Monday, May 11, 2026
Home Blog Page 189

ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಗೆ ಬೆಂಕಿ – ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ

0

ತೆಲಂಗಾಣದ ಸಿಕಂದರಾಬಾದ್‌ನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಗೆ ಬೆಂಕಿ ಹತ್ತಿಕೊಂಡಿದ್ದು ಈ ಅಗ್ನಿ ಅವಘಡದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ನೆಲಮಹಡಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ರೀಚಾರ್ಜಿಂಗ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ 1 ಮತ್ತು 2ನೇ ಮಹಡಿಯಲ್ಲಿದ್ದ ಜನರನ್ನು ಆವರಿಸಿದೆ. ಮೇಲಿನ ಮಹಡಿಗಳಲ್ಲಿದ್ದ ಹೋಟೆಲ್‌ನಲ್ಲಿ ಬೆಂಕಿ ವ್ಯಾಪಿಸಿಕೊಂಡು ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಉಳಿದ ಜನರು ಕಟ್ಟಡದಿಂದ ಜಿಗಿದಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಹೆಚ್ಚಿನವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕಟ್ಟಡದ ಮೇಲಿನ ಮಹಡಿಯಿಂದ ಹಲವರು ಜಿಗಿಯುವ ವೀಡಿಯೋ ದೃಶ್ಯ ವೈರಲ್‌ ಆಗಿದೆ.

ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಸ್ಥಳದಲ್ಲೇ ಅಗ್ನಿಶಾಮಕ ದಳ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಟೈಲರಿಂಗ್ ನ ಎಲ್ಲಾ ವಿಭಾಗಗಳ ತರಬೇತಿ ಒಂದೆಡೆಯಲ್ಲಿಯೇ ಲಭ್ಯ – ಅಪ್ಸರಾ ಲೇಡೀಸ್ ಟೈಲರ್ ಮತ್ತು ಎಂಬ್ರಾಯಿಡರಿ 

0

ಲೇಡೀಸ್ ಟೈಲರಿಂಗ್ ನ ಹಲವು  ವಿಭಾಗಗಳ ತರಬೇತಿಯು ಒಂದೆಡೆಯಲ್ಲಿಯೇ ದೊರಕುವ ಸುವರ್ಣಾವಕಾಶ ಮಹಿಳೆಯರಿಗೆ ಲಭ್ಯವಿದೆ.

ಒಂದೇ ತರಬೇತಿ ಕೇಂದ್ರದಲ್ಲಿ ಟೈಲರಿಂಗ್ ನ ವಿಭಾಗಗಳಾದ ಹೊಲಿಗೆ, ಕಟ್ಟಿಂಗ್, ಹ್ಯಾಂಡ್ ವರ್ಕ್, ಮೆಷೀನ್ ವರ್ಕ್, ಸಾರಿ ಗೊಂಡೆ, ಕ್ರೋಶರ ಗೊಂಡೆ, ಸಾರಿ ಫಾಲ್ ಮೊದಲಾದುವುಗಳ ತರಬೇತಿಯನ್ನು ನುರಿತ ಟೈಲರ್ ಗಳಿಂದ ನೀಡಲಾಗುವುದು.

ಇವುಗಳಲ್ಲದೆ ಲೇಡೀಸ್ ವಿಭಾಗದ ಎಲ್ಲಾ ಫ್ಯಾಶನ್ ಬಟ್ಟೆಯನ್ನು ಹೊಲಿಯಲು ಕಲಿಸಲಾಗುವುದು ಎಂದು ಅಪ್ಸರಾ ಲೇಡೀಸ್ ಟೈಲರ್ ಮತ್ತು ಎಂಬ್ರಾಯಿಡರಿ, ಕಲ್ಲಾರೆ ಪುತ್ತೂರು ಇದರ ಮಾಲೀಕರಾದ ಎ. ಮಹಾಬಲ ರೈಯವರು ತಿಳಿಸಿದ್ದಾರೆ.

ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಮೊಬೈಲ್ ದೂರವಾಣಿ ಸಂಖ್ಯೆ 9972924407 ಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪುತ್ತೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟ – ದ್ವಿತೀಯ ಸ್ಥಾನವನ್ನು ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಮೊರಾಜಿ ದೇಸಾಯಿ ಶಾಲೆ, ಬಲ್ನಾಡು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 9ರಂದು ನಡೆದ ಪುತ್ತೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ತಂಡದಲ್ಲಿ ಮೋಕ್ಷಿತ್(ನೇರಳಕಟ್ಟೆ ನಿವಾಸಿ ಶ್ರೀ ಜಗದೀಶ್ ಮತ್ತು ಪ್ರೇಮ ಇವರ ಪುತ್ರ), ಪ್ರೀತಮ್(ಮಿತ್ತೂರು ನಿವಾಸಿ ಜಯಂತ ಗೌಡ ಮತ್ತು ಲೀಲಾವತಿ ಇವರ ಪುತ್ರ), ರಿತೇಶ್(ಕಬಕ ನಿವಾಸಿ ಶ್ರೀ ವೆಂಕಪ್ಪ ಮತ್ತು ವೀಣ ಇವರ ಪುತ್ರ), ತ್ರಿಜಲ್(ಕೈಕಾರ ನಿವಾಸಿ ಶ್ರೀ ವಿನೋದ್ ಮತ್ತು ಶರಿಕ ಇವರ ಪುತ್ರ), ಎಂ.ಪ್ರಣಾಮ್ (ಮಿನಾವು ನಿವಾಸಿ ಶ್ರೀ ಕೇಶವ ಮತ್ತು ಶುಭಶ್ರೀ ಇವರ ಪುತ್ರ), 

ಧನ್ವಿತ್.ಎಂ(ಬಲ್ನಾಡು ನಿವಾಸಿ ಶ್ರೀ ಕೆ.ಮಾಧವ ಗೌಡ ಮತ್ತು ಯಶೋಧ ಇವರ ಪುತ್ರ), ವೈಶಾಖ್(ಬುಳ್ಳೇರಿಕಟ್ಟೆ ನಿವಾಸಿ ಶ್ರೀ ಗಣೇಶ್ ಎಮ್ ಮತ್ತು ಸರಸ್ವತಿ.ಪಿ ಇವರ ಪುತ್ರ), ಚಿನ್ಮಯ್(ಒಳತ್ತಡ್ಕ ನಿವಾಸಿ ಶ್ರೀ ಸೇಸಪ್ಪ ಮತ್ತು ಚಂದ್ರಿಕಾ ಇವರ ಪುತ್ರ), ನಮನ್(ಶ್ರೀ ದಯಾನಂದ ಗೌಡ ಮತ್ತು ವಿಮಲಾ ಇವರ ಪುತ್ರ), ತನುಷ್(ಶ್ರೀ ಪಾಂಡುರ0ಗ.ಕೆ ಮತ್ತು ಕುಸುಮ.ಕೆ ಇವರ ಪುತ್ರ) ತೃತೇಶ್(ಶ್ರೀ ಅಶೋಕ್.ಬಿ.ಬಿ ಮತ್ತು ಪೂರ್ಣಿಮಾ ಇವರ ಪುತ್ರ) ಮತ್ತು ನಿವೇದ್ (ಶ್ರೀ ರಾಜೇಶ್ ಮತ್ತು ಅಶ್ವಿನಿ ಇವರ ಪುತ್ರ) ಇದ್ದು, 

ರಿತೇಶ್ ಪಂದ್ಯಾಟದ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಂಡವು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕುದ್ಮಾರು ಇಲ್ಲಿ ನಡೆಯುವ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತಿರುಗಾಟದ ಸುವರ್ಣ ಸಂಭ್ರಮದಲ್ಲಿ ಶ್ರೀ ಸದಾಶಿವ ಕುಲಾಲ್ ವೇಣೂರು 

ಹೌದು. ಶ್ರೀ ಹನುಮಗಿರಿ ಮೇಳದ ಕಲಾವಿದ, ತೆಂಕುತಿಟ್ಟಿನ ಅನುಭವೀ ಪುಂಡುವೇಷಧಾರಿ  ಶ್ರೀ ಸದಾಶಿವ ಕುಲಾಲ್ ವೇಣೂರು ಅವರು ತಿರುಗಾಟದ ಸುವರ್ಣ ಸಂಭ್ರಮದಲ್ಲಿದ್ದಾರೆ. ವೃತ್ತಿ ಕಲಾವಿದನಾಗಿ ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ. 2022-23ನೇ  ಸಾಲು ಇವರ ಐವತ್ತೊಂದನೇ ತಿರುಗಾಟವು.

ಈ ತಿರುಗಾಟದ ಸಮಯದಲ್ಲಿ ‘ಸುವರ್ಣ ಸಂಭ್ರಮ’ ಆಚರಿಸುವ ಸಿದ್ಧತೆಯಲ್ಲಿ  ಶ್ರೀ ಸದಾಶಿವ ಕುಲಾಲ್ ವೇಣೂರು ಅವರು ತೊಡಗಿಸಿಕೊಂಡಿದ್ದಾರೆ. ಆಕರ್ಷಕ ರೂಪ ಮತ್ತು ಆಳಂಗವನ್ನು ಹೊಂದಿದ ಇವರು ಸ್ತ್ರೀ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಕಿರೀಟವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ರೂಪವು ದೇವರ ಕೊಡುಗೆ. ಅದರ ಜತೆಗೆ ತನ್ನ ಪ್ರತಿಭಾವ್ಯಾಪಾರದಿಂದ ಆಕರ್ಷಕವಾದ ಪ್ರವೇಶ, ಗಿರಕಿ, ಕುಣಿತಗಳಿಂದ ರಂಗದಲ್ಲಿ ಮೆರೆದ ಕಲಾವಿದರಿವರು.

ದೊಡ್ಡ ಸಾಮಗರು ( ಶ್ರೀ ಮಲ್ಪೆ ಶಂಕರನಾರಾಯಣ ಸಾಮಗರು) ಮತ್ತು ಶೇಣಿ ಗೋಪಾಲಕೃಷ್ಣ ಭಟ್ ಅವರೊಂದಿಗೂ ತಿರುಗಾಟ ನಡೆಸುವ ಭಾಗ್ಯವು ಇವರಿಗೆ ಸಿಕ್ಕಿತ್ತು. ಯಕ್ಷಗಾನ ವೇಷಭೂಷಣ ತಯಾರಿಕೆಯನ್ನೂ ಇವರು ಬಲ್ಲವರು. ಅದರಲ್ಲೂ ವಿಶೇಷವಾಗಿ ಬೇರೆ ಬೇರೆ ವೇಷಗಳಿಗೆ ಬೇಕಾದಂತೆ ಗಡ್ಡ ಮತ್ತು ಮೀಸೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಬಹಳಷ್ಟು ಕಲಾವಿದರು ವೇಣೂರು  ಶ್ರೀ ಸದಾಶಿವ ಕುಲಾಲರು ತಯಾರಿಸಿ ಕೊಟ್ಟ ಮೀಸೆ ಗಡ್ಡಗಳನ್ನು ಉಪಯೋಗಿಸುತ್ತಿರುವುದನ್ನು ನಾವು ಕಾಣಬಹುದು. ಶ್ರೀ ಜನಾರ್ದನ ಗುಡಿಗಾರರೂ ಶ್ರೀ ವಸಂತ ಗೌಡರೂ ಈ ವಿದ್ಯೆಯಲ್ಲಿ ನಿಪುಣರೆಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದು. 

ವೇಣೂರು ಶ್ರೀ ಸದಾಶಿವ ಕುಲಾಲರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಎಂಬಲ್ಲಿ. (ಶ್ರೀ ದೇವಿಕೃಪಾ ಮನೆ) 1961ನೇ  ನವೆಂಬರ್ 9ರಂದು ಶ್ರೀ ಕೃಷ್ಣಪ್ಪ ಮೂಲ್ಯ ಮತ್ತು ಶ್ರೀಮತಿ ಅಪ್ಪಿ ದಂಪತಿಗಳಿಗೆ ಪುತ್ರನಾಗಿ ಜನನ. ಶ್ರೀ ಕೃಷ್ಣಪ್ಪ ಮೂಲ್ಯರು ಸಣ್ಣ ಮಟ್ಟಿನ ಕೃಷಿಕರು. ಸದಾಶಿವ ಕುಲಾಲರು ಓದಿದ್ದು 3ನೇ ತರಗತಿ ವರೆಗೆ. ವೇಣೂರು ವಿದ್ಯಾದಾಯಿನಿ ಶಾಲೆಯಲ್ಲಿ. ಮನೆಯಲ್ಲಿ ಬಡತನವಿತ್ತು. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಎಳವೆಯಲ್ಲೇ  ಯಕ್ಷಗಾನಾಸಕ್ತಿ ಇತ್ತು. ಎಲ್ಲಾ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಕಲಿತು ಕಲಾವಿದನಾಗಬೇಕೆಂಬ ಆಸೆಯೂ ಆಗಿತ್ತು.

ಸುರತ್ಕಲ್ ಮೇಳವು ವೇಣೂರಿಗೆ ಬಂದಾಗ ಪ್ರದರ್ಶನ ನಡೆಯುವ ಸ್ಥಳಕ್ಕೆ ಬೇಗನೇ ತಲುಪುತ್ತಿದ್ದರು. ಆಸನಗಳನ್ನು ಜೋಡಿಸಿ ಇರಿಸುವುದು, ಆರಾಮ ಕುರ್ಚಿಯ ಬಟ್ಟೆಗೆ ರೋಲ್ ತುಂಬಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದರು. ಸುರತ್ಕಲ್ ಮೇಳದ ಹಾಸ್ಯಗಾರರಾದ ವೇಣೂರು ಶ್ರೀ ಸುಂದರ ಆಚಾರ್ಯರು ಮೇಳಕ್ಕೆ ಬರುತ್ತೀಯಾ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು. ಎರಡು ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ. ಆ ಸಂದರ್ಭದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ಮಾಡಲು ಅವಕಾಶ ಸಿಕ್ಕಿತ್ತು. ಆದುದರಿಂದ ರಂಗಭಯವು ದೂರವಾಗಿತ್ತು.

ದೊಡ್ಡ ಸಾಮಗರಿಗೆ ಸದಾಶಿವ ಕುಲಾಲರಲ್ಲಿ ತುಂಬಾ ಪ್ರೀತಿ. ಅವರು ಕಾರ್ಯಕ್ರಮಗಳಿಗೆ ಹೋಗುವಾಗ ಜತೆಗೆ ಕರೆದೊಯ್ಯುತ್ತಿದ್ದರು. ಬಳಿಕ ನಾಟ್ಯ ಕಲಿತು ವೇಷಧಾರಿಯಾಗಲು ಸದಾಶಿವ ಕುಲಾಲರು ನಿರ್ಧರಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ತೆರಳಿ ಶ್ರೀ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ತರಬೇತಿ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಬಂಟ್ವಾಳ ಜಯರಾಮ ಆಚಾರ್ಯ, ಹಳುವಳ್ಳಿ ಗಣೇಶ ಭಟ್,ಜನಾರ್ದನ ಗುಡಿಗಾರ, ವಸಂತ ಗೌಡ ಕಾಯರ್ತಡ್ಕ, ಸಬ್ಬಣಕೋಡಿ ರಾಮ ಭಟ್, ಸಬ್ಬಣಕೋಡಿ ಕೃಷ್ಣ ಭಟ್ ಮೊದಲಾದವರು ಸಹಪಾಠಿಗಳಾಗಿದ್ದರು. ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಪ್ರದರ್ಶನ ರತಿಕಲ್ಯಾಣ ಪ್ರಸಂಗದಲ್ಲಿ ರತಿಯಾಗಿ ರಂಗವೇರುವ ಅವಕಾಶವಾಗಿತ್ತು. 

ವೇಣೂರು ಶ್ರೀ ಸದಾಶಿವ ಕುಲಾಲರು ಯಕ್ಷಗಾನ ತಿರುಗಾಟ ಆರಂಭಿಸಿದ್ದು ಸುರತ್ಕಲ್ ಮೇಳದಲ್ಲಿ. ಖ್ಯಾತ ಕಲಾವಿದ ಶ್ರೀ ಡಿ. ಮನೋಹರ ಕುಮಾರರ ಜತೆ ಬಾಲಗೋಪಾಲನಾಗಿ ರಂಗಪ್ರವೇಶ. ಐದು ವರ್ಷಗಳ ಕಾಲ ಇವರಿಬ್ಬರು ಬಾಲಗೋಪಾಲರಾಗಿ ಅಲ್ಲದೆ ಇತರ ಸಣ್ಣ ಪುಟ್ಟ ವೇಷಗಳಲ್ಲಿ ರಂಜಿಸಿದ್ದರು, ಪರಸ್ಪರ ಒಡನಾಡಿಗಳಾದ ಇವರೊಳಗೆ ವೇಷದ ವಿಚಾರದಲ್ಲಿ ಆರೋಗ್ಯಕರ ಸ್ಪರ್ಧೆಯೂ ಏರ್ಪಡುತ್ತಿತ್ತು. ಚೌಕಿಯಲ್ಲಿ ಬಣ್ಣ ಹಾಕುವುದರಿಂದ ಹಿಡಿದು ವೇಷಭೂಷಣ ತೊಡುವುದು ಅಲ್ಲದೆ ಕುಣಿತ, ಗಿರಕಿ ಹಾರುವ ವಿಷಯದಲ್ಲೂ ಆತ್ಮೀಯ ಸ್ಪರ್ಧೆಯು ಇವರೊಳಗೆ ದಿನಾ ನಡೆಯುತ್ತಿತ್ತು.

ಶ್ರೀಕೃಷ್ಣ ಲೀಲೆ, ಕಂಸವಧೆ ಪ್ರಸಂಗದ ಬಾಲಕೃಷ್ಣ, ಕೃಷ್ಣಾರ್ಜುನ ಕಾಳಗದ ಅಭಿಮನ್ಯು ಮೊದಲಾದ ವೇಷಗಳಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ರೊಟೇಷನ್ ಪ್ರಕಾರ ಇವರಿಬ್ಬರೂ ಈ ವೇಷಗಳನ್ನು ನಿರ್ವಹಿಸುತ್ತಿದ್ದರು. ಶ್ರೀ ಶಿವರಾಮ ಜೋಗಿಯವರ ಪುಂಡು ವೇಷಗಳನ್ನು ನೋಡುತ್ತಾ ಸದಾಶಿವ ಕುಲಾಲರು ಅಭ್ಯಾಸ ಮಾಡುತ್ತಿದ್ದರು. ಶ್ರೀ ಸದಾಶಿವ ಕುಲಾಲರು ಶ್ರೀ ಶಿವರಾಮ ಜೋಗಿ ಅವರ ಅಭಿಮಾನಿಯಾಗಿ ಬೆಳೆದವರು. ಹೆಸರಾಂತ ಕಲಾವಿದರ ತಂಡವಾಗಿತ್ತು.

ಸುರತ್ಕಲ್ ಮೇಳ. ಹಿಮ್ಮೇಳದಲ್ಲಿ ಅಗರಿ ಶ್ರೀನಿವಾಸ ಭಾಗವತ, ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್ಟರ ಒಡನಾಟವು ದೊರಕಿತ್ತು. ಮುಮ್ಮೇಳದಲ್ಲಿ ದೊಡ್ಡ ಸಾಮಗರು, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಪೆರುವೋಡಿ ನಾರಾಯಣ ಭಟ್, ಮಧೂರು ಗಣಪತಿ ರಾವ್, ಮಿಜಾರು ದಡ್ಡಿ ನಾರಾಯಣ ಶೆಟ್ಟಿಗಾರ್, ಎಂ.ಕೆ ರಮೇಶಾಚಾರ್ಯ, ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ, ಜನಾರ್ದನ ಗುಡಿಗಾರ, ಉಜಿರೆ ರಾಜ, ವೇಣೂರು ಭಾಸ್ಕರ ಆಚಾರ್ಯ, ವೇಣೂರು ಸದಾಶಿವ ಆಚಾರ್ಯ, ಅಂಬಾಪ್ರಸಾದ ಪಾತಾಳ, ವೇಣೂರು ಅಶೋಕ ಆಚಾರ್ಯ, ಮೊದಲಾದವರ ಒಡನಾಟವು ಸಿಕ್ಕಿತ್ತು.

ಐದು ವರ್ಷಗಳ ಬಳಿಕ ಪುಂಡುವೇಷಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು. ಶ್ರೀಕೃಷ್ಣ, ಜಯಂತ, ಷಣ್ಮುಖ, ಅಭಿಮನ್ಯು, ಸಿತಕೇತ, ಲಕ್ಷ್ಮಣ, ಬಬ್ರುವಾಹನ ಮೊದಲಾದ ವೇಷಗಳನ್ನು ಮಾಡುತ್ತಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಹಿರಣ್ಯಕಶ್ಯಪ ಪಾತ್ರಕ್ಕೆ ಪ್ರಹ್ಲಾದನಾಗಿ ಹರಿಶ್ಚಂದ್ರನಿಗೆ ಲೋಹಿತಾಶ್ವನಾಗಿ ಅಭಿನಯಿಸುವ ಅವಕಾಶವಾಗಿತ್ತು. ಸೀತಾ ಕಲ್ಯಾಣ ಪ್ರಸಂಗದಲ್ಲಿ ಅವರು ವಿಶ್ವಾಮಿತ್ರನಾದಾಗ ರಾಮ ಲಕ್ಷ್ಮಣರಾಗಿ ಅಭಿನಯಿಸಲು ಅವಕಾಶ ಸಿಕ್ಕಿತ್ತು. ಶ್ರೀ ಸದಾಶಿವ ಕುಲಾಲರು ಸುರತ್ಕಲ್ ಮೇಳದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಶೇಣಿಯವರ ಹೇಳಿಕೆಯಂತೆ ಎಂ.ಕೆ ರಮೇಶಾಚಾರ್ಯ ಮತ್ತು ಶಿವರಾಮ ಜೋಗಿ ಅವರಿಂದ ನಿರ್ದೇಶನವೂ ಸಿಕ್ಕಿತ್ತು. ಶೀ೦ತ್ರಿದ ಚೆನ್ನಕ್ಕೆ ಪ್ರಸಂಗದಲ್ಲಿ ಚೆನ್ನಕ್ಕೆಯ ಮಕ್ಕಳಾಗಿ, ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲ ಕೋಟಿ ಚೆನ್ನಯರಾಗಿ ಇವರು ಮತ್ತು ಡಿ.ಮನೋಹರ ಕುಮಾರರು ರಂಜಿಸಿದ್ದರು. ಬಳಿಕ ಸದಾಶಿವ ಕುಲಾಲ್ ಅವರು ಬೆಳೆಯುತ್ತಾ ಅಶ್ವತ್ಥಾಮ ಬಬ್ರುವಾಹನ, ಅಭಿಮನ್ಯು, ಗುಳಿಗ, (ಬಪ್ಪನಾಡು ಕ್ಷೇತ್ರ ಮಹಾತ್ಮೆ) ಮೊದಲಾದ ಪಾತ್ರಗಳನ್ನೂ ಮಾಡಿದರು. ಶ್ರೀ ಶಿವರಾಮ ಜೋಗಿಯವರು ಈ ಪಾತ್ರಗಳನ್ನು ಸದಾಶಿವ ಕುಲಾಲರಿಗೆ ಬಿಟ್ಟುಕೊಟ್ಟಿದ್ದರು. ಕಿರಿಯ ಕಲಾವಿದನಿಗೆ ಹಿರಿಯ ಕಲಾವಿದನ ಕೊಡುಗೆ ಇದು.

ಸುರತ್ಕಲ್ ಮೇಳದಲ್ಲಿ ಶ್ರೀ ಜನಾರ್ದನ ಆಚಾರ್ಯ, ಬಾಬು ಕುಡ್ತಡ್ಕ, ಕುಮಾರ ಗೌಡ ಪುತ್ತಿಗೆ, ಎಂ.ಟಿ.ಎಸ್ ಕುಲಾಲ್ ಮೊದಲಾದವರ ಒಡನಾಟವೂ ದೊರೆತಿತ್ತು. ಸುರತ್ಕಲ್ ಮೇಳದಲ್ಲಿ 26 ವರ್ಷಗಳ ವ್ಯವಸಾಯ. ಬಳಿಕ 8 ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ ವ್ಯವಸಾಯ. ಗರತಿ ಗಂಗ ಪ್ರಸಂಗದಲ್ಲಿ ಸುಪ್ರತಾಪ, ಕೌಡೂರ ಬೊಮ್ಮೆ ಪ್ರಸಂಗದಲ್ಲಿ ಸಂಕಣ್ಣ (ಖಳನಾಯಕ) ಮಹಾಕಾಳಿ ಅಪ್ಪೆ ಪ್ರಸಂಗದಲ್ಲಿ ದೇವಣ್ಣ (ಕಥಾನಾಯಕ)ನ ಪಾತ್ರಗಳಲ್ಲಿ ರಂಜಿಸಿದ್ದರು. ಮಂಗಳಾದೇವಿ ಮೇಳದ ತಿರುಗಾಟದ ಬಳಿಕ ಕಳೆದ ಹದಿನಾರು ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಪುಂಡು ವೇಷಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳನ್ನು ನಿರ್ವಹಿಸಿದ ಶ್ರೀ ಸದಾಶಿವ ಕುಲಾಲರು ಪ್ರಸ್ತುತ ಕಿರೀಟ ವೇಷಗಳನ್ನೂ ನಿರ್ವಹಿಸುತ್ತಿದ್ದಾರೆ. ಕಲಾಪೋಷಕರೂ ಸಂಪಾಜೆ ಯಕ್ಷೋತ್ಸವದ ರೂವಾರಿಗಳೂ ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷರೂ ಆದ ಶ್ರೀ ಟಿ. ಶ್ಯಾಮ ಭಟ್ಟರ ಸಹಕಾರ, ಪ್ರೋತ್ಸಾಹದಿಂದ ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕಲೆಯನ್ನೂ ಕಲಾವಿದರನ್ನೂ ಪ್ರೀತಿಸುವ  ಶ್ರೀ ಟಿ. ಶ್ಯಾಮ ಭಟ್ಟರನ್ನು ಧನಿಗಳೆಂದೇ ಇವರು ಗೌರವಿಸುತ್ತಾರೆ. 

ವೇಣೂರು ಶ್ರೀ ಸದಾಶಿವ ಕುಲಾಲರು ಶ್ರೀ ದಿನಕರ ಭಟ್ ಮಾವೆ ಅವರ ಹೇಳಿಕೆಯಂತೆ ಎರಡು ಬಾರಿ ವಿದೇಶ ಯಾತ್ರೆ ಕೈಗೊಂಡು ಮಸ್ಕತ್ ನಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಂಬಯಿ ಪ್ರದರ್ಶನಗಳಲ್ಲೂ ಕಾಣಿಸಿಕೊಂಡಿದ್ದಾರೆ. ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಪ್ರದರ್ಶನಗಳಲ್ಲಿ 25 ವರ್ಷ ಭಾಗವಹಿಸಿರುತ್ತಾರೆ. ಪುತ್ತೂರು ಶ್ರೀಧರ ಭಂಡಾರಿಗಳ ಶ್ರೀ ಮಹಾಲಿಂಗೇಶ್ವರ ಸಂಚಾರಿ ಯಕ್ಷಗಾನ ಮಂಡಳಿಯಲ್ಲಿ ಎರಡು ವರ್ಷ ಭಾಗವಹಿಸಿರುತ್ತಾರೆ. ಶ್ರೀ ವೇಣೂರು ಸದಾಶಿವ ಕುಲಾಲರು ತಿರುಗಾಟ ಆರಂಭಿಸಿ 50 ವರ್ಷಗಳು ಕಳೆದುವು. ೫೧ನೇ ವರ್ಷದ ವ್ಯವಸಾಯಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ಸಂಭ್ರಮಾಚರಣೆಯನ್ನು ನಡೆಸುವ ಯೋಜನೆಯೂ ಇವರಿಗಿದೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ನಾವೆಲ್ಲರೂ ಶುಭ ಹಾರೈಸಿ ನೆರವಾಗೋಣ.

ಶ್ರೀ ಸದಾಶಿವ ಕುಲಾಲರು ಸಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸುಜಯಾ. ಇವರು ಗೃಹಣಿ. ಇವರಿಗೆ ಮೂವರು ಮಕ್ಕಳು. ಹಿರಿಯ ಪುತ್ರಿ ನಾಗಶ್ರೀ ವಿವಾಹಿತೆ. ಪುತ್ರ ಷಣ್ಮುಖ ಪಿಯುಸಿ ಪೂರೈಸಿ ಡಿಪ್ಲೋಮ ಓದುತ್ತಿದ್ದಾರೆ. ಕಿರಿಯ ಪುತ್ರಿ ಕುಮಾರಿ ನಾಗಲಕ್ಷ್ಮಿ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಮಕ್ಕಳಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ವೇಣೂರು ಸದಾಶಿವ ಕುಲಾಲರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಸದಾಶಿವ ಕುಲಾಲ್ ವೇಣೂರು, ಮೊಬೈಲ್: 9480144978

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)  ಕೇಂದ್ರ ಸಮಿತಿಯ ಸಭೆ

0

ಸಮಾಜದಲ್ಲಿರುವ  ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಹಿರಿಯರ ಸೇವಾ ಪ್ರತಿಷ್ಠಾನವು ಮಹತ್ವದ ಪಾತ್ರವನ್ನು ನಿರ್ವಹಿಸಲು ಸಾಧ್ಯವಿದೆ. 50 ವಯಸ್ಸಿಗಿಂತ ಹೆಚ್ಚಿನ ನಾಗರಿಕರು ಪ್ರತಿಷ್ಠಾನದೊಂದಿಗೆ ಸೇರಿಕೊಂಡು ಉತ್ತಮ ಕಾರ್ಯಗಳನ್ನು ಮಾಡುವಂತೆ ಸಂಘಟನೆಯನ್ನು ಬಲಗೊಳಿಸಬೇಕೆಂದು ಉಳ್ಳಾಲ ಕ್ಷೇತ್ರದ ಮಾಜಿ ಶಾಸಕರಾದ ಜಯರಾಮ ಶೆಟ್ಟಿ .ಕೆ ತಿಳಿಸಿದರು.

ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ)  ಕೇಂದ್ರ ಸಮಿತಿಯ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ವಿವಿಧ ತಾಲೂಕುಗಳ ಪ್ರತಿಷ್ಠಾನದ ಘಟಕಗಳ ಕಾರ್ಯ ಚಟುವಟಿಕೆಗಳನ್ನು ಸಮೀಕ್ಷೆ ಮಾಡಿ ಸತ್ಸಂಗವನ್ನು ನಡೆಸಿಕೊಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ. ವಿ ನಾರಾಯಣ  ಪುತ್ತೂರು ಪ್ರತಿಷ್ಠಾನದ ಮುಂದಿನ ಯೋಜನೆಗಳನ್ನು ತಿಳಿಸಿ ಕಾರ್ಯಕ್ರಮದ ಪ್ರಾಯೋಜಕರಾದ ಪ್ರತಿಷ್ಠಾನದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಕೈರಂಗಳ ಇವರನ್ನು ಗೌರವಿಸಿದರು.

ಕೆ. ನಾರಾಯಣ ನಾಯಕ್ ಸಿ.ಎಚ್ ಸೀತಾರಾಮ ಶೆಟ್ಟಿ, ಉದಯಶಂಕರ ರೈ, ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾದ ಭರತ್. ಕೆ,  ಬಾಲಕೃಷ್ಣ ಶೆಟ್ಟಿ ಗಣೇಶ್ ಆಚಾರ್ಯ ಜಪ್ಪು ಬಿ .ಗೋವಿಂದ ಭಟ್,  ಎ.ಕೃಷ್ಣಶರ್ಮ, ಶ್ರೀಮತಿ ಶಂಕರಿ. ಎಸ್ ಭಟ್ ಕೈ ರಂಗಳ,  ಶ್ರೀಮತಿ ಚಂದ್ರಿಕಾ ಕೈ ರಂಗಳ ಉಪಸ್ಥಿತರಿದ್ದರು.

ಭಜಕ ರವಿ ಮಂಜನಾಡಿ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ ಸಹ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಭಟ್ ವಂದಿಸಿದರು.

ಅಂಪೈರ್ ಕೈಯಿಂದ ಬಲವಂತವಾಗಿ ಔಟ್ ಕೊಡಿಸಲು ಯತ್ನಿಸಿದ ಪಾಕಿಸ್ತಾನದ ಬೌಲರ್ – ತಮಾಷೆಗಾಗಿ ಆದರೂ ಅಂಪೈರ್ ಬೆರಳನ್ನು ಎತ್ತಲು ಯತ್ನಿಸಿದ್ದು ಎಷ್ಟು ಸರಿ ಎಂದು ಜನರ ಪ್ರಶ್ನೆ 

0

ಔಟ್ ಗಾಗಿ DRS ಮನವಿಯ ನಂತರ ಮೂರನೇ ಅಂಪೈರ್ ಔಟಲ್ಲ ಎಂದು ತೀರ್ಪು ನೀಡಿದ ನಂತರ ಪಾಕ್ ಆಟಗಾರನೊಬ್ಬ ಅಂಪೈರ್‌ನ ಬೆರಳನ್ನು ಬಲವಂತವಾಗಿ ಎತ್ತುವ ಪ್ರಯತ್ನ ಮಾಡಿದ್ದಾನೆ.

ಪಾಕಿಸ್ತಾನದ ಬೌಲರ್‌ಗಳು ವಿಕೆಟ್ ಕೀಳಲು ಮತ್ತು ಶ್ರೀಲಂಕಾವನ್ನು ದೊಡ್ಡ ಮೊತ್ತವನ್ನು ಸ್ಥಾಪಿಸುವುದನ್ನು ತಡೆಯಲು ಪ್ರಯತ್ನಿಸುತ್ತಿರುವಾಗ, ಆಲ್‌ರೌಂಡರ್ ಶಾದಾಬ್ ಖಾನ್ ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಲಘು ಕ್ಷಣವನ್ನು ಹಂಚಿಕೊಂಡಿದ್ದಾರೆ, ಅದರ ವೀಡಿಯೊ ಈಗ ವೈರಲ್ ಆಗಿದೆ.

ಶ್ರೀಲಂಕಾ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಪಾತುಮ್ ನಿಸ್ಸಾಂಕ (8) ಮತ್ತು ದನುಷ್ಕಾ ಗುಣತಿಲಕ (1) ಅವರ ವಿಕೆಟ್‌ಗಳೊಂದಿಗೆ ಹ್ಯಾರಿಸ್ ರೌಫ್ ವಿಕೆಟ್ ಬೇಟೆ ಆರಂಭಿಸಿದರು.

ಪಾಕಿಸ್ತಾನದ ವೇಗಿ ಭಾನುಕಾ ರಾಜಪಕ್ಸೆ ಅವರನ್ನು ವಿಕೆಟ್‌ನ ಮುಂದೆ lbw ಗಾಗಿ ಜೋರಾಗಿ ಮನವಿ ಮಾಡಿದಾಗ ಮೈದಾನದ ಅಂಪೈರ್ ಬೆರಳು ಎತ್ತದಿದ್ದರೂ, ಪಾಕಿಸ್ತಾನ ರಿವ್ಯೂ ತೆಗೆದುಕೊಳ್ಳುವುದನ್ನು ಪರಿಗಣಿಸಲು ನಿರ್ಧರಿಸಿತು.  

ಔಟ್ ಗಾಗಿ DRS ಮನವಿಯ ನಂತರ ಮೂರನೇ ಅಂಪೈರ್ ಔಟಲ್ಲ ಎಂದು ತೀರ್ಪು ನೀಡಿದ ನಂತರ ಆನ್-ಫೀಲ್ಡ್ ಅಂಪೈರ್ ತನ್ನ ಆರಂಭಿಕ ‘ನಾಟೌಟ್’ ನಿರ್ಧಾರದೊಂದಿಗೆ ಅಂಟಿಕೊಂಡರು.

ಆಗ ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ಉಲ್ಲಾಸದ ರೀತಿಯಲ್ಲಿ ಬಲವಂತವಾಗಿ ಅಂಪೈರ್‌ನ ಬೆರಳನ್ನು ಎತ್ತುವ ಪ್ರಯತ್ನದಲ್ಲಿದ್ದಾಗ ಕ್ಯಾಮೆರಾಗಳು ಸೆರೆಹಿಡಿದವು. ಈ ವೀಡಿಯೊ ಈಗ ವೈರಲ್ ಆಗಿದೆ.

ಡ್ರಗ್ಸ್ ಸೇವಿಸಿ ನಡುರಸ್ತೆಯಲ್ಲಿ ತೂರಾಡಿದ ಯುವತಿ – ವೀಡಿಯೊ ವೈರಲ್ 

0

ಯುವತಿಯ ‘ಡ್ರಗ್ಸ್‌ ಪ್ರಭಾವಕ್ಕೆ ಒಳಗಾಗಿರುವ’ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊ ಪಂಜಾಬ್ ನ ಅಮೃತಸರದ್ದು ಎಂದು ಹೇಳಲಾಗುತ್ತಿದೆ.

ಸಿಖ್ಖರ ಪವಿತ್ರ ನಗರ ಅಮೃತಸರದಲ್ಲಿರುವ ಮಕ್ಬೂಲ್ಪುರವು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಘಟನೆಗಳಿಗೆ ಆಗಾಗ್ಗೆ ಮಹತ್ವವನ್ನು ಪಡೆಯುತ್ತಿದೆ. ಪಂಜಾಬ್‌ನ ಅಮೃತಸರದಲ್ಲಿ ಯುವತಿಯೊಬ್ಬಳು ಅಕ್ರಮ ಡ್ರಗ್ಸ್‌ನ ಪ್ರಭಾವಕ್ಕೆ ಒಳಗಾಗಿದ್ದಾಳೆ ಎನ್ನಲಾದ ವೈರಲ್ ವೀಡಿಯೊ ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆಯ ಸಮಸ್ಯೆಯ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.

ಅಮೃತಸರ ಪೂರ್ವ ಕ್ಷೇತ್ರದ ಮಕ್ಬೂಲ್‌ಪುರ ಪ್ರದೇಶದಲ್ಲಿ ಸೆರೆಹಿಡಿಯಲಾದ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯ ಮೇಲೆ ನಿಂತಿದ್ದು, ತೂರಾಡಿಕೊಂಡು ಚಲಿಸಲು ಹೆಣಗಾಡುತ್ತಿದ್ದಳು. ಈ ಪ್ರದೇಶವು ಮಾದಕ ವ್ಯಸನ ಮತ್ತು ವ್ಯಸನಿಗಳ ಸಮಸ್ಯೆಗಳಿಗೆ ಕುಖ್ಯಾತವಾಗಿದೆ.

ಪೊಲೀಸರು ಆರಂಭಿಸಿದ ಅನೇಕ ಡಿ-ಅಡಿಕ್ಷನ್ ‘ಡ್ರೈವ್’ಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡುವಲ್ಲಿ ವಿಫಲವಾಗಿವೆ. ವೀಡಿಯೊ ವೈರಲ್ ಆದ ನಂತರ, ಮಕ್ಬೂಲ್‌ಪುರ ಪೊಲೀಸರು ಭಾನುವಾರ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಮೂವರನ್ನು ಸುತ್ತುವರೆದರು ಮತ್ತು ಅವರ ವಶದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅನುಮಾನಾಸ್ಪದ ಚಟುವಟಿಕೆಗಳಿಂದಾಗಿ 12 ಮಂದಿಯನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಪ್ರದೇಶದಿಂದ ಕಳವು ಮಾಡಿರುವ ಶಂಕಿತ ಐದು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅಮೃತಸರ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುವ ಎಎಪಿ ಶಾಸಕಿ ಜೀವನಜೋತ್ ಕೌರ್ ಹೇಳಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ಗೆ ಹೊಡೆಯುವುದು ಕೆಲವು ಮಹಿಳೆಯರಿಗೆ ಫ್ಯಾಷನ್? – ನೋಯ್ಡಾದಲ್ಲಿ ಮತ್ತೊಬ್ಬ ಪ್ರೊಫೆಸರ್ ಮಹಿಳೆಯಿಂದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ – ವೀಡಿಯೊ ವೈರಲ್

0

ನೋಯ್ಡಾದಲ್ಲಿ ಮತ್ತೊಬ್ಬ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ಸಣ್ಣ ವಾಗ್ವಾದದ ನಂತರ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಲಾಗಿದೆ. ವೃತ್ತಿಯಲ್ಲಿ ಮಹಿಳೆ ಪ್ರೊಫೆಸರ್.

ಹೌಸಿಂಗ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನೋಯ್ಡಾ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೌಸಿಂಗ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್‌ಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನೋಯ್ಡಾ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಮಧ್ಯಾಹ್ನದ ವೀಡಿಯೊದಲ್ಲಿ, ಕೊತ್ವಾಲಿ ಪ್ರದೇಶದ 3 ನೇ ಹಂತದ ಕ್ಲಿಯೋ ಕೌಂಟಿ ಸೊಸೈಟಿಯ ಆವರಣಕ್ಕೆ ಮಹಿಳೆ ಪ್ರವೇಶಿಸಿ ಇದ್ದಕ್ಕಿದ್ದಂತೆ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.

ಆಕೆ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿದ್ದಾಳೆ ಮತ್ತು ಸಿಬ್ಬಂದಿ ಮೇಲೆ ಪದೇ ಪದೇ ಹಲ್ಲೆ ಮಾಡುವುದನ್ನು ಮತ್ತು ಅವನ ಮೇಲೆ ನಿಂದಿಸುವುದನ್ನು ಕಾಣಬಹುದು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಿದ ನಂತರ ಪೊಲೀಸರು ಸುತಾಪ ದಾಸ್ ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನೋಯ್ಡಾ ಪೊಲೀಸರು ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ಮಹಿಳೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 (ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯನ್ನು ಶನಿವಾರ ಬಂಧಿಸಲಾಗಿದ್ದು, ಈಗ ಜಾಮೀನಿನ ಮೇಲೆ ಹೊರಗಿದ್ದಾಳೆ.

ಸಂತ್ರಸ್ತ ಭದ್ರತಾ ಸಿಬ್ಬಂದಿ ಪದೇ ಪದೇ ಕರೆ ಮಾಡಿದರೂ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಉತ್ತರ ಪ್ರದೇಶದ ನೋಯ್ಡಾಗೆ ಇಂತಹ ಘಟನೆಗಳು ಹೊಸದಲ್ಲ. ಆಗಸ್ಟ್‌ನಲ್ಲಿ, ನೋಯ್ಡಾದ ಮತ್ತೊಬ್ಬ ಮಹಿಳೆಯು ಹೌಸಿಂಗ್ ಸೊಸೈಟಿಯೊಂದರಲ್ಲಿ ಭದ್ರತಾ ಸಿಬ್ಬಂದಿಯನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಹೊಡೆಯುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಕೆಯನ್ನೂ ಬಂಧಿಸಲಾಗಿತ್ತು.

Breaking Morning News – ಮುಂಜಾನೆಯ ಮುಖ್ಯ ಸುದ್ದಿಗಳು

0

ಅಸ್ಸಾಂ ನ ಶನಿವಾರ ಸಂಜೆ ಕರೀಂಗಂಜ್ ಜಿಲ್ಲೆಯ ಗದ್ದೆಯಲ್ಲಿ 32 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಇದು ಮುಖ ಮತ್ತು ತಲೆಯ ಮೇಲೆ ಗಾಯದ ಗುರುತುಗಳನ್ನು ಹೊಂದಿತ್ತು. ಮಹಿಳೆಯನ್ನು ಯಾರೋ ಕೊಲೆ ಮಾಡಿರುವ ಶಂಕೆ ಇದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಮರ್ಜಿತ್ ಬಸುಮುತಾರಿ, ಪ್ರಭಾರಿ ಅಧಿಕಾರಿ, ಪಥರಕಂಡಿ ಪಿಎಸ್, ಕರೀಂಗಂಜ್ ಹೇಳಿದ್ದಾರೆ.

ಸೋನಾಲಿ ಫೋಗಟ್ ಅವರ ಕೊನೆಯ ಚಿತ್ರ ಪ್ರೇರಣಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ, ಅವರ ಜೀವನಚರಿತ್ರೆಯನ್ನು ಹೊರತರಲು ತಯಾರಕರು ಮಾತುಕತೆ ನಡೆಸುತ್ತಿದ್ದಾರೆ.

ಭಾರತೀಯ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿದರು.

ಲಡಾಖ್ ಮ್ಯಾರಥಾನ್ 2022 ರಲ್ಲಿ ವಿವಿಧ ದೇಶಗಳ ಜನರು ಭಾಗವಹಿಸಿದ್ದರು.

ಹರಿಯಾಣದಲ್ಲಿ ಮದರಸಾ ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ. ಅದೇ ಮದರಸಾದ 13 ವರ್ಷದ ಮತ್ತೊಬ್ಬ ವಿದ್ಯಾರ್ಥಿ ಮದರಸಾಕ್ಕೆ ಹೋಗದೆ ಹೊರಬಂದು ಶಾಲೆಗೆ ಹೋಗಬೇಕೆಂದು ಬಯಸಿದ್ದರಿಂದ ಅವನನ್ನು ಕೊಲೆ ಮಾಡಲಾಗಿದೆ ಎಂದು ಕಂಡುಬಂದಿದೆ ಎಂದು ಸತ್ಬೀರ್ ಸಿಂಗ್, ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಫ್ಘನ್ನರು ಶ್ರೀಲಂಕಾದ ಏಷ್ಯಾ ಕಪ್ 2022 ಗೆಲುವನ್ನು ಬೀದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಚರಿಸಿ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ 2022 ನಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿದ ಶ್ರೀಲಂಕಾ ಕ್ರಿಕೆಟಿಗರು ವಿಜಯೋತ್ಸವ ಆಚರಿಸಿದರು.

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಕೋರಿಕೆಯ ಮೇರೆಗೆ ನಾಳೆಗೆ ನಿಗದಿಯಾಗಿದ್ದ ವಿಚಾರಣೆಯನ್ನು ಮುಂದೂಡಿದ ದೆಹಲಿ ಪೊಲೀಸರು

0

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಕೋರಿಕೆಯ ಮೇರೆಗೆ ನಾಳೆಗೆ ನಿಗದಿಯಾಗಿದ್ದ ವಿಚಾರಣೆಯನ್ನು ದೆಹಲಿ ಪೊಲೀಸರು ಮುಂದೂಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೇಳಿಕೆಗಳನ್ನು ಆಗಸ್ಟ್ 30 ಮತ್ತು ಅಕ್ಟೋಬರ್ 20, 2021 ರಂದು ದಾಖಲಿಸಲಾಗಿದೆ, ಅಲ್ಲಿ ಅವರು ಚಂದ್ರಶೇಖರ್ ಅವರಿಂದ ಉಡುಗೊರೆ ಸ್ವೀಕರಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸೋಮವಾರ ವಿಚಾರಣೆ ನಡೆಸುವುದಿಲ್ಲ. ವಾಸ್ತವವಾಗಿ, ವಿಚಾರಣೆಯನ್ನು ಮುಂದೂಡುವಂತೆ ಜಾಕ್ವೆಲಿನ್ ಪರವಾಗಿ ಮನವಿ ಇತ್ತು, ಅದನ್ನು ದೆಹಲಿ ಪೊಲೀಸರು ಒಪ್ಪಿಕೊಂಡರು.

ಇದೀಗ ದೆಹಲಿ ಪೊಲೀಸರು ಅವರಿಗೆ ಹೊಸ ಸಮನ್ಸ್ ನೀಡಲಿದ್ದಾರೆ.ಸುಕೇಶ್ ಚಂದ್ರಶೇಖರ್ ಒಳಗೊಂಡ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಅವರಿಗೆ ಸಮನ್ಸ್ ನೀಡಿದ್ದರು.

ಸೆಪ್ಟೆಂಬರ್ 12 ರಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಜಾಕ್ವೆಲಿನ್ ದೆಹಲಿ ಪೊಲೀಸರಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಈಗ ನಾವು ಪ್ರಕರಣದ ತನಿಖೆಗೆ ಸೇರಲು ಜಾಕ್ವೆಲಿನ್‌ಗೆ ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಅಧಿಕಾರಿ ಹೇಳಿದರು. ಹೊಸ ಸಮನ್ಸ್‌ನ ದಿನಾಂಕವನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು.