Sunday, August 30, 2026
Home Blog Page 177

ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಧ್ವಜಾರೋಹಣ

0

ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಧ್ವಜಾರೋಹಣ

ಪುತ್ತೂರು: ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿ ನಡೆಯಿತು.

ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಪರಿಷತ್ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು.


ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶ್ರೀಧರ ಹೆಚ್.ಜಿ., ಕ.ಸಾ.ಪ. ಜಿಲ್ಲಾ ಗೌರವ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ್, ಸಾಹಿತಿ ಪ್ರೊ.ವಿ.ಬಿ. ಅರ್ತಿಕಜೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿಯ ಸದಸ್ಯರುಗಳಾದ ಪುರಂದರ ಭಟ್, ಸುರೇಶ್ ಶೆಟ್ಟಿ, ನಗರ ಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಕ.ಸಾ.ಪ. ತಾಲೂಕು ಘಟಕ ಗೌರವ ಕೋಶಾಧ್ಯಕ್ಷ ಡಾ. ಹರ್ಷಕುಮಾರ್ ರೈ, ಆಶಾ ಬೆಳ್ಳಾರೆ, ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕ.ಸಾ.ಪ. ತಾಲೂಕು ಸದಸ್ಯ ಡಾ. ವಿಜಯಕುಮಾರ ಮೊಳೆಯಾರ, ಅಂಬಿಕಾ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಪದವಿ ಕಾಲೇಜು ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿವೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ., ಸಿ.ಬಿ.ಎಸ್.ಸಿ. ಸಂಸ್ಥೆ ಪ್ರಾಂಶುಪಾಲೆ ಮಾಲತಿ ಡಿ., ಮತ್ತಿತರರು ಉಪಸ್ಥಿತರಿದ್ದರು.


ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು, ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಶಿಕ್ಷಕಿ ಸುಜಯಾ ವಂದಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

ತಾಳಮದ್ದಳೆಯ ಪೀಠೋಪಕರಣಗಳ ಕೊಡುಗೆ

ನಾಳ ದೇವಳಕ್ಕೆ ತಾಳಮದ್ದಳೆಯ ಪೀಠೋಪಕರಣಗಳ ಕೊಡುಗೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಸಲು ಅನುಕೂಲ ಆಗುವಂತೆ ರೂಪಾಯಿ 50 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಮರದ ಪೀಠೋಪಕರಣಗಳ ಕೊಡುಗೆಯನ್ನು ಸಮರ್ಪಿಸಿದ ಜಗನ್ನಾಥ ವಂಜರೆ ಇವರನ್ನು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಜರುಗಿದ ತಾಳಮದ್ದಳೆ ಸಪ್ತಾಹದ ಸಮಾರೋಪದಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು.

ದೇವಳದ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಡಾ. ಸುರೇಶ್ ಕುಮಾರ್ ಶೆಟ್ಟಿ ತುಂಬೆ ಜಾಲು, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಕಚೇರಿ ಪ್ರಬಂಧಕ ಗಿರೀಶ್ ಶೆಟ್ಟಿ ನಾಳ, ರಾಘವ ಎಚ್ ಗೇರುಕಟ್ಟೆ, ರಾಜೇಶ್ ಪೆರ್ಮುಡ, ಸಂಜೀವ ಪಾರೇಂಕಿ,

ವಿಜಯಕುಮಾರ್ ಕೊಯ್ಯೂರ್, ಗುರುವಾಯನಕೆರೆ ರಬ್ಬರ್ ಸೊಸೈಟಿಯ ಪ್ರಬಂಧಕರಾದ ಅಶೋಕ ಆಚಾರ್ಯ ನಾಳ, ಪುರುಷೋತ್ತಮ. ಜಿ, ಕನ್ಯಾಡಿ ಯಕ್ಷ ಭಾರತಿ (ರಿ)ಸಂಸ್ಥೆಯ ಖಜಾಂಜಿ ಚಂದ್ರಶೇಖರ ಗುರುವಾಯನಕೆರೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಿಗೆ ಐಎಎಸ್ ಮಹಿಳಾ ಅಧಿಕಾರಿ ವಿವಾದಾತ್ಮಕ ಮಾತುಗಳು – “ಇಂದು, ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳುತ್ತಿದ್ದೀರಿ, ನಾಳೆ ನೀವು ಕಾಂಡೋಮ್‌ಗಳನ್ನು ಕೇಳುತ್ತೀರಿ” ಉಚಿತ ಸ್ಯಾನಿಟರಿ ಪ್ಯಾಡ್‌ಗಾಗಿ ವಿದ್ಯಾರ್ಥಿನಿಯರ ಮನವಿಗೆ ಬಿಹಾರ ಮಹಿಳಾ ಸಮಿತಿ ಮುಖ್ಯಸ್ಥೆ ಹರ್ಜೋತ್ ಕೌರ್ ಪ್ರತಿಕ್ರಿಯಿಸಿದ್ದು ಹೀಗೆ

0

“ಇಂದು, ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳುತ್ತಿದ್ದೀರಿ, ನಾಳೆ ನೀವು ಕಾಂಡೋಮ್‌ಗಳನ್ನು ಕೇಳುತ್ತೀರಿ” ಉಚಿತ ಸ್ಯಾನಿಟರಿ ಪ್ಯಾಡ್‌ಗಾಗಿ ವಿದ್ಯಾರ್ಥಿನಿಯರ ಮನವಿಗೆ ಬಿಹಾರ ಮಹಿಳಾ ಸಮಿತಿ ಮುಖ್ಯಸ್ಥೆ ಹರ್ಜೋತ್ ಕೌರ್ ಪ್ರತಿಕ್ರಿಯಿಸಿದ್ದು ಹೀಗೆ

ಬಿಹಾರದ ಯುವ ಶಾಲಾ ವಿದ್ಯಾರ್ಥಿನಿಯರು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡುವಂತೆ ಮನವಿ ಮಾಡಿದ್ದಾರೆ. ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರತಿಕ್ರಿಯಿಸಿದ್ದು ಇಲ್ಲಿದೆ.

ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಲಾ ಬಾಲಕಿಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್, “ಇಂದು, ನೀವು ಸ್ಯಾನಿಟರಿ ಪ್ಯಾಡ್‌ಗಳನ್ನು ಕೇಳುತ್ತಿದ್ದೀರಿ, ನಾಳೆ ನೀವು ಕಾಂಡೋಮ್‌ಗಳನ್ನು ಕೇಳುತ್ತೀರಿ” ಎಂದು ಹೇಳಿದರು.

ಕಾರ್ಯಕ್ರಮದ ವೀಡಿಯೊವು ಶಾಲಾ ವಿದ್ಯಾರ್ಥಿನಿಯರು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡುವಂತೆ ಕೇಳುವುದನ್ನು ತೋರಿಸುತ್ತದೆ ಇದರಿಂದ ಅವರು ಅಗತ್ಯಗಳಿಗಾಗಿ ಇತರರನ್ನು ಅವಲಂಬಿಸಬೇಕಾಗಿಲ್ಲ.

“ಸರ್ಕಾರವು ಸಾಕಷ್ಟು ಉಚಿತ ವಸ್ತುಗಳನ್ನು ನೀಡುತ್ತಿದೆ. ಅವರು ನಮಗೆ 20-30 ರೂಪಾಯಿ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡುವುದಿಲ್ಲವೇ? ಶಾಲೆಯ ವಿದ್ಯಾರ್ಥಿನಿಯೊಬ್ಬಳು ಕೇಳಿದಳು.

ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಪ್ರತಿಕ್ರಿಯಿಸಿ, “ಬೇಡಿಕೆಗಳಿಗೆ ಏನಾದರೂ ಅಂತ್ಯವಿದೆಯೇ? ನಾಳೆ, ಸರ್ಕಾರವು ಜೀನ್ಸ್, ಸುಂದರವಾದ ಬೂಟುಗಳನ್ನು ನೀಡಬಹುದು ಎಂದು ನೀವು ಹೇಳುತ್ತೀರಿ.

ಕೊನೆಯಲ್ಲಿ, ಕುಟುಂಬ ಯೋಜನೆಗೆ ಬಂದಾಗ, ನೀವು ಉಚಿತ ಕಾಂಡೋಮ್ಗಳನ್ನು ಸಹ ಬಯಸುತ್ತೀರಿ.”ನೀವು ಸರ್ಕಾರದಿಂದ ವಸ್ತುಗಳನ್ನು ಏಕೆ ತೆಗೆದುಕೊಳ್ಳಬೇಕು?” ಹರ್ಜೋತ್ ಕೌರ್, “ಈ ಆಲೋಚನೆ ತಪ್ಪು” ಎಂದು ಹೇಳಿದರು.

ಸಿನಿಮಾ ಪ್ರಚಾರಕ್ಕೆ ಬಂದ ಇಬ್ಬರು ನಟಿಯರ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಜನರ ಗುಂಪು – ಪೊಲೀಸರ ತನಿಖೆ ಆರಂಭ

0

ಮಾಲ್‌ನಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ: ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಂಗ್ರಹ, ಹೇಳಿಕೆ ದಾಖಲಿಸಿದ ನಂತರ ಪ್ರಕರಣ ದಾಖಲಿಸಿಕೊಳ್ಳುತ್ತಾರೆ.

ಕೇರಳದ ಕೋಝಿಕ್ಕೋಡ್‌ನ ಶಾಪಿಂಗ್ ಮಾಲ್‌ನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ಇಬ್ಬರು ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿರ್ಮಾಪಕರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ತಂಡ ಮಾಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಹಲ್ಲೆಗೊಳಗಾದ ನಟಿಯರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಮಹಿಳಾ ಪೊಲೀಸರನ್ನೊಳಗೊಂಡ ತಂಡ ಕಣ್ಣೂರು ಮತ್ತು ಎರ್ನಾಕುಲಂಗೆ ತೆರಳಿದೆ. ಅವರ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಪ್ರಕರಣ ದಾಖಲಿಸಲಾಗುವುದು.

ಎಸಿಪಿ ತನಿಖೆಯ ನೇತೃತ್ವ ವಹಿಸಿದ್ದಾರೆ. ಕಳೆದ ರಾತ್ರಿ ಕೋಝಿಕ್ಕೋಡ್‌ನ ಹಿಲೈಟ್ ಮಾಲ್‌ನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮದ ನಂತರ ನಟಿಯರಿಗೆ ಕಿರುಕುಳ ನೀಡಲಾಗಿತ್ತು ಕಾರ್ಯಕ್ರಮವನ್ನು ವೀಕ್ಷಿಸಲು ಮಾಲ್‌ನಲ್ಲಿ ಅಪಾರ ಜನಸ್ತೋಮ ನೆರೆದಿತ್ತು.

ಈ ವೇಳೆ ನಟಿಯೊಬ್ಬರು ತೀವ್ರವಾಗಿ ಪ್ರತಿಕ್ರಿಯಿಸಿ ಹಲ್ಲೆ ಮಾಡಿದ ವ್ಯಕ್ತಿಗೆ ಹೊಡೆಯಲು ಯತ್ನಿಸಿದ್ದಾರೆ. ಘಟನೆಯ ನಂತರ ಹಲ್ಲೆಗೆ ಒಳಗಾದ ನಟಿಯೊಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ’

ಇಂದು, ನನ್ನ ಹೊಸ ಚಿತ್ರದ ಪ್ರಚಾರದ ಭಾಗವಾಗಿ ಕೋಝಿಕ್ಕೋಡ್‌ನ HiLITE ಲೈಟ್ ಮಾಲ್‌ಗೆ ಬಂದಾಗ ನನಗೆ ತಣ್ಣನೆಯ ಅನುಭವವಾಯಿತು. ಕೋಝಿಕ್ಕೋಡ್ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ.

ಆದರೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಗುಂಪಿನಿಂದ ಯಾರೋ ನನ್ನನ್ನು ಹಿಡಿದುಕೊಂಡರು. ಎಲ್ಲಿ ಹಿಡಿದುಕೊಂಡರು ಎಂದು ಹೇಳಲು ನನಗೆ ಅಸಹ್ಯವಾಗುತ್ತದೆ.

ಪ್ರಚಾರದ ಭಾಗವಾಗಿ ನಮ್ಮ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಿದೆ. ಆದರೆ, ಇಂತಹ ದಯನೀಯ ಅನುಭವವನ್ನು ನಾನು ಬೇರೆಲ್ಲೂ ಎದುರಿಸಿಲ್ಲ. ನನ್ನ ಜೊತೆಗಿದ್ದ ಮತ್ತೊಬ್ಬ ಸಹೋದ್ಯೋಗಿಗೂ ಇದೇ ಅನುಭವವಾಗಿತ್ತು.

ಅದಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸಿದಳು. ಆದರೆ, ಆಗ ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ನಾನು ಮರಗಟ್ಟುವಿಕೆ ಅನುಭವಿಸುತ್ತಿದ್ದೆ. ನಿಮ್ಮ ವಿಕೃತಿ ಮುಗಿಯಿತೇ?’ ಎಂದು ನಟಿ ಬರೆದಿದ್ದಾರೆ.

ಕರ್ಣ ಪರ್ವ – ಒಂದು ಜಿಜ್ಞಾಸೆ

ಪ್ರಾತಿನಿಧಿಕ ಫೋಟೋ (ಸಾಂದರ್ಭಿಕ )

      ಕವಿ ರಚಿಸಿದ ಪ್ರತೀ ಪ್ರಸಂಗದಲ್ಲೂ ಪಾತ್ರ ಚಿತ್ರಣ ಸ್ಪಷ್ಟ  ಇದೆ. ಇಡೀ ಪ್ರಸಂಗದ ನಡೆಯಲ್ಲಿ ಒಂದು ಸಮತೋಲನ ಇದೆ. ಉದಾ. ತಾಳಮದ್ದಲೆಯಲ್ಲಿ ಜನಪ್ರಿಯವಾದ ಕರ್ಣಪರ್ವ.

 ಹಿಂದಿನ ಕಾಲದ ತಾಳಮದ್ದಳೆಯಲ್ಲಿ,  “ಈ ನೆರೆದ ಪರಿಭವವ ಕಾಣುತ” ಅಲ್ಲಿಂದ ಆರಂಭಿಸಿದ್ದು ನೋಡಿದ್ದೇವೆ. ಈಗ ಅದನ್ನು ಕಡಿತ ಗೊಳಿಸಿ “ಇತ್ತಲು ಹತ್ತಿತು ಕರ್ಣಾರ್ಜುನರಿಗೆ ” ಇಲ್ಲಿಂದಲೇ ಆರಂಭ.  ಆಗಲಿ ಸ್ವಾಗತಿಸೋಣ. ನಾಲ್ಕು ಗಂಟೆಯ ಅವಧಿಯ ತಾಳಮದ್ದಲೆಯಲ್ಲಿ ಕರ್ಣ- ಅರ್ಜುನ ಎರಡೇ ಪಾತ್ರಗಳು ಪ್ರಸಂಗದ ಹೆಚ್ಚಿನ ಸಮಯವನ್ನು ಅಂದಾಜು 1-30 ಗಂಟೆ, (ಕೆಲವೆಡೆ 2-30 ದಾಟಿದ್ದಿದೆ) ಸಮಯದಲ್ಲಿ ಕೇವಲ ನಾಲ್ಕು ಪದ್ಯಕ್ಕೆ ಮಾತಿನ ಚಕಮಕಿಯಲ್ಲಿ ಕಳೆಯುತ್ತವೆ. ತದನಂತರ ಕೃಷ್ಣ- ಅರ್ಜುನ  ಸಂಭಾಷಣೆ ಮುಗಿದು ಯುದ್ದದ ಭಾಗ “ಎಲವೊ ರಾಧೇಯ ಕೇಳು “” ಭಾಗ ಕಡಿತಗೊಳಿಸಿ, ನೇರ “ಅಂಧನೃಪ ಕೇಳಿಂತು ” ಅಲ್ಲಿಂದ ಮಂದುವರಿದು ಶಲ್ಯ- ಕರ್ಣ- ಸರ್ಪಾಸ್ತ್ರ ಸಂಭಾಷಣೆಗೆ ( ಶಲ್ಯ ಬಿಟ್ಟು ಹೋದಲ್ಲಿಗೆ) ಪ್ರಸಂಗ ಕೆಲವೆಡೆ ಕೊನೆ. 

ಅಲ್ಲಿಯೂ ರಂಗದಲ್ಲಿ ಅಳವಡಿಸಬೇಕಾದ ಕೆಲವು ಕ್ರಮ ಮಾತಿನ ಭರದಲ್ಲಿ ನೆನಪಿರುವುದಿಲ್ಲ. 

ಅಂಬರ ಕುಸಿದರು ತೊಟ್ಟ ಶರವ ತೊಡೆ|ನೆಂಬಬಿರುದು  ತನಗೆ || ಹಂಬಲಿಸುವುದೇಕೆನುತಲೆ ಗರ್ಜಿಸು| ತಂಬನು ನೂಕಿಸಿದ (ನೂಕಿದನು) ||

 ಕರ್ಣ- ಶಲ್ಯರ ವಾದಗಳ ಮದ್ಯೆ, ಈ ಪದ್ಯ ಬರುತ್ತದೆ. ಇದನ್ನು ಅನುಸರಿಸಿ ಕರ್ಣನು  ‘ನಡಿ’ ಎಂದಾಗ, ಒಂದು ದಿತ್ತವು ಬಯಲಾಟವಾಗಲಿ, ತಾಳಮದ್ದಳೆಯಾಗಲಿ ಅಲ್ಲಿ ಅಗತ್ಯ.  ಕೆಲವು ಕಡೆ ಇದನ್ನು ಜಾಗಟೆಯಲ್ಲಿ ಸೂಚಿಸಿದರೂ ಗಮನಿಸದ ಕರ್ಣ.  ಕೊನೆಗೆ ರಂಗದಲ್ಲಿದ್ದ ಇತರ ಅರ್ಥಧಾರಿಗಳೇ  ಸರ್ಪಾಸ್ತ್ರ ನಿರ್ಗಮನಕ್ಕೆ ಸೂಚನೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಇಂತಹುದನ್ನೆಲ್ಲ ಭಾಗವತನಾಗಿ ರಂಗಸ್ಥಳದಲ್ಲಿರುವಾಗಲೇ ಖಂಡಿಸಿದರೆ ಸಂಘಟಕರಿಗೆ, ಪ್ರೇಕ್ಷಕರಿಗೆ ಮುಜುಗರವಾಗುತ್ತದೆ. ಹಾಗಾಗಿ ಸಹಿಸಿಕೊಂಡು ಸುಮ್ಮನಿರಬೇಕಾಗುತ್ತದೆ. 

ದಿತ್ತ, ನಿರ್ಗಮನಕ್ಕೆ ತೈತತಕತ, ಪ್ರವೇಶ ಇತ್ಯಾದಿ ತಾಳಮದ್ಲೆಯಲ್ಲಿ ಅಗತ್ಯ ಇಲ್ಲ ಅಂದಾದರೆ ತಾಳಮದ್ದಲೆಯಲ್ಲಿ  ಹಿಮ್ಮೇಳದ ಅದರಲ್ಲೂ ಚೆಂಡೆಯ ಅಗತ್ಯ ಇರುವುದಿಲ್ಲ. ಅಂದರೆ ಹಿಮ್ಮೇಳದ‌ ಪಾಲ್ಗೊಳ್ಳುವಿಕೆ ಅಗತ್ಯವಿರುವಲ್ಲಿಯೂ ನಿರ್ಲಕ್ಷ್ಯ ಕಾಣುತ್ತದೆ. ಇಂತಹ ವಿದ್ಯಮಾನಗಳಿಂದ ಯಕ್ಷಗಾನ ತಾಳಮದ್ದಲೆಯ ಮುಂದಿನ ದಿನಗಳಲ್ಲಿ ಪ್ರಸಂಗವೊಂದರ ಆಶಯ, ಚೌಕಟ್ಟು, ಸೂಕ್ಷ್ಮಗಳು ಇತ್ಯಾದಿ ಹಲವಾರು ವಿಷಯಗಳು ಮರೆಯಾಗಬಹುದು. 

ಹಿಂದೆ ಒಂದು ತಾಳಮದ್ಲೆಯಲ್ಲಿ ತಾಳಮದ್ಲೆ ಹಿಡಿತ ತಪ್ಪಿದಾಗ  ಒಬ್ಬರು ಹಿರಿಯ  ಭಾಗವತರು, 

“ಹಲವಿದೇತಕೆ………………… ಕೌರವ ತಿಲಕ ಮೂವರ ನಂಬಿ ಕೆಟ್ಟನೆನುತ ಖತಿ ತಳೆದು ರಥವಿಳಿದು ನಡೆದ” ಎಂದು ಜಾಗಟೆ ಇರಿಸಿ ನಡೆದರಂತೆ. (ಕೇಳಿದ ವಿಚಾರ) ಅಷ್ಟೇ ಪ್ರಬಲವಾಗಿ  ವಿರೋಧಿಸುವವರು ಇಲ್ಲದ ಕಾರಣ ಈ ರೀತಿ ಅಪಸವ್ಯಗಳು ನಡೆಯುತ್ತವೆ.

ಇನ್ನೊಂದು ಸಂದರ್ಭ. ಶಲ್ಯನ ನಿರ್ಗಮನದ  ಅನಂತರದ ಇನ್ನೊಂದು ಪ್ರಧಾನ ಭಾಗ ಕೃಷ್ಣ-ಅರ್ಜುನ ಸಂಭಾಷಣೆ.  “ಮನಸಿಜ ಪಿತ ನೀನು”, “ಸಾಯಕಗಳಿಲ್ಲವಗೆ “” ಮುಂತಾದ ಪದ್ಯಗಳಿಗೆ ಈಗ ಅವಕಾಶ ಕಡಿತ. ಅಂತೂ ಇಷ್ಟೇ ಭಾಗಗಳಿಗೆ ಅಂದಾಜು 6 ಗಂಟೆ ವಿನಿಯೋಗಿಸಿ ಕರ್ಣಾವಸಾನ( ಪ್ರಸಂಗ) ಅಗುತ್ತದೆ.  

ಇದನ್ನು ಪ್ರಸಂಗದ, ಪಾತ್ರದ ವ್ಯಾಪ್ತಿಯಲ್ಲಿ, ಎಲ್ಲಾ ಭಾಗಗಳಲ್ಲೂ ಪಾತ್ರಗಳು ವ್ಯಕ್ತಿ ಆಗದೇ ಪಾತ್ರವಾಗಿಸಿ ಸುಂದರಗೊಳಿಸಬಹುದಲ್ಲವೇ?

      – ಸಿರಿಬಾಗಿಲು ರಾಮಕೃಷ್ಣ ಮಯ್ಯ

– ಸಿರಿಬಾಗಿಲು ರಾಮಕೃಷ್ಣ ಮಯ್ಯ

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಆವರಣದಲ್ಲಿ ಶ್ರೀ ಶಂಕರ ಸಭಾ ಭವನ ಉದ್ಘಾಟನೆ – “ಭಾರತೀಯ ಕಲಾ ಪ್ರಪಂಚ ಅದ್ಭುತವಾದದ್ದು” : ಪ್ರೊ.ಎಂ.ಪ್ರಭಾಕರ ಜೋಶಿ

0

ಪುತ್ತೂರು: ಭಾರತೀಯ ಕಲಾ ಪ್ರಪಂಚ ಅದ್ಭುತವಾದದ್ದು. ಅದನ್ನು ಮತ್ತಷ್ಟು ಬೆಳೆಸುವ, ವಿಸ್ತರಿಸುವ ಕಾರ್ಯ ಆಗಬೇಕು. ತನ್ಮೂಲಕ ಅರಿವಿನ ಪ್ರಸರಣ ಕಾರ್ಯ ನಡೆಯಬೇಕಿದೆ. ಕಲೆ ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ ಆ ಕುರಿತಾದ ಜ್ಞಾನಪ್ರಸಾರಕ್ಕೂ ಮೂಲವಾಗಬೇಕು ಎಂದು ವಿಮರ್ಶಕ, ಕಲಾವಿದ ಪ್ರೊ.ಎಂ.ಪ್ರಭಾಕರ ಜೋಶಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಆವರಣದಲ್ಲಿ ನೂತನಾಗಿ ನಿರ್ಮಿಸಲಾಗಿರುವ ಶ್ರೀ ಶಂಕರ ಸಭಾಭವನ ಹಾಗೂ ಶ್ರೀ ಲಲಿತಾಂಬಿಕಾ ವೇದಿಕೆಯನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.


