ರೈಲು ಮತ್ತು ಟ್ರಕ್ ಢಿಕ್ಕಿಯಾಗಿ ಅಫಘಾತ ಸಂಭವಿಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತಿರುವ ಲಾರಿಗೆ ಎಕ್ಸ್ ಪ್ರೆಸ್ ರೈಲು ಬಂದು ಢಿಕ್ಕಿ ಹೊಡೆದಿದೆ.
ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲವಾದರೂ ಟ್ರಕ್ ಚಾಲಕನ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಈ ಈ ಅಫಘಾತ ನಡೆದಿದೆ.
ಭಾಲ್ಕಿ ತಾಲೂಕಿನ ಹಲಬುರ್ಗಾ ಬಳಿಯ ರೈಲು ಟ್ರ್ಯಾಕ್ ಒಂದರಲ್ಲಿ ರೈಲು ಬರುವ ವೇಳೆಗೆ ಅವಸರವಸರವಾಗಿ ಹೋಗುವ ಉದ್ದೇಶದಿಂದ ಲಾರಿ ಚಾಲಕನೊಬ್ಬ ವೇಗವಾಗಿ ಲಾರಿಯನ್ನು ಟ್ರ್ಯಾಕ್ ಮೇಲೆ ಚಲಾಯಿಸಿದ.
ಅಷ್ಟರಲ್ಲಿ ಇನ್ನೊಂದು ಬದಿಯ ಗೇಟ್ ಹಾಕಲ್ಪಟ್ಟಿತು. ಲಾರಿ ನಿಂತಿತು. ಇದರಿಂದ ಲಾರಿಯ ಹಿಂದಿನ ಭಾಗ ಟ್ರ್ಯಾಕ್ ಮೇಲೆಯೇ ಉಳಿಯಿತು. ಅಪಾಯವನ್ನು ಅರಿತ ರೈಲ್ವೆ ಸಿಬ್ಬಂದಿ ಕೂಡಲೇ ಕೆಂಪು ನಿಶಾನೆ ತೋರಿಸಿದರು. (Red Light and Flag).
ರೈಲು ನಿಧಾನಗತಿಯನ್ನು ಪಡೆದಿತ್ತಾದರೂ ಅಷ್ಟರೊಳಗೆ ಲಾರಿಯನ್ನು ಸಮೀಪಿಸಿತ್ತು. ಲಾರಿಗೆ ಅಪ್ಪಳಿಸಿ ಸ್ವಲ್ಪ ಮುಂದಕ್ಕೆ ಹೋಗಿ ರೈಲು ನಿಂತುಕೊಂಡಿತು. ದೊಡ್ಡ ಅಪಾಯವೇನೂ ಸಂಭವಿಸದಿದ್ದರೂ ನಿಲ್ಯಕ್ಷತನದ ಚಾಲನೆಗಾಗಿ ಲಾರಿ ಚಾಲಕನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
- ಉದ್ಯಮಿಯೊಬ್ಬರಿಂದ ಮುಂಬೈನಲ್ಲಿ 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಐಷಾರಾಮಿ ಕಟ್ಟಡದ ಖರೀದಿ – ದೇಶದಲ್ಲೇ ಅತಿ ದುಬಾರಿ ಖರೀದಿ ಎಂಬ ಹೆಗ್ಗಳಿಕೆ.
- ಉದ್ಯಾನವನವೊಂದರಲ್ಲಿ ಪೊಲೀಸರೆಂದು ನಟಿಸಿದ ಮೂವರು ವ್ಯಕ್ತಿಗಳಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ.
- ಶಾಲಾ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಎದುರೇ ಗುಂಡಿಕ್ಕಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಅವಳ ಮಾಜಿ ಪ್ರಿಯಕರ
- ‘ಆಸ್ತಿ ವಿವಾದ ಬಗೆಹರಿಸಲು ರಾಧಾ ಚೆಕ್ ನೀಡಿದ್ದರು’ – ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ನಟಿ ಅಂಬಿಕಾ, ಚೆನ್ನೈನಲ್ಲಿ ಪ್ರಕರಣ ದಾಖಲು
- ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದ್ದು ಶೂನ್ಯ ಮತಗಳು! ಅಭ್ಯರ್ಥಿಗಳ ಆಯ್ಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ!
