Saturday, August 1, 2026
Home Blog Page 111

ಯೋಗಾಸನ ಸ್ಪರ್ಧೆಯಲ್ಲಿ ಸಾಗರಿ ಎನ್ ರೈಗೆ ಚಿನ್ನದ ಪದಕ

0

ಪುತ್ತೂರು, ಡಿ 19 : ರಾಜಸ್ತಾನದ ಉದಯಪುರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಾಗರಿ ಎನ್ ರೈ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ಯೋಗ ಸ್ಫರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಈಕೆ ಮೈಸೂರಿನ ನೂತನ್ ಕುಮಾರ್ ಮತ್ತು ಸುಚಿತ್ರಾ ರೈ ದಂಪತಿ ಪುತ್ರಿ.

ಬಾಲಕರ ವಿಭಾಗದ ಆರ್ಟಿಸ್ಟಿಕ್ ವಿಭಾಗದ ಯೋಗ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ ಜೆ (ಪುತ್ತೂರಿನ ನೆಹರೂನಗರದ ಪಿಎಮ್‌ಜಿಎಸ್‌ವೈ ಇಂಜಿನಿಯರ್ ಜನಾರ್ದನ ಕೆ.ಬಿ ಮತ್ತು ಜ್ಯೋತಿ ದಂಪತಿ ಪುತ್ರ) ದ್ವಿತೀಯ ಸ್ಥಾನ ಗಳಿಸಿದ್ದಾರೆ.

ರಿಧಮಿಕ್ ವಿಭಾಗದ ಯೋಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮನ್ನಿತ್ ಎನ್ ಗೌಡ (ಬನ್ನೂರಿನ ರಮೇಶ ಗೌಡ ಎನ್ ಮತ್ತು ನಳಿನಿ ದಂಪತಿ ಪುತ್ರ) ತೃತೀಯ ಸ್ಥಾನ ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಯಕ್ಷಗಾನ ಕಲಾವಿದರಿಗೆ ಬಸ್‍ಪಾಸ್ ವಿತರಣೆ

0

ಕೆನರಾ ಬಸ್ ಮಾಲಕರ ಸಹಕಾರದಿಂದ ಯಕ್ಷಗಾನ ಕಲಾರಂಗ ಕಳೆದ ಹಲವು ವರ್ಷಗಳಿಂದ ವೃತ್ತಿ ಮೇಳದ ಕಲಾವಿದರಿಗೆ ಪ್ರತಿಶತ 50 ರಿಯಾಯಿತಿ ದರದಲ್ಲಿ ಪಾಸ್ ನೀಡುತ್ತಾ ಬಂದಿದ್ದು, ಈ ವರ್ಷದ ಆಗಸ್ಟ್ 31, 2023ರ ವರೆಗೆ ಅನ್ವಯವಾಗುವಂತೆ ಕೊಡಮಾಡಿದ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಇಂದು (18-12-2021) ಸಂಸ್ಥೆಯ ಕಚೇರಿಯಲ್ಲಿ ಜರಗಿತು.

ಕೆನರಾ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೇಳದ ಪ್ರತಿನಿಧಿಗಳಿಗೆ ವಿತರಿಸಿ ಮಾತನಾಡಿ, ಕಲಾವಿದರಿಗೆ ಅನುಕೂಲವಾಗುವಂತೆ ಮುಂದೆ ಅಕ್ಟೋಬರ್ 31ರವರೆಗೆ ವಿಸ್ತರಿಸುವುದಾಗಿ ಭರವಸೆ ನೀಡಿದರು.

ಸೌಕೂರು ಮೇಳದ ಆನಂದ ರಾವ್, ಗೋಳಿಗರಡಿ ಮೇಳದ ಕೃಷ್ಣ ಸಂತೆಕಟ್ಟೆ ಮತ್ತು ಶನೀಶ್ವರ ಮೇಳದ ಪ್ರವೀಣ ಬಲ್ಯಾಯ ಸ್ವೀಕರಿಸಿದರು. 25 ವಿವಿಧ ಮೇಳಗಳ 400ಕ್ಕೂ ಮಿಕ್ಕಿದ ಕಲಾವಿದರು ಪಾಸ್ ಸೌಲಭ್ಯ ಪಡೆಯಲಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಪಿ. ಕಿಶನ್ ಹೆಗ್ಡೆ, ಪ್ರೊ. ನಾರಾಯಣ ಎಮ್. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಕಿಶೋರ್ ಸಿ. ಉದ್ಯಾವರ, ವಿಶ್ವನಾಥ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ವೃತ್ತಿ ಕಲಾವಿದರಿಗೆ ಈ ಸೌಲಭ್ಯ ಕಲ್ಪಿಸಿದ ಕೆನರಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.

