Sunday, August 2, 2026
Home Blog Page 91

ಅಂಬಿಕಾ ಸಿ. ಬಿ. ಎಸ್. ಇ ಯಲ್ಲಿ 2023-24ನೇ ಸಾಲಿನ ಪೂರ್ವ ಪ್ರಾಥಮಿಕ ಹಂತದ ಮೊದಲ ಪೋಷಕರ ಸಭೆ

ಪುತ್ತೂರು : ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಚಿಂತನೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಅದನ್ನು ನಕಾರಾತ್ಮಕವಾಗಿ  ಪರಿಗಣಿಸದೆ ಆ ತಪ್ಪನ್ನು ತಿದ್ದಿ ಆ ಸನ್ನಿವೇಶವನ್ನು  ನಿಭಾಯಿಸಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಅಂಬಿಕಾ ಸಿ ಬಿ ಎಸ್ ಇ ಶಾಲೆಯ  ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

    ಇವರು ಶನಿವಾರ ನಡೆದ 2023 -24 ನೇ ಸಾಲಿನ  ಪೂರ್ವ ಪ್ರಾಥಮಿಕದ (L. K. G) ವರ್ಷದ ಮೊದಲ ಪೋಷಕರ ಸಭೆಯಲ್ಲಿ ಮಾತನಾಡಿ,ಪೂರ್ವ ಪ್ರಾಥಮಿಕ ಶಾಲಾ ಹಂತ ಅಂದರೆ ಮೂರು, ನಾಲ್ಕು ವರ್ಷದ ಎಳೆಯ ಮಕ್ಕಳು. ಇವರ ಸ್ವಭಾವ, ವರ್ತನೆ, ಕಲಿಕೆ ಹೇಗೆ ಎಂದರೆ ನೋಡಿ ಕಲಿಯುತ್ತಾರೆ. ಇದು ನೋಡಿ ಕಲಿಯುವ ಹಂತವಾಗಿದೆ, ಹಾಗಾಗಿ ಮಕ್ಕಳು ಎಲ್ಲವನ್ನು ನೋಡಿ ಕಲಿಯುತ್ತಾರೆ.

ಹಾಗಾದ ಕಾರಣ ಪೋಷಕರು ಮಕ್ಕಳಿಗೆ ಆದರ್ಶ ಪ್ರಾಯವಾಗಿರಬೇಕು. ನಮ್ಮ ನಡೆ,ನುಡಿಗಳಲ್ಲಿ ನಾವು ಜಾಗೃತವಾಗಿರಬೇಕು ಎಂದು ಕಿವಿಮಾತು ಹೇಳಿದರು. ಜೊತೆಗೆ ಪೂರ್ವ ಪ್ರಾಥಮಿಕ ತರಗತಿ ಚಟುವಟಿಕೆಗಳ ಕುರಿತು ಸ್ಥೂಲ ವಿವರಣೆ ನೀಡಿದರು.

    ಈ ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ನಟ್ಟೋಜರು ಮಗು ಒಂದು ದೀಪದ ಹಾಗೆ ಅದು ಸಮಾಜವನ್ನು ಬೆಳಗುವಂತಹ ದೀಪವಾಗಿ ಬೆಳೆಸಬೇಕು. ನಮ್ಮನ್ನು ಮುಂದೆ ನೋಡಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಮಕ್ಕಳನ್ನು ಬೆಳೆಸುವುದಲ್ಲ ನಮ್ಮ ದೇಶಕ್ಕೆ, ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬೇಕು ರಾಷ್ಟ್ರ ಸೇವೆಗೆ ಮಗುವನ್ನು ತಯಾರು ಮಾಡಬೇಕು ಎಂಬ ಉದ್ದೇಶಕ್ಕಾಗಿ ಮಕ್ಕಳನ್ನು ಬೆಳೆಸಬೇಕು.

ಮುಖ್ಯವಾಗಿ ಮೌಲ್ಯ, ಆಚಾರ- ವಿಚಾರ ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ‘ಎ ಬಿ ಸಿ ಡಿ’ ಮಾತ್ರವಲ್ಲ, ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದವರಿಗೆ ಗೌರವ ಸೂಚಿಸುವುದು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದು ನಮ್ಮ ಪುರಾಣ ಕಥೆಗಳ ಮೌಲ್ಯವನ್ನು ತಿಳಿದುಕೊಳ್ಳುವುದು ಇವೆಲ್ಲವೂ ಶಿಕ್ಷಣದ ಜೊತೆಯಾದಾಗ ಮಾತ್ರ ನಾವೊಂದು ಒಳ್ಳೆಯ ಮಗುವನ್ನು ಸಮಾಜಕ್ಕೆ ನೀಡಲು ಸಾಧ್ಯ, ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರ ನಡುವಿನ ಸಂಬಂಧ ಉತ್ತಮವಾಗಿದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು.

     ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಶ್ರೀಮತಿ ರಾಜಶ್ರೀ ನಟ್ಟೋಜರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಮಾಲತಿ.ಡಿ. ಭಟ್ ಸ್ವಾಗತಿಸಿ, ಶಿಕ್ಷಕಿಯರು ಕುಮಾರಿ ಶ್ರುತಿ ಶೆಟ್ಟಿ ವಂದಿಸಿ, ಶ್ರೀಮತಿ  ಶೈಲಶ್ರೀ  ಕಾರ್ಯಕ್ರಮವನ್ನು ನಿರೂಪಿಸಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆ – ‘ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿವೇಕಾನಂದ ವಿದ್ಯಾಸಂಸ್ಥೆಯು ಪೂರಕ’ -ರವೀಂದ್ರ ಪಿ

ಪುತ್ತೂರು, ಮೇ 30: ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಹಿರಿದು. ತಮ್ಮ ಮಕ್ಕಳೊಡನೆ ಸೂಕ್ಷ್ಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಸಂವೇದನೆಗೆ ಸ್ಪಂದಿಸಬೇಕು. ಈ ಮೂಲಕ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡಬೇಕು. ಭವಿಷ್ಯದಗುರಿಯು ಪ್ರಾಮಾಣಿಕವಾಗಿದ್ದು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಹೇಳಿದರು.


ಅವರು ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾಸಂಸ್ಥೆಯು ಸಮಾಜಕ್ಕೆ ಒಳಿತನ್ನು ಮಾಡುವ ಸಂಸ್ಥೆ. ಶಿಕ್ಷಣದ ನಿಜವಾದ ಉದ್ದೇಶವನ್ನು ಅರ್ಥಗೊಳಿಸಲು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಈ ಸಂಸ್ಥೆಯು ಪೂರಕವಾಗಿದೆ. ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು. ಸಾಧನೆಯ ಹಾದಿಯಲ್ಲಿ ಸಾಗಬೇಕು. ಸ್ವಂತಿಕೆ-ಸ್ವಾಭಿಮಾನಗಳನ್ನು ಮೆರೆಯಬೇಕು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ವಿದ್ಯಾರ್ಥಿಗಳು ನೈತಿಕತೆ, ಆದರ್ಶ ಮತ್ತು ಸಾಧನೆಗಳ ಮೂಲಕ ಪಕ್ವಗೊಳ್ಳಬೇಕು ಎಂದರು.


ಉಪನ್ಯಾಸಕಿ ಸ್ನೇಹಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಕಾಲೇಜಿನ ನೀತಿ ನಿಯಮಾವಳಿಗಳ ಸ್ಥೂಲ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಕೋಚಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕೋಚಿಂಗ್‌ ತರಬೇತಿ ಸಂಯೋಜಕ ಭೀಮ ಭಾರದ್ವಾಜ್ ತಿಳಿಸಿದರು.

ಸಿಪ್ಸ್ನಿತ್ಯ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಉಪನ್ಯಾಸಕ ಶ್ರೀವತ್ಸ ನೀಡಿದರು. ಕಾಲೇಜಿನ ವಸತಿ ನಿಲಯದ ನಿಯಮಗಳ ಬಗ್ಗೆ ಮುಖ್ಯ ನಿಲಯಪಾಲಕ ಚೇತನ್ ಮಾಹಿತಿಯನ್ನು ಒದಗಿಸಿಕೊಟ್ಟರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದೀಪ್ತಿ ಪ್ರಭು, ಪಲ್ಲವಿ ಭಟ್ ಮತ್ತು ಶ್ರುತಿ ಪ್ರಾರ್ಥಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಸದಸ್ಯೆ ವತ್ಸಲಾರಾಜ್ಞಿ, ಸದಸ್ಯ ಕೆ.ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಹರ್ಷಿತಾ ಪಿ ಕಾರ್ಯಕ್ರಮವನ್ನು ನಿರೂಪಿಸಿ ಶ್ರುತಿ ಎ ವಂದಿಸಿದರು.

ವೃತ್ತಿನಿರತ ಯಕ್ಷಗಾನ ಕಲಾವಿದರ 25ನೇ ವರ್ಷದ ಸಮಾವೇಶ

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ, ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗಸಂಸ್ಥೆ ಯಕ್ಷನಿಧಿಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರತೀವರ್ಷ ಕಲಾವಿದರ ಸಮಾವೇಶವನ್ನು ನಡೆಸಿಕೊಂಡು ಬಂದಿದೆ.

ಯಕ್ಷನಿಧಿಯ 25ನೇ ವರ್ಷದ ಸಮಾವೇಶ ಜೂನ್ 1, 2023 ಗುರುವಾರ ದಿನಪೂರ್ತಿ ಕಾರ್ಯಕ್ರಮವಾಗಿ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಲಿದೆ. ಪೂರ್ವಾಹ್ನ 10.00 ಘಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರ ಆಧ್ಯಕ್ಷತೆಯಲ್ಲಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಧು ನಟರಾಜ್ ಸಮಾವೇಶವನ್ನು ಉದ್ಘಾಟಿಸಲಿರುವರು.

ಅಪರಾಹ್ನ 2.30 ಗಂಟೆಗೆ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಆನಂದ ಸಿ. ಕುಂದರ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ, ಕೆನರಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಮೊಗವೀರ ಮಹಾಸಭಾ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಕೋಟ್ಯಾನ್ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ಗೃಹನಿರ್ಮಾಣ ನೆರವು, ವೈದ್ಯಕೀಯ ನೆರವು ನೀಡಲಿದ್ದೇವೆ. ಪೂವಾಹ್ನ 8.30 ರಿಂದ 10.00ರ ವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಸಲಾಗುವುದು.

ಪೂರ್ವಾಹ್ನ 10.30 ಗಂಟೆಗೆ ವಿದುಷಿ ಮಧು ನಟರಾಜ್ ಮತ್ತು ಬಳಗದವರಿಂದ ನೃತ್ಯ ಪ್ರಾತ್ಯಕ್ಷಿಕೆ ಜರಗಲಿದೆ.

ಅಪರಾಹ್ನ 12.00ಗಂಟೆಗೆ ಕಲಾವಿದರಿಂದ ‘ಸಮಯಮಿತಿ ಯಕ್ಷಗಾನ ಸುಖ-ಕಷ್ಟ’ ಎಂಬ ವಿಷಯದ ಕುರಿತು ಕಲಾವಿದರು ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಡಿಂಬಾ ವಿವಾಹ, ಅಂಗಾರಪರ್ಣ ಕಾಳಗ, ಕರ್ಣಾರ್ಜುನ ಕಾಳಗ – ಬಜಪೆ ಬಸ್ ಸ್ಟಾಂಡ್ ಬಳಿಯಲ್ಲಿ ಇಂದು ಕಟೀಲು ಮೇಳದ ಯಕ್ಷಗಾನ

ಬಜಪೆ ಬಸ್ ಸ್ಟಾಂಡ್ ಬಳಿಯಲ್ಲಿ ಮೇ 25ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

25.05.2023ರಂದು  ಗುರುವಾರ ಸಂಜೆ 5.45 ಘಂಟೆಯಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ  5.45 ಘಂಟೆಗೆ ಆರಂಭವಾಗಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಕಟೀಲು ಮೇಳದ ಕಲಾವಿದರಿಂದ ಹಿಡಿಂಬಾ ವಿವಾಹ, ಅಂಗಾರಪರ್ಣ ಕಾಳಗ, ಕರ್ಣಾರ್ಜುನ ಕಾಳಗ ಎಂಬ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ ಎಂದು ಮೇಳದ ಪ್ರಕಟಣೆ ತಿಳಿಸಿದೆ.  

ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ತಾಳಮದ್ದಲೆಗೆ ಚಾಲನೆ

ತಾಳಮದ್ದಲೆ ಸಪ್ತಾಹದ ಅಂಗವಾಗಿ 3ನೇ ದಿನ ಬನ್ನಂಜೆ ಶ್ರೀ ಶಿವಗಿರಿ ಸಭಾಭವನದಲ್ಲಿ ಹರ್ಷ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಸೂರ್ಯಪ್ರಕಾಶ್‌ ಅವರು 23-05-2023ರಂದು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬನ್ನಂಜೆ ಬಿಲ್ಲವರ ಸೇವಾ ಸಂಘದ ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಕಲಾರಂಗದ ಉಪಾಧ್ಯಕರುಗಳಾದ ಎಸ್. ವಿ.ಭಟ್, ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.

ಗಣೇಶ್ ಬ್ರಹ್ಮಾರ ಕಾರ್ಯಕ್ರಮ ನಿರೂಪಿಸಿದರು. ನಂತರ ತಾಳಮದ್ದಲೆ ವಾಮನ ಚರಿತ್ರೆ ಪ್ರಸ್ತುತಗೊಂಡಿತು.

ಕಟೀಲು ಕ್ಷೇತ್ರದಲ್ಲಿ ಪತ್ತನಾಜೆಯಂದು ಆರು ಮೇಳಗಳ ಯಕ್ಷಗಾನ ಪ್ರದರ್ಶನ – ವಿದ್ಯುನ್ಮತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ರತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ 

ಕಟೀಲು ಕ್ಷೇತ್ರದಲ್ಲಿ ಮೇ 26ರಂದು ಈ ವರ್ಷದ ತಿರುಗಾಟದ ಕೊನೆಯ ಸೇವೆಯಾಟದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.

26.05.2023ರಂದು ಸಂಜೆ 7 ಘಂಟೆಯಿಂದ ಮರುದಿನ ಬೆಳಿಗ್ಗಿನ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ ಏಳು ಘಂಟೆಗೆ ಆರಂಭವಾಗಲಿರುವ ಯಕ್ಷಗಾನ ಪ್ರದರ್ಶನದಲ್ಲಿ ಆರು ಮೇಳಗಳ ಕಲಾವಿದರಿಂದ  ವಿದ್ಯುನ್ಮತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ, ರತಿ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಎಂಬ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ. 

ಓಡಿಹೋದ ವರನನ್ನು 20 ಕಿಮೀಗಿಂತ ಹೆಚ್ಚು ಓಡಿಸಿ, ಅವನನ್ನು ಮದುವೆಯ ಮಂಟಪಕ್ಕೆ ಮರಳಿ ಕರೆತಂದ ವಧು

ಉತ್ತರ ಪ್ರದೇಶದ ಬರೇಲಿಯಲ್ಲಿ ವಧುವಿನ ಮದುವೆಯ ದಿನವು ಆಕೆಯ ವರನಿಗೆ ಅನಿರೀಕ್ಷಿತ ಬೆನ್ನಟ್ಟುವಿಕೆಯಾಗಿ ಮಾರ್ಪಟ್ಟಿದೆ, ಏಕೆಂದರೆ ವರನು ತಾನು ಮದುವೆಯಾಗಲು ಒಪ್ಪಿಕೊಂಡ ವಧುವನ್ನು ಮದುವೆಯಾಗಲು ನಿರಾಕರಿಸಿದನು.

ವರನು ತನ್ನನ್ನು ತಿರಸ್ಕರಿಸಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ವಧು, ತನ್ನ ಮದುವೆಯ ಉಡುಪನ್ನು ಧರಿಸಿ, ಆ ವ್ಯಕ್ತಿಯನ್ನು ಹುಡುಕಲು ಮತ್ತು ಅವನನ್ನು ಮದುವೆಯಾಗಲು 20 ಕಿಲೋಮೀಟರ್‌ಗಳಷ್ಟು ಓಡಿ ಹಿಡಿದು ತಂದಳು.

ಎರಡೂವರೆ ವರ್ಷದಿಂದ ತನ್ನೊಡನೆ ರಿಲೇಶನ್ ಶಿಪ್ ಹೊಂದಿದ್ದ ತನ್ನ ವರ ಮದುವೆಯಾಗುವುದಿಲ್ಲ ಎಂದು ಹೇಳಿದಾಗ ತಾನೂ ಅವನನ್ನು ಹುಡುಕಿಕೊಂಡು ಹೋಗಲು ನಿರ್ಧರಿಸಿದಳು. ಮದುವೆಯ ದಿನ ಆಕೆ ಫೋನ್ ಮಾಡಿದಾಗ ತಾನು ತನ್ನ ತಾಯಿಯನ್ನು ಮದುವೆಗೆ ಕರೆದುಕೊಂಡು ಬರಲು ಹೋಗಿರುವುದಾಗಿ ವರ ಹೇಳಿದರೂ ಆಕೆ ಅದನ್ನು ನಂಬಲಿಲ್ಲ.

ಬರೇಲಿ ನಗರ ವ್ಯಾಪ್ತಿಯ ಹೊರಗಿರುವ ಪೊಲೀಸ್ ಠಾಣೆಯ ಬಳಿ ಬಸ್‌ನಲ್ಲಿ ವರ ಪತ್ತೆಯಾಗಿದ್ದಾನೆ. ಎರಡು ಗಂಟೆಗಳ ಕಾಲ ನಡೆದ ನಾಟಕೀಯ ವಿನಿಮಯದ ನಂತರ, ವಧು, ಆಕೆಯ ಕುಟುಂಬ ಹಾಗೂ ವ್ಯಕ್ತಿಯ ಕುಟುಂಬದವರು ಅವರನ್ನು ದೇವಸ್ಥಾನಕ್ಕೆ ಕರೆದೊಯ್ದರು.

ವರನ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿದರು ಮತ್ತು ಬರೇಲಿ ನಗರದ ಹೊರಗಿನ ದೇವಸ್ಥಾನದಲ್ಲಿ ಇಬ್ಬರನ್ನು ವಿವಾಹ ಬಂಧನಕ್ಕೆ ಒಳಪಡಿಸಲಾಯಿತು.

ಸಮಾರಂಭದ ವೀಡಿಯೋಗಳು ಸರಳ ಉಡುಪಿನಲ್ಲಿ ವರನನ್ನು ಹಾಗೂ ಮದುವೆಯ ಉಡುಪಿನಲ್ಲಿ ವಧುವನ್ನು ತೋರಿಸುತ್ತವೆ. ವರನೊಂದಿಗಿನ ತನ್ನ ತನ್ನ ಎರಡೂವರೆ ವರ್ಷಗಳ ಸಂಬಂಧವನ್ನು ವಿವಾಹದ ಮೂಲಕ ಗಟ್ಟಿಗೊಳಿಸಿದ ವಧುವಿನ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತೆಂಕುತಿಟ್ಟಿನ ಹಿರಿಯ ಮದ್ದಲೆವಾದಕ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ ನಿಧನ

ತೆಂಕುತಿಟ್ಟಿನ ಹಿರಿಯ ಚಂಡೆ-ಮದ್ದಲೆವಾದಕರಾದ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ (76 ವರ್ಷ) 21-05-2023ರಂದು ಅಶ್ವತ್ಥಪುರದ ಮಿಜಾರಿನಲ್ಲಿ ನಿಧನರಾದರು.

ಕೂಡ್ಲು, ಮಂಗಳಾದೇವಿ, ಉಳ್ಳಾಲ ಭಗವತಿ ಮತ್ತು 25 ವರ್ಷಕ್ಕೂ ಮೇಲ್ಪಟ್ಟು ಕಟೀಲು ಮೇಳಗಳಲ್ಲಿ ಹೆಚ್ಚಿನ ಪ್ರಸಿದ್ಧ ಭಾಗವತರಿಗೆ ಚಂಡೆ-ಮದ್ದಲೆ ವಾದಕರಾಗಿ ಕಲಾಸೇವೆಗೈದಿದ್ದರು.

ಪೂರ್ವರಂಗದ ಹಾಡುಗಳನ್ನು ಹಾಡುವಕ್ರಮವನ್ನು ತಿಳಿದಿದ್ದರು. 2020ರಲ್ಲಿ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ.

ಇವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗ0ಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಎಸ್. ಎನ್. ಪಂಜಾಜೆ ವಿಧಿವಶ

ಎಸ್. ಎನ್. ಪಂಜಾಜೆ ಎಂದೇ ಪ್ರಸಿಸದ್ಧರಾಗಿದ್ದ ಪಂಜಾಜೆ ಸೂರ್ಯನಾರಾಯಣ ಭಟ್ (71) ಇಂದು (22-05-2023) ಇಹಲೋಕ ಯಾತ್ರೆ ಮುಗಿಸಿದರು.

ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ್ದರು.

ನಾಡಿನ ರಾಜಧಾನಿಯಲ್ಲಿದ್ದು ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಅನ್ಯಾನ್ಯ ಜಿಲ್ಲೆಗಳಲ್ಲಿ, ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಭಾಜನರಾಗಿದ್ದಾರೆ.

ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ನಮ್ಮ ಸಂಸ್ಥೆ ಯಕ್ಷಗಾನ ಕಲಾರಂಗಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಿದ ನೆನಪು ಹಸಿರಾಗಿದೆ. ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೆಲ್ಮೆಟ್ ಇಲ್ಲದೇ ಪಿಲಿಯನ್ ರೈಡಿಂಗ್ ಮಾಡಿ ಸಿಕ್ಕಿಬಿದ್ದ ಬೆಂಗಳೂರು ಪೊಲೀಸರು – ಕೂಡಲೇ ಪ್ರತಿಕ್ರಿಯೆ ನೀಡಿದ ಟ್ರಾಫಿಕ್ ಪೊಲೀಸರು

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುತ್ತಿರುವ ಬೆಂಗಳೂರಿನ ಪೊಲೀಸರ ಚಿತ್ರವನ್ನು ಟ್ವಿಟರ್ ಖಾತೆದಾರರು ಹಂಚಿಕೊಂಡಿದ್ದಾರೆ.

ಮೋಟಾರು ವಾಹನಗಳ ಕಾಯಿದೆ, ನಿರ್ದಿಷ್ಟವಾಗಿ ಸೆಕ್ಷನ್ 129, ದ್ವಿಚಕ್ರ ವಾಹನ ಚಾಲಕರನ್ನು ಉದ್ದೇಶಿಸಿ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದು/ಸವಾರಿ ಮಾಡುವುದು ಸಂಚಾರ ಉಲ್ಲಂಘನೆ ಮತ್ತು ದೇಶದಲ್ಲಿ ಕಾನೂನುಬಾಹಿರ ಅಪರಾಧ ಎಂದು ಹೇಳುತ್ತದೆ.

ಇತ್ತೀಚೆಗೆ, ಟ್ವಿಟ್ಟರ್ ಬಳಕೆದಾರರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಪಿಲಿಯನ್ ಸವಾರಿ ಮಾಡುತ್ತಿರುವ ಬೆಂಗಳೂರಿನ ಪೋಲೀಸರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮೇ 13 ರಂದು ಕ್ವೀನ್ಸ್ ಸರ್ಕಲ್‌ನಲ್ಲಿ ಚಿತ್ರ ತೆಗೆಯಲಾಗಿದೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಬರೆದಿದ್ದಾರೆ, ”ಇದರ ಬಗ್ಗೆ ನಮಗೆ ತಿಳಿಸಿದ್ದಕ್ಕಾಗಿ ನಾವು ನಿಮ್ಮನ್ನು ಪ್ರಶಂಸಿಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸಂಚಾರ-ಸಂಬಂಧಿತ ಉಲ್ಲಂಘನೆಗಳನ್ನು ವರದಿ ಮಾಡಲು ನೀವು ಸಾರ್ವಜನಿಕ ಕಣ್ಣಿನ ಪೋರ್ಟಲ್ ಅನ್ನು ಬಳಸಬಹುದು, ಇದು ಸಂಚಾರ ಉಲ್ಲಂಘನೆಗಳನ್ನು ಜಾರಿಗೊಳಿಸಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಇತ್ತೀಚೆಗೆ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಿಗೆ ನಗರದ ರಸ್ತೆಗಳಲ್ಲಿ ಲಿಫ್ಟ್ ನೀಡುವಾಗ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಇಬ್ಬರು ಮೋಟಾರ್ ಸೈಕಲ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ.