Wednesday, March 18, 2026
Home Blog Page 157

ಭೀಕರ ಅಪಘಾತದಲ್ಲಿ ಇಬ್ಬರ ಚಾಲಕರ ದುರ್ಮರಣ – ಲಾರಿ ಮತ್ತು ಕಂಟೈನರ್ ಮುಖಾಮುಖಿ ಢಿಕ್ಕಿ 

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಂಬೆಸಂಗವಿ ಕ್ರಾಸ್ ಬಳಿ ಲಾರಿ ಮತ್ತು ಕಂಟೇನರ್ ಮಧ್ಯೆ ಭೀಕರ ರಸ್ತೆ ಅಪಘಾತವಾಗಿ ಇಬ್ಬರು ಚಾಲಕರು ಸಾವನ್ನಪ್ಪಿದ ಘಟನೆ ನಡೆದಿದೆ.

ಲಾರಿ ಚಾಲಕ ವಿಜಯಕುಮಾರ್(40) ಹಾಗೂ ಕಂಟೇನರ್ ಚಾಲಕ ರಾಮ್‍ಕಿಶನ್ (32) ಸಾವನ್ನಪ್ಪಿದ ನತದೃಷ್ಟವಂತರು. ವಾಹನದಲ್ಲಿದ್ದ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.

ಅವರನ್ನು ಕೂಡಲೇ ಆಸ್ಪತ್ರೆಯ ಐಸಿಯು ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದರ್ ಕಡೆಯಿಂದ ವೇಗವಾಗಿ ಬಂದ ಕಂಟೇನರ್ ಲಾರಿಗೆ ಗುಜರಾತಿನಿಂದ ಟೈಲ್ಸ್ ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಲಾಚಾರಿ ಚಾಲಕನ ನಿರ್ಲ್ಯಕ್ಷವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಭಾಲ್ಕಿ ಗ್ರಾಮೀಣ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ವೇಳೆ ಟೆಂಪೋ ವಾಹನ ಹಾಗೂ ಕೆಎಂಎಫ್ ಹಾಲಿನ ವಾಹನ ಮುಖಾಮುಖಿ ಡಿಕ್ಕಿಯಾಗಿ 9 ಮಂದಿ ಸಾವು

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಾಂಧಿನಗರ ಬಳಿ ಭೀಕರ ಅಪಘಾತ ಸಂಭವಿಸಿದೆ.

ಇಂದು ಮುಂಜಾನೆ ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬ ದೇಗುಲಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ವೇಳೆ ಟೆಂಪೋ ಟ್ರಾವೆಲರ್ ವಾಹನ ಹಾಗೂ ಕೆಎಂಎಫ್ ಹಾಲಿನ ವಾಹನ ಮುಖಾಮುಖಿ ಡಿಕ್ಕಿಯಾಗಿ 9 ಮಂದಿ ಸಾವು ಸಂಭವಿಸಿದೆ ಎಂದು ಪೋಲಿಸ್ ಮೂಲಗಳು ಹೇಳಿವೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಬೇಡರ ಕಣ್ಣಪ್ಪ, ಮಹಾಕಲಿ ಮಗಧೇಂದ್ರ – ಯಕ್ಷಗಾನ ಪ್ರದರ್ಶನ

ದಿನಾಂಕ 19.10.2022ರಂದು, ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ‘ಬೇಡರ ಕಣ್ಣಪ್ಪ, ಮಾಹಾಕಲಿ ಮಗಧೇಂದ್ರ’ ಎಂಬ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ

ಕುಕ್ಕೆ ಸುಬ್ರಹ್ಮಣ್ಯದ ಸ್ಕಂದ ಕಲಾಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮ ರಾತ್ರಿ 7 ಘಂಟೆಯಿಂದ 12 ಘಂಟೆಯ ವರೆಗೆ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಚಿತ್ರ ಚಿತ್ರವನ್ನು ನೋಡಿ.

ಹಿಂದಿಯಲ್ಲಿಯೂ ದೂಳೆಬ್ಬಿಸಿದ ‘ಕಾಂತಾರ’ – ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್- ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ?

ಹಿಂದಿಯಲ್ಲಿಯೂ ದೂಳೆಬ್ಬಿಸಿದ ‘ಕಾಂತಾರ’ – ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚು ಕಲೆಕ್ಷನ್- ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ?

ಕನ್ನಡದ ಜನಪ್ರಿಯ ಕಾಂತಾರ ಸಿನಿಮಾ‌ ಹಿಂದಿಯಲ್ಲಿ ಬಾರಿ ಸದ್ದು ಮಾಡುತ್ತಿದೆ.