ರೆಹಾನಾ ಫಾತಿಮಾಗೆ ಶಬರಿಮಲೆ ಪ್ರಕರಣದಲ್ಲಿ ಜಾಮೀನು ಷರತ್ತುಗಳ ಮೇಲೆ ಯಾವುದೇ ಸಡಿಲಿಕೆಗೆ ಕೋರಿಕೆ ಇಲ್ಲ – ಸುಪ್ರೀಂ ಕೋರ್ಟಿಗೆ ಕೇರಳ ಸರಕಾರ ಅಫಿದಾವಿತ್

0

ಹೊಸದಿಲ್ಲಿ: ಶಬರಿಮಲೆಗೆ ಮಹಿಳೆಯರ ಪ್ರವೇಶದ ತೀರ್ಪಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣದಲ್ಲಿ ರೆಹಾನಾ ಫಾತಿಮಾಗೆ ಜಾಮೀನು ಷರತ್ತುಗಳನ್ನು ಸಡಿಲಿಸದಂತೆ ರಾಜ್ಯವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ರಾಜ್ಯದ ಪರ ವಕೀಲ ಹರ್ಷದ್ ವಿ ಹಮೀದ್ ಅಫಿಡವಿಟ್ ಸಲ್ಲಿಸಿದರು.

ನ್ಯಾಯಾಲಯದ ಷರತ್ತುಗಳನ್ನು ಹಲವು ಬಾರಿ ಉಲ್ಲಂಘಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಆಕೆಯ ಮನವಿಯನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ.

ಮಹಿಳೆಯರ ಪ್ರವೇಶದ ತೀರ್ಪಿನ ನಂತರ ಶಬರಿಮಲೆಗೆ ಭೇಟಿ ನೀಡಲು ಪತ್ತನಂತಿಟ್ಟ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಜಾಮೀನಿನ ಷರತ್ತುಗಳನ್ನು ಸಡಿಲಿಸಬೇಕು ಎಂದು ಕೋರಿ ರೆಹಾನಾ ಫಾತಿಮಾ ಅರ್ಜಿ ಸಲ್ಲಿಸಿದ್ದಾರೆ. ಅಫಿಡವಿಟ್ ಇದಕ್ಕೆ ವಿರುದ್ಧವಾಗಿದೆ. ರೆಹಾನಾ ಈ ಹಿಂದೆ ಹಲವು ವಿವಾದಗಳ ಮೂಲಕ ಕುಖ್ಯಾತಿ ಪಡೆದಿದ್ದರು.

ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆಗೆ ಭೇಟಿ ನೀಡಿದ ರೆಹಾನಾ ತನ್ನ ಅಪ್ರಾಪ್ತ ಮಕ್ಕಳನ್ನು ಬೆತ್ತಲೆ ದೇಹದ ಮೇಲೆ ಬಣ್ಣ ಹಚ್ಚಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ವಿವಾದಾತ್ಮಕ ನಾಯಕಿಯಾಗಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾದ ಪಾಕಶಾಲೆಯ ವೀಡಿಯೊದಲ್ಲಿ, ಫಾತಿಮಾ ಅಡುಗೆ ಮಾಡುವ ಖಾದ್ಯವನ್ನು ‘ಗೋಮಾತಾ ಉಲರ್ತ್’ ಎಂದು ಉಲ್ಲೇಖಿಸಿದ್ದರು. ಎರ್ನಾಕುಲಂನ ವಕೀಲ ರಾಜೀಶ್ ರಾಮಚಂದ್ರನ್ ಅವರು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಅಡುಗೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ ಎಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಶಬರಿಮಲೆ ವಿವಾದವು ಕಂಪನಿಯ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿ ಬಿಎಸ್‌ಎನ್‌ಎಲ್ ರೆಹಾನಾ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ಆನ್‌ಲೈನ್ ಲಾಟರಿ ಟಿಕೆಟ್ ವಂಚನೆಯ ಜಾಲ ಬಯಲು – ಲಾಟರಿಯ ಆನ್ ಲೈನ್ ಖರೀದಿದಾರರಿಗೆ ಎಚ್ಚರಿಕೆ

0

ಕೇರಳ ರಾಜ್ಯ ಲಾಟರಿಯ ಕ್ರಿಸ್‌ಮಸ್‌ ಬಂಪರ್ ಸೇರಿದಂತೆ 16 ಕೋಟಿ ರೂಪಾಯಿಯ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಜನರನ್ನು ವಂಚಿಸಲಾಗುತ್ತಿದೆ.

ವ್ಯಾಪಾರವು ವೆಬ್‌ಸೈಟ್, WhatsApp, Facebook ಮತ್ತು Twitter ಮೂಲಕ ನಡೆಸಲ್ಪಡುತ್ತದೆ. ಬೇರೆ ರಾಜ್ಯಗಳ ಜನರು ಹೆಚ್ಚಾಗಿ ಈ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಹಣವನ್ನು Google Pay ಮೂಲಕ ಪಾವತಿಸಬೇಕಾಗಿದೆ.

ವಾಸ್ತವವಾಗಿ ಒಂದಕ್ಕಿಂತ ಹೆಚ್ಚು ಮಂದಿಗೆ ಒಂದೇ ಟಿಕೆಟ್ ನ್ನು ಮಾರಾಟ ಮಾಡಿ ವಂಚಿಸಲಾಗುತ್ತಿದೆ. ಇಲಾಖೆಯು ಏಜೆನ್ಸಿ ಮುದ್ರೆಯೊಂದಿಗೆ ಇರುವ ಕಾಗದದ ಲಾಟರಿಯನ್ನು ಮಾತ್ರ ಖರೀದಿಗೆ ಅನುಮೋದಿಸಲಾಗಿದೆ. ಇದರ ಅರಿವಿಲ್ಲದವರು ಈ ಮೋಸಕ್ಕೆ ಬಲಿಯಾಗುತ್ತಾರೆ.

ವಂಚಕರು ಆನ್‌ಲೈನ್ ಲಾಟರಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. 40 ರೂಪಾಯಿ ಟಿಕೆಟ್ 35 ರೂಪಾಯಿಗೆ ಆನ್ಲೈನ್ ನಲ್ಲಿ ಮಾರಾಟವಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಪ್ರಚಾರಕ್ಕಾಗಿ ಲಾಟರಿ ಟಿಕೆಟ್‌ಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇಲಾಖೆಯ ಗಮನಕ್ಕೆ ಬಂದಿದೆ. ಹಾಗೆ ಮಾಡುವುದು ಕಾನೂನು ಬಾಹಿರ.

ನಿಯಮಗಳ ಪ್ರಕಾರ ನಗದು ನೀಡಿ ನೇರವಾಗಿ ಲಾಟರಿ ಖರೀದಿಸಬೇಕು. ಲಾಟರಿಯಲ್ಲಿ ಆನ್‌ಲೈನ್ ವಹಿವಾಟು ಕಾನೂನಿಗೆ ವಿರುದ್ಧವಾಗಿದೆ. ಲಾಟರಿ ಇಲಾಖೆಗೆ ಜಾರಿ ಅಧಿಕಾರ ಇಲ್ಲದಿರುವುದರಿಂದ ಪೊಲೀಸರಿಗೆ ದೂರು ನೀಡಲಾಗುವುದು.

ಇದಕ್ಕಾಗಿ ಕಾನೂನಿನ ಮೇಲೆ ತಿದ್ದುಪಡಿ ತರುವುದು ಅವಶ್ಯಕವಾಗಿದೆ. ಪ್ರಸ್ತುತ, ಆನ್‌ಲೈನ್ ವಹಿವಾಟಿನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಸಾಧ್ಯ ಎಂದು ಮೂಲಗಳು ಹೇಳುತ್ತಿವೆ.

5 ಟನ್ ತೂಕದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ 15 ಕಲಾವಿದರ ತಂಡ

0

15 ಕಲಾವಿದರ ತಂಡವು 5 ಟನ್ ತೂಕದ ಭಾರತೀಯ ಸಂಗೀತ ವಾದ್ಯ ‘ವೀಣೆ’ಯ ಮಾದರಿಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದೆ.

ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ 15 ಕಲಾವಿದರ ತಂಡವು ಭಾರತೀಯ ಸಂಗೀತ ವಾದ್ಯ ‘ವೀಣೆ’ಯ ಮಾದರಿಯನ್ನು ಸ್ಕ್ರ್ಯಾಪ್ ಮತ್ತು ತ್ಯಾಜ್ಯ ವಸ್ತುಗಳಿಂದ ತಯಾರಿಸಿದೆ.

ಈ ಹಿಂದೆಯೂ ಸಹ, ನಾವು ತ್ಯಾಜ್ಯದಿಂದ ಉತ್ತಮವಾದ ತತ್ವದ ಮೇಲೆ ಸ್ಕ್ರ್ಯಾಪ್ ವಸ್ತುಗಳಿಂದ ಅನೇಕ ಇತರ ಮಾದರಿಗಳನ್ನು ತಯಾರಿಸಿದ್ದೇವೆ.

ಯುವ ಪೀಳಿಗೆಗೆ ಭಾರತೀಯ ಸಂಗೀತ ವಾದ್ಯಗಳ ಬಗ್ಗೆ ಅರಿವು ಮೂಡಿಸಲು ನಾವು ವೀಣೆಯನ್ನು ಸ್ಕ್ರ್ಯಾಪ್ ವಸ್ತುಗಳಿಂದ ತಯಾರಿಸಿದ್ದೇವೆ ಎಂದು ಕಲಾವಿದರು ಹೇಳುತ್ತಾರೆ.

ಇಂಗ್ಲೆಂಡಿನಲ್ಲಿ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಆಕಾರದ ಪ್ರತಿಮೆ ನಿರ್ಮಿಸಿದ ಜನರು – ಪುರುಷ ಜನನಾಂಗದ ಆಕಾರದಲ್ಲಿ ರಷ್ಯಾ ಅಧ್ಯಕ್ಷರ ತಲೆಯನ್ನು ನಿರ್ಮಿಸಿದ ಹಳ್ಳಿಗರು

0

ಇಂಗ್ಲೆಂಡಿನಲ್ಲಿ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಆಕಾರದ ಪ್ರತಿಮೆ ನಿರ್ಮಿಸಿದ ಜನರು – ಪುರುಷ ಜನನಾಂಗದ ಆಕಾರದಲ್ಲಿ ರಷ್ಯಾ ಅಧ್ಯಕ್ಷರ ತಲೆಯನ್ನು ನಿರ್ಮಿಸಿದ ಹಳ್ಳಿಗರು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಪ್ರತಿಮೆಯನ್ನು ಇಂಗ್ಲೆಂಡ್‌ನ ಹಳ್ಳಿಯೊಂದರಲ್ಲಿ ನಿರ್ಮಿಸಿ ಅದರ ಕೆಳಗೆ ‘ಬೆಲೆಂಡ್ ಆಫ್ ದಿ ಇಯರ್’ ಎಂದು ಬರೆಯಲಾಗಿದೆ. ಉಕ್ರೇನ್ ಮೇಲೆ ರಷ್ಯಾದ ಕ್ಷಿಪಣಿಗಳ ಮಳೆಯಾಗುತ್ತಿದ್ದಂತೆ, ಇಂಗ್ಲೆಂಡ್‌ನ ಹಳ್ಳಿಯೊಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರತಿಮೆಯ ತಲೆಯ ಮೇಲೆ ಪುರುಷ ಜನನಾಂಗದ ಆಕಾರವನ್ನು ಸ್ಥಾಪಿಸಿತು.

ಪ್ರತಿಮೆಯನ್ನು ಇಂಗ್ಲೆಂಡ್‌ನ ಬೆಲ್ ಎಂಡ್ ಗ್ರಾಮದಲ್ಲಿ ಸ್ಥಾಪಿಸಲಾಯಿತು ಮತ್ತು ಪುಟಿನ್ ಅವರ ಪ್ರತಿಮೆಯನ್ನು “ವರ್ಷದ ಬೆಲ್ಲೆಂಡ್” ಶಾಸನದಿಂದ ಗುರುತಿಸಲಾಗಿದೆ. ‘ಬೆಲ್ಲೆಂಡ್’ ಎಂಬುದು ಕಿರಿಕಿರಿ ಅಥವಾ ಮೂರ್ಖ ವ್ಯಕ್ತಿಗೆ ಇಂಗ್ಲಿಷ್ ಗ್ರಾಮ್ಯ ಪದವಾಗಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಪಡೆಗಳ ಹತ್ತು ತಿಂಗಳ ಕಾಲ ಆಕ್ರಮಣವನ್ನು ವಿರೋಧಿಸಿ ಪ್ರತಿಮೆಯನ್ನು ಸ್ಥಾಪಿಸಲಾಯಿತು ಎಂದು ತಿಳಿದುಬಂದಿದೆ. ಪ್ರತಿಮೆಯು ಪ್ರಥಮ ಬಾರಿಗೆ ಡಿಸೆಂಬರ್ 15 ರಂದು ಕಾಣಿಸಿಕೊಂಡಿತು. ದಾರಿಹೋಕರು ಪ್ರತಿಮೆಯ ಮೇಲೆ ಎಸೆಯಲು ಮೊಟ್ಟೆಗಳ ಪೆಟ್ಟಿಗೆಗಳನ್ನು ಅದರ ಪಕ್ಕದಲ್ಲಿ ಇರಿಸಲಾಗಿತ್ತು.

ಸುದ್ದಿ ಸಂಸ್ಥೆಗೆ ಅವರು ಯಾರಿಗಾದರೂ ಬೆಲ್ಲೆಂಡ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಬೇಕಾಗಿದೆ ಎಂದು ಹೇಳಿದರು ಮತ್ತು “ಈ ವರ್ಷ ಸಾರ್ವತ್ರಿಕವಾಗಿ ಬೆಲೆಂಡ್ ಆಗಿರುವ ಒಬ್ಬ ವ್ಯಕ್ತಿ ಇದ್ದಾರೆ – ಮತ್ತು ಅದು ವ್ಲಾಡಿಮಿರ್ ಪುಟಿನ್” ಎಂದು ಭಾವಿಸಲಾಗಿದೆ.

ಪ್ರತಿಮೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಜನರು ಸ್ವಇಚ್ಛೆಯಿಂದ ಪ್ರತಿಮೆಯ ಮೇಲೆ ಮೊಟ್ಟೆಗಳನ್ನು ಎಸೆದರು ಮತ್ತು ಅದನ್ನು “ಸಾಕಷ್ಟು ಸಂತೋಷದಿಂದ” ಮಾಡಿದರು ಎಂದು ಪ್ರತಿಮೆ ನಿರ್ಮಾಣದ ಸಂಘಟಕರು ಹೇಳಿದರು.

