ತರಕಾರಿ ಖರೀದಿಸಲು ಹೊರಟಿದ್ದ ಜೈಪುರದ ಕಾಂಗ್ರೆಸ್ ಮುಖಂಡ ಗೋಪಾಲ್ ಕೇಶವತ್ ಅವರ ಮಗಳನ್ನು ಜನರ ಗುಂಪೊಂದು ಅಪಹರಿಸಿದೆ.
ರಾಜಸ್ಥಾನದ ಜೈಪುರದಲ್ಲಿ ತರಕಾರಿ ಖರೀದಿಸಲು ಹೊರಟಿದ್ದ ಕಾಂಗ್ರೆಸ್ ಮುಖಂಡ ಗೋಪಾಲ್ ಕೇಶವತ್ ಅವರ ಮಗಳನ್ನು ಅಪರಿಚಿತರು ಸೋಮವಾರ ಅಪಹರಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡನ 21 ವರ್ಷದ ಮಗಳು ಅಬ್ಲಿಲಾಶಾ ಅವರು ತರಕಾರಿ ಖರೀದಿಸಲು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಸಂಜೆ 5:30 ಕ್ಕೆ ತೆರಳಿದ್ದರು.
ಸಂಜೆ 6.05 ರ ಸುಮಾರಿಗೆ ಮಗಳಿಂದ ಫೋನ್ ಕರೆ ಬಂದ ನಂತರ ಕಾಂಗ್ರೆಸ್ ನಾಯಕ ಗಾಬರಿಗೊಂಡರು. ಕೇಸಾವತ್ ಹೇಳುವಂತೆ ಅವರ ಮಗಳು, “ಕೆಲವು ಹುಡುಗರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅಪ್ಪಾ, ಬೇಗನೆ ಬಾ” ಎಂದು ಫೋನಿನಲ್ಲಿ ಹೇಳಿದ್ದಳು.
ಮಂಗಳವಾರ ಮಧ್ಯಾಹ್ನ, ರಾಜಸ್ಥಾನ ಡಿನೋಟಿಫೈಡ್ ಟ್ರೈಬ್ಸ್ ಮತ್ತು ಅಲೆಮಾರಿ, ಅರೆ ಅಲೆಮಾರಿ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಮಗಳ ಭಾವಚಿತ್ರದೊಂದಿಗೆ ಜೈಪುರ ಕಮಿಷನರೇಟ್ ತಲುಪಿದರು. ಮಗಳ ಅಪಹರಣದ ಬಳಿಕ ಆಕೆಗೆ ಹಲವು ಬಾರಿ ಕರೆ ಮಾಡಿದರೂ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಕೇಸಾವತ್ ಅವರು ಹೆಚ್ಚುವರಿ ಪೊಲೀಸ್ ಕಮಿಷನರ್ ಅಜಯ್‌ಪಾಲ್ ಲಂಬಾ ಅವರಿಗೆ ಜ್ಞಾಪಕ ಪತ್ರವನ್ನು ನೀಡಿ ಆದಷ್ಟು ಬೇಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಆಯುಕ್ತರ ಭೇಟಿ ವೇಳೆ ಭಾವುಕರಾದರು. ಅವರ ಜೊತೆ ಬಂದಿದ್ದ ಕುಟುಂಬಸ್ಥರು ಕೂಡ ಮಗಳನ್ನು ಬೇಗ ಹುಡುಕಿಕೊಡಿ ಎಂದು ಅಳಲು ತೋಡಿಕೊಂಡರು.
ಕೇಶವತ್ ಸೋಮವಾರ ತಡರಾತ್ರಿ ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅಪಹರಣ ಪ್ರಕರಣ ದಾಖಲಾಗಿದ್ದು, ಅಭಿಲಾಷ ಕೇಶವತ್‌ಗಾಗಿ ಪೊಲೀಸ್ ತಂಡ ಹುಡುಕಾಟ ಆರಂಭಿಸಿದೆ. ಅಭಿಲಾಷಾ ತರಕಾರಿ ತರಲು ಎನ್‌ಆರ್‌ಐ ಸರ್ಕಲ್‌ಗೆ ಹೋಗಿದ್ದರು ಎಂದು ರಾಜಕಾರಣಿ ಪೊಲೀಸರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಮಂಗಳವಾರ ಬೆಳಿಗ್ಗೆ ಅವರ ದ್ವಿಚಕ್ರ ವಾಹನವು ವಿಮಾನ ನಿಲ್ದಾಣದ ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ. ಅಪರಾಧ ನಡೆದ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ತನಿಖೆ ನಡೆಯುತ್ತಿದೆ.
