Monday, August 31, 2026
Home Blog Page 206

ಅನುಭವೀ ಕಲಾವಿದ, ಯಕ್ಷಗಾನ ಗುರು – ದಿವಾಣ ಶ್ರೀ ಶಿವಶಂಕರ ಭಟ್ 

ಶ್ರೀ ದಿವಾಣ  ಶಿವಶಂಕರ ಭಟ್ಟರು ಯಕ್ಷಗಾನ ಕಲಾವಿದನಾಗಿ, ಕಲಿಕಾಸಕ್ತರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟ ಗುರುವಾಗಿ ಎಲ್ಲರಿಗೂ ಪರಿಚಿತರು. ಇವರು ತೆಂಕುತಿಟ್ಟಿನ ಅನುಭವೀ ಹಿರಿಯ ಕಲಾವಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ಗುರುವಾಗಿ, ಹಲವಾರು ಕಡೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿ, ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಲ್ಲಿ ಇರಿಸಿದ ಗುರುಗಳೂ ಹೌದು. ಕಲಾಕ್ಷೇತ್ರದಲ್ಲಿ ಇವರು ನಲುವತ್ತೆರಡು ವರುಷಗಳ ಅನುಭವಿ.

ದಿವಾಣ ಮನೆತನದಿಂದ ಯಕ್ಷಗಾನಕ್ಕೆ ಅನುಪಮವಾದ ಕೊಡುಗೆಗಳಿವೆ. ಖ್ಯಾತ ಮದ್ದಳೆಗಾರರಾದ ಲಯಬ್ರಹ್ಮ ದಿವಾಣ ಭೀಮ ಭಟ್ಟರು, ದಿವಾಣ ಶಂಕರ ಭಟ್ಟರು ಇವರಲ್ಲಿ ಪ್ರಮುಖರು. ಅದೇ ಮನೆತನದಲ್ಲಿ ಜನಿಸಿದ ಶಿವಶಂಕರ ಭಟ್ಟರು ಹಂತಹಂತವಾಗಿ ಬೆಳೆಯುತ್ತಾ ಯಕ್ಷಗಾನ ಕ್ಷೇತ್ರದಲ್ಲಿ ಸಾಗಿಬಂದವರು. ಪ್ರಸ್ತುತ ಇವರು ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ದಿವಾಣ ಶಿವಶಂಕರ  ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಡನಾಡು ಗ್ರಾಮದ ನೂಚನಗುಳಿ. ಶ್ರೀ ಗಣಪತಿ ದಿವಾಣ ಮತ್ತು ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ 1964ನೇ ಇಸವಿ ಮೇ 31ರಂದು ಜನನ. ಶಿವಶಂಕರ ಭಟ್ಟರ ಅಜ್ಜ ಶ್ರೀ ಭೀಮ ಭಟ್ ಅವರು ದಿವಾಣದಿಂದ ಬಂದು ಇಲ್ಲಿ ನೆಲೆಸಿದವರು. ಆಗ ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣರಿಗೆ 13 ವರ್ಷ ಪ್ರಾಯ. ಅಜ್ಜ ದಿವಾಣ ಭೀಮ ಭಟ್ಟರು ತಾಳಮದ್ದಳೆ ಅರ್ಥಧಾರಿ. ದೊಡ್ಡಜ್ಜ ದಿವಾಣ ಕೃಷ್ಣ ಭಟ್ಟರು ಭಾಗವತರಾಗಿದ್ದರು. ಇವರು ಖ್ಯಾತ ಮದ್ದಳೆಗಾರರಾಗಿ ಹೆಸರುಗಳಿಸಿದ ದಿವಾಣ ಭೀಮ ಭಟ್ಟರಿಗೆ ಗುರುಗಳಾಗಿದ್ದರು.

ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣ ಅವರು ಯಕ್ಷಗಾನ ವೇಷಧಾರಿ ಮತ್ತು ಉತ್ತಮ ಬರಹಗಾರರಾಗಿದ್ದರು. ಸೂರಂಬೈಲು ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿದವರು. ದಿವಾಣ ಶಿವಶಂಕರ ಭಟ್ಟರು ಓದಿದ್ದು ಹತ್ತನೇ ತರಗತಿ ವರೆಗೆ. ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಂಬಳೆ ಸರಕಾರೀ ಪ್ರೌಢಶಾಲೆಯಲ್ಲಿ. ಹೊಸಹಿತ್ತಿಲು ಮನೆಯವರು ಇವರ ಬಂಧುಗಳು. (ಅಪ್ಪನ ಸೋದರತ್ತೆಯ ಮನೆ) ಇವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು.

ಎಳವೆಯಲ್ಲೇ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂದು ಬಯಸಿದವರು. ಮಾಣಂಗಾಯಿ ಕೃಷ್ಣ ಭಟ್ಟರ ಕಂಸ, ಕಾರ್ತವೀರ್ಯ, ರಾಮದಾಸ ಸಾಮಗರ ರುಕ್ಮಾಂಗದ, ಹೊಸಹಿತ್ತಿಲು ಮಹಾಲಿಂಗ ಭಟ್ಟರ ಧರ್ಮಾಂಗದ, ಪುತ್ತೂರು ನಾರಾಯಣ ಹೆಗ್ಡೆಯವರ ವಾಲಿ, ಶೇಣಿಯವರ ಶುಕ್ರಾಚಾರ್ಯ, ಮಹಮ್ಮದ್ ಬಿನ್ ತುಘಲಕ್, ಬಪ್ಪಬ್ಯಾರಿ, ರಾವಣ, ಕೆ.ಗೋವಿಂದ ಭಟ್ಟರ ದೂರ್ವಾಸ, ಕೌಶಿಕ, ಜಾಂಬವ, ಕೌರವ, ಪ್ರಕಾಶ್ ಚಂದ್ರ ಬಾಯಾರು ಅವರ ಕಚ ಮೊದಲಾದ ಪಾತ್ರಗಳು ಇವರ ಮನಸ್ಸನ್ನು ಸೂರೆಗೊಂಡಿತ್ತು. ಆದರೂ ನಾಟ್ಯ ಕಲಿಕೆಗೆ ಅವಕಾಶವಿಲ್ಲದ ಕಾರಣ ಎಸ್ಸೆಸ್ಸೆಲ್ಸಿ  ಆದ ನಂತರ ಬೆಂಗಳೂರಿಗೆ ತೆರಳಿ ಕಂಗಣ್ಣಾರು ಶಂಕರನಾರಾಯಣ ಭಟ್ಟರ ಜತೆ 1 ವರ್ಷ ಕೆಲಸ ಮಾಡಿದ್ದರು.

ಆದರೆ ಯಕ್ಷಗಾನ ಕಲೆಯು ಇವರನ್ನು ಕೈಬೀಸಿ ಊರಿಗೆ ಕರೆದಿತ್ತು. ಮರಳಿ ಊರಿಗೆ ಬಂದು ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಆರಂಭಿಸಿದರು. ಆಗ ಊರಲ್ಲಿ ಖ್ಯಾತ ಯಕ್ಷಗಾನ ಸಂಘಟಕ ಶ್ರೀ ವೈ.ಡಿ ನಾಯಕ್ ರ ನೇತೃತ್ವದಲ್ಲಿ ಅಲ್ಲಲ್ಲಿ ತಾಳಮದ್ದಳೆ ನಡೆಯುತ್ತಿತ್ತು. 1980ನೇ ಇಸವಿ. ಪತ್ತನಾಜೆಯ ಮುನ್ನಾದಿನ ನಾಯ್ಕಾಪು ಎಂಬಲ್ಲಿ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘದ ತಾಳಮದ್ದಳೆಗೆ ತೆರಳಿದ್ದರು. ಕಚದೇವಯಾನಿ ಪ್ರಸಂಗದಲ್ಲಿ ದೇವೇಂದ್ರನ ಬಲ (ಅಗ್ನಿ) ಪಾತ್ರದಲ್ಲಿ ಅರ್ಥ ಹೇಳಲು ಇವರಿಗೆ ಸಂಘಟಕರು ಸೂಚಿಸಿದ್ದರು. ತಾಳಮದ್ದಳೆಯಾದರೂ ಪದ್ಯಕ್ಕೆ ಕುಣಿದು ಅರ್ಥ ಹೇಳಲು ಭಾಗವತರೂ, ಮದ್ದಳೆಗಾರರೂ ಇವರಿಗೆ ಸೂಚಿಸಿದರು. ಇವರು ಕುಣಿದು ಆಮೇಲೆ ಅರ್ಥ ಹೇಳಿದರು. ಇದನ್ನು ನೋಡಿದ ಭಾಗವತ ಶೇಡಿಗುಮ್ಮೆ ಕೃಷ್ಣ ಭಟ್ಟರೂ ವೈ.ಡಿ ನಾಯಕ್ ಅವರೂ ಧರ್ಮಸ್ಥಳ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ಸಲಹೆ ನೀಡಿದರು.