ತೆಂಕಣ ತವರಿನ ಬಾಲ ಯಕ್ಷಪ್ರತಿಭೆಗಳಿಗೆ ಪ್ರಶಸ್ತಿ, ಪ್ರತಿಭಾ ಪುರಸ್ಕಾರದೊಂದಿಗೆ ಡಿ. 18ರಂದು ಕುಂಬ್ಳೆ ಪಾರ್ತಿಸುಬ್ಬನ ನೆಲದಲ್ಲಿ ಕಣಿಪುರ ಯಕ್ಷೋತ್ಸವ

ಕುಂಬಳೆ: ಕಣಿಪುರ ಯಕ್ಷಗಾನ ಮಾಸಪತ್ರಿಕೆ 11ನೇ ವರ್ಷಕ್ಕೆ ಕಾಲೂರುವ ಹಿನ್ನೆಲೆಯಲ್ಲಿ ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರು ನೆಲ ಕುಂಬ್ಳೆಯ ಶೇಡಿಕಾವಿನಲ್ಲಿ ಡಿ.18ರಂದು ಭಾನುವಾರ ಸಂಜೆ 6ರಿಂದ ಪ್ರಥಮ ಕಣಿಪುರ ಯಕ್ಷೋತ್ಸವ ಜರಗಲಿದ್ದು ಈ ವೇಳೆ ಮೂವರು ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪ್ರಶಸ್ತಿ ಮತ್ತು ಏಳು ಮಂದಿ ಉದಯೋನ್ಮುಖ ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪುರಸ್ಕಾರ ಪ್ರದಾನವಾಗಲಿದೆ.

ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ, ಕಲಾಪೋಷಕ ಟಿ.ಶ್ಯಾಮ ಭಟ್ ಕರ‍್ಯಕ್ರಮ ಉದ್ಘಾಟಿಸುವರು. ಕಣಿಪುರ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವೇದವಿದ್ವಾಂಸ, ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ವರ ಭಟ್, ಯಕ್ಷಕ್ಷೇತ್ರ ಪ್ರತಿಷ್ಠಾನ ಮಂಗಳೂರು ಇದರ ಸಂಚಾಲಕ ರಾಘವೇಂದ್ರ ಕುಂಬ್ಳೆ ಭಾಗವಹಿಸುವರು.


ಸಮಾರಂಭದಲ್ಲಿ ಮಂಗಳೂರಿನ ಯಕ್ಷಕ್ಷೇತ್ರ ಪ್ರತಿಷ್ಠಾನ ಪ್ರಾಯೋಜಿಸುವ ಪ್ರಥಮ ಕುಂಬ್ಳೆ ಸುಂದರರಾವ್ ಪ್ರಶಸ್ತಿ ಮತ್ತು ದಿ, ಕುಂಬ್ಳೆ ಚಂದ್ರಶೇಖರ(ಕುAಬ್ಳೆ ಚಂದು) ಸ್ಮರಣಾರ್ಥ ಪ್ರಶಸ್ತಿ ಪ್ರದಾನವಾಗಲಿದೆ. ಯಕ್ಷಗಾನ ಮತ್ತು ಶಿಕ್ಷಣದ ಜತೆ ಬಹುಮುಖೀ ಸಾಧನೆಗೈದ ಉದಯೋನ್ಮುಖ ಕಲಾವಿದರಿಗೆ ಈ ಪ್ರಶಸ್ತಿಯು ಸೀಮಿತವಾಗಿದೆ. ಮೊದಲ ದಿ. ಕುಂಬಳೆ ಸುಂದರರಾವ್ ಸ್ಮರಣಾರ್ಥ ಯಕ್ಷಪ್ರತಿಭೆ ಪ್ರಶಸ್ತಿಗೆ ಮಾ. ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ ಮತ್ತು ದಿ. ಕುಂಬ್ಳೆ ಚಂದ್ರಶೇಖರ ಸ್ಮರಣಾರ್ಥ ಪ್ರಶಸ್ತಿಗೆ ಉದಯೋನ್ಮುಖ ಮದ್ಲೆಗಾರ ಮಾ. ಕೃಷ್ಣಚೈತನ್ಯ ಚೇರಾಲು ಆಯ್ಕೆಗೊಂಡಿದ್ದಾರೆ.

ಇದೇ ಸಂದರ್ಭ ಕುಂಬ್ಳೆ ಸೀಮೆಯ ಬಳ್ಳಂಬೆಟ್ಟು ಮೂಲದ ಖ್ಯಾತ ಪುಂಡುವೇಷಧಾರಿ ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿಗೆ ಪ್ರತಿಭಾವಂತ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 5 ಸಾವಿರ ರೂ ನಗದು ಮತ್ತು ಸ್ಮರಣಿಕೆ, ಸನ್ಮಾನಪತ್ರ, ಪಾರಿತೋಷಕವನ್ನೊಳಗೊಂಡಿದೆ.


