Friday, May 15, 2026
Home Blog Page 223

ನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

ಉಡುಪಿ :- ಉಡುಪಿ ನಿಟ್ಟೂರು ಪ್ರೌಢಶಾಲೆಯಲ್ಲಿ 01, ಆಗಸ್ಟ್ 2022ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಮತ್ತು ವೇದಿಕೆಯ ಉದ್ಘಾಟನಾ ಸಮಾರಂಭ ಜರಗಿತು.

ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ದಾನಿಗಳು ಎಚ್.ಎಸ್. ಶೆಟ್ಟಿ ಎಂದೇ ಜನಪ್ರಿಯರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಲೆಯ ಅಭಿವೃದ್ಧಿಗೆ  ಒಂದು ಕೋಟಿ ಮೊತ್ತದ ಚೆಕ್‌ನ್ನು ಹಸ್ತಾಂತರಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ದೇಶವನ್ನು ಮುನ್ನಡೆಸುವ ಅನೇಕ ಮಹಾನಾಯಕರು ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ  ಓದಿದ್ದು ತಮ್ಮ ಮಾತೃ ಭಾಷೆಯ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅದಮ್ಯ, ಆತ್ಮವಿಶ್ವಾಸವನ್ನು ತುಂಬುವ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮೈಗೂಡಿಸುವ ಕೇಂದ್ರಗಳಾಗಿವೆ.

ಹಲವು ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಿಸಿರುವ ನಿಟ್ಟೂರು ವಿದ್ಯಾಸಂಸ್ಥೆಗೆ ಧನಸಹಾಯ ಮಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತು ಸಂಸ್ಕೃತಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್  ಸರಕಾರಿ ಮತು ಅನುದಾನಿತ ಶಾಲೆಗಳ ಏಳಿಗೆಗಾಗಿ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು,  ಈ ಹಿನ್ನಲೆಯಲ್ಲಿ ಎಚ್.ಎಸ್. ಶೆಟ್ಟಿಯವರಂತಹ ಮಹಾದಾನಿಗಳ ನೆರವು ಶ್ಲಾಘನೀಯ, ಈ ಧನಸಹಾಯ ಪಡೆದ ಜಿಲ್ಲೆಯ ಮಾದರಿ ವಿದ್ಯಾಸಂಸ್ಥೆಯಾದ ನಿಟ್ಟೂರು ಪ್ರೌಢಶಾಲೆ  ಭವಿಷ್ಯ ಉಜ್ವಲವಾಗಲಿ ಎಂದರು.

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಪ್ರಸ್ತಾವಿಕ ಮಾತುಗಳಾನ್ನಾಡುತ್ತಾ ದಾನಿ ಮತ್ತು ವಿದ್ಯಾಭಿಮಾನಿಗಳಾದ ಶ್ರೀ ಎಚ್.ಎಸ್. ಶೆಟ್ಟಿ ಯವರ ಕೊಡುಗೆಯನ್ನು ಸ್ಮರಿಸುತ್ತಾ ಶಾಲೆಯ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯವಾಗಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಧನಸಹಾಯ  ಪೂರಕವಾಗಲಿದೆ ಎನ್ನುತ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಶ್ರೀ ಎಚ್.ಎಸ್. ಶೆಟ್ಟಿಯವರನ್ನು ಬೆಳ್ಳಿಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ವಿಜ್ಞಾನಿಗಳು ಮತ್ತು ಉದ್ಯಮ ತಜ್ಞರಾದ ಡಾ| ರಾಜಾ ವಿಜಯಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿಶಾಲಾ ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಗ್ಯಾಸ್ ಸಂಪರ್ಕವಿಲ್ಲದ 12 ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಭಟ್‌ ಸ್ವಾಗತಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಅನಸೂಯ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದ ಜಟಾಯು ಮೋಕ್ಷ ಯಕ್ಷರೂಪಕ ಪ್ರದರ್ಶನಗೊಂಡಿತು.

ವಿದ್ಯಾಪೋಷಕ್ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿದ್ಯಾರ್ಥಿನಿ ರಶ್ಮಿತಾ ಇವಳಿಗೆ ಜನ್ಸಾಲೆಯಲ್ಲಿ ಡಾ.ರಾಜಾ ವಿಜಯಕುಮಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯ ಪ್ರವೇಶೋತ್ಸವ ಇಂದು (01-08-2022) ಜರಗಿತು.

ಡಾ. ರಾಜಾ ವಿಜಯಕುಮಾರ್ ಮತ್ತು ಶ್ರೀಮತಿ ರಜನಿ ಭಾರತೀ ಮಂಗಲಂ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ ಎಚ್.ಎಸ್. ಶೆಟ್ಟಿ ಇವರು ಯಕ್ಷಗಾನ ಕಲಾರಂಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರಕಾರೇತರ ಸಂಘಟನೆಯೆಂದು ಶ್ಲಾಘಿಸಿದರು.

ಡಾ. ವಿಜಯಕುಮಾರ್‌ ಅವರು ವೈದ್ಯಕೀಯ ವಿದ್ಯಾಭ್ಯಾಸ ಮಾಡಲಿಚ್ಛಿಸಿದ ರಶ್ಮಿತಾಳ ಕಲಿಕೆಗೆ ಪೂರ್ತಿ ಪ್ರಾಯೋಜಕತ್ವ ವಹಿಸುವುದಾಗಿ ಭರವಸೆ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಮ್.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಕೊನೆಯಲ್ಲಿ ಪ್ರೊ.ನಾರಾಯಣ ಎಮ್. ಹೆಗಡೆ ವಂದಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್,  ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ಶ್ರೀ ಎಚ್. ನಾಗರಾಜ್ ಶೆಟ್ಟಿ, ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಮುಖ್ಯ ಶಿಕ್ಷಕ ಉದಯ ಗಾಂವ್ಕರ್, ಪರಶುರಾಮ್, ಉದಯ ಬಳೆಗಾರ್, ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಮತ್ತು  ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯರಾದ ಪ್ರೊ.ಕೆ.ಸದಾಶಿವ ರಾವ್, ಎಚ್.ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ದಿನೇಶ್ ಪಿ.ಪೂಜಾರಿ. ಅಜಿತ್‌ಕುಮಾರ್, ಅನಂತರಾಜ ಉಪಾಧ್ಯ, ಕಿಶೋರ್ ಸಿ.ಉದ್ಯಾವರ, ಕೃಷ್ಣಮುರ್ತಿ ಭಟ್, ರಾಜೀವಿ ಭಾಗವಹಿಸಿದ್ದರು. ಇದು ಸಂಸ್ಥೆ ನಿರ್ಮಿಸಿದ 33ನೇ ಮನೆಯಾಗಿದ್ದು, ಇನ್ನೂ ನಾಲ್ಕು ಮನೆಗಳ ಹಸ್ತಾಂತರ ಸದ್ಯದಲ್ಲೇ ನಡೆಯಲಿದೆ.

ಶ್ರೇಷ್ಠ ಕಲಾಸಂಘಟಕರಲ್ಲೊಬ್ಬರು – ಪದ್ಮನಾಭ ಕಟೀಲು 

ಮುಂಬಯಿಯಂತಹಾ ದೈತ್ಯ ನಗರಗಳಲ್ಲಿ, ಸಾಗರದಾಚೆಗಿನ ದೂರದ ದೇಶಗಳಲ್ಲಿ ಕಲಾ ಸಂಘಟನೆ ಅಷ್ಟು ಸುಲಭವಲ್ಲ. ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸುವುದು ಎಂದರೆ ಅದೊಂದು ಸಾಹಸವೇ ಹೌದು. ಗುರಿಯು ಸುಂದರವಾದರೂ ಆ ಗುರಿಯನ್ನು ತಲುಪಲು ಕ್ರಮಿಸಬೇಕಾಗಿರುವ ದಾರಿಯು ಅತಿ ದುರ್ಗಮವಾದುದು. ದಾರಿಯ ಬಗ್ಗೆ ಗಮನಹರಿಸದೆ ಸಾಹಸದಿಂದ ಅಡೆತಡೆಗಳನ್ನು ನಿವಾರಿಸಿ, ಕಷ್ಟನಷ್ಟಗಳನ್ನು ಗಣನೆಗೆ ತಾರದೆ ಛಲದಿಂದ ಸಾಗಿದಾಗ ಮಾತ್ರ ಗುರಿಯನ್ನು ತಲುಪಬಹುದು.

ಕಲ್ಲು, ಮಣ್ಣು ಕೊಳೆಗಳನ್ನೆಲ್ಲಾ ಕೊರೆದು ಭೂಮಿಯನ್ನು ತೋಡಿದಾಗ ಮಾತ್ರ ಅಲ್ಲವೇ ಸಿಹಿನೀರು ಸಿಗೋದು. ದೂರದ ನಗರಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಬೇಕಿದ್ದರೆ ಸಂಘಟನಾ ಕೌಶಲ್ಯವನ್ನು ಅದ್ಭುತವಾಗಿ ಹೊಂದಿರಬೇಕು. ನಾಯಕತ್ವದ ಗುಣವು ಬೇಕು. ಆ ಊರಿನ ಸಂಪೂರ್ಣ ಮಾಹಿತಿಯಿರಬೇಕು. ಯೋಚನೆ, ಯೋಜನೆಗಳೆಲ್ಲಾ ಬಲಿಷ್ಠವಾಗಿರಬೇಕು. ಸಂಘಟನಾ ಚಾತುರ್ಯವನ್ನು ಹೊಂದಿ ಸ್ವಯಂ ಪ್ರತಿಭಾವಂತನಾಗಿದ್ದರೆ ಸಾಲದು. ಶ್ರೀ ದೇವರ ಅನುಗ್ರಹವೂ ಬೇಕು.

ಪ್ರತಿಭೆಗೆ ದೇವರ ಅನುಗ್ರಹವೂ ಸೇರಿದಾಗ ಮುಟ್ಟಿದ್ದೆಲ್ಲಾ ಬಂಗಾರವಾಗುವುದು. ಇಲ್ಲವಾದರೆ ಸಂಘಟಕನು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿಯು ಒದಗುವ ಸಾಧ್ಯತೆಗಳಿವೆ. ಏನೇ ಅಡೆ ತಡೆಗಳಿರಲಿ, ಕಷ್ಟ ನಷ್ಟಗಳಿರಲಿ, ನೋವು ನಲಿವುಗಳಿರಲಿ, ತಾವು ಎಲ್ಲಿದ್ದರೂ  ಅತೀವವಾಗಿ ಪ್ರೀತಿಸುವ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕಲಾವಿದರನ್ನು ಕರೆಸಿ, ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿ, ಪ್ರೇಕ್ಷಕರು ಹೊಗಳಿದಾಗ ಸಂಘಟಕನಿಗೆ ಆಗುವ ಆನಂದವು ಅವರ್ಣನೀಯವಾದುದು.

ಹೀಗೆ ದೂರ ಊರುಗಳಲ್ಲಿದ್ದುಕೊಂಡು ಕಲಾ ಸಂಘಟನೆಯನ್ನು ಹುಟ್ಟುಹಾಕಿ ಕಲಾವಿದರನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸುವ ಅನೇಕ ಸಂಘಟಕರನ್ನು ನಾವು ಕಾಣಬಹುದು. ಕಲಾಮಾತೆಯ ಸೇವೆಯನ್ನು ಮಾಡುವ ಅಂತ ಶ್ರೇಷ್ಠ ಸಂಘಟಕರಲ್ಲಿ ಶ್ರೀ ಪದ್ಮನಾಭ ಕಟೀಲು ಅವರನ್ನು ನಾವು ಗುರುತಿಸಬಹುದು. ಇವರು ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿ. ಕೊಲ್ಲಿ ರಾಜ್ಯದಲ್ಲಿ, ಮುಂಬೈ ನಗರದಲ್ಲಿ ಯಕ್ಷಗಾನ ಕಲಾಸಂಘಟಕರಾಗಿ ಪ್ರಸಿದ್ಧರು.  

ಶ್ರೇಷ್ಠ ಸಂಘಟಕ ಕಟೀಲು ಶ್ರೀ ಪದ್ಮನಾಭ ಅವರ ಹುಟ್ಟೂರು ಮಂಗಳೂರು ತಾಲೂಕು ಎಕ್ಕಾರು ಗ್ರಾಮದ ಮಚ್ಚಾರು ಪಡೀಲು ಎಂಬಲ್ಲಿ. 1975 ಜೂನ್ 1ರಂದು ಶ್ರೀ ಚಂದು ಪೂಜಾರಿ ಮತ್ತು ಶ್ರೀಮತಿ ಶ್ಯಾಮಲಾ ಪೂಜಾರಿ ದಂಪತಿಗಳ ಪುತ್ರನಾಗಿ ಜನನ. ಎಳವೆಯಲ್ಲೇ ಯಕ್ಷಗಾನಾಸಕ್ತಿ ತೀವ್ರವಾಗಿತ್ತು. ಕಟೀಲು, ಕರ್ನಾಟಕ, ಧರ್ಮಸ್ಥಳ ಮೊದಲಾದ ಮೇಳಗಳ ಪ್ರದರ್ಶನಗಳನ್ನು ನೋಡುತ್ತಾ ಕಲಾಸಕ್ತಿಯು ಬೆಳೆಯತೊಡಗಿತ್ತು.

ಇವರು ಓದಿದ್ದು ಹತ್ತನೇ ತರಗತಿ ವರೆಗೆ. ಶ್ರೀ ಕ್ಷೇತ್ರ ಕಟೀಲಿನ ಶಾಲೆಯಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರುಗಳಾದ ಪುಚ್ಛೆಕೆರೆ ಶ್ರೀ ಕೃಷ್ಣ ಭಟ್ ಮತ್ತು ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರು (ವಿದ್ವಾಂಸರು ಮತ್ತು ಖ್ಯಾತ ತಾಳಮದ್ದಳೆ ಅರ್ಥಧಾರಿ) ಶ್ರೀ ಪದ್ಮನಾಭ ಅವರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಕಾರಣರು. ಪುಚ್ಛೆಕೆರೆ ಶ್ರೀ ಕೃಷ್ಣ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತು ಶಾಲಾ ಪ್ರದರ್ಶನದಲ್ಲಿ ಭಕ್ತ ಚಂದ್ರಹಾಸ ಪ್ರಸಂಗದಲ್ಲಿ ದೂತ ಮತ್ತು ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತನ ಪಾತ್ರವನ್ನು ನಿರ್ವಹಿಸಿದ್ದರು. 

ಶ್ರೀ ಪದ್ಮನಾಭ ಕಟೀಲು ಅವರ ತೀರ್ಥರೂಪರು ಕೃಷಿಕರು. ಮನೆಯಲ್ಲಿ ಬಡತನವಿತ್ತು. ವಿದ್ಯಾರ್ಜನೆಯನ್ನು ನಿಲ್ಲಿಸಿ ಬದುಕಿಗಾಗಿ ಮುಂಬೈ ನಗರವನ್ನು ಸೇರಿಕೊಂಡಿದ್ದರು. ಪದ್ಮನಾಭ ಅವರು ಮುಂಬೈಗೆ ಹೋದದ್ದು ಚಿಕ್ಕಪ್ಪ ಶ್ರೀ ವಾಮಯ್ಯ ಅಮೀನ್ ಅವರೊಂದಿಗೆ. ಅಲ್ಲಿ ಬೆಸ್ಟ್ ಕಂಪೆನಿಯ ಕ್ಯಾಂಟೀನಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಜತೆಗೆ ರಾತ್ರಿ ಕನ್ನಡ ಭವನ ಕಾಲೇಜು ಸೇರಿ ಪಿಯುಸಿ ಶಿಕ್ಷಣವನ್ನು ಪೂರೈಸಿದರು.

ಮಳೆಗಾಲದಲ್ಲಿ ಮುಂಬೈ ನಗರದಲ್ಲಿ ನಡೆಯುತ್ತಿದ್ದ ಕರ್ನಾಟಕ, ಸುರತ್ಕಲ್, ಕದ್ರಿ, ಪೆರ್ಡೂರು, ಸಾಲಿಗ್ರಾಮ, ಬಚ್ಚಗಾರು, ಶಿರಸಿ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಕಲಾವಿದರ ಪರಿಚಯವಾಗಲು ಇದು ಕಾರಣವಾಯಿತು. ಮುಂಬೈಯ ಯಕ್ಷಗಾನ ಸಂಘಟಕರ ಪರಿಚಯವೂ ಆಗಿತ್ತು. ಕಲಾವಿದನಾಗುವ ಬದಲು ತಾನೊಬ್ಬ ಉತ್ತಮ ಯಕ್ಷಗಾನ ಸಂಘಟಕನಾಗಬೇಕು ಎಂಬ ಬಯಕೆಯು ಶ್ರೀ ಪದ್ಮನಾಭರಿಗೆ ಹುಟ್ಟಿಕೊಂಡಿತು.

1995ರಲ್ಲಿ ವಾಲ್ಪಾಡಿ ಶ್ರೀ ಸದಾಶಿವ ಸಾಲ್ಯಾನ್ ರ ಸಾಲಿಗ್ರಾಮ ಮೇಳದ ಕಾಂಟ್ರಾಕ್ಟ್ ನ್ನು ಪಡೆದು ರತಿರೇಖಾ ಎಂಬ ಪ್ರಸಂಗವನ್ನು ಆಯೋಜಿಸಿದರು. ಇದು ಕಿಕ್ಕಿರಿದ ಜನಸಂದಣಿಯಿಂದ ಪ್ರದರ್ಶಿಸಲ್ಪಟ್ಟಿತು. ಬಳಿಕ ಮುಂಬಯಿಯ ಯಶಸ್ವೀ ಸಂಘಟಕರಾದ ಶ್ರೀ ಪ್ರಕಾಶ್ ಎಂ.ಶೆಟ್ಟರ ಸಹಾಯವೂ ದೊರಕಿತ್ತು. ಅತ್ಯುತ್ತಮ ಸಂಘಟಕರಾದ ಶ್ರೀ ಪ್ರಕಾಶ್ ಶೆಟ್ರು ಶ್ರೀ ಪದ್ಮನಾಭ ಅವರನ್ನು ಪ್ರೋತ್ಸಾಹಿಸಿ ಪ್ರದರ್ಶನಗಳನ್ನು ಏರ್ಪಡಿಸಲು ಸಹಾಯ ಮಾಡಿದ್ದರು. ಅವರ ಒಡನಾಟದಲ್ಲಿ ಉತ್ಸಾಹ, ಧೈರ್ಯವೂ ಬಂದಿತ್ತು.

ಕರ್ನಾಟಕ, ಕದ್ರಿ, ಸಾಲಿಗ್ರಾಮ ಪೆರ್ಡೂರು, ಸುರತ್ಕಲ್, ಕುಂಟಾರು, ಶಿರಸಿ, ಮಂಗಳಾದೇವಿ ಮೇಳಗಳ ಪ್ರದರ್ಶನಗಳನ್ನು ಏರ್ಪಡಿಸಿದರು. ಏಳು ಬೀಳುಗಳೊಂದಿಗೆ, ಕಷ್ಟ ನಷ್ಟಗಳೊಂದಿಗೆ, ಸುಮಾರು 150ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಆಯೋಜಿಸಿದ ಕೀರ್ತಿ ಶ್ರೀ ಪದ್ಮನಾಭರದ್ದು. ಶ್ರೀ ಪದ್ಮನಾಭ ಕಟೀಲು ಅವರು ಕಟೀಲು ಅಮ್ಮನವರ ಭಕ್ತ. ದೇವಳದ ಅಭಿವೃದ್ಧಿಗೆ ಕಾರಣರಾಗಿದ್ದ ಕೀರ್ತಿಶೇಷ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ ಎಂಬ ಸಂಸ್ಥೆಯನ್ನು 2002ರಲ್ಲಿ ಹುಟ್ಟುಹಾಕಿದ್ದರು. ಎಕ್ಕಾರು ಶ್ರೀ ಹರಿದಾಸ ಉಡುಪರ ಮುಖಾಂತರ ಈ ಸಂಸ್ಥೆಯ ರಚನೆಯಾಗಿತ್ತು, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರ ಸಂಪೂರ್ಣ ಆಶೀರ್ವಾದವೂ ದೊರೆತಿತ್ತು.

ಈ ಸಂಸ್ಥೆಯ ಮೊದಲ ಕಾರ್ಯಕ್ರಮ ಮುಂಬೈಯ ಖ್ಯಾತ ಉದ್ಯಮಿ ಐಕಳ ಶ್ರೀ ಹರೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಪ್ರತಿವರ್ಷವೂ ಉಪಸ್ಥಿತರಿರುತ್ತಾರೆ. ಪ್ರತಿ ವರ್ಷವೂ ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುತ್ತಾರೆ. 2017ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗಡೆ ಅವರು ಭಾಗವಹಿಸಿ ಆಶೀರ್ವದಿಸಿದ್ದರು. ಪೇಜಾವರ, ಅದಮಾರು ಶ್ರೀಗಳೂ ಚಿತ್ತೈಸಿ ಆಶೀರ್ವದಿಸಿದ್ದರು.

ಮುಂಬೈಯ ಪ್ರತಿಷ್ಠಿತ ಉದ್ಯಮಿಗಳ ಉಪಸ್ಥಿತಿಯಲ್ಲಿ ಪ್ರತಿ ವರ್ಷವೂ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿಯ ಅಡಿಯಲ್ಲಿ ಯಕ್ಷಗಾನ ಪ್ರದರ್ಶನ, ಕಲಾವಿದರಿಗೆ ಮತ್ತು ನೇಪಥ್ಯ ಕಲಾವಿದರಿಗೆ ಸನ್ಮಾನಗಳು ನಡೆಯುತ್ತವೆ. ತೆಂಕು ಬಡಗಿನ ಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಸಂಸ್ಥೆಯಡಿ ಶ್ರೀ ಪದ್ಮನಾಭ ಕಟೀಲು 220ಕ್ಕೂ ಮಿಕ್ಕಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಅಪಾರ ಸಂಖ್ಯೆಯ ಪ್ರೇಕ್ಷಕರು ಈ ಅದ್ದೂರಿಯ ಪ್ರದರ್ಶನವನ್ನು ನೋಡಿ ಆನಂದಿಸುತ್ತಾರೆ. ಶ್ರೀ ಕ್ಷೇತ್ರ ಕಟೀಲಿನ ಭಕ್ತರೂ, ಮುಂಬೈ ಕಲಾಭಿಮಾನಿಗಳೂ ವಿಶೇಷ ಭಕ್ತಿ ಉತ್ಸಾಹಗಳಿಂದ ನೋಡಿ ಆನಂದಿಸುವ ಪ್ರದರ್ಶನವಿದು.

ಇದನ್ನು ಯಶಸ್ವಿಯಾಗಿ ನಡೆಸುವಲ್ಲಿ ಶ್ರೀ ಪದ್ಮನಾಭ ಅವರಿಗೆ ಮುಂಬಯಿ ನಗರದ ಉದ್ಯಮಿಗಳ ಮತ್ತು ಶ್ರೀ ಕ್ಷೇತ್ರ ಕಟೀಲಿನ ಭಕ್ತರ, ಕಲಾಭಿಮಾನಿಗಳ ಪ್ರೋತ್ಸಾಹ ಸಹಕಾರಗಳೂ ದೊರೆತಿದೆ. 2005ರಿಂದ ತೊಡಗಿ ಶ್ರೀ ಪದ್ಮನಾಭ ಅವರು ಕಟೀಲು ಮೇಳದ ಬಯಲಾಟವನ್ನು ಹರಕೆಯ ರೂಪದಲ್ಲಿ ಆಡಿಸುತ್ತಿದ್ದಾರೆ. ಪ್ರತೀ ವರ್ಷವೂ ಕಲಾವಿದರನ್ನು ಸನ್ಮಾನಿಸಿ ಗೌರವಿಸುತ್ತಾರೆ. ಕಳೆದ 9 ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಬಯಲಾಟವನ್ನೂ ನಡೆಸಿ ಕಲಾವಿದರನ್ನು ಗೌರವಿಸುತ್ತಾ ಬಂದಿರುತ್ತಾರೆ. 

2010ರಲ್ಲಿ ಶ್ರೀ ಪದ್ಮನಾಭ ಕಟೀಲು ಅವರು ಉದ್ಯೋಗ ನಿಮಿತ್ತ ದುಬಾಯಿಗೆ ತೆರಳಿದ್ದರು. ಅಲ್ಲಿನ ಊರ ಕಲಾಭಿಮಾನಿಗಳು ಮತ್ತು ಖ್ಯಾತ ಉದ್ಯಮಿಗಳ ಸಂಪರ್ಕ, ಒಡನಾಟವು ದೊರೆತಿತ್ತು. ಅವರ ಸಹಕಾರ, ಪ್ರೋತ್ಸಾಹದಿಂದ ಕೀರ್ತಿಶೇಷ ಶ್ರೀ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಾಗಿತ್ತು. ಆರಂಭದಿಂದ ಇಲ್ಲಿಯ ವರೆಗೂ ಶ್ರೀ ಪದ್ಮನಾಭ ಕಟೀಲು ಅವರು ಸದ್ರಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಜಾತ್ರೋತ್ಸವದ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸುತ್ತಿದ್ದಾರೆ. ಈ ಎಲ್ಲಾ ಕಲಾ ಚಟುವಟಿಕೆಗಳಿಗೂ ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳ ಆಶೀರ್ವಾದ, ಸಹಕಾರ ಶ್ರೀ ಪದ್ಮನಾಭ ಅವರಿಗಿದೆ. ಇವರು ಕೃಷಿಯಲ್ಲಿಯೂ ಆಸಕ್ತರು. ಶ್ರೀ ಪದ್ಮನಾಭ ಕಟೀಲು ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅವರ ನೇತೃತ್ವದಲ್ಲಿ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರ ಮನೋಕಾಮನೆಗಳನ್ನೆಲ್ಲಾ ಅನುಗ್ರಹಿಸಲಿ. ಅವರಿಗೆ ಸಕಲ ಸೌಭಾಗ್ಯಗಳೂ ವೃದ್ಧಿಸಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಹೊಸ ವಿನ್ಯಾಸದ ಕೆಂಪು ಉಡುಗೆಯಲ್ಲಿ  ರ‍್ಯಾಂಪ್ ವಾಕ್ ಮಾಡಿ ಆಕರ್ಷಕ ನೋಟ ಬೀರಿದ ರಶ್ಮಿಕಾ ಮಂದಣ್ಣ – ಮಾರುಹೋದ ವೀಕ್ಷಕರಿಂದ ಕಮೆಂಟ್ ಗಳ ಸುರಿಮಳೆ 

ರಶ್ಮಿಕಾ ಮಂದಣ್ಣ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಇಂಡಿಯಾ ಕಲ್ಚರ್ ವೀಕ್ (ICW) 2022 ರಲ್ಲಿ ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈವೆಂಟ್‌ನಲ್ಲಿ ಫ್ಯಾಷನ್ ಡಿಸೈನರ್ ವರುಣ್ ಬಹ್ಲ್‌ಗೆ ಶೋಸ್ಟಾಪರ್ ಆಗಿ ತನ್ನ ಅನುಭವವನ್ನು ವಿವರಿಸುವ ನಟಿ ತನ್ನ ಸುಂದರವಾದ ಕೆಂಪು ಲೆಹೆಂಗಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಅವರು ದೆಹಲಿಯಲ್ಲಿ ಮೊದಲ ಬಾರಿಗೆ ಮತ್ತು ICW ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು, ರಶ್ಮಿಕಾ ಮಂದಣ್ಣ ಅವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ “

“ದೆಹಲಿಯಲ್ಲಿ ಮೊದಲ ಬಾರಿಗೆ … ಫ್ಯಾಷನ್ ವಾರದಲ್ಲಿ ಮೊದಲನೆಯದು! ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳಿದ್ದವು … ನಾನು ಪ್ರೊ ಮಾಡೆಲ್‌ನಂತೆ ನಡೆಯಲು ಪ್ರಯತ್ನಿಸಿದೆ … ಅದು ಸ್ಪಷ್ಟವಾಗಿ ಕೆಲಸ ಮಾಡಲಿಲ್ಲ. ಕೇವಲ ನಗುತ್ತಿರುವ ನನ್ನ ವ್ಯಕ್ತಿತ್ವ ಮತ್ತು ಉತ್ತಮ ಸಮಯವನ್ನು ತೆಗೆದುಕೊಂಡಿದ್ದೇನೆ.. ಆದರೆ ನಾನು ಖಂಡಿತವಾಗಿಯೂ blaaaaaastttt ಆಗಿದ್ದೇನೆ! ನನ್ನ ಮೊದಲ ನಡಿಗೆಗೆ ಧನ್ಯವಾದಗಳು ವರುಣ್ ಬಹ್ಲ್! ಇದು ಯಾವಾಗಲೂ ವಿಶೇಷವಾಗಿ ಉಳಿಯುತ್ತದೆ.

ನಾನು ನಿಮ್ಮ ಕಲೆಯನ್ನು ಪ್ರೀತಿಸುತ್ತೇನೆ ಮತ್ತು ನಾನು ನಿಮ್ಮ ವೈಬ್ ಅನ್ನು ಪ್ರೀತಿಸುತ್ತೇನೆ. ಇನ್ನೂ ಹೆಚ್ಚಿನದನ್ನು ಮಾಡಲು ಚೀರ್ಸ್ ಒಟ್ಟಿಗೆ ಕೂಲ್ ಸ್ಟಫ್. ಫ್ಯಾಶನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (ಎಫ್‌ಡಿಸಿಐ) ಗೆ ಧನ್ಯವಾದಗಳು ಮತ್ತು ಇದನ್ನು ತುಂಬಾ ಮೋಜು ಮಾಡಿದ್ದಕ್ಕಾಗಿ ತಂಡಕ್ಕೆ ಧನ್ಯವಾದಗಳು!” ಎಂದು ಬರೆದಿದ್ದಾರೆ. ನಟಿ ಸಂಪೂರ್ಣವಾಗಿ ಅಲಂಕೃತವಾದ ಕಾರ್ಸೆಟ್ನೊಂದಿಗೆ ಕೆಂಪು ಲೆಹೆಂಗಾವನ್ನು ಧರಿಸಿದ್ದರು. ಇದು ವರುಣ್‌ನ “ಹೊಸ ಎಲೆ” ಸಂಗ್ರಹದ ಸಸ್ಯ ಮತ್ತು ಪ್ರಾಣಿಗಳ ಸ್ಫೂರ್ತಿಯನ್ನು ಎತ್ತಿ ತೋರಿಸುವ “ಮಿನುಗುಗಳು, ಕಟ್ ಡಾನಾ, ಮಣಿಗಳು ಮತ್ತು ಹರಳುಗಳಂತಹ ಅಪ್ಲಿಕೇಶನ್‌ಗಳನ್ನು ಹೊಂದಿತ್ತು”.

26 ವರ್ಷದ ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಸಹ-ನಟನಾಗಿ ಮಿಷನ್ ಮಜ್ನು ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರೊಂದಿಗೆ ಗುಡ್‌ಬೈನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಕಾಸ್ ಬಹ್ಲ್ ನಿರ್ದೇಶನದ, ಗುಡ್‌ಬೈ ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ. ನಟಿ ರಶ್ಮಿಕಾ ಅವರು ಪುಷ್ಪ 2: ದಿ ರೂಲ್ ಮತ್ತು ಸಂದೀಪ್ ರೆಡ್ಡಿ ವಂಗಾಸ್ ಅನಿಮಲ್ ಸೇರಿದಂತೆ ಇತರ ಚಿತ್ರಗಳನ್ನು ತನ್ನ ಕೈಯಲ್ಲಿ ಹೊಂದಿದ್ದಾರೆ.

ಬಾಲಕನ ಜೀವನದ ಕೊನೆಯ ಆಸೆಯಂತೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿದ ಶಾಲೆಯ ಎಲ್ಲ ಸ್ನೇಹಿತರು: ಮರುದಿನವೇ ಬಾರದ ಲೋಕಕ್ಕೆ ಪಯಣಿಸಿದ ಬಾಲಕ – ಕೊಪ್ಪಳದಲ್ಲೊಂದು ಮನ ಕಲಕುವ ಘಟನೆ 

ಕೆಲವೊಮ್ಮೆ ಜೀವನ ಎನ್ನುವುದು ಎಷ್ಟು ದುಃಖದಾಯಕವಾದದ್ದು ಎಂದು ಕೆಲವೊಂದು ಮನಕಲಕುವ ಘಟನೆಗಳನ್ನು ನೋಡಿದಾಗ ಅರಿವಾಗುತ್ತದೆ. ಸುಖದ ಹಿಂದೆಯೇ ದುಃಖವು ಹೊಂಚುಹಾಕಿ ಕಾದು ಕುಳಿತಿರುತ್ತದೆ.

ಕೊಪ್ಪಳದಲ್ಲೊಂದು ಇಂತಹುದೇ ಕರುಣಾಜನಕ ಘಟನೆ ನಡೆದಿದೆ. ಮರಣವು ಸನ್ನಿಹಿತವಾಗುವ ಕಾಲಕ್ಕೆ ಬಾಲಕನು ತನ್ನ ಸ್ನೇಹಿತರಿಂದ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಳ್ಳಲು ಬಯಸಿದ.  ಕಟ್ಟಿಸಿಕೊಂಡ ಮರುದಿನವೇ ಕೊನೆಯುಸಿರೆಳೆದ. 

ಮೃತ ಹುಡುಗನನ್ನು ಸುಹಾಸ್ ಸೌದ್ರಿ ಎಂದು ಗುರುತಿಸಲಾಗಿದೆ. ಕಾರಟಗಿ ಪಟ್ಟಣ ನಿವಾಸಿ ಸುಹಾಸ್ ಸೌದ್ರಿ ಸಣ್ಣ ಪ್ರಾಯದಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ.

ಆತನು ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತನ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ತೀವ್ರ ಅನಾರೋಗ್ಯದ ನಡುವೆಯೂ ಸುಹಾಸ್ ತನ್ನ ಶಾಲೆ ಮತ್ತು ಸ್ನೇಹಿತರನ್ನು ನೋಡಲು ಬಯಸಿದ. ತನ್ನ ಮಗನ ಕೊನೆ ಆಸೆ ಈಡೇರಿಸಲು ತಂದೆ ತಾಯಿ ಶಾಲೆಗೆ ಕರೆದುಕೊಂಡು ಹೋದರು.   

ಶಾಲಾ ಆವರಣದಲ್ಲಿ ಕಾರಿನಲ್ಲಿ ಚಿತಾಜನಕ ಸ್ಥಿತಿಯಲ್ಲಿದ್ದ  ಆತನನ್ನು ನೋಡಿ ಎಲ್ಲ ಮಕ್ಕಳು ಶಿಕ್ಷಕರು ಬಿಕ್ಕಿ ಬಿಕ್ಕಿ ಅತ್ತರು. ಅಳುತ್ತಲೇ ಎಲ್ಲರೂ ಫ್ರೆಂಡ್‍ಶಿಪ್ ಬೆಲ್ಟ್ ಕಟ್ಟಿದ್ದರು. ಆದರೆ ಮೊನ್ನೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಂಡ ಆತ ನಿನ್ನ ಮೃತಪಟ್ಟಿದ್ದಾನೆ. 

ಕಲೋತ್ಸವ – ‘ಭಾಮ ಕಲಾಪ’ ಯಕ್ಷಗಾನ ಪ್ರದರ್ಶನ

ರಂಗಭೂಮಿ,ಯಕ್ಷಗಾನ ಹಾಗೂ ಚಲನ ಚಿತ್ರ ಕಲಾವಿದರು ಹಾಗೂ ಕಲಾ ಪೋಷಕರೂ ಆದ ದೇವರಾಜ ಕರಬರವರ ನಿರ್ದೇಕಶಕತ್ವದ ಕರಬ ಪ್ರತಿಷ್ಠಾನ ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಅಂಗವಾಗಿ ಕಲೋತ್ಸವ-2022 ಶೀರ್ಷಿಕೆ ಅಡಿಯಲ್ಲಿ ಹಲವಾರು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸಿದ್ದು

ಈ ಸಲುವಾಗಿ ಇದೇ ಬರುವ ಶನಿವಾರ ದಿನಾಂಕ 06-08-2022 ರಂದು ಸಂಜೆ 5-30 ಕ್ಕೆ ಬೆಂಗಳೂರಿನ ಉಲ್ಲಾಳ ಉಪನಗರ ಸಮೀಪದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ಬ್ಲಾಕ್ ನಲ್ಲಿರುವ ಕಲಾಗುಡಿಯಲ್ಲಿ ಡಾ.ರಾಧಾಕೃಷ್ಣ ಉರಾಳರ ನಿರ್ದೇಕಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ನ ಕಲಾವಿದರಿಂದ

‘ಭಾಮ ಕಲಾಪ’ ಎಂಬ ಯಕ್ಷಗಾನ ಪ್ರದರ್ಶನ ಹಮ್ಮಿ ಕೊಂಡಿದ್ದು ಈ ಒಂದು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿದೆ.


ಬೆಂಗಳೂರಿನ ರಾಮಸಂದ್ರ ಶಾಖೆಯ ಕರ್ನಾಟಕ ಬ್ಯಾಂಕ್ ನ ಮ್ಯಾನೇಜರ್ ಶ್ರೀ ರಾಘವೇಂದ್ರ ಕಾಮತ್,ಸಮಾಜ ಸೇವಕರಾದ ಶ್ರೀ ಪದ್ಮನಾಭ ಭರಣಿ ಹಾಗೂ ಮಾಜಿ ನಗರಪಾಲಿಕೆ ಸದಸ್ಯರು ಸಮಾಜ ಸೇವಕರು ಆದ ಶ್ರೀ ಮಂಜುನಾಥ ಸಿ.ಎಮ್ ಹಾಗೂ ಕರಬ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ದೇವರಾಜ ಕರಬರವರು ಮುಖ್ಯ ಅತಿಥಿಗಳಾಗಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9886066732, 9448510582 ಸಂಪರ್ಕಿಸ ಬಹುದು.

ಒಬ್ಬಂಟಿಯಾಗಿದ್ದ 17 ವರ್ಷದ ಬಾಲಕಿಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ನಡೆಸಿದ ಪೊಲೀಸ್ – ಪೋಕ್ಸೋ ಪ್ರಕರಣದಲ್ಲಿ ಪೊಲೀಸ್ ಪೇದೆ ಬಂಧನ 

ಬೆಂಗಳೂರಿನಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ನಗರದಿಂದ ಹೊರಡುವ ಹಿಂದಿನ ರಾತ್ರಿ ಪೊಲೀಸ್ ಪೇದೆಯಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆದಿರುವುದನ್ನು ವಿಚಾರಣೆ ವೇಳೆ ಅಪ್ರಾಪ್ತ ಬಾಲಕಿ ಬಹಿರಂಗಪಡಿಸಿದ್ದಾಳೆ. ನಂತರ ಪೊಲೀಸ್ ಪೇದೆಯನ್ನು ಗುರುತಿಸಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಯಿತು.

25 ವರ್ಷದ ಪೊಲೀಸ್ ಪೇದೆಯೊಬ್ಬರನ್ನು ಕೆ.ಪಿ. ಬೆಂಗಳೂರಿನಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಅಗ್ರಹಾರ ಪೊಲೀಸರು ಬಂಧಿಸಿದರು. ಬಂಧಿತ ಪೇದೆಯನ್ನು ಕರ್ನಾಟಕದ ಬೆಳಗಾವಿ ನಿವಾಸಿ ಪವನ್ ದ್ಯಾವಣ್ಣನವರ್ ಎಂದು ಗುರುತಿಸಲಾಗಿದೆ.

ಅವರು 2021 ರ ಬ್ಯಾಚ್‌ನ ಕಾನ್‌ಸ್ಟೆಬಲ್ ಮತ್ತು ಗೋವಿಂದಪುರ ಪೊಲೀಸ್ ಠಾಣೆಗೆ ಲಗತ್ತಿಸಿದ್ದಾರೆ. ವರದಿಯ ಪ್ರಕಾರ ಪವನ್ ಇನ್ನೂ ಪ್ರೊಬೆಷನರಿ ಅವಧಿಯಲ್ಲಿದ್ದರು. ಪೋಲೀಸರ ಪ್ರಕಾರ, ಅಪ್ರಾಪ್ತ ಬಾಲಕಿ ತಾನು ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ ಹುಡುಗನನ್ನು ಭೇಟಿಯಾಗಲು ತನ್ನ ಮನೆಯಿಂದ ಓಡಿ ಬಂದಿದ್ದಳು. ತಡರಾತ್ರಿ ಆಕೆ ಬೀದಿ ಬದಿಯಲ್ಲಿ ನಿಂತಿದ್ದಾಗ, ಆ ಪ್ರದೇಶದಲ್ಲಿದ್ದ ತನ್ನ ಕೋಣೆಗೆ ಹಿಂತಿರುಗುತ್ತಿದ್ದ ಪವನ್ ಗಮನಿಸಿ, ಆಕೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ.

ತಡರಾತ್ರಿಯಾದ್ದರಿಂದ, ಮರುದಿನ ಬೆಳಿಗ್ಗೆ ಆಕೆಗೆ ಬಸ್ ಹತ್ತಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋದರು ಎಂದು ವರದಿಯಾಗಿದೆ. ನಂತರ ಪವನ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು 500 ರೂ ನೀಡಿ ಮರುದಿನ ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಅವಳನ್ನು ಡ್ರಾಪ್ ಮಾಡಿದ್ದಾನೆ.

ಅಪ್ರಾಪ್ತ ಬಾಲಕಿ ಪಕ್ಕದ ಜಿಲ್ಲೆಗೆ ತಲುಪಿದಳು ಮತ್ತು ಹುಡುಗನನ್ನು (ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ಹುಡುಗ) ಅವನ ಮನೆಯಲ್ಲಿ ಭೇಟಿಯಾದಳು. ಇದರ ನಂತರ, ಹುಡುಗನ ತಂದೆ ಹುಡುಗಿಯ ಬದಲಿಗೆ ಮಾತನಾಡಿದ್ದಾರೆ ಮತ್ತು ಅವಳು ಅಪ್ರಾಪ್ತ ವಯಸ್ಕಳೆಂದು ತಿಳಿದ ನಂತರ, ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ಹುಡುಗಿ ತಮ್ಮ ಮನೆಗೆ ಬಂದಿಳಿದಿದ್ದಾಳೆ ಎಂದು ವರದಿ ಮಾಡಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಅಪ್ರಾಪ್ತ ವಯಸ್ಕ ತಾನು ನಗರದಿಂದ ಹೊರಡುವ ಹಿಂದಿನ ರಾತ್ರಿ ಪೊಲೀಸ್ ಪೇದೆಯಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಬಹಿರಂಗಪಡಿಸಿದಳು.ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸ್ ಪೇದೆಯನ್ನು ಗುರುತಿಸಿ ಪೋಕ್ಸೋ ಕಾಯ್ದೆ, 2012 ರ ಅಡಿಯಲ್ಲಿ ಬಂಧಿಸಲಾಯಿತು ಎಂದು ವರದಿ ಹೇಳಿದೆ.

ವಿಕ್ರಾಂತ್ ರೋಣ ಸಿನಿಮಾದ ಯಶಸ್ಸು – ಕಿಚ್ಚ ಸುದೀಪ್ ಗೆ ಹೊಗಳಿಕೆಯ ಸುರಿಮಳೆಗೈದ ಎಸ್. ಎಸ್ ರಾಜಮೌಳಿ 

ಎಸ್. ಎಸ್ ಎಸ್ ರಾಜಮೌಳಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣವನ್ನು ಹೊಗಳಿದ್ದಾರೆ: ‘ಹೂಡಿಕೆ ಮಾಡಲು ಧೈರ್ಯ ಮತ್ತು ನಂಬಿಕೆ ಬೇಕು ಎಂದು ಹೇಳಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಎಸ್ ಎಸ್ ರಾಜಮೌಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆಯಂತೆ. ಚಿತ್ರವು ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರೂ, ಇದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಮೆಚ್ಚುಗೆಯನ್ನು ಪಡೆದಿದೆ.

ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿ, “ವಿಕ್ರಾಂತ್ ರೋಣದ ಯಶಸ್ಸಿಗೆ @KicchaSudeep ಅವರಿಗೆ ಅಭಿನಂದನೆಗಳು. ಅಂತಹ ಸಾಲಿನಲ್ಲಿ ಹೂಡಿಕೆ ಮಾಡಲು ಧೈರ್ಯ ಮತ್ತು ನಂಬಿಕೆ ಬೇಕಾಗುತ್ತದೆ. ನೀವು ಮಾಡಿದ್ದೀರಿ ಮತ್ತು ಅದು ಫಲ ನೀಡಿತು. ಪ್ರಿಕ್ಲೈಮ್ಯಾಕ್ಸ್, ಚಿತ್ರದ ಹೃದಯ ಅದ್ಭುತವಾಗಿತ್ತು. ಅದು ಬರುವುದನ್ನು ನೋಡಲಾಗಲಿಲ್ಲ ಮತ್ತು ಅದು ತುಂಬಾ ಚೆನ್ನಾಗಿತ್ತು.

ಮೊದಲ ದಿನ ವಿಶ್ವಾದ್ಯಂತ ಸುಮಾರು 35 ಕೋಟಿ ಗಳಿಸಿದ ಚಿತ್ರ ಎರಡನೇ ದಿನ ಜಾಗತಿಕವಾಗಿ 20-25 ಕೋಟಿ ರೂ. ಬಾಕ್ಸ್ ಆಫೀಸ್ ಕರ್ನಾಟಕ ಚಿತ್ರದ ನಿರ್ಮಾಪಕರಿಂದ ಚಿತ್ರದ ಕಲೆಕ್ಷನ್‌ಗಳ ಕುರಿತು ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ವಿಕ್ರಾಂತ್ ರೋನಾ ಎರಡು ದಿನಗಳಲ್ಲಿ ಒಟ್ಟು 53-60 ಕೋಟಿ ರೂಪಾಯಿ ಗಳಿಸಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ, ಚಲನಚಿತ್ರ ನಿರ್ಮಾಪಕರು ವಾರಾಂತ್ಯದಲ್ಲಿ ದೇಶದಾದ್ಯಂತ ಚಲನಚಿತ್ರದ ಫುಟ್‌ಫಾಲ್‌ಗಳಲ್ಲಿ ಖಗೋಳಶಾಸ್ತ್ರದ ಹೆಚ್ಚಳವನ್ನು ನಿರೀಕ್ಷಿಸುತ್ತಾರೆ ಮತ್ತು ಚಿತ್ರದ 3D ಆವೃತ್ತಿಯು ದೊಡ್ಡ ಪರದೆಯ ಅನುಭವಕ್ಕಾಗಿ ಜನರನ್ನು ಸೆಳೆಯುತ್ತದೆ ಎಂದು ಖಚಿತವಾಗಿದೆ. ಹಿಂದಿ ಬೆಲ್ಟ್‌ನಲ್ಲಿ, ಇದು ವಿಕ್ರಮ್, ವಲಿಮೈ, ಬೀಸ್ಟ್ ಮತ್ತು 777 ಚಾರ್ಲಿಯಂತಹ ಚಿತ್ರಗಳಿಗಿಂತ ಮುಂದಿದೆ – ಇವುಗಳಲ್ಲಿ ಯಾವುದೂ ಮೊದಲ ದಿನದಲ್ಲಿ 50 ಲಕ್ಷ ರೂಪಾಯಿಗಳನ್ನು ದಾಟಲು ಸಾಧ್ಯವಾಗಲಿಲ್ಲ – ವಿಕ್ರಾಂತ್ ರೋನಾ ಸುಮಾರು 2 ಕೋಟಿ ಗಳಿಸಿದೆ.

ಚಿತ್ರದ ಹಿಂದಿ ಆವೃತ್ತಿಯನ್ನು ಸಲ್ಮಾನ್ ಖಾನ್ ಪ್ರಸ್ತುತಪಡಿಸಿದರು. ಪುಷ್ಪ, ಆರ್‌ಆರ್‌ಆರ್ ಮತ್ತು ಕೆಜಿಎಫ್ 2 ರ ಯಶಸ್ಸಿನ ನಂತರ ಕಳೆದ ವರ್ಷದಲ್ಲಿ ದಕ್ಷಿಣ ಚಲನಚಿತ್ರಗಳಿಂದ ದಿಗ್ಭ್ರಮೆಗೊಳಿಸುವ ನಿರೀಕ್ಷೆಗಳಿವೆ.

ಮತ್ತೊಂದೆಡೆ, ಅವರ ದೊಡ್ಡ-ಬಜೆಟ್ ಚಿತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುತ್ತಿಲ್ಲವಾದ್ದರಿಂದ ಬಾಲಿವುಡ್‌ನ ಒರಟು ಪ್ಯಾಚ್ ಮುಂದುವರೆದಿದೆ. ರಣಬೀರ್ ಕಪೂರ್ ಅವರ ಇತ್ತೀಚಿನ ಶಂಶೇರಾ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು.

ವಿಶ್ವ ಸ್ತನ್ಯಪಾನ ಸಪ್ತಾಹ 2022, ಆಗಸ್ಟ್ 1 ರಿಂದ ಆಗಸ್ಟ್ 7 – ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಸ್ತನ್ಯಪಾನದ ಮಹತ್ವ

ವಿಶ್ವ ಸ್ತನ್ಯಪಾನ ವಾರ 2022: ಶಿಶುವಿನ ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಗೆ ಸ್ತನ್ಯಪಾನವು ಅತ್ಯಂತ ಮಹತ್ವದ್ದಾಗಿದೆ. ಹೆಚ್ಚುವರಿಯಾಗಿ, ಇದು ತಾಯಿಗೆ ಅಗಾಧವಾದ ಆನಂದದಾಯಕವಾದ ಅನುಭವವಾಗಿದೆ. ಆದ್ದರಿಂದ, ಶಿಶುಗಳಿಗೆ ನಿಯಮಿತವಾಗಿ ಸ್ತನ್ಯಪಾನ ಮಾಡಿಸುವುದರ ಕುರಿತು ಒತ್ತಿಹೇಳಲು ಪ್ರತಿ ವರ್ಷ ವಿಶ್ವ ಸ್ತನ್ಯಪಾನ ವಾರವನ್ನು ಆಚರಿಸಲಾಗುತ್ತದೆ. ಸ್ತನ್ಯಪಾನ ಸಪ್ತಾಹವು ಆಗಸ್ಟ್ 1 ರಂದು ಪ್ರಾರಂಭವಾಗುತ್ತದೆ ಮತ್ತು ಅದು ಆಗಸ್ಟ್ 7 ರಂದು ಮುಕ್ತಾಯಗೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹಾಲುಣಿಸುವ ಮಕ್ಕಳು ಹೆಚ್ಚು ಬೌದ್ಧಿಕ ಮತ್ತು ಫಿಟ್ ಆಗಿರುತ್ತಾರೆ. ಇದಲ್ಲದೆ, ಅವರು ಅಧಿಕ ತೂಕ, ಬೊಜ್ಜು ಮತ್ತು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಗಳು ಇಲ್ಲದವರಿಗಿಂತ ತುಲನಾತ್ಮಕವಾಗಿ ಕಡಿಮೆ. ನವಜಾತ ಶಿಶುಗಳಿಗೆ ಎದೆ ಹಾಲು ಅತ್ಯುತ್ತಮ ಆಹಾರವಾಗಿದೆ.

ಇದು ಹಲವಾರು ಪ್ರಚಲಿತ ಮಕ್ಕಳ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುವ ಪ್ರತಿಕಾಯಗಳನ್ನು ಒಳಗೊಂಡಿದೆ. ಸ್ತನ್ಯಪಾನವನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್ (UNICEF) 1990 ರಲ್ಲಿ ಒಂದು ಜ್ಞಾಪಕ ಪತ್ರವನ್ನು ರಚಿಸಿತು.

ಇದರ ನಂತರ, 1991 ರಲ್ಲಿ ಸ್ತನ್ಯಪಾನ ಕ್ರಿಯೆಗಾಗಿ ವಿಶ್ವ ಒಕ್ಕೂಟವನ್ನು (WABA) ಸ್ಥಾಪಿಸಲಾಯಿತು. ಉದ್ಘಾಟನಾ ಅಭಿಯಾನವನ್ನು ಉತ್ತೇಜಿಸಲು 1992 ರಲ್ಲಿ ವಿಶ್ವ ಸ್ತನ್ಯಪಾನ ವಾರವನ್ನು ಆಚರಿಸಲಾಯಿತು. ಆರಂಭದಲ್ಲಿ, ಸುಮಾರು 70 ದೇಶಗಳು ವಾರವನ್ನು ಸ್ಮರಿಸುತ್ತಿದ್ದರು, ಆದರೆ ಈಗ ಇದನ್ನು 170 ದೇಶಗಳು ಆಚರಿಸುತ್ತವೆ.

ವಿಶ್ವ ಸ್ತನ್ಯಪಾನ ವಾರದ ಮಹತ್ವ: ಸ್ತನ್ಯಪಾನದ ಹಲವಾರು ಪ್ರಯೋಜನಗಳ ಬಗ್ಗೆ ಜನರು ತಿಳಿದಿರುವುದು ಬಹಳ ಮುಖ್ಯ. WHO ವರದಿಗಳ ಪ್ರಕಾರ, 3 ಮಕ್ಕಳಲ್ಲಿ 2 ಮಕ್ಕಳಿಗೆ ಹಾಲುಣಿಸುವುದಿಲ್ಲ. ಆದ್ದರಿಂದ, ಈ ದಿನವನ್ನು ಗುರುತಿಸಲು ಇದು ಹೆಚ್ಚು ನಿರ್ಣಾಯಕವಾಗಿದೆ. ಜನನದ ನಂತರ 6 ತಿಂಗಳವರೆಗೆ ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಶಿಫಾರಸು ಮಾಡುತ್ತಾರೆ.

ಎದೆ ಹಾಲಿನಲ್ಲಿ ಕಂಡುಬರುವ ಪ್ರತಿಕಾಯಗಳು ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ವಿರುದ್ಧ ಶಿಶುವಿನ ರಕ್ಷಣೆಗೆ ಸಹಾಯ ಮಾಡುತ್ತದೆ. ಆರು ತಿಂಗಳ ಕಾಲ ಹಾಲುಣಿಸುವ ಶಿಶುಗಳಲ್ಲಿ ಕಿವಿ ಸೋಂಕುಗಳು, ಉಸಿರಾಟದ ಪರಿಸ್ಥಿತಿಗಳು ಅಥವಾ ಅತಿಸಾರವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳು ತುಂಬಾ ಕಡಿಮೆ ಅಥವಾ ಶೂನ್ಯವಾಗಿರುತ್ತದೆ.

ಸ್ತನ್ಯಪಾನ ಮಾಡುವ ಶಿಶುಗಳು ಆಸ್ತಮಾ ಅಥವಾ ಅಲರ್ಜಿಯನ್ನು ಅಭಿವೃದ್ಧಿಪಡಿಸುವ ಕಡಿಮೆ ಅಪಾಯವನ್ನು ಹೊಂದಿರುತ್ತಾರೆ. WHO ಪ್ರಕಾರ, ಸ್ತನ್ಯಪಾನದ ಪ್ರಯೋಜನಗಳು ಮಕ್ಕಳಿಗೆ ಮಾತ್ರವಲ್ಲ, ತಾಯಂದಿರಿಗೂ ಸೀಮಿತವಾಗಿದೆ. ಇದು ತಾಯಂದಿರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿದೇಶದಲ್ಲಿದ್ದುಕೊಂಡು ಕಲಾಸೇವೆ – ಕಲಾವಿದ, ಸಂಘಟಕ ರಫೀಕುದ್ದೀನ್ ಮಡಂತ್ಯಾರ್ 

ಉದ್ಯೋಗ ನಿಮಿತ್ತ ದೂರ ಸಾಗರದಾಚೆ ತೆರಳಿದರೂ ಕೂಡಾ ಕಲಾವಿದರಾಗಿ, ಸಂಘಟಕರಾಗಿ, ಪೋಷಕರಾಗಿ ಪ್ರೇಕ್ಷಕರಾಗಿ ಯಕ್ಷಗಾನ ಕಲೆಯೊಂದಿಗೇ ಬದುಕುವುದನ್ನು ನಾವು ಕಾಣಬಹುದು. ಕಲಾಮಾತೆಯ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತೆಂಬ ಧನ್ಯತೆ ಅವರಿಗಿದೆ. ಹೀಗೆ ಹೊರದೇಶದಲ್ಲಿದ್ದುಕೊಂಡು ಇಂದು ಅನೇಕ ಮಂದಿಗಳು ಕಲಾಸೇವೆಯನ್ನು ಮಾಡುತ್ತಿದ್ದಾರೆ. ಅಂತಹಾ ಮಹನೀಯರಲ್ಲಿ ಶ್ರೀ ರಫೀಕುದ್ದೀನ್ ಮಡಂತ್ಯಾರ್ ಅವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇವರು ವಿದ್ಯಾವಂತರೂ ಗುಣಾಢ್ಯರೂ ಹೌದು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ, ಸಂಘಟಕನಾಗಿ, ಉತ್ತಮ ಪ್ರೇಕ್ಷಕನಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀ ರಫೀಕುದ್ದೀನ್ ಅವರು ಹಿಮ್ಮೇಳ ಮತ್ತು ಮುಮ್ಮೇಳಗಳೆರಡನ್ನೂ ಬಲ್ಲ ಕಲಾವಿದರು. ಪ್ರಸ್ತುತ ಕುವೈತ್ ದೇಶದಲ್ಲಿ ಉದ್ಯೋಗಿಯಾಗಿದ್ದುಕೊಂಡು ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ಶ್ರೀ ರಫೀಕುದ್ದೀನ್ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು. 1972ನೇ ಇಸವಿ ಜುಲೈ 7ರಂದು ಶ್ರೀ ಅಬ್ದುಲ್ ಶುಕೂರ್ ಶ್ರೀಮತಿ ಸಾರಂಬಿ ದಂಪತಿಗಳ ಪುತ್ರನಾಗಿ ಜನನ. ಈ ದಂಪತಿಗಳಿಗೆ ಮೂರು ಮಂದಿ ಮಕ್ಕಳು. (2 ಹೆಣ್ಣು ಮತ್ತು ಒಂದು ಗಂಡು). ಶ್ರೀ ಅಬ್ದುಲ್ ಶುಕೂರ್ ಅವರು ಆ ಕಾಲದಲ್ಲಿ ಜಮೀನುದಾರರಾಗಿ, ಉತ್ತಮ ಕೃಷಿಕರಾಗಿ ಖ್ಯಾತರಾಗಿದ್ದರು. ತುಳುನಾಡ ಸಂಸ್ಕೃತಿಯನ್ನು ಪ್ರೀತಿಸುತ್ತಾ ಬದುಕಿದ್ದ ಅವರು ಕಲಾಸಕ್ತರೂ ಆಗಿದ್ದರು.

ಸ್ವಯಂ ಪ್ರೇಕ್ಷಕರಾಗಿ ಆಟ, ಕೂಟ, ಕೋಲ ಕಂಬಳಗಳನ್ನು ಕಣ್ತುಂಬಿಸಿಕೊಂಡು ಬೆಳೆದವರು. ಎಳವೆಯಲ್ಲಿ ತೀರ್ಥರೂಪರೊಂದಿಗೆ ರಫೀಕುದ್ದೀನ್ ಅವರು ಈ ಎಲ್ಲಾ ಧಾರ್ಮಿಕ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಶ್ರೀ ರಫೀಕುದ್ದೀನ್ ಅವರು ಓದಿದ್ದು ಬಿಕಾಂ ವರೆಗೆ. ಬಳಿಕ ಒಂದು ವರ್ಷ ಟೆಲಿಕಮ್ಯುನಿಕೇಷನ್ ನಲ್ಲಿ ಕಂಪ್ಯೂಟರ್ ವಿದ್ಯೆಯನ್ನೂ ಕಲಿತಿದ್ದರು.

1ರಿಂದ 7ನೇ ತರಗತಿ ವರೆಗೆ ಮಡಂತ್ಯಾರಿನ ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಜನೆ. ಬಳಿಕ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ. ಶಾಲಾ ಬಾಲಕನಾಗಿದ್ದಾಗಲೇ ಇವರಿಗೆ ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುತ್ತಿದ್ದರು. ಅಂತಿಮ ಪದವಿ ಓದುತ್ತಿರುವಾಗ ಕಾಲೇಜಿನ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶಿಸುವುದೆಂಬ ನಿರ್ಣಯವನ್ನು ಸೇಕ್ರೆಡ್ ಕಾಲೇಜಿನ ಆಡಳಿತ ಮಂಡಳಿಯು ಕೈಗೊಂಡಿತ್ತು. ಮಕ್ಕಳಿಗೆ ನಾಟ್ಯ ತರಬೇತಿಯನ್ನು ನೀಡಲು ಪ್ರಸಿದ್ಧ ಕಲಾವಿದ ಶ್ರೀ ಜನಾರ್ದನ ಗುಡಿಗಾರರನ್ನು ಕರೆಸಿಕೊಳ್ಳಲಾಗಿತ್ತು.

ರಫೀಕುದ್ದೀನ್ ಅವರು ಶ್ರೀ ಜನಾರ್ದನ ಗುಡಿಗಾರರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು. ಆಗ ಗುಡಿಗಾರರೊಂದಿಗೆ ಹೆಸರಾಂತ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ಮತ್ತು ಪೆರ್ಲ ಜಗನ್ನಾಥ ಶೆಟ್ಟರೂ ಬಂದು ಮಕ್ಕಳಿಗೆ ಹೇಳಿಕೊಡುತ್ತಿದ್ದರಂತೆ. ವಿದ್ಯಾರ್ಥಿಗಳು ಕುಣಿಯುವಾಗ ಶ್ರೀ ಜಯರಾಮ ಆಚಾರ್ಯರು ಚೆಂಡೆ ಮದ್ದಳೆಗಳನ್ನು ನುಡಿಸುತ್ತಿದ್ದರಂತೆ. ಮದ್ದಳೆಗಾರರಾದ ಶ್ರೀ ಚಂದ್ರಶೇಖರ ದೇವಾಡಿಗರು ಚೆಂಡೆ ಬಾರಿಸಲು ಬರುತ್ತಿದ್ದರು. ಇವರು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯ. ಒಳ್ಳೆಯ ಮದ್ದಳೆಗಾರರಾಗಿ ಶ್ರೀ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದವರು. 1993-94ರಲ್ಲಿ ಕಾಲೇಜಿನ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನ. ಪ್ರಸಂಗ ದೇವಿ ಮಹಾತ್ಮ್ಯೆ . ವಿದ್ಯುನ್ಮಾಲಿಯನ್ನು ಸಂಹರಿಸುವ ಯಕ್ಷನಾಗಿ ರಫೀಕುದ್ದೀನ್ ಅವರು ರಂಗಪ್ರವೇಶ ಮಾಡಿದ್ದರು. ಅಂದು ಶ್ರೀದೇವಿಯಾಗಿ ಖ್ಯಾತ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟರ ಪುತ್ರಿ ಕು| ವತ್ಸಲಾ ಅವರು ಅಭಿನಯಿಸಿದ್ದರು. 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರಿಗೆ ಯಕ್ಷಗಾನ ಹಿಮ್ಮೇಳದ ಮೇಲೂ ಆಸಕ್ತಿಯುಂಟಾಗಿತ್ತು. ಶ್ರೀ ಚಂದ್ರಶೇಖರ ದೇವಾಡಿಗರಿಂದ ಕಲಿತು  ಕಾಲೇಜಿನ ಮುಂದಿನ ಪ್ರದರ್ಶನಗಳಲ್ಲಿ  ಭಾಗವಹಿಸಿದ್ದರು. ಕನ್ನಡಿಕಟ್ಟೆ ಪಡಂಗಡಿ ಶಾಲೆಯ, ಊರ, ಪರವೂರ ಪ್ರದರ್ಶನಗಳಲ್ಲಿ ಹಿಮ್ಮೇಳ ಕಲಾವಿದನಾಗಿ ಭಾಗವಹಿಸುವ ಅವಕಾಶವೂ ಸಿಕ್ಕಿತ್ತು.  ಸಂದರ್ಭ 1 ವರ್ಷ ಡಿಸಿಸಿ ಬ್ಯಾಂಕಿನಲ್ಲಿ  ಮಾಡಿದ್ದರು. ಪೂಂಜಾಲಕಟ್ಟೆ, ಬಳ್ಳಮಂಜ, ಶ್ರೀ ಮಧುಕರ ಮಲ್ಯರು ಆಯೋಜಿಸುತ್ತಿದ್ದ ಗುರುವಾಯನಕೆರೆಯ ವಾರದ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಹಿಮ್ಮೇಳ, ಮುಮ್ಮೇಳಗಳ ಕಲಾವಿದನಾಗಿ ಕಲಾಸೇವೆ ಮಾಡುವ ಅವಕಾಶವಾಗಿತ್ತು.

ಬಳಿಕ ಮಂಗಳೂರಿನ ಇಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಈ ಸಂದರ್ಭ ತೊಕ್ಕೊಟ್ಟಿನ ಕಲಾಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಾಗಿತ್ತು. ಇಲ್ಲಿ ಕದ್ರಿ ಕಂಬಳಗುತ್ತು ಶ್ರೀ ನವನೀತ ಶೆಟ್ಟಿ, ಶರತ್ ಕುಮಾರ್ ಕದ್ರಿ, ಕೋಟೆಕಾರು ಹರಿಶ್ಚಂದ್ರ ನಾಯ್ಗ, ದಿನಕರ ಪಚ್ಚನಾಡಿ, ದಯಾನಂದ ಪಾವೂರು ಮೊದಲಾದವರ ಒಡನಾಟವು ದೊರಕಿತ್ತು. ಇದರಿಂದಾಗಿ ಹವ್ಯಾಸಿ ಬಳಗ ಕದ್ರಿ, ರಥಬೀದಿ, ವಾಗೀಶ್ವರಿ ಕಲಾ ಸಂಸ್ಥೆಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಇವರುಗಳ ಪ್ರೋತ್ಸಾಹವನ್ನು ಶ್ರೀ ರಫೀಕುದ್ದೀನರು ಈಗಲೂ ನೆನಪಿಸುತ್ತಾರೆ.

ಹರೇಕಳದ ಯಕ್ಷಗಾನ ಪ್ರದರ್ಶನವೊಂದಕ್ಕೆ ಅನಿವಾರ್ಯ ಕಾರಣಗಳಿಂದ ಕಲಾವಿದರೊಬ್ಬರು ಬಾರದಿದ್ದಾಗ ಬೆಳಗಿನ ವರೆಗೂ ಚೆಂಡೆ ಮದ್ದಳೆ ನುಡಿಸಿದ್ದು ರಫೀಕ್ ಅವರಿಗೊಂದು ಮರೆಯಲಾಗದ ಘಟನೆಯಾಗಿ ಉಳಿದಿದೆ. ಮುಂದಿನ ವರ್ಷ ಮಂಗಳೂರಿನಿಂದ ಮಡಂತ್ಯಾರು ಮನೆಗೆ ಮರಳಿದ ಇವರು ಊರ ಪರವೂರ ಪ್ರದರ್ಶನಗಳು ಅಲ್ಲದೆ ಕನ್ನಡಿಕಟ್ಟೆ ಪಡಂಗಡಿ ಶಾಲೆಯ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಸ್ತುತ ತೆಂಕಿನ ಯುವ ಭಾಗವತರಾದ ಹನುಮಗಿರಿ ಮೇಳದ ರವಿಚಂದ್ರ ಕನ್ನಡಿಕಟ್ಟೆ ಅವರು ಶಾಲಾ ವಿದ್ಯಾರ್ಥಿಯಾಗಿ ವೇಷ ಮಾಡುತ್ತಿದ್ದರು. 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರಿಗೆ 2003ರಲ್ಲಿ ಉದ್ಯೋಗ ನಿಮಿತ್ತವಾಗಿ ಕುವೈತ್ ದೇಶಕ್ಕೆ ಹೋಗುವ ಅವಕಾಶ ಬಂದಿತ್ತು. ದೂರ ಸಾಗರದಾಚೆ ತೆರಳಿದರೂ ಇವರು ತನ್ನ ಅಚ್ಚುಮೆಚ್ಚಿನ ಕಲೆಯಾದ ಯಕ್ಷಗಾನವನ್ನು ಬಿಟ್ಟು ಬದುಕಿದವರಲ್ಲ. ಅಲ್ಲಿ 1990ರಲ್ಲಿ ಸ್ಥಾಪಿಸಲ್ಪಟ್ಟ ‘ತುಳುಕೂಟ ಕುವೈತ್’ ಎಂಬ ಸಂಸ್ಥೆ ಯಕ್ಷಗಾನ ಮತ್ತು ನಾಟಕ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಅಲ್ಲದೆ ಕುವೈತ್ ನ ಬಂಟರ ಸಂಘ, ಬಿಲ್ಲವರ ಸಂಘ, ಕನ್ನಡ ಸಂಘ, ಭಾರತೀಯ ಪರಿಷತ್ ಎಂಬ ಸಂಘಟನೆಗಳೂ ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಹಿಮ್ಮೇಳ, ಮುಮ್ಮೇಳ ಕಲಾವಿದನಾಗಿ ನೇಪಥ್ಯ ಮತ್ತು ಬಣ್ಣಗಾರಿಕೆಯ ನಿರ್ದೇಶಕನಾಗಿ ಇವರಿಗೆ ಈ ಸಂಸ್ಥೆಗಳಲ್ಲಿ ಭಾಗವಹಿಸಲು ಅವಕಾಶವಾಗಿತ್ತು.

2017ರಲ್ಲಿ ಬಂಟರ ಸಂಘವು ಬಡಗಿನ ಪ್ರದರ್ಶನವೊಂದನ್ನು ಏರ್ಪಡಿಸಿತ್ತು. ಖ್ಯಾತ ಭಾಗವತ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ತಂಡ. ಶಿವಾನಂದ ಕೋಟ, ರಾಘವೇಂದ್ರ ಹೆಗಡೆ ಯಲ್ಲಾಪುರ,ತೀರ್ಥಳ್ಳಿ ಗೋಪಾಲಾಚಾರ್ಯ, ಅಶೋಕ್ ಭಟ್ ಸಿದ್ಧಾಪುರ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಶ್ರೀಧರ ಭಟ್ ಕಾಸರಕೋಡು, ಮೊದಲಾದ ಕಲಾವಿದರಿದ್ದ ತಂಡ. ಪ್ರಸಂಗ ಪಾಂಚಜನ್ಯ. ರಫೀಕುದ್ದೀನ್ ಅವರು ಪಂಚಜನ ಪಾತ್ರದಲ್ಲಿ ಅಭಿನಯಿಸಿದ್ದರು. ಬಡಗಿನ ಮೇರು ಕಲಾವಿದರೆಲ್ಲಾ ಇವರಿಗೆ ಅತ್ಯಂತ ಸಹಕರಿಸಿ ಪಾತ್ರವು ರಂಜಿಸುವಂತೆ ಮಾಡಿದ್ದರು. 2015ರಲ್ಲಿ ಶ್ರೀ ಸುಜಯಿಂದ್ರ ಹಂದೆ ಮತ್ತು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ಅವರ ತಂಡ, ತುಳುಕೂಟದ ವತಿಯಿಂದ  ‘ಯಕ್ಷ ರೂಪಕ’ದಲ್ಲಿ ಘೋರ ಶೂರ್ಪನಖಿಯಾಗಿ ಅಭಿನಯಿಸಿದ್ದರು, ಪ್ರಸ್ತುತ ಶ್ರೀ ರಫೀಕುದ್ದೀನ್ ಅವರು ಶ್ರೀ ಪ್ರಸಾದ್ ಚೇರ್ಕಾಡಿ ಅವರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿಯುತ್ತಿದ್ದಾರೆ. (2020ರಿಂದ). 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರು ಸಂಘಟಕರಾಗಿಯೂ ಕಾಣಿಸಿಕೊಂಡವರು. ಶ್ರೀ ಸುರೇಶ ರಾವ್ ನೇರಂಬಳ್ಳಿ (ಆರ್ಯಭಟ ಪ್ರಶಸ್ತಿ ವಿಜೇತ) ಮತ್ತು ಬಾಲಕೃಷ್ಣ ಪೂಜಾರಿ ಮುಡಿಪು ಇವರ ಜತೆಸೇರಿ 2021 ಸೆಪ್ಟೆಂಬರ್ ನಲ್ಲಿ ‘ಯಕ್ಷಮಿತ್ರರು ಕುವೈತ್” ಎಂಬ ಕಲಾ ಸಂಸ್ಥೆಯನ್ನು ಆರಂಭಿಸಿರುತ್ತಾರೆ. ಸ್ಥಳೀಯ ಕಲಾವಿದರಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಏರ್ಪಡಿಸುವ ಉದ್ದೇಶದಿಂದ ಚಿಗುರೊಡೆದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ. ಈ ಸಂಸ್ಥೆಯು ಭಾರತೀಯ ಪರಿಷತ್ತಿನ ಪ್ರಾಯೋಜಕತ್ವದಲ್ಲಿ ಕೃಷ್ಣಾರ್ಜುನ ಕಾಳಗ ತಾಳಮದ್ದಳೆ ಏರ್ಪಡಿಸಿತ್ತು. ಈ ತಾಳಮದ್ದಳೆಯಲ್ಲಿ ಭಾಗವತಿಕೆಯನ್ನು ರಫೀಕ್ ಅವರೇ ಮಾಡಿದ್ದರು.

ಊರಿಗೆ ಬಂದಾಗ ಪ್ರದರ್ಶನಗಳಲ್ಲಿ ಶ್ರೀ ರಫೀಕ್ ಅವರು ಆಸಕ್ತಿಯಿಂದ ಭಾಗವಹಿಸುತ್ತಾರೆ. ಈ ಬಾರಿ ಯಕ್ಷಸಂಗಮ ಮೂಡಬಿದಿರೆ ಅವರು ಏರ್ಪಡಿಸಿದ ತಾಳಮದ್ದಳೆಯಲ್ಲಿ ಮದ್ದಳೆ ನುಡಿಸುವುದನ್ನು ನಾವೆಲ್ಲರೂ ಕಂಡಿದ್ದೇವೆ. ಸಂಘಟಕ ಶ್ರೀ ಶಾಂತಾರಾಮ ಕುಡ್ವ ಅವರು ಇವರ ಬಗೆಗೆ ಲೇಖನವೊಂದನ್ನು 2019ರಲ್ಲಿ ಬರೆದಿದ್ದರು. ಇದು ತುಳುಕೂಟ ಕುವೈತ್ ಅವರ ವಾರ್ಷಿಕ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.

ಶ್ರೀ ರಫೀಕುದ್ದೀನರ ಪತ್ನಿ ಶ್ರೀಮತಿ ಶಬನಮ್ (2004ರಲ್ಲಿ ವಿವಾಹ). ಶ್ರೀಮತಿ ಶಬನಮ್ ಅವರು ಸಂತುಷ್ಟ ಗೃಹಣಿ. ಶ್ರೀ ರಫೀಕುದ್ದೀನ್, ಶಬನಮ್ ದಂಪತಿಗಳಿಗೆ ಒಬ್ಬ ಪುತ್ರ. ಮಾ| ಸಾದ್. ಮೈಸೂರಿನಲ್ಲಿ ಪೇಜಾವರ ಮಠದಿಂದ ನಡೆಸಲ್ಪಡುವ ಶ್ರೀ ವಿಜಯ ವಿಠಲ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಇವರೂ ಕಲಾಸಕ್ತರು. ಇಸ್ಕಾನ್ ನವರು ನಡೆಸಿದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಮೆಚ್ಚಿದ ಮಠಾಧಿಪತಿಗಳು ಇವರಿಗೆ ಪ್ರಸಾದವನ್ನು ನೀಡಿ ಆಶೀರ್ವದಿಸಿರುತ್ತಾರೆ.

ಕಲಾ ಸೇವೆಯನ್ನು ಮಾಡುವಲ್ಲಿ ಶ್ರೀ ರಫೀಕುದ್ದೀನ್  ಅವರಿಗೆ ಮನೆಯವರ, ಕುಟುಂಬದವರ ಪರಿಪೂರ್ಣ ಸಹಕಾರವೂ ಪ್ರೋತ್ಸಾಹವೂ ದೊರೆತಿದೆ. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯ ಅನುಗ್ರಹವು ಶ್ರೀ ರಫೀಕ್ ಮತ್ತು ಅವರ ಮನೆಯವರಿಗೆ ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಲೇಖಕ: ರವಿಶಂಕರ್ ವಳಕ್ಕುಂಜ