ಪತ್ತನಾಜೆಯ ದಿನ ಮೇಳಕ್ಕೆ ರಜೆಯಾದುದರಿಂದ ಅಂದು ಮಂಗಳೂರು ಪುರಭವನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಶಿಪ್ರಭಾ- ಕುಶಲವ ಕಾಳಗ ಆಟವಿತ್ತು. ಅಲ್ಲಿಗೆ ವೈ.ಡಿ ನಾಯಕ್ ಅವರ ಜತೆ ತೆರಳಿದ್ದರು. ಅಲ್ಲಿಗೆ ಕಲಾವಿದರಾಗಿ ಬಂದಿದ್ದ ನೆಡ್ಲೆ ನರಸಿಂಹ ಭಟ್ಟ ಮತ್ತು ಕೆ.ಗೋವಿಂದ ಭಟ್ಟರೊಡನೆ ಮಾತನಾಡಿ ಅವರೊಂದಿಗೇ ಧರ್ಮಸ್ಥಳಕ್ಕೆ ಹೋಗಿದ್ದರು. ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಕೇಂದ್ರದಲ್ಲಿ ಕಬ್ಬಿನಾಲೆ ವಸಂತ ಭಾರಧ್ವಾಜ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೋಳ್ಯೂರು ಗೋಪಾಲಕೃಷ್ಣ ಭಟ್, ಕೇಶವ ಕೊಕ್ಕಡ, ರಾಜೀವ ಬ್ರಹ್ಮರಕೂಟ್ಲು, ಲಕ್ಷ್ಮೀನಾರಾಯಣ ಕಲ್ಚಾರ್, ಶ್ರೀಹರಿ ತಲೆಂಗಳ, ದೇಲಂಪಾಡಿ ಬಾಲಕೃಷ್ಣ, ಬಾಲಕೃಷ್ಣ ಪೈ ಬಳ್ಳಂಬೆಟ್ಟು, ಗೇರುಕಟ್ಟೆ ದಾಸಪ್ಪ ಗೌಡ, ಪದ್ಮನಾಭ ಶೆಟ್ಟಿ, ಪೆಲತ್ತಡ್ಕ ಪಾಂಡುರಂಗ ಭಟ್ ಇವರ ಸಹಪಾಠಿಗಳಾಗಿದ್ದರು.

ತರಬೇತಿ ಕೇಂದ್ರದಲ್ಲಿ ಒಟ್ಟು  ನಾಲ್ಕು ಪ್ರದರ್ಶನಗಳು ನಡೆದಿತ್ತು. ಮಾಧ್ಯಮ ವ್ಯಾಯೋಗ ಪ್ರಸಂಗದಲ್ಲಿ ಭೀಮನಾಗಿ ದಿವಾಣ ಶಿವಶಂಕರ ಭಟ್ಟರು ರಂಗಪ್ರವೇಶ ಮಾಡಿದ್ದರು. ಅಂದು ಕಬ್ಬಿನಾಲೆ ಅವರು ಹಿಡಿಂಬೆಯ ಪಾತ್ರ ಮಾಡಿದ್ದರು. ಬಳಿಕ ದಕ್ಷಯಜ್ಞ ಪ್ರಸಂಗದಲ್ಲಿ ಈಶ್ವರನಾಗಿ, ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಕಾರ್ತವೀರ್ಯ, ಕೃಷ್ಣಾರ್ಜುನ ಪ್ರಸಂಗದಲ್ಲಿ ಗಯನ ಪಾತ್ರಗಳನ್ನು ಮಾಡಿದ್ದರು. ಭೀಷ್ಮಾರ್ಜುನ ಪ್ರಸಂಗ ತಾಳಮದ್ದಳೆಯಲ್ಲಿ ಕೌರವನಾಗಿ ಅರ್ಥ ಹೇಳಿದ್ದರು. 

ದಿವಾಣ ಶಿವಶಂಕರ ಭಟ್ಟರ ಮೊದಲ ತಿರುಗಾಟ 1980ರಲ್ಲಿ. ನೆಡ್ಲೆ ನರಸಿಂಹ ಭಟ್ಟರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಬಳಿಕ ಕುಬಣೂರು ಶ್ರೀಧರ ರಾಯರ ಕೂಡ್ಲು ಮೇಳದಲ್ಲಿ 1 ವರ್ಷ. ಇಲ್ಲಿ ಕಾವೂರು ಕೇಶವರ ಒಡನಾಟವಿತ್ತು. ಬಳಿಕ ಪಟ್ಲಗುತ್ತು ಮಹಾಬಲ ಶೆಟ್ಟರ ಮಲ್ಲ ಮೇಳದಲ್ಲಿ 3 ವರ್ಷ. ಈ ಮೇಳದಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟವಿತ್ತು. ಬಳಿಕ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳ, ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳ, ಅಡ್ಯಾರು ಶಂಕರ ಆಳ್ವರ ಬಪ್ಪನಾಡು ಮೇಳದಲ್ಲೂ ವ್ಯವಸಾಯ ನಡೆಸಿದ್ದರು. ಬಳಿಕ ಕಟೀಲು ಮೇಳದಲ್ಲಿ ತಿರುಗಾಟ.

1994ರಿಂದ ಯಕ್ಷಗಾನ ತಿರುಗಾಟದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು. ಬಳಿಕ ಕೆಲಸಮಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಶ್ರೀ ದಿವಾಣ ಶಿವಶಂಕರ ಭಟ್ಟರನ್ನು ಮತ್ತೆ ಮೇಳದ ತಿರುಗಾಟ ನಡೆಸುವಂತೆ ಸೂಚನೆ ನೀಡಿದವರು ಗುರುಗಳಾದ ಕೆ. ಗೋವಿಂದ ಭಟ್ಟರು. 1999ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆ. ಮರುವರ್ಷ 2000ನೇ ಇಸವಿಯಲ್ಲಿ ಖಾವಂದರ ಹೇಳಿಕೆಯಂತೆ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಗುರುವಾಗಿ ನಿಯುಕ್ತರಾದರು. 2007ರ ವೆರೆಗೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು. 2008ರ ವರೆಗೆ ಧರ್ಮಸ್ಥಳ ಕಲಿಕಾ ಕೇಂದ್ರದಲ್ಲಿ ಗುರುವಾಗಿ ಅಭ್ಯಾಸಿಗಳಿಗೆ ತರಬೇತಿ ನೀಡಿದ್ದರು.

ಧರ್ಮಸ್ಥಳ ಮೇಳದ ತಿರುಗಾಟದ ಬಳಿಕ ಎಡನೀರು, ಹೊಸನಗರ, ಕಟೀಲು ಮೇಳಗಳಲ್ಲಿ ಒಂದೊಂದು ವರ್ಷ ತಿರುಗಾಟ ನಡೆಸಿದ್ದರು. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕುಂಬಳೆಯ ದರ್ಬಾರ್ ಕಟ್ಟೆಯಲ್ಲಿರುವ ದೇವಸ್ಥಾನದಲ್ಲಿ ಹನ್ನೊಂದು ತಿಂಗಳ ಕಾಲ ಅರ್ಚಕರಾಗಿಯೂ ಕೆಲಸ ಮಾಡಿದ್ದರು. ದಿವಾಣ ಶಿವಶಂಕರ ಭಟ್ಟರು ಕಳೆದ 2 ವರ್ಷಗಳಿಂದ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಶ್ರೀ ದಿವಾಣ ಶಿವಶಂಕರ ಭಟ್ಟರು ಬಡಗಿನ ನಾಟ್ಯವನ್ನೂ ಕಲಿತಿದ್ದರು. 1984ರಲ್ಲಿ ಮಳೆಗಾಲ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರ ಸೇರಿ ಕೋಟ ಮಹಾಬಲ ಕಾರಂತ, ನೀಲಾವರ ಲಕ್ಷ್ಮೀನಾರಾಯಣ ರಾವ್, ಚೇರ್ಕಾಡಿ ಮಂಜುನಾಥ ಪ್ರಭು, ವಿದ್ವಾನ್ ಗಣಪತಿ ಭಟ್, ಬನ್ನಂಜೆ ಸಂಜೀವ ಸುವರ್ಣರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದ್ದರು.

ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುವಾಗಿ ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ಕಲಿಕಾಸಕ್ತರಿಗೆ ಇವರು ತರಬೇತಿ ನೀಡಿದ್ದರು. ಬೆದ್ರಡ್ಕ ಶ್ರೀರಾಮ ಯಕ್ಷ ಕಲಾ ಸಂಘ, ಕೋಳ್ಯೂರು ಶಂಕರನಾರಾಯಣ ದೇವಸ್ಥಾನ, ಪುತ್ತೂರು ಬೊಳುವಾರು ಶ್ರೀ ಮಲರಾಯ, ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ, ಪಾರ್ತಿಸುಬ್ಬ ಯಕ್ಷಗಾನ ಸಂಘ ಶೇಡಿಕಾವು, ಕುಂಬಳೆ, ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ, ಕುಂಬಳೆ ಸರಕಾರೀ ಹೈಸ್ಕೂಲ್, ಮುಜುಂಗಾವು ಪಾರ್ಥಸಾರಥಿ ದೇವಸ್ಥಾನ, ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ, ಬೆಳ್ತಂಗಡಿಯ ಕೊಯ್ಯೂರು ದೇವಸ್ಥಾನ, ಮತ್ತು ಆದೂರು ಪೇರಾಲ್ ಶಾಲೆ ಮೊದಲಾದ ಕಡೆ ತರಬೇತಿ ನೀಡಿದ್ದರು. ಎರಡು ವರ್ಷಗಳ ಕಾಲ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕ ಚಣಿಲ ಶ್ರೀ ಸಿ.ಎಚ್ ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದ ‘ಯಕ್ಷಸಿಂಧೂರ’ ವಿಟ್ಲ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕಳೆದ ಹದಿಮೂರು ವರ್ಷಗಳಿಂದ ಸರಕಾರೀ ಕಾಲೇಜು ಕಾಸರಗೋಡು ಇಲ್ಲಿ ಪ್ರಾಧ್ಯಾಪಕರಾದ ಶ್ರೀ ಪ್ರೊ| ಡಾ.ರತ್ನಾಕರ ಮಲ್ಲಮೂಲೆ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. 

ಕೇರಳ ರಾಜ್ಯದ ತೃಶೂರ್ ಜಿಲ್ಲೆಯ ಇರಿಂಜಾಲಕುಡ ತಾಲೂಕಿನ ಶ್ರೀಕೃಷ್ಣ ಶಾಲೆಯ ವಿದ್ಯಾರ್ಥಿಗಳಿಗೆ ನಾಟ್ಯ ಹೇಳಿಕೊಟ್ಟಿದ್ದರು. ಇವರಿಂದ ನಾಟ್ಯ ಕಲಿತ ಮಲೆಯಾಳೀ ವಿದ್ಯಾರ್ಥಿಗಳು ಶಾಲಾ ಕಲೋತ್ಸವದ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಮೈಸೂರು ಕರಾವಳೀ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ನೀಡಿ ಪ್ರದರ್ಶನ ನೀಡಲು ಕಾರಣರಾಗಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಸಂಸ್ಕೃತ ಶಾಲೆಯ ಮಕ್ಕಳಿಗೆ ತರಬೇತಿ ನೀಡಿ, ಅವರಿಂದ ಎರಡು ಪ್ರದರ್ಶನ ನಡೆಸಿದ್ದರು. 

ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಆಶೀರ್ವಾದ, ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹವನ್ನು ಸದಾ ದಿವಾಣ ಶಿವಶಂಕರ ಭಟ್ಟರು ನೆನಪಿಸಿಕೊಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಕಟೀಲು ಮೇಳದ ತಿರುಗಾಟ ಮತ್ತು ಉಳಿದ ಸಂದರ್ಭಗಳಲ್ಲೂ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಆಸ್ರಣ್ಣ ಬಂಧುಗಳ ಸಹಕಾರ ಪ್ರೋತ್ಸಾಹ ಇವರಿಗೆ ದೊರೆತಿತ್ತು. ಮುಂಬೈಯಲ್ಲಿ ವಿಜಯಕುಮಾರ್ ಶೆಟ್ಟಿ ತೋನ್ಸೆ, ಶ್ರೀ ಪ್ರಕಾಶ್ ಭಂಡಾರಿ ನೇತೃತ್ವದ ಚಿಣ್ಣರ ಬಿಂಬ ತಂಡದ ಮಕ್ಕಳಿಗಾಗಿ ಯಕ್ಷಗಾನ ಶಿಬಿರವನ್ನೂ ದಿವಾಣ ಶಿವಶಂಕರ ಭಟ್ಟರು ನಡೆಸಿಕೊಟ್ಟಿರುತ್ತಾರೆ. ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಆರಂಭದಿಂದ ತೊಡಗಿ ಮೂರು ವರ್ಷಗಳ ಕಾಲ ಸದ್ರಿ ತಂಡದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಳಿಯಾಲ ಭೀಮ ಭಟ್ಟರ ಮತ್ತು ಕುಬಣೂರು ಶ್ರೀಧರ ರಾಯರ ತಂಡಗಳಲ್ಲೂ ಕಲಾವಿದನಾಗಿ ಭಾಗವಹಿಸಿರುತ್ತಾರೆ.

ದಿವಾಣ ಶಿವಶಂಕರ ಭಟ್ಟರ ಅನೇಕ ಶಿಷ್ಯಂದಿರು ಇಂದು ಅನೇಕ ಮೇಳಗಳಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. 2012ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಾಬ್ಧಿ ಯಕ್ಷೋತ್ಸವದ ಸಂದರ್ಭ ಧರ್ಮಸ್ಥಳದ ಖಾವಂದರ ಉಪಸ್ಥಿತಿಯಲ್ಲಿ ‘ಕಲಾಶಿಕ್ಷಣ ಗೌರವ’ ಪ್ರಶಸ್ತಿಯು ದೊರೆತಿದೆ. ಕರ್ನಾಟಕ ಜಾನಪದ ಪರಿಷತ್ತು- ಕೇರಳ ಗಡಿನಾಡು ಘಟಕ ಕಾಸರಗೋಡು ಇವರ ಜಾನಪದ ಸಂಧ್ಯಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಸನ್ಮಾನದ ಗೌರವವು ದೊರೆತಿದೆ. (2012) ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಧ್ರುವ ಪಟ್ಲ ಸಂಭ್ರಮ -2017ರಲ್ಲಿ ‘ಯಕ್ಷಧ್ರುವ ಕಲಾಗೌರವ’ ಪ್ರಶಸ್ತಿಯೂ ದೊರೆತಿದೆ. ಒಂದು ಲಕ್ಷ ರೂ. ಗೌರವ ಧನದೊಂದಿಗೆ  ಯಕ್ಷಧ್ರುವ ಪಟ್ಲ ಫೌಂಡೇಶನಿನ ಕುಂಬಳೆ ಘಟಕದ ಸನ್ಮಾನ, ಮಂಗಳೂರಿನ ಕೇಂದ್ರ ಮಹಿಳಾ ಘಟಕದಿಂದಲೂ ಸನ್ಮಾನವನ್ನು ಸ್ವೀಕರಿಸಿದ್ದಾರೆ.

ತಾನು ಕಲಾಸೇವೆಯನ್ನು ಮಾಡುತ್ತಾ ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟವರು ಶ್ರೀ ದಿವಾಣ ಶಿವಶಂಕರ ಭಟ್ಟರು. ಪ್ರಸ್ತುತ ತೆಂಕಿನ ಎಲ್ಲಾ ಮೇಳಗಳಲ್ಲೂ ಇವರಿಂದ ನಾಟ್ಯ ಕಲಿತವರು ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಇದು ಅವರು ಅತ್ಯಂತ ಸಂತೋಷ ಪಡಬೇಕಾದ ವಿಚಾರವು. ಯಕ್ಷಗಾನಕ್ಕೆ ಶ್ರೀಯುತರ ಕೊಡುಗೆಯಿದು.

ದಿವಾಣ ಶಿವಶಂಕರ ಭಟ್ಟರ ಪತ್ನಿ ಶ್ರೀಮತಿ ರೋಹಿಣಿ ದಿವಾಣ . ಇವರು ಗೃಹಣಿ. ಇವರ ತಂದೆ ಅರಂಬೂರು ಶ್ರೀ ಗೋವಿಂದ ಭಟ್ಟರು ಮದ್ದಳೆಗಾರರು. ಇವರು ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯ. ರೋಹಿಣೀ ಶಿವಶಂಕರ್ ದಿವಾಣ ಅವರು ಸಂಗೀತ ಜೂನಿಯರ್ ಕಲಿತಿರುತ್ತಾರೆ. ದಿವಾಣ ಶಿವಶಂಕರ್ ಭಟ್, ರೋಹಿಣಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯಪುತ್ರ ಶ್ರೀ ಗಣೇಶ ದಿವಾಣ ಪ್ರಜ್ಞಾ ವಿಶೇಷ ಚೇತನರ ವಸತಿ ಶಾಲೆ ಪುತ್ತೂರು ಇಲ್ಲಿಯ ವಿದ್ಯಾರ್ಥಿ. ಕಿರಿಯ ಪುತ್ರ ಶ್ರೀ ಸ್ಕಂದ. ಶೃಂಗೇರಿಯ ಸಂಸ್ಕೃತ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ದ್ವಿತೀಯ ಎಂ.ಎ  ಸಂಸ್ಕೃತ ದರ್ಶನ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.  ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ದೊರಕಲಿ. ದಿವಾಣ ಶಿವಶಂಕರ ಭಟ್ಟರಿಂದ ಇನ್ನೂ ಹೆಚ್ಚಿನ ಕಲಾಸೇವೆಯು ನಡೆಯಲಿ. ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಫೋಟೋಗಳು: ಕಿರಣ್ ವಿಟ್ಲ, ಜಿ.ಪಿ ಭಟ್ (ದಿವಾಣ ಶಿವಶಂಕರ ಭಟ್ ಸಂಗ್ರಹ)

ಬಸ್ ನಿಲ್ದಾಣದಲ್ಲಿ ಒಬ್ಬ ಬಾಯ್ ಫ್ರೆಂಡ್ ಗಾಗಿ ಇಬ್ಬರು ಹುಡುಗಿಯರ ಜಗಳ – ಆಗ ಬಾಯ್ ಫ್ರೆಂಡ್ ಏನು ಮಾಡಿದ ಗೊತ್ತೇ?

ಮಹಾರಾಷ್ಟ್ರದ ಬಸ್ ನಿಲ್ದಾಣದಲ್ಲಿ ಕಾಮನ್ ಬಾಯ್ ಫ್ರೆಂಡ್ ಮೇಲೆ ಇಬ್ಬರು ಹುಡುಗಿಯರ ಜಗಳವಾಡುತ್ತಾರೆ. ಮುಂದೆ ಅವನು ಮಾಡಿದ್ದು ಕಂಡು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯ ಜನನಿಬಿಡ ಬಸ್ ನಿಲ್ದಾಣದಲ್ಲಿ 17 ವರ್ಷದ ಇಬ್ಬರು ಹುಡುಗಿಯರು ತಮ್ಮಿಬ್ಬರ ಒಬ್ಬ ಗೆಳೆಯನ ಬಗ್ಗೆ ಜಗಳವಾಡಿದ್ದಾರೆ. ಪ್ರೀತಿ ಕೆಲವೊಮ್ಮೆ ಮೂರ್ಖತನವನ್ನು ಮೀರಿಸುತ್ತದೆ ಮತ್ತು ವ್ಯಕ್ತಿಯನ್ನು ಮಾಡಬಾರದ ಬಹಳಷ್ಟು ಕೆಲಸಗಳನ್ನು ಮಾಡಿಸುತ್ತದೆ.

ಇದು ಒಂದು ಸುಂದರ ಭಾವನೆ, ನಿಸ್ಸಂದೇಹವಾಗಿ, ಆದರೆ ದುಡುಕಿನ ಮತ್ತು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯ ವಿಲಕ್ಷಣ ಘಟನೆಯೊಂದರಲ್ಲಿ 17 ವರ್ಷದ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ಹುಡುಗನ ಮೇಲೆ ಜಗಳವಾಡಿದ್ದಾರೆ.

ಬುಧವಾರ ಬೆಳಗ್ಗೆ ಪೈಠಾಣ್‌ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಜವಾಗಲೂ ಒಬ್ಬ ಹುಡುಗಿ ಹುಡುಗನ ಜೊತೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದಳು.

ಈ ವಿಷಯ ತಿಳಿದ ಮತ್ತೊಬ್ಬ ಬಾಲಕಿ ಕೂಡ ಸ್ಥಳಕ್ಕಾಗಮಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅದು ಜಗಳವಾಗಿ ಪರಿಣಮಿಸಿದೆ. ಹುಡುಗನಿಗೆ ಏನಾಯಿತು ಎಂದು ನೀವು ಕೇಳುತ್ತೀರಾ?

ಹುಡುಗಿಯರು ಹೊಡೆದಾಡಿಕೊಂಡಾಗ ಹುಡುಗ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಈ ಅಪಾಯವನ್ನು ಊಹಿಸಿದ ಹುಡುಗ ಸದ್ದಿಲ್ಲದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಅಧಿಕಾರಿಯ ಪ್ರಕಾರ, ಹುಡುಗಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನಂತರ ಬಿಡುಗಡೆ ಮಾಡಲಾಗಿದೆ.

ವೀಡಿಯೊ – ಜಿಂಕೆಗೂ ಯಾವಾಗ ರಸ್ತೆ ದಾಟಬೇಕೆಂಬುದು ಗೊತ್ತಿದೆ! ಜೀಬ್ರಾ ಕ್ರಾಸಿಂಗ್ ನಲ್ಲಿಯೇ ಸಮಯ ನೋಡಿ ರಸ್ತೆ ದಾಟುತ್ತಿರುವ ಜಿಂಕೆ 

ಇಲ್ಲೊಂದು ಜಿಂಕೆಗೆ  ಯಾವಾಗ ರಸ್ತೆ ದಾಟಬೇಕೆಂಬುದು ಗೊತ್ತಿದೆ!

ವಾಹನಗಳು ನಿಂತ ಮೇಲೆ ಜಿಂಕೆಯೊಂದು  ಜೀಬ್ರಾ ಕ್ರಾಸಿಂಗ್ ನಲ್ಲಿಯೇ ಸಮಯ ನೋಡಿ ರಸ್ತೆ ದಾಟುತ್ತಿರುವ ದೃಶ್ಯದ ವೀಡಿಯೊ ಈಗ ವೈರಲ್ ಆಗಿದೆ.

ಈ ಕಾನೂನು ಪಾಲಿಸುವ ಜಿಂಕೆ ಕಂಡದ್ದು ಜಪಾನಿನ ನಾರಾ ನಗರದಲ್ಲಿ.

ಈ ವೀಡಿಯೊ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ತಮಗೆ ಬೇಕಾದಂತೆ ರಸ್ತೆ ದಾಟುವ ಜನರಿಗೆ ಒಂದು ಪಾಠವಾಗಿದೆ. 

 ವೀಡಿಯೊ – ‘ವಂದೇ ಭಾರತ್’ ರೈಲು ಪ್ರಾಯೋಗಿಕ ಚಾಲನೆಯಲ್ಲಿ (Trail Run) 180 ಕಿಮೀ ವೇಗದಲ್ಲಿ ಧಾವಿಸಿದ ರೈಲು – ವಂದೇ ಭಾರತ್ ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲ್ಪಟ್ಟ ರೈಲು

ವಂದೇ ಭಾರತ್ ರೈಲು ಪ್ರಾಯೋಗಿಕ ಚಾಲನೆಯಲ್ಲಿ 180 ಕಿಮೀ ವೇಗವನ್ನು ದಾಖಲಿಸಿದೆ. ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಪರೀಕ್ಷಾರ್ಥ ಚಾಲನೆಯ ಸಮಯದಲ್ಲಿ 180 ಕಿಮೀ ವೇಗದ ಮಿತಿಯನ್ನು ಮೀರಿ ಚಲಿಸಿದೆ. ವಂದೇ ಭಾರತ್ ರೈಲಿನ ಪ್ರಾಥಮಿಕ ತಪಾಸಣೆ ವೇಳೆ ವಾಷಿಂಗ್ ಪಿಟ್ ನಲ್ಲಿ ತೊಳೆದು ಶುಚಿಗೊಳಿಸಲಾಯಿತು.

ಇದಲ್ಲದೆ, ರೈಲಿನ ಎಲ್ಲಾ ರೀತಿಯ ಉಪಕರಣಗಳು ಮತ್ತು ಪ್ಯಾನಲ್‌ಗಳನ್ನು ಸಹ ಪರಿಶೀಲಿಸಲಾಯಿತು. ವಂದೇ ಭಾರತ್‌ನ ವೇಗ ಪ್ರಯೋಗವನ್ನು ಕೋಟಾ-ನಾಗ್ಡಾ ರೈಲ್ವೆ ವಿಭಾಗದಲ್ಲಿ ವಿವಿಧ ವೇಗದ ಹಂತಗಳಲ್ಲಿ ನಡೆಸಲಾಯಿತು.

RDSO (ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ) ತಂಡವು ಹೊಸದಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ರೈಲು ಸೆಟ್‌ನೊಂದಿಗೆ ಗರಿಷ್ಠ 180 kmph ಪರೀಕ್ಷಾ ವೇಗದೊಂದಿಗೆ ರೈಲಿನ 16 ಕೋಚ್‌ಗಳ ಮೂಲಮಾದರಿಯ ರೇಕ್‌ನ ವಿವರವಾದ ಆಂದೋಲನ ಪ್ರಯೋಗಗಳನ್ನು ನಡೆಸಿದೆ. ಕೋಟಾ ವಿಭಾಗದಲ್ಲಿ ವಿವಿಧ ಹಂತದ ಪ್ರಯೋಗಗಳನ್ನು ನಡೆಸಲಾಯಿತು.

ಕೋಟಾ ಮತ್ತು ಘಾಟ್ ಕಾ ಬಾರಾನಾ ನಡುವೆ ಹಂತ ಒಂದನೇ ಪ್ರಯೋಗ, ಎರಡನೇ ಪ್ರಯೋಗ ಘಾಟ್ ಕಾ ಬಾರಾನಾ ಮತ್ತು ಕೋಟಾ, ಕುರ್ಲಾಸಿ ಮತ್ತು ರಾಮ್‌ಗಂಜ್ ಮಂಡಿ ನಡುವಿನ ಡೌನ್ ಲೈನ್‌ನಲ್ಲಿ ಮೂರನೇ ಟ್ರಯಲ್ ನಾನ್-ರೆಕಾರ್ಡಿಂಗ್, ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವಿನ ಡೌನ್ ಲೈನ್‌ನಲ್ಲಿ ನಾಲ್ಕನೇ ಮತ್ತು ಐದನೇ ಪ್ರಯೋಗ ಮತ್ತು ಆರನೇ ಪ್ರಯೋಗ ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವೆ ಡೌನ್ ಲೈನ್ ಮತ್ತು ಲಾಬನ್ ಅನ್ನು ಡೌನ್ ಲೈನ್‌ನಲ್ಲಿ ಮಾಡಲಾಗಿದೆ.

ಈ ಸಮಯದಲ್ಲಿ, ಅನೇಕ ಸ್ಥಳಗಳಲ್ಲಿ ವೇಗವು ಗಂಟೆಗೆ 180 ಕಿಮೀ ವೇಗವನ್ನು ಮುಟ್ಟಿತು. ವಂದೇ ಭಾರತ್ ರೈಲು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಇದು ಅರೆ-ಅತಿ ವೇಗದ ರೈಲು.

ವಂದೇ ಭಾರತ್ ರೈಲು ಸ್ವಯಂ ಚಾಲಿತ ಎಂಜಿನ್ ರೈಲು, ಅಂದರೆ, ಇದು ಪ್ರತ್ಯೇಕ ಎಂಜಿನ್ ಹೊಂದಿಲ್ಲ. ಇದು ಸ್ವಯಂಚಾಲಿತ ಬಾಗಿಲುಗಳು ಮತ್ತು ಹವಾನಿಯಂತ್ರಿತ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದೆ ಮತ್ತು 180 ಡಿಗ್ರಿಗಳವರೆಗೆ ತಿರುಗಬಲ್ಲ ರಿವಾಲ್ವಿಂಗ್ ಕುರ್ಚಿಯನ್ನು ಹೊಂದಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ 12-15 ಅಡಿ ಉದ್ದದ ಬಿರುಕು – ಸಂಚಾರ ಅಸ್ತವ್ಯಸ್ತ

ಸೆಕ್ಟರ್ 96 ರ ಸಮೀಪವಿರುವ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ನಿನ್ನೆ (ಆಗಸ್ಟ್ 26) ರಸ್ತೆಯಲ್ಲಿ ಕಾಣಿಸಿಕೊಂಡ 12-15 ಅಡಿ ಉದ್ದದ ಬಿರುಕಿನ ನಂತರ ವಾಹನ ಸಂಚಾರ ನಿಲ್ಲಿಸಲಾಗಿದೆ.

ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಿರುಕು ಬಿಟ್ಟಿದ್ದು, ರಸ್ತೆಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ನೋಯ್ಡಾದ ಸೆಕ್ಟರ್ 96 ರ ಸಮೀಪವಿರುವ ಸೂಪರ್‌ಟೆಕ್ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದರಿಂದ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.

ಅಧಿಕಾರಿಗಳು ಬ್ಯಾರಿಕೇಡ್‌ ಹಾಕಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ಅಧಿಕಾರಿಗಳು ದೀರ್ಘ ಕಾಲದಿಂದ ಎಕ್ಸ್‌ಪ್ರೆಸ್‌ವೇಯನ್ನು ದುರಸ್ತಿಪಡಿಸುತ್ತಿದ್ದಾರೆ, ಇದರಿಂದಾಗಿ ರಸ್ತೆಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ.

ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಆರು ಪಥಗಳ ಹೆದ್ದಾರಿಯಾಗಿದ್ದು, ಉತ್ತರ ಪ್ರದೇಶದ ನೋಯ್ಡಾವನ್ನು ಗ್ರೇಟರ್ ನೋಯ್ಡಾಗೆ ಸಂಪರ್ಕಿಸುತ್ತದೆ. ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ

ಇಂದು ‘ಮಾನಿಷಾದ’ ಯಕ್ಷಗಾನ ಪ್ರದರ್ಶನ, ಮಂಗಳೂರು ವಿವಿಯಲ್ಲಿ ‘ಯಕ್ಷ ಪುರುಷೋತ್ತಮ’ – ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆ, ಕೃತಿ ಬಿಡುಗಡೆ

ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ(ರಿ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ  ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣಾ ಕಾರ್ಯಕ್ರಮ ಇಂದು ಆ.27 ಶನಿವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.

  ಬೆಳಿಗ್ಗೆ 10ರಿಂದ ನಡೆಯುವ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್. ಹೆಗಡೆ ಕುಮಟಾ ಅವರು ಯಕ್ಷ ಪುರುಷೋತ್ತಮ ಸಂಸ್ಕರಣ ಗ್ರಂಥ ಬಿಡುಗಡೆಗೊಳಿಸಲಿದ್ದು,  ಹಿರಿಯ ಕಲಾವಿದರಾದ ವಿಶ್ವೇಶ್ವರ ಭಟ್ ಸುಣ್ಣಂಬಳ ಅವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.  

ಮುಖ್ಯ ಅಭ್ಯಾಗತರಾಗಿ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಷಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಯಕ್ಷ‌ ಪುರುಷೋತ್ತಮ ಸಂಪಾದಕರಾದ‌ ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಾಯಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಭಾಗವಹಿಸಲಿದ್ದಾರೆ.

ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಮಂಜನಾಡಿ ವಿಷ್ಣುಮೂರ್ತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಟಿ.ಸುಬ್ರಮಣ್ಯ ಭಟ್, ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷರಾದ ಶೋಭಾ ಪುರುಷೋತ್ತಮ ಪೂಂಜ, ಉಪಾಧ್ಯಕ್ಷರಾದ ರಾಜರಾಮ ಹೊಳ್ಳ ಕೈರಂಗಳ ಉಪಸ್ಥಿತರಿರಲಿದ್ದಾರೆ.

  ಸಭಾ ಕಾರ್ಯಕ್ರಮದ ಬಳಿಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ‘ಮಾನಿಷಾದ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ‌ ದೀಪಪ್ರಜ್ವಲನೆ ಮಾಡಲಿದ್ದಾರೆ ಹಾಗೂ ಯಕ್ಷಗಾನ ಪ್ರದರ್ಶನದಲ್ಲಿ ಪ್ರಸಿದ್ಧ ಯಕ್ಷಗಾನ‌ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಇಂದು ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ – ‘ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ’

ಇಂದು ದಿನಾಂಕ 27.08.2022ರಂದು ಶನಿವಾರ ಪೂರ್ವಾಹ್ನ 10 ಘಂಟೆಯಿಂದ ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ‘ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ’ ಎಂಬ ವಿಷಯದ ಬಗ್ಗೆ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಘಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10.45ರಿಂದ ವಿವಿಧ ವಿಷಯಗಳ ಬಗ್ಗೆ  ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ 2 ಘಂಟೆಯಿಂದ 3 ಘಂಟೆಯ ವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ

India Book of Records ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುವಿನ ದಾಖಲೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುಳ ಹೆಸರು  India Book of Records ನಲ್ಲಿ ದಾಖಲಾಗಿದೆ.

ಇವಳ ವಯಸ್ಸು 3ವರ್ಷ, 8ತಿಂಗಳು. ಅತೀಕಿರಿಯ ವಯಸ್ಸಿನಲ್ಲಿ ಈಕೆ 35 ಹಣ್ಣುಗಳ, 16 ಬಣ್ಣಗಳ, ಹೆಸರನ್ನು ಗುರುತಿಸಿರುತ್ತಾಳೆ. 2 ಶ್ಲೋಕ, 4  Rhymes, ದೇಹದ 20 ಅಂಗಗಳ ಹೆಸರುಗಳನ್ನು ಗುರುತಿಸಿ 8 ರಾಷ್ಟ್ರ ಲಾಂಛನವನ್ನು ಗುರುತಿಸಿದ ಸಾಧನೆ ಈಕೆಯದು.

ಅನ್ವಿಕಾ ಪ್ರಭು ಪುತ್ತೂರು ಕೋಡಿಂಬಾಡಿಯ ನಿವಾಸಿ ಶ್ರೀ ಅಶೋಕ್ ಪ್ರಭು.ಡಿ.ಕೆ ಹಾಗೂ ಶ್ವೇತಾ ಪ್ರಭು ಇವರ ಪುತ್ರಿ.


3 ವರ್ಷ 8 ತಿಂಗಳ ಅತಿ ಕಿರಿಯ ವಯಸ್ಸಿನಲ್ಲಿ India Book of Records ನಲ್ಲಿ ಈಕೆಯ ಹೆಸರು ದಾಖಲೆಯಾಗಿದೆ ಹಾಗೂ ನಮ್ಮ ಶಾಲೆಯ ಇತಿಹಾಸದಲ್ಲಿ ಇದೊಂದು ವಿಶಿಷ್ಠ ಸಾಧನೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

‘ಪ್ರತಿಯೊಂದು ಮುಸಲ್ಮಾನರ ಮನೆಯ ಪಕ್ಕದಲ್ಲಿಯೂ ಪ್ರತಿಯೊಂದು ಮೂಲೆಯಲ್ಲೂ ಮಸೀದಿ ಬೇಕು ಎಂದು ಕುರಾನ್ ಹೇಳುವುದಿಲ್ಲ’: ಹೊಸ ಮಸೀದಿಗೆ ಅನುಮತಿ ನಿರಾಕರಿಸಿದ ಕೇರಳ ಹೈಕೋರ್ಟ್

0

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ಕೇರಳ ರಾಜ್ಯವನ್ನು ‘ದೇವರ ಸ್ವಂತ ನಾಡು’ ಎಂದು ಕರೆಯಲಾಗುತ್ತಿದ್ದು, ಅದು ಧಾರ್ಮಿಕ ಸ್ಥಳಗಳಿಂದ ತುಂಬಿದೆ ಎಂದು ಹೇಳಿದ್ದಾರೆ. “ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ತುಂಬಿದ್ದೇವೆ ಮತ್ತು ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ” ಎಂದು ತೀರ್ಪು ನೀಡಿದರು.

ಕೇರಳದಲ್ಲಿ ಈಗಾಗಲೇ ಹಲವು ಮಸೀದಿಗಳನ್ನು ಹೊಂದಿರುವ ಪ್ರದೇಶದಲ್ಲಿ ಹೊಸ ಮಸೀದಿ ನಿರ್ಮಿಸಲು ಅನುಮತಿ ನೀಡಲು ಶುಕ್ರವಾರ ಕೇರಳ ಹೈಕೋರ್ಟ್ ನಿರಾಕರಿಸಿದೆ. ರಾಜ್ಯವು ಈಗಾಗಲೇ ಅನೇಕ ಧಾರ್ಮಿಕ ಸ್ಥಳಗಳನ್ನು ಹೊಂದಿದ್ದು, ಅಲ್ಲಿ ಭಕ್ತರು ಪೂಜಿಸಬಹುದು ಮತ್ತು ರಾಜ್ಯದಲ್ಲಿನ ಜನಸಂಖ್ಯೆಗೆ ಧಾರ್ಮಿಕ ರಚನೆಗಳ ಅನುಪಾತವು ತುಂಬಾ ಹೆಚ್ಚಾಗಿದೆ ಎಂದು ನ್ಯಾಯಾಲಯ ಹೇಳಿದೆ.

ವರದಿಗಳ ಪ್ರಕಾರ, ನೂರುಲ್ ಇಸ್ಲಾಂ ಸಾಂಸ್ಕೃತಿಕ ಸಂಗಮವು ವಾಣಿಜ್ಯ ಕಟ್ಟಡವನ್ನು ಮುಸ್ಲಿಂ ಪೂಜಾ ಸ್ಥಳವಾಗಿ ಬದಲಾಯಿಸಲು ಕೋರಿ ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಇದರಿಂದ ಸುತ್ತಮುತ್ತಲಿನ ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಜಿಲ್ಲಾಧಿಕಾರಿಗಳು ವಿನಂತಿಯನ್ನು ಮೌಲ್ಯಮಾಪನ ಮಾಡಿದರು ಮತ್ತು ಅರ್ಜಿದಾರರ ಪ್ರಸ್ತುತ ವಾಣಿಜ್ಯ ರಚನೆಯ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 36 ಮಸೀದಿಗಳಿವೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರ ವರದಿಗಳ ಆಧಾರದ ಮೇಲೆ ಅದನ್ನು ತಿರಸ್ಕರಿಸಿದರು.

ನ್ಯಾಯಮೂರ್ತಿಗಳು ಖುರಾನ್ ಅನ್ನು ಉಲ್ಲೇಖಿಸಿದರು ಮತ್ತು ಪ್ರದೇಶದ ಮೂಲೆ ಮೂಲೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮಸೀದಿ ಇರಬೇಕು ಎಂದು ಪುಸ್ತಕದಲ್ಲಿ ಎಲ್ಲಿಯೂ ಬರೆಯಲಾಗಿಲ್ಲ ಎಂದು ಹೇಳಿದರು. ಪವಿತ್ರ ಖುರಾನ್‌ನ ಜುಝ್ 10 ಸೂರಾ 18 ಮತ್ತು ಜುಝ್ 1 ಸೂರಾ 114 ಮತ್ತು ರಿಯಾದುಸ್ಸಾಲಿಹೀನ್‌ನ ಷರತ್ತು 1064 ಅನ್ನು ನ್ಯಾಯಾಲಯವು ಮತ್ತಷ್ಟು ಉಲ್ಲೇಖಿಸಿದೆ.

“ಪವಿತ್ರ ಕುರಾನ್‌ನ ಮೇಲಿನ ಪದ್ಯಗಳು ಮುಸ್ಲಿಂ ಸಮುದಾಯಕ್ಕೆ ಮಸೀದಿಯ ಮಹತ್ವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ. ಆದರೆ ಈ ಮೇಲಿನ ಪವಿತ್ರ ಕುರ್‌ಆನ್‌ನ ಶ್ಲೋಕಗಳಲ್ಲಿ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ ಮಸೀದಿ ಅಗತ್ಯ ಎಂದು ಹೇಳಲಾಗಿಲ್ಲ. ಹದೀಸ್‌ನಲ್ಲಿ ಅಥವಾ ಪವಿತ್ರ ಕುರಾನ್‌ನಲ್ಲಿ ಮಸೀದಿಯು ಪ್ರತಿಯೊಬ್ಬ ಮುಸ್ಲಿಂ ಸಮುದಾಯದ ಸದಸ್ಯರ ಮನೆಯ ಪಕ್ಕದಲ್ಲಿದೆ ಎಂದು ಹೇಳಲಾಗಿಲ್ಲ. ದೂರವು ಮಾನದಂಡವಲ್ಲ, ಆದರೆ ಮಸೀದಿಯನ್ನು ತಲುಪುವುದು ಮುಖ್ಯವಾಗಿದೆ, ”ಎಂದು ನ್ಯಾಯಾಲಯವು ಗಮನಿಸುತ್ತದೆ.

“ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಯಹೂದಿಗಳು, ಪಾರ್ಸಿಗಳು, ಇತ್ಯಾದಿಗಳ ಪ್ರತಿಯೊಬ್ಬ ಭಕ್ತರು ತಮ್ಮ ನಿವಾಸದ ಬಳಿ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ರಾಜ್ಯವು ಕೋಮು ಸೌಹಾರ್ದತೆ ಸೇರಿದಂತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ನ್ಯಾಯಾಲಯವು ಪೊಲೀಸ್ ವರದಿಯ ಪ್ರಕಾರ ಹೇಳಿದೆ. , ವಾಣಿಜ್ಯ ಕಟ್ಟಡವನ್ನು ಧಾರ್ಮಿಕ ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸುವುದು ಆ ಪ್ರದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು.

ತತ್‌ಕ್ಷಣದ ಪ್ರಕರಣದಲ್ಲಿ, ಪ್ರಶ್ನಾರ್ಹವಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ 36 ಮಸೀದಿಗಳು ಅಸ್ತಿತ್ವದಲ್ಲಿದ್ದ ಕಾರಣ, ಆ ಪ್ರದೇಶದಲ್ಲಿ ಮತ್ತೊಂದು ಮಸೀದಿಯ ಅಗತ್ಯವಿಲ್ಲ ಎಂದು ನ್ಯಾಯಾಲಯ ನಿರ್ಧರಿಸಿತು ಏಕೆಂದರೆ ಮುಸ್ಲಿಮರು ಇತರ ಹತ್ತಿರದ ಮಸೀದಿಗಳಿಗೆ ಪ್ರಯಾಣಿಸಬಹುದು, ವಿಶೇಷವಾಗಿ ಹೆಚ್ಚಿನ ನಾಗರಿಕರಿಗೆ ವಾಹನ ಅಥವಾ ಪ್ರವೇಶವನ್ನು ನೀಡಲಾಗಿದೆ.

“ಭಾರತದ ಸಂವಿಧಾನದ 26 (ಎ) ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ ಎಂದು ಹೇಳುತ್ತದೆ, ಪ್ರತಿ ಧಾರ್ಮಿಕ ಪಂಗಡ ಅಥವಾ ಅದರ ಯಾವುದೇ ವಿಭಾಗವು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತದೆ. ಅವರು ದೇಶದ ಮೂಲೆ ಮೂಲೆಗಳಲ್ಲಿ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಬಹುದು ಎಂದು ಅರ್ಥವಲ್ಲ. ಕೇರಳ ಅತ್ಯಂತ ಚಿಕ್ಕ ರಾಜ್ಯವಾಗಿದೆ,” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

“ನಾಗರಿಕರು ಪರಸ್ಪರ ಪ್ರೀತಿಸಲಿ ಮತ್ತು ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಅವರ ಧಾರ್ಮಿಕ ಆಚರಣೆಗಳನ್ನು ಅನುಸರಿಸಲಿ. ಅವರು ಅದನ್ನು ಅವರ ಮನೆಯಿಂದಲೇ ಮಾಡಬಹುದು ಮತ್ತು ಅವರ ಧರ್ಮವು ಅದನ್ನು ಒತ್ತಾಯಿಸಿದರೆ, ಅದನ್ನು ಪ್ರಾರ್ಥನಾ ಮಂದಿರದಲ್ಲಿ ಒಟ್ಟಿಗೆ ಮಾಡಬೇಕು. ಅವರು ತಮ್ಮ ನೆರೆಹೊರೆಯಲ್ಲಿ ಮತ್ತೊಂದು ಮಸೀದಿ ಅಥವಾ ಪ್ರಾರ್ಥನಾ ಮಂದಿರವನ್ನು ನಿರ್ಮಿಸುವ ಬದಲು ಹತ್ತಿರದ ಮಸೀದಿಗೆ ಪ್ರಯಾಣಿಸಬಹುದು ಎಂದು ತೀರ್ಪು ಹೇಳಿದೆ.

ಶ್ರೀ ಧರ್ಮಸ್ಥಳ ಮೇಳದ ಯುವ ಪ್ರತಿಭೆ – ಶ್ರೀ ಹರೀಶ್ ಶೆಟ್ಟಿ ಮಣ್ಣಾಪು 

ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ತೆಂಕುತಿಟ್ಟಿನ ಉದಯೋನ್ಮುಖ ಯುವ ಕಲಾವಿದರು. ಶ್ರೀ ಧರ್ಮಸ್ಥಳದ ಯುವ ಪ್ರತಿಭೆಗಳಲ್ಲಿ ಇವರೂ ಒಬ್ಬರು. 2006ರಿಂದ ತೊಡಗಿ ಕಳೆದ ಹದಿಮೂರು ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಏಳನೇ ಕ್ಲಾಸಿನ ವಿದ್ಯಾರ್ಥಿಯಾಗಿರುವಾಗಲೇ ಇವರು ವೇಷ ಮಾಡಲು ಆರಂಭಿಸಿದ್ದರು. ಇವರು ಸದಾ ಅಧ್ಯಯನಶೀಲರು. ಸಾಕಷ್ಟು ಪೂರ್ವಸಿದ್ಧತೆ ಮಾಡಿಯೇ ರಂಗವೇರುತ್ತಾರೆ. ಮಾತುಗಾರಿಕೆಯ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ. ಕುಣಿತದ ಜತೆಗೆ ಶುದ್ಧವಾದ ಭಾಷೆಯಿಂದ ಹಿತಮಿತವಾದ ಮಾತುಗಳಿಂದ ಪಾತ್ರವನ್ನು ಕಟ್ಟಿಕೊಡುವ ಕಲೆಯು ಇವರಿಗೆ ಕರಗತವಾಗಿದೆ.

ಬಣ್ಣದ ವೇಷಧಾರಿಯಾದರೂ ಮಾತುಗಾರಿಕೆಯ ಬಗೆಗೆ ವಿಶೇಷವಾಗಿ ಗಮನಹರಿಸಿ ಅಧ್ಯಯನಶೀಲರಾಗಿ ತೊಡಗಿಸಿಕೊಂಡ ಕಾರಣ ಕಿರೀಟ ವೇಷಗಳನ್ನೂ ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ತಮ್ಮ ಪ್ರತಿಭೆಯಿಂದ ವೇಷಗಳು ತಾನಾಗಿಯೇ ಇವರಿಗೆ ಒಲಿದುಬಂದಿತ್ತು. ಅನಿವಾರ್ಯಕ್ಕೆಂದು ಮಾಡಿದ ವೇಷಗಳೆಲ್ಲಾ ಮತ್ತೆ ಇವರೇ ನಿರ್ವಹಿಸುವಂತಾಗಿತ್ತು. ಆಳಂಗವೂ ಆಕರ್ಷಕ ಕಂಠಸಿರಿಯೂ ಇವರಿಗೆ ದೇವರ ಅನುಗ್ರಹದಿಂದ ದೊರಕಿದ್ದು. ಬಣ್ಣದ ವೇಷಕ್ಕೂ ಕಿರೀಟ ವೇಷಕ್ಕೂ ಹೇಳಿ ಮಾಡಿಸಿದ ಆಳಂಗ ಇವರದ್ದು. ಪ್ರೇಕ್ಷಕರನ್ನು ಆಕರ್ಷಿಸಿ ಹಿಡಿದಿಡಬಲ್ಲ ಧ್ವನಿಯನ್ನೂ ಹೊಂದಿರುತ್ತಾರೆ. ಬಣ್ಣದ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಂಡು ರಂಗದಲ್ಲಿ ಅಬ್ಬರಿಸುವ ಇವರು ನಿಜ ಜೀವನದಲ್ಲಿ ಸಾತ್ವಿಕ ಸ್ವಭಾವವುಳ್ಳವರು. ನಗುಮೊಗದ, ವಿನಯವಂತ ಕಲಾವಿದರಿವರು. 

ಶ್ರೀ ಧರ್ಮಸ್ಥಳ ಮೇಳದ ಯುವ ಪ್ರತಿಭೆ ಶ್ರೀ ಹರೀಶ್ ಶೆಟ್ಟಿ ಅವರ ಹುಟ್ಟೂರು ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಮಣ್ಣಾಪು ಎಂಬಲ್ಲಿ. 1980ನೇ ಇಸವಿ ಜನವರಿ 23ರಂದು ಶ್ರೀ ನಾರಾಯಣ ಶೆಟ್ಟಿ ಮಣ್ಣಾಪು ಮತ್ತು ಶ್ರೀಮತಿ ಪದ್ಮಿನಿ ದಂಪತಿಗಳ ಪುತ್ರನಾಗಿ ಜನನ. ಹರೀಶ್ ಶೆಟ್ಟಿ ಅವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಒಲಿದಿತ್ತು. ತಂದೆ ನಾರಾಯಣ ಶೆಟ್ರು ಒಳ್ಳೆಯ ಕಿರೀಟ ವೇಷಧಾರಿಯಾಗಿದ್ದರು. ನಾಟಕೀಯ ವೇಷಗಳನ್ನೂ ಮಾಡುತ್ತಿದ್ದರು.

ಹೆಸರಾಂತ ಕಲಾವಿದ ನಾರಂಪಾಡಿ ಸುಬ್ಬಯ್ಯ ಶೆಟ್ರು ತಂದೆಯ ಸೋದರ ಮಾವ. (ಇವರು ತಾಯಿಯ ತಂದೆಯೂ ಹೌದು) ನಾರಂಪಾಡಿ ಸುಬ್ಬಯ್ಯ ಶೆಟ್ರ ಮಗ ಶೇಷಪ್ಪ ಶೆಟ್ರು ಹಿಮ್ಮೇಳ ಮುಮ್ಮೇಳಗಳನ್ನು ಅರಿತ ಕಲಾವಿದರಾಗಿದ್ದರು. ಇವರಿಂದಲೇ ಹರೀಶ್ ಶೆಟ್ರು ನಾಟ್ಯ ಕಲಿತು ವೇಷ ಮಾಡಲು ಆರಂಭಿಸಿದ್ದು. ಹರೀಶ್ ಅವರು ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ. ಬೆಳ್ಳೂರು ಸರಕಾರೀ ಪ್ರೌಢಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ತಂದೆತಾಯಿಯರ ಜತೆ ತೆರಳಿ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಅದು ಈಡೇರುವುದಕ್ಕೆ ಅವಕಾಶವೂ ಒದಗಿತ್ತು.

ಶಾಲಾ ರಜಾದಿನಗಳಲ್ಲಿ ಬಂಧುಗಳಾದ ಶ್ರೀ ಶೇಷಪ್ಪ ಶೆಟ್ಟರಿಂದ ನಾಟ್ಯ ಕಲಿತರು.6ನೇ ಕ್ಲಾಸಿನಲ್ಲಿರುವಾಗ ನಾಟ್ಯ ಕಲಿಕೆಗೆ ಆರಂಭ. ಮೊಟ್ಟಮೊದಲು ವೇಷ ಮಾಡಿದ್ದು 7ನೇ ಕ್ಲಾಸಿನಲ್ಲಿ ಓದುತ್ತಿರುವಾಗ. ಮನೆ ಸಮೀಪ ನಡೆದ ಪ್ರದರ್ಶನ, ವೀರಮಣಿ ಕಾಳಗ ಪ್ರಸಂಗದಲ್ಲಿ ಶಿವಗಣಗಳಲ್ಲಿ ಒಬ್ಬನಾಗಿ ರಂಗ ಪ್ರವೇಶ ಮಾಡಿದ್ದರು. ಬಳಿಕ  ಎಸ್.ಎಸ್.ಎಲ್.ಸಿ ವರೆಗೂ ಊರ ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ವೇಷ ಮಾಡುವ ಅವಕಾಶಗಳು ಸಿಕ್ಕಿತ್ತು.

9ನೇ ಕ್ಲಾಸಿನಲ್ಲಿ ಓದುತ್ತಿರುವಾಗ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ಮಕ್ಕಳ ತಂಡಕ್ಕೆ ಸೇರ್ಪಡೆಯಾದರು. ಶ್ರೀ ಕೆ.ಸಿ ಪಾಟಾಳಿ ಅವರು ಈ ತಂಡದ ಸಂಚಾಲಕರು. ಅಲ್ಲಿ ಕಲಿಕಾಸಕ್ತರಿಗೆ ಪಡುಮಲೆ ನಾರಾಯಣ ಪಾಟಾಳಿ ಅವರು ತರಬೇತಿ  ನೀಡುತ್ತಿದ್ದರು. ಅವರಿಂದಲೂ ಹರೀಶ್ ಮಣ್ಣಾಪು ಅವರು ತರಬೇತಿಯನ್ನು  ಪಡೆದರು.  ಎಸ್.ಎಸ್.ಎಲ್.ಸಿ ಪರೀಕ್ಷೆ ಕಳೆದು ಶ್ರೀ ಹರೀಶ್ ಮಣ್ಣಾಪು ಅವರನ್ನು ನಾರಾಯಣ ಪಾಟಾಳಿ ಅವರು ಕಟೀಲು ಮೇಳಕ್ಕೆ ಕರೆದೊಯ್ದರು. ಕಟೀಲು 1ನೇ ಮೇಳದಲ್ಲಿ ವೇಷಧಾರಿಯಾಗಿ ಎರಡು ತಿಂಗಳು ತಿರುಗಾಟ ನಡೆಸಿದ್ದರು.

ಮುಂದಿನ ವರ್ಷ ಮೇಳಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು. ಕೃಷಿಯ ಜೊತೆಗೆ ಊರ ಪರವೂರ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಬಣ್ಣದ ವೇಷಗಳತ್ತ ಆಕರ್ಷಿತರಾಗಿ ಆ ವಿಭಾಗದ ಪಾತ್ರಗಳನ್ನೇ ಮಾಡುತ್ತಿದ್ದರು. ತನ್ನ ಆಳಂಗ ಮತ್ತು ಸ್ವರಭಾರಗಳಿಂದ ಬಹುಬೇಗನೆ ಪ್ರೇಕ್ಷಕರನ್ನು ಆಕರ್ಷಿಸಿ ಹಿಡಿದಿಡುತ್ತಿದ್ದರು. ಆದುದರಿಂದ ಬಣ್ಣದ ವೇಷಧಾರಿಯಾಗಿಯೇ ಪಾತ್ರಗಳನ್ನು ಮಾಡುತ್ತಾ ಮುಂದೆ ಸಾಗಿದರು. 2003ರಿಂದ ಕೂಡ್ಲು ಮತ್ತು ಕೊಲ್ಲಂಗಾನ ಮೇಳಗಳಲ್ಲಿ ಖಾಯಂ ಕಲಾವಿದನಾಗಿ ಬಣ್ಣದ ವೇಷಗಳನ್ನು ನಿರ್ವಹಿಸತೊಡಗಿದರು.

ಮನೆಯಲ್ಲಿ ಹಿರಿಯರು ಸಂಗ್ರಹಿಸಿ ಇರಿಸಿದ್ದ ಪುರಾಣ ಪುಸ್ತಕಗಳು ಮತ್ತು ಪ್ರಸಂಗ ಪುಸ್ತಕಗಳು ಶ್ರೀ ಹರೀಶ್ ಶೆಟ್ಟಿ ಅವರಿಗೆ ಒಂದು ಆಸ್ತಿಯೇ ಆಗಿ ಅನುಕೂಲವಾಗಿತ್ತು. ಪುಸ್ತಕ ನೋಡಿ ಸಾಕಷ್ಟು ಸಿದ್ಧನಾಗಿಯೇ ಪ್ರದರ್ಶನಕ್ಕೆ ತೆರಳುತ್ತಿದ್ದರು. ವಿಚಾರಗಳ ಸಂಗ್ರಹಣೆ ಮತ್ತು ಮಾತುಗಾರಿಕೆಯನ್ನು ಕಲಿಯಲು ಆ ಪುಸ್ತಕಗಳು ಸಹಕಾರಿಯಾಗಿತ್ತು. ವೇಷಗಾರಿಕೆ ಮತ್ತು ಮಾತುಗಾರಿಕೆ ಬಗ್ಗೆ ತಂದೆಯ ನಿರ್ದೇಶನವೂ ಇತ್ತು. ನಾಟಕೀಯ ವೇಷಗಳನ್ನು ಮಾಡುವ ರೀತಿಯನ್ನು ಹೇಳಿಕೊಟ್ಟಿದ್ದರು. ಬಣ್ಣದ ವೇಷದ ಬಗ್ಗೆ ಶ್ರೀ ನಾರಾಯಣ ಪಾಟಾಳಿ ಅವರ ನಿರ್ದೇಶನವೂ ಇತ್ತು. 

ಶ್ರೀ ಹರೀಶ್ ಶೆಟ್ಟಿ ಅವರು ಧರ್ಮಸ್ಥಳ ಮೇಳಕ್ಕೆ  ಸೇರಿದ್ದು 2009ರಲ್ಲಿ. ಅಲ್ಲಿ ಮೊದಲ ತಿರುಗಾಟದಲ್ಲೇ ದಶಾವತಾರ ಪ್ರಸಂಗದಲ್ಲಿ ಮತ್ಸ್ಯ ಪಾತ್ರವನ್ನು ಮಾಡಿ ಶಿಶುಪಾಲನಾಗಿಯೂ ಅಭಿನಯಿಸುವ ಅವಕಾಶವಾಗಿತ್ತು. ಚತುರ್ಜನ್ಮ ಮೋಕ್ಷ ಪ್ರಸಂಗದಲ್ಲಿ ಕಾಲನೇಮಿ ಮಾಡಿ ಕೌಂಡ್ಲಿಕನ ಪಾತ್ರವನ್ನೂ ಮಾಡಿದ್ದರು. ಮೇಳದಲ್ಲಿ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ್ ರಾವ್ ಅವರ ಸಹಕಾರವು ದೊರಕಿತ್ತು. ಮುಮ್ಮೇಳದ ಸಹಕಲಾವಿದರೆಲ್ಲರೂ ಸಹಕರಿಸಿದ್ದರು. ವೇಷಗಾರಿಕೆಯ ಬಗೆಗೆ ಹಿರಿಯ ಕಲಾವಿದರ ಸಲಹೆ ಸೂಚನೆಗಳೂ ಸಿಕ್ಕಿತ್ತು.

ಬಣ್ಣದ ವೇಷಧಾರಿಗಳಾದ ಎಡನೀರು ಹರಿನಾರಾಯಣ ಭಟ್ ಮತ್ತು ಸತೀಶ್ ನೈನಾಡು ಇವರಿಬ್ಬರೂ ಸಲುಗೆಯಿಂದ ಮಾತಾಡಬಲ್ಲಷ್ಟು ಹರೀಶ್ ಅವರಿಗೆ ಆತ್ಮೀಯರಾಗಿದ್ದರು. ಬಣ್ಣದ ವೇಷಗಳ ಬಗ್ಗೆ ಅವರಿಂದಲೂ ಸಲಹೆ ಪಡೆಯುತ್ತಿದ್ದರು. ಮಾತುಗಾರಿಕೆಯ ಬಗ್ಗೆ  ಗಮನ ಹರಿಸಿ ಅಧ್ಯಯನ ಮಾಡಿದ ಕಾರಣದಿಂದ ಬಣ್ಣದ ವೇಷಗಳ ಜತೆಗೆ ಕಿರೀಟ ವೇಷಗಳನ್ನೂ ಮಾಡುವಂತಾಗಿತ್ತು. ಯಾವ ವೇಷವನ್ನು ನೀಡಿದರೂ ಶ್ರೀ ಹರೀಶ್ ಅವರು ಪಾತ್ರೋಚಿತವಾಗಿ ನಿರ್ವಹಿಸಬಲ್ಲರು.

ಇತ್ತೀಚಿನ ದಿನಗಳಲ್ಲಿ ಮೇಳದಲ್ಲಿ ಬಣ್ಣದ ವೇಷಕ್ಕಿಂತಲೂ ಹೆಚ್ಚು ಕಿರೀಟ ವೇಷಗಳಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ಮಳೆಗಾಲದಲ್ಲೂ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿರುತ್ತಾರೆ. 2012ರಿಂದ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ.  ಪ್ರಸ್ತುತ ಈ ತಂಡವನ್ನು ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಮುನ್ನಡೆಸುತ್ತಿದ್ದಾರೆ.

ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರು ಈಗ ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಇವರಿಗೆ ಸಿಗಲೆಂದು ಕಲಾಭಿಮಾನಿಗಳಾದ ನಾವೆಲ್ಲರೂ ಹಾರೈಸೋಣ.

ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರ ಪತ್ನಿ ಶ್ರೀಮತಿ ಕವಿತಾ (೨೦೨೦ರಲ್ಲಿ ವಿವಾಹ) ಹರೀಶ್, ಕವಿತಾ ದಂಪತಿಗಳಿಗೆ ಓರ್ವ ಪುತ್ರ. ಹೆಸರು ಕ್ರಿಯಾನ್ಸ್. ಬಾಲಕನಿಗೆ ಉಜ್ವಲವಾದ ಭವಿಷ್ಯವು ದೊರೆಯಲಿ. ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅವರಿಗೆ ಸಕಲ ಭಾಗ್ಯಗಳನ್ನೂ ಕಲಾ ಮಾತೆಯು ಅನುಗ್ರಹಿಸಲಿ. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