ಏಳು ಮಂದಿಗೆ ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ಕುಂಬ್ಳೆ ಸೀಮೆಯ ಉದಯೋನ್ಮುಖರಾದ ಏಳುಮಂದಿ ಬಾಲಪ್ರತಿಭೆಗಳಿಗೆ ಕಣಿಪುರ ಯಕ್ಷಗಾನ ಮಾಸಪತ್ರಿಕೆ ವತಿಯಿಂದ “ಯಕ್ಷಪ್ರತಿಭಾ ಪುರಸ್ಕಾರ” ಪ್ರದಾನವಾಗಲಿದೆ. ಈ ಪರಸ್ಕಾರವು ಯಕ್ಷಗಾನ ಸಹಿತ ಲಲಿತಕಲೆಗಳಲ್ಲಿ ಈಗಾಗಲೇ ಭರವಸೆ ಮೂಡಿಸಿದ ಎಳೆಯ ಸಾಧಕ ಕಲಾವಿದ್ಯಾರ್ಥಿಗಳಾದ ಅನರ್ಘ್ಯರತ್ನ ಪೆರುವಡಿ ಬಾಯಾರು, ಶ್ರಾವಣಿ ಕಾಟುಕುಕ್ಕೆ, ಸ್ಮೃತಿ ಎಂ. ಮಾಯ್ಲೆಂಗಿ ಕಾಟುಕುಕ್ಕೆ, ಸ್ಪೂರ್ತಿ ಕಲ್ಲೂರಾಯ ಮಧೂರು, ಪ್ರೀತಿ ಕಲ್ಲೂರಾಯ ಮಧೂರು, ಅದ್ವೈತ್ ಕನ್ಯಾನ, ಶ್ರುತಿಕಲಾ ಚೇರಾಲು ಇವರಿಗೆ ಸಲ್ಲಲಿದೆ.

ತೆಂಕಣ ತವರಿನ ಪ್ರತಿಭಾವಂತ ಬಾಲಕಲಾವಿದರನ್ನು ಪ್ರೋತ್ಸಾಹಿಸಿ, ಈ ನೆಲದಲ್ಲಿ ಯಕ್ಷಗಾನದ ದಟ್ಟ ವಾತಾವಾರಣ ರೂಪಿಸಲು ಎಳೆಯರನ್ನು ಪೋಷಿಸುವ ದೃಷ್ಟಿಯಲ್ಲಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ನೆಲದಿಂದ ಪ್ರಶಸ್ತಿ ಮತ್ತು ಪುರಸ್ಕಾರ ಪಡೆಯುವುದು ಈ ಸಮಾರಂಭದ ವಿಶೇಷತೆಯಾಗಿದೆ.


ಬಳಿಕ ಪ್ರಸಿದ್ಧ ಕಲಾವಿದರ ಗಡಣ ಹೊಂದಿದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ “ಶ್ರೀರಾಮ ಕಾರುಣ್ಯ” ಪ್ರಸಂಗದ ಬಯಲಾಟ ಜರಗಲಿದ್ದು, ಕಾರ್ಯಕ್ರಮ ಕುಂಬ್ಳೆ ಶೇಡಿಕಾವಿನ ಪಾರ್ತಿಸುಬ್ಬ ಸ್ಮಾರಕ ಮೈದಾನದಲ್ಲಿ ಮಹಾಕವಿ ಪಾರ್ತಿಸುಬ್ಬನ ಸಂಕಲ್ಪಿತ ಛಾಯಾಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನಡೆಸುವುದರೊಂದಿಗೆ ಆರಂಭವಾಗಲಿದೆ. ಯಕ್ಷಗಾನದ ತವರುನೆಲದಲ್ಲಿ ಮತ್ತೆ ಯಕ್ಷಗಾನದ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಕಣಿಪುರ ಯಕ್ಷಮಿತ್ರ ಬಳಗದ ಸಹಕಾರದಲ್ಲಿ ಕರ‍್ಯಕ್ರಮ ಆಯೋಜಿಸಲಾಗಿದೆ.

ವರದಿ: ಎಂ.ನಾ. ಚಂಬಲ್ತಿಮಾರ್ –
ಸಂಪರ್ಕ: 9895508277

ಇಂದು ಆಟ ಎಲ್ಲೆಲ್ಲಿ? (17-12-2022, ಶನಿವಾರ)

ಮೇಳಗಳ ಇಂದಿನ (17.12.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತ್ರಾಸಿ ಚರ್ಚ್ ರೋಡ್ ಶ್ರೀ ರಾಮ ಗಣಪತಿ ಮಂದಿರದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಪ್ರೇಮಾಲಯ, ಶಿವನಗರ, ಟೋಲ್ ಗೇಟ್ ಬಳಿ, ಹೆಜಮಾಡಿ 

ಕಟೀಲು ಮೂರನೇ ಮೇಳ== ಗಣೇಶ್ ಟೈಲ್ ವರ್ಕ್ಸ್ ಗುರುಪುರ ಕೈಕಂಬ 

ಕಟೀಲು ನಾಲ್ಕನೇ ಮೇಳ  == ಗುಂಡಳಿಕೆ ನಾಗರಿಕ ಸೇವಾ ಸಮಿತಿ ಯೆಯ್ಯಾಡಿ 

ಕಟೀಲು ಐದನೇ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ 

ಮಂದಾರ್ತಿ ಒಂದನೇ ಮೇಳ  == ರಂಗನಕೆರೆ ಹೇರಾಡಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಮಿಯ್ಯಾರು ನಾಲ್ಕೂರು 

ಮಂದಾರ್ತಿ ಮೂರನೇ ಮೇಳ  ==  ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ 

ಮಂದಾರ್ತಿ ಐದನೇ ಮೇಳ  == ತಂತ್ರಾಡಿ ಕಾಡೂರು ಮಂದಾರ್ತಿ 

ಹನುಮಗಿರಿ ಮೇಳ == ಯಕ್ಷಕೃಪಾ ಕ್ಯಾಶ್ಯೂ ಫ್ಯಾಕ್ಟರಿ ವಠಾರ ಬನ್ನೇರಳಕಟ್ಟೆ ಬೂದಾಡಿ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಆದಿಉಡುಪಿ ಬೈಪಾಸ್ ಬಳಿ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಬೆಳ್ವೆ ಸೂರ್ಗೋಳಿ ಶಾಲಾ ವಠಾರ – ಕರ್ಣಾರ್ಜುನ, ಕೀಚಕ ವಧೆ, ವೀರ ಬರ್ಬರೀಕ (ಕಾಲಮಿತಿ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಳಾಕೋಟಿಕೇರಿ ಏಳಜಿತ್ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಹೇರೂರು ಅಮ್ಮನವರ ಮನೆ ವಠಾರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ ==  ತೌಡುಗೋಳಿ ಯುವಕ ಮಂಡಲ ವಠಾರ – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಕಮಲಶಿಲೆ ಮೇಳ == ತೆಂಕಬೈಲು ಯಡಮೊಗ್ಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮೂಡುಜಡ್ದು ತಂತ್ರಾಡಿ 

ಶ್ರೀ ಸೌಕೂರು ಮೇಳ == ಹೆಬ್ರಿ ಕನ್ಯಾನ ಹೋಟೆಲ್ ಸರಸ್ವತಿ ಭವನ ಮುಂಭಾಗ – ವಜ್ರಮಾನಸಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ‘ಹರಿಕೃಪಾ’ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಾವಿನಕೊಡ್ಲು – ಮಂತ್ರಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಮುಂಡಾಜೆ ಶಾರದಾ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಹಿಮೆದ ಮಾಣಿಕ್ಯ 

ಶ್ರೀ ಶನೀಶ್ವರ ಮೇಳ == ಮೆಜೆಸ್ಟಿಕ್ ಹಾಲ್ ಎದುರು, ಅಂಕದಕಟ್ಟೆ ಕೋಟೇಶ್ವರ 

ಶ್ರೀ ಸಿಗಂದೂರು ಮೇಳ == ಕಾರ್ಕಡ 

ಶ್ರೀ ನೀಲಾವರ ಮೇಳ  == ನೀಲಾವರ ಕಳುವಿನಬೆಟ್ಟು – ರಾಮಾಂಜನೇಯ, ಚಂದ್ರಾವಳಿ ವಿಲಾಸ 

ಶ್ರೀ ಮೇಗರವಳ್ಳಿ ಮೇಳ ==  ಪಾದೆಮಠ ಬಲ್ಪೆಬೈಲು – ಭರತ ವರ್ಷಿಣಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ, ಬೇಳಂಜೆ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಮಾಚನಾಡಿ ಕಕ್ಕುಂಜೆ ‘ಶ್ರೀದೇವಿ ಅನುಗ್ರಹ’ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಅಡ್ಡೂರು ಕಳಸಗುರಿ – ಭಂಡಾರ ಚಾವಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಲಶೇಖರ ಸರಿಪಲ್ಲ ಯಸ್ ಟಿ ಯಂಗ್ ಸ್ಟಾರ್ ಕ್ಲಬ್ ಎದುರು – ಶ್ರೀ ದೇವಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಪಂಜಿಕಲ್ಲು ಪಾಂಗಳಬೆಟ್ಟು ವಸ್ರಗೋಳಿ – ಅಮರಶಿಲ್ಪಿ ವೀರ ಶಂಭು ಕಲ್ಕುಡ 

ಶ್ರೀ ತಲಕಳ ಮೇಳ == ಮುರನಗರ – ಸೀತಾ ಪರಿತ್ಯಾಗ, ಕಾರ್ತವೀರ್ಯಾರ್ಜುನ 

ಶ್ರೀ ಗೆಜ್ಜೆಗಿರಿ ಮೇಳ ==  ಮಾಂಟ್ರಾಡಿ ಪಂಚಾರು ಶಾಲಾ ವಠಾರ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಪ್ರೋ-ಕಬಡ್ಡಿ ಪಂದ್ಯಾಟ

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಯ್ದ ವಿದ್ಯಾರ್ಥಿ ತಂಡಗಳ ನಡುವೆ ಪ್ರೋ-ಕಬಡ್ಡಿ ಪಂದ್ಯಾಟವು ದಿನಾಂಕ 17 ಡಿಸೆಂಬರ್ ಶನಿವಾರದಂದು ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ.


ಅಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಶಾಸಕ ಶ್ರೀ ಸಂಜೀವ ಮಠಂದೂರು ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರಿನ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಭಾರತೀಯ ಸೀಮಾ ಸುರಕ್ಷಾ ಬಲದ ವಿಶ್ರಾಂತ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.


ಹುಡುಗರ 5 ತಂಡಗಳು ಮತ್ತು ಹುಡುಗಿಯರ 3 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಮ್ಯಾಟ್ ಅಂಕಣದಲ್ಲಿ ಲೀಗ್ ಮಾದರಿಯಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ತಿಳಿಸಿದ್ದಾರೆ.

ಎಂ.ಜಿ.ಎಂ. ಕಾಲೇಜಿನಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ – “ಯಕ್ಷಗಾನ ವಿಶ್ವಮಾನ್ಯ ಕಲೆ”: ಪ್ರೊ. ಲಕ್ಷ್ಮೀನಾರಾಯಣ ಕಾರಂತ

ನಮ್ಮ ದೇಶದ ಹೆಮ್ಮೆಯ ಕಲೆಯಾದ ಯಕ್ಷಗಾನ ತನ್ನ ಅಂತ:ಸತ್ವದಿಂದಾಗಿ ವಿಶ್ವಮಾನ್ಯತೆಯನ್ನು ಗಳಿಸಿದೆ. ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಜಗತ್ತಿನ ಹೊಸ ಹೊಸ ಪ್ರೇಕ್ಷಕರನ್ನು ತಲುಪುತ್ತಿರುವ ಈ ಕಲೆಯ ಮೂಲ ಸ್ವರೂಪದ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತೀ ಅಗತ್ಯ. ಕಳೆದ ಹತ್ತು ವರ್ಷಗಳಿಂದ ವಿವಿಧ ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸುವುದರ ಮೂಲಕ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಹೇಳಿದರು.


ಗುರುವಾರ (15-12-2022) ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಎಂ.ಜಿ.ಎಂ. ಕಾಲೇಜಿನ ಯಕ್ಷಗಾನ ಮತ್ತು ನಾಟಕ ರಂಗದ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಂಜನೀಯವಾದ ಲಕ್ಷಣಗಳಿಂದ ಮೇಳೈಸಿರುವ ಯಕ್ಷಗಾನ ಪ್ರದರ್ಶನಗಳಲ್ಲಿ ಪರಂಪರೆಯ ಸತ್ವಗಳು ದೂರವಾಗುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಜನಾಂಗ ಕಲೆಯ ಮೂಲ ಚೆಲುವನ್ನು ಅರಿಯುವಂತಾಗಬೇಕು. ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕಲೆ-ಸಾಹಿತ್ಯ-ಸಂಗೀತಗಳಲ್ಲಿ ಅಭಿರುಚಿಗಳನ್ನು ಬಳಸಿಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹೇಳಿದರು.


ಮುಖ್ಯ ಅತಿಥಿಗಳಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ, ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ ಭಾಗವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್, ಯಕ್ಷಾಂಗಣ ಟ್ರಸ್ಟ್ನ ಕಾರ್ಯಕ್ರಮದ ಸಂಯೋಜಕರಾದ ಕೋಟ ಸುದರ್ಶನ ಉರಾಳ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್. ಇವರ ನಿರೂಪಣೆಯೊಂದಿಗೆ ಹೆಜ್ಜೆಗಾರಿಕೆ, ಪದಾಭಿನಯ, ಮುದ್ರೆಗಳು, ಬಣ್ಣದ ವೇಷ ಮುಖವರ್ಣಿಕೆ, ಅಟ್ಟೆಕ್ಯಾದಿಗೆ ಮುಂದಲೆ ಕಟ್ಟುವುದು, ಬಾಲಗೋಪಾಲ, ಸ್ತ್ರೀ ವೇಷ, ಯಕ್ಷಗಾನದ ವಸ್ತ್ರಾಲಂಕಾರದ ವಿನ್ಯಾಸ, ಯುದ್ಧ ಕುಣಿತ, ಪ್ರಯಾಣ ಕುಣಿತ, ಪೌರಾಣಿಕ ಪ್ರಸಂಗಗಳ ಸನ್ನಿವೇಶಗಳು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನಗೊಂಡವು.


ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ದೇವರಾಜ ದಾಸ, ರಾಘವೇಂದ್ರ ಹೆಗಡೆ, ಅಜಿತ್ ಅಂಬಲಪಾಡಿ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ಸುದೀಪ ಉರಾಳ, ಸುಹಾಸ್ ಕರಬ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.

ವರದಿ: ರಾಘವೇಂದ್ರ ತುಂಗ ಕೆ.
ಮೊ. 9980181150