ರೀಲ್ ತಯಾರಿಕೆಗಾಗಿ ಐಫೋನ್ ಖರೀದಿಸಲು ಸ್ವಂತ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಗಾಳದ ಪರಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಯದೇವ್ ಘೋಷ್ ಮತ್ತು ಅವರ ಪತ್ನಿ ಸತಿ ತಮ್ಮ ಎಂಟು ತಿಂಗಳ ಗಂಡು ಮಗುವನ್ನು 2 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.
ಮಗು ಕಾಣೆಯಾಗಿದ್ದು, ದಂಪತಿ ದುಬಾರಿ ಫೋನ್ ಖರೀದಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದಂಪತಿಗೆ ಒಬ್ಬ ಮಗಳೂ ಇದ್ದಾಳೆ. ತಮ್ಮ ಗಂಡು ಮಗುವನ್ನು ಮಾರಾಟ ಮಾಡಿದ ನಂತರ, ದಂಪತಿಗಳು ಬಂಗಾಳದ ಪ್ರವಾಸಿ ಸ್ಥಳಗಳಿಗೆ ಮತ್ತು ನಂತರ ಬೀಚ್‌ಗಳಿಗೆ ಭೇಟಿ ನೀಡಿದರು.
ಜುಲೈ 24ರಂದು ಈ ಘಟನೆ ಬೆಳಕಿಗೆ ಬಂದಿದೆ.ಆದರೆ, . ಪೊಲೀಸರು ಮಗುವನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಮಗುವನ್ನು ಖರೀದಿಸಿದ ಮಹಿಳೆ ಪ್ರಿಯಾಂಕಾ ಘೋಷ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.
ಆದರೆ, ಮಗುವನ್ನು ಮಾರಾಟ ಮಾಡಿರುವುದು ನಂತರ ತಿಳಿದುಬಂದಿದೆ.
ಒಂದೂವರೆ ವರ್ಷಗಳ ಹಿಂದೆ ಪತ್ತನಂತಿಟ್ಟದ ಕಳಂಜೂರು ಪದಂನಿಂದ ನಾಪತ್ತೆಯಾಗಿದ್ದ ನೌಶಾದ್ (36) ತೊಡುಪುಳದಲ್ಲಿ ಪತ್ತೆಯಾಗಿದ್ದಾರೆ.
ಡಿವೈಎಸ್ಪಿ ಕಚೇರಿಗೆ ಕರೆತಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ನಿ ಅಫ್ಸಾನಾ ಜತೆ ವಿರಸ ಇತ್ತು. ತನ್ನ ಪತ್ನಿ ಅಫ್ಸಾನಾ ನನ್ನನ್ನು ಕೊಲೆ ಮಾಡಿದ್ದಾಳೆ ಎಂದು ಏಕೆ ಹೇಳಿದ್ದಾಳೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ ಎಂದು ನೌಷಾದ್ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಾಣಭಯದಿಂದ ಆಕೆಯ ಕೈಯಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದರು. ಪತ್ನಿ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಳು ಎಂದು ಹೇಳಿದ್ದಾನೆ. ಆಕೆ ಇತರ ಕೆಲವರೊಂದಿಗೆ ಸೇರಿ ಆತನಿಗೆ ಕ್ರೂರವಾಗಿ ಕಿರುಕುಳ ನೀಡುತ್ತಿದ್ದಳು.
ವಿಚಾರಣೆ ವೇಳೆ ತಾನು ನೌಶಾದ್ ಎಂದು ಒಪ್ಪಿಕೊಂಡಿದ್ದಾನೆ. ತೊಡುಪುಳ ಸಮೀಪದ ತೊಮ್ಮನ್‌ಕುತ್ ಎಂಬಲ್ಲಿ ಕೆಲವು ಕೆಲಸ ಮಾಡುತ್ತಿದ್ದ.
ಪತಿಯನ್ನು ಕೊಂದಿರುವುದಾಗಿ ಆತನ ಪತ್ನಿ ಅಫ್ಸಾನಾ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಆಕೆಯ ಹೇಳಿಕೆಯನ್ನು ಪರಿಗಣಿಸಿದ ಪೊಲೀಸರು ನಿನ್ನೆ ಆತನ ಮೃತದೇಹಕ್ಕಾಗಿ ಹಲವು ಸ್ಥಳಗಳನ್ನು ಪರೀಕ್ಷಿಸಿದ್ದಾರೆ.
ಆದರೆ ತನ್ನ ಪತಿಯನ್ನು ಮರಳಿ ಕರೆತರಲು ಬಯಸುವುದಾಗಿಯೂ ಹೇಳಿದ್ದಾಳೆ. ಇದರಿಂದ ನೌಶಾದ್ ಬದುಕಿರುವ ಶಂಕೆ ಪೊಲೀಸರಿಗೆ ಮೂಡಿತ್ತು.
ಬಂಧಿತ ಅಫ್ಸಾನಾ ಅವರನ್ನು ರಿಮಾಂಡ್ ಮಾಡಲಾಗಿದೆ. ಆಕೆಯ ಕಸ್ಟಡಿಗೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಲಿದ್ದಾರೆ. ಆಗೊಮ್ಮೆ ಈಗೊಮ್ಮೆ ತನ್ನ ಹೇಳಿಕೆಗಳನ್ನು ಹಿಂಪಡೆಯುತ್ತಲೇ ಇದ್ದಳು.
ಪತಿಯನ್ನು ಕೊಂದು ಶವವನ್ನು ಹೂತು ಹಾಕಿರುವುದಾಗಿ ಮಹಿಳೆಯೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಪತ್ತನಂತಿಟ್ಟದ ಕಳಂಜೂರ್ಪದಂನ ನೌಶಾದ್ (34) ಒಂದೂವರೆ ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಆತನ ಪತ್ನಿ ಅಫ್ಸಾನಾ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ. ಆಕೆಯ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ಕೊಂದು ಶವವನ್ನು ಅವರ ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ಹೂತು ಹಾಕಿರುವುದಾಗಿ ತಿಳಿದು ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಅವನು ಕುಡಿದು ಮನೆಗೆ ಬಂದು ತನ್ನ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾನೆ ಮತ್ತು ತನಗೆ ಬೇರೆ ದಾರಿಯಿಲ್ಲದ ಕಾರಣ ಅವನನ್ನು ಕೊಂದನು ಎಂದು ಅವಳು ಪೊಲೀಸರಿಗೆ ತಿಳಿಸಿದಳು.
ನವೆಂಬರ್ 2021 ರಲ್ಲಿ ನೌಶಾದ್ ಕಾಣೆಯಾದ ದೂರನ್ನು ದಾಖಲಿಸಲಾಗಿದೆ. ನಂತರ ಪೊಲೀಸರು ನೌಶಾದ್ ತಂದೆಯ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಪತ್ನಿ ನೌಷಾದ್‌ನನ್ನು ಕೊಂದು ಶವವನ್ನು ಹೂತು ಹಾಕಿರುವುದಾಗಿ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಬಳಿಕ ನದಿಗೆ ಎಸೆದಿರುವುದಾಗಿ ಹೇಳಿದ್ದಾಳೆ.
ನೌಶಾದ್ ಮತ್ತು ಆತನ ಪತ್ನಿ ಪರುತಿಪಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶವವನ್ನು ಇಲ್ಲಿಯೇ ಹೂಳಿದ್ದೇನೆ ಎಂದು ಹೇಳಿದ್ದಾಳೆ. ಅವಳು ತನ್ನ ಹೇಳಿಕೆಯನ್ನು ಬದಲಾಯಿಸುತ್ತಲೇ ಇರುವುದರಿಂದ ಯಾವುದನ್ನೂ ದೃಢೀಕರಿಸಲಾಗಿಲ್ಲ.
ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕೊಲೆಗೆ ಕಾರಣವಾಗಿತ್ತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ, ಪುತ್ತೂರು ಇಲ್ಲಿ ಪುತ್ತೂರು ವೃತ್ತ ಮಟ್ಟದ ಚೆಸ್ ಪಂದ್ಯಾಟವು ದಿನಾಂಕ 24-07-2023ರಂದು ನಡೆಯಿತು.
ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿ, ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯಾರ್ಥಿಗಳ ವಿವರ:
ಪ್ರಾಥಮಿಕ ವಿಭಾಗ:
1) ಹರ್ಷಿನ್ ವೈ 7ನೇ ತರಗತಿ(ಶ್ರೀ ದೇವಪ್ಪ ಗೌಡ ಮತ್ತು ಕುಸುಮ ದಂಪತಿ ಪುತ್ರ)
2) ಪೂರ್ಣ.ಕೆ 6ನೇ ತರಗತಿ(ಶ್ರೀ ಕೊಟ್ರೇಶ್ ಮತ್ತು ರಜನಿ ದಂಪತಿ ಪುತ್ರಿ)
ಪ್ರೌಢ ಶಾಲಾ ವಿಭಾಗ:
1) ವಿಶಾಲ್.ಪಿ 10ನೇ ತರಗತಿ (ಶ್ರೀ ವಿಠಲ.ಪಿ ಮತ್ತು ರೇಷ್ಮಾ ದಂಪತಿ ಪುತ್ರ)
2)ತ್ರಿಶೂಲ್.ಎನ್.ಡಿ 10ನೇ ತರಗತಿ (ಶ್ರೀ ದಾಮೋದರ ಮತ್ತು ನವೀನ ದಂಪತಿ ಪುತ್ರ)
3)ಸುಶ್ಮಿತಾ ತ್ರಿವಿಕ್ರಮ್ ರಾವ್ 10ನೇ ತರಗತಿ (ಶ್ರೀ ತ್ರಿವಿಕ್ರಮ್ ರಾವ್ ಮತ್ತು ಶಾರದಾ.ಜಿ ದಂಪತಿ ಪುತ್ರಿ)
ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವು ಅಧ್ಯಯನ ಯೋಗ್ಯ ಕಾರ್ಯಕ್ರಮ ನ್ನು ಆಯೋಜಿಸಿ ಯಶಸ್ವಿ ಯಾಗುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಮಣಿ ಕೃಷ್ಣ ಸ್ವಾಮಿ ಅಕಾಡಮಿಯವರ ಸಹಯೋಗ ದೊಂದಿಗೆ ದಿನಾಂಕ 29 ರಂದು ಶನಿವಾರ ಅಕಾಡಮಿಯ14 ನೇ ಶ್ರೀ ಧರ್ಮಸ್ಥಳ ಕ್ಷೇತ್ರ ಸಂಬಂದಿತ ಕೃತಿಗಳ ಸಂಗೀತ ಕಛೇರಿಯು ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯುವ ಸಂಗೀತ ಕಛೇರಿ ಯಲ್ಲಿ ಶ್ರೇಯಾ ಕೊಳತ್ತಾಯ, ಮೇಧಾ ಉಡುಪ, ಶರಣ್ಯಾ ಕೆ ಯನ್ ,ಸುಮೇಧಾ ಕೆ ಯನ್ ಹಾಡುಗಾರಿಕೆಯಲ್ಲಿ, ತನ್ಮಯಿ ಉಪ್ಪಂಗಳ ವಯೊಲಿನ್,ಕೌಶಿಕ್ ರಾಮಕೃಷ್ಣ ಮೃದಂಗ ದಲ್ಲಿ ಭಾಗವಹಿಸಲಿದ್ದಾರೆ.
ಅಪರಾಹ್ನ 2-30 ರಿಂದ ಸ್ಥಳೀಯ ಸಂಗೀತ ಅಭ್ಯಾಸಿಗಳಿಗೆ ಎರಡು ಕೃತಿಗಳನ್ನು ಕಲಿಸಿಕೊಡಲಾಗುವುದು. ಸಂಗೀತ ಅಸಕ್ತರಿಗೆ ಮುಕ್ತ ಪ್ರವೇಶವಿದೆ.
