Sunday, March 15, 2026
Home Blog Page 285

ಇಂದು ಆಟ ಎಲ್ಲೆಲ್ಲಿ? (10-01-2022)

ಮೇಳಗಳ ಇಂದಿನ (10.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಾರ್ಕೂರು ಯಡ್ತಾಡಿ ರತ್ನಾವತಿ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ == ಮುಂಚೂರು ಶಾಲಾ ಬಳಿ, ಶ್ರೀನಿವಾಸನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶಾರದಾ ವೆಂಕಟರಮಣ ಕಾಲನಿ, ತಡಂಬೈಲು, ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ಪರಿಮಳ ಪ್ರಸಾದ್’ ಅಶ್ವತ್ಥಪುರ ನೀರ್ಕೆರೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ ==  = ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ – ಮಹಾಕಲಿ ಮಗಧೇಂದ್ರ 

ಕಟೀಲು ಆರನೇ ಮೇಳ == ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  ==  ನರಿಯಾಣಿಗುಡ್ಡೆ ಶಿರೂರು ಮುದ್ದುಮನೆ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ನರಿಯಾಣಿಗುಡ್ಡೆ ಶಿರೂರು ಮುದ್ದುಮನೆ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಕಾಜ್ರಳ್ಳಿ – ಕಟ್ಟುಕಟ್ಟಳೆ ಸೇವೆ 

ಮಂದಾರ್ತಿ ನಾಲ್ಕನೇ ಮೇಳ   == ‘ಜಾಗೃತಿ’ ಇಂದಾರು ಬೆಳ್ಮಣ್ಣು ಕಾರ್ಕಳ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಆತ್ಮಾಂಜಲಿ 

 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಶಿವ ಪಂಚಾಕ್ಷರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಕ್ಲಮನೆ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹಕ್ಲಮನೆ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹಕ್ಲಮನೆ ಹೊಸೂರು 

ಶ್ರೀ ಪಾವಂಜೆ ಮೇಳ == ಬಿ.ಬಿ ಕ್ರಿಯೇಷನ್ಸ್, ಪಾಣಾಜೆ – ಶ್ರೀ ದೇವಿ ಲಲಿತೋಪಾಖ್ಯಾನ 

ಕಮಲಶಿಲೆ ಮೇಳ  == ಕೋಡಿ ಕುಂದಾಪುರ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಹಟ್ಟಿಕುದ್ರು ಗಣಪತಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕುಂದಾಪುರ ತಲ್ಲೂರು ಕೋಟೆಬಾಗಿಲು ಶಾಲಾ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಮಿಯಾರು ಹೊಸಮನೆ ಬೆಟ್ಟು ನಾಲ್ಕೂರು ಮಲಸಾವರಿ ದೈವಸ್ಥಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಹಂಗಳೂರು ಶ್ರೀ ಚಿಕ್ಕಮ್ಮ ದೈವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ಆದ್ಯಪಾಡಿ ಶಾಲಾ ವಠಾರ – ಮಾಯೊದ ಅಜ್ಜೆ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಚಾರುಕೊಟ್ಟಿಗೆ

ಶ್ರೀ ನೀಲಾವರ ಮೇಳ  == ಬಾಲಾಜಿ ಕಾಂಪ್ಲೆಕ್ಸ್ ಬಳಿ ಗೋಳಿಯಂಗಡಿ – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಕಟಪಾಡಿ ಕಾರಣೀಕ ಕೊರಗಜ್ಜನ ಸನ್ನಿಧಿ – ಮಂತ್ರ ಮಯೂರಿ

ಶ್ರೀ ಹಾಲಾಡಿ ಮೇಳ == ಶ್ರೀ ಗೋಪಾಲಕೃಷ್ಣ ದೇವಸ್ಥಾನ ಎಳಂತೂರು – ಮೇಘರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಹೆಬ್ರಿ ಸಂತೆಕಟ್ಟೆ ಭಕ್ತರು – ಬಂಡಿದೈವ ಹುಲಿಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ, ನೆಲ್ಲಿಗುಡ್ಡೆ, ಪುತ್ತಿಗೆ – ಅಜ್ಜ ಅಜ್ಜ ಕೊರಗಜ್ಜ

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಳಾಯಿ ಶ್ರೀಕೃಷ್ಣ ಅಯ್ಯಪ್ಪ ಭಕ್ತವೃಂದ – ಕಂಚೀಲ್ದ ಪರಕೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಪದಾಧಿಕಾರಿಗಳ ಆಯ್ಕೆ

48ನೇ ವರ್ಷದಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಆಯ್ಕೆಯಾಗಿದ್ದಾರೆ.


ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಬಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಅಂಬಾಪ್ರಸಾದ್ ಪಾತಾಳ, ಕಾರ್ಯದರ್ಶಿಯಾಗಿ ಶ್ರೀಪತಿ ಭಟ್ ಇಳಂತಿಲ ಖಜಾಂಚಿಯಾಗಿ ಹರೀಶ್ ಬಾರ್ಯ ಜೊತೆ ಕಾರ್ಯದರ್ಶಿಯಾಗಿ ಸಂಜೀವ ಮಡಂತ್ಯಾರು ಸಂಘಟನಾ ಕಾರ್ಯದರ್ಶಿಗಳಾಗಿ ಸುಬ್ರಹ್ಮಣ್ಯ ರಾವ್ ಬನ್ನೆಂಗಳ ಮತ್ತು ಪ್ರಚೇತ್ ಆಳ್ವ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ ಶೆಣೈ ನಂದಾವರ, ಜಯಂತ ಪುರೊಳಿ, ಗೋಪಾಲಶೆಟ್ಟಿ ಕಳೆಂಜ , ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಗುಡ್ಡಪ್ಪ ಬಲ್ಯ, ಪದ್ಮನಾಭ ಕುಲಾಲ್ ಇಳಂತಿಲ, ಪ್ರಭಾಕರ ಆಳ್ವ, ರವೀಂದ್ರ ದರ್ಬೆ, ಗುರುಮೂರ್ತಿ ಅಮ್ಮಣ್ಣಾಯ, ಮಲ್ಲಿಗೆ ಕೃಷ್ಣ ಇದ್ದಾರೆ.

ಸದಸ್ಯತ್ವ ಅಭಿಯಾನ, ಸಂಘದ ನಿಗದಿತ ತಾಳಮದ್ದಳೆಯೊಂದಿಗೆ ಪ್ರಾಯೋಜಕರ ಮೂಲಕ ಮನೆ ಮನೆ ತಾಳಮದ್ದಳೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಂಘದ ಸದಸ್ಯರಿಂದ “ಪಂಚವಟಿ” ತಾಳಮದ್ದಳೆ ಜರುಗಿತು.

ಇಂದು ಆಟ ಎಲ್ಲೆಲ್ಲಿ? (09-01-2022)

ಮೇಳಗಳ ಇಂದಿನ (09.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಿನ್ನಿಗೋಳಿ ನೇಕಾರರ ಸೌಧ ಸಮೀಪ – ಸಾಮ್ರಾಟ್ ನಹುಷೇಂದ್ರ

ಕಟೀಲು ಒಂದನೇ ಮೇಳ == ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಮಂದಿರದ ಬಳಿ

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಸೌಂದರ್ಯ ಸಾರಸ್ವತ ಕಾಲನಿ, ಕೊಲ್ಯ ಸೋಮೇಶ್ವರ ಉಳ್ಳಾಲ

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಸದನ 

ಕಟೀಲು ಐದನೇ ಮೇಳ ==  ಪಡೀಲು ಶ್ರೀ ಅಯ್ಯಪ್ಪ ಸೇವಾ ಸಮಿತಿ ವಯಾ ಬಜಪೆ

ಕಟೀಲು ಆರನೇ ಮೇಳ == ಅಕ್ಷಯ ನಿವಾಸ ರಾಯಿ ಕೊಲ್ಯ ಬಂಟ್ವಾಳ

ಮಂದಾರ್ತಿ ಒಂದನೇ ಮೇಳ  ==  ಲಕ್ಷ್ಮೀ ನಿಲಯ ನೀರ್ಜೆಡ್ಡು ಹೆಗ್ಗುಂಜೆ ಮಂದಾರ್ತಿ

ಮಂದಾರ್ತಿ ಎರಡನೇ ಮೇಳ   == ವನಶ್ರೀ ನಿಲಯ ತೆಂಕೂರು ರಟ್ಟಾಡಿ

ಮಂದಾರ್ತಿ ಮೂರನೇ ಮೇಳ  == ಮಾತೃಶ್ರೀ ನಿಲಯ ಕಾರ್ತಟ್ಟು ಚಿತ್ರಪಾಡಿ ಸಾಲಿಗ್ರಾಮ

ಮಂದಾರ್ತಿ ನಾಲ್ಕನೇ ಮೇಳ   == ಏಕದಂತ ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ ಬೇಳಂಜೆ

ಮಂದಾರ್ತಿ ಐದನೇ ಮೇಳ  == ಬಡಾಮನೆ ಕುರುಡುಂಜೆ ಆರೂರು

ಹನುಮಗಿರಿ ಮೇಳ == ಶ್ರೀ ಭಗವತಿ ದೇವಸ್ಥಾನ ವಿಟ್ಲ – ಭಸ್ಮಾಸುರ ಮೋಹಿನಿ, ಶಬರಿಮಲೆ ಅಯ್ಯಪ್ಪ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊಳೂರು ಹಳ್ನಾಡುಮನೆ, ಕುಂದಬಾರಂಬಾಡಿ

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೊಳೂರು ಹಳ್ನಾಡುಮನೆ, ಕುಂದಬಾರಂಬಾಡಿ

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗರ್ಕಿಮಠ ಶಿರಿಯಾರ ಸ್ಯಾಬ್ರಕಟ್ಟೆ

ಶ್ರೀ ಪಾವಂಜೆ ಮೇಳ == ಬಂಟ್ವಾಳ ಬೈಪಾಸ್ – ಶ್ರೀ ದೇವಿ ಮಾಹಾತ್ಮ್ಯೆ

ಕಮಲಶಿಲೆ ಮೇಳ == ತೆಂಕಬೆಟ್ಟು ಕೆಳಾಮನೆ ಅಂಪಾರು

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಜಟ್ಟಿಗೇಶ್ವರ ದೇವಸ್ಥಾನ ಮಣೂರು ಪಡುಕೆರೆ

ಶ್ರೀ ಸೌಕೂರು ಮೇಳ == ಕೆಂಚನೂರು ಸ್ವಾಮಿ ಮನೆ ವಠಾರ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೊಂದೆಲ್ ಕೃಷ್ಣನಗರ – ಕಾರ್ನಿಕದ ಕಂರ್ಬೆಲ್ 

ಶ್ರೀ ಮಡಾಮಕ್ಕಿ ಮೇಳ == ಬೆಳ್ವೆ ಗುಮ್ಮಲ ವೀರಭದ್ರ ಭಕ್ತರು- ಮಹಾದೇವಿ ಮಹೇಶ್ವರಿ

ಶ್ರೀ ಹಟ್ಟಿಯಂಗಡಿ ಮೇಳ == ಪೆರಂಕುದ್ರು ಕೋಟೆ ಕಟಪಾಡಿ ಮಹಾಂಕಾಳಿ ಸನ್ನಿಧಿ – ಮಂತ್ರ ಮಯೂರಿ

ಶ್ರೀ ಬಪ್ಪನಾಡು ಮೇಳ == ಶ್ರೀ ವೀರ ಹನುಮಾನ್ ಮಂದಿರ ಸುಜೀರ್ ದತ್ತನಗರ – ಬಾಲೆಮಾನಿ ಮಾಯಂದಾಲ್

ಶ್ರೀ ಸಸಿಹಿತ್ಲು ಭಗವತೀ ಮೇಳ == ಸೂರಿಂಜೆ ಕೋಟೆ – ನಾಗ ತಂಬಿಲ

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಯಕ್ಷಗಾನ ಪ್ರದರ್ಶನ

ನಿನ್ನೆ (7-1-2022) ಉಡುಪಿ ಕುಂಜಿಬೆಟ್ಟಿನ ಅರ್ಚನಾ ಸೊವರಿನ್ ನ ರೂಫ್ ಟಾಪ್ ನಲ್ಲಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ ಇದರ ಬಾಲ ಕಲಾವಿದರಿಂದ ಶ್ರೀರಾಮ ದರ್ಶನಂ (ಮೈಂದ ದಿವಿದ ಕಾಳಗ) ನರಸಿಂಹ ತುಂಗರ ನಿರ್ದೇಶನದಲ್ಲಿ ಸೊಗಸಾಗಿ ಪ್ರಸ್ತುತಗೊಂಡಿತು.

ಯಕ್ಷಗಾನದ ಅಭಿಮಾನಿಯಾದ, ಮಲಪ್ರಭಾ ಗ್ರಾಮೀಣ ಬ್ಯಾಂಕಿನ ಜನರಲ್ ಮೆನೇಜರ್ ಆಗಿ ನಿವೃತ್ತರಾದ ಶ್ರೀ ಪಿ. ಆರ್. ಶೆಣೈ ತಮ್ಮ ಎಪ್ಪತ್ತೊಂದನೇ ವರ್ಷದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಯಕ್ಷಗಾನ ಕಲಾರಂಗದ ಸದಸ್ಯರು ದಾನಿಗಳು ಆದ ಶ್ರೀ ಪಿ. ಆರ್. ಶೆಣೈ ಹಾಗೂ ಅವರ ಪತ್ನಿಯನ್ನು ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಅಂಬಲ್ಪಾಡಿ ಮಂಡಳಿ ಅಧ್ಯಕ್ಷ ಕೆ. ಅಜಿತ್ ಕುಮಾರ್, ಕಾರ್ಯದರ್ಶಿ ಸುನಿಲ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಯು. ವಿಶ್ವನಾಥ್ ಶೆಣೈ, ಪಿ. ಗೋಪಾಲಕೃಷ್ಣ ಪೈ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಆಟ ಎಲ್ಲೆಲ್ಲಿ? (08-01-2022)

ಮೇಳಗಳ ಇಂದಿನ (08.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೋಟೇಶ್ವರ ಮಠದಬೆಟ್ಟು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ

ಕಟೀಲು ಎರಡನೇ ಮೇಳ == ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿ, ಕನಕಗಿರಿ, ಮಂಚಿ, ಬಂಟ್ವಾಳ 

ಕಟೀಲು ಮೂರನೇ ಮೇಳ== ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು ವಯಾ ಹಳೆಯಂಗಡಿ

ಕಟೀಲು ನಾಲ್ಕನೇ ಮೇಳ  == ಪೆರ್ಮಂಕಿ ಉಳಾಯಿಬೆಟ್ಟು ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ

ಕಟೀಲು ಐದನೇ ಮೇಳ ==  = ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ == ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಉರ್ವಸ್ಟೋರ್

ಮಂದಾರ್ತಿ ಒಂದನೇ ಮೇಳ  ==  ಹೆಗ್ಗುಂಜೆ ಚಾವಡಿಮನೆ ಬಾರಾಳಿ

ಮಂದಾರ್ತಿ ಎರಡನೇ ಮೇಳ   == ಕಂಗಿಬೆಟ್ಟು ಸೂರಾಲು

ಮಂದಾರ್ತಿ ಮೂರನೇ ಮೇಳ  == ಕಂಚಾರು ಅಂಪಾರು

ಮಂದಾರ್ತಿ ನಾಲ್ಕನೇ ಮೇಳ   == ಕರೆಬೈಲು ಮನೆ ಕಿರಾಡಿ ಆವರ್ಸೆ – ಕೂಡಾಟ

ಮಂದಾರ್ತಿ ಐದನೇ ಮೇಳ  == ಕೆರೆಬೈಲು ಮನೆ ಕಿರಾಡಿ ಆವರ್ಸೆ – ಕೂಡಾಟ

ಹನುಮಗಿರಿ ಮೇಳ == ಮೂಡಬಿದಿರೆ ಸ್ವರಾಜ್ ಮೈದಾನ  – ವೀರಮಣಿ ಕಾಳಗ, ಶಶಿಪ್ರಭಾ ಪರಿಣಯ

ಶ್ರೀ ಸಾಲಿಗ್ರಾಮ ಮೇಳ == ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ನೂತನ ಪ್ರಸಂಗ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸಾಲ್ ಬಾಗಿಲುಮನೆ, ಬಟ್ಟೆಕುದ್ರು ಹಕ್ಲಾಡಿ

ಶ್ರೀ ಮಾರಣಕಟ್ಟೆ ಮೇಳ ‘ಬಿ == ವಿನಾಯಕ ದೇವಸ್ಥಾನ ಆನೆಗುಡ್ಡೆ

ಶ್ರೀ ಮಾರಣಕಟ್ಟೆ ಮೇಳ ‘ಸಿ == ದರ್ಖಾಸ್ತುಮನೆ, ಪೆರ್ಣಂಕಿಲ, ಹಿರಿಯಡ್ಕ

ಶ್ರೀ ಪಾವಂಜೆ ಮೇಳ == ಕಟೀಲು ಸಿತ್ಲ ಸುಬ್ರಾಯ ಶ್ಯಾನುಭಾಗ್ ಸ್ಮರಣಾರ್ಥ – ಶಿವ ಪಂಚಾಕ್ಷರಿ ಶಿವಪ್ರಭೆ

ಕಮಲಶಿಲೆ ಮೇಳ == ಅಯ್ಯಪ್ಪ ಸ್ವಾಮೀ ಭಕ್ತವೃಂದ ಬೈಪಾಸ್ ಆದಿಉಡುಪಿ

ಶ್ರೀ ಅಮೃತೇಶ್ವರೀ ಮೇಳ == ಮಾರ್ಕೋಡು ನಡುಮನೆ ಕೋಟೇಶ್ವರ

ಶ್ರೀ ಸೌಕೂರು ಮೇಳ == ಹೆಂಗವಳ್ಳಿ ಮಲ್ನಾಡು ಕ್ಯಾಶ್ಯೂಸ್ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕಡೇಶಿವಾಲಯ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಆರ್ಡಿ ಬೆಣಗಲ್ ಆನೆ ಬ್ರಹ್ಮಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮ್ಯೆ

ಶ್ರೀ ಸಿಗಂದೂರು ಮೇಳ == ಬೆಳ್ಳಾಲ ಮೋರ್ಟು ಬಾಗಳಕೊಡ್ಲು

ಶ್ರೀ ಹಟ್ಟಿಯಂಗಡಿ ಮೇಳ == ಪೆರಂಕುದ್ರು ಕೋಟೆ ಕಟಪಾಡಿ ಮಹಾಂಕಾಳಿ ಸನ್ನಿಧಿ – ಮಂತ್ರ ಮಯೂರಿ

ಶ್ರೀ ಬಪ್ಪನಾಡು ಮೇಳ == ಪಡು ಕೊಂಬೆಲ್ ಲಚ್ಚಿಲ್ ದುರ್ಗಾಶಕ್ತಿ ಫ್ರೆಂಡ್ಸ್ ಕ್ಲಬ್ – ಅಜ್ಜ ಅಜ್ಜ ಕೊರಗಜ್ಜ

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.

ಇಂದು ಆಟ ಎಲ್ಲೆಲ್ಲಿ? (06-01-2022)

ಮೇಳಗಳ ಇಂದಿನ (06.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ದೇವಲ್ಕುಂದ ಜಾಡಿ ಕೋಟಿಮನೆ ವಠಾರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಶಿಶಿಲ ವಯಾ ಕೊಕ್ಕಡ, ಅರಸಿನಮಕ್ಕಿ 

ಕಟೀಲು ಎರಡನೇ ಮೇಳ ==  ಶ್ರೀ ರಾಮಮಂದಿರ ಕಲ್ಲಡ್ಕ 

ಕಟೀಲು ಮೂರನೇ ಮೇಳ== ಖಂಡಿಗೆಬೀಡು, ಚೇಳಾಯೂರು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನ ವಠಾರ 

ಕಟೀಲು ನಾಲ್ಕನೇ ಮೇಳ  == ಪೂಮಾವರ ಮಾಳಿಗೆಮನೆ, ನೀರ್ಕರೆ ಅಶ್ವತ್ಥಪುರ 

ಕಟೀಲು ಐದನೇ ಮೇಳ == ನಂದನಜಾಲುಮನೆ ಕುಳಾಯಿ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಹನುಮಗಿರಿ ಮೇಳ == ದೇರೆಬೈಲ್ ಕೊಂಚಾಡಿ

ಶ್ರೀ ಸಾಲಿಗ್ರಾಮ ಮೇಳ == ಮೂಲ್ಕಿ ಬಪ್ಪನಾಡು – ಚಂದ್ರಾವಳಿ, ನಾಗಶ್ರೀ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು

ಶ್ರೀ ಪಾವಂಜೆ ಮೇಳ  == ಬಜಗೋಳಿ – ಕೊಲ್ಲೂರು ಕ್ಷೇತ್ರ ಮಹಾತ್ಮ್ಯೆ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ಕೊಕ್ಕರ್ಣೆ ಚೆಗ್ರಿಬೆಟ್ಟು ಗೌರಿಬೆಟ್ಟು 

ಶ್ರೀ ಮಡಾಮಕ್ಕಿ ಮೇಳ == ಬಸ್ರೂರು ಕೋಳ್ಕೆರೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ವಡೇರಹೋಬಳಿ ಶ್ರೀ ನಂದಿಕೇಶ್ವರ ಪರಿವಾರ ದೇವಸ್ಥಾನ – ಪ್ರಚಂಡ ಪಂಜುರ್ಲಿ 

ಶ್ರೀ ಸಿಗಂದೂರು ಮೇಳ == ಶಾನಾಡಿ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ದೇಶಭಕ್ತ ಎನ್.ಎಸ್. ಕಿಲ್ಲೆ 120: ಬದುಕು,ಬರಹ-ಅರ್ಥಗಾರಿಕೆ ವಿಚಾರಗೋಷ್ಠಿ

‘ದೇಶಭಕ್ತ ನಾರಾಯಣ ಕಿಲ್ಲೆಯವರು ಅಪ್ಪಟ ಗಾಂಧಿವಾದಿಯಾಗಿ, ಗಾಂಧಿ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾದ ಕೆಲಸ ನಿರ್ವಹಿಸಿದ್ದಾರೆ. ಅವರದು ಸರ್ವೋದಯ, ಸಮನ್ವಯ ಮತ್ತು ಸಮತೋಲನದ ಹಾದಿ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ನಗರಸಭೆ ಕಾರ್ಯಾಲಯ ಪುತ್ತೂರು ಮತ್ತು ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಪುತ್ತೂರು ಪುರಭವನದಲ್ಲಿ ಜರಗಿದ ‘ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್.ಕಿಲ್ಲೆ ಮೈದಾನ ಮಹಾದ್ವಾರ ಲೋಕಾರ್ಪಣೆ – ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಕಿಲ್ಲೆ 120 ನೇ ವರ್ಷಾಚರಣೆ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ಕಿಲ್ಲೆ ಬದುಕು, ಬರಹ – ಅರ್ಥಗಾರಿಕೆ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       

‘ ಗಾಂಧಿವಾದಿಯಾಗಿ ಗಾಂಧಿ ತತ್ವವನ್ನು ತುಳು ಭಾಷೆಯಲ್ಲಿ ಬರೆದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗಾಂಧಿ ತತ್ವವನ್ನು ಅನುಸರಿಸಬೇಕೆಂಬ ಆಶಯ ಕಿಲ್ಲೆಯವರಲ್ಲಿತ್ತು. ಸರ್ವೋದಯ ಪತ್ರಿಕೆಯನ್ನು ನಡೆಸಿ ಜನರ ಮಧ್ಯೆ ಮಾಧ್ಯಮವಾಗಿ ಪತ್ರಿಕೋದ್ಯಮವನ್ನು ಬೆಳೆಸಿದರು. ತಾನೊಂದು ನಿರ್ಧಿಷ್ಟ ಜಾತಿಯಲ್ಲಿ ಹುಟ್ಟಿದರೂ ಸರ್ವ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಕಿಲ್ಲೆ ಪರಿವರ್ತನೆ ಹೊಂದಿದವರು’ ಎಂದವರು ನುಡಿದರು. 

ಆತ್ಮ ಸಂತೃಪ್ತಿ ,ಉತ್ಕ್ರಾಂತಿ – ತೌಳವ ಸಾಹಿತ್ಯ:      ‘ಕಿಲ್ಲೆ ಕನ್ನಡ ಬರಹ’ ವಿಷಯದಲ್ಲಿ ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ,ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆಯವರು ‘ಸಹಜ ಪ್ರಾಸಗಳಿಂದ ಕವಿತೆಗಳನ್ನು ರಚಿಸಿ ಸಮಾಜಕ್ಕೆ ಅರ್ಥವಾಗುವ ರೀತಿಯಲ್ಲಿ ನೀಡಿದ ಕಿಲ್ಲೆಯವರು ಆತ್ಮ ಸಂತೃಪ್ತಿ ಮತ್ತು ಅಧ್ಯಾತ್ಮದ ಕಡೆಗೆ ಗಮನಹರಿಸಿದರು. ಮುರಳಿ, ಭಾರತದ ಕರ್ಣ ಮುಂತಾದ ಮೌಲ್ಯಯುತ ಕೃತಿಗಳ ಮೂಲಕ ಕರಾವಳಿ ಭಾಗದ ಶ್ರೇಷ್ಠ ಸಾಹಿತಿಗಳ ಸಾಲಿನಲ್ಲಿ ಅವರು ಎದ್ದು ತೋರುತ್ತಾರೆ’ ಎಂದರು  ‌   

 ‘ಕಿಲ್ಲೆ ಬದುಕು’ ವಿಷಯವಾಗಿ ಮಾತನಾಡಿದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ ‘ಕಿಲ್ಲೆಯವರನ್ನು ನಮ್ಮವರನ್ನಾಗಿ ಮಾಡಿಕೊಳ್ಳಲು ಅವರ ಒಟ್ಟು ಬದುಕಿನ ನಾಲ್ಕು ಸಿದ್ಧಾಂತಗಳು ಅತ್ಯಂತ ಪ್ರಸ್ತುತವೆನಿಸುತ್ತವೆ. ಕಿಲ್ಲೆಯವರು ಕ್ರಾಂತಿಯ ಬದಲು ಉತ್ಕ್ರಾಂತಿ ಅಥವಾ ವಿಕಾಸವನ್ನು ಬಲವಾಗಿ ನಂಬಿದ್ದರು. ಎರಡನೆಯದಾಗಿ ಶ್ರೀಮಂತರಾಗುವ ಎಲ್ಲ ಅವಕಾಶಗಳನ್ನು ನಿರಾಕರಿಸಿ ಅವರು ಸರಳ ಜೀವನವನ್ನು ನಡೆಸಿದರು.

ಆದರೆ ಸಮಾಜಕ್ಕೆ ದಾನ ನೀಡುವ ವಿಚಾರದಲ್ಲಿ ಜಿಪುಣತನ ತೋರಿದವರಲ್ಲ. ಮೂರನೆಯದಾಗಿ ಅವರು ಸಾರ್ವಜನಿಕ ಬದುಕಿನ ಜೊತೆಗೆ ಸಾಹಿತ್ಯ ಬದುಕನ್ನು ಜೊತೆಜೊತೆಯಾಗಿ ಕೊಂಡುಹೋದ ರೀತಿ ಅತ್ಯಂತ ಪ್ರಸ್ತುತ. ನಾಲ್ಕನೆಯ ಅಂಶವೆಂದರೆ ನೈತಿಕತೆ; ತನಗೆ ಬಂದ ರಾಜ್ಯಸಭಾ ಸದಸ್ಯತ್ವವನ್ನು ತ್ಯಾಗ ಮಾಡಿದ ಅವರ ಸ್ವಚ್ಛ ಬದುಕು ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಮಾದರಿ’ ಎಂದು ಹೇಳಿದರು.      

‘ಕಿಲ್ಲೆ ತುಳು ಬರಹ’ ವಿಷಯದಲ್ಲಿ ವಿಚಾರ ಮಂಡಿಸಿದ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ‘ಕಿಲ್ಲೆಯವರ ತುಳು ಸಾಹಿತ್ಯಗಳು ಒಮ್ಮೆ ತುಳುನಾಡನ್ನು ಸುತ್ತಿ ಬಂದಷ್ಟು ಅನುಭವ ಧಾರೆ ಎರೆಯುತ್ತವೆ. ಕಾನಿಗೆ ಕವಿತಾ ಸಂಕಲನದಲ್ಲಿ ಸಮಗ್ರ ತುಳು ಬದುಕಿನ ಸರಳ ನಿರೂಪಣೆ ಇದೆ. ತಮ್ಮ ಎಲ್ಲಾ ಸಾಹಿತ್ಯದಲ್ಲಿಯೂ ತುಳುನಾಡಿನ ನಾಗ ಮತ್ತು ನಾಗಬ್ರಹ್ಮನ ಬಗ್ಗೆ ಅತ್ಯಂತ ಭಕ್ತಿಯಿಂದ ಬರೆದಿದ್ದಾರೆ. ತುಳುವರ ಕೃಷಿ ಸಂಸ್ಕೃತಿಯನ್ನು ಮಾರ್ಮಿಕವಾಗಿ ಬಣ್ಣಿಸಿದ್ದಾರೆ’ ಎಂದರು.

ಯಕ್ಷಗಾನದ ಕರ್ಣ:  ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಕಿಲ್ಲೆ ಅರ್ಥಗಾರಿಕೆ’ ವಿಷಯದಲ್ಲಿ ಮಾತನಾಡಿದರು. ‘ಯಕ್ಷಗಾನ ರಂಗದಲ್ಲಿ ನಾರಾಯಣ ಕಿಲ್ಲೆಯವರ ಅರ್ಥಗಾರಿಕೆ ಬಗ್ಗೆ ಅತಿರಂಜಿತ ಕಥೆಗಳಿವೆ.ಕವಿಭೂಷಣ ಕೆ.ಪಿ.ವೆಂಕಪ್ಪಶೆಟ್ಟಿ, ಅರ್ಕುಳ ಸುಬ್ರಾಯಾಚಾರ್ಯ, ಪೊಳಲಿ ಶಾಸ್ತ್ರಿ ಮೊದಲಾದ ದಿಗ್ಗಜರ ಸಮಕಾಲೀನರಾಗಿ ತಮ್ಮ ಸುಂದರ ವಾಗ್ವೈಖರಿ,ಭಾಷಾ ಜ್ಞಾನ ಮತ್ತು ಪೌರಾಣಿಕ ಆಶಯಗಳನ್ನು ಪ್ರಚಲಿತ ವಿದ್ಯಮಾನಗಳಿಗೆ ಸಮೀಕರಿಸಿ ಪ್ರಸ್ತುತಪಡಿಸುವ ಜಾಣ್ಮೆಯಿಂದ ತಾಳಮದ್ದಳೆ ಕೂಟಗಳಲ್ಲಿ ಅವರು ತಾರಾಮೌಲ್ಯ ಹೊಂದಿದ್ದರು’ ಎಂದರು.   

‘ಯಕ್ಷಗಾನ ಪ್ರಸಂಗಗಳಲ್ಲಿ ನಾಯಕ ಮತ್ತು ಪ್ರತಿನಾಯಕ ಎರಡು ಪಾತ್ರಗಳನ್ನೂ ಅವರು ಸಮರ್ಥವಾಗಿ ನಿರ್ವಹಿಸಿದರು. ಶೇಣಿ, ಶಾಸ್ತ್ರಿಗಳಂತಹ ವಿದ್ವಾಂಸ ಕಲಾವಿದರೇ ಕಿಲ್ಲೆಯವರ ಅರ್ಥಗಾರಿಕೆಯನ್ನು ಬಹುವಾಗಿ ಮೆಚ್ಚಿದ್ದರು. ಕರುಣ,ವೀರರಸಗಳು ಕಿಲ್ಲೆಯವರಿಗೆ ಪ್ರಿಯವಾಗಿತ್ತು. ರಾಜಕೀಯ, ಸಾಮಾಜಿಕ ಬದುಕಿನಲ್ಲಿ ಎಷ್ಟೇ ಒತ್ತಡವಿದ್ದರೂ ಅರ್ಥಗಾರಿಕೆಯನ್ನು ಅಷ್ಟೇ ಸೊಗಸಾಗಿ ನಿರ್ವಹಿಸುತ್ತಿದ್ದರು.

ಆರಂಭದಲ್ಲಿ ಅತಿ ವಕ್ತೃವಾಗಿದ್ದ ಕಿಲ್ಲೆಯವರು ಸಂಸ್ಕೃತ ಸಾಹಿತ್ಯವನ್ನು ತಿಳಿದುಕೊಂಡ ಮೇಲಂತೂ ಅರ್ಥಗಾರಿಕೆಯಲ್ಲಿ ಅಸಾಧಾರಣ ಯಶಸ್ಸು ಸಾಧಿಸಿದರು. ಅವರ ಕರ್ಣನ ಪಾತ್ರವನ್ನು ಕೇಳಿ ಪ್ರೇಕ್ಷಕರು ಕಣ್ಣೀರು ಸುರಿಸುತ್ತಿದ್ದ ಸನ್ನಿವೇಶಗಳು ಅನೇಕವಾಗಿ ನಡೆದಿವೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ಉದ್ಗರಿಸಿದಂತೆ ಕರ್ಣ ಯಾರು ಕಿಲ್ಲೆ ಯಾರು ಎಂದು ತಿಳಿಯದಷ್ಟು ಹೃದಯಂಗಮವಾಗಿ ಕಿಲ್ಲೆಯವರ ಕರ್ಣನ ಅರ್ಥಗಾರಿಕೆ ನಡೆಯುತ್ತಿತ್ತು. ಅವರ ಜೀವನವೂ ದಾನಶೂರ ಕರ್ಣನಂತೆ ಸಾಕು ತಾಯ ಮಡಿಲಲ್ಲಿ ಬೆಳೆದು ಸಮಾಜಕ್ಕೆ ಅರ್ಪಿತವಾದದ್ದು ಇದಕ್ಕೆ ಕಾರಣವಿರಬಹುದು’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ವಿಶ್ಲೇಷಿಸಿದರು.         

ದಿ.ಎನ್.ಎಸ್.ಕಿಲ್ಲೆಯವರ ಸೋದರಳಿಯ, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಬೆದ್ರುಮಾರು ಜಯಶಂಕರ ರೈ ಶಾಲು, ಸ್ಮರಣಿಕೆ ನೀಡಿ ವಿದ್ವಾಂಸರನ್ನು ಗೌರವಿಸಿದರು. ಪ್ರತಿಷ್ಠಾನದ ಸದಸ್ಯ ಮುಂಡಾಳ ಗುತ್ತು ಮೋಹನ ಆಳ್ವ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮುಂಡಾಳಗುತ್ತು ಪ್ರಶಾಂತ ರೈ  ವಂದಿಸಿದರು.’ಮಹಾರಥಿ ಕರ್ಣ’ ತಾಳಮದ್ದಳೆ:       

ಸಮಾರಂಭದ ಕೊನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕಿಲ್ಲೆಯವರಿಗೆ ಪ್ರಿಯವಾಗಿದ್ದ ‘ಮಹಾರಥಿ ಕರ್ಣ’ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಮುಂಡಾಳಗುತ್ತು ಪ್ರಶಾಂತ್ ರೈ , ಜನಾರ್ದನ ತೋಳ್ಪಾಡಿತ್ತಾಯ, ರೋಹಿತ್ ಉಚ್ಚಿಲ್, ರಾಜೇಂದ್ರ ಕೃಷ್ಣ ಹಾಗೂ ಅರ್ಥಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ, ಸಂಪಾಜೆ, ವಾಸುದೇವ ರಂಗ ಭಟ್,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಸಾದ್ ಮೇಂಡ ಎಂ. ಭಾಗವಹಿಸಿದರು.

ಇಂದು ಆಟ ಎಲ್ಲೆಲ್ಲಿ? (05-01-2022)

ಮೇಳಗಳ ಇಂದಿನ (05.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ನಾವುಂದ ಸೇವಿನಕೆರೆ ಮನೆ ವಠಾರ – ವೀರಮಣಿ ಕಾಳಗ, ವಿರೋಚನ ಕಾಳಗ 

ಕಟೀಲು ಒಂದನೇ ಮೇಳ == ಅರ್ಕೆದೊಟ್ಟು ಮನೆ, ಮೂಡುಪಡುಕೋಡಿ ಬಂಟ್ವಾಳ 

ಕಟೀಲು ಎರಡನೇ ಮೇಳ ==  ಮಣಿಹಳ್ಳ ಬಂಟ್ವಾಳ ಕಸಬಾ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಮಹಾದುರ್ಗಾ ನಿಲಯ, ಅವರಾಲುಮಟ್ಟು ಪಡುಬಿದ್ರಿ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ- ಮಹಾಲಕ್ಷ್ಮೀ ಸದನ 

ಕಟೀಲು ಆರನೇ ಮೇಳ == ಶಾರದಾ ಯಕ್ಷಗಾನ ಮಂಡಳಿ, ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ 

ಮಂದಾರ್ತಿ ಒಂದನೇ ಮೇಳ  ==  ಬೆಳ್ಳನಕೆರೆಮನೆ ಬೀಜಾಡಿ ಕೋಟೇಶ್ವರ 

ಮಂದಾರ್ತಿ ಎರಡನೇ ಮೇಳ   == ಕಂಗಿಬೆಟ್ಟು ಸೂರಾಲು ಹಲುವಳ್ಳಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಕತ್ರಗೊಡು ರಟ್ಟಾಡಿ 

ಹನುಮಗಿರಿ ಮೇಳ == ದೇರೆಬೈಲ್ ಕೊಂಚಾಡಿ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಮುಂಭಾಗದಲ್ಲಿ – ದಮಯಂತಿ, ಗದಾಯುದ್ಧ, ರಕ್ತರಾತ್ರಿ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಕೃಷ್ಣಾರ್ಜುನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸರದಂಗಡಿಮನೆ ರಾಗಿಹಕ್ಲು ಹೇರೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಲ್ಮಕ್ಕಿಮನೆ ನಂದ್ರೊಳ್ಳಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕಲ್ಮಕ್ಕಿಮನೆ ಹನೇಡಿಮನೆ ನಂದ್ರೊಳ್ಳಿ 

ಶ್ರೀ ಪಾವಂಜೆ ಮೇಳ  == ಶ್ರೀ ಅಯ್ಯಪ್ಪ ಭಜನಾ ಮಂದಿರ, ಗುಂಡಮಜಲು – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ  == ಬಂಟರಗದ್ದೆ ಉಳ್ಳೂರು – 74

 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ‘ಮುಳ್ಳುಗುಡ್ಡೆ – ಪ್ರೇಮಸಂಘರ್ಷ 

ಶ್ರೀ ಮಡಾಮಕ್ಕಿ ಮೇಳ == ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾರ್ಕೂರು ಹನೇಹಳ್ಳಿ ತೆಂಕಮಕ್ಕಿ – ಪ್ರಚಂಡ ಪಂಜುರ್ಲಿ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ವಕ್ವಾಡಿ ಕಳಿಗುಡ್ಡೆ ಅಂಬೇಡ್ಕರ್ ಮೈದಾನ ವಠಾರ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ನೇಜಾರು ಗ್ರಾಮಸ್ಥರು – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಶ್ರೀ ಮಹಮ್ಮಾಯ ಹಾಲ್, ಮೇಲ್ ಜಡ್ಡು, ಸಿದ್ದಾಪುರ – ಕೃಷ್ಣಲೀಲೆ, ಕಂಸವಧೆ 

ಶ್ರೀ ಬೋಳಂಬಳ್ಳಿ ಮೇಳ== ಕೆದೂರು ಗ್ರಾಮಸ್ಥರು – ನೂತನ ಪ್ರಸಂಗ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆ

ಹಿರಿಯ ಲೇಖಕ ಮತ್ತು ಉದ್ಯಮಿ ಡಾ. ಡಿ.ಕೆ. ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ‘ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ 2020 – 21 ನೇ ಸಾಲಿನಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಇದಿರು ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ.

ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ. ಆರ್. ರೈ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ, ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನಂತೆ ಜಾಗತಿಕ ಬಂಟ ಪ್ರತಿಷ್ಠಾನವು ಸುಬ್ಬಯ್ಯ ಶೆಟ್ಟರನ್ನು ಪ್ರಶಸ್ತಿಗೆ ಪರಿಗಣಿಸಿದೆ. 

ಬೋಳಾರ ಸುಬ್ಬಯ್ಯ ಶೆಟ್ಟಿ:  ಕಾಸರಗೋಡು ದಡ್ಡಂಗಡಿಯಲ್ಲಿ  1943 ರಲ್ಲಿ ಜನಿಸಿದ ಸುಬ್ಬಯ್ಯ ಶೆಟ್ಟರು ಮಂಗಳೂರಿನ ಬೋಳಾರದಲ್ಲಿ ಹೋಟೆಲ್ ನಡೆಸಿ ಬೋಳಾರ ಸುಬ್ಬಯ್ಯ ಶೆಟ್ಟರೆಂದೇ ಖ್ಯಾತರಾದರು. ತೆಂಕುತಿಟ್ಟು ಯಕ್ಷರಂಗದ ‘ಅಭಿನವ ಕೋಟಿ’ ಬಿರುದಾಂಕಿತ ದಿ. ಬೋಳಾರ ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಮೇಳದ ತಿರುಗಾಟಕ್ಕೆ ತೊಡಗಿದ ಸುಬ್ಬಯ್ಯ ಶೆಟ್ಟರು ಸುಂಕದಕಟ್ಟೆ ಮಧೂರು, ಕದ್ರಿ, ಕರ್ನಾಟಕ, ಪುತ್ತೂರು, ಕುಂಟಾರು, ಕಳವಾರು ಮೇಳಗಳಲ್ಲಿ 55 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.     

ಭೀಮ,ಕಂಸ , ಮಧು,ಶುಂಭ, ಇಂದ್ರಜಿತು, ಅರ್ಜುನ, ಕಿರಾತ, ವೀರವರ್ಮ, ಪೂತನಿ, ಶೂರ್ಪನಖಿ, ಲಂಕಿಣಿ, ತಾಟಕಿ,ಹಿಡಿಂಬೆ ಮುಂತಾದ ಪೌರಾಣಿಕ ಪಾತ್ರಗಳಲ್ಲದೆ, ತುಳು ಪ್ರಸಂಗಗಳ ಪೆರುಮಳ,ಬುದ್ಯಂತ, ಚಂದುಗಿಡಿ, ದುಗ್ಗಣ ಕೊಂಡೆ, ಕಾಂತಣ್ಣ ಅತಿಕಾರಿ,ಬಿರ್ಮಾಳ್ವ – ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರು. ಪ್ರಸ್ತುತ 79ರ ಇಳಿವಯಸ್ಸಿನಲ್ಲೂ ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. 

ಪ್ರಶಸ್ತಿಯು ರೂಪಾಯಿ 20,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು 2022 ಜನವರಿ 8 ರಂದು ನಗರದ ಮೋತಿಮಹಲ್ ನಲ್ಲಿ ನಡೆಯುವ ಜಾಗತಿಕ ಬಂಟ ಪ್ರತಿಷ್ಠಾನದ ವಾರ್ಷಿಕ ಸಮಾವೇಶದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ವೈ. ಮತ್ತು ಆಯ್ಕೆ ಸಮಿತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಆಟ ಎಲ್ಲೆಲ್ಲಿ? (04-01-2022)

ಮೇಳಗಳ ಇಂದಿನ (04.01.2022) ಯಕ್ಷಗಾನ ಪ್ರದರ್ಶನಗಳ ವಿವರ


ಶ್ರೀ ಧರ್ಮಸ್ಥಳ ಮೇಳ ==ನಾಡಾ ಕೋಣ್ಕಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 
ಕಟೀಲು ಒಂದನೇ ಮೇಳ == ಪುತ್ತಿಗೆಪದವು ಯುವಕ ಮಂಡಲ, ಪುತ್ತಿಗೆ, ಮೂಡಬಿದ್ರಿ 
ಕಟೀಲು ಎರಡನೇ ಮೇಳ ==  ಶ್ರೀ ಕಟೀಲು ಕ್ಷೇತ್ರ- ಮಹಾಲಕ್ಷ್ಮೀ ಸದನ 
ಕಟೀಲು ಮೂರನೇ ಮೇಳ== ‘ದೇವಿಕೃಪಾ, ಗಣೇಶನಗರ, ಪಡ್ರೆ ಶ್ರೀನಿವಾಸನಗರ, ಸುರತ್ಕಲ್ 
ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 
ಕಟೀಲು ಐದನೇ ಮೇಳ == ಶ್ರೀ ಮಿತ್ತಗಿರಿ ಕಲ್ಲುರ್ಟಿ ದೇವಸ್ಥಾನ, ಬೈಪಾಸ್, ಬಂಟ್ವಾಳ 
ಕಟೀಲು ಆರನೇ ಮೇಳ == ದುರ್ಗಾಪ್ರಸಾದ್ ವುಡ್ ಇಂಡಸ್ಟ್ರೀಸ್, ರಾಜರತ್ನಪುರ, ಕಿನ್ನಿಗೋಳಿ 


ಮಂದಾರ್ತಿ ಒಂದನೇ ಮೇಳ  ==  ಅಂಪಾರುಮನೆ ಗಾವಳಿ ಹಳ್ಳಾಡಿ ಹರ್ಕಾಡಿ 


ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 
ಹನುಮಗಿರಿ ಮೇಳ == ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣ – ಆತ್ಮಾಂಜಲಿ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಯಕ್ಷಲೋಕ ವಿಜಯ 
ಶ್ರೀ ಮಾರಣಕಟ್ಟೆ ಮೇಳ ‘ಎ’ == ಗುರಾಮಕ್ಕಿ ಕೆರ್ಗಾಲ್ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಹೆದ್ದಾರಿಮನೆ ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಹೆದ್ದಾರಿಮನೆ ಹೊಸೂರು 
ಶ್ರೀ ಪಾವಂಜೆ ಮೇಳ  == ಪುಣ್ಯಕೋಟಿ ನಗರ, ಕೈರಂಗಳ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ == ಶ್ರೀ ದೇವಿ ದೇವಸ್ಥಾನ ಬಸ್ರೂರು – ಅಮೃತೇಶ್ವರಿ ಮೇಳದೊಂದಿಗೆ ಕೂಡಾಟ – ಶಶಿಪ್ರಭೆ, ಲವಕುಶ, ಪ್ರಮೀಳಾರ್ಜುನ, ಕನಕಾಂಗಿ ಕಲ್ಯಾಣ 




ಶ್ರೀ ಅಮೃತೇಶ್ವರೀ ಮೇಳ == ಶ್ರೀ ದೇವಿ ದೇವಸ್ಥಾನ ಬಸ್ರೂರು – ಕಮಲಶಿಲೆ ಮೇಳದೊಂದಿಗೆ ಕೂಡಾಟ – ಶಶಿಪ್ರಭೆ, ಲವಕುಶ, ಪ್ರಮೀಳಾರ್ಜುನ, ಕನಕಾಂಗಿ ಕಲ್ಯಾಣ 
ಶ್ರೀ ಸೌಕೂರು ಮೇಳ == ‘ಗಾವಳಿ – ಮಂದಾರ್ತಿ ಒಂದನೇ ಮೇಳದೊಂದಿಗೆ ಕೂಡಾಟ 
ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕೋಡಿಕಲ್ ತಂರ್ಜಿಗುತ್ತು ಮನೆಯ ಎದುರು – ಶ್ರೀ ದೇವಿ ಮಹಾತ್ಮ್ಯೆ 



ಶ್ರೀ ಮಡಾಮಕ್ಕಿ ಮೇಳ == ಬನ್ನೇರ್ಲಕಟ್ಟೆ – ಮಹಾಶಕ್ತಿ ಮಂತ್ರದೇವತೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ವಡಭಾಂಡೇಶ್ವರ ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ – ನಾಗಮಂಡಲ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರದಲ್ಲಿ 
ಶ್ರೀ ಸಿಗಂದೂರು ಮೇಳ == ಯಡಾಡಿ ಮತ್ಯಾಡಿ ಗ್ರಾಮ ಗುಡ್ಡೆ ಅಂಗಡಿ ಸೊಸೈಟಿ ವಠಾರ



ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ 


ಶ್ರೀ ಹಾಲಾಡಿ ಮೇಳ == ಶ್ರೀ ವಿನಾಯಕ ದೇವಸ್ಥಾನ ಹಟ್ಟಿಕುದ್ರು – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ==  ಹುಣಸೆಮಕ್ಕಿ ಗ್ರಾಮಸ್ಥರು – ನೂತನ ಪ್ರಸಂಗ 


ಶ್ರೀ ಸುಂಕದಕಟ್ಟೆ ಮೇಳ  == ರನ್ನಾಡಿಪಲ್ಕೆ ವೇಣೂರು – ಬಾಲೆ ಶ್ವೇತಾಕ್ಷಿ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ.