Monday, March 16, 2026
Home Blog Page 267

ಅಳಿಕೆ ಯಕ್ಷ ಸಹಾಯ ನಿಧಿಗೆ ಕಲಾವಿದ ಜಯಾನಂದ ಸಂಪಾಜೆ ಆಯ್ಕೆ

ಯಕ್ಷಗಾನ ರಂಗದ ಸರ್ವಾಂಗ ಸಾಧಕ,ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೇರುನಟ ದಿ.ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2020 – 22ನೇ ಸಾಲಿನಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಆಯ್ಕೆಯಾಗಿದ್ದಾರೆ.

ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಮಾಜಿ ಅಕಾಡೆಮಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕಲಾವಿದ ಉಮೇಶ ಶೆಟ್ಟಿ ಉಬರಡ್ಕ ಅವರನ್ನೊಳಗೊಂಡ ಸಲಹಾ ಸಮಿತಿಯ ತೀರ್ಮಾನದಂತೆ ಸಂತ್ರಸ್ತ ಕಲಾವಿದರಿಗೆ ಸಹಾಯ ನಿಧಿ ನೀಡಲಾಗುವುದೆಂದು ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಹೇಳಿದ್ದಾರೆ.

ಯಕ್ಷ ನಿಧಿಯು ರೂ. 20,000/- ನಗದು ಮತ್ತು ಗೌರವ ಫಲಕಗಗಳನ್ನೊಳಗೊಂಡಿದೆ. 

ಮೇ.3ರಂದು ನಿಧಿಪ್ರದಾನ: ಕಟೀಲು,ಕುಂಟಾರು, ಪುತ್ತೂರು, ಹೊಸನಗರ, ಎಡನೀರು, ಹನುಮಗಿರಿ, ಬಪ್ಪನಾಡು ಮುಂತಾದ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳಲ್ಲಿ 32ವರ್ಷ ತಿರುಗಾಟ ನಡೆಸಿದ ಜಯಾನಂದ ಸಂಪಾಜೆ ದೇವೇಂದ್ರ, ರಕ್ತಬೀಜ, ಇಂದ್ರಜಿತು , ಹಿರಣ್ಯಾಕ್ಷ ,ಅರುಣಾಸುರ, ಕರ್ಣ, ಅರ್ಜುನ, ಕೃಷ್ಣ, ವಿಷ್ಣು, ಈಶ್ವರ ಇತ್ಯಾದಿ ಧೀರೋದಾತ್ತ ಪಾತ್ರಗಳಿಗೆ ಹೆಸರಾಗಿದ್ದಾರೆ.

ಇತ್ತೀಚೆಗೆ ಬಪ್ಪನಾಡು ಮೇಳದ ರಂಗಸ್ಥಳದಲ್ಲಿ ಪ್ರದರ್ಶನದ ನಡುವೆ ಕುಸಿದು ಕಾಲು ನೋವಿಗೆ ತುತ್ತಾದ ಅವರು ತಿರುಗಾಟ ಮುಂದುವರಿಸಲಾಗದೆ ಚಿಕಿತ್ಸೆ ಪಡೆಯುತ್ತಿದ್ದಾರೆ.             

ಇದೇ ಮೇ 3, 2022 ರಂದು ಮಂಗಳವಾರ ಸುಳ್ಯದ ಕಲ್ಲುಗುಂಡಿಯಲ್ಲಿರುವ ಜಯಾನಂದ ಸಂಪಾಜೆ ಅವರ ನಿವಾಸಕ್ಕೆ ತೆರಳಿ ಗೃಹ ಸನ್ಮಾನದೊಂದಿಗೆ ನಿಧಿ ಸಮರ್ಪಣೆ ಮಾಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆ ಶುಭಾರಂಭ – ಕಲಾವಿದರ ಸನ್ಮಾನ

‘ಹೊರನಾಡಿನಲ್ಲಿ ಯಕ್ಷಗಾನ ಕಲೆಯ ವಿವಿಧ ಆಯಾಮಗಳಲ್ಲಿ ಮೌಲಿಕ ಕೆಲಸ ಮಾಡಿದ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಮಹಾನಗರದಲ್ಲಿ ಮನೆಮಾತಾಗಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ, ಸರಣಿ ತಾಳಮದ್ದಳೆ ಕೂಟಗಳಲ್ಲದೆ ಕಲಾವಿದರ ಸನ್ಮಾನ, ಗ್ರಂಥ ಪ್ರಕಟಣೆ, ಬಡ ಕಲಾವಿದರಿಗೆ ನೆರವು, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಇತ್ಯಾದಿ ಮಾನವೀಯ ಕಾರ್ಯಗಳಿಂದ ಅದು ತುಳುನಾಡಿನ ಸಂಸ್ಕೃತಿಯನ್ನು ಮೆರೆಸಿದೆ.

ಇದೀಗ ಎರಡು ದಶಕಗಳ ಬಳಿಕ ಹುಟ್ಟೂರಿನಲ್ಲಿ ಬಳಗದ ಸ್ಥಳೀಯ ಶಾಖೆ ವಿಧ್ಯುಕ್ತವಾಗಿ ಆರಂಭವಾಗುತ್ತಿರುವುದು ಶ್ಲಾಘನೀಯ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.         

ಅಜೆಕಾರು ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗ ವತಿಯಿಂದ ಜರಗಿದ ಅಜೆಕಾರು ಶಾಖೆಯ ವಿಧ್ಯುಕ್ತ ಉದ್ಘಾಟನೆ ಮತ್ತು ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ದೀಪ ಬೆಳಗಿ ಬಳಗವನ್ನು ಉದ್ಘಾಟಿಸಿದರು.


ಕಲಾವಿದರ ಸನ್ಮಾನ – ಬಯಲಾಟ: ಸಮಾರಂಭದಲ್ಲಿ ಪಾವಂಜೆ ಮೇಳದ ಕಲಾವಿದರಾದ ಮೋಹನ ಬೆಳ್ಳಿಪ್ಪಾಡಿ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಅಮೀನ್ ಅತಿಥಿಗಳಾಗಿ ಶುಭ ಹಾರೈಸಿದರು.

ಯಕ್ಷ ನೃತ್ಯ ಶಿಬಿರ: ಸಭೆಯ ಅಧ್ಯಕ್ಷತೆ ವಹಿಸಿದ ಅಜೆಕಾರು ಕಲಾಭಿಮಾನಿ ಬಳಗ ಅಜೆಕಾರು ಶಾಖೆಯ ಅಧ್ಯಕ್ಷ ವಿಜಯ ಶೆಟ್ಟಿ ಶುಭವಿ ಮಾತನಾಡಿ ‘ಬಳಗದ ವತಿಯಿಂದ ಮೇ 1ರಿಂದ 5ರ ವರೆಗೆ ಅಜೆಕಾರು ಶ್ರೀರಾಮ ಮಂದಿರದಲ್ಲಿ ಪ್ರಥಮ ಹಂತದ ಮಹಿಳೆಯರಿಗಾಗಿ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಆಸಕ್ತರು ಭಾಗವಹಿಸಬಹುದು’ ಎಂದು ತಿಳಿಸಿದರು                 

ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇದರ ಸಂಸ್ಥಾಪನಾ ಅಧ್ಯಕ್ಷ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ ಅಜೆಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಳಿಕ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕ್ಷೇತ್ರ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 28.04.2022

ಕಟೀಲು ಒಂದನೇ ಮೇಳ == ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಸರಸ್ವತಿ ನಿಲಯ ಕರಂಬಾರು ಸರಕಾರಿ ಶಾಲಾ ಬಳಿ ಬಜಪೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕಂಬಳಮನೆ ನಿಡ್ಡೋಡಿ ಕಲ್ಲಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ‘ಸ್ವರ್ಣ’ ನಡಿಯಾಲ ಪಂಜ ಕೊಯಿಕುಡೆ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ ==  ಪಲ್ಲಿಪಾಡಿ ಮನೆ ಕರಿಯಂಗಳ ಬಂಟ್ವಾಳ – ಮಕರಾಕ್ಷ ಕಾಳಗ, ಕಾಳಗ, ಮೀನಾಕ್ಷಿ  ಕಲ್ಯಾಣ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಹಿಡಿಂಬಾ ವಿವಾಹ, ಮೂರುವರೆ ವಜ್ರ, ಭಕ್ತ ಮಾರ್ಕಂಡೇಯ 

ಎಸ್. ಎಮ್. ಹೆಗಡೆ ಮತ್ತು ಕೆ. ಎಲ್. ಕುಂಡಂತಾಯರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿ ಎಸ್. ಎಮ್. ಹೆಗಡೆ ಹಾಗೂ ಅರ್ಥಧಾರಿ, ಲೇಖಕ, ಚಿಂತಕ ಕೆ. ಎಲ್. ಕುಂಡಂತಾಯ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 23ರಿಂದ ಆರಂಭವಾಗಲಿದ್ದು, ಮೇ 29 ಭಾನುವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಎಸ್. ಎಮ್. ಹೆಗಡೆ ಮುಡಾರೆ

ಎಸ್. ಎಮ್. ಹೆಗಡೆ ಮುಡಾರೆಯವರು ಪ್ರಶಸ್ತಿಗೆ ಆಯ್ಕೆಯಾದ ನಂತರ ನಮ್ಮನ್ನಗಲಿದ್ದು ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು.

ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.

ಇಂದು ಆಟ ಎಲ್ಲೆಲ್ಲಿ? (28-04-2022)

ಮೇಳಗಳ ಇಂದಿನ (28.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಮಲಶಿಲೆ ಸಮೀಪ ಎಡಮೊಗೆ ಕಾರೇಗದ್ದೆ – ,ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಸರಸ್ವತಿ ನಿಲಯ ಕರಂಬಾರು ಸರಕಾರಿ ಶಾಲಾ ಬಳಿ ಬಜಪೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಕಂಬಳಮನೆ ನಿಡ್ಡೋಡಿ ಕಲ್ಲಮುಂಡ್ಕೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ‘ಸ್ವರ್ಣ’ ನಡಿಯಾಲ ಪಂಜ ಕೊಯಿಕುಡೆ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಕಟೀಲು ಐದನೇ ಮೇಳ ==  ಪಲ್ಲಿಪಾಡಿ ಮನೆ ಕರಿಯಂಗಳ ಬಂಟ್ವಾಳ – ಮಕರಾಕ್ಷ ಕಾಳಗ, ಕಾಳಗ, ಮೀನಾಕ್ಷಿ  ಕಲ್ಯಾಣ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಹಿಡಿಂಬಾ ವಿವಾಹ, ಮೂರುವರೆ ವಜ್ರ, ಭಕ್ತ ಮಾರ್ಕಂಡೇಯ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಮಲಗದ್ದೆಮನೆ ಕೆಂಜೂರು 

ಮಂದಾರ್ತಿ ಮೂರನೇ ಮೇಳ  == ಸಾಲಿಮಕ್ಕಿ ಬೀಜೂರು ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಈಶಾವಾಸ್ಯಮ್ ಕೊಟ್ಟಬಚ್ಚಲು ಹಿಲಿಯಾಣ 

ಮಂದಾರ್ತಿ ಐದನೇ ಮೇಳ  == ಬೂದಾಡಿಮನೆ ಕೊರ್ಗಿ ಹೊಸ್ಮಠ 

ಹನುಮಗಿರಿ ಮೇಳ == ಆಲಿತೋಟ ಗುಂಡ್ಮಿ ಶ್ರೀ ಕುಮಾರಸ್ವಾಮಿ ದೇವಸ್ಥಾನ ಯಕ್ಷಿಮಠ ರಸ್ತೆ – ಸಹಸ್ರ ಕವಚ ಮೋಕ್ಷ 

ಶ್ರೀ ಪೆರ್ಡೂರು ಮೇಳ == ನಾಲ್ಕುಪಾದ ಹಾಯಿಗುಳಿ ದೇವಸ್ಥಾನ ಹರಾಲು ಬೀಜಾಡಿ ಕೋಟೇಶ್ವರ – ಕೃಷ್ಣ ಕಾದಂಬಿನಿ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ದುರ್ಗಾಶ್ರೀ ನಿಲಯ ಅಂಜನಾಬೈಲು ಪಡುಕಾಡೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಮೂಕಾಂಬಿಕಾ ನಿಲಯ ಗುಜ್ಜಾಡಿಮನೆ ಸಬ್ಲಾಡಿ ಹಟ್ಟಿಯಂಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕುಪ್ ಮಕ್ಕಿ ಗರಡಿಮನೆ ಕೊಡ್ಲಾಡಿ 

ಶ್ರೀ ಪಾವಂಜೆ ಮೇಳ == ಸರಸ್ವತಿ ಕಲ್ಯಾಣ ಮಂಟಪದ ಹತ್ತಿರ ದೊಡ್ಡೋಣಿ ರಸ್ತೆ ಕೋಟೇಶ್ವರ – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಕಮಲಶಿಲೆ ಮೇಳ == ಮದ್ದಲೆಕಂಬ ಚಿತ್ತೂರು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಬೊಬ್ಬರ್ಯೆಶ್ವರ ದೇವಸ್ಥಾನ ಕೊಯಿಕೂರು ಮಣೂರು 

ಶ್ರೀ ಸೌಕೂರು ಮೇಳ == ಶಿರೂರು ಓದೂರು ಮಾಸ್ತಿಯಮ್ಮ ಸಪರಿವಾರ ದೇವಸ್ಥಾನ – ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಮಂದಾರ್ತಿ ತಂತ್ರಾಡಿ ಹೊಸ್ಕೆರೆ ನಾಗ ನಂದಿಕೇಶ್ವರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶಾಂತಿಗ್ರಾಮ ಕೊಗ್ಗರ್ಸೆ ಅಬ್ಬಿಕಲ್ – ಪ್ರಚಂಡ ಪಂಜುರ್ಲಿ 

ಶ್ರೀ ಶನೀಶ್ವರ ಮೇಳ == ಆಂಜನೇಯ ಯುವಕ ಸಂಘ ಎಂ.ಕೆ ಬೈಲ್ 

ಶ್ರೀ ಸಿಗಂದೂರು ಮೇಳ == ವಯ್ಯಾಡಿ ಮುದ್ದೋಡಿಮನೆ 

ಶ್ರೀ ನೀಲಾವರ ಮೇಳ  == ಮಹಾಲಿಂಗೇಶ್ವರ ದೇವಸ್ಥಾನ ಹಾರಾಡಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೊಸಳ್ಳಿ ತಗಡೊಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಸಾಗರ ಕಾಗೆಹಳ್ಳ – ಕುಲದೈವ ಪಂಜುರ್ಲಿ ಜಾಂಬವತಿ ಕಲ್ಯಾಣ 

ಶ್ರೀ ಹಟ್ಟಿಯಂಗಡಿ ಮೇಳ == ಉಪ್ಪೂರು – ವಾತಾಪಿ ಗಣಪತಿ 

ಶ್ರೀ ಹಾಲಾಡಿ ಮೇಳ == ಸೋಮೇಶ್ವರ ಕಾಸನಮಕ್ಕಿ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ನೆಲ್ಯಡ್ಕ ಅಂತರ ನರಿಕೊಂಬು – ಭಕ್ತಿದ ಬಲಿಮೆ 

ಶ್ರೀ ದೇಂತಡ್ಕ ಮೇಳ == ಅಜೆಕಾರು ಗರಡಿ ವಠಾರ – ಛತ್ರಪತಿ 

ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನೆ

ಉಪ್ಪಿನಂಗಡಿ ವೇದಶಂಕರ ನಗರದ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಉಪ್ಪಿನಂಗಡಿ ಯಕ್ಷ ಸಂಗಮದ ಅಧ್ಯಕ್ಷ ಶ್ರೀ ರವೀಶ್ ಯೆಚ್. ಟಿ ದೀಪ ಬೆಳಗಿಸಿ ಉದ್ಘಾಟಿಸಿ ರಾಮಾಯಣ, ಮಹಾಭಾರತದ ಮೌಲ್ಯಗಳನ್ನು ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಯಕ್ಷ ಸಂಗಮ ಪ್ರಾಯೋಜಿತ ತರಬೇತಿಯನ್ನು ಸಂಸ್ಥೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಶಾಲೆಯ ಉಪಾಧ್ಯಕ್ಷೆ ಶ್ರೀಮತಿ ಅನುರಾಧ ಆರ್ ಶೆಟ್ಟಿ ಮಾತನಾಡಿ ಪುರಾಣ ವಾಚನ, ತಾಳಮದ್ದಳೆ ಮತ್ತು ಯಕ್ಷಗಾನ ಬಯಲಾಟವನ್ನು ವೀಕ್ಷಿಸಿದ ಅನುಭವವು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅನುಸರಿಸಲು ಮತ್ತು ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆತ್ಮಶಕ್ತಿಯನ್ನು ನೀಡುವುದೆಂದು ತಿಳಿಸಿದರು.


ಸಮಾರಂಭದಲ್ಲಿ ಅತಿಥಿಗಳಾಗಿದ್ದ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ ಆಚಾರ್ಯ ಆಲಂಕಾರು ಶುಭಹಾರೈಸಿದರು.


ರಾಮ ನಗರ ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷರಾದ ಉಮೇಶ್ ಶೆಣೈ. ಎನ್, ಸಂಜೀವ ಪಾರೆಂಕಿ, ಮೋಹನ್ ಭಟ್, ಲೋಕೇಶ್ ಆಚಾರ್ಯ ಸರಪಾಡಿ, ಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ತರಬೇತಿ ಕೇಂದ್ರದ ಗುರುಗಳಾದ ಮಾಣಿ ಸತೀಶ್ ಆಚಾರ್ಯ ಪ್ರಸ್ತಾವನೆಗೈದರು. ಪ್ರದೀಪ್ ಆಚಾರ್ಯ ಸ್ವಾಗತಿಸಿ ಶ್ರೀರಾಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಮಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಬಳಿಕ ಜರುಗಿದ “ಶ್ರೀರಾಮ ಕಾರುಣ್ಯ” ತಾಳಮದ್ದಳೆಯಲ್ಲಿ ಭಾಗವತರಾಗಿ ಡಿ.ಕೆ ಆಚಾರ್ಯ ಹಿಮ್ಮೇಳದಲ್ಲಿ ಮೋಹನ ಆಲಂಕಾರು, ಶ್ರೀಪತಿ ಭಟ್ ಇಳಂತಿಲ, ಗುರುಮೂರ್ತಿ ಅಮ್ಮಣ್ಣಾಯ ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ದಿವಾಕರ ಆಚಾರ್ಯ ನೇರಂಕಿ, ಗುಡ್ಡಪ್ಪ ಬಲ್ಯ, ಹರೀಶ್ ಆಚಾರ್ಯ ಬಾರ್ಯ, ಮಾಣಿ ಸತೀಶ್ ಆಚಾರ್ಯ ಭಾಗವಹಿಸಿದ್ದರು.

ಇಂದು ಆಟ ಎಲ್ಲೆಲ್ಲಿ? (26-04-2022)

ಮೇಳಗಳ ಇಂದಿನ (26.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬೂದಾಡಿ ಬಿಲ್ಲಾಡಿ ಯಕ್ಷಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್ ವಠಾರ – ಕನಕಾಂಗಿ ಕಲ್ಯಾಣ ಮಕರಾಕ್ಷ ಕಾಳಗ 

ಕಟೀಲು ಒಂದನೇ ಮೇಳ == ಉಳ್ಯ ಪಂಜ ಕೊಯಿಕುಡೆ ಮನೆ ವಠಾರ

ಕಟೀಲು ಎರಡನೇ ಮೇಳ == ನಡಿಮನೆ ಸಾಂತೂರು ಉಡುಪಿ 

ಕಟೀಲು ಮೂರನೇ ಮೇಳ== ನನಸು ಮನೆ ಕುಂಜದಬೆಟ್ಟು ಕೌಡೂರು ಬೈಲೂರು 

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಐದನೇ ಮೇಳ ==  ಮೂರ್ಜಿಮನೆ ಕನಕಮಜಲು ಸುಳ್ಯ 

ಕಟೀಲು ಆರನೇ ಮೇಳ == ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಮಂದಾರ್ತಿ ಒಂದನೇ ಮೇಳ  == ಸಮೃದ್ಧಿ ತೆಂಗಿನಬಾಳು ಕುಳ್ಳುಂಜೆ ಮಾವಿನಕೊಡ್ಲು 

ಮಂದಾರ್ತಿ ಎರಡನೇ ಮೇಳ   == ಕೆರ್ಜಾಡಿ ಹೊಸ್ಮನೆ ಆರ್ಡಿ ಅಲ್ಬಾಡಿ 

ಮಂದಾರ್ತಿ ಮೂರನೇ ಮೇಳ  == ಉಪ್ಪರಿಗೆಮನೆ ಮರತೂರು ಮೊಳಹಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಬ್ರಹ್ಮಲಿಂಗೇಶ್ವರ ಕೃಪಾ ಹೆಸ್ಕುಂದ ಕುಳ್ಳಿಮನೆ ನಂಚಾರು 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ  

ಹನುಮಗಿರಿ ಮೇಳ == ಕಡಂದಲೆ ಶ್ರೀ ಬಬ್ಬರ್ಯ ಪಾದೆ – ಪಂಚವಟಿ ಚೂಡಾಮಣಿ ಮೈಂದ ದ್ವಿವಿದ 

ಶ್ರೀ ಸಾಲಿಗ್ರಾಮ ಮೇಳ == ಮಾರುತಿಪುರ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಕ್ಷೇತ್ರ ಪೆರ್ಡೂರು – ಶ್ರೀ ಪೆರ್ಡೂರು ಕ್ಷೇತ್ರ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾನ್ ಬೇರು ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ದೇವಿಕೃಪಾ ಹದನಕೇರಿಮನೆ ಕಂಚಿಕಾನ್ ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ರಕ್ತೇಶ್ವರಿ ನಿಲಯ ಮಕ್ಕಿಮನೆ ಹೊಸಮಠ ತಲ್ಲೂರು 

ಶ್ರೀ ಪಾವಂಜೆ ಮೇಳ == ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಕಲ್ಲುಮುಂಡ್ಕೂರು – ತ್ರಿಜನ್ಮ ಮೋಕ್ಷ 

ಶ್ರೀ ಕಮಲಶಿಲೆ ಮೇಳ == ಯಡಮೊಗೆ ತಾರೆಗದ್ದೆ – ಕಮಲಶಿಲೆ X ಹಾಲಾಡಿ ಕೂಡಾಟ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ನಡೂರು ಕಲ್ ರಾಶಿ 

ಶ್ರೀ ಸೌಕೂರು ಮೇಳ == ಯಡ್ತಾಡಿ ದ್ವಾರಕಾ ಹೋಟೆಲ್ ಬಳಿ – ಕುಶಲವ ಕೃಷ್ಣಪಾರಿಜಾತ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಅಲ್ಬಾಡಿ ಬಾರ್ ಮಕ್ಕಿ ಮದಗ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಹರಿಹರಪುರ – ಸ್ವರ್ಣಮುಖಿ ಮದನಸಖಿ 

ಶ್ರೀ ಹಿರಿಯಡಕ ಮೇಳ == ನಾರಾವಿ ಮಮ್ತಾಜ್ ಸ್ಟೋರ್ ಬಳಿ – ಮಂತ್ರಭೈರವಿ 

ಶ್ರೀ ಸಿಗಂದೂರು ಮೇಳ == ಏಳಜಿತ್ ಕಾಶಿಕೊಡ್ಲು 

ಶ್ರೀ ನೀಲಾವರ ಮೇಳ  == ಹೊಳೆಬಾಗಿಲು ಗರಡಿ ವಠಾರ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ತೀರ್ಥಳ್ಳಿ ಬೊಬ್ಬಿ 

 

ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ದೇವಸ್ಥಾನ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಗುತ್ಯಮ್ಮ ಮಾತಂಗಿ ಸನ್ನಿಧಿ ಹಡ್ಲುಕೊಪ್ಪ ಕಮ್ಮರಡಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಯಡಮೊಗೆ ತಾರೆಗದ್ದೆ – ಕಮಲಶಿಲೆ X ಹಾಲಾಡಿ ಕೂಡಾಟ 

ಶ್ರೀ ಬಪ್ಪನಾಡು ಮೇಳ == ಮೂಲ್ಕಿ ಕೆ.ಎಸ್ ರಾವ್ ನಗರ ಅಮೃತಾಂಶು ನಿಲಯದ ಎದುರು – ಶ್ರೀ ದೇವಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕರ್ಪೆ ನೆಕ್ಲಾಜೆ ಶ್ರೀದೇವಿ ಮನೆಯ ವಠಾರ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ತಲಕಳ ಮೇಳ == ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆ – ನರಕಾಸುರ ವಧೆ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 25.04.2022

ಕಟೀಲು ಒಂದನೇ ಮೇಳ == ಕೆಮ್ರಾಲುಗುತ್ತು ಪಕ್ಷಿಕೆರೆ ಸುರಗಿರಿ ದೇವಸ್ಥಾನದ ಬಳಿ ಅತ್ತೂರು ವಯಾ ಪಕ್ಷಿಕೆರೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಕೊಂಡೇಲಮನೆ ಕಟೀಲು – ದಶಾವತಾರ 

ಕಟೀಲು ಮೂರನೇ ಮೇಳ==ಪೆರ್ನೊಟ್ಟು ತೆಂಕಮಿಜಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ದುರ್ಗಾನಿಲಯ ಕುಂಡೋಳಿ ಅಜ್ಜಿಬೆಟ್ಟು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ ==  ಬೋಳ್ಯಾರು ಮನೆ ಕುರ್ನಾಡು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಹಿರಿಯಡಕ ಕಾಳು ಶೆಟ್ಟಿ ಮನೆ ಬಳಿಯ ರಂಗಮಂಟಪದಲ್ಲಿ – ಶ್ರೀ ದೇವಿ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (25-04-2022)

ಮೇಳಗಳ ಇಂದಿನ (25.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕೆಮ್ಮಣ್ಣು ಪಡುಕುದ್ರು – ಶ್ರೀ ಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕೆಮ್ರಾಲುಗುತ್ತು ಪಕ್ಷಿಕೆರೆ ಸುರಗಿರಿ ದೇವಸ್ಥಾನದ ಬಳಿ ಅತ್ತೂರು ವಯಾ ಪಕ್ಷಿಕೆರೆ 

ಕಟೀಲು ಎರಡನೇ ಮೇಳ == ಕೊಂಡೇಲಮನೆ ಕಟೀಲು 

ಕಟೀಲು ಮೂರನೇ ಮೇಳ==ಪೆರ್ನೊಟ್ಟು ತೆಂಕಮಿಜಾರು 

ಕಟೀಲು ನಾಲ್ಕನೇ ಮೇಳ  == ದುರ್ಗಾನಿಲಯ ಕುಂಡೋಳಿ ಅಜ್ಜಿಬೆಟ್ಟು ಬಂಟ್ವಾಳ 

ಕಟೀಲು ಐದನೇ ಮೇಳ ==  ಬೋಳ್ಯಾರು ಮನೆ ಕುರ್ನಾಡು 

ಕಟೀಲು ಆರನೇ ಮೇಳ == ಹಿರಿಯಡಕ ಕಾಳು ಶೆಟ್ಟಿ ಮನೆ ಬಳಿಯ ರಂಗಮಂಟಪದಲ್ಲಿ 

ಮಂದಾರ್ತಿ ಒಂದನೇ ಮೇಳ  == ಕಟ್ಟಿನಬೈಲು ನಡುಮನೆ ೭೪ನೇ ಉಳ್ಳೂರು – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಕಾರಿಕೊಡ್ಲು ಹಿಲಿಯಾಣ 

ಮಂದಾರ್ತಿ ಮೂರನೇ ಮೇಳ  == ಹೊರಳಿಮಕ್ಕಿ ಹೆಂಗವಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಹೆಗ್ಡೆಕೆರೆ ದೇವಸ್ಥಾನದ ಹತ್ತಿರ ಹಳ್ಳಾಡಿ ಹರ್ಕಾಡಿ 

ಮಂದಾರ್ತಿ ಐದನೇ ಮೇಳ  == ಕಟ್ಟಿನಬೈಲು ನಡುಮನೆ ೭೪ನೇ ಉಳ್ಳೂರು – ಕೂಡಾಟ 

ಹನುಮಗಿರಿ ಮೇಳ == ಶ್ರೀ ವಾರಾಹಿ ದೈವಸ್ಥಾನ ಶ್ರೀ ಕ್ಷೇತ್ರ ಕುರಿಯ ಬಂಡಿಮಾರಿನಲ್ಲಿ – ತ್ರಿಜನ್ಮ ಮೋಕ್ಷ 

ಶ್ರೀ ಸಾಲಿಗ್ರಾಮ ಮೇಳ == ಕಾರ್ಕಡ ಬಡಾಹೋಳಿ (ಸಾಲಿಗ್ರಾಮ) – ಚಂದ್ರಹಾಸ, ಸುದರ್ಶನ ವಿಜಯ, ರತ್ನಾವತಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಸಂಪೆಕಟ್ಟೆ ಶಂಭುಲಿಂಗೇಶ್ವರ ಜಾತ್ರೆ – ನಾಗವಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಬಾಳಿಕೆರೆ ಕಳ್ಳಿಕಾಡು ದೇವಲ್ಕುಂದ 

ಶ್ರೀ ಮಾರಣಕಟ್ಟೆ ಮೇಳ ‘ಬಿ’ == ಕಾನ್ಕಿ ಜಡ್ಕಲ್ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ನೈಕಂಬ್ಳಿ ನೀರ್ಕೊಡ್ಲು ಚಿತ್ತೂರು 

ಶ್ರೀ ಪಾವಂಜೆ ಮೇಳ == ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಸುರ್ಗೇಡಿ ಉಳ್ಳೂರು – ೭೪

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮಾಲಾಡಿ ತೆಕ್ಕಟ್ಟೆ 

ಶ್ರೀ ಸೌಕೂರು ಮೇಳ == ವಾಲ್ತೂರು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೆಳುವಾಯಿ ಆದ್ಯಲಕ್ಷ್ಮಿ ಕಾಂಪ್ಲೆಕ್ಸ್ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ ==  ಹೆಬ್ರಿ ನಡುಬೀಡು – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಅನುಪ್ ನಿಲಯ ಕೋಣಂದೂರು ಕ್ಯಾರಂದೂರು – ಶ್ರೀ ಕೋಟಿ ಚೆನ್ನಯ 

ಶ್ರೀ ಹಿರಿಯಡಕ ಮೇಳ == ಎಣ್ಣೆಹೊಳೆ ಹಂಚಿಕಟ್ಟೆ ಜಂಗಮ ಮಠ ವಠಾರ – ಮಂತ್ರಭೈರವಿ 

ಶ್ರೀ ಶನೀಶ್ವರ ಮೇಳ == ಹೊಯ್ಯಣ ಕೆರೆಮುಲ್ಲಿ 

ಶ್ರೀ ಸಿಗಂದೂರು ಮೇಳ == ನಾವುಂದ ಮಸ್ಕಿ ನಾಲ್ಕುಪಾದ ಹಾಯಿಗುಳಿ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಶ್ರೀ ಕ್ಷೇತ್ರದಲ್ಲಿ – ವೀರಮಣಿ, ಜಾಂಬವತಿ ಕಲ್ಯಾಣ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಕೊಂಡ್ಲೂರು 

ಶ್ರೀ ಮೇಗರವಳ್ಳಿ ಮೇಳ == ಗುಡ್ಡೆಕೇರಿ – ನೂತನ ಪ್ರಸಂಗ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬ್ರಹ್ಮಲಿಂಗೇಶ್ವರ ವರಸಿದ್ಧಿವಿನಾಯಕ ದೇವಸ್ಥಾನ ನಲ್ಲೂರು ಶೃಂಗೇರಿ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಬೆಂಕಿಬೆಟ್ಟು ಅಮಾಸೆಬೈಲು – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಮಂಗಲ್ಪಾಡಿ – ಭಕ್ತಿದ ಬಲಿಮೆ 

ಇಂದು ಆಟ ಎಲ್ಲೆಲ್ಲಿ? (24-04-2022)

ಮೇಳಗಳ ಇಂದಿನ (24.04.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ವಾಮಂಜೂರು ಶ್ರೀ ಅಮೃತೇಶ್ವರಿ ದೇವಸ್ಥಾನದ ಆವರಣ – ಅಮರವಾಹಿನಿ 

ಕಟೀಲು ಒಂದನೇ ಮೇಳ == ಹೊಸಮನೆ ಪೆರ್ಮಂಕಿ ದೇವಸ್ಥಾನದ ಬಳಿ 

ಕಟೀಲು ಎರಡನೇ ಮೇಳ == ಬೆಳ್ಳಿಬೆಟ್ಟಗುತ್ತು ಗುರುಪುರ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಕೊಲ್ಲಾಡಿ ಸಾಲೆತ್ತೂರು ಬಂಟ್ವಾಳ 

ಕಟೀಲು ಐದನೇ ಮೇಳ ==  ಸಮೃದ್ಧಿ ಕುಂಜತ್ತಬೈಲು ಕಾವೂರು 

ಕಟೀಲು ಆರನೇ ಮೇಳ == ಪಡುಬಾಳಿಕೆ ಸುರಗಿರಿ ದೇವಸ್ಥಾನದ ಬಳಿ ಅತ್ತೂರು ವಯಾ ಪಕ್ಷಿಕೆರೆ

ಮಂದಾರ್ತಿ ಒಂದನೇ ಮೇಳ  == ಶ್ರೀ ಗೋಪಾಲಕೃಷ್ಣ ನಿಲಯ ಫಿಶರೀಶ್ ರೋಡ್ ಕೋಟೇಶ್ವರ – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ಗೋಪಾಲಕೃಷ್ಣ ನಿಲಯ ಫಿಶರೀಶ್ ರೋಡ್ ಕೋಟೇಶ್ವರ – ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಹೆರಂಜಾಲು ಬೈಂದೂರು 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಕಲ್ಪವೃಕ್ಷ ಹಂದಿಕಲ್ಲು ಚಾರ 

ಹನುಮಗಿರಿ ಮೇಳ == ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬ್ರೋಟ ಮಂಡೆಕೋಲು ಗ್ರಾಮ – ಸಂಪೂರ್ಣ ರಾಮಾಯಣ 

ಶ್ರೀ ಸಾಲಿಗ್ರಾಮ ಮೇಳ == ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಹರಿಹರಪುರ – ದಕ್ಷಯಜ್ಞ, ಭಕ್ತ ಪ್ರಹ್ಲಾದ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶಾರಾಳ ಕೆಳಾಮನೆ ಕರ್ಕುಂಜೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬೊಬ್ಬರ್ಯ ದೇವಸ್ಥಾನ ಹಟ್ಟಿಕುದ್ರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಬ್ರಹ್ಮಶ್ರೀ ನಿಲಯ ಬಗ್ವಾಡಿ 

ಶ್ರೀ ಪಾವಂಜೆ ಮೇಳ == ಅಜೆಕಾರು ಜ್ಯೋತಿ ಹೈಸ್ಕೂಲ್ ಮೈದಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ದರನಾಡಿ ಶಂಕರನಾರಾಯಣ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ‘ಲಕ್ಷ್ಮೀದೀಪ’ ಮಧುವನ ಅಚ್ಲಾಡಿ 

ಶ್ರೀ ಸೌಕೂರು ಮೇಳ == ಕೊಡ್ಲಾಡಿ ಕೊಡ್ಗಿ ದರ್ಖಾಸುಮನೆ – ಅಗ್ನಿ ನಕ್ಷತ್ರ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಗುರುಪುರ ಕೈಕಂಬ ಜಂಕ್ಷನ್ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ಮುರ್ಸೆ – ಧರ್ಮ ದೈವೋದ್ಭವ ಕನಕಾಂಗಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕೋಟ ಗಿಳಿಯಾರು ಸಣ್ಣ ಬಸವನ ಕಲ್ಲು – ಪ್ರಚಂಡ ಪಂಜುರ್ಲಿ 

ಶ್ರೀ ಹಿರಿಯಡಕ ಮೇಳ == ಓಂತಿಬೆಟ್ಟು ಶ್ರೀ ಲಕ್ಷ್ಮೀಕೃಪಾ ಕಲ್ಯಾಣ ಮಂಟಪ – ಶ್ರೀ ದೇವಿ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಗುಲ್ವಾಡಿ ಕಾಸನಕಟ್ಟೆ 

ಶ್ರೀ ನೀಲಾವರ ಮೇಳ  == ಎಳ್ಳಂಪಳ್ಳಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ತೀರ್ಥಳ್ಳಿ ಕೈಮರ 

ಶ್ರೀ ಮೇಗರವಳ್ಳಿ ಮೇಳ == ಮಂಡಗದ್ದೆ ಶ್ರೀ ಗುತ್ಯಮ್ಮ ಮತ್ತು ಶ್ರೀ ದುರ್ಗಮ್ಮ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ  

ಶ್ರೀ ಹಟ್ಟಿಯಂಗಡಿ ಮೇಳ == ಗುಂಡುಪಾದೆ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಕುಂಬಾರಮಕ್ಕಿ ಶಂಕರನಾರಾಯಣ – ಹಾಲಾಡಿ ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಗಣೇಶಪುರ ಕೈಕಂಬ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರ – ಮುಗುರು ಮಲ್ಲಿಗೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬಜಪೆ ಕರಂಬಾರು ಬಂಗೇರ ನಿಲಯದ ಮುಂಭಾಗ – ಮೇದಿನಿ ನಿರ್ಮಾಣ, ಮಹಿಷ ಮರ್ದಿನಿ, ಗಿರಿಜಾ ಕಲ್ಯಾಣ