ಹೆಸರು: ಪಾತಾಳ ವೆಂಕಟ್ರಮಣ ಭಟ್
ಪತ್ನಿ: ಶ್ರೀಮತಿ ಪರಮೇಶ್ವರಿ ಅಮ್ಮ ವಿವಾಹ: 1960
ಜನನ: 1933 ನವಂಬರ್ 16ರಂದು ಜನನ ಸ್ಥಳ: ಪುತ್ತೂರಿನ ಸಮೀಪದ ಬೈಪದವು ಎಂಬಲ್ಲಿ ತಂದೆ-ತಾಯಿಗೆ ಒಬ್ಬನೇ ಮಗನಾಗಿ ತಂದೆ ತಾಯಿ: ತಂದೆ ಶ್ರೀ ರಾಮ ಭಟ್ಟ. ತಾಯಿ ಶ್ರೀಮತಿ ಹೇಮಾವತಿ
ಯಕ್ಷಗಾನ ಗುರುಗಳು: ಪುತ್ತೂರು ಕೃಷ್ಣ ಭಟ್ಟರು ಕಾಂಚನ ಮೇಳದಿಂದ ಸೌಕೂರು ಮೇಳವನ್ನು ಸೇರಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಬಡಗುತಿಟ್ಟಿನ ನಂಟು ಬೆಳೆಯಿತು. ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮರವರಿಂದ ಬಡಗಿನ ನಾಟ್ಯದ ಹೆಜ್ಜೆಗಳನ್ನೂ ಕಲಿತರು. ಪುನಃ ತೆಂಕಿನ ಮೇಳಕ್ಕೆ ಬಂದಾಗ ಪೆರುವೋಡಿ ನಾರಾಯಣ ಭಟ್ಟರಿಂದ ನಾಟ್ಯಗಾರಿಕೆಯ ಕಲಿಕೆಯನ್ನು ಪೂರ್ಣಗೊಳಿಸಿದರು. ಅಲ್ಲದೆ ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸವನ್ನು ಮಾಡಿದರು. ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ
ಅನುಭವ: ಕಾಂಚನ ಮೇಳ, ಸೌಕೂರು ಮೇಳ, 1954ರಲ್ಲಿ ಮೂಲ್ಕಿ ಮೇಳಕ್ಕೆ, 1963ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಧರ್ಮಸ್ಥಳ ಮೇಳದ ತಿರುಗಾಟವು ಪಾತಾಳ ವೆಂಕಟ್ರಮಣ ಭಟ್ಟರ ಕಲಾ ಜೀವನದ ಸುವರ್ಣಯುಗ ಎಂದೇ ಹೇಳಬಹುದು.
ಮಕ್ಕಳು: ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು, ಹಿರಿಯ ಮಗ ಶ್ರೀ ಅಂಬಾಪ್ರಸಾದ ಪಾತಾಳ ಯಕ್ಷರಂಗದ ಪ್ರಸಿದ್ಧ ಸ್ತ್ರೀ ವೇಷಧಾರಿ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಅದರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿಗಳು ಸೇರಿವೆ. ಮತ್ತು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಪಾತಾಳ ವೆಂಕಟ್ರಮಣ ಭಟ್ – ಸಂಕ್ಷಿಪ್ತ ಮಾಹಿತಿ (Pathala Venkatramana Bhat)
ವಸಂತ ಗೌಡ ಕಾಯರ್ತಡ್ಕ (ಯಕ್ಷದೀಪ – ಕಲಾವಿದರ ಮಾಹಿತಿ) Vasantha Gowda Kayarthadka
ಹೆಸರು: ವಸಂತ ಗೌಡ ಕಾಯರ್ತಡ್ಕ
ಪತ್ನಿ: ಶ್ರೀಮತಿ ಗೀತ
ಜನನ: 1962ನೇ ಇಸವಿ ಸೆಪ್ಟಂಬರ್ 1ನೇ ತಾರೀಕು
ಜನನ ಸ್ಥಳ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಕಾಯರ್ತಡ್ಕ
ತಂದೆ ತಾಯಿ: ತಂದೆ ಶ್ರೀ ಬಿರ್ಮಣ್ಣ ಗೌಡ . ತಾಯಿ ಶ್ರೀಮತಿ ಬೊಮ್ಮಿ ಅಮ್ಮ ವಿದ್ಯಾಭ್ಯಾಸ: ಕಾಯರ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ ಯಕ್ಷಗಾನ ಗುರುಗಳು: ಶ್ರೀ ಪಡ್ರೆ ಚಂದು ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ
ಅನುಭವ: 46 ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಧರ್ಮಸ್ಥಳ ಮೇಳವೊಂದರಲ್ಲೇ 46 ವರ್ಷಗಳ ತಿರುಗಾಟ. 1974ನೇ ಇಸವಿ ತನ್ನ 12ನೇ ವರ್ಷದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರ ಸೇರಿ ಶ್ರೀ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯ ಕಲಿತು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರಿದರು) ಕುಟುಂಬ : ಪತ್ನಿ ಶ್ರೀಮತಿ ಗೀತ ಮತ್ತು ಮೂವರು ಗಂಡು ಮಕ್ಕಳ (ರವಿ, ಪುನೀತ್, ದಯಾನಂದ) ಸಂತೃಪ್ತ ಕುಟುಂಬ ಇವರದು.
ವಸಂತ ಗೌಡ ಅವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು: ಆರಂಭದಲ್ಲಿ ಬಾಲಲೀಲೆಯ ಶ್ರೀಕೃಷ್ಣ, ಪ್ರಹ್ಲಾದ, ಬಾಲಚ್ಯವನ, ಮಾರ್ಕಂಡೇಯ, ಲೋಹಿತಾಶ್ವ, ಷಣ್ಮುಖ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. ಮಾತುಗಾರಿಕೆಯನ್ನೂ ಚೆನ್ನಾಗಿ ಅಭ್ಯಸಿಸಿ, ಬಭ್ರುವಾಹನ, ಅಭಿಮನ್ಯು, ಚಂಡ ಮುಂಡರು, ಲಕ್ಷ್ಮಣ, ವಿಷ್ಣು, ಶ್ರೀರಾಮ, ಬ್ರಹ್ಮ, ಅಶ್ವತ್ಥಾಮನೇ ಮೊದಲಾದ ಪುಂಡು ವೇಷಗಳನ್ನು ಮಾಡುತ್ತಾ ಸಮರ್ಥ ಪುಂಡುವೇಷಧಾರಿಯಾದರು. ಹಾಸ್ಯಗಾರರ ಅನುಪಸ್ಥಿತಿಯಲ್ಲಿ ಹಾಸ್ಯ ಪಾತ್ರಗಳನ್ನೂ ಮಾಡುತ್ತಾರೆ. ನಾರದ ಮತ್ತು ಬಾಹುಕನ ಪಾತ್ರವನ್ನೂ ಮಾಡಿದ ಖ್ಯಾತಿ ಇವರಿಗಿದೆ. ಸ್ತ್ರೀವೇಷ, ಪುಂಡುವೇಷ, ಎದುರುವೇಷ, ಪೀಠಿಕೆ ವೇಷ, ಹಾಸ್ಯ ಪಾತ್ರಗಳೇ ಮೊದಲಾದ ಯಾವುದೇ ಪಾತ್ರಗಳನ್ನೂ ಅಭಿನಯಿಸುವ ವಸಂತ ಗೌಡರಂತಹಾ ಅನುಭವಿ ಕಲಾವಿದರು ಕಾಣಸಿಗುವುದು ಅಪರೂಪ. ವಿಶೇಷತೆ: ಎಲ್ಲ ಪ್ರಸಂಗಗಳ ರಂಗನಡೆಯನ್ನು ಬಲ್ಲರು. ಇವರು ಮೇಳವೊಂದಕ್ಕೆ ಮಾತ್ರವಲ್ಲದೆ ಯಕ್ಷಗಾನ ರಂಗಕ್ಕೆ ಓರ್ವ ಸಂಪನ್ಮೂಲ ವ್ಯಕ್ತಿ. ಮಿತಭಾಷಿ. ಪ್ರಚಾರ, ವೇದಿಕೆಗಳಿಂದ ದೂರ ಇರಲು ಇಷ್ಟಪಡುತ್ತಾರೆ.
ಲೇಖನ: ಮನಮೋಹನ್ ವಿ.ಎಸ್.
ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 45ನೇ ಕಾರ್ಯಕ್ರಮದಲ್ಲಿ ಇಂದು ಅಂದರೆ ಅಕ್ಟೋಬರ್ 12ರಂದು ಸೋಮವಾರ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಹರಿನಾರಾಯಣ ಭಟ್ ಎಡನೀರು ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಅಕ್ಟೋಬರ್ ೧೨ ಮಂಗಳವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.

‘ಜಡಭರತ’ ಯಕ್ಷಗಾನ ಪ್ರದರ್ಶನ ಈ ರಾತ್ರಿ Live – 8.30ಕ್ಕೆ
ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.
‘ವಿಭೀಷಣ ನೀತಿ’ ಯಕ್ಷಗಾನ ತಾಳಮದ್ದಲೆ ಲೈವ್ .. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರು ಪ್ರಸ್ತುತಪಡಿಸುವ ದಿನಾಂಕ 11.10.2020 ಭಾನುವಾರ ಸಂಜೆ 5.00 ರಿಂದ ಯಕ್ಷಗಾನ ತಾಳಮದ್ದಲೆ ವಿಭೀಷಣ ನೀತಿ.. ಯಕ್ಷಗಾನ ತಾಳಮದ್ದಲೆ ಲೈವ್ ಕಾರ್ಯಕ್ರಮ. ಲಿಂಕ್ ಕೆಳಗಿದೆ
ಮಾತಂಗ ಕನ್ಯೆ, ಶ್ರೀರಾಮ ದರ್ಶನ – ಪೊಳಲಿಯಲ್ಲಿ ಅಪೂರ್ವ ಯಕ್ಷಗಾನ ಪ್ರದರ್ಶನ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ 17.10.2020 ಶನಿವಾರದಂದು ಸಂಜೆ ಘಂಟೆ 6ರಿಂದ ರಾತ್ರಿ ಘಂಟೆ 2ರ ವರೆಗೆ ‘ಮಾತಂಗ ಕನ್ಯೆ – ಶ್ರೀರಾಮ ದರ್ಶನ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪ್ರಸಿದ್ಧ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿರುವರು.