ಮೊದಲ ದಿನದ ಗಳಿಕೆಯೇ ಒಂದು ಕೋಟಿ ರೂಪಾಯಿಗಳನ್ನು ದಾಟಿದೆ.

ಬಾಲಿವುಡ್ ಸಿನಿಮಾ ಎನಾಲಿಸ್ಟ್ ತರುಣ್ ಆದರ್ಶ್ ಪ್ರಕಾರ ಕಾಂತಾರ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ 1.27 ಕೋಟೆ ರೂಪಾಯಿಗಳು.

ನಾಳೆ ‘ಕರ್ಣ ಪರ್ವ’ ತಾಳಮದ್ದಳೆ ಕಾರ್ಯಕ್ರಮ

ನಾಳೆ ದಿನಾಂಕ 16-10-2022ರಂದು ಕರ್ಣಪರ್ವ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅರಸಿನಮಕ್ಕಿ ಇಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ,ಕರ್ಣ ಪರ್ವ’ ತಾಳಮದ್ದಳೆ ಕೂಟ ನಡೆಯಲಿದೆ.

ಈ ತಾಳಮದ್ದಳೆ ಅಪರಾಹ್ನ 2.30 ಗಂಟೆಯಿಂದ ರಾತ್ರಿ 7 ರ ವರೆಗೆ ಈ ಕಾರ್ಯಕ್ರಮ ಜರಗಲಿದೆ..

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ.

ಅಡ್ಕಸ್ಥಳದಿಂದ ಚೆರ್ಕಳ: ಉತ್ತಮ ರಸ್ತೆ, ಸುಪರ್ … ರಸ್ತೆ ಬದಿ ಮಾತ್ರ ಯಾಕೆ ಹಾಗೆ?

ಕೇರಳವು ಮೊದಲಿಂದಲೂ ಸಾರಿಗೆ ವ್ಯವಸ್ಥೆ ಮತ್ತು ಅಲ್ಲಿನ ಉತ್ತಮ ರಸ್ತೆಗಳಿಗೆ ಹೆಸರುವಾಸಿ. ಇದಕ್ಕೆ ಅಪವಾದವೆಂಬಂತೆ ಒಳಪ್ರದೇಶಗಳಲ್ಲಿ ಕೆಲವು ಹೊಂಡಮಯ ರಸ್ತೆಗಳೂ ಇವೆ. ಆದರೆ ಅದು ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ತುಂಬಾ ಕಡಿಮೆ.

ದಕ್ಷಿಣ ಕನ್ನಡ ಪುತ್ತೂರು, ವಿಟ್ಲ ಮಾರ್ಗವಾಗಿ ಹೋಗುತ್ತಿರುವಾಗ ಅಡ್ಕಸ್ಥಳದಿಂದ ಚೆರ್ಕಳದ ರಸ್ತೆ ಉತ್ತಮ ಗುಣಮಟ್ಟವನ್ನು ಹೊಂದಿದೆ. ರಸ್ತೆಗಳಲ್ಲಿ ಹೊಂಡಗಳೇ ಬಹಳ ಅಪರೂಪ. ಇದಕ್ಕೆ ಅವರನ್ನು ಅಭಿನಂದಿಸಬೇಕು.

ಆದರೆ ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿಯೂ ನೋಡುವುದಕ್ಕೆ ಹೋಗಬೇಡಿ. ನೀವು ದ್ವಿಚಕ್ರ ವಾಹನಗಳಲ್ಲಿ ಹೋಗುವುದಾದರೆ ನಿಮಗೆ ಹಲವಾರು ದೃಶ್ಯಗಳು ಕಾಣಸಿಗುತ್ತವೆ. ವಾಸ್ತವವಾಗಿ ರಸ್ತೆ ಚೆನ್ನಾಗಿದ್ದರೂ ರಸ್ತೆಬದಿಯನ್ನು ಹೊಲಸು ಮಾಡುವವರಿಗೆ ಏನೆನ್ನಬೇಕು?

ಅಡ್ಕಸ್ಥಳದಿಂದ ಸಂಚರಿಸುವಾಗ ಎಡನೀರು ವರೆಗೂ ನಿಮಗೆ ಅಲಲ್ಲಿ ಕಸದ ರಾಶಿಗಳನ್ನು ರಸ್ತೆ ಬದಿಯಲ್ಲಿ ಎಸೆದಿರುವುದು ಕಂಡುಬರುತ್ತದೆ. ಮಾಂಸದ ಅಂಗಡಿಗಳ ತ್ಯಾಜ್ಯಗಳು ಇದರಲ್ಲಿ ಸಿಂಹಪಾಲು. ಮಾಂಸದ ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ಎಸೆಯಲಾಗಿದೆ. ಇದೆಲ್ಲಾ ರಾತ್ರಿಯ ಹೊತ್ತಿನಲ್ಲಿ ನಡೆಯುವ ಕಾರುಬಾರು.