ಉಡುಪಿ : ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 65ನೇ ವಾರ್ಷಿಕ ಮಹಾಸಭೆ ಕೆ. ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 23, 2023ರಂದು ಜರಗಿತು.
ಸುನಿಲ್ ಕುಮಾರ್ ಗತಸಭೆ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಎ ಗಣೇಶ್ ಹೆಬ್ಬಾರ್‌ರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು. 2023-24ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ಅಧ್ಯಕ್ಷ : ಕೆ. ಅಜಿತ್ ಕುಮಾರ್, ಉಪಾಧ್ಯಕ್ಷ : ಕೆ. ಜೆ. ಗಣೇಶ್, ಕಾರ್ಯದರ್ಶಿ : ಪ್ರಕಾಶ ಹೆಬ್ಬಾರ್, ಜತೆಕಾರ್ಯದರ್ಶಿ : ನಚಿಕೇತ, ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ, ಗೌರವ ಸಲಹೆಗಾರ : ಎ. ರಾಘವೇಂದ್ರ ಉಪಾಧ್ಯ.
ಕಾರ್ಯಕಾರಿ ಸಮಿತಿ ಸದಸ್ಯರು : ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ಎ. ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಮಂಜುನಾಥ ತೆಂಕಿಲ್ಲಾಯ, ವಸಂತ ಪಾಲನ್, ಸುನಿಲ್ ಕುಮಾರ್, ಕೆ. ಜೆ. ಸುಧೀಂದ್ರ, ರಮೇಶ ಸಾಲಿಯಾನ್, ಜಯ ಕೆ.
ವಿಶೇಷ ಆಹ್ವಾನಿತರು : ಎಸ್. ವಿ. ಭಟ್, ವಿಜಯ್ ಕುಮಾರ್, ವಿದ್ಯಾಪ್ರಸಾದ್, ಮಾಧವ ಕೆ., ಪ್ರಶಾಂತ್ ಕೆ. ಎಸ್., ಅರವಿಂದ ಆಚಾರ್ಯ, ದೀಪ್ತ ಆಚಾರ್ಯ, ಎ. ಸತ್ಯಜಿತ್ ಉಪಾಧ್ಯ, ರಮ್ಯ ಮಲ್ಪೆ, ವಾರಿಜ ಮಲ್ಪೆ, ವಾಗೀಶ ರಾವ್.
ಕಾಂತಾವರ: ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿಸಿದ ಅದೆಷ್ಟೋ ಕಲಾವಿದರು ಈಗಿಲ್ಲ .ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತ ವಾಗಿದೆ.
ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿ ಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು. ಎಂದು ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಹೇಳಿದರು
ಅವರು ಕಳೆದ ಆದಿತ್ಯವಾರದಂದು ಯಕ್ಷದೇಗುಲ ಕಾಂತಾವರದಲ್ಲಿ ಇಪ್ಪತ್ತೊಂದನೇ ವಾರ್ಷಿಕ ಯಕ್ಷೋಲ್ಲಾಸದ ಆಟ ಕೂಟಗಳ ಸಂಧರ್ಭ ವರ್ಕಾಡಿ ತಾರನಾಥ ಬಲ್ಯಾಯರಿಗೆ ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ , ಹಾಗೂ ವೇಣೂರು ಸದಾಶಿವ ಕುಲಾಲ್ ರವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿರು.
ನಮ್ಮ ಕ್ಷೇತ್ರದ ವಾರ್ಷಿಕೋತ್ಸವ ಸಂಧರ್ಭದಲ್ಲಿ ಹಿರಿಯರು ಮೂರು ದಿನಗಳ ಯಕ್ಷಗಾನ ಮಾಡಿಸಿ ಕಲಾವಿದರನ್ನು ಗೌರವಿಸಿದ ಕ್ಷಣ ಗಳನ್ನು ನೆನಪಿಸಿ ಕೊಟ್ಟರು.
ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಸಿಗಬೇಕಾದ ಸಂಸ್ಕಾರ, ಜೀವನ ಮೌಲ್ಯ, ನೀತಿ ಪಾಠ ಭಾಗವತ ರಾಮಾಯಣ ಮತ್ತು ಯಕ್ಷಗಾನ ಮಾಧ್ಯಮದಲ್ಲಿ ಸಿಗುವುದು ನಮ್ಮ ಭಾಗ್ಯ ಎಂದು ನಿಟ್ಟೆ ಕಾಲೇಜಿನ ಪ್ರೊ.ಸುದೀರ್ ಎಂ ಅತಿಥಿಗಳಾಗಿ ತಿಳಿಸಿದರು.
ಧರ್ಮಸ್ಥಳದ ಬಿ. ಭುಜಬಲಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲೆ ಮತ್ತು ಕಲಾವಿದರನ್ನು ಉಳಿಸುವುದು ಇಂತಹ ಯಕ್ಷಗಾನ ಸಂಘಟನೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳನ್ನು ನಡೆಸುತ್ತಾ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಕಲಾಬಿಮಾನಿಗಳ ಸಹಕಾರ ಅಗತ್ಯ ಎಂದು ಮೂಡಬಿದಿರೆಯ ಉದ್ಯಮಿ ಏ.ಕೆ.ರಾವ್ ತಿಳಿಸಿದರು.
ವೇದಿಕೆಯಲ್ಲಿ ನಿವೃತ್ತ ಪ್ರಚಾರ್ಯ ಪ್ರೊ ಶ್ರೀ ವರ್ಮ ಅಜ್ರಿ ಉಪಸ್ಥಿತರಿದ್ದರು. ಡಾ. ಶೃತಕೀರ್ತಿ ರಾಜ್ ಉಜಿರೆ ಮತ್ತು ಡಾ. ವಾದಿರಾಜ ಕಲ್ಲೂರಾಯ ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಿದರು. 2023 ಯಕ್ಷೋಲ್ಲಾಸವನ್ನು ಬೆಳಿಗ್ಗೆ ಬಾರಾಡಿ ಬೀಡು ಮಾತೃಶ್ರಿ ಸುಮತಿ ಆರ್ ಬಲ್ಲಾಳ್ ಉದ್ಘಾಟಿಸಿದರು. ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಭಾಗವತ ಶಿವಪ್ರಸಾದ್ ಭಟ್ ವಂದಿಸಿದರು. ನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಂಗ ತುಲಾಭಾರ ತಾಳಮದ್ದಳೆ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯ ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಮೆರೆದು – ಮಡಿದು ಮರೆಯಾದರೂ ಕಲೋಪಾಸಕರ ಅಂತರಂಗದಲ್ಲಿ ಚಿರಂಜೀವಿ ಸ್ಥಾನವನ್ನು ಶಾಶ್ವತವಾಗಿ ಪಡೆದುಕೊಂಡ ಕೆಲವೇ ಕೆಲವು ಪಾತ್ರಧಾರಿಗಳಲ್ಲಿ ಅಂಕೋಲಾದ ವಂದಿಗೆಯ ಸುಸಂಸ್ಕೃತ ರೈತಾಪಿ ಕುಟುಂಬದ ವಿಠೋಬ ಹಮ್ಮಣ್ಮ ನಾಯಕ ಒಬ್ಬರು.
ತನ್ನ ದ್ವಾದಶ ಪ್ರಾಯದಲ್ಲಿ ವಾಲಿಮೋಕ್ಷದ ಅಂಗದನ ಪಾತ್ರದೊಂದಿಗೆ ಯಕ್ಷಲೋಕಕ್ಕೆ ಚರಣಸ್ಪರ್ಶ ಮಾಡಿ ಇಂದಿಗೂ ಪ್ರಾತಃಸ್ಮರಣೀಯರಾಗಿರುವುದು ಅವರಿಗಿದ್ದ ಕಲಾಶ್ರದ್ಧೆಗೆ ಹಿಡಿದಿರುವ ಕಲಶಗನ್ನಡಿ. ತಮ್ಮೂರಿನಲ್ಲಿ ಹಿರಿಯರು ಮಾಡುವ ಬಯಲಾಟ ಹಾಗು ಮೇಳದವರ ಆಟಗಳನ್ನು ನೋಡುತ್ತಾ ಯಕ್ಷಗಾನದಲ್ಲಿ ಅತ್ಯುತ್ಸಾಹವನ್ನು ಬೆಳೆಸಿಕೊಂಡವರು. ಬಯಲಾಟದಲ್ಲೊಮ್ಮೆ ಶಬರನ ಪಾತ್ರವನ್ನು ಮಾಡಿ ಗಳಿಸಿದ ಜನಪ್ರೀಯತೆ ಅವರನ್ನು ಇನ್ನಷ್ಟು ಹುರಿದುಂಬಿಸಿತು.
‘ಹೈಸ್ಕೂಲ್ ಶಿಕ್ಷಕನಾಗಿದ್ದ ಹಿರಿಯಣ್ಣ ಅಕಾಲಿಕ ಮರಣ ಹೊಂದಿದ ಕಾರಣ ಪಿತ್ರಾರ್ಜಿತ ವ್ಯವಸಾಯ ಭೂಮಿಯನ್ನು ನಡೆಸುವ ಸಲುವಾಗಿ ತನ್ನ ಶೈಕ್ಷಣಿಕ ಜೀವನವನ್ನು ಆರನೇ ತರಗತಿಗೆ ಮೊಟಕುಗೊಳಿಸಿದೆ’ ಎಂದು ನೋವಿನಿಂದ ಹೇಳಿರುವ ವಿಚಾರವನ್ನು ಡಾ. ಆರ್. ಜಿ. ಗುಂದಿಯವರು ತಮ್ಮ “ರಂಗಸ್ಥಳದೊಳಗೊಬ್ಬ ರೌದ್ರಾವತಾರಿ” ಎನ್ನುವ ಲೇಖನದಲ್ಲಿ ಬರೆದಿದ್ದಾರೆ.
ವಿಠೋಬ ನಾಯಕರು, ತಮ್ಮ ಸಮಕಾಲೀನ ವಿದ್ಯಾವಂತ ಕಲಾವಿದರಾದ ವಿ. ಜೇ. ನಾಯಕ ಹಾಗು ಎಂ. ಎಂ. ನಾಯಕರಂತಹ ಪ್ರಜ್ಞಾವಂತ ಮುತ್ಸದ್ದಿಗಳಿಂದ ರಾಮಾಯಣ, ಮಹಾಭಾರತ ಮೊದಲಾದ ಪೌರಾಣಿಕ ಪುಸ್ತಕಗಳನ್ನು ಪಡೆದು ಓದಿ ಮಸ್ತಕದಲ್ಲೊಂದು ಪ್ರತಿಯನ್ನು ಇಟ್ಟುಕೊಂಡವರು. ಕಲಾವಿದನಿಗಿರಬೇಕಾದ ವಿಧೇಯತೆ, ಹಸಿವು, ಅರ್ಪಣಾ ಮನೋಭಾವ, ಸ್ವರೂಪ ಜ್ಞಾನ, ಭಾಷೆಯ ಮೇಲೆ ಪ್ರಭುತ್ವ, ಪ್ರತಿಭೆ, ಸ್ವರ ಸಾಮರ್ಥ್ಯ ಹಾಗು ಅಭಿನಯವೆಂಬ ಅಷ್ಠಾಂಗಗಳನ್ನು ಮೈಗೂಡಿಸಿಕೊಂಡ ಅದ್ಬುತ ಕಲಾವಿದರು. ಯಾವ ಶೃುತಿಗೂ ಹೊಂದುವ ಕಂಚಿನ ಕಂಠ ಮತ್ತು ಸದೃಢ ಮೈಕಟ್ಟು ವಿಠೋಬ ನಾಯಕರಿಗೆ ದೈವಿದತ್ತ ಕೊಡುಗೆಯೇ ಸರಿ.
ಇವರ ಭೀಮ, ಘಟೋತ್ಕಚ, ಶನಿ, ಯಮ, ದುಷ್ಟಬುದ್ಧಿ, ಕಾಲಜಂಗ, ರಾವಣ, ಜಮದಗ್ನಿ ಮುಂತಾದ ಖಳ ನಾಯಕನ ಪಾತ್ರಗಳು ‘ನ ಭೂತೋ, ನ ಭವಿಷ್ಯತಿ’. ಅನುಕರಣೆಗೆ ಎಟುಕದ, ಊಹೆಗೂ ಮೀರಿದ ಪಾತ್ರ ನಿರ್ವಹಣೆ. ಒಮ್ಮೆ ಇವರು ಹಿರಣ್ಯಕಶಿಪು ಪಾತ್ರವನ್ನು ಮಾಡಿದಾಗ ರಂಗದಲ್ಲಿ ಇವರು ವೀರಾವೇಶದಿಂದ ಮೆರೆಯುವ ಆರ್ಭಟಕ್ಕೆ ನರಸಿಂಹನ ಪಾತ್ರಧಾರಿ ರಂಗಪ್ರವೇಶ ಮಾಡಲೂ ಹೆದರಿದ್ದ ಎಂದು ಅಂದಿನ ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಕೇಳಿದ್ದೇನೆ. ಇದು ವಿಠೋಬ ನಾಯಕರ ಕಲಾನೈಪುಣ್ಯತೆಗೆ ಪುಷ್ಠಿ ನೀಡುವ ಸಂಗತಿ.
2011ರ ನವೆಂಬರ್ ನಲ್ಲಿ ಶೀಯುತರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ವಿಶೇಷವೆಂದರೆ ಬಡಗು ತಿಟ್ಟಿನ ಯಕ್ಷರಂಗದ ಹಾಸ್ಯಬ್ರಹ್ಮ ಎನಿಸಿಕೊಂಡ ಕುಂಜಾಲು ರಾಮಕೃಷ್ಣ ಅವರಿಗೂ ಅದೇ ವರ್ಷ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೇ ಅಂಕೋಲೆಯ ನುಡಿಜೇನು ಪತ್ರಿಕೆ, ವೆಂಕಟರಮಣ ನಾಯಕ ಹಿರೆಗುತ್ತಿ ಪ್ರತಿಷ್ಠಾನ, ನೀಲಕೋಡ ಯಕ್ಷರಾತ್ರಿ ಅಂಕೋಲಾ ಮತ್ತು ಹಲವಾರು ಊರಿನ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ವಿಠೋಬ ನಾಯಕ ವಂದಿಗೆ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಇವರೊಂದು ವಿಶಿಷ್ಟ ಶಕ್ತಿ. ಸುದೀರ್ಘ 87 ವರ್ಷ 8 ತಿಂಗಳು 10 ದಿನದ ಇಹಲೋಕ ಯಾತ್ರೆಯನ್ನು ಮುಗಿಸಿ, ಪರಲೋಕವನ್ನು ಪ್ರವೇಶಿಸಿದರೂ ಸಹ ‘ಅಳಿವುದು ಕಾಯ, ಉಳಿವುದು ಕೀರ್ತಿ’ ಎನ್ನುವ ಮಾತಿಗೆ ನಿದರ್ಶನಪ್ರಾಯವಾಗಿ ಶಾಶ್ವತವಾಗಿ ಉಳಿದವರು.
ಇಂತಹ ಮಹಾನ್ ಚೇತನಕ್ಕೆ ಚಿರಶಾಂತಿ ದೊರೆತು, ಅವರ ಕುಟುಂಬಕ್ಕೆ ಮತ್ತು ಆತ್ಮೀಯ ವೃಂದಕ್ಕೆ ಶ್ರೀಯುತರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.