕಾಣಬಹುದು. ಕೆಲವು ಪೌರಾಣಿಕ ಸಿನಿಮಾಗಳಲ್ಲಿ ನಾರದನ ಪಾತ್ರವನ್ನು ಹಾಸ್ಯದ ವಸ್ತುವನ್ನಾಗಿಸಿದ್ದಾರೆ. ಇನ್ನು ಟಿವಿ ಧಾರಾವಾಹಿಗಳಲ್ಲಿ ಕೂಡ ನಾರದನನ್ನು ವಿದೂಷಕನಂತೆ ಚಿತ್ರಿಸಿದ್ದಾರೆ.

ಯಕ್ಷಗಾನದಲ್ಲಿ ನಾರದನ ಪಾತ್ರವನ್ನು ಹಾಸ್ಯಗಾರರೇ ನಿರ್ವಹಿಸುತ್ತಾರೆ ಎಂಬುದು ಸರ್ವವಿದಿತ. ಅದಕ್ಕೆ ಅಪವಾದವೋ ಎಂಬಂತೆ ಹಾಸ್ಯಗಾರರ ಅನುಪಸ್ಥಿತಿಯಲ್ಲಿಯೋ ಅಥವಾ ಹಾಸ್ಯಗಾರನಿಗೆ ಇತರ ಪಾತ್ರಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿಯೂ ಕೆಲವೊಮ್ಮೆ ನಾರದನ ಪಾತ್ರವನ್ನು ಇತರ ಪಾತ್ರಧಾರಿಗಳು ನಿರ್ವಹಿಸುತ್ತಾರೆ ಎಂಬುದೂ ಸತ್ಯ. 

ಯಕ್ಷಗಾನದಲ್ಲಿಯೂ ಕೆಲವೊಮ್ಮೆ ನಾರದನ ಪಾತ್ರವು ಹಾಸ್ಯಾಸ್ಪದವಾಗಿದೆ. ಹಾಗೆಂದು ಯಕ್ಷಗಾನದಲ್ಲಿ ನಾರದನ ಪಾತ್ರವನ್ನು ಅತ್ಯುತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುವ ಹಾಸ್ಯಗಾರರು ನಮ್ಮಲ್ಲಿ ತುಂಬಾ ಮಂದಿ ಇದ್ದರು ಮತ್ತು ಈಗಲೂ ಇದ್ದಾರೆ. ಆದರೆ ಕೆಲವೊಮ್ಮೆಯಾದರೂ ನಾರದನ ಪಾತ್ರವು ಗೇಲಿಯ ವಸ್ತುವಾಗುವುದನ್ನು ನಾವು ಕಂಡಿರುವುದು ಸತ್ಯ.

ಇಲ್ಲಿಯೂ ನಾವು ಒಂದು ಪ್ರಯೋಗವನ್ನು ಮಾಡಿದರೆ ತಪ್ಪೇನಿದೆ? ಎಲ್ಲಾ ಕಡೆಯೂ ಪರಂಪರೆಯನ್ನು ಮುರಿದು ಸುಧಾರಣೆಯನ್ನು ತಂದಿದ್ದೇವೆ. “ನಾರದನ ಪಾತ್ರವು ಪರಂಪರೆಯಿಂದಲೇ ಹಾಸ್ಯಗಾರರಿಗೆ ಸೇರಿದ್ದು” ಎಂಬ ಕಟ್ಟುಕಟ್ಟಳೆಗೆ ಜೋತುಬೀಳದೆ ನಾರದನ ಪಾತ್ರವನ್ನು ಹಾಸ್ಯಗಾರರನ್ನು ಹೊರತುಪಡಿಸಿ ಇತರ ವೇಷಧಾರಿಗಳಿಗೆ ಕೊಡಬಹುದು.

ಯಾಕೆಂದರೆ ಹಾಸ್ಯಗಾರರಿಗೆ ಅವರ ವೃತ್ತಿಯಲ್ಲಿಯೂ (ಕಲೆ) ಅವರ ಸ್ವಭಾವದಲ್ಲಿಯೂ ಹಾಸ್ಯ ಇದ್ದೇ ಇರುತ್ತದೆ. ಹಾಸ್ಯ ಸ್ವಲ್ಪವಾದರೂ ಇಣುಕದೆ ಇರಲಾರದು.  ಆದುದರಿಂದ ಅವರನ್ನು ಹಾಸ್ಯ ಪಾತ್ರಗಳಿಗೆ ಹೆಚ್ಚಾಗಿ ಲಭ್ಯವಾಗುವಂತೆ ಮಾಡಿಕೊಂಡು ನಾರದನ ಪಾತ್ರವನ್ನು ಇತರ ಕಲಾವಿದರಲ್ಲಿ ಮಾಡಿಸುವ ಪ್ರಯತ್ನವನ್ನು ಮಾಡಬಹುದು.

ಯಾರೂ ಇದನ್ನು ವೈಯುಕ್ತಿಕ ಟೀಕೆಯೆಂದು ಭಾವಿಸದೆ ಕೇವಲ ಸಲಹೆ ಎಂದು ತಿಳಿಯಬೇಕಾಗಿ ವಿನಂತಿಸುವೆ. 

ಬರಹ: ಯಕ್ಷರಸಿಕ, ಮಂಗಳೂರು 

ನಕಲಿ ಅತ್ಯಾಚಾರ ಪ್ರಕರಣದಲ್ಲಿ ಉದ್ಯಮಿಗೆ ಬೆದರಿಕೆ ಹಾಕಿ 80 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಯೂಟ್ಯೂಬ್ ನಟಿ ನಮ್ರ ಖಾದಿರ್ ಳ ಬಂಧನ

ಉದ್ಯಮಿಯೊಬ್ಬರಿಂದ 80 ಲಕ್ಷಕ್ಕೂ ಹೆಚ್ಚು ಸುಲಿಗೆ ಮಾಡಿದ ಆರೋಪದ ಮೇಲೆ ಮತ್ತು ನಕಲಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ.

ಹನಿ ಟ್ರ್ಯಾಪ್ ಮಾಡಿ ಉದ್ಯಮಿಯೊಬ್ಬರಿಂದ ಸುಮಾರು 80 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಯೂಟ್ಯೂಬರ್ ನಮ್ರ ಖಾದಿರ್ ಅವರನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಯನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಖಾದಿರ್ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಮತ್ತು ಯೂಟ್ಯೂಬ್‌ನಲ್ಲಿ ಆರು ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಆಕೆಯ ಪತಿಯನ್ನು ಇನ್ನೂ ಬಂಧಿಸಲಾಗಿಲ್ಲ.

ನವೆಂಬರ್ 24 ರಂದು ಸಂತ್ರಸ್ತ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಲಾಯಿತು. ಖಾದಿರ್ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿ ಬಲೆ ಬೀಸಿದ್ದಾಳೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿರುವ ದೂರುದಾರರು ಗುರುಗ್ರಾಮ್‌ನ ಸೋಹ್ನಾ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಇಬ್ಬರನ್ನು ಭೇಟಿಯಾಗಿದ್ದರು. ಸಭೆಯ ಸಮಯದಲ್ಲಿ, ದೂರುದಾರನು ತನ್ನ ವ್ಯವಹಾರವನ್ನು ಉತ್ತೇಜಿಸಲು ಅವಳ ಯೂಟ್ಯೂಬರ್ ಪ್ರಚಾರವನ್ನು ಬಯಸುವುದಾಗಿ ಹೇಳಿದನು.

ಆರೋಪಿಗಳು 2.5 ಲಕ್ಷ ರೂಪಾಯಿ ಮುಂಗಡವಾಗಿ ತೆಗೆದುಕೊಂಡರು ಆದರೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ವ್ಯವಹಾರವನ್ನು ಪ್ರಚಾರ ಮಾಡಲಿಲ್ಲ. ಸಂತ್ರಸ್ತೆ ತನ್ನ ವ್ಯವಹಾರವನ್ನು ಪ್ರಚಾರ ಮಾಡದಿದ್ದಕ್ಕಾಗಿ ಕೇಳಿದಾಗ, ಯೂಟ್ಯೂಬರ್ ಅವನನ್ನು ಹನಿ-ಟ್ರ್ಯಾಪ್ ಮಾಡಿ 80 ಲಕ್ಷ ರೂ. ಗೆ ಬೇಡಿಕೆಯಿಟ್ಟರು.

ಸಂತ್ರಸ್ತ ತನ್ನ ದೂರಿನಲ್ಲಿ, ಯೂಟ್ಯೂಬರ್ ನಮ್ರ ಖಾದಿರ್ ಳು ತನ್ನನ್ನು ಹೋಟೆಲ್ ಕೋಣೆಗೆ ಆಹ್ವಾನಿಸಿ ಮಾದಕ ದ್ರವ್ಯವನ್ನು ನೀಡಿದ್ದಾಳೆ ಎಂದು ಹೇಳಿದ್ದಾರೆ. ಆರೋಪಿಯು ತನ್ನ ಅಶ್ಲೀಲ ವೀಡಿಯೊವನ್ನು ಸಹ ಮಾಡಿದ್ದಾಳೆ ಮತ್ತು ನಂತರ ರೇಪ್ ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ.

ಪೊಲೀಸ್ ತನಿಖೆಯ ಪ್ರಕಾರ, ಖಾದಿರ್ ಮದುವೆಯಾಗಿ ಮಗುವಿಗೆ ತಾಯಿಯಾಗಿದ್ದಾಳೆ. ಆಕೆಯ ಪತಿ ವಿರಾಟ್ ಬೇನಿವಾಲ್ ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕಾಸರಗೋಡು: ಮಂಗಳೂರು ಕಾಲೇಜು ವಿದ್ಯಾರ್ಥಿನಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ 

ಕಾಸರಗೋಡಿನ ಸಮೀಪ ರೈಲ್ವೆ ಹಳಿಯಲ್ಲಿ ಮಂಗಳೂರು ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಓಡುತ್ತಿರುವ ರೈಲಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಇಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿ ಕಾವುಗೋಳಿ ಚೌಕಿಯ ಕಡಪ್ಪುರ ನಿವಾಸಿ ಸುರೇಂದ್ರನ್‌ ಮತ್ತು ಶ್ಯಾಮಲಾ ಅವರ ಪುತ್ರಿ ಅಂಜನಾ ಎಸ್. (22) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎಂಎಸ್ಸಿ ಬಯೋಕೆಮಿಸ್ಟ್ರಿ ವಿದ್ಯಾರ್ಥಿನಿಯಾಗಿದ್ದರು.

ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಆಕೆ ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಕಾಣೆಯಾಗಿದ್ದಳು. ಆಕೆಯ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ರೈಲ್ವೇ ಹಳಿಗಳ ಮೇಲೆ ಶೋಧ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಗಿದೆ.

ಆಕೆಯ ಮೊಬೈಲ್ ಹಳಿಗಳ ಮೇಲೆ ಛಿದ್ರವಾಗಿ ಬಿದ್ದಿರುವುದು ಕಂಡುಬಂದಿದೆ. ಕಾಸರಗೋಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ಆಕೆಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಚೆಸ್ ಪಂದ್ಯಾಟದಲ್ಲಿ ಋತ್ವಿಕ್ ಸಾಯಿ ಗಣೇಶ್ ಮತ್ತು ಕೈಝೆನ್‌ ರಾಷ್ಟ್ರ ಮಟ್ಟಕ್ಕೆಆಯ್ಕೆ

ಪುತ್ತೂರು, ಡಿ 05: ಅಸ್ಸಾಂ ನ ಚಂದ್ರಪುರ್‌ದಲ್ಲಿ ನಡೆದ 33ನೇ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕೈಝೆನ್‌ ಎಸ್(ಬಂಟ್ವಾಳದ ದೇವಸ್ಯ ಸೂರ್ಯನಾರಾಯಣ ಎನ್ ಕೆ ಮತ್ತು ಸುಮನ ಎಸ್‌ಎನ್‌ ದಂಪತಿ ಪುತ್ರ)

ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಋತ್ವಿಕ್ ಸಾಯಿ ಗಣೇಶ್(ಕುಂದಾಪುರ ತಾಲೂಕಿನ ಸಿದ್ದಾಪುರದ ಜ್ಯೋತಿ ಕೆ.ಸಿ ರವರ ಪುತ್ರ) ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ಸ್ಕೂಲ್‌ಗೇಮ್ಸ್ ಫೆಡರೇಷನ್‌ ಆಫ್‌ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆಆಯ್ಕೆ ಆಗಿದ್ದಾರೆ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ಈ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭ ಮತ್ತು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಸಮಾರಂಭ

ವಿಶ್ವ ಮಣ್ಣಿನ ದಿನಾಚರಣೆ:

ಪುತ್ತೂರು: ನಮ್ಮ ಆಹಾರದ ಮುಖ್ಯ ಮೂಲ ಮಣ್ಣು, ಮಾನವನ ಜೀವನಕ್ಕೆ ಪೋಷಕಾಂಶಗಳು ಹೇಗೆ ಅಗತ್ಯವೋ ಮಣ್ಣಿಗೂ ಇದು ಆವಶ್ಯಕ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮೆರೈನ್ ಜಿಯಾಲಜಿ ವಿಭಾಗದ ವಿಶ್ರಾಂತ ಪ್ರೊಫೆಸರ್ ಡಾ.ಎಚ್.ಗಂಗಾಧರ ಭಟ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರ್ ವಿಭಾಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಜಿಯೋ ಇನ್ಫಾರ್ಮೇಟಿಕ್ಸ್ನ ಪಾತ್ರ ಎನ್ನುವ ವಿಷಯದ ಬಗ್ಗೆ ಮಾತಾಡಿದರು.

ಅವ್ಯಾಹತವಾದ ಮಾಲಿನ್ಯದಿಂದ ಮಣ್ಣು ತನ್ನತನವನ್ನು ಕಳೆದುಕೊಳ್ಳುತ್ತಿದೆ. ಪೋಷಕಾಂಶಗಳ ಕೊರತೆಯಿಂದ ಅದರಲ್ಲಿ ಬೆಳೆಯುವ ಆಹಾರ ಪದಾರ್ಥಗಳೂ ಸತ್ವ ಹೀನವಾಗುತ್ತಿವೆ ಇದು ಅಪಾಯದ ಸಂಕೇತ ಎಂದು ನುಡಿದರು. ಮಣ್ಣಿನ ಪದರದ ಸವಕಳಿಯನ್ನು ತಪ್ಪಿಸುವುದರಿಂದ ಪೋಷಕಾಂಶಗಳ ನಷ್ಟವನ್ನು ತಡೆಗಟ್ಟಬಹುದು ಎಂದರು.

ಅವೈಜ್ಞಾನಿಕ ಕೃಷಿ ಪದ್ದತಿ, ಅಪಾರ ಪ್ರಮಾಣದ ರಾಸಾಯನಿಕಗಳ ಬಳಕೆ, ಮಿತಿಮೀರಿದ ಪ್ಲಾಸ್ಟಿಕ್‌ಗಳ ಉಪಯೋಗ, ಸಸ್ಯ ಸಂಕುಲಗಳ ನಾಶದಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಪರಿಸರ ಸಂರಕ್ಷಣೆಯ ಜತೆಯಲ್ಲಿ ನಾವೆಲ್ಲರೂ ಮಣ್ಣಿನ ರಕ್ಷಣೆಯನ್ನೂ ಮಾಡಬೇಕು ಎಂದು ನುಡಿದರು.


ಮಣ್ಣಿನ ದಿನದ ನೆನಪಿಗಾಗಿ ಅತಿಥಿಗಳೊಂದಿಗೆ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು.
ಸಿವಿಲ್ ಎಂಜಿನಿಯರಿ0ಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಸ್ವಾಗತಿಸಿದರು, ಡಾ.ಸೌಮ್ಯ.ಎನ್.ಜೆ ಪ್ರಾಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಪ್ರೊ.ಜಯಕೃಷ್ಣ.ಭಟ್.ಡಿ ವಂದಿಸಿದರು. ಮಧುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಸಮಾರಂಭ:

ಪುತ್ತೂರು: ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ, ನಮ್ಮ ನಿಮ್ಮೆಲ್ಲರ ಒಳಿತಿಗಾಗಿ ಇರುವ ಈ ಕಾನೂನಿಗೆ ನಾವು ವಿಧೇಯರಾಗಿರಬೇಕು ಎಂದು ಪುತ್ತೂರಿನ ಟ್ರಾಫಿಕ್ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ ನಾಯ್ಕ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.

ಇತ್ತೀಚಿನ ದಿನಗಳಲ್ಲಿ 18 ವರ್ಷ ತುಂಬದವರು ವಾಹನಗಳನ್ನು ಚಲಾಯಿಸುವುದು ಹೆಚ್ಚಾಗಿದ್ದು, ಪೋಷಕರು ಇದರ ಬಗ್ಗೆ ಜಾಗರೂಕರಾಗಿರಬೇಕು. ಅಪಘಾತ ಸಂಭವಿಸಿದರೆ ಯಾವುದೇ ನೆರವು ಸಿಗಲಾರದು ಮತ್ತು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು.


ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಮಾಲಿನ್ಯ ನಿಯಂತ್ರಣದ ಬಗ್ಗೆ ಮಾತನಾಡಿ ನಾವೆಷ್ಟು ಅನಾಚಾರ ಮಾಡಿದರೂ ಪ್ರಕೃತಿಯು ಸಹಿಸಿಕೊಂಡಿದೆ. ಅದರಿಂದಾಗಿ ಇನ್ನಷ್ಟು ಹೆಚ್ಚು ದಬ್ಬಾಳಿಕೆ ಮಾಡುತ್ತಲೇ ಇದ್ದೇವೆ, ಪ್ರಕೃತಿ ಏನಾದರೂ ಮುನಿದರೆ ನಮ್ಮ ಅಸ್ತಿತ್ವವೇ ಕೊನೆಯಾಗುತ್ತದೆ ಎಂದರು.

ಸಾರ್ವಜನಿಕರಲ್ಲಿ ಮಾಲಿನ್ಯ ನಿಯಂತ್ರಣದ ಅರಿವು ಮೂಡಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಇಲಾಖೆಗಳು ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಬೇಕು ಎಂದರು. ನೆಲ, ಜಲ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ನಾವೆಲ್ಲರೂ ಕಂಕಣಬದ್ದರಾಗಬೇಕು ಎಂದು ನುಡಿದರು.


ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿದರು. ಕಾಲೇಜಿನ ಐಎಸ್‌ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಸ್ತಾವನೆಗೈದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಲ್ಲಿ ಹಾಗೂ ವಾಹನ ಚಾಲಕರಲ್ಲಿ ಮಾಲಿನ್ಯ ನಿಯಂತ್ರಣದ ಅರಿವು ಮೂಡಿಸುವುದಕ್ಕಾಗಿ ಪಡೀಲ್ ಮತ್ತು ಮುರದಲ್ಲಿ ಕರಪತ್ರಗಳನ್ನು, ಸ್ಟಿಕ್ಕರ್‌ಗಳನ್ನು ಹಂಚಲಾಯಿತು. ಪ್ರೊ.ಅಜಿತ್.ಕೆ ಮತ್ತು ಪ್ರೊ.ತಪಸ್ವಿನಿ ಅವರ ನೇತೃತ್ವದಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಬಾಗವಹಿಸಿದರು.