Sunday, March 15, 2026
Home Blog Page 284

ಇಂದು ಆಟ ಎಲ್ಲೆಲ್ಲಿ? (14-01-2022)

ಮೇಳಗಳ ಇಂದಿನ (14.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರ – ಅಮರ ಸಿಂಧೂದ್ಭವ 

ಕಟೀಲು ಒಂದನೇ ಮೇಳ == ಗರೋಡಿಮನೆ ಕುಂಪಣಮಜಲು ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ – ತ್ರಿಜನ್ಮ ಮೋಕ್ಷ 

ಕಟೀಲು ಎರಡನೇ ಮೇಳ == ನಾಪಾಡಿ ಹೌಸ್ ತೆಂಕಮಿಜಾರು ಅಶ್ವತ್ಥಪುರ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ದರ್ಖಾಸು ಮನೆ ಅಳದಂಗಡಿ ಶ್ರೀ ಸೋಮನಾಥ ದೇವಸ್ಥಾನದ ಬಳಿ = ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಭಾರ್ಗವ ವಿಜಯ, ದಮಯಂತಿ ಪುನರ್ ಸ್ವಯಂವರ 

ಕಟೀಲು ಐದನೇ ಮೇಳ == ಮಾಡಾವು ಕಟ್ಟೆ ಶ್ರೀ ಅಯ್ಯಪ್ಪ ಭಕ್ತ ವೃಂದ, ಮಾಡಾವು ವಯಾ ಕುಂಬ್ರ, ಪುತ್ತೂರು – ವಿಜಯವಾಹಿನಿ 

ಕಟೀಲು ಆರನೇ ಮೇಳ == ಕಳಂಜ ವಯಾ ಬೆಳ್ಳಾರೆ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  ==  ಗಾವಳಿ ಹಳ್ಳಾಡಿ ಹರ್ಕಾಡಿ 

ಮಂದಾರ್ತಿ ಎರಡನೇ ಮೇಳ   == ಮಾತೋಶ್ರೀ ಕುಟೀರ ತೆಂಕುಬಿರ್ತಿ ವಾರಂಬಳ್ಳಿ 

ಮಂದಾರ್ತಿ ಮೂರನೇ ಮೇಳ  == ಬಿಲ್ವಾಡಿ ಜಾನುವಾರುಕಟ್ಟೆ ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಚೌಕ ಮೇಗರವಳ್ಳಿ 

ಮಂದಾರ್ತಿ ಐದನೇ ಮೇಳ  == ಬಿಲ್ವಾಡಿ ಜಾನುವಾರುಕಟ್ಟೆ ಕೂಡಾಟ

ಹನುಮಗಿರಿ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ – ಶ್ರೀ ದೇವಿ ಮಹಾತ್ಮ್ಯೆ 

ಶ್ರೀ ಸಾಲಿಗ್ರಾಮ ಮೇಳ == ತೆಗ್ಗರ್ಸೆ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ – ಭೀಷ್ಮ ವಿಜಯ, ರುದ್ರಕೋಪ, ಧರ್ಮಾಂಗದ ದಿಗ್ವಿಜಯ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಚಕ್ರವ್ಯೂಹ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮಕರಸಂಕ್ರಮಣ ಜಾತ್ರೆ ಪ್ರಯುಕ್ತ ರಜೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮಕರಸಂಕ್ರಮಣ ಜಾತ್ರೆ ಪ್ರಯುಕ್ತ ರಜೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮಕರಸಂಕ್ರಮಣ ಜಾತ್ರೆ ಪ್ರಯುಕ್ತ ರಜೆ 

ಶ್ರೀ ಪಾವಂಜೆ ಮೇಳ == ಶ್ರೀ ಕ್ಷೇತ್ರ ಮಾರಣಕಟ್ಟೆ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ಶ್ರೀ ಕಮಲಶಿಲಾಂಬಾ, ಕಮಲಶಿಲೆ 

ಶ್ರೀ ಅಮೃತೇಶ್ವರೀ ಮೇಳ == ಮೂಡುಗಿಳಿಯಾರು ಗೋಳಿಯಾಡಿ ಶ್ರೀ ಚಿಕ್ಕು ಸಪರಿವಾರ ದೈವಸ್ಥಾನ ವಠಾರ – ನೀಲಾವರ ಮೇಳದೊಂದಿಗೆ ಜೋಡಾಟ 

ಶ್ರೀ ಸೌಕೂರು ಮೇಳ == ಕೋಣ್ಕಿ ಸಿರಿಬೆಟ್ಟು ನಂದಿಕೇಶ್ವರ ಮತ್ತು ಸಪರಿವಾರ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪಿಲಿಕೊಡು ಶ್ರೀ ಚಾಮುಂಡೇಶ್ವರಿ ದೈವಸ್ಥಾನದ ವಠಾರ – ಕದಂಬ ಕೌಶಿಕೆ 

ಶ್ರೀ ಮಡಾಮಕ್ಕಿ ಮೇಳ == ಕೊಳಂಕಲ್ ಶ್ರೀ ಮಹಾಗಣಪತಿ ದೇವಸ್ಥಾನ – ನೂತನ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವಠಾರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ ==  ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ವಂಡ್ಸೆ 

ಶ್ರೀ ಸಿಗಂದೂರು ಮೇಳ == ಶ್ರೀ ಕ್ಷೇತ್ರದಲ್ಲಿ ಜಾತ್ರೆ ಪ್ರಯುಕ್ತ ಸೇವೆ ಆಟ 

ಶ್ರೀ ನೀಲಾವರ ಮೇಳ  ==  ಮೂಡುಗಿಳಿಯಾರು ಗೋಳಿಯಾಡಿ ಶ್ರೀ ಚಿಕ್ಕು ಸಪರಿವಾರ ದೈವಸ್ಥಾನ ವಠಾರ – ಅಮೃತೇಶ್ವರಿ ಮೇಳದೊಂದಿಗೆ ಜೋಡಾಟ 

ಶ್ರೀ ಹಟ್ಟಿಯಂಗಡಿ ಮೇಳ == ಮೂರೂರು ಶ್ರೀ ನಂದಿಕೇಶ್ವರ ದೇವಸ್ಥಾನ ಕಾಲ್ತೋಡು – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಶ್ರೀ ಒಡಗನ ನಂದಿಕೇಶ್ವರ ಮತ್ತು ಪರಿವಾರ ದೇವಸ್ಥಾನ – ಮೇಘ ರಂಜಿನಿ 

ಶ್ರೀ ಬೋಳಂಬಳ್ಳಿ ಮೇಳ== ಚಾರ ಗಾಂಧಿನಗರ – ಬಂಡಿದೈವ ಹುಲಿಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಧರ್ಮಶಾಸ್ತಾ ಮಂದಿರ ಕಜೆಪದವು – ಅಜ್ಜ ಅಜ್ಜ ಕೊರಗಜ್ಜ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಯಕ್ಷಗಾನ ಕಲಾರಂಗದ ಕಛೇರಿಗೆ ಕೃಷ್ಣಾಪುರ ಸ್ವಾಮೀಜಿ ಭೇಟಿ

ಈ ತಿಂಗಳ 18ನೇ ತಾರೀಖಿಗೆ ನಾಲ್ಕನೇ ಬಾರಿ ಸರ್ವಜ್ಞಪೀಠ ಆರೋಹಣ ಮಾಡಿ ಶ್ರೀಕೃಷ್ಣನ ಪೂಜಾಕೈಂಕರ್ಯ ಸ್ವೀಕರಿಸಲಿರುವ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಯಕ್ಷಗಾನ ಕಲಾರಂಗದ ಕಛೇರಿಗೆ ಭೇಟಿ ನೀಡಿ ಅನುಗ್ರಹ ಸಂದೇಶ ನೀಡಿದರು.

ತಮ್ಮ ಪರ್ಯಾಯಾವಧಿಯಲ್ಲಿ ಸಂಸ್ಥೆಗೆ ಶ್ರೀಮಠದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಸ್ವಾಮೀಜಿಯವರಿಗೆ ಫಲಸಮರ್ಪಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು.

ಉದ್ಯಮಿ ಯು. ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಪ್ರೊ. ಸದಾಶಿವ ರಾವ್, ಮನೋಹರ ಕೆ., ನಾರಾಯಣ ಎಂ. ಹೆಗಡೆ, ಎಚ್.ಎನ್ ಶೃಂಗೇಶ್ವರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 13.01.2022

ಕಟೀಲು ಒಂದನೇ ಮೇಳ == ಯಕ್ಷಮಿತ್ರರು ಮಾಲಾಡಿ, ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಶಿವಪ್ರಸಾದ’, ಗುಂಡಾಳ ಬಡಗಬೆಳ್ಳೂರು ಬಂಟ್ವಾಳ – ತುಳಸೀ ಜಲಂಧರ 

ಕಟೀಲು ಮೂರನೇ ಮೇಳ== ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ಶ್ರೀ ಹರಿಕೃಪಾ’, ಗುರಿಕಾಡು ಬಂಟಕಲ್ಲು ಶಿರ್ವ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ವಿಷ್ಣುನಗರ ಕೇನ್ಯ ಪಂಜ ಸುಳ್ಯ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಯಕ್ಷ ಭಾರತಿ ತಂಡದಿ0ದ ತಾಳಮದ್ದಳೆ

ಭಾರತ ಸೇವಾಶ್ರಮ ಕನ್ಯಾನ (ರಿ.) 58ನೇ ವಾರ್ಷಿಕೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ಶ್ರೀ ಧೀರೇಂದ್ರನಾಥ ಭಟ್ಟಾಚಾರ್ಯ ವೇದಿಕೆಯಲ್ಲಿ ಆಶ್ರಮದ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಭಾರತಿ ಕನ್ಯಾಡಿ (ರಿ) ತಂಡದವರಿ0ದ ಸುಧನ್ವ ಮೋಕ್ಷ ತಾಳಮದ್ದಳೆ ಜರುಗಿತು.

ಭಾಗವತರಾಗಿ ಮಹೇಶ್‌ ಕನ್ಯಾಡಿ ಚೆಂಡೆ ಮದ್ದಳೆ ವಾದಕರಾಗಿ ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು, ಮುರಲೀಧರ ಕಲ್ಲೂರಾಯ ಅರ್ಥದಾರಿಗಳಾಗಿ ಸುರೇಶ್‌ ಕುದ್ರೆಂತ್ತಾಯ ಉಜಿರೆ, ಹರಿದಾಸ ಗಾಂಭೀರ್ ಧರ್ಮಸ್ಥಳ, ದಿವಾಕರ ಆಚಾರ್ಯ ಗೇರುಕಟ್ಟೆ, ಶಶಿಧರ ಕನ್ಯಾಡಿ, ಭವ್ಯ ಹೊಳ್ಳ, ಶ್ರೀರಕ್ಷಾ ಕಳಸ ಮತ್ತು ಯಶೋಧರ ಇಂದ್ರ ಭಾಗವಹಿಸಿದ್ದರು.

ಸೇವಾಶ್ರಮದ ಮುಖ್ಯಸ್ಥರಾದ ಈಶ್ವರ ಭಟ್ ಸ್ವಾಗತಿಸಿ ಎಲ್ಲಾ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ತಾಳಮದ್ದಳೆ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಮತ್ತು ಸಹಕಾರ ನೀಡಿದ ಟ್ರಸ್ಟಿ ಗಿರೀಶ್‌ ಕುದ್ರೆಂತ್ತಾಯ ಧರ್ಮಸ್ಥಳ ಇವರನ್ನು ಆಶ್ರಮದ ಪರವಾಗಿ ಮುಖ್ಯಸ್ಥರಾದ ಈಶ್ವರ ಭಟ್ ಗೌರವಿಸಿದರು.

ಇಂದು ಆಟ ಎಲ್ಲೆಲ್ಲಿ? (13-01-2022)

ಮೇಳಗಳ ಇಂದಿನ (13.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮಿಜಾರು ದಡ್ಡಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಯಕ್ಷಮಿತ್ರರು ಮಾಲಾಡಿ, ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ ==  ‘ಶಿವಪ್ರಸಾದ’, ಗುಂಡಾಳ ಬಡಗಬೆಳ್ಳೂರು ಬಂಟ್ವಾಳ – ತುಳಸೀ ಜಲಂಧರ 

ಕಟೀಲು ಮೂರನೇ ಮೇಳ== ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ಶ್ರೀ ಹರಿಕೃಪಾ’, ಗುರಿಕಾಡು ಬಂಟಕಲ್ಲು ಶಿರ್ವ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ವಿಷ್ಣುನಗರ ಕೇನ್ಯ ಪಂಜ ಸುಳ್ಯ – ಮಧುರಾ ಮಹೀಂದ್ರ 

ಕಟೀಲು ಆರನೇ ಮೇಳ == ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  ==  ಹೆಸ್ಕುಂದ ಹೊಸ್ಮನೆ ನಂಚಾರು – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಹೆಸ್ಕುಂದ ಹೊಸ್ಮನೆ ನಂಚಾರು – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಸಾಳೂರು ಮನೆ ಅಸೋಡು ಕುಂದಾಪುರ – ಸೌಕೂರು ಮೇಳದೊಂದಿಗೆ  ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ತುಂಡುಕುಮರಿ ಜೆಡ್ಡುಮೂಡು ಬಗೆ ಅಂಪಾರು 

ಮಂದಾರ್ತಿ ಐದನೇ ಮೇಳ  == ಸುಳ್ಕೋಡು ಶಿರೂರು ಮುದ್ದುಮನೆ 

ಹನುಮಗಿರಿ ಮೇಳ == ಸರ್ವಶಕ್ತಿ ಯುವಕ ವೃಂದ, ನೆಲ್ಲಿತೀರ್ಥ ನೀರುಡೆ – ತಿರುಪತಿ ಕ್ಷೇತ್ರ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಬುಕ್ಕಿಗುಡ್ಡೆ ಪೆರ್ಡೂರು – ಚಿತ್ರಾಕ್ಷಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊರಾಡಿಮನೆ ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಏಳುಮುಡಿ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನರ್ಲೆಗುಳಿ ಆಲೂರು 

ಶ್ರೀ ಪಾವಂಜೆ ಮೇಳ == ಹಿರಿಯಡ್ಕ ಬಜೆ ರಸ್ತೆಯ ಶುಚಿ ಸೌಧ ಕಟ್ಟಡದ ಬಳಿ – ಧರ್ಮ ಸಿಂಹಾಸನ 

ಕಮಲಶಿಲೆ ಮೇಳ  == ಶ್ರೀ ವಾಸುದೇವ ದೇವಸ್ಥಾನ ಕನ್ಯಾಣ 

ಶ್ರೀ ಅಮೃತೇಶ್ವರೀ ಮೇಳ == ಮಣೂರು ಪಡುಕೆರೆ 

ಶ್ರೀ ಸೌಕೂರು ಮೇಳ == ಸಾಳೂರು ಮನೆ ಅಸೋಡು ಕುಂದಾಪುರ – ಮಂದಾರ್ತಿ ಮೇಳದೊಂದಿಗೆ  ಕೂಡಾಟ 

ಶ್ರೀ ಮಡಾಮಕ್ಕಿ ಮೇಳ == ಶ್ರೀ ದುರ್ಗಾಗಣೇಶ ನಿಲಯ, ದುಂಡಾಡಿಜೆಡ್ಡು – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಂದಾಪುರ ಕೋಡಿ ಶ್ರೀ ನಾಗ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ – ಸರ್ಪಶಪಥ 

ಶ್ರೀ ಹಿರಿಯಡಕ ಮೇಳ ==  ಹಿರಿಯಡ್ಕ ಬಜೆ ರಸ್ತೆಯ ಶುಚಿ ಸೌಧ ಕಟ್ಟಡದ ಬಳಿ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರ ಭಕ್ತರು ಕೆಂಚನೂರು 

ಶ್ರೀ ಸಿಗಂದೂರು ಮೇಳ == ಅಮೃತ ಕಾಂಪ್ಲೆಕ್ಸ್ ವಠಾರ, ದೇವಲ್ಕುಂದ 

ಶ್ರೀ ನೀಲಾವರ ಮೇಳ  ==  ಮಾಬುಕಳ ರಿಕ್ಷಾ ನಿಲ್ದಾಣ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಚೇಂಪಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಮೆಟ್ಟಿನಹೊಳೆ ಶಾಲಾ ವಠಾರ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಹಂದಾಡಿ – ಬಂಡಿದೈವ ಹುಲಿಚಂಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಬಡಗಮಿಜಾರು ಮೈಟ್ ಕಾಲೇಜ್ ಬಳಿ – ಧರ್ಮ ತುಡರ್ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 12.01.2022

ಕಟೀಲು ಒಂದನೇ ಮೇಳ == ವಿಘ್ನೇಶ್ವರ ರೆಸಿಡೆನ್ಸಿ ಕಲ್ಲಾರೆ ಪುತ್ತೂರು = ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಗರುಡೋದ್ಭವ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುದರ್ಶನೋಪಾಖ್ಯಾನ 

ಕಟೀಲು ನಾಲ್ಕನೇ ಮೇಳ  == ಮಾತೃಶ್ರೀ, ನಡಿಗುಡ್ಡೆ ಬಾನಂಗಡಿ ಕಲ್ಲುಮುಂಡ್ಕೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಬಾಲಕ್ಕ ಹೌಸ್ ಆರ್ಯಾಪು ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಬರಿಂಜೆಮನೆ, ಮಾಡಾವು, ಪಾಲ್ತಾಡಿ, ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಇಂದು ಆಟ ಎಲ್ಲೆಲ್ಲಿ? (12-01-2022)

ಮೇಳಗಳ ಇಂದಿನ (12.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪೆರ್ಡೂರು ಪುತ್ತಿಗೆ ಮಂಜುನಾಥ ನಿಲಯದ ವಠಾರ – ಶ್ರೀ ಶನೀಶ್ವರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ವಿಘ್ನೇಶ್ವರ ರೆಸಿಡೆನ್ಸಿ ಕಲ್ಲಾರೆ ಪುತ್ತೂರು = ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಗರುಡೋದ್ಭವ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಸುದರ್ಶನೋಪಾಖ್ಯಾನ 

ಕಟೀಲು ನಾಲ್ಕನೇ ಮೇಳ  == ಮಾತೃಶ್ರೀ, ನಡಿಗುಡ್ಡೆ ಬಾನಂಗಡಿ ಕಲ್ಲುಮುಂಡ್ಕೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ == ಬಾಲಕ್ಕ ಹೌಸ್ ಆರ್ಯಾಪು ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಆರನೇ ಮೇಳ == ಬರಿಂಜೆಮನೆ, ಮಾಡಾವು, ಪಾಲ್ತಾಡಿ, ಪುತ್ತೂರು – ಶ್ರೀ ದೇವಿ ಮಹಾತ್ಮ್ಯೆ 

ಮಂದಾರ್ತಿ ಒಂದನೇ ಮೇಳ  ==  ನಡೂರು ಕುಮ್ಟಿಜೆಡ್ಡು  – ಐದೂ ಮೇಳಗಳ ಕೂಡಾಟ 

ಮಂದಾರ್ತಿ ಎರಡನೇ ಮೇಳ   == ನಡೂರು ಕುಮ್ಟಿಜೆಡ್ಡು  – ಐದೂ ಮೇಳಗಳ ಕೂಡಾಟ 

ಮಂದಾರ್ತಿ ಮೂರನೇ ಮೇಳ  == ನಡೂರು ಕುಮ್ಟಿಜೆಡ್ಡು  – ಐದೂ ಮೇಳಗಳ ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ನಡೂರು ಕುಮ್ಟಿಜೆಡ್ಡು  – ಐದೂ ಮೇಳಗಳ ಕೂಡಾಟ 

ಮಂದಾರ್ತಿ ಐದನೇ ಮೇಳ  == ನಡೂರು ಕುಮ್ಟಿಜೆಡ್ಡು  – ಐದೂ ಮೇಳಗಳ ಕೂಡಾಟ 

ಹನುಮಗಿರಿ ಮೇಳ == ಸುರತ್ಕಲ್ ಬಾಳಿಕೆ ಕೋರ್ದಬ್ಬು ದೈವಸ್ಥಾನದ ವಠಾರ – ಶುಕ್ರನಂದನೆ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಪಾಡಿಗರ ಬಳ್ಳಂಪಳ್ಳಿ ಹೆಬ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಅನ್ ಗೋಡು, ತ್ರಾಸಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೋಣ್ಕಿ ನಾಡ 

ಶ್ರೀ ಪಾವಂಜೆ ಮೇಳ == ಸಪ್ತಗಿರಿ ಫ್ಲಾಟ್ ಓನರ್ಸ್ ಮೂಲ್ಕಿ – ಶ್ರೀ ದೇವಿ ಮಹಾತ್ಮ್ಯೆ 

ಕಮಲಶಿಲೆ ಮೇಳ  == ತೆಂಕಬೆಟ್ಟು ಕೆಳಾಮನೆ ಅಂಪಾರು 

ಶ್ರೀ ಅಮೃತೇಶ್ವರೀ ಮೇಳ == ಮೈನಾಡಿ ಮನೆ ಮೂಡುಗಿಳಿಯಾರು 

ಶ್ರೀ ಸೌಕೂರು ಮೇಳ == ಸೇನಾಪುರ ಬೆಲ್ಲಾಡಿ ಬೊಬ್ಬರ್ಯ ಮಹಾಕಾಳಿ ದೈವಸ್ಥಾನ – ನೂತನ ಪ್ರಸಂಗ 

ಶ್ರೀ ಮಡಾಮಕ್ಕಿ ಮೇಳ == ಕೊಕ್ಕರ್ಣೆ ಗುಡ್ಡೆಯಂಗಡಿ – ಮಹಾದೇವಿ ಮಹೇಶ್ವರಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶ್ರೀ ಗೋಳಿಗರಡಿ ಶ್ರೀ ಪಂಜುರ್ಲಿ ಸನ್ನಿಧಾನ – ದೈವದ ಹೆಜ್ಜೆ 

ಶ್ರೀ ಹಿರಿಯಡಕ ಮೇಳ == ಕಿನ್ನಿಗೋಳಿ ರಾಮ ಮಂದಿರದ ಬಳಿ – ಮಂತ್ರ ಭೈರವಿ 

ಶ್ರೀ ಶನೀಶ್ವರ ಮೇಳ ==  ಶ್ರೀ ಕ್ಷೇತ್ರ ಭಕ್ತಾದಿಗಳು, ಚಕ್ರ ಮೈದಾನ 

ಶ್ರೀ ಸಿಗಂದೂರು ಮೇಳ == ಕುದ್ರುಕೋಡು ದೊಡ್ಮನೆ “ಬೃಂದಾವನ”

ಶ್ರೀ ನೀಲಾವರ ಮೇಳ  ==  ಜಾತಬೆಟ್ಟು ಶಾಲಾ ಬಳಿ 

ಶ್ರೀ ಹಾಲಾಡಿ ಮೇಳ == ಶ್ರೀ ಹಾಡಿ ನಂದಿಕೇಶ್ವರ ಸಹಪರಿವಾರ ದೇವಸ್ಥಾನ ತೆಕ್ಕಟ್ಟೆ – ಕಂಸ ದಿಗ್ವಿಜಯ, ಕಂಸ ವಧೆ 

ಶ್ರೀ ಸುಂಕದಕಟ್ಟೆ ಮೇಳ  == ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ವಠಾರದಲ್ಲಿ – ಕೃಷ್ಣ ಲೀಲೆ, ಕದಂಬ ಕೌಶಿಕೆ 

ಸಮಯ ಬದಲಾವಣೆ ಗಮನಿಸಿ : ನೈಟ್ ಕರ್ಫ್ಯೂ ಇರುವುದರಿಂದ ಎಲ್ಲಾ ಮೇಳಗಳು ತಮ್ಮ ಪ್ರದರ್ಶನದ ಸಮಯದಲ್ಲಿ ಬದಲಾವಣೆಯನ್ನು ಮಾಡಿಕೊಂಡಿವೆ. ಅದರಂತೆ ಧರ್ಮಸ್ಥಳ ಮೇಳ 4.30 – 9.30 ಹಾಗೂ ಕಟೀಲು ಮೇಳಗಳು 3.30- 9.30 ರ ವರೆಗೆ ಸಮಯ ನಿಗದಿಪಡಿಸಿವೆ. 

ಇಂದು ಆಟ ಎಲ್ಲೆಲ್ಲಿ? (11-01-2022

ಮೇಳಗಳ ಇಂದಿನ (11.01.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಸಾಯಿಬರಕಟ್ಟೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ 

ಕಟೀಲು ಒಂದನೇ ಮೇಳ == ಗಿಡಿಗೆರೆ ಶ್ರೀ ನಿಕೇತನದಲ್ಲಿ

ಕಟೀಲು ಎರಡನೇ ಮೇಳ == ಪಟ್ಟೆ ಶ್ರೀ ಜಾರಂದಾಯ ಬಂಟ ದೇವಸ್ಥಾನ ಏಳಿಂಜೆ

ಕಟೀಲು ಮೂರನೇ ಮೇಳ== ದೊಡ್ಡಮನೆ ದೇನೊಟ್ಟು, ತೋಕೂರು ಹಳೆಯಂಗಡಿ

ಕಟೀಲು ನಾಲ್ಕನೇ ಮೇಳ  == ಕುಂಟಲ್ಗುಡ್ಡೆ ಬಜಾಲ್, ಕಾವುಬೈಲು ದೇವಸ್ಥಾನದ ಬಳಿ

ಕಟೀಲು ಐದನೇ ಮೇಳ ==  = ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ

ಕಟೀಲು ಆರನೇ ಮೇಳ == ದಂಡೆಮಾರ್ ಬೋಳಂತೂರು‌ ಬಂಟ್ವಾಳ

ಮಂದಾರ್ತಿ ಒಂದನೇ ಮೇಳ  ==  ಕೋಡಿಕನ್ಯಾನ‌ ಸಾಸ್ತಾನ

ಮಂದಾರ್ತಿ ಎರಡನೇ ಮೇಳ   == ಆರಾಡಿಗುಡ್ಡಿ, ಬಿಲ್ಲಾಡಿ ಜಾನುವಾರುಕಟ್ಟೆ

ಮಂದಾರ್ತಿ ಮೂರನೇ ಮೇಳ  == ಶ್ರೀ ನಂದಿಕೇಶ್ವರ ದೇವಸ್ಥಾನ ಮೆಕ್ಕೆಕಟ್ಟು, ಶಿರಿಯಾರ – ಕಟ್ಟುಕಟ್ಟಳೆ ಸೇವೆ

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ- ಬೆಣ್ಣೆಕುದ್ರು ಬಾರ್ಕೂರು ದೇವಸ್ಥಾನದ ವಠಾರದಲ್ಲಿ – ನಮೋ ರಘುವಂಶ ದೀಪ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ಮಾರುತಿ ಪ್ರತಾಪ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಸಂಬರ್ಪಲ್, ಹೆನ್ನಾಬೈಲ್

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕುದ್ರುಗೋಡು ನಡುಮನೆ, ನಾವುಂದ

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗಿರಿಜಾ ನಿಲಯ, ಕುಡೂರು ಮುಲ್ಲಿಮನೆ ಗೋಳಿಹೊಳೆ

ಶ್ರೀ ಪಾವಂಜೆ ಮೇಳ == ಕುಳೂರು‌ ಕಾಯರ್ತೊಟ್ಟಿ, ಶ್ರೀ ದುರ್ಗದೇವಿ ಸನ್ನಿಧಿ, ಅಡಪಾಡಿ, ಪಳ್ಳಿ – ಶ್ರೀ ದೇವಿ ಮಹಾತ್ಮ್ಯೆ

ಕಮಲಶಿಲೆ ಮೇಳ == ಹಳ್ಳಿಬೈಲು

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕಾವ್ರಾಡಿ ಶಾನುಭೋಗರಬೆಟ್ಟು – ಅಗ್ನಿ ನಕ್ಷತ್ರ

ಶ್ರೀ ಮಡಾಮಕ್ಕಿ ಮೇಳ == ಕೋಟ ಹೆದ್ದಾರಿ ಬೊಬ್ಬರ್ಯಕಟ್ಟೆ ಫ್ರೆಂಡ್ಸ್ – ಮಡಾಮಕ್ಕಿ ಕ್ಷೇತ್ರ ಮಹಾತ್ಮ್ಯೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹೊನ್ನಾಳ ಕುಕ್ಕುಡೆ ದೇವಸ್ಥಾನದ ಬಳಿ – ಪ್ರಚಂಡ ಪಂಜುರ್ಲಿ

ಶ್ರೀ ಹಿರಿಯಡಕ ಮೇಳ == ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ – ಮಂತ್ರ ಭೈರವಿ

ಶ್ರೀ ಶನೀಶ್ವರ ಮೇಳ ==  ತಾರೆಕೊಡ್ಲು ಶಾಲಾ ವಠಾರದಲ್ಲಿ

ಶ್ರೀ ಸಿಗಂದೂರು ಮೇಳ == ಜಡ್ಡಿನಗದ್ದೆ ಶಾಲಾ ವಠಾರದಲ್ಲಿ

ಶ್ರೀ ನೀಲಾವರ ಮೇಳ  == ದಾಸರಬೆಟ್ಟು ಗುಲ್ವಾಡಿ  – ಸ್ವಾಮೀ ವೀರ ಕಲ್ಲುಕುಟ್ಟಿಗ 

ಶ್ರೀ ಹಟ್ಟಿಯಂಗಡಿ ಮೇಳ == ಆದಿ ಉಡುಪಿ – ದೀಪ ದರ್ಪಣ

ಶ್ರೀ ಹಾಲಾಡಿ ಮೇಳ == ಚಿಕ್ಕು  ಹಾಯ್ಗುಳಿ ದೈವದ ಮನೆ ಸೆಳ್ಕೋಡು, ಹುಲಿಪಾರಿ – ನೂತನ ಪ್ರಸಂಗ

ಶ್ರೀ ಬೋಳಂಬಳ್ಳಿ ಮೇಳ== ಮುನಿಯಾಲು ಚಟ್ಕಲ್ಪಾದೆ – ಬಂಡಿದೈವ ಹುಲಿಚಂಡಿ 

ಶ್ರೀ ಬಪ್ಪನಾಡು ಮೇಳ == ಶ್ರೀ ಅಯ್ಯಪ್ಪ ಭಕ್ತ ವೃಂದ ಕುಕ್ಕುದಕಟ್ಟೆ ಪೂಪಾಡಿಕಲ್ಲು – ಭಕ್ತಿದ ಬಲಿಮೆ

ಭಾಗವತ ಪದ್ಮನಾಭ ಕುಲಾಲ್ ಇಳಂತಿಲ ಇವರಿಗೆ ಸನ್ಮಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಗುರುಗಳಾದ ತೆಂಕುತಿಟ್ಟಿನ ಹಿರಿಯ ಭಾಗವತ ಶ್ರೀ ಬಿ. ಗೋಪಾಲಕೃಷ್ಣ ಕುರುಪ್‌ರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿ ಎಳೆವಯಸ್ಸಿನಲ್ಲಿಯೇ ಸಾಂಪ್ರದಾಯಿಕ ಶೈಲಿಯ ಭಾಗವತರಾಗಿ ಗುರುತಿಸಿಕೊಂಡವರು ಪದ್ಮನಾಭ ಕುಲಾಲ್.

ಶ್ರೀ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ದಿ| ಕುಂಞಣ್ಣ ಶೆಟ್ಟಿಯವರ ಮೂಲಕ ನೇಪಥ್ಯ ಕಲಾವಿದರಾಗಿ ಶ್ರೀ ಕಟೀಲು ಮೇಳದಲ್ಲಿ 4 ವರ್ಷಗಳ ತಿರುಗಾಟ. ನಂತರ ಭಾಗವತಿಕೆ ಅಭ್ಯಾಸ ಮಾಡಿ ಸಂಗೀತಗಾರರಾಗಿ ಮತ್ತೆ ಕಟೀಲು ಮೇಳದಲ್ಲಿ 5-6 ವರ್ಷಗಳ ತಿರುಗಾಟ. ಇರಾ ಗೋಪಾಲಕೃಷ್ಣ, ಬಲಿಪ ನಾರಾಯಣ, ಕುರಿಯ ಗಣಪತಿ ಶಾಸ್ತ್ರಿ ಭಾಗವತರಿಂದ ಮಾರ್ಗದರ್ಶನ. ಈ ಅವಧಿಯಲ್ಲಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ನಿಗದಿತ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುವ ಮೂಲಕ ತನ್ನ ಅನುಭವವನ್ನು ವೃದ್ಧಿಸಿಕೊಂಡರು.


ಮೇಳದ ತಿರುಗಾಟಕ್ಕೆ ವಿರಾಮ ಹಾಡಿದ ಇವರು 1999ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕನಾಗಿ ಕೆದಂಬಾಡಿ, ಉಪ್ಪಿನಂಗಡಿಯಲ್ಲಿ ಹಾಗೂ ಮೇಲ್ವಿಚಾರಕರಾಗಿ ಭಡ್ತಿ ಹೊಂದಿ ಉ.ಕ ಜಿಲ್ಲೆಯ ಹೊನ್ನಾವರದಲ್ಲಿ 10 ವರ್ಷಗಳ ಕಾರ್ಯ ನಿರ್ವಹಿಸಿದ್ದಾರೆ. 2015ರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಕಚೇರಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಲಾಲರು ಶ್ರೀಕಾಳಿಕಾಂಬ ಯಕ್ಷಗಾನ ಸಂಘದ ತಾಳಮದ್ದಳೆ-ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಕಳೆದ ಮೂರು ದಶಕಗಳಿಂದ ತೊಡಗಿಸಿಕೊಂಡವರು. ಜೊತೆಗೆ ಅನೇಕ ಹವ್ಯಾಸಿ ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ಜನ ಮನ್ನಣೆ ಪಡೆದವರು.


ಉಚ್ಚ ಸ್ಥಾಯಿಯ ಇವರ ಹಾಡುಗಾರಿಕೆಯಲ್ಲಿ ಮಟ್ಟುಗಳ ಅನುಸರಣೆ ಮತ್ತು ಸಾಹಿತ್ಯ ಶುದ್ಧಿಯಿದೆ. ಕರುಣಾ ರಸದ ಹಾಡುಗಳು ಅತ್ಯಂತ ಮನೋಜ್ಞವಾಗಿದ್ದು ಕೇಳುಗರಲ್ಲಿ ವಿಶಿಷ್ಟ ಅನುಭವವನ್ನು ನೀಡುತ್ತದೆ.


ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಆರಂಭಿಕ ವರ್ಷಗಳಲ್ಲಿಯೇ ಮೈಸೂರು ವಿಭಾಗ ಮಟ್ಟದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ, ಉಜಿರೆಯಲ್ಲಿ ಜರಗಿದ ಯಕ್ಷಗಾನ ಪೂರ್ವರಂಗ ಸ್ಪರ್ಧೆಯಲ್ಲಿ ದ್ವಿತೀಯ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದು ಇವರ ಭಾಗವತಿಕೆಯ ಹಿರಿಮೆಗೆ ಸಾಕ್ಷಿಯಾಗಿದೆ. ಹವ್ಯಾಸಿ ಭಾಗವತರಾಗಿ 428 ತಾಳಮದ್ದಳೆ 169 ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸಿ ತನ್ನ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ.

ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದ ದಿ| ಪಿ ಹರಿಶ್ಚಂದ್ರ ಆಚಾರ್ಯ ಇವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಡಾ ಎಂ. ಪ್ರಭಾಕರ ಜೋಶಿಯವರು ಸುಧನ್ವ ಮೋಕ್ಷದ ಇವರ ಹಾಡುಗಾರಿಕೆಯನ್ನು ಕೇಳಿ ಪ್ರತಿಭೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ಕಲಾವಿದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಹಿಮ್ಮೇಳವು ಇವರಿಗೆ ಉತ್ತೇಜನವನ್ನು ನೀಡಿತ್ತು.


ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಎನ್ಮಾಡಿಯ ಶ್ರೀಕಾಂತಪ್ಪ ಕುಂಬಾರ-ಶ್ರೀಮತಿ ಅಪ್ಪಿ ಅವರ ಸುಪುತ್ರನಾಗಿ 1970 ರಲ್ಲಿ ಜನಿಸಿದ ಇವರು ಪ್ರೌಢ ಶಿಕ್ಷಣವನ್ನು ಪೂರೈಸಿ ಬದುಕಿನ ಭದ್ರತೆಗಾಗಿ ಯಕ್ಷಗಾನ ಮತ್ತು ಇತರ ವೃತ್ತಿಗಳನ್ನು ಅವಲಂಭಿಸಿ ಬೆಳೆದು ಬಂದ ವಿನಯಶೀಲ ವ್ಯಕ್ತಿ ಮತ್ತು ಕಲಾವಿದರಾಗಿದ್ದಾರೆ.


ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಗೇರುಕಟ್ಟೆ, ಶ್ರೀ ದುರ್ಗಾಂಬಾ ಕಲಾಸಂಗಮ ಆಲಂಕಾರು, ಬೆಳ್ತಂಗಡಿ ತಾಲೂಕು ಕುಲಾಲರ ಸಂಘ, ಯುವವಾಹಿನಿ ಕಾಯರ್ತಡ್ಕ, ಬಂದಾರು ಶ್ರೀ ರಾಮ ಯುವ ಸಂಘ ಇವರನ್ನು ಸನ್ಮಾನಿಸಿದೆ. ಕನ್ನಡ ಬಳಗ ಇಳಂತಿಲ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅಂಡೆತಡ್ಕ ಪ್ರಾಥಮಿಕ ಶಾಲಾ ವಠಾರದಲ್ಲಿ ಇತ್ತೀಚೆಗೆ ಆಯೋಜಿಸಿದ ಕನ್ನಡ ಹಬ್ಬ ಸಮಾರಂಭದಲ್ಲಿ ಯಕ್ಷಗಾನ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ವತಿಯಿಂದ ಶ್ರೀ ಪದ್ಮನಾಭ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.

ಕನ್ನಡ ಸಂಗಮದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಬನ್ನೆಂಗಳ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ದಿವಾಕರ ಆಚಾರ್ಯ ಅಭಿನಂದನಾ ನುಡಿಗಳನ್ನಾಡಿದರು.


ಲೇಖನ: ದಿವಾಕರ ಆಚಾರ್ಯ, ಗೇರುಕಟ್ಟೆ – 574217
(ದೂ: 9449076275)

ಕಟೀಲು ಮೇಳದ ಇಂದಿನ ಪ್ರಸಂಗಗಳು – 10-01-2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಮೈತ್ರಾವರುಣಿ 

ಕಟೀಲು ಎರಡನೇ ಮೇಳ == ಮುಂಚೂರು ಶಾಲಾ ಬಳಿ, ಶ್ರೀನಿವಾಸನಗರ ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಮೂರನೇ ಮೇಳ== ಶಾರದಾ ವೆಂಕಟರಮಣ ಕಾಲನಿ, ತಡಂಬೈಲು, ಸುರತ್ಕಲ್ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ನಾಲ್ಕನೇ ಮೇಳ  == ‘ಪರಿಮಳ ಪ್ರಸಾದ್’ ಅಶ್ವತ್ಥಪುರ ನೀರ್ಕೆರೆ – ಶ್ರೀ ದೇವಿ ಮಹಾತ್ಮ್ಯೆ 

ಕಟೀಲು ಐದನೇ ಮೇಳ ==  = ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ – ಮಹಾಕಲಿ ಮಗಧೇಂದ್ರ 

ಕಟೀಲು ಆರನೇ ಮೇಳ == ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ – ಶ್ರೀ ದೇವಿ ಮಹಾತ್ಮ್ಯೆ