Sunday, March 15, 2026
Home Blog Page 290

ಕಲಾವಿದರ ಬಸ್ ಪಾಸ್ ವಿತರಣೆ

ಕೆನರಾ ಬಸ್ ಮಾಲಕರ ಸಹಕಾರದಿಂದ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ವೃತ್ತಿ ಮೇಳದ ಕಲಾವಿದರಿಗೆ ಪ್ರತಿಶತ 50 ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ವರ್ಷದ ಆಗಸ್ಟ್ 31, 2022ರ ವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಇಂದು (18-12-2021) ಸಂಸ್ಥೆಯ ಕಚೇರಿಯಲ್ಲಿ ಜರಗಿತು.

ಹಿರಿಯ ಸ್ತ್ರೀ ವೇಷಧಾರಿ ಡಾ. ಕೋಳ್ಯೂರು ರಾಮಚಂದ್ರ ರಾವ್ ಮೇಳದ ಪ್ರತಿನಿಧಿಗಳಿಗೆ ವಿತರಿಸಿದರು. ಮಂದಾರ್ತಿ ಮೇಳದ ಮಹಾಬಲ ನಾಯ್ಕ್, ಕೇಶವ ಆಚಾರ್ ಮತ್ತು ಮಾರಣಕಟ್ಟೆ ಮೇಳದ ಶ್ರೀನಿವಾಸ ಶೆಟ್ಟಿ ಸ್ವೀಕರಿಸಿದರು. 35 ವಿವಿಧ ಮೇಳಗಳ 400ಕ್ಕೂ ಮಿಕ್ಕಿದ ಕಲಾವಿದರು ಪಾಸ್ ಸೌಲಭ್ಯ ಪಡೆಯಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ನಾರಾಯಣ ಎಮ್. ಹೆಗಡೆ, ಮನೋಹರ ಕೆ., ಅನಂತರಾಜ ಉಪಾಧ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ವೃತ್ತಿ ಕಲಾವಿದರಿಗೆ ಈ ಸೌಲಭ್ಯ ಕಲ್ಪಿಸಿದ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ದಶಂಬರ 18-19 : ಯಕ್ಷಾಂಗಣದಿಂದ ಯಕ್ಷಗಾನ ತಾಳಮದ್ದಳೆ ಪರ್ವ – ಶಿವಾನಂದ ಸ್ಮೃತಿ, ಪುರುಷೋತ್ತಮ ಸರಣಿ ಮತ್ತು ಪದ್ಯಾಣ ಪ್ರಣತಿ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು, ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ (ರಿ) ಪುತ್ತೂರು ಸಹಯೋಗದಲ್ಲಿ ನಡೆಸುವ ಒಂಭತ್ತನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ – 2021’ ದಶಂಬರ 18 ಮತ್ತು 19 ಶನಿವಾರ, ಭಾನುವಾರ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಎರಡು ದಿನ ಜರಗಲಿದೆ.


ಶಿವಾನಂದ ಸ್ಮೃತಿ :
ಯಕ್ಷಾಂಗಣದ ಉಪಾಧ್ಯಕ್ಷರಾಗಿದ್ದು, ಆಕಸ್ಮಿಕವಾಗಿ ಅಗಲಿ ಹೋದ ಹಿರಿಯ ಕವಿ, ಕನ್ನಡ – ತುಳು ಲೇಖಕ ಅತ್ತಾವರ ಶಿವಾನಂದ ಕರ್ಕೇರ ಅವರ ಸ್ಮರಣಾರ್ಥ ಮೊದಲ ದಿನ ನಡೆಯುವ ‘ಶಿವಾನಂದ ಸ್ಮೃತಿ’ ಕಾರ್ಯಕ್ರಮದಲ್ಲಿ ಅವರ ‘ಕಾರ್ನಿಕೊದ ದೈವ ವೈದ್ಯನಾಥೆ’ ಎಂಬ ನಾಟಕದ ಆಧಾರದಲ್ಲಿ ಡಾ. ದಿನಕರ ಎಸ್. ಪಚ್ಚನಾಡಿ ಬರೆದ ‘ಕಾರ್ನಿಕೊದ ವೈದ್ಯನಾಥೆ’ ತುಳು ತಾಳಮದ್ದಳೆ ಜರಗಲಿದೆ. ಸಮಾರಂಭವನ್ನು ಬ್ಯಾಂಕ್ ಆಫ್ ಬರೋಡಾದ ವಲಯ ಮುಖ್ಯಸ್ಥೆ ಗಾಯತ್ರಿ ಆರ್. ಉದ್ಘಾಟಿಸುವರು, ಸಿಎ.ಎಸ್.ಎಸ್. ನಾಯಕ್ ಅಧ್ಯಕ್ಷತೆ ವಹಿಸುವರು.


ಯಕ್ಷಗಾನ ಕಲಾಪೋಷಕÀ ಮತ್ತು ಉದ್ಯಮಿ ಮೂಡಬಿದಿರೆಯ ಶ್ರೀಪತಿ ಭಟ್ ಅವರಿಗೆ 2021-22 ನೇ ಸಾಲಿನ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಸಾಂಸ್ಕೃತಿಕ ಸಂಘಟಕ ಎಂ. ಸುಂದರ ಶೆಟ್ಟ ಬೆಟ್ಟಂಪಾಡಿ ಅವರಿಗೆ ‘ಶಿವಾನಂದ ಸ್ಮೃತಿ ಗೌರವ’ ನೀಡಲಾಗುವುದು. ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥ ಯೋಗೀಶ್ ಆಚಾರ್ಯ ಮತ್ತು ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭ ಕೀರ್ತಿಶೇಷ ಅರ್ಥಧಾರಿಗಳಾದ ದಿ| ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯನ್ನೂ ಏರ್ಪಡಿಸಲಾಗಿದೆ.


ಪುರುಷೋತ್ತಮ ಸರಣಿ – ಪದ್ಯಾಣ ಪ್ರಣತಿ :
ಇತ್ತೀಚೆಗೆ ಅಗಲಿ ಹೋದ ಪ್ರಸಿದ್ಧ ಭಾಗವತ ಮತ್ತು ಪ್ರಸಂಗಕರ್ತ ಯಕ್ಷಗಾನ ವಾಲ್ಮೀಕಿ ದಿ| ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಪ್ರಸಂಗ ಸರಣಿಯನ್ನು ಕಾರ್ಯಕ್ರಮದಲ್ಲಿ ಆಳವಡಿಸಿಕೊಳ್ಳಲಾಗಿದ್ದು, ಪೂಂಜರ ಜನಪ್ರಿಯ ಪ್ರಸಂಗಗಳಾದ ‘ಗುರುದಕ್ಷಿಣೆ, ಗಂಗಾ ಸಾರಥ್ಯ ಮತ್ತು ಮಾ ನಿಷಾದ’ ದ ಆಯ್ದ ಭಾಗಗಳನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಗುವುದು. ಅಲ್ಲದೆ ಈ ವರ್ಷ ನಿಧನರಾದ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರ ಸ್ಮರಣಾರ್ಥ ‘ಪದ್ಯಾಣ ಪ್ರಣತಿ’ ಎಂಬ ವಿಶಿಷ್ಟ ಕಾರ್ಯಕ್ರಮವೂ ಜರಗುವುದು.

ಯಕ್ಷಾಂಗಣ ಗೌರವ ಪ್ರಶಸ್ತಿ :
ಯಕ್ಷಾಂಗಣ ವತಿಯಿಂದ ಪ್ರತಿವರ್ಷ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ ಯಕ್ಷ ಶಾಂತಲಾ ಬಿರುದಾಂಕಿತ ಹಿರಿಯ ಸ್ತ್ರೀ ವೇಷಧಾರಿ 88 ರ ಹರೆಯದ ಪಾತಾಳ ವೆಂಕಟ ರಮಣ ಭಟ್ಟರು ಆಯ್ಕೆಯಾಗಿದ್ದು ದಿನಾಂಕ 19 ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ| ಪಿ. ಯಸ್. ಯಡಪಡಿತ್ತಾಯ ಅದನ್ನು ಪ್ರದಾನಿಸುವರು.

ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಸಂಸ್ಮರಣಾ ಜ್ಯೋತಿ ಬೆಳಗುವರು. ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಪ್ರಧಾನ ಅಭ್ಯಾಗತರಾಗಿರುವರು.


ಕಾರ್ಯಕ್ರಮದಲ್ಲಿ ದಿ| ಪುರುಷೋತ್ತಮ ಪೂಂಜ ಮತ್ತು ಪದ್ಯಾಣ ಗಣಪತಿ ಭಟ್ಟರ ಸಾಕ್ಷ್ಯಚಿತ್ರ ಪ್ರದರ್ಶಿಸುವುದರೊಂದಿಗೆ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ ಪೂಂಜ-ಪದ್ಯಾಣ ಸಂಸ್ಮರಣೆಯನ್ನು ನೆರವೇರಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮವೂ ಜರಗುವುದು. ಸಮಾರಂಭದ ಎರಡೂ ದಿನಗಳಲ್ಲಿ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

ಇಂದು ಆಟ ಎಲ್ಲೆಲ್ಲಿ? 18-12-2021

ಮೇಳಗಳ ಇಂದಿನ (18.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ದೊಡ್ಸಾಲುಪಾರೆ – ಸಾಮ್ರಾಟ್ ನಹುಷೇಂದ್ರ

ಕಟೀಲು ಒಂದನೇ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು 

ಕಟೀಲು ಎರಡನೇ ಮೇಳ == ಕತ್ತಲಸಾರ್ ಶಾಲಾ ಬಳಿ 

ಕಟೀಲು ಮೂರನೇ ಮೇಳ== ಗುಂಡಲಿಕೆ ನಾಗರಿಕ ಸೇವಾ ಸಮಿತಿ ಯೆಯ್ಯಾಡಿ 

ಕಟೀಲು ನಾಲ್ಕನೇ ಮೇಳ  == ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ 

ಕಟೀಲು ಐದನೇ ಮೇಳ == ಶ್ರೀದುರ್ಗಾ ಭಜನಾ ಮಂಡಳಿ ತೆಂಕುಳಿಪಾಡಿ ಮಳಲಿ 

ಕಟೀಲು ಆರನೇ ಮೇಳ == ಕೊಡಿಯಾಲಬೈಲು ಶ್ರೀ ಭಗವತಿ ದೇವಸ್ಥಾನದ ಬಳಿ 

ಮಂದಾರ್ತಿ ಒಂದನೇ ಮೇಳ  ==  ಮಡಿಕೋಲ್ ಬೆಟ್ಟು ಚೇರ್ಕಾಡಿ 

ಮಂದಾರ್ತಿ ಎರಡನೇ ಮೇಳ   == ಬಾಳೆಹಿತ್ತಿಲು ಶಿರೂರು ಮುದ್ದುಮನೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ನೆಲ್ಲಿಹಕ್ಕಲುಮನೆ ಬಿಜೂರು ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಬಾಳೆಹಿತ್ತಿಲು ಶಿರೂರು ಮುದ್ದುಮನೆ – ಕೂಡಾಟ 

ಮಂದಾರ್ತಿ ಐದನೇ ಮೇಳ  == ನಾರಾಡಿ ಹೌಸ್ ಗಾವಳಿ ಯಡಾಡಿ ಮತ್ಯಾಡಿ 

ಹನುಮಗಿರಿ ಮೇಳ == ನಲ್ಲೂರು ಬೀರಾಲು ಪೇಟೆ ವಯಾ ಬಜಗೋಳಿ – ಆತ್ಮಾಂಜಲಿ 

ಶ್ರೀ ಸಾಲಿಗ್ರಾಮ ಮೇಳ ==ಆದಿ ಉಡುಪಿ ಬೈಪಾಸ್ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಕುಮಟಾ ಮಣಕಿ ಗ್ರೌಂಡ್ – ಶನೀಶ್ವರ ಮಹಾತ್ಮೆ, ಚಕ್ರ ಚಂಡಿಕಾ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == “ಮಮತಾಶ್ರೀ” ಯಡಕಂಡ ಹೇರೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬವಳಾಡಿ ಸಣ್ಣನಮಕ್ಕಿ ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ  == ಭಂಡಾರಮನೆ ತೌಡುಗೋಳಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಕಮಲಶಿಲೆ ಮೇಳ  == ಯಲವಳ್ಳಿ ಕುಮಟಾ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ಹಾಡಿಮನೆ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಜಾಲ್ಸೂರು ಮುರಾರಿಕೋಡಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕೋಟೇಶ್ವರ ಬೀಜಾಡಿ ಹಳೆ ಅಳಿವೆಬೈಲ್ ಬೊಬ್ಬರ್ಯ ಮಹಾಕಾಳಿ ಮತ್ತು ಮಾಸ್ತಿಯಮ್ಮ ದೇವಸ್ಥಾನದ ಬಳಿ – ಶ್ರೀ ದೇವಿ ಮಹಾಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಗೋಳಿಬೆಟ್ಟು ಶ್ರೀ ಬೊಬ್ಬರ್ಯ ಕಲಾವೇದಿಕೆ – ನೂತನ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ಹಿರಿಯಡಕ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ನೆಲ್ಲಿಕಟ್ಟೆ 

ಶ್ರೀ ಸಿಗಂದೂರು ಮೇಳ == ಮೇಲ್ ಹೊಸೂರು ಮಲ್ಲಿಗದ್ದೆಮನೆ 

ಶ್ರೀ ನೀಲಾವರ ಮೇಳ  == ಅಯ್ಯಮ್ಮ ಸ್ವಾಮಿ ಚಪ್ಪರ ಬಳಿ ಕೊಕ್ಕರ್ಣೆ ಗುಡ್ಡೆಯಂಗಡಿ – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಬಡಾಕೋಡಿ ಕುಂದಾಪುರ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ==  ಶ್ರೀ ಯಕ್ಷೇಶ್ವರ ಕಲ್ಲುಕುಟ್ಟಿಗ ದೇವಸ್ಥಾನ ಕಾಡಬೆಟ್ಟು – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ‘ಕಲ್ಪವೃಕ್ಷ’ ಭಟ್ರಕೆರೆ ಮಸೀದಿ ರೋಡ್, ಪೆರ್ಮುದೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಗುಡ್ಡಬೆಟ್ಟು – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ  == ಅಲೆತ್ತೂರು ಬಿ.ಸಿ ರೋಡ್ – ಶ್ರೀ ದೇವಿ ಮಹಾತ್ಮೆ 

ನಾಳ ಮೇಳ == ನಾಳ ದೇವಸ್ಥಾನದ ರಥಬೀದಿ – ಸೇವೆಯಾಟ ‘ಪಾಂಡವಾಶ್ವಮೇಧ’ 

ಇಂದು ಆಟ ಎಲ್ಲೆಲ್ಲಿ? 16-12-2021

ಮೇಳಗಳ ಇಂದಿನ (16.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಅರೆಶಿರೂರು ಗೋಳಿಹೊಳೆ – ದಕ್ಷಯಜ್ಞ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ == ಶ್ರೀರಾಮ ಸೇವಾ ಟ್ರಸ್ಟ್, ಅಲ್ಲಿಪಾದೆ ಬಂಟ್ವಾಳ 

ಕಟೀಲು ಎರಡನೇ ಮೇಳ == ಶ್ರೀ ಜನಾರ್ದನ ದೇವಸ್ಥಾನ ಎರ್ಮಾಳ್ ವಯಾ ಪಡುಬಿದ್ರಿ 

ಕಟೀಲು ಮೂರನೇ ಮೇಳ== ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ 

ಕಟೀಲು ನಾಲ್ಕನೇ ಮೇಳ  == ಶ್ರೀ ಅಯ್ಯಪ್ಪ ಭಜನಾ ಮಂದಿರ ಪ್ರತಿಷ್ಠಾನ, ಅಡ್ಕಾರ್ ಜಾಲ್ಸೂರು 

ಕಟೀಲು ಐದನೇ ಮೇಳ == ಬಳ್ಳಿ ಕಂಪೌಂಡ್ ಕೋಡಿಕಲ್ ಕಡಂದಲೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  ==  ಮಧ್ಯಸ್ಥರಬೆಟ್ಟು ನೀಲಾವರ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಶ್ರೀಕೃಷ್ಣ ತುಲಾಭಾರ, ಮಕರಾಕ್ಷ ಕಾಳಗ 

ಶ್ರೀ ಸಾಲಿಗ್ರಾಮ ಮೇಳ == ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಬಯಲಾಟ – ರಾಜಾ ಯಯಾತಿ, ಧರ್ಮಾಂಗದ

ಶ್ರೀ ಪೆರ್ಡೂರು ಮೇಳ == ಕೋಟ ಗಾಂಧಿ ಮೈದಾನ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಳಾನೂಜು ಹಕ್ಲುಮನೆ ಬೆಳ್ಳಾಲ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಚದ್ರಳ್ಳಿಮನೆ ಹೇರೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಚದ್ರಳ್ಳಿಮನೆ ಹೇರೂರು 

ಶ್ರೀ ಪಾವಂಜೆ ಮೇಳ  == ಎಕ್ಕಾರು ಗುಡ್ಡೆಸಾನ ಬಳಿ – ಶ್ರೀ ಶನೀಶ್ವರ ಮಹಾತ್ಮೆ 

ಕಮಲಶಿಲೆ ಮೇಳ  == ಚಿಕ್ಕಮ್ಮ ದೇವಸ್ಥಾನ ನೈಲಾಡಿ 

ಶ್ರೀ ಅಮೃತೇಶ್ವರೀ ಮೇಳ == ಹೇರಾಡಿ 

ಶ್ರೀ ಸೌಕೂರು ಮೇಳ == ‘ಸೌಕೂರು ದೇವಸ್ಥಾನ ವಠಾರ – ಅಗ್ನಿನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರದಲ್ಲಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಿರೂರು ಹಂದಿಗೆದ್ದೆ ಹಾಡಿ ಬೊಬ್ಬರ್ಯ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಹೊಸಮೊಗರು ಸರಳೀಕಟ್ಟೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಅರ್ಧನಾರೀಶ್ವರ ದೇವಸ್ಥಾನ ಶೆಟ್ರಕಟ್ಟೆ 

ಶ್ರೀ ಸಿಗಂದೂರು ಮೇಳ == ನಾಯಕವಾಡಿ ಶೃತಿ ಕಾಂಪ್ಲೆಕ್ಸ್ ವಠಾರ 

ಶ್ರೀ ನೀಲಾವರ ಮೇಳ  == ಹಾಲಾಡಿ ಪೇಟೆ – ಮಧುರ ಮೇಘನ 

ಶ್ರೀ ಹಟ್ಟಿಯಂಗಡಿ ಮೇಳ == ಮಡಪಾಡಿ ಬೋಳುಗುಡ್ಡೆ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ನ್ಯೂ ಕುಬೇರ ಬಾರ್ ಮುಂಭಾಗ ಪೇತ್ರಿ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಕಿನ್ನಿಗೋಳಿ ಬಸ್ ಸ್ಟಾಂಡ್ ಬಳಿ – ಶ್ರೀ ದೇವಿ ಮಾರಿಯಮ್ಮ 

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಕಲಾಪೋಷಕ ಶ್ರೀಪತಿ ಭಟ್, ಗೌರವ ಪ್ರಶಸ್ತಿಗೆ ‘ಯಕ್ಷ ಶಾಂತಲಾ’ ಪಾತಾಳ ವೆಂಕಟರಮಣ ಭಟ್‌ ಆಯ್ಕೆ

`ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ  ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಕೊಡಮಾಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮೂಡಬಿದಿರೆಯ ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್‌ ಆಯ್ಕೆಯಾಗಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯು `ಯಕ್ಷ ಶಾಂತಲಾ’ ಬಿರುದಾಂಕಿತ ಹಿರಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ಟರಿಗೆ ಲಭಿಸಲಿದೆ.


ಶ್ರೀಪತಿ ಭಟ್ ಮೂಡಬಿದ್ರೆ :
ಕರಿಂಜೆ ಕಲ್ಲಬೆಟ್ಟು ದಿ| ರಾಮಚಂದ್ರ ಭಟ್ ಮತ್ತು ಮಹಾಲಕ್ಷ್ಮಿ ದಂಪತಿಗೆ ಮೇ 12, 1947ರಲ್ಲಿ ಜನಿಸಿದ ಶ್ರೀಪತಿ ಭಟ್ ಬಡತನದ ಕಾರಣ 7ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಕೊನೆಗೊಳಿಸಿದರು. ಹೊಟೇಲ್ ಮಾಣಿಯಾಗಿ, ಬಸ್ ಏಜೆಂಟರಾಗಿ ದುಡಿದ ಅವರು 1969ರಲ್ಲಿ ವನಜಾಕ್ಷಿಯವರನ್ನು ತಿರುಪತಿ ಕ್ಷೇತ್ರದಲ್ಲಿ ಕೈಹಿಡಿದರು. ಬಳಿಕ ಜೀವನದಲ್ಲಿ ತಿರುವು ಪಡೆದು 1971ರಲ್ಲಿ ಮೂಡಬಿದಿರೆಯ ಗಾಂಧಿನಗರದಲ್ಲಿ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯನ್ನುತೆರೆದು ನೂರಾರು ಮಂದಿಗೆ ಉದ್ಯೋಗದಾತರಾದರು. 1992ರಲ್ಲಿ ಹುಟ್ಟೂರು ಕಲ್ಲಬೆಟ್ಟುವಿನಲ್ಲಿ ಜಯಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಸಹಿತ ಮೂಡಬಿದಿರೆ ಪರಿಸರದ ಕೊಡ್ಯಡ್ಕ, ವೇಣೂರು, ಬೆಳುವಾಯಿ ಮತ್ತು ಎಡಪದವು ಹೀಗೆ ಒಟ್ಟು ಐದು ಕಡೆಗಳಲ್ಲಿ ಗೋಡಂಬಿ ಸಂಸ್ಕರಣಾ ಘಟಕದ ಸಹ ಸಂಸ್ಥೆಗಳನ್ನು ಸ್ಥಾಪಿಸಿ 3000ಕ್ಕಿಂತಲೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದರು.


ಕೊಡುಗೈ ದಾನಿಯಾಗಿ ಯಕ್ಷಗಾನ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶ್ರೀಪತಿ ಭಟ್ಟರು ತಮ್ಮ ಪತ್ನಿಯ ನಿಧನಾ ನಂತರ 2012ರಲ್ಲಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವು ನೀಡುತ್ತಿದ್ದಾರೆ.ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಹಿಳಾ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ನೆರವು ಇತ್ಯಾದಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿರುವ ಅವರಿಗೆ ಅಂತರಾಷ್ಟ್ರೀಯ `ಆರ್ಯಭಟ ಪ್ರಶಸ್ತಿ’ ಲಭಿಸಿದೆ.


ಪಾತಾಳ ವೆಂಕಟ್ರಮಣ ಭಟ್ :
ಪುತ್ತೂರುತಾಲೂಕು ಬೈಪದವು ದಿ| ರಾಮಣ್ಣ ಭಟ್ ಮತ್ತು ಹೇಮಾವತಿ ದಂಪತಿಗೆ 1933ರಲ್ಲಿ ಜನಿಸಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರಸ್ತುತ 88ರ ಇಳಿವಯಸ್ಸು. ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ನೀಡಿ 1953ರಲ್ಲಿ ಕಾಂಚನ ಲಕ್ಷ್ಮೀನಾರಾಯಣ ಯಕ್ಷಗಾನ ನಾಟಕ ಮಂಡಳಿಯಲ್ಲಿ ಗುರುಕುಲ ಮಾದರಿಯ ಯಕ್ಷಗಾನ ಮೂಲ ಪಾಠ ಕಲಿತ ಅವರಿಗೆ ಕಾಂಚನ ಕೃಷ್ಣ ಅಯ್ಯರ್, ಮಾಣಂಗಾಯಿ ಕೃಷ್ಣ ಭಟ್ ಮತ್ತು ಪೆರುವೊಡಿ ನಾರಾಯಣ ಭಟ್ಟರು ಗುರುಗಳಾಗಿದ್ದರು. ಮುಂದೆ ಬಡಗುತಿಟ್ಟಿನ ನೃತ್ಯ ಶೈಲಿಯನ್ನು ಕಲಿತ ವೆಂಕಟ್ರಮಣ ಭಟ್ಟರು ಸೌಕೂರು ಮೇಳದಲ್ಲಿ ತಿರುಗಾಟ ಮಾಡಿದರು. 1957ರಿಂದ ಮೂಲ್ಕಿ ಮತ್ತು ಸುರತ್ಕಲ್ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಮುನ್ನಡೆದು 1964ರಿಂದ ಧರ್ಮಸ್ಥಳ ಮೇಳದಲ್ಲಿ ಸೇವೆಗೈದು 1981ರಲ್ಲಿ ರಂಗದಿಂದ ನಿವೃತ್ತರಾದರು.


ಯಕ್ಷಗಾನದ ಸ್ತ್ರೀವೇಷದ ಬಗ್ಗೆ ಭಿನ್ನಕಲ್ಪನೆ ಹೊಂದಿದ್ದ ಪಾತಾಳ ವೆಂಕಟ್ರಮಣ ಭಟ್ಟರು ಬೇಲೂರು ಶಿಲಾಬಾಲಿಕೆಯರ ಅಂಗಭಂಗಿ, ಆಭರಣ– ಅಲಂಕಾರಗಳನ್ನು ಅಭ್ಯಸಿಸಿ ಅದಕ್ಕೊಪ್ಪುವ ಮರದ ವೇಷ ಭೂಷಣಗಳನ್ನು ತಜ್ಞರಿಂದ ಮಾಡಿಸಿ ರಂಗದಲ್ಲಿ ಬಳಸಿದರು. ಮಾಸ್ಟರ್ ವಿಠಲ್‌ರಿಂದ ಭರತನಾಟ್ಯ, ವಿಟ್ಲ ಬಾಬುರಾಯರಿಂದ ಬಣ್ಣಗಾರಿಕೆಯನ್ನುಕಲಿತರು. ಪ್ರಾಚೀನ ದಶರೂಪಕಗಳು ಮತ್ತು ಡಿವಿಜಿಯವರ ಅಂತಃಪುರ ಗೀತೆಗಳನ್ನು ಓದಿ ವೈವಿಧ್ಯಮಯ ರಂಗಸಾಧ್ಯತೆಗಳನ್ನು ತಿಳಿದು ಪ್ರಯೋಗಿಸಿದರು. ರಂಭೆ, ಊರ್ವಶಿ, ಮೇನಕೆ, ಮೋಹಿನಿ, ಮಾಯಾ ಶೂರ್ಪನಖಿ, ಗುಣಸುಂದರಿ, ಅಂಬೆ, ಕೈಕೆ, ಮಾಯಾ ಅಜಮುಖಿ, ಪೂತನಿ, ಶ್ರೀದೇವಿ, ದ್ರೌಪದಿ, ದಿತಿ, ಮಾಲಿನಿ, ಗೌರಿ, ಅಮ್ಮುದೇವಿ, ಪುಲ್ಲಪೆರ್ಗಡ್ತಿ– ಇತ್ಯಾದಿ ಪಾತ್ರಗಳನ್ನು ಉತ್ಕೃಷ್ಟ ರೀತಿಯಲ್ಲಿ ನಿರ್ವಹಿಸಿದರು.


ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಗೌರವ - ಸಂಮಾನಗಳಿಗೆ ಪಾತ್ರರಾಗಿರುವ ಪಾತಾಳ ವೆಂಕಟ್ರಮಣ ಭಟ್ಟರಿಗೆಅಭಿಮಾನಿಗಳು `ಪಾತಾಳ-2013’ ಗುರುವಂದನಾ ಕಾರ್ಯಕ್ರಮದೊಂದಿಗೆ `ಯಕ್ಷ ಶಾಂತಲಾ’ ಗ್ರಂಥ ಸಮರ್ಪಣೆ ಮಾಡಿದ್ದಾರೆ. ಅಲ್ಲಿಂದೀಚೆಗೆ ವಿವಿಧ ಕಲಾವಿದರಿಗೆ ಪಾತಾಳ ಪ್ರಶಸ್ತಿಯನ್ನು ನೀಡಲಾಗಿದೆ. ಇಳಿ ವಯಸ್ಸಿನಲ್ಲಿಯೂ ವೃತಾನುಷ್ಠಾನಗಳಿಂದ ಸ್ವಚ್ಛ ಮಾನಸರಾಗಿ ಕಲೆ-ಕಲಾವಿದರಿಗಾಗಿ ನಿರಂತರ ತುಡಿಯುತ್ತಿರುವ ಪಾತಾಳ ಇತ್ತೀಚೆಗೆ (ಅಕ್ಟೋಬರ2021) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 30 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 10,000/- ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿರುವುದು ಕಲಾ ಕ್ಷೇತ್ರದ ಶ್ರೇಷ್ಠ ಉಪಕ್ರಮವಾಗಿ ದಾಖಲಾಗಿದೆ.


(ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ದಶಂಬರ 18 ಮತ್ತು 19, 2021ರಂದು ಮಂಗಳೂರಿನಲ್ಲಿ ಜರಗುವ ಒಂಭತ್ತನೇ ವರ್ಷದ ಕನ್ನಡ ನುಡಿಹಬ್ಬ `ಯಕ್ಷಗಾನ ತಾಳಮದ್ದಳೆ ಪರ್ವ– 2021’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.)

ಬರಹ : ಭಾಸ್ಕರ ರೈ ಕುಕ್ಕುವಳ್ಳಿ

ಇಂದು ಆಟ ಎಲ್ಲೆಲ್ಲಿ? (15-12-2021)

ಮೇಳಗಳ ಇಂದಿನ (15.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ರಥಬೀದಿ – ಶ್ರೀ ಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ – ರಂಗನಾಯಕ 

ಕಟೀಲು ಎರಡನೇ ಮೇಳ == ಕಡಂದಲೆ ಭಂಡಸಾಲೆ ಆಟ, ಕಡಂದಲೆ ದೇವಸ್ಥಾನದ ಬಳಿ – ವಧು ವೈಶಾಲಿನಿ 

ಕಟೀಲು ಮೂರನೇ ಮೇಳ== ರೌದ್ರನಾಥೇಶ್ವರ ಭಜನಾ ಮಂಡಳಿ, ನಡಿಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಶ್ರೀದೇವಿ ಕೃಪಾ, ಮಿತ್ತಡ್ಕ ಬೆಟ್ಟಂಪಾಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ – ಭೀಷ್ಮ ಪ್ರತಿಜ್ಞೆ, ಕೃಷ್ಣಾರ್ಜುನ, ಮೀನಾಕ್ಷಿ ಕಲ್ಯಾಣ 

ಕಟೀಲು ಆರನೇ ಮೇಳ == ಕುಡ್ತಿಮಾರುಗುತ್ತು, ಕಿಲೆಂದೂರು ಅತ್ತೂರು ನಡುಗೋಡು – ಶ್ರೀ ಮಹಾದೇವಿ ಲಲಿತೋಪಾಖ್ಯಾನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಬಳಗೋಡು ಹಾನಾಡಿಕೆದೂರು 

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ರುಕ್ಮಾಂಗದ, ಮೋಹಿನಿ, ಗದಾಪರ್ವ 

ಶ್ರೀ ಸಾಲಿಗ್ರಾಮ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ – ಪಾಂಚಜನ್ಯ, ರತ್ನಾವತಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಂಚನೂರು

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೂರ್ಸಿ ಕಾಲ್ತೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ನಾವುಂದ ಚಾತನಕೇರಿ ಬೊಬ್ಬರ್ಯ ದೇವಸ್ಥಾನ ವಠಾರ 

ಶ್ರೀ ಪಾವಂಜೆ ಮೇಳ  ==  ಗುಡ್ಡಟ್ಟು ಯಕ್ಷ ಉತ್ಸವ, ಶ್ರೀ ವಿನಾಯಕ ದೇವಸ್ಥಾನದ ವಠಾರ – ಅಂಬರೀಷ, ತರಣಿಸೇನ, ರತಿ ಕಲ್ಯಾಣ 

ಕಮಲಶಿಲೆ ಮೇಳ  == ಕೆಂಚನೂರು – ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ == ಕೋಡಿ ಕನ್ಯಾಣ 

ಶ್ರೀ ಸೌಕೂರು ಮೇಳ == ‘ಸೌಕೂರು ಸೇರ್ವೆಗಾರರ ಮನೆ – ರಂಗನಾಯಕಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಶ್ರೀ ಕ್ಷೇತ್ರದಲ್ಲಿ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಮಾಂಡಿ ಮೂರುಕೈ ಭಕ್ತವೃಂದ – ಮಹಾದೇವಿ ಮಹೇಶ್ವರಿ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಟತಟ್ಟು ಪಡುಕೆರೆ ಶ್ರೀ ನಂದಿಕೇಶ್ವರ ಗೆಳೆಯರ ಬಳಗ – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಂತ್ರಭೈರವಿ 

ಶ್ರೀ ಸಿಗಂದೂರು ಮೇಳ == ವಂಡ್ಸೆ ಕೆಳಾಪೇಟೆ  

ಶ್ರೀ ನೀಲಾವರ ಮೇಳ  == ಸಿದ್ಧಾಪುರ ಐದು ಸೆಂಟ್ಸ್ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಕುಮ್ರಗೋಡು ಶಾಲಾ ಬಳಿ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಹಾಯಿಗುಳಿ ಮನೆ ತೆಂಕಬೆಟ್ಟು ನಾಗೂರು 

ಶ್ರೀ ಬಪ್ಪನಾಡು ಮೇಳ == ಕೋರ್ದಬ್ಬು ಯಕ್ಷಗಾನ ಸೇವಾ ಸಮಿತಿ ದೈಲಬೆಟ್ಟು ಕಲ್ಲಮುಂಡ್ಕೂರು – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ನರಿಂಗಾನ ಮಲರಾಯ ಪಿಲಿಚಾಮುಂಡಿ ಬಂಟ ದೈವಸ್ಥಾನದ ವಠಾರ – ಮುಗುರುಮಲ್ಲಿಗೆ 

ಶ್ರೀ ಮಂಗಳಾದೇವಿ ಮೇಳ == ವರ್ಕಾಡಿ ಮಂದ್ರಬೈಲು ಕೊರಗಜ್ಜ ಕ್ಷೇತ್ರದಲ್ಲಿ – ಶನೀಶ್ವರ ಮಹಾತ್ಮೆ – ತುಳು ಕಾಲಮಿತಿ 

ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಹಾಗೂ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 77ನೆಯ ವಾರ್ಷಿಕೋತ್ಸವ

ಡಾ. ಡಿ. ಸದಾಶಿವ ಭಟ್ಟರಿಗೆ ಕೀರಿಕ್ಕಾಡು ಪ್ರಶಸ್ತಿ

ವಿವಿಧ ಭಾಷೆಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಖ್ಯಾತ ಕವಿ ಸಾಹಿತಿ
ಬಹುಭಾಷಾ ವಿದ್ವಾಂಸ ಡಾ. ಡಿ ಸದಾಶಿವ ಭಟ್ಟ ಬೆಟ್ಟಂಪಾಡಿ ಅವರಿಗೆ 2021ರ
ಕೀರಿಕ್ಕಾಡು ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸುದೀರ್ಘ ಕಾಲ ಅಧ್ಯಾಪಕರಾಗಿದ್ದ
ಸದಾಶಿವ ಭಟ್ಟರು ಪಂಜೆ ಮಂಗೇಶರಾಯರ ಸಾಹಿತ್ಯದ ಕುರಿತಾದ ಸಂಶೋಧನಾ
ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಅನೇಕ ಯಕ್ಷಗಾನ ಪ್ರಸಂಗಗಳ
ರಚನೆಯೊಂದಿಗೆ ಶ್ರೀಕೃಷ್ಣ ಚರಿತ ಮತ್ತು ರಕ್ತಕ್ರಾಂತಿ ಎಂಬ ಎರಡು ಕನ್ನಡ ಯಕ್ಷಗಾನ
ಮಹಾಕಾವ್ಯಗಳನ್ನು ರಚಿಸಿದ್ದಾರೆ.

ಡಾ. ಡಿ ಸದಾಶಿವ ಭಟ್ಟ ಬೆಟ್ಟಂಪಾಡಿ

ದಿನಾಂಕ 18-12-2021ರ ಶನಿವಾರ ಕೀರಿಕ್ಕಾಡು
ಸ್ಮಾರಕ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿರುವ ಬನಾರಿ ಶ್ರೀ
ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 77ನೇ ವಾರ್ಷಿಕೋತ್ಸವ ಸಮಾರಂಭದಂದು
ಅವರಿಗೆ ಕೀರಿಕ್ಕಾಡು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ) ದೇಲಂಪಾಡಿ ಇದರ  ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ತಿಳಿಸಿದ್ದಾರೆ.

ಆ ದಿನದ ಕಾರ್ಯಕ್ರಮಗಳ ಸಂಪೂರ್ಣ ವಿವರ 
77ನೆಯ ವಾರ್ಷಿಕೋತ್ಸವ – ಕೀರಿಕ್ಕಾಡು ಪ್ರಶಸ್ತಿ ಪ್ರದಾನ

ದಿನಾಂಕ 18-12-2021 ಶನಿವಾರ
ಸ್ಥಳ:- ಕೀರಿಕ್ಕಾಡು ಸ್ಮಾರಕ ಸಭಾಭವನ ಬನಾರಿ
ಕಾರ್ಯಕ್ರಮಗಳು
ಪೂರ್ವಾಹ್ನ ಗಂಟೆ 9-30ಕ್ಕೆ : ಗಣಹೋಮ – ಶ್ರೀ ಗೋಪಾಲಕೃಷ್ಣ ದೇವರ ಪೂಜೆ
ಪೂರ್ವಾಹ್ನ ಗಂಟೆ 10-00ರಿಂದ : ಭಗವದ್ಗೀತೆಯ ವಾಚನ ಮತ್ತು ಪ್ರವಚನ (ಆಯ್ದ ಭಾಗ)
ವಿದ್ವಾನ್ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಅವರಿಂದ

ಪೂರ್ವಾಹ್ನ ಗಂಟೆ 11.00ರಿಂದ : ಯಕ್ಷಗಾನ ತಾಳಮದ್ದಳೆ “ಪಾರ್ಥಸಾರಥ್ಯ” ಹಾಗೂ ಭಕ್ತಿಗೀತೆ, ಭಾವಗೀತೆಗಳ ಗಾಯನ
ಮಧ್ಯಾಹ್ನ ಗಂಟೆ 12.45ಕ್ಕೆ : ಭೋಜನ
ಅಪರಾಹ್ನ ಗಂಟೆ 2-00 ರಿಂದ : ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ

ಅಧ್ಯಕ್ಷತೆ : ರಾಜ್ಯೋತ್ಸವ ಕೃಷಿ ಪ್ರಶಸ್ತಿ ವಿಜೇತ ಕಡಮಜಲು ಶ್ರೀ ಸುಭಾಷ್ ರೈ, ಸಾಹಿತ್ಯ ಸಂಸ್ಕೃತಿಯ ಪೋಷಕರು
ಕೀರಿಕ್ಕಾಡು ಪ್ರಶಸ್ತಿ ಭಾಜನರು : ಡಾ. ಡಿ. ಸದಾಶಿವ ಭಟ್ಟ ಬೆಟ್ಟಂಪಾಡಿ, ಬಹುಭಾಷಾ ಪ್ರಸಂಗಕರ್ತರು, ವಿದ್ವಾಂಸರು ಮತ್ತು ಸಾಹಿತಿ

ಅಭಿನಂದನೆ : ಶ್ರೀ ವೆಂಕಟರಾಮ ಭಟ್ಟ, ಪ್ರಾಚಾರ್ಯರು ಪ್ರತಿಭಾ ವಿದ್ಯಾಲಯ ಸುಳ್ಯ
ಶುಭ ಹಾರೈಕೆ : ಶ್ರೀ ಎ. ನಾರಾಯಣ್ ನಾÊಕ್ ಮೊಕ್ತೇಸರರು ಊಜಂಪಾಡಿ – ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನ
ಕೀರಿಕ್ಕಾಡು ಸಂಸ್ಮರಣೆ: ಡಾ. ಯಂ. ಪ್ರಭಾಕರ ರೈ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಮೀಂಜ
ಉಪಸ್ಥಿತಿ : ಶ್ರೀ ಕೆ. ಚಂದ್ರಶೇಖರ ರೈ ಕಲ್ಲಡ್ಕ, ಗ್ರೂಪ್ ಆಫ್ ಅಕ್ಷಯ ಮಂಗಳೂರು

ಸಂಜೆ ಗಂಟೆ 3-15ರಿಂದ : ಯಕ್ಷಗಾನ ತಾಳಮದ್ದಳೆ – ಕರ್ಣಪರ್ವ
ಸಂಜೆ ಗಂಟೆ 6-00ರಿಂದ : ಸರೋಜಿನಿ ಬನಾರಿ ಹಾಗೂ ಯಶಸ್ವಿ ಅಡ್ಕಾರು ಅವರ ನಿರ್ದೇಶನದಲ್ಲಿ

ಭರತನಾಟ್ಯ ಮತ್ತು ಜಾನಪದ ನೃತ್ಯ ಕಲಾ ವೈವಿಧ್ಯ.
ರಾತ್ರಿ ಗಂಟೆ 7 ಕ್ಕೆ ಮಂಗಲ

ಸರಕಾರದ ಕೋವಿಡ್ ನಿಯಮ ನಿಬಂಧನೆಗಳೊಂದಿಗೆ ಈ ಕಾರ್ಯಕ್ರಮವು ಜರಗಲಿರುವುದು. ಅವುಗಳನ್ನು ಕಡ್ಡಾಯವಾಗಿ
ಪಾಲಿಸಿ ಸರ್ವರೂ ಸಹಕರಿಸಬೇಕೆಂದು  ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. 

ಇಂದು ಆಟ ಎಲ್ಲೆಲ್ಲಿ? (14-12-2021)

ಮೇಳಗಳ ಇಂದಿನ (14.12.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಡುಕೋಣೆ ಕೋಟೆಗುಡ್ಡೆ ಶಾಲಾ ವಠಾರ  – ಭಾರ್ಗವ ವಿಜಯ – ಜಾಂಬವತಿ ಕಲ್ಯಾಣ 

ಕಟೀಲು ಒಂದನೇ ಮೇಳ == ಕಟೀಲು ಸಾನಿಧ್ಯ ಹಾಲ್ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಸ್ಮಿತಾಲಕ್ಷ್ಮಿ ನಿಲಯ, ಹುಣ್ಸೆಕಟ್ಟೆ ಪೆರ್ಮುದೆ ತೆಂಕ ಎಕ್ಕಾರು 

ಕಟೀಲು ನಾಲ್ಕನೇ ಮೇಳ  == ಫಳ್ನೀರು ಹೌಸ್, ತೇವುಲ, ಕುತ್ತಾರುಪದವು 

ಕಟೀಲು ಐದನೇ ಮೇಳ == ಉಳೆಪಾಡಿ, ಶಿಮಂತೂರು ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಆತ್ಮಾಂಜಲಿ 

ಶ್ರೀ ಸಾಲಿಗ್ರಾಮ ಮೇಳ == ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ಬಳಿ – ಓಂಕಾರ ರೂಪಿಣಿ 

ಶ್ರೀ ಪೆರ್ಡೂರು ಮೇಳ == ಶಂಕರನಾರಾಯಣ – ಕೃಷ್ಣಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಾವಿಗೆದ್ದೆ ನಾಗೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಕ್ಕಿಗದ್ದೆಮನೆ ನಾಯ್ಕನಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶ್ರೀ ರಾಘವೇಂದ್ರ ನಿಲಯ ಕೋಣ್ಕಿನಾಡ 

ಶ್ರೀ ಪಾವಂಜೆ ಮೇಳ  ==  ಮಂಗಳೂರು ಪುರಭವನ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ == ಗುಡಿಕೇರಿ ಉಳ್ಳೂರು – 74

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ಮುಂಬಾರು 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಮುಡಿಪು ಮುಡಿಪುನ್ನಾರ್ ದೇವಸ್ಥಾನದ ಮುಂಭಾಗ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಸೋಮೇಶ್ವರ ಈಶ್ವರ ದೇವಸ್ಥಾನ ವಠಾರ – ಮಹಾದೇವಿ ಮಹೇಶ್ವರಿ  

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋರಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ 

ಶ್ರೀ ಹಿರಿಯಡಕ ಮೇಳ == ಉಪ್ಪಿನಕೋಟೆ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ ==  ಅರೆಕಲ್ಮನೆ ಸಿದ್ಧಾಪುರ 

ಶ್ರೀ ಸಿಗಂದೂರು ಮೇಳ == ಕಂಚಿನಕೂಡ್ಲು ಆಲೂರು ಕ್ರಾಸ್ 

ಶ್ರೀ ನೀಲಾವರ ಮೇಳ  ==ಕಾಸನಕಟ್ಟೆ ಮೇಲುಜಡ್ಡು – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ದಡಬಂಡೇಶ್ವರ ಬಲರಾಮ ದೇವಸ್ಥಾನ – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ನಾವುಂದ ಬಡಾಕೇರಿ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಠಾರ 

ಶ್ರೀ ಬಪ್ಪನಾಡು ಮೇಳ == ಹಳೆಯಂಗಡಿ ಪಡುಪಣಂಬೂರು ಜೈನ ಬಸದಿ ಬಳಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ಮಂಗಳಾದೇವಿ ಕ್ಷೇತ್ರದಲ್ಲಿ – ಸೇವೆಯಾಟ ಪಾಂಡವ ಅಶ್ವಮೇಧ 

ಕಟೀಲು ಮೇಳ – ಇಂದಿನ ಪ್ರಸಂಗಗಳು (13-12-2021)

ಕಟೀಲು ಒಂದನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಾಮೆರಕೋಡಿ ಮೊಡಂಕಾಪು ಬಿ.ಸಿ.ರೋಡ್ ಬಂಟ್ವಾಳ 

ಕಟೀಲು ಎರಡನೇ ಮೇಳ == ಶ್ರೀ ದೇವಿ ಮಹಾತ್ಮೆ – ಕಲ್ಲಕುಮೇರು ಮನೆ ಕಟೀಲು 

ಕಟೀಲು ಮೂರನೇ ಮೇಳ== ಕೊಲ್ಲೂರು ಕ್ಷೇತ್ರ ಮಹಾತ್ಮೆ – ಕಟೀಲು ಕ್ಷೇತ್ರ ಶ್ರೀ ಮಹಾಲಕ್ಷ್ಮಿ ಸದನ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಮಹಾತ್ಮೆ – ಕೊಡಪಕೊಟ್ಟ, ಪೆದಮಲೆ, ಮಣೂರು ದೇವಸ್ಥಾನದ ಬಳಿ, ವಯಾ ನೀರುಮಾರ್ಗ 

ಕಟೀಲು ಐದನೇ ಮೇಳ == ಶ್ರೀ ಗಾಯತ್ರಿ ಮಹಾತ್ಮೆ – ಶ್ರೀ ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಆರನೇ ಮೇಳ == ಮಾತಂಗ ಕನ್ಯೆ – ಪ್ರೇಮ ನಿಲಯ, ಶಿವನಗರ ಟೋಲ್ ಗೇಟ್ ಬಳಿ ಹೆಜಮಾಡಿ 

ಇಂದಿನಿಂದ ಪುತ್ತೂರಿನಲ್ಲಿ ಯಕ್ಷೋತ್ಸವ – ಹನುಮಗಿರಿ ಮೇಳದವರಿಂದ

ಶ್ರೀ ಕೋದಂಡರಾಮ ಕೃಪಾಶ್ರಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಇಂದು ದಿನಾಂಕ 13.12.2021 ಸೋಮವಾರದಿಂದ 17-12-2021ರ ವರೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ಬೇರೆ ಬೇರೆ ಪ್ರಸಂಗಗಳ ಯಕ್ಷಗಾನ ಬಯಲಾಟ ನಡೆಯಲಿದೆ. ವಿವರಗಳಿಗಾಗಿ ಚಿತ್ರ ನೋಡಿ.