Sunday, March 15, 2026
Home Blog Page 106

ಕಾಸರಗೋಡು – ‘ಬೆಂಕಿ ಆರಿಸುವವರೆ ಬನ್ನಿ ಬನ್ನಿ. ಕನ್ನಡದ ಸಂಸ್ಕೃತಿಯ ಬೆಳಗೆ ಬನ್ನಿ’

ಬೆಳಗಾವಿಯ ಅಧಿವೇಶನ ಮುಗಿದಿದೆ. ಹಾವೇರಿಯ ನೆಲ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿ ನಿಂತಿದೆ. ಗಡಿ ಸಮಸ್ಯೆಗಳ ಗುಡುಗಿನ ನಡುವೆ ಕಾಸರಗೋಡಿನ ಬಗ್ಗೆ ಮಂದ್ರಸ್ವರದಲ್ಲಾದರೂ ಶಬ್ದಗಳೇ ಕೇಳಿ ಬರುತ್ತಿಲ್ಲ. ಕಾಸರಗೋಡಿನ ಕನ್ನಡಿಗರು ಮೌನವಾಗುತ್ತಿರುವ ಆಕ್ರಂದನದಲ್ಲಿ ನರಳುತ್ತಿರುವಂತೆ ಕಾಣುತ್ತದೆ.

ಕಳೆದ ಸುಮಾರು 65 ವರ್ಷಗಳಿಂದ ಈ ಪ್ರದೇಶದಲ್ಲಿ ಬಾಳಿ ಬದುಕುತ್ತಿರುವ ಕನ್ನಡಿಗರ ಒಡಲಾಳದ ಅಳಲು ಅರಣ್ಯರೋದನವಾಗಿ ಪರಿಣಮಿಸಿತೇ? ಸುದೀರ್ಘ ಕಾಲಾವಧಿಯಲ್ಲಿ ಪ್ರತಿಕೂಲ ಸನ್ನಿವೇಶಗಳಲ್ಲೂ ಮಾತೃಭೂಮಿಯನ್ನೂ ಮಾತೃಭಾಷೆಯನ್ನೂ ಮಾತೃ ಸಂಸ್ಕೃತಿಯನ್ನೂ ಪ್ರೀತಿಸುತ್ತಾ ಬಂದಿರುವುದೇ ಒಂದು ಅಪರಾಧವಾಯಿತೇ? ಹೀಗೆ ಕಣ್ಣೀರು ಸುರಿಸುವ ವಾತಾವರಣ ನಿರ್ಮಾಣವಾಗಿದೆ.

ಮಹಾಜನ ಆಯೋಗದ ವರದಿಯೇ ಅಂತಿಮವೆಂದಾದರೆ ಆ ವರದಿ ಕಾಸರಗೋಡಿನ ಪರವಾಗಿ ನೀಡಿದ ತೀರ್ಪನ್ನು ಯಾಕೆ ಕರ್ನಾಟಕ ಎತ್ತಿ ಹಿಡಿಯುವುದಿಲ್ಲ? ಕೇಂದ್ರ ಸರಕಾರದ ಸಾರಥ್ಯವನ್ನು ವಹಿಸಿರುವವರು ಇದನ್ನು ಯಾಕೆ ಗಮನಿಸುತ್ತಿಲ್ಲ?

ಕಾಸರಗೋಡಿನ ಇಬ್ಬರು ಮಹಾ ಕವಿಗಳು ತಾಯ್ನಾಡಿನ ವಿಮೋಚನೆಯನ್ನು ಕನವರಿಸುತ್ತಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಒಬ್ಬರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಮತ್ತೊಬ್ಬರು ಕನ್ನಡವನ್ನೇ ಉಸಿರಾಡುತ್ತಿದ್ದ ಮಹಾಕವಿ ಕಯ್ಯಾರ ಕಿಞ್ಞಣ್ಣ ರೈಯವರು. ಈ ಎರಡು ಹೆಸರುಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಮುಂದಿಟ್ಟುಕೊಂಡರೂ ಅಂದಿನಿಂದ ಇಂದಿನ ತನಕ ಇಲ್ಲಿ ಕನ್ನಡ ಸಂಸ್ಕೃತಿ ಸಾಹಿತ್ಯ ಕಲೆ ಇತ್ಯಾದಿಗಳಿಗೆ ನಿಜಾರ್ಥದಲ್ಲಿ ಅಪೂರ್ವವಾದ ಕೊಡುಗೆಗಳನ್ನು ಕೊಟ್ಟ ಇನ್ನೂ ಅನೇಕ ಮಂದಿ ಸಾಧಕರಿದ್ದಾರೆ.

ಕರ್ನಾಟಕದ ರಾಜಕಲೆಯೆಂಬ ಗೌರವಕ್ಕೆ ಪಾತ್ರವಾಗಿರುವ ಯಕ್ಷಗಾನಕ್ಕಂತೂ ಅಂದೂ ಇಂದೂ ಇದೊಂದು ಆಡುಂಬೊಲವೇ ಆಗಿದೆ. ಜಾನಪದ ಮಹಾ ಕವಿ ಯಕ್ಷಗಾನದ ಆಚಾರ್ಯ ಪುರುಷ ಪಾರ್ತಿಸುಬ್ಬ ನಡೆದಾಡಿದ್ದು ಕನ್ನಡದ ಕಾಸರಗೋಡಿನ ಪುಣ್ಯಭೂಮಿ ಕಣಿಪುರದಲ್ಲಿ ಎಂಬುದನ್ನಷ್ಟೇ ಸ್ಮರಿಸಿಕೊಂಡರೆ ಸಾಕು. ಪ್ರಾಯಃ ಒಂದು ಭೌಗೋಳಿಕ ಚೌಕಟ್ಟಿನಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಲಾವಿದರನ್ನೂ ಕಲಾಭಿಮಾನಿಗಳನ್ನೂ ಪ್ರಸಂಗ ರಚನಾ ಸಾಹಿತಿಗಳನ್ನೂ ಕನ್ನಡಕ್ಕೆ ಕೊಟ್ಟಂತಹ ಇನ್ನೊಂದು ಪ್ರದೇಶ ಕರ್ನಾಟಕದಲ್ಲೂ ಕಾಣಸಿಗಲಾರದು.

ಗಮನಿಸಬೇಕಾದ ಮುಖ್ಯವಾದ ಮಾತೆಂದರೆ ಕಾಸರಗೋಡಿನಲ್ಲಿ ಇರುವ ಪ್ರಶ್ನೆ ಸಂಸ್ಕೃತಿಗೆ ಸಂಬಂಧಿಸಿದ್ದು. ರಾಜ್ಯ ಪುನಾರಚನೆ ನಡೆದುದು ಭಾಷೆಗಳ ಆಧಾರದ ಮೇಲೆ ಎಂಬುದರಿಂದ ಮೇಲ್ನೋಟಕ್ಕೆ ಇದು ಭಾಷೆಗಳ ಸಮಸ್ಯೆಯಂತೆ ಕಾಣಿಸಿಕೊಂಡಿದೆ. ಎಂದರೆ ಸಂಸ್ಕೃತಿಯ ಸಮಸ್ಯೆಯೇ ಆದರೂ ಅದನ್ನು ಇತ್ಯರ್ಥಗೊಳಿಸುವಲ್ಲಿ ಪರಿಗಣಿಸಬೇಕಾದದ್ದು ರಾಷ್ಟ್ರಮಟ್ಟದಲ್ಲಿ ಅಂಗೀಕೃತವಾದ ಮಲೆಯಾಳ ಮತ್ತು ಕನ್ನಡ ಭಾಷೆಗಳನ್ನು ಮಾತ್ರ. ಕಾಸರಗೋಡಿನಲ್ಲಿ ಅಸ್ತಿತ್ವದಲ್ಲಿರುವ ಇತರ ಉಪಭಾಷೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಅಂತರ್ಗತವಾಗಿವೆ ಎನ್ನುವ ಸತ್ಯದ ಆಧಾರದ ಮೇಲೆ ಈ ಪ್ರಶ್ನೆಯ ತೀರ್ಮಾನವಾಗಬೇಕು.

ಆಗಾಗ ಉಲ್ಬಣಾವಸ್ಥೆಗೆ ಬರುತ್ತಿರುವ ಭಾಷಾ ಸಂಬಂಧವಾದ (ಸಂಸ್ಕೃತಿ) ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದೇ ನಿಜವಾದ ಪ್ರಶ್ನೆ.

ಪರಿಹಾರ

ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿ ಕಾಳಗಕ್ಕೆ ಮುಂದಾಗುವುದರಿಂದ ಪ್ರಯೋಜನವೇನೂ ಆಗಲಾರದು. ಭಾಷೆಯ ಅಥವಾ ಸಂಸ್ಕೃತಿಯ ಕುರಿತಾದ ಅಂಧಾಭಿಮಾನ ದುರಭಿಮಾನ ಉದ್ವೇಗ ಆವೇಶಗಳು ಕಷ್ಟವನ್ನು ಬೆಟ್ಟವಾಗಿಸಬಹುದೇ ಹೊರತು ಪರಿಹಾರ ಕಾಣುವುದಕ್ಕೆ ನೆರವಾಗಲಾರವು. ಪ್ರೀತಿ ವಿವೇಕ ಸೌಹಾರ್ದ ಸಮನ್ವಯ ಇತ್ಯಾದಿಗಳ ನೆಲೆಯಲ್ಲಿ ಮಾತ್ರವೇ ನೆಮ್ಮದಿಯ ಪರಿಹಾರ ದೊರಕಬಹುದು.

ಪರಿಹಾರವನ್ನು ಎರಡು ದೃಷ್ಟಿಯಿಂದ ಲಕ್ಷಿಸಬೇಕು.

1. ಶಾಶ್ವತವಾದ ಪರಿಹಾರವೆಂದರೆ ಮಹಾಜನ ಆಯೋಗದ ಆಧಾರದಲ್ಲಿ ಕಾಸರಗೋಡನ್ನು ಭೌಗೋಳಿಕವಾಗಿ ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು. ವೋಟ್ ಬೇಂಕ್ ರಾಜಕೀಯವನ್ನು ಬದಿಗಿರಿಸಿ ಪರಸ್ಪರ ಮಾತುಕತೆಯ ಮೂಲಕ ಸರ್ವಪಕ್ಷಗಳ ಸರ್ವಸಮ್ಮತ ಸಿದ್ಧಾಂತಕ್ಕೆ ಬದ್ಧರಾಗುವುದಕ್ಕೆ ಸಾಧ್ಯವಾದರೆ ಮಾತ್ರ ಇದು ಯಶಸ್ವಿಯಾಗಬಹುದು. ಗುಣಕಾರಕ ಚಿಕಿತ್ಸೆ (Curative treatment) ಸಾಧ್ಯವಾಗದಿದ್ದರೆ ನಾವು ಸಾಂತ್ವನ ಚಿಕಿತ್ಸೆ (palliative treatment) ಗೆ ಮೊರೆ ಹೋಗಬೇಕು.

2.ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಉತ್ತಮವಾದ ಸೂತ್ರ. ಶಾಸನಾತ್ಮಕವಾಗಿ ಮೂಡಿ ಬಂದರೆ ಅದೊಂದು ಶಾಶ್ವತವಾದ ಪರಿಹಾರವಾಗಬಹುದು. ಕಾಸರಗೋಡಿನ ಸಂಸ್ಕೃತಿ ಪರವಾದ ಎಲ್ಲ ಚಟುವಟಿಕೆಗಳನ್ನೂ ಅದು ಕರ್ನಾಟಕದ ಅವಿಭಾಜ್ಯ ಅಂಗವೆಂಬಂತೆ ಕರ್ನಾಟಕ ಸರಕಾರ ನಿರ್ವಹಿಸಬೇಕು. ಅಥವಾ ಪೋಷಿಸಬೇಕು. ಅದರೊಂದಿಗೆ ಹೆಚ್ಚುವರಿ ಸೌಲಭ್ಯಗಳನ್ನೂ ನೀಡಬೇಕು. ಕೇರಳ ಸರಕಾರದಿಂದ ಸಿಗಲೇಬೇಕಾದ ಸವಲತ್ತುಗಳು ಸಿಗುವಂತೆಯೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೆಯದಂತೆಯೂ ಎಚ್ಚರಿಕೆ ವಹಿಸಬೇಕು. ಈಗಾಗಲೇ ಡಾ.ಸಿ. ಸೋಮಶೇಖರ್ ಅವರು ಈ ಕುರಿತು ಕೆಲವು ದೃಢವಾದ ಹೆಜ್ಜೆಗಳನ್ನು ಮುಂದಿರಿಸಿದ್ದಾರೆ. ಇದಕ್ಕೇ ಶಾಸನಾತ್ಮಕವಾದ ಶಾಶ್ವತವಾದ ಸ್ವರೂಪವನ್ನು ಕೊಟ್ಟರೆ ಸಮಗ್ರವಾದ ಸೂತ್ರವೊಂದನ್ನು ಅನುಷ್ಠಾನಕ್ಕೆ ತರಬಹುದು.

ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಬೇಕೆಂಬ ಬೇಡಿಕೆ ಅಷ್ಟು ಪರಿಣಾಮಕಾರಿಯಾಗುವುದು ಕಷ್ಟ. ಆದರೆ ಕಾಸರಗೋಡನ್ನು ರಾಷ್ಟ್ರಮಟ್ಟದಲ್ಲಿ ಸಂಸ್ಕೃತಿಯ ಸಾಮರಸ್ಯದ ನಾಡೆಂದು ಗುರುತಿಸಿ ಎಲ್ಲ ಭಾಷೆಗಳ ಮತ್ತು ಸಂಸ್ಕೃತಿಗಳ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸಬಹುದಾದದ್ದು ಇನ್ನೊಂದು ಉಚಿತವಾದ ಮಾರ್ಗ. ಯಾವುದು ಹೆಚ್ಚು ಪ್ರಾಯೋಗಿಕವೂ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಕಾಸರಗೋಡು ಕೇರಳಕ್ಕೆ ಸೇರಿ ಹೋದ ನೋವು ಮತ್ತು ಆವೇಶದ ಭರದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ‘ಬೆಂಕಿ ಬಿದ್ದಿದೆ ಮನೆಗೆ’ ಎಂದು ಹಾಡಿದ್ದರು. ಅಂದು ಹೊತ್ತಿದ ಬೆಂಕಿ ಇಂದೂ ಉರಿಯುತ್ತಲೇ ಇದೆ. ಹಾಗಾಗಿ ಈಗ ನಾವು ಹಾಡಬೇಕಾಗಿದೆ

‘ಬೆಂಕಿ ಆರಿಸುವವರೆ ಬನ್ನಿ ಬನ್ನಿ. ಕನ್ನಡದ ಸಂಸ್ಕೃತಿಯ ಬೆಳಗೆ ಬನ್ನಿ’

ಬರಹ: ಡಾ. ರಮಾನಂದ ಬನಾರಿ ಮಂಜೇಶ್ವರ

ಡಾ. ರಮಾನಂದ ಬನಾರಿ ಮಂಜೇಶ್ವರ

ಅಧ್ಯಕ್ಷರು,

ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ

ಅಂಚೆ: ಪಂಜಿಕಲ್ಲು 671543

ಕಾಸರಗೋಡು ಜಿಲ್ಲೆ

ಮೊ: 9846673422

ವಾಟ್ಸಪ್: 9446297226

13 ವರ್ಷದ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ  47 ವರ್ಷದ ಶಿಕ್ಷಕ –  ‘ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ರಜೆಯ ಮೊದಲು ನಿನ್ನನ್ನು ಭೇಟಿಯಾಗಲು ಬಯಸುತ್ತೇನೆ’

ಲಖನೌ: ಉತ್ತರ ಪ್ರದೇಶದ ಕನ್ನೌಜ್‌ನ ಸರ್ಕಾರಿ ಶಾಲೆಯೊಂದರ 47 ವರ್ಷದ ಶಿಕ್ಷಕರಿಂದ 13 ವರ್ಷದ 8 ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬಂದಿದೆ. 8 ನೇ ತರಗತಿಯ ವಿದ್ಯಾರ್ಥಿನಿಗೆ ‘ಪ್ರೇಮ ಪತ್ರ’ ಬರೆದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ತಿಳಿದುಬಂದಿದೆ.

ಶಿಕ್ಷಕನನ್ನು ಹರಿಓಂ ಸಿಂಗ್ ಎಂದು ಗುರುತಿಸಲಾಗಿದ್ದು, ಒಂದು ಪುಟದ ಪ್ರೇಮ ಪತ್ರದಲ್ಲಿ ವಿದ್ಯಾರ್ಥಿನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಡಿಸೆಂಬರ್ 30ರಂದು ನೀಡಿದ್ದ ಹೊಸ ವರ್ಷದ ಗ್ರೀಟಿಂಗ್ ಕಾರ್ಡ್ ನ ನಡುವಿನಲ್ಲಿ ಪ್ರೇಮ ಪತ್ರವನ್ನು ಇರಿಸಿ ಬಾಲಕಿಗೆ ಶಿಕ್ಷಕ ನೀಡಿದ್ದ ಎಂದು ಹೇಳಲಾಗುತ್ತಿದೆ.

ಶಿಕ್ಷಕನು ವಿದ್ಯಾರ್ಥಿನಿಯ ಹೆಸರಿನೊಂದಿಗೆ ಪತ್ರವನ್ನು ಪ್ರಾರಂಭಿಸಿದನು, ಅವನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದ. ಶಾಲಾ ರಜೆಯಲ್ಲಿ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದೂ ಪ್ರೇಮ ಪತ್ರದಲ್ಲಿ ಬರೆದಿದ್ದ. ಆಕೆಗೆ ಅವಕಾಶ ಸಿಕ್ಕರೆ, ಅವಳು ತನಗೆ ಫೋನ್ ಮಾಡಬೇಕು ಮತ್ತು ರಜೆಯ ಮೊದಲು ಬಂದು ನನ್ನನ್ನು ಭೇಟಿಯಾಗು ಎಂದು ಅವರು ಬರೆದಿದ್ದಾರೆ.

ಶಿಕ್ಷಕನು ತಾನು ಅವಳನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದನು ಮತ್ತು ಪತ್ರವನ್ನು ಬೇರೆಯವರಿಗೆ ತೋರಿಸಬೇಡ ಮತ್ತು ಅದನ್ನು ಓದಿದ ನಂತರ ಅದನ್ನು ಹರಿದು ಹಾಕಲು ಹೇಳಿದನು. ಆದರೆ ಬಾಲಕಿ ತನ್ನ ಪೋಷಕರಿಗೆ ಪತ್ರದ ಬಗ್ಗೆ ತಿಳಿಸಿದ್ದಾಳೆ ಮತ್ತು ನಂತರ ಪೋಷಕರು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯ ಪೋಷಕರ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿಚಾರಿಸಿ, ಕ್ಷಮೆಯಾಚಿಸುವಂತೆ ಶಿಕ್ಷಕರನ್ನು ಕೇಳಿದಾಗ ಅವರು ಕಿವಿಗೊಡಲಿಲ್ಲ, ಬದಲಾಗಿ ಗಂಭೀರ ಪರಿಣಾಮ ಬೀರುವುದಾಗಿ ಬೆದರಿಕೆ ಹಾಕಿದರು ಎಂದು ಪೋಷಕರು ಹೇಳುತ್ತಾರೆ. ಬಾಲಕಿಯನ್ನು ಅಪಹರಿಸುವುದಾಗಿ ಶಿಕ್ಷಕನು ಹೇಳಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ವಿಷಯ ಬೆಳಕಿಗೆ ಬಂದ ನಂತರ, ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಕೌಸ್ತುಭ್ ಸಿಂಗ್ ಹರಿಯೋಮ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿ ವಿಪಿನ್ ಕುಮಾರ್ ಅವರಿಗೆ ವಿಷಯದ ತನಿಖೆಯನ್ನು ವಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರ ಸಂಘವೂ ಹೇಳಿದೆ.

ಇಂದು ಆಟ ಎಲ್ಲೆಲ್ಲಿ? (08-01-2023, ಆದಿತ್ಯವಾರ)

ಮೇಳಗಳ ಇಂದಿನ (08.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಚೊಕ್ಕಬೆಟ್ಟು ಸುರತ್ಕಲ್ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ನೆಕ್ಕರೆಗುಳಿ ಕರ್ಪೆ ಸಿದ್ದಕಟ್ಟೆ ಬಂಟ್ವಾಳ 

ಕಟೀಲು ಎರಡನೇ ಮೇಳ == ನಾಯಿಲ ಮಾರ್ದೋಳಿ ಪಾಣೆಮಂಗಳೂರು 

ಕಟೀಲು ಮೂರನೇ ಮೇಳ== ಶಿವನಗರ ಮೂಡುಶೆಡ್ಡೆ ವಾಮಂಜೂರು 

ಕಟೀಲು ನಾಲ್ಕನೇ ಮೇಳ  == ಕನಕಗಿರಿ ಮಂಚಿ ಬಂಟ್ವಾಳ 

ಕಟೀಲು ಐದನೇ ಮೇಳ == ಬೈಲು ಮೂಡುಕೆರೆ 

ಕಟೀಲು ಆರನೇ ಮೇಳ == ಸಾಯಿಮಣಿ ನಿವಾಸ ಪೆರಾಡಿ ವಯಾ ಶಿರ್ತಾಡಿ 

ಮಂದಾರ್ತಿ ಒಂದನೇ ಮೇಳ  == ಹಿಲಿಯಾಣ 

ಮಂದಾರ್ತಿ ಎರಡನೇ ಮೇಳ   == ಬ್ರಹ್ಮಾವರ 

ಮಂದಾರ್ತಿ ಮೂರನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  ==  ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಸ್ವರಾಜ್ಯ ಮೈದಾನ ಮೂಡಬಿದಿರೆ – ಬ್ರಹ್ಮಕಪಾಲ, ಇಂದ್ರಜಿತು ಕಾಳಗ 

ಶ್ರೀ ಸಾಲಿಗ್ರಾಮ ಮೇಳ == ಪೆರ್ಡೂರು ಜೋಗಿಬೆಟ್ಟು – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಉಜಿರೆ ಜನಾರ್ದನ ದೇವಸ್ಥಾನ ರಥಬೀದಿ – ಧರಣಿ ಪುತ್ರ, ಗಂಗಾ ಪುತ್ರ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಶ್ರೀ  ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೊಡ್ಗಿಹಿತ್ಲು 

ಶ್ರೀ ಪಾವಂಜೆ ಮೇಳ ==  ಬಚ್ಚಿಮನೆ ಕುಂಭಾಶಿ  

ಶ್ರೀ ಕಮಲಶಿಲೆ ಮೇಳ == ಹೊಸನಗರ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕೋಟ 

ಶ್ರೀ ಸೌಕೂರು ಮೇಳ == ಅಂಪಾರು – ವಜ್ರಮಾನಸಿ 

ಶ್ರೀ ಮಡಾಮಕ್ಕಿ ಮೇಳ == ಬೇಳಿಂಜೆ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ ==  ಕುಂದಾಪುರ – ಮಂತ್ರಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಬಡಗಬೆಳ್ಳೂರು – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ನೀಲಾವರ ಮೇಳ  == ಮೂಡುಬೆಳ್ಳೆ – ಸ್ವಾಮಿ ವೀರ ಕಲ್ಕುಡ 

ಶ್ರೀ ಗೆಜ್ಜೆಗಿರಿ ಮೇಳ == ಮಾಡ ಕಜೆಕಾರು – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಫೋನ್ ಚಾರ್ಜ್ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿ ಮೃತ್ಯುವಶ

ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಅವರನ್ನು ಪಯ್ಯನಕ್ಕಲ್ ಕುಟ್ಟಿಕಟ್ಟುತ್ತೋಡಿ ನೀಲಂಪರಂನ ಅಭಿಷೇಕ್ ನಾಯರ್ ಎಂದು ಗುರುತಿಸಲಾಗಿದೆ. ಅವನಿಗೆ ಪ್ಲಗ್‌ನಿಂದ ಶಾಕ್ ತಗುಲಿದೆ.

ಫೋನ್ ಸರಿಯಾಗಿ ಚಾರ್ಜ್ ಆಗದ ಕಾರಣ ಅದನ್ನು ಅನ್ ಪ್ಲಗ್ ಮಾಡಲು ಯತ್ನಿಸಿದಾಗ ಅಭಿಷೇಕ್ ಗೆ ವಿದ್ಯುತ್ ಸ್ಪರ್ಶವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ.

ಅವರ ತಂದೆ ಜಾರ್ಖಂಡ್ ಮೂಲದವರು. ಅಲ್ಲಿ ಅಭಿಷೇಕ್ ಓದುತ್ತಿದ್ದ. ಅಭಿಷೇಕ್ ಒಂದು ತಿಂಗಳ ಹಿಂದೆ ಪಯ್ಯನಕ್ಕಲ್‌ನಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದ.

ಅಂಬಲಪಾಡಿ ಯಕ್ಷಗಾನ ಮಂಡಳಿಯ ವಿವಧ ಪ್ರಶಸ್ತಿಗಳಿಗೆ ಆಯ್ಕೆ

ಉಡುಪಿ : ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 65ನೇ ವಾರ್ಷಿಕೋತ್ಸವವು ಜನವರಿ 15, 2023 ಭಾನುವಾರ ಸಂಜೆ 6.00 ಗಂಟೆಗೆ ಅಂಬಲಪಾಡಿಯ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜರಗಲಿದೆ.

ಪ್ರತೀ ವರ್ಷದಂತೆ ಈ ಸಂದರ್ಭದಲ್ಲಿ ಮೂವರು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಿದಿಯೂರು ಜನಾರ್ದನ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ನಿಟ್ಟೂರು ಶೀನಪ್ಪ ಸುವರ್ಣರಿಗೆ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ರಾಜಶೇಖರ್ ಹಂದೆಯವರಿಗೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ಆರ್ಗೋಡು ಮೋಹನ್‌ದಾಸ್ ಶೆಣೈಯವರಿಗೆ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಧ್ಯಕ್ಷ ಕೆ. ಅಜಿತ್‌ಕುಮಾರ್ ಮತ್ತು ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿರುತ್ತಾರೆ.

ವಿಷಯುಕ್ತ ಆಹಾರ ಸೇವಿಸಿ ಕಾಸರಗೋಡಿನ 19ರ ಯುವತಿ ಸಾವು – ಉದುಮದ ಹೋಟೆಲಿನಿಂದ ಆಹಾರ ಆನ್ಲೈನ್ ನಲ್ಲಿ ‘ಕುಜಿಮಂತಿ’ ತರಿಸಿದ್ದ ಅಂಜುಶ್ರೀ ಪಾರ್ವತಿ ಆಸ್ಪತ್ರೆಯಲ್ಲಿ ಮೃತ್ಯು

ಕಾಸರಗೋಡು: ವಿಷಾಹಾರ ಸೇವನೆಯ ಮತ್ತೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ‘ಕುಜಿಮಂತಿ’ ಸೇವಿಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಶನಿವಾರದಂದು ಕೇರಳದಲ್ಲಿ ಆಹಾರ ವಿಷಪೂರಿತವಾದ ಶಂಕಿತ ಪ್ರಕರಣದಲ್ಲಿ ಮತ್ತೊಂದು ಸಾವಿಗೆ ಸಾಕ್ಷಿಯಾಗಿದೆ.

ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ (19) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಡಿಸೆಂಬರ್ 31 ರಂದು ಕಾಸರಗೋಡಿನ ಉದುಮದ ರೊಮ್ಯಾನ್ಸಿಯಾ ಫ್ಯಾಮಿಲಿ ರೆಸ್ಟೊರೆಂಟ್‌ನಿಂದ ‘ಕುಜಿಮಂತಿ’ ಸೇವಿಸಿದ ನಂತರ ಬಾಲಕಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಘಟನೆಯ ತನಿಖೆಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ಘಟನೆಯ ಕುರಿತು ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಆಯೋಗದ ವಿಆರ್ ವಿನೋದ್‌ಗೆ ಸೂಚಿಸಲಾಗಿದೆ. ಒಂದು ವಾರದಲ್ಲಿ ವಿಷಾಹಾರ ಸೇವನೆಯಿಂದ ಇದು ಎರಡನೇ ಸಾವು. ನಾಲ್ಕು ದಿನಗಳ ಹಿಂದೆ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಜನವರಿ 3 ರಂದು ಆಹಾರ ವಿಷಕ್ಕೆ ಸಂಬಂಧಿಸಿದ ರೋಗಲಕ್ಷಣಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು.

ಆಹಾರ ಸುರಕ್ಷತಾ ಅಧಿಕಾರಿಗಳ ಪ್ರಕಾರ, ಹುಡುಗಿ ಕೇರಳದ ಹಲವಾರು ಭಾಗಗಳಲ್ಲಿ ಸೇವಿಸುವ ಜನಪ್ರಿಯ ಖಾದ್ಯವಾದ  ‘ಕುಜಿಮಂತಿ’ ಎಂಬ ಅರೇಬಿಕ್ ಖಾದ್ಯದ ಪಾರ್ಸೆಲ್ ಅನ್ನು ಆರ್ಡರ್ ಮಾಡಿದ್ದಳು. ಇದು ಮಾಂಸಾಹಾರವಾಗಿದೆ. ಆಹಾರ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸುವಂತೆ ಕೋಝಿಕ್ಕೋಡ್‌ನ ಉಪ ಆಯುಕ್ತರಿಗೆ ಸೂಚಿಸಿದ್ದಾರೆ.

ಕಣ್ಣೂರು ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹೊಟೇಲ್‌ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಉದುಮ ಶಾಸಕ ಸಿ.ಎಚ್.ಕುಂಞಂಬು ಮಾತನಾಡಿ, ಬಾಲಕಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿಲ್ಲ, ಇದು ವಿಷಾಹಾರ ಪ್ರಕರಣವಾಗಿದೆ. ವಿಷಾಹಾರ ಸೇವನೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಕಾಸರಗೋಡು ಡಿಎಂಒ ರಾಮದಾಸ್ ಅವರು ಸಾವಿನ ಕಾರಣವನ್ನು ತಿಳಿಯಲು ಚಿಕಿತ್ಸೆಯ ವಿವರಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ಅವರ ಪ್ರಕಾರ, ಪ್ರಾಥಮಿಕ ಚಿಕಿತ್ಸೆ ನಂತರ ಬಾಲಕಿಯನ್ನು ಮನೆಗೆ ಕಳುಹಿಸಲಾಯಿತು, ಆದರೆ ನಂತರ ಆಕೆಯ ಸ್ಥಿತಿ ಹದಗೆಟ್ಟಿತು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಒಂದು ವರ್ಷದ ಹಿಂದೆ ಕಾಸರಗೋಡಿನಲ್ಲಿ ಶಾಲಾ ಬಾಲಕಿಯೊಬ್ಬಳು ಶಾವರ್ಮಾ ಸೇವಿಸಿ ಸಾವನ್ನಪ್ಪಿದ್ದಳು.

ಇಂದು ಆಟ ಎಲ್ಲೆಲ್ಲಿ? (07-01-2023, ಶನಿವಾರ)

ಮೇಳಗಳ ಇಂದಿನ (07.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕನ್ನಿಕಾ ನಿಲಯ ಬಜಪೆ ಪೆರ್ಮುದೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಗಣೇಶಪುರ ಒಂದನೇ ಬ್ಲಾಕ್ ಕಾಟಿಪಳ್ಳ 

ಕಟೀಲು ಎರಡನೇ ಮೇಳ == ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವಯಾ ಕೊಕ್ಕಡ 

ಕಟೀಲು ಮೂರನೇ ಮೇಳ== ಅಗ್ನೀಶ್ವರ ದೇವಸ್ಥಾನದ ಹತ್ತಿರ ಚಿತ್ರಪಾಡಿ ಸಾಲಿಗ್ರಾಮ 

ಕಟೀಲು ನಾಲ್ಕನೇ ಮೇಳ  == ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಐದನೇ ಮೇಳ == ಕುಲಶೇಖರ ಕಲ್ಪನೆ ಮೈದಾನದಲ್ಲಿ 

ಕಟೀಲು ಆರನೇ ಮೇಳ == ವಿದ್ಯಾನಗರ ಕುಳಾಯಿ 

ಮಂದಾರ್ತಿ ಒಂದನೇ ಮೇಳ  == ಭಟ್ರಕೋಡಿ ಕಿನ್ನಿಗೋಳಿ 

ಮಂದಾರ್ತಿ ಎರಡನೇ ಮೇಳ   == ಭಟ್ರಕೋಡಿ ಕಿನ್ನಿಗೋಳಿ 

ಮಂದಾರ್ತಿ ಮೂರನೇ ಮೇಳ  ==  ಭಟ್ರಕೋಡಿ ಕಿನ್ನಿಗೋಳಿ 

ಮಂದಾರ್ತಿ ನಾಲ್ಕನೇ ಮೇಳ   == ಭಟ್ರಕೋಡಿ ಕಿನ್ನಿಗೋಳಿ 

ಮಂದಾರ್ತಿ ಐದನೇ ಮೇಳ  ==  ಭಟ್ರಕೋಡಿ ಕಿನ್ನಿಗೋಳಿ 

ಹನುಮಗಿರಿ ಮೇಳ == ಪುಣ್ಚತ್ತಾರು ಕಡಬ – ಮಹಾಕಲಿ ಮಗಧೇಂದ್ರ 

ಶ್ರೀ ಸಾಲಿಗ್ರಾಮ ಮೇಳ == ವಕ್ವಾಡಿ ಫಾರ್ಚೂನ್ ವಿಲೇಜ್ ಮೈದಾನ – ಕೀಚಕ ವಧೆ, ವೀರಮಣಿ ಕಾಳಗ, ಕನಕಾಂಗಿ ಕಲ್ಯಾಣ 

ಶ್ರೀ ಪೆರ್ಡೂರು ಮೇಳ == ಪೆರ್ಮುಂಡೆ – ಶ್ರೀ ದೇವಿ ದೇವಿ ಬನಶಂಕರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಆಜ್ರಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಸಾಯಿಬ್ರಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಚಿತ್ತೂರು 

ಶ್ರೀ ಪಾವಂಜೆ ಮೇಳ ==  ಅಶೋಕನಗರ ಮಂಗಳೂರು – ಶಬರಿಮಲೆ ಸ್ವಾಮಿ ಶ್ರೀ ಅಯ್ಯಪ್ಪ 

ಶ್ರೀ ಕಮಲಶಿಲೆ ಮೇಳ == ಪೆರಂಪಳ್ಳಿ ಉದುಪಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕುಂಬಾರಬೆಟ್ಟು ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಆದಿ ಉಡುಪಿ ಬೈಪಾಸ್ – ಈಶ್ವರಿ ಪರಮೇಶ್ವರಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸರಿಪಳ್ಳ ಕನ್ನಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಣಂಚಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ – ಕುಶಲವ, ಚಿತ್ರಾಕ್ಷಿ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ಗರಡಿಮಜಲು ಗರಡಿಮಠ 

ಶ್ರೀ ಶನೀಶ್ವರ ಮೇಳ == ಗುಡಿಬೆಟ್ಟು ಮುಳ್ಳುಗುಡ್ಡೆ – ಶನೀಶ್ವರ ಮಹಾತ್ಮೆ 

ಶ್ರೀ ಸಿಗಂದೂರು ಮೇಳ == ಹಾವಂಜೆ ಬಾಣಬೆಟ್ಟು ಬ್ರಹ್ಮಾವರ 

ಶ್ರೀ ನೀಲಾವರ ಮೇಳ  == ಮಾರ್ಪಳ್ಳಿ ಉಡುಪಿ – ಸ್ವಾಮಿ ವೀರ ಕಲ್ಕುಡ 

ಶ್ರೀ ಮೇಗರವಳ್ಳಿ ಮೇಳ ==  ಆರೂರು ಕೀರ್ತಿನಗರ – ಗುಣಸುಂದರಿ ಪಾಪಣ್ಣ ವಿಜಯ 

ಶ್ರೀ ಹಟ್ಟಿಯಂಗಡಿ ಮೇಳ == ಜಡ್ಡು ಕೋಣಿ – ಶಿವಶಕ್ತಿ ಪಂಜುರ್ಲಿ 

ಶ್ರೀ ಹಾಲಾಡಿ ಮೇಳ == ಹೆಗ್ಗುಂಜೆ – ನೂತನ ಪ್ರಸಂಗ 

ಶ್ರೀ ಬಪ್ಪನಾಡು ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ – ಬ್ರಹ್ಮಮೊಗೇರರ್ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪಡೀಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಹತ್ತಿರ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಕುಂಜತ್ತಬೈಲ್ ದೇವಿನಗರ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ == ಶಿರ್ಲಾಲು ಪಡಿಬೆಟ್ಟು – ಶ್ರೀ ಭಗವತೀ ಕ್ಷೇತ್ರ ಮಹಾತ್ಮೆ 

ಶ್ರೀ ಗೆಜ್ಜೆಗಿರಿ ಮೇಳ == ಮೂಡುಬಿರ್ತಿ ವಾರಂಬಳ್ಳಿ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಇಂದು ಆಟ ಎಲ್ಲೆಲ್ಲಿ? (06-01-2023, ಶುಕ್ರವಾರ)

ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಇಂದಿನ (06.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಚೇರ್ಕಾಡಿ ಮುಂಡ್ಕಿನಜೆಡ್ಡು ಆರ್.ಕೆ.ಪಾಟ್ಕರ್ ಶಾಲಾ ಮೈದಾನದಲ್ಲಿ – ಶ್ರೀ ಶನೀಶ್ವರ ಮಹಾತ್ಮೆ

ಕಟೀಲು ಒಂದನೇ ಮೇಳ == ಕನ್ನಿಕಾ ನಿಲಯ ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಶ್ರೀ ಬ್ರಹ್ಮ ರೆಸಿಡೆನ್ಸಿ ಶಿರ್ತಾಡಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಪಿ.ವಿ ನಿಲಯ ಪಾದೆಬೆಟ್ಟು ಪಡುಬಿದ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಅಯ್ಯಪ್ಪ ಮಂದಿರ  ಮೊಡಂಕಾಪು ಬಿ.ಸಿ ರೋಡ್ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಶ್ರೀ ಮಹಾಕಾಳಿ ಚೌಡೇಶ್ವರೀ ದೇವಸ್ಥಾನ, ನಂದಳಿಕೆ – ಶ್ರೀ ಗಾಯತ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಮದ೦ಗೋಡಿ ಕರ್ಪೆ ವಯಾ ಸಿದ್ದಕಟ್ಟೆ ಬಂಟ್ವಾಳ – ದಕ್ಷಾಧ್ವರ, ದಮಯಂತಿ ಪುನಃ ಸ್ವಯಂವರ 

ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಕುಡಿದ ಮತ್ತಿನಲ್ಲಿದ್ದ ಪುರುಷ

ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅಮಲೇರಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಏರ್ ಇಂಡಿಯಾ ದೃಢಪಡಿಸಿದೆ.

ಏರ್ ಇಂಡಿಯಾ ಅಂತರಾಷ್ಟ್ರೀಯ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್ ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರ (ಹಿರಿಯ ನಾಗರಿಕ) ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಯನ್ನು ಏರ್ ಇಂಡಿಯಾ ಖಚಿತಪಡಿಸಿದೆ. ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನ ಎಐ 102 ನ್ಯೂಯಾರ್ಕ್‌ನಿಂದ ದೆಹಲಿಗೆ ಹಾರುತ್ತಿದ್ದಾಗ ಈ ಘಟನೆ ನಡೆದಿದೆ.

ಮದ್ಯಾಹ್ನದ ಊಟದ ನಂತರ ದೀಪಗಳನ್ನು ಆಫ್ ಮಾಡಿದ ನಂತರ ಅಮಲೇರಿದ ವ್ಯಕ್ತಿ ಮಹಿಳೆಯ ಸೀಟಿನತ್ತ ನಡೆದರು. ನಂತರ ಅವನು ತನ್ನ ಪ್ಯಾಂಟ್ ಅನ್ನು ಬಿಚ್ಚಿ ತನ್ನ ಖಾಸಗಿ ಭಾಗಗಳನ್ನು ಅವಳಿಗೆ ತೋರಿಸಿದನು.

ಮೂತ್ರ ವಿಸರ್ಜನೆಯ ನಂತರವೂ ಅವರು ಅಲ್ಲಿಯೇ ನಿಂತಿದ್ದರು ಎಂದು ವರದಿಯಾಗಿದೆ, ಅವರ ಸಹ-ಪ್ರಯಾಣಿಕರೊಬ್ಬರು ಅವರನ್ನು ಹೊರಡಲು ಕೇಳಿದರು. ಮಹಿಳಾ ಪ್ರಯಾಣಿಕರು ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದಾಗ ಘಟನೆ ಮುಂಚೂಣಿಗೆ ಬಂದಿತು.

ಕ್ಯಾಬಿನ್ ಸಿಬ್ಬಂದಿ ಅವಳಿಗೆ ಬದಲಾಯಿಸಲು ಒಂದು ಜೊತೆ ಪೈಜಾಮಾ ಮತ್ತು ಚಪ್ಪಲಿಗಳನ್ನು ನೀಡಿದರು. ಮೇಲ್ನೋಟಕ್ಕೆ ಅವರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದಾಗ, ಘಟನೆಯನ್ನು ನಿಯಂತ್ರಕ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ತನಿಖೆಯ ಉದ್ದಕ್ಕೂ ಮಹಿಳಾ ಪ್ರಯಾಣಿಕರೊಂದಿಗೆ ನಿಯಮಿತ ಸಂಪರ್ಕವನ್ನು ಇಟ್ಟುಕೊಂಡಿದೆ ಎಂದು ಅವರು ಹೇಳಿದರು.

“ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿ ಮತ್ತೊಬ್ಬರ ಮೇಲೆ ಪರಿಣಾಮ ಬೀರಿದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ನಾವು ಘಟನೆಯನ್ನು ಪೊಲೀಸ್ ಮತ್ತು ನಿಯಂತ್ರಣ ಅಧಿಕಾರಿಗಳಿಗೆ ವರದಿ ಮಾಡಿದ್ದೇವೆ, ಅವರು ಹೆಚ್ಚಿನ ತನಿಖೆ ಮಾಡುತ್ತಾರೆ ಮತ್ತು ಅನುಚಿತವಾಗಿ ವರ್ತಿಸುವ ಪಕ್ಷದ ವಿರುದ್ಧ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ.

ತನಿಖೆ ಮತ್ತು ವರದಿ ಪ್ರಕ್ರಿಯೆಯ ಉದ್ದಕ್ಕೂ, ನಾವು ನೊಂದ ಪ್ರಯಾಣಿಕರು ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತೇವೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್‌ಗೆ ಸೇರಿಸಲು ವಿಮಾನಯಾನ ಸಂಸ್ಥೆಯು ಆಂತರಿಕ ಸಮಿತಿಯನ್ನು ರಚಿಸಿದೆ.

ಯಕ್ಷಗಾನ ತಾಳಮದ್ದಳೆ ಸಪ್ತಾಹ,  04.01.2023ರಿಂದ 10.01.2023ರ ವರೆಗೆ – ಅಂಗದ ಸಂಧಾನ, ಶಿವಭಕ್ತ ವೀರಮಣಿ, ಸತ್ವ ಪರೀಕ್ಷೆ, ಪಂಚವಟಿ, ಶ್ಯಮಂತಕ ಮಣಿ, ಕದಂಬ ಕೌಶಿಕೆ, ಭೀಷ್ಮ ಪರ್ವ 

ದಿನಾಂಕ  04.01.2023ರಿಂದ 10.01.2023ರ ವರೆಗೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು, ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಇವರ ಸಹಯೋಗದೊಂದಿಗೆ ಆಯೋಜಿಸಿದ ತಾಳಮದ್ದಳೆ ಸಪ್ತಾಹ ಬಿ.ಸಿ ರೋಡಿನಲ್ಲಿ ನಡೆಯಲಿದೆ.

ಬಿ.ಸಿ. ರೋಡಿನ ರಂಗೋಲಿ ಸಭಾಂಗಣದಲ್ಲಿ ಪ್ರತಿದಿನದ ಸಂಜೆ ಘಂಟೆ 5ರಿಂದ 8 ಘಂಟೆಯವರೆಗೆ ಈ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.

ಪ್ರತಿದಿನವೂ ತಾಳಮದ್ದಳೆ ಕೂಟದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.

ಕಲಾವಿದರ ಮತ್ತು ಕಾರ್ಯಕ್ರಮದ ವಿವರಗಳಿಗೆ ಮೇಲಿನ ಕರಪತ್ರದ ಚಿತ್ರವನ್ನು ನೋಡಿ.