Saturday, March 14, 2026
Home Blog Page 98

ಬೆಂಗಳೂರು ಯುವತಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಎಲ್ಲಾ ಆರೋಪಿಗಳ ಬಂಧನ

ಚಲಿಸುತ್ತಿದ್ದ ಕಾರಿನಲ್ಲಿ ನಾಲ್ಕು ಮಂದಿ ಸೇರಿ, ಒಬ್ಬ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ನಾಲ್ವರು ಬೆಂಗಳೂರಿನ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.

ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಪಾರ್ಕ್‌ನಲ್ಲಿ ಮಹಿಳೆ ಕುಳಿತಿದ್ದಾಗ ನಾಲ್ವರು ಮಾರ್ಚ್ 25 ರಂದು ರಾತ್ರಿ 10 ಗಂಟೆಗೆ ಮಹಿಳೆಯನ್ನು ತಮ್ಮ ಕಾರಿಗೆ ಎಳೆದುಕೊಂಡು ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ.

ಪೊಲೀಸರ ಪ್ರಕಾರ, ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಾರ್ಚ್ 26 ರಂದು ಬೆಳಿಗ್ಗೆ ಆಕೆಯನ್ನು ಆಕೆಯ ಮನೆಯ ಬಳಿ ಇಳಿಸಿದರು ಮತ್ತು ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ “ಭೀಕರ ಪರಿಣಾಮ” ಎಂದು ಬೆದರಿಕೆ ಹಾಕಿದರು ಎಂದು ಪಿಟಿಐ ವರದಿ ಮಾಡಿದೆ.

ನಂತರ ಸಂತ್ರಸ್ತೆ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಎಲ್ಲಾ ನಾಲ್ವರನ್ನು ಬಂಧಿಸಲಾಗಿದೆ ಮತ್ತು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

42ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಸಂಸ್ಕೃತ ಶಿಕ್ಷಕ, ವೆಂಕಟೇಶ್ ಪ್ರಸಾದ್ ಗೆ ಕಂಚಿನ ಪದಕ

42ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಪುತ್ತೂರು, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ, ವೆಂಕಟೇಶ್ ಪ್ರಸಾದ್ ಅವರು (1.35 ಮೀ) ಕಂಚಿನ ಪದಕ ಗಳಿಸಿದ್ದಾರೆ

ಪುತ್ತೂರು, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ ಪುತ್ತೂರು ತಾಲೂಕು, ದರ್ಬೆತ್ತಡ್ಕದ  ವೆಂಕಟೇಶ್ ಪ್ರಸಾದ್ ಇವರು 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದು 42ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಕಂಚಿನ ಪದಕದ ಗರಿಮೆಗೆ ಪಾತ್ರರಾಗಿದ್ದಾರೆ.

ಅಂಬಿಕಾದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಕೋಚಿಂಗ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿನ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ರಜಾ ಅವಧಿಯ ವಿಶೇಷ ತರಬೇತಿ ತರಗತಿಗಳು ಎಪ್ರಿಲ್ 3ರಿಂದ ಆರಂಭಗೊಳ್ಳಲಿವೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಒಂಬತ್ತನೆಯ ತರಗತಿಯನ್ನು ಪೂರೈಸಿದ ವಿದ್ಯಾಥಿಗಳಿಗೆ ಈ ವಿಶೇಷ ತರಬೇತಿ ತರಗತಿಗಳಿಗೆ ಹಾಜರಾಗುವುದಕ್ಕೆ ಅವಕಾಶವಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ತರಬೇತಿ ತರಗತಿಗಳು ನಡೆಯಲಿವೆ.


ಒಂಬತ್ತನೆಯ ತರಗತಿಯ ಪರೀಕ್ಷೆಗಳು ಮುಗಿದಿದ್ದು ಹೆಚ್ಚಿನ ವಿದಾರ್ಥಿಗಳು ಅತಿಯಾದ ಮೊಬೈಲ್, ಟಿವಿ ಬಳಕೆಯಿಂದಾಗಿ ಓದಿನ ವಾತಾವರಣದಿಂದ ದೂರ ಸರಿಯುತ್ತಿದ್ದಾರೆ ಎಂಬ ಕೂಗು ಹೆತ್ತವರಿಂದ ಕೇಳಿಬರುತ್ತಿದೆ. ಕೊರೋನಾ ಕಾಲದಲ್ಲಿ ಅನಿವಾರ್ಯವಾಗಿ ಮೊಬೈಲ್ ಮೊರೆ ಹೋಗಿದ್ದ ವಿದ್ಯಾಥಿಗಳಲ್ಲಿ ಹೆಚ್ಚಿನವರು ಈಗ ಮೊಬೈಲ್ ಬಳಕೆಯನ್ನು ಚಟವಾಗಿ ಬೆಳೆಸಿಕೊಂಡಿರುವುದು ಹೆತ್ತವರ ಆತಂಕವನ್ನು ಹೆಚ್ಚಿಸಿದೆ. ಜತೆಗೆ ಹತ್ತನೆಯ ತರಗತಿ ಎಂಬುದು ವಿದ್ಯಾರ್ಥಿಗಳ ಬದುಕಿನಲ್ಲಿ ಅತಿ ಮುಖ್ಯ ಘಟ್ಟವಾಗಿರುವುದರಿಂದ ರಜಾ ಅವಧಿಯಲ್ಲಿನ ತರಗತಿಗಳು ಅತ್ಯಂತ ಪ್ರಾಮುಖ್ಯ ಎನಿಸಿವೆ.


ಹತ್ತನೆಯ ತರಗತಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಗಣಿತ ಹಾಗೂ ವಿಜ್ಞಾನ ಕಬ್ಬಿಣದ ಕಡಲೆಯಂತಾಗುತ್ತಿದ್ದು, ಈ ನೆಲೆಯಲ್ಲಿ ಶಾಲಾ ಆರಂಭಕ್ಕೂ ಪೂರ್ವದಲ್ಲಿ ತರಗತಿ, ತರಬೇತಿಗಳು ನಡೆದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಹೆಚ್ಚಿನ ಮಾಹಿತಿಗಾಗಿ : 08251 233488, 298188, 9071655688

ಮಹಾಂತೇಶ ನವಲಕಲ್ ಮತ್ತು ಶ್ರೀಲೋಲ ಸೋಮಯಾಜಿಯವರಿಗೆ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ

ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ನೀಡುವ 2022ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯು ಮಹಾಂತೇಶ ನವಲಕಲ್ ಅವರ ‘ಬುದ್ಧಗಂಟೆಯ ಸದ್ದು ಮತ್ತು ಇತರೆ ಕತೆಗಳು’ ಹಾಗೂ ಶ್ರೀಲೋಲ ಸೋಮಯಾಜಿಯವರ ‘ನ ಪ್ರಮದಿತವ್ಯಂ’ ಎಂಬ ಕಥಾಸಂಕಲನಗಳ ಹಸ್ತಪ್ರತಿಗಳಿಗೆ ದೊರತಿದೆ. 

ಕನ್ನಡದ ಖ್ಯಾತ ವಿಮರ್ಶಕ ಪ್ರೊ. ಟಿ. ಪಿ. ಅಶೋಕ ಮತ್ತು ಖ್ಯಾತ ಕಥೆಗಾರ ಡಾ. ಕೆ. ಸತ್ಯನಾರಾಯಣ ಅವರು ತೀರ್ಪುಗಾರರಾಗಿದ್ದು ಸರ್ವಾನುಮತದಿಂದ ಈ ಹಸ್ತಪ್ರತಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಪ್ರಶಸ್ತಿ 20000=00 ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. 

ಎಪ್ರಿಲ್ 16ರಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕ ವಿಕಾಸ ಹೊಸಮನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ – ‘ಶೃಂಗೇರಿಯಲ್ಲಿ ನಿರ್ಮಾಣವಾದ ಶಾರದೆ ವಿಗ್ರಹ ಕಾಶ್ಮೀರದಲ್ಲಿ ಪ್ರತಿಷ್ಠೆ’ : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಶೃಂಗೇರಿಯಲ್ಲಿ ನಿರ್ಮಾಣವಾದ 3 ಅಡಿ ಎತ್ತರ, 100 ಕೆ.ಜಿ ತೂಕದ ಪಂಚಲೋಹದ ಶಾರದಾ ಮಾತೆಯ ವಿಗ್ರಹವನ್ನು ಪಾಕ್ ಗಡಿ ಬಳಿಯ ತೀತ್ವಾಲ್ ಬಳಿ ಇತ್ತೀಚೆಗೆ ಯಶಸ್ವಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ತನ್ಮೂಲಕ ಒಂದನೇ ಶತಮಾನದಿಂದಲೂ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ತದನಂತರ ದುಷ್ಟ ಅರಸರು ಹಾಗೂ ಪಾಕ್ ದಾಳಿಯಿಂದ ಶಿಥಿಲವಾಗಿದ್ದ ಈ ಶಾರದಾದೇವಿಯ ಆರಾಧನಾ ಸ್ಥಳ ಮತ್ತೆ ಪುನರುಜ್ಜೀವಗೊಂಡಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ಬುಧವಾರ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದಲ್ಲಿ “ಕಾಶ್ಮೀರದ ಶಾರದಾ ಪೀಠದಲ್ಲಿ ಶಾರದೆ ದೇಗುಲ ಪ್ರತಿಷ್ಠಾಪನೆ” ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


ಈ ಹಿಂದೆ ಇದ್ದ ಈ ದೇಗುಲದ ಸುತ್ತುಪೌಳಿಯನ್ನು ಮತಾಂಧ ರಾಜರು ನಾಶ ಮಾಡಿದ್ದರು. ಬಳಿಕ ಭಾರತ ಪಾಕಿಸ್ಥಾನ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನ ಸೈನಿಕರು ದೇಗುಲವನ್ನು ಸಂಪೂರ್ಣ ಹಾಳುಗೆಡವಿದರು. ಇದರ ಪಕ್ಕದಲ್ಲೇ ಕಿಶನ್ ಗಂಗಾ ನದಿ ಹರಿಯುತ್ತಿದ್ದು, ಅದರಾಚೆಗೆ ಪಾಕ್ ಆಕ್ರಮಿತ ಗಡಿ ಭಾಗವಿದೆ. ದೇಗುಲದ ಕೂಗಳತೆ ದೂರದಲ್ಲಿ ಪಾಕಿಸ್ತಾನ ಅತಿಕ್ರಮಿತ ಭಾರತದ ಪ್ರದೇಶವಿದೆ.

ಈಗ ಸ್ಥಾಪನೆಯಾಗಿರುವ ಶಾರದಾ ಮಂದಿರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸರ್ವಜ್ಞ ಪೀಠಕ್ಕಿಂದ ಏಳು ಕಿಲೋಮೀಟರ್ ದೂರದಲ್ಲಿದೆ. ಇದೀಗ ಸರ್ವಜ್ಞ ಪೀಠವನ್ನು ಅಲಂಕರಿಸಿದ ಶ್ರೀ ಶಂಕರಾಚಾರ್ಯರು ನಡೆದಾಡಿದ ಜಾಗದಲ್ಲಿ ಮತ್ತೆ ಶಾರದ ಮಾತೆಯ ವಿಗ್ರಹ ಈಗ ಪ್ರತಿಷ್ಠಾಪನೆಗೊಂಡ0ತಾಗಿದೆ. ಭಾರತೀಯ ಸೇನಾಧಿಕಾರಿಗಳ ಸಹಕಾರದೊಂದಿಗೆ ದೇಗುಲದಲ್ಲಿ ಪೂಜಾ ಕಾರ್ಯಗಳು ನಡೆದವು ಎಂದು ಮಾಹಿತಿ ನೀಡಿದರು.


ಕಾಶ್ಮೀರ ಪಂಡಿತರ ನೇತೃತ್ವ:
ದೇಗುಲ ನಾಶದ ಬಳಿಕ ಸ್ಥಳೀಯ ಕಾಶ್ಮೀರಿ ಪಂಡಿತರೂ ಸ್ಥಳದಿಂದ ದೂರವಾಗಿದ್ದರು. ಆದರೆ ಇದೀಗ ಮತ್ತೆ ದೇಗುಲದತ್ತ ಆಗಮಿಸುತ್ತಿದ್ದಾರೆ. ರವೀಂದ್ರ ಪಂಡಿತ್ ಎಂಬವರ ನೇತೃತ್ವದಲ್ಲಿ ದೇಗುಲ ನಿರ್ಮಾಣವಾಗಿದೆ. ವಿಶೇಷವೆಂದರೆ ಸ್ಥಳೀಯ ಮುಸ್ಲಿಮರೂ ಈ ದೇಗುಲ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಪ್ರತಿಷ್ಠಾಪನೆ ಸಂದರ್ಭ ಕೆಲವೇ ಕೆಲವು ಹಿಂದೂಗಳು ಭಾಗವಹಿಸಿದ್ದರು. ವಿಶೇಷವೆಂದರೆ ತಮಿಳುನಾಡಿನಿಂದ ವೃದ್ಧ ದಂಪತಿಗಳೂ ಪೂಜೆಗಾಗಿ ತೀತ್ವಾಲ್‌ಗೆ ಆಗಮಿಸಿದ್ದರು ಎಂದು ವಿವರಣೆ ನೀಡಿದರು.

ದೈವೀ ಶಕ್ತಿ ಅನಾವರಣ:
ತೀತ್ವಾಲ್ ಬಳಿ ಮೈಕೊರೆವ ಚಳಿ ಇದ್ದು, ಪ್ರತಿಷ್ಠಾಪನೆ ನಡೆವ ಹಿಂದಿನ ದಿನ ಪ್ರಬಲ ಭೂಕಂಪ ನಡೆದಿತ್ತು. ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿತ್ತು. ರಾತ್ರಿ ಮಲಗಿದ್ದ ನಾವು ಮನೆಯಿಂದ ಹೊರಗೆ ಓಡಿಬಂದೆವು. ಆದರೆ ಅಷ್ಟು ತೀವ್ರ ಭೂಕಂಪನವಾದರೂ ಯಾವುದೇ ಸಮಸ್ಯೆ ಉಂಟಾಗದಿರುವುದು ದೈವೀ ಶಕ್ತಿ ತನ್ನ ಪವಾಡ ತೋರಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದರು.

ಪೋಟೊ ಹಾಗೂ ದೃಶ್ಯಾವಳಿಗಳ ಮೂಲಕ ವಿದ್ಯಾರ್ಥಿಗಳಿಗೆ ದೇಗುಲ ಪ್ರತಿಷ್ಟಾಪನೆಯ ಕುರಿತಾದ ಮಾಹಿತಿ ನೀಡಲಾಯಿತು.
ಈ ಸಂದರ್ಭ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಪ್ಪನಾಡು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ದೇವಿ ಮಹಾತ್ಮೆ’

ಬಪ್ಪನಾಡು ಮೇಳ ಹಾಗೂ ಪಾವಂಜೆ ಮೇಳದ ಕಲಾವಿದ ರಾಜೇಂದ್ರ ಕೃಷ್ಣ ಪಂಜಿಗದ್ದೆ ಅವರ ಸಂಯೋಜನೆಯಲ್ಲಿ ಬಪ್ಪನಾಡು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಮಂಗಳೂರು ಕದ್ರಿ ಮೈದಾನದಲ್ಲಿ ಏಪ್ರಿಲ್ 9 ಕ್ಕೆ ಅಗರಿ ಶ್ರೀನಿವಾಸ ಭಾಗವತರು ವಿರಚಿತ ಸಂಪೂರ್ಣ ಶ್ರೀ ದೇವಿ ಮಹಾತ್ಮೆ  ಎಂಬ ಪ್ರಸಂಗದ ರಾತ್ರಿ ಘಂಟೆ 9ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ 

ಶ್ರೀದೇವಿ ಲಲಿತೋಪಾಖ್ಯಾನ – ವಳಲಂಬೆಯಲ್ಲಿ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ 

ದಿನಾಂಕ 09.04.2023 ಆದಿತ್ಯವಾರದಂದು ಸಂಜೆ 6 ಘಂಟೆಗೆ ಸರಿಯಾಗಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಶ್ರೀದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಪ್ರದರ್ಶಿಸಲ್ಪಡುವ, “ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ, ಗುತ್ತಿಗಾರು” ಇವರಿಂದ ಸೇವಾರೂಪವಾಗಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.

 ಈ ಪ್ರದರ್ಶನಕ್ಕೆ “ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ, ಗುತ್ತಿಗಾರು” ಇವರು ಎಲ್ಲಾ ಕಲಾಭಿಮಾನಿಗಳನ್ನು ಆದರದಿಂದ ಆಮಂತ್ರಿಸಿದ್ದಾರೆ. ವಿವರಗಳಿಗೆ ಚಿತ್ರ ನೋಡಿ. 

ಶ್ರೀ ದೇವಿ ಮಹಾತ್ಮೆ – ಅಂಕತಡ್ಕದಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಪ್ರದರ್ಶನ 

ದಿನಾಂಕ 29.03.2023 ಬುಧವಾರದಂದು ಸಂಜೆ 5 ಘಂಟೆಗೆ ಸರಿಯಾಗಿ ಕೆಯ್ಯೂರು ಮಾಡಾವು ಸಮೀಪದ ಅಂಕತಡ್ಕ ಪೂಂಜಿರೋಟು ಶ್ರೀ ಬ್ರಹ್ಮ ಬೈದೆರುಗಳ ನೇತ್ರಾವತಿ ಗರಡಿಯಲ್ಲಿ  ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಪ್ರದರ್ಶಿಸಲ್ಪಡುವ, ಯೋಗೀಶ್ ರೈ ಮಣಿಕ್ಕಾರ ಚೇತನ್ ಕುಮಾರ್ ರೈ ಐವತ್ತೊಕ್ಲು ಇವರಿಂದ ಸೇವಾರೂಪವಾಗಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 5.45ಕ್ಕೆ ಚೌಕಿ ಪೂಜೆ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

‘ಭೀಷ್ಮ ವಿಜಯ’ ತಾಳಮದ್ದಳೆ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ ಮಂಗಳೂರು ಯುಗಾದಿ ಮಹೋತ್ಸವದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀಕಾಳಿಕಾಂಬಾ ರಂಗಮಂಟಪದಲ್ಲಿ ದಿನಾಂಕ 24.3.2023 ರಂದು ಶ್ರೀ ಕಾಳಿಕಾಂಬ ವಿನಾಯಕ ಯಕ್ಷಗಾನ ಸಂಘ ಮಂಗಳೂರು ಪ್ರಾಯೋಜಕತ್ವದಲ್ಲಿ ಭೀಷ್ಮ ವಿಜಯ ತಾಳಮದ್ದಳೆ ಜರಗಿತು.

ಭಾಗವತರಾಗಿ ಕುಮಾರಿ ಶ್ರೇಯಾ ಅಲಂಕಾರು, ಕುಮಾರಿ ಪ್ರಜ್ಞಾ ಉಪ್ಪಿನಂಗಡಿ ಹಿಮ್ಮೇಳದಲ್ಲಿ ಕು.ಶ್ರಾವ್ಯ ತಳಕಲ ಮತ್ತು ಕು.ಅತಿಶಯ ರಾವ್  ಮತ್ತು ಅರ್ಥದಾರಿಗಳಾಗಿ ಮಾಣಿ ಸತೀಶ್ ಆಚಾರ್ಯ (ಭೀಷ್ಮ) ದಿವಾಕರ ಆಚಾರ್ಯ ಗೇರುಕಟ್ಟೆ (ಪರಶುರಾಮ) ಶ್ರೀಮತಿ ಹರ್ಷಿತಾ,ಉಪನ್ಯಾಸಕಿ ಪುತ್ತೂರು(ಆಕೃತವ್ರಣ) ಭಾಗವಹಿಸಿದ್ದರು.

ಸಮಿತಿಯ  ಸಹ ಸಂಚಾಲಕರಾದ ಶಾಮ್ ಆಚಾರ್ಯ ಸ್ವಾಗತಿಸಿ ಸಂಚಾಲಕರಾದ  ಟಿ. ಜಯಕರ ಆಚಾರ್ಯ ಧನ್ಯವಾದ ಅರ್ಪಿಸಿದರು.

ಸಿರಿಬಾಗಿಲು ಸಾಂಸ್ಕೃತಿಕ ಭವನ ಒಂದು ಅಪೂರ್ವ ಸಾಧನೆ – ಕೆ ಸದಾಶಿವ ಶೆಟ್ಟಿ

ಕಾಸರಗೋಡು. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ದ ಸಾಂಸ್ಕೃತಿಕ ಭವನಕ್ಕೆಇತ್ತೀಚೆಗೆ ಭೇಟಿಯಿತ್ತ  ಕೊಂಡೆವೂರು ಶ್ರೀಗಳು ಹರಸಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಗಮಿಸಿದ್ದ ಕೊಡುಗೈದಾನಿ  ಸದಾಶಿವ ಶಟ್ಟಿ ಮುಂಬೈ ಇವರು ಮಾತನಾಡಿ ಅಲ್ಪ ಆದಾಯ ಇರುವ ಕಲಾವಿದರು ಕಲೆಯ ಮೇಲಿನ ಪ್ರೀತಿಯಿಂದ ಇಂತಹ ಸಾಧನೆಗೆ ಮುಂದಾದುದು ಅಪೂರ್ವ ಎಂದು ಸಂತೋಷ ವ್ಯಕ್ತಪಡಿಸಿದರು.

ಯಕ್ಷಗಾನ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಾಣ ಕಾರ್ಯವನ್ನು ವೀಕ್ಷಸಿ ಶ್ಲಾಘಿಸಿದರು. ಈ ಕಾರ್ಯಕ್ರಮಕ್ಕೆ  ರಾಜಾರಾಮರಾವ್ ಮೀಯಪದವು ಸ್ವಾಗತಿಸಿ  ಸಿರಿಬಾಗಿಲು ರಾಮಕೃಷ್ಣ ಮಯ್ಯರು ಗೌರವಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಯ ಕೋಶಾಧಿಕಾರಿ ಶ್ರೀ ಲಕ್ಮೀನಾರಯಣ ಪಟ್ಟೇರಿ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಜಗದೀಶ್ ಕೂಡ್ಲು, ಶ್ರೀಮತಿ ಸುಮಿತ್ರಾ ಆರ್ ಮಯ್ಯ,  ಶ್ರೀಮತಿ ಅಮಿತಾ ಶೆಟ್ಟಿ, ಜಯರಾಮ ರೈ, ರವೀಂದ್ರ ರೈ, ಶೀನ ಶೆಟ್ಟಿ ಕಜೆ, ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ, ವಿಷ್ಣು ಶ್ಯಾನುಭೋಗ್, ಮುಂತಾದವರು, ಊರಿನ ಗಣ್ಯರು, ಪ್ರತಿಷ್ಠಾನದ ಸದಸ್ಯರು  ಉಪಸ್ಥಿತರಿದ್ದರು.