ಅಂಕವಷ್ಟೇ ಬದುಕಿನಲ್ಲಿ ಮುಖ್ಯವಲ್ಲ. ಕಡಿಮೆ ಅಂಕ ಗಳಿಸಿದವರೂ ಬದುಕಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಹಲವಾರು ಉದಾಹರಣೆಗಳಿವೆ. ವಿದ್ಯಾರ್ಥಿಗಳು ಓದಿದ ಸಂಸ್ಥೆಯನ್ನು ಮರೆಯಬಾರದು. ಓದಿದ ಸಂಸ್ಥೆಯ ಹೆಸರಿನೊಂದಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವಂತಾಗಬೇಕು ಮಾತ್ರವಲ್ಲದೆ ಸಂಸ್ಥೆಯಿ0ದ ಹೊರಹೋಗುವಾಗ ಸಮಾಜಪರ ಚಿಂತನೆಗಳನ್ನು ತಮ್ಮೊಡನೆ ಒಯ್ಯಬೇಕು. ಆಗ ಅಧ್ಯಯನ ಮಾಡಿದ್ದಕ್ಕೆ ಸಾರ್ಥಕತೆ ದೊರಕುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶೃಂಗೇರಿ ಜಗದ್ಗುರುಗಳ ಪ್ರೇರಣೆ ಹಾಗೂ ಆಶೀರ್ವಾದಗಳೊಂದಿಗೆ ಅಂಬಿಕಾ ಸಂಸ್ಥೆಗಳು ಬೆಳೆದಿವೆ. ಶ್ರೀ ಲಲಿತಾಂಬಿಕಾ ವೇದಿಕೆ ಅನೇಕ ಕಲೆ, ಸಾಹಿತ್ಯಗಳಿಗೆ ಆಶ್ರಯ ನೀಡುವಂತಾಗಬೇಕು. ಋಣಾತ್ಮಕ ಶಕ್ತಿಗಳು ಕುಂದಿ ಧನಾತ್ಮಕ ಶಕ್ತಿ ವೇದಿಕೆಯಿಂದ ಪ್ರಸಾರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಸಭಾಂಗಣದ ನಕಾಶೆ ರೂಪಿಸಿದ ಇಂಜಿನಿಯರ್ ಪ್ರಸನ್ನ ಭಟ್, ಮೇಲ್ಛಾವಣಿ ನಿರ್ಮಿಸಿದ ಪುತ್ತೂರಿನ ರವಿಕಿರಣ್ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಡಾ.ಎಂ.ಎಸ್.ಶೆಣೈ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ನಟ್ಟೋಜ ಕುಟುಂಬಸ್ಥೆ ಗಾಯತ್ರಿ ಉಪಸ್ಥಿತರಿದ್ದರು.


ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ವಿದ್ಯಾರ್ಥಿಗಳಾದ ಮನು ಪರಮೇಶ್ವರ್ ಹಾಗೂ ಶಂಕರನಾರಾಯಣ ವೇದಘೋಷಗೈದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ವಂದಿಸಿದರು.

ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಭಾಂಗಣದ ಎದುರಿನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿದ್ಯಾಭಾರತಿ ಜಿಲ್ಲಾಮಟ್ಟದ ಶಟಲ್ ಬಾಡ್‍ಮಿಂಟನ್ ಸ್ಪರ್ಧೆಯಲ್ಲಿ ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ವಿದ್ಯಾಭಾರತಿ ಜಿಲ್ಲಾಮಟ್ಟದ ಶಟಲ್ ಬಾಡ್‍ಮಿಂಟನ್ ಪಂದ್ಯಾಟವು ದಿನಾಂಕ 03-09-2022ರಂದು  Officer’s Club ಪುತ್ತೂರು ಇಲ್ಲಿ ನಡೆದ ಸ್ಪರ್ಧೆಯಲ್ಲಿ ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.

ಬಾಲವರ್ಗದ ಬಾಲಕರ ವಿಭಾಗದಲ್ಲಿ 6ನೇ ತರಗತಿಯ ಇಶಾನ್.ಕೆ (ಶ್ರೀ ನಾರಾಯಣ ಮೂರ್ತಿ ಮತ್ತು ಪ್ರೇಮಲತ ಇವರ ಪುತ್ರ), ಹಿತನ್ ಕುಮಾರ್( ಶ್ರೀ ಉದಯ ಮತ್ತು ಲಲಿತ ಇವರ ಪುತ್ರ), 7ನೇ ತರಗತಿಯ ಕಾರ್ತಿಕ್ ಕುಮಾರ್(ಶ್ರೀ ಪ್ರಶಾಂತ್ ಕುಮಾರ್ ಮತ್ತು ಅಂಜಲಿ ಇವರ ಪುತ್ರ), ಶ್ರವಣ್.ಎಸ್( ಶ್ರೀ ರವೀಂದ್ರ ಆಚಾರ್ಯ ಮತ್ತು ಸೌಮ್ಯ ಇವರ ಪುತ್ರ) ಮತ್ತು ಮಹಿನ್.ಪಿ.ಆರ್(ಶ್ರೀ ರಾಕೇಶ್ ಕುಮಾರ್ ಮತ್ತು ಜ್ಯೋತಿ ಇವರ ಪುತ್ರ) ಇವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಸಮನ್ವಿತ.ಕೆ ( ಶ್ರೀ ಕಿಶೋರ್ ಕುಮಾರ್ ಮತ್ತು ರೂಪಾಶ್ರೀ.ಕೆ ಇವರ ಪುತ್ರಿ), ದಿಹರ್ಷ.ಎಸ್(ಶ್ರೀ ಶಿವಕುಮಾರ್ ಮತ್ತು ಪೊನ್ನಿ ಇವರ ಪುತ್ರಿ), 7ನೇ ತರಗತಿಯ ಕೀರ್ತನಾ (ಶ್ರೀ ಪ್ರತಾಪ್ ಸಿಂಹ ವರ್ಮ ಮತ್ತು ವೀಣಾ ಕುಮಾರಿ ಇವರ ಪುತ್ರಿ), 6ನೇ ತರಗತಿಯ ಸೃಷ್ಟಿ (ಶ್ರೀ ಬಿ.ರವಿಚಂದ್ರ ಮತ್ತು ಸುಮ ಇವರಪುತ್ರಿ) ಇವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಹರ್ಷಿತ( ಶ್ರೀ ಸಂತೋಷ್ ನಾಯ್ಕ ಮತ್ತು ಕವಿತಾ.ಕೆ ಇವರ ಪುತ್ರಿ) , ಶ್ರೇಯಾ.ರಾವ್ (ಶ್ರೀ ಅನಂತಕೃಷ್ಣ ಮತ್ತು ವೀಣಾ ಇವರ ಪುತ್ರಿ), 9ನೇ ತರಗತಿಯ ಸಾನ್ವಿ (ಶ್ರೀ ಜೆ.ನೆಲ್ಸನ್ ಮತ್ತು ವಾಣಿ.ಯು.ಹೆಚ್ ಪುತ್ರಿ), ರುಚಿತಾ.ಆರ್ (ಶ್ರೀ ರತ್ನಾಕರ್ ಪ್ರಭು ಮತ್ತು ಸವಿತಾ.ಕೆ ಇವರಪುತ್ರಿ) ಇವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಿಧ್ಯರಾಜ್ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು, ಸೆ 28: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಮಂಗಳೂರಿನ ಚೈತನ್ಯ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ಬಿಧ್ಯರಾಜ್ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.


ತಂಡದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ ಕೆ. ಎಸ್, ವಾಣಿಜ್ಯ ವಿಬಾಗದ ವಿಘ್ನೇಶ್ ಚಂದ್ರಕಾ0ತ್ ಜಾಧವ್,ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಬಿಧ್ಯರಾಜ್‌ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್‌ರವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಬುರ್ಖಾ ಧರಿಸಲು ನಿರಾಕರಿಸಿದ ಹಿಂದೂ ಪತ್ನಿಯನ್ನು ಕೊಂದ ಮುಸ್ಲಿಂ ಗಂಡ – ಲವ್ ಜಿಹಾದ್ ಕೃತ್ಯ, ಇಂತಹಾ ಸಾವಿರಾರು ಘಟನೆಗಳು ನಡೆದಿದ್ದರೂ ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುವುದು ಯಾಕೆ ತಪ್ಪುತ್ತಿಲ್ಲ?

0

ಇಸ್ಲಾಮಿಕ್ ಸಂಪ್ರದಾಯದಂತೆ ಬುರ್ಖಾ ಧರಿಸಲು ನಿರಾಕರಿಸಿದ ಹಿಂದೂ ಪತ್ನಿಯನ್ನು ಮುಂಬೈಯ ಜಿಹಾದಿ ಮುಸ್ಲಿಂ ವ್ಯಕ್ತಿಯೊಬ್ಬ ಕೊಂದಿದ್ದಾನೆ. ಮುಂಬೈ ನಿವಾಸಿಯೊಬ್ಬರು ತನ್ನ ಹಿಂದೂ ಪತ್ನಿ ಬುರ್ಖಾ ಧರಿಸಲು ಮತ್ತು ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಲು ನಿರಾಕರಿಸಿದ ಕಾರಣಕ್ಕೆ ಕೊಲೆ ಮಾಡಿದ್ದಾರೆ.

ಮುಂಬೈ ನಿವಾಸಿ ಇಕ್ಬಾಲ್ ಶೇಖ್ ಬುರ್ಖಾ ಧರಿಸಲು ನಿರಾಕರಿಸಿದ್ದಕ್ಕೆ ತನ್ನ ಹಿಂದೂ ಪತ್ನಿಯನ್ನು ಕೊಂದಿದ್ದಾನೆ. ರೂಪಾಲಿ ಮೂರು ವರ್ಷಗಳ ಹಿಂದೆ ಇಕ್ಬಾಲ್ ಶೇಖ್ ಅವರನ್ನು ಮದುವೆಯಾಗಿದ್ದರು. ರೂಪಾಲಿ ಕುಟುಂಬದ ಪ್ರಕಾರ, ಇಕ್ಬಾಲ್ ಶೇಖ್ ಕುಟುಂಬವು ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿತ್ತು.

ಮುಂಬೈ ನಿವಾಸಿ ಇಕ್ಬಾಲ್ ಮೊಹಮ್ಮದ್ ಶೇಖ್ ಎಂಬಾತನನ್ನು ತಿಲಕ್ ನಗರ ಪ್ರದೇಶದಲ್ಲಿ ಬುರ್ಖಾ ಧರಿಸಲು ಮತ್ತು ಇಸ್ಲಾಮಿಕ್ ಆಚರಣೆಗಳನ್ನು ಅನುಸರಿಸಲು ನಿರಾಕರಿಸಿದ್ದಕ್ಕಾಗಿ ತನ್ನ ಹಿಂದೂ ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಶೇಖ್ ನನ್ನು ವಶಕ್ಕೆ ಪಡೆಯಲಾಗಿದೆ.

ಸಂತ್ರಸ್ತೆ ರೂಪಾಲಿ ಮತ್ತು ಆರೋಪಿ ಇಕ್ಬಾಲ್ ಮೊಹಮ್ಮದ್ ಶೇಖ್ ಮದುವೆಯಾಗಿ ಮೂರು ವರ್ಷವಾಗಿತ್ತು. ಅವರ ಮದುವೆಯ ನಂತರ, ರೂಪಾಡಿ ಇಸ್ಲಾಮಿಕ್ ಸಂಪ್ರದಾಯವನ್ನು ಅನುಸರಿಸಲು ಮತ್ತು ಬುರ್ಖಾವನ್ನು ಧರಿಸಲು ಶೇಖ್ ಅವರ ಕುಟುಂಬದಿಂದ ಪಟ್ಟುಬಿಡದ ಒತ್ತಡವನ್ನು ಎದುರಿಸಿದರು, ಆದರೆ ಅವಳು ಈಡೇರಿಸಲು ಸಿದ್ಧರಿರಲಿಲ್ಲ. ಅಂತಿಮವಾಗಿ, 22 ವರ್ಷದ ಯುವಕ ಇಸ್ಲಾಮಿಕ್ ಆಚರಣೆಗಳ ಮೇಲೆ ಮನೆಯ ಕಲಹಗಳಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದನು.

ಸೆಪ್ಟೆಂಬರ್ 26 ರ ಸೋಮವಾರ ಸಂಜೆ ಶೇಖ್ ತನ್ನ ಹೆಂಡತಿಯನ್ನು ಭೇಟಿಯಾದಾಗ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಸೋಮವಾರ, ರೂಪಾಲಿ ಇಕ್ಬಾಲ್ ಶೇಖ್ ಅವರನ್ನು ಭೇಟಿಯಾಗಿ ವಿಚ್ಛೇದನಕ್ಕೆ ಒತ್ತಾಯಿಸಿದರು ಆದರೆ ಅವರು ಒಟ್ಟಿಗೆ ಮಗುವನ್ನು ಹೊಂದಿದ್ದರಿಂದ ಅವರು ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ. ನಂತರ ಆ ವ್ಯಕ್ತಿ ತಮ್ಮ ಮಗನನ್ನು ಕಸ್ಟಡಿಗೆ ಕೇಳಿದರು, ಅದನ್ನು ಮಹಿಳೆ ವಿರೋಧಿಸಿದರು. ಆಕೆ ಬೇಡಿಕೆಗೆ ಮಣಿಯಲು ನಿರಾಕರಿಸಿದಾಗ, ಇಕ್ಬಾಲ್ ಶೇಖ್ ಚಾಕುವಿನಿಂದ ಆಕೆಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

“ಸೆಪ್ಟೆಂಬರ್ 26 ರಂದು ರಾತ್ರಿ 10 ಗಂಟೆಗೆ ಇಕ್ಬಾಲ್ ಮೊಹಮ್ಮದ್ ಶೇಖ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕತ್ತು ಸೀಳಿ ಚಾಕುವಿನಿಂದ ಕೈಗಳಿಗೆ ಗಾಯಗೊಳಿಸಿ ಕೊಂದಿದ್ದಾನೆ. ದೂರುದಾರರ ಪ್ರಕಾರ, ಆರೋಪಿ ಮತ್ತು ಆತನ ಕುಟುಂಬ ಸದಸ್ಯರು ಇಸ್ಲಾಮಿಕ್ ಸಂಪ್ರದಾಯಗಳನ್ನು ಅನುಸರಿಸುವಂತೆ ಮತ್ತು ಮುಸ್ಲಿಂ ಮಹಿಳೆಯರು ಧರಿಸುವ ಬಟ್ಟೆಗಳನ್ನು ಧರಿಸುವಂತೆ ಒತ್ತಡ ಹೇರುತ್ತಿದ್ದರು. ಆದರೆ, ಮಹಿಳೆ ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹ ಶುರುವಾಗಿದೆ ಎಂದು ತಿಲಕ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಲಾಸ್ ರಾಥೋಡ್ ತಿಳಿಸಿದ್ದಾರೆ.

ಇಕ್ಬಾಲ್ ಶೇಖ್ ಮತ್ತು ಆತನ ಕುಟುಂಬದವರು ಮದುವೆಯಾದ ಮೊದಲ ದಿನದಿಂದ ಇಸ್ಲಾಂ ಸಂಪ್ರದಾಯಗಳನ್ನು ಅನುಸರಿಸುವಂತೆ ಮತ್ತು ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ರೂಪಾಲಿಯ ಕುಟುಂಬಸ್ಥರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ರೂಪಾಲಿ ಅದಕ್ಕೆ ಒಪ್ಪಿರಲಿಲ್ಲ.

ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಕಳೆದ ಕೆಲ ತಿಂಗಳಿಂದ ರೂಪಾಲಿ ಕೂಡ ಮನೆ ಬಿಟ್ಟು ಬೇರೆ ಬೇರೆಯಾಗಿದ್ದಳು. ವಿಶೇಷವೆಂದರೆ ಇಕ್ಬಾಲ್ ಶೇಖ್ ಗೆ ಇದು ಎರಡನೇ ಮಾಡುವೆ. ಮೊದಲ ಹೆಂಡತಿಗೆ ತಲಾಖ್ ನೀಡಿದ್ದನು. ಆದರೂ ರೂಪಾಲಿ ತನ್ನಿಂದ 15 ವರ್ಷಗಳಷ್ಟು ದೊಡ್ಡವನಾದ ಈ ಮುಸ್ಲಿಂ ಗಂಡಸನ್ನು ಮದುವೆಯಾಗಿದ್ದಳು!

ವೈರಲ್ ವೀಡಿಯೋ: ಪುರೋಹಿತನ ಮಾತು ನಂಬಿ 6 ಅಡಿ ಆಳದ ಗುಂಡಿಯಲ್ಲಿ ಧ್ಯಾನ ಸಮಾಧಿ ಸ್ಥಿತಿಯಲ್ಲಿ ಯುವಕ – ಧಾವಿಸಿ ಬಂದು ಗುಂಡಿಯಿಂದ ಹೊರಗೆಳೆದ ಪೊಲೀಸರು, ಮುಚ್ಚಿದ ಗುಂಡಿಯಲ್ಲಿ ಕುಳಿತರೆ ಜ್ಞಾನೋದಯವಾಗುತ್ತದೆ ಎಂದು ನಂಬಿಸಿದ ಪುರೋಹಿತ! 

0

ಪೊಲೀಸರು ‘ಸಮಾಧಿ’ ಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದರು, ಉತ್ತರ ಪ್ರದೇಶದಲ್ಲಿ 6 ಅಡಿ ಕೆಳಗೆ ಗುಂಡಿಯಲ್ಲಿ ಹೂತು ಹೋಗಿದ್ದ ಯುವಕನನ್ನು ಪೊಲೀಸರು ಹೊರಗೆಳೆದು ತೆಗೆದು ಗುಂಡಿಯಿಂದ ಸೀದಾ ಮಾವನ ಮನೆಗೆ (ಸೆರೆಮನೆಗೆ) ಕಳಿಸಿದ್ದಾರೆ.

ಉನ್ನಾವೋದ ತಾಜ್‌ಪುರ ಗ್ರಾಮದ ಮೂವರು ಪುರೋಹಿತರು ಧಾರ್ಮಿಕ ಉದ್ದೇಶದಿಂದ ಹಣ ಗಳಿಸುವ ಭರವಸೆಯಲ್ಲಿ ಯುವಕನೊಬ್ಬನಿಗೆ ಭೂಗತರಾಗಿ ‘ಸಮಾಧಿ’ ಸ್ಥಿತಿಯಲ್ಲಿದ್ದರೆ ಜ್ಞಾನೋದಯವಾಗುತ್ತದೆ ಎಂದು ಮನವೊಲಿಸಿದರು. ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು ‘ಸಮಾಧಿ’ ಸ್ಥಿತಿಯಲ್ಲಿದ್ದರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರು ಹೇಳಿದ ನಂತರ ಭೂಗರ್ಭದಲ್ಲಿ ಆರು ಅಡಿ ಆಳದಲ್ಲಿ ದಿನಗಳನ್ನುಕಳೆಯಲು ಹೋಗಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಇಂದು ರಕ್ಷಿಸಿದ್ದಾರೆ.

ಲಕ್ನೋದಿಂದ 45 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯ ತಾಜ್‌ಪುರ ಗ್ರಾಮದ ಮೂವರು ಪುರೋಹಿತರು ಧಾರ್ಮಿಕ ಶ್ರದ್ಧೆಯಿಂದ ಹಣ ಗಳಿಸುವ ಭರವಸೆಯಲ್ಲಿ ಯುವಕನೊಬ್ಬನಿಗೆ ‘ಸಮಾಧಿ’ ಭೂಗತವಾಗುವಂತೆ ಮನವರಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ಹೊರಕ್ಕೆ ಕರೆದೊಯ್ದಿದ್ದಾರೆ.

ಘಟನೆಯ ವೀಡಿಯೊದಲ್ಲಿ, ಪೊಲೀಸರು ವ್ಯಕ್ತಿಯನ್ನು ಸಮಾಧಿ ಮಾಡಿದ ಮಣ್ಣು ಮತ್ತು ಬಿದಿರಿನ ಹೊದಿಕೆಯನ್ನು ತೆಗೆದುಹಾಕುವುದನ್ನು ಕಾಣಬಹುದು. ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪವಿತ್ರ ಹಬ್ಬವಾದ ನವರಾತ್ರಿಯಲ್ಲಿ ಹಣ ಸಂಗ್ರಹಿಸುವ ದುರಾಸೆಯಿಂದ ಸಂಚು ರೂಪಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಅವರು ಆರು ಅಡಿ ಆಳದ ಹೊಂಡದಲ್ಲಿ ನವರಾತ್ರಿಯಂದು ಧ್ಯಾನ ‘ಸಮಾಧಿ’ ಯಾಗಿದ್ದಾರೆ. ಶ್ರೀ ಗೋಸ್ವಾಮಿ ಅವರ ತಂದೆ ವಿನೀತ್ ಗೋಸ್ವಾಮಿ ಕೂಡ ಗುಂಡಿ ಅಗೆಯುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗೆ ಗುಡಿಸಲಿನಲ್ಲಿ ಶುಭಂ ವಾಸವಾಗಿದ್ದ. ಪುರೋಹಿತರ ಸಂಪರ್ಕಕ್ಕೆ ಬಂದ ನಂತರ ಅವರು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಯುವಕನ ನಂಬಿಕೆಯನ್ನು ತಮಗೆ ಹಣವಾಗಿ ಪರಿವರ್ತಿಸಲು ಪ್ರಯತ್ನಿಸಿದರು.

ಗ್ರಾಮದ ಜನರು ವಿಷಯ ತಿಳಿದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಂಡಿಯಲ್ಲಿ ಸಜೀವ ಸಮಾಧಿಯಾಗಿರುವ ಸುದ್ದಿ ಕೇಳಿ ಪೊಲೀಸರು ಗಾಬರಿಗೊಂಡಿದ್ದಾರೆ. ಅವರು ಹಳ್ಳಿಗೆ ಧಾವಿಸಿ ಅವನನ್ನು ಹೊರಗೆಳೆದರು. ಯುವಕನನ್ನು ರಕ್ಷಿಸಿದ ಬಳಿಕ ಪೊಲೀಸರು ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದ್ದು, ಬಳಿಕ ಅರ್ಚಕರ ಪ್ಲಾನ್ ಬಯಲಾಗಿದೆ.

ಭಾಗಿಯಾಗಿದ್ದ ಇತರರು ಸ್ಥಳದಿಂದ ಓಡಿಹೋದರು, ಆದರೆ ಪೊಲೀಸರು ಶುಭಂ ಗೋಸ್ವಾಮಿ ಮತ್ತು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಅವರನ್ನು ಬಂಧಿಸಿದರು. ವೈದ್ಯಕೀಯ ಪರೀಕ್ಷೆಯ ನಂತರ ಶ್ರೀ ಗೋಸ್ವಾಮಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿಂದ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.