ಆಮ್ ಆದ್ಮಿ ಪಾರ್ಟಿಯ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ, ಜೈನ್ ಸೆಲ್‌ನೊಳಗೆ ರುಚಿಕರವಾದ ಊಟವನ್ನು ಆನಂದಿಸುತ್ತಿರುವ ವೀಡಿಯೊವನ್ನು ಬಿಜೆಪಿ ಹಂಚಿಕೊಂಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಸೆಲ್‌ನಲ್ಲಿ ಮಸಾಜ್ ಮಾಡುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬುಧವಾರ ಜೈನ್ ಸೆಲ್‌ನೊಳಗೆ ರುಚಿಕರವಾದ ಊಟವನ್ನು ಆನಂದಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಜೈಲಿನಲ್ಲಿರುವ ಸಚಿವರು ತಿಹಾರ್ ಜೈಲಿನಲ್ಲಿ ರುಚಿಯಾದ ಊಟವನ್ನು ಆನಂದಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಮಾಧ್ಯಮದಿಂದ ಮತ್ತೊಂದು ವೀಡಿಯೊ! ಅತ್ಯಾಚಾರಿ ಖೈದಿಯನ್ನು ಫಿಸಿಯೋ ಥೆರಪಿಸ್ಟ್ ಎಂದು ಕರೆದು ಅವನಿಂದ ಮಾಲಿಶ್ ಮಾಡಿಸಿಕೊಂಡ ನಂತರ ಸತ್ಯೇಂದ್ರ ಜೈನ್ ರುಚಿಕರವಾದ ಊಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು! ಅವರು ರಜೆಯ ಮೇಲೆ ರೆಸಾರ್ಟ್‌ನಲ್ಲಿರುವಂತೆ ಅಟೆಂಡೆಂಟ್‌ಗಳು ಅವರಿಗೆ ಆಹಾರವನ್ನು ಬಡಿಸುತ್ತಾರೆ! ಹವಾಲಾಬಾಜ್‌ಗೆ ವಿವಿಐಪಿ ಮಜಾ ಸಿಗುತ್ತದೆ ಎಂದು ಕೇಜ್ರಿವಾಲ್ ಜಿ ಖಚಿತಪಡಿಸಿದ್ದಾರೆ, ಸಜಾ ಶಿಕ್ಷೆ ಅಲ್ಲ! ”ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಸತ್ಯೇಂದ್ರ ಜೈನ್ ರುಚಿಕರವಾದ ಊಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು! ಅವರು ರಜೆಯ ಮೇಲೆ ರೆಸಾರ್ಟ್‌ನಲ್ಲಿರುವಂತೆ ಅಟೆಂಡೆಂಟ್‌ಗಳು ಅವರಿಗೆ ಆಹಾರವನ್ನು ಬಡಿಸುತ್ತಾರೆ! ವೀಡಿಯೋದಲ್ಲಿ, ಜೈನ್ ಅವರು ಅಪೆಟೈಸರ್‌ಗಳೊಂದಿಗೆ ವಿಸ್ತಾರವಾದ ಊಟವನ್ನು ಪ್ರಾರಂಭಿಸುತ್ತಾರೆ ಮತ್ತು ಸಲಾಡ್‌ಗಳು ಮತ್ತು ಇತರ ರುಚಿಕರವಾದ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಕಾಣಬಹುದು.
ಆಹಾರವನ್ನು ತರುವುದರಿಂದ ಹಿಡಿದು ತನ್ನ ಕುರ್ಚಿಯ ಬಳಿ ಕಸದ ತೊಟ್ಟಿ ಇಡುವವರೆಗೆ ನಿರಂತರವಾಗಿ ತನ್ನ ಸೇವೆಯಲ್ಲಿರುವ ವ್ಯಕ್ತಿಯನ್ನು ವೀಡಿಯೊ ತೋರಿಸುತ್ತದೆ. ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಬಾಟಲಿಗಳನ್ನು ಸಹ ಅವರ ಕೋಣೆಯಲ್ಲಿ ಕಾಣಬಹುದು.
One more video from media! After taking maalish from rapist & calling him PHYSIO therapist, Satyendra Jain can be seen enjoying sumptuous meal! Attendants serve him food as if he is in a resort on vacation!
ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವಿಡಿಯೋವನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿ ಗದ್ದಲ ಎಬ್ಬಿಸಿದೆ. ಜೈನ್‌ಗೆ ವಿಐಪಿ ಚಿಕಿತ್ಸೆ ನೀಡಿದ್ದಕ್ಕಾಗಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಇದು ಬಂದಿದೆ.
ತಿಹಾರ್ ಜೈಲಿನ ಮೂಲಗಳ ಪ್ರಕಾರ, ವಿಡಿಯೋ ಹಳೆಯದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲು ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.
ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ತಿಹಾರ್ ಜೈಲಿನೊಳಗೆ ಹಣ್ಣು-ಸಲಾಡ್ ಆಹಾರವನ್ನು ನೀಡುವಂತೆ ಕೋರಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ಮಾಡಿದ ಮನವಿಯ ಕುರಿತು ರೋಸ್ ಅವೆನ್ಯೂ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಂದ ಪ್ರತಿಕ್ರಿಯೆಯನ್ನು ಕೋರಿದ ಒಂದು ದಿನದ ನಂತರ ವೀಡಿಯೊ ಹೊರಹೊಮ್ಮಿದೆ.
ಮಂಗಳೂರು: ‘ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಗಳಿಂದ ಲಭ್ಯವಾಗುವ ಸಂತೃಪ್ತ ಭಾವ ಮಹತ್ತರವಾದುದು. ಇದು ನಮ್ಮ ಬದುಕಿಗೆ ಸಾರ್ಥಕ್ಯವನ್ನು ತಂದು ಕೊಡುತ್ತದೆ’ ಎಂದು ಮುಂಬೈ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯಾದ ‘ಯಕ್ಷಾಂಗಣ ಮಂಗಳೂರು’, ಮಂಗಳೂರು ವಿಶ್ವವಿದ್ಯಾ ನಿಲಯದ ಡಾl ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಸಪ್ತ ವಿಜಯ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022 ಹತ್ತನೇ ವರ್ಷದ ನುಡಿ ಹಬ್ಬದಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ರಾಜಾಶ್ರಯ ಅಗತ್ಯ: ಸಪ್ತಾಹ ಉದ್ಘಾಟಿಸಿದ ಮುಂಬಯಿ ಉದ್ಯಮಿ – ಕಲಾಪೋಷಕರು, ಥಾಣೆ ಬಂಟ್ಸ್ ಎಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ ಅವರು ‘ಕಲೆಗೆ ರಾಜಾಶ್ರಯ ಅಗತ್ಯ. ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಎಲ್ಲೆಡೆಯಲ್ಲಿ ಆಗಬೇಕು. ಮುಂಬಯಿ ಕಲಾಭಿಮಾನಿಗಳು ಈ ವಿಚಾರದಲ್ಲಿ ಮಾದರಿಯಾಗಿದ್ದಾರೆ’ ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕಿನ ಮಹಾ ಪ್ರಬಂಧಕ ರಮೇಶ್ ಭಟ್ ಅವರು ‘ಬ್ಯಾಂಕ್ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬರುತ್ತಿದೆ’ ಎಂದರು.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ :ಅಧ್ಯಕ್ಷತೆ ವಹಿಸಿದ್ದ ಕದ್ರಿ ಮಂಜುನಾಥ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಯಕ್ಷಾಂಗಣ ಮಂಗಳೂರು ಗೌರವಾಧ್ಯಕ್ಷ ಡಾl ಎ.ಜೆ.ಶೆಟ್ಟಿ ಅವರು ಐಕಳ ಹರೀಶ್ ಶೆಟ್ಟಿ ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಿದರು.
‘ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಉದಾತ್ತ ಕಾರ್ಯ. ಯಕ್ಷಾಂಗಣ 9 ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿದೆ. ಕಲಾವಿದರ ಮಾನ – ಸಮ್ಮಾನದೊಂದಿಗೆ ಕಲಾ ಪ್ರದರ್ಶನ, ಚಿಂತನ-ಮಂಥನ ನಡೆಸುವ ಮೂಲಕ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ತಂಡದವರು ಸ್ತುತ್ಯ ಕೆಲಸ ಮಾಡುತ್ತಿದ್ದಾರೆ’ ಎಂದವರು ಹೇಳಿದರು. ಇದೇ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ ಐಕಳ ಹರೀಶ್ ಶೆಟ್ಟಿ ಅವರ ಅಭಿನಂದನಾ ಸಂಪುಟ ‘ಸಾರ್ವಭೌಮ’ ಗ್ರಂಥವನ್ನು ವೇದಿಕೆಯ ಅತಿಥಿಗಳಿಗೆ ವಿತರಿಸಲಾಯಿತು. ಲೇಖಕ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ಅವರ ‘ಯಕ್ಷಗಾನ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡದ ನುಡಿಹಬ್ಬ: ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘2013 ರ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಆರಂಭಿಸಿದ ತಾಳಮದ್ದಳೆ ಸಪ್ತಾಹ ಕನ್ನಡದ ನುಡಿ ಹಬ್ಬವಾಗಿ ಮುಂದುವರೆದಿದೆ. ಬೇರೆಲ್ಲ ರಂಗಪ್ರಕಾರಗಳಲ್ಲಿ ಅನ್ಯ ಭಾಷೆಗಳ ಆನುಷಂಗಿಕ ಪ್ರಯೋಗ ಆಗುತ್ತಿರುವಾಗ ಶುದ್ಧ ಕನ್ನಡ ಕೇಳಿಸುವುದು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ. ಅದಕ್ಕಾಗಿಯೇ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ನುಡಿದರು.
ಡಾ.ಜೋಶಿಗೆ ಅಭಿನಂದನೆ: ಈಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಅರ್ಥಧಾರಿ, ವಿದ್ವಾಂಸ ಡಾl ಎಂ.ಪ್ರಭಾಕರ ಜೋಶಿ ಅವರನ್ನು ಯಕ್ಷಾಂಗಣ ವತಿಯಿಂದ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ವಿಶ್ರಾಂತ ಕುಲಪತಿ ಡಾl ಕೆ. ಚಿನ್ನಪ್ಪ ಗೌಡ, ಉದ್ಯಮಿಗಳಾದ ವಿ. ಕರುಣಾಕರ, ಸಿ.ಎಸ್. ಭಂಡಾರಿ, ವಿ.ವಿ. ಕಾಲೇಜಿನ ಪ್ರಾಂಶುಪಾಲೆ ಡಾl ಅನುಸೂಯ ರೈ, ಡಾl ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾl ಶ್ರೀಪತಿ ಕಲ್ಲೂರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಅತಿಥಿಗಳಾಗಿದ್ದರು.
ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸಂಚಾಲಕ ಕೆ.ರವೀಂದ್ರ ರೈ ಕಲ್ಲಿಮಾರು ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ, ಪ್ರಧಾನ ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜತೆ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ; ಸಮಿತಿ ಸದಸ್ಯರಾದ ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ, ಸುಮಾ ಪ್ರಸಾದ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು.
ಷಡಾನನ ವಿಜಯ: ಸಮಾರಂಭದ ಬಳಿಕ ‘ಸಪ್ತ ವಿಜಯ’ ಸರಣಿಯಲ್ಲಿ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ ‘ಷಡಾನನ ವಿಜಯ’ ಮೊದಲ ತಾಳಮದ್ದಳೆ ಜರಗಿತು.
ಸುಳ್ಯ ನಗರದ ಬೀರಮಂಗಲ ಬಾಡಿಗೆ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತದೇಹ ಇಮ್ರಾನ್ ಎಂಬವನ ಪತ್ನಿಯದ್ದು ಎಂದು ಗೊತ್ತಾಗಿದೆ.
ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬವನು ಸುಳ್ಯ ನಗರದ ಬೀರಮಂಗಲ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ. ಇವನು ಕಳೆದ ಆರು ತಿಂಗಳಿನಿಂದ ಇಲ್ಲಿ ವಾಸ ಮಾಡುತ್ತಿದ್ದ ಎನ್ನಲಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಮನೆಗೆ ಬೀಗ ಹಾಕಿ ಹೊರಟಿದ್ದ. ಈ ಬಗ್ಗೆ ಹೋಟೆಲ್ ನವರಲ್ಲಿ ತಿಳಿಸಿ ಹೋಗಿದ್ದ.
ಆದರೆ ಇವನೊಬ್ಬನೇ ಬೀಗ ಹಾಕಿ ಹೋದುದನ್ನು ಗಮನಿಸಿದ ಪಕ್ಕದ ಮನೆಯವರಿಗೆ ಅನುಮಾನ ಕಾಡಿತು. ಇವನ ಪತ್ನಿ ಎಲ್ಲಿ ಎಂದು ಆಲೋಚಿಸಿದರು. ಅದೂ ಅಲ್ಲದೆ ನಿನ್ನೆ ರಾತ್ರಿ ಮನೆಯೊಳಗೆ ಕಿರಿಚಾಡುವ ಶಬ್ದ ಕೇಳಿದುದರಿಂದ ಅವರು ಭಯಭೀತರಾಗಿ ಇಮ್ರಾನ್ ಕೆಲಸ ಮಾಡುತ್ತಿದ್ದ ಹೋಟೆಲ್ ನವರಿಗೆ ವಿಷಯ ತಿಳಿಯುವಂತೆ ಮಾಡಿದ್ದಾರೆ.
ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಮನೆಯ ಬೀಗ ಒಡೆದು ಮನೆಯೊಳಗೆ ಆಮೂಲಾಗ್ರ ಪರಿಶೀಲನೆ ನಡೆಸಿದಾಗ ಮನೆಯ ಮೂಲೆಯೊಂದರಲ್ಲಿ ಗೋಣಿಚೀಲದಲ್ಲಿ ಏನೋ ತುಂಬಿಸಿಟ್ಟ ಹಾಗೆ ಕಾಣಿಸಿತು.
ಅದರೊಳಗೆ ಇಮ್ರಾನ್ ಪತ್ನಿಯ ಮೃತದೇಹವನ್ನು ಕಂಡು ಪೊಲೀಸರು ಅವಾಕ್ಕಾಗಿದ್ದರು. ಆದರೆ ಅಷ್ಟರಲ್ಲಿ ಇಮ್ರಾನ್ ಪರಾರಿಯಾಗಿದ್ದ. ಸ್ಥಳಕ್ಕೆ ಶ್ವಾನದಳ, ಫಿಂಗರ್ ಫಿಂಗರ್ ಪ್ರಿಂಟ್ ತಜ್ಞರು ಆಗಮಿಸಿದ್ದಾರೆ. ಪೊಲೀಸರು ಇಮ್ರಾನ್ ಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ದೆಹಲಿಯಲ್ಲಿ ತನ್ನ ಪಾಲುದಾರ ಅಫ್ತಾಬ್‌ನಿಂದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯನ್ನು ಉಲ್ಲೇಖಿಸುವಾಗ ‘ಲವ್ ಜಿಹಾದ್’ ಅಥವಾ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಭಾರತಕ್ಕೆ ಕಠಿಣ ಕಾನೂನು ಅಗತ್ಯವಿದೆ ಎಂದು ಹೇಳಿದ್ದಾರೆ.
‘ಹಿಂದೂ ಹುಡುಗಿಯರನ್ನು ಮಾತ್ರ ಏಕೆ ಕರೆತಂದಿರುವೆ’ಎಂದು ಪೊಲೀಸರು ಅಫ್ತಾಬ್ ನಲ್ಲಿ ಕೇಳಿದಾಗ, “ಹಿಂದೂ ಹುಡುಗಿಯರು ಭಾವನಾತ್ಮಕವಾಗಿ ಇರುತ್ತಾರೆ, ಅದಕ್ಕಾಗಿ ಹೀಗೆ ಮಾಡಿದೆ” ಎಂದು ಅವನು ಹೇಳಿದ್ದಾನೆ.
ಇಲ್ಲಿ ಇನ್ನೂ ಹಲವಾರು ಇತರ ಅಫ್ತಾಬ್-ಶ್ರದ್ಧಾ ಕೂಡ ಇದ್ದಾರೆ. ದೇಶಕ್ಕೆ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಅಗತ್ಯವಿದೆ.” ಎಂದು ಅಸ್ಸಾಮ್ ಮುಖ್ಯಮಂತ್ರಿಗಳು ಹೇಳಿದ್ದಾರೆ.
#WATCH | Gujarat: Aftaab killed Shardha & chopped her body into 35 pieces. When police asked why he brought only Hindu girls he said he did it because they're emotional.There're other Aftaab-Shradha too,country needs strict law against 'Love Jihaad': Assam CM HB Sarma in Dhansura pic.twitter.com/5PEc7HsvVh
ಪುತ್ತೂರು,ನ22: ಹರಿಯಾಣದ ಕುರುಕ್ಷೇತ್ರದಲ್ಲಿ ನವೆಂಬರ್ 19 ರಿಂದ 23ರ ವರೆಗೆ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
100ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್ ಕಂಚಿನ ಪದಕವನ್ನು ಪಡೆದುಕೊ೦ಡಿದ್ದಾರೆ. ಈತನು ವಿಟ್ಲದ ರಾಜೇಶ್ ಭಟ್ ಮತ್ತು ರಾಧಿಕಾ ಭಟ್ ದಂಪತಿ ಪುತ್ರ.
ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್‌ರಾಜ್ ಕಂಚಿನ ಪದಕದೊ೦ದಿಗೆ ತೃತೀಯ ಸ್ಥಾನವನ್ನುಪಡೆದುಕೊಂಡಿದ್ದಾರೆ. ಈತನು ಕಬಕದ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಪುತ್ರ.
4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಜತ್ ಆರ್ ಭಟ್, ಪವನ್ ಕುಮಾರ್, ಪ್ರಮಥ್ ರೈ ಮತ್ತು ಧನುಷ್ ರವರನ್ನು ಒಳಗೊಂಡ ತಂಡವು ಕ೦ಚಿನ ಪದಕವನ್ನು ಪಡೆದುಕೊ೦ಡಿದೆ.
ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ವಿವೇಕಾನ೦ದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ ರಾಜ್ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈತನು ಕಬಕದ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಪುತ್ರ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಶ್ರೀವರ್ಣಾ. ಪಿ.ಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ.
ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ, ತೆಲಂಗಣ ರಾಜ್ಯವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಶ್ರೀವರ್ಣಾ.ಪಿ.ಡಿ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ)
ಎತ್ತರ ಜಿಗಿತ, 80 ಮೀಟರ್ ಹರ್ಡಲ್ಸ್, ಉದ್ದ ಜಿಗಿತ , 4*100 ಮೀಟರ್ ರಿಲೇ -ಪ್ರಥಮ ಸ್ಥಾನ ಪಡೆದುಕೊಂಡಿದ್ದು, ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ 15 ಮತ್ತು 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ,
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ ಪ್ರಥಮ, 600ಮೀ ಪ್ರಥಮ, 200ಮೀ ತೃತೀಯ ಹೀಗೆ 3 ಚಿನ್ನ ಹಾಗೂ 1 ಕಂಚಿನ ಪದಕಗಳೊಂದಿಗೆ ಪುತ್ತೂರು ತಾಲೂಕಿನಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು,
ಪುತ್ತೂರು ತಾಲೂಕಿನಿಂದ ಭಾಗವಹಿಸಿರುವ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಚಾಂಪಿಯಾನ್‍ಶಿಪ್‍ಗೆ ಭಾಜನರಾಗಿರುವ ಏಕೈಕ ವಿದ್ಯಾರ್ಥಿನಿ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪುತ್ತೂರು: ಶಿಕ್ಷಣವೆನ್ನುವುದು ಕೇವಲ ಪಠ್ಯಪುಸ್ತಕ ಹಾಗೂ ಅಂಕಪಟ್ಟಿಗೆ ಸೀಮಿತವಾಗಿರದೆ ರಾಷ್ಟ್ರಭಕ್ತಿಯ ಕಿಚ್ಚನ್ನು ವಿದ್ಯಾರ್ಥಿಗಳ ಧಮನಿ ಧಮನಿಗಳಲ್ಲಿ ಹರಿಸುವ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳು ದೇಶಕ್ಕಾಗಿ ತುಡಿಯುವಂತಗಾಬೇಕು. ಸ್ವಾರ್ಥವನ್ನು ತ್ಯಜಿಸಿ, ದೇಶಕ್ಕೋಸ್ಕರ ಪ್ರಾಣವನ್ನೂ ತ್ಯಾಗ ಮಾಡುವ ಸಮರ್ಪಣಾ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಬೆಳೆಯಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರದಂದು ರಾಷ್ಟ್ರಜಾಗೃತಿ ಬಗೆಗೆ ವಿಶೇಷ ಉಪನ್ಯಾಸ ನೀಡಿದರು.
ಭಾರತ ಹಾಗೂ ಇಸ್ರೇಲ್ ಅವಿನಾಭಾವ ಸಂಬಂಧವನ್ನು ಹೊಂದಿದೆ. ನಂಬಿಕೆ, ಬಹುದೇವತಾರಾಧನೆ, ಸಂಸ್ಕೃತಿ ಮುಂತಾದ ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದೆ. ಇಸ್ರೇಲ್ ರಾಷ್ಟ್ರದ ಪ್ರಜೆಗಳು ತಮ್ಮ ಜನಾಂಗದ ಮೇಲೆ ಸಾವಿರ ನರಮೇಧಗಳು ನಡೆದರೂ, ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಯಿಂದಾಗಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡರು. ಕೃಷಿ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ, ಹಣಕಾಸು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದು ಜಗತ್ತಿಗೆ ಕೊಡುಗೆಯನ್ನು ನೀಡಿದರು. ಪುಟ್ಟ ರಾಷ್ಟ್ರ ಇಸ್ರೇಲ್‌ನ ಪ್ರಜೆಗಳ ಒಗ್ಗಟ್ಟು ಭಾರತೀಯರಿಗೆ ಪ್ರೇರಣೆಯಾಗಬೇಕು ಎಂದರು.