ಎಲ್ಲಿ ಜನಸಂಚಾರ ಇಲ್ಲವೋ ಅಂತಹ ಪ್ರದೇಶದಲ್ಲಿ ಈ ಕಸದ ರಾಶಿಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಸಂಚರಿಸುವಾಗ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇಂತಹ ತ್ಯಾಜ್ಯಗಳನ್ನು ಹಲವಾರು ಕಡೆಗಳಲ್ಲಿ ಎಸೆಯಲಾಗಿದೆ. ಕೆಳಗಿನ ಕೆಲವು ಸ್ಯಾಂಪಲ್ಗಳನ್ನು ನೋಡಿ. 

ಈ ಪ್ರದೇಶ ಉಕ್ಕಿನಡ್ಕದಿಂದ ಸ್ವಲ್ಪ ಮುಂದೆ ಪರ್ತಿಕ್ಕಾರಿಗೆ ಇಳಿಯುವ ಸಮೀಪದಲ್ಲೇ ಇದೆ. ಇಲ್ಲಿ ನಿಜವಾಗಿಯೂ ‘ತ್ಯಾಜ್ಯ ವಸ್ತುಗಳನ್ನು ಬಿಸಾಡಬೇಡಿ’ ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಆದರೂ ಇಲ್ಲೇ ತಂದು ಎಸೆಯುತ್ತಾರೆ. ಯಾಕೆಂದರೆ ಕಸ ಎಸೆಯುವವರಿಗೆ ಇದೊಂದು ಸೇಫ್ ಜಾಗ!

ಇದು ಬದಿಯಡ್ಕದ ಬೀಜಂತಡ್ಕ ಹಾಗೂ ನೆಕ್ರಾಜೆಯ ನಡುವೆ. ಇಲ್ಲಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸದ ರಾಶಿ, ತ್ಯಾಜ್ಯ ತುಂಬಿದ ಗೋಣಿಗಳು ಕಾಣಸಿಗುತ್ತವೆ. 

ಈ ಪ್ರದೇಶ ಇರುವುದು ಎದುರ್ತೋಡಿನಿಂದ ಮುಂದೆ ಎಡನೀರಿಗೆ ಹೋಗುವಾಗ ಇಳಿಜಾರಾದ ತಿರುವು ಪ್ರದೇಶ. ಇಲ್ಲಿ ಕೂಡಾ ನಾಮಫಲಕವನ್ನು ಹಾಕಲಾಗಿದೆ. ಬಹುಶಃ ಯಾವುದೋ ದೈವಸಾನ್ನಿಧ್ಯ ಇರುವ ಪ್ರದೇಶ ಎಂದು ಬೋರ್ಡ್ ಹಾಕಿರಬಹುದು. ಆದರೂ ಅದರ ಬುಡದಲ್ಲಿಯೇ ತ್ಯಾಜ್ಯ ತುಂಬಿದ ಲಕೋಟೆಗಳನ್ನು ತಂದು ಸುರಿದಿದ್ದಾರೆ. 

ಇದು ಕೇವಲ ಒಂದೆರಡು ಉದಾಹರಣೆಗಳಷ್ಟೇ. ಇಂತಹವು ಅಲ್ಲಲ್ಲಿ ನಮಗೆ ಕಾಣಸಿಗುತ್ತವೆ. ಇಷ್ಟು ಒಳ್ಳೆಯ ರಸ್ತೆಯ ಇಕ್ಕೆಲಗಳನ್ನು ಯಾಕೆ ಹೀಗೆ ಹಾಳು ಮಾಡುತ್ತಾರೆ ಎಂಬುದನ್ನು ಯೋಚಿಸಿ ಖೇದವಾಗುತ್ತದೆ. ನಾವು ಬರೀ ಆಡಳಿತವನ್ನು, ಸರಕಾರವನ್ನು ದೂರಿದರೆ ಸಾಲದು. ಉತ್ತಮ ನಾಗರಿಕರಾಗಿ ಪರಿಸರವನ್ನು ಸುವ್ಯವಸ್ಥಿತವಾಗಿ, ಸ್ವಚ್ಛವಾಗಿ ಇಡುವ ಮನೋಸ್ಥಿತಿ ನಮ್ಮಲ್ಲಿರಬೇಕು. 

‘ಹನುಮೋದ್ಭವ ಮಾರಣಾಧ್ವರ’ ಇಂದು ಸರ್ಪಂಗಳ ಯಕ್ಷೋತ್ಸವದಲ್ಲಿ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಖಾಡಾಖಾಡಿ ಸಮರ!   

ಹನ್ನೊಂದನೆಯ ವರ್ಷದ  ಸರ್ಪಂಗಳ  ಯಕ್ಷೋತ್ಸವ ಮತ್ತು  ಸರ್ಪಂಗಳ  ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಇಂದು, ಅಕ್ಟೋಬರ್ 15, 2022 ರಂದು ರಾತ್ರಿ 9.00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಜರಗಲಿದೆ.

ಸಂಜೆ 6.00 ರಿಂದ 11.00ರವರೆಗೆ ‘ಹನುಮೋದ್ಭವ ಮಾರಣಾಧ್ವರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

2022ನೆಯ ಸಾಲಿನ‘ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ಯನ್ನು ಪಿ.ಟಿ. ಜಯರಾಮ ಭಟ್ ಅವರಿಗೆ ನೀಡಲಾಗುತ್ತಿದೆ. ಪ್ರಸಿದ್ಧ ಪದ್ಯಾಣ ಮನೆತನದ ಜಯರಾಮ ಭಟ್ಟರು ಸುಮಾರು ಮೂರು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆವಾದಕರಾಗಿ ತಿರುಗಾಟ ನಡೆಸಿದ ಅನುಭವ ಉಳ್ಳವರು.

ಈ ವರ್ಷದ ‘ಸರ್ಪಂಗಳ ಕಲಾಸೇವಾ ಪುರಸ್ಕಾರ’ವನ್ನು ಕಟೀಲು ಮೇಳದಲ್ಲಿ ಸುಮಾರು ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕ ಬಸಕೋಡಿ ಇವರಿಗೆ ನೀಡಲಾಗುತ್ತಿದೆ.

ಇಂದು ಒಂದು ಅತ್ಯುತ್ತಮ ಯಕ್ಷಗಾನದ ನಿರೀಕ್ಷೆಯಲ್ಲಿ ಯಕ್ಷಗಾನದ ಅಭಿಮಾನಿಗಳಿದ್ದಾರೆ. ಒಂದನೇ ಹಾಗೂ ಎರಡನೇ ಪ್ರಸಂಗದಲ್ಲಿ ನುರಿತ, ಸುಪ್ರಸಿದ್ಧ ಕಲಾವಿದರೇ ಇದ್ದಾರೆ. ಎರಡನೇ ಪ್ರಸಂಗ ‘ಮಾರಣಾಧ್ವರ’ ಉತ್ತಮ ಪ್ರದರ್ಶನ ಕಾಣಲಿದೆ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದರಲ್ಲೂ ಸುಣ್ಣಂಬಳರ (ಹನುಮಂತ) ಮತ್ತು ಸುಬ್ರಾಯ ಹೊಳ್ಳರ (ಇಂದ್ರಜಿತು) ಅತ್ಯುತ್ತಮ ನಿರ್ವಹಣೆಯನ್ನು ಕಾಣುವುದಂತೂ ಖಂಡಿತ.

ಇನ್ನೂ ಒಂದು ಕುತೂಹಲದ ಅಂಶವೆಂದರೆ ಗುಂಡಿಮಜಲು ಗೋಪಾಲ ಭಟ್ಟರ ಲಕ್ಷ್ಮಣ. ಕಲಾರಸಿಕರು ಪ್ರದರ್ಶನದ ಸಮಯದ ನಿರೀಕ್ಷೆಯಲ್ಲಿದ್ದಾರೆ.  ಎಲ್ಲಾ ವಿವರಗಳಿಗೆ ಚಿತ್ರ ನೋಡಿ 

ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಆತ್ಮಕಥೆಯಲ್ಲಿ ಹೊರಬರುತ್ತಿರುವ ಹೊಸ ಹೊಸ ಕುತೂಹಲಕರ ಸಂಗತಿಗಳು

ತಿರುವನಂತಪುರಂ: ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆತ್ಮಕಥೆಯಿಂದ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.

ಐಎಎಸ್ ಅಧಿಕಾರಿ ಶಿವಶಂಕರ್ ಅವರು ಸ್ವಪ್ನಾ ಜೊತೆಗಿನ ಸಂಬಂಧದ ಬಗ್ಗೆ ಪತ್ನಿಗೆ ಹೇಳಿದಾಗ ಅವರು ಯಾವುದೇ ಚಿಂತೆಯಿಲ್ಲದೆ ಶುಭ ಹಾರೈಸಿದರು ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ.

‘ನನ್ನ ಜೊತೆಗಿನ ಸಂಬಂಧದ ಬಗ್ಗೆ ಐಎಎಸ್ ಅಧಿಕಾರಿ ಶಿವಶಂಕರ್ ಪತ್ನಿಗೆ ಹೇಳಿದಾಗ ಯಾವುದೇ ಸಮಸ್ಯೆ ಇರಲಿಲ್ಲ. ಅವನು (ಶಿವಶಂಕರ್) ನನ್ನಲ್ಲಿ (ಸ್ವಪ್ನಾ) ಕೆಲವು ಗುಣಗಳನ್ನು ಕಂಡಿರಬಹುದು ಎಂದು ಶಿವಶಂಕರ್ ಪತ್ನಿ ಹೇಳಿದ್ದಳು.

ಇದಾದ ನಂತರ ಐಎಎಸ್ ಅಧಿಕಾರಿ ಶಿವಶಂಕರ್ ಮನೆಯಿಂದ ಹೊರಬಂದು ಹೀದರ್ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡರು. ನಮ್ಮ ನಂತರದ ಭೇಟಿಗಳೆಲ್ಲಾ ಫ್ಲಾಟ್‌ನಲ್ಲಿಯೇ ನಡೆದವು’ ಎಂದು ಸ್ವಪ್ನಾ ಬರೆದುಕೊಂಡಿದ್ದಾರೆ.

ಆಕಸ್ಮಿಕವಾಗಿ ತಾಯಿ ಚಲಾಯಿಸುತ್ತಿದ್ದ ಕಾರು ಮೇಲೆ ಹರಿದ ಪರಿಣಾಮ 3 ವರ್ಷದ ಬಾಲಕಿ ಸಾವು

ಕೋಯಿಕ್ಕೋಡು: ವಿಲಕ್ಷಣ ಅಪಘಾತದಲ್ಲಿ, ಮೂರು ವರ್ಷದ ಬಾಲಕಿ ತನ್ನ ತಾಯಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ.

ಶುಕ್ರವಾರ ಬೆಳಗ್ಗೆ ಇಲ್ಲಿನ ಕೊಡುವಳ್ಳಿಯಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕಿ ಅಪಘಾತಕ್ಕೀಡಾಗಿದ್ದಾಳೆ.

ಮೃತರನ್ನು ಈಂಗಪುಳ ಮೂಲದ ನಜೀರ್ ಮತ್ತು ನೆಲ್ಲಂಕಂಡಿ ಮೂಲದ ಲುಬ್ನಾ ಫೆಬಿನಿ ಅವರ ಪುತ್ರಿ ಮರಿಯಂ ನಜೀರ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ ಮಗುವಿನ ತಾಯಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ. ಕೂಡಲೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ನಂತರ ಮುಂದಿನ ಕ್ರಮಕ್ಕಾಗಿ ಮೃತದೇಹವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

ನಾಳೆ ಸಂಜೆ 6 ಘಂಟೆಗೆ ಮೂಡಲಪಾಯ ಯಕ್ಷಗಾನ – ಶ್ರೀ ದೇವಿ ಮಹಾತ್ಮೆ 

ನಾಳೆ ದಿನಾಂಕ 15.10.2022ರಂದು ಶನಿವಾರ ಸಂಜೆ 6 ಘಂಟೆಗೆ ಸರಿಯಾಗಿ ಮೂಡಲಪಾಯ ಯಕ್ಷಗಾನ – ಶ್ರೀ ದೇವಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ.

ಮಂಡ್ಯ, ಹಾಸನ ಮತ್ತು ತುಮುಕೂರು ಉತ್ಸವವು, ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆಯಲಿದೆ. 

ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ಎರಡುದಿನ ನಡೆಯಲಿದ್ದು ನಾಳೆ ದಿನಾಂಕ 15.10.2022ರಂದು ಸಂಜೆ 6 ಘಂಟೆಗೆ ಸರಿಯಾಗಿ ಶ್ರೀ ದೇವಿ ಮಹಾತ್ಮೆ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವು ದೆಹಲಿ ಕರ್ನಾಟಕ ಸಭಾಂಗಣದಲ್ಲಿ ನಡೆಯಲಿದೆ.

ವಿವರಗಳಿಗೆ ಕರಪತ್ರ ನೋಡಿ.