Thursday, March 12, 2026
Home Blog Page 65

ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ – 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆ

ಸಂಸ್ಕ್ರತ ಶಿಕ್ಷಕ ಶ್ರೀ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ 13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಹೈಜಂಪ್ ನಲ್ಲಿ ಪ್ರಥಮ, 110 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ ಮತ್ತು ಹ್ಯಾಮರ್ ತ್ರೋದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಅವರು ಫೆಬ್ರವರಿ 2ರಿಂದ 4ರವರೆಗೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯಲಿರುವ 43ನೇ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ. ಶ್ರೀ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ಸಂಸ್ಕ್ರತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಂದೆಯನ್ನು ಭೇಟಿ ಮಾಡಲು ಹೋದ 3 ವರ್ಷ ಮತ್ತು 7 ವರ್ಷ ವಯಸ್ಸಿನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಅಪ್ಪ

ಕೊಲೊರಾಡೋ ಸಿಸ್ಟರ್ಸ್, ಎಂದು ಕರೆಯಲ್ಪಡುವ 3 ಮತ್ತು 7 ವರ್ಷ ಪ್ರಾಯದ ಹೆಣ್ಣು ಮಕ್ಕಳು ಅವರ ತಂದೆಯನ್ನು ಭೇಟಿ ಮಾಡಲು ಹೋದಾಗ ತಮ್ಮ ತಂದೆಯಿಂದ ಕೊಲ್ಲಲ್ಪಟ್ಟರು.


ಜೇಮ್ಸ್ “ಜೇಕ್” ಹಿಲ್ ತನ್ನ ಹೆಣ್ಣುಮಕ್ಕಳಾದ ಜೆಸ್ಸಿ, ಮತ್ತು ಸಮ್ಮರ್ ಅವರನ್ನು ಮಾರಣಾಂತಿಕವಾಗಿ ಹೊಡೆದು ಕೊಂದರು ಎಂದು ಅಧಿಕಾರಿಗಳು ಹೇಳುತ್ತಾರೆ

ಶನಿವಾರದಂದು ಕೊಲೊದ ಫಿಪ್ಸ್‌ಬರ್ಗ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಕಲ್ಯಾಣ ತಪಾಸಣೆಗೆ ಪ್ರತಿಕ್ರಿಯಿಸಿದ ನಂತರ ಅಧಿಕಾರಿಗಳು ಜೆಸ್ಸಿ, 7, ಮತ್ತು ಸಮ್ಮರ್, 3, ಅವರ ತಂದೆ ಜೇಮ್ಸ್ “ಜೇಕ್” ಹಿಲ್‌ನೊಂದಿಗೆ ಸತ್ತಿದ್ದಾರೆ ಎಂದು ಹೇಳಿದರು.

ಆ ಸಮಯದಲ್ಲಿ ಇಬ್ಬರು ಯುವ ಸಹೋದರಿಯರು ತಮ್ಮ ತಂದೆ ಹಿಲ್ (45) ಅವರನ್ನು ಭೇಟಿ ಮಾಡಲು ತೆರಳಿದ್ದರು. ಮಕ್ಕಳನ್ನು ಕೊಂದ‌ ನಂತರ ತಂದೆ ಜೇಮ್ಸ್ “ಜೇಕ್” ಹಿಲ್‌ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಜ.20ರಂದು ಅಂಬಿಕಾ ವಿದ್ಯಾಲಯಕ್ಕೆ ಗಾಯಕಿ ಸೂರ್ಯಗಾಯತ್ರಿ – ದಶಾಂಬಿಕೋತ್ಸವ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವದ ಪ್ರಯುಕ್ತ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಜ.20ರಂದು ಆಯೋಜಿಸಲಾಗಿದೆ.

ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಸಂಜೆ 5.30ರಿಂದ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.
ದಶಾಂಬಿಕೋತ್ಸವದ ನೆಲೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ, ಆರೋಗ್ಯ, ಜಾಗೃತಿಯೇ ಮೊದಲಾದ ಹತ್ತುಹಲವು ಬಗೆಯ ಕಾರ್ಯಕ್ರಮಗಳನ್ನು ಅಂಬಿಕಾ ವಿದ್ಯಾಲಯದ ವತಿಯಿಂದ ವರ್ಷಪೂರ್ತಿ ಆಯೋಜಿಸುತ್ತಾ ಬರಲಾಗಿದೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಡಾ.ರಾಮಚಂದ್ರ ಗುರೂಜಿಯವರ ಕಾರ್ಯಕ್ರಮವೂ ಆಯೋಜನೆಗೊಂಡಿತ್ತು. ಇದೀಗ ಮೊಟ್ಟ ಮೊದಲ ಬಾರಿಗೆ ಸೂರ್ಯಗಾಯತ್ರಿ ಅವರು ಪುತ್ತೂರಿಗೆ ಆಗಮಿಸಿ ಕಾರ್ಯಕ್ರಮ ನೀಡುತ್ತಿದ್ದಾರೆ.


ಸೂರ್ಯಗಾಯತ್ರಿ: ಇವರು ಕೇರಳದ ವಡಕರದ ಪುರಮೇರಿ ಗ್ರಾಮದ ಮೃದಂಗ ವಾದಕ ಪಿ.ವಿ.ಅನಿಲ್ ಕುಮಾರ್ ಹಾಗೂ ಕವಯಿತ್ರಿ ಪಿ.ಕೆ.ದಿವ್ಯಾ ದಂಪತಿ ಪುತ್ರಿ. ಸಂಗೀತ ಗುರುಗಳಾದ ಆನಂದಿ ಹಾಗೂ ನಿಶಾಂತ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿತಿದ್ದಾರೆ. ಗುರು ರಮಣ ಬಾಲಚಂದ್ರನ್ ಅವರಿಂದ ವೀಣೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಕುಲದೀಪ್ ಪೈ ಅವರು ಸೂರ್ಯಗಾಯತ್ರಿ ಅವರನ್ನು ರೂಪಿಸುವ ನೆಲೆಯಲ್ಲಿ ಶ್ರಮಿಸಿದ್ದಾರೆ.
ಸೂರ್ಯಗಾಯತ್ರಿ ಅವರು ಶ್ರೀರಾಮಭಕ್ತ ಆಂಜನೇಯನ ಬಗೆಗಿನ ಹನುಮಾನ್ ಚಾಲೀಸಾ ಸ್ತೋತ್ರ ಗಾಯನದ ಮೂಲಕ ಮನ ಮನೆಗಳಲ್ಲಿ ಭಕ್ತಿಸುಧೆಯ ರಸಧಾರೆಯನ್ನು ಹರಿಸಿ, ಸಂಗೀತ ಸಾಗರದ ಒಂದೊಂದೇ ಮಜಲನ್ನು ದಾಟುತ್ತಾ ಬಂದವರು.

ಎಳೆಯ ವಯಸ್ಸಿನಲ್ಲಿಯೇ ಗಾಯನಲೋಕದ ನೂತನ ವಿಸ್ಮಯವಾಗಿ ಕಾಣ ಸಿಕೊಂಡು ಅಸಂಖ್ಯ ಜನ ಬೆರಗಾಗುವಂತೆ ಮಾಡಿದ್ದಲ್ಲದೆ ದೇಶ ವಿದೇಶಗಳಲ್ಲೂ ಸಂಗೀತದ ಇಂಪನ್ನೂ ಕಂಪನ್ನೂ ಪಸರಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸಮಾಜದ ಮೂಲೆ ಮೂಲೆಗಳಿಗೂ ಸುಸ್ವರ ಕಂಠದ ಸುಮಧುರ ಗಾಯನವನ್ನು ವಿಸ್ತರಿಸುವ ಮುಖೇನ ಭಾವತೀವ್ರತೆಯ ಉತ್ತುಂಗ ಅನುಭೂತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅಮೇರಿಕಾ, ಆಸ್ಟ್ರೇಲಿಯಾ, ಸಿಂಗಾಪುರ, ದುಬೈ, ಕತಾರ್, ಕೀನ್ಯವೇ ಮೊದಲಾದ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಗೀತಭಾಷೆಯ ಅಂತಃಸತ್ವವನ್ನು ಸಾದರಪಡಿಸಿ, ದೇಶದ ಕೀರ್ತಿ ಪತಾಕೆಯನ್ನು ಜಾಗತಿಕವಾಗಿ ವಿಜ್ರಂಭಿಸಿದ್ದಾರೆ.

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಲೋಕಾರ್ಪಣೆಯ ಶುಭಾವಸರದ ಈ ಸಂದರ್ಭದಲ್ಲಿ, ಸೂರ್ಯಗಾಯತ್ರಿ ಹಾಡಿದ ‘ಶ್ರೀರಾಮಚಂದ್ರ ಕೃಪಾಳು’ ಹಾಡಿನ ಬಗೆಗೆ ಸ್ವತಃ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು ಶ್ಲಾಘಿಸಿರುವುದು ಅವರ ಸಾಧನೆಯ ಉತ್ಕರ್ಷಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.

ಯೂಟ್ಯೂಬ್‌ನಲ್ಲಿ ಸುಮಾರು ನೂರು ಕೋಟಿಗೂ ಮೀರಿ ವೀಕ್ಷಕರನ್ನು ಹೊಂದಿದ ಕೀರ್ತಿ ಹದಿನೇಳು ವರ್ಷದ ಬಾಲಕಿ ಸೂರ್ಯಗಾಯತ್ರಿ ಅವರಿಗೆ ಸಲ್ಲುತ್ತದೆ. ಮುಂಬೈಯ ಷಣ್ಮುಖಾನಂದ ಸಭಾದಿಂದ ತನ್ನ ಹತ್ತನೆಯ ವಯಸ್ಸಿನಲ್ಲಿಯೇ ಎಂ.ಎಸ್.ಸುಬ್ಬುಲಕ್ಷ್ಮಿ ಫೆಲೋಶಿಪ್, ತ್ರಿವೆಂಡ್ರಮ್ ಕಲಾನಿಧಿ ಸಂಗೀತ ರತ್ನ ಪ್ರಶಸ್ತಿ, ಸಮಾಜ್ ಶಕ್ತಿ ಪ್ರಶಸ್ತಿ, ಬಾಲಗಣ ಕಲಾ ಭಾರತಿ ಪ್ರಶಸ್ತಿ, ಭಕ್ತಿಗಣ ಕೋಕಿಲ ಪ್ರಶಸ್ತಿಯೇ ಮೊದಲಾದ ಅನೇಕ ಪ್ರಶಸ್ತಿ, ಪಾರಿತೋಷಕ ಹಾಗೂ ಫೆಲೋಶಿಪ್ ಪಡೆದ ಹೆಮ್ಮೆ ಸೂರ್ಯಗಾಯತ್ರಿ ಅವರಿಗಿದೆ. ಭಾರತ ಸರ್ಕಾರ, ತೆಲಂಗಾಣ, ದೆಹಲಿ, ಉತ್ತರಾಕಾಂಡ್ ಹಾಗೂ ಆಂದ್ರ ಸರ್ಕಾರದ ಆಶ್ರಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ – ಮನೆಯಲ್ಲಿ ಯಾರೂ ಇಲ್ಲದಾಗ ನಡೆದ ಘಟನೆ, ಕಾರಣ ನಿಗೂಢ

ಕಾಲೇಜು ವ್ಯಾಸಂಗ ಮಾಡುತ್ತಿದ್ದ ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ನಡೆದದ್ದು ತೀರ್ಥಹಳ್ಳಿಯ ಬಿಳುಕೊಪ್ಪ ಗ್ರಾಮದಲ್ಲಿ.

ಮೃತ ವಿದ್ಯಾರ್ಥಿನಿ ಅಧೀಕ್ಷಾ (20) ಬಾಳೆಬೈಲು ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದಳು. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಯುವತಿ ಅಧೀಕ್ಷಾ ಬೆಳಗ್ಗೆ ಎಷ್ಟು ಹೊತ್ತಾದರೂ ಹೊರಗೆ ಬರದೇ ಇದ್ದಿದ್ದರಿಂದ ಅನುಮಾನಗೊಂಡ ಮನೆಯವರು ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿರುವ ವಿಚಾರ ಅರಿವಿಗೆ ಬಂದಿದೆ.

ತಿಂಗಳ ಹಿಂದೆ ಕೊಲೆಯಾದ ಯುವತಿಯ ಶವ ಪತ್ತೆ – ಅವಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರನ ಡೆತ್ ನೋಟ್ ನಿಂದ ಸುಳಿವು ಪತ್ತೆ


ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯ ಕೊಳೆತ ಶವವನ್ನು ನವಿ ಮುಂಬೈನಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಆಕೆಯನ್ನು ಆಕೆಯ ಮಾಜಿ ಗೆಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ‌ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಡಿಸೆಂಬರ್ 12, 2023 ರಿಂದ ನಾಪತ್ತೆಯಾಗಿದ್ದ 19 ವರ್ಷದ ಮಹಿಳೆಯ ಶವ ಮಂಗಳವಾರ ಪತ್ತೆಯಾಗಿದೆ, ಆಕೆಯ ಪ್ರೇಮಿ ಅವಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವೈಷ್ಣವಿ ಬಾಬರ್ ಅವರ ಕೊಳೆತ ದೇಹವು ನವಿ ಮುಂಬೈನ ಖಾರ್ಘರ್ ಹಿಲ್ಸ್ ಪ್ರದೇಶದ ಅರಣ್ಯದಲ್ಲಿ ಪತ್ತೆಯಾಗಿದೆ.

ವೈಷ್ಣವಿ ಬಾಬರ್ ತನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಕ್ಕಾಗಿ ಕೋಪಗೊಂಡ ಆರೋಪಿ 24 ವರ್ಷದ ವೈಭವ್ ಬುರುಂಗಲೆ ಅವರು ಖಾರ್ಘರ್ ಬೆಟ್ಟಗಳಲ್ಲಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.


ವೈಭವ್ ತನ್ನ ಆತ್ಮಹತ್ಯಾ ಪತ್ರದಲ್ಲಿ ನಮೂದಿಸಿದ ಕೊಲೆಯ ವಿಚಾರವನ್ನು ಗಮನಿಸಿದ ನಂತರ ಪೊಲೀಸರು ವೈಷ್ಣವಿ ಶವಕ್ಕಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.


ವೈಷ್ಣವಿ ಬಾಬರ್ ಡಿಸೆಂಬರ್ 12 ರಂದು ಸಿಯೋನ್‌ನಲ್ಲಿರುವ ತನ್ನ ಕಾಲೇಜಿಗೆ ಹೋದರು ಆದರೆ ಮನೆಗೆ ಹಿಂತಿರುಗಲಿಲ್ಲ, ನಂತರ ಆಕೆಯ ತಾಯಿ ಅದೇ ದಿನ ಕಳಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣದ ವರದಿಯನ್ನು ದಾಖಲಿಸಿದ್ದಾರೆ.

ಅದೇ ದಿನ, ವೈಭವ್ ಬುರುಂಗಲೆ ಅವರ ದೇಹವು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಜಯಿನಗರ ನಿಲ್ದಾಣದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಅವರ ಸಾವಿನ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ.

ವೈಭವ್‌ನ ಮೊಬೈಲ್‌ನಲ್ಲಿ ವೈಷ್ಣವಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಾಗಿ ಬರೆದಿರುವ ಆತ್ಮಹತ್ಯಾ ಪತ್ರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ವೈಷ್ಣವಿ ನಾಪತ್ತೆಯಾದ ದಿನ ಇಬ್ಬರೂ ಖಾರ್ಘರ್ ಹಿಲ್ಸ್ ಪ್ರದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಕಂಡುಹಿಡಿದರು.

ಖಾರ್ಘರ್‌ನ ಓವ್ ಕ್ಯಾಂಪ್ ಪ್ರದೇಶದಲ್ಲಿನ ಡಂಪಿಂಗ್ ಗ್ರೌಂಡ್‌ನಲ್ಲಿ ಪೊದೆಗಳಲ್ಲಿ ಬಿದ್ದಿರುವ ವೈಷ್ಣವಿ ಮೃತದೇಹದಲ್ಲಿ ಇದ್ದ, ಕಾಲೇಜಿಗೆ ತೆರಳುವಾಗ ಧರಿಸಿದ್ದ ಉಡುಗೆ, ಕೈ ಗಡಿಯಾರ, ಗುರುತಿನ ಚೀಟಿ ಆಧರಿಸಿ ಆಕೆಯ ದೇಹವನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಚತುರ್ಥಚರಣ  ಕಬ್ಸ್ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕಾರ

ಎಂ ಜಶಿತ್ ಆಚಾರ್ಯ ಅದ್ವೈತ ಶಂಕರ ವೈ  ರಾಹುಲ್ ಜಿ ಎಂ        ಸ್ಕಂದ ಎಂ           ವಸಿಷ್ಟ ಸಿ ಎಸ್

ಆರ್ಯನ್ ಪಿ.ಎಲ್       ಸಂಹಿತ್ ಸಿ ಅಲಾರ್       ಕೃತಿಕ್ ಬಿ ಆರ್           ಪ್ರಣವ್ ಕೇಕುಣ್ಣಾಯ  

ಪುತ್ತೂರು :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಂಗಳೂರಿನ ಪಿಲಿಕುಳದಲ್ಲಿ ನಡೆದ ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರಿನ  9 ವಿದ್ಯಾರ್ಥಿಗಳು ತೇರ್ಗಡೆಗೊಂಡು ಬೆಂಗಳೂರಿನ ರಾಜ ಭವನದ ಗಾಜಿನ ಮನೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜನವರಿ ತಿಂಗಳ 19ನೇ ತಾರೀಖಿನಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

     ಪ್ರಸ್ತುತ 5ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವೈತ ಶಂಕರ ವೈ  (ರಾಜೇಶ್ ವೈ ಹಾಗೂ ದಿವ್ಯ ವೈ ದಂಪತಿಯ ಪುತ್ರ ) ಆರ್ಯನ್ ಪಿ .ಎಲ್. (ಪ್ರವೀಣ್ ಕುಮಾರ್ ಕೆ ಹಾಗೂ ಲತಾ ಬಿ ದಂಪತಿಯ ಪುತ್ರ)ಕೃತಿಕ್ ಬಿ ಆರ್( ಬಿ ರಮೇಶ್ ಹಾಗೂ ಅನುಪಮಾ ಬಿ ಎಂ ದಂಪತಿಯ ಪುತ್ರ) ಎಂ ಜಶಿತ್ ಆಚಾರ್ಯ (ಎಂ ಜಯಪ್ರಕಾಶ್ ಹಾಗೂ ಗೌತಮಿ ಕೆ ದಂಪತಿ ಪುತ್ರ )ಪ್ರಣವ್ ಕೇಕುಣ್ಣಾಯ (ಕೃಷ್ಣಪ್ರಸಾದ  ಕೇಕುಣ್ಣಾಯ ಹಾಗೂ ಅರ್ಚನಾ ಕೆ ದಂಪತಿ ಪುತ್ರ) ರಾಹುಲ್ ಜಿ ಎಂ ( ಗಿರೀಶ್ ಎಂ ಹಾಗೂ ಮಲ್ಲಿಕಾ ದಂಪತಿ ಪುತ್ರ ) ಸಂಹಿತ್ ಸಿ  ಅಲಾರ್ (ಚಂದ್ರಹಾಸ ಅಲಾರ್  ಹಾಗೂ ಯಾಮಿನಿ

ದಂಪತಿ  ಪುತ್ರ). ಸ್ಕಂದ ಎಂ  (ಮೋಹನ್ ಹಾಗೂ ಶೋಭಾ ದಂಪತಿಯ ಪುತ್ರ) ವಸಿಷ್ಟ ಸಿ ಎಸ್ (ಚಂದ್ರಶೇಖರ್ ಎಸ್ ಹಾಗೂ ಸುಜಾತ ಡಿ ದಂಪತಿಯ ಪುತ್ರ)  ಹಾಗೂ ಲೇಡಿ ಕಬ್ ಮಾಸ್ಟರ್ ಶ್ರೀಮತಿ ಪುಷ್ಪಲತಾ ಕೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ

ಕೆರೆ ಹೊಂಡದಲ್ಲಿ ತಾಯಿ ಮತ್ತು ಇಬ್ಬರು ಎಳೆಯ ಮಕ್ಕಳ ಮೃತ ದೇಹಗಳು ಪತ್ತೆ

ಕೆರೆಯೊಂದರಲ್ಲಿ ತಾಯಿ ಹಾಗೂ ತನ್ನ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಬಳಿಯ ಕೆರೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಎಳೆಯ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತಪಡಿಸಲಾಗಿದೆ.

ಶವಗಳು ತೇಲಾಡುತ್ತಿದ್ದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮೇಲಕ್ಕೆ ತೆಗೆಯಲಾಗಿದ್ದು ತಾಯಿ ಚಿಂತಾಮಣಿ ತಾಲೂಕು ಯಗವಕೋಟೆ ನಿವಾಸಿ ರಾಧ ಎಂದು ಪತ್ತೆ ಮಾಡಲಾಗಿದೆ.

ಮಹಿಳೆಯ ಗಂಡ ಮಲ್ಲಿಕಾರ್ಜುನ್ ಮತ್ತು 4 ವರ್ಷದ ಮಗಳು ಪೂರ್ವಿತಾ ಮತ್ತು ಇನ್ನೊಬ್ಬ ಮಗಳಿಗೆ ಇನ್ನೂ ಹೆಸರಿಟ್ಟಿರಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ – ಡೆತ್ ನೋಟ್ ಪತ್ತೆ

ಪ್ರೀತಿಸಿ 8 ತಿಂಗಳ ಹಿಂದೆಯಷ್ಟೇ ಮದುವೆವಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ನಡೆದದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ದಾಸನಕೂಡಿಗೆ ಎಂಬಲ್ಲಿ.

ಶಮಿತಾ (24) ಎಂಬವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ಹೋಗಿದ್ದಳು. ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗಿದೆ.

ಈ ವೇಳೆಯಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು. ಮನೆಯಲ್ಲಿ ಗಂಡನ ತಂದೆ, ತಾಯಿ ಇದ್ದರು.

ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ, ಅಸೌಖ್ಯತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ.

ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ಮದುವೆವಾಗಿದ್ದರು. ವಿದ್ಯಾರ್ಥ್ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕೆಲಸಮಾಡುತ್ತಿದ್ದರು.

.
ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆಗೆ ಆಹ್ವಾನ

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತ ಪರ್ವ ಸರಣಿಯ ಸಮಾಪನ ಪ್ರಯುಕ್ತ, ಬಲಿಪ ನಾರಾಯಣ ಭಾಗವತರ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆ ಆಯೋಜಿಸಲಾಗಿದೆ.

ರಜತಪರ್ವ ಸರಣಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 150 ತಾಳಮದ್ದಳೆಗಳನ್ನು ಸಂಘಟಿಸಲಾಗಿದ್ದು ಸಮಾರೋಪ ಸಮಾರಂಭದ ಪ್ರಯುಕ್ತ, ತೆಂಕುತಿಟ್ಟು ಭಾಗವತಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಪದವಿ ಪೂರ್ವ ಕಾಲೇಜು ವಿಭಾಗ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಎಲ್ಲ ಸ್ಪರ್ಧಾಳುಗಳಿಗೆ ಪ್ರಯಾಣ ವೆಚ್ಚ ಭರಿಸಲಾಗುವುದು. ಒಬ್ಬ ಸ್ಪರ್ಧಾಳುವಿಗೆ 10 ನಿಮಿಷಗಳ ಕಾಲಾವಕಾಶ ಇದ್ದು, ಹಿಮ್ಮೇಳ ಪರಿಕರ ಹಾಗೂ ನುರಿತ ಹಿಮ್ಮೇಳ ವಾದಕರನ್ನು ಪ್ರತಿಷ್ಠಾನದ ವತಿಯಿಂದ ಒದಗಿಸಲಾಗುವುದು.

ಒಡ್ಡೋಲಗದ ಪದ್ಯ, ಶೃಂಗಾರ, ವೀರರಸದ ಹಾಡುಗಳನ್ನು ಆಯ್ಕೆ ಮಾಡುವುದು ಕಡ್ಡಾಯ. ಕೊಟ್ಟ ಸಮಯದ ಮಿತಿಯಲ್ಲಿ ಎಷ್ಟು ಹಾಡುಗಳನ್ನಾದರೂ ಹಾಡಬಹುದು. ಪೌರಾಣಿಕ ಪ್ರಸಂಗಗಳ ಹಾಡುಗಳನ್ನೇ ಆಯ್ದುಕೊಳ್ಳಬೇಕು.

ಸ್ಪರ್ಧಾಳುಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪ್ರಾಂಶುಪಾಲರಿಂದ ದೃಢೀಕರಣ ಮಾಡಿರಬೇಕು. ಜ.30ರ ಒಳಗೆ ಆಸಕ್ತರು ಸಂಪರ್ಕಿಸಬೇಕಾದ ವಿಳಾಸ:


ಉಜಿರೆ ಅಶೋಕ ಭಟ್, ಚಿನ್ಮಯ, ಅಜಿತ ನಗರ, ಉಜಿರೆ 574240 ದ.ಕ., ದೂ: 9449510666, 9449255666.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಕೆ ಎಲ್ ರಾಹುಲ್ ಭೇಟಿ ನೀಡಿ ದೇವರ ದರ್ಶನ

ನಿನ್ನೆಯ ಕೊಲ್ಲೂರು ಕ್ಷೇತ್ರದ ಭೇಟಿಯ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಖ್ಯಾತ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಬುಧವಾರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಶೇಷ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಅವರು ಹೊಸಳಿಗಮ್ಮನ ದೇಗುಲಕ್ಕೂ ತೆರಳಿ ನಮನ ಸಲ್ಲಿಸಿದರು.
ಅವರನ್ನು ದೇವಸ್ಥಾನದ ಅಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧಿಕಾರಿಗಳು, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.