ಉತ್ತಮ ನಾಯಕ ಮಾತ್ರ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯ. ಚುನಾವಣೆಯಲ್ಲಿ ಪ್ರಜೆಗಳು ಎಚ್ಚರವಹಿಸಿ ನಾಯಕನನ್ನು ಆಯ್ಕೆಮಾಡಬೇಕು. ಹಾಗೆಯೇ, ದೇಶದ ನಾಗರಿಕರು ರಾಷ್ಟ್ರಕ್ಕೆ ಬದ್ಧರಾಗಿರಬೇಕು. ನಾನಿರುವಂತದ್ದೇ ದೇಶಕ್ಕಾಗಿ ಎಂಬ ಪರಿಕಲ್ಪನೆಯು ಜಾಗೃತಗೊಳ್ಳಬೇಕು. ಏಕತೆಯಿಂದ ಮಾತ್ರ ರಾಷ್ಟ್ರ ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದರು. ಇವರು ಯಕ್ಷಗಾನದ ಎಲ್ಲಾ ಅಂಗಗಳನ್ನೂ ಬಲ್ಲವರು. ಭಾಗವತರಾಗಿ, ವೇಷಧಾರಿಯಾಗಿ ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು. ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ತೊಡಗಿಸಿಕೊಂಡ ಅನುಭವಿ ಇವರು. ಯಕ್ಷಗಾನ ಗುರುವಾಗಿ ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟಿದ್ದಾರೆ. ಇವರಿಂದ ಕಲಿತ ಅನೇಕರು ಇಂದು ಮೇಳಗಳಲ್ಲಿ ವ್ಯವಸಾಯ ಮಾಡುತ್ತಿರುವುದನ್ನು ನಾವು ಕಾಣಬಹುದು.
ಕರ್ನಾಟಕ ಸಂಗೀತದ ಜ್ಞಾನವನ್ನು ಹೊಂದಿದ ಇವರು ಭಾಗವತರಾಗಿಯೂ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸ್ವರಭಾರವನ್ನು ಹೊಂದಿದ ಇವರು ಇಳಿ ಶೃತಿಯಲ್ಲೂ, ಏರು ಶೃತಿಯಲ್ಲೂ ಸಮಾನವಾಗಿ ಹಾಡಬಲ್ಲರು. ಮೀನಾಕ್ಷಿ ಕಲ್ಯಾಣ ಎಂಬ ಪ್ರಸಂಗದಲ್ಲಿ ಇವರು ಹಾಡಿದ “ಗೆಲುವನೆಂಬುತ್ಸಾಹದಿ ಬರಲು ದೂರದಿ …” ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರಚಾರವನ್ನು ಪಡೆದಿತ್ತು. ಅವರು ಹಾಡಿದ ಈ ಹಾಡನ್ನು ಕೆಲವರು ತಮ್ಮ ಮೊಬೈಲ್ ನ ರಿಂಗ್ ಟೋನ್ ಆಗಿಯೂ ಬಳಸಿಕೊಂಡಿದ್ದರು. ದಂಡಯಾತ್ರೆಯನ್ನು ಕೈಗೊಂಡ ಮೀನಾಕ್ಷಿಯು ಕೈಲಾಸಪರ್ವತವನ್ನು ಕಂಡು ಹೊಗಳುತ್ತಿರುವ ಹಾಡು ಇದು. ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ನಲುವತ್ತು ವರ್ಷಗಳ ಅನುಭವಿ.
ಉಂಡೆಮನೆ ಎಂಬುದು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಒಂದು ಹಳ್ಳಿ. ಕುಂಬಳೆ ಸೀಮೆಯೊಳಗಣ ಒಂದು ಊರಿದು. ಉಂಡೆಮನೆ ಶ್ರೀ ಶಂಕರ ಭಟ್ಟ ಮತ್ತು ಶ್ರೀಮತಿ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ಶ್ರೀಕೃಷ್ಣ ಭಟ್ಟರ ಜನನ. ಉಂಡೆಮನೆ ಶಂಕರ ಭಟ್ಟರ ಐದು ಮಂದಿ ಮಕ್ಕಳಲ್ಲಿ ಇವರು ಕಿರಿಯವರು. (ಮೂರು ಗಂಡು ಮತ್ತು ಇಬ್ಬರು ಹೆಣ್ಣು) ಉಂಡೆಮನೆ ಶಂಕರ ಭಟ್ಟರು ಶಾಲಾ ಅಧ್ಯಾಪಕರು. ನಾಟಕದಲ್ಲಿ ವೇಷಗಳನ್ನೂ ಮಾಡುತ್ತಿದ್ದರು. ಇವರು ಪುರಾಣ ವಿಚಾರಗಳ ಜ್ಞಾನವನ್ನೂ ಹೊಂದಿದ್ದರು.
ಉಂಡೆಮನೆ ಶ್ರೀಕೃಷ್ಣ ಭಟ್ಟರ ಅಜ್ಜನ ಮನೆ ಕುಂಟಿಕಾನ ಮಠ. ಈ ಮನೆಯವರೆಲ್ಲಾ ಯಕ್ಷಗಾನಾಸಕ್ತರು. ಶ್ರೀಕೃಷ್ಣ ಭಟ್ ಅವರು ಓದಿದ್ದು ಹತ್ತನೆಯ ತರಗತಿಯ ವರೆಗೆ. ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್ ಪೆರಡಾಲ, ನೀರ್ಚಾಲು ಎಂಬ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾಸಕ್ತಿ ಇತ್ತು. ಆಟ ಮತ್ತು ತಾಳಮದ್ದಳೆ ಎಂಬ ಎರಡು ವಿಭಾಗಗಳಲ್ಲೂ ಆಸಕ್ತಿಯನ್ನು ಹೊಂದಿದ್ದರು. ಊರ ಪರವೂರ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆಯಾಗಿತ್ತು. ಮನೆಯವರ ಮತ್ತು ಅಜ್ಜನ ಮನೆಯವರ ಪ್ರೋತ್ಸಾಹವೂ ಇತ್ತು. ವಿಶೇಷವಾಗಿ ಸೋದರ ಮಾವಂದಿರ ಪ್ರೋತ್ಸಾಹವೂ ಸಿಕ್ಕಿತ್ತು.
ಐದನೇ ಕ್ಲಾಸಿನಲ್ಲಿ ಓದುತ್ತಿರುವಾಗ ಕುಂಟಿಕಾನ ಮಠದಲ್ಲಿ ನಡೆದ ತಾಳಮದ್ದಳೆಯಲ್ಲಿ ಅರ್ಥ ಹೇಳಲು ಅವಕಾಶವಾಗಿತ್ತು. ಆರನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಪ್ರದರ್ಶನದಲ್ಲಿ ದೇವೇಂದ್ರನ ಬಲ ವೇಷ ಧರಿಸಿ ರಂಗವೇರಲು ಅವಕಾಶವಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಕುಂಬಳೆ ಸೇಸಪ್ಪ ಅವರ ಉಪ್ಪಳ ಮೇಳದಲ್ಲಿ ವೇಷ ಮಾಡುತ್ತಿದ್ದರು. ಊರಲ್ಲಿ ನಡೆಯುತ್ತಿದ್ದ ತಾಳಮದ್ದಳೆ ಕೂಟಗಳಲ್ಲೂ ಅರ್ಥ ಹೇಳುವ ಅವಕಾಶಗಳು ಸಿಕ್ಕಿತ್ತು.
ಉಂಡೆಮನೆ ಶ್ರೀಕೃಷ್ಣ ಭಟ್ಟರು ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಯಕ್ಷಗಾನ ಹಿಮ್ಮೇಳ ವಿದ್ಯೆಯನ್ನು ಕಲಿತಿದ್ದರು. ನೆಲ್ಲಿಕುಂಜೆ ನಡುಮನೆ ಶ್ರೀ ಜತ್ತಪ್ಪ ರೈಗಳಿಂದ ಭಾಗವತಿಕೆಯನ್ನೂ, ಏರಿಕ್ಕಳ ಶ್ರೀನಿವಾಸ ರಾಯರಿಂದ ಚೆಂಡೆ ಮದ್ದಳೆ ಬಾರಿಸುವ ಕ್ರಮವನ್ನೂ ಅಭ್ಯಸಿಸಿದ್ದರು. ಕುಬಣೂರು ಶ್ರೀಧರ ರಾಯರ ಹಾಡುಗಾರಿಕೆಗೆ ಮೊತ್ತಮೊದಲು ಚೆಂಡೆ ಬಾರಿಸುವ ಭಾಗ್ಯವು ಇವರದಾಗಿತ್ತು. ಈ ಸಮಯದಲ್ಲಿ ಹಿಮ್ಮೇಳಕ್ಕಿಂತಲೂ ಮುಮ್ಮೇಳದಲ್ಲಿ ಆಸಕ್ತಿಯು ಹೆಚ್ಚಿತ್ತು. ವೇಷ ಮಾಡಲು, ತಾಳಮದ್ದಳೆಯಲ್ಲಿ ಅರ್ಥ ಹೇಳಲು ಬಯಸುತ್ತಿದ್ದರು. ಆದುದರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧರಿಸಿದ್ದರು.
ಉಂಡೆಮನೆ ಶ್ರೀಕೃಷ್ಣ ಭಟ್ಟರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ. ಶ್ರೀ ಕೆ.ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ತರಬೇತಿ ಕೇಂದ್ರದ ಹಿಮ್ಮೇಳ ಗುರುವಾಗಿದ್ದರು. ತರಬೇತಿ ಕೇಂದ್ರದಲ್ಲಿ ಬಾಯಾರು ರಮೇಶ ಭಟ್, ಉಮಾಮಹೇಶ್ವರ ಶರ್ಮ, ಚಾರ್ಮಾಡಿ ಬಾಬು ಗೌಡ, ನಾರಾಯಣ ಸುವರ್ಣ, ದಾಮೋದರ ಪಾಟಾಳಿ, ಲಕ್ಷ್ಮಣ ಕಲ್ಲಗುಡ್ಡೆ ಅವರು ಉಂಡೆಮನೆ ಶ್ರೀಕೃಷ್ಣ ಭಟ್ಟರ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ನಡೆದ ಮೂರು ಪ್ರದರ್ಶನಗಳಲ್ಲಿ ಅರ್ಜುನ, ಇಂದ್ರಜಿತು, ಕಾರ್ತವೀರ್ಯ ಪಾತ್ರಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು.
ವ್ಯವಸಾಯ ಆರಂಭಿಸಿದ್ದು ಕಟೀಲು ಮೇಳದಲ್ಲಿ. ಸದ್ರಿ ಮೇಳದಲ್ಲಿ ಆರು ವರ್ಷ ತಿರುಗಾಟ. ಮೊದಲ ಮೂರು ವರ್ಷ ವೇಷಧಾರಿಯಾಗಿ ತಿರುಗಾಟ. ಮುಂದಿನ ಮೂರು ವರ್ಷಗಳ ಕಾಲ ಸಂಗೀತಗಾರನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರು ಪಸಂಗದಲ್ಲಿ ಹಾಡಲೂ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಕಟೀಲು ಎರಡನೇ ಮೇಳದಲ್ಲಿ ಆರು ವರ್ಷಗಳ ವ್ಯವಸಾಯದ ಬಳಿಕ ಮೇಳದ ತಿರುಗಾಟಕ್ಕೆ ವಿದಾಯ.
ಬಳಿಕ ಹವ್ಯಾಸಿ ಕಲಾವಿದನಾಗಿ ಆಟ ಕೂಟಗಳಲ್ಲಿ ಭಾಗವತನಾಗಿ, ವೇಷಧಾರಿಯಾಗಿ ಭಾಗವಹಿಸುತ್ತಾ ಬಂದಿರುತ್ತಾರೆ. ಉಪ್ಪಳ, ಬಪ್ಪನಾಡು, ಮಲ್ಲ, ಕೊಲ್ಲಂಗಾನ, ಕೂಡ್ಲು, ಸಸಿಹಿತ್ಲು ಮೊದಲಾದ ಮೇಳಗಳ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಉಂಡೆಮನೆ ಶ್ರೀಕೃಷ್ಣ ಭಟ್ಟರು ದೇಂತಡ್ಕ ಮೇಳದ ಕಲಾವಿದನಾಗಿ ವ್ಯವಸಾಯ ಮಾಡುತ್ತಿದ್ದಾರೆ.
ಯಕ್ಷಗಾನ ಗುರುವಾಗಿ ಇವರು ನೀರ್ಚಾಲು, ಬೇಳ, ಕುಂಟಿಕಾನ ಶಾಲೆ, ಬದಿಯಡ್ಕ, ಕಲ್ಲಕಟ್ಟ, ಕಿದೂರು, ಮುಂಡ್ಯತ್ತಡ್ಕ, ಎಡನೀರಿನ ಸಮೀಪದ ಪಾಂಡಿ, ಕೀರಿಕ್ಕಾಡು, ಆರ್ಯಾಪು ಖಂಡಿಗೆ, ಕಬಕ, ಕೇಪು, ಅಡ್ಯನಡ್ಕ ಮೊದಲಾದ ಕಡೆಗಳಲ್ಲಿ ತರಬೇತಿಯನ್ನೂ ನೀಡಿರುತ್ತಾರೆ. ವೇದ ಮಂತ್ರಗಳನ್ನು ಕಲಿತು ಕಳೆದ ಇಪ್ಪತ್ತೈದು ವರ್ಷಗಳಿಂದ ಪೌರೋಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಇವರು ಪತ್ನಿ ಮತ್ತು ಪುತ್ರಿಯ ಜತೆ ನೇರಳಕಟ್ಟೆ ಎಂಬಲ್ಲಿ ವಾಸವಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಸುಮಾ. ಇವರು ಗೃಹಣಿ. ಪುತ್ರಿ ಕುಮಾರಿ ಸ್ವರ್ಣಲಕ್ಷ್ಮಿ. ಇವರಿ ಸ್ನಾತಕೋತ್ತರ ಪದವೀಧರೆ. ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಇದರ ವಿಶೇಷತೆಯೇನೆಂದರೆ ಈ ತಾಳಮದ್ದಳೆಯಲ್ಲಿ ಮೈಕ್ (ಧ್ವನಿವರ್ಧಕ) ಇರುವುದಿಲ್ಲ. ಈಗಿನ ದಿನಗಳಲ್ಲಿ ಮೈಕ್ ಇಲ್ಲದ ತಾಳಮದ್ದಲೆಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅದನ್ನು ಸಾಧ್ಯವಾಗಿಸುವ ಪ್ರಯತ್ನವೇ ಈ ತಾಳಮದ್ದಳೆಯ ಆಯೋಜನೆ.
ಮೈಕ್ ಇಲ್ಲದ ತಾಳಮದ್ದಳೆಗಳು ನಡೆಯುತ್ತಿದ್ದುದು ಕಳೆದ ಶತಮಾನದಲ್ಲಿ. ಆದರೆ ಈ ಶತಮಾನದಲ್ಲಿಯೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ಇಲ್ಲಿದೆ.
‘ವರ್ಣಕಲಾವಿದ ಪಣಂಬೂರು ಶ್ರೀ ರಾಘವರಾಯರ ಜನ್ಮ ಶತಮಾನೋತ್ಸವ 2022-23 ಕಾರ್ಯಕ್ರಮದ ಅಂಗವಾಗಿ ಇಂದು, 22.11.2022ನೇ ಮಂಗಳವಾರ ರಾತ್ರಿ ಘಂಟೆ 8.38ಕ್ಕೆ ಸರಿಯಾಗಿ ರಾಮಾಯಣದ ಆಯ್ದ ಭಾಗಗಳ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ.
ಶ್ರೀ ಮಧುಕರ ಭಗವತ್, ಶ್ರೀಮತಿ ಸುಧಾ ಮಧುಕರ, ಶ್ರೀಮತಿ ಶಾಂಭವಿ ರಾಘವ ರಾವ್ ಅವರು ಕಾರ್ಯಕ್ರಮಕ್ಕೆ ಕಲಾಭಿಮಾನಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ. ಪ್ರಸಂಗ, ಕಲಾವಿದರ ವಿವರಗಳಿಗೆ ಚಿತ್ರ ನೋಡಿ.