Saturday, March 14, 2026
Home Blog Page 88

ಯಕ್ಷಗಾನ ತರಬೇತಿ ಉದ್ಘಾಟನೆ

20-07-2023 ರಂದು ಬ್ರಹ್ಮಾವರದ ಎಸ್.ಎಮ್.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆಗೊಂಡಿತು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾದ್ಯಕ್ಷ ವಿ. ಜಿ. ಶೆಟ್ಟಿ ಯಕ್ಷಶಿಕ್ಷಣ ಯಶಸ್ವಿಯಾಗುವಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಬಹಳ ಮುಖ್ಯವಾದುದೆಂದು ಹೇಳಿದರು.

ಹಿರಿಯ ಶಿಕ್ಷಕಿ ಲಕ್ಷ್ಮಿಯವರು ಸ್ವಾಗತಿಸಿದರು. ಯಕ್ಷ ಗುರು ಮಂಜುನಾಥ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಕವಿತಾ ಧನ್ಯವಾದ ಸಮರ್ಪಿಸಿದರು.

ಯಕ್ಷಗಾನ ಕಾರ್ಯಕ್ರಮ ಮತ್ತು ಯಕ್ಷಗಾನ ಶಿಕ್ಷಣ

ಕಾಪು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭ.

ಯಕ್ಷಶಿಕ್ಷಣ ಟ್ರಸ್ಟ್ ಇವರ ಸಹಯೋಗದಲ್ಲಿ ಯಕ್ಷಗಾನದ ತರಗತಿಯು ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಇಂದು (12-7-2023) ಆರಂಭವಾಯಿತು.

ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಕ್ಕಳಿಗೆ ಪುರಾಣಜ್ಞಾನ, ಭಾರತೀಯ ಸಂಸ್ಕೃತಿಯ ತಿಳಿವನ್ನು ಹೆಚ್ಚಿಸಿಕೊಳ್ಳಲು ಯಕ್ಷಗಾನ ಸಹಕಾರಿಯಾಗಿದೆ ಎಂದು ಅವರು ನುಡಿದರು.

ಕಲಾರಂಗದ ಉಪಾಧ್ಯಕ್ಷರಾದ ವಿ. ಜಿ. ಶೆಟ್ಟರು ಶುಭ ಹಾರೈಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿಯಾದ ಮುರಲಿ ಕಡೆಕಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಯಕ್ಷಶಿಕ್ಷಣ ಸಹಕಾರಿ ಎಂಬುದನ್ನು ಅರಿತ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ವಿಶೇಷ ಆಸಕ್ತಿಯಿಂದಾಗಿ ಈ ಬಾರಿ ಕಾಪು ವಿಧಾನಸಭಾ ವ್ಯಾಪ್ತಿಯ 15 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಗತಿ ಆರಂಭಿಸಲಾಗಿದೆ ಎಂದರು.

ಪ್ರೌಢಶಾಲಾ ಮುಖ್ಯಶಿಕ್ಷಕರಾದ ಅನುರಾಧಾ ಪಿ. ಎಸ್. ಇವರು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾದ ಅಶೋಕ ಕೆ. ಇವರು ಕೃತಜ್ಞತೆ ಸಮರ್ಪಿಸಿದರು.

ಸಂಸ್ಕೃತ ಭಾಷಾ ಶಿಕ್ಷಕರಾದ ಡಾ. ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನದ ಗುರುಗಳಾದ ನಿತಿನ್ ಪಡುಬಿದ್ರಿ ಇವರು ಗಣಪತಿ ಸ್ತುತಿಯೊಂದಿಗೆ ಯಕ್ಷಗಾನ ತರಬೇತಿಯನ್ನು ಆರಂಭಿಸಿದರು

ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಯಕ್ಷಗಾನ ಕಲಾವಿದೆ ಅದಿತಿ

ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅದಿತಿ ಉರಾಳ

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಭೇತಿ ಕೇಂದ್ರ ನಡೆಸಿದ 2020-2021 ರ ಸಾಲಿನ ಭಾರತದ ಯುವ ಪ್ರತಿಭಾ ಶೋಧದಲ್ಲಿ ಬೆಂಗಳೂರಿನ ಜಾನಪದ ಹಾಗೂ ಯಕ್ಷಗಾನ ಕಲಾವಿದೆ ಅದಿತಿ ಉರಾಳ ಜಾನಪದ ರಂಗಭೂಮಿ(ಯಕ್ಷಗಾನ) ಯುವ ಪ್ರತಿಭೆ ವಿದ್ಯಾರ್ಥಿ ವೇತನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಕುಂದಾಪುರದ ಕೋಟ ಗ್ರಾಮದ ಉರಾಳ ಕುಟುಂಬದವರಾಗಿದ್ದು ಪ್ರಸಿದ್ಧ ಯಕ್ಷಗಾನ,ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರು ಆದ ಡಾ.ರಾಧಾಕೃಷ್ಣ ಉರಾಳ ಹಾಗೂ ಶಿಕ್ಷಕಿ ಮಮತ ಉರಾಳರ ಮಗಳು.

ಇವರು ಎಂ ಎ ಪದವಿ ವ್ಯಾಸಂಗ ಮಾಡುತ್ತಿದ್ದು ಜಾನಪದ,ರಂಗಭೂಮಿ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಅಲ್ಲದೇ ಡಾ.ರಾಧಾಕೃಷ್ಣ ಉರಾಳರ ಹಾಗೂ ಖ್ಯಾತ ಯಕ್ಷಗಾನ ಕಲಾವಿದ ಭರತ್ ರಾಜ್ ಪರ್ಕಳರ ನಿರ್ದೇಶನದ ಕೃಷ್ಣ ಪಾರಿಜಾತ,ಸುದರ್ಶನ ವಿಜಯ,ವೀರ ಬರ್ಬರೀಕ ಹೀಗೆ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಜನ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

ಈ ವಿದ್ಯಾರ್ಥಿ ವೇತನಕ್ಕೆ ಭಾಜನರಾದ ಇವರನ್ನು ಕಲಾಕದಂಬ ಆರ್ಟ್ ಸೆಂಟರ್,ಕರಬ ಪ್ರತಿಷ್ಠಾನ ಹಾಗೂ ಅರ್ಬನ್ ಕಲಾ ಸ್ಟುಡಿಯೋ ಅಭಿನಂದಿಸಿದೆ.

ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ – ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ, ಕುಬಣೂರು ಸಂಸ್ಮರಣೆ

ಕಟೀಲು ಸರಸ್ವತಿ ಸದನದಲ್ಲಿ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ, ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಮಂಡೆಚ್ಚ ಪ್ರಶಸ್ತಿ ಪ್ರದಾನ ಮತ್ತು ಕುಬಣೂರು ಶ್ರೀಧರ ರಾವ್ ಸಂಸ್ಮರಣೆ ನಡೆಯಲಿದೆ.

ದಿನಾಂಕ 15.07.2023ನೇ ಶನಿವಾರ ಸಂಜೆ 4 ಘಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಖ್ಯಾತ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಮಂಡೆಚ್ಚ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನಂತರ ಕೀರ್ತಿಶೇಷ ಭಾಗವತರಾದ ದಿ| ಕುಬಣೂರು ಶ್ರೀಧರ ರಾವ್ ಅವರ ಸಂಸ್ಮರಣೆ ನಡೆಯಲಿದೆ.

ನಂತರ ಕೃಷ್ಣ ಸಂಧಾನ, ಸೈಂಧವ ವಧೆ, ದುಶ್ಶಾಸನ ವಧೆ, ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ತಾಳಮದ್ದಳೆ ಅಷ್ಟಾಹ – ತಾಳಮದ್ದಳೆ ಪ್ರಿಯರಿಗೆ ಎಂಟು ದಿನಗಳ ಹಬ್ಬದೂಟ

ತಾಳಮದ್ದಳೆ ಪ್ರಿಯರಿಗೆ ಎಂಟು ದಿನಗಳ ಹಬ್ಬದೂಟ ಸಿಗಲಿದೆ.

ಜುಲೈ 30 ರಿಂದ ಆಗಸ್ಟ್ 6ರ ತನಕ ಎಡನೀರು ಮಠದಲ್ಲಿ ಈ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರವನ್ನು ಗಮನಿಸಿ.

ಈ ಎಂಟು ದಿನಗಳಲ್ಲಿ ಭೃಗುಶಾಪ, ಬಲಿದಾನ, ಶ್ರೀರಾಮ ವನಗಮನ, ಭೀಷ್ಮ ವಿಜಯ, ಊರ್ವಶಿ ಮತ್ತು ಉತ್ತರ, ವಾಲಿವಧೆ, ವಿಭೀಷಣ ಮತ್ತು ಅಂಗದ, ಶಲ್ಯ ಸಾರಥ್ಯ ಮೊದಲಾದ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಪುನರಾಯ್ಕೆ

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಪುನರಾಯ್ಕೆ

ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 48ನೆಯ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಜುಲೈ 10, 2023ರಂದು ಸಭೆ ನಡೆಸಿ ಎಂ. ಗಂಗಾಧರ ರಾವ್ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.

2023-24ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು.
ಉಪಾಧ್ಯಕ್ಷರು : ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ,

ಕಾರ್ಯದರ್ಶಿ: ಮುರಲಿ ಕಡೆಕಾರ್, ಜೊತೆಕಾರ್ಯದರ್ಶಿಗಳು : ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ : ಪ್ರೊ. ಕೆ. ಸದಾಶಿವ ರಾವ್,

ಸದಸ್ಯರು : ಕೆ. ಗಣೇಶ್ ರಾವ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಪ್ರೊ. ಎಂ. ಎಲ್. ಸಾಮಗ, ಎಸ್. ಗಣರಾಜ್ ಭಟ್, ಬಿ. ಭುವನಪ್ರಸಾದ್ ಹೆಗ್ಡೆ, ಶ್ರೀಧರ ರಾವ್, ಅನಂತರಾಜ ಉಪಾಧ್ಯ, ಎಚ್. ಎನ್. ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ. ಪೂಜಾರಿ, ಡಾ. ರಾಜೇಶ್ ನಾವಡ, ಮಂಜುನಾಥ ಹೆಬ್ಬಾರ್, ಸಂತೋಷ್ ಕುಮಾರ್ ಶೆಟ್ಟಿ.


ಆಹ್ವಾನಿತರು : ಕೆ. ಆನಂದ ಶೆಟ್ಟಿ, ಶಿವರಾಮ ಭಟ್, ಗಣೇಶ್ ಬ್ರಹ್ಮಾವರ, ಕೃಷ್ಣಮೂರ್ತಿ ಭಟ್, ಡಾ. ಶೈಲಜಾ, ಕಿಶೋರ್ ಸಿ. ಉದ್ಯಾವರ, ರಮೇಶ್ ರಾವ್, ಡಾ. ಪ್ರಥ್ವಿರಾಜ್ ಕವತ್ತಾರ್, ಗಣೇಶ ರಾವ್ ಎಲ್ಲೂರು, ರಾಜೀವಿ, ನಾಗರಾಜ ಹೆಗಡೆ, ರಮಾನಾಥ ವಿ. ಶಾನ್‌ಭಾಗ್, ಸುದರ್ಶನ ಬಾಯರಿ, ಪ್ರಸಾದ್ ರಾವ್, ವಿಶ್ವನಾಥ.

ಸರಕಾರಿ ಪ್ರೌಢ ಶಾಲೆ ನುಕ್ಕೂರು – ಯಕ್ಷಗಾನ ತರಬೇತಿ ಉದ್ಘಾಟನೆ

ಸರಕಾರಿ ಪ್ರೌಢ ಶಾಲೆ ನುಕ್ಕೂರು ಯಕ್ಷಗಾನ ತರಬೇತಿ ಉದ್ಘಾಟನೆ.


ಸರಕಾರಿ ಪ್ರೌಢಶಾಲೆ ನುಕ್ಕೂರು ಇಲ್ಲಿ ದಿನಾಂಕ 11.07.2023ನೇ ಮಂಗಳವಾರದಂದು ಯಕ್ಷಗಾನ ತರಗತಿಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾರ್ಯದರ್ಶಿಯಾಗಿರುವ ಮುರಲಿ ಕಡೆಕಾರ್ ಇವರು ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದ ವೇದಿಕೆಯಲ್ಲಿ ಯಕ್ಷಶಿಕ್ಷಣ, ಟ್ರಸ್ಟ್ನ ಸದಸ್ಯರಾಗಿರುವ ಗಣೇಶ ಬ್ರಹ್ಮಾವರ, ಯಕ್ಷಗಾನದ ಗುರುಗಳಾದ ಮಹೇಶ್ ಮಂದಾರ್ತಿ. ಮುಖ್ಯ ಶಿಕ್ಷಕರಾಗಿರುವ ವಿಜಯ ಕುಮಾರ್ ಹಾಗೂ ಯಕ್ಷಗಾನ ತರಗತಿಯ ನೋಡಲ್ ಶಿಕ್ಷಕಿಯಾದ ಸಪ್ನಾ ಗಾಂವ್ಕರ್ ಉಪಸ್ಥಿತರಿದ್ದರು.

ಸಂಸ್ಥೆಯ ಶಿಕ್ಷಕರುಗಳಾದ ಸತೀಶ್ ಜಿ., ಪ್ರೀತಿ ಹಾಜರಿದ್ದರು. ಕಾರ್ಯಕ್ರಮವನ್ನು ಸುಜಾತ ಕುಮಾರಿ ನಿರ್ವಹಿಸಿದರೆ ಆಂಗ್ಲಭಾಷಾ ಶಿಕ್ಷಕರಾದ ರವಿ ನಾಯಕ್ ವಂದಿಸಿದರು.

ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ – ಯಕ್ಷಗಾನ ಪ್ರದರ್ಶನ

” ಸ್ವಸ್ತಿಶ್ರೀ ” ಕಲಾ ಪ್ರತಿಷ್ಟಾನ ಎಡನಾಡು – ಕುಂಬಳೆ : 671 321, ಇವರು ದಿನಾಂಕ 15-06-2023 ಗುರುವಾರ ರಾತ್ರಿ ಘ೦ಟೆ 8 ರಿಂದ ಶ್ರೀ ಶಂಕರ ರೈ ಮಾಸ್ಟರ್ ನೇತೃತ್ವದಲ್ಲಿ ಯಕ್ಷಗಾನ ಕಲಾವಿದ, ಯಕ್ಷಗುರು ಶ್ರೀ ಶಿವಶಂಕರ ಭಟ್ ದಿವಾಣ ನಿರ್ಧೇಶನದಲ್ಲಿ ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನದಲ್ಲಿ ನಡೆಯಲಿದೆ.

ಯಕ್ಷಗಾನ ವಾಲ್ಮೀಕಿ, ಕುಂಬಳೆ ಪಾರ್ತಿಸುಬ್ಬ ವಿರಚತ ʼಪಂಚವಟಿʼ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ

ಸ್ಥಳ – ಕೇರಳದ ಸಾಂಸ್ಕೃತಿಕ ರಾಜದಾನಿ ತ್ರಿಶೂರ್ ನ ಭಾರತ್ ಭವನ: ರಿಮೆಂಬರ್ರೆನ್ಸ್ ತಿಯೇಟರ್ ಗ್ರೂಪ್ ‘ ಜೊಸ್ ಚಿರಮ್ಮಲ್ ನಾಟಕ ದ್ವೀಪ್ ‘ಮೋಸ್ಕೋ ನಗರ್, ತೈಕಾಟು ಷೇರಿ, ವಲ್ಲಾಚಿರ (ತ್ರಿಶೂರ್ )

ಹಿಮ್ಮೇಳ : ಭಾಗವತರು: ಶ್ರೀ ಸಚಿನ್ ಶೆಟ್ಟಿ ಕುದುರೆಪ್ಪಾಡಿ, ಚೆಂಡೆ ಮತ್ತು ಮದ್ದಳೆ ವಾದಕರಾಗಿ: ಶ್ರೀ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಮತ್ತುಶ್ರೀ ಶ್ರೀ ಸ್ಕಂದ ದಿವಾಣ ಪಾತ್ರ ಪರಿಚಯ : ಶ್ರೀರಾಮ – ಶ್ರೀ ನವೀನಚಂದ್ರಶರ್ಮ ಕುಂಬಳೆ, ಲಕ್ಷ್ಮಣ: ಶ್ರೀ ಯತೀಶ್ ಕುಲಾಲ್ ಕುಂಬಳೆ, ಸೀತೆ: ಕುಮಾರಿ ಚೈತ್ರ ಪಿ ಜಿ ಬೆದ್ರಡ್ಕ , ಘೋರ ಶೂರ್ಪನಖಿ : ಶ್ರೀ ರಂಜಿತ್ ಮಲ್ಲ, : ಮಾಯಾ ಶೂರ್ಪನಖಿ: ಕುಮಾರಿ ಶ್ರಾವ್ಯ ಬೆದ್ರಡ್ಕ , ಖರಾಸುರ: ಶ್ರೀ ಶಿವಶಂಕರ ಭಟ್ ದಿವಾಣ, ತ್ರಿಶಿರಾಸುರ: ಶ್ರೀ ಶೇಖರ ಜಯನಗರ : ವೇಷ ಭೂಷಣ ಸಹಕಾರ: ಶ್ರೀ ರಾಕೇಶ್ ಗೋಳಿಯಡ್ಕ, ಶ್ರೀ ದುರ್ಗಾ ವೇಷ ಭೂಷಣ ಮಲ್ಲ ಮೊದಲಾದವರು ಭಾಗವಹಿಸಲಿದ್ದಾರೆ.

ಶಿವಶಂಕರ ಭಟ್ ದಿವಾಣ , ಸ್ವಸ್ತಿಶ್ರೀ ಕಲಾ ಪ್ರತಿಷ್ಟಾನ ‘ಎಡ ನಾಡು ಸರ್ವರ ಶುಭ ಹಾರೈಕೆಗಳೊಂದಿಗೆ ಪ್ರೋತ್ಸಾಹವನ್ನು ಕೋರಿದ್ದಾರೆ.

ಯಕ್ಷಶಿಕ್ಷಣ ಟ್ರಸ್ಟ್ ಗುರುಗಳೊಂದಿಗೆ ಸಮಾಲೋಚನಾ ಸಭೆ

ಉಡುಪಿ : ಉಡುಪಿ ವಿಧಾನಸಭಾ ವ್ಯಾಪ್ತಿಯ 45 ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳ ಸಮಾಲೋಚನಾ ಸಭೆ ಇಂದು 10-06-2023ರಂದು ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು.

ಉಡುಪಿಯ ನಿಕಟಪೂರ್ವ ಶಾಸಕರೂ, ಟ್ರಸ್ಟ್ ಅಧ್ಯಕ್ಷರಾದ ಕೆ. ರಘುಪತಿ ಭಟ್ ಟ್ರಸ್ಟ್ ನಿಯಮಾವಳಿಯಂತೆ ಉಡುಪಿ ಶಾಸಕರಾಗಿ ಆಯ್ಕೆಯಾದ ಯಶಪಾಲ್ ಸುವರ್ಣರಿಗೆ ಟ್ರಸ್ಟ್ ನ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿ ಗೌರವಿಸಿದರು.

ಅಧಿಕಾರ ವಹಿಸಿಕೊಂಡ ಯಶಪಾಲ್ ಸುವರ್ಣರು ರಾಜ್ಯದಲ್ಲೇ ಅಪೂರ್ವವಾದ ಈ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಯಲು ಎಲ್ಲರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ. ರಘುಪತಿ ಭಟ್ ಶಾಲೆಗಳ ಯಕ್ಷಶಿಕ್ಷಣದಿಂದ ಯಕ್ಷಗಾನಕ್ಕೂ, ಮಕ್ಕಳಿಗೂ ಸಿಗುತ್ತಿರುವ ಪ್ರಯೋಜನವನ್ನು ತಿಳಿಸಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಮತ್ತು ಗುರುಗಳು ಈ ಯಸಸ್ಸಿಗೆ ಕಾರಣರಾಗಿದ್ದಾರೆ ಎಂದು ಅಭಿನಂದಿಸಿದರು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಟ್ರಸ್ಟಿಗಳಾದ ಮೀನಾಲಕ್ಷಣಿ ಅಡ್ಯಂತಾಯ, ಹೆಚ್.ಎನ್. ಶೃಂಗೇಶ್ವರ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಮಂಜುನಾಥ ಮತ್ತು ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು.

18 ಜನ ಯಕ್ಷಶಿಕ್ಷಣ ಗುರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ರಾಷ್ಟ್ರ ಮಟ್ಟದ ಯೋಗ ಪಂದ್ಯಾಟಕ್ಕೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ನಿಶ್ಚಲ್ ಕೆ.ಜೆ ಆಯ್ಕೆ

ಪುತ್ತೂರು, ಜೂ 09: ಸ್ಕೂಲ್‌ಗೇಮ್ ಫೆಡರೇಶನ್‌ ಆಫ್‌ ಇಂಡಿಯಾ ದೆಹಲಿಯಲ್ಲಿ ನಡೆಸುವ 66ನೇ ರಾಷ್ಟ್ರ ಮಟ್ಟದ ಯೋಗ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಈತನು ಪುತ್ತೂರಿನ ನೆಹರೂ ನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್‌ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ನಿಶ್ಚಲ್‌ ಕೆ.ಜಿ ಇವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ರವಿಶಂಕರ್, ಜ್ಯೋತಿ ಹಾಗೂ ಯತೀಶ್ ಬಾರ್ತಿಕುಮೆರ್‌ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವರು.